23rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಆರೋಗ್ಯ ವಿಮೆ: ಸಾವಿರಕ್ಕೂ ಹೆಚ್ಚು ಪ್ಯಾಕೇಜ್‌

 • ಬಡವರು ಹಾಗು ಹಿಂದುಳಿದ ಸಮುದಾಯದ ಜನರಿಗಾಗಿ ವೈದ್ಯಕೀಯ ವಿಮೆ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್– ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ (ಎನ್‌ಎಚ್‌ಪಿಎಂ) ಅಡಿಯಲ್ಲಿ 1,347 ಚಿಕಿತ್ಸಾ ಸೇವೆಗಳು ದೊರೆಯಲಿವೆ .
 • ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
 • ಯೋಜನೆ ವ್ಯಾಪ್ತಿಗೆ ಬರುವ ಕುಟುಂಬಗಳಿಗೆ ತಲಾ ₹5 ಲಕ್ಷದವರೆಗೆ ಸರ್ಕಾರದಿಂದ ವಿಮೆ ದೊರಕಲಿದೆ. ಅಂದಾಜು 10.74 ಕೋಟಿ ಮಂದಿ ಫಲಾನುಭವಿಗಳಾಗಲಿದ್ದಾರೆ.
 • ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ದೊರಕಲಿದೆ. ಯೋಜನೆಯಲ್ಲಿ ಒದಗಿಸುವ ಸಮಗ್ರ ಚಿಕಿತ್ಸೆಗೆ ಏಕರೂಪದ ದರಪಟ್ಟಿಯನ್ನು ಸಚಿವಾಲಯ ಅಂತಿಮಗೊಳಿಸುತ್ತಿದ್ದು, ರಾಜ್ಯ ಸರ್ಕಾರಗಳು ಹಾಗೂ ವಿಮಾ ಸಂಸ್ಥೆಗಳ ಜತೆ ಇದನ್ನು ಹಂಚಿಕೊಳ್ಳಲಾಗುತ್ತದೆ.
 • ಸಮಗ್ರ ಚಿಕಿತ್ಸಾ ವೆಚ್ಚದಲ್ಲಿ ಆಸ್ಪತ್ರೆಗೆ ದಾಖಲಾತಿ, ಪ್ರಮುಖ ತಪಾಸಣೆಗಳು, ಶಸ್ತ್ರಚಿಕಿತ್ಸೆ (ಅಗತ್ಯವಿದ್ದಲ್ಲಿ) ಹಾಗೂ ಔಷಧ ವೆಚ್ಚವನ್ನು ಸೇರಿಸಲಾಗುತ್ತದೆ. ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಿದಲ್ಲಿ, ಮಸೂರಗಳ ವೆಚ್ಚ, ಹೃದಯದ ಶಸ್ತ್ರಚಿಕಿತ್ಸೆಗಳಿಗೆ ಬಳಸುವ ಸ್ಟೆಂಟ್‌ಗಳ ವೆಚ್ಚವನ್ನು ಸೇರಿಸಲಾಗುತ್ತದೆ.
 • ಸದ್ಯಕ್ಕೆ ಶ್ವಾಸಕೋಶ, ಮೂತ್ರಪಿಂಡ, ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಯನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಚಿಕಿತ್ಸಾ ದರಪಟ್ಟಿಯನ್ನು ಸಚಿವಾಲಯವು ಅಂತಿಮಗೊಳಿಸಿದ ನಂತರ, ನಿರ್ದಿಷ್ಟ ಮಿತಿಯೊಳಗೆ ರಾಜ್ಯ ಸರ್ಕಾರಗಳು ಇದನ್ನು ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನೀಡಲಾಗುವುದು.

ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

 • ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ರಾಜಸ್ಥಾನದ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ನಡೆಯಿತು.
 • ಕ್ಷಿಪಣಿಯು 400 ಕಿಲೋ ಮೀಟರ್‌ ವ್ಯಾಪ್ತಿವರೆಗೂ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ರಷ್ಯಾದ ಎನ್‌ಪಿಒ ಮಷಿನೊಸ್ಟ್ರೊಯೆನಿಯಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬ್ರಹ್ಮೋಸ್‌ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ.
 • ಮೂರು ತಿಂಗಳ ಹಿಂದೆ, ಮೊದಲ ಬಾರಿ ಭಾರತೀಯ ವಾಯುಪಡೆಯ ಸುಖೋಯ್–30 ಎಂಕೆಐ ಯುದ್ಧ ವಿಮಾನದ ಮೂಲಕ ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷೆ ನಡೆದಿತ್ತು. ಆದಾದ ಬಳಿಕ ಈಗ ಮತ್ತೆ ಪರೀಕ್ಷೆ ನಡೆದಿದೆ. ಸುಖೋಯ್–40 ಯುದ್ಧ ವಿಮಾನದಲ್ಲೂ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯನ್ನು ಅಳವಡಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ.

ಒಂದು ದೇಶ ಒಂದು ಪಡಿತರ ಚೀಟಿ

 • ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ದೇಶಾದ್ಯಂತ ಪಡಿತರ ಚೀಟಿ ಹಾಗೂ ಫಲಾನುವಿಗಳ ಮಾಹಿತಿಯ ಅಂಕಿಅಂಶಗಳನ್ನು ಆನ್​ಲೈನ್​ಗೊಳಿಸುವ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
 • ನಕಲಿ ರೇಶನ್ ಕಾರ್ಡ್ ಹಾಗೂ ಒಂದೇ ವ್ಯಕ್ತಿ ಹಲವು ರೇಶನ್ ಕಾರ್ಡ್​ಗಳನ್ನು ಪಡೆದು ಯೋಜನೆಯ ದುರುಪಯೋಗ ಪಡಿಸಿಕೊಳ್ಳುವುದು ತಪ್ಪಲಿದೆ. ಮುಂದಿನ ವರ್ಷದಿಂದ ಯೋಜನೆಯ ಮೊದಲ ಹಂತ ಜಾರಿಗೆ ಬರಲಿದ್ದು, ವಿವಿಧ ಹಂತಗಳಲ್ಲಿ ದೇಶಾದ್ಯಂತ ಜಾರಿಗೊಳ್ಳಲಿದೆ.
 • ಜಾರಿ ಹೇಗೆ?: ಜಿಎಸ್​ಟಿ ಜಾಲದ ರೀತಿಯಲ್ಲೇ ಪಡಿತರ ಸಮಗ್ರ ನಿರ್ವಹಣಾ ಜಾಲ (ಐಎಂಪಿಡಿಎಸ್​ಎನ್) ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಐಎಂಪಿಡಿಎಸ್​ಎನ್ ಮೂಲಕ ಒಂದು ರಾಜ್ಯದ ಪಡಿತರ ಫಲಾನುಭವಿ ಮಾಹಿತಿಯನ್ನು ಮತ್ತೊಂದು ರಾಜ್ಯ ಪಡೆಯಬಹುದು.
 • ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ರೇಶನ್ ಕಾರ್ಡ್ ಗಳಿಗೆ ಆಧಾರ್ ಜೋಡಿಸಿದ್ದರಿಂದಾಗಿ 2.75 ಕೋಟಿ ನಕಲಿ ಪಡಿತರ ಚೀಟಿಗಳು ಪತ್ತೆ ಆಗಿವೆ.
 • ಆಧಾರ್ ಮಾದರಿಯಲ್ಲೇ ನಂಬರ್: ಪ್ರತಿ ರೇಶನ್ ಕಾರ್ಡ್​ಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಸರ್ಕಾರ ನೀಡಲಿದೆ. ಐಎಂಪಿಡಿಎಸ್​ಎನ್ ಮೂಲಕ ಇದನ್ನು ನಿರ್ವಹಿಸಲಾಗುತ್ತದೆ. ಗ್ರಾಹಕನ ಮಾಹಿತಿ, ಪಡಿತರ ಸಹಿತ ಎಲ್ಲ ವಿವರಗಳು ಇದರಲ್ಲಿ ಇರಲಿವೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ರೇಶನ್ ಕಾರ್ಡ್ ಹೊಂದಿದ್ದರೆ ತಕ್ಷಣ ಗಮನಕ್ಕೆ ಬರಲಿದೆ.
 • ಕೋರ್ಟ್​ನಲ್ಲಿ ಆಧಾರ್ ಪಿಪಿಟಿ
 • ಆಧಾರ್ ಸಂಬಂಧಿತ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಗೂಢಲಿಪಿ ತಂತ್ರಜ್ಞಾನದಿಂದ ಸುರಕ್ಷತವಾಗಿದೆ. ಇದನ್ನು ಭೇದಿಸಲು ಸೂಪರ್ ಕಂಪ್ಯೂಟರ್​ಗೆ 1300 ಕೋಟಿ ವರ್ಷ ಬೇಕು .

ವಾಯುಮಾಲಿನ್ಯ ನಕಲಿ ಪ್ರಮಾಣಪತ್ರ ತಡೆಗೆ ಯೋಜನೆ

 • ದೇಶಾದ್ಯಂತ ವಾಹನಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ವಾಯುಮಾಲಿನ್ಯ ಪ್ರಮಾಣವೂ ಅಧಿಕವಾಗುತ್ತಿದೆ. ಜತೆಗೆ, ಹಣದಾಸೆಗೆ ನಿಯಮ ಗಾಳಿಗೆ ತೂರಿ ತಲೆ ಎತ್ತುತ್ತಿರುವ ನಕಲಿ ಮಾಲಿನ್ಯ ತಪಾಸಣಾ ಕೇಂದ್ರಗಳೂ ಹೆಚ್ಚಾಗುತ್ತಿವೆ. ಇಂತಹ ಕೇಂದ್ರಗಳ ಕಡಿವಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಯೋಜನೆ ರೂಪಿಸಿದೆ.
 • 2019ರ ಏ.1ರಿಂದ ರಾಜ್ಯದಲ್ಲಿರುವ ಪ್ರತಿ ಮಾಲಿನ್ಯ ತಪಾಸಣಾ ಕೇಂದ್ರಗಳನ್ನು (ಪಿಯುಸಿ) ವಾಹನ್ 4 ಸಾಫ್ಟ್​ವೇರ್​ಗೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ಅಧಿಸೂಚನೆ ಪ್ರಕಟಿಸಿದೆ.
 • ದೆಹಲಿಯಲ್ಲಿ 2018ರ ಏ.1ರಿಂದ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 2018ರ ಅ.1ರಿಂದ ಹಾಗೂ ಇತರೆ ರಾಜ್ಯಗಳು 2019ರ ಏ.1ರ ಮೊದಲು ಪಿಯುಸಿ ಕೇಂದ್ರಗಳನ್ನು ವಾಹನ್ ಸಾಫ್ಟ್​ವೇರ್​ಗೆ ಜೋಡಣೆ ಮಾಡಬೇಕು ಎಂದು ಸೂಚಿಸಲಾಗಿದೆ.
 • ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದ್ದು, ನಂತರದಲ್ಲಿ ಅಂತಿಮ ಅಧಿಸೂಚನೆಯನ್ನು ಇಲಾಖೆ ಹೊರಡಿಸಲಿದೆ.

 ಹೇಗಿರಲಿದೆ ಕಾರ್ಯನಿರ್ವಹಣೆ?

 • ಅಂತಿಮ ಅಧಿಸೂಚನೆ ಪ್ರಕಟವಾದ ನಂತರದಲ್ಲಿ ಕರ್ನಾಟಕ ಸೇರಿ ಎಲ್ಲ ರಾಜ್ಯಗಳು ಮಾಲಿನ್ಯ ಕೇಂದ್ರಗಳನ್ನು ವಾಹನ್ 4 ಸಾಫ್ಟ್​ವೇರ್​ಗೆ ಜೋಡಿಸಬೇಕು. ಇದಾದ ನಂತರದಲ್ಲಿ ಯಾವುದೇ ರಾಜ್ಯದ ವಾಹನವೊಂದರ ಮಾಲಿನ್ಯ ಪ್ರಮಾಣಪತ್ರ ವಾಹನ್ 4 ಸಾಫ್ಟ್​ವೇರ್​ನಲ್ಲೇ ಲಭ್ಯವಾಗಲಿದೆ.
 • ರಸ್ತೆಯಲ್ಲಿ ಹೊಗೆಯುಗುಳುತ್ತಿರುವ ವಾಹನ ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ ಪಡೆದಿದೆಯೇ ಇಲ್ಲವೇ ಎಂಬ ಮಾಹಿತಿಯನ್ನು ಬೆರಳ ತುದಿಯಲ್ಲೇ ಪಡೆಯಬಹುದಾಗಿದೆ. ವಾಹನ್ 4 ಸಾಫ್ಟ್​ವೇರ್​ಗೆ ಮಾಲಿನ್ಯ ಕೇಂದ್ರಗಳು ಜೋಡಣೆಯಾದರೆ ನಕಲಿ ಪ್ರಮಾಣಪತ್ರ ಮುದ್ರಿಸಲು ಸಾಧ್ಯವಿಲ್ಲ.
 • ಎಲ್ಲ ಮಾಹಿತಿ ಡಿಜಿಟಲ್ ರೂಪದಲ್ಲಿ ಕೇಂದ್ರೀಕೃತ ಸರ್ವರ್​ನಲ್ಲಿ ಸಂಗ್ರಹವಾಗುವ ಕಾರಣ ಬದಲಾಯಿಸಲೂ ಸಾಧ್ಯವಿಲ್ಲ. ಅಂಕಿ-ಅಂಶ ಬದಲಾವಣೆಗೆ ಪ್ರಯತ್ನಿಸಿದರೂ ಯಾವ ಕೇಂದ್ರ ಈ ರೀತಿ ಅವ್ಯವಹಾರದಲ್ಲಿ ತೊಡಗಿದೆ ಎನ್ನುವುದನ್ನೂ ಪತ್ತೆಹಚ್ಚಲು ಸಾಧ್ಯವಾಗಲಿದೆ.
 • ದಿಢೀರ್ ನಿರ್ಧಾರಕ್ಕೇನು ಕಾರಣ?
 • ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಗೆ 2017ರ ಆ.10ರಂದು ಸುಪ್ರೀಂಕೋರ್ಟ್ ಹಲವು ನಿರ್ದೇಶನ ನೀಡಿತ್ತು. ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ಮಾಲಿನ್ಯ ತಪಾಸಣಾ ಉಪಕರಣಗಳನ್ನು ಸಮಯಕ್ಕೆ ಸರಿಯಾಗಿ ಕ್ಯಾಲಿಬ್ರೇಷನ್ (ಮಾಲಿನ್ಯ ಪ್ರಮಾಣ ನಿಗದಿ) ಮಾಡದೆ ಪ್ರಮಾಣಪತ್ರ ನೀಡಲಾಗುತ್ತಿದೆ.
 • ಹೀಗಾಗಿ ಅವ್ಯವಹಾರದಲ್ಲಿ ಭಾಗಿಯಾಗುವ, ನಿಯಮಾನುಸಾರವಿಲ್ಲದ ಕೇಂದ್ರಗಳ ಪರವಾನಗಿ ರದ್ದು ಮಾಡಲು ಸುಪ್ರೀಂ ಖಡಕ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ಮಾಲಿನ್ಯ ತಪಾಸಣಾ ಕೇಂದ್ರಗಳ ತಪಾಸಣೆಗೆ ರಾಜ್ಯ ಸಾರಿಗೆ ಇಲಾಖೆಗೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ಪೂರ್ಣ ಮಾಲಿನ್ಯ ತಪಾಸಣಾ ವ್ಯವಸ್ಥೆಯನ್ನೇ ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ.

~~~~~~~ದಿನಕ್ಕೊಂದು ಯೋಜನೆ~~~~~~

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ

 • ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ರಾಷ್ಟ್ರೀಯ ಕೃಷಿ ವಿಕೋಸ್ ಯೋನಾನ) ಎನ್ನುವುದು ಆಗಸ್ಟ್ 2007 ರಲ್ಲಿ ಓರಿಯಂಟ್ ಕೃಷಿ ಅಭಿವೃದ್ಧಿ ಯೋಜನೆಗಳಿಗೆ ಪ್ರಾರಂಭಿಸಿರುವ ವಿಶೇಷ ಹೆಚ್ಚುವರಿ ಕೇಂದ್ರ ಸಹಾಯಕ ಯೋಜನೆಯಾಗಿದ್ದು, 11 ನೇ ಯೋಜನೆಯಲ್ಲಿ ಕೃಷಿ ವಲಯದಲ್ಲಿ ವಾರ್ಷಿಕ 4% ವಾರ್ಷಿಕ ಬೆಳವಣಿಗೆಯನ್ನು ಸಾಧಿಸುವ ತನ್ನ ಬದ್ಧತೆಯನ್ನು ದೃಢಪಡಿಸುತ್ತದೆ.
 • ಈ ಯೋಜನೆಯು ತಮ್ಮ ರಾಜ್ಯ ಯೋಜನೆಗಳಲ್ಲಿ ಹೆಚ್ಚುವರಿ ಸಂಪನ್ಮೂಲಗಳನ್ನು ತಮ್ಮ ಬೇಸ್ಲೈನ್ ​​ವೆಚ್ಚಕ್ಕಿಂತ ಹೆಚ್ಚಿನ ಮಟ್ಟವನ್ನು ಒದಗಿಸಲು ಸೇತುವೆಯನ್ನು ಉತ್ತೇಜಿಸಲು ಪ್ರಾರಂಭಿಸಿತು.
 • ಕಾರ್ಯಕ್ರಮದ ಉದ್ದೇಶಗಳು
 • ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸುವ ರಾಜ್ಯಗಳನ್ನು ಉತ್ತೇಜಿಸಲು
 • ಕೃಷಿಯ ಯೋಜನೆಗಳನ್ನು ಯೋಜಿಸಿ ಮತ್ತು ಕಾರ್ಯಗತಗೊಳಿಸಲು ರಾಜ್ಯಗಳಿಗೆ ನಮ್ಯತೆ ಮತ್ತು ಸ್ವಾಯತ್ತತೆಯನ್ನು ಒದಗಿಸಲು
 • ಜಿಲ್ಲೆಗಳು ಮತ್ತು ರಾಜ್ಯಗಳಿಗೆ ಕೃಷಿ ಯೋಜನೆಗಳ ತಯಾರಿಯನ್ನು ಖಚಿತಪಡಿಸಿಕೊಳ್ಳಲು
 • ಪ್ರಮುಖ ಬೆಳೆಗಳಲ್ಲಿ ಇಳುವರಿ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಸಾಧಿಸಲು
 • ರೈತರಿಗೆ ಆದಾಯವನ್ನು ಗರಿಷ್ಠಗೊಳಿಸಲು
 • ಕೃಷಿ ಮತ್ತು ಇತರ ಕ್ಷೇತ್ರಗಳನ್ನು ಸಮಗ್ರ ರೀತಿಯಲ್ಲಿ ಪರಿಹರಿಸಲು

RKVY ನ ಮೂಲಭೂತ ಲಕ್ಷಣಗಳು

 • ಇದು ಒಂದು ರಾಜ್ಯ ಯೋಜನೆ ಯೋಜನೆ
 • ಕೃಷಿ ಮತ್ತು ಅಲೈಡ್ ವಲಯಗಳ ರಾಜ್ಯ ಯೋಜನಾ ವೆಚ್ಚವನ್ನು ಕಾಪಾಡಿಕೊಳ್ಳುವುದು ಅಥವಾ ಹೆಚ್ಚಿಸುವುದರ ಮೇಲೆ ಆರ್ಕೆವಿವೈ ರಾಜ್ಯಕ್ಕೆ ಅರ್ಹತೆ ಇದೆ.
 • ಹಿಂದಿನ ವರ್ಷಕ್ಕಿಂತ ಮುಂಚೆ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯ ಸರಕಾರವು ಮಾಡಿದ ಸರಾಸರಿ ಖರ್ಚಿನ ಆಧಾರದ ಮೇಲೆ ಬೇಸ್ ಲೈನ್ ಖರ್ಚು ನಿರ್ಧರಿಸುತ್ತದೆ.
 • ಜಿಲ್ಲಾ ಮತ್ತು ರಾಜ್ಯ ಕೃಷಿ ಯೋಜನೆಗಳ ತಯಾರಿಕೆಯು ಕಡ್ಡಾಯವಾಗಿದೆ
 • ಈ ಯೋಜನೆಯು NREGS ನಂತಹ ಇತರ ಕಾರ್ಯಕ್ರಮಗಳೊಂದಿಗೆ ಒಮ್ಮುಖವನ್ನು ಪ್ರೋತ್ಸಾಹಿಸುತ್ತದೆ.
 • ಹಣದ ಮಾದರಿ 100% ಕೇಂದ್ರ ಸರ್ಕಾರದ ಅನುದಾನ.
 • ನಂತರದ ವರ್ಷಗಳಲ್ಲಿ ರಾಜ್ಯವು ಹೂಡಿಕೆಯನ್ನು ಕಡಿಮೆಗೊಳಿಸಿದರೆ ಮತ್ತು ಆರ್ಕೆವಿವೈ ಬ್ಯಾಸ್ಕೆಟ್ನಿಂದ ಹೊರಹೋಗುತ್ತದೆ, ಆಗ ಈಗಾಗಲೇ ಪ್ರಾರಂಭವಾದ ಯೋಜನೆಗಳನ್ನು ಪೂರ್ಣಗೊಳಿಸುವ ಸಮತೋಲನ ಸಂಪನ್ಮೂಲಗಳು ರಾಜ್ಯಗಳಿಂದ ಬದ್ಧತೆಯನ್ನು ಹೊಂದಿರಬೇಕು.
 • ಇದು ಪ್ರೋತ್ಸಾಹಕ ಯೋಜನೆಯಾಗಿದೆ, ಆದ್ದರಿಂದ ಹಂಚಿಕೆಗಳು ಸ್ವಯಂಚಾಲಿತವಾಗಿಲ್ಲ
 • ಇದು ಕೃಷಿ ಮತ್ತು ಸಂಯೋಜಿತ ವಲಯಗಳನ್ನು ಸಮಗ್ರವಾಗಿ ಸಂಯೋಜಿಸುತ್ತದೆ
 • ಇದು ರಾಜ್ಯಗಳಿಗೆ ಉನ್ನತ ಮಟ್ಟದ ನಮ್ಯತೆ ನೀಡುತ್ತದೆ
 • ನಿರ್ದಿಷ್ಟ ಸಮಯ-ಸಾಲುಗಳೊಂದಿಗೆ ಯೋಜನೆಗಳು ಹೆಚ್ಚು ಪ್ರೋತ್ಸಾಹಿಸಲ್ಪಡುತ್ತವೆ
 • ಯೋಜನೆಯಡಿ ಬರುವ ಎಲ್ಲಾ ಕ್ಷೇತ್ರಗಳ ಪಟ್ಟಿ , ಬೆಳೆ (ತೋಟಗಾರಿಕೆ ಸೇರಿದಂತೆ) ,ಪ್ರಾಣಿಗಳ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಮೀನುಗಾರಿಕೆ , ಕೃಷಿ ಸಂಶೋಧನೆ ಮತ್ತು ಶಿಕ್ಷಣ  ಕೃಷಿ ಮಾರ್ಕೆಟಿಂಗ್
 • ಆಹಾರ ಸಂಗ್ರಹಣೆ ಮತ್ತು ಸಂಗ್ರಹಣೆ
 • ಮಣ್ಣು ಮತ್ತು ಜಲ ಸಂರಕ್ಷಣೆ
 • ಕೃಷಿ ಹಣಕಾಸು ಸಂಸ್ಥೆಗಳು
 • ಇತರ ಕೃಷಿ ಕಾರ್ಯಕ್ರಮಗಳು ಮತ್ತು ಸಹಕಾರ

ಆರ್ಕೆವಿವೈ ಅಡಿಯಲ್ಲಿ ಗಮನ ಕೇಂದ್ರೀಕರಿಸುವ ಪ್ರದೇಶಗಳು

 • ಒರಟಾದ ಧಾನ್ಯಗಳು, ಸಣ್ಣ ಧಾನ್ಯಗಳು ಮತ್ತು ಬೇಳೆಕಾಳುಗಳು ಸೇರಿದಂತೆ ಆಹಾರ ಬೆಳೆಗಳ ಸಂಯೋಜಿತ ಅಭಿವೃದ್ಧಿ
 • ಕೃಷಿ ಯಾಂತ್ರಿಕತೆ
 • ಮಣ್ಣಿನ ಆರೋಗ್ಯ ಮತ್ತು ಉತ್ಪಾದಕತೆ
 • ರೈನ್ಫೆಡ್ ಫಾರ್ಮಿಂಗ್ ಸಿಸ್ಟಮ್ಸ್ ಅಭಿವೃದ್ಧಿ
 • ಇಂಟಿಗ್ರೇಟೆಡ್ ಪೆಸ್ಟ್ ಮ್ಯಾನೇಜ್ಮೆಂಟ್
 • ವಿಸ್ತರಣೆ ಸೇವೆಗಳನ್ನು ಉತ್ತೇಜಿಸುವುದು
 • ತೋಟಗಾರಿಕೆ
 • ಪಶುಸಂಗೋಪನೆ, ಡೈರಿಲಿಂಗ್ & ಮೀನುಗಾರಿಕೆ
 • ರೇಷ್ಮೆ ಕೃಷಿ
 • ರೈತರ ಅಧ್ಯಯನ ಪ್ರವಾಸಗಳು
 • ಜೈವಿಕ ಮತ್ತು ಜೈವಿಕ ಗೊಬ್ಬರಗಳು
 • ನವೀನ ಯೋಜನೆಗಳು

1.ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ  ಹೇಳಿಕೆಗಳನ್ನು ಗುರುತಿಸಿa.

A. ಈ ಯೋಜನೆಯು ಕೇವಲ ಸರ್ಕಾರೀ ಆಸ್ಪತ್ರೆಗಳಿಗೆ ಅನ್ವಯಿಸುತದೆ.

B.ಈ ಯೋಜನೆಯು ಸರ್ಕಾರೀ ಹಾಗು ಖಾಸಗಿ ಆಸ್ಪತ್ರೆಗಳಿಗೂ ಅನ್ವಯಿಸುತ್ತದೆ

C.ಈ ಯೋಜನೆಯು ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಅನ್ವಯಿಸುತ್ತದೆ

D.ಎಲ್ಲಾ ಹೇಳಿಕೆಗಳು ತಪ್ಪಾಗಿವೆ

2.ಬ್ರಹ್ಮೋಸ್ ಕ್ಷಿಪ್ಪಣಿ ಕುರಿತ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

A.ಬ್ರಹ್ಮೋಸ್ ಎಂಬುದು ಮಧ್ಯಮ ಶ್ರೇಣಿಯ ರಾಮ್ಜೆಟ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ

B.ಇದನ್ನು ಜಲಾಂತರ್ಗಾಮಿ, ಹಡಗುಗಳು, ವಿಮಾನ ಅಥವಾ ಭೂಮಿಗಳಿಂದ ಪ್ರಾರಂಭಿಸಬಹುದು.

C.ಎರಡೂ ಹೇಳಿಕೆಗಳು ಸರಿ ಇದೆ

D.ಎರಡೂ ಹೇಳಿಕೆಗಳು ತಪ್ಪಾಗಿವೆ

3.ವಾಯುಮಾಲಿನ್ಯ ನಕಲಿ ಪ್ರಮಾಣಪತ್ರ ತಡೆಗಟ್ಟಲು ಯಾವ ಯೋಜನೆ ಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ?

A.ವಾಹನ 4

B.ಅವತಾರ್

C.ಭರತ್ ಸ್ಟೇಜ್ 4

D.ಯಾವುದು ಅಲ್ಲ

4.ಲೋಕಸಭೆಯಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜ್ಯ

A.ಉತ್ತರ ಪ್ರದೇಶ

B.ಆಂಧ್ರಪ್ರದೇಶ

C.ಕನಾ೯ಟಕ

D.ತಮಿಳನಾಡು

5.ಭಾರತ ಸಂವಿಧಾನದ 123ನೇ ಕಲಂ ಭಾರತದ ರಾಷ್ಟ್ರಪತಿಯವರಿಗೆ ಈ ಕೆಳಗಿನ ಯಾವ ಅಧಿಕಾರ ನೀಡಿದೆ?

A.ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ

B.ಅಪರಾಧಿಗಳಿಗೆ ಕ್ಷಮಾದಾನ

C.ರಾಯಬಾರಿಗಳ ನೇಮಕ

D.ಭಾರತದ ಅಟಾರ್ನಿ ಜನರಲ್ ರವರ ನೇಮಕ

6.ಈ ಕೆಳಗಿನ ಯಾವ ಕಾಯ್ದೆಯು ಸುಪ್ರಿಂಕೋರ್ಟನ್ನು ಕೊಲ್ಕತ್ತದಲ್ಲಿ ಸ್ಥಾಪಿಸಲು ಅವಕಾಶ ನೀಡಿತು?

A.೧೭೮೬ ಕಾಯ್ದೆ

B.ಭಾರತದ ಸರ್ಕಾರಿ ಕಾಯ್ದೆ- ೧೮೫೮

C.ರೆಗ್ಯುಲೇಟಿಂಗ್ ಕಾಯ್ದೆ – ೧೭೭೩

D.ಪಿಟ್ ಇಂಡಿಯಾ ಕಾಯ್ದೆ – ೧೭೮೪

7.ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅಧ್ಯಾತ್ಮದ ನೆಲೆಯಲ್ಲಿ ಕಂಡು ಒಂದೇ ಮತ, ಒಂದೇ ಜಾತಿ, ಒಂದೇ ದೇವರು ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು?

A.ಚಾಣಕ್ಯ

B.ನಾರಾಯಣ ಗುರು

C.ಅತ್ತಿಮಬ್ಬೆ

D.ಅರಿಸ್ಟಾಟಲ್‌

8.ಭಾರತದ ಇತಿಹಾಸದಲ್ಲಿ ಭಕ್ತಿ ಚಳವಳಿ ಒಂದು ಪ್ರಮುಖ ಘಟ್ಟ. ಈ ಕಾಲ ಘಟ್ಟದಲ್ಲಿದ್ದ ಮಹಾರಾಷ್ಟ್ರದ ಸಂತರನ್ನು ಗುರುತಿಸಿ?

A.ಜ್ಞಾನೇಶ್ವರ
B.  ತುಕರಾಮ
C.  ರಾಮದಾಸರು
D.  ಮೇಲಿನ ಎಲ್ಲರು

9. ಕರ್ನಾಟಕದ ಭೂಸ್ವರೂಪ, ಸಸ್ಯವರ್ಗ, ಮಳೆಯ ಪ್ರಮಾಣವನ್ನು ಆಧಾರಿಸಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಕೆಳಗಿನವುಗಳಲ್ಲಿ ಯಾವುದು ಸೇರಿಲ್ಲ?
A.ಮರುಭೂಮಿ
B. ಮಲೆನಾಡು
C. ಕರಾವಳಿ
D. ಮೈದಾನ

10.ದಕ್ಷಿಣ ಭಾರತದಲ್ಲೇ ಮೊದಲನೆಯದಾದ ಕೆನಾಲ್ ಸೋಲಾರ್’  ಸೌರಶಕ್ತಿ ಯೋಜನೆಯು ರಾಜ್ಯದ ಯಾವ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ?
A. ಮಂಗಳೂರು

B.ವಿಜಯಪುರ

C. ಮೈಸೂರು

D. ದಾವಣಗೆರೆ

ಉತ್ತರಗಳು

1.B 2.C 3.A  4.A  5.A  6.C  7.B  8.D  9.A 10.B 

Related Posts
The process of getting fish-catch data related to inland fisheries is expected to get revolutionised with the development of a mobile-based application.The app, which has been developed by the Central ...
READ MORE
Karnataka Current Affairs – KAS / KPSC Exams – 6th July 2017
PETA to challenge Ordinance on Kambala People for the Ethical Treatment to Animals (PETA) has said that the organisation will challenge the new Ordinance that allows the conduct of Kambala — ...
READ MORE
“2nd ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸಖಿ ಸುರಕ್ಷಾ ಸುದ್ದಿಯಲ್ಲಿ ಏಕಿದೆ? ದೇಶದಲ್ಲಿ ಬಾಕಿಯಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವರದಾನವಾಗಬಲ್ಲ ಅತ್ಯಾಧುನಿಕ ಡಿಎನ್​ಎ ವಿಧಿವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಹತ್ವ: ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ವೈಜ್ಞಾನಿಕ ಸಾಕ್ಷ್ಯ ಒದಗಿಸುವಲ್ಲಿ ಇಂಥ ...
READ MORE
National Current Affairs – UPSC/KAS Exams- 27th November 2018
RBI eases ECB hedging norms for companies Topic: Indian Economy IN NEWS: The Reserve Bank of India (RBI) has eased hedging norms for companies that raise funds through external commercial borrowings (ECB), a move ...
READ MORE
Karnataka Current Affairs – KAS/KPSC Exams – 19th July 2018
Namma Metro pushes to Kannada literature Kannada language and literature is all set to get a presence on Namma Metro. If all goes as per plan, the Vijayanagar metro station will have ...
READ MORE
Talgo tilting train- between Mysore Bangalore
Travel time between Bengaluru and Mysuru could be reduced to 90 minutes in the near future if trials with a high speed, tilting train manufactured by Spanish manufacturer Talgo conducted ...
READ MORE
“24th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮಾಜಿ ಪ್ರಧಾನಿಗಳ ಮ್ಯೂಸಿಯಂ! ಮಾಜಿ ಪ್ರಧಾನಿಗಳ ಸಾಧನೆಗಳನ್ನು ಸಾರುವ ವಸ್ತು ಸಂಗ್ರಹಾಲಯ ನಿರ್ವಣದ ವಿನ್ಯಾಸ ಕುರಿತಂತೆ ಸಲಹೆ ನೀಡುವಂತೆ ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ (ಎನ್​ಎಂಎಂಎಲ್) ಆವರಣದಲ್ಲಿ ನಿರ್ವಿುಸಲು ಉದ್ದೇಶಿಸಲಾಗಿರುವ ಹೊಸ ವಸ್ತು ಸಂಗ್ರಹಾಲಯದ ...
READ MORE
“23rd & 24th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬೆಳುವಾಯಿ ಚಿಟ್ಟೆ ಪಾರ್ಕ್ ಸುದ್ದಿಯಲ್ಲಿ ಏಕಿದೆ? ಮೂಡುಬಿದಿರೆ ಸಮೀಪದ ಬೆಳುವಾಯಿಯಲ್ಲಿರುವ ಸಮ್ಮಿಲನ್ ಶೆಟ್ಟಿ ಅವರ ಚಿಟ್ಟೆ ಪಾರ್ಕ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದೆ. ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗಿರುವ ಚಿಟ್ಟೆಪಾರ್ಕ್ ಈಗ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಬೆಳುವಾಯಿ ಗ್ರಾಮದಲ್ಲಿ ಸಮ್ಮಿಲನ್ ಶೆಟ್ಟಿ ನಿರ್ವಿುಸಿದ ...
READ MORE
National Current Affairs – UPSC/KAS Exams – 8th August 2018
Scrub typhus is key encephalitis cause in eastern U.P.: study Why in news? Three years of data from Gorakhpur’s Baba Raghav Das (BRD) Medical College has confirmed that the majority of Acute ...
READ MORE
Two reports released on Thursday, one at the global level and the other India-specific, say the country is on track to meet only two (under-five overweight and exclusive breastfeeding rates) ...
READ MORE
Fishery Friends- Karnataka
Karnataka Current Affairs – KAS / KPSC Exams
“2nd ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams- 27th November
Karnataka Current Affairs – KAS/KPSC Exams – 19th
Talgo tilting train- between Mysore Bangalore
“24th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“23rd & 24th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams – 8th
State of nutrition in the country

Leave a Reply

Your email address will not be published. Required fields are marked *