“24 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಕ್ಷ-ಕಿರಣ ಸುರಕ್ಷತಾ ನಿರ್ದೇಶನಾಲಯ ಸ್ಥಾಪನೆ

ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸ್​ರೇ ಕೇಂದ್ರಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಕ್ಷ-ಕಿರಣ ಸುರಕ್ಷತಾ ನಿರ್ದೇಶನಾಲಯ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಮುಂಬೈನ ಆಟೊಮಿಕ್ ಎನರ್ಜಿ ರೆಗ್ಯೂ ಲೇಟರಿ ಬೋರ್ಡ್ (ಎಇಆರ್​ಬಿ) ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ.

 • ಮೂಳೆ ಮುರಿತ ಸೇರಿ ವಿವಿಧ ಸಂದರ್ಭದಲ್ಲಿ ಮಾನವನ ದೇಹದೊಳಗಿನ ಸಮಸ್ಯೆ ಪತ್ತೆಗೆ ಎಕ್ಸ್​ರೇ ಸಹಾಯಕ.

ಹಿನ್ನಲೆ

 • ರಾಜ್ಯದಲ್ಲಿನ ಕೆಲ ಕೇಂದ್ರಗಳು ನಿಯಮ ಉಲ್ಲಂಘಿಸುತ್ತಿರುವ ಪರಿಣಾಮ ಕ್ಷಕಿರಣಕ್ಕೆ ಒಳಪಡುವ ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಅಂಶ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಸಾವಿರಕ್ಕೂ ಅಧಿಕ ಸರ್ಕಾರಿ ಹಾಗೂ ಖಾಸಗಿ ಎಕ್ಸ್ ರೇ ಕೇಂದ್ರಗಳ ಕಾರ್ಯನಿರ್ವಹಣೆ ಹಾಗೂ ಸುರಕ್ಷತೆ ಬಗ್ಗೆ ಪರಿಶೀಲಿಸಲು ಕ್ಷ-ಕಿರಣ ಸುರಕ್ಷತಾ ನಿರ್ದೇಶನಾಲಯ ಸ್ಥಾಪಸಿಸುವಂತೆ ಸರ್ಕಾರ ಆದೇಶಿಸಿತ್ತು.
 • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದಲ್ಲಿ ನಿರ್ದೇಶನಾಲಯ ಕಾರ್ಯನಿರ್ವಹಿಸಲಿದೆ.

ನಿಯಮ ಉಲ್ಲಂಘಿಸಿದಲ್ಲಿ ಕ್ರಮ:

 • 1962ರ ಆಟೊಮಿಕ್ ಎನರ್ಜಿ ಕಾಯ್ದೆ ಅಡಿಯಲ್ಲಿ ಘೋಷಿಸಲ್ಪಟ್ಟ ಆಟೊಮಿಕ್ ಎನರ್ಜಿ ನಿಯಮಗಳ ಪ್ರಕಾರ ಎಕ್ಸ್ ರೇ ಕೇಂದ್ರಗಳು ಎಇಆರ್​ಬಿಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ.
 • ಕ್ಷ-ಕಿರಣ ಸುರಕ್ಷತಾ ನಿರ್ದೇಶನಾಲಯ ರಾಜ್ಯದ ಎಲ್ಲ ಎಕ್ಸ್ ರೇ ಕೇಂದ್ರಗಳ ಎಇಆರ್​ಬಿ ಪರವಾನಗಿ ಪರಿಶೀಲಿಸುವ ಜತೆಗೆ ಕ್ರಮ ಜರುಗಿಸುವ ಅಧಿಕಾರ ಹೊಂದಿರುತ್ತದೆ. ಕ್ಷ ಕಿರಣ ಬಳಕೆ, ಕೇಂದ್ರ ನಿರ್ವಹಣೆ, ಸೇವೆ ಸೇರಿ ಪ್ರತಿಯೊಂದನ್ನು ಪರಿಶೀಲಿಸುವ ಅಧಿಕಾರ ನಿರ್ದೇಶನಾಲಯಕ್ಕಿರುತ್ತದೆ. ಒಂದು ವೇಳೆ ಎಕ್ಸ್​ರೇ ಕೇಂದ್ರಗಳು ನಿಯಮ ಉಲ್ಲಂಘಿಸಿರುವುದು ದೃಢಪಟ್ಟಲ್ಲಿ ಪರವಾನಗಿ ರದ್ದು ಮಾಡಲಿದೆ.
 • ನಿಯಮ ಉಲ್ಲಂಘಿಸಿ ಎಕ್ಸ್​ರೇ ತೆಗೆಯುತ್ತಿರುವ ಕೇಂದ್ರಗಳಿಗೆ ಕಡಿವಾಣ ಹಾಕಲು ಕ್ಷ-ಕಿರಣ ಸುರಕ್ಷತಾ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದ್ದು, ಕ್ಷ ಕಿರಣ ದುರ್ಬಳಕೆ ನಿಲ್ಲಲಿದೆ.
 • ಬೇಕಾಬಿಟ್ಟಿ ಹಣ ವಸೂಲಿಗೂ ಕಡಿವಾಣ ಹಾಕಲಾಗುತ್ತದೆ.
 • ಎಚ್ಚರಿಕೆ ನೀಡಿ ಮೂರು ತಿಂಗಳೊಳಗೆ ದೋಷ ಸರಿಪಡಿಸಿಕೊಳ್ಳದಿದ್ದರೆ ಕೇಂದ್ರದ ಪರವಾನಗಿ ರದ್ದು ಮಾಡಲಾಗುತ್ತದೆ.

ಮರ ಗಣತಿ

ಸುದ್ಧಿಯಲ್ಲಿ ಏಕಿದೆ ? ಮರಗಳು ಬಿದ್ದು ಜನರ ಜೀವಕ್ಕೆ, ಆಸ್ತಿಪಾಸ್ತಿಗೆ ಕಂಟಕವಾಗುವುದನ್ನು ತಡೆಯಲು ಮರಗಳ ಗಣತಿ ನಡೆಸಲು ಬಿಬಿಎಂಪಿ ಯೋಜನೆ ರೂಪಿಸಿದೆ. ಆ ಮೂಲಕ ಹಲವು ವರ್ಷಗಳಿಂದ ಘೋಷಣೆಗಷ್ಟೇ ಸೀಮಿತವಾಗಿದ್ದ ಮರ ಗಣತಿಗೆ ಚಾಲನೆ ನೀಡಲಾಗುತ್ತಿದೆ.

 • ವಾರ್ಡ್​ವಾರು ಮರ ಗಣತಿಗೆ ನಿರ್ಧರಿಸಲಾಗಿದ್ದು, ವಾರ್ಡ್ ಸಮಿತಿ ಸದಸ್ಯರ ನೆರವು ಪಡೆಯಲಾಗುತ್ತದೆ. ಜತೆಗೆ ಮರಗಣತಿಯಲ್ಲಿ ಆಸಕ್ತಿಯಿರುವ ಸ್ವಯಂಸೇವಾ ಸಂಸ್ಥೆಗಳಿಗೂ ಆಹ್ವಾನ ನೀಡಲಾಗುತ್ತಿದೆ.
 • ತರಬೇತಿ: ಮರಗಣತಿಗೆ ಚಾಲನೆಗೂ ಮುನ್ನ ವಾರ್ಡ್ ಸಮಿತಿ ಸದಸ್ಯರಿಗೆ ತರಬೇತಿ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹಿರಿಯ ಅರಣ್ಯಾಧಿಕಾರಿಗಳು, ತಜ್ಞರ ಮೂಲಕ ಮರ ಗಣತಿ ಹೇಗೆ ನಡೆಸಬೇಕು, ದಾಖಲೆಗಳನ್ನು ಹೇಗೆ ಸಿದ್ಧಪಡಿಸಬೇಕು ಎಂಬ ಕುರಿತು ತಿಳಿಸಿಕೊಡಲಾಗುತ್ತದೆ. ಸ್ವಯಂಸೇವಾ ಸಂಸ್ಥೆಯ ಸದಸ್ಯರಿಗೂ ವಿವರಿಸಲಾಗುತ್ತದೆ.
 • ಪ್ರತಿ ರಸ್ತೆಯ ಮರಗಳ ದಾಖಲೆ: ವಾರ್ಡ್​ನಲ್ಲಿನ ಪ್ರತಿ ರಸ್ತೆಗಳಲ್ಲಿರುವ ಮರಗಳ ಲೆಕ್ಕ ಹಾಕಲಾಗುತ್ತದೆ. ಅಲ್ಲದೆ, ರಸ್ತೆಯ ಎಡ ಮತ್ತು ಬಲ ಬದಿಯ ಮರಗಳು, ಅವುಗಳ ವಯಸ್ಸು, ಸದೃಢತೆ ದಾಖಲಿಸಿ ವರದಿ ಸಿದ್ಧಪಡಿಸಲಾಗುತ್ತದೆ.
 • ಹಳೆಯ ಮರಗಳ ತೆರವು: ಮರಗಳು ದುರ್ಬಲವಾಗಿದ್ದು ಕಂಡುಬಂದರೆ ಅವುಗಳನ್ನು ತೆರವು ಮಾಡಲು ಬಿಬಿಎಂಪಿ ಅರಣ್ಯ ಘಟಕ ಕ್ರಮ ಕೈಗೊಳ್ಳಲಿದೆ. ಸಾರ್ವಜನಿಕರಿಂದ ದೂರುಗಳು ಬಾರದಿದ್ದರೂ, ಮರಗಳನ್ನು ತೆರವು ಮಾಡಲಾಗುತ್ತದೆ. ಒಂದು ವೇಳೆ ಮಳೆಗಾಲ ಆರಂಭಕ್ಕೂ ಮುನ್ನ ಗಣತಿ ಪೂರ್ಣಗೊಳ್ಳದಿದ್ದರೆ, ಬಿಬಿಎಂಪಿ ಅರಣ್ಯ ಘಟಕಕ್ಕೆ ದೂರು ಬರುವ ದುರ್ಬಲ ಮರಗಳನ್ನು ತೆರವು ಮಾಡಿ, ಮುಂದಾಗುವ ಅನಾಹುತ ತಪ್ಪಿಸಲಾಗುತ್ತದೆ.

ವಾಜಪೇಯಿ ಸ್ಮರಣಾರ್ಥ 100 ರೂ. ನಾಣ್ಯ ಬಿಡುಗಡೆ 

ಸುದ್ಧಿಯಲ್ಲಿ ಏಕಿದೆ ? ಮಾಜಿ ಪ್ರಧಾನಿ ದಿ. ಅಟಲ್​ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ 100 ರೂ. ಮುಖಬೆಲೆಯ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.

 • ಈ ನಾಣ್ಯ 135 ಗ್ರಾಂ ತೂಕ ಇದ್ದು ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಚಿತ್ರ ಹಾಗೂ ಅದರ ಕೆಳಗೆ ವಾಜಪೇಯಿ ಅವರ ಹೆಸರು ಮತ್ತು ಜನನ ಹಾಗೂ ಮರಣ ವರ್ಷ (1924-2018) ನಮೂದಿಸಲಾಗಿದೆ.
 • ಮತ್ತೊಂದು ಬದಿಯಲ್ಲಿ ಅಶೋಕ ಸ್ತಂಭದ ಲಾಂಛನದ ಕೆಳಗೆ ಸತ್ಯಮೇವ ಜಯತೆ ಹಾಗೂ ಅದರಡಿ 100 ರೂ. ಎಂದು ಬರೆದಿದೆ. ಒಂದು ಬದಿಯಲ್ಲಿ ಭಾರತ ಹಾಗೂ ಮತ್ತೊಂದು ಬದಿಯಲ್ಲಿ ಇಂಡಿಯಾ ಎಂದು ದೇವನಾಗರಿ ಮತ್ತು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ.
 • ಈ ನಾಣ್ಯವನ್ನು ಬೆಳ್ಳಿ (ಶೇ. 50), ತಾಮ್ರ (ಶೇ. 40), ನಿಕ್ಕಲ್​ (ಶೇ.5) ಮತ್ತು ಜಿಂಕ್​ (ಶೇ.5) ಲೋಹ ಬಳಸಿ ತಯಾರಿಸಲಾಗಿದೆ.

ಸರೊಗಸಿ ಬಿಲ್ 2016

ಸುದ್ಧಿಯಲ್ಲಿ ಏಕಿದೆ ? ದೇಶದಲ್ಲಿ ಸುರೋಗಸಿ ರಕ್ಷಿಸಲು ಲೋಕಸಭೆಯು ಸರ್ರೋಗಸಿ (ನಿಯಂತ್ರಣ) ಬಿಲ್ 2016 ಅನ್ನು ಅಂಗೀಕರಿಸಿದೆ.

 • ಬಿಲ್ ವಾಣಿಜ್ಯ ಸರೊಗಸಿ ನಿಷೇಧಿಸಿದೆ ಮತ್ತು ಪರಹಿತಚಿಂತನೆಯ ಸರೊಗಸಿ ಮಾತ್ರ ಅನುಮತಿಸುತ್ತದೆ.
 • ಈ ಮಸೂದೆಯು ಬಾಡಿಗೆ ತಾಯಿಯ ಹಕ್ಕುಗಳನ್ನು ಮತ್ತು ಸರೊಗಸಿನಿಂದ ಜನಿಸಿದ ಮಗುವನ್ನು ರಕ್ಷಿಸುತ್ತದೆ ಮತ್ತು ನೈತಿಕ ಸರೊಗಸಿಗೆ ಉತ್ತೇಜನ ನೀಡುತ್ತದೆ.

ಬಿಲ್ ಏನು ಮಾಡುವ ಗುರಿ ಹೊಂದಿದೆ?

 • ಬಿಲ್ ವಿವಾಹಿತ ದಂಪತಿಗಳಿಗೆ ಮಾತ್ರ ಪರಹಿತಚಿಂತನೆಯ ಸರೊಗಸಿಯನ್ನು (ಸಂಬಂಧಿಗಳು) ಅನುಮತಿಸುತ್ತದೆ.
 • ವಾಣಿಜ್ಯ ಸರೊಗಸಿಗೆ ಅಂತ್ಯಗೊಳಿಸಲು ಇದು ಪ್ರಯತ್ನಿಸುತ್ತದೆ – ಒಬ್ಬ ಬಾಡಿಗೆ ತಾಯಿಗೆ ಹಣ ಪಾವತಿಯ ಆಮಿಷಒಡ್ಡಿದರೆ  ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ – ಮತ್ತು ಮಗುವಿನ ಲಿಂಗದ ಆಯ್ಕೆಯ ವಿರುದ್ಧ ನಿರ್ಮಿಸಲಾದ ಸುರಕ್ಷತೆಗಳನ್ನು ಸಹ ಹೊಂದಿದೆ.
 • 23-50 ವಯಸ್ಸಿನ (ಸ್ತ್ರೀ) ಮತ್ತು 26-55 (ಪುರುಷ) ನಡುವಿನ ವಯಸ್ಕರ ಭಾರತೀಯ ವಿವಾಹಿತ ದಂಪತಿಗಳಿಗೆ ಉದ್ದೇಶಪೂರ್ವಕವಾಗಿ ಪರಹಿತಚಿಂತನೆಯ, ನೈತಿಕ ಸರೊಗಸಿಯನ್ನು ಅನುಮತಿಸಲು ಬಿಲ್ ಉದ್ದೇಶಿಸಿದೆ.
 • ಕನಿಷ್ಠ ಐದು ವರ್ಷಗಳ ಕಾಲ ಮಗುವಿಗೆ ಪ್ರಯತ್ನಿಸುತ್ತಿದ್ದ ಕಾನೂನುಬದ್ಧವಾಗಿ ವಿವಾಹವಾದ ಮಕ್ಕಳಿಲ್ಲದ ದಂಪತಿಗಳಿಗೆ ಈ ಆಯ್ಕೆಯನ್ನು ಇದು ಸೀಮಿತಗೊಳಿಸುತ್ತದೆ.

ಬಿಲ್ ಏಕೆ ಅಗತ್ಯವಾಗಿತ್ತು?

 • ಬಾಡಿಗೆ ತಾಯಂದಿರ ಶೋಷಣೆಯ ಬಗ್ಗೆ ಅನೇಕ ವರದಿಗಳಿವೆ, ಗರ್ಭಧಾರಣೆಯ ಸಮಯದಲ್ಲಿ “ವಸತಿ ನಿಲಯಗಳಲ್ಲಿ” ಸೀಮಿತವಾಗಿರಲಾಗಿರುವ ಮತ್ತು ತಮ್ಮ ಕುಟುಂಬಗಳನ್ನು ಭೇಟಿ ಮಾಡಲು ಅನುಮತಿಸದ ಮಹಿಳೆಯರಿಗೆ, ತಮ್ಮ ದೇಹಗಳನ್ನು ಅಪಾಯದಲ್ಲಿಟ್ಟುಕೊಂಡು ಒಂದು ಪೌಷ್ಟಿಕ ಮೊತ್ತಕ್ಕೆ ಪದೇ ಪದೇ ಬಾಡಿಗೆ ತಾಯಿಯಾಗುವ ಮಹಿಳೆಯರನ್ನು ಬಿಲ್ ನಿಯಂತ್ರಿಸಲು ಮತ್ತು ಅಂತ್ಯಗೊಳಿಸಲು ಪ್ರಯತ್ನಿಸುತ್ತದೆ.
 • ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನಿಂದ ಬಾಲ್ಪಾರ್ಕ್ ಅಂದಾಜಿನ ಪ್ರಕಾರ ವಾಣಿಜ್ಯ ಸರೊಗಸಿ ಮೂಲಕ ವರ್ಷಕ್ಕೆ ಸುಮಾರು 2,000-ಪ್ರತಿಶತದಷ್ಟು ಮಕ್ಕಳು ಶಿಶುಪಾಲನಾವನ್ನು ಬಾಡಿಗೆಗೆ ನೀಡುತ್ತಾರೆ.
 • ಕಾನೂನು ಆಯೋಗದ 228 ನೇ ವರದಿಯು ವಾಣಿಜ್ಯ ಸರೊಗಸಿ ನಿಷೇಧವನ್ನು ಶಿಫಾರಸು ಮಾಡಿದೆ.
 • ರಷ್ಯಾ, ಉಕ್ರೇನ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ಮಾತ್ರ ವಾಣಿಜ್ಯ ಸರೊಗಸಿ ಅವಕಾಶವಿದೆ.
 • ಬಿಲ್ಗೆ ಈಗ ಎಲ್ಲಾ ಸರೊಗಸಿ ಕ್ಲಿನಿಕ್ಗಳು ​​ನೋಂದಾಯಿಸಬೇಕಾಗುತ್ತದೆ. ಚಿಕಿತ್ಸಾಲಯಗಳು ಈ ಸೇವೆಗಳಿಗೆ ಶುಲ್ಕ ವಿಧಿಸಬಹುದು ಆದರೆ ಬಾಡಿಗೆ ತಾಯಿ ಪಾವತಿಸಲಾಗುವುದಿಲ್ಲ. ರಾಷ್ಟ್ರೀಯ ಮತ್ತು ರಾಜ್ಯ ಸರೊಗಸಿ ಮಂಡಳಿಗಳು ನಿಯಂತ್ರಕ ಅಧಿಕಾರಿಗಳಾಗಿರುತ್ತವೆ.

ಅಗ್ನಿ-4ರ ಯಶಸ್ವಿ ಪರೀಕ್ಷೆ

ಸುದ್ಧಿಯಲ್ಲಿ ಏಕಿದೆ ? ಪರಮಾಣು ಸಾಮರ್ಥ್ಯದ ಸುದೀರ್ಘ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಅಗ್ನಿ-4 ರ ಯಶಸ್ವಿ ಪರೀಕ್ಷೆ ನಡೆಸಲಾಯಿತು. 4,000 ಕಿ.ಮೀ.ಗಳನ್ನು ಕ್ರಮಿಸಬಲ್ಲ ಅಗ್ನಿ-4 ದೇಶಿಯ ನಿರ್ಮಾಣದ ಖಂಡಂತರ ಕ್ಷಿಪಣಿ ಭಾರತೀಯ ಸೇನೆಗೆ ಬಲ ತುಂಬಿದೆ.

 • ಇದನ್ನು ಸಂಪೂರ್ಣ ಯಶಸ್ವಿ ಎಂದು ವ್ಯಾಖ್ಯಾನಿಸಲಾಗಿದ್ದು, ಗುರಿ ತಲುಪಿದ ಕ್ಷಿಪಣಿಯ ಹಂತ ಹಂತದ ಚಾಲನೆಯ ಮಾಹಿತಿ ಟ್ರ್ಯಾಕ್‌ಗೆ ಸಿಕ್ಕಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
 • ಅಗ್ನಿ-4 ಕ್ಷಿಪಣಿಯ 7ನೇ ಪರೀಕ್ಷೆ ಇದಾಗಿದೆ. ಇದೇ ಸ್ಥಳದಲ್ಲಿ ಜನವರಿ 2ರಂದು ಭಾರತೀಯ ಸೇನೆಯು ನಡೆಸಿತ್ತು.
 • ಅಗ್ನಿ-1, 2, 3 ಮತ್ತು ಪೃಥ್ವಿ ಕ್ಷಿಪಣಿಗಳು ಭಾರತೀಯ ಸೇನೆಗೆ ಸೇರ್ಪಡೆಗೊಂಡಿವೆ. ಇದೀಗ ಅಗ್ನಿ-4 ಸೇನೆಗೆ ಮತ್ತಷ್ಟು ಬಲ ತುಂಬಿದೆ.
 • ಅಗ್ನಿ ಸರಣಿಯಲ್ಲಿ ಅಭಿವೃದ್ಧಿಪಡಿಸಲಾದ ಈ ಕ್ಷಿಪಣಿ, 5ನೇ ತಲೆಮಾರಿನ ತಂತ್ರಜ್ಞಾನ ಹೊಂದಿದೆ. ವಯೋನಿಕ್ ವಿನ್ಯಾಸದ ಈ ಕ್ಷಿಪಣಿಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ, ಚಲನೆಯ ಮಾರ್ಗದಲ್ಲಿ ಎದುರಾಗುವ ಅಡೆತಡೆಗಳನ್ನು ಸ್ವಯಂ ಚಾಲಿತವಾಗಿ ಸರಿಪಡಿಸುತ್ತದೆ. ಗುರಿಯನ್ನು ನಿಖರವಾಗಿ ಭೇದಿಸುವ ಜತೆಗೆ ರಿಂಗ್ ಲೇಸರ್ ಆಧಾರಿತ ಆಂತರಿಕ ನ್ಯಾವಿಗೇಷನ್ ವ್ಯವಸ್ಥೆ (ಆರ್​ಐಎನ್​ಎಸ್), ಅತ್ಯಂತ ವಿಶ್ವಾಸಾರ್ಹ ಮೈಕ್ರೋ ನ್ಯಾವಿಗೇಷನ್ ವ್ಯವಸ್ಥೆ (ಎಂಐಎನ್​ಸಿಎಸ್) ಹೊಂದಿದೆ.
 • ಇದರಿಂದ ನ್ಯಾವಿಗೇಷನ್ ಮತ್ತು ಸಂವಹನ ಸರಾಗವಾಗಿ ನಡೆಯುತ್ತದೆ ಎಂದು ಕ್ಷಿಪಣಿ ಅಭಿವೃದ್ಧಿ ಪಡಿಸಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಹೇಳಿದೆ.

‘ನ್ಯಾಷನಲ್‌ ಯೂನಿಟಿ’ ಅವಾರ್ಡ್‌ ಘೋಷಣೆ

ಸುದ್ಧಿಯಲ್ಲಿ ಏಕಿದೆ ? ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ ಪದ್ಮಾ ಪ್ರಶಸ್ತಿ ಮಾದರಿಯಲ್ಲೇ ರಾಷ್ಟ್ರೀಯ ಐಕ್ಯತೆಗಾಗಿ ಕೊಡುಗೆ ಸಲ್ಲಿಸಿದ ಭಾರತೀಯರಿಗೆ ಇನ್ನು ಮುಂದೆ ಕೇಂದ್ರ ಸರಕಾರ ‘ರಾಷ್ಟ್ರೀಯ ಐಕ್ಯತೆ’ (ನ್ಯಾಷನಲ್‌ ಯೂನಿಟಿ) ಪ್ರಶಸ್ತಿ ನೀಡಲಿದೆ.

 • ರಾಷ್ಟ್ರೀಯ ಐಕ್ಯತೆಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಿದ ಭಾರತೀಯರನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ದೇಶದ ಏಕೀಕರಣಕ್ಕಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ನೀಡಿದ ಕೊಡುಗೆಯಿಂದ ಸ್ಫೂರ್ತಿಗೊಂಡು ಪ್ರಧಾನಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸುನಾಮಿ ಅಬ್ಬರಕ್ಕೆ ನಲುಗಿದ ಇಂಡೋನೇಷ್ಯಾ

ಸುದ್ಧಿಯಲ್ಲಿ ಏಕಿದೆ ?ಇಂಡೋನೇಷ್ಯಾದ ಕರಾವಳಿ ಪ್ರದೇಶದಲ್ಲಿ ಕಳೆದ ಆರು ತಿಂಗಳಿಂದ ಕ್ರಿಯಾಶೀಲವಾಗಿದ್ದ ಜ್ವಾಲಾಮುಖಿ ಯೊಂದು ಸ್ಪೋಟಿಸಿದ ಪರಿಣಾಮ ಸುನಾಮಿ ಉಂಟಾಗಿ ಜನರು ಮೃತಪಟ್ಟಿದ್ದಾರೆ.

 • ಸುಮಾತ್ರಾ ದ್ವೀಪ ಸಮೂಹದ ಲ್ಯಾಂಪಂಗ್ನಲ್ಲಿ ಅತಿಹೆಚ್ಚು ಹಾನಿಯಾಗಿದೆ
 • ಜಾವಾ ದ್ವೀಪಸಮೂಹ ಮತ್ತು ಸುಂದಾ ಜಲಸಂಧಿ ಮಧ್ಯದ ಪ್ರದೇಶದಲ್ಲಿರುವ ಅನಾಕಾ ಕ್ರಕಾಟೌ ಎಂಬ ಜ್ವಾಲಾಮುಖಿ ಜೂನ್ ತಿಂಗಳಿನಿಂದ ಕ್ರಿಯಾಶೀಲವಾಗಿತ್ತು.
 • ಅಗ್ನಿಪರ್ವತದಿಂದ ಉಕ್ಕಿದ ಶಿಲಾಪಾಕ ಸಮುದ್ರದ ಒಡಲು ಸೇರಿದ ಕಾರಣ ಹಾಗೂ ಸ್ಪೋಟದಿಂದ ಆಳಸಮುದ್ರದಲ್ಲಿ ಭೂಕುಸಿತ ಉಂಟಾಗಿದ್ದರಿಂದ ಸುನಾಮಿ ಸಂಭವಿಸಿರಬಹುದು ಎಂದು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ಮರಿ ಜ್ವಾಲಾಮುಖಿ ಪ್ರತಾಪ

 • ಅನಾಕಾ ಕ್ರಾಕಟೌ ಜ್ವಾಲಾಮುಖಿ 1 ಸಾವಿರ ಅಡಿ ಎತ್ತರವಿದೆ. ಜಕಾರ್ತಾದಿಂದ 200 ಕಿ.ಮೀ. ದೂರದಲ್ಲಿದೆ. ಅನಾಕಾ ಕ್ರಾಕಟೌ ಎಂದರೆ ಮರಿ ಕ್ರಾಕಟೌ ಎಂದು ಅರ್ಥ. ಅಂದರೆ ಈ ಹಿಂದೆ ಇದ್ದ ಕ್ರಾಕಟೌ ಎಂಬ ಅಗ್ನಿಪರ್ವತದ ಮಗು ಎಂದು ಭಾವಿಸಲಾಗುತ್ತದೆ.
 • ಕ್ರಾಕಟೌ ಎಂಬ ಜ್ವಾಲಾಮುಖಿ 1883ರ ಆಗಸ್ಟ್ 26ರಂದು ಸ್ಪೋಟಿಸಿತ್ತು. ಅದು ಸಿಡಿಸಿದ ಬೂದಿಯು ಇಡೀ ಪ್ರದೇಶವನ್ನು ಆವರಿಸಿ, ಬೆಳಗಿನ ವೇಳೆಯೇ ಕತ್ತಲಾವರಿಸುವಂತಾಗಿತ್ತು. ಅಲ್ಲದೆ, ಜಾಗತಿಕ ತಾಪಮಾನ ಗಣನೀಯವಾಗಿ ಕುಸಿದಿತ್ತು.
 • ಈ ಸಂದರ್ಭದಲ್ಲಿ ಅಂದಾಜು 135 ಅಡಿ ಎತ್ತರದ ಸುನಾಮಿ ಅಲೆಗಳು ಸುಂದಾ ಜಲಸಂಧಿ ಪ್ರದೇಶಕ್ಕೆ ಅಪ್ಪಳಿಸಿದ್ದರಿಂದ, ಜಾವಾ ಮತ್ತು ಸುಮಾತ್ರಾ ದ್ವೀಪ ಸಮೂಹದ ಪಟ್ಟಣಗಳು ಮತ್ತು ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿದ್ದವು. 36 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 1920ರವರೆಗೆ ಈ ಪ್ರದೇಶ ಶಾಂತವಾಗಿತ್ತು. ನಂತರದಲ್ಲಿ ಮರಿ ಕ್ರಾಕಟೌ ಜ್ವಾಲಮುಖಿ ಕಾಣಿಸಿಕೊಂಡಿತ್ತು. ವರ್ಷದಿಂದ ವರ್ಷಕ್ಕೆ ಇದು ಬೆಳೆಯುತ್ತಲೇ ಇದೆ. ಆಗಾಗ್ಗೆ ಸ್ಪೋಟಿಸುತ್ತ ಅನಾಹುತ ಉಂಟು ಮಾಡುತ್ತಿದೆ
 • ರಿಂಗ್ ಆಫ್ ಫೈರ್ ಎಂದು ಕರೆಯಲಾಗುವ ಪ್ರದೇಶದ ಮೇಲೆ ಇಂಡೋನೇಷ್ಯಾ ಇದೆ. ಈ ಪ್ರದೇಶದಲ್ಲಿ ಟೆಕ್ಟಾನಿಕ್ ಪ್ಲೇಟ್​ಗಳು ಪರಸ್ಪರ ಡಿಕ್ಕಿ ಹೊಡೆಯುವುದರಿಂದ, ಭೂಕಂಪ ಮತ್ತು ಅಗ್ನಿಪರ್ವತ ಸ್ಪೋಟದಂಥ ನೈಸರ್ಗಿಕ ವಿಪತ್ತು ಸಂಭವಿಸುತ್ತಲೇ ಇರುತ್ತದೆ. ಈ ವರ್ಷದ ಸೆಪ್ಟೆಂಬರ್​ನಲ್ಲಿ ಸುಲವೇಷಿ ದ್ವೀಪ ಸಮೂಹದ ಪಲು ಎಂಬ ನಗರದಲ್ಲಿ ಭೂಮಿ ಕಂಪಿಸಿದ್ದರಿಂದ, ಸುನಾಮಿ ಉಂಟಾಗಿತ್ತು.

Related Posts
“27 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮುಖ್ಯ ಚುನಾವಣಾ ಆಯುಕ್ತ ಸುದ್ಧಿಯಲ್ಲಿ ಏಕಿದೆ ?ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಮಾಸಾಂತ್ಯಕ್ಕೆ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಸುನೀಲ್ ಅರೋರಾ ಅವರನ್ನು ನೇಮಕ ಮಾಡಲಾಗಿದೆ. ಅರೋರಾ ಅವರು ಡಿಸೆಂಬರ್‌ 2ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಡಿ.7ರಂದು ನಡೆಯುವ ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆ ಹಾಗೂ ...
READ MORE
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸಿವಿಜಿಲ್’ ಮೊಬೈಲ್ ಆಪ್ ಸುದ್ಧಿಯಲ್ಲಿ ಏಕಿದೆ ?ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ’ ಸಿವಿಜಿಲ್’ ಮೊಬೈಲ್ ಆಪ್ ಹೊರತರುತ್ತಿದೆ. ಆಪ್​ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ. ಹಿನ್ನಲೆ ಕಳೆದ ...
READ MORE
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರೋ ಇಂಡಿಯಾ ಡ್ರೋನ್ ಒಲಿಂಪಿಕ್ಸ್ ಸುದ್ಧಿಯಲ್ಲಿ ಏಕಿದೆ ?ಏರೋ ಇಂಡಿಯಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಡ್ರೋನ್​ಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಅದಕ್ಕೆ ಡ್ರೋನ್ ಒಲಿಂಪಿಕ್ಸ್ ಎಂದು ಹೆಸರಿಡಲಾಗಿದೆ. ವಿಜೇತರಾಗುವವರಿಗೆ ನಗದು ಬಹುಮಾನವನ್ನು ನೀಡಲು ಏರೋ ಇಂಡಿಯಾ ಶೋ ಆಯೋಜಕರು ನಿರ್ಧರಿಸಿದ್ದಾರೆ. ಎರಡು ವಿಭಾಗದಲ್ಲಿ ಸ್ಪರ್ಧೆ: ಡ್ರೋನ್ ...
READ MORE
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾರುಕಟ್ಟೆ ಖಾತರಿ ಯೋಜನೆ ಸುದ್ಧಿಯಲ್ಲಿ ಏಕಿದೆ ?ಕೃಷಿ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಂದ ರೈತರಿಗಾಗುವ ವಂಚನೆ ತಪ್ಪಿಸುವುದಕ್ಕಾಗಿ ಕೆಲವು ಕೃಷಿ ಉತ್ಪನ್ನಗಳಿಗಷ್ಟೇ ಇರುವ ಕನಿಷ್ಠ ಬೆಂಬಲ ಬೆಲೆಯನ್ನು ವಾಣಿಜ್ಯ ಹಾಗೂ ಸಿರಿಧಾನ್ಯ ಬೆಳೆಗಳಿಗೂ ವಿಸ್ತರಿಸಿ ಮಾರುಕಟ್ಟೆ ಖಾತರಿ ಒದಗಿಸುವ ನಿರ್ಧಾರಕ್ಕೆ ಸರ್ಕಾರ  ಬಂದಿದೆ. ಏಕೆ ಈ ಯೋಜನೆ ...
READ MORE
“02 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹಂಪಿ ಉತ್ಸವ ಸುದ್ಧಿಯಲ್ಲಿ ಏಕಿದೆ ? ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವವು ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಸಕಲ ಸಿದ್ಧತೆಯಾಗಿದೆ. ಮಾ.2ರಂದು ಕಲಾ ತಂಡಗಳಿಂದ ಶೋಭಾಯಾತ್ರೆ ಜರುಗಲಿದ್ದು, ಸಿಎಂ ಕುಮಾರಸ್ವಾಮಿ ಉತ್ಸವಕ್ಕೆ ಚಾಲನೆ ನೀಡುವರು. ವಿಶೇಷ ಆಹ್ವಾನಿತರಾಗಿ ನಟ ದರ್ಶನ್, ...
READ MORE
“02 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅಂಕ ನೀಡಿಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆಗಳಿಗೆ ತಮ್ಮ ಪೋಷಕರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸಿದ ವಿದ್ಯಾರ್ಥಿಗಳಿಗೆ "ಶೈಕ್ಷಣಿಕ ಯೋಜನೆ (ಪ್ರಾಜೆಕ್ಟ್) ವಿಷಯಕ್ಕೆ ತಲಾ ಎರಡು ಹೆಚ್ಚುವರಿ ಅಂಕ ಹಾಗೂ ವಿಶೇಷ ಬಹುಮಾನಗಳನ್ನು ನೀಡಲು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ...
READ MORE
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗಂಗಾ ಕಲ್ಯಾಣ  ಸುದ್ಧಿಯಲ್ಲಿ ಏಕಿದೆ ? ಪರಿಶಿಷ್ಟ ಜಾತಿ (ಎಸ್ಸಿ) ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅಂಬೇಡ್ಕರ್ ನಿಗಮದ ಮೂಲಕ ಜಾರಿಗೆ ತಂದಿರುವ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆ ಅನ್ನದಾತರ ಬದಲು ಅಧಿಕಾರಿಗಳು, ಬೋರ್​ವೆಲ್ ಏಜೆನ್ಸಿದಾರರ ಆರ್ಥಿಕ ಕಲ್ಯಾಣಕ್ಕೆ ದಾರಿ ...
READ MORE
“11 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರ್ನಾಟಕ ಹೈಕೋರ್ಟ್‌ ಸಿಜೆ ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್‌ ಕೊಲಿಜಿಯಂ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಕೊಲಿಜಿಯಂ ಸಭೆಯಲ್ಲಿ ...
READ MORE
“26 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರ್ನಾಟಕ ಹೈಕೋರ್ಟ್‌ಗೆ ಹೊಸ ನ್ಯಾಯಮೂರ್ತಿಗಳ ನೇಮಕ   ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಹೈಕೋರ್ಟ್‌ಗೆ 8 ನೂತನ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಸುಪ್ರೀಂಕೋರ್ಟ್‌ನ ಕೊಲಿಜಿಯಂ ನಿರ್ಧರಿಸಿದೆ. ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ವಕೀಲರಾಗಿರುವ ಸವನೂರು ವಿಶ್ವನಾಥ್‌ ಶೆಟ್ಟಿ, ಸಿಂಗಾಪುರಂ ರಾಘವಾಚಾರ್‌ ಕೃಷ್ಣಕುಮಾರ್‌, ...
READ MORE
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳ್ಳಂದೂರು ಕೆರೆ ಸುದ್ಧಿಯಲ್ಲಿ ಏಕಿದೆ ? ನೊರೆಕಾಟದ ಮೂಲಕ ಸದಾ ಸುದ್ದಿಯಾಗುವ ಬೆಳ್ಳಂದೂರು ಕೆರೆಯಲ್ಲಿ ನೀರಿನ ಪ್ರಮಾಣವೇ ಕಡಿಮೆ ಆಗುತ್ತಿದ್ದು, ಕೆರೆ ಬತ್ತುವ ಆತಂಕ ಸ್ಥಳೀಯರಲ್ಲಿ ತಲೆದೋರಿದೆ. ಆದರೆ, ಈ ಬಗ್ಗೆ ತಜ್ಞರಿಂದ ಹಲವು ವಿಶ್ಲೇಷಣೆಗಳು ವ್ಯಕ್ತವಾಗಿವೆ. ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ...
READ MORE
“27 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“02 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“02 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“26 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *