“24 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ವಿಮಾನ ಪತ್ತೆಗೆ ಉಪ್ಪಿನ ಉಪಾಯ

ಸುದ್ಧಿಯಲ್ಲಿ ಏಕಿದೆ ? ತಾಂತ್ರಿಕ ದೋಷಗಳಿಂದ ಪತನಗೊಂಡು ಸಮುದ್ರಕ್ಕೆ ಬೀಳುವ ವಿಮಾನಗಳನ್ನು ಪತ್ತೆ ಮಾಡಲು ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್​ಆರ್​ಎಲ್) ‘ಉಪ್ಪಿನ ಉಪಾಯ’ ಕಂಡುಕೊಂಡಿದೆ.

 • ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಯೋಧರು, ಅಂತರಿಕ್ಷಯಾನಿಗಳಿಗೆ ಆಹಾರ ಸಿದ್ಧಪಡಿಸುವಲ್ಲಿ (ಡಿಎಫ್​ಆರ್​ಎಲ್) ನಿರತವಾಗಿದೆ. ಸಮುದ್ರದಾಳಕ್ಕೆ ಬೀಳುವ ವಿಮಾನವನ್ನು ಶೀಘ್ರದಲ್ಲಿ ಪತ್ತೆ ಮಾಡಿ ರಕ್ಷಣಾ ಕಾರ್ಯಕ್ಕೆ ನೆರವಾಗಲು ನಿಗದಿತ ಸಮುದ್ರ ಪ್ರದೇಶ ಗುರುತಿಸುವ ನೀರಿನ ಉಪ್ಪನ್ನು (ಸಿ ಡೈ ಮಾರ್ಕರ್ ಪೊಟೇಬಲ್ ವಾಟರ್ ಸಾಲ್ಟ್ ) ಕೇವಲ 400 ರೂ.ಗಳಲ್ಲಿ ಸಂಸ್ಥೆ ತಯಾರಿಸಿದೆ. ವಿಮಾನದಲ್ಲಿ ಇಡಲಾಗುವ ಚಿಕ್ಕಪೊಟ್ಟಣವೊಂದು ಅಪಘಾತ ಸಂಭವಿಸಿ ನೀರಿಗೆ ಬಿದ್ದಾಗ ಅದರ ಪತ್ತೆಗೆ ಸಹಕಾರಿ ಆಗಲಿದೆ. ವಾಯುಸೇನೆಗೆ ಈಗಾಗಲೇ 4 ಸಾವಿರ ಪೊಟ್ಟಣಗಳನ್ನು ಪೂರೈಸಲಾಗಿದೆ.
 • ಉಪ್ಪಿನಿಂದ ಪತ್ತೆ ಹೇಗೆ: ಎಷ್ಟೇ ಸುರಕ್ಷತೆ ಕ್ರಮ ವಹಿಸಿದ್ದರೂ ಕೆಲವೊಮ್ಮೆ ತಾಂತ್ರಿಕ ದೋಷದಿಂದಾಗಿ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಮಲೇಷ್ಯಾದ ವಿಮಾನವೊಂದು ಇತ್ತೀಚೆಗೆ ಸಮುದ್ರಕ್ಕೆ ಬಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದರು. ವಿಮಾನ ಪತ್ತೆಗಾಗಿ ರಕ್ಷಣಾ ಪಡೆಗಳು ಹರಸಾಹಸ ಪಡಬೇಕಾಯಿತು. ವಿಮಾನ ಬಿದ್ದ ಸ್ಥಳವನ್ನು ಶೀಘ್ರದಲ್ಲಿ ಪತ್ತೆ ಮಾಡಿದರೆ ಹಲವರ ಜೀವ ಉಳಿಸುವುದಕ್ಕೆ ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಉಪ್ಪಿನ ಉಪಾಯ ಕಂಡುಕೊಂಡಿರುವುದಾಗಿ ತಿಳಿಸಿದರು.
 • ವಿಮಾನದ ಮುಂಭಾಗದಲ್ಲಿ 100-200 ಗ್ರಾಂನ ಸಿ ಡೈ ಉಪ್ಪಿನ ಪೊಟ್ಟಣ ಇರಿಸಿದರೆ ಒಂದು ವೇಳೆ ಅವಘಡ ಸಂಭವಿಸಿ ವಿಮಾನ ಸಮುದ್ರಕ್ಕೆ ಬಿದ್ದಲ್ಲಿ ಈ ಉಪು್ಪ ತನ್ನ ಕೆಲಸ ಮಾಡುತ್ತದೆ. ಸಮುದ್ರಕ್ಕೆ ವಿಮಾನ ಬೀಳುತ್ತಿದ್ದಂತೆ ಈ ಉಪು್ಪ ನೀರಿಗೆ ಹರಡಿ ಆರು ಕಿ.ಮೀ. ವ್ಯಾಪ್ತಿವರೆಗೆ ಸಮುದ್ರ ಹಸಿರು ಬಣ್ಣಕ್ಕೆ ತಿರುಗಲಿದೆ. ಈ ಬಣ್ಣದ ಮೂಲಕ ರಕ್ಷಣಾ ತಂಡಗಳು 3 ಸಾವಿರ ಅಡಿ ಎತ್ತರದಿಂದಲೂ ಪತನಗೊಂಡ ವಿಮಾನದ ಸ್ಥಳವನ್ನು ಗುರುತಿಸಬಹುದು. ಇದರಿಂದ ಅನೇಕರ ಜೀವನವನ್ನು ರಕ್ಷಿಸಬಹುದಾಗಿದೆ. ಹಡಗು ಗಳಲ್ಲಿಯೂ ಇದನ್ನು ಬಳಸುವುದರಿಂದ ಪತ್ತೆಗೆ ಸಹಕಾರಿ ಆಗಲಿದೆ.

ಆಹಾರ ಸುರಕ್ಷತೆ ಪತ್ತೆಗೆ ಸುಲಭ ವಿಧಾನ

 • ಉಪ್ಪು ಅಷ್ಟೇ ಅಲ್ಲದೆ ಮಾಂಸಾಹಾರದ ಸುರಕ್ಷತೆಯ ಪತ್ತೆಗೂ ಸುಲಭ ವಿಧಾನವನ್ನು ಡಿಎಫ್​ಆರ್​ಎಲ್ ಒದಗಿಸಿದೆ. ಚಿಕನ್ ಹಾಗೂ ಮಟನ್​ಗೆ ಯಾವುದೇ ಅಹಿತಕರ ಅಂಶಗಳನ್ನು ಬೆರೆಸಿರುವುದು ಅಥವಾ ಅವುಗಳು ಗುಣಮಟ್ಟದಾಗಿವೆಯೇ ಎಂಬುದನ್ನು ಪತ್ತೆ ಮಾಡಲು ಸುಲಭದ ಸ್ಟ್ರಿಪ್​ಗಳನ್ನು ಪರಿಚಯಿಸಲಾಗಿದೆ.
 • ಸೇನಾ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಕಾಯನಿರ್ವಹಿಸುವ ಸಂದರ್ಭದಲ್ಲಿ ಆಹಾರ ಸುರಕ್ಷತೆ ಪತ್ತೆಗೆ ಪ್ರಯೋಗಾಲಯಗಳು ಲಭ್ಯವಿರುವುದಿಲ್ಲ. ಅಂಥ ಸಂದರ್ಭದಲ್ಲಿ ಈ ಸ್ಟ್ರಿಪ್​ಗಳನ್ನು ಸಿದ್ಧಪಡಿಸಿದ ಆಹಾರದಲ್ಲಿ ಇರಿಸಿದರೆ ಅದರ ಗುಣಮಟ್ಟ ತಿಳಿಯುತ್ತದೆ. ನಿರ್ದಿಷ್ಟ ಬಣ್ಣಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ತಕ್ಕಂತೆ ಆಹಾರದ ಗುಣಮಟ್ಟ ಹೇಗಿದೆ ಎಂಬುದು ಕೇವಲ 5 ನಿಮಿಷದ ಅವಧಿಯಲ್ಲಿ ತಿಳಿಯಲಿದೆ.

‘ಇಂಗ್ಲಿಷ್‌ ಭಾಷಾ ಪ್ರಯೋಗಾಲಯ’

2.

ಸುದ್ಧಿಯಲ್ಲಿ ಏಕಿದೆ ? ಪದವಿ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್‌ ಭಾಷಾ ಪರಿಣತಿ ಹೆಚ್ಚಿಸಲು ರಾಜ್ಯದ ಹದಿನಾಲ್ಕು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ‘ಇಂಗ್ಲಿಷ್‌ ಭಾಷಾ ಪ್ರಯೋಗಾಲಯ’ಗಳನ್ನು ಸ್ಥಾಪಿಸಲು ಕಾಲೇಜು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

 • ಈ ಪ್ರಯೋಗಾಲಯಗಳಲ್ಲಿ ತಂತ್ರಜ್ಞಾನದ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಓದುವುದು, ಬರೆಯುವುದು, ಸುಲಲಿತವಾಗಿ ಮಾತನಾಡುವುದು, ಸ್ಪಷ್ಟ ಉಚ್ಛಾರಣೆ, ವ್ಯಾಕರಣ ಇತ್ಯಾದಿಗಳನ್ನು ಕಲಿಸಲಾಗುತ್ತದೆ.

ಕಾರಣವೇನು?

 • ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆ ಎಂದರೆ ಕಬ್ಬಿಣದ ಕಡಲೆಯೇ ಸರಿ. ರಾಜ್ಯದ ಬಹುತೇಕ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ವಿದ್ಯಾರ್ಥಿಗಳು ಮೂಲತಃ ಕನ್ನಡ ಮಾಧ್ಯಮದವರಾಗಿದ್ದು, ಇವರಿಗೆ ‘ಇಂಗ್ಲಿಷ್‌ ಗುಮ್ಮ’ ಸದಾ ಕಾಡುತ್ತದೆ.
 • ಹಾಗಾಗಿ, ಪದವಿ ತರಗತಿಗಳಲ್ಲಿ ಇಂಗ್ಲಿಷ್‌ ವಿಷಯದಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಅತಿಹೆಚ್ಚು. ಇತರೆ ವಿಷಯಗಳಲ್ಲಿ ಉತ್ತಮ ಅಂಕಗಳು ಲಭಿಸಿದ್ದರೂ, ಇಂಗ್ಲಿಷ್‌ನಲ್ಲಿ ಅನುತ್ತೀರ್ಣರಾದ ಕಾರಣ ಕಾಲೇಜನ್ನು ಅರ್ಧಕ್ಕೆ ಬಿಟ್ಟವರ ಸಂಖ್ಯೆ ಸಹ ಜಾಸ್ತಿಯಿದೆ. ಈ ಎಲ್ಲಾ ಸಮಸ್ಯೆ ಪರಿಹಾರಕ್ಕಾಗಿ ಇಂಗ್ಲಿಷ್‌ ಭಾಷಾ ಪ್ರಯೋಗಾಲಯಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

ಲ್ಯಾಬ್‌ನಲ್ಲಿ ಏನೇನಿರುತ್ತದೆ?

 • ಇಂಗ್ಲಿಷ್‌ ಭಾಷಾ ಪ್ರಯೋಗಾಲಯದಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಗೆ ಒತ್ತು ನೀಡಲಾಗಿದೆ. ಕಂಪ್ಯೂಟರ್‌, ಇಂಟರ್‌ನೆಟ್‌, ಲ್ಯಾಪ್‌ಟಾಪ್‌, ಧ್ವನಿವರ್ಧಕ, ಮೈಕ್ರೋಫೋನ್‌, ಹೆಡ್‌ಫೋನ್‌, ಪ್ರೊಜೆಕ್ಟರ್‌, ಆಡಿಯೊ, ವಿಡಿಯೊ ಇತ್ಯಾದಿ ಪರಿಕರಗಳನ್ನು ಅಳವಡಿಕೆ ಮಾಡಲಾಗುತ್ತದೆ.
 • ಬೋಧನೆಗೆ ಕಿಯೋನಿಕ್ಸ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಭಾಷಾ ತಂತ್ರಾಂಶವನ್ನು ಬಳಸಲಾಗುತ್ತದೆ. ಜತೆಗೆ, ಇಂಗ್ಲಿಷ್‌ ಕಲಿಕೆಗೆ ಸಂಬಂಧಿಸಿದ ಪುಸ್ತಕ, ಸಿಡಿಗಳು, ವ್ಯಾಕರಣ ಪುಸ್ತಕಗಳು, ಕನ್ನಡ ಮತ್ತು ಇಂಗ್ಲಿಷ್‌ ಶಬ್ಧಕೋಶಗಳು, ಲಾಂಗ್ವೇಜ್‌ ಗೇಮ್ಸ್‌ಗೆ ಸಂಬಂಧಿಸಿದ ಪರಿಕರಗಳು ಸಹ ಇರಲಿವೆ.

ಪ್ರಯೋಗಾಲಯದಲ್ಲಿ ಕಲಿಕೆ ಹೇಗೆ ?

 • ಇಂಗ್ಲಿಷ್‌ ಕಲಿಸುವ ಸಂಬಂಧ ವಿಶೇಷ ತರಬೇತಿ ಪಡೆದ ಅಧ್ಯಾಪಕರು ಈ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆ ಕಲಿಸಿಕೊಡಲಿದ್ದಾರೆ. ಇಂಗ್ಲಿಷ್‌ ಕಲಿಕೆಗೆ ಸಂಬಂಧಿಸಿದ ಆಡಿಯೊ, ವಿಡಿಯೊಗಳ ಮೂಲಕ ಇಂಗ್ಲಿಷ್‌ ಭಾಷಾ ತರಬೇತಿ ನೀಡಲಾಗುತ್ತದೆ. ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌ ಬಳಸಿ ಪರಿಣಿತರಿಂದ ಸುಲಭವಾಗಿ ಇಂಗ್ಲಿಷ್‌ ಕಲಿಯುವ ಟಿಫ್ಸ್‌ಗಳನ್ನು ನೀಡಲಾಗುತ್ತದೆ. ಆನ್‌ಲೈನ್‌ ಪದಕೋಶಗಳ ಬಳಕೆಯನ್ನು ಹೇಳಿಕೊಡಲಾಗುತ್ತದೆ.
 • ಬೇರೆ ಬೇರೆ ದೇಶಗಳಲ್ಲಿ ಯಾವ ರೀತಿಯಲ್ಲಿ ಇಂಗ್ಲಿಷ್‌ ಉಚ್ಛಾರಣೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಇಂಗ್ಲಿಷ್‌ ಭಾಷಣಗಳ ಬಗ್ಗೆ ಆಡಿಯೊ ಮತ್ತು ವಿಡಿಯೊಗಳ ಪ್ರಸಾರ, ಪ್ರೊಜೆಕ್ಟರ್‌ಗಳ ಮೂಲಕ ಇಂಗ್ಲಿಷ್‌ ನಾಟಕಗಳನ್ನು ತೋರಿಸಲಾಗುತ್ತದೆ. ಜತೆಗೆ, ಅಧ್ಯಾಪಕರು ಸ್ಥಳದಲ್ಲೇ ಇಂಗ್ಲಿಷ್‌ ಓದಿಸುವುದು, ಬರೆಸುವುದು, ಸ್ಪಷ್ಟವಾಗಿ ಉಚ್ಛರಿಸುವುದನ್ನು ಅಭ್ಯಾಸ ಮಾಡಿಸುವುದರ ಜತೆಗೆ, ವ್ಯಾಕರಣ ಮತ್ತು ಸ್ಪೋಕನ್‌ ಇಂಗ್ಲಿಷ್‌ ಅನ್ನು ಸಹ ಹೇಳಿಕೊಡಲಿದ್ದಾರೆ.

14 ಕಾಲೇಜಗಳಲ್ಲಿ ಪ್ರಯೋಗಾಲಯ

 • ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ರೂಪಿಸಿರುವ ‘ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನ್‌ (ರೂಸಾ)’ ಯೋಜನೆಯಡಿ ನೆರವು ಪಡೆಯುತ್ತಿರುವ ರಾಜ್ಯದ ಒಟ್ಟು 14 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇಂಗ್ಲಿಷ್‌ ಭಾಷಾ ಪ್ರಯೋಗಾಲಯ ತೆರೆಯಲು ಇಲಾಖೆ ಕ್ರಮ ಕೈಗೊಂಡಿದೆ.

ತೆರಿಗೆ ವಂಚನೆ ಪತ್ತೆಗೆ ‘ಆರ್‌ಎಫ್‌ಐಡಿ’ ಕಣ್ಣು

3.

ಸುದ್ಧಿಯಲ್ಲಿ ಏಕಿದೆ ? ಸರಕು ಸಾಗಣೆ ವೇಳೆ ತೆರಿಗೆ ವಂಚಿಸುವವರನ್ನು ಪತ್ತೆ ಮಾಡಲು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಪ್ರಮುಖ ಹೆದ್ದಾರಿಗಳಲ್ಲಿ ‘ಆರ್‌ಎಫ್‌ಐಡಿ’ (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌) ಕ್ಯಾಮರಾ ಅಳವಡಿಸುತ್ತಿದ್ದು, ದೇಶದಲ್ಲೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಇದನ್ನು ಜಾರಿಗೊಳಿಸಲಾಗಿದೆ.

 • ಅಂತಾರಾಜ್ಯ ವಹಿವಾಟು – ಸರಕು ಸಾಗಣೆ ವಾಹನ ಗುರುತಿಸಿ ತೆರಿಗೆ ವಂಚನೆ ಮಾಡುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
 • ವಾಹನ ತಡೆದು ನಿಲ್ಲಿಸದೇ ವಾಹನದಲ್ಲಿನ ಸರಕು (ಗೂಡ್ಸ್‌) ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಎಲ್ಲ ಸಮಸ್ಯೆಗಳಿಗೂ ‘ಆರ್‌ಎಫ್‌ಐಡಿ’ ಪರಿಹಾರ ಒದಗಿಸಿದ್ದು, ಪರಿಶೀಲನೆ ಮತ್ತು ದಂಡ ಸಂಗ್ರಹಣೆ ಕಾರ್ಯವನ್ನು ಸುಲಭಗೊಳಿಸಿದೆ. ಬೆಳಗಾವಿ ತಾಲೂಕಿನ ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮೊದಲ ‘ಆರ್‌ಎಫ್‌ಐಡಿ’ ಅಳವಡಿಕೆ ಮಾಡಲಾಗಿದೆ. ವಿಜಯಪುರ ಮತ್ತು ಬೆಂಗಳೂರಿನಲ್ಲೂ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ.

ಆರ್ಎಫ್ಐಡಿ ಬಗ್ಗೆ

 • ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (RFID) ರೇಡಿಯೋ ತರಂಗಗಳನ್ನು ಎರಡು ವಸ್ತುಗಳ ನಡುವೆ ಸಂವಹನ ಮಾಡಲು ಬಳಸುತ್ತದೆ: ಓದುಗ ಮತ್ತು ಟ್ಯಾಗ್. RFID ಸಂವಹನವು ಎರಡು ಮಾರ್ಗ ರೇಡಿಯೋ ಸಂವಹನಗಳಂತೆಯೇ ಅದೇ ಮಾಹಿತಿಯನ್ನು ಆವರ್ತನದಲ್ಲಿ ರೇಡಿಯೋ ತರಂಗ ಮೂಲಕ ಹರಡುತ್ತದೆ ಅಥವಾ ಸ್ವೀಕರಿಸುತ್ತದೆ.
 • ನಿಷ್ಕ್ರಿಯ ಟ್ಯಾಗ್ಗಳು ಹತ್ತಿರದ ಆರ್ಎಫ್ಐಡಿ ರೀಡರ್ನ ವಿಚಾರಣೆ ರೇಡಿಯೋ ತರಂಗಗಳಿಂದ ಶಕ್ತಿಯನ್ನು ಸಂಗ್ರಹಿಸುತ್ತವೆ. ಸಕ್ರಿಯ ಟ್ಯಾಗ್ಗಳು ಬ್ಯಾಟರಿಯಂತಹ ಸ್ಥಳೀಯ ವಿದ್ಯುತ್ ಮೂಲವನ್ನು ಹೊಂದಿವೆ ಮತ್ತು RFID ರೀಡರ್ನಿಂದ ನೂರಾರು ಮೀಟರ್ಗಳಷ್ಟು ಕಾರ್ಯ ನಿರ್ವಹಿಸಬಹುದು.
 • ಆರ್‌ಎಫ್‌ಐಡಿ ವಿಶೇಷತೆ: ಕೇಂದ್ರ ಸರಕಾರದ ಎನ್‌ಐಸಿ (ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ) ಅಳವಡಿಸುತ್ತಿರುವ ಆರ್‌ಎಫ್‌ಐಡಿ ಕ್ಯಾಮರಾದಲ್ಲಿ ಸೆರೆಯಾಗುವ ಎಲ್ಲ ಮಾಹಿತಿ ಎನ್‌ಐಸಿ ಡಾಟಾ ಸೆಂಟರ್‌ಗೆ ರವಾನೆಯಾಗುತ್ತದೆ. ಜತೆಗೆ ವಾಣಿಜ್ಯ ತೆರಿಗೆ ಇಲಾಖೆ ಕೇಂದ್ರ ಕಚೇರಿಗೂ ಈ ಮಾಹಿತಿ ಸಿಗುವಂತೆ ಮಾಡಲಾಗಿದೆ. ಸರಕು ಸಾಗಣೆ ವಾಹನಗಳ ಫೋಟೊಗಳನ್ನು ಕ್ಯಾಮರಾಗಳು ಸೆರೆ ಹಿಡಿಯುತ್ತವೆ. ಇದೇ ವೇಳೆ ವಾಹನದಲ್ಲಿ ಇರುವ ಇ- ವೇ ಬಿಲ್ಲನ್ನೂ ರೀಡ್‌ ಮಾಡುತ್ತದೆ. ರೇಡಿಯೊ ಫ್ರೀಕ್ವೆನ್ಸಿ ತಂತ್ರಜ್ಞಾನ ವಾಹನದಲ್ಲಿ ಇರುವ ಸರಕು, ತೂಕ, ಲೋಡ್‌ ಮತ್ತು ಅನ್‌ಲೋಡ್‌ ಸ್ಥಳದ ಮಾಹಿತಿಗಳೆಲ್ಲವನ್ನೂ ಕ್ಷ ಣಾರ್ಧದಲ್ಲಿ ಒದಗಿಸುತ್ತದೆ.
 • ಉತ್ತರ ವಲಯ ಫಸ್ಟ್‌: ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ವ್ಯಾಪ್ತಿ ಹೊಂದಿರುವ ಉತ್ತರ ವಲಯ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರ ಕಚೇರಿ ರಾಜ್ಯದಲ್ಲೇ ಅತಿ ಹೆಚ್ಚು ದಂಡ ಸಂಗ್ರಹಿಸುತ್ತಿದೆ.
 • ವಿಶೇಷವಾಗಿ ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲಿ ಉತ್ಪಾದಿತ ಸರಕುಗಳ ಸಾಗಣೆ ಬೆಳಗಾವಿ ಮೂಲಕ ನಡೆಯುತ್ತಿರುವುದು ಹಾಗೂ ದೆಹಲಿ ಸೇರಿದಂತೆ ಉತ್ತರ ಭಾರತದಿಂದ ಸಾಗಣೆಯಾಗುವ ಸರಕು ದಕ್ಷಿಣ ಭಾರತ ತಲುಪಲು ವಿಜಯಪುರ, ಬಾಗಲಕೋಟೆ ಪ್ರವೇಶ ದ್ವಾರ. ಹೀಗಾಗಿ ಈ ಭಾಗದಲ್ಲಿ ಅತಿ ಹೆಚ್ಚು ದಂಡ ಸಂಗ್ರಹವಾಗುತ್ತಿದೆ ಎಂಬುದು ತೆರಿಗೆ ಇಲಾಖೆ ಅಧಿಕಾರಿಗಳ ವಿವರಣೆ.
 • ಕಬ್ಬಿಣ, ಉಕ್ಕು, ರೆಡಿಮೇಡ್‌ ಉತ್ಪನ್ನಗಳು, ಕೊಬ್ಬರಿ, ಅಡಕೆ ಮತ್ತು ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್ಸ್‌ ವಸ್ತುಗಳ ಸಾಗಣೆಯಲ್ಲಿ ಅತಿ ಹೆಚ್ಚು ತೆರಿಗೆ ವಂಚನೆ ನಡೆಯುತ್ತದೆ. ಈ ಮೊದಲು ಪ್ರತಿ ತಿಂಗಳು 1 ರಿಂದ 5 ಲಕ್ಷ ಇ-ವೇ ಬಿಲ್‌ ಪರಿಶೀಲನೆ ಮಾಡುತ್ತಿದ್ದ ಬೆಳಗಾವಿ ವಲಯ ಅಧಿಕಾರಿಗಳು ಈಗ 3 ರಿಂದ 3.5 ಲಕ್ಷ ಇ-ವೇ ಬಿಲ್‌ ಪರಿಶೀಲನೆ ಮಾಡುತ್ತಿದ್ದಾರೆ. 2 ರಿಂದ 2.5 ಕೋಟಿ ರೂ.ವರೆಗೂ ದಂಡ ಸಂಗ್ರಹಿಸುತ್ತಿದ್ದಾರೆ.

ಆರ್ಟಿಕಲ್‌ 370

4.

ಸುದ್ಧಿಯಲ್ಲಿ ಏಕಿದೆ ? ಜಮ್ಮು ಮತ್ತು ಕಾಶ್ಮೀರಕ್ಕೆ ಒದಗಿಸಲಾಗಿರುವ 370ನೇ ವಿಧಿಯೆಂಬ ವಿಶೇಷ ಸ್ಥಾನಮಾನವೇ ಕಾಶ್ಮೀರ ಸಮಸ್ಯೆಗೆ ಮೂಲ ಕಾರಣ ಎಂಬ ಕೂಗು ದಟ್ಟವಾಗಿದೆ. ಪುಲ್ವಾಮಾ ಉಗ್ರರ ದಾಳಿಯ ನಂತರ ಆರ್ಟಿಕಲ್‌ 370 ಅನ್ನು ರದ್ದು ಪಡಿಸಬೇಕು ಎಂಬ ಒತ್ತಾಯ ವ್ಯಾಪಕವಾಗಿದೆ. ಏಪ್ರಿಲ್‌ನಲ್ಲಿ ಈ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಯಾಕೆ ಬಂತು?

 • 1950ರ ಜನವರಿ 26ರಂದು ಅಸ್ತಿತ್ವಕ್ಕೆ ಬಂದ 370ನೇ ವಿಧಿಯ ಹಿಂದೆ ದೊಡ್ಡ ಇತಿಹಾಸವೇ ಇದೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಶ ಎನ್ನುತ್ತೇವೆ. ಆದರೆ ಸಂವಿಧಾನದ 370ನೇ ವಿಧಿಯ ಪ್ರಕಾರ ಆ ರಾಜ್ಯಕ್ಕೆ ವಿಶೇಷವಾದ ಸ್ಥಾನಮಾನವಿದೆ. ಈ ವಿಶೇಷತೆಯೇ ಕಾಶ್ಮೀರವನ್ನು ಭಾರತದಿಂದ ಅನೇಕ ವಿಷಯಗಳಲ್ಲಿ ಪ್ರತ್ಯೇಕವಾಗಿಸಿದೆ.
 • ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಈ ವಿಧಿ ಕೇವಲ ಚಾರಿತ್ರಿಕ, ಸಾಂವಿಧಾನಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳಿಂದ ದೂರಗಾಮಿ ಪರಿಣಾಮ ಬೀರಬಲ್ಲ ವಿಷಯವಲ್ಲ, ಮಾನಸಿಕ ಹಾಗೂ ಭಾವನಾತ್ಮಕ ಸಂಗತಿಯೂ ಹೌದು.
 • ಐಪಿಸಿ ಸೇರಿದಂತೆ ಭಾರತದ ಇತರ ಕಡೆಗಳಲ್ಲಿರುವ ಹಲವು ಕಾನೂನುಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ.
 • ಹೀಗಾಗಿ ಅಲ್ಲಿ ಹಿಂಸಾಚಾರ, ಭಯೋತ್ಪಾದನೆ, ಭ್ರಷ್ಟಾಚಾರ, ಅಭಿವೃದ್ಧಿಗೆ ಹಿನ್ನಡೆ ಇತ್ಯಾದಿ ಬಿಕ್ಕಟ್ಟು ಉಂಟಾಗಿದೆ ಎನ್ನುತ್ತಾರೆ ಈ ವಿಧಿಯನ್ನು ಅಂತ್ಯಗೊಳಿಸಬೇಕು ಎನ್ನುವವರು.

ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ ವಿಚಾರಣೆ!

 • ಸಂವಿಧಾನದ 370ನೇ ವಿಧಿಯ ಔಚಿತ್ಯವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂದಿನ ಏಪ್ರಿಲ್‌ 2ರಂದು ನಡೆಸಲಿದೆ.
 • ಕಾಶ್ಮೀರಕ್ಕೆ 370ನೇ ವಿಧಿಯ ಅಡಿ ನೀಡಿರುವ ವಿಶೇಷ ಸ್ಥಾನಮಾನ ‘ತತ್ಕಾಲಿಕ’ ಸ್ವರೂಪದ್ದಾಗಿದ್ದು, 1957ರ ಜನವರಿ 26ರಂದು ಜಮ್ಮು ಕಾಶ್ಮೀರ ಅಸೆಂಬ್ಲಿ ವಿಸರ್ಜನೆಯೊಂದಿಗೆ 370 (3) ವಿಧಿಯೂ ಅನೂರ್ಜಿತವಾಗಿದೆ ಎಂಬುದು ಅರ್ಜಿದಾರರ ಅಹವಾಲು.

ಹೊಸ ಪೀಳಿಗೆಯ ಬ್ರಹ್ಮೋಸ್

ಸುದ್ಧಿಯಲ್ಲಿ ಏಕಿದೆ ? ಶಕ್ತಿಶಾಲಿ ಬ್ರಹ್ಮೋಸ್ ಕ್ಷಿಪಣಿ ತಯಾರಿಸುವುದರ ಮೂಲಕ ಜಗತ್ತಿನ ಗಮನ ಸೆಳೆದಿರುವ ಭಾರತ, 2022ರ ವೇಳೆಗೆ ಅದರ ಮುಂದುವರಿದ ಭಾಗವಾಗಿ ಬ್ರಹ್ಮೋಸ್-ಎನ್​ಜಿ (ನ್ಯೂ ಜನರೇಷನ್) ಸಿದ್ಧಪಡಿಸಲಿದೆ. ಪ್ರತಿ ಸೆಕೆಂಡ್​ಗೆ 1.4 ಕಿ.ಮೀ ವೇಗದಲ್ಲಿ ಸಾಗುವ ಈ ಕ್ಷಿಪಣಿಯು ಡೆಡ್ಲಿಯಸ್ಟ್ ಎಂದೇ ವಿಶ್ಲೇಷಿಸಲಾಗುತ್ತಿದೆ.

 • ಸುಖೋಯ್ ಸೇರಿ ಹಲವು ಯುದ್ಧ ವಿಮಾನಗಳಲ್ಲಿ ಈಗಿನ ಬ್ರಹ್ಮೋಸ್ ಬಳಕೆ ಆಗುತ್ತಿದ್ದು, ಇದಕ್ಕೆ ಪೈಪೋಟಿ ನೀಡಬಲ್ಲ ಕ್ಷಿಪಣಿಗಳು ವಿರಳ. ಹೀಗಿರುವಾಗ ಅದಕ್ಕಿಂತ ಶಕ್ತಿಶಾಲಿ ಕ್ಷಿಪಣಿ ತಯಾರಿಗೆ ಮುಂದಾಗಿರುವುದು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಹೊಸದೊಂದು ಮೈಲಿಗಲ್ಲು ಸ್ಥಾಪಿಸುವ ನಿರೀಕ್ಷೆಯನ್ನು ಮೂಡಿಸಿದೆ.
 • 90 ಡಿಗ್ರಿ ಸೆಲ್ಸಿಯಸ್ ತಾಫಮಾನದಲ್ಲೂ ದಾಳಿ ಮಾಡುವ ಹೊಸ ಬ್ರಹ್ಮೋಸ್- ಎನ್​ಜಿಗಾಗಿ ಈಗಾಗಲೇ ಸಿದ್ಧತೆ ನಡೆಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ಅದನ್ನು ಭಾರತದ ರಕ್ಷಣಾ ಕ್ಷೇತ್ರಕ್ಕೆ ಒಪ್ಪಿಸುವ ಗುರಿ ಹೊಂದಲಾಗಿದೆ
 • ಕಲ್ಪನೆಗೂ ನಿಲುಕದ ಸಾಮರ್ಥ್ಯ: ಹೊಸದಾಗಿ ಸಿದ್ಧಗೊಳ್ಳಲಿರುವ ಬ್ರಹ್ಮೋಸ್ ಎನ್​ಜಿ ಸಾಮರ್ಥ್ಯ ಕಲ್ಪನೆಗೂ ನಿಲುಕದ್ದಾಗಿದೆ. ಅತ್ಯಂತ ಮಾರಕ ಎಂದು ಹೇಳಲಾಗಿರುವ ಈ ಕ್ಷಿಪಣಿಯು ಅತ್ಯಂತ ಆಳದವರೆಗೆ ದಾಳಿ ಮಾಡಲಿದೆ. ನಿಖರ ಗುರಿಯೊಂದಿಗೆ ಸಾಗಲಿರುವ ಈ ಕ್ಷಿಪಣಿಯನ್ನು ತೇಜಸ್ ಹಾಗೂ ಸುಖೋಯ್ ಮತ್ತು ಇತರ ಲಘುಯುದ್ಧ ವಿಮಾನಗಳಲ್ಲಿ ಅಳವಡಿಸಲು ತೀರ್ವನಿಸಲಾಗಿದೆ.

ಈಗಿನ ಕ್ಷಿಪಣಿ ಸಾಮರ್ಥ್ಯವೆಷ್ಟು?:

 • ಸದ್ಯ ಲಭ್ಯವಿರುವ ಬ್ರಹ್ಮೋಸ್ 9 ಮೀಟರ್ ಉದ್ದವಿದ್ದು, 3 ಟನ್ ಭಾರವಿದೆ. ಆದರೆ, ಹೊಸದಾಗಿ ಸಿದ್ಧಗೊಳ್ಳುವ ಕ್ಷಿಪಣಿಯು ಕೇವಲ 6 ಮೀಟರ್ ಉದ್ಧವಿರಲಿದ್ದು, 1.3 ಟನ್ ಭಾರವಿರಲಿದೆ. ಹೀಗಾಗಿ ಸುಲಭವಾಗಿ ಈ ಕ್ಷಿಪಣಿಯನ್ನು ಯುದ್ಧವಿಮಾನಗಳು ಹೊತ್ತು ಸಾಗ ಬಹುದು.
 • ಹೊಸ ಬ್ರಹ್ಮೋಸ್ ಭಾರತದ ರಕ್ಷಣಾ ವ್ಯವಸ್ಥೆಗೆ ಬಲ ತುಂಬಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದು, ಈ ವಿಚಾರ ರಕ್ಷಣಾ ವಲಯ ದಲ್ಲಿ ಚರ್ಚೆಯನ್ನೂ ಹುಟ್ಟುಹಾಕುವ ನಿರೀಕ್ಷೆಯಿದೆ. 300 ಕಿ.ಮೀ. ವ್ಯಾಪ್ತಿವರೆಗೆ ಹೊಸ ಕ್ಷಿಪಣಿ ಸಾಗಲಿದ್ದು, ದಾಳಿಗೆ ಸಹಕಾರಿ ಆಗಬಲ್ಲ ಕ್ಷಿಪಣಿ ಇದಾಗಿದೆ.

ಜಲದಾಳದ ಶತ್ರುಗಳ ಪತ್ತೆಗೆ ಸೆನ್ಸರ್‌

6.

ಸುದ್ಧಿಯಲ್ಲಿ ಏಕಿದೆ ? ಸಾಗರದಾಳದಲ್ಲಿ ಶತ್ರುದೇಶಗಳು ಕಳುಹಿಸಿದ ಈಜುಪಟುಗಳ ಹೃದಯ ಬಡಿತದ ಶಬ್ದವನ್ನೂ ಗ್ರಹಿಸಿ ಎಚ್ಚರಿಕæ ಗಂಟೆ ಬಾರಿಸುವ ಪಿಡಿಡಿಎಸ್‌-ಎಕ್ಸ್‌ಸೋನಾರ್‌ ಯಂತ್ರ ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ.

 • ಸಣ್ಣ ಸಿಲಿಂಡರ್‌ನಂತೆ ಕಾಣುವ ಈ ಯಂತ್ರದಲ್ಲಿ ಸೆನ್ಸರ್‌ ಉಪಕರಣವಿದೆ. ಹಡಗಿನ ಕೆಳಭಾಗದಲ್ಲಿ ಇದನ್ನು ಅಳವಡಿಸಿದಾಗ ಸೆನ್ಸರ್‌ ನೀರಿಗೆ ತಾಗುತ್ತದೆ.
 • ಯಂತ್ರದ ಅರ್ಧಭಾಗ ಹಡಗಿನ ಒಳಗಿದ್ದು, ವಿದ್ಯುತ್‌ ಹಾಗೂ ಕಂಪ್ಯೂಟರ್‌ ಸಂಪರ್ಕವಿರುತ್ತದೆ. ಶತ್ರುದೇಶಗಳು ಸಬ್‌ಮರಿನ್‌ ಕಳುಹಿಸಲು ಸಾಧ್ಯವಾಗದಿದ್ದರೆ ಈಜುಪಟುಗಳು ಅಥವಾ ರಹಸ್ಯ ಕಾರ್ಯಾಚರಣೆ ನಡೆಸುವ ಯಂತ್ರಗಳನ್ನು ಕಳುಹಿಸಬಹುದು. ಈಜುಪಟುಗಳು ಎಷ್ಟೇ ನಿಧಾನವಾಗಿ ಬಂದರೂ ಅವರ ಹೃದಯ ಬಡಿತದ ಶಬ್ದವನ್ನು ಈ ಯಂತ್ರ ಗ್ರಹಿಸುತ್ತದೆ. 8 ಕಿ.ಮೀ. ದೂರದವರೆಗೆ ಗ್ರಹಿಸುವ ಸಾಮರ್ಥ್ಯ‌ ಯಂತ್ರಕ್ಕಿದೆ.
 • ಕಂಪ್ಯೂಟರ್‌ನಲ್ಲಿ ಪ್ರತ್ಯೇಕ ತಂತ್ರಾಂಶದಿಂದ ನಿರ್ವಹಣೆ ಮಾಡಲಾಗುತ್ತದೆ. ನೀರಿನ ತರಂಗ, ಜಲಚರಗಳು ಓಡಾಡುವಾಗ ಉಂಟಾಗುವ ಶಬ್ದ, ಗಿಡಗಳು ಅಲ್ಲಾಡುವ ಶಬ್ದವೆಲ್ಲವನ್ನೂ ಈ ಯಂತ್ರ ಗುರುತಿಸುತ್ತದೆ.

ಎಲ್‌ಎಫ್‌ಡಿಎಸ್‌-ಎಕ್ಸ್‌

 • ಶತ್ರುದೇಶದ ಸಬ್‌ಮರೀನ್‌, ಮುಳುಗಿರುವ ಹಡಗು, ಅಪಘಾತಕ್ಕೀಡಾಗಿ ಬಿದ್ದ ವಿಮಾನದ ಅವಶೇಷಗಳನ್ನು ಪತ್ತೆಹಚ್ಚಲು ಎಲ್‌ಎಫ್‌ಡಿಎಸ್‌-ಎಕ್ಸ್‌ ಸೆನ್ಸರ್‌ ಉಪಕರಣದ ಪ್ರಾಯೋಗಿಕ ಪರೀಕ್ಷೆಯನ್ನೂ ನೌಕಾಪಡೆಯು ಮಾಡುತ್ತಿದೆ. ಒಂದು ಮೀಟರ್‌ ಎತ್ತರವಿರುವ ಈ ಉಪಕರಣ ಸುಮಾರು 8 ಕಿ.ಮೀ. ದೂರದವರೆಗೆ ಶಬ್ದ ತರಂಗಗಳನ್ನು ಗುರುತಿಸುತ್ತದೆ.
 • ಸಬ್‌ಮರೀನ್‌ ಹಾಗೂ ಹಡಗು ಹೋಗಲು ಸಾಧ್ಯವಿಲ್ಲದ ಕಡೆ ಹೆಲಿಕಾಪ್ಟರ್‌ ಮೂಲಕ ಯಂತ್ರ ಒಯ್ದು ಸಮುದ್ರದಾಳಕ್ಕೆ ಹಗ್ಗದಲ್ಲಿ ಇಳಿಸಲಾಗುತ್ತದೆ.
Related Posts
“15 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಂಪ್ರದಾಯಿಕ ಕುಶಲತೆ ಸಂರಕ್ಷಣೆಗೆ ಬದ್ಧ ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಸಾಂಪ್ರದಾಯಿಕ ಕುಶಲತೆಯನ್ನು ಸಂರಕ್ಷಿಸಲು ಭೌಗೋಳಿಕ ಗುರುತುಗಳ ನೀತಿ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಎಫ್‌ಕೆಸಿಸಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಮ್ಮಿಕೊಂಡಿದದ 'ಕರಡು ಭೌಗೋಳಿಕ ಗುರುತುಗಳ ನೀತಿ' ಕುರಿತಾದ ಪಾಲುದಾರರ ಸಮಾವೇಶವನ್ನು ಉದ್ಘಾಟಿಸಿದರು. 2018-19ನೇ ಸಾಲಿನ ...
READ MORE
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳಗಾವಿ-ಯರಗಟ್ಟಿ ರಸ್ತೆ ಸುದ್ಧಿಯಲ್ಲಿ ಏಕಿದೆ ?ಮೇಲ್ದರ್ಜೆಗೇರಿರುವ ಇಲ್ಲಿನ ಬೆಳಗಾವಿ-ಯರಗಟ್ಟಿ ನಡುವಿನ ರಸ್ತೆ, ಅಪಘಾತ ನಿಯಂತ್ರಿಸುವ ದೇಶದ ಮೊದಲ ಮಾದರಿ ರಸ್ತೆಯಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಅತ್ಯಧಿಕ ರಾರ‍ಯಂಕ್‌ ನೀಡಿರುವ ವಿಶ್ವಬ್ಯಾಂಕ್‌, ಈ ಮಾದರಿ ರಸ್ತೆಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೂ ಸೂಚನೆ ನೀಡಿದೆ. ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಿಂದ ...
READ MORE
“31 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇವಸ್ಥಾನಕ್ಕೂ ಬಂತು ವಸ್ತ್ರ ಸಂಹಿತೆ, ಗುರುತಿನ ಚೀಟಿ ಸುದ್ಧಿಯಲ್ಲಿ ಏಕಿದೆ ?ದೇವಸ್ಥಾನಗಳಲ್ಲಿ ಪ್ರಸಾದ ದುರಂತ ಘಟನೆಗಳಿಂದ ಎಚ್ಚೆತ್ತ ಸರಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದೆ. ಸೂಚನೆಗಳೇನು ? ಪ್ರಸಾದ ತಯಾರಕರಿಂದ ಹಿಡಿದು ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಸರಕಾರ ನಿಗದಿಪಡಿಸಿದ ಮಾರ್ಗ ಸೂಚಿಯನ್ವಯ ಸಮವಸ್ತ್ರ ...
READ MORE
“08 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಲೆಕ್ಟ್ರಿಕ್ ಬಸ್ ಯೋಜನೆ ಸುದ್ಧಿಯಲ್ಲಿ ಏಕಿದೆ ?ಕೇಂದ್ರದ ಫಾಸ್ಟರ್ ಅಡಾಪ್ಷನ್ ಆಂಡ್ ಮಾನ್ಯುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಫೇಮ್ ಅನುದಾನದಲ್ಲಿ ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್ ಬಸ್​ಗಳನ್ನು ಬಿಎಂಟಿಸಿ ಹೊಂದಲಿದೆ. ಕಳೆದ ಸರ್ಕಾರದ ಅವಧಿಯಲ್ಲಿ ನಿಗಮ ಕರೆದಿದ್ದ ಟೆಂಡರ್​ನಲ್ಲಿ ಹೈದರಾಬಾದ್ ಮೂಲದ ಒಲೆಕ್ಟ್ರಾ ...
READ MORE
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೇನೆಗೆ ಮಣಿಪಾಲದ ಬೈನಾಕ್ಯೂಲರ್ ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿ ಶತಮಾನದ ಹಿಂದಿನ ತಂತ್ರಜ್ಞಾನ ಹೊಂದಿರುವ ಟೆಲಿಸ್ಕೋಪ್ ಮತ್ತು ಬೈನಾಕ್ಯುಲರ್ ಬಳಸಲಾಗುತ್ತಿದೆ. ಅತ್ಯಾಧುನಿಕ ಬೈನಾಕ್ಯುಲರ್ ಬೇಕಾದರೆ ಲಕ್ಷಾಂತರ ರೂ. ವ್ಯಯಿಸಬೇಕಿದ್ದರಿಂದ ಸಂಶೋಧನೆ ಮತ್ತು ಸೈನಿಕ ಕಾರ್ಯಾಚರಣೆಗೆ ತೊಡಕಾಗಿದೆ. ಹೀಗಾಗಿ ಮಣಿಪಾಲದ ಇಂಜಿನಿಯರೊಬ್ಬರು ಕಡಿಮೆ ವೆಚ್ಚದ, ಉತ್ತಮ ...
READ MORE
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿದ್ಯುತ್ ಕಡಿತಕ್ಕೆ ಸೋಲಾರ್ ಪರಿಹಾರ ಸುದ್ಧಿಯಲ್ಲಿ ಏಕಿದೆ ?ಬೇಸಗೆ ಬಂದರೆ ಲೋಡ್‌ ಶೆಡ್ಡಿಂಗ್‌ ಜತೆಗೆ ವಿದ್ಯುತ್‌ ಬಿಲ್‌ ಕೂಡ ದುಬಾರಿ. ಇದಕ್ಕೆ ಪರ್ಯಾಯವೆಂದರೆ ನಮ್ಮ ಮನೆಯಲ್ಲಿ ನಾವೇ ವಿದ್ಯುತ್‌ ಉತ್ಪಾದಿಸಿಕೊಳ್ಳುವುದು. ಒಂದು ಬಾರಿಯ ಹೂಡಿಕೆಯಿಂದ ಆಗುವ ಸಾಕಷ್ಟು ಲಾಭವೇ ಸೋಲಾರ್‌ ವಿದ್ಯುತ್‌ನತ್ತ ಹೆಚ್ಚು ...
READ MORE
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
'ಸ್ವಚ್ಛ ಬೆಂಗಳೂರು' ಸುದ್ಧಿಯಲ್ಲಿ ಏಕಿದೆ ? ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಾಲಾವಧಿ ನಿಗದಿಪಡಿಸಿದೆ. ಆದರೆ ಸ್ವಚ್ಛ ಬೆಂಗಳೂರಿನ ಸವಾಲನ್ನು ಎದುರಿಸಿ ಅದನ್ನು ಸಾಧಿಸುವುದು ಕಷ್ಟ. ಸವಾಲುಗಳೇನು ? ಕಸದಿಂದ ಹಿಡಿದು ಉಗುಳುವವರೆಗೆ, ಸಾರ್ವಜನಿಕ ಶೌಚಾಲಯದಿಂದ ಹಿಡಿದು ...
READ MORE
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅತ್ಯಮೂಲ್ಯ ಖನಿಜ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಪತ್ತೆ ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲೇ ಅಪರೂಪವಾಗಿರುವ ಖನಿಜವೊಂದು ಕೋಲಾರ ಗೋಲ್ಡ್‌ ಫೀಲ್ಡ್‌ ಖ್ಯಾತಿಯ ಕೆಜಿಎಫ್‌ ಬಳಿ ಪತ್ತೆಯಾಗಿದ್ದು, ಭಾರತೀಯ ಭೂವಿಜ್ಞಾನ ಇಲಾಖೆಯು ಇದರ ಸಂರಕ್ಷಣೆಗೆ ಮುಂದಾಗಿದೆ. ಕೆಜಿಎಫ್‌ ಬಳಿಯ ಪೆದ್ದಪಲ್ಲಿ ಗ್ರಾಮದಲ್ಲಿ ಈ ಅಪರೂಪದ ಖನಿಜವಿದ್ದು, ಮೇಲ್ನೋಟಕ್ಕೆ ...
READ MORE
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂಡಸ್ ನದಿ ಯೋಜನೆ ಸುದ್ಧಿಯಲ್ಲಿ ಏಕಿದೆ ? ಇಂಡಸ್ ನದಿ ನೀರು ಹಂಚಿಕೆ ಕುರಿತು ಪಾಕಿಸ್ತಾನದೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದದಂತೆ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ನದಿಗೆ ಅಡ್ಡಲಾಗಿ ನಿರ್ವಿುಸುತ್ತಿರುವ ಎರಡು ಅಣೆಕಟ್ಟೆಗಳ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಲು ಸರ್ಕಾರ ...
READ MORE
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮೀಟರ್‌ ಬಡ್ಡಿ ದಂಧೆ ನಡೆಸುವವರ ಕಪಿಮುಷ್ಠಿಯಿಂದ ಸಣ್ಣ ವ್ಯಾಪಾರಿಗಳನ್ನು ಪಾರುಮಾಡಿ, ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ 'ಬಡವರ ಬಂಧು' ಯೋಜನೆಗೆ ನ.22 ಚಾಲನೆ ಸಿಗಲಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ...
READ MORE
“15 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“31 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“08 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *