“24th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಮೇಘಾಲಯದಿಂದ ಸಶಸ್ತ್ರ ಪಡೆ ಹೊರಗೆ

 • ಕಳೆದ ನಾಲ್ಕು ವರ್ಷಗಳಲ್ಲಿ ದಂಗೆ ಪ್ರಕರಣಗಳು ಶೇ. 63 ಇಳಿಕೆಯಾದ ಕಾರಣ ಮೇಘಾಲಯದಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎಎಫ್​ಎಸ್​ಪಿಎ)ಕೇಂದ್ರ ಗೃಹ ಸಚಿವಾಲಯ ಹಿಂಪಡೆದಿದೆ.
 • 2017ರಲ್ಲಿ ಉಗ್ರರ ದಾಳಿಯಲ್ಲಿ ಭದ್ರತಾ ಪಡೆ ಸಿಬ್ಬಂದಿ ಹತ್ಯೆ ಪ್ರಮಾಣ ಶೇ. 40 ಇಳಿಕೆಯಾದರೆ, ಸ್ಥಳೀಯರು ಮೃತರಾಗುವ ಪ್ರಮಾಣ ಶೇ. 83 ಕಡಿಮೆಯಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
 • 2017ರ ಸೆಪ್ಟೆಂಬರ್​ವರೆಗೆ ಮೇಘಾಲಯದ ಶೇ. 40 ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿತ್ತು. ಆದರೆ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ಬಳಿಕ ಪಡೆಗಳನ್ನು ಸಂಪೂರ್ಣವಾಗಿ ಹಿಂಪಡೆದು ಅರುಣಾಚಲ ಪ್ರದೇಶದ ವಿವಿಧ ಪ್ರದೇಶಗಳಿಗೆ ನಿಯೋಜಿಸಲಾಗಿದೆ. 2017ರಲ್ಲಿ 16 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿದ್ದ ಸಶಸ್ತ್ರ ಪಡೆಗಳನ್ನು ಪ್ರಸ್ತುತ 8 ಠಾಣೆಗಳಿಗೆ ಇಳಿಸಲಾಗಿದೆ.
 • ಶರಣಾಗತಿಗೆ 4 ಲಕ್ಷ :ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದನೆ ಬಿಟ್ಟು ಸರ್ಕಾರಕ್ಕೆ ಶರಣಾಗುವವರಿಗೆ ಪುನರ್ವಸತಿ ನೀತಿಯಲ್ಲಿ ನೀಡಲಾಗುತ್ತಿದ್ದ ಮೊತ್ತವನ್ನು 1 ಲಕ್ಷ ರೂ. ನಿಂದ 4 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಏಪ್ರಿಲ್ 1 ರಿಂದ ಪೂರ್ವಾನ್ವಯವಾಗಿ ಇದು ಜಾರಿಗೆ ಬರಲಿದೆ. ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್​ಗೆ ಭೇಟಿ ನೀಡುವ ವಿದೇಶಿಗರಿಗೆ ಕೊಡುವ ನಿರ್ಬಂಧಿತ ಪ್ರದೇಶ ಅನುಮತಿ ಮತ್ತು ರಕ್ಷಿತ ಪ್ರದೇಶ ಅನುಮತಿಯಲ್ಲಿನ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದೆ.

ಆರ್ಮ್ಡ್ ಫೋರ್ಸಸ್ ಸ್ಪೆಷಲ್ ಪಾವೆರ್ಸ್ ಆಕ್ಟ್ (AFSPA ACT)

 • ಹಿನ್ನೆಲೆ : 1980 ರ ದಶಕದ ಅಂತ್ಯದಲ್ಲಿ ಜನಾಂಗೀಯ ದಂಗೆಗಳು ಉಂಟಾದ ನಂತರ ಮತ್ತು ಉಲ್ಫಾ (ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಹಿಂಸಾಚಾರದ ಘಟನೆಯ ನಂತರ, ಅಸ್ಸಾಂ ಸುಮಾರು .27 ವರ್ಷಗಳ ಕಾಲ ಎಎಫ್ಎಸ್ಪಿಎಯ ನಿಬಂಧನೆಗಳ ಅಡಿಯಲ್ಲಿ “ತೊಂದರೆಗೆ ಒಳಗಾದ ಪ್ರದೇಶ” ಅಸ್ಸಾಂ ).

ಸಶಸ್ತ್ರ ಪಡೆಗಳು (ವಿಶೇಷ ಅಧಿಕಾರಗಳು) ಕಾಯಿದೆ (ಎಎಫ್ಎಸ್ಪಿಎ)

 • ಎಎಫ್ಎಸ್ಪಿಎಯನ್ನು 1958 ರಲ್ಲಿ ಜಾರಿಗೆ ತಂದ ‘ತೊಂದರೆಗೊಳಗಾದ’ ಪ್ರದೇಶಗಳನ್ನು ನಿಯಂತ್ರಿಸಲಾಯಿತು. ವಿಭಿನ್ನ ಧಾರ್ಮಿಕ, ಜನಾಂಗೀಯ, ಭಾಷಾ ಅಥವಾ ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳು ಅಥವಾ ಸಮುದಾಯಗಳ ನಡುವಿನ ಭಿನ್ನತೆಗಳು ಅಥವಾ ವಿವಾದಗಳಿಂದಾಗಿ ಪ್ರದೇಶಗಳನ್ನು ‘ತೊಂದರೆಗೆ ಒಳಗಾದ ‘ ಎಂದು ಘೋಷಿಸಲು ರಾಜ್ಯ ಮತ್ತು ಕೇಂದ್ರ ಸರಕಾರವು ಎರಡೂ ರಾಜ್ಯಗಳಿಗೆ ಅಧಿಕಾರ ನೀಡುತ್ತದೆ.
 • ಡಿಸ್ಟ್ರಾರ್ಡ್ಡ್ ಪ್ರದೇಶದ ಘೋಷಣೆ: ಆಕ್ಟ್ನ ವಿಭಾಗ (3) ರಾಜ್ಯ / ಯು.ಟಿ ಗವರ್ನರ್ ಅನ್ನು ಭಾರತದ ಗಜೇಟ್ನಲ್ಲಿ ಅಧಿಕೃತ ಅಧಿಸೂಚನೆಯನ್ನು ನೀಡುವ ಅಧಿಕಾರ ನೀಡುತ್ತದೆ, ನಂತರ ನಾಗರಿಕ ಸಹಾಯಕ್ಕಾಗಿ ಸಶಸ್ತ್ರ ಪಡೆಗಳಲ್ಲಿ ಕಳುಹಿಸಲು ಅಧಿಕಾರವನ್ನು ಹೊಂದಿದೆ. ಒಮ್ಮೆ ‘ತೊಂದರೆಗೀಡಾದ’ ಎಂದು ಘೋಷಿಸಿದಾಗ, ಪ್ರದೇಶವು ಕನಿಷ್ಟ ಮೂರು ತಿಂಗಳ ಕಾಲ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು.
 • ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ: ಈ ಕಾಯಿದೆಯು ಸೈನ್ಯ ಮತ್ತು ರಾಜ್ಯ ಮತ್ತು ಕೇಂದ್ರ ಪೊಲೀಸ್ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡುತ್ತದೆ, ಕೊಲ್ಲಲು, ಮನೆಗಳನ್ನು ಹುಡುಕಲು ಮತ್ತು ಕದಡಿದ ಪ್ರದೇಶಗಳಲ್ಲಿ ದಂಗೆಕೋರರು ಬಳಸುವ ಯಾವುದೇ ಆಸ್ತಿಯನ್ನು ನಾಶಮಾಡಲು ಗುಂಡು ಹಾರಿಸುವುದು. ಇದು ದುರುದ್ದೇಶಪೂರಿತ, ಪ್ರತೀಕಾರ ಮತ್ತು ನಿಷ್ಪ್ರಯೋಜಕವಾದ ವಿಚಾರಣೆಯ ವಿರುದ್ಧ ಸೇನಾ ಸಿಬ್ಬಂದಿಗಳನ್ನು ರಕ್ಷಣೆಯೊಂದಿಗೆ ಒದಗಿಸುತ್ತದೆ.
 • ಗಮನಿಸಿ: ಪ್ರಸ್ತುತ ಎಎಫ್ಎಸ್ಎ 6 ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ಅಸ್ಸಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ (ಅಸ್ಸಾಂನ ಗಡಿರೇಖೆಯ 20 ಕಿ.ಮೀ. ಮತ್ತು 20 ಕಿ.ಮೀ. ಉದ್ದದ ಜಿಲ್ಲೆಗಳು ಮಾತ್ರ), ಮಣಿಪುರ (ಇಂಫಾಲ್ ಪುರಸಭೆ ಪ್ರದೇಶವನ್ನು ಹೊರತುಪಡಿಸಿ), ಮೇಘಾಲಯ (ಅಸ್ಸಾಂ ಗಡಿಯಲ್ಲಿ 20 ಕಿ.ಮೀ ವ್ಯಾಪ್ತಿಗೆ ಸೀಮಿತವಾಗಿದೆ) ಮತ್ತು ಜಮ್ಮು ಮತ್ತು ಕಾಶ್ಮೀರ

ಆಸ್ಪತ್ರೆಗೆ ಸಾಗಿಸಲು ಕಾಪ್ಟರ್‌ ಸೇವೆ: ಕೇಂದ್ರ ಚಿಂತನೆ

 • ರಸ್ತೆ ಅಪಘಾತಗಳಲ್ಲಿ ಅಕಾಲಿಕ ಮರಣ ಹೊಂದುವವರ ಅಂಗಾಂಗಳನ್ನು ರಕ್ಷಿಸಿ ಇನ್ನೊಬ್ಬರಿಗೆ ಜೀವದಾನ ನೀಡುವ ಕೇಂದ್ರ ಸರಕಾರದ ಸಾಹಸಕ್ಕೆ ಸಾಥ್‌ ನೀಡಲು ಟಾಟಾ ಸಮೂಹದ ಟಿಸಿಎಸ್‌ ಮುಂದಾಗಿದೆ.
 • ಅಂಗಾಂಗ ರಕ್ಷಣೆ ಜತೆಗೆ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಕೊಡಿಸಲು ಹೆಲಿಕಾಪ್ಟರ್‌ ಸೇವೆ ಒದಗಿಸುವ ಪ್ರಸ್ತಾವವನ್ನೂ ಸಂಸ್ಥೆ ಸರಕಾರಕ್ಕೆ ಸಲ್ಲಿಸಿದೆ.
 • ಎಷ್ಟೆಲ್ಲ ಸುರಕ್ಷತಾ ಕ್ರಮಗಳ ಹೊರತಾಗಿಯೂ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ದಿಸೆಯಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸರಕಾರ ಚಿಂತನೆ ನಡೆಸಿದೆ. ಸಂಚಾರ ನಿರ್ವಹಣೆಗಾಗಿ ದಕ್ಷಿಣ ಕೊರಿಯಾ ಜತೆಗೂ ಕೈಜೋಡಿಸಲಾಗುತ್ತಿದೆ
 • ತುರ್ತು ಸೇವೆ:ಹೆದ್ದಾರಿ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಕಾಲಿಕ ತುರ್ತು ಚಿಕಿತ್ಸೆ ಕೊಡಿಸುವುದು ಮುಖ್ಯ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭಿಸದೆಯೇ ಸಾಯುವ ಗಾಯಾಳುಗಳ ಸಂಖ್ಯೆ ಹೆಚ್ಚು. ಇದನ್ನು ಗ್ರಹಿಸಿಯೇ ತುರ್ತು ಹೆಲಿಕಾಪ್ಟರ್‌ ಸೇವೆ ಒದಗಿಸಲು ಸರಕಾರ ತೀರ್ಮಾನಿಸಿದೆ. ಒಂದು ವೇಳೆ ಇಂತಹ ಘಟನೆಗಳಲ್ಲಿ ಸಾವು ಸಂಭವಿಸಿದರೆ ಅಂಥವರ ಅಂಗಾಂಗ ರಕ್ಷಣೆ ಮಾಡುಲೂ ವಿಶೇಷ ಆಸ್ಪತ್ರೆಗಳ ವ್ಯವಸ್ಥೆ ಇರುತ್ತದೆ.
 • ಅಂಗಾಂಗ ದಾನ ಕಾರ್ಯಕ್ರಮದ ಜತೆ ಸಹಕಾರಿಸಲು ಟಾಟಾ ಕನ್‌ಸಲ್ಟೆನ್ಸಿ ಸರ್ವಿಸ್‌ (ಟಿಸಿಎಸ್‌) ಉತ್ಸುಕತೆ ತೋರಿದೆ. ಗಾಯಾಳುಗಳ ತುರ್ತು ಚಿಕಿತ್ಸೆಗೆ ಹೆಲಿಕಾಪ್ಟರ್‌ ಸೇವೆ ಒದಗಿಸುವ ಭರವಸೆ ನೀಡಿದೆ.
 • ರಸ್ತೆ ಬದಿ ಸವಲತ್ತು:”ರಸ್ತೆ ಮಗ್ಗುಲಲ್ಲಿ 750 ಕೇಂದ್ರಗಳನ್ನು ಸ್ಥಾಪಿಸಿ ಪ್ರಯಾಣಿಕರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲಾಗುವುದು. ರೆಸ್ಟೋರೆಂಟ್‌, ಶೌಚಾಲಯ, ಮನರಂಜನೆ, ವಿರಾಮ ಕೊಠಡಿ ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿ ಸೇರಿವೆ. ಗಾಯಾಳುಗಳ ನೆರವಿನ ಹೆಲಿಪ್ಯಾಡ್‌ ಕೂಡ ಇದರದ್ದೇ ಭಾಗ್ಯ
 • ದೇಶದಲ್ಲಿ ಪ್ರತಿವರ್ಷ ವರ್ಷಕ್ಕೆ ಘಟಿಸುವ ಸರಾಸರಿ ರಸ್ತೆ ಅಪಘಾತಗಳ ಸಂಖ್ಯೆ ಐದು ಲಕ್ಷಕ್ಕೂ ಮೇಲಿದೆ. ಭಾರತದಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಸಂಭವಿಸುತ್ತಿರುವ ಸರಾಸರಿ ಮರಣ ಸಂಖ್ಯೆ 1,50,000 ಎಂದು ವರದಿಗಳಲ್ಲಿ ತಿಳಿಸಲಾಗಿದೆ.
 • ಹೆದ್ದಾರಿಗಳಲ್ಲಿ ಸುರಕ್ಷಿತ ಸಂಚಾರ ವ್ಯವಸ್ಥೆ ನಿರ್ವಹಣೆ ಕುರಿತು ದಕ್ಷಿಣ ಕೊರಿಯಾ ಜತೆ ಮುಂದಿನ ತಿಂಗಳು ಒಪ್ಪಂದ
 • ಜಗತ್ತಿನ ಒಟ್ಟು ವಾಹನ ಸಂಖ್ಯೆಯ ಶೇ.1ರಷ್ಟು ಮಾತ್ರ ಭಾರತದಲ್ಲಿದ್ದರೂ ಸಾವಿನ ಸಂಖ್ಯೆಯಲ್ಲಿ ಮಾತ್ರ ಇದರ ಪ್ರಮಾಣ ಶೇ.10 ದಾಟುತ್ತದೆ.
 • ಗಾಯಾಳುಗಳನ್ನು ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ರವಾನಿಸುವ ಯೋಜನೆಗೆ ಟಿಸಿಎಸ್‌ ಸಹಭಾಗಿತ್ವ
  ಇಸ್ರೋದಿಂದ ಶೀಘ್ರವೇ ಮಿಲಿಟರಿ ಉಪಗ್ರಹಗಳ ಸರಣಿ ಉಡ್ಡಯನ
 • 800 ಕೋಟಿ ರೂ.ಗಳ ವೆಚ್ಚದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯನ್ನು ಸ್ವಲ್ಪಕಾಲ ಮುಂದೂಡಿದ ಬಳಿಕ ಇಸ್ರೋ, ಮುಂಬರುವ ತಿಂಗಳುಗಳಲ್ಲಿ ಮಿಲಿಟರಿ ಬಳಕೆಯ ಹಲವು ಸರಣಿ ಉಪಗ್ರಹಗಳನ್ನು ಉಡ್ಡಯನ ಮಾಡಲಿದೆ.
 • ನಮ್ಮ ನೆರೆಯ ಶತ್ರುರಾಷ್ಟ್ರಗಳ ಮೇಲೆ ಸತತ ನಿಗಾ ಇರಿಸಲು ಹಾಗೂ ಭೂಮಿ ಮತ್ತು ಸಾಗರ ಗಡಿಗಳ ಭದ್ರತೆಗಾಗಿ ಈ ಉಪಗ್ರಹಗಳು ಬಳಕೆಯಾಗಲಿವೆ.
 • ಭಾರತೀಯ ವಾಯುಪಡೆಗಾಗಿ ಜಿಸ್ಯಾಟ್‌-7ಎ ಉಪಗ್ರಹವನ್ನು ಸೆಪ್ಟೆಂಬರ್‌ನಲ್ಲಿ ಹಾಗೂ ಸುಧಾರಿತ ದೂರಸಂವೇದಿ ಕಣ್ಗಾವಲು ಉಪಗ್ರಹ ರಿಯಾಸ್ಯಾಟ್‌ -2ಎ ಅನ್ನು ಈ ವರ್ಷಾಂತ್ಯದ ವೇಳೆಗೆ ಕಕ್ಷೆಗೇರಿಸಲು ಇಸ್ರೋ ನಿರ್ಧರಿಸಿದೆ.
 • ಜಿಎಸ್‌ಎಲ್‌ವಿ-ಎಂಕೆ2 ರಾಕೆಟ್‌ ಮೂಲಕ ಜಿಸ್ಯಾಟ್‌-7ಎ ಉಡ್ಡಯನ ಮಾಡಲಾಗುವುದು. ನೆಲದ ಮೇಲಿನ ವಾಯುಪಡೆಯ ವಿವಿಧ ರಾಡಾರ್‌ ಕೇಂದ್ರಗಳನ್ನು ಅಂತರ್‌-ಸಂಪರ್ಕಿಸಲು ಈ ಉಪಗ್ರಹ ನೆರವಾಗಲಿದೆ. ಇದರಿಂದ ವಾಯುಪಡೆಯ ಕ್ಷಮತೆ ಹೆಚ್ಚುವುದಲ್ಲದೆ ಜಾಗತಿಕ ಮಟ್ಟದಲ್ಲೂ ಐಎಎಫ್‌ ಪ್ರಾಮುಖ್ಯತೆ ಹೆಚ್ಚಾಗಲಿದೆ.
 • ಜಿಸ್ಯಾಟ್‌-7ಎ ಅನ್ನೇ ಹೋಲುವ ರುಕ್ಮಿಣಿ ಉಪಗ್ರಹವನ್ನು ನೌಕಾಪಡೆ ಬಳಕೆಗಾಗಿ 2013ರ ಸೆಪ್ಟೆಂಬರ್‌ನಲ್ಲಿ ಕಕ್ಷೆಗೇರಿಸಲಾಗಿತ್ತು. ಈ ಉಪಗ್ರಹ ಸುಮಾರು 2,000 ನಾಟಿಕಲ್‌ ಮೈಲು ದೂರದ ಹೆಜ್ಜೆಗುರುತು ಹೊಂದಿದ್ದು, ಭಾರತೀಯ ಯುದ್ಧ ನೌಕೆಗಳು, ಜಲಾಂತರ್ಗಾಮಿಗಳು, ನೌಕಾ ವಿಮಾನಗಳ ತಾಜಾ ಮಾಹಿತಿಗಳನ್ನು ಒದಗಿಸುತ್ತದೆ. ಅಲ್ಲದೆ ಆಳ ಸಮುದ್ರದಲ್ಲಿ ನೌಕಾಪಡೆಯ ಸಾಮರ್ಥ್ಯ ವೃದ್ಧಿಗೆ ನೆರವಾಗುತ್ತಿದೆ. ರುಕ್ಮಿಣಿಯನ್ನು ನೌಕಾಪಡೆಯ ‘ಗಗನಚಕ್ಷು’ (ಆಗಸದ ಮೇಲಿರುವ ಕಣ್ಣು) ಎಂದು ಪರಿಗಣಿಸಲಾಗಿದೆ.
 • ಹಿಂದೂ ಮಹಾಸಾಗರದಲ್ಲಿ ಚೀನೀ ಯುದ್ಧನೌಕೆಗಳ ಚಲನವಲನಗಳ ಬಗ್ಗೆ ನಿಖರ ಮಾಹಿತಿಯನ್ನು ಈ ಉಪಗ್ರಹ ನೀಡುತ್ತದೆ.
 • ರಿಸ್ಯಾಟ್-2ಎ ಅನ್ನು ಈ ವರ್ಷಾಂತ್ಯದೊಳಗೆ ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಉಡ್ಡಯನ ಮಾಡಲಾಗುವುದು.
 • ಈ ಉಪಗ್ರಹ ಅತ್ಯಾಧುನಿಕ ಸಿಂಥೆಟಿಕ್‌ ಅಪರ್ಚರ್‌ ರಾಡಾರ್‌ ಅನ್ನು ಹೊಂದಿರಲಿದ್ದು, 5.35 ಗಿಗಾ ಹರ್ಟ್ಜ್‌ ಸಿ ಬ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ವಿಶೇಷತೆಯೆಂದರೆ, ರಾತ್ರಿ ವೇಳೆ ಮತ್ತು ಪ್ರತಿಕೂಲ ಹವಾಮಾನದಲ್ಲೂ ಭೂಮಿಯ ಮೇಲೆ ಪರಿಣಾಮಕಾರಿಯಾಗಿ ನಿಗಾ ವಹಿಸುತ್ತದೆ.

~~~***ದಿನಕ್ಕೊಂದು ಯೋಜನೆ***~~~

ಸ್ವಸ್ಥ ಮಕ್ಕಳು ಸ್ವಸ್ಥ ಭಾರತ

 • ಮಾನವ ಸಂಪನ್ಮೂಲ ಅಭಿವೃದ್ಧಿಯ ಕೇಂದ್ರ ಸಚಿವಾಲಯ ‘ಸ್ವಾಸ್ಥ್ ಬಚ್ಚೇ, ಸ್ವಸ್ಥ ಭಾರತ್’ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ , ಕೊಚ್ಚಿಯಲ್ಲಿ ಪ್ರಾರಂಭಿಸಿದರು 12 ಲಕ್ಷಕ್ಕೂ ಹೆಚ್ಚು ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯ ಮತ್ತು ಫಿಟ್ನೆಸ್ ಪ್ರೊಫೈಲ್ ಕಾರ್ಡ್ ತಯಾರಿಸಲು ಈ ಕಾರ್ಯಕ್ರಮವು ಕೇಂದ್ರೀಯ ವಿದ್ಯಾಲಯ ಸಂಘಟನ್ (ಕೆವಿಎಸ್) ಯ ಒಂದು ಉಪಕ್ರಮವಾಗಿದೆ

ಸ್ವಸ್ಥ ಬಚ್ಚೆ ಸ್ವಸ್ಥ ಭಾರತ  ಕಾರ್ಯಕ್ರಮದ ಬಗ್ಗೆ

 • ಎಲ್ಲಾ ವಯಸ್ಸಿನ ಗುಂಪುಗಳು ಮತ್ತು ವಿಭಿನ್ನ ಸಾಮರ್ಥ್ಯಗಳ ಮಕ್ಕಳನ್ನು ಒಳಗೊಂಡಿರುವ ಮಕ್ಕಳಿಗೆ ಸಮಗ್ರ ಮತ್ತು ಅಂತರ್ಗತ ವರದಿಯನ್ನು ಒದಗಿಸುವ ಉದ್ದೇಶವನ್ನು ಪ್ರೋಗ್ರಾಂ ಹೊಂದಿದೆ.
 • ಇದರ ಮುಖ್ಯ ಉದ್ದೇಶ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಉತ್ತಮ ಆರೋಗ್ಯ ಮತ್ತು ಫಿಟ್ನೆಸ್ ಪ್ರಾಮುಖ್ಯತೆ ಬಗ್ಗೆ ಅರಿತುಕೊಳ್ಳುವುದು ಮತ್ತು ಪ್ರತಿ ದಿನವೂ 60 ನಿಮಿಷಗಳ ಆಟಗಳನ್ನು ಪ್ರೋತ್ಸಾಹಿಸುವುದು.
 • ಈ ಕಾರ್ಯಕ್ರಮವು  ಒಲಿಂಪಿಕ್ಸ್ನ ಮತ್ತು ಪ್ಯಾರಾಲಿಂಪಿಕ್ಸ್ ಮೌಲ್ಯಗಳನ್ನು ವಿದ್ಯಾರ್ಥಿಗಳ ನಡುವೆ ಬೆಳೆಸಲು  ಉದ್ದೇಶಿಸಿದೆ.
 • ಉದ್ದೇಶಗಳು ಮಕ್ಕಳಲ್ಲಿ ಬಾಲ್ಯವನ್ನು ಮರಳಿ ತರುತ್ತಿವೆ, ಮನರಂಜನಾ ಆಟಗಳನ್ನು ಮತ್ತು ದೈಹಿಕ ಚಟುವಟಿಕೆಯನ್ನು ಕಲಿಕೆಯ ಪ್ರಕ್ರಿಯೆಯ ಒಂದು ಅವಿ ಭಾಜ್ಯ ಅಂಗವಾಗಿ ಮಾಡಿ, ವಿವಿಧ ಆಟಗಳಲ್ಲಿ ಮತ್ತು ಅತ್ಯುತ್ತಮ ಕ್ರೀಡೆಯಲ್ಲಿ ಸಮರ್ಥವಾಗಿ ಪ್ರದರ್ಶಕರನ್ನು ಪ್ರೇರೇಪಿಸುವುದು, ವಿಶ್ಲೇಷಣೆ ಮತ್ತು ಡೇಟಾ ಸೆರೆಹಿಡಿಯುವಿಕೆಗಾಗಿ ತಂತ್ರಜ್ಞಾನವನ್ನು ಬಳಸುವುದು ಮತ್ತು ಶಾಲೆಗಳು, ಪೋಷಕರಿಗೆ ಪ್ರವೇಶವನ್ನು ನೀಡುವಿಕೆ.

ದಿನಕ್ಕೆ ಹತ್ತು ಪ್ರಶ್ನೋತ್ತರಗಳು

1. ಒಮ್ಮೆ ಆರ್ಮ್ಡ್ ಫೋರ್ಸ್ ಸ್ಪೆಷಲ್ ಪವರ್ಸ್ ಆಕ್ಟ್ ಅಡಿಯಲ್ಲಿ ನಿರ್ದಿಷ್ಟ ಸ್ಥಳವು ತೊಂದರೆಗೆ ಈಡಾದ ಪ್ರದೇಶ ಎಂದು ಘೋಷಿಸಿದರೆ ಅದು ಎಷ್ಟು ಕಾಲದವರೆಗೆ ಆ ಸ್ಥಿಯಲ್ಲಿರುತ್ತದೆ ?
A. 3 ತಿಂಗಳು
B. 6 ತಿಂಗಳು
C. 1 ವರ್ಷ
D. 2 ವರ್ಷ

2. ಪ್ರಸ್ತುತ ಎಷ್ಟು ರಾಜ್ಯಗಳಲ್ಲಿ ಅಫ್ಸ್ಪಾ ಆಕ್ಟ್ ಜಾರಿಯಲ್ಲಿದೆ ?
A. 5 ರಾಜ್ಯಗಳು
B. 6 ರಾಜ್ಯಗಳು
C. 8 ರಾಜ್ಯಗಳು
D. 10 ರಾಜ್ಯಗಳು

3. ಪ್ರಸ್ತುತ ಅಫ್ಸ್ಪಾ ಆಕ್ಟ್ ಜಾರಿಯಲ್ಲಿರುವ ರಾಜ್ಯಗಳು ಯಾವುವು ?
A. ಅಸ್ಸಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ
B. ಮಣಿಪುರ,ಮೇಘಾಲಯ
C. ಜಮ್ಮು ಕಾಶ್ಮೀರ
D. ಮೇಲಿನ ಎಲ್ಲವು

4. ರಸ್ತೆ ಅಪಘಾತಗಳಲ್ಲಿ ಅಕಾಲಿಕ ಮರಣ ಹೊಂದುವವರ ಅಂಗಾಂಗಳನ್ನು ರಕ್ಷಿಸಿ ಇನ್ನೊಬ್ಬರಿಗೆ ಜೀವದಾನ ನೀಡುವ ಕೇಂದ್ರ ಸರಕಾರದ ಸಾಹಸಕ್ಕೆ ಸಾಥ್ ನೀಡಲು ಯಾವ ಸಂಸ್ಥೆ ಮುಂದಾಗಿದೆ ?
A. ವಿಪ್ರೊ
B. ಇನ್ಫೋಸಿಸ್
C. ಟಿ. ಸಿ.ಎಸ್
D. ರಿಲಯನ್ಸ್

5. ಯಾವ ಉಪಗ್ರಹವನ್ನು ನೌಕಾ ಪಡೆಯ ಗಗನಚಕ್ಷು ಎಂದು ಪರಿಗಣಿಸಲಾಗಿದೆ ?
A. ರುಕ್ಮಿಣಿ
B. ಸತ್ಯಭಾಮ
C. ನೇತ್ರ
D. ಯಾವುದು ಅಲ್ಲ

6. ರುಕ್ಮಿಣಿ ಉಪಗ್ರಹವು ಯಾವ ಉಪಗ್ರಹವನ್ನು ಹೋಲುತ್ತದೆ ?
A. ಇನ್ಸಾಟ್ – 7
B. ಜಿಸ್ಯಾಟ್ – 7
C. ಕಾರ್ಟೋ ಸಾಟ್- 2
D. ಯಾವುದು ಅಲ್ಲ

7. ಯಾರ ಕಾಲವನ್ನು ದೆಹಲಿಯ ಕಲೆ ಮತ್ತು ವಾಸ್ತುಶಿಲ್ಪದ ಸುವರ್ಣ ಯುಗ ಎಂದು ಕರೆಯುತ್ತಾರೆ?
A. ಷಹಜಹಾನ್
B. ಜೆಹಾಂಗಿರ್
C. ಅಕ್ಬರ್
D. ಔರಂಗಝೇಬ್

8. ಕೆಳಗಿನವುಗಳಲ್ಲಿ ಯೂರೋ ನಾಣ್ಯಕ್ಕೆ ಬದ್ಧವಾಗಿರದ ರಾಷ್ಟ್ರ ಯಾವುದು ?
A. ಫ್ರಾನ್ಸ್
B. ಇಟಲಿ
C. ಜರ್ಮನಿ
D. ರಷ್ಯಾ

9. ದೀಪಾವಳಿ ದಿನದಂದು ಮುಂಬಯಿನ ಶೇರುಮಾರುಕಟ್ಟೆಯ ಬಸ್ ಮತ್ತು NSE ಯಲ್ಲಿ ನಡೆಯುವ ಟ್ರೇಡಿಂಗ್ ಅನ್ನು ಯಾವ ಹೆಸರಿನಿಂದ ಕರೆಯುತ್ತಾರೆ ?
A. ಶುಭ್ ಟ್ರೇಡಿಂಗ್
B. ಲಕ್ಷ್ಮೀ ಟ್ರೇಡಿಂಗ್
C. ಜನ ಸಾಮಾನ್ಯ್ ಟ್ರೇಡಿಂಗ್
D. ಮುಹೂರತ್ ಟ್ರೇಡಿಂಗ್

10. ಭಾರತದಲ್ಲಿನ ಯಾವ ರಾಜ್ಯವು ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ಕುಟುಂಬಗಳಿಗೂ ಬ್ಯಾಂಕ್ ಖಾತೆಯ ಸೌಲಭ್ಯ ಒದಗಿಸಿದ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು ?
A. ಕೇರಳ
B. ಗುಜರಾತ್
C. ಅರುಣಾಚಲ ಪ್ರದೇಶ
D. ಗೋವಾ

ಉತ್ತರಗಳು: 1.A 2.B 3.D 4.C 5.A 6.B 7.A 8.D 9.D 10.A

Related Posts
Karnataka Current Affairs – KAS/KPSC Exams – 20th Dec 2017
First State-owned wayside amenity centre to come up in Chittapur soon The first government-owned roadside multi-amenity centre to cater the basic needs of tourists and travellers is going to be established ...
READ MORE
Karnataka Current Affairs – KAS/KPSC Exams – 19th July 2018
Namma Metro pushes to Kannada literature Kannada language and literature is all set to get a presence on Namma Metro. If all goes as per plan, the Vijayanagar metro station will have ...
READ MORE
Karnataka Current Affairs – KAS/KPSC Exams- 1st & 2nd August 2018
Settlements in 110 villages degenerating into urban slums, finds study The infrastructure gap and the disparity in the quality of life between the core area of Bengaluru and the newly added ...
READ MORE
“27th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾಹನದಟ್ಟಣೆ ಬೆಂಗಳೂರು ನಂ.2 ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಇಡೀ ರಾಷ್ಟ್ರಕ್ಕೆ ವಾರ್ಷಿಕ 1.5 ಲಕ್ಷ ಕೋಟಿ ರೂ. ನಷ್ಟವಾಗುತ್ತದೆ ಎಂಬುದು ಇತ್ತಿಚಿನ ಅಧ್ಯಯನ ವರದಿ ತಿಳಿಸಿದೆ. ಬೆಂಗಳೂರು ಸೇರಿ ರಾಷ್ಟ್ರದ ನಾಲ್ಕು ಪ್ರಮುಖ ನಗರಗಳಾದ ದೆಹಲಿ, ಮುಂಬೈ ಮತ್ತು ಕೋಲ್ಕತದಲ್ಲಿ ನಡೆಸಲಾದ ಅಧ್ಯಯನದಿಂದ ಈ ...
READ MORE
Indian Shipbuilding and Ship-repair Industry A Strategy for promoting 'Make in India' initiative The Union Cabinet  has approved the proposal for introducing measures to encourage shipbuilding and ship repair industry ...
READ MORE
Karnataka Current Affairs – KAS / KPSC Exams – 5th July 2017
Rs. 400 crore funding for 100 innovative startups As many as 100 startups will get Rs. 400 crore funding under the Karnataka government’s Elevate programme to fast track the most innovative ...
READ MORE
“6th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕೃಷಿ ಕಲ್ಯಾಣ ಅಭಿಯಾನ ಸುದ್ದಿಯಲ್ಲಿ ಏಕಿದೆ? ರೈತರ ಆದಾಯ ದುಪ್ಪಟ್ಟು ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಗ್ರಾಮಗಳಲ್ಲಿ ಆಯ್ಕೆಯಾಗುವ ರೈತರಿಗೆ ಸೂಕ್ತ ನೆರವು ನೀಡುವ ಕೃಷಿ ಕಲ್ಯಾಣ್ ಅಭಿಯಾನ ಶೀಘ್ರ ಆರಂಭವಾಗಲಿದೆ. ಮುಂದಿನ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಜೂನ್ ...
READ MORE
24th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚಂದ್ರಯಾನ-2 ಉಡಾವಣೆ ಅಕ್ಟೋಬರ್​ಗೆ ಮುಂದೂಡಿಕೆ: ಇಸ್ರೋ ಚಂದ್ರನ ಮೂಲ ಮತ್ತು ಅದರ ವಿಕಾಸದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಮುಂದಿನ ತಿಂಗಳು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಯೋಜನೆಯನ್ನು ಅಕ್ಟೋಬರ್​ ತಿಂಗಳಿಗೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಇತ್ತೀಚೆಗೆ ನಡೆದ ತಜ್ಞರ ಸಭೆಯಲ್ಲಿ ಚಂದ್ರಯಾನ-2 ನೌಕೆಯನ್ನು ಮತ್ತಷ್ಟು ...
READ MORE
10th Indo-Nepal Joint Exercise Surya Kiran Commences
The Surya Kiran series of military exercises are being conducted annually, alternatively in India and Nepal. Surya Kiran series of military exercises with Nepal is largest in terms of troop’s ...
READ MORE
What Is Rare Earth Element [REE] Rare earth metals are a set of seventeen chemical elements in the periodic table, specifically the fifteen lanthanides plus scandium and yttrium Why They Are Called ...
READ MORE
Karnataka Current Affairs – KAS/KPSC Exams – 20th
Karnataka Current Affairs – KAS/KPSC Exams – 19th
Karnataka Current Affairs – KAS/KPSC Exams- 1st &
“27th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Indian Shipbuilding and Ship-repair Industry
Karnataka Current Affairs – KAS / KPSC Exams
“6th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
24th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
10th Indo-Nepal Joint Exercise Surya Kiran Commences
Rare Earth Element [REE]