24th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಚಂದ್ರಯಾನ-2 ಉಡಾವಣೆ ಅಕ್ಟೋಬರ್​ಗೆ ಮುಂದೂಡಿಕೆ: ಇಸ್ರೋ

 • ಚಂದ್ರನ ಮೂಲ ಮತ್ತು ಅದರ ವಿಕಾಸದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಮುಂದಿನ ತಿಂಗಳು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಯೋಜನೆಯನ್ನು ಅಕ್ಟೋಬರ್​ ತಿಂಗಳಿಗೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.
 • ಇತ್ತೀಚೆಗೆ ನಡೆದ ತಜ್ಞರ ಸಭೆಯಲ್ಲಿ ಚಂದ್ರಯಾನ-2 ನೌಕೆಯನ್ನು ಮತ್ತಷ್ಟು ಪರೀಕ್ಷೆಗಳಿಗೆ ಒಳಪಡಿಸಬೇಕಿದೆ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಹಾಗಾಗಿ ಚಂದ್ರಯಾನ-2 ನೌಕೆಯ ಉಡಾವಣೆಯನ್ನು ಏಪ್ರಿಲ್​ ತಿಂಗಳ ಬದಲು ಅಕ್ಟೋಬರ್​ನಲ್ಲಿ ನಡೆಸಲಾಗುವುದು.
 • ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಪ್ರಯತ್ನಿಸಲಾಗುವುದು.
 • ಸುಮಾರು 800 ಕೋಟಿ ರೂ. ವೆಚ್ಚದ ಚಂದ್ರಯಾನ-2 ಯೋಜನೆ ಸಂಪೂರ್ಣವಾಗಿ ಸ್ವದೇಶಿಯಾಗಿದ್ದು, ಈ ಯೋಜನೆಗಾಗಿ 3,290 ಕೆಜಿ ತೂಕದ ನೌಕೆಯನ್ನು ಸಿದ್ಧಪಡಿಸಲಾಗಿದೆ.
 • ಈ ನೌಕೆಯ ಚಂದ್ರನ ಮೇಲ್ಮೈ ರಚನೆ, ಖನಿಜಗಳ ಮಾಹಿತಿ, ಚಂದ್ರನಲ್ಲಿ ನೀರಿರುವ ಕುರಿತು ಮಾಹಿತಿಯನ್ನು ಸಂಗ್ರಹಿಸಲಿದೆ. ಭಾರತ ಚಂದ್ರಯಾನ -1 ನೌಕೆಯನ್ನು 2008ರಲ್ಲಿ ಉಡಾವಣೆ ಮಾಡಿತ್ತು.

ಅನಾಲಿಟಿಕಾಗೆ ಕೇಂದ್ರದಿಂದ ನೋಟಿಸ್

 • ರಾಜಕೀಯ ಲಾಭಕ್ಕೆ ಫೇಸ್​ಬುಕ್ ಬಳಕೆದಾರರ ಖಾಸಗಿ ಮಾಹಿತಿ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯರ ಖಾಸಗಿ ಮಾಹಿತಿಗಳನ್ನು ನೀಡುವಂತೆ ಕೇಳಿರುವ ವ್ಯಕ್ತ ಅಥವಾ ಸಂಸ್ಥೆಗಳ ಮಾಹಿತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರ ಕೇಂಬ್ರಿಜ್ ಅನಾಲಿಟಿಕಾಗೆ ನೋಟಿಸ್ ನೀಡಿದೆ.
 • ಮಾ. 31ರೊಳಗೆ ಪ್ರಮುಖ ಆರು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವಂತೆ ಸೂಚಿಸಲಾಗಿದೆ. ಮಾಹಿತಿ ನೀಡಲು ಹಿಂದೇಟು ಹಾಕಿದಲ್ಲಿ ಕಾನೂನು ಕ್ರಮ ಜರುಗಿಸಲಾ ಗುವುದು ಎಂದು ಸರ್ಕಾರ ಎಚ್ಚರಿಸಿದೆ.

ನೋಟಿಸ್​ನಲ್ಲಿನ 6 ಪ್ರಶ್ನೆಗಳು

# ಫೇಸ್​ಬುಕ್ ಬಳಕೆದಾರರ ಮಾಹಿತಿ ಕಳ್ಳತನ ದಲ್ಲಿ ಭಾರತೀಯರ ಖಾಸಗಿ ವಿಚಾರಗಳನ್ನು ಒದಗಿಸುವ ಯೋಜನೆ ಅಥವಾ ಕೆಲಸದಲ್ಲಿ ನೀವು ನಿರತರಾಗಿದ್ದೀರಾ?

# ನಿಮ್ಮನ್ನು ಈ ಕೆಲಸದಲ್ಲಿ ತೊಡಗಿಸಿದವರು ಯಾರು?

# ಇಂಥ ದತ್ತಾಂಶ ಹೊಂದಿದ್ದು ಹೇಗೆ?

# ಬಳಕೆದಾರರ ಗಮನಕ್ಕೆ ಈ ಕುರಿತು ಮಾಹಿತಿ ನೀಡಿದ್ದೀರಾ?

# ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದರೆ, ಯಾವ ಕೆಲಸಕ್ಕಾಗಿ ಅದನ್ನು ಬಳಸುತ್ತಿದ್ದೀರಿ?

#  ಇಂಥ ದತ್ತಾಂಶ ಆಧರಿಸಿ ಮಾನಸಿಕ ಮತ್ತು ಸ್ವಾಭಾವಿಕ ಲಕ್ಷಣಗಳ ಪರಿಶೀಲನೆ ನಡೆಸಲಾಯಿತೆ ?

ಫೇಸ್​ಬುಕ್​ನಿಂದ ಮಾಹಿತಿ ಮಾರಾಟ?

 • ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಮುಖ್ಯ ಕಾರ್ಯಯೋಜನಾ ಸಲಹೆಗಾರ ಹಾಗೂ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಸ್ಟೀವ್ ಬ್ಯಾನನ್ ಅವರು ಫೇಸ್​ಬುಕ್​ನ ಸಾಮಾಜಿಕ ಜಾಲತಾಣದಲ್ಲಿ ಜನರ ದತ್ತಾಂಶಗಳನ್ನು ಮಾರಾಟ ಮಾಡುತ್ತಿತ್ತು ಎಂದು ಆರೋಪಿಸಿದ್ದಾರೆ.
 • ಆದರೆ ರಾಜಕೀಯ ದತ್ತಾಂಶ ವಿಶ್ಲೇಷಣೆಯಲ್ಲಿ ತೊಡಗಿಸಿ ಕೊಂಡಿರುವ ತಮ್ಮ ಸಂಸ್ಥೆ, ಫೇಸ್​ಬುಕ್​ನಿಂದ ಮಾಹಿತಿ ಪಡೆಯುತ್ತಿದ್ದುದರ ಕುರಿತು ತಮಗೆ ಗೊತ್ತಿಲ್ಲ.

ಫೇಸ್​ಬುಕ್ ಜತೆಗಿನ ಒಪ್ಪಂದ ಪರಿಶೀಲನೆ

 • ಯುವ ಮತದಾರರ ನೋಂದಣಿ ಹೆಚ್ಚಳಕ್ಕಾಗಿ ಫೇಸ್​ಬುಕ್ ಜತೆಗೆ ಕಳೆದ ವರ್ಷ ಮಾಡಿಕೊಳ್ಳಲಾಗಿರುವ ಒಪ್ಪಂದವನ್ನು ಪರಿಶೀಲಿಸುವುದಾಗಿ ಕೇಂದ್ರೀಯ ಚುನಾವಣಾ ಆಯೋಗ ಹೇಳಿದೆ.

20 ವರ್ಷಗಳ ನಂತರ ವರ್ಸೋವಾ ಬೀಚ್‌ಗೆ ಅಪರೂಪದ ಅತಿಥಿಗಳ ಆಗಮನ

 • ಮುಂಬಯಿಯಲ್ಲಿ ಕಂಡುಬರುವ ಕಲುಷಿತ ಕಡಲ ತೀರಗಳ ಹೊರತಾಗಿ ಸ್ವಚ್ಛವಾದ ಹೊಸ ಬೀಚ್‌ವೊಂದರಲ್ಲಿ ಆಲಿವ್‌ ರಿಡ್ಲೆ ಆಮೆಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಸಿಕೊಂಡು ಪರಿಸರ ಪ್ರೇಮಿಗಳಿಗೆ ಖುಷಿ ನೀಡಿವೆ.
 • ಸ್ವಯಂಸೇವಕರ ಗುಂಪೊಂದು ವರ್ಸೋವಾ ಕಡಲ ತೀರವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾಗ ಅಲ್ಲಿ ಸುಮಾರು 80 ಆಲಿವ್‌ ರಿಡ್ಲೆ ಆಮೆ ಮರಿಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ.. ಅವು ಅಲ್ಲಿಂದ ಸಮುದ್ರಕ್ಕೆ ದಾರಿ ಮಾಡಿಕೊಂಡಿದ್ದವು
 • ಕಳೆದ ಹಲವು ವರ್ಷಗಳಿಂದಲೂ ವರ್ಸೋವಾ ಬೀಚ್‌ನಲ್ಲಿ ಆಲಿವ್‌ ರಿಡ್ಲೆ ಆಮೆಗಳು ಗೂಡು ಕಟ್ಟುವುದನ್ನು ನೋಡಿರಲಿಲ್ಲ. ಆಲಿವ್‌ ರಿಡ್ಲೆ ಆಮೆಗಳು ಸಾಮಾನ್ಯವಾಗಿ ಸುರಕ್ಷಿತ ಎನಿಸುವಂತ ಸ್ಥಳಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ.

ಗುಜರಾತ್​ನ ಪಾಕ್​ ಗಡಿಯಲ್ಲಿ ವಾಯುನೆಲೆ ಸ್ಥಾಪನೆಗೆ ಕೇಂದ್ರದ ಗ್ರೀನ್​ ಸಿಗ್ನಲ್

 • ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಸೇನೆಯ ಬಲವರ್ಧನೆಯ ಭಾಗವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಗುಜರಾತ್​ನ ಪಾಕ್​ ಗಡಿಯಲ್ಲಿ ಭಾರತೀಯ ವಾಯುಪಡೆಯ ವಾಯುನೆಲೆ ಸ್ಥಾಪಿಸಲು ಕ್ಯಾಬಿನೆಟ್​ ಕಮಿಟಿ ಆನ್​ ಸೆಕ್ಯುರಿಟಿ (ಸಿಸಿಎಸ್​) ಒಪ್ಪಿಗೆ ಸೂಚಿಸಿದೆ.
 • ಗುಜರಾತ್​ನ ಬನಸ್ಕಾಂತಾ ಜಿಲ್ಲೆಯ ದೀಸಾದಲ್ಲಿರುವ ಚಿಕ್ಕ ವಿಮಾನ ನಿಲ್ದಾಣವನ್ನು ಸುಮಾರು 1000 ಕೋಟಿ ರೂ. ವೆಚ್ಚದಲ್ಲಿ ವಾಯುನೆಲೆಯಾಗಿ ಅಭಿವೃದ್ಧಿ ಪಡಿಸಲು ಒಪ್ಪಿಗೆ ನೀಡಲಾಗಿದೆ. 1000 ಮೀಟರ್​ ರನ್​ ವೇ ಇರುವ ವಿಮಾನ ನಿಲ್ದಾಣವನ್ನು ಹೆಲಿಕ್ಯಾಪ್ಟರ್​ ಇಳಿಸಲು ಮತ್ತು ವಿವಿಐಪಿಗಳ ಓಡಾಡಕ್ಕಾಗಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಹಾಗಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಈ ವಿಮಾನ ನಿಲ್ದಾಣವನ್ನು ವಾಯುನೆಲೆಯಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸಲ್ಲಿಸಿದ್ದರು
 • ಬರ್ಮೀರ್​ ಮತ್ತು ಭುಜ್​ ವಾಯು ನೆಲೆಗಳಗಳ ನಡುವೆ ಇರುವ ದೀಸಾ ವಿಮಾನ ನಿಲ್ದಾಣ ಗಡಿ ರಕ್ಷಣೆಯ ದೃಷ್ಟಿಯಿಂದ ಮಹತ್ವದ ಸ್ಥಾನ ಪಡೆದಿದೆ. ಭಾರತೀಯ ವಾಯುಪಡೆ ಹಲವು ವರ್ಷಗಳಿಂದ ಈ ದೀಸಾ ವಾಯುನೆಲೆಗಾಗಿ ಒತ್ತಾಯಿಸುತ್ತಿತ್ತು

***~~~~ದಿನಕ್ಕೊಂದು ಯೋಜನೆ~~~***

ಪ್ರಧಾನ್ ಮಂತ್ರ ಸಹಾಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ)

 • ಪ್ರಧಾನ್ ಮಂತ್ರಿ ಬಿಜ್ಲಿ ಹರ್ ಘರ್ ಯೋಜನ – ಕೇಂದ್ರ ಸರಕಾರ 2017 ರ ಸೆಪ್ಟೆಂಬರ್ನಲ್ಲಿ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಕೊನೆಯ ಮೈಲಿ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ ದೇಶದ ಎಲ್ಲ ಭಾಗಗಳಲ್ಲಿ ಸಾರ್ವತ್ರಿಕ ಮನೆಯ ವಿದ್ಯುಜ್ಜನಕತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.
 • ಯೋಜನೆಯಡಿಯಲ್ಲಿ, ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (ಸೆಸಿಸಿ) ದತ್ತಾಂಶ 2011 ರ ಅಡಿಯಲ್ಲಿ ಗುರುತಿಸಲ್ಪಟ್ಟ ಎಲ್ಲಾ ಮನೆಗಳಿಗೆ ಸರ್ಕಾರವು ಉಚಿತ ವಿದ್ಯುತ್ ಒದಗಿಸುತ್ತದೆ. ದೇಶದಾದ್ಯಂತ ಯೋಜನೆಯ ಕಾರ್ಯಾಚರಣೆಗೆ ಗ್ರಾಮೀಣ ವಿದ್ಯುದೀಕರಣ ಕಾರ್ಪೊರೇಷನ್ ಲಿಮಿಟೆಡ್ (ಆರ್ಇಸಿ) ಎನ್ನುವುದು ನೋಡಲ್ ಸಂಸ್ಥೆಯಾಗಿದೆ.
 • ಯೋಜನೆಯ ಸುಲಭ ಮತ್ತು ವೇಗವರ್ಧಿತ ಅನುಷ್ಠಾನಕ್ಕೆ, ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಆಧುನಿಕ ತಂತ್ರಜ್ಞಾನವನ್ನು ಮನೆಯ ಸಮೀಕ್ಷೆಗಾಗಿ ಬಳಸಲಾಗುತ್ತದೆ.
 • ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ / ಸಾರ್ವಜನಿಕ ಸಂಸ್ಥೆಗಳು ಸಂಪೂರ್ಣ ದಾಖಲಾತಿಗಳೊಂದಿಗೆ ಅರ್ಜಿ ನಮೂನೆಗಳನ್ನು ಸಂಗ್ರಹಿಸಲು ಅಧಿಕಾರವನ್ನು ನೀಡಲಾಗುತ್ತದೆ, ಬಿಲ್ಲನ್ನು ವಿತರಿಸುವುದು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು (ಪಿಆರ್ಐಗಳು) ಮತ್ತು ನಗರ ಸ್ಥಳೀಯ ಸಂಸ್ಥೆಗಳು (ಯುಎಲ್ಬಿಗಳು) ಗಳೊಂದಿಗೆ ಆದಾಯವನ್ನು ಸಂಗ್ರಹಿಸುವುದು.
 • ವಿದ್ಯುತ್ ಸಂಪರ್ಕಗಳನ್ನು ರೂ 500 ಕ್ಕೆ ಎಪಿಎಲ್ ಕುಟುಂಬಗಳಿಗೆ ನೀಡಲಾಗುವುದು, ಇದು 10 ಸಮಾನ ಮಾಸಿಕ ಕಂತುಗಳಲ್ಲಿ ಪಾವತಿಸಲಾಗುವುದು. ಬಿಪಿಎಲ್ ಕಾರ್ಡುದಾರರಿಗೆ ಉಚಿತ ವಿದ್ಯುತ್ ಸಂಪರ್ಕಗಳು ದೊರೆಯುತ್ತವೆ.
 • ರಿಮೋಟ್ ಮತ್ತು ಪ್ರವೇಶಿಸಲಾಗದ ಪ್ರದೇಶಗಳಲ್ಲಿ, ವಿದ್ಯುತ್ ಬ್ಯಾಂಡ್ ಬ್ಯಾಂಕಿನೊಂದಿಗೆ 200 ರಿಂದ 300 Wp ಸೌರ ವಿದ್ಯುತ್ ಪ್ಯಾಕ್ಗಳಲ್ಲಿ 5 ಎಲ್ಇಡಿ ದೀಪಗಳು, 1 ಡಿಸಿ ಫ್ಯಾನ್, 1 ಡಿಸಿ ಪವರ್ ಪ್ಲಗ್ಗಳನ್ನು ಒಳಗೊಂಡಿರುವ ಅನ್-ಎಲೆಕ್ಟ್ರಿಫೈಡ್ ಮನೆಗಳನ್ನು ಒಳಗೊಂಡಿರುತ್ತದೆ. ಇದು 5 ವರ್ಷಗಳಿಂದ ರಿಪೇರಿ ಮತ್ತು ನಿರ್ವಹಣೆ (ಆರ್ & ಎಂ) ಅನ್ನು ಒಳಗೊಂಡಿದೆ.
 • 2018 ರ ಡಿಸೆಂಬರ್ 31 ರ ಹೊತ್ತಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಗೃಹ ವಿದ್ಯುದೀಕರಣದ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗಿದೆ.
 • ಯೋಜನೆಯ ನಿರೀಕ್ಷಿತ ಫಲಿತಾಂಶವು ಉತ್ತಮ ಆರೋಗ್ಯ ಸೇವೆಗಳು, ಸುಧಾರಣೆ ಶಿಕ್ಷಣ ಸೇವೆಗಳು, ಹೆಚ್ಚಿದ ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗಗಳು, ವಿಶೇಷವಾಗಿ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಜೀವನ, ರೇಡಿಯೋ, ಟೆಲಿವಿಷನ್, ಮೊಬೈಲ್, ಇತ್ಯಾದಿಗಳ ಮೂಲಕ ಸುಧಾರಿತ ಸಂಪರ್ಕ ಮತ್ತು ಬೆಳಕಿನ ಉದ್ದೇಶಗಳಿಗಾಗಿ ಸೀಮೆಎಣ್ಣೆ ಬದಲಿಯಾಗಿ ಪರಿಸರ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.

1. ಚಂದ್ರಯಾನ್ ೨ ನ ವೈಶಿಷ್ಟ್ಯವೇನು ?
A.ಇದು ಚಂದ್ರ ಕಕ್ಷಾಗಾಮಿ , ಲ್ಯಾಂಡರ್ ಮತ್ತು ರೋವರ್ಗಳನ್ನು ಒಳಗೊಂಡಿದೆ, ಇವುಗಳು ಭಾರತವು ಅಭಿವೃದ್ಧಿಪಡಿಸಿದವು.
B. ಚಂದ್ರನ ದಕ್ಷಿಣ ಧ್ರುವದ ಬಳಿ ರೋವರ್ ಅನ್ನು ಇಳಿಸಲು ಚಂದ್ರಯಾನ -2 ಮೊದಲನೇ ಗುರಿಯಾಗಿದೆ
C.1 ಮತ್ತು 2 ಸರಿಯಾಗಿದೆ
D. ಎಲ್ಲ ಹೇಳಿಕೆಗಳು ತಪ್ಪಾಗಿವೆ
2. ಖಾಸಗಿ ಮಾಹಿತಿ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಯಾವ ಸಂಸ್ಥೆಗೆ ನೋಟೀಸ್ ನೀಡಿದೆ ?
A. ಅನಾಲಿಟಿಕ
B. ಫೇಸ್ ಬುಕ್
C. ಮೈಕ್ರೋಸಾಫ್ಟ್
D. ಯಾವುದು ಅಲ್ಲ
3. ಆಲಿವ್ ರಿಡ್ಲೆ ಆಮೆಗಳು ಯಾವ ರಾಜ್ಯದ ಕಡಲ ತೀರಗಳಲ್ಲಿ ಕಂಡುಬರುತ್ತವೆ ?
A. ಒಡಿಶಾ
B. ಮಹಾರಾಷ್ಟ್ರ
C. ಆಂಧ್ರಪ್ರದೇಶ
D. 1 ಮತ್ತು 2
4. ಪ್ರಧಾನ್ ಮಂತ್ರ ಸಹಾಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ) ಯು ಯಾವ ಪ್ರದೇಶಗಳಿಗೆ ವಿದ್ಯುತನ್ನು ಪೂರೈಸುವ ಯೋಜನೆಯಾಗಿದೆ ?
A. ಗ್ರಾಮೀಣ ಪ್ರದೇಶಗಳಿಗೆ
B. ನಗರ ಪ್ರದೇಶಗಳಿಗೆ
C. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡಕ್ಕೂ
D. ಕೈಗಾರಿಕಾ ಪ್ರದೇಶಗಳಿಗೆ

5. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಪಕ್ಷಾಂತರ ಮಾಡಿದ ಲೋಕಸಭಾ ಸದಸ್ಯರ ಅನರ್ಹತೆಯನ್ನು ನಿರ್ಧರಿಸುವವರು
A. ರಾಷ್ಟ್ರಪತಿ
B. ಚುನಾವಣಾ ಆಯೋಗ
C. ಲೋಕಸಭಾ ಸ್ಪೀಕರ್
D. ಸುಪ್ರೀಂಕೋರ್ಟ್

6. ಅವಿರೋಧವಾಗಿ ಆಯ್ಕೆಯಾದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವವರು ಯಾರು?
A. ನೀಲಂ ಸಂಜೀವ ರೆಡ್ಡಿ
B. ಗ್ಯಾನಿ ಜೇಲ್ಸಿಂ್ಗ್
C. ಆರ್ ವೆಂಕಟರಾಮನ್
D. ಬಿ ಡಿ ಜತ್ತಿ

7. ಭೂಮಿಯ ಕೇಂದ್ರಗೋಳದಲ್ಲಿ ಹೆಚ್ಚಾಗಿ ಕಂಡುಬರುವ ಖನಿಜಗಳೆಂದರೆ?
A. ಸಿಲಿಕೇಟ್ ಮತ್ತು ಮೆಗ್ನಿಷಿಯಂ
B. ಕಬ್ಬಿಣ ಮತ್ತು ನಿಕ್ಕಲ್
C. ಸಿಲಿಕೇಟ್ ಮತ್ತು ಕಬ್ಬಿಣ
D. ಮೆಗ್ನಿಷಿಯಂ ಮತ್ತು ಕಬ್ಬಿಣ
8. ಯಾವ ರಾಜ್ಯದ ಸರ್ಕಾರವು ಚರಂಡಿಗಳನ್ನು ಸ್ವಚ್ಛಗೊಳಿಸಲು ರೋಬೋಟ್ಗಳನ್ನು ಬಳಸುತ್ತಿದೆ?
A. ಮಹಾರಾಷ್ಟ್ರ
B. ಕರ್ನಾಟಕ
C. ಕೇರಳ
D. ಆಂಧ್ರ ಪ್ರದೇಶ
9. ಈ ಕೆಳಗಿನವುಗಳಲ್ಲಿ ಯಾವ ಮೀನು ಕರ್ನಾಟಕ ರಾಜ್ಯಮತ್ಸ್ಯ ವಾಗಲಿದೆ?
A. ಬಂಗಡೆ ಮೀನು
B. ಸಾಲ್ಮನ್
C. ಡಾಲ್ಫಿನ್
D. ಪಂಟಿಯಸ್.

10. ಭಾರತದಲ್ಲಿ ಪ್ರಾರಂಭವಾದ ಬಾಂಗ್ಲಾದೇಶದಲ್ಲಿ ರೋಹಿಂಗ್ಯಾ ನಿರಾಶ್ರಿತರ ಕಾರ್ಯಾಚರಣೆ ಏನೆಂದು ಕರೆಯಲಾಗುತ್ತದೇ.?
A. ಕಾರ್ಯಾಚರಣೆ ರೋಹಿಂಗ್ಯಾ
B. ಆಪರೇಷನ್ ಮನವಂತ
C. ಆಪರೇಷನ್ ಇನ್ಸಾನಿಯ ತ್
D. ಆಪರೇಷನ್ ರೆಫ್ಯೂಜಿ

ಉತ್ತರಗಳು

1.C 2.A 3.D 4.C 5.C 6.A 7.B 8.C 9.D 10.C 

Related Posts
Steel Sector in India
Introduction - Why Important Steel is the backbone of any modern economy. The level of per capita consumption of steel is often considered an important index of the level of economic ...
READ MORE
Best IAS and KAS classes in bangalore for KPSC and UPSC exams
UPSC and KPSC exams are becoming very challenging these days. It needs lots of hard work from the aspirants. Along with hard work it is necessary that aspirants are guided ...
READ MORE
Gavel and scales
Towards restorative criminal justice Purpose for which crminal justice was set up : securing life and property. Issues with the way criminal justice is designed and administered today No deterrance- because of the ...
READ MORE
National Current Affairs – UPSC/KAS Exams- 30th August 2018
e-cigarettes Why in news? In a move to protect health risks to children, adolescents and women of reproductive age, the health ministry has asked states to ban Electronic Nicotine Delivery Systems (ENDS) ...
READ MORE
“20th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಎಲೆಕ್ಷ ನ್‌ ಇನ್ಫೋ- ಬಿ ಫಾರಂಗೆ ಯಾಕಿಷ್ಟು ಮಹತ್ವ? ಪಕ್ಷ ಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಬಳಿಕ ವ್ಯಾಪಕವಾಗಿ ಕೇಳಿ ಬರುವ ಪದವೇ ಬಿ -ಫಾರಂ. ಯಾವುದೇ ಅಭ್ಯರ್ಥಿ ರಾಜಕೀಯ ಪಕ್ಷ ದ ಅಧಿಕೃತ ಅಭ್ಯರ್ಥಿ ಎಂದು ಗುರುತಿಸಲು ಇದು ಮಹತ್ವದ ಪಾತ್ರ ...
READ MORE
Urban Development: City Cluster Development & Heritage Based Development
City Cluster Development: City Cluster Development (CCD) is an urban led strategy towards promotion of economic and social development under which closely located areas of human settlements are linked together functionally, structurally and spatially to form ...
READ MORE
National Current Affairs – UPSC/KAS Exams – 10th May 2018
MeitY launches internship scheme for Tech students In an effort to enhance skills of the youngsters, Ministry of Electronics and Information technology (MeitY) on Wednesday has launched ‘Digital India Internship Scheme’ ...
READ MORE
National Current Affairs – UPSC/KAS Exams- 8th February 2019
Paramanu Tech 2019 Topic: Science and Technology In News: ‘Parmanu Tech 2019’ conference was organised by the Ministry of External Affairs and Department of Atomic Energy (DAE). The conference discussed issues related ...
READ MORE
Karnataka Current Affairs – KAS/KPSC Exams – 10th & 11th Oct 2017
Around 1,500 Kannada celluloid classics to get a new lease of life Over 1,500 Kannada films produced in the last 80 years will get a new lease of life as the ...
READ MORE
National Current Affairs – UPSC/KAS Exams- 18th February 2019
International Court of Justice Topic: Important international organizations In News: The International Court of Justice (ICJ) will hold public hearings in the Kulbhushan Jadhav case  at The Hague during which India and ...
READ MORE
Steel Sector in India
Best IAS and KAS classes in bangalore for
Towards restorative criminal justice
National Current Affairs – UPSC/KAS Exams- 30th August
“20th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Urban Development: City Cluster Development & Heritage Based
National Current Affairs – UPSC/KAS Exams – 10th
National Current Affairs – UPSC/KAS Exams- 8th February
Karnataka Current Affairs – KAS/KPSC Exams – 10th
National Current Affairs – UPSC/KAS Exams- 18th February

Leave a Reply

Your email address will not be published. Required fields are marked *