“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಮಾರುಕಟ್ಟೆ ಖಾತರಿ ಯೋಜನೆ

1.

ಸುದ್ಧಿಯಲ್ಲಿ ಏಕಿದೆ ?ಕೃಷಿ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಂದ ರೈತರಿಗಾಗುವ ವಂಚನೆ ತಪ್ಪಿಸುವುದಕ್ಕಾಗಿ ಕೆಲವು ಕೃಷಿ ಉತ್ಪನ್ನಗಳಿಗಷ್ಟೇ ಇರುವ ಕನಿಷ್ಠ ಬೆಂಬಲ ಬೆಲೆಯನ್ನು ವಾಣಿಜ್ಯ ಹಾಗೂ ಸಿರಿಧಾನ್ಯ ಬೆಳೆಗಳಿಗೂ ವಿಸ್ತರಿಸಿ ಮಾರುಕಟ್ಟೆ ಖಾತರಿ ಒದಗಿಸುವ ನಿರ್ಧಾರಕ್ಕೆ ಸರ್ಕಾರ  ಬಂದಿದೆ.

ಏಕೆ ಈ ಯೋಜನೆ ?

 • ಪ್ರಮುಖ ವಾಣಿಜ್ಯ ಹಾಗೂ ಸಿರಿಧಾನ್ಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮೂಲಕ ಮಾರುಕಟ್ಟೆ ಖಾತರಿ ನೀಡುವ ವ್ಯವಸ್ಥೆ ಇಲ್ಲ. ಇದರಿಂದಾಗಿ ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳೇ ಕೃಷಿಕರಿಗಿಂತ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಆದ್ದರಿಂದಲೇ ಸರ್ಕಾರ ಇಂಥದ್ದೊಂದು ಬಹತ್ ಯೋಜನೆ ಜಾರಿಗೆ ಮುಂದಾಗಿದೆ.
 • ನಷ್ಟವೆಷ್ಟು?: ಮೂಲಗಳ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ -ಠಿ;26 ಸಾವಿರ ಕೋಟಿ ಮೊತ್ತದ ಕೃಷಿ ಉತ್ಪನ್ನ ಉತ್ಪಾದನೆಯಾಗುತ್ತದೆ. ರೈತರಿಂದ ಖರೀದಿಸುವ ವ್ಯಾಪಾರಿಗಳು ಅದನ್ನು ಸುಮಾರು 48 ಸಾವಿರ ಕೋಟಿ ರೂ.ಗಳಿಗೆ ಮರುಮಾರಾಟ ಮಾಡಿರುತ್ತಾರೆ. ಪ್ರತಿ ವರ್ಷ ರೈತರಿಗೆ ಸಿಕ್ಕದೆ ವ್ಯಾಪಾರಿಗಳ ಪಾಲಾಗುತ್ತಿರುವ ಹಣ ಸುಮಾರು 12 ಸಾವಿರ ಕೋಟಿ ರೂ.ಗಳು.
 • ಇಂಥ ಸನ್ನಿವೇಶದಲ್ಲಿ ರೈತರಿಗೆ ತಗಲುವ ಕೃಷಿ ವೆಚ್ಚಕ್ಕೆ ತಕ್ಕದಾದ ಬೆಲೆ ನಿಗದಿಯಾಗಬೇಕೆಂಬ ಕೂಗಿಗೆ ದನಿಯಾಗಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
 • ಸಿರಿಧಾನ್ಯಕ್ಕೆ ಪ್ರಾಮುಖ್ಯತೆ: ಸಿರಿಧಾನ್ಯಗಳಿಗೆ ಈಗ ಬೇಡಿಕೆ ಬರುತ್ತಿದೆ. ಖಾಸಗಿ ಸಂಸ್ಥೆಗಳು ರೈತರಿಂದ ಕಡಿಮೆ ಬೆಲೆಗೆ ಖರೀದಿ ಮಾಡಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿವೆ. ಸರ್ಕಾರ ಮೊದಲ ಹಂತದಲ್ಲಿ ಕೆಲವು ಸಿರಿಧಾನ್ಯಗಳನ್ನು ಖರೀದಿ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಿ ರೈತರು ಹಾಗೂ ಗ್ರಾಹಕರ ಹಿತ ಕಾಯಲು ಮುಂದಾಗಿದೆ.

ಯಾವ್ಯಾವ ಬೆಳೆಗಳು?

 • ಗೋಡಂಬಿ, ಕಾಳುಮೆಣಸು, ಶೇಂಗಾ, ಸಜ್ಜೆ, ಏಲಕ್ಕಿ, ಹೆಸರು, ತೊಗರಿ, ಹತ್ತಿ, ಕೆಂಪು ಮೆಣಸಿನಕಾಯಿ, ಜೋಳ ಹಾಗೂ ರಾಗಿ ಬೆಳೆಗಳನ್ನು ಮಾರುಕಟ್ಟೆ ಖಾತರಿ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಹಣಕಾಸು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

ಸರ್ಕಾರ ಏನ್ಮಾಡುತ್ತೆ?

 • ನಿಗದಿಪಡಿಸಲಾಗುವ ಬೆಳೆಗಳ ಬೆಲೆ ಕುಸಿದಲ್ಲಿ ಸರ್ಕಾರವೇ ಖರೀದಿ ಮಾಡಿ, ರೈತರಿಗೆ ಪೂರ್ಣ ಮೊತ್ತ ಪಾವತಿ ಮಾಡುತ್ತದೆ. ಆ ನಂತರ ಸರ್ಕಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಖರೀದಿ ಹೇಗೆ?

 • ಯಾವ ಬೆಳೆಯನ್ನು ಎಲ್ಲಿ ಹೆಚ್ಚು ಬೆಳೆಯುತ್ತಾರೋ ಅಲ್ಲಿಯೇ ಅವುಗಳನ್ನು ಖರೀದಿಸಲಾಗುತ್ತದೆ. ಗೋದಾಮಿಗೂ ಅಲ್ಲಿಯೇ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಗುಣಮಟ್ಟದ ಪರಿಶೀಲನೆಗಾಗಿಯೇ ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಆ ಅಧಿಕಾರಿ ಪರಿಶೀಲನೆ ಮಾಡಿ ಒಪ್ಪಿಗೆ ನೀಡಿದ ನಂತರವಷ್ಟೇ ಖರೀದಿ ಮಾಡಲಾಗುತ್ತದೆ.

ಗುಣಮಟ್ಟಕ್ಕೆ ಆದ್ಯತೆ

 • ರೈತರು ತರುವ ಎಲ್ಲ ಉತ್ಪನ್ನಗಳನ್ನು ಸರ್ಕಾರ ಖರೀದಿಸುವುದಿಲ್ಲ. ಗುಣ ಮಟ್ಟಕ್ಕೆ ಮೊದಲ ಆದ್ಯತೆ ಸಿಗಲಿದೆ.

ಬ್ರ್ಯಾಂಡ್ ಸೃಷ್ಟಿ

 • ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ರೈತರಿಂದಲೇ ಪ್ಯಾಕಿಂಗ್ ಮಾಡಿಸಿ ಖರೀದಿ ಮಾಡಬೇಕೇ ಅಥವಾ ಖರೀದಿ ಮಾಡಿದ ನಂತರ ಪ್ಯಾಕಿಂಗ್ ಮಾಡಬೇಕೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಈ ಉತ್ಪನ್ನಗಳಿಗೆ ಬ್ರ್ಯಾಂಡ್ ಸೃಷ್ಟಿಸುವುದು ಸರ್ಕಾರದ ಉದ್ದೇಶಗಳಲ್ಲಿ ಸೇರಿದೆ.

ಸುಬಾಹು ಗಸ್ತು ನಿರ್ವಹಣಾ ತಂತ್ರಾಂಶ

ಸುದ್ಧಿಯಲ್ಲಿ ಏಕಿದೆ ? ಚಾಮರಾಜನಗರ  ಜಿಲ್ಲಾ ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿರುವ ಸುಬಾಹು ಗಸ್ತು ನಿರ್ವಹಣಾ ತಂತ್ರಾಂಶವನ್ನು ದಕ್ಷಿಣ ವಲಯ ಐಜಿಪಿ ಶರತ್‌ಚಂದ್ರ ಅವರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಪ್ರಾಯೋಗಿಕ ಪರೀಕ್ಷೆ

 • ಸುಬಾಹು ತಂತ್ರಾಂಶವನ್ನು 2018ರ ಫೆಬ್ರವರಿಯಿಂದಲೂ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ಪಟ್ಟಣ ಠಾಣೆಗಳ ಪ್ರಮುಖ ಸರಹದ್ದುಗಳಲ್ಲಿ ಅಳವಡಿಸಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಇದರಿಂದ ರಾತ್ರಿ ಕಳ್ಳತನ ಕಡಿಮೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯ ಪಟ್ಟಣಗಳಲ್ಲಿ ಸುಬಾಹು ಗಸ್ತು ನಿರ್ವಹಣಾ ತಂತ್ರಾಂಶವನ್ನು ಬಳಸಲಾಗುವುದು.

ತಂತ್ರಾಂಶದ ವಿಶೇಷತೆ

 • ನಾಗರಿಕರು ಈ ತಂತ್ರಾಂಶವನು ತಮ್ಮ ಸ್ಮಾರ್ಟ್ ಫೋನ್‌ಗಳಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಜತೆಗೆ ಗಸ್ತಿಗೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿಯೂ ಮಾಡಿಕೊಳ್ಳಲಿದ್ದಾರೆ. ಮನೆಗಳಿಗೆ ಕ್ಯೂಆರ್ ಎಂಬ ಕೋಡ್ ನೀಡಲಾಗುತ್ತದೆ. ಗಸ್ತು ಪೊಲೀಸರು ಮನೆಗಳಿಗೆ ತೆರಳಿ ಕ್ಯೂಆರ್ ಕೋಡ್‌ಅನ್ನು ಸ್ಕಾೃನ್ ಮಾಡುತ್ತಾರೆ. ಆಗ ಅವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ ಎಂಬುದು ಗೊತ್ತಾಗಲಿದೆ.
 • ಈ ತಂತ್ರಾಂಶ ಬಳಸಿ ಗಸ್ತಿನಲ್ಲಿರುವ ಪೊಲೀಸರು, ರೌಡಿ ಹಾಗೂ ಇತರ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ವಹಿಸಲು ಅನುಕೂಲವಾಗಲಿದೆ.
 • ಸಾರ್ವಜನಿಕರು 2-3 ದಿನ ಮನೆಬಿಟ್ಟು ಹೋಗುವ ಸಂದರ್ಭದಲ್ಲಿ ಈ ತಂತ್ರಾಂಶದ ಮೂಲಕ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಕೂಡಲೇ ಠಾಣಾಧಿಕಾರಿ ಗಮನಕ್ಕೆ ಬರಲಿದೆ. ಅವರು ಗಸ್ತು ಸಿಬ್ಬಂದಿ ಗಮನಕ್ಕೆ ತಂದು ಮನೆಗಳ್ಳತನ ತಡೆಯಲು ಸಹಕಾರಿಯಾಗಲಿದೆ.
 • ಈ ತಂತ್ರಾಂಶವನ್ನು ಸಂಬಂಧಪಟ್ಟ ಠಾಣಾಧಿಕಾರಿಗಳು, ಮೇಲಧಿಕಾರಿಗಳು, ಜಿಲ್ಲಾ ನಿಯಂತ್ರಣ ಕೊಠಡಿ ಸಿಬ್ಬಂದಿ ಬಳಸಲಿದ್ದಾರೆ. ಈ ಮೂಲಕ ರಾತ್ರಿ ಗಸ್ತಿನ ಕಾರ್ಯವೈಖರಿಯನ್ನು ಪರಿಶೀಲಿಸಬಹುದು. ನಿಖರವಾದ ಮಾಹಿತಿಯನ್ನು ಪಡೆಯಬಹುದು.
 • ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿ ಮತ್ತು ವಾಹನಗಳ ಫೋಟೋ ತೆಗೆದು ತಂತ್ರಾಂಶದಲ್ಲಿ ಲೋಡ್ ಮಾಡಬಹುದು. ಇದರಿಂದ ಮುಂದಾಗುವ ಅನನುಕೂಲ ತಡೆಯಬಹುದು

ಎಸ್ಸಿ/ಎಸ್ಟಿ ಕಾಯಿದೆ ತಿದ್ದುಪಡಿ ತಡೆಗೆ ಸುಪ್ರೀಂ ನಕಾರ

3.

ಸುದ್ಧಿಯಲ್ಲಿ ಏಕಿದೆ ?ನಿರೀಕ್ಷಣಾ ಜಾಮೀನು ನಿರಾಕರಿಸುವ ದಿಸೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಹಿನ್ನಲೆ

 • ಕಳೆದ ವರ್ಷ ಮಾರ್ಚ್‌ 20ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಮರುಪರಿಶೀಲನೆ ಕೋರಿದ ಕೇಂದ್ರ ಸರಕಾರದ ಮನವಿ ಮತ್ತು ಈ ಕಾಯಿದೆಯ ಹೊಸ ತಿದ್ದುಪಡಿ ಪ್ರಶ್ನಿಸಿದ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ಪೀಠ ಹೇಳಿದೆ. ಈ ಪ್ರಕರಣವು ನ್ಯಾಯಮೂರ್ತಿ ಯು.ಯು.ಲಲಿತ್‌ ಅವರನ್ನು ಒಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾವಣೆಗೊಂಡಿದೆ.
 • ದೌರ್ಜನ್ಯ ತಡೆ ಕಾಯಿದೆ ವ್ಯಾಪಕ ದುರ್ಬಳಕೆಯಾಗುತ್ತಿದೆ ಎನ್ನುವ ದೂರನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಇಂತಹ ಪ್ರರಕಣಗಳಲ್ಲಿ ಸೂಕ್ತ ತನಿಖೆ ನಡೆಸದೇ ಸರಕಾರಿ ನೌಕರರನ್ನು ಬಂಧಿಸುವಂತಿಲ್ಲ ಎಂದು ಕಳೆದ ಮಾರ್ಚ್‌ನಲ್ಲಿ ತೀರ್ಪು ನೀಡಿತ್ತು. ಅಂದಿನ ಪೀಠದಲ್ಲಿ ನ್ಯಾ.ಲಲಿತ್‌ ಕೂಡ ಇದ್ದರು. ಈಗ ಅದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪುನಃ ಅವರ ನೇತೃತ್ವದ ಪೀಠಕ್ಕೆ ವರ್ಗಾಯಿಸಲಾಗಿದೆ.

ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆಗೆ ಹಿನ್ನೆಲೆ

 • ಎಸ್ಸಿ / ಎಸ್ಟಿ ಕಾಯಿದೆ ಮೂಲತಃ 1955 ರಲ್ಲಿ ಸಂಸತ್ತು ಅಸ್ಪೃಶ್ಯತೆ (ಅಪರಾಧ) ಕಾಯಿದೆ ಎಂದು ಜಾರಿಗೊಳಿಸಲಾಯಿತು .
 • ಇದನ್ನು 1976 ರಲ್ಲಿ ಸಿವಿಲ್ ರೈಟ್ಸ್ (ಪಿಸಿಆರ್) ರಕ್ಷಣೆಯಂತೆ ಮರುನಾಮಕರಣ ಮಾಡಲಾಯಿತು ಆದರೆ ಕಾನೂನು 1980 ರ ದಶಕದಲ್ಲಿ ನಿಷ್ಪರಿಣಾಮಕಾರಿಯಾಗಿ ಪರಿಗಣಿಸಲ್ಪಟ್ಟಿತು ಮತ್ತು 1989 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆಗಟ್ಟುವಿಕೆ) ಕಾಯಿದೆಗೆ ಬದಲಾಯಿತು.
 • 2015 ರಲ್ಲಿ, ಅಪರಾಧ ಚಟುವಟಿಕೆಗಳಂತೆ ಹಿಂದುಳಿದ ಜಾತಿ ಜನರ ಮೇಲುಗೈ ಮೇಲ್ಮಟ್ಟದ ಜಾತಿಗಳ ಮುಖಾಮುಖಿಯಾಗುವಂತಹ ಕಾರ್ಯಗಳನ್ನು ಸೇರಿಸುವ ಮೂಲಕ ಹೆಚ್ಚಿನ ಅಪರಾಧಗಳನ್ನು ತನ್ನ ವ್ಯಾಪ್ತಿಯೊಳಗೆ ತರಲಾಯಿತು.

ಸುಪ್ರೀಂ ಕೋರ್ಟ್ನ ತೀರ್ಪು

 • ಸುಪ್ರೀಂ ಕೋರ್ಟ್ನ ಎರಡು ನ್ಯಾಯಾಧೀಶರ ಪೀಠವು ರಾಜಕೀಯ ಅಥವಾ ವೈಯಕ್ತಿಕ ಕಾರಣಗಳಿಗಾಗಿ “ಸ್ವಾಭಾವಿಕ ಹಿತಾಸಕ್ತಿಯಿಂದ” ಆಕ್ಟ್ನ “ದುರುಪಯೋಗದ ಸಂದರ್ಭಗಳು” ಎಂದು ತೀರ್ಪು ನೀಡಿತು.
 • ನಂತರ, ಆಕ್ಟ್ನ “ಸುಳ್ಳು ಪರಿಣಾಮಗಳನ್ನು ತಪ್ಪಿಸಲು” ಅದರ ಅಡಿಯಲ್ಲಿ ಬಂಧನಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ನೀಡಿತು .
 • ಮೊಕದ್ದಮೆಯನ್ನು ದಾಖಲಿಸುವ ಮೊದಲು ಆರೋಪಗಳು “ನಿಷ್ಪ್ರಯೋಜಕ ಅಥವಾ ಪ್ರೇರೇಪಿತವಾಗಿಲ್ಲ” ಎಂದು ಖಚಿತಪಡಿಸಿಕೊಳ್ಳಲು ಪ್ರಾಥಮಿಕ ತನಿಖೆಯನ್ನು ಡಿಎಸ್ಪಿ ನಡೆಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
 • ನೇಮಕಾತಿ ಅಧಿಕಾರದ ಅನುಮತಿಯೊಂದಿಗೆ ಸಾರ್ವಜನಿಕ ಸೇವೆ ಆರೋಪಿಗಳನ್ನು ಮಾತ್ರ ಬಂಧಿಸಬಹುದೆಂದು ಹೇಳಿದ್ದಾರೆ. ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕರಿಂದ ಅನುಮತಿ ಪಡೆದ ನಂತರ ಮಾತ್ರ ಇತರರನ್ನು ಬಂಧಿಸಬಹುದು.
 • ಅನುಮತಿ ನೀಡುವ ಮತ್ತು ಆರೋಪಿಗಳಿಗೆ ಮತ್ತು ಸಂಬಂಧಪಟ್ಟ ನ್ಯಾಯಾಲಯಕ್ಕೆ ಕೊಡುವ ಕಾರಣಕ್ಕಾಗಿ ಎಸ್ಎಸ್ಪಿ ಬರೆಯುವಲ್ಲಿ ದಾಖಲಿಸಬೇಕು.

ಈ ನಿರ್ಧಾರ ಏಕೆ?

 • 2015 ರ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ದತ್ತಾಂಶವನ್ನು ಬೆಂಚ್ ಉಲ್ಲೇಖಿಸಿದೆ. ಈ ಕಾಯಿದೆಯಡಿಯಲ್ಲಿ 15-16 ರಷ್ಟು ದೂರುಗಳನ್ನು ಮುಚ್ಚಿದ ವರದಿಗಳನ್ನು ಸಲ್ಲಿಸಲಾಗಿದೆ.
 • ನ್ಯಾಯಾಲಯಗಳು ತೆಗೆದುಕೊಳ್ಳುವ ಅಂತಹ ಪ್ರಕರಣಗಳಲ್ಲಿ 75 ಪ್ರತಿಶತದಷ್ಟು ಪ್ರಕರಣಗಳು ವಿಚಾರಣೆಗೆ ಒಳಗಾದವು / ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಅಥವಾ ಸಂಯೋಜಿಸುವುದು
 • ಸುಳ್ಳು ಸೂಚನೆ ಮತ್ತು ಅನಗತ್ಯವಾದ ಬಂಧನದಿಂದಾಗಿ ಕಾನೂನಿನಡಿಯಲ್ಲಿ ಯಾವುದೇ ಅನುಮೋದನೆ ಇಲ್ಲದ ಕಾರಣ ಮುಗ್ಧ ನಾಗರಿಕರನ್ನು ಕಾಪಾಡುವುದು ಅಗತ್ಯವಾಗಿತ್ತು

ಈ ತಿದ್ದುಪಡಿ ಏನು?

 • ತಿದ್ದುಪಡಿಯು ಮೂಲ ಕಾಯಿದೆಯಲ್ಲಿನ 18 ನೇ ಅಧಿನಿಯಮಕ್ಕೆ ಮೂರು ಹೊಸ ಅಧಿನಿಯಮಗಳನ್ನು ಸೇರಿಸಲು ಪ್ರಯತ್ನಿಸುತ್ತದೆ.
 • ಆಕ್ಟ್ನ ಉದ್ದೇಶಗಳನ್ನು ಮೊದಲನೆಯದಾಗಿ ಹೇಳುವ ಪ್ರಕಾರ, “ಯಾವುದೇ ವ್ಯಕ್ತಿಗೆ ವಿರುದ್ಧವಾಗಿ ಮೊದಲ ಮಾಹಿತಿ ವರದಿ (ಎಫ್ಐಆರ್) ನ ನೋಂದಣಿಗಾಗಿ ಪ್ರಾಥಮಿಕ ವಿಚಾರಣೆ ಅಗತ್ಯವಿರುವುದಿಲ್ಲ.
 • ಎರಡನೆಯದಾಗಿ “ಆಕ್ಟ್ ಅಡಿಯಲ್ಲಿ ಒಂದು ಅಪರಾಧ ಮಾಡಿದ ಆರೋಪಿಸಿ ವ್ಯಕ್ತಿಯ ಬಂಧನ ಯಾವುದೇ ಅನುಮತಿ ಅಗತ್ಯವಿರುವುದಿಲ್ಲ”.
 • ನಿರೀಕ್ಷಿತ ಜಾಮೀನು ಕುರಿತು ವ್ಯವಹರಿಸುವಾಗ ಸಿಆರ್ಪಿಸಿ ಸೆಕ್ಷನ್ 438 ನಿಬಂಧನೆಗಳು ಈ ಕಾಯ್ದೆಯಲ್ಲಿ “ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶದ ಹೊರತಾಗಿಯೂ” ಒಂದು ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಮೂರನೆಯದು ಹೇಳುತ್ತದೆ .

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ಮೀಸಲಾತಿ

4.

ಸುದ್ಧಿಯಲ್ಲಿ ಏಕಿದೆ ?ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೂ ಕೇಂದ್ರದ ಉದ್ಯೋಗ ಮತ್ತು ಸೇವೆಗಳಲ್ಲಿ ಶೇ. 10 ಮೀಸಲಾತಿ ನೀಡುವ ಕೇಂದ್ರ ಸರಕಾರದ ಮಹತ್ವದ ಮೀಸಲಾತಿ ಕಾಯ್ದೆ ಫೆ. 1ರಿಂದ ಜಾರಿಗೆ ಬರುತ್ತಿದೆ.

 • ಫೆ. 1ರಿಂದ ಕೇಂದ್ರ ಸರಕಾರ ಹೊರಡಿಸುವ ಎಲ್ಲ ವಿಧದ ನೇಮಕಾತಿ ಮತ್ತು ಸೇವೆಗಳಲ್ಲಿ ಶೇ. 10 ಮೀಸಲಾತಿ ದೊರೆಯಲಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ನೇಮಕಾತಿ ಸಚಿವಾಲಯ ವಿಶೇಷ ಸೂಚನೆಯನ್ನು ಎಲ್ಲ ಸಂಬಂಧಿತ ಇಲಾಖೆಗಳಿಗೂ ಕಳುಹಿಸಲಿದೆ.

ಹಿನ್ನೆಲೆ

 • ಸಂವಿಧಾನದ 124ನೇ ತಿದ್ದುಪಡಿಯ ಪ್ರಕಾರ ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಶೇ. 10 ಮೀಸಲಾತಿ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಜ. 9ರಂದು ಅನುಮೋದಿಸಲಾಗಿತ್ತು.
 • ಅದರನ್ವಯ ನೂತನ ಮೀಸಲಾತಿ ತಿದ್ದುಪಡಿ ಕಾಯ್ದೆ ಫೆ. 1ರಿಂದ ಜಾರಿಯಾಗುತ್ತಿದೆ.

ನೂತನ ಮೀಸಲಾತಿಯಲ್ಲಿ ಏನಿದೆ ?

 • ನೂತನ ಮೀಸಲಾತಿ ಕಾಯ್ದೆಯನ್ವಯ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ಕಾಯ್ದೆಯಲ್ಲಿ ಬರುವ ಪರಿಶಿಷ್ಟ ಜಾತಿ, ಪಂಗಡ, ಆರ್ಥಿಕವಾಗಿ ಹಿಂದುಳಿದ ಮತ್ತು ಮೀಸಲಾತಿಯಡಿ ಒಳಗೊಳ್ಳದ ವರ್ಗಗಳ, 8 ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬದವರು ಇದರ ಪ್ರಯೋಜನ ಪಡೆಯಲಿದ್ದಾರೆ.
 • ಮೇಲ್ವರ್ಗದವರಿಗೂ ಮೀಸಲಾತಿ ಪ್ರಯೋಜನ ದೊರೆಯುತ್ತಿರುವುದರಿಂದ, ಉದ್ಯೋಗ ಗಿಟ್ಟಿಸಲು ಅನುಕೂಲವಾಗಲಿದೆ.

ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ 

5.

ಸುದ್ಧಿಯಲ್ಲಿ ಏಕಿದೆ ?ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ಪ್ರಕಟಣೆಗೆ ಜುಲೈ 31ರ ಗಡುವನ್ನು ಯಾವ ಕಾರಣಕ್ಕೂ ವಿಸ್ತರಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

 • ಸಾರ್ವತ್ರಿಕ ಚುನಾವಣೆಗಳಿಗೆ ಸಿದ್ಧತೆ ಹಾಗೂ ಎನ್‌ಆರ್‌ಸಿ ಅಂತಿಮ ಪ್ರಕಟಣೆಯ ಸಿದ್ಧತೆಗಳೆರಡೂ ಏಕಕಾಲಕ್ಕೆ ನಡೆಯುತ್ತಿರಲಿ ಎಂದು ರಾಜ್ಯ ಎನ್‌ಆರ್‌ಸಿ ಸಮನ್ವಯಾಧಿಕಾರಿಗೆ ಕೋರ್ಟ್‌ ಸೂಚಿಸಿದೆ.
 • ಕರಡು ಎನ್‌ಆರ್‌ಸಿಯಿಂದ 40 ಲಕ್ಷ ಜನರನ್ನು ಹೊರಗಿಡಲಾಗಿದ್ದು, 36.2 ಲಕ್ಷ ಮಂದಿ ತಮ್ಮ ಹೆಸರು ಸೇರ್ಪಡೆ ಕೋರಿ ಮರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಫೆಬ್ರವರಿ 1ರಿಂದ ದಾವೆ ಮತ್ತು ಆಕ್ಷೇಪಣೆಗಳ ಪರಿಶೀಲನೆ ನಡೆಯಲಿದೆ ಎಂದು ಹಜೇಲಾ ಕೋರ್ಟಿಗೆ ಮಾಹಿತಿ ನೀಡಿದರು.

ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ)

 • ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಭಾರತೀಯ ನಾಗರಿಕರ ಹೆಸರನ್ನು ಹೊಂದಿರುವ ರಿಜಿಸ್ಟರ್ ಆಗಿದೆ.
 • ನಾಗರಿಕರ ರಾಷ್ಟ್ರೀಯ ನೋಂದಣಿ (NRC) ಅನ್ನು 1951 ರ ಜನಗಣತಿ ನಡೆಸಿದ ನಂತರ 1951 ರಲ್ಲಿ ತಯಾರಿಸಲಾಯಿತು
 • NRC, 1951, ಅಥವಾ ಮಾರ್ಚ್ 24, 1971 ರ ಮಧ್ಯರಾತ್ರಿಯವರೆಗೆ ಯಾವುದೇ ಚುನಾವಣಾ ರೋಲ್ಗಳಲ್ಲಿ ಕಾಣಿಸಿಕೊಳ್ಳುವ ಆ ವ್ಯಕ್ತಿಗಳ (ಅಥವಾ ಅವರ ವಂಶಸ್ಥರು) ಹೆಸರುಗಳನ್ನು ಸೇರಿಸಲು ಅಥವಾ ಇತರ ಯಾವುದೇ ಸ್ವೀಕಾರಾರ್ಹವಾದ ಮಾರ್ಚ್ 24, 1971 ರ ಮಧ್ಯರಾತ್ರಿಯವರೆಗೆ ಬಿಡುಗಡೆಯಾದ ದಾಖಲೆಗಳು, ಇದು ಅಸ್ಸಾಂನಲ್ಲಿ ಅಥವಾ 24 ಮಾರ್ಚ್, 1971 ರಂದು ಅಥವಾ ಮೊದಲು ಭಾರತದ ಯಾವುದೇ ಭಾಗದಲ್ಲಿ ತಮ್ಮ ಉಪಸ್ಥಿತಿಯನ್ನು ಸಾಬೀತುಪಡಿಸುತ್ತದೆ.
 • NRC, 1951, ಅಥವಾ 24 ಮಾರ್ಚ್ 1971 ರ ಮಧ್ಯರಾತ್ರಿಯವರೆಗೆ ಯಾವುದೇ ಚುನಾವಣಾ ರೋಲ್ಗಳಲ್ಲಿ ಕಾಣಿಸಿಕೊಳ್ಳುವ ಎಲ್ಲ ಹೆಸರುಗಳನ್ನು ಲೆಗಸಿ ಡಾಟಾ ಎಂದು ಕರೆಯಲಾಗುತ್ತದೆ. ಹೀಗಾಗಿ, ನವೀಕರಿಸಿದ NRC – 1 ರಲ್ಲಿ ಸೇರ್ಪಡೆಗೊಳ್ಳಲು ಎರಡು ಅವಶ್ಯಕತೆಗಳು ಇರುತ್ತದೆ.) 1971 ರ ಪೂರ್ವ ಮತ್ತು 2 ನೇ ಅವಧಿಗೆ ವ್ಯಕ್ತಿಯ ಹೆಸರು ಅಸ್ತಿತ್ವದಲ್ಲಿದೆ) ಆ ವ್ಯಕ್ತಿಯೊಂದಿಗೆ ಸಂಪರ್ಕವನ್ನು ಒದಗಿಸುತ್ತದೆ.
 • ಅಸ್ಸಾಂನಲ್ಲಿನ ಎನ್ಆರ್ಸಿ ನವೀಕರಣವನ್ನು ನಿಯಂತ್ರಿಸುವ ನಿಬಂಧನೆಗಳೆಂದರೆ ನಾಗರಿಕತ್ವ ಕಾಯಿದೆ, 1955 ಮತ್ತು ನಾಗರಿಕತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಕಾರ್ಡುಗಳ ಸಂಚಿಕೆ) ನಿಯಮಗಳು, 2003

ಬಜೆಟ್‌ ಮುದ್ರಣಕ್ಕೆ ಚಾಲನೆ

6.

ಸುದ್ಧಿಯಲ್ಲಿ ಏಕಿದೆ ?ಹಲ್ವಾ ಮಾಡುವ ಸಾಂಪ್ರದಾಯಿಕ ಕಾರ್ಯಕ್ರಮದ ಮೂಲಕ ‘ಕೇಂದ್ರ ಮಧ್ಯಂತರ ಬಜೆಟ್‌-2019’ ಪ್ರತಿಗಳ ಮುದ್ರಣಕ್ಕೆ ಸರಕಾರವು ಚಾಲನೆ ನೀಡಿದೆ.

 • ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಅನಾರೋಗ್ಯದಿಂದ ಪ್ರಸ್ತುತ ಅಮೆರಿಕದಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿ ಬಜೆಟ್‌ ಪ್ರತಿ ಮುದ್ರಣದ ಈ ಸಾಂಕೇತಿಕ ಕಾರ್ಯಕ್ರಮ ನಡೆಯಿತು.
 • ಲೋಕಸಭೆ ಚುನಾವಣೆಗಳು ಸಮೀಪದಲ್ಲಿರುವ ಕಾರಣ, 2019-20ರ ಮಧ್ಯಂತರ ಬಜೆಟ್‌ ಅನ್ನು ಫೆ.1ರಂದು ಎನ್‌ಡಿಎ ಸರಕಾರವು ಮಂಡಿಸಲಿದೆ.

ಏನಿದು ಹಲ್ವಾ ಕಾರ್ಯಕ್ರಮ?

 • ದಿಲ್ಲಿಯ ನಾರ್ಥ್‌ ಬ್ಲಾಕ್‌ನ ಕಟ್ಟಡದಲ್ಲಿ ದೊಡ್ಡದೊಂದು ಕಡಾಯಿಯಲ್ಲಿ ಹಲ್ವಾ ತಯಾರಿಸಿ, ಎಲ್ಲ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಹಂಚುವ ಸಂಪ್ರದಾಯವು ಚಾಲ್ತಿಯಲ್ಲಿದೆ. ಬಜೆಟ್‌ ಪ್ರತಿಗಳ ಮುದ್ರಣಕ್ಕೆ ಆ ಮೂಲಕ ಚಾಲನೆ ನೀಡಲಾಗುತ್ತದೆ.
 • ಬಜೆಟ್‌ ರೂಪಿಸುವುದು ಮತ್ತು ಮುದ್ರಣ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲ ಸಿಬ್ಬಂದಿಯೂ ಬಜೆಟ್‌ ಮಂಡನೆಯಾಗುವ ತನಕ ಇಲ್ಲಿಯೇ ಉಳಿಯಬೇಕಾಗುತ್ತದೆ.
 • ಬಜೆಟ್‌ ಗೌಪ್ಯತೆ ಕಾಯ್ದುಕೊಳ್ಳಲು ಈ ಪದ್ಧತಿಯನ್ನು ರೂಢಿಸಿಕೊಳ್ಳಲಾಗಿದೆ. ಇಲ್ಲಿ ತಂಗುವ ಸಿಬ್ಬಂದಿಯನ್ನು ಫೋನ್‌, ಇಮೇಲ್‌ ಅಥವಾ ಯಾವುದೇ ಮಾಧ್ಯಮದ ಮೂಲಕ ಸಂಪರ್ಕಿಸಲು ಅವಕಾಶವಿಲ್ಲ.
 • ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಮಾತ್ರ ಮನೆಗೆ ತೆರಳಲು ಅವಕಾಶವಿದೆ.

ಟ್ರೈನ್‌ 18 ರೈಲಿಗೆ ಇಐಜಿ ಹಸಿರು ನಿಶಾನೆ

7

ಸುದ್ಧಿಯಲ್ಲಿ ಏಕಿದೆ ?ಭಾರತೀಯ ರೈಲ್ವೆಯ ಮಹಾತ್ವಾಕಾಂಕ್ಷಿ ‘ಟ್ರೈನ್‌ 18’ ರೈಲಿಗೆ ಸರಕಾರಿ ವಿದ್ಯುತ್‌ ಪರಿವೀಕ್ಷಕರು(ಇಐಜಿ) ಹಸಿರು ನಿಶಾನೆ ತೋರಿದ್ದಾರೆ.

 • ಬಹು ನಿರೀಕ್ಷಿತ ರೈಲು ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು ಒಂದು ತಿಂಗಳ ಹಿಂದೆ ಷರತ್ತುಬದ್ಧ ಅನುಮತಿ ನೀಡಿದ್ದರು.
 • ಈಗಾಗಲೇ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿರುವುದರಿಂದ ಇಐಜಿ ತಪಾಸಣೆಗಾಗಿ ರೈಲು ಕಳುಹಿಸಲು ಯಾವುದೇ ಕಾನೂನು ಅಥವಾ ಆಡಳಿತಾತ್ಮಕ ಪೂರ್ವನಿದರ್ಶನಗಳಿಲ್ಲ ಎಂದು ರೋಲಿಂಗ್‌ ಸ್ಟಾಕ್‌ ವಾದಿಸಿತ್ತು.
 • ಇಐಜಿ ವರದಿಯನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗುವುದು. ನಂತರ ರೈಲು ಉದ್ಘಾಟನೆಗೊಳ್ಳುವ ಅಧಿಕೃತ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಟ್ರೈನ್ 18 ನ ವಿಶೇಷತೆ

 • 97 ಕೋಟಿ ರೂ. ವೆಚ್ಚದಲ್ಲಿ 16 ಬೋಗಿಗಳಿರುವ ರೈಲನ್ನು 18 ತಿಂಗಳಲ್ಲಿ ನಿರ್ಮಿಸಲಾಗಿದೆ.
 • ಇದು 30 ವರ್ಷ ಹಳೆಯ ಶತಾಬ್ದಿ ರೈಲಿಗೆ ಪರ್ಯಾಯ ಎಂದು ಹೇಳಲಾಗಿದ್ದು, ಗರಿಷ್ಠ 180 ಕಿ.ಮೀ. ವೇಗದಲ್ಲಿ ಚಲಿಸಲಿದೆ.
 • ಈ ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಪ್ರತಿಯೊಂದು ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾ, ವೈಫೈ ಸೌಲಭ್ಯದ ಜತೆಗೆ ಮನರಂಜನೆಗೆ ಬೇಕಾದ ವ್ಯವಸ್ಥೆಗಳು ಇರಲಿವೆ.

ವಿಶ್ವದ ಆರ್ಥಿಕ ಸ್ಥಿಗತಿ ಹಾಗೂ ಮುನ್ಸೂಚನೆ 2019(WESP) 

8.

ಸುದ್ಧಿಯಲ್ಲಿ ಏಕಿದೆ ?ವಿಶ್ವಸಂಸ್ಥೆಯ ಆರ್ಥಿಕ ಬೆಳವಣಿಗೆ ಕುರಿತ ವರದಿಯಲ್ಲಿ ಇನ್ನೆರಡು ವರ್ಷ ಭಾರತ ಅತಿ ವೇಗದ ಆರ್ಥಿಕ ಬೆಳವಣಿಗೆ ಹೊಂದಲಿದೆ.

 • ವಿಶ್ವಸಂಸ್ಥೆ ಈ ವರದಿ ಬಿಡುಗಡೆ ಮಾಡಿದ್ದು, 2019 ಹಾಗೂ 2020 ರಲ್ಲಿ ವಿಶ್ವದ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು ವರದಿ ನೀಡಿದೆ.

ವರದಿಯಲ್ಲಿ ಏನಿದೆ ?

 • ವರದಿ ಪ್ರಕಾರ 2019 ಮಾರ್ಚ್‌ ವೇಳೆಗೆ ಶೇ.4 ಜಿಡಿಪಿ, 2019-20ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ.7.6ಕ್ಕೆ ಏರಿಕೆಯಾಗಲಿದೆ. ಬೆಳವಣಿಗೆ ದರ ಶೇ.7.4ಕ್ಕೆ ಇಳಿಕೆಯಾಗಲಿದೆ.
 • 2018ರಲ್ಲಿ ಚೀನಾ ಜಿಡಿಪಿ ಶೇ.6ರಲ್ಲಿ ದಾಖಲಾಗಿತ್ತು. ಆದರೆ 2019ರ ವೇಳೆಗೆ ಈ ಅಂಕಿ ಅಂಶ ಶೇ.6.3ಕ್ಕೆ ಇಳಿಕೆಯಾದರೆ, 2020ರ ವೇಳೆಗೆ ಶೇ.6.2ಕ್ಕೆ ಕುಸಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ವರದಿ ತಿಳಿಸಿದೆ.
 • ಇದಕ್ಕೆ ಚೀನಾದ ಕೆಲ ನೀತಿಗಳೇ ಕಾರಣವಾಗಿರುತ್ತದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.
 • ಇದಲ್ಲದೆ 2019 ವಿಶ್ವದ ಒಟ್ಟಾರೆ ಬೆಳವಣಿಗೆ ಶೇ.3ರಲ್ಲಿರಲಿದ್ದರೆ, 2020ರ ವೇಳೆಗೆ ಅತಿ ಹೆಚ್ಚು ಬೆಳವಣಿಗೆ ಕಾಣುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
 • ಜಾಗತಿಕ ವ್ಯಾಪಾರ ಒತ್ತಡಗಳು ಆರ್ಥಿಕ ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ ಎಂದು ಉಲ್ಲೇಖಿಸಲಾಗಿದೆ.

‘ಡಿಜಿ ಯಾತ್ರಾ’ 

9.

ಸುದ್ಧಿಯಲ್ಲಿ ಏಕಿದೆ ?ಪ್ರಯಾಣಿಕರ ಮುಖ ಸ್ಕ್ಯಾನ್ ಮಾಡುವ ಮೂಲಕವೇ ವಿಮಾನಯಾನಕ್ಕೆ ಪ್ರವೇಶ ಕಲ್ಪಿಸಿಕೊಡುವ ಮಹತ್ವಕಾಂಕ್ಷಿ ಡಿಜಿಯಾತ್ರಾ ಯೋಜನೆ ಶೀಘ್ರದಲ್ಲಿಯೇ ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಜಾರಿಗೊಳಿಸಲು ಸರಕಾರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಡಿಜಿಸಿಎ ಅಧಿಸೂಚನೆಯನ್ನು ಸಹ ಹೊರಡಿಸಿದೆ.

 • ಪ್ರಯಾಣಿಕರು ಮುಖ ತೋರಿಸಿದರೆ ಸಾಕು, ಆರಾಮವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.
 • ಕೋಲ್ಕತಾ, ವಾರಾಣಸಿ, ಪುಣೆ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಯೋಜನೆ ಜಾರಿ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮುಂದಾಗಿದೆ.

ಉಪಕ್ರಮದ ಮುಖ್ಯ ಲಕ್ಷಣಗಳು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ:

 • ಡಿಜಿ ಯಾತ್ರೆ ಕೈಗೊಳ್ಳಲು ಇಚ್ಛಿಸುವ ಪ್ರಯಾಣಿಕರು ವಿಮಾನಯಾನ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಐಡಿ ಸಿದ್ದಪಡಿಸಿಕೊಳ್ಳಬೇಕಾಗುತ್ತದೆ. ಟಿಕೆಟ್ ಬಕ್ ಮಾಡುವಾಗ ಐಡಿ ಸಂಖ್ಯೆ ನೀಡಬೇಕು.
 • ಮೊದಲ ಬಾರಿಯ ಪರಿಶೀಲನೆಗೆ ಐಡಿ ಕಾರ್ಡ್ ತರುವುದು ಅಗತ್ಯ.
 • ಆನ್‌ಲೈನ್‌ನಲ್ಲಿಯೇ ಆಧಾರ್ ಸಂಖ್ಯೆಯನ್ನು ಪರಿಶೀಲನೆಗೆ ನೀಡಬಹುದು. ಇದಾದ ನಂತರ ಪ್ರಯಾಣಿಕರ ಭಾವಚಿತ್ರ ಡಿಜಿ ಯಾತ್ರೆಯ ಪ್ರೊಫೈಲ್‌ನಲ್ಲಿ ನೋಂದಣಿಯಾಗಲಿದೆ.
 • ಈ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮನಿಸಿದಾಗ ಕೋಡ್ ಹಾಗೂ ಬೋರ್ಡಿಂಗ್ ಕಾರ್ಡ್‌ನ್ನು ಸ್ಕ್ಯಾನ್ ಮಾಡಿಸಿಸೂವ ಮೂಲಕ ಮುಖ ಚಹರೆ ನೀಡಿದರೆ ಸಾಕು. ಉಳಿದ ಕಡೆಯಲ್ಲ ಮುಖ ಚಹರೆಯ ಮೂಲಕವೇ ನಿಲ್ದಾಣದ ಗೇಟ್‌ಗಳು ತೆಗೆದುಕೊಳ್ಳುತ್ತವೆ.
 • ಒಟ್ಟಾರೆ ಕಾಗದ ರಹಿತ ವ್ಯವಸ್ಥೆಗೆ ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಾಗಿದೆ.

ಭಾರತದ ಟಾಟಾ ವಿಶ್ವದ  ಅತ್ಯಧಿಕ ಮೌಲ್ಯಯುತ ಐಟಿ ಸಂಸ್ಥೆ

10.

ಸುದ್ಧಿಯಲ್ಲಿ ಏಕಿದೆ ?ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) 2018-19ರ ಜಾಗತಿಕ ಅತ್ಯಂತ ಮೌಲ್ಯಯುತ ಐಟಿ ಸೇವೆಗಳ ಶ್ರೇಯಾಂಕ ಪಟ್ಟಿಯಲ್ಲಿ 3ನೇ ರ‍್ಯಾಂಕ್ ಗಳಿಸಿದೆ.

 • ಬ್ರಾಂಡ್‌ ಫೈನಾನ್ಸ್‌ ವರದಿ ಪ್ರಕಾರ ಅಸೆಂಚರ್‌ ಮತ್ತು ಐಬಿಎಂ ಮೊದಲ ಎರಡು ಸ್ಥಾನಗಳಲ್ಲಿವೆ. 3 ಬಿಲಿಯನ್‌ ಡಾಲರ್‌ (ಸುಮಾರು ರೂ. 187 ಶತಕೋಟಿ) ಮೌಲ್ಯ ಹೊಂದಿರುವ ಅಸೆಂಚರ್‌ ವಿಶ್ವದ ಮೊದಲ ಅತ್ಯಂತ ಮೌಲ್ಯಯುತ ಐಟಿ ಸೇವೆಗಳ ಸಂಸ್ಥೆ ಎಂಬ ಖ್ಯಾತಿ ಪಡೆದಿದೆ. ಐಬಿಎಂನ ಮೌಲ್ಯ 20.4 ಬಿಲಿಯನ್‌ ಡಾಲರ್‌.
 • ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಟಿಸಿಎಸ್‌ನ ಬ್ರಾಂಡ್‌ ಮೌಲ್ಯ 8 ಬಿಲಿಯನ್‌ ಡಾಲರ್‌ ( ರೂ. 91 ಶತಕೋಟಿ).
 • ಜಪಾನ್‌ ಮಾರುಕಟ್ಟೆಯಲ್ಲಿ ಯಶಸ್ವಿಯಾದ ಮೊದಲ ಭಾರತೀಯ ಐಟಿ ಸಂಸ್ಥೆ ಟಿಸಿಎಸ್‌ ಎಂದು ಬ್ರಾಂಡ್‌ ಫೈನಾನ್ಸ್‌ ಮಾಹಿತಿ ನೀಡಿದೆ.
 • ಭಾರತ ಇತರ ಪ್ರಮುಖ ಐಟಿ ಸಂಸ್ಥೆಗಳಾದ ಇನ್ಫೋಸಿಸ್‌, ಎಚ್‌ಸಿಎಲ್‌ ಮತ್ತು ವಿಪ್ರೋ ವಿಶ್ವದ ಟಾಪ್‌ 10 ಪಟ್ಟಿಯಲ್ಲಿವೆ.
 • ಸ್ವಿಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಮೇಳದ ವಾರ್ಷಿಕ ಸಭೆಯಲ್ಲಿ ವಿಶ್ವದ ಟಾಪ್‌ 10 ಅಧಿಕ ಮೌಲ್ಯದ ಐಟಿ ಸಂಸ್ಥೆಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ವಿಪ್ರೋ ಸ್ಥಾನ ಪಡೆದಿದೆ. ಇನ್ಫೋಸಿಸ್‌ ಕಳೆದ ಬಾರಿಯಂತೆ 5ನೇ ಸ್ಥಾನ ಪಡೆದಿದೆ.

ಸೇನಾ ಉಪಗ್ರಹ ಮೈಕ್ರೋಸ್ಯಾಟ್‌-ಆರ್ ಯಶಸ್ವಿ ಉಡಾವಣೆ

11.

ಸುದ್ಧಿಯಲ್ಲಿ ಏಕಿದೆ ?2019ರ ಮೊದಲ ಯಶಸ್ವಿ ಉಡಾವಣೆಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವದ ಹೆಜ್ಜೆಯಿಟ್ಟಿದೆ.

 • ಪೋಲಾರ್‌ ಸ್ಯಾಟ್‌ಲೈಟ್‌ ಲಾಂಚ್‌ ವೆಹಿಕಲ್‌ (ಪಿಎಸ್‌ಎಲ್‌ವಿ) 740 ಕೆಜಿ ತೂಕದ ಸೇನಾ ಸಹಾಯಕ ಉಪಗ್ರಹ ಮೈಕ್ರೋಸ್ಯಾಟ್‌-ಆರ್‌ ಅನ್ನು ಯಶಸ್ವಿಯಾಗಿ ನಭಕ್ಕೆ ಸೇರಿಸಿದೆ. ಈ ಉಪಗ್ರಹವು ಸೇನೆಯ ಯಾವ ಕಾರ್ಯಕ್ಕೆ ಸಹಾಯ ಮಾಡುತ್ತದೆ ಎಂಬ ವಿವರಗಳನ್ನು ಇಸ್ರೋ ನೀಡಿಲ್ಲ.
 • ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ-44 ನಭಕ್ಕೆ ಜಿಗಿಯಿತು. ಮೈಕ್ರೋಸ್ಯಾಟ್‌-ಆರ್‌ ಜತೆಗೆ ವಿದ್ಯಾರ್ಥಿಗಳು ತಯಾರಿಸಿದ ಕಲಾಂಸ್ಯಾಟ್‌ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಹೊತ್ತೊಯ್ದಿತು.
 • ಇದು ಪಿಎಸ್‌ಎಲ್‌ವಿಯ 46ನೇ ಉಡಾವಣೆಯಾಗಿದೆ. 13 ನಿಮಿಷಗಳ ಕಾರ್ಯಾಚರಣೆಯಲ್ಲಿ 2 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಮೈಕ್ರೋಸ್ಯಾಟ್‌-ಆರ್‌ಅನ್ನು ಸೇರಿಸಲಾಯಿತು.
 • ಮೈಕ್ರೋಸ್ಯಾಟ್‌-ಆರ್‌ ಉಪಗ್ರಹವನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದೆ.

ಕಲಾಂ-ಸ್ಯಾಟ್

 • ಕಲಾಂ-ಸ್ಯಾಟ್ ಅನ್ನು ವಿದ್ಯಾರ್ಥಿಗಳೇ ಸೇರಿ ತಯಾರಿಸಿರುವುದು ವಿಶೇಷ
 • ಕಲಾಂ ಸ್ಯಾಟ್​ ಜಗತ್ತಿನ ಅತ್ಯಂತ ಹಗುರ ಉಪಗ್ರಹವೆನಿಸಿದ್ದು, ಅದನ್ನು ಚೆನ್ನೈನ ‘ಸ್ಪೇಸ್​ ಕಿಡ್ಸ್​ ಇಂಡಿಯಾ’ ಎಂಬ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಅದರ ಒಟ್ಟಾರೆ ತೂಕ ಕೇವಲ 26 ಕೆ.ಜಿ ಮಾತ್ರ.
 • ಕೇವಲ 12 ಲಕ್ಷ ರೂಪಾಯಿಗಳ ವೆಚ್ಚದಲ್ಲಿ, ಆರೇ ದಿನಗಳಲ್ಲಿ ತಯಾರಿಸಲಾಗಿರುವ ಈ ಉಪಗ್ರಹವನ್ನು ಇಸ್ರೋ ಒಂದೇ ಒಂದು ರೂಪಾಯಿಯನ್ನೂ ಪಡೆಯದೆ ಕಕ್ಷೆಗೆ ಸೇರಿಸಿತು.
 • ಕಲಾಂ ಸ್ಯಾಟ್​ 6 ದಿನಗಳಲ್ಲಿ ತಯಾರಾಗಿತ್ತಾದರೂ, ಅದರ ತಂತ್ರಜ್ಞಾನ ಅಭಿವೃದ್ಧಿಪಡಿಸಲು 6 ವರ್ಷಗಳ ಅಧ್ಯಯನ ನಡೆದಿತ್ತು ಎಂದು 20 ವಿದ್ಯಾರ್ಥಿಗಳ ತಂಡವನ್ನು ಮುನ್ನಡೆಸಿದ್ದ ‘ಸ್ಪೇಸ್​ ಕಿಡ್ಸ್​ ಇಂಡಿಯಾ’ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಕೇಶನ್​ ತಿಳಿಸಿದ್ದಾರೆ.
 • ರಾಕೆಟ್‌ನ ಕೊನೆಯ ಹಂತ (ಪಿಎಸ್‌4)ದ ಭಾಗವನ್ನು 2 ಸಲ ಚಾಲೂ ಮಾಡುವ ಮೂಲಕ 453 ಕಿ.ಮೀ. ದೂರದ ಕಕ್ಷೆಗೆ ಕಲಾಂಸ್ಯಾಟ್‌-ವಿ2ವನ್ನು ಸೇರಿಸುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ತ್ಯಾಜ್ಯವಾಗಿ ನಷ್ಟವಾಗುವ ರಾಕೆಟ್‌ನ 4ನೇ ಹಂತದ ಭಾಗವನ್ನು ಸಂಶೋಧನೆಗೆ ಉಪಯೋಗಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
Related Posts
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೊಸ ವಾಹನ ನೋಂದಣಿ 2 ವರ್ಷ ಸ್ಥಗಿತ ಸುದ್ಧಿಯಲ್ಲಿ ಏಕಿದೆ ? ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರದ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸುವ ಚಿಂತನೆ ನಡೆದಿದೆ. ನಿರ್ಧಾರಕ್ಕೆ ಕಾರಣಗಳು ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸಂಖ್ಯೆ ...
READ MORE
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಾವೇರಿ ಆನ್‌ಲೈನ್ ಸೇವೆ ಸುದ್ಧಿಯಲ್ಲಿ ಏಕಿದೆ ?ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ಕಾವೇರಿ-ಆನ್‌ಲೈನ್ ಸೇವೆಗಳಿಗೆ ಚಾಲನೆ ನೀಡಿದರು. ಉದ್ದೇಶ ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬೇರೂರಿರುವ ಮಧ್ಯವರ್ತಿಗಳ ಹಾವಳಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’ ...
READ MORE
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎಕ್ಸ್-ರೇ ಮಾಫಿಯಾ ಸುದ್ಧಿಯಲ್ಲಿ ಏಕಿದೆ ?ವ್ಯಕ್ತಿಯ ದೇಹದೊಳಗಿನ ಸಮಸ್ಯೆ ಅನಾವರಣ ಮಾಡುವ ಎಕ್ಸ್ -ರೇ (ಕ್ಷ-ಕಿರಣ) ಕೇಂದ್ರಗಳಿಗೆ ಕಾನೂನಿನ ಅಂಕುಶ ಇರದ್ದರಿಂದ ರಾಜ್ಯದ ಬಹುತೇಕ ಎಕ್ಸ್-ರೇ ಕೇಂದ್ರಗಳು ಹಣಗಳಿಕೆಯ ಅಡ್ಡವಾಗಿ ಮಾರ್ಪಟ್ಟಿವೆ. ಇನ್ನೊಂದೆಡೆ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಎಕ್ಸ್-ರೇ ತೆಗೆಯಲಾಗುತ್ತಿರುವುದು ಆತಂಕ ...
READ MORE
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
‘ಶಾಲಾ -ಸಂಪರ್ಕ ಸೇತು’ ಯೋಜನೆ ಸುದ್ಧಿಯಲ್ಲಿ ಏಕಿದೆ ? ಮಲೆನಾಡು, ಕರಾವಳಿ ಭಾಗದ ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುವ ಜನರು ವಿಶೇಷವಾಗಿ ಶಾಲಾ ಮಕ್ಕಳು ಮಳೆಗಾಲದಲ್ಲಿ ಅಪಾಯಕಾರಿ ತೋಡು, ಹಳ್ಳ -ಕೊಳ್ಳ ದಾಟುವ ಪ್ರಯಾಸವನ್ನು ಶಾಶ್ವತವಾಗಿ ಪರಿಹರಿಸಲು 'ಶಾಲಾ -ಸಂಪರ್ಕ ಸೇತು' ಎಂಬ ...
READ MORE
” 01 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗ್ರಾಮ ವಿಕಾಸ ಯೋಜನೆ ಸುದ್ಧಿಯಲ್ಲಿ ಏಕಿದೆ ?ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ 'ಗ್ರಾಮ ವಿಕಾಸ' ಯೋಜನೆಗೆ ಅನುದಾನ ಸ್ಥಗಿತಗೊಳಿಸಿದ್ದು, ಕಾಂಗ್ರೆಸ್‌ ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ. ಹಿನ್ನಲೆ ಎಚ್‌.ಕೆ.ಪಾಟೀಲ್‌ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ 2015ರ ಗಾಂಧಿ ಜಯಂತಿಯಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಕಾಂಗ್ರೆಸ್‌ ಸರಕಾರದ 'ಫ್ಲ್ಯಾಗ್‌ಶಿಫ್‌ ಪ್ರೋಗ್ರಾಮ್ಸ್‌ ' ಪಟ್ಟಿಯಲ್ಲಿದ್ದ ...
READ MORE
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಡ್ಜ್​ಗಳ ಕೊರತೆ ಪಟ್ಟಿಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಸುದ್ಧಿಯಲ್ಲಿ ಏಕಿದೆ ? ನ್ಯಾಯಾಧೀಶರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು 2, 3ನೇ ಸ್ಥಾನದಲ್ಲಿವೆ. ಕರ್ನಾಟಕ 7ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 1,188 ಹುದ್ದೆಗಳು ...
READ MORE
“05 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮತದಾನ ಪದ್ಧತಿ ಹುಟ್ಟಿದ್ದೇ ಮೈಸೂರಲ್ಲಿ ! ಸುದ್ಧಿಯಲ್ಲಿ ಏಕಿದೆ ?ದೇಶದಲ್ಲೇ ಮೊದಲಿಗೆ ಮತದಾನ ವ್ಯವಸ್ಥೆ ಜಾರಿಯಾಗಿದ್ದು ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ 1951ರಲ್ಲಿ ಅಲ್ಲ. ಅದಕ್ಕೂ 60 ವರ್ಷಗಳ ಮೊದಲೇ ಮೈಸೂರಿನಲ್ಲಿ ಮತದಾನ ನಡೆದಿತ್ತು ! ಆದರೆ ಆಗ ನಡೆದ ಮತದಾನ, ಅಲ್ಲಿನ ...
READ MORE
“28th ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಕೆದಾಟು ಯೋಜನೆ ಸುದ್ಧಿಯಲ್ಲಿ ಏಕಿದೆ? ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ಹಿನ್ನಡೆಯಾಗಿದೆ. ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಸಮಗ್ರ ಯೋಜನಾ ವರದಿ ...
READ MORE
“23rd ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಸ್ಪೀಡ್‌ ಪೋಸ್ಟ್‌ ಸುದ್ಧಿಯಲ್ಲಿ ಏಕಿದೆ ?ಗ್ರಾಹಕರ ಸಮಯ ಉಳಿತಾಯದೊಂದಿಗೆ ಸುಗಮ ಹಾಗೂ ತ್ವರಿತ ಅಂಚೆ ವಿಲೇವಾರಿಗೆ ಅನುಕೂಲವಾಗುವಂತೆ ಅಂಚೆ ಇಲಾಖೆಯು 'ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌' ಅಳವಡಿಕೆ ಮಾಡಿದೆ. ಎಟಿಎಂ ಮಾದರಿಯಲ್ಲಿರುವ 'ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌' ಯಂತ್ರವನ್ನು ದೇಶದಲ್ಲೇ ಮೊದಲ ಬಾರಿಗೆ ನಗರದ ಪ್ರಧಾನ ಅಂಚೆ ...
READ MORE
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂಡಸ್ ನದಿ ಯೋಜನೆ ಸುದ್ಧಿಯಲ್ಲಿ ಏಕಿದೆ ? ಇಂಡಸ್ ನದಿ ನೀರು ಹಂಚಿಕೆ ಕುರಿತು ಪಾಕಿಸ್ತಾನದೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದದಂತೆ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ನದಿಗೆ ಅಡ್ಡಲಾಗಿ ನಿರ್ವಿುಸುತ್ತಿರುವ ಎರಡು ಅಣೆಕಟ್ಟೆಗಳ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಲು ಸರ್ಕಾರ ...
READ MORE
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
” 01 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“05 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“28th ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“23rd ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *