“25th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಖಾಸಗಿ ವನ್ಯಜೀವಿ ಧಾಮ

 • ಸುದ್ದಿಯಲ್ಲಿ ಏಕಿದೆ?  ರಾಜ್ಯದ ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಖಾಸಗಿ ವನ್ಯಜೀವಿಧಾಮಗಳ ಸ್ಥಾಪನೆಗೆ ಅನುವು ಮಾಡಿಕೊಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ನಡೆಗೆ ವನ್ಯಜೀವಿ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ

Pic 1

ಆಕ್ಷೇಪವೇಕೆ ?

 • ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಸಾಕಷ್ಟು ರೆಸಾರ್ಟ್‌ಗಳು ತಲೆ ಎತ್ತಿವೆ. ಹಲವು ರಾಜಕಾರಣಿಗಳು ಬೇನಾಮಿ ಹೆಸರಿನಲ್ಲಿ ಕಾಡಿನ ಪಕ್ಕದಲ್ಲೇ ನೂರಾರು ಎಕರೆ ಭೂಮಿ ಹೊಂದಿದ್ದಾರೆ. ಇಂತಹವರಿಗೆ ಅರಣ್ಯ ಸಂರಕ್ಷಣೆ ನೆಪದಲ್ಲಿ ಹಿಂಬಾಗಿಲ ‍ಪ್ರವೇಶಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ’ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 • ಕರ್ನಾಟಕ ಖಾಸಗಿ ವನ್ಯಜೀವಿ ಧಾಮ ನಿಯಮ–2018’ರ ಪ್ರಕಾರ ಸಂರಕ್ಷಿತ ಅರಣ್ಯದ ಪಕ್ಕದಲ್ಲಿರುವ ಜಾಗದ ಮಾಲೀಕರು (ಕನಿಷ್ಠ 100 ಎಕರೆ ಹೊಂದಿರುವವರು) ಈ ಧಾಮಸ್ಥಾಪಿಸಬಹುದು.
 • ಪರಿಸರ ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಇಲ್ಲಿನ ಶೇ 5 ಜಾಗದಲ್ಲಿ ಕಟ್ಟಡ (ರೆಸಾರ್ಟ್‌ಗಳು, ಹೋಟೆಲ್‌ಗಳು, ಹೋಮ್‌ಸ್ಟೇಗಳು) ಕಟ್ಟಬಹುದು. ಉಳಿದ ಜಾಗವನ್ನು ಸಸ್ಯ ಸಂಪತ್ತು ಹಾಗೂ ಪ್ರಾಣಿಗಳಿಗೆ ಮೀಸಲಿಡಬೇಕು. ಕೃಷಿ, ತೋಟಗಾರಿಕೆ ಜಾಗ, ಪ್ಲಾಂಟೇಷನ್‌ಗಳಲ್ಲಿ ಇದನ್ನು ಸ್ಥಾಪಿಸಬಹುದು.
 • ಅರಣ್ಯ, ವನ್ಯಜೀವಿ ಹಾಗೂ ಪರಿಸರಕ್ಕೆ ಸಂಬಂಧಿಸಿದ ಎಲ್ಲ ಕಾನೂನುಗಳು ಈ ಧಾಮಗಳಿಗೆ ಅನ್ವಯವಾಗಲಿವೆ. ಒಂದು ವೇಳೆ ವನ್ಯಜೀವಿಗಳಿಂದ ಮನುಷ್ಯರಿಗೆ ಹಾಗೂ ಆಸ್ತಿಗೆ ಹಾನಿ ಉಂಟಾದರೆ ಮಾಲೀಕರಿಗೆ, ನೌಕರರು ಅಥವಾ ಅತಿಥಿಗಳಿಗೆ ಹಾನಿ ಉಂಟಾದರೆ ಪರಿಹಾರ ನೀಡಲು ಅವಕಾಶ ಇಲ್ಲ.
 • ಈ ಕಾಡುಗಳ ನಿರ್ವಹಣೆ ಹಾಗೂ ಸಂರಕ್ಷಣೆಗೆ ನಿರ್ವಹಣಾ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯಲ್ಲಿ ಜಾಗದ ಮಾಲೀಕ, ತಜ್ಞ ಹಾಗೂ ವಲಯ ಅರಣ್ಯಾಧಿಕಾರಿ ದರ್ಜೆಯ ಅಧಿಕಾರಿ ಇರುತ್ತಾರೆ. ಈ ಸಮಿತಿ ಸ್ವಂತ ನಿರ್ವಹಣಾ ಯೋಜನೆ ರೂಪಿಸಬೇಕು ಎಂದು ಕರಡಿನಲ್ಲಿ ತಿಳಿಸಲಾಗಿದೆ.
 • ಇಂತಹ ಧಾಮಗಳು ಆಫ್ರಿಕಾ, ಜಿಂಬಾಬ್ವೆಯಲ್ಲಿವೆ.

ಅನ್ವಯವಾಗುವ ನಿಯಮಗಳು

* ಧಾಮಕ್ಕೆ ಪ್ರವೇಶಿಸಲು ಅನುಮತಿ ಪಡೆಯಬೇಕು.

* ನಿರ್ವಹಣಾ ಸಮಿತಿ ಶುಲ್ಕ ನಿಗದಿ ಮಾಡಲಿದೆ.

* ಕಾನೂನು ಉಲ್ಲಂಘಿಸಿದರೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಕ್ರಮ.

* ಕಾಡುಪ್ರಾಣಿ ದಾಳಿಗೆ ಪರಿಹಾರ ಇಲ್ಲ.

* ರಾತ್ರಿ ಸಫಾರಿಗೆ ಅವಕಾಶ ಇಲ್ಲ.

* ಜಾಗದ ಮಾಲೀಕರಿಗೆ ಕಾಡುಪ್ರಾಣಿಗಳ ಸಂರಕ್ಷಣೆ ಹೊಣೆ.

* ಪ್ರವಾಸಿಗರು 15 ದಿನಕ್ಕಿಂತ ಹೆಚ್ಚು ಉಳಿಯುವಂತಿಲ್ಲ.

* ಇಲ್ಲಿ ಹೈನುಗಾರಿಕೆ, ಕೋಳಿ ಹಾಗೂ ಹಂದಿ ಸಾಕಲು ಅವಕಾಶ ಇಲ್ಲ.

ಸ್ವಚ್ಛ ಸರ್ವೆಕ್ಷಣ

Pic 2

 • ಸುದ್ದಿಯಲ್ಲಿ ಏಕಿದೆ?  ಕೇಂದ್ರದ ಸ್ವಚ್ಛ ಸರ್ವೆಕ್ಷಣ್ ಅಭಿಯಾನದಲ್ಲಿ ಬೆಂಗಳೂರು ಮತ್ತೊಮ್ಮೆ ಕಳಪೆ ಪ್ರದರ್ಶನ ತೋರಿದ್ದು, 216ನೇ ರ್ಯಾಂಕ್​ಗೆ ಕುಸಿದಿದೆ.
 • ದೇಶದಲ್ಲಿನ 3ರಿಂದ 10 ಲಕ್ಷ ಜನಸಂಖ್ಯೆ ಇರುವ ನಗರಗಳ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದ ಮೈಸೂರು, ಒಟ್ಟಾರೆ ರ‍್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೈಸೂರು 5ನೇ ಸ್ಥಾನದಲ್ಲಿತ್ತು.
 • ಉಳಿದಂತೆ ಮಂಗಳೂರು 52, ಹುಬ್ಬಳ್ಳಿ-ಧಾರವಾಡ 145, ತುಮಕೂರು 190, ಉಡುಪಿ 198, ಶಿವಮೊಗ್ಗ 204, ದಾವಣಗೆರೆ 214, ಬೆಂಗಳೂರು 216ನೇ ರ್ಯಾಂಕ್ ಪಡೆದುಕೊಂಡಿವೆ.
 • ದೇಶದ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ ನಗರಗಳ ಪಟ್ಟಿಯಲ್ಲಿ ರಾಜ್ಯದ ಪಿರಿಯಾಪಟ್ಟಣ 43ನೇ ರ್ಯಾಂಕ್ ಪಡೆದಿದೆ.
 • ರಾಜ್ಯಕ್ಕೆ 14ನೇ ರ‍್ಯಾಂಕ್​: ದೇಶದ 30 ರಾಜ್ಯಗಳ ಪೈಕಿ ಕರ್ನಾಟಕಕ್ಕೆ 14ನೇ ರ್ಯಾಂಕ್ ಲಭಿಸಿವೆ. ಒಟ್ಟು 1,400 ಅಂಕಗಳ ಪೈಕಿ ರಾಜ್ಯಕ್ಕೆ 647 ಅಂಕ ಲಭಿಸಿದೆ. ಜಾರ್ಖಂಡ್, ಮಹಾರಾಷ್ಟ್ರ, ಛತ್ತೀಸಗಢ ಕ್ರಮವಾಗಿ 1, 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ.
 • ಮಂಗಳೂರು: 3-10 ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಅತ್ಯುತ್ತಮ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮೊದಲ ಸ್ಥಾನ.
 • ಮೈಸೂರು: 3-10 ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಸ್ವಚ್ಛತೆಗೆ ಮೊದಲ ಸ್ಥಾನ
 • ಹುಣಸೂರು: ಅತ್ಯುತ್ತಮ ಘನ ತ್ಯಾಜ್ಯ ನಿರ್ವಹಣೆಯಲ್ಲಿ ದಕ್ಷಿಣ ಭಾರತದಲ್ಲೆ ಮೊದಲು

ಇ-ನೇತ್ರ!

 • ಸುದ್ದಿಯಲ್ಲಿ ಏಕಿದೆ?  ನೀತಿಸಂಹಿತೆ ಉಲ್ಲಂಘನೆ ಮೇಲೆ ಸಾರ್ವಜನಿಕರೂ ನಿಗಾ ಇಡಲು ಅವಕಾಶವಾಗುವಂತೆ ಚುನಾವಣಾ ಆಯೋಗ ಇ-ನೇತ್ರ ಎಂಬ ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೆ ಸಿದ್ಧತೆ ಆರಂಭಿಸಿದೆ.
 • ಈ ಅಪ್ಲಿಕೇಷನ್ ಮೂಲಕ ಮತದಾರರೇ ನೇರವಾಗಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.
 • ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆಗಳಲ್ಲಿ ಇ-ನೇತ್ರವನ್ನು ಪ್ರಾಯೋಗಿಕ ಪರೀಕ್ಷೆಗೊಳಪಡಿಸಿ 2019ರ ಲೋಕಸಭೆ ಚುನಾವಣೆಗೆ ಸಮಗ್ರವಾಗಿ ಬಳಸಿಕೊಳ್ಳುವುದು ಆಯೋಗದ ಉದ್ದೇಶ.
 • ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲು ಹಾಗೂ ನಿಗಾ ಇಡುವುದಕ್ಕಾಗಿಯೇ ಆಯೋಗ ಲಕ್ಷಾಂತರ ಸರ್ಕಾರಿ ಸಿಬ್ಬಂದಿ ಬಳಸಿಕೊಂಡರೂ ನಿರೀಕ್ಷಿತ ಪ್ರಯೋಜನವಾಗುತ್ತಿಲ್ಲ ಎಂಬ ಆರೋಪವಿದೆ.
 • ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ಐಟಿ ಸೆಲ್​ಗೆ ಇ-ನೇತ್ರ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಪಾರದರ್ಶಕ ಚುನಾವಣೆ ವ್ಯವಸ್ಥೆಗೆ ಇದೊಂದು ಮಹತ್ವದ ಮೈಲಿಗಲ್ಲು ಎಂದು ಮುಖ್ಯ ಚುನಾವಣೆ ಆಯುಕ್ತ ಒ.ಪಿ.ರಾವತ್ ಅಭಿಪ್ರಾಯಪಟ್ಟಿದ್ದಾರೆ.
 • ಈಗ ನಿಯಮ ಏನಿದೆ?: ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಯಾವುದೇ ದೂರುಗಳು ಆಯೋಗಕ್ಕೆ ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸರನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ರಾಜಕಾರಣಿಗಳು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಗಂಭೀರ ಪ್ರಕರಣಗಳೂ ಕೂಡ ಸಾಕ್ಷ್ಯಾಧಾರವಿಲ್ಲದೆ ಕೋರ್ಟ್​ಗಳಲ್ಲಿ ಸಾಬೀತಾಗುತ್ತಿಲ್ಲ.

ಕರ್ನಾಟಕದಲ್ಲಿ ಪ್ರಯೋಗ!

 • ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಈ ಆಪನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಆಪ್ ಸಮಗ್ರವಾಗಿ ತಯಾರಾಗದ ಹಿನ್ನೆಲೆಯಲ್ಲಿ ಕೇವಲ 800 ಡೌನ್​ಲೋಡ್ ಆಗಿತ್ತು. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗೂ ಈ ಆಪನ್ನು ಪ್ರಾಯೋಗಿಕವಾಗಿ ಆಯೋಗ ಬಳಸಿತ್ತು.

ಆಯೋಗದ ಕ್ರಮಗಳು ಹೇಗೆ?

– ಸಾರ್ವಜನಿಕರ ದೂರಿನ ಗಂಭೀರತೆ ಪರಿಶೀಲನೆ

– ದೂರು ಗಂಭೀರವಾಗಿದ್ದರೆ ಮತದಾರರ ಪೋಸ್ಟನ್ನೇ ಸಾಕ್ಷ್ಯವನ್ನಾಗಿ ಸ್ವೀಕರಿಸಿ ಆಯೋಗದಿಂದ ಕಾನೂನು ಕ್ರಮ

ಏನಿದು ಇ-ನೇತ್ರ?

 • ಸಾರ್ವಜನಿಕರು ತಮ್ಮ ಮತದಾರರ ಚೀಟಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಮೂಲಕ ಇ-ನೇತ್ರ ಅಪ್ಲಿಕೇಷನ್​ಗೆ ಲಾಗ್ ಇನ್ ಆಗಬೇಕು.
 • ಪ್ರಚೋದನಕಾರಿ ಭಾಷಣ, ಹಣ ಹಾಗೂ ಹೆಂಡ ಹಂಚಿಕೆ, ಮತದಾರರಿಗೆ ಆಮಿಷ ಇತ್ಯಾದಿ ಯಾವುದೇ ರೀತಿಯ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಘಟನೆಗಳನ್ನು ಮೊಬೈಲ್​ನಲ್ಲಿ ಚಿತ್ರ, ವಿಡಿಯೋ ಅಥವಾ ಆಡಿಯೋ ರೆಕಾರ್ಡ್ ಮಾಡಿ ಆಪ್​ಗೆ ಅಪ್​ಲೋಡ್ ಮಾಡಬಹುದು
 • ಸಾರ್ವಜನಿಕರ ಪೋಸ್ಟ್​ಗಳನ್ನು ದೂರುಗಳೆಂದು ಪರಿಗಣಿಸಿ ಆಯೋಗ ಪರಿಶೀಲನೆ ನಡೆಸುತ್ತದೆ.
 • ಮೊಬೈಲ್ ಜಿಪಿಎಸ್ ಮೂಲಕ ದೂರುದಾರರ ಸ್ಥಳದ ಮಾಹಿತಿ ಕಲೆ ಹಾಕಲಾಗುವುದು
 • ಆ ಮೂಲಕ ನಕಲಿ ದೂರುಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗಿದೆ.
 • ದೂರು ದಾಖಲಾದ ಸ್ಥಳದ ಮಾಹಿತಿ ಆಧರಿಸಿ ಸಂಬಂಧಪಟ್ಟ ಸ್ಥಳೀಯ ಚುನಾವಣಾಧಿಕಾರಿಗೆ ದೂರು ವರ್ಗಾವಣೆ
Related Posts
National Current Affairs – UPSC/KAS Exams- 20th December 2018
LS passes Bill banning commercial surrogacy Topic: Social Justice IN NEWS: The Lok Sabha passed a Bill banning commercial surrogacy with penal provisions of jail term of up to 10 years and ...
READ MORE
Power crisis in Karnataka
According to the  Load Generation Balance Report for 2015-2016  Karnataka would face difficult times in the remaining months of the current fiscal year unless it takes immediate steps to address ...
READ MORE
National Current Affairs – UPSC/KAS Exams- 31st January 2019
DIPP rechristened to include internal trade Topic: Economy IN NEWS: The government has notified changing the name of the Department of Industrial Policy & Promotion (DIPP) to the Department for Promotion of ...
READ MORE
National Current Affairs – UPSC/KAS Exams- 16th September 2018
National AIDS Control Organisation (NACO) study on AIDS Why in news? According to figures released by National AIDS Control Organisation (NACO) it said it would not be an easy battle to end ...
READ MORE
National Current Affairs – UPSC/KAS Exams – 4th July 2018
Tribal Museum The Chhattisgarh government will set up a tribal museum in the state's upcoming new capital Raipur with a view to exhibit culture and tradition of scheduled tribes. The tribal museum ...
READ MORE
Karnataka Current Affairs – KAS / KPSC Exams – 4th May 2017
State to get 9 more viral load testing centres Karnataka is all set to get nine more viral load testing centres which will help reduce hassles and ensure timely detection of ...
READ MORE
National Current Affairs – UPSC/KAS Exams- 15th April 2019
UPI and E-Wallets Topic: Economy In News: While digital payments overall have been growing strongly, people are changing the way they transact, choosing bank-to-bank methods such as the Unified Payments Interface (UPI) ...
READ MORE
ಜೀವಸತ್ವಗಳು (ವಿಟಮಿನ್‌) ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ (Water Soluble) ಜೀವಸತ್ವಗಳೆಂದು ವಿಂಗಡಿಸಲಾಗಿದೆ. ಜೀವಸತ್ವ ಎ.ಡಿ.ಇ.ಕೆ.ಗಳನ್ನು (ವಿಟಮಿನ್‌ ...
READ MORE
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಮ್ಯಾಗ್ಸೆಸೆ ಪುರಸ್ಕಾರ  ಸುದ್ಧಿಯಲ್ಲಿ ಏಕಿದೆ? ‘ಏಷ್ಯಾದ ನೊಬೆಲ್ ’ ಎಂದೇ ಖ್ಯಾತಿ ಗಳಿಸಿರುವ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. ಸೋನಂ ವಾಂಗ್​ಚುಕ್ ಮತ್ತು ಡಾ. ಭರತ್ ವಟವಾನಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಆಗಸ್ಟ್ 31ರಂದು ಫಿಲಿಪ್ಪೀನ್ಸ್ ನಲ್ಲಿ ನಡೆಯುವ ...
READ MORE
National Court of Appeal 1. What is a National Court of Appeal? The National Court Appeal with regional benches in Chennai, Mumbai and Kolkata is meant to act as final court of ...
READ MORE
National Current Affairs – UPSC/KAS Exams- 20th December
Power crisis in Karnataka
National Current Affairs – UPSC/KAS Exams- 31st January
National Current Affairs – UPSC/KAS Exams- 16th September
National Current Affairs – UPSC/KAS Exams – 4th
Karnataka Current Affairs – KAS / KPSC Exams
National Current Affairs – UPSC/KAS Exams- 15th April
ಜೀವಸತ್ವಗಳು
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
All you need to know about National Court

Leave a Reply

Your email address will not be published. Required fields are marked *