“26 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಶ್ರೀಗಂಧ ಮಂಡಳಿ ರಚನೆ

1.

ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಶ್ರೀಗಂಧ ಮಂಡಳಿ ರಚನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

 • ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ಸೊಸೈಟಿ ಆಪ್ ಇಂಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀಗಂಧದ ಪ್ರಸ್ತುತ ಸ್ಥಿತಿಗತಿ ಮತ್ತು ಭವಿಷ್ಯದ ಪ್ರಾಮುಖ್ಯತೆ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.
 • ಮೊದಲು ಶ್ರೀಗಂಧ ಬೆಳೆಸಲು ಅನುಮತಿ ನೀಡುತ್ತಿರಲಿಲ್ಲ. 2001ರಿಂದ ಗಂಧದ ಮರ ಬೆಳೆಸಲು ಅವಕಾಶ ನೀಡಲಾಯಿತು. ಈಗ ಗಂಧದ ಗಿಡ ಬೆಳೆಸಿದರೆ 100 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಮಂಡಳಿ ಹೇಗಿರಬೇಕೆಂಬ ಬಗ್ಗೆ ಅರಣ್ಯ ಇಲಾಖೆ ವರದಿ ರೂಪಿಸುತ್ತಿದೆ.
 • ಪ್ರಸ್ತುತ 35 ಸಾವಿರ ಎಕರೆ ಜಾಗದಲ್ಲಿ ಶ್ರೀಗಂಧ ಬೆಳೆಯಲಾಗುತ್ತಿದೆ.

ಶ್ರೀಗಂಧ ಜ್ಞಾನ ಉದ್ಯಾನ

 • ರೈತರಿಗೆ ಲಾಭ ಮಾಡಿಕೊಡುವ ತಳಿಯ ಶ್ರೀಗಂಧವನ್ನು ಬೆಳೆಸಲು ಪ್ರೋತ್ಸಾಹಿಸಬೇಕಿದೆ. ಇದಕ್ಕಾಗಿ ಬೆಂಗಳೂರು ಗ್ರಾಮಾಂತರ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶ್ರೀಗಂಧ ಜ್ಞಾನ ಉದ್ಯಾನಗಳನ್ನು ನಿರ್ಮಿಸಬೇಕು.
 • ಅರಣ್ಯಗಳಲ್ಲಿರುವ ಶ್ರೀಗಂಧದ ಪ್ರತಿ ಮರಕ್ಕೆ ಮೈಕ್ರೊ ಚಿಪ್‌ ಹಾಗೂ ಜಿಪಿಎಸ್‌ ಅಳವಡಿಸಿ ನಿರ್ವಹಣೆ ಮಾಡಬೇಕು. ವಿಮಾ ಕಂಪನಿಗಳಿಂದಲೂ ವಿಮೆ ಮಾಡಿಸಲು ಕ್ರಮ ಜಾರಿಯಾಗಬೇಕು. ರೈತರು ಈ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಮಾಹಿತಿ ನೀಡಬೇಕು

ಶ್ರೀಗಂಧ ವನ ಪ್ರಶಸ್ತಿ

 • ಶ್ರೀಗಂಧ ಕೃಷಿಯಲ್ಲಿ ತೊಡಗಿಸಿಕೊಂಡ ರೈತರಿಗೆ ‘ಶ್ರೀಗಂಧ ವನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಸ್‌.ದೇವೇಂದ್ರಪ್ಪ, ವೆಂಕಟೇಶಗೌಡ, ವೆಂಕಟಪ್ಪ, ಎಂ.ಸಿ. ರಂಗಸ್ವಾಮಿ, ಕಿಶೋರ್‌ ರಾಥೋಡ್‌, ರಘುನಾಥ್‌, ಡಾ.ಪಂಕಜ್‌ ಅಗರವಾಲ್‌, ಆರ್‌.ಟಿ.ಪಾಟೀಲ್‌, ಕವಿತಾ ಮಿಶ್ರಾ, ವಿನಯಾ ಹಾಗೂ ಡಾ.ಮುರುಗ ಸೆಲ್ವಂ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸ್ಯಾಂಟಾಲಮ್ ಅಲ್ಬಮ್, ಅಥವಾ ಭಾರತೀಯ ಶ್ರೀಗಂಧದ ಮರ

 • ಶ್ರೀಗಂಧದ ಮರವು ಒಂದು ಸಣ್ಣ ಉಷ್ಣವಲಯದ ಮರವಾಗಿದೆ ಮತ್ತು ಇದು ಶ್ರೀಗಂಧದ ಮರಕ್ಕೆ ಅತ್ಯಂತ ಸಾಮಾನ್ಯವಾಗಿ ತಿಳಿದ ಮೂಲವಾಗಿದೆ.
 • ಇದು ಭಾರತ, ಇಂಡೋನೇಷ್ಯಾ, ಮತ್ತು ಮಲಯ ಆರ್ಚಿಪೆಲಾಗ್ಗೆ ಸ್ಥಳೀಯವಾಗಿದೆ.
 • ಕೆಲವು ಸಂಸ್ಕೃತಿಗಳು ಅದರ ಪರಿಮಳಯುಕ್ತ ಮತ್ತು ಔಷಧೀಯ ಗುಣಗಳ ಮೇಲೆ ಮಹತ್ವವನ್ನು ಹೊಂದಿವೆ. ಕೆಲವು ಧರ್ಮಗಳಲ್ಲಿ ಇದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ವಿವಿಧ ಧಾರ್ಮಿಕ ಸಂಪ್ರದಾಯಗಳಲ್ಲಿ ಇದನ್ನು ಬಳಸಲಾಗುತ್ತದೆ.
 • ಈ ಮರದ ಪ್ರಬೇಧದ ಹೆಚ್ಚಿನ ಮೌಲ್ಯವು ಅದರ ಶೋಷಣೆಗೆ ಎಷ್ಟರಮಟ್ಟಿಗೆ ಕಾರಣವಾಗಿದೆ ಎಂದರೆ ,ಇದರ ಜನಸಂಖ್ಯೆಯು ಅಳಿವಿನಂಚಿಗೆ ಗುರಿಯಾಗುವ ಬಿಂದುವಿಗೆ ತಲುಪಿದೆ .
 • ಭಾರತೀಯ ಶ್ರೀಗಂಧದ ಮರವು ಅದರ ಅತ್ಯಗತ್ಯ ತೈಲಕ್ಕಾಗಿ ಇನ್ನೂ ಹೆಚ್ಚಿನ ಬೆಲೆ ಬಾಳುತ್ತದೆ , ಆದರೆ ಗಣನೀಯವಾದ ಮರಗಳ ಕೊರತೆಯ ಕಾರಣದಿಂದಾಗಿ ಇದನ್ನು ಉತ್ತಮ ಮರಗೆಲಸಕ್ಕಾಗಿ ಬಳಸಲಾಗುವುದಿಲ್ಲ.

ಸಿರಿ ಚಂದನವನ

 • ಕರ್ನಾಟಕ ಅರಣ್ಯ ಇಲಾಖೆ ರಾಜ್ಯದಲ್ಲಿ ಶ್ರೀಗಂಧದ ಬೆಳೆಗಳನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿದೆ .
 • ಈ ಯೋಜನೆಯು ಹೊಸ ಶ್ರೀಗಂಧದ ತೋಟಗಳನ್ನು ಬೆಳೆಸುವ ಉದ್ದೇಶದಿಂದ ಮತ್ತು ರಾಜ್ಯದ ನೈಸರ್ಗಿಕ ಶ್ರೀಗಂಧದ-ಬೆಳೆಯುವ ಪ್ರದೇಶಗಳನ್ನು ರಕ್ಷಿಸಲು ಮತ್ತು ನಿರ್ವಹಿಸಲು ಉದ್ದೇಶಿಸಿದೆ.

ಬಂಡೀಪುರ ಕಾಡ್ಗಿಚ್ಚು

2.

ಸುದ್ಧಿಯಲ್ಲಿ ಏಕಿದೆ ?ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿ ತಮಿಳುನಾಡು, ಕೇರಳ ಗಡಿಭಾಗಕ್ಕೂ ಹರಡಿದೆ. ಸಾವಿರಾರು ಎಕರೆ ಅರಣ್ಯದ ಜತೆ ಸಾವಿರಾರು ವನ್ಯ ಜೀವಿಗಳೂ ಸುಟ್ಟು ಕರಕಲಾಗಿವೆ.

ಕೆನ್ನಾಲಿಗೆಗೆ ಕಾರಣವೇನು?

 • ರಾಜ್ಯಾದ್ಯಂತ ವಿಪರೀತ ಬಿಸಿಲು
 • ಕಾಡಂಚಿನ ಕುರುಚಲು ಗಿಡಗಳಿಗೆ ಬೆಂಕಿ ಬಿದ್ದಾಗ ಎಚ್ಚೆತ್ತುಕೊಳ್ಳದೆ ಇದ್ದದ್ದು
 • ಬೆಂಕಿ ಆಕಸ್ಮಿಕ ತಡೆಯಲು ಆರಂಭಿಸಿದ್ದ ಡ್ರೋನ್ ನಿಗಾ ಈ ಬಾರಿ ನಡೆದಿಲ್ಲ
 • ಅವಧಿಗೆ ಮುನ್ನವೇ ೈರ್‌ಲೈನ್ ಮಾಡಲಾಗಿತ್ತಾದರೂ ಬಳಿಕ ಎಲೆಗಳ ರಾಶಿ ಬಿದ್ದಿದೆ
 • ಮೈಸೂರು ವೃತ್ತದಲ್ಲಿ ಪೂರ್ಣ ಪ್ರಮಾಣದ ಹುಲಿ ಯೋಜನೆ ನಿರ್ದೇಶಕರಿಲ್ಲ
 • ಕಾಡಿನ ನಡುವೆ ಯಾರೋ ದ್ವೇಷದಿಂದ ಬೆಂಕಿ ಹಚ್ಚಿರುವ ಸಾಧ್ಯತೆ

ಬೆಂಕಿ ನಂದಿಸಲು ತೆಗೆದುಕೊಂಡ ಕ್ರಮ

 • ಬೆಂಕಿಯ ರುದ್ರ ನರ್ತನ ತಡೆಯಲು ಇದೇ ಮೊದಲ ಬಾರಿಗೆ ವೈಮಾನಿಕ ಕಾರ್ಯಾಚರಣೆ ನಡೆಸಲಾಯಿತಾದರೂ, ಬೆಂಕಿಯನ್ನು ಸಂಪೂರ್ಣ ನಂದಿಸಲು ಸಾಧ್ಯವಾಗಿಲ್ಲ.
 • ಸುರಕ್ಷತೆ ಕ್ರಮವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾಗುವ ದಾರಿಯನ್ನು ಬಂದ್ ಮಾಡಲಾಗಿದೆ. ಬಂಡೀಪುರದಲ್ಲಿ ಸಫಾರಿ ಸ್ಥಗಿತಗೊಳಿಸಲಾಗಿದೆ.
 • ಹೆಲಿಕಾಪ್ಟರ್‌ಗಳು ಸ್ಥಳೀಯ ಬೇರಂಬಾಡಿ ಸಮೀಪದ ಹಿರಿಕೆರೆಯಲ್ಲಿ ದೊಡ್ಡ ಕಂಟೈನರ್‌ಗಳಲ್ಲಿ ನೀರು ತೆಗೆದುಕೊಂಡು ಹೋಗಿ ಕಾಡಿನಲ್ಲಿ ಹಬ್ಬುತ್ತಿರುವ ಬೆಂಕಿಯನ್ನು ನಂದಿಸಲು ಶ್ರಮಿಸಿದವು. ಕರಡಿಕಲ್ಲು ಗುಡ್ಡದಲ್ಲಿ ಸುಮಾರು 30 ಸಾವಿರ ಲೀಟರ್ ಜಲಪ್ರೋಕ್ಷಣೆ ಮಾಡುವ ಮೂಲಕ ನಂದಿಸುವ ಕಾರ‌್ಯ ನಡೆಯಿತು.

ಕೃಷಿ ಉತ್ಪನ್ನ ಸಾಗಾಟಕ್ಕೆ ಓಲಾ ಮಾದರಿ ವಾಹನ

ಸುದ್ಧಿಯಲ್ಲಿ ಏಕಿದೆ ?ಓಲಾ, ಊಬರ್ ಮಾದರಿಯ ಸೇವೆಯನ್ನು ಕೃಷಿ ಕ್ಷೇತ್ರಕ್ಕೆ ವಿಸ್ತರಿಸಲು ಸರ್ಕಾರ ಉತ್ಸುಕವಾಗಿದೆ. ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ- ಉಗ್ರಾಣಗಳಿಗೆ ಸಾಗಿಸುವ ಹೊಸ ಯೋಜನೆ ಜಾರಿಗೆ ತರಲು ಸಹಕಾರ ಇಲಾಖೆ ತೀರ್ವನಿಸಿದೆ.ಮಾರ್ಚ್ ಒಳಗಾಗಿ ಯೋಜನೆ ಒಂದು ಸ್ಪಷ್ಟರೂಪ ಪಡೆದುಕೊಳ್ಳಲಿದೆ ಎಂದರು.

ಕಾರ್ಯಾಚರಣೆ ಹೇಗೆ?

 1. ರೈತರು ಕೃಷಿ ಉತ್ಪನ್ನವನ್ನು ಕಟಾವು ಮಾಡಿ ತಮ್ಮ ಹೊಲದಲ್ಲಿ ಮಾರುಕಟ್ಟೆ-ಉಗ್ರಾಣಕ್ಕೆ ಸಾಗಿಸಲು ತಯಾರಿ ಮಾಡಿಕೊಂಡು ಸರ್ಕಾರ ರಚಿಸುವ ಹೆಲ್ಪ್ ಲೈನ್​ಗೆ ಕರೆ ಮಾಡಿದರೆ ಸರ್ಕಾರದ ಕಡೆಯಿಂದಲೇ ಟ್ರಾ್ಯಕ್ಟರ್ ಅಥವಾ ಸೂಕ್ತ ವಾಹನವನ್ನು ಕೃಷಿ ಭೂಮಿಗೆ ಕಳಿಸಿಕೊಡಲಾಗುತ್ತದೆ.
 2. ಸಮೀಪದ ಉಗ್ರಾಣದಲ್ಲಿ ಸ್ಥಳ ನಿಗದಿ ನೋಡಿಕೊಂಡು ಅಲ್ಲಿಗೆ ಕೃಷಿ ಉತ್ಪನ್ನ ಸಾಗಿಸಲಾಗುತ್ತದೆ. ರಾಜ್ಯದಲ್ಲಿ 20 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ ಗೋದಾಮು ಇದ್ದು, ರೈತರು ಈ ಗೋದಾಮನ್ನು ಬಳಸಿಕೊಳ್ಳಬಹುದು.
 3. ಸ್ಥಳೀಯ ಟ್ರಾ್ಯಕ್ಟರ್ ಅಥವಾ ಇತರ ಸೂಕ್ತ ವಾಹನಗಳನ್ನು ಈ ನೆಟ್​ವರ್ಕ್​ನಲ್ಲಿ ಬಳಸಿಕೊಳ್ಳಲಾಗುತ್ತದೆ. ಸಾಗಾಣಿಕೆ ವೆಚ್ಚದ ಬಾಬ್ತು ಬಾಡಿಗೆ ಮೊತ್ತವನ್ನು ಸರ್ಕಾರವೇ ಭರಿಸಲಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಖಾಲಿ ನಿಂತಿರುವ ಟ್ರಾ್ಯಕ್ಟರ್​ಗಳಿಗೆ ಕೆಲಸ ಸಿಕ್ಕಂತಾಗುತ್ತದೆ.
 4. ರೈತರು ಎಂಟು ತಿಂಗಳವರೆಗೆ ದಾಸ್ತಾನು ಮಾಡಿದರೆ ಯಾವುದೇ ಶುಲ್ಕ ವೆಚ್ಚ ನೀಡಬೇಕಿಲ್ಲ. ಸರ್ಕಾರವೇ ಹಣ ಭರಿಸಲಿದ್ದು, ಈ ಕಾರ್ಯಕ್ಕೆ ಹಣ ಮೀಸಲಿರಿಸಿದೆ. ಜತೆಗೆ ಗೋದಾಮಿನಲ್ಲಿರುವ ಮಾಲಿನ ಆಧಾರದಲ್ಲಿ ರೈತರು ಮುಂಗಡ ಸಾಲ ಪಡೆದುಕೊಳ್ಳಲು ಅವಕಾಶವಿರಲಿದೆ.
 5. ಜಿಪಿಎಸ್ ಆಧಾರದಲ್ಲಿ ರೈತ ಕರೆ ಆಧಾರದಲ್ಲಿ ಅವರಿರುವ ಸ್ಥಳ ಕಂಟ್ರೋಲ್ ರೂಂಗೆ ಮಾಹಿತಿ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಹೀಗಾಗಿ ಓಲಾ, ಊಬರ್ ಮಾದರಿಯಲ್ಲಿ ವಾಹನ ಕಳಿಸುವ ವ್ಯವಸ್ಥೆಯಾಗಲಿದೆ.

ಸರ್ಜಿಕಲ್‌ ಸ್ಟ್ರೈಕ್‌

4.

ಸುದ್ಧಿಯಲ್ಲಿ ಏಕಿದೆ ?ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರ ಕೈಗೊಳ್ಳುತ್ತಿರುವ ಭಾರತೀಯ ವಾಯುಪಡೆ ಈಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳನ್ನು ನಾಶ ಮಾಡಿದೆ. ವೈಮಾನಿಕ ದಾಳಿಯ ಮೂಲಕ ಉಗ್ರ ನೆಲೆಗಳು ಧ್ವಂಸಗೊಂಡಿವೆ.

 • ಪುಲ್ವಾಮಾ ದಾಳಿ ನಡೆಸಿದ ಜೈಷೆ ಉಗ್ರ ಸಂಘಟನೆಯ ಬಾಲಕೋಟ್‌, ಚಕೋಟಿ, ಮುಜಾಫರಬಾದ್‌ನಲ್ಲಿದ್ದ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ.
 • ಪಾಕಿಸ್ತಾನದ ಖೈಬರ್ ಪಖ್ತೂನ್‌ವಾ ಪ್ರಾಂತ್ಯಕ್ಕೆ ನುಗ್ಗಿದ ಯುದ್ಧ ವಿಮಾನಗಳು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿವೆ.
 • ಬೆಳಗಿನ ಜಾವ 30ರ ಸುಮಾರಿಗೆ ಸುಮಾರು 1000 ಕೆಜಿ ಬಾಂಬ್‌ ಅನ್ನು ಉಗ್ರರ ನೆಲೆ ಮೇಲೆ ಹಾಕಲಾಗಿದೆ. ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. 21 ನಿಮಿಷಗಳ ಕಾಲ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿ 12 ವಾಯುಪಡೆ ವಿಮಾನಗಳು ಸುರಕ್ಷಿತವಾಗಿ ವಾಪಸ್‌ ಬಂದಿವೆ.
 • ಉಗ್ರ ನೆಲೆಗಳನ್ನು ಬಹುತೇಕ ನಾಶಪಡಿಸಲಾಗಿದೆ. ಜೈಷೆ ಉಗ್ರ ಸಂಘಟನೆಯ ಲಾಂಚಿಂಗ್‌ ಪ್ಯಾಡ್‌ಗಳು ಬಹುತೇಕ ಛಿದ್ರಗೊಂಡಿವೆ. ಈ ಸಂಘಟನೆಯ ಆಲ್ಫಾ 3 ಕಂಟ್ರೋಲ್ ಕೇಂದ್ರಗಳು ನಾಶವಾಗಿವೆ ಎಂದು ವಾಯುಪಡೆ ಮೂಲಗಳು ತಿಳಿಸಿವೆ.
 • ಮಿರಾಜ್‌ 2000 ಯುದ್ಧ ವಿಮಾನಗಳು ನಿರಂತರ ದಾಳಿ ನಡೆಸಿವೆ. ಬಹುತೇಕ ನೆಲೆಗಳು ನಾಶಗೊಂಡಿವೆ ಎಂದು ಪಾಕಿಸ್ತಾನ ಆರೋಪಿಸಿದೆ.
 • ಭಾರತ-ಪಾಕಿಸ್ತಾನ ಗಡಿಯಾದ್ಯಂತ ಭಾರತೀಯ ಸೇನಾ ಪಡೆಗಳ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಮಿರಾಜ್ 2000 ಬಗ್ಗೆ ಒಂದಿಷ್ಟು…

 • ಫ್ರಾನ್ಸ್ ವಿಮಾನಯಾನ ಪಡೆ ದಸ್ಸಾಲ್ಟ್ ನಿರ್ಮಿತ ನಾಲ್ಕನೇ ತಲೆಮಾರಿನ ಬಹುಪಾತ್ರಧಾರಿ ಯುದ್ಧ ವಿಮಾನ ಇದಾಗಿದೆ. ಫ್ರಾನ್ಸ್ ಜತೆಗಿನ ಒಪ್ಪಂದಲ್ಲಿ 1980ರ ದಶಕದಲ್ಲಿ ಭಾರತೀಯ ವಾಯುಸೇನೆಯು 49ರಷ್ಟು ಮಿರಾಜ್ 2000 ಹಗುರ ಭಾರದ ಯುದ್ಧ ವಿಮಾನಗಳನ್ನು ಖರಿಸಿದಿಸಿತ್ತು. ಬಳಿಕ 2004ರಲ್ಲಿ ಹೆಚ್ಚುವರಿ 10 ಯುದ್ಧ ವಿಮಾನಗಳನ್ನು ಪಡೆದಿತ್ತು.
 • ಗಂಟೆಗೆ 2336 ಕೀ.ಮೀ. ವೇಗದಲ್ಲಿ ಸಂಚರಿಸಬಲ್ಲ ಮಿರಾಜ್ 2000 ಯುದ್ಧ ವಿಮಾನ ಕ್ಷಣ ಮಾತ್ರದಲ್ಲಿ ವೈರಿಗಳ ತಾಣಗಳನ್ನು ಉಡಯಿಸಬಲ್ಲದು.
 • ನವೀಕೃತ ಆರ್‌ಡಿಎಂ 7 ರಾಡಾರ್‌ಗಳಿಂದ ಮಿರಾಜ್ 200 ವಿಮಾನಕ್ಕೆ ಭಾರತೀಯ ಸೇನೆಯು ವಜ್ರ ಎಂಬುದಾಗಿ ವಿಶ್ಲೇಷಿಸಿತ್ತು. ಅಷ್ಟೇ ಯಾಕೆ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಹಿಮಾಲಯದಂತಹ ಅತಿ ಎತ್ತರದ ಪ್ರದೇಶದಲ್ಲಿ ವಜ್ರ ವಿಮಾನವು ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ.
 • ದೇಶದಲ್ಲಿ ದಸ್ಸಾಲ್ಟ್ ಎಂ2000ಎಚ್, ದಸ್ಸಾಲ್ಟ್ ಎಂ2000ಟಿಎಚ್ ಮತ್ತು ದಸ್ಸಾಲ್ಟ್ ಮಿರಾಜ್ 2000ಐ/ಟಿಐ ಯುದ್ಧ ವಿಮಾನಗಳು ಸೇವೆಯಲ್ಲಿ ಅತಿ ಎತ್ತರದ ಪರ್ವತ ಶ್ರೇಣಿಯಲ್ಲಿ ನಿಖರವಾಗಿ ಕಾರ್ಯವಹಿಸಬಲ್ಲದು.
 • ಫ್ರಾನ್ಸ್ ಹಾಗೂ ಭಾರತ ಹೊರತಾಗಿ ಈಜಿಪ್ಟ್, ಗ್ರೀಕ್, ತೈವಾನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಲ್ಲೂ ಮಿರಾಜ್ ಸೇವೆ ಸಲ್ಲಿಸುತ್ತಿದೆ.

ಡಿಎನ್‌ಎಯಂತಹ ಮಲಿಕ್ಯುಲರ್‌ ಸಿಸ್ಟಮ್ ಸಂಶೋದನೆ

5.

ಸುದ್ಧಿಯಲ್ಲಿ ಏಕಿದೆ ?ಡಿಎನ್‌ಎ ತರದ್ದೇ ಅತಿಸೂಕ್ಷ್ಮ ಬಯಾಲಜಿಕಲ್‌ ವ್ಯವಸ್ಥೆಯನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಪ್ರಾಯೋಜಿತ ಫ್ಲೋರಿಡಾದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

 • ಇದು ಏಲಿಯನ್‌ಗಳ ಅಸ್ತಿತ್ವದ ಬಗೆಗಿನ ಅಧ್ಯಯನಕ್ಕೆ ಮಹತ್ವದ ಸುಳಿವು ನೀಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
 • ನೂತನವಾಗಿ ಪತ್ತೆಯಾಗಿರುವ ಡಿಎನ್‌ಎಯಂತಹ ಅತಿಸೂಕ್ಷ್ಮ ವ್ಯವಸ್ಥೆ (ಮೊಲಿಕ್ಯುಲರ್‌ ಸಿಸ್ಟಮ್‌) ಭೂಗ್ರಹದಿಂದ ಹೊರಗೆ ಅಸ್ತತ್ವದಲ್ಲಿರುವ ಜೀವ ಜಗತ್ತಿನ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ನಂಬಲಾಗಿದೆ. ಭೂಮಿಯಲ್ಲಿ ಜೀವಿಗಳ ಅಸ್ತಿತ್ವಕ್ಕೆ ಡಿಎನ್‌ಎ ಮಹತ್ವ ಎಲ್ಲರಿಗೂ ತಿಳಿದಿರುವಂತದ್ದೇ. ಅಂತಹ ಡಿಎನ್‌ಎಯಂತಹುದೇ ಮತ್ತೊಂದು ಅತಿಸೂಕ್ಷ್ಮ ವ್ಯವಸ್ಥೆಯೊಂದು ಪತ್ತೆಯಾಗಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.
 • ಫ್ಲೋರಿಡಾದ ಸಂಶೋಧಕರ ತಂಡ ಡಿಎನ್‌ಎಯಂತೆಯೇ ರಚನೆಯನ್ನು ಹೊಂದಿರುವ ಮಾಲಿಕ್ಯುಲರ್‌ ವ್ಯವಸ್ಥೆಯನ್ನು ಪತ್ತೆ ಹಚ್ಚಿದ್ದಾರೆ. ಡಿಎನ್‌ಎನಲ್ಲಿ ನ್ಯೂಕ್ಲಿಯೋಟೈಡ್ಸ್‌ ಎಂದು ಕರೆಯಲ್ಪಡುವ ನಾಲ್ಕು ಪದಾರ್ಥಗಳು ಇರುತ್ತವೆ. ಆದರೆ ಪತ್ತೆಯಾಗಿರುವ ಅತಿಸೂಕ್ಷ್ಮ ವ್ಯವಸ್ಥೆಯಲ್ಲಿ ಇಂತಹ 8 ಪದಾರ್ಥಗಳು ಕಂಡು ಬಂದಿವೆ.

ಡಿ.ಎನ್.ಎ ಬಗ್ಗೆ

 • ಡಿಎನ್ಎ ವಿಸ್ತರಣ ರೂಪ ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ.
 • ಡಿ.ಎನ್.ಎಯ ರೂಪವನ್ನು ಮೊದಲ ಬಾರಿ ಕಂಡುಹಿಡಿದಿದ ವಿಜ್ಞಾನಿಗಳು ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್. ಇವರಿಗೆ 1956 ನಲ್ಲಿ ನೊಬೆಲ್ ಪುರಸ್ಕಾರ ದೊರೆತಿದೆ.
 • ಡಿ.ಎನ್.ಎ ಎಲ್ಲಾ ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಕ್ಕೆ ತಕ್ಕ ಸೂಚನೆಯನ್ನು ನೀಡುತ್ತದೆ. ಡಿ.ಎನ್.ಎ ಡಬಲ್ ಸ್ಟ್ರಾನ್ಡ್ ಹೆಲಿಕ್ಸ್ ಆಕಾರವನ್ನು ಹೊಂದಿರುತ್ತದೆ.
 • ನ್ಯೂಕ್ಲಿಯೋಟೈಡ್ಗಳು ಪುಟ್ಟ ಘಟಕಗಳಿಂದ ಮಾಡಲಾಗಿರುವ ಎರಡು ಉದ್ದ ಜೈವಿಕ-ಪಾಲಿಮರ್ ಎಳೆಗಳು ನ್ಯೂಕ್ಲಿಯೊಟೈಡ್ ಇದರ ಬೆಂಬಲ.
 • ಪ್ರತಿ ನ್ಯೂಕ್ಲಿಯೊಟೈಡ್ ನ್ಯೂಕ್ಲಿಯೋಬೇಸುಗಳ ಸಂಯೋಜನೆ ಪಡೆದಿದೆ. ನಾಲ್ಕು ನ್ಯೂಕ್ಲಿಯೋಬೇಸ್ ಗಳ ಹೆಸರು ಗುವಾನೈನ್, ಸೈಟೋಸಿನ್, ಆಡಿನೈನ್ ಮತ್ತು ಥ್ತೈಮಿನ್. ಡೀ-ಒಕ್ಸಿ ರೈಬೊಸ್ ಶುಗರ್ ಹಾಗು ಫೋಸ್ಫೇಟುಗಳ ಪರ್ಯಾಯದೊಂದಿಗೆ ನಾಲ್ಕು ನ್ಯೂಕ್ಲಿಯೋಬೇಸ್ ಗಳು ಸೇರಿ ಡಿಎನ್ಎಯ ಬೆನ್ನೆಲುಬಾಗಿದೆ.
 • ಡಿಎನ್ ಪ್ರತಿ ಜೀವಿಗಳಲು ಜೀವನದ ಆನುವಂಶಿಕ ವಸ್ಥುವಾಗಿದೆ. ಡಿಎನ್ಎಯ ಎರಡು ಎಳೆಗಳು ಒಂದೇ ರೀತಿಯ ಮಾಹಿತಿಯನ್ನು ಹೊಂದಿದೆ. ಇದರ ಎರಡು ಎಳೆಗಳು ಬೇರ್ಪಡುವಾಗ ಅದರಲ್ಲಿರುವ ಜೈವಿಕ ಮಾಹಿತಿಯು ಸಹ ನಕಲುಗೊಳ್ಳುತ್ತದೆ. ಇದರ ಎರಡು ಎಳೆಗಳು ವಿರುದ್ದ ದಿಕ್ಕಿನಲ್ಲಿ ಇರುವುದರಿಂದ ಇದು ವಿರೋದಿ ಸಮಾಂತರ ಎಂದು ಕರೆಯಲಾಗಿದೆ.
 • ಎಳೆಗಳಿನ ದಿಕ್ಕಿಗೂ ೩‘ ಹಾಗು ೫‘ ಎಂಬ ಹೆಸರು ಕೊಡಲಾಗಿದೆ. ಇದರ ಹೆಚ್ಚು ಭಾಗವು ನಾನ್-ಕೋಡಿಂಗ್ ಆಗಿದೆ. ಈ ಕೋಡನ್ನು ಉಪಯೋಗಿಸಿ ಆರ್.ಎನ್.ಎ ಎಂಬ ನ್ಯೂಕ್ಲಿಕ್ ಆಸಿಡನ್ನು ನಿರ್ಮಿಸಿ ಅದರ ಮುಖಾಂತರ ಪ್ರೋಟೀನುಗಳು ನಿರ್ಮಿತಗೊಳ್ಳುವುದು.
 • ಜೀವ ಕೋಶಗಳಲ್ಲಿ ಇವು ಉದ್ದ ಆಕಾರವನ್ನು ಹೊಂದಿದೆ. ಇದಕ್ಕೆ ಕ್ರೋಮೋಸೋಮುಗಳೆಂದು ಕರೆಯಬಹುದು. ಜೀವಕೋಶಗಳ ಭಾಗದ ನಂತರವು ಅದರಲ್ಲಿರುವ ಕ್ಕ್ರೋಮೋಸೋಮುಗಳ ಸಂಖ್ಯೆ ಸಮಾನವಾಗಿರುತ್ತದೆ. ಯೂಕಾರ್ಯೋಟುಗಳಲ್ಲಿ ಡಿ.ಎನ್.ಎ ಅದರ ನ್ಯೂಕ್ಳಿಯಸ್ ಹಾಗು ಅಂಗಕಳಾದ ಮೈಟೋಕೋಂಡ್ರಿಯ ಹಾಗು ಕ್ಳೋರೋಪ್ಳಾಸ್ಟುಗಳಲ್ಲಿ ಅಡಗಿಸಲಾಗಿದೆ. ಪ್ರೋಕಾರ್ಯೋಟುಗಳಲ್ಲಿ ಇದು ಸೈಟೋಪ್ಳಾಸಮಿನಲ್ಲಿ ಇರುವುದು.

‘ರೈಲ್‌ ದೃಷ್ಟಿ’ ವೆಬ್‌ಸೈಟ್‌

ಸುದ್ಧಿಯಲ್ಲಿ ಏಕಿದೆ ?‘ರೈಲ್‌ ದೃಷ್ಟಿ’ ವೆಬ್‌ಸೈಟ್‌ ಮೂಲಕ ಪ್ರಯಾಣಿಕರು ಅಡುಗೆ ತಯಾರಿಕೆಯ ಲೈವ್‌ ನೋಡಬಹುದು.

 • ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ರೈಲ್ವೆ ಇಲಾಖೆ ‘ಅಡುಗೆ ಮನೆ’ಗೆ ಕುಳಿತಲ್ಲಿಂದಲೇ ಇಣುಕಿ ನೋಡಬಹುದು! ರೈಲಿನಲ್ಲಿ ನೀಡಲಾಗುವ ಆಹಾರದ ಶುಚಿ-ರುಚಿಯ ಬಗ್ಗೆ ಪ್ರಯಾಣಿಕರ ದೂರಿನ ಹಿನ್ನೆಲೆಯಲ್ಲಿ, ನೇರವಾಗಿ ಆಹಾರ ತಯಾರಿಸುವ ಐಆರ್‌ಸಿಟಿಸಿ ಅಡುಗೆ ಕೋಣೆಯ ದೃಶ್ಯವನ್ನು ಆನ್‌ಲೈನ್‌ ಲೈವ್‌ ಫೀಡ್‌ ಮೂಲಕ ನೋಡುವ ಅವಕಾಶವನ್ನು ರೈಲ್ವೆ ಇಲಾಖೆ ಒದಗಿಸಿದೆ.

ಆಸ್ಕರ್‌ ಗರಿ

ಸುದ್ಧಿಯಲ್ಲಿ ಏಕಿದೆ ?ಋುತುಸ್ರಾವದ ಕಾರಣಕ್ಕೆ ಮಹಿಳೆಯರನ್ನು ಅಸ್ಪೃಶ್ಯರಂತೆ ಕಾಣುವ ಮನೋಸ್ಥಿತಿಯ ವಿರುದ್ಧ ಸಿಡಿದೆದ್ದ ಮಹಿಳೆಯರ ಸಾತ್ವಿಕ ಆಕ್ರೋಶವನ್ನು ಆಧರಿಸಿದ ಪೀರಿಯೆಡ್‌. ಎಂಡ್‌ ಆಫ್‌ ಸೆಂಟೆನ್ಸ್‌ ಚಿತ್ರಕ್ಕೆ ಕಿರು ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಮೊದಲ ಪ್ರಶಸ್ತಿ ಬಂದಿದೆ.

 • ಪ್ರಶಸ್ತಿ ವಿಜೇತ ನಿರ್ದೇಶಕಿ ರಾಯ್ಕಾ ಝೆಹ್ತಾಬ್ಚಿ ಅವರು ನಿರ್ದೇಶಿಸಿದ ಈ ಸಿನಿಮಾವನ್ನು ಭಾರತೀಯ ನಿರ್ಮಾಪಕರಾದ ಗುನೀತ್‌ ಮೋಂಗಾ ಅವರ ಶಿಖ್ಯಾ ಎಂಟರ್‌ಟೇನ್‌ಮೆಂಟ್‌ ನಿರ್ಮಿಸಿದೆ. ಲಾಸ್‌ ಏಂಜೆಲ್ಸ್‌ನ ಓಕ್‌ವುಡ್‌ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಕಿ ಮೆಲಿಸ್ಸಾ ಬರ್ಟನ್‌ ಅವರು ಆರಂಭಿಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಕುರಿತಾದ ಪ್ರಾಜೆಕ್ಟ್ನ ಭಾಗವಾಗಿ ಈ ಚಿತ್ರ ರೂಪುಗೊಂಡಿದೆ.

ಹತ್ತು ವರ್ಷದ ಬಳಿಕ

 • ಸ್ಲಮ್‌ ಡಾಗ್‌ ಮಿಲೇನಿಯರ್‌ ಅವಳಿ ಆಸ್ಕರ್‌ ಪ್ರಶಸ್ತಿ ಪಡೆದ ಹತ್ತು ವರ್ಷಗಳ ನಂತರ ಭಾರತ ಮತ್ತೊಮ್ಮೆ ವಿಶ್ವ ಸಿನಿಮಾ ಲೋಕದಲ್ಲಿ ಮಿಂಚಿದೆ. ಆಗ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಮತ್ತು ಸೌಂಡ್‌ ಎಂಜಿನಿಯರ್‌ ರಸೂಲ್‌ ಪೂಕುಟ್ಟಿ ಪ್ರಶಸ್ತಿ ಪಡೆದಿದ್ದರು.
 • ಈ ಬಾರಿಯ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
 • ಅತ್ಯುತ್ತಮ ಚಲನಚಿತ್ರ: ಗ್ರೀನ್​ ಬುಕ್​
 • ನಿರ್ದೇಶನ: ಆಲ್ಫಾನ್ಸೋ ಕುವಾರಾನ್​ ಚಿತ್ರ- ರೋಮಾ
 • ಅತ್ಯುತ್ತಮ ನಟಿ: ಆಲಿವಿಯಾ ಕೋಲ್ಮನ್,​ ಚಿತ್ರ- ದ ಫೇವರಿಟ್​
 • ಅತ್ಯುತ್ತಮ ನಟ: ರಾಮಿ ಮಾಲೆಕ್​, ಚಿತ್ರ- ಬೊಹೇಮಿಯನ್​ ರಾಪ್ಸೋಡಿ
 • ಅತ್ಯುತ್ತಮ ಹಾಡು: ಲೇಡಿ ಗಾಗಾ, ಮಾಕ್​ರ್ ರಾನ್ಸನ್​, ಅಂಥೋನಿ ರೊಸ್ಸೊಮಾಂಡೋ ಮತ್ತು ಆಂಡ್ರ್ಯೂ ವೈಟ್,​ ಚಿತ್ರ-ಎ ಸ್ಟಾರ್​ ಈಸ್​ ಬಾರ್ನ್​, ಹಾಡು- ಶಾಲೋ
 • ಅತ್ಯುತ್ತಮ ಸಂಗೀತ: ಲ್ಯೂಡ್​ವಿಗ್​ ಗೊರಾನ್ಸನ್​, ಚಿತ್ರ- ಬ್ಲ್ಯಾಕ್​ ಫ್ಯಾಂಥರ್​
 • ಡಾಕ್ಯುಮೆಂಟರಿ ಶಾಟ್​ರ್ ಸಬ್ಜೆಕ್ಟ್​: ಪೀರಿಯಡ್​, ಎಂಡ್​ ಆಫ್​ ಸೆನ್​ಟೆನ್ಸ್​
 • ಅನಿಮೇಟೆಡ್​ ಶಾರ್ಟ್​ ಫಿಲಂ: ಬಾವೋ
 • ಅನಿಮೇಟೆಡ್​ ಫೀಚರ್​ ಫಿಲಂ: ಸ್ಪೈಡರ್​ ಮ್ಯಾನ್​- ಇನ್​ಟು ದ ಸ್ಪೈಡರ್​ ವರ್ಸ್​
Related Posts
“20 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರೋ ಇಂಡಿಯಾ 2019 ಸುದ್ಧಿಯಲ್ಲಿ ಏಕಿದೆ ?ಮಿಲಿಟರಿ ಮತ್ತು ವೈಮಾನಿಕ ಕ್ಷೇತ್ರದ ತಂತ್ರಜ್ಞಾನ, ಉತ್ಪನ್ನಗಳ ಅನಾವರಣಗೊಳಿಸುವ ಏಷಿಯಾದ ಅತಿದೊಡ್ಡ, ಪ್ರತಿಷ್ಠಿತ 'ಏರೋ ಇಂಡಿಯಾ 2019' ಹನ್ನೆರಡನೇ ಆವೃತ್ತಿಗೆ ಯಲಹಂಕ ವಾಯುನೆಲೆಯಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಮಿಲಿಟರಿ ವಿಮಾನ, ಹೆಲಿಕಾಪ್ಟರ್‌ಗಳು, ನಾಗರೀಕ ವಿಮಾನಗಳು ವೈಮಾನಿಕ ಪ್ರದರ್ಶನವನ್ನು ...
READ MORE
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಚ್‌1ಎನ್‌1 ಮುಂಜಾಗ್ರತೆಗೆ ಸೂಚನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ವರ್ಷದ ಆರಂಭದಲ್ಲೇ ಎಚ್‌1ಎನ್‌1 ಜ್ವರ ಭೀತಿ ಸೃಷ್ಟಿಸಿರುವುದರಿಂದ ಅಗತ್ಯ ಔಷಧಗಳ ದಾಸ್ತಾನು ಮೂಲಕ ಶಂಕಿತ ರೋಗಿಗಳಿಗೆ 48 ಗಂಟೆಯೊಳಗೆ ಟ್ಯಾಮಿಫ್ಲೂ ಚಿಕಿತ್ಸೆ ಪ್ರಾರಂಭಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಏಕೆ ಈ ಸೂಚನೆ ...
READ MORE
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅತ್ಯಮೂಲ್ಯ ಖನಿಜ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಪತ್ತೆ ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲೇ ಅಪರೂಪವಾಗಿರುವ ಖನಿಜವೊಂದು ಕೋಲಾರ ಗೋಲ್ಡ್‌ ಫೀಲ್ಡ್‌ ಖ್ಯಾತಿಯ ಕೆಜಿಎಫ್‌ ಬಳಿ ಪತ್ತೆಯಾಗಿದ್ದು, ಭಾರತೀಯ ಭೂವಿಜ್ಞಾನ ಇಲಾಖೆಯು ಇದರ ಸಂರಕ್ಷಣೆಗೆ ಮುಂದಾಗಿದೆ. ಕೆಜಿಎಫ್‌ ಬಳಿಯ ಪೆದ್ದಪಲ್ಲಿ ಗ್ರಾಮದಲ್ಲಿ ಈ ಅಪರೂಪದ ಖನಿಜವಿದ್ದು, ಮೇಲ್ನೋಟಕ್ಕೆ ...
READ MORE
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಲ್ವರ್ಗ ಮೀಸಲು ಜಾರಿ ಸುದ್ಧಿಯಲ್ಲಿ ಏಕಿದೆ ?ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನಿಕ ಸವಲತ್ತು ಅಧಿಕೃತವಾಗಿ ಅನುಷ್ಠಾನಗೊಂಡಿದೆ. ಈ ದಿಸೆಯಲ್ಲಿನ ಸಂವಿಧಾನ ತಿದ್ದುಪಡಿಗೆ ರಾಷ್ಟ್ರಪತಿಗಳ ಸಮ್ಮತಿ ಲಭಿಸಿತ್ತು. ''ಸಂವಿಧಾನ (ತಿದ್ದುಪಡಿ) ಕಾಯಿದೆ -2019ರ ವಿಧಿ ...
READ MORE
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಆ್ಯಪ್ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆ, ಕ್ಷೇತ್ರದ ವಿವರ, ಮತಗಟ್ಟೆ ಇರುವ ಸ್ಥಳ, ಪಥ ಸೂಚಕ, ತಾವಿರುವ ಪ್ರದೇಶದಿಂದ ಮತಗಟ್ಟೆ ದೂರ ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆಯಲು ಆಪ್​ನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ‘ಚುನಾವಣಾ’ ಹೆಸರಿನ ಈ ಆ್ಯಪ್ ಅನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ...
READ MORE
“20 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸ್ತ್ರೀಯರಿಗೆ ಕಾಯಕ ಶಕ್ತಿ! ಸುದ್ಧಿಯಲ್ಲಿ ಏಕಿದೆ ?ಬಡವರ ಬಂಧು, ಋಣ ಪರಿಹಾರ ಕಾಯ್ದೆಗಳ ಮೂಲಕ ಬಡವರ ನೆರವಿಗೆ ಬಂದ ಸರ್ಕಾರ, ಮಹಿಳಾ ಮತದಾರರಿಗಾಗಿ ರೂಪಿಸಿರುವ ಕಾಯಕ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಹಿಳೆಯರಿಗೆ ಮುಂದಿನ ಐದು ವರ್ಷಗಳಲ್ಲಿ ಪ್ರತಿ ...
READ MORE
“16 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆಯುಷ್ಮಾನ್ ಆರೋಗ್ಯ ಸುದ್ಧಿಯಲ್ಲಿ ಏಕಿದೆ ?ಬಡ ಹಾಗೂ ಮಧ್ಯಮವರ್ಗದ ನಾಗರಿಕರಿಗೆ ಆರೋಗ್ಯ ಸೇವೆಯಲ್ಲಿ ಖಾತ್ರಿ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿದ್ದ ಎರಡು ಪ್ರತ್ಯೇಕ ಯೋಜನೆಗಳನ್ನು ವಿಲೀನಗೊಳಿಸುವ ಮೂಲಕ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿ ಮಾಡಲಾಗಿದೆ. ಕೋ-ಬ್ರಾ್ಯಂಡಿಂಗ್​ನಲ್ಲಿ ಎರಡೂ ಯೋಜನೆಗಳನ್ನು ...
READ MORE
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿ ಭೂಮಿ ಸದ್ಬಳಕೆ ಜತೆಗೆ ಅನ್ನದಾತರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಮೂರು ಹೊಸ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಕಾಯ್ದೆಗಳು ಇದಕ್ಕೆ ಆಧಾರವಾಗಿರುವುದು ವಿಶೇಷ. ಉದ್ದೇಶ ಕೃಷಿ ಭೂಮಿ ಗುತ್ತಿಗೆ ...
READ MORE
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳಗಾವಿ-ಯರಗಟ್ಟಿ ರಸ್ತೆ ಸುದ್ಧಿಯಲ್ಲಿ ಏಕಿದೆ ?ಮೇಲ್ದರ್ಜೆಗೇರಿರುವ ಇಲ್ಲಿನ ಬೆಳಗಾವಿ-ಯರಗಟ್ಟಿ ನಡುವಿನ ರಸ್ತೆ, ಅಪಘಾತ ನಿಯಂತ್ರಿಸುವ ದೇಶದ ಮೊದಲ ಮಾದರಿ ರಸ್ತೆಯಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಅತ್ಯಧಿಕ ರಾರ‍ಯಂಕ್‌ ನೀಡಿರುವ ವಿಶ್ವಬ್ಯಾಂಕ್‌, ಈ ಮಾದರಿ ರಸ್ತೆಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೂ ಸೂಚನೆ ನೀಡಿದೆ. ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಿಂದ ...
READ MORE
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾತೃಪೂರ್ಣ ಯೋಜನೆ  ಸುದ್ಧಿಯಲ್ಲಿ ಏಕಿದೆ ? ಪೌಷ್ಟಿಕ ಆಹಾರ ಒದಗಿಸಿ ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಗೊಂಡ ‘ಮಾತೃಪೂರ್ಣ’ ಯೋಜನೆ ಪೂರ್ಣ ಫಲ ನೀಡುವಲ್ಲಿ ವಿಫಲವಾಗಿದೆ. ವಿಫಲವಾಗಲು ಕಾರಣ ರಾಜ್ಯದಲ್ಲಿ 61 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಅಂದಾಜು 25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ...
READ MORE
“20 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“16 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *