ಆನ್ಲೈನ್ ವಂಚನೆ
- ಸುದ್ದಿಯಲ್ಲಿ ಏಕಿದೆ? ವಿಶ್ವದಲ್ಲಿ ನಡೆಯುವ ಆನ್ಲೈನ್ ವಂಚನೆಗಳಲ್ಲಿ, ಇ–ಮೇಲ್ ಮೂಲಕ ವಂಚಿಸಿ ಬಳಕೆದಾರರ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ‘ಫಿಶಿಂಗ್’ ಮತ್ತು ಕುತಂತ್ರಾಂಶ ದಾಳಿಗಳ ಪ್ರಮಾಣವೇ ಹೆಚ್ಚಿದೆ. ಈ ಎರಡೂ ರೀತಿಯ ದಾಳಿಗೆ ಹೆಚ್ಚು ತುತ್ತಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
- ಮೊದಲ ಸ್ಥಾನದಲ್ಲಿ ಕೆನಡ ಇದ್ದರೆ, ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ. ಸೈಬರ್ ಭದ್ರತಾ ಕಂಪನಿ ಆರ್ಎಸ್ಎ ನಡೆಸಿದ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಇದೆ.
- 2018ರ ಜನವರಿ 1ರಿಂದ ಮಾರ್ಚ್ 31ರ ಅವಧಿಯಲ್ಲಿ ನಡೆದ ಸೈಬರ್ ಅಪರಾಧ ಪ್ರಕರಣ ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ.
- ಫಿಶಿಂಗ್ ದಾಳಿಗೆ ಗುರಿಯಾಗುತ್ತಿರುವವರಲ್ಲಿ ಮೊಬೈಲ್ ಬಳಕೆದಾರರ ಪ್ರಮಾಣ ಏರಿಕೆಯಾಗುತ್ತಿದೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.
- ದತ್ತಾಂಶ ನಿರ್ವಹಣೆ ವ್ಯವಸ್ಥೆಗೆ ಆಗ್ರಹ: ಭಾರತದಲ್ಲಿ ದತ್ತಾಂಶ ಸಂರಕ್ಷಣೆ ಮತ್ತು ನಿರ್ವಹಣೆಗೆ ಸ್ವತಂತ್ರ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
- ಡಿಜಿಟಲ್ ತಂತ್ರಜ್ಞಾನಗಳು ಮತ್ತು ಸಮಾಜದ ಮೇಲೆ ಅವುಗಳ ಪರಿಣಾಮ’ಗಳ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ತಜ್ಞರು ದತ್ತಾಂಶ ನಿರ್ವಹಣೆ ವ್ಯವಸ್ಥೆ ಬೇಕು ಎಂದು ಹೇಳಿದ್ದಾರೆ.
- ನೀತಿ ಆಯೋಗವು ಸರ್ಕಾರದ ಇತರ ಸಂಸ್ಥೆಗಳ ಸಹಯೋಗದಲ್ಲಿ ಈ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.
- ದತ್ತಾಂಶಗಳ ಒಡೆತನ ಯಾರದ್ದು, ಅವುಗಳನ್ನು ನಿರ್ವಹಿಸಬೇಕಾದವರು ಯಾರು ಎಂಬುದನ್ನು ಸ್ಪಷ್ಟಪಡಿಸಿಕೊಂಡು ನಿರ್ವಹಣಾ ವ್ಯವಸ್ಥೆ ರೂಪಿಸಬೇಕು.
- 55% ಅಧ್ಯಯನ ನಡೆದ ಅವಧಿಯಲ್ಲಿ ದಾಖಲಾದ ಸೈಬರ್ ಅಪರಾಧಗಳಲ್ಲಿ ಫಿಶಿಂಗ್ ಪ್ರಕರಣಗಳ ಪ್ರಮಾಣ
- 66% ಫಿಶಿಂಗ್ ದಾಳಿಗಳು ಸ್ಮಾರ್ಟ್ಫೋನ್ ಅಪ್ಲಿಕೇಷನ್ಗಳ ಮೂಲಕವೇ ನಡೆದಿವೆ
ಫಿಶಿಂಗ್ ಎಂದರೇನು ?
- ಎಲೆಕ್ಟ್ರಾನಿಕ್ ಸಂವಹನದಲ್ಲಿ ನಂಬಲರ್ಹವಾದ ಘಟಕದಂತೆ ಮರೆಮಾಚುವ ಮೂಲಕ ದುರುದ್ದೇಶಪೂರಿತ ಕಾರಣಗಳಿಗಾಗಿ ಸಾಮಾನ್ಯವಾಗಿ ಬಳಕೆದಾರಹೆಸರುಗಳು, ಪಾಸ್ವರ್ಡ್ಗಳು ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು (ಮತ್ತು ಹಣ ) ಮುಂತಾದ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಳ್ಳುವ ಪ್ರಯತ್ನವಾಗಿದೆ ಫಿಶಿಂಗ್ .
- ಫಿಶಿಂಗ್ ಅನ್ನು ಸಾಮಾನ್ಯವಾಗಿ ಇಮೇಲ್ ವಂಚನೆ ಅಥವಾ ಇನ್ಸ್ಟೆಂಟ್ ಮೆಸೇಜಿಂಗ್ ಮೂಲಕ ನಡೆಸಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ನಕಲಿ ವೆಬ್ಸೈಟ್ನ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಲು ನಿರ್ದೇಶಿಸುತ್ತದೆ, ಅದರಲ್ಲಿರುವ ನೋಟ ಮತ್ತು ಅನುಭವವು ಕಾನೂನುಬದ್ಧವಾದದ್ದು ಮತ್ತು ಒಂದೇ ಒಂದು ವ್ಯತ್ಯಾಸವೆಂದರೆ ವೆಬ್ಸೈಟ್ನ URL ಕಾಳಜಿ.
- ಸಾಮಾಜಿಕ ಜಾಲತಾಣಗಳು , ಹರಾಜು ಸೈಟ್ಗಳು , ಬ್ಯಾಂಕುಗಳು, ಆನ್ಲೈನ್ ಪಾವತಿ ಪ್ರೊಸೆಸರ್ಗಳು ಅಥವಾ ಐಟಿ ಆಡಳಿತಗಾರರಿಂದ ಬಂದಿರುವ ಸಂವಹನಗಳನ್ನು ಬಲಿಯಾದವರಿಗೆ ಆಮಿಷ ಮಾಡಲು ಹೆಚ್ಚಾಗಿ ಬಳಸಲಾಗುತ್ತದೆ.
- ಇಮೇಲ್ಗಳನ್ನು ಫಿಶಿಂಗ್ ಮಾಲ್ವೇರ್ ಅನ್ನು ವಿತರಿಸುವ ವೆಬ್ಸೈಟ್ಗಳಿಗೆ ಲಿಂಕ್ಗಳನ್ನು ಹೊಂದಿರಬಹುದು. ಬಳಕೆದಾರರನ್ನು ಮೋಸಗೊಳಿಸಲು ಬಳಸಲಾಗುವ ಸಾಮಾಜಿಕ ಎಂಜಿನಿಯರಿಂಗ್ ತಂತ್ರಗಳಿಗೆ ಫಿಶಿಂಗ್ ಒಂದು ಉದಾಹರಣೆಯಾಗಿದೆ, ಮತ್ತು ಪ್ರಸ್ತುತ ವೆಬ್ ಭದ್ರತೆಯಲ್ಲಿ ದೌರ್ಬಲ್ಯಗಳನ್ನು ದುರ್ಬಳಕೆ ಮಾಡುತ್ತದೆ.
- ವರದಿಯಾದ ಫಿಶಿಂಗ್ ಘಟನೆಗಳ ಸಂಖ್ಯೆಯನ್ನು ನಿಭಾಯಿಸುವ ಪ್ರಯತ್ನಗಳು ಶಾಸನ , ಬಳಕೆದಾರ ತರಬೇತಿ, ಸಾರ್ವಜನಿಕ ಜಾಗೃತಿ ಮತ್ತು ತಾಂತ್ರಿಕ ಭದ್ರತಾ ಕ್ರಮಗಳನ್ನು ಒಳಗೊಂಡಿವೆ.
ಆರ್ಚರಿ ವಿಶ್ವಕಪ್ ಟೂರ್ನಿ
- ಸುದ್ದಿಯಲ್ಲಿ ಏಕಿದೆ? ಭಾರತದ ಕಾಂಪೌಂಡ್ ತಂಡದವರು ಎರಡನೇ ಹಂತದ ಆರ್ಚರಿ ವಿಶ್ವಕಪ್ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ.
- ಮಹಿಳೆಯರ ತಂಡ ವಿಭಾಗದಲ್ಲಿ ಭಾರತ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿತು
- ಜ್ಯೋತಿ ಸುರೇಖಾ ವೆನ್ನಾಮ್, ಮುಸ್ಕಾನ್ ಕಿರಾರ್ ಮತ್ತು ದಿವ್ಯಾ ದಯಾಳ್ ಅವರಿದ್ದ ತಂಡ ಫೈನಲ್ನಲ್ಲಿ ಮೂರು ಪಾಯಿಂಟ್ಸ್ನಿಂದ ಚೀನಾ ತೈಪೆ ಎದುರು ಪರಾಭವಗೊಂಡಿತು.
- ಮಿಶ್ರ ತಂಡ ವಿಭಾಗದಲ್ಲಿ ಭಾರತ ಕಂಚಿನ ಪದಕ ತನ್ನದಾಗಿಸಿಕೊಂಡಿತು.
- ಕಂಚಿನ ಪದಕದ ‘ಪ್ಲೇ ಆಫ್’ನಲ್ಲಿ ಮೂರನೇ ಶ್ರೇಯಾಂಕಿತ ಜೋಡಿ ಅಭಿಷೇಕ್ ವರ್ಮಾ ಮತ್ತು ಜ್ಯೋತಿ 158–155ರಲ್ಲಿ ಬೆಲ್ಜಿಯಮ್ನ ರೆಜಿನಾಲ್ಡ್ ಕೂಲ್ಸ್ ಮತ್ತು ಸಾರಾ ಪ್ರೀಲ್ಸ್ ಅವರನ್ನು ಸೋಲಿಸಿತು.
ಗಣಿ ಸುರಕ್ಷತೆ ಕಾಯಿದೆ
- ಸುದ್ದಿಯಲ್ಲಿ ಏಕಿದೆ? ಗಣಿಗಾರಿಕೆಯಲ್ಲಿ ಹೆಚ್ಚಿನ ಸುರಕ್ಷತೆ ಹಾಗೂ ಕಾರ್ಮಿಕರ ಜೀವ ರಕ್ಷಣೆಗಾಗಿ ವರ್ಷಾಂತ್ಯದೊಳಗೆ ‘ಗಣಿಗಾರಿಕೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಯಿದೆ’ಗೆ ತಿದ್ದುಪಡಿ ತರಲಾಗುವುದು ಎಂದು ಗಣಿ ಸುರಕ್ಷೆ ಡಿಜಿ ಪ್ರಶಾಂತಕುಮಾರ್ ಸರ್ಕಾರ್ ತಿಳಿಸಿದರು.
- ಗಣಿಗಾರಿಕೆ ಕ್ಷೇತ್ರ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿದೆ. ಹೀಗಾಗಿ ಸುರಕ್ಷತೆಗೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
- ತಿದ್ದುಪಡಿ ನಿಯಮಗಳನ್ನು ಇಲಾಖೆಯ ವೆಬ್ಸೈಟ್ ಈಗಾಗಲೇ ಅಪ್ಲೋಡ್ ಮಾಡಲಾಗಿದೆ. ಇದಕ್ಕೆ ಗಣಿ ಉದ್ದಿಮೆದಾರರು ಹಾಗೂ ಇತರ ಏಜೆನ್ಸಿಗಳು ಸಲಹೆ ನೀಡಿದ್ದಾರೆ
ಸುರಕ್ಷಾ ನಿಯಮ ಕಡೆಗಣನೆ ಸಲ್ಲ
- ಗಣಿಗಾರಿಕೆಯಲ್ಲಿ ಭಾರಿ ಯಂತ್ರಗಳ ಬಳಕೆ ಹಾಗೂ ಆಳವಾದ ಸ್ಥಳದಲ್ಲಿ ಕೆಲಸ ಮಾಡುವುದಿಂದ ಕಾರ್ಮಿಕರ ಪ್ರಾಣ ರಕ್ಷಣೆ ಕಂಪನಿಗಳ ಜವಾಬ್ದಾರಿಯಾಗಿದೆ. ಸಣ್ಣ ಉದ್ದಿಮೆಗಳು ಕೂಡ ನಿಯಮ ಪಾಲಿಸಬೇಕೆ ಹೊರತು ಕಡೆಗಣನೆ ಮಾಡುವಂತಿಲ್ಲ.
- ರಾಜಸ್ಥಾನದ ಕೆಲ ಗಣಿಗಳಲ್ಲಿನ ಕಾರ್ಮಿಕರು ಸಿಲಿಕೋಸಿಸ್ ರೋಗಕ್ಕೆ ತುತ್ತಾಗಿದ್ದಾರೆ. ಇವರಿಗೆ ಪರಿಹಾರ ವಿತರಿಸಲು ನಿಯಮ ಅಡ್ಡಿಯಾಗಿದ್ದು, ಕಾಯಿದೆಗೆ ತಿದ್ದುಪಡಿ ತಂದು ಸೌಲಭ್ಯ ಒದಗಿಸಬೇಕಿದೆ.
ಅಪಘಾತಗಳ ಪ್ರಮಾಣ ಇಳಿಕೆ
- ಗಣಿಗಾರಿಕೆಯಲ್ಲಿ ಆಧುನಿಕ ಯಂತ್ರಗಳ ಅಳವಡಿಕೆ, ಮುನ್ನೆಚ್ಚರಿಕೆ ಕ್ರಮ, ಕಾರ್ಮಿಕರ ತರಬೇತಿಯಿಂದಾಗಿ ಮೂರು ದಶಕಗಳ ಹಿಂದೆ ಸಾವಿರ ಜನರಿಗೆ ಪ್ರತಿಶತ 1.25 ಇದ್ದ ಅಪಘಾತ ಪ್ರಮಾಣ ಈಗ 0.4ಕ್ಕೆ ಇಳಿದಿದೆ.
Related Posts

Inland container yard work to begin soon at Kadakola
Work on the proposed greenfield project for an inland container yard by Container Corporation of India Ltd. (Concor) at Kadakola, between Mysuru ...
READ MORE
Only 50,000 trade licences in this booming city
Despite rampant commercialisation in the city, the Bruhat Bengaluru Mahanagara Palike (BBMP) has issued just around 50,000 trade licences, which, RTI activists claim, ...
READ MORE
ರೈಲ್ವೆ: ದೂರು ನೀಡಲು ‘ಮದದ್’
ರೈಲು ಪ್ರಯಾಣಿಕರು ಇನ್ನುಮುಂದೆ ತಮ್ಮ ದೂರುಗಳನ್ನು ದಾಖಲಿಸಲು ಟ್ವಿಟರ್, ಫೇಸ್ಬುಕ್, ಸಹಾಯವಾಣಿ ಇವುಗಳನ್ನು ಬಳಸುವ ಅವಶ್ಯವಿಲ್ಲ. ದೂರು, ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ‘ಪ್ರಯಾಣದ ವೇಳೆ ನೆರವಿಗೆ ಮೊಬೈಲ್ ಆ್ಯಪ್’ (ಮದದ್=ಸಹಾಯ) ಎಂಬ ಹೆಸರಿನ ಮೊಬೈಲ್ ಆ್ಯಪ್ ಅನ್ನು ...
READ MORE
The first unit of the Yeramarus Thermal Power Station (YTPS) has successfully completed the trial run by generating power continuously for 72 hours.
The first generating unit of the newly set ...
READ MORE
Uranium mining to move out of Gujanal to uninhabited areas
Uranium mining is being moved out of Gujanal village in Gokak taluk of Belagavi district after complaints from villagers that deep ...
READ MORE
GPS to be used for next year's elephant census
Global Positioning System (GPS) will be used for the first time to count and map elephants in the pachyderm census to be ...
READ MORE
BEL to make satellites for ISRO
Bharat Electronics Ltd., recently chosen by the Indian Space Research Organisation (ISRO) to make its future satellites, will acquire 30 acres of land near Devanahalli ...
READ MORE
Karnataka will depict various stages of coffee-making, from plucking of beans to making of filter coffee, in a captivating tableau during the Republic Day parade
From women plucking coffee beans to ...
READ MORE
The four cities from Karnataka selected in the second round of the Smart City initiative have commenced the process of selecting project management consultants to help execute their respective action ...
READ MORE
NAAC revises accreditation process
The National Assessment and Accreditation Council, the autonomous body which accredits higher education institutions (HEIs) in India, has come out with a revised accreditation framework designed to ...
READ MOREKarnataka Current Affairs – KAS/KPSC Exams- 4th August
Karnataka Current Affairs – KAS/KPSC Exams – 9th
“16th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Yermarus Thermal Power Station first unit fit for
Karnataka Current Affairs – KAS / KPSC Exams
Elephant Census to be held in April-May 2017
Karnataka Current Affairs – KAS/KPSC Exams – 31st
Kodagu: The Coffee Land of Karnataka- To be
Karnataka: Smart Cities – Process on to pick
Karnataka Current Affairs – KAS / KPSC Exams