“27 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಐದು ಹೊಸ ತಾಲೂಕು

ಸುದ್ಧಿಯಲ್ಲಿ ಏಕಿದೆ ? ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದ ಹಾರೋಹಳ್ಳಿ, ಚೇಳೂರು, ತೇರದಾಳ ಹಾಗೂ ಕಳಸಾ ಹೊಸ ತಾಲೂಕುಗಳ ಹೊರತಾಗಿ ಮತ್ತೆ ಐದು ಪಟ್ಟಣಗಳಿಗೆ ತಾಲೂಕುಗಳ ಪಟ್ಟ ನೀಡಲಾಗಿದೆ.

 • ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ, ಕುಶಾಲನಗರ, ವಿಜಯಪುರ ಜಿಲ್ಲೆಯ ಆಲಮೇಲ, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣಗಳನ್ನು ತಾಲೂಕು ಕೇಂದ್ರಗಳಾಗಿ ಘೋಷಿಸಲಾಗಿದೆ.
 • ಈ ಮೂಲಕ 227 ಇದ್ದ ತಾಲೂಕುಗಳ ಸಂಖ್ಯೆ 236ಕ್ಕೆ ಏರಿದಂತಾಗಿದೆ. ಮೂಲತಃ ರಾಜ್ಯದಲ್ಲಿನ 176 ತಾಲೂಕುಗಳ ಜತೆಗೆ ಕಳೆದ ಆರು ವರ್ಷಗಳ ಅವಧಿಯಲ್ಲಿ 49 ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದೀಗ ಮತ್ತೆ 9 ತಾಲೂಕುಗಳ ಸೇರ್ಪಡೆ ಮಾಡಲಾಗಿದೆ.

ಹಿನ್ನಲೆ

 • ರಾಜ್ಯದ ಕಂದಾಯ ಇಲಾಖೆಯ ಆಡಳಿತದ ವಿಕೇಂದ್ರೀಕರಣ ನೀತಿಗೆ ಅನುಸಾರವಾಗಿ ಹಿಂದಿನ ಹಲವಾರು ತಾಲೂಕು ಪುನಾರಚನೆ ಆಯೋಗಗಳ ಶಿಫಾರಸನ್ನು ಗಮನದಲ್ಲಿಟ್ಟುಕೊಂಡು ಬಜೆಟ್​ನಲ್ಲಿ ಘೋಷಿಸಿದ ನಾಲ್ಕು ಹಾಗೂ ಹೊಸದಾಗಿ ಐದು ಪಟ್ಟಣಗಳನ್ನು ತಾಲೂಕು ಕೇಂದ್ರಗಳಾಗಿ ರಚಿಸಲು ಸಂಪುಟ ತೀರ್ವನಿಸಿದೆ.

ಕ್ರಾಂತಿವೀರ ಆಜಾದ್

2.

ಸುದ್ಧಿಯಲ್ಲಿ ಏಕಿದೆ ? ಆಲ್​ಫ್ರೆಡ್ ಉದ್ಯಾನವನ್ನು ಚಂದ್ರಶೇಖರ್ ಆಜಾದ್ ಉದ್ಯಾನವನ್ನಾಗಿ ಮರುನಾಮಕರಣ ಮಾಡಲಾಗಿದೆ.

ಹಿನ್ನಲೆ

 • 1931ರ ಫೆ.27ರಂದು ಆಜಾದ್ ಅಲಹಾಬಾದ್​ನ ಆಲ್​ಫ್ರೆಡ್ ಉದ್ಯಾನದಲ್ಲಿ ತಮ್ಮ ಕೆಲ ಸಂಗಡಿಗರನ್ನು ಭೇಟಿ ಮಾಡಿದ. ಇದರ ಮಾಹಿತಿ ಅರಿತ ಪೊಲೀಸರು ಉದ್ಯಾನವನ್ನು ಸುತ್ತವರಿದರು.
 • ಆದರೆ ಪೊಲೀಸರೊಂದಿಗೆ ವೀರೋಚಿತ ಹೋರಾಟ ನಡೆಸಿದ ಆಜಾದ್ ಮೂವರು ಪೊಲೀಸರನ್ನು ಕೊಂದುಹಾಕಿದ. ತಮ್ಮ ರಿವಾಲ್ವರ್​ನಲ್ಲಿ ಒಂದೇ ಗುಂಡು ಉಳಿದಾಗ ಇನ್ನೂ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ನಿರ್ಧರಿಸಿ ಆ ಗುಂಡನ್ನು ತಾನೇ ಹೊಡೆದುಕೊಂಡು ಹುತಾತ್ಮನಾದ. ಆಜಾದ್ ಯಾವಾಗಲೂ ಹೇಳುತ್ತಿದ್ದಂತೆ ಬಂಧನಕ್ಕೆ ಒಳಗಾಗದೆ ಸ್ವತಂತ್ರನಾಗಿಯೇ ಹುತಾತ್ಮನಾದ.

ಚಂದ್ರಶೇಖರ ಆಜಾದ್‌‌‌

 • ಚಂದ್ರಶೇಖರ ಆಜಾದ್‌‌‌ ಎಂದೇ ಹೆಚ್ಚು ಗುರುತಿಸಲ್ಪಡುವ ಚಂದ್ರಶೇಖರ ಸೀತಾರಾಮ್‌‌ ತಿವಾರಿ ಯವರು ಭಾರತದ ಬಹು ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದು, ಅವರನ್ನು ಭಗತ್‌‌ ಸಿಂಗ್‌‌ರ ಮಾರ್ಗದರ್ಶಕರೆಂದು/ಗುರುಗಳೆಂದು ಪರಿಗಣಿಸಲಾಗುತ್ತದೆ.
 • 1919ರ ಜಲಿಯನ್ ವಾಲಾ ಬಾಗ್ ಘಟನೆಯಲ್ಲಿ ಅಮಾಯಕ ಭಾರತೀಯರನ್ನು ಬ್ರಿಟಿಷ್ ಪೊಲೀಸರು ಗುಂಡಿಕ್ಕಿ ಕೊಂದ ದುರಂತ ಇಡೀ ದೇಶದಲ್ಲಿ ತಲ್ಲಣದ ಜತೆಗೆ ಆಕ್ರೋಶದ ಅಲೆಯನ್ನೂ ಮೂಡಿಸಿತ್ತು. ಆಗ ಬಾಲಕ ಚಂದ್ರಶೇಖರ್ ತಿವಾರಿಯ ವಯಸ್ಸು ಕೇವಲ
 • ಜಲಿಯನ್ ವಾಲಾ ಬಾಗ್ ದುರಂತ ಚಂದ್ರಶೇಖರ್ ಮನಸ್ಸನ್ನೂ ಬಹುವಾಗಿ ಕಲುಕಿತು. ಬ್ರಿಟಿಷರಿಗೆ ಅಹಿಂಸೆಯ ಮೂಲಕವಲ್ಲ ಅವರ ಭಾಷೆಯಲ್ಲೇ (ಕ್ರಾಂತಿಕಾರಿ ಮಾರ್ಗ) ಉತ್ತರ ನೀಡಬೇಕು ಎಂದುಕೊಂಡ ಚಂದ್ರಶೇಖರ್ 13ನೇ ವಯಸ್ಸಿಗೇ ಕ್ರಾಂತಿಕಾರಿಗಳ ಸಂಪರ್ಕಕ್ಕೆ ಬಂದ.

ಆಜಾದ್ ಹೆಸರಿನ ಹಿನ್ನಲೆ

 • 1921ರಲ್ಲಿ ಗಾಂಧೀಜಿ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಘೊಷಿಸಿದಾಗ ಚಂದ್ರಶೇಖರ್ ಎದೆಯಲ್ಲಿ ಬ್ರಿಟಿಷರ ವಿರುದ್ಧ ಉರಿಯುತ್ತಿದ್ದ ಆಕ್ರೋಶದ ಬೆಂಕಿ ಜ್ವಾಲಾಮುಖಿಯಾಗಿ ಸ್ಪೋಟಗೊಂಡಿತು. ಪರಿಣಾಮ, ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಬಾಲಕ ಆಜಾದ್.
 • ಹೀಗೆ ಹೋರಾಟದಲ್ಲಿ ಭಾಗಿಯಾಗಿದ್ದಾಗ ಮೊದಲ ಬಾರಿ ಬಂಧನಕ್ಕೊಳಗಾದ. ಆಗ ಆ ಬಾಲ ಕ್ರಾಂತಿಕಾರಿಗೆ ಬರೀ 15 ವರ್ಷ. ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟರು ಹೆಸರು ಕೇಳಿದಾಗ ‘ಆಜಾದ್’ ಎಂದು ಗರ್ಜಿಸಿದ! ತಂದೆಯ ಹೆಸರು ಕೇಳಿದಾಗ ‘ಸ್ವಾಧೀನತಾ’ ಎಂದು ಉತ್ತರಿಸಿದ. ಬಾಲಕನ ಈ ಉತ್ತರಕ್ಕೆ ಹೌಹಾರಿದ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್​ನಿಗೆ 15 ಛಡಿಏಟುಗಳ ಶಿಕ್ಷೆ ವಿಧಿಸಿದರು. ಆದರೆ ಪ್ರತಿ ಏಟಿಗೂ ‘ಭಾರತ ಮಾತಾ ಕೀ ಜೈ’ ಘೊಷಣೆ ಹಾಕಿ ಶೌರ್ಯ, ಸಾಹಸ ಹಾಗೂ ಆತ್ಮಸ್ಥೈರ್ಯದಿಂದ ಬ್ರಿಟಿಷರಿಗೇ ದಂಗುಬಡಿಸಿದ. ಅಂದಿನಿಂದ ಚಂದ್ರಶೇಖರ್ ತಿವಾರಿ ಚಂದ್ರಶೇಖರ್ ಆಜಾದ್ ಆದ.
 • ಚೌರಿಚೌರಾ ಘಟನೆಯ ನಂತರ ಗಾಂಧೀಜಿ ದಿಢೀರನೆ ಅಸಹಕಾರ ಚಳವಳಿ ಸ್ಥಗಿತಗೊಳಿಸಿದ್ದರಿಂದ ಸಾವಿರಾರು ಯುವಕರಂತೆ ಆಜಾದ್ ಕೂಡ ಗಾಂಧೀಜಿ ಬಗ್ಗೆ ಭ್ರಮನಿರಸನ ಹೊಂದಿ, ಹೋರಾಟದ ದಾರಿಯನ್ನೇ ಬದಲಿಸಿದ.
 • ರಾಮಪ್ರಸಾದ್ ಬಿಸ್ಮಿಲ್, ಸಚೀಂದ್ರನಾಥ್ ಸಾನ್ಯಾಲ್, ಯೋಗೇಶಚಂದ್ರ ಚಟರ್ಜಿ ಅವರು 1924ರಲ್ಲಿ ಉತ್ತರ ಭಾರತದ ಕ್ರಾಂತಿಕಾರಿಗಳನ್ನು ಸೇರಿಸಿಕೊಂಡು ಸ್ಥಾಪಿಸಿದ ‘ಹಿಂದುಸ್ಥಾನಿ ಪ್ರಜಾತಾಂತ್ರಿಕ ಸಂಘ’ಕ್ಕೆ ಸೇರಿ ಹೋರಾಟ ತೀವ್ರಗೊಳಿಸಿದ. ಅಲ್ಲದೆ, 1857ರ ಬಳಿಕ ಶಸ್ತ್ರಾಸ್ತ್ರಸಮೇತ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಕ್ರಾಂತಿಕಾರಿ ಎನಿಸಿಕೊಂಡ.
 • 1928ರಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಪೊಲೀಸರ ಲಾಠಿಚಾರ್ಜ್​ನಲ್ಲಿ ಮೃತರಾದಾಗ ಆಜಾದ್ ಸಿಂಹದಂತೆ ಸಿಡಿದೆದ್ದ. ಲಾಲಾ ಸಾವಿನ ಪ್ರತೀಕಾರವನ್ನು ತೀರಿಸಿಕೊಳ್ಳಲು ಯೋಜನೆ ರೂಪಿಸಿದ. ಲಾಠಿ ಪ್ರಹಾರಕ್ಕೆ ಕಾರಣವಾಗಿದ್ದ ಜಾನ್ ಪಾಯಂಟ್ಜ್ ಸಾಂಡರ್ಸ್​ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಘಟನೆಯಿಂದ ಬ್ರಿಟಿಷರು ಅಕ್ಷರಶಃ ಬೆಚ್ಚಿಬಿದ್ದರು. ಸಾಂಡರ್ಸನ್ ಹತ್ಯೆಯ ಬಳಿಕ ಆಜಾದ್ ಬಂಧನಕ್ಕೆ ಪೊಲೀಸರು ಹರಸಾಹಸ ನಡೆಸಿದರು.

ಕದಂಬ ನೌಕಾನೆಲೆಯಲ್ಲಿ ಹೈ ಅಲರ್ಟ್‌

3.

ಸುದ್ಧಿಯಲ್ಲಿ ಏಕಿದೆ ? ಭಾರತೀಯ ವಾಯುಪಡೆ ಎಲ್‌ಒಸಿ ದಾಟಿ ಪಾಕ್‌ ಮೇಲೆ ಏರ್‌ ಸ್ಟ್ರೈಕ್‌ ನಡೆಸಿದ ಬೆನ್ನಲ್ಲೇ ಕಾರವಾರದಲ್ಲಿನ ಕದಂಬ ನೌಕಾನೆಲೆಯಲ್ಲಿ ಹೈ ಅಲರ್ಟ್‌ ಘೋಷಣೆ ಆಗಿದೆ.

 • ಏಷ್ಯಾ ಖಂಡದಲ್ಲೇ ದೊಡ್ಡದು ಎಂದು ಬಣ್ಣಿಸಲಾಗುವ ಕದಂಬ ನೌಕಾನೆಲೆಯಲ್ಲಿ ನೌಕಾ ಸೈನಿಕರು ಮತ್ತು ನೌಕಾ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಸುತ್ತಲಿನ ಪ್ರದೇಶಗಳಲ್ಲಿ ಆಗುವ ಎಲ್ಲ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಯುದ್ಧ ಹಡಗುಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದೆ.

ಹಿನ್ನಲೆ

 • ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ 11 ದಿನಗಳ ಬಳಿಕ ಮಂಗಳವಾರ ರಾತ್ರಿ ಭಾರತೀಯ ವಾಯುಪಡೆ ಪಾಕ್‌ ಗಡಿಯೊಳಗೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದೆ. ಈ ದಾಳಿಯಿಂದ ತೀವ್ರ ಮುಖಭಂಗ ಎದುರಿಸಿದ ಪಾಕ್‌ ಪ್ರತಿರೋಧ ಒಡ್ಡುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಕ್ಷಣಾ ನೆಲೆಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗುತ್ತಿದೆ. ಅದರ ಅಂಗವಾಗಿ ಕದಂಬ ನೌಕಾನೆಲೆಯಲ್ಲೂ ಹೈ ಅಲರ್ಟ್‌ ಘೋಷಿಸಲಾಗಿದೆ.

ಐಎನ್ಎಸ್ ಕದಂಬ

 • ಐಎನ್ಎಸ್ ಕದಂಬ ಕರ್ನಾಟಕದ ಕಾರವಾರ ಸಮೀಪವಿರುವ ಭಾರತೀಯ ನೌಕಾಪಡೆಯಾಗಿದೆ. ಮೊದಲ ಹಂತದ ನಿರ್ಮಾಣ, ಪ್ರಾಜೆಕ್ಟ್ ಸೀಬರ್ಡ್ ಎಂಬ ಸಂಕೇತನಾಮವನ್ನು 2005 ರಲ್ಲಿ ಪೂರ್ಣಗೊಳಿಸಲಾಯಿತು ಮತ್ತು 2005 ಮೇ 31 ರಂದು ಬೇಸ್ ಅನ್ನು ನಿಯೋಜಿಸಲಾಯಿತು.
 • 2011 ರಲ್ಲಿ ಹಂತ II ರ ಅಭಿವೃದ್ಧಿ ಪ್ರಾರಂಭವಾಯಿತು. ಐಎನ್ಎಸ್ ಕದಂಬಾ ಈಗ ಭಾರತದ ಮೂರನೆಯ ಅತಿ ದೊಡ್ಡ ನೌಕಾಪಡೆಯಾಗಿದೆ, ಮತ್ತು ಹಂತ IIB ವಿಸ್ತರಣೆಯ ನಂತರ ಪೂರ್ವ ಗೋಳಾರ್ಧದಲ್ಲಿ ಅತಿದೊಡ್ಡ ನೌಕಾ ನೆಲೆಯಾಗುವುದೆಂದು ನಿರೀಕ್ಷಿಸಲಾಗಿದೆ.

ಗಾಂಧಿ ಶಾಂತಿ ಪುರಸ್ಕಾರ 

4.

ಸುದ್ಧಿಯಲ್ಲಿ ಏಕಿದೆ ? ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 2015, 2016, 2017 ಮತ್ತು 2018ನೇ ಸಾಲಿನ ಗಾಂಧಿ ಶಾಂತಿ ಪುರಸ್ಕಾರ ಪ್ರದಾನ ಮಾಡಿದರು.

 • ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರಕ್ಕೆ 2015ನೇ ಸಾಲಿನ ಗಾಂಧಿ ಶಾಂತಿ ಪುರಸ್ಕಾರ, ಇಸ್ಕಾನ್‌ನ ಅಕ್ಷ ಯ ಪಾತ್ರಾ ಫೌಂಡೇಷನ್‌ ಮತ್ತು ಸುಲಭ್‌ ಇಂಟರ್‌ನ್ಯಾಷನಲ್‌ ಸಂಸ್ಥೆಗೆ ಜಂಟಿಯಾಗಿ 2016ನೇ ಸಾಲಿನ ಪ್ರಶಸ್ತಿ, ಏಕಲ್‌ ಅಭಿಯಾನ ಟ್ರಸ್ವ್‌ಗೆ 2017ನೇ ಸಾಲಿನ ಪ್ರಶಸ್ತಿ ಹಾಗೂ 2018ನೇ ಸಾಲಿನ ಪ್ರಶಸ್ತಿಯನ್ನು ಯೋಹಿ ಸಸಾಕಾವಾ ಅವರಿಗೆ ಪ್ರದಾನ ಮಾಡಲಾಯಿತು.

ಗಾಂಧಿ ಶಾಂತಿ ಪ್ರಶಸ್ತಿ

 • ಈ ಪ್ರಶಸ್ತಿಯು ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿ ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಭಾರತ ಸರ್ಕಾರವು ಗಾಂಧಿವಾದವನ್ನು ಪಾಲಿಸಿ ಸಾಮಾಜಿಕ, ಆರ್ಥಿಕ, ಅಥವಾ ರಾಜಕೀಯ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ಪ್ರದಾನ ಮಾಡಲಾಗುತ್ತದೆ.
 • ಪ್ರಶಸ್ತಿಯು ಪ್ರಮಾಣ ಪತ್ರ ಹಾಗೂ ಒಂದು ಕೋಟಿ ರೂಪಾಯಿ ಬಹುಮಾನ ಒಳಗೊಂಡಿದೆ.
 • ಭಾರತದ ಪ್ರಧಾನಿ, ಲೋಕಸಭೆಯ ಪ್ರತಿಪಕ್ಷ ನಾಯಕ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಇಬ್ಬರು ಶ್ರೇಷ್ಠ ವ್ಯಕ್ತಿಗಳು ಪ್ರತಿ ವರ್ಷ ಪ್ರಶಸ್ತಿದಾರರನ್ನು ನಿರ್ಧರಿಸುತ್ತಾರೆ
 • ಅಕ್ಷ ಯ ಪಾತ್ರಾ ಫೌಂಡೇಷನ್‌ನ ಅಧ್ಯಕ್ಷರಾಗಿರುವ ಬೆಂಗಳೂರು ಇಸ್ಕಾನ್‌ನ ಮಧು ಪಂಡಿತ್‌ ದಾಸ್‌ ಅವರು ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು.

ಅಕ್ಷಯ ಪಾತ್ರಾ ಫೌಂಡೇಶನ್

 • ಅಕ್ಷಯ ಪಾತ್ರಾ ಫೌಂಡೇಷನ್ ಭಾರತದಾದ್ಯಂತ ಶಾಲೆಯ ಊಟದ ಕಾರ್ಯಕ್ರಮವನ್ನು ನಡೆಸುವ ಭಾರತದಲ್ಲಿ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ.
 • 2000 ದಲ್ಲಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಹಸಿವಿನ ಕಾರಣಕ್ಕೆ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಧ್ಯೇಯೋದ್ದೇಶದಿಂದ ದೇಶದ 12 ರಾಜ್ಯಗಳ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿದಿನ ಬಿಸಿಯೂಟ ವಿತರಿಸುವ ಕಾಯಕದಲ್ಲಿ ಇಸ್ಕಾನ್‌ ತೊಡಗಿದೆ.

ಖಾಸಗಿ ಚಂದ್ರಯಾನ ಕೈಗೊಂಡ ಮೊದಲ ರಾಷ್ಟ್ರ ಇಸ್ರೇಲ್‌!

5.

ಸುದ್ಧಿಯಲ್ಲಿ ಏಕಿದೆ ? ಖಾಸಗಿಯಾಗಿ ಅಭಿವೃದ್ಧಿ ಪಡಿಸಿದ ಉಪಗ್ರವನ್ನು, ಖಾಸಗಿ ರಾಕೆಟ್‌ ಮೂಲಕ ಖಾಸಗಿ ಉಡಾವಣಾ ಕೇಂದ್ರದಿಂದ ಚಂದ್ರಯಾನ ಕೈಗೊಂಡ ಮೊದಲ ರಾಷ್ಟ್ರ ಇಸ್ರೇಲ್‌ ಎಂಬ ಶ್ಲಾಘನೆಗೆ ಗುರಿಯಾಗಲಿದೆ.

 • ಫೆಬ್ರವರಿ 22ರಂದು ಫ್ಲೋರಿಡಾದ ಕೇಪ್‌ ಕೆನಾವೆರಲ್‌ ಏರ್‌ ಫೋರ್ಸ್‌ ಸ್ಟೇಷನ್‌ನಿಂದ ಸ್ಪೇಸ್‌ಎಕ್ಸ್‌ ಫಾಲ್ಕನ್‌ 9 ರಾಕೆಟ್‌ ಖಾಸಗಿ ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿದೆ. ಏಪ್ರಿಲ್‌ 11ಕ್ಕೆ ಚಂದ್ರನನ್ನು ತಲುಪಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
 • ಈ ಯೋಜನೆಗೆ ಬೆರ್ಷೀಟ್‌ ಎಂದು ಹೆಸರಿಡಲಾಗಿದ್ದು, 2010ರಲ್ಲಿ ನಡೆದ ಗೂಗಲ್‌ ಲೂನಾರ್‌ ಎಕ್ಸ್‌ಪ್ರೈಜ್‌ ಸ್ಪರ್ಧೆಗೆ ಸಿದ್ಧ ಪಡಿಸಿದ್ದಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರೈಜ್‌ ಗೆಲ್ಲದಿದ್ದರೂ, ಸ್ಪೂರ್ತಿ ಪಡೆದ ಬೆರ್ಷೀಟ್‌ ತಂಡ ಚಂದ್ರಯಾನ ಕೈಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ.
 • ಬೆರ್ಷೀಟ್‌ ಎಂಬುದು ಹೀಬ್ರು ಮೂಲದಿಂದ ಬಂದ ಪದವಾಗಿದ್ದು, ‘ಆರಂಭ’ ಎಂಬ ಅರ್ಥವನ್ನು ಹೊಂದಿದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಬೆಂಬಲದೊಂದಿಗೆ ಇಸ್ರೇಲ್‌ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಾದ ಸ್ಪೇಸ್‌ಐಎಲ್‌ ಮತ್ತು ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರಿ ಜತೆಯಾಗಿ ಬೆರ್ಷೀಟ್‌ ಯೋಜನೆಗೆ ಕೈಜೋಡಿಸಿವೆ.
 • ಕ್ಯಾಮೆರಾಗಳು, ಮ್ಯಾಗ್ನೋಮೀಟರ್‌ ಸೇರಿದಂತೆ ಅಗತ್ಯ ಪರಿಕರಗಳನ್ನು ಉಪಗ್ರಹದಲ್ಲಿ ಅಳವಡಿಸಲಾಗಿದೆ. ನಾಸಾದ ಸಣ್ಣ ಲೇಸರ್‌ ರೆಟ್ರೋರಿಫ್ಲೆಕ್ಟರ್‌ಅನ್ನು ಜೋಡಿಸಲಾಗಿದ್ದು, ನ್ಯಾವಿಗೇಷನ್‌ ಟೂಲ್‌ಆಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪರೀಕ್ಷಿಸಲು ಮುಂದಾಗಿದೆ.

ಅಮೇಜಾನ್​ ಕಾಡಿನಲ್ಲಿ ತಿಮಿಂಗಲ ಪತ್ತೆ

6.

ಸುದ್ಧಿಯಲ್ಲಿ ಏಕಿದೆ ? ಮಹಾಸಾಗರಗಳಲ್ಲೇ ಅಪರೂಪಕ್ಕೆ ಕಾಣಸಿಗುವ ಹಂಪ್​ಬ್ಯಾಕ್​ ತಿಮಿಂಗಲದ ಮೃತದೇಹ ಅಮೇಜಾನ್​ ಮಳೆಕಾಡಿನಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ವನ್ಯಜೀವಿ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗೂನುತಿಮಿಂಗಲ

 • ಮೆಗಾಪ್ಟರ ಜಾತಿಗೆ ಸೇರಿದ ಒಂದು ವಿಚಿತ್ರ ಬಗೆಯ ತಿಮಿಂಗಿಲ (ಹಂಪ್ ಬ್ಯಾಕ್ ವೇಲ್). ಸಿಟೇಸಿಯ ಗಣದ ಮಿಸ್ಟಿಸೆಟಿ ಉಪಗಣಕ್ಕೆ ಸೇರಿದೆ. ಈ ತಿಮಿಂಗಿಲದ ಬೆನ್ನಿನ ಮೇಲೆ ಸಣ್ಣದಾದ ಮತ್ತು ವಕ್ರವಾಗಿರುವ ಒಂಟಿ ಈಜುರೆಕ್ಕೆ ಇರುವುದರಿಂದಲೂ ಇದು ನೀರಿನಿಂದ ಹೊರಬರುವಾಗ ಗೂನಿನಂತೆ ಬಾಗಿರುವ ಹಾಗೆ ಕಾಣುವುದರಿಂದಲೂ ಇದಕ್ಕೆ ಗೂನು ತಿಮಿಂಗಿಲ ಎಂದು ಹೆಸರು ಬಂದಿದೆ.
 • ಸಾಮಾನ್ಯವಾಗಿ ತಿಮಿಂಗಿಲಗಳಲ್ಲಿ ಹಿಂಗಾಲುಗಳಿಲ್ಲ. ಆದರೆ ಗೂನು ತಿಮಿಂಗಿಲ ತನ್ನ ಭ್ರೂಣಾವಸ್ಥೆಯಲ್ಲಿ ಹಿಂಗಾಲುಗಳ ಕುರುಹುಗಳನ್ನು ಪ್ರದರ್ಶಿಸುತ್ತದೆ. ತಿಮಿಂಗಿಲ ಬೆಳೆದಂತೆಲ್ಲ ಇವು ಅದೃಶ್ಯವಾಗುತ್ತವೆ.
 • ಗೂನು ತಿಮಿಂಗಿಲಗಳು ಎಲ್ಲ ಸಾಗರಗಳಲ್ಲೂ ಕಂಡುಬರುತ್ತವೆ. ಒಂದು ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಇವು ತಮ್ಮ ಸ್ನೇಹ ಸ್ವಭಾವ ಮತ್ತು ವಿನೋದಪರತೆಗಳಿಂದಾಗಿ ಬೇಟೆಗಾರರಿಗೆ ಸುಲಭವಾಗಿ ಆಹುತಿಯಾಗುವುದರಿಂದ ಇವುಗಳ ಸಂಖ್ಯೆ ಇಳಿದಿದೆ. ಆದರೆ ಈಗ ಕಾನೂನುರೀತ್ಯ ಇವುಗಳನ್ನು ಸಂರಕ್ಷಿಸಲಾಗಿದೆ.

Related Posts
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪೌರತ್ವ ವಿಧೇಯಕ ಸುದ್ಧಿಯಲ್ಲಿ ಏಕಿದೆ ?ಅಕ್ರಮ ವಲಸಿಗರ ಪಿಡುಗಿಗೆ ತಡೆ ಹಾಕುವ ಮಹತ್ವದ ಪೌರತ್ವ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿದೆ. ಏನಿದು ಪೌರತ್ವ ವಿಧೇಯಕ? ಪ್ರಸ್ತುತ ದೇಶದಲ್ಲಿ ಪೌರತ್ವ ಕಾಯಿದೆ-1955ರ ಪ್ರಕಾರ ವಲಸಿಗರನ್ನು ಗುರುತಿಸಲಾಗುತ್ತಿದೆ. ಈ ಕಾಯಿದೆಗೆ ತಿದ್ದುಪಡಿ ಮಾಡುವ ...
READ MORE
“08 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿರಾಗಿಯ ಮಹಾಮಜ್ಜನಕ್ಕೆ ಧರ್ಮಸ್ಥಳ ಸಜ್ಜು ಸುದ್ಧಿಯಲ್ಲಿ ಏಕಿದೆ ? ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಈ ಶತಮಾನದ ಎರಡನೇ ಮಹಾಮಜ್ಜನಕ್ಕೆ ಸಿದ್ಧವಾಗಿದ್ದು, ಧಾರ್ವಿುಕ ಕಾರ್ಯಕ್ರಮಗಳು ಮೇಳೈಸಲಿವೆ. ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ...
READ MORE
“06 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಐಬಿಪಿಎಸ್‌ನಲ್ಲಿ ಪ್ರಾದೇಶಿಕ ನೇಮಕ ಪದ್ಧತಿ ಸುದ್ಧಿಯಲ್ಲಿ ಏಕಿದೆ ?ಐಬಿಪಿಎಸ್‌ನ ಕೇಂದ್ರೀಕೃತ ಪದ್ಧತಿ ರದ್ದುಪಡಿಸಿ ಹಿಂದಿನ ಪ್ರಾದೇಶಿಕ ನೇಮಕ ಪದ್ಧತಿ ಜಾರಿ, ಪ್ರಾದೇಶಿಕ ಭಾಷೆಗಳಿಗೆ ಒತ್ತು ಸೇರಿದಂತೆ ನಾನಾ ಬೇಡಿಕೆಯನ್ನು ಕೇಂದ್ರದ ಗಮನ ಸೆಳೆಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಸಾಹಿತಿಗಳ ನಿಯೋಗ ಕೇಂದ್ರ ...
READ MORE
“01 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
Aids: ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಎಚ್‌ಐವಿ/ಏಡ್ಸ್‌ ಸೋಂಕಿತರ ಸಂಖ್ಯೆ ಶೇ. 25ರಷ್ಟು ಕುಸಿದಿದ್ದು, ಆ ಮೂಲಕ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 8 ರಿಂದ 9ನೇ ಸ್ಥಾನಕ್ಕೆ ಇಳಿದಿದೆ. ರಾಜ್ಯದಲ್ಲಿ ಶೇ.38 ಲಕ್ಷ ಎಚ್‌ಐವಿ ಸೋಂಕಿತರಿದ್ದಾರೆ. ...
READ MORE
04th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಸ್ವಚ್ಛ ಸರ್ವೆಕ್ಷಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಸುದ್ಧಿಯಲ್ಲಿ ಏಕಿದೆ?ಸ್ವಚ್ಛ ಸರ್ವೆಕ್ಷಣ ಅಭಿಯಾನದಲ್ಲಿ ಬೆಂಗಳೂರಿಗೆ ಉತ್ತಮ ಸ್ಥಾನ ದೊರಕಿಸಿಕೊಡಲು ಬಿಬಿಎಂಪಿ ಈ ಬಾರಿ ಹಲವು ಕ್ರಮ ಕೈಗೊಳ್ಳುತ್ತಿದೆ. ಪ್ರಮುಖವಾಗಿ ಅಭಿಯಾನದಲ್ಲಿ ಬೆಂಗಳೂರಿನ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಮಾಡಲು ಸಾಮಾಜಿಕ ಜಾಲತಾಣ, ಎಫ್​ಎಂ ...
READ MORE
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸಿವಿಜಿಲ್’ ಮೊಬೈಲ್ ಆಪ್ ಸುದ್ಧಿಯಲ್ಲಿ ಏಕಿದೆ ?ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ’ ಸಿವಿಜಿಲ್’ ಮೊಬೈಲ್ ಆಪ್ ಹೊರತರುತ್ತಿದೆ. ಆಪ್​ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ. ಹಿನ್ನಲೆ ಕಳೆದ ...
READ MORE
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪ್ರಸಾದ ತಯಾರಿಕೆಗೂ ಲೈಸೆನ್ಸ್ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಪ್ರಸಾದ ವಿನಿಯೋಗಿಸುವ 30 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಆಹಾರ ತಯಾರಿಕಾ ಘಟಕಗಳಿಗೆ ಇನ್ನು ಲೈಸನ್ಸ್ ಕಡ್ಡಾಯವಾಗಲಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ 37 ಸಾವಿರ ದೇವಾಲಯಗಳೂ ಸೇರಿ 2 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಈ ಪೈಕಿ ...
READ MORE
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಲ್ವರ್ಗ ಮೀಸಲು ಜಾರಿ ಸುದ್ಧಿಯಲ್ಲಿ ಏಕಿದೆ ?ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನಿಕ ಸವಲತ್ತು ಅಧಿಕೃತವಾಗಿ ಅನುಷ್ಠಾನಗೊಂಡಿದೆ. ಈ ದಿಸೆಯಲ್ಲಿನ ಸಂವಿಧಾನ ತಿದ್ದುಪಡಿಗೆ ರಾಷ್ಟ್ರಪತಿಗಳ ಸಮ್ಮತಿ ಲಭಿಸಿತ್ತು. ''ಸಂವಿಧಾನ (ತಿದ್ದುಪಡಿ) ಕಾಯಿದೆ -2019ರ ವಿಧಿ ...
READ MORE
“26th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಪರಿಸರ ಸೂಕ್ಷ್ಮ ವಲಯ ಸುದ್ಧಿಯಲ್ಲಿ ಏಕಿದೆ ? ಕೊಡಗು ಅತಿವೃಷ್ಠಿ ಹಾನಿಯಿಂದ ಪಾಠ ಕಲಿಯದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಹೊರಡಿಸಿರುವ ಅಧಿಸೂಚನೆಯನ್ನು ಮತ್ತೊಮ್ಮೆ ವಿರೋಧಿಸಲು ನಿರ್ಧರಿಸಿದೆ. ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಆಗಿರುವ ತೊಂದರೆಯೇ ಮಳೆ ...
READ MORE
“11 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರ್‌ಪೋರ್ಟ್‌ ಭಾಗ್ಯ ಸುದ್ಧಿಯಲ್ಲಿ ಏಕಿದೆ ?ವಿಮಾನ ನಿಲ್ದಾಣ ಹೊಂದಿರದ ರಾಷ್ಟ್ರದ ಏಕೈಕ ರಾಜ್ಯವಾಗಿದ್ದ ಅರುಣಾಚಲ ಪ್ರದೇಶಕ್ಕೆ ಏರ್‌ಪೋರ್ಟ್‌ ಭಾಗ್ಯ ಸಿಕ್ಕಿದೆ. ಈಗಾಗಲೇ ರಾಷ್ಟ್ರದ 29 ರಾಜ್ಯಗಳಲ್ಲಿ ವಿಮಾನ ನಿಲ್ದಾಣ ಸೌಲಭ್ಯವಿದೆ. ಆದರೆ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ವಿಮಾನ ನಿಲ್ದಾಣದ ಕೊರತೆಯಿತ್ತು. ಪ್ರಧಾನಿ ನರೇಂದ್ರ ಮೋದಿ ...
READ MORE
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“08 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“06 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“01 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
04th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“26th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“11 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *