“27th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ವಾಹನದಟ್ಟಣೆ ಬೆಂಗಳೂರು ನಂ.2

 • ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಇಡೀ ರಾಷ್ಟ್ರಕ್ಕೆ ವಾರ್ಷಿಕ 1.5 ಲಕ್ಷ ಕೋಟಿ ರೂ. ನಷ್ಟವಾಗುತ್ತದೆ ಎಂಬುದು ಇತ್ತಿಚಿನ ಅಧ್ಯಯನ ವರದಿ ತಿಳಿಸಿದೆ.
 • ಬೆಂಗಳೂರು ಸೇರಿ ರಾಷ್ಟ್ರದ ನಾಲ್ಕು ಪ್ರಮುಖ ನಗರಗಳಾದ ದೆಹಲಿ, ಮುಂಬೈ ಮತ್ತು ಕೋಲ್ಕತದಲ್ಲಿ ನಡೆಸಲಾದ ಅಧ್ಯಯನದಿಂದ ಈ ಅಂಶ ಸ್ಪಷ್ಟವಾಗಿದೆ. ಇನ್ನುಳಿದ ನಗರಗಳನ್ನೂ ಇದಕ್ಕೆ ಸೇರಿಸಿದರೆ, ವಾರ್ಷಿಕವಾಗಿ ಆಗುವ ನಷ್ಟ ಇನ್ನಷ್ಟು ಲಕ್ಷ ಕೋಟಿ ರೂಪಾಯಿಗೆ ಹೆಚ್ಚಾಗಬಹುದು.
 • ಕಿರಿದಾದ ರಸ್ತೆಗಳು: ರಾಷ್ಟ್ರದಲ್ಲೇ ಅತಿಹೆಚ್ಚು ವಾಹನದಟ್ಟಣೆ ಸಮಸ್ಯೆ ಇರುವ ನಗರಗಳ ಪಟ್ಟಿಯಲ್ಲಿ ಕೋಲ್ಕತಕ್ಕೆ ಮೊದಲ ಸ್ಥಾನ. ಇಲ್ಲಿನ ರಸ್ತೆಗಳು ಕಿರಿದಾಗಿರುವುದಲ್ಲದೆ, ರಸ್ತೆಗಳ ಜಾಲದಲ್ಲಿ ಸಂಪರ್ಕದ ಕೊರತೆ ಇರುವುದು ಇದಕ್ಕೆ ಕಾರಣ ಎಂದು ಅಧ್ಯಯನ ವರದಿ ತಿಳಿಸಿದೆ. ವರದಿಯ ಪ್ರಕಾರ ಕೋಲ್ಕತ ಕೇವಲ ಶೇ.6 ರಸ್ತೆ ಜಾಲ ಹೊಂದಿದೆ.
 • ಈ ಪಟ್ಟಿಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ ದೊರೆತಿದೆ. ಅಂದಾಜು 1 ಕೋಟಿ ನೋಂದಾಯಿತ ವಾಹನಗಳು ಇದ್ದಾಗ್ಯೂ ಹಾಗೂ ಗರಿಷ್ಠ ಪ್ರಮಾಣದ ವಾಯು ಮಾಲಿನ್ಯ ಸಮಸ್ಯೆ ಇದ್ದರೂ ಈ ಪಟ್ಟಿಯಲ್ಲಿ ದೆಹಲಿ 3ನೇ ಸ್ಥಾನದಲ್ಲಿದೆ.
 • ರಾಷ್ಟ್ರರಾಜಧಾನಿಯ ಶೇ.12 ರಸ್ತೆಯ ಜಾಲ ಉತ್ತಮವಾಗಿದ್ದು, ಒಂದಕ್ಕೊಂದು ಸಂಪರ್ಕ ಹೊಂದಿರುವುದು ಇದಕ್ಕೆ ಕಾರಣ. ದೈನಂದಿನ ಕೆಲಸಕಾರ್ಯಗಳಿಗೆ ಸಾರ್ವಜನಿಕ ಸಾರಿಗೆ ಬಳಸುವ ವಿಷಯದಲ್ಲಿ ಬೆಂಗಳೂರು 4ನೇ ಸ್ಥಾನ ಪಡೆದಿದೆ.
 • ಮುಂಬೈ ಮೊದಲ ಸ್ಥಾನದಲ್ಲಿದ್ದರೆ, ಕೋಲ್ಕತ 2ನೇ ಸ್ಥಾನ ಪಡೆದುಕೊಂಡಿದೆ ಎಂದು ವರದಿ ಸ್ಪಷ್ಟಪಡಿಸಿದೆ. ದೈನಂದಿನ ಓಡಾಟಕ್ಕೆ ಸಾರ್ವಜನಿಕ ವಾಹನಗಳಿಗಿಂತಲೂ ಸ್ವಂತ ವಾಹನ ಬಳಸುವ ವಿಷಯದಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ.
 • ಇಲ್ಲಿನ ಶೇ.45 ಜನರು ವೈಯಕ್ತಿಕ ಸಂಚಾರಕ್ಕಾಗಿ ಕಾರುಗಳನ್ನೇ ಬಳಸುತ್ತಾರೆ. ಈ ಪಟ್ಟಿಯಲ್ಲೂ ಬೆಂಗಳೂರಿಗೆ 2ನೇ ಸ್ಥಾನ ದೊರೆತಿದೆ ಎಂದು ವರದಿ ಹೇಳಿದೆ.

ವರ್ಷದ ಕೊನೆಗೆ ಎಂಜಿನ್ರಹಿತ ರೈಲು ಸಂಚಾರ

 • ಎಂಜಿನ್‌ರಹಿತ’ ಟ್ರೇನ್‌–18 ಎಂಬ ವಿನೂತನ ರೈಲು ಇದೇ ಜುಲೈಯಲ್ಲಿ ಸಿದ್ಧವಾಗಲಿದೆ. ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ಈ ರೈಲು ಪ್ರತಿಷ್ಠಿತ ಶತಾಬ್ದಿ ರೈಲಿಗೆ ಪರ್ಯಾಯವಾಗಬಹುದು ಎಂದು ಭಾವಿಸಲಾಗಿದೆ. ಚೆನ್ನೈನ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌) ಈ ರೈಲನ್ನು ಸಿದ್ಧಪಡಿಸಿದೆ.
 • 16 ಬೋಗಿಗಳಿರುವ ಮೊದಲ ರೈಲು ದೆಹಲಿ– ಭೋಪಾಲ್‌ ಅಥವಾ ಚೆನ್ನೈ–ಬೆಂಗಳೂರು ನಡುವೆ ಈ ವರ್ಷದ ಕೊನೆಗೆ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಅದಕ್ಕೂ ಮೊದಲು ಪರೀಕ್ಷಾರ್ಥ ಸಂಚಾರ ನಡೆಯಲಿದೆ.
 • ಈ ರೈಲಿಗೆ ಪ್ರತ್ಯೇಕವಾದ ಎಂಜಿನ್‌ ಇರುವುದಿಲ್ಲ. ಪ್ರತಿ ಬೋಗಿಯ ಕೆಳಭಾಗದಲ್ಲಿ ಅಳವಡಿಸಲಾಗುವ ಕರ್ಷಣ ಯಂತ್ರ ಬೋಗಿಯನ್ನು ಮುಂದಕ್ಕೆ ಒಯ್ಯುತ್ತದೆ. ಇದು ಸಂಪೂರ್ಣವಾಗಿ ದೇಶೀಯವಾಗಿ ತಯಾರಾಗುತ್ತಿದೆ.
 • ಇದು ಸಂಪೂರ್ಣವಾಗಿ ದೇಶೀಯ ರೈಲು ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು’ ಎಂದು ಐಸಿಎಫ್‌ನ ಪ್ರಧಾನ ವ್ಯವಸ್ಥಾಪಕ ತಿಳಿಸಿದ್ದಾರೆ.
 • ಟ್ರೇನ್‌–18ರ ಮೊದಲ ಸಂಚಾರ ದೆಹಲಿ–ಭೋಪಾಲ್‌ ಮಾರ್ಗದಲ್ಲಿ ನಡೆಯುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ ಬೆಂಗಳೂರು–ಚೆನ್ನೈ ಮಾರ್ಗವು ಈ ರೈಲಿನ 160 ಕಿ.ಮೀ. ವೇಗವನ್ನು ತಾಳಿಕೊಳ್ಳುವಷ್ಟು ಗಟ್ಟಿಯಾಗಿಲ್ಲ. ಈ ಮಾರ್ಗದ ಗರಿಷ್ಠ ವೇಗ ಗಂಟೆಗೆ 120 ಕಿ.ಮೀ.ಮಾತ್ರ.

ಭಾರತ-ಚೀನಾ ಸಭೆಯತ್ತ ವಿಶ್ವದ ಚಿತ್ತ

 • ವಿಶ್ವದ ಘಟಾನುಘಟಿ ರಾಷ್ಟ್ರಗಳ ಮಧ್ಯೆ ಶೀತಲ ಸಮರ ತಾರಕಕ್ಕೇರುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ನಡುವಿನ ಅನೌಪಚಾರಿಕ ಮಾತುಕತೆ ವಿಶ್ವದ ಗಮನ ಸೆಳೆದಿದೆ.
 • ಭಾರತ-ಚೀನಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂತಹದೊಂದು ಅನೌಪಚಾರಿಕ ಮಾತುಕತೆಗೆ ವೇದಿಕೆ ತಯಾರಾಗಿದೆ. ಪ್ರಧಾನಿ ಮೋದಿ ಹಾಗೂ ಜಿನ್​ಪಿಂಗ್ ಅವರು ಏ.27 ಹಾಗೂ 28ರಂದು ಚೀನಾ ಕಮ್ಯುನಿಸ್ಟ್​ರ ಶಕ್ತಿ ಕೇಂದ್ರ ವುಹಾನ್​ನಲ್ಲಿ ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ.
 • ಭಾರತ ಹಾಗೂ ಚೀನಾ ನಡುವಿನ ಸಂಬಂಧ ಸುಧಾರಣೆಯೇ ಈ ಮಾತುಕತೆಯ ಉದ್ದೇಶವಾಗಿದೆ ಎಂದಿದೆಯಾದರೂ ವಿಶ್ವ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ನಡೆಯುತ್ತಿರುವ ವಾಣಿಜ್ಯ ಹೋರಾಟದ ಭಾಗವಾಗಿ ಈ ಸಭೆ ನಡೆಯುತ್ತಿದೆ ಎಂದು ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ.
 • ಮುಂದಿನ ಜೂನ್​ನಲ್ಲಿ ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ ಮೋದಿ ಹಾಗೂ ಜಿನ್​ಪಿಂಗ್ ನಡುವಿನ ಅಧಿಕೃತ ಭೇಟಿ ಇದ್ದರೂ ಈ ಅನೌಪಚಾರಿಕ ಸಭೆಯ ಬಗ್ಗೆ ವಿಶ್ವ ಕುತೂಹಲದಿಂದ ನೋಡುತ್ತಿದೆ.
 • ಕಳೆದೊಂದು ವರ್ಷದಿಂದ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹಳಸಿರುವುದನ್ನು ಸುಧಾರಿಸಿಕೊಳ್ಳುವುದು ಈ ಸಭೆಯ ಮುಖ್ಯ ಉದ್ದೇಶ ಎಂದು ಚೀನಾ ಹಾಗೂ ಭಾರತದ ಅಧಿಕಾರಿಗಳು ಹೇಳುತ್ತಿದ್ದಾರೆ.
 • ಅದರೆ ಇದಕ್ಕೂ ಪ್ರಮುಖವಾಗಿ ವಿಶ್ವ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಮೆರಿಕ-ಚೀನಾ ವಾಣಿಜ್ಯ ಸಮರದ ಮುಂದಿನ ಭಾಗದ ಬಗ್ಗೆ ಪ್ರಮುಖ ನಿರ್ಧಾರಗಳು ಆಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ನೇಪಾಳ, ಟಿಬೆಟ್, ಪಾಕ್​ಗೂ ಆತಂಕ

 • ವಿಶ್ವ ರಾಜಕೀಯದಲ್ಲಿನ ಸ್ಥಾನ ಪಲ್ಲಟದಿಂದ ನೇಪಾಳ ಹಾಗೂ ಪಾಕಿಸ್ತಾನವು ಚೀನಾ ಆಪ್ತ ವಲಯಕ್ಕೆ ಸೇರಿವೆ. ಇತ್ತ ಪಾಕಿಸ್ತಾನದ ಜತೆಗಿನ ಚೀನಾ ಸಂಬಂಧ ಹಳಸುವಂತೆ ಮಾಡಲು ಟಿಬೆಟ್ ಜತೆಗಿನ ಸಂಬಂಧವನ್ನು ಭಾರತ ಕಡಿದುಕೊಳ್ಳುವ ಮುನ್ಸೂಚನೆಯನ್ನೂ ನೀಡಿದೆ.
 • ಹೀಗಾಗಿ ಈ ಮೂರೂ ದೇಶಗಳ ಪ್ರಮುಖರು ಮೋದಿ-ಕ್ಸಿ ಜಿನ್​ಪಿಂಗ್ ಸಭೆಯ ಫಲಿತಾಂಶವನ್ನು ಕೊಂಚ ಆತಂಕದಿಂದಲೇ ನೋಡುತ್ತಿದ್ದಾರೆ.

ರಾಜತಾಂತ್ರಿಕ ಗೆಲುವು

 • ಮೋದಿ ಪ್ರಧಾನಿಯಾಗುತ್ತಿದ್ದಂತೆ ಭಾರತಕ್ಕೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಆಗಮಿಸಿ ದ್ವಿಪಕ್ಷೀಯ ಸಂಬಂಧದ ಹೊಸ ಭರವಸೆ ಮೂಡಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಭೇಟಿಯ ಬೆನ್ನಲ್ಲೇ ಡೋಕ್ಲಾಂ ಗಡಿತಂಟೆ ಕುರಿತು ಚೀನಾ ಕಾಲ್ಕೆರೆದುಕೊಂಡು ನಿಂತಿರುವುದು ಚೀನಾ ಬದಲಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿತು.
 • ಆದಾಗ್ಯೂ ಮೋದಿ ಹಾಗೂ ಜಿನ್​ಪಿಂಗ್ ನಾಲ್ಕು ಭಾರೀ ಭೇಟಿ ಮಾಡಿ ಮಾತನಾಡಿದರು, ಚೀನಾಕ್ಕೆ ಮೂರು ಭೇಟಿ ನೀಡಿದರು. ಇದಾದ ಬಳಿಕ 2017ರ ಬ್ರಿಕ್ಸ್ ಶೃಂಗದ ಸಂದರ್ಭದಲ್ಲಿ ಅನೌಪಚಾರಿಕ ಮಾತುಕತೆಯ ಪ್ರಸ್ತಾಪವನ್ನು ಭಾರತವೇ ಮುಂದಿಟ್ಟಿತ್ತು.
 • ನಂತರದ ದಿನಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಇಲಾಖೆಯಯು ಈ ಪ್ರಸ್ತಾಪ ಕುರಿತ ಮುಂದಿನ ರಾಜತಾಂತ್ರಿಕ ಪ್ರಯತ್ನ ಸಾಗಿ ಅನೌಪಚಾರಿಕ ಸಭೆಯವರೆಗೆ ಬಂದು ನಿಂತಿದೆ. ಈ ಸಭೆಯ ಫಲಿತಾಂಶವು ಅಧಿಕೃತವಾಗಿ ಜೂನ್​ನಲ್ಲಿ ನಡೆಯುವ ಅಧಿಕೃತ ಶೃಂಗದಲ್ಲಿ ಬಹಿರಂಗವಾಗುವ ಸಾಧ್ಯತೆಯಿದೆ.

ಚೀನಾ ಬದಲಾಗುತ್ತಿದೆ!

 • ಚೀನಾದ ಹಾಲಿ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರು ಇನ್ನೊಂದು ಅವಧಿಗೆ ಮರು ಆಯ್ಕೆಯಾಗಿರುವ ಜತೆಗೆ ಅವರು ಬಯಸಿದಷ್ಟು ಅವಧಿಗೆ ಹುದ್ದೆಯಲ್ಲಿ ಮುಂದುವರಿಯಬಹುದು ಎಂಬ ವಿಶೇಷ ಅಧಿಕಾರವನ್ನು ಚೀನಾ ಸಂಸತ್ ನೀಡಿದೆ.
 • ಈ ಮೂಲಕ ಚೀನಾ ಸಂಸತ್, ಪ್ರಧಾನಿಯು ಜಿನ್​ಪಿಂಗ್ ಅಧಿಕಾರಾವಧಿವರೆಗೆ ರಬ್ಬರ್ ಸ್ಟಾಂಪ್ ಆಗಲಿದ್ದಾರೆ. ಚೀನಾವನ್ನು ಏಷ್ಯಾದ ಸೂಪರ್ ಪವರ್ ಆಗಿ ನೋಡಲಷ್ಟೆ ಜಿನ್​ಪಿಂಗ್ ತಯಾರಿಲ್ಲ. ಬದಲಾಗಿ ವಿಶ್ವ ಮಾರುಕಟ್ಟೆಯ ದಿಗ್ಗಜನಾಗುವುದು ಜಿನ್​ಪಿಂಗ್ ಕನಸಾಗಿದೆ.
 • ಈ ಕನಸಿಗೆ ಭಾರತದ ಸಹಕಾರ ಅತ್ಯಗತ್ಯ. ಇದೇ ಕಾರಣದಿಂದ ಮೋದಿ-ಜಿನ್​ಪಿಂಗ್ ನಡುವಿನ ಸಭೆಯು ಹೊಸ ವಿದೇಶಾಂಗ ನೀತಿಗಳಲ್ಲಿ ಅಧ್ಯಾಯಕ್ಕೆ ಕಾರಣವಾಗಬಹುದು ಎಂಬ ನಿರೀಕ್ಷೆಯೂ ಇದೆ.

ಭಾರತದ ನಿರೀಕ್ಷೆ

# ನ್ಯೂಕ್ಲಿಯರ್ ಸಪ್ಲೈಯರ್ ಗ್ರೂಪ್​ಗೆ ಸೇರಲು ಚೀನಾದ ಬೆಂಬಲ, ಪಾಕಿಸ್ತಾನದ ಉಗ್ರ ಮಸೂದ್ ಅಜರ್​ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಲು ಒಪ್ಪಿಗೆ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಸ್ಥಗಿತ , ಡೋಕ್ಲಾಂನಂತಹ ಗಡಿತಂಟೆಗೆ ಅಂತ್ಯ

ಚೀನಾ ಬೇಡಿಕೆ

# ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್(ಬಿಆರ್​ಐ) ಯೋಜನೆಗೆ ಸಮ್ಮತಿ ಹಾಗೂ ಭಾರತ ಕೈ ಜೋಡಿಸಬೇಕು, ಟಿಬೇಟ್​ಗೆ ನೀಡುತ್ತಿರುವ ಬೆಂಬಲ ಹಿಂತೆಗೆದುಕೊಳ್ಳಬೇಕು, ಕ್ವಾಡ್ರಾ ಆರ್ಥಿಕ ಕಾರಿಡಾರ್ ಬಗ್ಗೆ ಮರುಪರಿಶೀಲನೆ , ಅಮೆರಿಕದ ಇಂಡೋ-ಪೆಸಿಫಿಕ್ ಯೋಜನೆ ಬಗ್ಗೆ ಚರ್ಚೆ

ವಾಣಿಜ್ಯ ಸಮರಕ್ಕೆ ಬ್ರೇಕ್?

 • ಅಮೆರಿಕ ಹಾಗೂ ಚೀನಾದ ನಡುವೆ ಬರೋಬ್ಬರಿ 40 ಲಕ್ಷ ಕೋಟಿ ರೂ ವಾಣಿಜ್ಯ ವ್ಯವಹಾರಗಳಿವೆ. ಅದೇ ಭಾರತದೊಂದಿಗೆ ಚೀನಾವು ಸುಮಾರು 5.60 ಲಕ್ಷ ಕೋಟಿ ರೂ ವಹಿವಾಟು ಹೊಂದಿದೆ. ಡೋನಾಲ್ಡ್ ಟ್ರಂಪ್ ಅವರ ಅನಿರೀಕ್ಷಿತ ನಿರ್ಣಯಗಳು ಚೀನಾದ ಆರ್ಥಿಕ ವ್ಯವಸ್ಥೆಯನ್ನು ನಿದ್ದೆಗೆಡಿಸುತ್ತಿದೆ.
 • ಚೀನಾದ ಕೆಲ ಉತ್ಪನ್ನಗಳ ಮೇಲಿನ ನಿಷೇಧ ಸೇರಿ ಪರೋಕ್ಷವಾಗಿ ವಾಣಿಜ್ಯ ಸಮರವನ್ನು ಚೀನಾದ ವಿರುದ್ಧ ಟ್ರಂಪ್ ಸಾರಿದ್ದಾರೆ. ಈಗಾಗಲೇ ಉಗ್ರ ನಿಗ್ರಹ ನೆಪದಲ್ಲಿ ಅಮೆರಿಕ – ರಷ್ಯಾ ಶೀತಲ ಸಮರ ತಾರಕಕ್ಕೇರಿರುವಾಗ ಚೀನಾದ ಮೇಲಿನ ಈ ಕ್ರಮ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ.
 • ಹೀಗಾಗಿ ವಾಣಿಜ್ಯ ಸಮರದಲ್ಲಿ ಉಳಿಯಬೇಕಾದರೆ ಭಾರತ ಹಾಗೂ ಚೀನಾ ಒಟ್ಟಿಗೆ ಹೋಗುವ ಅಗತ್ಯವಿದೆ. ಇದೇ ಕಾರಣಕ್ಕೆ ಅಮೆರಿಕ ಜತೆ ರಕ್ಷಣಾ ವ್ಯವಹಾರಗಳಲ್ಲಿ ಉತ್ತಮ ಸಂಬಂಧ ಹೊಂದಿರುವ ಭಾರತದೊಂದಿಗೆ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಗಟ್ಟಿಗಳಿಸಿಕೊಳ್ಳುವುದು ಜಿನ್​ಪಿಂಗ್​, ಮೋದಿ ಆಶಯವಾಗಿದೆ.

1954ರಿಂದ 2018…

 • ಚೀನಾಕ್ಕೆ 1954ರಲ್ಲಿ ಜವಾಹರಲಾಲ್ ನೆಹರು ಭೇಟಿ ನೀಡಿದ್ದರು. ಬಳಿಕ 34 ವರ್ಷಗಳ ಬಳಿಕ ರಾಜೀವ್ ಗಾಂಧಿ ಭೇಟಿ ಹಾಗೂ ಪ್ರಮುಖ ಒಪ್ಪಂದಗಳು ಭಾರತ ಹಾಗೂ ಚೀನಾ ನಡುವಿನ ಸಂಬಂಧ ವೃದ್ಧಿಗೆ ಕಾರಣವಾಗಿದ್ದವು. ಬಳಿಕ ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಕಾಲದಲ್ಲಿಯೂ ಸಭೆಗಳು ನಡೆದಿವೆ. ಆದರೆ ಅನೌಪಚಾರಿಕ ಹಾಗೂ ಇಷ್ಟೊಂದು ಪ್ರಮಾಣದಲ್ಲಿ ನಿರೀಕ್ಷೆ ಹುಟ್ಟಿರುವುದು ಇದೇ ಮೊದಲು.

17 ಪಾರಂಪರಿಕ ತಾಣ ಅಭಿವೃದ್ಧಿಗೆ ಆಯ್ಕೆ

 • ತಾಜ್ ಮಹಲ್, ಅಜಂತಾ-ಎಲ್ಲೋರಾ, ಹುಮಾಯುನ್ ಸ್ಮಾರಕ-ಕುತುಬ್ ಮಿನಾರ್-ಕೆಂಪುಕೋಟೆ, ಕೊಲ್ವಾ ಸಮುದ್ರ, ಆಮೆರ್ ಕೋಟೆ, ಸೋಮನಾಥ-ಢೊಲಾವಿರಾ, ಖಜುರಾಹೊ, ಹಂಪಿ, ಮಹಾಬಲಿಪುರಂ, ಕಾಜಿರಂಗಾ, ಕುಮಾರಕೋಣಂ ಮತ್ತು ಮಹಾಬೋಧಿ ಮಂದಿರ ಅಭಿವೃದ್ಧಿಗೆ ಆಯ್ಕೆಯಾಗಿರುವ ತಾಣಗಳು.

ಜಗತ್ತಿನ ಮೊದಲ ಉಷ್ಣವಲಯ ಹಿಮಕರಡಿ ಇನುಕಾ ಇನ್ನಿಲ್ಲ!

 • ಜಗತ್ತಿನಲ್ಲೇ ಉಷ್ಣವಲಯದಲ್ಲಿ ಜನಿಸಿದ ಮೊದಲ ಹಿಮಕರಡಿ ಇನುಕಾ ಸಿಂಗಾಪುರದಲ್ಲಿ ಮೃತಪಟ್ಟಿದೆ. ಸಿಂಗಾಪುರ ಝೂನಲ್ಲಿದ್ದ 27 ವರ್ಷದ ಇನುಕಾ ಕೆಲ ವರ್ಷಗಳಿಂದ ಸಂಧಿವಾತ, ಹಲ್ಲಿನ ಸಮಸ್ಯೆ, ಕಿವಿ ಸೋಂಕುಗಳು ಮತ್ತು ದುರ್ಬಲ ಅಂಗಗಳಿಂದ ಬಳಲುತ್ತಿತ್ತು. ನಡೆದಾಡಲೂ ಕಷ್ಟಪಡುತ್ತಿತ್ತು.
 • ಅನಾರೋಗ್ಯಕ್ಕೀಡಾಗಿದ್ದ ಹಿಮಕರಡಿಗೆ ಝೂ ಸಿಬ್ಬಂದಿ ಅನಸ್ತೇಶಿಯಾ ಕೊಡುತ್ತಿದ್ದರು. ಅದು ಎದ್ದು ಓಡಾಡಲೂ ಆಗದ ಸ್ಥಿತಿ ತಲುಪಿದ ನಂತರ ಅದಕ್ಕೆ ಎಚ್ಚರವಾಗದಂತೆ ಸದಾ ಅನಸ್ತೇಶಿಯಾ ಕೊಟ್ಟೇ ಇಡುತ್ತಿದ್ದರು.
 • ಈ ಕರಡಿ ಸಾಮಾನ್ಯವಾಗಿ ಧ್ರುವ ಪ್ರದೇಶಗಳ ಅರಣ್ಯದ ಹಿಮಕರಡಿಗಿಂತ ಹತ್ತು ವರ್ಷ ಹೆಚ್ಚಿಗೇ ಬದುಕಿದೆ.

~~~***ದಿನಕ್ಕೊಂದು ಯೋಜನೆ***~~~

ದೀನ್ ದಯಾಳ್ SPARSH ಯೋಜನೆ

 • ಕೇಂದ್ರ ಮಕ್ಕಳ ಕಮ್ಯುನಿಕೇಷನ್ಸ್ ಮನೋಜ್ ಸಿನ್ಹಾ ಅವರು 3 ನೇ ನವೆಂಬರ್ 2017 ರಂದು ಡೀನ್ ದಯಾಳ್ SPARSH ಅನ್ನು (ವಿದ್ಯಾರ್ಥಿವೇತನ ಪ್ರಚಾರಕ್ಕಾಗಿ ವಿದ್ಯಾರ್ಥಿವೇತನ ಮತ್ತು ಹವ್ಯಾಸವಾಗಿ ಅಂಚೆಚೀಟಿಗಳಲ್ಲಿ ಸಂಶೋಧನೆ) ಯೋಜನೆಯನ್ನು ಪ್ರಾರಂಭಿಸಿದರು.
 • ಸಂಗ್ರಹಣೆ ಮತ್ತು ಅಂಚೆ ಅಂಚೆಚೀಟಿಗಳ ಅಧ್ಯಯನದ ಹವ್ಯಾಸ ಅಂಚೆಚೀಟಿಗಳನ್ನು ಕೂಡಿಹಾಕುವುದು. ಇದು ಅಂಚೆಚೀಟಿಗಳು ಮತ್ತು ಇತರ ಅಂಚೆಚೀಟಿಗಳ ಸಂಗ್ರಹಕ್ಕೆ ಸಂಬಂಧಿಸಿದ ಉತ್ಪನ್ನಗಳಲ್ಲಿ ಸಂಗ್ರಹಣೆ, ಮೆಚ್ಚುಗೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
 • ಅಂಚೆಚೀಟಿ ಬಿಡುಗಡೆಯಾದ ಅವಧಿಯ ಸಾಮಾಜಿಕ ಆರ್ಥಿಕ ರಾಜಕೀಯ ರಿಯಾಲಿಟಿ ಬಗ್ಗೆ ಅಂಚೆಚೀಟಿಗಳನ್ನು ಕೂಡಿಹಾಕುವುದು ಸಾಕಷ್ಟು ಕಲಿಸುತ್ತದೆ.

ದೀನ್ ದಯಾಳ್ SPARSH ಯೋಜಾನದ ಮುಖ್ಯಾಂಶಗಳು

 • SPARSH ಯೋಜನೆ ಅಡಿಯಲ್ಲಿ, ಎಲ್ಲಾ ಅಂಚೆ ವಲಯಗಳಲ್ಲಿ ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯ ಮೂಲಕ ಹವ್ಯಾಸವಾಗಿ ಅಂಚೆಚೀಟಿಗಳನ್ನು ಕೂಡಿಹಾಕುವುದು ಅನುಸರಿಸುವಾಗ ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿರುವ VI ರಿಂದ IX  ನೇ ತರಗತಿಯ ಮಕ್ಕಳಿಗೆ 920 ವಿದ್ಯಾರ್ಥಿವೇತನಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ.
 • ಪ್ರತಿ ಪೋಸ್ಟಲ್ ಸರ್ಕಲ್ ವರ್ಗ VI, VII, VIII ಮತ್ತು IX ರಿಂದ ಪ್ರತಿ 10 ವಿದ್ಯಾರ್ಥಿಗಳು ಪ್ರತಿನಿಧಿಸುವ ಗರಿಷ್ಠ 40 ವಿದ್ಯಾರ್ಥಿವೇತನಗಳನ್ನು ಆಯ್ಕೆ ಮಾಡುತ್ತದೆ.
 • ವಿದ್ಯಾರ್ಥಿವೇತನವು ತಿಂಗಳಿಗೆ ರೂ 500 ಕ್ಕೆ ಪ್ರತಿ ವರ್ಷ 6000 ರೂ.
 • ಈ ವಿದ್ಯಾರ್ಥಿವೇತನವನ್ನು ಪಡೆಯಲು, ಒಂದು ಮಗು ಭಾರತದಲ್ಲಿ ಮಾನ್ಯತೆ ಪಡೆದ ಶಾಲೆಯ ವಿದ್ಯಾರ್ಥಿಯಾಗಿರಬೇಕು ಮತ್ತು ಸಂಬಂಧಪಟ್ಟ ಶಾಲೆಗೆ ಅಂಚೆಚೀಟಿಗಳನ್ನು ಕೂಡಿಹಾಕುವುದು ಕ್ಲಬ್ ಇರಬೇಕು ಮತ್ತು ಅಭ್ಯರ್ಥಿ ಕ್ಲಬ್ನ ಸದಸ್ಯರಾಗಿರಬೇಕು.
 • ಶಾಲೆಯ ಅಂಚೆಚೀಟಿಗಳನ್ನು ಕೂಡಿಹಾಕುವುದು ಕ್ಲಬ್ ಅನ್ನು ಸ್ಥಾಪಿಸದಿದ್ದಲ್ಲಿ, ವಿದ್ಯಾರ್ಥಿಗಳ ಸ್ವಂತ ಅಂಚೆಚೀಟಿಗಳನ್ನು ಕೂಡಿಹಾಕುವುದು ಖಾತೆಯನ್ನು ಹೊಂದಿರುವ ವಿದ್ಯಾರ್ಥಿ ಸಹ ವಿದ್ಯಾರ್ಥಿವೇತನಕ್ಕಾಗಿ ಪರಿಗಣಿಸಲ್ಪಡುತ್ತಾರೆ.
 • ಪ್ರತಿ ಸಂಭಾವ್ಯ ಶಾಲೆಗೆ ಹೆಸರಾಂತ ಅಂಚೆಚೀಟಿ ಸಂಗ್ರಹಿಸುವವರಿಂದ ಆಯ್ಕೆ ಮಾಡಲು ಅಂಚೆಚೀಟಿಗಳನ್ನು ಕೂಡಿಹಾಕುವುದು ಮಾರ್ಗದರ್ಶಿ ನಿಯೋಜಿಸಲಾಗುವುದು.
 • ಅಂಚೆ ಮಟ್ಟದ ಅಂಚೆಚೀಟಿಗಳನ್ನು ಕೂಡಿಹಾಕುವುದು ಕ್ಲಬ್ ಅನ್ನು ರಚಿಸುವಲ್ಲಿ ಅಂಚೆಚೀಟಿಗಳನ್ನು ಕೂಡಿಹಾಕುವುದು ಮಾರ್ಗದರ್ಶಿ ಸಹಾಯ ಮಾಡುತ್ತದೆ, ಹವ್ಯಾಸವನ್ನು ಹೇಗೆ ಅನುಸರಿಸಬೇಕೆಂದು ಯುವ ಮತ್ತು ಮಹತ್ವಾಕಾಂಕ್ಷೆಯ ಅಂಚೆಚೀಟಿ ಸಂಗ್ರಹಿಸುವವರಿಗೆ ಮಾರ್ಗದರ್ಶನ ನೀಡುತ್ತದೆ.

ದಿನಕ್ಕೆ ಹತ್ತು ಪ್ರಶ್ನೋತ್ತರಗಳು

1. ರಾಷ್ಟ್ರದಲ್ಲೇ ಅತಿಹೆಚ್ಚು ವಾಹನದಟ್ಟಣೆ ಸಮಸ್ಯೆ ಇರುವ ನಗರಗಳ ಪಟ್ಟಿಯಲ್ಲಿ ಕೋಲ್ಕತಕ್ಕೆ ಮೊದಲ ಸ್ಥಾನ.ಇದಕ್ಕೆ ಮುಖ್ಯ ಕಾರಣಗಳೆಂದರೆ
1. ರಸ್ತೆಗಳು ಕಿರಿದಾಗಿರುವುದು
2. ರಸ್ತೆಗಳ ಜಾಲದಲ್ಲಿ ಸಂಪರ್ಕದ ಕೊರತೆ ಇರುವುದು
A. ಮೊದಲನೇ ಹೇಳಿಕೆ ಮಾತ್ರ ಕಾರಣವಾಗಿದೆ
B. ಎರಡನೇ ಹೇಳಿಕೆ ಮಾತ್ರ ಕಾರಣವಾಗಿದೆ
C. ಎರಡೂ ಹೇಳಿಕೆಗಳು ಕಾರಣವಾಗಿದೆ
D. ಮೇಲಿನ ಯಾವುದು ಕಾರಣವಲ್ಲ

2. ಚೀನಾದ ಯಾವ ಪ್ರಾಂತ್ಯವನ್ನು ಭಾರತದ ನಾಗಪುರ ಸ್ಥಳಕ್ಕೆ ಹೋಲಿಸಲಾಗುತ್ತದೆ ?
A. ವುಹಾನ್
B. ಬೀಜಿಂಗ್
C. ಶಾಂಗೈ
D. ಕ್ಸಿನ್ಜಿಯಾಂಗ್

3. ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಆಯ್ಕೆಯಾಗಿರುವ ಕರ್ನಾಟಕದ ಸ್ಥಳ ಯಾವುದು ?
A. ಶ್ರವಣಬೆಳಗೊಳ
B. ಹಂಪಿ
C. ಬಾದಾಮಿ
D. ಬಿಜಾಪುರದ ಗೋಳಗುಮ್ಮಟ

4. ಜಗತ್ತಿನ ಮೊದಲ ಉಷ್ಣವಲಯದ ಹಿಮಕರಡಿಯ ಹೆಸರೇನು ?
A. ಸೂಡಾನ್
B. ಇನುಕಾ
C. ಗರಿಯಲ್
D. ಯಾವುದು ಅಲ್ಲ

5. ಯಾವ ನಗರದಲ್ಲಿ ನಡೆದ ಕಾಂಗ್ರಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಗಾಂಧಿಯನ್ನು ನೆಹರೂರವರು ಭೇಟಿಯಾದರು ?
A. ಲಕ್ನೋ
B. ಅಲಹಾಬಾದ್
C. ಮುಂಬಯಿ
D. ಅಹ್ಮದಾಬಾದ್

6. ಜಲಪುತ್ ಡ್ಯಾಮನ್ನು ಗೋದಾವರಿ ನದಿಯ ಯಾವ ಉಪನದಿಗೆ ಕಟ್ಟಲಾಗಿದೆ ?
A. ಬಾನಗಂಗಾ ನದಿ
B. ಮಾಚ್ಕುಂಡ್ ನದಿ
C. ನಾಸಾರ್ಡಿ ನದಿ
D. ಕಿನ್ನೆರಾಸಾನಿ ನದಿ

7. ದಿ ಬೈಲಟೇರಲ್ ಮಿಲಿಟರಿ ಎಕ್ಸರ್ಸೈಜ್ “ಹರಿಮ್ಸ್ ಶಕ್ತಿ 2018” ಭಾರತ ಮತ್ತು ಯಾವ ದೇಶದೊಂದಿಗೆ ಏರ್ಪಡಿಸಲಾಗಿದೆ ?
A. ಇಂಡೋನೇಷ್ಯಾ
B. ಮಲೇಷ್ಯಾ
C. ನ್ಯೂಜಿಲಂಡ್
D. ಸೌತ್ ಕೊರಿಯಾ

8. ಯಾವ ನಗರವು ಶೇಕಡಾ 100% ನವೀಕರಿಸಬಹುದಾದ ಶಕ್ತಿಯನ್ನು ಹಗಲಿನಲ್ಲಿ ಬಳಸಿಕೊಂಡು ಭಾರತದ ಮೊದಲ ಸ್ಮಾರ್ಟ್ ನಗರವಾಗಿದೆ ?
A. ಬೆಂಗಳೂರು
B. ಜೈಪುರ
C. ಇಂದೋರ್
D. ದಿಯು

9. ಯಾವ ಮೊನಾಸ್ಟರೀಸ್ ಅನ್ನು ಗಳ್ದೆನ್ ನಂಗೆಯ್ ಲ್ಹತ್ಸೆ ಎಂದು ಕರೆಯಲಾಗುತ್ತದೆ ?
A. ಹೆಮಿಸ್ ಮೊನಾಸ್ಟರಿ
B. ತವಾಂಗ್ ಮೊನಾಸ್ಟರಿ
C. ಬೊಂದಿಲ ಮೊನಾಸ್ಟರಿ
D. ನಮ್ಡ್ರೋಲಿಂಗ್ ಮೊನಾಸ್ಟರಿ

10. ಕಲ್ಪಸೂತ್ರ ಪುಸ್ತಕದ ಕತೃ ಯಾರು ?
A. ಸಿಮುಖ
B. ಪಾಣಿನಿ
C. ಭದ್ರಬಾಹು
D. ಪತಂಜಲಿ

ಉತ್ತರಗಳು :1.C 2.A 3.B 4.B 5.A 6.B 7.B 8.D 9.B 10.C 

Related Posts
National Current Affairs- UPSC/KAS Exams – 5th October 2018
Ethics panel debates checks and balances Topic: Indian Polity IN NEWS: Parliamentarians are deliberating on having checks and balances while making their personal information public. More on the topic: In a meeting of the ...
READ MORE
Urban Infrastructure Development Scheme for Small and Medium Towns (UIDSSMT)
Under Centrally Sponsored UIDSSMT (mission period) scheme, out of the 38 projects sanctioned for the State, 28 projects are completed. The central government has released an amount of Rs.534.97 crore for ...
READ MORE
Karnataka Current Affairs – KAS/KPSC Exams- 13th August 2018
India Post releases envelope to mark World Elephant Day Chief Minister of Karnataka released a special postal cover to mark World Elephant Day. Brought out by India Post, the envelope is eco-friendly, ...
READ MORE
Bengaluru’s water needs in 2031: Master Plan paints a grim picture
Faced with acute water shortage, particularly during the summer months, Bengaluru is struggling hard to cope . If this is the scenario now, how scary will it be in 2031? ...
READ MORE
“17th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ರಾಷ್ಟ್ರಪತಿ ಗೌರವ ಸುದ್ಧಿಯಲ್ಲಿ ಏಕಿದೆ? ಕನ್ನಡದ ಖ್ಯಾತ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಅವರಿಗೆ 2018ನೇ ಸಾಲಿನ ರಾಷ್ಟ್ರಪತಿ ಗೌರವ ಪ್ರಶಸ್ತಿ ಸಂದಿದೆ. ಶಾಸ್ತ್ರೀಯ ಕನ್ನಡ ಭಾಷೆಯಲ್ಲಿ ಅವರು ನಡೆಸಿದ ಸಂಶೋಧನೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಶಾಸ್ತ್ರೀಯ ತೆಲುಗು, ಸಂಸ್ಕೃತ, ಪರ್ಷಿಯಾ, ಅರೇಬಿಕ್‌, ...
READ MORE
National Current Affairs – UPSC/KAS Exams- 6th December 2018
Soon, you may opt to withdraw your Aadhaar number Topic: Polity and Governance IN NEWS: The Union government is in the last stages of finalising a proposal to amend the Aadhaar Act ...
READ MORE
Yeshwantpur & B’luru Cantt to be made world-class stations
In the integrated Union Budget for 2017-18 presented by Finance Minister Arun Jaitley in the Lok Sabha on Wednesday, Rs 3,174 crore has been allocated for the South Western Railway ...
READ MORE
“28th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಎನ್​ಜಿಒಗಳು ಸುದ್ದಿಯಲ್ಲಿ ಏಕಿದೆ? ದೇಶ-ವಿದೇಶಗಳಿಂದ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸ್ವಯಂ ಸೇವಾ ಸಂಸ್ಥೆ (ಎನ್​ಜಿಒ)ಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಪ್ರಾಥಮಿಕ ಹಂತವಾಗಿ ಅನಾಥ ಮಕ್ಕಳ ಪೋಷಣೆ ಹೆಸರಲ್ಲಿ ದೇಣಿಗೆ ಪಡೆಯುವ ಎನ್​ಜಿಒಗಳು ಕಡ್ಡಾಯವಾಗಿ ಮಹಿಳಾ ಮತ್ತು ಮಕ್ಕಳ ...
READ MORE
National Current Affairs – UPSC/KAS – 27th June 2018
Government may bail out undertial women The Ministry of Women and Child Development (MWCD) has launched its report titled ‘Women in Prisons’. Aim It aims to build an understanding of the various challenges ...
READ MORE
Karnataka Rural Infrastructure Development Ltd & Western Ghats Development Programme
The Karnataka Land Army Corporation Limited was established as an undertaking of the Government of Karnataka in August 1974. The name of the Organization was changed from Karnataka Land Army Corporation ...
READ MORE
National Current Affairs- UPSC/KAS Exams – 5th October
Urban Infrastructure Development Scheme for Small and Medium
Karnataka Current Affairs – KAS/KPSC Exams- 13th August
Bengaluru’s water needs in 2031: Master Plan paints
“17th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams- 6th December
Yeshwantpur & B’luru Cantt to be made world-class
“28th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS – 27th June
Karnataka Rural Infrastructure Development Ltd & Western Ghats

Leave a Reply

Your email address will not be published. Required fields are marked *