28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಡೋಕ್ಲಾಂ ಬಿಕ್ಕಟ್ಟು

 • ಸುದ್ಧಿಯಲ್ಲಿ ಏಕಿದೆ? ಸಿಕ್ಕಿಂ ಗಡಿಯ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೇ ಕಾರ್ಯಚಟುವಟಿಕೆ ಚುರುಕುಗೊಳಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಅಧಿಕಾರಿಯೊಬ್ಬರು ನೀಡಿದ್ದಾರೆ.
 • ದೇಶದ ಉತ್ತರ ಭಾಗದಲ್ಲಿನ ಅತಿಕ್ರಮಣ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತ, ಡೋಕ್ಲಾಂ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ದಕ್ಷಿಣ ಮತ್ತು ಕೇಂದ್ರೀಯ ಏಷ್ಯಾಭಾಗದ ಪ್ರಧಾನ ಸಹಾಯಕ ಕಾರ್ಯ ದರ್ಶಿ ತಿಳಿಸಿದ್ದಾರೆ.
 • ಭಾರತದ ಗಡಿಯಲ್ಲಿಚೀನಾ ರಸ್ತೆ ನಿರ್ಮಾಣ ಚಟುವಟಿಕೆಗಳ ಬಗ್ಗೆ ಅಮೆರಿಕದ ಸಂಸತ್ತಿ ನಲ್ಲಿ ಕೇಳಲಾದ ಪ್ರಶ್ನೆ ಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿರುವ ಅವರು, ಚೀನಾದ ಚಟುವಟಿಕೆಯನ್ನು ತಡೆಯಲು ಭಾರತ ಹಾಗೂ ಭೂತಾನ್ ಯತ್ನ ನಡೆಸಿಲ್ಲ ಎಂದು ತಿಳಿಸಿದ್ದಾರೆ.
 • ದಕ್ಷಿಣ ಚೀನಾ ಸಮುದ್ರದಲ್ಲಿ ಅತಿಕ್ರಮಣಕ್ಕೆ ಅನುಸರಿಸಿದ್ದ ನೀತಿಯನ್ನು ಹಿಮಾಲಯದಲ್ಲಿ ಚೀನಾ ಮುಂದುವರಿಸುತ್ತಿದೆ ಎಂದು ಆಲಿಸ್ ಎಚ್ಚರಿಸಿದ್ದಾರೆ. ಸಮಾನ ಮನಸ್ಕ ದೇಶಗಳನ್ನು ಒಟ್ಟಾಗಿ ಸೇರಿಸುವ ಮೂಲಕ ಚೀನಾ ಪ್ರಾಬಲ್ಯಕ್ಕೆ ತಿರುಗೇಟು ಕೊಡಲು ಯತ್ನಿಸಲಾಗುತ್ತಿದೆ ಎಂದು ಆಲಿಸ್ ಸಂಸತ್ತಿಗೆ ತಿಳಿಸಿದ್ದಾರೆ.

ಏನಿದು ವಿವಾದ?

 • 2017ರ ಜೂನ್ 16ರಂದು ಸಿಕ್ಕಿಂನಲ್ಲಿರುವ ಡೋಕ್ಲಾಂ ಗುಡ್ಡಗಾಡಿನ ಡೊಕಾ ಲಾ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿು ಯೋಧರ ನಡುವೆ ಜಟಾಪಟಿ ಏರ್ಪಟ್ಟಿತ್ತು. ಚೀನಾದ ಯೋಧರುಈ ಪ್ರದೇಶದಲ್ಲಿ ರಸ್ತೆ ನಿರ್ವಣಕ್ಕೆ ಮುಂದಾಗಿದ್ದರು.
 • ಇದಕ್ಕೆ ಭಾರತದ ಯೋಧರು ತಡೆಯೊಡ್ಡಿದ್ದು ಜಟಾಪಟಿಗೆ ಕಾರಣವಾಗಿತ್ತು. ಚೀನಾ ತನ್ನ ಭೂಪ್ರದೇಶದಲ್ಲಿ ಅತಿಕ್ರಮಣ ನಡೆಸಿದೆ ಎಂದು ನವದೆಹಲಿಯಲ್ಲಿರುವ ಭೂತಾನ್ ರಾಯಭಾರಿ ಕೂಡ ಆರೋಪಿಸಿತ್ತು.
 • ಇದಕ್ಕೆ ತಿರುಗೇಟು ನೀಡಲು ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಚೀನಾ ನಿರ್ಬಂಧ ಹೇರಿತ್ತು. ಮಳೆಯಿಂದಾಗಿ ರಸ್ತೆಗಳು ಹಾಳಾಗಿದೆ ಎಂಬ ಸಬೂಬು ಕೊಟ್ಟಿತ್ತು.
 • ಸಿಕ್ಕಿಂ, ಭೂತಾನ್ ಹಾಗೂ ಟಿಬೆಟ್ ಸೇರುವ ಚೌಕದ ಉತ್ತರಕ್ಕಿರುವ ಈ ಪ್ರದೇಶ ಭಾರತ, ಚೀನಾ ಹಾಗೂ ಭೂತಾನ್ ನಡುವಿನ ವಿವಾದಿತ ಪ್ರದೇಶವಾಗಿದೆ. ಕಳೆದ ವರ್ಷ ಜೂನ್ 16ರಿಂದ ಆರಂಭವಾದ ವಿವಾದ 73 ದಿನ ನಡೆದಿತ್ತು.

ಪೇರೆಂಟಲ್​ ರೆಸ್ಪಾನ್ಸಿಬಿಲಿಟಿ ನಾರ್ಮ್ಸ್​ ಫಾರ್​ ಅಕೌಂಟೆಬಿಲಿಟಿ ಮಾನಿಟರಿಂಗ್​ ಆ್ಯಕ್ಟ್ 2017 (ಪ್ರಣಾಮ್) 

 • ಸುದ್ಧಿಯಲ್ಲಿ ಏಕಿದೆ? ಪಾಲಕರ ಬಗ್ಗೆ ಸೂಕ್ತ ಕಾಳಜಿ ವಹಿಸದ ಅಸ್ಸಾಂ ಸರ್ಕಾರಿ ನೌಕರರ ಸಂಬಳದಿಂದ ಶೇ.10ರಿಂದ 15ರಷ್ಟು ಕಡಿತಗೊಳಿಸುವ ನೂತನ ಕಾನೂನು ಅನುಷ್ಠಾನಕ್ಕೆ ಬರಲಿದೆ.

ಏಕೆ ಈ ನಿರ್ಧಾರ?

 • ಅವಲಂಬಿತ ಪೋಷಕರು, ದಿವ್ಯಾಂಗ ಸಹೋದರ – ಸಹೋದರಿಯರನ್ನು ಸರಿಯಾಗಿ ನೋಡಿಕೊಳ್ಳದಿರುವುದು ಸಾಬೀತಾದರೆ, ಇಂತಹ ಸರಕಾರಿ ನೌಕರರ ಒಂದು ತಿಂಗಳ ಒಟ್ಟು ವೇತನದಲ್ಲಿ ಶೇ. 10 – 15 ರಷ್ಟು ಕಡಿತಗೊಳ್ಳಲಿದೆ. ಯಾವುದೇ ಆದಾಯವಿಲ್ಲದ ಪೋಷಕರನ್ನು ಸರಕಾರಿ ನೌಕರಿಯಲ್ಲಿರುವ ಮಕ್ಕಳೇ ನೋಡಿಕೊಳ್ಳಬೇಕು. ಅಲ್ಲದೆ, ಸರಕಾರಿ ನೌಕರಿಯಲ್ಲಿರುವ ವ್ಯಕ್ತಿ ಮೇಲೆ ಅವಲಂಬಿತರಾಗಿರುವ ದಿವ್ಯಾಂಗ ಸಹೋದರ ಹಾಗೂ ಸಹೋದರಿಯರನ್ನು ನೌಕರರು ಸರಿಯಾಗಿ ನೋಡಿಕೊಳ್ಳಬೇಕೆಂದು ಈ ಕಾನೂನನ್ನು ಜಾರಿಗೆ ತರಲಿದ್ದೇವೆ
 • ದೇಶದಲ್ಲೇ ಮೊದಲ ಬಾರಿಗೆ 2017ರ ಸೆಪ್ಟೆಂಬರ್​ನಲ್ಲಿ ರಾಜ್ಯ ಸರ್ಕಾರ, ಅಸ್ಸಾಂ ಎಂಪ್ಲಾಯೀಸ್​ ಪೇರೆಂಟಲ್​ ರೆಸ್ಪಾನ್ಸಿಬಿಲಿಟಿ ನಾರ್ಮ್ಸ್​ ಫಾರ್​ ಅಕೌಂಟೆಬಿಲಿಟಿ ಮಾನಿಟರಿಂಗ್​ ಆ್ಯಕ್ಟ್ 2017 (ಪ್ರಣಾಮ್) ಅ​ನ್ನು ಜಾರಿಗೊಳಿಸಿತ್ತು. ಪ್ರಣಾಮ್​ ಕಾಯಿದೆಯನ್ನು ಸದನದಲ್ಲಿ ಅಂಗೀಕರಿಸಿದ್ದು ಇದೇ ವರ್ಷ ಅಕ್ಟೋಬರ್​ 2 ರಿಂದ ಈ ನೂತನ ಕಾನೂನು ಜಾರಿಗೆ ಬರಲಿದೆ ಎಂದರು

ಮೇಡ್ ಇನ್ ಚೀನಾ ಆಪತ್ತು

 • ಸುದ್ಧಿಯಲ್ಲಿ ಏಕಿದೆ? ದೇಶದ ಆರ್ಥಿಕತೆಗೆ ಹಿನ್ನಡೆ ಉಂಟುಮಾಡುತ್ತಿರುವ ಚೀನಾ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರಕ್ಕೆ ಸಂಸತ್​ನ ಸ್ಥಾಯಿ ಸಮಿತಿ ಆತಂಕಕಾರಿ ವರದಿಯೊಂದನ್ನು ಸಲ್ಲಿಸಿದೆ. ಚೀನಾದಿಂದ ಅಪಾರ ಪ್ರಮಾಣದಲ್ಲಿ ಆಮದಾಗುತ್ತಿರುವ ವಸ್ತುಗಳನ್ನು ನಿಯಂತ್ರಿಸದಿದ್ದರೆ ದೇಶದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಶೀಘ್ರ ಮುಚ್ಚುವ ಸ್ಥಿತಿಗೆ ಬರಲಿದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಕಾರಣಗಳು

 • ಕಡಿಮೆ ದರದ ಚೀನಾ ಸರಕುಗಳು ಸಮುದ್ರ ಮತ್ತು ಭೂ ಮಾರ್ಗದ ಮೂಲಕ ಸುಲಭವಾಗಿ ಭಾರತವನ್ನು ಪ್ರವೇಶಿಸುತ್ತಿವೆ. ಆಮದು ನೀತಿಗಳನ್ನು ಪರಿಷ್ಕರಣೆ ಮಾಡದ ಹಿನ್ನೆಲೆಯಲ್ಲಿ ಚೀನಾ ವಸ್ತುಗಳಿಗೆ ಭಾರತ ಡಂಪಿಂಗ್ ಗ್ರೌಂಡ್ (ಸುರಿತಾಣ) ಆಗಿ ಪರಿವರ್ತನೆಗೊಂಡಿದೆ ಎಂದು ಸಮಿತಿ ಹೇಳಿದೆ.
 • 219% ಏರಿಕೆ: ಕಳೆದ 10 ವರ್ಷಗಳಲ್ಲಿ ಭಾರತ-ಚೀನಾ ನಡುವಿನ ವ್ಯಾಪಾರ ಕೊರತೆ 219% ಏರಿಕೆ ಕಂಡಿದೆ.
 • ಭಾರತ ಆಮದು ರಾಷ್ಟ್ರವಾದೀತು!

ಚೀನಾ ವಸ್ತುಗಳ ಆಮದು ನಿಯಂತ್ರಿಸಲು ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಚೀನಾ ವಸ್ತುಗಳ ಹಾವಳಿ ವಿಪರೀತವಾಗಿದ್ದು ಭವಿಷ್ಯದಲ್ಲಿ ಭಾರತ ‘ಆಮದು ರಾಷ್ಟ್ರ’ವಾಗಿ ಉಳಿಯುವ ಸಾಧ್ಯತೆಯಿದೆ.

 • ದೇಶೀಯ ತಯಾರಕರು ಉತ್ಪಾದನೆ ಕಡಿತಗೊಳಿಸುತ್ತಾರೆ, ಇಲ್ಲವೇ ಬಾಗಿಲು ಮುಚ್ಚುತ್ತಾರೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.

ಕರ್ನಾಟಕ ಸೆಡ್ಡು

 • ಎಲೆಕ್ಟ್ರಾನಿಕ್ ಸಹಿತ ಬೇಡಿಕೆಯಿರುವ ಹಲವು ವಸ್ತುಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸುವ ಮೂಲಕ ಚೀನಾ ವಸ್ತುಗಳಿಗೆ ಸೆಡ್ಡು ಹೊಡೆಯುವ ಯೋಜನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್​ನಲ್ಲಿ ಘೋಷಿಸಿದ್ದರು. ಜಿಲ್ಲಾ ಕೇಂದ್ರದಲ್ಲಿ ಇವುಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ ಹೊಸ ಉದ್ಯೋಗ ಸೃಷ್ಟಿಯೂ ಇದರಿಂದ ಸಾಧ್ಯವಾಗಲಿದೆ.

ಭಾರತದ ಮುಂದಿರುವ ಆಯ್ಕೆಗಳೇನು?

 • ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಅನ್ವಯ ಮುಕ್ತ ವ್ಯಾಪಾರ ಒಪ್ಪಂದದ ಮರುಪರಿಶೀಲನೆ
 • ಆಸಿಯಾನ್ ಹಾಗೂ ಚೀನಾದಿಂದ ಆಮದಾಗುವ ವಸ್ತುಗಳಿಗೆ ಗುಣಮಟ್ಟ ನಿಗದಿ
 • ದೇಶೀಯ ಉತ್ಪನ್ನಗಳ ಮಾರುಕಟ್ಟೆ ಬೆಲೆ ಕುಸಿಯದಂತೆ ಕ್ರಮ
 • ವಿವಿಧ ದೇಶಗಳ ವಸ್ತುಗಳಿಗೆ ಗುಣಮಟ್ಟ ಆಧಾರದಲ್ಲಿ ಆಮದು ಪ್ರಮಾಣ ನಿಗದಿ.

ಚೀನಾ ವಸ್ತುಗಳು ದೇಶೀಯ ಆರ್ಥಿಕತೆ ಮೇಲೆ ಬೀರುತ್ತಿರುವ ಗಂಭೀರ ಪರಿಣಾಮದಿಂದ ಎಚ್ಚೆತ್ತುಕೊಂಡಿರುವ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು, ಆಮದು ನೀತಿಯನ್ನು ಕಠಿಣಗೊಳಿಸಿವೆ. ವಿದೇಶಿ ವಸ್ತುಗಳ ಮೇಲಿನ ಸಬ್ಸಿಡಿ ಕಡಿತ, ಡಂಪಿಂಗ್ ತಡೆ ಸಹಿತ ಹಲವು ಕ್ರಮಗಳನ್ನು ತೆಗೆದುಕೊಂಡಿವೆ.

2 ಲಕ್ಷ ಉದ್ಯೋಗ ಹಾನಿ

 • ಚೀನಾದ ಸೋಲಾರ್ ಪ್ಯಾನೆಲ್​ಗಳು ಭಾರತದ ಮಾರುಕಟ್ಟೆ ಆಕ್ರಮಿಸುತ್ತಿರುವುದರಿಂದ ಈಗಾಗಲೇ ಅಂದಾಜು 2 ಲಕ್ಷ ಉದ್ಯೋಗ ನಷ್ಟವಾಗಿದೆ. ಚೀನಾದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸಾರ್ವಜನಿಕ ಸೈಕಲ್ ಹಂಚಿಕೆ (ಷೇರಿಂಗ್) ಜಾರಿಗೆ ಬಂದಿದೆ. ಹೀಗಾಗಿ ಅಲ್ಲಿನ ಅಗ್ಗದ ದರ ಸೈಕಲ್​ಗಳು ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಆಮದಾಗುತ್ತಿವೆೆ. ದೇಶದಲ್ಲಿ ಉತ್ಪಾದನೆಯಾಗುವ ಸೈಕಲ್​ಗಳಿಗಿಂತ ಅತಿ ಕಡಿಮೆ ಬೆಲೆಗೆ ಇವು ಲಭ್ಯವಾಗುತ್ತಿವೆ. ಇದರಿಂದ ಭಾರತದ ಕಂಪನಿಗಳಿಗೆ ಹಿನ್ನಡೆ ಉಂಟಾಗಿದೆ .

ಎಥನಾಲ್ ಉತ್ಪಾದನೆ

 • ಸುದ್ಧಿಯಲ್ಲಿ ಏಕಿದೆ? ಕಬ್ಬಿನ ಹಾಲು ಹಾಗೂ ಬಿ-ಮೊಲಾಸಿಸ್​ನಿಂದ ನೇರವಾಗಿ ಎಥನಾಲ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
 • ಕಬ್ಬು ನಿಯಂತ್ರಣ ಕಾಯ್ದೆ- 1966ಕ್ಕೆ ತಿದ್ದುಪಡಿ ತಂದು ಕೇಂದ್ರ ಸರ್ಕಾರವು ಹೊಸ ಅಧಿಸೂಚನೆ ಹೊರಡಿಸಿದೆ. ಕಬ್ಬಿನ ಉತ್ಪಾದನೆ ಏರಿಕೆ ಆದಾಗ ಸಕ್ಕರೆ ಕಾರ್ಖಾನೆಗಳು ನೇರವಾಗಿ ಕಬ್ಬಿನ ಹಾಲಿನಿಂದ ಎಥನಾಲ್ ಉತ್ಪಾದಿಸಿ ಲಾಭಾಂಶ ಪಡೆಯಲು ನೆರವಾಗುತ್ತದೆ. ಸದ್ಯಕ್ಕೆ ಕಬ್ಬಿನ ಉಪ ಉತ್ಪನ್ನಗಳಾದ ಸಿ-ಮೊಲಾಸಿಸ್ ಎಥನಾಲ್ ಉತ್ಪಾದಿಸಲು ಅವಕಾಶ ನೀಡಲಾಗುತ್ತಿತ್ತು. ಮೊಲಾಸಿಸ್ ಅನ್ನು ಮದ್ಯ ಹಾಗೂ ಸ್ಪಿರಿಟ್ ತಯಾರಿಕೆಗೂ ಬಳಸಲಾಗುತ್ತದೆ.

ಉಪ ಉತ್ಪಾದನೆ ಲಾಭ ಸಿಗಲಿ

 • ಕಬ್ಬು ನಿಯಂತ್ರಣ ಕಾಯ್ದೆ ತಿದ್ದುಪಡಿಯಿಂದ ರೈತರ ಬದಲು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ರೈತ ಮುಖಂಡ ಅಭಿಪ್ರಾಯಟ್ಟಿದ್ದಾರೆ.
 • ಕಬ್ಬಿನ ನೇರ ಉತ್ಪನ್ನಗಳಾದ ಸಕ್ಕರೆ, ಮೊಲಾಸಿಸ್, ಬಗಾಸ್, ಮಡ್ ಲಾಭಾಂಶ ಮಾತ್ರ ರೈತರಿಗೆ ಹಂಚಬೇಕು ಎನ್ನುವ ನಿಯಮವಿದೆ. ಆದರೆ, ಕಾರ್ಖಾನೆಗಳು ಮೊಲಾಸಿಸ್​ನಿಂದ ಉತ್ಪಾದಿಸುವ ಎಥನಾಲ್ ಸಹ ಉಪ ಉತ್ಪಾದನೆ ಆಗಲಿದೆ.

ಖಾಸಗಿ ಮಾಹಿತಿ ರಕ್ಷಣೆ

 • ಸುದ್ಧಿಯಲ್ಲಿ ಏಕಿದೆ? ವ್ಯಕ್ತಿಯ ಖಾಸಗಿ ಮಾಹಿತಿ ರಕ್ಷಣೆ ಕುರಿತು ನೇಮಿಸಲಾಗಿದ್ದ ನ್ಯಾಯಮೂರ್ತಿ ಶ್ರೀಕೃಷ್ಣ ಸಮಿತಿಯು ವರದಿ ನೀಡಿದ್ದು, 13 ಅಂಶಗಳನ್ನು ಖಾಸಗಿ ಮಾಹಿತಿ ಎಂದು ಗುರುತಿಸಿದೆ.

ಏಕೆ ಈ ಸಮಿತಿ ರಚನೆ ?

 • ಡಿಜಿಟಲ್ ಸವಲತ್ತುಗಳ ಬಳಕೆದಾರರ ರಕ್ಷಣೆಗಾಗಿಯೇ ಕೇಂದ್ರ ಸರ್ಕಾರವು ಈ ಸಮಿತಿ ರಚಿಸಿತ್ತು

ಸಮಿತಿ ಶಿಫಾರಸ್ಸುಗಳು

 • ಈ ಮಾಹಿತಿಗಳನ್ನು ಮಾರಾಟ ಮಾಡಿದರೆ -ಠಿ; 5 ಕೋಟಿ ಅಥವಾ ಮಾರಾಟ ಮಾಡಿದ ಸಂಸ್ಥೆಯ ಜಾಗತಿಕ ವ್ಯವಹಾರದ ಶೇ.2 ಮೌಲ್ಯವನ್ನು ದಂಡದ ರೂಪದಲ್ಲಿ ಕಟ್ಟಿಸಿಕೊಳ್ಳಬೇಕು ಎಂದು ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
 • ಬಳಕೆದಾರರ ಡೇಟಾ ಸಂರಕ್ಷಣೆ ಕುರಿತು ಪ್ರತ್ಯೇಕ ‘ವೈಯಕ್ತಿಕ ಡೇಟಾ ಸುರಕ್ಷತಾ ವಿಧೇಯಕ-2018’ನ್ನು ರೂಪಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
 • ವರದಿಯನ್ನು ದೇಶದ ನಾಗರಿಕರುಸರ್ಕಾರ ಹಾಗೂ ಉದ್ಯಮ ಎಂಬ ಮೂರು ವಲಯವನ್ನು ಆಧರಿಸಿ ನೀಡಲಾಗಿದೆ. ಯಾವುದೇ ಸರ್ಕಾರ ಅಥವಾ ಉದ್ಯಮಿಯು ವ್ಯಕ್ತಿಯ ಯಾವುದೇ ಖಾಸಗಿ ಮಾಹಿತಿ ಪಡೆಯುವ ಮುನ್ನ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಸಮಿತಿ ಹೇಳಿದೆ.

ಭಾರತದಲ್ಲೇ ಮಾಹಿತಿ ಸಂಗ್ರಹ?

 • ಎಲ್ಲ ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣದಂಥ ಕಂಪನಿಗಳು ಭಾರತದಲ್ಲಿಯೇ ಮಾಹಿತಿ ಸಂಗ್ರಹಿಸಬೇಕು ಎನ್ನುವ ಮಹತ್ವದ ಶಿಫಾರಸನ್ನು ಸಮಿತಿ ಮಾಡಿದೆ. ಎಲ್ಲ ವೈಯಕ್ತಿಕ ಹಾಗೂ ಸೂಕ್ಷ್ಮ ಮಾಹಿತಿಗಳನ್ನು ಭಾರತದಲ್ಲಿ ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದಿದೆ.

ಸಮಿತಿ ಗುರುತಿಸಿದ ವೈಯಕ್ತಿಕ ಮಾಹಿತಿ

 • ಪಾಸ್​ವರ್ಡ್, ಆರ್ಥಿಕ ಡೇಟಾ, ಆರೋಗ್ಯಕ್ಕೆ ಸಂಬಂಧಿಸಿದ ಡೇಟಾ, ಉದ್ಯೋಗ ಸಂಬಂಧಿ ಗುರುತು, ಲೈಂಗಿಕ ಜೀವನ, ಲೈಂಗಿಕ ಒಲವು, ಬಯೋಮೆಟ್ರಿಕ್ ಡೇಟಾ, ಅನುವಂಶೀಯ ಡೇಟಾ, ಲಿಂಗ ಪರಿವರ್ತನೆಯ ಮಾಹಿತಿ, ನಪುಂಸಕತ್ವದ ಮಾಹಿತಿ, ಜಾತಿ ಅಥವಾ ಪಂಗಡ, ರಾಜಕೀಯ ಅಥವಾ ಧಾರ್ವಿುಕ ನಂಬಿಕೆ ಹಾಗೂ ಒಲವು, ಹಾಗೂ ಕಾಯ್ದೆಯ ಸೆಕ್ಷನ್ 22ರಲ್ಲಿ ಸರ್ಕಾರ ಗುರುತಿಸುವ ಇನ್ನಿತರ ಅಂಶಗಳು
Related Posts
Karnataka Current Affairs – KAS/KPSC Exams – 22nd Feb 2018
Feb 16 procession at Shravanabelagola enters Golden Book of Records The six-kilometre-long procession, taken out around Vindhyagiri as part of the 88th Mahamastakabhisheka on February 16, has entered the Golden Book ...
READ MORE
The Government has launched Crime and Criminal Tracking Network and Systems (CCTNS) in the country. The aim, objective and salient features of CCTNS are : To fully computerize the process of crime ...
READ MORE
Karnataka Current Affairs – KAS / KPSC Exams – 19th April 2017
Ballari to play host to Janapada Rangotsava from April 21 Connoisseurs of art and music are in for an audio-visual treat at the three-day national-level Janapada Rangotsava from April 21 at ...
READ MORE
18th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಎನ್​ಸಿಸಿ ರೀತಿ ಎನ್-ಯೆಸ್ ಸುದ್ಧಿಯಲ್ಲಿ ಏಕಿದೆ? ಯುವ ಸಮುದಾಯದಲ್ಲಿ ಶಿಸ್ತುಬದ್ಧ ಜೀವನಕ್ರಮ ಮತ್ತು ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 10 ಲಕ್ಷ ಯುವಕರು ಮತ್ತು ಯುವತಿಯರಿಗೆ ತರಬೇತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ರಾಷ್ಟ್ರೀಯ ಯುವ ಸಬಲೀಕರಣ ಯೋಜನೆ (ಎನ್-ವೈಇಎಸ್) ಎಂಬ ಈ ...
READ MORE
National Current Affairs – UPSC/KAS Exams- 15th April 2019
UPI and E-Wallets Topic: Economy In News: While digital payments overall have been growing strongly, people are changing the way they transact, choosing bank-to-bank methods such as the Unified Payments Interface (UPI) ...
READ MORE
MoU to co-regulate misleading advertisements in the AYUSH sector
In order to curtail malpractices in the advertisement of AYUSH drugs, the Ministry of AYUSH has signed a MoU with the Advertising Standards Council of India (ASCI). Addressing the cases of ...
READ MORE
Everything you need to know about Bandipur Forest Fire
Fire in Kalkere Range Thousands of acres of forest cover burnt down in forest fire in Bandipur tiger reserve on Saturday and a forest guard succumbed to burn injuries while preventing the flames ...
READ MORE
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ದೇವಾಲಯಗಳ ದೇಣಿಗೆ ಕಡ್ಡಾಯವೆಂಬ ಆದೇಶ ತಿದ್ದುಪಡಿ ಸುದ್ಧಿಯಲ್ಲಿ ಏಕಿದೆ ? ರಾಜ್ಯದ 81 ದೇವಾಲಯಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು 12.38 ಕೋಟಿ ಹಣ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್‌ ಇತ್ಯರ್ಥಗೊಳಿಸಿದೆ. ಹಿನ್ನಲೆ ಸರಕಾರ ಆ.21ರಂದು ಹೊರಡಿಸಿದ್ದ ಆದೇಶದ ಪ್ರಕಾರ ...
READ MORE
National Current Affairs – UPSC/KAS Exams- 1st November 2018
India moves up to 77th rank in Ease of Doing Business Index Topic: Indian Economy IN NEWS: India jumped 23 ranks in the World Bank's Ease of Doing Business Index 2018 to ...
READ MORE
Karnataka Current Affairs – KAS/KPSC Exams – 27th Nov 2017
'Agni Sakhi' eco-friendly stove to light up 130 rural homes "Agni Sakhi', a boon to village home-makers in the taluk, has entered the kitchens of the women of Shidlaghatta taluk, thanks ...
READ MORE
Karnataka Current Affairs – KAS/KPSC Exams – 22nd
Crime and Criminal Tracking Network and Systems
Karnataka Current Affairs – KAS / KPSC Exams
18th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
National Current Affairs – UPSC/KAS Exams- 15th April
MoU to co-regulate misleading advertisements in the AYUSH
Everything you need to know about Bandipur Forest
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams- 1st November
Karnataka Current Affairs – KAS/KPSC Exams – 27th

Leave a Reply

Your email address will not be published. Required fields are marked *