“28th ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಮೇಕೆದಾಟು ಯೋಜನೆ

1

ಸುದ್ಧಿಯಲ್ಲಿ ಏಕಿದೆರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ಹಿನ್ನಡೆಯಾಗಿದೆ.

 • ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶನ ನೀಡಿದೆ.

ಹಿನ್ನಲೆ

 • ಕಾವೇರಿ ನದಿಯಲ್ಲಿ ಹರಿದು ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಪ್ರದೇಶದಲ್ಲಿ ಜಲಾಶಯ ನಿರ್ಮಾಣ ಮಾಡಲು ಅನುಮತಿ ಕೋರಿ ರಾಜ್ಯ ಸರ್ಕಾರ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಮತ್ತು ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಬಗ್ಗೆ ಅಧ್ಯಯನ ನಡೆಸಿರುವ ಜಲ ಆಯೋಗ, ಯೋಜನೆ ಸಾಧ್ಯತೆ ಕುರಿತ ರಾಜ್ಯದ ವರದಿಗೆ ಸಮ್ಮತಿಸಿದೆ.

ಏನಿದು ಮೇಕೆದಾಟು ಯೋಜನೆ?

 • ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಅಂದಾಜು 30-35 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ರಾಜ್ಯದ ಉದ್ದೇಶ. ಅಲ್ಲದೆ ಬೃಹತ್ ಪ್ರಮಾಣದ ವಿದ್ಯುತ್ ಉತ್ಪಾದನೆಗೂ ರಾಜ್ಯ ಯೋಜನೆ ಹಾಕಿಕೊಂಡಿದೆ.
 • ಮೇಕೆದಾಟು ಯೋಜನೆ ಮೂಲಕ ಬೇಸಿಗೆ ಕಾಲದಲ್ಲಿ ಉಂಟಾಗುವ ನೀರಿನ ಕೊರತೆಯನ್ನ ನೀಗಿಸಬಹುದು ಮತ್ತು ಅಗತ್ಯಬಿದ್ದಾಗ ಕೃಷಿಗೂ ಬಳಸಿಕೊಳ್ಳಬಹುದು. ತಮಿಳುನಾಡಿಗೆ ಅದರ ಪಾಲಿನ 177 ಟಿಎಂಸಿ ನೀರನ್ನು ನೀಡಿ, ಬಾಕಿ ಸಮುದ್ರಕ್ಕೆ ಹೋಗಿ ವ್ಯರ್ಥವಾಗುವ ನೀರನ್ನು ಮೇಕೆದಾಟುವಿನಲ್ಲಿ ಸಂಗ್ರಹಿಸಹುದು ಎಂಬುದು ರಾಜ್ಯ ಸರ್ಕಾರ ಲೆಕ್ಕಾಚಾರ ಹಾಕಿದೆ. ಇದಕ್ಕೀಗ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ರಾಜ್ಯಕ್ಕೆ ಮೊದಲ ಹಂತದ ಮುನ್ನಡೆ ಸಿಕ್ಕಂತಾಗಿದೆ.

ಪ್ರಿ ಫೀಸಿಬಿಲಿಟಿ ರಿಪೋರ್ಟ್

 • ಪ್ರಿ ಫೀಸಿಬಿಲಿಟಿ ರಿಪೋರ್ಟ್ ಎಂದರೆ ಯೋಜನೆಯ ಸಾಧ್ಯಾಸಾಧ್ಯತೆ ವರದಿ ಅಥವಾ ಕಾರ್ಯಸಾಧ್ಯ ವರದಿ ಎನ್ನಬಹುದು.

ಏನಿದರ ಉದ್ದೇಶ?

 • 66 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸಿ, ರಾಮನಗರ ಹಾಗೂ ಬೆಂಗಳೂರು ಸೇರಿ ಸುತ್ತಮುತ್ತಲ ಪ್ರದೇಶಕ್ಕೆ ನೀರು ಹಾಗೂ ವಿದ್ಯುತ್‌ ಉತ್ಪಾದನೆ ಮಾಡುವುದು ಯೋಜನೆ ಪ್ರಮುಖ ಉದ್ಧೇಶವಾಗಿದೆ.
 • ಬೆಂಗಳೂರು ಭಾಗಕ್ಕೆ ಸುಮಾರು 16 ಟಿಎಂಸಿ ನೀರು ತರಲು ಉದ್ಧೇಶಿಸಲಾಗಿದ್ದು, ಸುಮಾರು 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಅವಕಾಶ ಇರಲಿದೆ. ಈ ಮೂಲಕ ರಾಜಧಾನಿಯ ವಿದ್ಯುತ್‌ ಸಮಸ್ಯೆಯನ್ನು ನಿವಾರಿಸಲು ಸರಕಾರ ಯೋಜನೆ ರೂಪಿಸಿದೆ.

ಯಾರ್ಯಾರಿಗೆ ಲಾಭ?

 • ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಪ್ರಯೋಜನವಾಗಲಿದೆ

ಪ್ರಾಣಿ ಸಂಕುಲಕ್ಕೆ ವರ

 • ಯೋಜನೆಯಿಂದಾಗಿ 4 ಸಾವಿರ ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ ಎನ್ನುವ ಭೀತಿ ಇದ್ದರೂ ಅಣೆಕಟ್ಟೆಯಿಂದಾಗಿ ನೀರು ಸಂಗ್ರಹವಾದರೆ ನೀರು ಮತ್ತು ಮೇವಿನ ಕೊರತೆ ನೀಗುತ್ತದೆ.
 • ಜತೆಗೆ ಕಾಡಂಚಿನ ಗ್ರಾಮಗಳಿಗೆ ಆನೆ ಸೇರಿ ಇತರ ಕಾಡುಪ್ರಾಣಿಗಳ ಉಪಟಳವೂ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
 • ಅಲ್ಲದೆ ನೀರು ಸಂಗ್ರಹಣೆ ಯಿಂದಾಗಿ ಕಾವೇರಿ ವನ್ಯಜೀವಿಧಾಮ ಸುತ್ತ ಅಪರೂಪದ ದೈತ್ಯ ಅಳಿಲು ಸೇರಿ ಕಾಡುಪ್ರಾಣಿಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎನ್ನುವ ಲೆಕ್ಕಾಚಾರವೂ ಇದೆ.

ಮೂರು ಸ್ಥಳ ಗುರುತು

 • ಅಣೆಕಟ್ಟೆಗಾಗಿ ಸಂಗಮ ಅರಣ್ಯ ಪ್ರದೇಶ ವ್ಯಾಪ್ತಿಯ ಮೇಕೆದಾಟು, ಒಂಟಿಗುಂಡು ಹಾಗೂ ಬೊಮ್ಮಸಂದ್ರ ಸಮೀಪದ ಮಹಾಮಡು ಎಂಬ ಸ್ಥಳವನ್ನು ಅಧಿಕಾರಿಗಳು ಗುರುತಿಸಿದ್ದಾರೆ.

ವಾಯುಮಾಲಿನ್ಯ ತಗ್ಗಿಸಲು ಗುರಿ

2

ಸುದ್ಧಿಯಲ್ಲಿ ಏಕಿದೆ?ಬೆಂಗಳೂರು ಸೇರಿ ದೇಶದ 102 ನಗರಗಳಲ್ಲಿ 2024ರ ಹೊತ್ತಿಗೆ ವಾಯುಮಾಲಿನ್ಯ ಪ್ರಮಾಣವನ್ನು ಶೇ. 20ರಿಂದ 30 ತಗ್ಗಿಸುವಂತೆ ಕೇಂದ್ರ ಪರಿಸರ ಸಚಿವಾಲಯ ಸೂಚಿಸಿದೆ.

 • ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮ ಅನ್ವಯ (ಎನ್​ಸಿಎಪಿ) ಈ ಕ್ರಮ ಕೈಗೊಳ್ಳುವಂತೆ ಸಚಿವಾಲಯ ಸೂಚಿಸಿದೆ.
 • ವಾಯು ಮಾಲಿನ್ಯ ಇಳಿಸಲು ಕಾಲಮಿತಿಯಲ್ಲಿ ಕ್ರಿಯಾಯೋಜನೆ ರೂಪಿಸಿ ಜಾರಿ ಮಾಡಬೇಕು.
 • ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಆಧಾರದಲ್ಲಿ ‘ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾ್ಯನ್’(ಜಿಆರ್ಎಪಿ) ರೂಪಿಸಬೇಕು ಎಂದು ಎನ್​ಸಿಎಪಿಯಲ್ಲಿ ಸೂಚಿಸಲಾಗಿದೆ.
 • ವಾಯುಮಾಲಿನ್ಯ ತಡೆ, ನಿಯಂತ್ರಣ ಮತ್ತು ಇಳಿಕೆ ಉದ್ದೇಶದಿಂದ ಎನ್​ಸಿಎಪಿ ಸಮಗ್ರ ನಿರ್ವಹಣಾ ಯೋಜನೆಯೊಂದನ್ನು ರೂಪಿಸಿದೆ. ದೇಶಾದ್ಯಂತ ವಾಯು ಗುಣಮಟ್ಟದ ಮೇಲೆ ನಿಗಾ ಇರಿಸುವ ಜಾಲದ ಕಾರ್ಯಕ್ಷಮತೆ ಹೆಚ್ಚಳ ಮಾಡುವ ಉದ್ದೇಶವೂ ಇದೆ.
 • ಈ ಕಾರ್ಯಕ್ರಮ ಜಾರಿಗಾಗಿ ವಿಶ್ವ ಬ್ಯಾಂಕ್, ಜರ್ಮನ್ ಡೆವಲಪ್​ವೆುಂಟ್ ಏಜೆನ್ಸಿ, ಏಷ್ಯನ್ ಡೆವಲಪ್​ವೆುಂಟ್ ಬ್ಯಾಂಕ್, ಮೆಕ್ಸಿಕೊ, ಸ್ವಿಜರ್ಲೆಂಡ್, ಜಪಾನ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪಟ್ಟಿಯಲ್ಲಿರುವ ನಗರಗಳು

 • ದೆಹಲಿ, ಮುಂಬೈ, ಪುಣೆ, ವಾರಾಣಸಿ, ಕಾನ್ಪುರ, ಲಖನೌ, ಅಲಹಾಬಾದ್, ಕೋಲ್ಕತ, ಚಂಡೀಗಢ, ಜೈಪುರ್, ಜಮ್ಮು, ಜಲಂಧರ್, ಲೂಧಿಯಾನ, ಪಟನಾ, ಹೈದರಾಬಾದ್.

ಯೋಜನೆ ವಿಶೇಷ ಏನು?

 • ಸಹಯೋಗ ಮತ್ತು ಪಾಲ್ಗೊಳ್ಳುವಿಕೆ ಪರಿಕಲ್ಪನೆಯಲ್ಲಿ ಎನ್​ಸಿಎಪಿ ಜಾರಿಯಾಗಲಿದೆ. ವಿದ್ಯುತ್ ಉತ್ಪಾದನಾ ಸ್ಥಾವರ, ಸಾರಿಗೆ, ಕೈಗಾರಿಕೆ, ವಸತಿ ಪ್ರದೇಶ, ಕೃಷಿ ವಲಯಗಳು ಈ ಯೋಜನೆಯಲ್ಲಿ ಭಾಗವಹಿಸಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧಿತ ಸಚಿವಾಲಯಗಳು ಹಾಗೂ ಸ್ಥಳೀಯ ಆಡಳಿತಗಳು ಯೋಜನೆ ಯಶಸ್ಸಿಗೆ ಪರಸ್ಪರ ಸಹಕಾರ ನೀಡಲಿವೆ.

ಜಿ-20 ಶೃಂಗ

3

ಸುದ್ಧಿಯಲ್ಲಿ ಏಕಿದೆ?ಎರಡು ದಿನ ನಡೆಯುವ ಜಿ-20 ಶೃಂಗದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅರ್ಜೆಂಟೀನಾಗೆ ತೆರಳಲಿದ್ದಾರೆ.

 • ಶೃಂಗದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಸೇರಿ ಬ್ರಿಕ್ಸ್ ದೇಶಗಳ ಮುಖ್ಯಸ್ಥರ ಜತೆಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
 • ಜಿ-20 ಶೃಂಗದಲ್ಲಿ ಪ್ರಧಾನಿ ಮೋದಿ ಅವರು ಡಿಜಿಟಲ್ ಇಂಡಿಯಾ, ಆಯುಷ್ಮಾನ್ ಭಾರತ್, ಮಣ್ಣಿನ ಆರೋಗ್ಯದ ಕಾರ್ಡ್ ಸೇರಿ ಇತರ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ.
 • ಇದಲ್ಲದೇ ಜಿ-20 ಶೃಂಗಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 10 ವರ್ಷಗಳ ಹಿನ್ನೋಟ ಹಾಗೂ ಮುನ್ನೋಟದ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.
 • ವಾಣಿಜ್ಯ ಸಮರ ಹಾಗೂ ಇರಾನ್ ಮೇಲಿನ ಅಮೆರಿಕ ನಿರ್ಬಂಧದ ಹಿನ್ನೆಲೆಯಲ್ಲಿ ಈ ಬಾರಿಯ 13ನೇ ಶೃಂಗ ಆವೃತ್ತಿ ಭಾರಿ ಮಹತ್ವ ಪಡೆದುಕೊಂಡಿದೆ.

ಜಿ20

 • ಅಂತರರಾಷ್ಟ್ರೀಯ ಆರ್ಥಿಕ ಸಹಕಾರ ಮತ್ತು ನಿರ್ಣಯ ತಯಾರಿಕೆಗಾಗಿ ಟ್ವೆಂಟಿ ಗುಂಪು (ಜಿ 20) ಪ್ರಮುಖ ವೇದಿಕೆಯಾಗಿದೆ. ಆರ್ಥಿಕ ಸಮಸ್ಯೆಗಳು ಮತ್ತು ಇತರ ಪ್ರಮುಖ ಅಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಲು 20 ಪ್ರಮುಖ ಆರ್ಥಿಕತೆಗಳಿಂದ ಸರ್ಕಾರಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ಗಳಿಗೆ ಇದು ವೇದಿಕೆಯಾಗಿದೆ.
 • ಜಾಗತಿಕ GDP ಯ 85%, ಅಂತಾರಾಷ್ಟ್ರೀಯ ವ್ಯಾಪಾರದ 80%, ವಿಶ್ವದ ಜನಸಂಖ್ಯೆಯ 65% ರನ್ನು ಪ್ರತಿನಿಧಿಸುವ ಒಟ್ಟು 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟ (ಇಯು) ಜಿ 20 ಒಳಗೊಂಡಿದೆ.
 • ಇದರ ಸದಸ್ಯರು ಆಸ್ಟ್ರೇಲಿಯಾ, ಅರ್ಜೆಂಟೀನಾ, ಬ್ರೆಜಿಲ್, ಕೆನಡಾ, ಚೀನಾ, ಭಾರತ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ಸೌದಿ ಅರೇಬಿಯಾ, ರಷ್ಯಾ, ಟರ್ಕಿ, ದಕ್ಷಿಣ ಆಫ್ರಿಕಾ, ಯುಕೆ, ಯುಎಸ್ ಮತ್ತು ಯುರೋಪಿಯನ್ ಒಕ್ಕೂಟ.
 • ಆಗ್ನೇಯ ಏಷ್ಯಾದ (ಟೈಗರ್ ಅರ್ಥವ್ಯವಸ್ಥೆ) ಆರ್ಥಿಕ ಬಿಕ್ಕಟ್ಟಿನ ನಂತರ 1999 ರಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ಗಳ ಸಭೆಯಾಗಿ ಇದನ್ನು ಪ್ರಾರಂಭಿಸಲಾಯಿತು.
 • ಅಂತರಾಷ್ಟ್ರೀಯ ಆರ್ಥಿಕ ಸ್ಥಿರತೆಯ ಉತ್ತೇಜನೆಗೆ ಸಂಬಂಧಿಸಿದಂತೆ ನೀತಿ ವಿಷಯಗಳ ಉನ್ನತ ಮಟ್ಟದ ಚರ್ಚೆಯನ್ನು ಅಧ್ಯಯನ ಮಾಡಲು, ಪರಿಶೀಲಿಸಲು ಮತ್ತು ಉತ್ತೇಜಿಸಲು ಇದನ್ನು ಸ್ಥಾಪಿಸಲಾಯಿತು.
Related Posts
Karnataka Current Affairs – KAS/KPSC Exams – 19th April 2018
Bescom starts project to track the life cycle of transformers The power utility is implementing a new Distribution Transformer Lifecycle Management Software (DTLMS) for approximately three lakh transformers spread across eight ...
READ MORE
RGRHCL means - Rajiv Gandhi Rural Housing Corporation Limited
Indira Awas Yojana This Centrally Sponsored Scheme was introduced during 1989-90 for rural homeless people who are below the poverty line. 60% of the target is earmarked for SCs/STs, 15% for minorities and ...
READ MORE
Karnataka: Cabinet approves 5,912-cr Mekedatu reservoir project
The Cabinet on 15th Feb gave in-principle approval for implementing the long-pending Mekedatu multipurpose project utilising the Cauvery river water at a cost of Rs 5,912 crore. The project will help ...
READ MORE
Karnataka-Urban Development-Urban Slums
Urban Slums The population living in urban slums in Karnataka has raised from 14.02 lakh (2001) to 32.91 lakh (2011) in a decade. This is a rise from 7.8 per cent of the total urban population ...
READ MORE
Karnataka Current Affairs – KAS/KPSC Exams – 5th April 2018
Udupi man wins silver medal, brings laurels to country Gururaja Poojary, a sportsperson from Udupi district, has brought laurels to the country by winning a silver medal in the Gold Coast ...
READ MORE
Karnataka Current Affairs – KAS/KPSC Exams – 22nd March 2019
Bengaluru sees the least number of registrations of persons with disabilities Tumakuru has the highest with 28,430 voters with disabilities seeking special facilities Bengaluru has reported the least number of ...
READ MORE
The government, during the Budget session of the Parliament, plans to amend The mining law which is holding up mergers and acquisitions worth thousands of crore in the distressed commodities and ...
READ MORE
“23rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬಹು ಅಂಚೆ ಸೇವೆಗಳಿಗೆ ಏಕ ತಂತ್ರಜ್ಞಾನ ಭಾರತೀಯ ಅಂಚೆ ಇಲಾಖೆಯು ರಾಜ್ಯದ ಎಲ್ಲಾ ಅಂಚೆ ಕಚೇರಿಗಳಲ್ಲಿ 'ಕೋರ್‌ ಸಿಸ್ಟಂ ಇಂಟಿಗ್ರೇಟರ್‌' ಎಂಬ ನೂತನ ಸಾಫ್ಟ್‌ವೇರ್‌ ಅಳವಡಿಸುವ ಮೂಲಕ ಹಲವು ಅಂಚೆ ಸೇವೆಗಳಿಗೆ ಬೇರೆ ಬೇರೆಯಾಗಿದ್ದ ತಂತ್ರಾಂಶಗಳನ್ನು ರದ್ದುಪಡಿಸಿ, ಇದೀಗ ಏಕ ವ್ಯವಸ್ಥೆ ಅಳವಡಿಸಿಕೊಂಡಿದೆ. ಉಳಿತಾಯ ...
READ MORE
Karnataka Current Affairs – KAS/KPSC Exams – 19th July 2018
Namma Metro pushes to Kannada literature Kannada language and literature is all set to get a presence on Namma Metro. If all goes as per plan, the Vijayanagar metro station will have ...
READ MORE
Current Affairs – Karnataka – KAS / KPSC – Exams – 31st March
Second unit of Yeramarus power plant commissioned The second 800-MW unit of Yeramarus thermal plant in Raichur district was commissioned on 30th March. The first unit of the 2x800 MW plant was ...
READ MORE
Karnataka Current Affairs – KAS/KPSC Exams – 19th
Rural Development – Housing – Indira Awas Yojana
Karnataka: Cabinet approves 5,912-cr Mekedatu reservoir project
Karnataka-Urban Development-Urban Slums
Karnataka Current Affairs – KAS/KPSC Exams – 5th
Karnataka Current Affairs – KAS/KPSC Exams – 22nd
MMDR Act of 2015 to be amended
“23rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams – 19th
Current Affairs – Karnataka – KAS / KPSC

Leave a Reply

Your email address will not be published. Required fields are marked *