ಗೂಗಲ್ ಸ್ಟ್ರೀಟ್ ವ್ಯೂಗೆ ಅನುಮತಿ ಇಲ್ಲ
- ದೇಶದ ಯಾವುದೇ ಪ್ರಮುಖ ಸ್ಥಳಗಳು ಮತ್ತು ಬೀದಿಗಳ 360 ಡಿಗ್ರಿ ಕೋನದ ಚಿತ್ರಗಳನ್ನು ತೋರಿಸುವ ‘ಗೂಗಲ್ ಸ್ಟ್ರೀಟ್ ವ್ಯೂ’ ಸೇವೆಯ ಜಾರಿಗೆ ಅನುಮತಿ ನೀಡಿಲ್ಲ’ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
- ‘ದೇಶದ ಕೆಲವು ನಗರಗಳಲ್ಲಿ ಇದನ್ನು ಗೂಗಲ್ ಪ್ರಾಯೋಗಿಕವಾಗಿ ಜಾರಿ ಮಾಡಿದೆ. ದೇಶದ ಎಲ್ಲ ಪ್ರದೇಶಗಳ 360 ಡಿಗ್ರಿ ಕೋನದ ಚಿತ್ರಗಳನ್ನು ಒದಗಿಸುವ ಸೇವೆ ಆರಂಭಿಸಲು ಅನುಮತಿ ನೀಡಿ ಎಂದು ಗೂಗಲ್ 2015ರಲ್ಲೇ ಪ್ರಸ್ತಾವ ಸಲ್ಲಿಸಿತ್ತು.
ಏನಿದು ಸ್ಟ್ರೀಟ್ ವ್ಯೂ?
- 360 ಡಿಗ್ರಿ ಕೋನದ ಚಿತ್ರಗಳನ್ನು ಸೆರೆಹಿಡಿಯುವ ಕ್ಯಾಮೆರಾಗಳನ್ನು ಹೊತ್ತ ವಾಹನಗಳು ಆಯ್ದ ನಗರಗಳ ಪ್ರತೀ ರಸ್ತೆಗಳಲ್ಲೂ ಸಂಚರಿಸಿ, ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಅವನ್ನು ಗೂಗಲ್ ಮ್ಯಾಪ್, ಗೂಗಲ್ ಅರ್ಥ್ ಮತ್ತು ಗೂಗಲ್ ಸ್ಟ್ರೀಟ್ ವ್ಯೂ ಅಪ್ಲಿಕೇಷನ್ಗಳಿಗೆ ಅಪ್ಲೋಡ್ ಮಾಡಲಾಗಿರುತ್ತದೆ.
- ಈ ಮೂರೂ ಅಪ್ಲಿಕೇಷನ್ಗಳಲ್ಲಿ ಯಾವುದೇ ಸ್ಥಳಗಳನ್ನು ಆಯ್ಕೆ ಮಾಡಿದರೆ, ಅದರ ನಕ್ಷೆಯ ಜತೆಗೆ ಚಿತ್ರಗಳ ಪಟ್ಟಿಯೂ ಗೋಚರಿಸುತ್ತದೆ. ಆ ಪಟ್ಟಿಯಲ್ಲಿ ಕೆಲವು ಪನೋರಮಾ ಚಿತ್ರಗಳೂ ಇರುತ್ತವೆ. ಆ ಚಿತ್ರಗಳ ಮೇಲೆ ಕ್ಲಿಕ್ ಮಾಡಿದರೆ ಅವು ತೆರೆದುಕೊಳ್ಳುತ್ತವೆ. ಅವುಗಳ ಮೇಲೆ ಕಂಪ್ಯೂಟರ್ ಮೌಸ್ನ ಕರ್ಜರ್ (ಸ್ಮಾರ್ಟ್ಫೋನ್ಗಳ ಪರದೆ ಮೇಲೆ ಬೆರಳು ಇಟ್ಟು) ಇಟ್ಟು ನಮಗೆ ಬೇಕಾದತ್ತ ಚಿತ್ರವನ್ನು ತಿರುಗಿಸಬಹುದು. ಆಗ ನಾವು ತಿರುಗಿಸಿದ ದಿಕ್ಕಿನಲ್ಲಿರುವ ಚಿತ್ರ ಗೋಚರಿಸುತ್ತದೆ. ನಾವು ಒಂದು ಸ್ಥಳದಲ್ಲಿ ನಿಂತು ಕತ್ತನ್ನು ತಿರುಗಿಸಿ ಹಿಂದೆ–ಮುಂದೆ, ಮೇಲೆ–ಕೆಳಗೆ ಮತ್ತು ಅಕ್ಕ–ಪಕ್ಕ ನೋಡಿದರೆ ಆಗುವಂತಹ ಅನುಭವವನ್ನೇ ಈ ಚಿತ್ರಗಳೂ ಕೊಡುತ್ತವೆ.
- ನೆಲಮಟ್ಟದಲ್ಲಿ ನಿಂತು ಸೆರೆಹಿಡಿದಂತೆ ಈ ಚಿತ್ರಗಳಿರುತ್ತವೆ. ಹೀಗಾಗಿ ಇವನ್ನು ಸ್ಟ್ರೀಟ್ ವ್ಯೂ ಎಂದು ಕರೆಯಲಾಗುತ್ತದೆ.
- ಮೈಸೂರು ಅರಮನೆಯ ಚಿತ್ರ: ಸದ್ಯ ತಾಜ್ಮಹಲ್, ಕುತುಬ್ ಮಿನಾರ್, ಕೆಂಪುಕೋಟೆ, ವಾರಾಣಸಿಯಲ್ಲಿ ನದಿ ದಂಡೆ, ನಳಂದಾ ವಿಶ್ವವಿದ್ಯಾಲಯ, ಮೈಸೂರು ಅರಮನೆ, ತಂಜಾವೂರಿನ ದೇವಾಲಯ ಮತ್ತು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ 360 ಡಿಗ್ರಿ ಕೋನದ ಚಿತ್ರಗಳನ್ನು ಮಾತ್ರ ಗೂಗಲ್ ಪ್ರಾಯೋಗಿಕವಾಗಿ ಒದಗಿಸುತ್ತಿದೆ. ಉಳಿದಂತೆ ಈ ಮೂರೂ ಅಪ್ಲಿಕೇಷನ್ಗಳಲ್ಲಿ ಇರುವ ಬೇರೆ ಚಿತ್ರಗಳು ಬಳಕೆದಾರರು ಸೆರೆಹಿಡಿದು, ಅಪ್ಲೋಡ್ ಮಾಡಿದ ಚಿತ್ರಗಳಾಗಿವೆ.
- ಆ್ಯಂಡ್ರಾಯ್ಡ್ ಫೋನ್ಗಳಲ್ಲಿ ‘ಗೂಗಲ್ ಸ್ಟ್ರೀಟ್ ವ್ಯೂ’ ಆ್ಯಪ್ ಅಳವಡಿಸಿಕೊಂಡಿರೆ, ಅಂತಹ ಚಿತ್ರಗಳನ್ನು ಅಪ್ಲೋಡ್ ಮಾಡಬಹುದು.
ಭಾರತೀಯರಿಗೆ ನೆಮ್ಮದಿ ಗಗನ ಕುಸುಮ
- ವಿಶ್ವ ನೆಮ್ಮದಿ ರ್ಯಾಂಕಿಂಗ್ನಲ್ಲಿ ಭಾರತವು, ತನ್ನ ನೆರೆಯ ದೇಶಗಳಿಗಿಂತ ತೀರಾ ಹಿಂದೆ ಇದೆ. ಜಗತ್ತಿನಲ್ಲಿ ಫಿನ್ಲೆಂಡ್ ಅತ್ಯಂತ ನೆಮ್ಮದಿಯುತ ದೇಶವೆನಿಸಿದ್ದು, ಮೊದಲ ರ್ಯಾಂಕ್ ಪಡೆದಿದೆ. ಬುರುಂಡಿ 156ನೇ ರ್ಯಾಂಕ್ ಪಡೆದಿದ್ದು, ಅತ್ಯಂತ ಕಡಿಮೆ ನೆಮ್ಮದಿ ಇರುವ ದೇಶ ಎನಿಸಿದೆ.
- ವಿಶ್ವಸಂಸ್ಥೆಯ ‘ಸಸ್ಟೇನೆಬಲ್ ಡೆವಲಪ್ಮೆಂಟ್ ಸಲ್ಯೂಷನ್ಸ್ ನೆಟ್ವರ್ಕ್’ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ.
ಮಾನದಂಡಗಳು
- ‘ಐದು ಮಾನದಂಡಗಳನ್ನು ಪರಿಶೀಲಿಸಿ ಈ ಅಧ್ಯಯನ ನಡೆಸಲಾಗಿದೆ. ಆ ಮಾನದಂಡಗಳಿಗೆ ಸಂಬಂಧಿಸಿದಂತೆ ಆಯಾ ದೇಶಗಳ ಸರ್ಕಾರಗಳು ಬಿಡುಗಡೆ ಮಾಡಿರುವ ವರದಿಗಳು ಮತ್ತು ವಿಶ್ವಸಂಸ್ಥೆಯ ವರದಿಗಳನ್ನು ಪರಿಶೀಲಿಸಿ ಹಾಗೂ ಸಮೀಕ್ಷೆಗಳನ್ನು ನಡೆಸಿ ಈ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ
ಜಿಡಿಪಿ
- ಆಯಾ ದೇಶಗಳ ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು (ಜಿಡಿಪಿ) ಲೆಕ್ಕಹಾಕಿ, ಆಯಾ ದೇಶದ ಜನರ ಕೊಳ್ಳುವ ಶಕ್ತಿಯನ್ನು ಅಂದಾಜು ಮಾಡಲಾಗಿದೆ. ಜನರ ಕೊಳ್ಳುವ ಶಕ್ತಿ ಹೆಚ್ಚಿದ್ದಷ್ಟೂ ಅಲ್ಲಿ ನೆಮ್ಮದಿ ಹೆಚ್ಚು ಎಂದು ಪರಿಗಣಿಸಲಾಗಿದೆ
ಆರೋಗ್ಯಕರ ಜೀವಿತಾವಧಿ ಅಂದಾಜು
- ಒಂದು ದೇಶದ ಜನರ ಸರಾಸರಿ ಜೀವಿತಾವಧಿಯನ್ನು ಇದಕ್ಕೆ ಪರಿಗಣಿಸಲಾಗುತ್ತದೆ. ಜನರ ಆರೋಗ್ಯ ಚೆನ್ನಾಗಿದ್ದಲ್ಲಿ, ಜೀವಾತಾವಧಿ ಹೆಚ್ಚಿರುತ್ತದೆ, ಜತೆಗೆ ನೆಮ್ಮದಿಯೂ ಹೆಚ್ಚು. ವಿಶ್ವಸಂಸ್ಥೆಯ ವರದಿಯನ್ನು ಆಧಾರವಾಗಿಟ್ಟುಕೊಂಡು ಇದನ್ನು ಲೆಕ್ಕ ಹಾಕಲಾಗಿದೆ
ಸಾಮಾಜಿಕ ಬೆಂಬಲ
- ಕಷ್ಟಕಾಲದಲ್ಲಿ ನೆರೆಹೊರೆಯವರು, ಸ್ನೇಹಿತರು ಮತ್ತು ಸಂಬಂಧಿಕರಿಂದ ದೊರೆಯುವ ಯಾವುದೇ ರೀತಿಯ ನೆರವನ್ನು ಇಲ್ಲಿ ಬೆಂಬಲ ಎಂದು ಪರಿಗಣಿಸಲಾಗಿದೆ. ಸಾಮಾಜಿಕ ನೆರವು ಅರ್ಥಾತ್ ಬೆಂಬಲದ ಪ್ರಮಾಣ ಹೆಚ್ಚಿದ್ದರೆ, ನೆಮ್ಮದಿ ಹೆಚ್ಚಾಗಿಯೇ ಇರುತ್ತದೆ. ಇದನ್ನು ಕಂಡುಕೊಳ್ಳಲು ಸಮೀಕ್ಷೆ ನಡೆಸಲಾಗಿತ್ತು
ಸ್ವಾತಂತ್ರ್ಯ
- ವ್ಯಕ್ತಿಯೊಬ್ಬ ತನ್ನಿಚ್ಛೆಯ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ಇರುವ ಸ್ವಾತಂತ್ರ್ಯ. ಅಂದರೆ ಓದು, ಉದ್ಯೋಗ, ಆಹಾರ, ವಿವಾಹ ಮತ್ತಿತರ ವಿಷಯಗಳಲ್ಲಿ ಇರುವ ಆಯ್ಕೆಯ ಸ್ವಾತಂತ್ರ್ಯ. ಸಮೀಕ್ಷೆ ನಡೆಸಿ ಇದನ್ನು ಕಂಡುಕೊಳ್ಳಲಾಗಿತ್ತು
ಭ್ರಷ್ಟಾಚಾರದ ಗ್ರಹಿಕೆ
- ತಮ್ಮ ದೇಶದಲ್ಲಿ ಭ್ರಷ್ಟಾಚಾರವಿದೆ ಎಂಬ ಜನರ ಭಾವನೆಯನ್ನು ಲೆಕ್ಕಹಾಕಿ ಇದನ್ನು ನಿರ್ಧರಿಸಲಾಗುತ್ತದೆ. ತಮ್ಮ ದೇಶದಲ್ಲಿ ಭ್ರಷ್ಟಾಚಾರ ಇದೆ ಎಂದು ಹೆಚ್ಚು ಜನರು ಭಾವಿಸಿದಷ್ಟೂ ನೆಮ್ಮದಿಯ ರ್ಯಾಂಕಿಂಗ್ ಪಟ್ಟಿಯಲ್ಲಿ ಆ ದೇಶ ಕುಸಿಯುತ್ತದೆ. ಸಮೀಕ್ಷೆಯ ಮೂಲಕ ಇದನ್ನು ಕಂಡುಕೊಳ್ಳಲಾಗಿದೆ.
ಸಿಜೆಐ ವಿರುದ್ಧ ಮಹಾಭಿಯೋಗ ನಿಲುವಳಿ?
- ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ ನಿಲುವಳಿ ಮಂಡಿಸುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಪ್ರಯತ್ನಕ್ಕೆ ಮರುಚಾಲನೆ ಸಿಕ್ಕಿದೆ.
- ಸುಪ್ರೀಂಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳು ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಎತ್ತಿದ್ದ ಆಕ್ಷೇಪಗಳಿಗೆ ಸೂಕ್ತ ಪರಿಹಾರ ಒದಗಿಸಲು ಮುಖ್ಯ ನ್ಯಾ. ಮಿಶ್ರಾ ವಿಫಲರಾಗಿದ್ದಾರೆ ಎಂಬುದು ವಿಪಕ್ಷಗಳ ಆರೋಪವಾಗಿದೆ.
- ಜನವರಿಯಲ್ಲೇ ಮಿಶ್ರಾ ವಿರುದ್ಧ ಎಡಪಕ್ಷಗಳು ಮಹಾಭಿಯೋಗಕ್ಕೆ ಸಿದ್ಧತೆ ನಡೆಸಿದ್ದವಾದರೂ ನ್ಯಾಯಮೂರ್ತಿಗಳೇ ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದರಿಂದಾಗಿ ಪ್ರಯತ್ನ ಫಲಕೊಟ್ಟಿರಲಿಲ್ಲ.
- ಸಮಾನಮನಸ್ಕ ಪಕ್ಷಗಳ ಬೆಂಬಲ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನೂ ಹಲವು ನಾಯಕರೊಂದಿಗೆ ಚರ್ಚೆಗಳು ಮುಂದುವರಿಯವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾಭಿಯೋಗ ಪ್ರಕ್ರಿಯೆ
- ಮಹಾಭಿಯೋಗ ಮಂಡನೆಗೆ ಸಂವಿಧಾನದ 124ನೇ ಪರಿಚ್ಛೇದದ ಪ್ರಕಾರ ಅವಕಾಶವಿದೆ.
- ನಿಲುವಳಿ ಮಂಡಿಸಲು ಲೋಕಸಭೆಯ ಕನಿಷ್ಠ 100 ಸದಸ್ಯರು ಅಥವಾ ರಾಜ್ಯಸಭೆಯ ಕನಿಷ್ಠ 50 ಸದಸ್ಯರ ಅನುಮೋದನೆ ಪಡೆಯಬೇಕು.
- ಪ್ರತಿಪಕ್ಷಗಳು ಮಂಡಿಸುವ ಮಹಾಭಿಯೋಗ ನಿಲುವಳಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಸಭಾಧ್ಯಕ್ಷರು ಅಥವಾ ಸಭಾಪತಿಗೆ ಇರುತ್ತದೆ.
- ನಿಲುವಳಿ ಸೂಚನೆ ಸ್ವೀಕೃತವಾದಲ್ಲಿ, ಆರೋಪಗಳ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ನ ತಲಾ ಒಬ್ಬರು ನ್ಯಾಯಮೂರ್ತಿಗಳು ಮತ್ತು ನ್ಯಾಯಶಾಸ್ತ್ರ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ದೋಷಾರೋಪ ಪಟ್ಟಿ ಸಿದ್ಧಪಡಿಸಿಕೊಂಡು, ನ್ಯಾಯಪೀಠದ ರೀತಿಯಲ್ಲಿ ವಾದಿ ಮತ್ತು ಪ್ರತಿವಾದಿಗಳ ಹೇಳಿಕೆಗಳನ್ನು ಪಡೆದುಕೊಳ್ಳುತ್ತದೆ. ಅಗತ್ಯವೆನಿಸಿದಲ್ಲಿ ವಾದಿ ಮತ್ತು ಪ್ರತಿವಾದಿಗಳ ಪಾಟೀಸವಾಲು ನಡೆಸುತ್ತದೆ.
- ವಿಚಾರಣೆಯಲ್ಲಿ ಆರೋಪ ಸಾಬೀತಾದ ಪಕ್ಷದಲ್ಲಿ ಸಮಿತಿಯು ನಿಲುವಳಿಯನ್ನು ಎತ್ತಿಹಿಡಿಯುತ್ತದೆ. ಸರ್ಕಾರವು ಅದನ್ನು ಸದನದಲ್ಲಿ ಮಂಡಿಸಿ, ಮತಕ್ಕೆ ಹಾಕುತ್ತದೆ. ಮತಕ್ಕೆ ಹಾಕಿದ ಸಂದರ್ಭದಲ್ಲಿ ಸದನದಲ್ಲಿ ಉಪಸ್ಥಿತರಿರುವ ಒಟ್ಟು ಸದಸ್ಯರ 3ನೇ 2 ಭಾಗದಷ್ಟು ಸದಸ್ಯರ ಅನುಮೋದನೆ ದೊರೆಯಬೇಕು.
- ಬಳಿಕ ಮಹಾಭಿಯೋಗದ ನಿಲುವಳಿಯನ್ನು ರಾಷ್ಟ್ರಪತಿಗಳ ಸಹಿಗೆ ರವಾನಿಸಲಾಗುತ್ತದೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳನ್ನು ವಜಾಗೊಳಿಸುವ ಅಧಿಕಾರ ರಾಷ್ಟ್ರಪತಿಗಷ್ಟೇ ಇದೆ.
ಭಾರತದಲ್ಲಿ ದ್ವಿಗುಣವಾಯ್ತು ಆಂಟಿಬಯಾಟಿಕ್ ಬಳಕೆ
- 2000ದಿಂದ 2015ರ ಅವಧಿಯಲ್ಲಿ ಭಾರತದಲ್ಲಿ ಆಂಟಿಬಯಾಟಿಕ್ಗಳ ಉಪಯೋಗ ದ್ವಿಗುಣವಾಗಿದೆ. ಆಂಟಿಬಯಾಟಿಕ್ಗಳ ಅತಿಯಾದ ಬಳಕೆಯಿಂದ ಕೆಮ್ಮು, ನ್ಯುಮೋನಿಯಾ, ಕ್ಷಯ ಮುಂತಾದವುಗಳಿಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗಿದೆ ಎಂದು ನೂತನ ಅಧ್ಯಯನ ವರದಿಯೊಂದು ತಿಳಿಸಿದೆ.
- ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್(ಪಿಎನ್ಎಎಸ್) ವರದಿಯಂತೆ ಭಾರತದಲ್ಲಿ ಆಂಟಿಬಯಾಟಿಕ್ಗಳ ಉಪಯೋಗ 2000ರಲ್ಲಿ 3.2 ಬಿಲಿಯನ್ ಡಿಡಿಡಿ(ಡಿಫೈಂಡ್ ಡೈಲಿ ಡೋಸ್)ಯಿದ್ದರೆ 2015ರಲ್ಲಿ ಇದು 6.5 ಬಿಲಿಯನ್ ಡಿಡಿಡಿಗೆ ಏರಿಕೆಯಾಗಿದೆ.
- ಆರ್ಥಿಕ ಬೆಳವಣಿಗೆ ಮತ್ತು ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಇವುಗಳು ಲಭ್ಯವಿರುವುದರಿಂದ ಬಳಕೆ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
- 2015ರಲ್ಲಿ ವಿಶ್ವಾದ್ಯಂತ ಆಂಟಿಬಯಾಟಿಕ್ ಬಳಕೆ 35 ಬಿಲಿಯನ್ ಡಿಡಿಡಿಯಷ್ಟಿತ್ತು. 2000ನೇ ಇಸವಿಗೆ ಹೋಲಿಸಿದರೆ ಆಂಟಿಬಯಾಟಿಕ್ ಬಳಕೆಯಲ್ಲಿ ಶೇ.65ರಷ್ಟು ಏರಿಕೆಯಾಗಿದೆ. ಇದು 76 ರಾಷ್ಟ್ರಗಳಾನ್ನಧರಿಸಿ ತಯಾರಿಸಿದ ವರದಿಯಾಗಿದೆ.
- ಆದರೆ ಆಂಟಿಬಯಾಟಿಕ್ಗಳ ಅತಿಯಾದ ಬಳಕೆಯಿಂದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯನ್ನು ಕಷ್ಟಕರವನ್ನಾಗಿಸಿದೆ. ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುವುದರಿಂದ ಹಲವು ಸಂದರ್ಭಗಳಲ್ಲಿ ಚಿಕಿತ್ಸೆಗೆ ರೋಗಿಯ ದೇಹ ಸರಿಯಾಗಿ ಸ್ಪಂದಿಸುವುದೇ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
- ಅಲ್ಲದೆ ವೈರಸ್ ಅಥವಾ ಬ್ಯಾಕ್ಟೀರಿಯಾದ ಕಾರಣದಿಂದಲೇ ರೋಗ ಬರುತ್ತಿದೆಯೇ ಎನ್ನುವುದನ್ನೂ ಸರಿಯಾಗಿ ಪರೀಕ್ಷಿಸದೆ ಸಣ್ಣಪುಟ್ಟ ಕೆಮ್ಮು ಮತ್ತು ಜ್ವರಗಳಿಗೂ ಆಂಟಿಬಯಾಟಿಕ್ಗಳ ಅತಿಯಾದ ಬಳಕೆಯಿಂದ ಭಾರತದಲ್ಲಿ ಪ್ರಮಾಣ ದ್ವಿಗುಣವಾಗಿದೆ ಎಂದು ತಿಳಿಸಲಾಗಿದೆ.
***~~~~ದಿನಕ್ಕೊಂದು ಯೋಜನೆ~~~***
ರಾಷ್ಟೀಯ ಕಾರ್ಯತಂತ್ರ ಯೋಜನೆ(2017- 2024 ) ಮತ್ತು ಮಿಷನ್ “ಸಂಪರ್ಕ್ “(National Strategic Plan 2017-2024 & mission Sampark)
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2030 ರ ವೇಳೆಗೆ HIV / AIDS ಅನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಕಾರ್ಯತಂತ್ರ ಯೋಜನೆ 2017-24 ಅನ್ನು ಪ್ರಾರಂಭಿಸಿತು.
- ವಿಶ್ವ ಏಡ್ಸ್ ದಿನ (1 ನೇ ಡಿಸೆಂಬರ್) ಸಂದರ್ಭದಲ್ಲಿ ಇದನ್ನು ಪ್ರಾರಂಭಿಸಲಾಯಿತು.
- ಏಡ್ಸ್ ರೋಗಿಗಳನ್ನು ಆಂಟಿರೆಟ್ರೋವೈರಲ್ ಥೆರಪಿ ಅಡಿಯಲ್ಲಿ ತರಲು ಹಾಗು ಆ ಥೆರಪಿಯಿಂದ ಹೊರಗುಳಿದಿರುವ ರೋಗಿಗಳಿಗಾಗಿ ಮಿಷನ್ ಸಂಪರ್ಕ್ ಅನ್ನು ಪ್ರಾರಂಭಿಸಲಾಯಿತು .
90:90:90 ಸ್ಟ್ರಾಟಜಿ
- ಇದು HIV ಯೊಂದಿಗೆ ವಾಸಿಸುವ 90% ನಷ್ಟು ಜನರು ತಮ್ಮ ಎಚ್ಐವಿ ಸ್ಥಿತಿಯನ್ನು (90% ರೋಗನಿರ್ಣಯ) ತಿಳಿದಿರುವರೆಂದು UNAIDS ಕಾರ್ಯಕ್ರಮದ ಒಂದು ಹೊಸ ಎಚ್ಐವಿ ಚಿಕಿತ್ಸೆಯ ನಿರೂಪಣೆಯಾಗಿದೆ, ರೋಗನಿರ್ಣಯದ ಎಚ್ಐವಿ ಸೋಂಕಿನಿಂದ 90% ರಷ್ಟು ಜನರು ನಿರಂತರವಾದ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ಪಡೆಯುತ್ತಾರೆ (90 % ಎಚ್ಐವಿ ಚಿಕಿತ್ಸೆಯಲ್ಲಿ) ಮತ್ತು ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ಸ್ವೀಕರಿಸಿದ 90% ಜನರಲ್ಲಿ ವೈರಲ್ ನಿಗ್ರಹ (90% ದಮನಕ್ಕೊಳಗಾಗುತ್ತದೆ) ಇರುತ್ತದೆ.
1. 360 ಡಿಗ್ರಿ ಕೋನದ ಚಿತ್ರಗಳನ್ನು ತೋರಿಸುವ ‘ಗೂಗಲ್ ಸ್ಟ್ರೀಟ್ ವ್ಯೂ’ ಯಾವೆಲ್ಲ ಅಪ್ಪ್ಲಿಕೇಷನ್ಗೆ ಅಪ್ಲೋಡ್ ಆಗುತ್ತವೆ ?
A. ಗೂಗಲ್ ಮ್ಯಾಪ್
B. ಗೂಗಲ್ ಅರ್ಥ್
C. ಗೂಗಲ್ ಸ್ಟ್ರೀಟ್ ವ್ಯೂ
D. ಮೇಲಿನ ಎಲ್ಲವು
2. ವಿಶ್ವ ನೆಮ್ಮದಿ ರಾಂಕಿಂಗ್ ಅನ್ನು ಯಾವ ಸಂಸ್ಥೆ ಬಿಡುಗಡೆ ಮಾಡುತ್ತದೆ ?
A. ವಿಶ್ವ ಆರ್ಥಿಕ ಸಂಸ್ಥೆ
B. ವಿಶ್ವ ವ್ಯಾಪಾರ ಸಂಸ್ಥೆ
C. ವಿಶ್ವ ಸಂಸ್ಥೆ
D. ಯೂನಿಸೆಫ್
3. ವಿಶ್ವ ನೆಮ್ಮದಿ ರ್ಯಾಂಕಿಂಗ್ನಲ್ಲಿ ಪರಿಗಣಿಸುವ ಮಾನದಂಡಗಳೇನು ?
1. ಜಿಡಿಪಿ,ಆರೋಗ್ಯಕರ ಜೀವಿತಾವಧಿ ಅಂದಾಜು
2. ಸಾಮಾಜಿಕ ಬೆಂಬಲ,ಸ್ವಾತಂತ್ರ್ಯ
3. ಭ್ರಷ್ಟಾಚಾರದ ಗ್ರಹಿಕೆ
A. 1 ಮತ್ತು 2
B. 1, 2 ಮತ್ತು 3
C. 1 ಮತ್ತು 3
D. 2 ಮತ್ತು3
4. ಮಹಾಭಿಯೋಗ ಮಂಡನೆಗೆ ಸಂವಿಧಾನದ ಯಾವ ಪರಿಚ್ಛೇದದ ಪ್ರಕಾರ ಅವಕಾಶವಿದೆ?
A. 124 ಪರಿಚ್ಛೇದ
B. 123 ಪರಿಚ್ಛೇದ
C. 321 ಪರಿಚ್ಛೇದ
D. 213 ಪರಿಚ್ಛೇದ
5. ಪ್ರತಿಪಕ್ಷಗಳು ಮಂಡಿಸುವ ಮಹಾಭಿಯೋಗ ನಿಲುವಳಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಯಾರಿಗಿರುತ್ತದೆ ?
A. ಸಭಾಪತಿ /ಸಭಾಧ್ಯಕ್ಷರು
B. ರಾಷ್ಟ್ರಪತಿ
C. ರಾಜ್ಯಪಾಲ
D. ಯಾರಿಗೂ ಅಲ್ಲ
6. ಲಾಮಿಟಿಯು ಭಾರತ ಮತ್ತು ಈ ದೇಶಗಳ ನಡುವಿನ ಜಂಟಿ ಪ್ರತಿಭಟನೆ / ಕೌಂಟರ್ ಭಯೋತ್ಪಾದನೆಯ ವ್ಯಾಯಾಮವಾಗಿದೆ.
A. ಲಿಬಿಯಾ
B. ಶ್ರೀಲಂಕಾ
C. ಸಿಂಗಪೂರ್
D. ಸೆಚೆಲ್ಲೆಸ್
7. ಆಧುನಿಕ ಮೈಸೂರಿನ ನಿಮಾ೯ಪಕ ಎಂದು ಯಾರು ಖ್ಯಾತರಾಗಿದ್ದಾರೆ?
A. ಸರ್.ಮಿಜಾ೯ಇಸ್ಮಾಯಿಲ್
B. ಪೂಣ೯ಯ್ಯ
C. ರಂಗಾಚಾಲು೯
D. ಸರ್.ಎಂ.ವಿಶ್ವೇಶ್ವರಯ್ಯ
8. ಕಂದಾಯವನ್ನು ದವಸ ರೂಪ ತೆಗೆದು ನಗದು ರೂಪದಲ್ಲಿ ಪಾವತಿಸುವ ಪದ್ಧತಿ ಜಾರಿಗೆ ತಂದ ಕಮೀಷನರ್?
A. ಮಾರ್ಕ್ ಕಬ್ಬನ್
B. ಬೌರಿಂಗ್
C. ಕರ್ನಲ್ ಮಾರಿಸನ್
D. ಕರ್ನಲ್ ಬ್ರಿಗ್ಸ್
9. ಗದ್ದಾರ್ ಪಕ್ಷದ ಮುಖಂಡರು ಯಾರು?
A. ತಿಲಕ್
B. ವಿ.ಡಿ.ಸಾವಕ೯ರ್
C. ಭಗತ್ ಸಿಂಗ್
D. ಲಾಲಾ ಹರದಯಾಳ್
10. ಕೆಳಗಿನ ಯಾವ ವಿಧದ ಮೂಲಭೂತ ಹಕ್ಕು ಅಸ್ಪೃಶ್ಯತೆಯ ನಿವಾರಣೆಯನ್ನು ಒಳಗೊಂಡಿದೆ.
A. ಧಾರ್ಮಿಕ ಹಕ್ಕು
B. ಸಮಾನತೆಯ ಹಕ್ಕು
C. ಸ್ವತಂತ್ರ್ಯದ ಹಕ್ಕು
D. ಶೋಷಣೆಯ ವಿರುದ್ದದ ಹಕ್ಕು
ಉತ್ತರಗಳು: 1.D 2.C 3.B 4.A 5.A 6.D 7.D 8.A 9.D 10.B








