“29th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಭೂಗತ ತೈಲ ಸಂಗ್ರಹ ಘಟಕ

 • ಸುದ್ದಿಯಲ್ಲಿ ಏಕಿದೆ?  ಖಾಸಗಿ ಸಹಭಾಗಿತ್ವದಲ್ಲಿ ಉಡುಪಿಯ ಕಾಪು ಸಮೀಪವಿರುವಪಡೂರಿನಲ್ಲಿ ಭೂಗತ ಕಚ್ಚಾ ತೈಲ ಸಂಗ್ರಹ ಘಟಕನಿರ್ಮಾಣಕ್ಕೆ ಕೇಂದ್ರ ಸರಕಾರ ತಾತ್ವಿಕ ಅನುಮೋದನೆ ನೀಡಿದೆ.
 •  ಮಂಗಳೂರಿನಲ್ಲಿ ಈಗಾಗಲೇ 1.5 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಭೂಗತ ತೈಲ ಸಂಗ್ರಹ ಘಟಕ ಸ್ಥಾಪಿಸಲಾಗಿದ್ದು, ಇದೀಗ ಒರಿಸ್ಸಾದಲ್ಲಿ 4 ಮೆಟ್ರಿಕ್‌ ಟನ್‌ ಹಾಗೂ ಕಾಪುವಿನಲ್ಲಿ 2.5 ಮೆಟ್ರಿಕ್‌ ಟನ್ ಸಾಮರ್ಥ್ಯದ 2 ಘಟಕಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

ಹಿನ್ನಲೆ

 • 2017-18ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಚ್ಚಾ ತೈಲ ಬಳಕೆಗೆ ಸಂಗ್ರಹ ಘಟಕವನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಮೊದಲ ಹಂತದ ಯೋಜನೆ ಮಾಜಿ ಪ್ರಧಾನಿ ಅಟಲ್‌ ಬಿಹಾರೀ ವಾಜಪೇಯಿಯ ಎನ್‌ಡಿಎ ಸರಕಾರದ ಅವಧಿಯಲ್ಲಿ ನಿರ್ಮಿಸಲು ಅನುಮತಿ ನೀಡಲಾಗಿತ್ತು.

ಧ್ರುವ ಹೆಲಿಕಾಪ್ಟರ್‌

 • ಸುದ್ದಿಯಲ್ಲಿ ಏಕಿದೆ?  ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ನಿರ್ಮಿತ ಎಂಕೆ-3 ಸರಣಿಯ ಎಎಲ್‌ಎಚ್‌ ಧ್ರುವ ಗ್ರೀನ್‌ ಹೆಲಿಕಾಪ್ಟರ್‌ನ (ಬೇಸಿಕ್‌) ಮೊದಲ ಯಶಸ್ವಿ ಹಾರಾಟದ ಬಳಿಕ ಹೆಲಿಕಾಪ್ಟರ್‌ ಅನ್ನು ಭಾರತೀಯ ಕರಾವಳಿ ಪಡೆಗೆ (ಐಸಿಜಿ) ಹಸ್ತಾಂತರಿಸಲಾಯಿತು.
 • ನೂತನವಾಗಿ ನಿರ್ಮಿಸಲಾಗಿರುವ ಧ್ರುವ ಹೆಲಿಕಾಪ್ಟರ್‌ ಅನ್ನು ಐಸಿಜಿಯ ಅಗತ್ಯತೆಗಳಿಗೆ ತಕ್ಕಂತೆ 19 ಬಿಡಿಭಾಗ, ತಾಂತ್ರಿಕ ಸಾಧನಗಳ ಅಳವಡಿಕೆಗಾಗಿ ಎಚ್‌ಎಎಲ್‌ನ ರೋಟರಿ ವಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
 • 5,126 ಕೋಟಿ ರೂ. ವೆಚ್ಚದಲ್ಲಿ 16 ಎಎಲ್‌ಎಚ್‌ ಹೆಲಿಕಾಪ್ಟರ್‌ಗಳನ್ನು ನಿರ್ಮಿಸಿ ಐಸಿಜಿಗೆ ಹಸ್ತಾಂತರಿಸುವ ಕುರಿತು 2017ರ ಮಾರ್ಚ್‌ನಲ್ಲಿ ಎಚ್‌ಎಎಲ್‌ ಹಾಗೂ ಐಸಿಜಿ ಒಪ್ಪಂದ ಮಾಡಿಕೊಂಡಿವೆ.
 • 2020ರಿಂದ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡ ಹೆಲಿಕಾಪ್ಟರ್‌ಗಳ ಹಸ್ತಾಂತರ ಕಾರ್ಯ ಆರಂಭವಾಗಲಿದೆ.
 • ಕರಾವಳಿ ಭದ್ರತಾ ಕಾರ್ಯಗಳು ಹಾಗೂ ಸಮುದ್ರ ತೀರದಲ್ಲಿ ಲಘು ಪ್ರಮಾಣದ ಕಾರ್ಯಾಚರಣೆಗಳಿಗೆ ಈ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗುತ್ತದೆ.
 • ಕಾರ್ಯಾಚರಣೆ ಮತ್ತು ಸಾಮರ್ಥ್ಯ ಆಧಾರಿತವಾಗಿ ಹೆಲಿಕಾಪ್ಟರ್‌ಗಳ ಹಸ್ತಾಂತರದ ನಂತರ 5 ವರ್ಷಗಳವರೆಗೆ ಲಾಜಿಸ್ಟಿಕ್ಸ್‌ ನೆರವನ್ನು ಎಚ್‌ಎಎಲ್‌ ನೀಡಲಿದೆ. ಈಗಾಗಲೇ ಎಎಲ್‌ಎಚ್‌ ಹೆಲಿಕಾಪ್ಟರ್‌ಗಳು ಐಸಿಜಿಯ ರಕ್ಷಣಾ ಕಾರ್ಯಾಚರಣೆ, ಗಸ್ತು, ನಿಗಾ, ವಿವಿಐಪಿಗಳ ಹಾರಾಟ ಸೇರಿದಂತೆ ಇನ್ನಿತರ ಕಾರ್ಯಾಚರಣೆಯಲ್ಲಿ ತೊಡಗಿವೆ
 • ಎಎಲ್‌ಎಚ್‌ ಧ್ರುವ ಹೆಲಿಕಾಪ್ಟರ್‌ಗಳ ಮೊದಲ ಸ್ಕ್ವಾಡ್ರನ್‌ 2002ರಲ್ಲಿ ಗೋವಾದಲ್ಲಿರುವ ಐಸಿಜಿ ನೆಲೆಗೆ ಸೇರ್ಪಡೆಗೊಂಡು ಕಾರ್ಯಾಚರಣೆಯಲ್ಲಿ ತೊಡಗಿವೆ.

ಭಾರತೀಯ ಕೋಸ್ಟ್ ಗಾರ್ಡ್ ಬಗ್ಗೆ

 • ಭಾರತದ ಕೋಸ್ಟ್ ಗಾರ್ಡ್ ( ಐಸಿಜಿ ) ಭಾರತದ ಕಡಲ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಮತ್ತು ಭಾರತದ ಪ್ರಾದೇಶಿಕ ಜಲಾನಯನ ಪ್ರದೇಶದ ವ್ಯಾಪ್ತಿಯೊಂದಿಗೆ ಸಾಗರ ಕಾನೂನುಗಳನ್ನು ಜಾರಿಗೊಳಿಸುತ್ತದೆ, ಇದರ ಸಮೀಪವಿರುವ ವಲಯ ಮತ್ತು ವಿಶೇಷ ಆರ್ಥಿಕ ವಲಯವೂ ಸೇರಿದಂತೆ. ಇಂಡಿಯನ್ ಕೋಸ್ಟ್ ಗಾರ್ಡ್ ಅನ್ನು 1978 ರ ಆಗಸ್ಟ್ 18 ರಂದು ಕೋಸ್ಟ್ ಗಾರ್ಡ್ ಆಕ್ಟ್, ಭಾರತದ ಸಂಸತ್ತಿನ  ಸ್ವತಂತ್ರ ಸಶಸ್ತ್ರ ಪಡೆವಾಗಿ 1978 ರಲ್ಲಿ ಸ್ಥಾಪಿಸಲಾಯಿತು. ಇದು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ

ಸುಧಾರಿತ ಹಗುರ ಹೆಲಿಕ್ಯಾಪ್ಟರ್ – ಧ್ರುವದ ಬಗ್ಗೆ

 • ಎಚ್ಎಎಲ್ ಧ್ರೂ ಎಂಬುದು ಭಾರತದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಭಿವೃದ್ಧಿಪಡಿಸಿದ ಮತ್ತು ಉತ್ಪಾದಿಸುವ ಒಂದು ಉಪಯುಕ್ತ ಹೆಲಿಕಾಪ್ಟರ್ ಆಗಿದೆ. ಧ್ರವ್ನ ಅಭಿವೃದ್ಧಿ ಮೊದಲ ಬಾರಿಗೆ ನವೆಂಬರ್ 1984 ರಲ್ಲಿ ಘೋಷಿಸಲ್ಪಟ್ಟಿತು ಮತ್ತು ಜರ್ಮನಿಯಲ್ಲಿ MBB ಯ ಸಹಾಯದಿಂದ ಇದನ್ನು ನಂತರ ವಿನ್ಯಾಸಗೊಳಿಸಲಾಯಿತು.
 • ಧ್ರೂವ್ 2002 ರಲ್ಲಿ ಸೇವೆ ಸಲ್ಲಿಸಿತು. ಭಾರತೀಯ ಸೈನ್ಯಪಡೆಗಳಿಗಾಗಿ ಮಿಲಿಟರಿ ಮತ್ತು ಸಿವಿಲ್ ಆಪರೇಟರ್ಗಳ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ, ಹೆಲಿಕಾಪ್ಟರಿನ ಮಿಲಿಟರಿ ರೂಪಾಂತರಗಳು ಭಾರತೀಯ ಸಶಸ್ತ್ರ ಪಡೆಗಳಿಗೆ ಅಭಿವೃದ್ಧಿಪಡಿಸಲ್ಪಟ್ಟಿವೆ, ಆದರೆ ನಾಗರಿಕ / ವಾಣಿಜ್ಯ ಬಳಕೆಗೆ ರೂಪಾಂತರವನ್ನು ಅಭಿವೃದ್ಧಿಪಡಿಸಲಾಗಿದೆ.
 • ಹೆಲಿಕಾಪ್ಟರ್ ಅನ್ನು ಮೊದಲು ನೇಪಾಳ ಮತ್ತು ಇಸ್ರೇಲ್ಗೆ ರಫ್ತು ಮಾಡಲಾಯಿತು.
 • ಉತ್ಪಾದನೆಯಲ್ಲಿನ ಮಿಲಿಟರಿ ಆವೃತ್ತಿಗಳಲ್ಲಿ ಸಾರಿಗೆ, ಉಪಯುಕ್ತತೆ, ವಿಚಕ್ಷಣ ಮತ್ತು ವೈದ್ಯಕೀಯ ಸ್ಥಳಾಂತರಿಸುವಿಕೆಯ ರೂಪಾಂತರಗಳು ಸೇರಿವೆ. ಧ್ರವ್ ಪ್ಲಾಟ್ಫಾರ್ಮ್ನ ಆಧಾರದ ಮೇಲೆ, HAL ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (LCH) ಮೀಸಲಾದ ದಾಳಿ ಹೆಲಿಕಾಪ್ಟರ್ ಮತ್ತು HAL ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (LUH), ಉಪಯುಕ್ತತೆ ಮತ್ತು ವೀಕ್ಷಣೆ ಹೆಲಿಕಾಪ್ಟರ್ ಅನ್ನು ಪ್ರಸ್ತುತ ಅಭಿವೃದ್ಧಿಪಡಿಸಲಾಗಿದೆ.

ರೂಪಾಯಿ ಮೌಲ್ಯ ಕುಸಿ

 • ಸುದ್ದಿಯಲ್ಲಿ ಏಕಿದೆ?  ನೋಟು ಅಮಾನ್ಯೀಕರಣ, ಜಿಎಸ್​ಟಿಯಂತಹ ಸವಾಲುಗಳ ಸಂದರ್ಭದಲ್ಲೂ ಗತ್ತಿನಲ್ಲಿ ಬೀಗಿದ್ದ ರೂಪಾಯಿ ಇದೀಗ ಕಚ್ಚಾ ತೈಲ ದರ ಏರಿಕೆ, ಜಾಗತಿಕ ಅನಿಶ್ಚಿತತೆಯಂತಹ ಕಾರಣಗಳಿಂದಾಗಿ ಡಾಲರ್ ಎದುರು ಸೊರಗಿದೆ. ರೂಪಾಯಿ ದರ ಕಳೆದ 19 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಭಾರತದ ಅರ್ಥವ್ಯವಸ್ಥೆಯನ್ನು ಆತಂಕಕ್ಕೆ ತಳ್ಳಿದೆ.

ಕಾರಣಗಳೇನು?

 • ಅನುತ್ಪಾದಕ ಆಸ್ತಿ ಹೆಚ್ಚಳದಿಂದಾಗಿ ಆತಂಕದಲ್ಲಿರುವ ಬ್ಯಾಂಕಿಂಗ್ ವಲಯಕ್ಕೆ ದ್ವೈವಾರ್ಷಿಕ ವರದಿಯಲ್ಲಿ ಧೈರ್ಯ ತುಂಬಲು ಆರ್​ಬಿಐ ವಿಫಲ
 •  ಅಮೆರಿಕ ಮತ್ತು ಚೀನಾ ನಡುವೆ ಬಿರುಸಾಗುತ್ತಿರುವ ವಾಣಿಜ್ಯ ಸಮರದಿಂದ ಜಾಗತಿಕ ಮಾರುಕಟ್ಟೆ ವ್ಯಾಪಾರಸ್ಥರಿಂದ ಹೂಡಿಕೆಗೆ ಹಿಂದೇಟು
 • ಇರಾನ್​ನಿಂದ ತೈಲ ಆಮದು ಸ್ಥಗಿತಗೊಳಿಸುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್​ರಿಂದ ಮಿತ್ರರಾಷ್ಟ್ರಗಳ ಮೇಲೆ ಒತ್ತಡ, ಅಮೆರಿಕದಿಂದ ಫೆಡರಲ್ ರಿಸರ್ವ್ ದರ 25 ಮೂಲಾಂಕ ಏರಿಕೆ.

ಪರಿಣಾಮಗಳೇನು?

 • ಆಮದು ಹೊರೆ: ರೂಪಾಯಿ ದುರ್ಬಲಗೊಳ್ಳುವುದರಿಂದ ದೇಶದ ಆಮದುದಾರರಿಗೆ ಭಾರಿ ಹೊರೆಯಾಗಲಿದೆ.
 •  ತೈಲ ದುಬಾರಿ : ತೈಲ ಆಮದು ದುಬಾರಿ ಆಗುವುದರಿಂದ ತೈಲ ಬೆಲೆಯೂ ಹೆಚ್ಚಳವಾಗುವುದು ನಿಶ್ಚಿತ
 •  ಬಡ್ಡಿದರ ಹೆಚ್ಚಳ: ಹಣದುಬ್ಬರದ ಒತ್ತಡದಿಂದ ಆರ್​ಬಿಐ ಪ್ರಮುಖ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ
 • ವಿದೇಶಿ ಶಿಕ್ಷಣ, ಪ್ರವಾಸ ತುಟ್ಟಿಯಾಗುತ್ತದೆ, ಮಾಹಿತಿ ತಂತ್ರಜ್ಞಾನ, ರಫ್ತುದಾರರಿಗೆ ಲಾಭದಾಯಕ

ಗ್ರೇ ಪಟ್ಟಿಗೆ ಪಾಕಿಸ್ತಾನ

 • ಸುದ್ದಿಯಲ್ಲಿ ಏಕಿದೆ?  ಉಗ್ರರಿಗೆ ಹರಿದುಬರುತ್ತಿರುವ ಹಣಕಾಸಿನ ನೆರವನ್ನು ನಿಯಂತ್ರಿಸಲು ವಿಫಲವಾಗಿರುವ ಪಾಕಿಸ್ತಾನವನ್ನು ಫೈನಾನ್ಸಿಯಲ್ ಟಾಸ್ಕ್ ಫೋರ್ಸ್ (ಎಫ್​ಎಟಿಎಫ್) ಗ್ರೇ ಪಟ್ಟಿಗೆ ಸೇರಿಸಿದೆ.

ಏನಿದು ಎಫ್​ಎಟಿಎಫ್?

 • ಉಗ್ರರಿಗೆ ಹಣಕಾಸು ನೆರವಿಗೆ ತಡೆ ಮತ್ತು ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಉದ್ದೇಶದಿಂದ ರಚನೆಯಾಗಿರುವ 37 ರಾಷ್ಟ್ರಗಳ ಒಕ್ಕೂಟ ಇದು. 1989ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಉಗ್ರರಿಗೆ ಹಣಕಾಸು ಹರಿವನ್ನು ನಿಯಂತ್ರಿಸಲು ವಿಫಲವಾಗುವ ರಾಷ್ಟ್ರಗಳನ್ನು ಗ್ರೇ ಪಟ್ಟಿಗೆ ಸೇರಿಸಲಾಗುತ್ತದೆ.

ಪರಿಣಾಮ ಏನು?

 • ಮುಂದಿನ ಒಂದು ವರ್ಷದವರೆಗೆ ಪಾಕಿಸ್ತಾನಕ್ಕೆ ಹರಿದು ಬರುವ ವಿದೇಶಿ ದೇಣಿಗೆಗಳು ಕಡಿತಗೊಳ್ಳಲಿವೆ.
 • ಜತೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ವಿಶ್ವಬ್ಯಾಂಕ್​ನಿಂದಲೂ ಸಾಲ ದೊರೆಯುವುದಿಲ್ಲ.
 • 26 ಅಂಶಗಳ ಉಗ್ರ ನಿಗ್ರಹ ಕಾರ್ಯಯೋಜನೆ ಸಂಪೂರ್ಣ ತಿರಸ್ಕೃತವಾದಲ್ಲಿ, ಪಾಕಿಸ್ತಾನವನ್ನು ಎಫ್​ಎಟಿಎಫ್ ಬ್ಲಾಕ್ ಲಿಸ್ಟ್​ಗೆ ಸೇರ್ಪಡೆ ಮಾಡಬಹುದು.
Related Posts
Best IAS and KAS classes in bangalore for KPSC and UPSC exams
UPSC and KPSC exams are becoming very challenging these days. It needs lots of hard work from the aspirants. Along with hard work it is necessary that aspirants are guided ...
READ MORE
DOWNLOAD KPSC MAINS 2014 PAPER CLICK HERE
READ MORE
For import of an aircraft following steps were necessary till now For remittance of funds for import of aircraft, the approval of the ministry was mandatory. Scheduled Operators (airlines) and Regional Scheduled ...
READ MORE
Karnataka Current Affairs – KAS/KPSC Exams – 14th September 2017
Empowered Committee formed to develop ring roads around 25 cities The State Cabinet has constituted an Empowered Committee for development of ring roads around 25 cities, mainly district headquarters, under the ...
READ MORE
India specific India is among top 10 FDI recipients India jumped to the ninth rank in 2014 with a 22 per cent rise in FDI inflows to $34 billion. India was at ...
READ MORE
Air quality remained abysmal on Dec 1st , with four of the seven monitoring stations reporting the “severe” warning during the morning. The situation improved slightly by 7 p.m. due to ...
READ MORE
IMD urges govt to encourage farmers to register on portal
The officials of the India Meteorological Department (IMD) on Tuesday met the state government officials and urged them to speed up the process of making farmers register on M-Kisan portal. Union ...
READ MORE
“8th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಹೇಗ್ ಸಮಾವೇಶ ಸುದ್ದಿಯಲ್ಲಿ ಏಕಿದೆ? ಅಂತರ-ದೇಶ ಪೋಷಕರ ಮಗು ಅಪಹರಣದ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಲು ಕೇಂದ್ರವು ಸ್ಥಾಪಿಸಿದ ಸಮಿತಿಯು ಹೇಗ್ ಕನ್ವೆನ್ಷನ್ನ ಮೂಲಭೂತ ತತ್ವಗಳನ್ನು ಪ್ರಶ್ನಿಸಿದೆ. ಪೋಷಕರ  ಅಥವಾ ಪೋಷಕರ ಆವಾಸಸ್ಥಾನಕ್ಕೆ ಮಗು ಹಿಂದಿರುಗುವುದು ಮಗುವಿನ ಹಿತಾಸಕ್ತಿಗೆ ಅಗತ್ಯವಾಗಿರಲೇಬೇಕು ಎಂಬುದು ನಿಯಮವಾಗಿರಬಾರದು  ...
READ MORE
National Current Affairs – UPSC/KAS Exams- 2nd October 2018
RBI to Infuse Rs 36000cr to ease Liquidity Topic: GS-3 Indian Economy and issues relating to planning, mobilization of resources, growth, development and employment. IN NEWS: The Reserve Bank of India (RBI) has decided ...
READ MORE
To Expand the municipal limits of Bengaluru
The decision to expand the municipal limits of Bengaluru from 225 sq km to about 800 sq km by incorporating 110 villages, seven City Municipal Councils (CMC) and one Town ...
READ MORE
Best IAS and KAS classes in bangalore for
KPSC Mains Paper
Relaxed norms for aircraft import
Karnataka Current Affairs – KAS/KPSC Exams – 14th
World Investment Report 2015 – UNCTAD
Poor AQI in Delhi
IMD urges govt to encourage farmers to register
“8th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams- 2nd October
To Expand the municipal limits of Bengaluru

Leave a Reply

Your email address will not be published. Required fields are marked *