29th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಸೌದಿಯಿಂದ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಯೋಜನೆ

 • ಸೌದಿ ಅರೇಬಿಯಾ 13.03 ಲಕ್ಷ ಕೋಟಿ ರೂ. ವೆಚ್ಚದ ಸೌರಶಕ್ತಿ ಯೋಜನೆ ಆರಂಭಿಸುವ ಸಲುವಾಗಿ ಸಾಫ್ಟ್ ಬ್ಯಾಂಕ್ ಗ್ರೂಪ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
 • ನೂತನ ಯೋಜನೆಯಿಂದಾಗಿ ಸೌದಿ ಅರೇಬಿಯಾ ವಿದ್ಯುತ್​ಗಾಗಿ ತೈಲದ ಮೇಲೆ ಅವಲಂಬಿತವಾಗುವುದು ತಪ್ಪಲಿದೆ. ಅಲ್ಲದೆ ಅಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ವಿದ್ಯುತ್​ಗೆ ತಗಲುತ್ತಿದ್ದ ವೆಚ್ಚದಲ್ಲಿ ವಾರ್ಷಿಕ 2.60 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ. ಈ ಯೋಜನೆ ಮೂಲಕ 2030ರ ವೇಳೆಗೆ ಸೌರಶಕ್ತಿ ಮೂಲಕ 200 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ.
 • 3 ವಾರಗಳ ಅಮೆರಿಕ ಪ್ರವಾಸದಲ್ಲಿರುವ ಸೌದಿ ದೊರೆ ಮಹಮ್ಮದ್ ಬಿನ್ ಸಲ್ಮಾನ್ ನ್ಯೂಯಾರ್ಕ್​ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಿಂದ ಸಾಫ್ಟ್​ಬ್ಯಾಂಕ್ ಮತ್ತು ಸೌದಿ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದಿದ್ದಾರೆ.
 • ತೈಲವನ್ನೇ ಅವಲಂಬಿಸಿರುವ ಸೌದಿಯ ಆರ್ಥಿಕತೆಯನ್ನು ಬೇರೆ ಕ್ಷೇತ್ರಗಳತ್ತ ಹೊರಳಿಸುವುದು ಸೌದಿ ದೊರೆಯ ಗುರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಯೋಜನೆ ಇದಕ್ಕೆ ಪೂರಕವಾಗಿರಲಿದೆ.
 • ಈ ಬಗ್ಗೆ ಮಾತನಾಡಿರುವ ಸೌದಿ ದೊರೆ ಸಲ್ಮಾನ್, ಮಾನವ ಇತಿಹಾಸದಲ್ಲಿ ಇದೊಂದು ಮಹತ್ವದ ಹೆಜ್ಜೆ. ಇದರಲ್ಲಿ ಯಶಸ್ಸು ಗಳಿಸುತ್ತೇವೆಂಬ ನಿರೀಕ್ಷೆ ನಮ್ಮದು. ಇದೇ ವೇಳೆ ಸೌದಿ ಅರೇಬಿಯಾದಲ್ಲಿ 1. 62 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಗುರಿಯಿರುವುದಾಗಿ ಸಾಫ್ಟ್ ಬ್ಯಾಂಕ್ ತಿಳಿಸಿದೆ.
 • ಇದರಲ್ಲಿ 97 ಸಾವಿರ ಕೋಟಿ ರೂ. ಗಳನ್ನು ಕೆಂಪು ಸಮುದ್ರ ತೀರದಲ್ಲಿ ನಿರ್ವಿುಸಲು ಉದ್ದೇಶಿಸಿರುವ ನೂತನ ನಗರ ನಿಯೋಮ್ಲ್ಲಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.

ಚೀನಾಗೆ ಭೇಟಿ ನೀಡಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಂಗ್​ ಉನ್

 • ನಿರಂತರವಾಗಿ ಅಣ್ವಸ್ತ್ರ ಮತ್ತು ಕ್ಷಿಪಣಿಗಳ ಪರೀಕ್ಷೆ ನಡೆಸಿ ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಂಗ್​ ಉನ್​ ಚೀನಾಗೆ ಭೇಟಿ ನೀಡಿ ಚೀನಾದ ಅಧ್ಯಕ್ಷ ಕ್ಸಿ​ ಜಿನ್​ಪಿಂಗ್​ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
 • ಕಿಮ್​ 2011ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಕಿಮ್​ ದಕ್ಷಿಣ ಕೊರಿಯಾ ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸಲು ಉತ್ಸಾಹ ತೋರಿರುವ ಬೆನ್ನಲ್ಲೇ ಸಭೆಗೆ ಸಿದ್ಧತೆ ಮಾಡಿಕೊಳ್ಳಲು ಚೀನಾಗೆ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
 • ನಾವು ಉತ್ತರ ಕೊರಿಯಾದಲ್ಲಿ ಅಣ್ವಸ್ತ್ರಗಳ ಪ್ರಮಾಣವನ್ನು ಕಡಿತ ಮಾಡಲು ಸಿದ್ಧರಿದ್ದೇವೆ. ಶಾಂತಿ ಮರುಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದರ ಮೇಲೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇಸ್ರೋ ಜಿಸ್ಯಾಟ್-6ಎ ಉಡಾವಣೆಗೆ ಸಜ್ಜು

 • ಜಿಸ್ಯಾಟ್ ಸರಣಿಯ ಮತ್ತೊಂದು ಸಂವಹನ ಉಪಗ್ರಹವನ್ನು ಜಿಎಸ್​ಎಲ್​ವಿ ಎಂಕೆ -2 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾಯಿಸಲು ಇಸ್ರೋ ಸಜ್ಜಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಸಂವಹನ ಉಪಗ್ರಹ ಜಿಸ್ಯಾಟ್- 6ಎ ಉಡಾಯಿಸಲಾಗುತ್ತದೆ.
 • ಅತ್ಯಾಧುನಿಕ ಮಾದರಿಯ ಎಸ್-ಬ್ಯಾಂಡ್ ಸಂವಹನ ಉಪಗ್ರಹ ಹೊಂದಿರುವ ಜಿಸ್ಯಾಟ್- 6ಎ 2,140 ಕೆ.ಜಿ. ಭಾರ ಹೊಂದಿದೆ. ಜಿಎಸ್​ಎಲ್​ವಿ ಸರಣಿಯ 12ನೇ ರಾಕೆಟ್ ಮತ್ತು ದೇಶೀಯ ನಿರ್ವಿುತ ಕ್ರಯೋಜನಿಕ್ ಸ್ಟೇಜ್ ತಂತ್ರಜ್ಞಾನ ಹೊಂದಿರುವ 6ನೇ ರಾಕೆಟ್ ಇದಾಗಿದೆ.

ಉಪಗ್ರಹದ ವಿಶೇಷತೆ

 • ಆಂಧ್ರ ಪ್ರದೇಶದ ಸತೀಶ್ ಧವನ್ ಸ್ಪೇಸ್ ಸೆಂಟರ್​ನ ಎರಡನೇ ಲಾಂಚ್ ಪ್ಯಾಡ್​ನಿಂದ ಉಡಾವಣೆಗೊಳ್ಳುವ ರಾಕೆಟ್, ಸಂವಹನ ವ್ಯವಸ್ಥೆಯನ್ನು ಬಲಪಡಿಸಲಿದೆ.
 • ಈ ಮೊದಲು ಉಡಾವಣೆಯಾಗಿರುವ ಸಂವಹನ ಉಪಗ್ರಹ ಜಿಸ್ಯಾಟ್- 6 ಮಾದರಿಯಲ್ಲೇ ಬಲಿಷ್ಟ ಎಸ್ ಬ್ಯಾಂಡ್ ಬೆಂಬಲ ಹೊಂದಿದೆ. 2,132 ಕೆ.ಜಿ. ತೂಕವಿದ್ದ ಜಿಸ್ಯಾಟ್- 6 ಉಪಗ್ರಹವನ್ನು 2015ರ ಆಗಸ್ಟ್ 27ರಂದು ಜಿಎಸ್​ಎಲ್​ವಿ ಎಂಕೆ-2 ಡಿ6 ರಾಕೆಟ್ ಬಳಸಿ ಉಡಾಯಿಸಲಾಗಿತ್ತು.
 • ಜಿಎಸ್ಯಾಟ್- 6ಎ ಉಪಗ್ರಹದ ಜೀವಿತಾವಧಿ 10 ವರ್ಷಗಳಾಗಿವೆ. ಭವಿಷ್ಯದಲ್ಲಿ ಉಪಗ್ರಹ ಆಧಾರಿತ ಮೊಬೈಲ್ ಸಂವಹನ ಯೋಜನೆಗಳಿಗೆ ಮತ್ತು ಅಪ್ಲಿಕೇಶನ್​ಗಳಿಗೆ ಬೆಂಬಲ ನೀಡುವ 6ಎಂ ಎಸ್- ಬ್ಯಾಂಡ್ ಆಧಾರಿತ ಜಿಸ್ಯಾಟ್- 6ಎ ಉಪಗ್ರಹ, ನೆಟ್​ವರ್ಕ್ ನಿರ್ವಹಣೆಯ ತಂತ್ರಜ್ಞಾನ ಹೊಂದಿದೆ.

ಭೂಮಿಯ ಗಾತ್ರದ ಕೆಂಡದಂತಹ ಹೊಸ ಗ್ರಹ ಪತ್ತೆ

 • ಭೂಮಿಯಿಂದ 26 ಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿ ಕುಬ್ಜ ನಕ್ಷತ್ರವೊಂದನ್ನು ಸುತ್ತುತ್ತಿರುವ ಭೂಮಿಯ ಗಾತ್ರದ ಸುಡುವ ಲೋಹದಂತಹ ಗ್ರಹವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
 • ಇದಕ್ಕೆ ಕೆ2-229ಬಿ ಎಂದು ಹೆಸರಿಡಲಾಗಿದೆ. ಇದು ನಮ್ಮ ಪೃಥ್ವಿಗಿಂತ ಗಾತ್ರದಲ್ಲಿ ಶೇ 20ರಷ್ಟು ದೊಡ್ಡದಾಗಿದೆ. ಈ ಗ್ರಹದ ದ್ರವ್ಯರಾಶಿ ಭೂಮಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ. ಅಲ್ಲದೆ ಹಗಲಿನಲ್ಲಿ ಈ ಗ್ರಹದ ತಾಪಮಾನ 2000 ಡಿಗ್ರಿ ಸೆಲ್ಶಿಯಸ್‌ ದಾಟುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
 • ನಮ್ಮ ಭೂಮಿ ಮತ್ತು ಸೂರ್ಯನ ನಡುವಣ ದೂರಕ್ಕಿಂತ ನೂತನ ಗ್ರಹ ಮತ್ತು ಅದರ ಸೂರ್ಯನ ನಡುವಣ ಅಂತರ ನೂರನೇ ಒಂದು ಪಾಲಿನಷ್ಟಿದೆ. ಕನ್ಯಾ ರಾಶಿಯಲ್ಲಿರುವ ಈ ಕುಬ್ಜ ನಕ್ಷತ್ರ ಮಧ್ಯಮಗಾತ್ರದ್ದಾಗಿದೆ. ಕೆ2-229ಬಿ ಗ್ರಹವು ಪ್ರತಿ 14 ಗಂಟೆಗಳಿಗೊಮ್ಮೆ ಈ ನಕ್ಷತ್ರದ ಸುತ್ತ ಪರಿಭ್ರಮಣ ನಡೆಸುತ್ತದೆ.
 • ಫ್ರಾನ್ಸ್‌ನ ಎಐಎಕ್ಸ್‌ ಮರ್ಸಿಲ್‌ ಯುನಿವರ್ಸಿಟಿ ಹಾಗೂ ಯುಕೆಯ ಯುನಿವರ್ಸಿಟಿ ಆಫ್‌ ವಾವ್ರಿಕ್‌ನ ಸಂಶೋಧಕರ ತಂಡ ಕೆ2 ದೂರದರ್ಶಕ ಮತ್ತು ಡೋಪ್ಲರ್ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನ ಬಳಸಿ ಈ ಗ್ರಹವನ್ನು ಪತ್ತೆ ಮಾಡಿದ್ದಾರೆ

ಪ್ರಜಾಪ್ರಭುತ್ವಕ್ಕೆ ಜಯ ತನ್ನಿ

 • ಎಲ್ಲರೂ ಚೆನ್ನಾಗಿ ಆಡಿದರೆ ಮ್ಯಾಚ್ ಗೆಲ್ಲಲಿದೆ, ಎಲ್ಲರೂ ವೋಟ್ ಮಾಡಿದರೆ ಪ್ರಜಾಪ್ರಭುತ್ವ ಗೆಲ್ಲಲಿದೆ. ನಾನು ವೋಟ್ ಮಾಡ್ತೀನಿ, ನೀವೂ ವೋಟ್ ಮಾಡಿ…’ ಹೀಗೆಂದು ಅಂತಾರಾಷ್ಟ್ರೀಯ ಕ್ರಿಕೆಟಿಗ, ಕನ್ನಡಿಗ ರಾಹುಲ್ ದ್ರಾವಿಡ್ ಇನ್ನು ಮುದ್ರಣ, ದೃಶ್ಯ, ಸಾಮಾಜಿಕ ಜಾಲತಾಣ, ಮಲ್ಟಿಪ್ಲೆಕ್ಸ್ ಹೀಗೆ ನಾನಾ ಮಾಧ್ಯಮಗಳ ಮೂಲಕ ರಾಜ್ಯದ ಪ್ರತಿ ಮನೆ-ಮನಕ್ಕೆ ಲಗ್ಗೆ ಇಡಲಿದ್ದಾರೆ.
 • ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ 60 ಸೆಕೆಂಡ್​ಗಳ ಕಾಲ ದ್ರಾವಿಡ್ ರಾಜ್ಯದ ಜನರನ್ನು ಮತದಾನ ಮಾಡುವಂತೆ ಉತ್ತೇಜಿಸಲಿದ್ದಾರೆ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪ್ರೇರೇಪಣೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
 • ಚುನಾವಣಾ ಆಯೋಗದ ರಾಯಭಾರಿಯಾಗಲು ಕ್ರಿಕೆಟಿಗ ರಾಹುಲ್ ದ್ರಾವಿಡ್ ಒಪ್ಪಿರುವುದಕ್ಕೆ ಆಯೋಗ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ. ದ್ರಾವಿಡ್ ಅವರ ಪ್ರೇರೇಪಣೆಯಿಂದ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಹೆಚ್ಚು ಜನರು ಮತ ಚಲಾಯಿಸುವಂತಾಗಬೇಕು ಎಂಬುದು ಉದ್ದೇಶ.

 

~~~***ದಿನಕ್ಕೊಂದು ಯೋಜನೆ!***~~~

ಸ್ವಚ್ಛಸ್ವಸ್ಥ ಸರ್ವರ್ತ ಉಪಕ್ರಮ ಯೋಜನೆ

 • ತೆರೆದ ಮಲವಿಸರ್ಜನೆ-ಮುಕ್ತ (ಒಡಿಎಫ್) ಬ್ಲಾಕ್ಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಕೇಂದ್ರ ಸರ್ಕಾರವು ಸ್ವಚ್ಛಸ್ವಸ್ಥ ಸರ್ವರ್ತ ಉಪಕ್ರಮವನ್ನು ಪ್ರಾರಂಭಿಸಿತು.
 • ಉನ್ನತ ಮಟ್ಟದ ಶುಚಿತ್ವ ಮತ್ತು ನೈರ್ಮಲ್ಯ ಸಾಧಿಸಲು ಸಕ್ರಿಯಗೊಳಿಸಲು 708 ಒಡಿಎಫ್ ಬ್ಲಾಕ್ಗಳನ್ನು ದೇಶದಾದ್ಯಂತ ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವುದು ಈ ಉಪಕ್ರಮದ ಉದ್ದೇಶ.

ಪ್ರಮುಖ ಅಂಶಗಳು

 • ಸ್ವಚ್ಛಸ್ವಸ್ಥ ಸರ್ವರ್ತ ಕೇಂದ್ರ ಸರಕಾರದ ಪ್ರಮುಖ ಸ್ವಚ್ ಭಾರತ್ ಮಿಷನ್ನ ಒಂದು ಭಾಗವಾಗಿದೆ ಮತ್ತು ಇದು ಶೌಚಾಲಯಗಳನ್ನು ನಿರ್ಮಿಸುವ ಮತ್ತು ವರ್ತನೆಯ ಬದಲಾವಣೆಗೆ ಅನುವು ಮಾಡುವ ಎರಡು ಉದ್ದೇಶಗಳ ಮೇಲೆ ಕೇಂದ್ರೀಕರಿಸಿದೆ.
 • ಆರೋಗ್ಯ ಸುಧಾರಣೆ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸಲು ಉತ್ತಮ ಆರೋಗ್ಯ ಫಲಿತಾಂಶಗಳನ್ನು ಸಾಧಿಸಲು ಆರೋಗ್ಯ ಸಚಿವಾಲಯ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಜಂಟಿ ಉಪಕ್ರಮವಾಗಿದೆ.
 • ಎರಡು ಪೂರಕ ಕಾರ್ಯಕ್ರಮಗಳಾದ ಸ್ವಚ್ ಭಾರತ್ ಮಿಷನ್ (ಎಸ್ಬಿಎಂ) ಮತ್ತು ಕಾಯಕಾಲ್ಪ್ ಗಳ ಸಾಧನೆಗಳನ್ನು ಸಾಧಿಸುವುದು ಇದರ ಉದ್ದೇಶವಾಗಿದೆ.
 • ಅದರ ಅಡಿಯಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಿಗೆ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು. ಇದರಿಂದಾಗಿ ನೈರ್ಮಲ್ಯ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣದ ಮಾನದಂಡಗಳನ್ನು ಪೂರೈಸಲು ಅವರು ಬಲಗೊಳ್ಳಬಹುದು.

1. ಸೌದಿ ಅರೇಬಿಯಾವು ವಿಶ್ವದ ಅತಿ ದೊಡ್ಡ ಸೌರ ಶಕ್ತಿ ಯೋಜನೆ ಆರಂಭಿಸಲು ಯಾವ ಬ್ಯಾಂಕಿನ ನೆರವು ಪಡೆದುಕೊಂಡಿದೆ ?
A. ಸಾಫ್ಟ್ ಬ್ಯಾಂಕ್
B. ವಿಶ್ವ ಬ್ಯಾಂಕ್
C. ಏ.ಡಿ.ಬಿ ಬ್ಯಾಂಕ್
D. ಯಾವುದು ಅಲ್ಲ

2. ಜಿಸ್ಯಾಟ್ -6 ಎ ಉಪಗ್ರಹವನ್ನು ಯಾವ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾಯಿಸಲು ಇಸ್ರೋ ಸಜ್ಜಾಗಿದೆ ?
A. ಪಿ ಯಸ್ ಎಲ್ ವಿ ಎಂ ಕೆ -2
B. ಜಿಎಸ್ಎಲ್ ವಿ ಎಂಕೆ -2
C. ಪಿ ಯಸ್ ಎಲ್ ವಿ 40
D. ಯಾವುದು ಅಲ್ಲ

3. ಭೂಮಿಯಿಂದ 26 ಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿ ಕುಬ್ಜ ನಕ್ಷತ್ರಕ್ಕೆ ಇಟ್ಟಿರುವ ಹೆಸರೇನು ?
A. ಕೆ2-229
B. ಕೆ3-339
C. ಕೆ2-339
D. ಕೆ3-229

4. ಮತದಾನ ಪ್ರೇರೇಪಣೆಯ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A. ಸಚಿನ್ ತೆಂಡೂಲ್ಕರ್
B. ಸೌರವ್ ಗಂಗೂಲಿ
C. ರಾಹುಲ್ ದ್ರಾವಿಡ್
D. ಅನಿಲ್ ಕುಂಬ್ಳೆ

5. ಯಾವ ಯೂನಿಯನ್ ಮಂತ್ರಿಮಂಡಲದ ಸಹಯೋಗದೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯವು “ಸ್ವಚ್ಛ ಸ್ವಸ್ಥ ಸರ್ವರ್ತ” ಉಪಕ್ರಮವನ್ನು ಪ್ರಾರಂಭಿಸಿದೆ?
A. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ
B. ಹಣಕಾಸು ಸಚಿವಾಲಯ
C. ವಸತಿ ಮತ್ತು ನಗರ ಬಡತನ ನಿವಾರಣೆ ಸಚಿವಾಲಯ
D. ಆಯುಶ್ ಸಚಿವಾಲಯ

6. 1990 ರಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ವಿಶ್ವಸಂಸ್ಥೆಯಲ್ಲಿ ಪರಿಚಯಿಸಿದವರು ಯಾರು?
A. ಡೇವಿಡ್ ರಿಕಾರ್ಡೊ
B. ಅಮಥ್ರ್ಯಸೇನ್
C. ಮೆಹಬೂಬ್ ಉಲ್ಹಕ್
D. ರ್ಯಾಗ್ನರ್ ಫ್ರೆಶ್

7. ಭಾರತದ ರಾಜ್ಯಗಳ ಅತಿಹೆಚ್ಚಿನ ಆದಾಯ ಮೂಲ ಯಾವುದು?
A. ಮಾರಾಟ ತೆರಿಗೆ
B. ಅಬ್ಕಾರಿ ತೆರಿಗೆ
C. ನೊಂದಣಿ ಶುಲ್ಕ
D. ಭೂಕಂದಾಯ

8. ಸಂವಿಧಾನದ ಎಷ್ಟನೇ ತಿದ್ದುಪಡಿ ಪ್ರಕಾರ 11ನೇ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ?
A. 84ನೇ ತಿದ್ದುಪಡಿ
B. 85ನೇ ತಿದ್ದುಪಡಿ
C. 86ನೇ ತಿದ್ದುಪಡಿ
D. 87ನೇ ತಿದ್ದುಪಡಿ

9. ರಾಜ್ಯ-ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಅಧಿಕಾರ ಸುಪ್ರೀಂಕೋರ್ಟ್ನ ಯಾವ ವ್ಯಾಪ್ತಿಯಲ್ಲಿ ಬರುತ್ತದೆ?
A. ಮೂಲ ಅಧಿಕಾರ ವ್ಯಾಪ್ತಿ
B. ಮೇಲ್ಮನವಿ ಅಧಿಕಾರ ವ್ಯಾಪ್ತಿ
C. ಸಲಹಾ ಅಧಿಕಾರ ವ್ಯಾಪ್ತಿ
D. ಮೇಲಿನ ಯಾವುದೂ ಅಲ್ಲ

10. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು ?
A. ರಾಷ್ಷ್ರಕೂಟರು
B. ಚೋಳರು
C. ಪಲ್ಲವರು
D. ಚಾಲುಕ್ಯರು

ಉತ್ತರಗಳು: 1.A 2.B 3.A 4.C 5.A 6.C 7.A 8.C 9.A 10.D 

Related Posts
Karnataka Current Affairs – KAS / KPSC Exams 2017 – 13th April 2017
Karnataka State Health Department issues H1N1 advisory The State Health Department on 12th April issued an advisory asking people not to ignore symptoms of H1N1 and to see a doctor immediately ...
READ MORE
Karnataka: CM launches ‘Pratibimba’ website to project achievements
Karnataka Chief Minister Siddaramaiah launched a comprehensive web-based platform showcasing the government's performance and achievements to the citizens. Developed as the Chief Minister's dash board, 'Pratibimba,' which means reflection, will serve ...
READ MORE
“9th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಏಷ್ಯಾ ಮಾಧ್ಯಮ ಶೃಂಗಸಭೆ ಸುದ್ದಿಯಲ್ಲಿ ಏಕಿದೆ? ಮಾಧ್ಯಮ ಕ್ಷೇತ್ರದ ಅವಲೋಕನ ನಡೆಸುವ ನಿಟ್ಟಿನಲ್ಲಿ ಮೇ 10ರಿಂದ ಎರಡು ದಿನಗಳ ಕಾಲ 15ನೇ ಏಷ್ಯಾ ಮಾಧ್ಯಮ ಶೃಂಗಸಭೆ ಹೊಸದಿಲ್ಲಿಯಲ್ಲಿ ನಡೆಯಲಿದೆ. ಧ್ಯೇಯ ವಾಕ್ಯ: 'ಟೆಲ್ಲಿಂಗ್‌ ಅವರ್‌ ಸ್ಟೋರಿಸ್‌ -ಏಷ್ಯಾ ಅಂಡ್‌ ಮೋರ್‌' ಆಯೋಜಕರು: ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ಮಾಸ್‌ ಕಮ್ಯೂನಿಕೇಷನ್‌ ...
READ MORE
National Current Affairs – UPSC/KAS Exams – 17th July 2018
Vikas Engine Why in news? All three satellite launch vehicles of the Indian Space Research Organisation (ISRO) are set to add muscle to their spacecraft lifting power in upcoming missions this year. ...
READ MORE
NASA has started a new programme for detecting and tracking near-Earth objects (NEOs) — comets and asteroids that pass by the Earth’s orbit — to ward off any potential impact ...
READ MORE
United Nations Environment Programme (UNEP) report is titled “Biodegradable Plastics and Marine Litter: Misconceptions, Concerns and Impacts on Marine Environments” Toys, athletic goods, and household goods sectors used the largest amount ...
READ MORE
Karnataka Current Affairs – KAS / KPSC Exams – 10th July 2017
'Startup coast' coming up in Karnataka State-of-the-art innovation centres, modern incubation set-up, tinkering labs and co-working space for startups are coming up in coastal Karnataka. This is the first project of its ...
READ MORE
Karnataka Current Affairs – KAS/KPSC Exams- 23rd September 2018
Kodagu devastation aggravated by human interference: Reports Two reports paint a clearer picture of the human interferences that aggravated the devastation in Kodagu district in August. While the Geological Survey of India ...
READ MORE
Karnataka Current Affairs – KAS/KPSC Exams – 2nd Nov 2017
BCU to launch India's first dept of cinema studies Bengaluru Central University (BCU) is all set to launch Department of Cinema Studies (DCS) from the next academic year. There are many film ...
READ MORE
Karnataka Current Affairs – KAS / KPSC Exams – 5th July 2017
Rs. 400 crore funding for 100 innovative startups As many as 100 startups will get Rs. 400 crore funding under the Karnataka government’s Elevate programme to fast track the most innovative ...
READ MORE
Karnataka Current Affairs – KAS / KPSC Exams
Karnataka: CM launches ‘Pratibimba’ website to project achievements
“9th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams – 17th
New NASA programme to protect Earth from asteroids,
United Nations Environment Programme (UNEP) report on plastics
Karnataka Current Affairs – KAS / KPSC Exams
Karnataka Current Affairs – KAS/KPSC Exams- 23rd September
Karnataka Current Affairs – KAS/KPSC Exams – 2nd
Karnataka Current Affairs – KAS / KPSC Exams

Leave a Reply

Your email address will not be published. Required fields are marked *