“29th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

ಮಗುವಿಗೊಂದು ಮರ, ಶಾಲೆಗೊಂದು ವನ

 • ಸುದ್ದಿಯಲ್ಲಿ ಏಕಿದೆ? ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ‘ಮಗುವಿಗೊಂದು ಮರ-ಶಾಲೆಗೊಂದು ವನ’ ಕಾರ್ಯಕ್ರಮ ಜಾರಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಜೂನ್‌ 5ರಂದು ವಿಶ್ವ ಪರಿಸರ ದಿನ ಆಚರಣೆ ಮೂಲಕ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. 
 • ವಿಶ್ವ ಪರಿಸರ ದಿನಾಚರಣೆ ದಿನದಿಂದ ಆಗಸ್ಟ್‌ ಅಂತ್ಯದವರೆಗೂ ಪ್ರತಿ ವಿದ್ಯಾರ್ಥಿಯಿಂದ ಅಥವಾ ಪ್ರತಿ ವಿದ್ಯಾರ್ಥಿ ತಂಡದಿಂದ ಭವಿಷ್ಯದಲ್ಲಿ ಉಪಯುಕ್ತವಾಗುವಂತಹ ನೆರಳು ಹಾಗೂ ಫಲ ನೀಡುವ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
 •  ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ನಾನಾ ರೀತಿಯ ಅಲಂಕಾರಿಕ ಗಿಡಗಳು, ಹೂವಿನ ಗಿಡಗಳು ಹಾಗೂ ಔಷಧ ಗಿಡಗಳನ್ನು ಬೆಳೆಸಿ ಶಾಲೆಯ ಸೊಬಗನ್ನು ಹೆಚ್ಚಿಸುವುದರ ಜತೆಗೆ, ಶಾಲಾ ಮೈದಾನದ ಅನುಪಯುಕ್ತ (ಕ್ರೀಡಾ ಮೈದಾನ ಹೊರತುಪಡಿಸಿ) ಜಾಗದಲ್ಲಿ ಸ್ಥಳೀಯ ವಾತಾವರಣಕ್ಕೆ ಅನುಗುಣವಾದ ತೆಂಗು, ಮಾವು, ಹಲಸು, ನೇರಳೆ, ಸೀಬೆ, ದಾಳಿಂಬೆ, ನೆಲ್ಲಿ, ಬೇವು, ಅರಳಿ, ಹೊಂಗೆ, ಸಂಪಿಗೆ, ಟೀಕ್‌, ಅಶೋಕ ಹಾಗೂ ಸರ್ವೆ ಸೇರಿದಂತೆ ಇತರೆ ಸಸ್ಯಗಳನ್ನು ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಪಡೆಯುವುದರ ಮೂಲಕ ಶಾಲಾ ಪರಿಸರವನ್ನು ಹಸಿರೀಕರಣವಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
 • ಶಾಲಾ ಹಂತದಲ್ಲಿ ಶಾಲಾ ಮುಖ್ಯಸ್ಥರು ಶಾಲಾ ಪರಿಸರವು ಶಿಕ್ಷಣದ ಅವಿಭಾಜ್ಯ ಅಂಗವೆಂದು ಭಾವಿಸಿ ವಿಶೇಷ ಗಮನಹರಿಸಬೇಕು; ತಾಲೂಕು/ ವಲಯ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರು (ಆಡಳಿತ) ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮೂಲಕ ಮೇಲ್ವಿಚಾರಣೆ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ವಿಶ್ವ ಪರಿಸರ ದಿನಾಚರಣೆ 

 • ಜಾಗತಿಕ ಪರಿಸರ ದಿನಾಚರಣೆ (WED) ಜೂನ್ 5 ರಂದು ನಮ್ಮ ಪರಿಸರದ ರಕ್ಷಣೆಗಾಗಿ ವಿಶ್ವಾದ್ಯಂತ ಅರಿವು ಮತ್ತು ಕಾರ್ಯವನ್ನು ಪ್ರೋತ್ಸಾಹಿಸಲು ವಾರ್ಷಿಕವಾಗಿ ಆಚರಿಸಲಾಗುತ್ತದೆ. ಇದನ್ನು 1972 ರಲ್ಲಿ ಮಾನವ ಪರಿಸರಕ್ಕೆ ಯುನೈಟೆಡ್ ನೇಶನ್ಸ್ ಕಾನ್ಫರೆನ್ಸ್ ಪ್ರಾರಂಭಿಸುವುದನ್ನು ಗುರುತಿಸಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಸ್ಥಾಪಿಸಲಾಯಿತು.
 • ಮೊದಲ ವಿಶ್ವ ಪರಿಸರ ದಿನವನ್ನು 1973 ರಲ್ಲಿ ಆಚರಿಸಲಾಯಿತು ಮತ್ತು ನಂತರ ಪ್ರತಿ ವರ್ಷವೂ ವಿವಿಧ ವಿಷಯಗಳೊಂದಿಗೆ ಇದನ್ನು ನಡೆಸಲಾಗುತ್ತಿದೆ. ಸಾಗರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆ, ಸಮರ್ಥನೀಯ ಬಳಕೆ ಮತ್ತು ವನ್ಯಜೀವಿ ಅಪರಾಧಗಳಿಂದ ಉದಯೋನ್ಮುಖ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು WED ಒಂದು ಪ್ರಮುಖ ಕಾರ್ಯಾಚರಣೆಯಂತೆ ಕಾರ್ಯನಿರ್ವಹಿಸುತ್ತದೆ.

ಬಸ್ತರಿಯಾ ಬೆಟಾಲಿಯನ್

 • ಸುದ್ದಿಯಲ್ಲಿ ಏಕಿದೆ? ನಕ್ಸಲ್ ನಿಗ್ರಹಕ್ಕೆ ಬಸ್ತರಿಯಾ ಬೆಟಾಲಿಯನ್ ಸನ್ನದ್ಧವಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಹೇಳಿದೆ.

ಬಸ್ತರಿಯಾ ಬೆಟಾಲಿಯನ್ ಎಂದರೇನು?

 • ಇದು ಹೊಸದಾಗಿ ರೂಪುಗೊಂಡಿರುವ ಸಿಆರ್​ಪಿಎಫ್​ನ ಒಂದು ತುಕಡಿಯಾಗಿದ್ದು ‘ಬಸ್ತರಿಯಾ ವಾರಿಯರ್ಸ್’ ಎಂದೇ ಆ ಯೋಧರನ್ನು ಕರೆಯಲಾಗುತ್ತದೆ. ಛತ್ತೀಸ್​ಗಢದ ಅಂಬಿಕಾಪುರದಲ್ಲಿನ ನಕ್ಸಲ್-ನಿಗ್ರಹ ತರಬೇತಿ ಶಾಲೆಯಲ್ಲಿ ಇತ್ತೀಚೆಗಷ್ಟೇ ಯಶಸ್ವಿಯಾಗಿ ತರಬೇತಿ ಮುಗಿಸಿಕೊಂಡು ನಡೆಸಿದ ಪಥ-ಪ್ರದರ್ಶನ ನಡೆಸಿತು .
 • ಸಂಖ್ಯೆ ‘241’ರಿಂದ ಗುರುತಿಸಲ್ಪಡುವ ಈ ತುಕಡಿಗೊಂದು ವಿಶಿಷ್ಟ ಸ್ವರೂಪವಿದೆ. ಇದರಲ್ಲಿ ಹೊಸದಾಗಿ ನೇಮಕಗೊಂಡಿರುವ ಎಲ್ಲ 549 ಮಂದಿ ಸಿಬ್ಬಂದಿ, ಬಸ್ತರ್ ಜಿಲ್ಲೆಯ 4 ತಾಲೂಕುಗಳಿಗೆ ಸೇರಿದವರಾಗಿದ್ದು, ಪಡೆಗೆ ಸೇರ್ಪಡೆ ಮಾಡಿಕೊಳ್ಳುವಾಗ ದೇಹದಾರ್ಢ್ಯತೆ/ದೈಹಿಕ ಲಕ್ಷಣಗಳಿಗೆ ಸಂಬಂಧಿಸಿದಂತೆ ಅವರಿಗೆ ಒಂದಷ್ಟು ರಿಯಾಯಿತಿಗಳನ್ನು ನೀಡಲಾಗಿದೆ.
 • 44 ವಾರಗಳ ತರಬೇತಿಯನ್ನು ಸಂಪೂರ್ಣಗೊಳಿಸಿರುವ ಈ ತುಕಡಿಯನ್ನು ಸದ್ಯದಲ್ಲಿಯೇ ಸೇವೆಗೆ ನಿಯೋಜಿಸಲಾಗುತ್ತದೆ. ಸ್ಥಳೀಯ ಭೌಗೋಳಿಕ ಸ್ಥಿತಿಗತಿ ಹಾಗೂ ಭಾಷೆಯ ವಿಷಯದಲ್ಲಿ ಈ ಯೋಧರಿಗೆ ಪರಿಣತಿ ಇರುತ್ತದೆಯಾದ್ದರಿಂದ, ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಪಡೆಯಿಂದ ಅತೀವ ಪ್ರಯೋಜನ ದಕ್ಕಲಿದೆ ಎಂಬುದು ಸಿಆರ್​ಪಿಎಫ್ ಅಭಿಪ್ರಾಯ.
 • ಜತೆಗೆ, ದೇಶದ ವಿವಿಧ ಭಾಗಗಳಿಗೆ ಸೇರಿದ ಸಿಬ್ಬಂದಿಯನ್ನೊಳಗೊಂಡಿರುವ ಸಿಆರ್​ಪಿಎಫ್ ಮತ್ತು ಸ್ಥಳೀಯ ಜನರ ನಡುವೆ ಒಂದು ಕಾಲಕ್ಕೆ ತಪ್ಪಿದ್ದ ಸಂಪರ್ಕವನ್ನು ಮರುಜೋಡಿಸುವ ಸಂಪರ್ಕಸೇತುವೂ ಇದಾಗಲಿದೆ.

ಹಿನ್ನಲೆ

 • 2005ರ ಕಾಲಘಟ್ಟ. ಕಾಂಗ್ರೆಸ್ ನಾಯಕರಾಗಿದ್ದ ಮತ್ತು 2013ರಲ್ಲಿ ನಕ್ಸಲರಿಂದ ಹತರಾದ ದಿ. ಮಹೇಂದ್ರ ಕರ್ವ ಅವರು 2005ರಲ್ಲಿ ‘ಸಾಲ್ವಾ ಜುಡುಮ್ ಪಡೆಗೆ ಚಾಲನೆ ನೀಡಿ, ಛತ್ತೀಸ್​ಗಢ ಕೆಲ ಭಾಗಗಳಲ್ಲಿ ನಿಯೋಜಿಸಿದ್ದರು.
 • ಈ ಪರಿಕಲ್ಪನೆಯ ಪರವಾಗಿದ್ದವರು ಸಮರ್ಥಿಸುವಂತೆ, ಜುಡುಮ್ ಎಂಬುದು ಬಸ್ತಾರ್​ನಲ್ಲಿ ಕಾಣಿಸಿಕೊಂಡಿದ್ದ ಮಾವೋವಾದಿಗಳ ಹಿಂಸಾಚಾರದ ವಿರುದ್ಧ ಶುರುವಾದ ಬುಡಕಟ್ಟು ಜನಾಂಗೀಯರ ಒಂದು ‘ಸ್ವಪ್ರೇರಿತ ದಂಗೆ’ಯಾಗಿತ್ತು ಮತ್ತು ಈ ವಲಯದಲ್ಲಿನ ನಕ್ಸಲರನ್ನು ಸಮರ್ಥವಾಗಿ ಎದುರಿಸುವಲ್ಲಿ ಅದು ನೆರವಾಗಿತ್ತು.
 • ಇಷ್ಟಾಗಿಯೂ, 2011ರಲ್ಲಿ ಸವೋಚ್ಚ ನ್ಯಾಯಾಲಯದಿಂದ ಈ ಪಡೆ ನಿಷೇಧಕ್ಕೊಳಗಾಗಿತ್ತು.

ಸಾಲ್ವಾ ಜುಡುಮ್

 • ಸಾಲ್ವಾ ಜುಡುಮ್ (ಗೋಂಡಿ ಭಾಷೆಯಲ್ಲಿ “ಶಾಂತಿ ಮಾರ್ಚ್”) ಚತ್ತೀಸ್ಗಢ, ಭಾರತದಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ನಿಯೋಜಿಸಲ್ಪಟ್ಟಿತು ಮತ್ತು ಈ ಪ್ರದೇಶದಲ್ಲಿನ ನಕ್ಸಲ್ ಹಿಂಸಾಚಾರವನ್ನು ಎದುರಿಸುವ ಉದ್ದೇಶವನ್ನು ಹೊಂದಿತ್ತು.
 • ಸ್ಥಳೀಯ ಬುಡಕಟ್ಟಿನ ಯುವಕರನ್ನು ಒಳಗೊಂಡ ಸೇನೆಯು ಛತ್ತೀಸ್ಗಢ ರಾಜ್ಯ ಸರ್ಕಾರದಿಂದ ಬೆಂಬಲ ಮತ್ತು ತರಬೇತಿ ಪಡೆದುಕೊಂಡಿತು. ರಾಜ್ಯ ಸರ್ಕಾರವು ಕೇವಲ ನಕ್ಸಲರನ್ನು ಹೋರಾಡುವುದಿಲ್ಲ ಮತ್ತು ಅದೇ ಪ್ರದೇಶ ಮತ್ತು ಸಮುದಾಯಗಳಿಂದ ಅಗತ್ಯವಾದ ಸಾಮಾಜಿಕ ಬೆಂಬಲವನ್ನು ಪಡೆಯುತ್ತದೆ ಎಂದು ಹೇಳಿತು.

ಸಲ್ವಾ ಜುಡುಮ್ 2.0

 • ಸಲ್ವಾ ಜುಡುಮ್ ಸಂಸ್ಥಾಪಕ ಮಹೇಂದ್ರ ಕರ್ಮ ಅವರ ಪುತ್ರ ಚವಿಂದ್ರ ಕರ್ಮ ಮತ್ತು ಮಾವೊವಾದಿ ವಿರೋಧಿ ಮಿಲಿಟಿಯ ಮಾಜಿ ಮುಖಂಡರು ಛತ್ತೀಸ್ಗಢದ ದಾಂತೇವಾಡಾ ಜಿಲ್ಲೆಯಲ್ಲಿ “ವಿಕಾಸ್ ಸಂಘರ್ಷ ಸಮಿತಿ” ಅನ್ನು ರಚಿಸಿದರು.
 • ಇದು ಬಸ್ತಾರ್ನಲ್ಲಿ ಸಲ್ವಾ ಜುಡಮ್ ಕೆಲಸವನ್ನು ಮುಂದುವರಿಸಲಿದೆ. ಅರಿವಿನ ಶಿಬಿರಗಳಿಗೆ ಈ ಪ್ರದೇಶದ ಅಭಿವೃದ್ಧಿಯ ಕಾರ್ಯಗಳು ನಡೆಯಲಿದೆ. ಮಹಾೇಂದ್ರ ಕರ್ಮ 2013 ರಲ್ಲಿ ಕೊಲ್ಲಲ್ಪಟ್ಟರು.

ಆರ್ಬಿಐನ ಪ್ರಥಮ ಸಿಎಫ್

 • ಸುದ್ದಿಯಲ್ಲಿ ಏಕಿದೆ? ಎನ್​ಎಸ್​ಡಿಎಲ್​ನ ಉಪಾಧ್ಯಕ್ಷರಾಗಿದ್ದ ಸುಧಾ ಬಾಲಕೃಷ್ಣನ್​ ಆರ್​ಬಿಐನ ಪ್ರಥಮ ಮುಖ್ಯ ಹಣಕಾಸು ಅಧಿಕಾರಿಯಾಗಿ(ಸಿಎಫ್​ಒ) ನೇಮಕಗೊಂಡಿದ್ದಾರೆ.
 • ಮೂಲತಃ ಚಾರ್ಟರ್ಡ್​ ಅಕೌಂಟೆಂಟ್ ಆಗಿರುವ ಸುಧಾ ಅವರು ಮುಂದಿನ ಮೂರು ವರ್ಷಗಳು ಆರ್​ಬಿಐನ 12ನೇ ಕಾರ್ಯನಿರ್ವಾಹಕ ನಿರ್ದೇಶಕರಾಗಿರುತ್ತಾರೆ.
 • ಆರ್​ಬಿಐನ ಸಿಎಫ್​ಒ ಆಗಿ ನೇಮಕಗೊಂಡಿರುವ ಸುಧಾ ಅವರು ಇನ್ನುಮುಂದೆ ಸರ್ಕಾರದ ಪಾವತಿ, ಆದಾಯ ಹಾಗೂ ತೆರಿಗೆ ಸಂಗ್ರಹಣೆಗೆ ಸಂಬಂಧಿಸಿದ ಸರ್ಕಾರ ಹಾಗೂ ಬ್ಯಾಂಕ್​ ಖಾತೆ ವಿಭಾಗಗಳನ್ನು ನಿರ್ವಹಿಸಲಿದ್ದಾರೆ. ನೋಡಲ್​ ಅಧಿಕಾರಿ ಆರ್​ಬಿಐನ ಬ್ಯಾಲೆನ್ಸ್​ ಶೀಟ್​ ನಿರ್ವಹಣೆ ಮಾಡಿದರೆ, ಸುಧಾ ಅವರು ದೇಶ ಹಾಗೂ ವಿದೇಶಗಳಲ್ಲಿ ಕೇಂದ್ರೀಯ ಬ್ಯಾಂಕುಗಳಲ್ಲಿನ ಹೂಡಿಕೆಯ ಬಗ್ಗೆಯೂ ಗಮನ ಹರಿಸಲಿದ್ದಾರೆ.
Related Posts
Karnataka-Urban Development-Urban Slums
Urban Slums The population living in urban slums in Karnataka has raised from 14.02 lakh (2001) to 32.91 lakh (2011) in a decade. This is a rise from 7.8 per cent of the total urban population ...
READ MORE
“22nd ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ) ಸುದ್ದಿಯಲ್ಲಿ ಏಕಿದೆ? ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಶೀಘ್ರದಲ್ಲೇ ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ನಿಯೋಜಿಸುವ ಸಾಧ್ಯತೆಗಳಿವೆ. ‘ಬ್ಲ್ಯಾಕ್‌ ಕ್ಯಾಟ್‌’ ಎಂದೇ ಕರೆಯಲಾಗುವ ಎನ್‌ಎಸ್‌ಜಿ ಕಮಾಂಡೊಗಳು ಹಲವು ದಿನಗಳಿಂದ ನಗರದ ಹೊರವಲಯದಲ್ಲಿ ಕಠಿಣ ...
READ MORE
Karnataka Current Affairs – KAS/KPSC Exams – 5th March 2018
62,381 more voters on Mysuru’s revised electoral list As many as 62,381 voters have been included in Mysuru district in the special summary revision of voters held till February 28. D. Randeep, ...
READ MORE
A worrying re-emergence of diphtheria in Malappuram district of kerala, is putting at risk considerable swathes of its population. Atleast two children died of Diphtheria this year. Over a dozen Malappuram ...
READ MORE
“30th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ನೃಪತುಂಗ ಪ್ರಶಸ್ತಿ ಸುದ್ಧಿಯಲ್ಲಿ ಏಕಿದೆ ?ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೀಡುವ 2018ನೇ ಸಾಲಿನ 'ನೃಪತುಂಗ ಸಾಹಿತ್ಯ ಪ್ರಶಸ್ತಿ'ಗೆ ಕವಿ ಡಾ. ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನುಬಳಿಗಾರ್‌ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸಿದ್ದಲಿಂಗಯ್ಯ ಅವರನ್ನು ಸರ್ವಾನುಮತದಿಂದ ...
READ MORE
National Current Affairs – UPSC/KAS Exams- 5th January 2019
Lokpal Topic: Polity and Governance IN NEWS: The government informed the Supreme Court  that a search committee had been constituted for zeroing in on eligible candidates for the Lokpal, and it ...
READ MORE
The "Start up India Stand up India" initiative was announced by the PrimeMinister in his address to the nation on 15th August, 2015. The Stand up India component is anchored ...
READ MORE
In a surprise development kept secret until their meeting was over, Indian and Pakistani National Security Advisers led delegations for talks in Bangkok The discussions covered peace and security, terrorism, Jammu ...
READ MORE
IISc scientists work on tool for 3D sketching
Scientists at the Indian Institute of Science (IISc) are working on a high-tech 3D sketching tool that will allow designers to sketch on a 3D canvas with better precision and ...
READ MORE
Karnataka Current Affairs – KAS / KPSC Exams – 6th May 2017
Mincheri hill to turn into tree park The Mincheri Hill Range, which is among the lesser known trekking routes in Ballari district, is now being developed into a tree park. It ...
READ MORE
Karnataka-Urban Development-Urban Slums
“22nd ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams – 5th
After Diphtheria Deaths, Kerala Launches Vaccination Drive
“30th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams- 5th January
Stand Up India Scheme approved
India-Pakistan National Security Advisors meeting
IISc scientists work on tool for 3D sketching
Karnataka Current Affairs – KAS / KPSC Exams

2 thoughts on ““29th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ””

Leave a Reply

Your email address will not be published. Required fields are marked *