2nd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಸಮುದ್ರದಲ್ಲಿ ಪತನ

 • ಟಿಯಾಂಗಾಂಗ್ -1 ಹೆಸರಿನ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಪೆಸಿಫಿಕ್​ ಸಾಗರದಲ್ಲಿ ಪತನಗೊಂಡಿದೆ ಎಂದು ಚೀನಾದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ದೃಢಪಡಿಸಿದೆ.
 • ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಾತ್ವಾಕಾಂಕ್ಷೆ ಹೊಂದಿರುವ ಚೀನಾ, ಬಾಹ್ಯಾಕಾಶದ ಪ್ರಯೋಗಗಳಿಗೆ ಬಳಸಿಕೊಳ್ಳಲು 2011ರಲ್ಲಿ ಟಿಯಾಂಗಾಂಗ್​-1 ಅನ್ನು ಕಕ್ಷೆಗೆ ಸೇರಿಸಿತ್ತು. ಹತ್ತು ಮೀಟರ್​ (34.1 ಅಡಿಗಳು) ಉದ್ದದ ಇದನ್ನು ಹೆವೆನ್ಲಿ ಪ್ಯಾಲೆಸ್​​-1 ಎಂದೂ ಕರೆಯಲಾಗುತ್ತಿತ್ತು.
 • ಆದರೆ, ದಕ್ಷಿಣ ಪೆಸಿಫಿಕ್​ ಸಾಗರ ಅಂದರೆ, ನ್ಯೂಜಿಲೆಂಡ್- ಅಮೆರಿಕದ ಪಶ್ಚಿಮ ಪ್ರದೇಶದಲ್ಲಿ ಭೂಮಿಯ ವಾತಾವರಣ ಪ್ರವೇಶಿಸಿರುವ ಟಿಯಾಂಗಾಂಗ್​-1 ದಹನಗೊಳ್ಳುತ್ತಾ ಸಮುದ್ರದಲ್ಲಿ ಪತನಗೊಂಡಿದೆ.
 • ಈ ಬಗ್ಗೆ ಚೀನಾದ ‘ಕ್ಸಿನುಹ್​’ ಸುದ್ದಿ ಮಾಧ್ಯಮವೂ ವರದಿ ಮಾಡಿದೆ. ಅಮೆರಿಕಾ ರಕ್ಷಣಾ ಇಲಾಖೆಯೂ ಈ ಮಾಹಿತಿಯನ್ನು ಖಚಿತಪಡಿಸಿದ್ದು, ‘ಜಾಯಿಂಟ್ ಫೋರ್ಸ್ ಸ್ಪೇಸ್ ಕಾಂಪೊನೆಂಟ್ ಕಮಾಂಡ್’ (JFSCC) ಮೂಲಕ ಪ್ರಕಟಣೆ ಬಿಡುಗಡೆ ಮಾಡಿದೆ.
 • ಚೀನಾದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ 2013ರಲ್ಲೇ ಟಿಯಾಂಗಾಂಗ್ -1 ಕಾರ್ಯವನ್ನು ಸ್ಥಗಿತಗೊಳಿಸಿತ್ತು. 2016ರ ಹೊತ್ತಿಗೆ ಎಲ್ಲ ರೀತಿಯ ಸಂಪರ್ಕ ಕಳೆದುಕೊಂಡಿದ್ದ ಅದು ಭೂಮಿಯತ್ತ ಧಾವಿಸಿಬರಲಾರಂಭಿಸಿತ್ತು.
 • ಈ ವಿಷಯವನ್ನು ಯೂರೋಪ್​ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಮೊದಲ ಬಾರಿಗೆ ಖಚಿತಪಡಿಸಿತ್ತು. ನಂತರ, ಚೀನಾ ಕೂಡ ಈ ವಿಚಾರವನ್ನು ದೃಢಪಡಿಸಿತ್ತು.

ಭ್ರಷ್ಟ ಅಧಿಕಾರಿಗಳಿಗೆ ಆಧಾರ್ ಮೂಗುದಾರಕ್ಕೆ ಸಿವಿಸಿ ಚಿಂತನೆ

 • ಕಾಳಧನಕ್ಕೆ ಕಡಿವಾಣದ ಮೂಲಕ ಭ್ರಷ್ಟಾಚಾರ ಮುಕ್ತ ದೇಶ ಎಂಬ ಪ್ರಧಾನಿ ಮೋದಿ ಅವರ ಆಶಯಕ್ಕೆ ಪೂರಕವಾಗಿ ಕೇಂದ್ರೀಯ ವಿಚಕ್ಷಣಾ ಆಯೋಗ (ಸಿಡಬ್ಲ್ಯೂಸಿ) ಯೋಜನೆಯೊಂದನ್ನು ಸಿದ್ಧಗೊಳಿಸುತ್ತಿದ್ದು, ಭ್ರಷ್ಟ ಅಧಿಕಾರಿಗಳ ಕಪು್ಪಹಣದ ಮೇಲೆ ಆಧಾರ್ ಮೂಲಕ ನಿಗಾ ಇರಿಸಲು ಮುಂದಾಗಿದೆ.
 • ಸರ್ಕಾರದ ಅನೇಕ ಯೋಜನೆಗಳು ಮತ್ತು ಹಣಕಾಸು ವ್ಯವಹಾರ (ಪ್ಯಾನ್ ಕಾರ್ಡ್​ಗೆ ಜೋಡಣೆ) ಹಾಗೂ ಆಸ್ತಿ ನೋಂದಣಿಗೆ ಆಧಾರ್ ಕಡ್ಡಾಯವಾಗಿದೆ. ಹಾಗಾಗಿ ಆಧಾರ್ ಸಂಖ್ಯೆಯನ್ನು ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಲು ಬಳಕೆ ಮಾಡಿಕೊಳ್ಳಬಹುದು ಎಂಬುದು ಸಿವಿಸಿ ಆಶಯವಾಗಿದೆ.
 • ಪ್ಯಾನ್ ಕಾರ್ಡ್ ಬಳಸಿ ನಡೆಸುವ ಹಣಕಾಸು ವ್ಯವಹಾರದ ಮೇಲೆ ನಿಗಾ ಇರಿಸಲು ಆಧಾರ್ ಸಂಖ್ಯೆ ಮಾಗೋಪಾಯ ಕಲ್ಪಿಸಿದೆ. ಸರ್ಕಾರಿ ಅಧಿಕಾರಿಗಳು ನಡೆಸುವ ಇಂತಹ ಹಣಕಾಸು ವ್ಯವಹಾರವು ಅಕ್ರಮವಾಗಿದ್ದರೆ ಸಿಕ್ಕಿಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ಸಿವಿಸಿ ಒಂದು ಯೋಜನೆ ಸಿದ್ಧಪಡಿಸಿದೆ.

ಅಂತರ್ ಸಂಪರ್ಕದ ತಂತ್ರಾಂಶ ವೃದ್ಧಿ

 • ಭ್ರಷ್ಟ ಅಧಿಕಾರಿ ಎಂದು ಶಂಕಿಸಿದ ವ್ಯಕ್ತಿಯ ಹಣಕಾಸು, ಷೇರು ವ್ಯವಹಾರ ಮತ್ತು ಸ್ಥಿರಾಸ್ತಿಯ ಮಾಹಿತಿಯನ್ನು ಆಧಾರ್ ಸಂಖ್ಯೆಯ ಮೂಲಕ ಪಡೆಯಲು ಸಾಫ್ಟ್ ವೇರ್ (ತಂತ್ರಾಂಶ) ರೂಪಿಸುವುದು.
 • ಈ ತಂತ್ರಾಂಶವು ಅಂತರ್ ಇಲಾಖೆಯ ಸಂಹವನ ಮಾಡುವಂತಹದ್ದಾಗಿರುತ್ತದೆ. ಅಂದರೆ ಪ್ರತಿ ಅಧಿಕಾರಿಯ ಆದಾಯ ಮತ್ತು ಅದಕ್ಕೆ ಪಾವತಿಸಿದ ತೆರಿಗೆ ವಿವರವು ಆದಾಯ ತೆರಿಗೆ ಇಲಾಖೆಯಲ್ಲಿ ಸಿಗುತ್ತದೆ.
 • ಹಾಗೆಯೇ ಉನ್ನತ ಅಧಿಕಾರಿಗಳ ಬಗ್ಗೆ ಹಣಕಾಸು ಇಲಾಖೆಯ ಬೇಹುಗಾರಿಕಾ ಘಟಕದಲ್ಲಿ ಮಾಹಿತಿ ದೊರೆಯುತ್ತದೆ. ಬ್ಯಾಂಕ್ ವಹಿವಾಟಿನ ಬಗ್ಗೆಯೂ ಆಧಾರ್​ನಿಂದ ತಿಳಿಯಬಹುದು. ಅಧಿಕಾರಿಯ ಸೇವೆ, ದಕ್ಷತೆ ಬಗ್ಗೆ ಆಕೆ/ಆತನ ಕಾರ್ಯನಿರ್ವಹಿಸುವ ಇಲಾಖೆಯಲ್ಲಿ ಮಾಹಿತಿ ಇರುತ್ತದೆ. ಹಾಗಾಗಿ ಇವೆಲ್ಲವನ್ನು ಅಂತರ್ ಸಂಪರ್ಕ ಕಲ್ಪಿಸುವ ತಂತ್ರಾಂಶದ ಅವಶ್ಯಕತೆ ಇದೆ

ಟಿಬೆಟ್‌ ಪ್ರಾಂತ್ಯದ ಚೀನಾ ಗಡಿಯಲ್ಲಿ ಗಸ್ತು ತೀವ್ರಗೊಳಿಸಿದ ಭಾರತ

 • ಡೋಕ್ಲಾಂ ಮುಖಾಮುಖಿ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದಲ್ಲಿ ಟಿಬೆಟ್‌ ಪ್ರಾಂತ್ಯಕ್ಕೆ ಹೊಂದಿಕೊಂಡಿರುವ ಚೀನಾ ಗಡಿಯುದ್ದಕ್ಕೂ ಭಾರತ ಹೆಚ್ಚುವರಿ ಗಸ್ತು ಪಡೆಗಳನ್ನು ನಿಯೋಜಿಸಿದೆ. ಈ ಪಡೆಗಳು ದಿಬಾಂಗ್‌, ದಾವು-ದೆಲಾಯ್‌ ಮತ್ತು ಲೋಹಿತ್‌ ಕಣಿವೆ ಪ್ರದೇಶಗಳಲ್ಲಿ ಪಹರೆ ನಡೆಸುತ್ತಿವೆ.
 • ವ್ಯೂಹಾತ್ಮಕವಾಗಿ ಅತ್ಯಂತ ಸೂಕ್ಷ್ಮವೆನಿಸಿದ ಟಿಬೆಟ್‌ ಪ್ರಾಂತ್ಯದ ಗಡಿಭಾಗದಲ್ಲಿ ಚೀನೀ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಲು ಭಾರತ ಮುಂದಾಗಿದೆ. ಹೆಲಿಕಾಪ್ಟರ್‌ಗಳ ಮೂಲಕವಾಗಿ ನಿಯಮಿತವಾಗಿ ಗಸ್ತು ನಡೆಸಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
 • ದಿಬಾಂಗ್‌, ದಾವು-ದೆಲಾಯ್‌ ಮತ್ತು ಲೋಹಿತ್ ಕಣಿವೆ ಭಾಗದ 17,000 ಅಡಿಗಳ ಎತ್ತರದ ಹಿಮಾಚ್ಛಾದಿತ ಪರ್ವತಗಳು ಮತ್ತು ನದಿ ಕಣಿವೆಗಳು ಸೇರಿದಂತೆ ದುರ್ಗಮ ಪ್ರದೇಶಗಳಲ್ಲಿ ಮೇಲುಗೈ ಪಡೆಯಲು ಚೀನಾ ಹವಣಿಸುತ್ತಿರುವ ಹಿನ್ನೆಲೆಯಲ್ಲಿ ಗಸ್ತು ತೀವ್ರಗೊಳಿಸಲಾಗಿದೆ.

~~~***ದಿನಕ್ಕೊಂದು ಯೋಜನೆ***~~~

ಸ್ಮಾರ್ಟ್ ಗ್ರಾಮ ಉಪಕ್ರಮ ಯೋಜನೆ

SMARTGRAM ಉಪಕ್ರಮದ ಬಗ್ಗೆ ನೀವು ತಿಳಿಯಬೇಕಾದದ್ದು:

 • ಇದು ರಾಷ್ಟ್ರಪತಿ ಭವನದ ಒಂದು ಉಪಕ್ರಮವಾಗಿದೆ . ಯೋಜನೆಯ ಅಡಿಯಲ್ಲಿ ಆಯ್ದ ಹಳ್ಳಿಗಳು ಕೃಷಿ, ಕೌಶಲ್ಯ ಅಭಿವೃದ್ಧಿ, ಶಕ್ತಿ, ಶಿಕ್ಷಣ, ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಗಳಲ್ಲಿ ಹೊಸ ಸಾಹಸಗಳನ್ನು ನೋಡುತ್ತವೆ.
 • ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲೆಯ ಆಡಳಿತ, ಪಂಚಾಯತಿ ರಾಜ್ ಸಂಸ್ಥೆಗಳು, ಸಾರ್ವಜನಿಕ ವಲಯ, ಖಾಸಗಿ ವಲಯ ಮತ್ತು ಪ್ರಬುದ್ಧ ಗ್ರಾಮಸ್ಥರು ಪರಿಸರ, ಸಂಪರ್ಕ ಮತ್ತು ಪ್ರತಿ ಹಳ್ಳಿಯ ಯೋಗಕ್ಷೇಮವನ್ನು ಹೆಚ್ಚಿಸಲು ಸಂಪನ್ಮೂಲಗಳು ಮತ್ತು ಪ್ರಯತ್ನಗಳ ಒಮ್ಮುಖವನ್ನು ಆಧರಿಸಿದೆ.
 • ಪ್ರಾಜೆಕ್ಟ್ನ ಪ್ರಕಾರ, ಸ್ಮಾರ್ಟ್ ಗ್ರಾಂಗೆ ಅಗತ್ಯವಾದ ಮೂಲ ದೈಹಿಕ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಮತ್ತು ಸೇವೆಗಳ ವಿತರಣೆ, ಜೀವನೋಪಾಯ ಮತ್ತು ಆರ್ಥಿಕ ಅವಕಾಶಗಳನ್ನು ಸುಧಾರಿಸಲು ಅಳವಡಿಸಲಾಗಿರುವ ಸ್ಮಾರ್ಟ್ ಮಾಹಿತಿಯ ಪದರ ಮತ್ತು ಸಂವಹನವನ್ನು ಹೊಂದಿರುತ್ತದೆ.

1. ಚೀನಾದ ಬಾಹ್ಯಾಕಾಶ ಪ್ರಯೋಗಾಲಯದ ಹೆಸರೇನು ?
A. ಟಿಯಾಂಗಾಂಗ್ -1
B. ಸನ್ ವೆ ಟೈಹು ಲೈಟ್
C. ಟಿಎನ್ ಹೇ – 2
D. ಯಾವುದು ಅಲ್ಲ

2. ಟಿಯಾಂಗಾಂಗ್ -1 ಯಾವ ಸಾಗರದಲ್ಲಿ ಪತನಗೊಂಡಿತು ?
A. ಅಟ್ಲಾಂಟಿಕ್ ಸಾಗರ
B. ಸೌತ್ ಪೆಸಿಫಿಕ್ ಸಾಗರ
C. ಇಂಡಿಯನ್ ಓಷನ್
D. ಆರ್ಕ್ಟಿಕ್ ಸಾಗರ

3. ಯಾರ ನೇತೃತ್ವದಲ್ಲಿ ಭ್ರಷ್ಟಾಚಾರ ತಡೆಗಟ್ಟುವ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರೀಯ ವಿಚಕ್ಷಣ ಆಯೋಗವು ಸ್ಥಾಪಿಸಲ್ಪಟ್ಟಿತು ?
A. ಸ್ವರನ್ ಸಿಂಗ್ ಸಮಿತಿ
B. ಷಣ್ಮುಗಂ ಸಮಿತಿ
C. ಕೆ.ಸಂತಾನಂ ಸಮಿತಿ
D. ಯಾವುದು ಅಲ್ಲ

4. ದಿಬಾಂಗ್, ದಾವು-ದೆಲಾಯ್ ಮತ್ತು ಲೋಹಿತ್ ಕಣಿವೆ ಪ್ರದೇಶವು ಯಾವ ರಾಜ್ಯದಲ್ಲಿದೆ ?
A. ಮೇಘಾಲಯ
B. ಮಿಝೋರಾಂ
C. ಅರುಣಾಚಲ ಪ್ರದೇಶ
D. ತ್ರಿಪುರ

5. ತಾಳಗುಂದ ಶಾಸನದಲ್ಲಿ ಯಾರನ್ನು ಕದಂಬ ಕುಟುಂಬದ ಭೂಷಣ ಎಂದು ಕರೆಯಲಾಗಿದೆ
A. ಮೌಯ೯ಶಮ೯
B. ಕಾಕುಸ್ಥ ವಮ೯
C. ಶಾಂತಿ ವಮ೯
D. ಮೃಗೇಶ ವಮ೯

6. ಭಾರತದ ಏಕೀಕರಣ ಕಾಯ೯ದಲ್ಲಿ ಸದಾ೯ರ್ ಪಟೇಲರಿಗೆ ಅತ್ಯಂತ ನಿಕಟವತಿ೯ಯಾಗಿದ್ದವರು
A. ವಿ.ಪಿ.ಮೆನನ್
B. ಕೆ.ಪಿ.ಎಸ್.ಮೆನನ್
C. ಸಿ.ಶಂಕರನ್ ನಾಯರ್
D. ಎಂ.ಓ.ಮಥಾಯಿ

7. ಭಾರತದಲ್ಲಿ ಸ್ಥಾಪಿತವಾದ ಮೊದಲ ಸಹಕಾರ ಸಂಘ ಯಾವುದು
A. ಗೃಹ ನಿಮಾ೯ಣ ಸಹಕಾರಿ ಸಂಘ
B. ಮಾರುಕಟ್ಟೆ ಸಹಕಾರ ಸಂಘ
C. ಕೃಷಿ ಸಹಕಾರಿ ಸಂಘ
D. ಪತ್ತಿನ ಸಹಕಾರಿ ಸಂಘ

8. ಇವುಗಳಲ್ಲಿ ಯಾವುದು ಎಳೆಯ ಭೂ ಸ್ಥರ ಪವ೯ತಗಳನ್ನು ಹೊಂದಿದೆ
A. ವಿಂಧ್ಯ ಪವ೯ತ ಶ್ರೇಣಿ
B. ಪಶ್ಚಿಮ ಘಟ್ಟಗಳು
C. ಹಿಮಾಚಲ ಶ್ರೇಣಿ
D. ಅರಾವಳಿ ಶ್ರೇಣಿ

9. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?
A. ಸಾರ್ಬಿಟಾಲ್.
B. ಫಾರ್ಮಲ್ಡಿಹೈಡ.
C. ಫ್ಲೂರೈಡ್.
D. ಯುರೇನಿಯಂ.

10. ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?
A. ಉತ್ತರಪ್ರದೇಶ.
B. ತೆಲಂಗಾಣ.
C. ಪಂಜಾಬ.
D. ಹರಿಯಾಣಾ.
ಉತ್ತರಗಳು : 1.A 2.B 3.C 4.C 5.B 6.A 7.D 8.C 9.B 10.D 

Related Posts
National Current Affairs – UPSC/KAS Exams- 12th October 2018
India ranks 115 in World Bank human capital index Topic: Indian Economy IN NEWS: Overall, India was ranked 115 among 157 countries. That’s much below its Asian peers, including China ranked 46, ...
READ MORE
Karnataka Current Affairs – KAS / KPSC Exams – 26th April 2017
State wants restaurants to display service charge rule Hotels and restaurants in Karnataka will soon have to display boards saying ‘service charge’ is voluntary. They can’t add the charge in their ...
READ MORE
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಾವೇರಿ ನದಿ ನೀರು ಪ್ರಾಧಿಕಾರ ಸುದ್ದಿಯಲ್ಲಿ ಏಕಿದೆ? ಕಾವೇರಿ ಜಲವಿವಾದ ನ್ಯಾಯಾಧೀಕರಣ 2007ರ ತನ್ನ ಐತೀರ್ಪಿನಲ್ಲಿ ಹೇಳಿದ್ದ ನೀರು ನಿರ್ವಹಣಾ ಮಂಡಳಿಯ ತದ್ರೂಪದಂತಿರುವ 'ಕಾವೇರಿ ನೀರು ನಿರ್ವಹಣಾ ಯೋಜನೆ-2018'ರ ಕರಡನ್ನು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸಲ್ಲಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಲು ...
READ MORE
National Current Affairs – UPSC/KAS Exams- 7th August 2018
Scheduled Tribes (Prevention of Atrocities) Amendment Bill, 2018 Why in news? The Lok Sabha on Monday passed the Scheduled Castes and Scheduled Tribes (Prevention of Atrocities) Amendment Bill, 2018, to bypass the ...
READ MORE
India-UAE ties: A roadmap for deeper cooperation
In a departure from protocol, Prime Minister Narendra Modi received Abu Dhabi’s Crown Prince Sheikh Mohamed bin Zayed Al Nahyan at the airport as he arrived in New Delhi for ...
READ MORE
Air quality remained abysmal on Dec 1st , with four of the seven monitoring stations reporting the “severe” warning during the morning. The situation improved slightly by 7 p.m. due to ...
READ MORE
India’s rotavirus vaccine launched
What  Country’s first, indigenous rotavirus vaccine launched The Rotavirus vaccine was developed indigenously, under a public-private partnership between the Ministry of Science Technology and the Health Ministry. Why to combat diarrhoeal deaths. How As given in ...
READ MORE
Kodagu: The Coffee Land of Karnataka- To be the state’s R-Day Tableau
Karnataka will depict various stages of coffee-making, from plucking of beans to making of filter coffee, in a captivating tableau during the Republic Day parade From women plucking coffee beans to ...
READ MORE
Rural Development-National Rural Drinking & Desert Development Programme (DDP)
Water Programme (NRDWP): In order to meet adequate and safe drinking water supply requirements in rural areas, particularly in areas where coverage is less than 55 lpcd and in those ...
READ MORE
National Judicial Reference System (NJRS) is an electronic repository of cases under the direct taxes category or income tax pending in legal forums like the Income Tax Appellate Tribunal (ITAT), ...
READ MORE
National Current Affairs – UPSC/KAS Exams- 12th October
Karnataka Current Affairs – KAS / KPSC Exams
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams- 7th August
India-UAE ties: A roadmap for deeper cooperation
Poor AQI in Delhi
India’s rotavirus vaccine launched
Kodagu: The Coffee Land of Karnataka- To be
Rural Development-National Rural Drinking & Desert Development Programme
National Judicial Reference System

Leave a Reply

Your email address will not be published. Required fields are marked *