“2nd ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಸಖಿ ಸುರಕ್ಷಾ

 • ಸುದ್ದಿಯಲ್ಲಿ ಏಕಿದೆ? ದೇಶದಲ್ಲಿ ಬಾಕಿಯಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವರದಾನವಾಗಬಲ್ಲ ಅತ್ಯಾಧುನಿಕ ಡಿಎನ್​ಎ ವಿಧಿವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಮಹತ್ವ:

 • ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ವೈಜ್ಞಾನಿಕ ಸಾಕ್ಷ್ಯ ಒದಗಿಸುವಲ್ಲಿ ಇಂಥ ಪ್ರಯೋಗಾಲಯಗಳು ಪ್ರಮುಖ ಪಾತ್ರ ವಹಿಸಲಿವೆ.
 • ಪ್ರಸ್ತುತ ಪ್ರಯೋಗಾಲಯಗಳಲ್ಲಿ ಜೈವಿಕ ಮಾದರಿಗಳ ಸಾಮರ್ಥ್ಯ ಕಡಿಮೆಯಿದ್ದು, ಅದು ಕೂಡ ವಿಸ್ತರಣೆಯಾಗಲಿದೆ.
 • ಸಖಿ ಸುರಕ್ಷಾ  ದೇಶದ ಮೊದಲ ಅತ್ಯಾಧುನಿಕ ವಿಧಿವಿಜ್ಞಾನ ಪ್ರಯೋಗಾಲಯ ಎಂಬ ಹೆಗ್ಗಳಿಕೆ

ಮುಂದಿನ 3 ತಿಂಗಳಲ್ಲಿ ಹೊಸ ಲ್ಯಾಬ್ ಸ್ಥಾಪನೆ ಎಲ್ಲೆಲ್ಲಿ?

 • ಮುಂಬೈ , ಚೆನ್ನೈ , ಗುವಾಹಟಿ , ಪುಣೆ ,ಭೋಪಾಲ್

ಪ್ರಮುಖ ಕಾರಣ

 • ಲೈಂಗಿಕ ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥ,
 • ಸಂತ್ರಸ್ತರಿಗೆ ತ್ವರಿತ ನ್ಯಾಯ
 • ಪರೀಕ್ಷಾ ಮಾದರಿ ಸಾಮರ್ಥ್ಯ ವೃದ್ಧಿ
 • ಪ್ರಸ್ತುತ ಸಿಎಫ್​ಎಸ್​ಎಲ್ ಸಾಮರ್ಥ್ಯ
 • ವರ್ಷಕ್ಕೆ 160 ಪ್ರಕರಣ
 • ಸಖಿ ಸುರಕ್ಷಾದಿಂದ ಹೆಚ್ಚುವ ಸಾಮರ್ಥ್ಯ
 • ವರ್ಷಕ್ಕೆ 2000 ಪ್ರಕರಣ

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಯೋಗಾಲಯಗಳು

 • ಚಂಡೀಗಢ , ಕೋಲ್ಕತ , ಹೈದರಾಬಾದ್  , ಪ್ರತಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು

ಸಖಿಯಲ್ಲಿ ಇರಲಿದೆ 4 ಘಟಕಗಳು

 • ಲೈಂಗಿಕ ದೌರ್ಜನ್ಯ ಮತ್ತು ನರಹತ್ಯೆ ಪ್ರಕರಣಗಳು
 • ಪಿತೃತ್ವ (ಅನೈತಿಕ ಮಗು ಜನನ, ಲಿಂಗ ನಿರ್ಧಾರ, ಆಸ್ಪತ್ರೆಗಳಲ್ಲಿ ಮಗು ಬದಲಾವಣೆ ಅಪರಾಧಗಳು)
 • ಮಾನವ ಗುರುತು ಪತ್ತೆ (ವ್ಯಕ್ತಿ ಅಥವಾ ಮಗು ನಾಪತ್ತೆ, ಅಪಘಾತಗಳಲ್ಲಿ ಸಾಮೂಹಿಕ ಸಾವು)
 • ಮೈಟೋಕಾಂಡ್ರಿಯಾ ಘಟಕ ( ಸಾಮಾನ್ಯ ಡಿಎನ್​ಎ ಅಣು ಪರೀಕ್ಷೆ ಸಾಧ್ಯವಾಗದ ಸಂದರ್ಭ)

ಕೇವಲ 200 ಪ್ರಕರಣಗಳ ಮಾದರಿ

 • ಅತ್ಯಾಚಾರ ಮತ್ತು ಇತರ ಜೈವಿಕ ಅಪರಾಧ ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಲು 90 ದಿನಗಳ ಗಡುವನ್ನು ಕಾನೂನು ಕೊಡುತ್ತದೆ. ಇಂಥ ಪ್ರಕರಣಗಳಲ್ಲಿ ಜೈವಿಕ ಮಾದರಿಗಳನ್ನು ಸಂರಕ್ಷಿಸಿ ಬಳಿಕ ಹಲವಾರು ಸೂಕ್ಷ್ಮ ಮಟ್ಟದ ಪರೀಕ್ಷೆಗಳನ್ನು ನಡೆಸಬೇಕಿರುತ್ತದೆ.
 • ಆಗ ಮಾತ್ರ ನ್ಯಾಯಾಲಯಕ್ಕೆ ನಿಖರ ವರದಿ ಸಲ್ಲಿಕೆಯಾಗಿ ಸಂತ್ರಸ್ತರಿಗೆ ನ್ಯಾಯ ಸಿಗುವುದು ಸಾಧ್ಯ. ಪ್ರಸ್ತುತ ಚಂಡೀಗಢದಲ್ಲಿರುವ ಸಿಎಫ್​ಎಸ್​ಎಲ್ ಪ್ರಯೋಗಾಲಯ ಕೇವಲ 200 ಪ್ರಕರಣಗಳ ಮಾದರಿ ಸಂರಕ್ಷಣೆ ಸಾಮರ್ಥ್ಯ ಹೊಂದಿದೆ.
 • ಸಖಿ ಲ್ಯಾಬ್​ಗಳಿಂದ ಸಾಮರ್ಥ್ಯ ಹೆಚ್ಚಲಿದೆ.

ಗ್ರಾಮ ಬಂದ್!

 • ಸುದ್ದಿಯಲ್ಲಿ ಏಕಿದೆ ? ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಳು ರಾಜ್ಯಗಳಲ್ಲಿ ರೈತರು 10 ದಿನಗಳ ಬಂದ್​ಗೆ ಕರೆಕೊಟ್ಟಿದ್ದಾರೆ.
 • ‘ಗ್ರಾಮ ಬಂದ್ ’ (ಗಾಂವ್ ಬಂದ್)ಗೆ ಉತ್ತರ ಭಾರತದ ರಾಜ್ಯಗಳ ಬಹುತೇಕ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
 • ಹಾಲು ಸರಬರಾಜು, ತರಕಾರಿ ಮತ್ತು ಅವಶ್ಯಕ ಕೃಷಿ ಉತ್ಪನ್ನಗಳನ್ನು ಗ್ರಾಮಗಳಿಂದ ಮಾರುಕಟ್ಟೆ ಮತ್ತು ನಗರಗಳಿಗೆ ಪೂರೈಸುವುದನ್ನು ರೈತರು 10 ದಿನ ನಿಲ್ಲಿಸಲಿದ್ದಾರೆ.
 • ಏಳು ರಾಜ್ಯಗಳಲ್ಲಿ ಬಂದ್ ಜೋರು: ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಛತ್ತೀಸ್​ಗಢ ಮತ್ತು ಮಹಾರಾಷ್ಟ್ರದಲ್ಲಿ ಬಂದ್ ತೀವ್ರತೆ ಜೋರಾಗಿದೆ.
 • ಒಂದೇ ಕಂತಿನಲ್ಲಿ ಕೃಷಿ ಸಾಲ ಮನ್ನಾ, ಬೆಳೆಗಳಿಗೆ ಅತ್ಯಧಿಕ ಕನಿಷ್ಠ ಬೆಂಬಲ ಬೆಲೆ ಮತ್ತು ಸ್ವಾಮಿನಾಥನ್ ವರದಿ ಅನುಷ್ಠಾನ ರೈತರ ಬೇಡಿಕೆಗಳಲ್ಲಿ ಪ್ರಮುಖವಾಗಿದೆ.
 • ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ, ಸ್ವಾಭಿಮಾನ ಶೇಟ್​ಕರಿ ಸಂಘಟನೆ ಮತ್ತು ಭಾರತೀಯ ಕಿಸಾನ್ ಸಂಘ ಸೇರಿದಂತೆ ಕೆಲವು ರೈತ ಸಂಘಟನೆಗಳು ಬಂದ್​ನಿಂದ ದೂರ ಉಳಿದಿವೆ.

ಸ್ವಾಮಿನಾಥನ್ ವರದಿ ಏನು ?

 • ದೇಶದ ರೈತರ ಏಳಿಗೆಯ ದೃಷ್ಟಿಯಿಂದ 2004ರ ನ. 18ರಂದು ಕೇಂದ್ರ ಸರ್ಕಾರ ನ್ಯಾಷನಲ್ ಕಮಿಷನ್ ಆನ್ ಫಾರ್ಮರ್ಸ್ (ಎನ್​ಸಿಎಫ್) ರಚನೆ ಮಾಡಿತ್ತು.
 • ಇದರ ನೇತೃತ್ವವನ್ನು ಪ್ರೊ. ಎಂ.ಎಸ್. ಸ್ವಾಮಿನಾಥನ್​ಗೆ ವಹಿಸಲಾ ಗಿತ್ತು. ಸಮಿತಿಯು 2006ರೊಳಗೆ ಐದು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿತು. ಕೃಷಿ ಭೂಮಿ ಒಡೆತನದ ಅಸಮಾನತೆ ನಿವಾರಣೆ, ನೀರಾವರಿ ಸುಧಾರಣೆಗಳು, ಮಣ್ಣು ಪರೀಕ್ಷೆ ಪ್ರಯೋಗಾಲಯಗಳ ರಾಷ್ಟ್ರೀಯ ಜಾಲ ಸ್ಥಾಪನೆ, ಇಳುವರಿ ಹೆಚ್ಚಳಕ್ಕೆ ವೈಜ್ಞಾನಿಕ ಮಾರ್ಗಗಳ ಅಳವಡಿಕೆ,ಮಹಿಳಾ ಕೃಷಿಕ ರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಕೃಷಿ ಸಾಲ ಬಡ್ಡಿ ಇಳಿಕೆ,ಬೆಳೆ ವಿಮೆ, ರೈತ ಆರೋಗ್ಯ ವಿಮೆ, ಆಹಾರ ಭದ್ರತೆ ಸೇರಿದಂತೆ ಹಲವು ಶಿಫಾರಸುಗಳನ್ನು ಸಮಿತಿ ವರದಿಯಲ್ಲಿ ನೀಡಿತ್ತು.

ಗಾಂಧಿ ಸ್ಮರಣಫಲಕ

 • ಸುದ್ದಿಯಲ್ಲಿ ಏಕಿದೆ? ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಸ್ಮರಣಾರ್ಥ ಪ್ರಧಾನಿ ಮೋದಿ ಅವರು ಇಂದು ಸಿಂಗಾಪುರದ ಕ್ಲಿಫೋರ್ಡ್​ ಪೈರ್​ನಲ್ಲಿ ಫಲಕ ಉದ್ಘಾಟಿಸಿದ್ದಾರೆ.
 • ಗಾಂಧಿಜೀ ಅವರ ಚಿತಾಭಸ್ಮವನ್ನು ಇದೇ ಕ್ಲಿಫೋರ್ಟ್​ ಪೈರ್​ನಲ್ಲಿ 70 ವರ್ಷಗಳ ಹಿಂದೆ ವಿಸರ್ಜನೆ ಮಾಡಲಾಗಿತ್ತು. ಇದರ ಜ್ಞಾಪಕಾರ್ಥವಾಗಿ ಮೋದಿ ಅವರು ಫಲಕವನ್ನು ಉದ್ಘಾಟಿಸಿದರು.
 • ಮೋದಿ ಅವರು ಸಿಂಗಾಪುರದ ರಾಷ್ಟ್ರೀಯ ಆರ್ಕಿಡ್​ ಉದ್ಯಾನಕ್ಕೆ ಭೇಟಿ ನೀಡಿದರು. ಇದು ಉಷ್ಣವಲಯದ ಉದ್ಯಾನವಾಗಿದ್ದು, ಯುನೇಸ್ಕೋದ ಪಾರಂಪರಿಕ ತಾಣದ ಪಟ್ಟಿಗೆ ಸೇರ್ಪಡೆಗೊಂಡ ಹೆಗ್ಗಳಿಕೆ ಗಳಿಸಿದೆ.

ಗಿವಿಂಗ್​ ಪ್ಲೆಡ್ಜ್​ ಅಭಿಯಾನ

 • ಸುದ್ದಿಯಲ್ಲಿ ಏಕಿದೆ? ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಮುಖ್ಯಸ್ಥ ನಂದನ್ ನಿಲೇಕಣಿ, ಪತ್ನಿ ರೋಹಿಣಿ ನಿಲೇಕಣಿ ಹಾಗೂ ಭಾರತ ಮೂಲದ ಮೂವರು ಶತಕೋಟ್ಯಧೀಶರು ಮೈಕ್ರೋಸಾಫ್ಟ್ ಸಂಸ್ಥಾಪಕ, ಜಗತ್ತಿನ ಅತಿ ಶ್ರೀಮಂತರ ಪೈಕಿ ಒಬ್ಬರಾದ ಬಿಲ್ ಗೇಟ್ಸ್ ಸ್ಥಾಪಿಸಿರುವ ‘ಗಿವಿಂಗ್ ಪ್ಲೆಡ್ಜ್ ’ ದಾನ ಅಭಿಯಾನಕ್ಕೆ ಸೇರ್ಪಡೆಯಾಗಿದ್ದಾರೆ.
 • ದಾನ ಪ್ರತಿಜ್ಞೆ ಪತ್ರದಲ್ಲಿ ನಿಲೇಕಣಿ ದಂಪತಿ ಭಗವದ್ಗೀತೆಯ ಶ್ಲೋಕವೊಂದನ್ನು ಉಲ್ಲೇಖಿಸಿರುವುದು ವಿಶೇಷ. ಅನಿಲ್ ಮತ್ತು ಅಲ್ಲಿಸನ್ ಭುಸ್ರಿ, ಶಂಷೀರ್ ಮತ್ತು ಶಬೀನಾ ವಯಲಿಲ್, ಬಿ.ಆರ್.ಶೆಟ್ಟಿ ಮತ್ತು ಪತ್ನಿ ಚಂದ್ರಕುಮಾರಿ ರಘುರಾಮ್ ಶೆಟ್ಟಿ ಸೇರಿದಂತೆ ಕಳೆದ ವರ್ಷ ಒಟ್ಟು 14 ಕೋಟ್ಯಧೀಶರು ಅಭಿಯಾನಕ್ಕೆ ಜತೆಯಾಗಿದ್ದಾರೆ ಎಂದು ಗಿವಿಂಗ್​ ಪೆಡ್ಜ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಗಿವಿಂಗ್ ಪ್ಲೆಡ್ಜ್ ಎಂದರೇನು ?

 • ಗಿವಿಂಗ್ ಪ್ಲೆಡ್ಜ್ ಶ್ರೀಮಂತ ಜನರನ್ನು ತಮ್ಮ ಸಂಪತ್ತನ್ನು ಬಹುಪಾಲು ಪರೋಪಕಾರಿ ಕಾರಣಗಳಿಗೆ ಕೊಡುಗೆ ನೀಡಲು ಪ್ರೋತ್ಸಾಹಿಸುವ ಅಭಿಯಾನವಾಗಿದೆ.
 • ಗಿವಿಂಗ್ ಪ್ಲೆಡ್ಜ್ ಎನ್ನುವುದು ಸಮಾಜದ ಅತ್ಯಂತ ಪ್ರಕ್ಷುಬ್ಧ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವಲ್ಲಿ ವಿನ್ಯಾಸಗೊಳಿಸಿದ ಒಂದು ಜಾಗತಿಕ, ಬಹು-ಪೀಳಿಗೆಯ ಉಪಕ್ರಮವಾಗಿದೆ, ಶ್ರೀಮಂತ ವ್ಯಕ್ತಿಗಳು ಮತ್ತು ಕುಟುಂಬಗಳು ತಮ್ಮ ಸಂಪತ್ತನ್ನು ಬಹುಪಾಲು ಪರೋಪಕಾರಿ ಕಾರಣಗಳಿಗೆ ಪ್ರೋತ್ಸಾಹಿಸುವ ಮೂಲಕ ಉತ್ತೇಜಿಸುತ್ತದೆ.

ಆಯುಷ್ಮಾನ್‌ ಭಾರತ್‌

 • ಸುದ್ದಿಯಲ್ಲಿ ಏಕಿದೆ ? ಎಲ್ಲರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶ ಹೊಂದಿರುವ ‘ಆಯುಷ್ಮಾನ್‌ ಭಾರತ್‌’ಯೋಜನೆಯಡಿ ನಿಗದಿಪಡಿಸಲಾಗಿರುವ ವೈದ್ಯಕೀಯ ಚಿಕಿತ್ಸಾ ದರಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳು ಅಪಸ್ವರ ಎತ್ತಿವೆ.
 • ಈ ಸಂಬಂಧ ನೀತಿ ಆಯೋಗ ಹಾಗೂ ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿರುವ ಮನವಿ ಸಲ್ಲಿಸಿರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ದರ ನಿಗದಿ ಮಾಡುವುದರಿಂದ ಗುಣಮಟ್ಟ ಹಾಗೂ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವಲ್ಲಿ ತೊಡಕಾಗುತ್ತದೆ.
 • ಗುಣಮಟ್ಟದ ಆರೋಗ್ಯ ಸೇವೆಯ ಅಗತ್ಯವಿದ್ದಲ್ಲಿ ಹಣ ಖರ್ಚು ಮಾಡುವುದು ಅನಿವಾರ್ಯ. ಶಸ್ತ್ರಚಿಕಿತ್ಸೆಗಳಿಗೆ ‘ಆಯುಷ್ಮಾನ್‌ ಭಾರತ್‌’ನ ಅಡಿ ನಿಗದಿ ಮಾಡಲಾದ ದರ ತುಂಬಾ ಕಡಿಮೆ ಇದೆ. ಸರಕಾರ ಈ ದರಗಳನ್ನು ಪುನರ್‌ ಪರಿಶೀಲಿಸಬೇಕು.
 • ಆರೋಗ್ಯ ಇಲಾಖೆ ಹಾಗೂ ನೀತಿ ಆಯೋಗ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯ ಅಡಿ 1,354 ಪ್ಯಾಕೇಜ್‌ ಆಧಾರಿತ ಚಿಕಿತ್ಸೆಗಳಿಗೆ ದರ ನಿಗದಿ ಮಾಡಿದೆ.’ ಆಯುಷ್ಮಾನ್‌ ಭಾರತ್‌’ ಮೂಲಕ ದೇಶದ 10.74 ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ವೆರೆಗಿನ ಆರೋಗ್ಯ ವಿಮಾ ಸೌಲಭ್ಯ ಸಿಗುವಂತೆ ಯೋಜನೆ ರೂಪಿಸಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆ

 • ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರ ಪ್ರಾಯೋಜಿತ ಆರೋಗ್ಯ ವಿಮೆ ಯೋಜನೆ (MoHFW).
 • ಫಲಾನುಭವಿಗಳು: ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ 2011 (SECC) ದತ್ತಸಂಚಯವನ್ನು ಆಧರಿಸಿ ಬಡವರಿಗೆ ಮತ್ತು ದುರ್ಬಲ ಜನಸಂಖ್ಯೆಗೆ ಸೇರಿದ 10 ಕೋಟಿ ಕುಟುಂಬಗಳನ್ನು ಈ ಯೋಜನೆಯು ಗುರಿ ಮಾಡುತ್ತದೆ. ಫಲಾನುಭವಿಗಳು ಭಾರತದಲ್ಲಿ ಎಲ್ಲಿಯಾದರೂ ಸೇವೆಗಳನ್ನು ಪಡೆಯಬಹುದು. ದುರಂತ ಆರೋಗ್ಯ ಸಂಚಿಕೆಗಳಿಂದ ಉಂಟಾಗುವ ಆರ್ಥಿಕ ಅಪಾಯವನ್ನು ತಗ್ಗಿಸುವ ಮೂಲಕ ಗುರಿ ಕುಟುಂಬಗಳಿಗೆ ಗೋಚರಿಸುವ ಪರಿಹಾರವನ್ನು ತರಲು ಇದು ಸಹಾಯ ಮಾಡುತ್ತದೆ.
 • ವಿಮೆ ಕವರ್: ಇದು ರೂ. ಪ್ರತಿ ವರ್ಷಕ್ಕೆ ಪ್ರತಿ ಕುಟುಂಬಕ್ಕೆ 5 ಲಕ್ಷ ವಿಮಾ ಕವರೇಜ್, ಎಲ್ಲಾ ದ್ವಿತೀಯಕ ಆರೈಕೆ ಮತ್ತು ತೃತೀಯ ರಕ್ಷಣೆಯ ಕಾರ್ಯವಿಧಾನಗಳನ್ನು ನೋಡಿಕೊಳ್ಳುವುದು. ಈ ಯೋಜನೆಯಲ್ಲಿ ಕುಟುಂಬದ ಗಾತ್ರ ಮತ್ತು ವಯಸ್ಸಿನ ಮೇಲೆ ಯಾವುದೇ ಕ್ಯಾಪ್ ಇಲ್ಲ.
 • ಪ್ರಯೋಜನಗಳನ್ನು ಒಳಗೊಂಡಿದೆ: ಪೂರ್ವ ಮತ್ತು ಆಸ್ಪತ್ರೆಗೆ ನಂತರದ ವೆಚ್ಚಗಳು. ಮೊದಲೇ ಅಸ್ತಿತ್ವದಲ್ಲಿರುವ ಎಲ್ಲಾ ಷರತ್ತುಗಳನ್ನು ಪಾಲಿಸಿಯ ಆರಂಭದಿಂದಲೂ ಸಹ ಇದು ಒಳಗೊಳ್ಳುತ್ತದೆ. ಇದು ಫಲಾನುಭವಿಗೆ ಆಸ್ಪತ್ರೆಗೆ ಬರುವಂತೆ ವ್ಯಾಖ್ಯಾನಿಸಲಾದ ಸಾರಿಗೆ ಅನುದಾನವನ್ನು ಸಹ ಪಾವತಿಸುತ್ತದೆ. ಫಲಾನುಭವಿಗಳು ಸಾರ್ವಜನಿಕ ಮತ್ತು ಎಂಪನೇಲ್ ಖಾಸಗಿ ಸೌಲಭ್ಯಗಳಲ್ಲಿ ಪ್ರಯೋಜನ  ಪಡೆಯಬಹುದು.
 • ಸ್ವಾಸ್ಥ್ಯ ಕೇಂದ್ರಗಳು: 2022 ರ ಹೊತ್ತಿಗೆ ದೇಶದಾದ್ಯಂತ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸುತ್ತದೆ. ಇದರಿಂದಾಗಿ ತಡೆಗಟ್ಟುವ, ಉತ್ತೇಜಕ ಮತ್ತುಚಿಕಿತ್ಸಕ ಆರೈಕೆಗಾಗಿ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಗೆ ಅನುಕೂಲವಾಗುತ್ತದೆ. ಈ ಕೇಂದ್ರಗಳು ಸಂವಹನ ಮಾಡದ ರೋಗಗಳು, ದಂತ, ಮಾನಸಿಕ, ಜೆರಿಯಾಟ್ರಿಕ್ ಕೇರ್, ಉಪಶಾಮಕ ಆರೈಕೆ ಇತ್ಯಾದಿಗಳಿಗೆ ತಡೆಗಟ್ಟುವ, ಉತ್ತೇಜಕ ಮತ್ತು ಚಿಕಿತ್ಸಕ ಆರೈಕೆಯನ್ನು ಒದಗಿಸುತ್ತದೆ.
 • ಮಿಷನ್ ಕೌನ್ಸಿಲ್: ಯೋಜನೆಯ ನಿರ್ದೇಶನಗಳನ್ನು ನೀಡುವುದಕ್ಕಾಗಿ ಮತ್ತು ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯವನ್ನು ಹೆಚ್ಚಿಸಲು, ಆಯುಷ್ಮಾನ್ ಭಾರತ್ ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಮಿಷನ್ ಕೌನ್ಸಿಲ್ (ಎಬಿ-ಎನ್ಎಚ್ಪಿಎಂಸಿ) ಉನ್ನತ ಮಟ್ಟದಲ್ಲಿ ಸ್ಥಾಪಿಸಲಾಗುವುದು. ಇದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿಯ ಅಧ್ಯಕ್ಷತೆ ವಹಿಸಲಿದೆ.
 • ರಾಜ್ಯ ಸರ್ಕಾರಗಳ ಪಾತ್ರ: ಯೋಜನೆಗಳನ್ನು ಅಡ್ಡಲಾಗಿ ಮತ್ತು ಲಂಬವಾಗಿ ವಿಸ್ತರಿಸಲು ಅವಕಾಶ ನೀಡಲಾಗುತ್ತದೆ. ಅದರ ಅನುಷ್ಠಾನದ ವಿಧಾನಗಳನ್ನು ಆಯ್ಕೆ ಮಾಡಲು ಕೂಡ ಅವು ಮುಕ್ತವಾಗಿವೆ. ಅವರು ವಿಮಾ ಕಂಪೆನಿ ಅಥವಾ ನೇರವಾಗಿ ಟ್ರಸ್ಟ್ / ಸೊಸೈಟಿ ಅಥವಾ ಮಿಶ್ರಿತ ಮಾದರಿಯ ಮೂಲಕ ಕಾರ್ಯಗತಗೊಳಿಸಬಹುದು. ಚಿಕಿತ್ಸೆಗಾಗಿ ಪಾವತಿಗಳು: ಇದು ಪ್ಯಾಕೇಜ್ ದರದಲ್ಲಿ (ಮುಂಚಿತವಾಗಿ ಸರ್ಕಾರವು ವ್ಯಾಖ್ಯಾನಿಸಬೇಕಾದರೆ) ಆಧಾರದ ಮೇಲೆ ಮಾಡಲಾಗುತ್ತದೆ. ಪ್ಯಾಕೇಜ್ ದರಗಳು ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಒಳಗೊಂಡಿರುತ್ತದೆ. ಫಲಾನುಭವಿಗಳಿಗೆ, ಇದು ಹಣವಿಲ್ಲದ, ಕಾಗದದ ಕಡಿಮೆ ವಹಿವಾಟು ಇರುತ್ತದೆ. ರಾಜ್ಯಗಳು / ಯು.ಟಿ.ಗಳು ಈ ದರವನ್ನು ಸೀಮಿತವಾದ ಬ್ಯಾಂಡ್ವಿಡ್ತ್ನಲ್ಲಿ ತಮ್ಮ ನಿರ್ದಿಷ್ಟ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಳ್ಳಲು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ.
Related Posts
National Current Affairs – UPSC/KAS Exams – 9th October 2018
Deadly heatwaves could hit India: Climate change report Topic: Environment and Ecology IN NEWS: India could face an annual threat of deadly heatwaves, like like the one in 2015 that killed ...
READ MORE
Karanth’s house being restored
  Restoration of the 80-year-old house in which Jnanpith Award winner K. Shivaram Karanth spent most of his life has begun at Balavana in Puttur, 90 km from Mangaluru. The work is ...
READ MORE
Introduction ∗ Bioleaching is the extraction of metals from their ores through the use of living organisms. ∗ It is the Conversion of insoluble metal sulfides into water-soluble metal sulfates. ∗ Nowadays bioleaching ...
READ MORE
Karnataka Current Affairs – KAS / KPSC Exams – 6th June 2017
Karnataka to provide legal assistance to IT association Minister for IT, Biotechnology and Tourism Priyank Kharge has assured of providing legal assistance to IT employees’ association in the State, according to ...
READ MORE
National Current Affairs – UPSC/KAS Exams- 11th December 2018
National Pension Scheme Topic: Government Policies IN NEWS: The government  announced a slew of changes to the National Pension Scheme (NPS), including increasing the government’s contribution, exempting withdrawals from tax, and also ...
READ MORE
Karnataka Current Affairs – KAS / KPSC Exams – 22nd June 2017
In 19 years, encroachment of forest areas rose by 465% in Karnataka Under-reporting of the extent of forest fire damage, number of roadkills, extent of encroachment, and decrease in forest cover ...
READ MORE
National Current Affairs – UPSC/KAS Exams- 7th February 2019
RBI unlikely to transfer contingency fund to govt. Topic: Economy In News: The Reserve Bank of India (RBI) is unlikely to give in to the government’s demand of transferring funds that was ...
READ MORE
A recent study by the WHO shows that a significant population of Indian subcontinent breathes air with much higher particulate matter that is lesser than 2.5 micrometre (PM2.5) in size ...
READ MORE
The 14th Indo-Asean summit and the East Asia forum.
Why in News: Prime Minister Narendra Modi arrived in Vientiane, Laos on Wednesday to attend two important meetings – the 14th Indo-Asean summit and the East Asia forum. Here is what you ...
READ MORE
National Current Affairs – UPSC/KAS Exams- 19th November 2018
Rani Lakshmibai of Jhansi Topic: Modern Indian History IN NEWS: November 19 is the birth anniversary of Rani Lakshmibai. More on the Topic: Lakshmibai, the Rani of Jhansi (19 November 1828 – 18 ...
READ MORE
National Current Affairs – UPSC/KAS Exams – 9th
Karanth’s house being restored
BIOLEACHING
Karnataka Current Affairs – KAS / KPSC Exams
National Current Affairs – UPSC/KAS Exams- 11th December
Karnataka Current Affairs – KAS / KPSC Exams
National Current Affairs – UPSC/KAS Exams- 7th February
Particulate matter
The 14th Indo-Asean summit and the East Asia
National Current Affairs – UPSC/KAS Exams- 19th November

Leave a Reply

Your email address will not be published. Required fields are marked *