2nd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

 • ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿಗೆ ಹಿರಿಯ ಸಾಹಿತಿಗಳಾದ ಬನ್ನಂಜೆ ಗೋವಿಂದಾಚಾರ‍್ಯ, ಪ್ರೊ. ಸೋಮಶೇಖರ ಇಮ್ರಾಪುರ, ಪ್ರೊ. ಎಚ್.ಜೆ. ಲಕ್ಕಪ್ಪಗೌಡ, ಪ್ರೊ. ಎನ್‌.ಎಸ್. ಲಕ್ಷ್ಮೀನಾರಾಯಣ ಭಟ್ಟ, ಕಸ್ತೂರಿ ಬಾಯರಿ ಭಾಜನರಾಗಿದ್ದಾರೆ.
 • ತಲಾ ₹50,000 ನಗದು ಮತ್ತು ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ. 60 ವರ್ಷ ದಾಟಿದವರಿಗೆ ಮಾತ್ರ ಈ ಪ್ರಶಸ್ತಿ ನೀಡಬೇಕೆಂಬ ನಿಯಮವನ್ನು ಇದೇ ಮೊದಲ ಬಾರಿಗೆ ರೂಪಿಸಿ ಜಾರಿಗೆ ತರಲಾಗಿದೆ
 • ಪ್ರಶಸ್ತಿಯೊಂದಿಗೆ ಏಳು ಇಂಚು ಉದ್ದದ ಸರಸ್ವತಿ ಪುತ್ಥಳಿ ನೀಡಲಾಗುತ್ತಿತ್ತು. ಈ ಬಾರಿ ಸರಸ್ವತಿಯ ಬೇರೆ ವಿನ್ಯಾಸದ ಪುತ್ಥಳಿಯನ್ನು ನೀಡಲಾಗುತ್ತಿದ್ದು, ಎತ್ತರವನ್ನು ಒಂದು ಅಡಿಗೆ ಹೆಚ್ಚಿಸಲಾಗಿದೆ

ದುಬಾರೆ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು

 • ಪ್ರಮುಖ ಪ್ರವಾಸಿ ಕೇಂದ್ರವೂ ಆಗಿರುವ ದುಬಾರೆ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಬಹುತೇಕ ಭಾಗ ಸುಟ್ಟಿದೆ.
 • ಗಾಳಿಯ ರಭಸಕ್ಕೆ ಅರಣ್ಯದಲ್ಲಿ ಬೆಂಕಿ ವ್ಯಾಪಿಸಿತ್ತು.
 • ಅರಣ್ಯ ಪ್ರದೇಶದಲ್ಲಿ ಅಗ್ನಿಶಾಮಕ ವಾಹನ ಸಂಚರಿಸಲು ಸಾಧ್ಯವಾಗಲಿಲ್ಲ.
 • 35ಕ್ಕೂ ಅಧಿಕ ಸಿಬ್ಬಂದಿ ಹಸಿರು ಎಲೆ ಮತ್ತು ಕೋಲುಗಳಿಂದ ಬಡಿಯುವ ಮೂಲಕ ಮೂರು ಗಂಟೆಗಳಿಗೂ ಹೆಚ್ಚಿನ ಕಾಲ ಹರಸಾಹಸ ಪಟ್ಟು ಬೆಂಕಿ ಹತೋಟಿಗೆ ತಂದರು
 • ದುಬಾರೆ ಸಾಕಾನೆ ಶಿಬಿರದ ಬಳಿಯೇ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ
 • ಸಾಕಾನೆಗಳನ್ನು ಅರಣ್ಯ ಪ್ರದೇಶಕ್ಕೆ ಬಿಡದಿರಲೂ ಅಧಿಕಾರಿಗಳು ನಿರ್ಧರಿಸಿದ್ದಾರೆ

ದುಬಾರೆ

ದುಬಾರೆ ಕಾಡು ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಒಂದು ಪ್ರವಾಸಿ ತಾಣ. ಕಾವೇರಿ ಈ ಕಾಡಿನ ಮೂಲಕ ಹರಿಯುತ್ತಾಳೆ. ದುಬಾರೆ ಕಾಡಿನಲ್ಲಿ ಆನೆ ಶಿಬಿರ ಇದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ.

ಈ ಶಿಬಿರದಲ್ಲಿ ಆನೆಗಳ ತರಬೇತಿ,ಘಾಗೂ ಪ್ರವಾಸಿಗಳಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಪ್ರತಿ ದಿನ ಬೆಳಿಗ್ಗೆ ೮ ರಿಂದ ೫.೩೦ ರ ವರೆಗೆ ಪ್ರವಾಸಿಗಳಿಗೆ ಈ ಶಿಬಿರ ತೆರೆದಿರುತ್ತದೆ. ಈ ಸಮಯದ ನಂತರ ಆನೆಗಳನ್ನು ಕಾಡಿನಲ್ಲಿ ಬಿಟ್ಟು ಬರಲಾಗುತ್ತದೆ. ರಾತ್ರಿಯಿಡಿ ಕಾಡಿನಲ್ಲಿಯೇ ಇರುವ ಆನೆಗಳನ್ನು ಮತ್ತೆ ಮುಂಜಾನೆ ಮತ್ತು ಸಾಯಂಕಾಲ ಶಿಬಿರಕ್ಕೆ ಕರೆತರಲಾಗುತ್ತದೆ.

ಪಾವಗಡ ಸೋಲಾರ್ ಪಾರ್ಕ್ 

 • ಪಾವಗಡದಲ್ಲಿ ನಿರ್ಮಾಣವಾಗಿರುವ ಸೌರ ವಿದ್ಯುತ್‌ ಪಾರ್ಕ್ ಕರ್ನಾಟಕಕ್ಕೆ ಗೌರವ ತಂದುಕೊಡುವಂತಹ ಯೋಜನೆಯಾಗಿದ್ದು, ಜಗತ್ತಿನ 8ನೇ ಅದ್ಭುತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
 • ನಾಗಲಮಡಿಕೆ ಹೋಬಳಿಯ ತಿರುಮಣಿಯಲ್ಲಿ ವಿಶ್ವದ ಅತಿದೊಡ್ಡ 2000 ಮೆಗಾವಾಟ್‌ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೋಲಾರ್ ಪಾರ್ಕ್ ’ಶಕ್ತಿ ಸ್ಥಳ’ದ ಮೊದಲನೇ ಹಂತ ಉದ್ಘಾಟಿಸಿ ಮಾತನಾಡಿದರು.
 • ಈ ಪಾರ್ಕ್ ನಿರ್ಮಾಣವಾಗಿರುವುದರಿಂದ ಪಾವಗಡಕ್ಕೆ ಈವರೆಗೆ ಅಂಟಿಕೊಂಡಿದ್ದ ಹಿಂದುಳಿದ ಪ್ರದೇಶ, ಬರಪೀಡಿತ ಪ್ರದೇಶ ಎಂಬ ಹಣೆ ಪಟ್ಟಿ ಕಳಚಲಿದೆ.
 • 13 ಸಾವಿರ ಎಕರೆಯಲ್ಲಿ ₹ 16,500 ಕೋಟಿ ಮೊತ್ತದಲ್ಲಿ ಈ ಪಾರ್ಕ್‌ ನಿರ್ಮಾಣವಾಗುತ್ತಿದೆ.
 • ಇದೊಂದು ಪರಿಸರ ಸ್ನೇಹಿ ಯೋಜನೆಯಾಗಿದೆ.
 • ಪ್ರಥಮ ಹಂತದಲ್ಲಿ 600 ಮೆಗಾವಾಟ್‌ ಉತ್ಪಾದನೆಗೆ ಈಗ ಚಾಲನೆ ಸಿಕ್ಕಿದೆ. ಹಂತ ಹಂತವಾಗಿ 2000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕೆಲವೇ ತಿಂಗಳಲ್ಲಿ ಆಗಲಿದೆ.

ಟೋಲ್‌ಗಳಲ್ಲಿ ಮಹಿಳಾ ಸಿಬ್ಬಂದಿ ನಿಯೋಜನೆ

 • ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್‌ 8ರಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಗರ ಪ್ರದೇಶಕ್ಕೆ ಸಮೀಪವಿರುವ ಒಂದು ಟೋಲ್‌ನಲ್ಲಿ ಮಹಿಳಾ ಸಿಬ್ಬಂದಿ ನಿಯೋಜಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ.
 • ‘ಈ ಕ್ರಮ ಯಶಸ್ವಿಯಾದರೆ, ಮುಂದಿನ ಮೂರು ತಿಂಗಳಲ್ಲಿ ಎನ್‌ಎಚ್‌ಎಐದ ಎಲ್ಲ ಟೋಲ್‌ಗಳಲ್ಲಿ ಮಹಿಳಾ ಸಿಬ್ಬಂದಿ ನಿಯೋಜಿಸಲಾಗುವುದು.
 • ಟೋಲ್‌ಗಳ ಸ್ಥಿತಿಯನ್ನು ಸುಧಾರಿಸಲು ಮತ್ತು ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸಲು, ಎನ್ಎಚ್ಎಐ ವಿವಿಧ ಪ್ರಮಾಣಗಳನ್ನು ಆಧರಿಸಿ ಟೋಲ್‌ಗಳ ಶ್ರೇಣಿ ವರ್ಗೀಕರಣ ಮಾಡುತ್ತಿದೆ.
 • ಟೋಲ್‌ಗಳಲ್ಲಿ ಅಳವಡಿಸಿರುವ ಸೂಚನಾ ಫಲಕಗಳು, ಫಾಸ್ಟ್‌ ಟ್ಯಾಗ್‌ ಮಾರ್ಗ, ಶೌಚಾಲಯ ಲಭ್ಯತೆ ಮತ್ತಿತರ ಸೌಲಭ್ಯಗಳನ್ನು ಆಧರಿಸಲಾಗುತ್ತದೆ.

ಏನಿದು ಫಾಸ್ಟ್‌ಟ್ಯಾಗ್‌: ಫಾಸ್ಟ್‌ಟ್ಯಾಗ್‌ ಎಂಬುದು ರೇಡಿಯೊ ತರಂಗಾಂತರಗುರುತಿಸಬಲ್ಲ (ಆರ್‌ಎಫ್‌ಐಡಿ) ತಂತ್ರಜ್ಞಾನವನ್ನು ಅಳವಡಿಸಿರುವ ಪುಟ್ಟ ಪಟ್ಟಿ.  ಟೋಲ್‌  ಪಾವತಿಗೆ ಇದನ್ನು ಬಳಸಲಾಗುತ್ತದೆ.

ಕಾರ್ಯನಿರ್ವಹಣೆ ಹೇಗೆ?: ಪೂರ್ವಪಾವತಿ ವ್ಯವಸ್ಥೆಯ (ಪ್ರೀಪೇಯ್ಡ್‌)  ಖಾತೆಯನ್ನು ಫಾಸ್ಟ್‌ಟ್ಯಾಗ್‌ಗೆ ಜೋಡಿಸಲಾಗುತ್ತದೆ.  ಈ ಪಟ್ಟಿಯನ್ನು ವಾಹನದ ಗಾಜಿಗೆ ಅಂಟಿಸಲಾಗುತ್ತದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ಹಾದುಹೋಗುವಾಗ  ಅಲ್ಲಿರುವ ಟ್ಯಾಗ್‌ರೀಡರ್ ಯಂತ್ರ ಫಾಸ್ಟ್‌ಟ್ಯಾಗ್‌ನಲ್ಲಿರುವ ಮಾಹಿತಿಯನ್ನು ಗ್ರಹಿಸುತ್ತದೆ.  ಫಾಸ್ಟ್‌ಟ್ಯಾಗ್ ಜೊತೆ ಜೋಡಿಸಿದ ಪ್ರೀಪೇಯ್ಡ್‌ ಖಾತೆಯಿಂದ  ರಸ್ತೆ ಬಳಕೆ ನಿಗದಿತ ಶುಲ್ಕ (ಟೋಲ್‌) ತನ್ನಿಂದ ತಾನೆ ಕಡಿತ ಆಗುತ್ತದೆ.

ಪ್ರತಿಯೊಂದು ಫಾಸ್ಟ್‌ಟ್ಯಾಗ್‌ ಐದು ವರ್ಷ ಊರ್ಜಿತವಾಗಿರುತ್ತದೆ. ಅಗತ್ಯ ಇರುವಾಗ ಟಾಪ್‌ ಅಪ್ ರಿಚಾರ್ಜ್‌ ಮಾಡಿಕೊಳ್ಳುವ ಮೂಲಕ ಅದನ್ನು ಬಳಸಬಹುದು. ಫಾಸ್ಟ್‌ಟ್ಯಾಗ್‌ ಬಳಸುವ ಗ್ರಾಹಕರಿಗೆ ಪ್ರತಿ ಸುಂಕ ಪಾವತಿಯಲ್ಲಿ ಶೇ 10ರಷ್ಟು ರಿಯಾಯಿತಿ (ಕ್ಯಾಶ್‌ಬ್ಯಾಕ್‌) ಸೌಲಭ್ಯವೂ ಇದೆ.
ಫಾಸ್ಟ್ ಟ್ಯಾಗ್‌ನ ಪ್ರಿಪೇಯ್ಡ್‌ ಖಾತೆಯನ್ನು ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಎನ್‌ಇಎಫ್‌ಟಿ, ಆರ್‌ಟಿಜಿಎಸ್‌, ಅಥವ ನೆಟ್‌ ಬ್ಯಾಂಕಿಂಗ್ ಬಳಸಿ ಆನ್‌ಲೈನ್‌ ಮೂಲಕ ರಿಚಾರ್ಜ್‌ ಮಾಡಿಕೊಳ್ಳಬಹುದು.

ಪ್ರತಿ ಬಾರಿ ಖಾತೆಯಿಂದ ಹಣ ಕಡಿತವಾದಾಗಲೂ ಈ ಕುರಿತ ವಿವರಗಳನ್ನು ಒಳಗೊಂಡ ಎಸ್‌ಎಂಎಸ್‌ ಸಂದೇಶ  ಗ್ರಾಹಕರ ಮೊಬೈಲ್‌ಗೆ ಬರುತ್ತದೆ.  ಖಾತೆಯಲ್ಲಿ ಮೊತ್ತ ಗಣನೀಯವಾಗಿ ಕಡಿಮೆಯಾದಾಗಲೂ  ಸಂದೇಶ ಬರುತ್ತದೆ. ಅಗತ್ಯ ಬಿದ್ದರೆ ಫಾಸ್ಟ್‌ ಟ್ಯಾಗ್‌ ಗ್ರಾಹಕ ಪೋರ್ಟಲ್‌ನಿಂದ ಟೋಲ್‌  ಪಾವತಿಸಿದ ವಿವರಗಳನ್ನು ಪಡೆದುಕೊಳ್ಳಬಹುದು.

ಪ್ರಯೋಜನಗಳೇನು?: ವಾಹನದಲ್ಲಿ ಪ್ರಯಾಣಿಸುವಾಗ ಟೋಲ್‌ ಪಾವತಿಸಲು ಪ್ರತ್ಯೇಕ ನಗದು ಇಟ್ಟುಕೊಳ್ಳಬೇಕಾಗಿಲ್ಲ.  ಟೊಲ್‌ ಕೇಂದ್ರಗಳಲ್ಲಿ ಕಾಯಬೇಕಾಗಿಲ್ಲ. ಹಾಗಾಗಿ ಸಮಯವೂ ಉಳಿತಾಯ ಆಗಲಿದೆ.

ಪರಾರಿಯಾದವರ ಆಸ್ತಿ ಜಪ್ತಿ ಮಸೂದೆಗೆ ಸಂಪುಟ ಒಪ್ಪಿಗೆ

 • ದೊಡ್ಡ ಮಟ್ಟದ ಆರ್ಥಿಕ ಅಪರಾಧಗಳನ್ನು ಎಸಗಿ ದೇಶ ಬಿಟ್ಟು ಪರಾರಿಯಾಗುವ ಆರೋಪಿಗಳು ವಂಚನೆ ಮೂಲಕ ಗಳಿಸಿದ ಹಣ ಮತ್ತು ಅವರ ಹೆಸರಿನಲ್ಲಿ ಇರುವ ಇತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ‘ಪರಾರಿಯಾದ ಆರ್ಥಿಕ ಅಪರಾಧಿಗಳ ಮಸೂದೆ 2018’ಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
 • ಮಸೂದೆ ಅಂಗೀಕಾರ ಆದರೆ ₹100 ಕೋಟಿಗಿಂತ ಹೆಚ್ಚು ಮೊತ್ತದ ವಂಚನೆ ಆರೋಪ ಪ್ರಕರಣಗಳಿಗೆ ಅನ್ವಯ ಆಗಲಿದೆ. ಆರೋಪಿಯ ಹೆಸರಿನಲ್ಲಿರುವ ಆಸ್ತಿಯ ಜತೆಗೆ ಅವರ ಬೇನಾಮಿ ಆಸ್ತಿಗಳನ್ನೂ ಜಪ್ತಿ ಮಾಡಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
 • ವಿದೇಶದಲ್ಲಿರುವ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಕ್ಕೂ ಮಸೂದೆ ಅಧಿಕಾರ ನೀಡುತ್ತದೆ. ಆದರೆ, ಅದಕ್ಕೆ ಆ ಆಸ್ತಿ ಇರುವ ದೇಶದ ಸಹಕಾರವೂ ಅಗತ್ಯ.
 • ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಲು ಆರೋಪಿಗೆ ಇರುವ ಹಕ್ಕನ್ನು ಮಸೂದೆಯು ರದ್ದು ಮಾಡುತ್ತದೆ.
 • ಈ ಮಸೂದೆಯು ಅಂಗೀಕಾರವಾದರೆ ಅದು ಹೊಸ ಪ್ರಕರಣಗಳಿಗೆ ಮಾತ್ರವಲ್ಲ, ಹಿಂದಿನ ಪ್ರಕರಣಗಳಿಗೂ ಅನ್ವಯ ಆಗಲಿದೆ.
 • ತನಿಖೆ ತಪ್ಪಿಸಿಕೊಳ್ಳುವುದಕ್ಕಾಗಿ ಈಗಾಗಲೇ ವಿದೇಶಕ್ಕೆ ಪರಾರಿಯಾಗಿರುವವರ ಆಸ್ತಿಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಲಿದೆ.
 • 2017–18ರ ಬಜೆಟ್‌ನಲ್ಲಿಯೇ ಇಂತಹ ಪ್ರಸ್ತಾವವನ್ನು ಮುಂದಿಡಲಾಗಿತ್ತು.
 • ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಹಗರಣ ಬಯಲಾದ್ದರಿಂದ ಈ ಮಸೂದೆಯನ್ನು ತ್ವರಿತಗತಿಯಲ್ಲಿ ಸಿದ್ಧಪಡಿಸಲಾಗಿದೆ

ಬೆಂಗಳೂರಿಗೆ ₹667 ಕೋಟಿ

 • ಬೆಂಗಳೂರು ನಗರದ ‘ಸೇಫ್‌ ಸಿಟಿ’ (ಸುರಕ್ಷಿತ ನಗರ) ಪ್ರಸ್ತಾವಕ್ಕೆ ಕೇಂದ್ರದ ನಿರ್ಭಯಾ ನಿಧಿ ಸಮಿತಿಯು ಅನುಮೋದನೆ ನೀಡಿದೆ.
 • ನಗರದಲ್ಲಿ ನಿಗಾ ವ್ಯವಸ್ಥೆ ವೃದ್ಧಿ, ಮಹಿಳಾ ಪೊಲೀಸ್‌ ಹೊರಠಾಣೆ ಸ್ಥಾಪನೆ, ಮಹಿಳೆಯರು ಹೆಚ್ಚು ಅಪಾಯ ಎದುರಿಸುವ ಸ್ಥಳಗಳಲ್ಲಿ ಸುರಕ್ಷತೆ ಹೆಚ್ಚಳ ದಂತಹ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ. ಒಟ್ಟು ₹667 ಕೋಟಿ ಮೊತ್ತದ ಕಾರ್ಯಕ್ರಮಗಳು ಇದರ ಭಾಗವಾಗಿವೆ.
 • ಪೊಲೀಸ್‌ ಠಾಣೆಗಳಲ್ಲಿ ಇರುವ ಸಹಾಯ ಕೇಂದ್ರಗಳಲ್ಲಿ ಎನ್‌ಜಿಒಗಳ ಸ್ವಯಂಸೇವಕರ ನೇಮಕ, ಪ್ರಮುಖ ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಕೇಂದ್ರಗಳ ಸ್ಥಾಪನೆ ಮುಂತಾದವುಗಳು ‘ಸುರಕ್ಷಿತ ನಗರ ಪ್ರಸ್ತಾವನೆ’ಯಲ್ಲಿ (ಸೇಫ್‌ ಸಿಟಿ) ಸೇರಿವೆ.
 • ಸಾರ್ವಜನಿಕರಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ರಾಣಿ ಚನ್ನಮ್ಮ ತಂಡಗಳನ್ನು ರಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
 • ಮಹಿಳಾ ಸುರಕ್ಷತೆ ಮತ್ತು ಭದ್ರತೆಯ ಪ್ರಸ್ತಾವಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಈ ಸಚಿವಾಲಯದ್ದಾಗಿದೆ.

ಗೋಬರ್-ಧನ್ ಯೋಜನೆ

 • ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2018-19 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೊಸ ಯೋಜನೆ ಘೋಷಿಸಿದ್ದು, ಜಾನುವಾರು ಗೊಬ್ಬರ ನಿರ್ವಹಣೆಯನ್ನು ಈ ಯೋಜನೆ ಉತ್ತೇಜಿಸಲಿದೆ.
 • ಜಾನುವಾರು ಗೊಬ್ಬರವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದನ್ನು ಉತ್ತೇಜಿಸುವುದಕ್ಕಾಗಿ ಗೋಬರ್ ಧನ್ ಯೋಜನೆ ಘೋಷಿಸಲಾಗಿದ್ದು, ಜಾನುವಾರು ಗೊಬ್ಬರವಷ್ಟೇ ಅಲ್ಲದೇ ಕೃಷಿ ಭೂಮಿಯಲ್ಲಿನ ಘನ ತ್ಯಾಜ್ಯ ನಿರ್ವಹಣೆಗೂ ಉತ್ತೇಜನ ನೀಡಲಿದ್ದು, ಅವುಗಳನ್ನು ಕಾಂಪೋಸ್ಟ್, ರಸಗೊಬ್ಬರ, ಜೈವಿಕ ಅನಿಲ ಮತ್ತು ಜೈವಿಕ-ಸಿಎನ್ ಜಿ ಯನ್ನಾಗಿ ಮರುಬಳಕೆ ಮಾಡುವುದನ್ನೂ ಸಹ ಈ ಯೋಜನೆ ಉತ್ತೇಜಿಸಲಿದೆ

 

 1. ದುಬಾರೆ ಅರಣ್ಯ ಪ್ರದೇಶವು ಯಾವ ನದಿಯ ದಂಡೆಯಲ್ಲಿ ಸ್ಥಿತವಾಗಿದೆ?

a)ನರ್ಮದಾ

b)ಕೃಷ್ಣ

c)ಕಾವೇರಿ

d)ಭೀಮ


 

 1. ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ್ಳನ್ನು ಎಷ್ಟು ವರ್ಷಗಳಿಗೊಮ್ಮೆ ನೀಡಲಾಗುತದೆ ?

a) 1

b) 2

c) 3

d) 4


 

 1. ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮೊದಲಿಗೆ ಯಾವಾಗ ಪ್ರಾರಂಭಿಸಲಾಯಿತು ?

a)1708

b)1853

c)1909

d)1919


 

 1. ಕೆಳಗಿನವುರ ಗಳಲ್ಲಿ ಯಾರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಗೆ ” ಸುರಕ್ಷೆಯ ಕವಾಟ ಸಿದ್ಧಾಂತ”(safety valve theory ) ವನ್ನು ನೀಡಿದರು?

[ಎ] ಬಾಲ ಗಂಗಾಧರ ತಿಲಕ್

[ಬಿ] ಲಾಲಾ ಲಜಪತ್ ರಾಯ್

[ಸಿ] ಬಿಪಿನ್ ಚಂದ್ರ ಪಾಲ್

[ಡಿ] ಎಮ್ ಎನ್ ರಾಯ್


 

 1. ಜೋರ್ಡನ್ ದೇಶದ ರಾಜಧಾನಿ ಯಾವುದು?

a. ಅಮ್ಮನ್

b. ಜೆರುಸಲೇಮ್

c. ಟೆಹ್ರಾನ್

d. ಬಾಗ್ದಾದ್


6. ಕೆಳಗಿನ ಯಾರನ್ನು ದೇಶದ ಹಣಕಾಸು ಮೇಲ್ವಿಚಾರಕ ಎಂದು ಪರಿಗಣಿಸಲಾಗಿದೆ ?

a. ಪ್ರಧಾನ ಮಂತ್ರಿ

b. ಹಣಕಾಸು ಸಚಿವ

c. ಕಂಟ್ರೋಲರ್ & ಭಾರತದ ಗವರ್ನರ್ ಜನರಲ್

d. ಭಾರತೀಯ ರಿಸರ್ವ್ ಬ್ಯಾಂಕ್


7. ಫತೇಪುರ ಸಿಕ್ರಿಯ ‘ಬುಲಂದ್ ದರ್ವಾಜಾ’ವನ್ನು ಕೆಳಕಂಡ ಯಾರು ನಿರ್ಮಿಸಿದ್ದರು?

a. ಔರಂಗಜೇಬ್

b. ಅಕ್ಬರ್

c. ಷಹಜಹಾನ್

d. ಜಹಾಂಗೀರ್


8. ಬೆಡಾಕ್ವಲಿನ್ ಎನ್ನುವ ಔಷದಿಯನ್ನು ಯಾವ ರೋಗ ಚಿಕಿತ್ಸೆ ಯಲ್ಲಿ ಬಳಸುತ್ತಾರೆ …?

a)ಕ್ಷಯ

b) ಮಲೇರಿಯಾ

c)ಝಿಕಾ

d)ದಿಪ್ತಿರಿಯಾ


 

 1. ಬಳಕೆಯಾಗುವ ಸಂಯೋಜನೆಯಲ್ಲಿ ಜಾನುವಾರು ಸಗಣಿ ಮತ್ತು ಘನ ತ್ಯಾಜ್ಯವನ್ನು ನಿರ್ವಹಣೆ ಮಾಡಲು ಮತ್ತು ಪರಿವರ್ತಿಸಲು ಕೆಳಗಿನ ಯೋಜನೆಗಳನ್ನು ಕೇಂದ್ರ ಸರ್ಕಾರವು ಯೋಜಿಸಿದೆ.

ಎ.ಗೋಬರ್-ಧನ್ ಯೋಜನೆ

ಬಿ ಸ್ಟಾಂಡ್ ಅಪ್ ಇಂಡಿಯಾ ಯೋಜನೆ

ಸಿ.ವಜಲ್ ಯೋಜಾನಾ

ಡಿ.ಜಾನ್ ಆಶಾಧಿ ಯೋಜನೆ


 

 1. ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಲ್ಲಿ ಉದ್ಘಾಟನೆ ಗೊಂಡಿದೆ ?

a) ತುಮಕೂರು

b) ಪಾವಗಡ

c)ರಾಮನಗರ

d)ಚಿಕ್ಕಬಳ್ಳಾಪುರ


 

ಉತ್ತರಗಳು

1) C 2) A 3) C 4) B 5) A 6) C7) B 8) A 9) A 10) B

Related Posts
Talgo tilting train- between Mysore Bangalore
Travel time between Bengaluru and Mysuru could be reduced to 90 minutes in the near future if trials with a high speed, tilting train manufactured by Spanish manufacturer Talgo conducted ...
READ MORE
National Current Affairs – UPSC/KAS Exams- 17th January 2019
NREGA gets additional Rs. 6,084 cr Topic: Government Policies IN NEWS: After exhausting 99% of its annual allocation three months ahead of time, the National Rural Employment Guarantee (NREGA) scheme has been ...
READ MORE
State Issues – Solid Waste Management
Initiatives Taken Up Solid Waste Management: Municipal Solid Waste Management is one of the basic functions of the Municipalities. Rapid urbanization, heterogeneous nature of waste, lack of awareness among the public and various other stake ...
READ MORE
National Current Affairs – UPSC/KAS Exams- 10th January 2019
The New Delhi International Arbitration Centre Bill Topic: Polity and Governance IN NEWS: The Lok Sabha has passed the New Delhi International Arbitration Centre Bill to set up a revamped International Arbitration ...
READ MORE
India’s rotavirus vaccine launched
What  Country’s first, indigenous rotavirus vaccine launched The Rotavirus vaccine was developed indigenously, under a public-private partnership between the Ministry of Science Technology and the Health Ministry. Why to combat diarrhoeal deaths. How As given in ...
READ MORE
Karnataka Current Affairs – KAS / KPSC Exams – 25th April 2017
Artificial waterholes created in Shettyhalli sanctuary In the wake of acute shortage of water in Shettyhalli Wildlife Sanctuary limits in the district, the Forest Department has constructed 40 artificial waterholes there ...
READ MORE
Download March 2018 Current affairs Magazine- English and Kannada
Dear Aspirants, We have released March 2018 Current Affairs magazine, both in English and Kannada. You can download from the below link. To download English March 2018 Mahithi Monthly- click here  ಮಾರ್ಚ್ 2018 ...
READ MORE
Medicines
Tirthahalli taluk in grip of Kyasanur Forest Disease Tirthahalli taluk continues to remain in the grip of Kyasanur Forest Disease (KFD), also known as monkey fever, as four positive cases among ...
READ MORE
United Nations Environment Programme (UNEP) report is titled “Biodegradable Plastics and Marine Litter: Misconceptions, Concerns and Impacts on Marine Environments” Toys, athletic goods, and household goods sectors used the largest amount ...
READ MORE
Introduction ∗ Cogeneration is the use of a heat engine or a power station to simultaneously generate both electricity and useful heat. ∗ Co-generation is defined as the combined generation of electric ...
READ MORE
Talgo tilting train- between Mysore Bangalore
National Current Affairs – UPSC/KAS Exams- 17th January
State Issues – Solid Waste Management
National Current Affairs – UPSC/KAS Exams- 10th January
India’s rotavirus vaccine launched
Karnataka Current Affairs – KAS / KPSC Exams
Download March 2018 Current affairs Magazine- English and
Karnataka State Current Affairs – KAS / KPSC
United Nations Environment Programme (UNEP) report on plastics
COGENERATION PROJECT

Leave a Reply

Your email address will not be published. Required fields are marked *