2nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ

ಮಹಿಳಾ ಮತದಾರರ ಲಿಂಗಾನುಪಾತ ಹೆಚ್ಚಳ

 • ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. 2013 ರ ಚುನಾವಣೆಯಲ್ಲಿ 1,000 ಪುರುಷರಿಗೆ 958 ಇದ್ದ ಮಹಿಳೆಯರ ಸಂಖ್ಯೆ ಈ ಚುನಾವಣೆ ವೇಳೆ 974ಕ್ಕೆ ಏರಿಕೆಯಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ತಿಳಿಸಿದ್ದಾರೆ.
 • ಏ.14ಕ್ಕೆ ಮುಕ್ತಾಯವಾದ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ರಾಜ್ಯದ ಮತದಾರರ ಸಂಖ್ಯೆ 5,06,90,538ಕ್ಕೆ ತಲುಪಿದೆ
 • ಫೆ.28ಕ್ಕೆ ರಾಜ್ಯದಲ್ಲಿ 4.96 ಕೋಟಿ ಮತದಾರರಿದ್ದರು. ಮತದಾರ ಅನುಕೂಲಕ್ಕಾಗಿ ಏ.8ರಂದು ಮಿಂಚಿನ ನೋಂದಣಿ ಅಭಿಯಾನ ನಡೆಸಲಾಗಿದ್ದು, ಈ ವೇಳೆ 6.45 ಲಕ್ಷ ಅರ್ಜಿಗಳು ಸ್ವೀಕಾರಗೊಂಡಿದ್ದವು ಒಟ್ಟು ಮತದಾರರ ಪೈಕಿ 2,56,75,579 ಪುರುಷ, 2,50,09,904 ಮಹಿಳಾ ಮತದಾರರು ಮತ್ತು 5,050 ತೃತೀಯ ಲಿಂಗಿಗಳಿದ್ದಾರೆ.
 • ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು 6.03 ಲಕ್ಷ ಮಂದಿ ಇದ್ದರೆ, ಚಿಕ್ಕಮಗಳೂರು ಕ್ಷೇತ್ರದಲ್ಲಿ 1.66 ಲಕ್ಷ ಅತಿ ಕಡಿಮೆ ಮತದಾರರಿದ್ದಾರೆ.
 • ಬೆಳಗಾವಿ ಜಿಲ್ಲೆಯಲ್ಲಿ 37.23 ಲಕ್ಷ ಮತದಾರರಿದ್ದರೆ, ಕೊಡಗು ಜಿಲ್ಲೆಯಲ್ಲಿ 4.33 ಲಕ್ಷ ಮತದಾರರಿದ್ದು, ಕೊನೆಯ ಸ್ಥಾನದಲ್ಲಿದೆ.
 • ಯುವ ಮತದಾರರ ಸಂಖ್ಯೆಯಲ್ಲಿಯು ಹೆಚ್ಚಳವಾಗಿದ್ದು, ಫೆ.28ಕ್ಕೆ 15.42 ಲಕ್ಷ ಇದ್ದು, ಅದು ಏ.14ಕ್ಕೆ 15.72 ಲಕ್ಷಕ್ಕೆ ಹೆಚ್ಚಳವಾಗಿದೆ

2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿ: ದೆಹಲಿ, ವಾರಾಣಸಿ ಸೇರಿ 14 ನಗರಗಳು ಮಾಲಿನ್ಯ ನಗರಗಳು

 • ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಯು 2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ರಾಷ್ಟ್ರ ರಾಜಧಾನಿ ದೆಹಲಿ, ವಾರಾಣಾಸಿ ನಗರಗಳ ಹೆಸರು ಸೇರಿದೆ.
 • ಡಬ್ಲ್ಯೂಎಚ್‌ಒ ಬಿಡುಗಡೆ ಮಾಡಿದ 20 ನಗರಗಳಲ್ಲಿ ಭಾರತದ 14 ನಗರಗಳ ಹೆಸರು ಪಟ್ಟಿಯಲ್ಲಿರುವುದು ಆತಂಕಕ್ಕೀಡುಮಾಡಿದ್ದು, ವಿಷಾನಿಲ ಕಣಗಳ ಮಟ್ಟ 2.5ಕ್ಕೂ ಹೆಚ್ಚಿದೆ ಎಂದು  ಹೇಳಿದೆ.
 • ಭಾರತದ ಕಾನ್ಪುರ, ಫರಿದಾಬಾದ್, ಗಯಾ, ಪಟ್ನಾ, ಆಗ್ರಾ, ಮುಜಾಫರ್‌ನಗರ, ಶ್ರೀನಗರ, ಗುರುಗ್ರಾಮ, ಜೈಪುರ, ಪಟಿಯಾಲ, ಜೋಧ್‌ಪುರ, ಕುವೈತಿನ ಅಲಿಸುಬಾಹ್–ಅಲಿ ಸಲೀಮ್ ಹಾಗೂ ಚೀನಾ, ಮಂಗೋಲಿಯಾದ ಕೆಲವು ನಗರಗಳು ಹೆಚ್ಚು ಮಾಲಿನ್ಯ ನಗರಗಳು ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ಈ ಎಲ್ಲಾ ನಗರಗಳ ವಿಷಾನಿಲ ಕಣಗಳ ಮಟ್ಟ 2.5ಕ್ಕೂ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಿದೆ.
 • 2016 ವರದಿಯ ಪ್ರಕಾರ ಭಾರತದ ಒಟ್ಟು 13 ನಗರಗಳಲ್ಲಿ ವಿಷಾನಿಲ ಕಣಗಳ ಮಟ್ಟ 10ಕ್ಕೂ ಹೆಚ್ಚಿದೆ. ಪ್ರಪಂಚದಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರತಿವರ್ಷ  70 ಲಕ್ಷ ಮಂದಿ ಶ್ವಾಸಕೋಶ ಕ್ಯಾನ್ಸರ್, ಪಾರ್ಶ್ವಾವಾಯು, ಹೃದಯಾಘಾತ ಹೀಗೆ ಅನೇಕ ಕಾಯಿಲೆಗಳಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿದೆ.
 • ವಾಯುಮಾಲಿನ್ಯ ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಿರುವವ ಪ್ರಮಾಣ ಕೆಳ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಲ್ಲಿ ಹೆಚ್ಚಾಗಿವೆ. ಅದರಲ್ಲೂ ಏಷ್ಯಾದಲ್ಲಿನ ಭಾರತ, ಆಫ್ರಿಕಾ ರಾಷ್ಟ್ರಗಳು ವಾಯುಮಾಲಿನ್ಯದ ದುಷ್ಪಪರಿಣಾಮಗಳನ್ನು ಎದುರಿಸುತ್ತಿವೆ ಎಂದು ವರದಿಯಲ್ಲಿದೆ.

ವೇತನ ಸಂಹಿತೆ ಮಸೂದೆ ಅಂತಿಮ

 • ವೇತನ ಸಂಹಿತೆ ಮಸೂದೆ 2017’ಯನ್ನು ಸಂಸತ್ತಿನ ಸ್ಥಾಯಿ ಸಮಿತಿಯು ಅಂತಿಮಗೊಳಿಸಿದ್ದು, ಸಂಸತ್ತಿನ ಮುಂಗಾರು ಅಧಿವೇಶ ನದಲ್ಲಿ ಅಂಗೀಕಾರ ಸಿಗುವ ಸಾಧ್ಯತೆ ಇದೆ.
 • ಈ ಮಸೂದೆ ಅಂಗೀಕಾರಗೊಂಡು ಕಾಯ್ದೆಯಾಗಿ ಜಾರಿಗೆ ಬರುತ್ತಿದ್ದಂತೆ, ದೇಶದಾದ್ಯಂತ ವಿವಿಧ ವಲಯಗಳಿಗೆ ನಿರ್ದಿಷ್ಟ ಮಟ್ಟದ ಕನಿಷ್ಠ ವೇತನ ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಪ್ರಾಪ್ತವಾಗಲಿದೆ. ಕೇಂದ್ರವು ನಿಗದಿಪಡಿಸುವ ಈ ಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿ ಕನಿಷ್ಠ ವೇತನ ನಿಗದಿಪಡಿಸಲು ರಾಜ್ಯಗಳಿಗೆ ಅವಕಾಶ ಇರುವುದಿಲ್ಲ.
 • ಸದ್ಯಕ್ಕೆ ಜಾರಿಯಲ್ಲಿಯಲ್ಲಿ ಇರುವ ಮೂವತ್ತಕ್ಕೂ ಹೆಚ್ಚು ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಸಂಹಿತೆಗಳಾಗಿ ವಿಂಗಡಿಸಬೇಕು. ವೇತನ, ಕೈಗಾರಿಕಾ ಬಾಂಧವ್ಯ, ಸಾಮಾಜಿಕ ಸುರಕ್ಷತೆ ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಹಾಗೂ ಕೆಲಸದ ಸ್ಥಿತಿಗತಿ ಸಂಹಿತೆಯಾಗಿ ವಿಂಗಡಿಸಬಹುದು’
 • ವೇತನ ಮತ್ತು ಸಾಮಾಜಿ ಸುರಕ್ಷತೆ ಜತೆ ರಾಜಿ ಮಾಡಿಕೊಳ್ಳದೆ ಹೊಸ ಸಂಹಿತೆ ಜಾರಿಗೆ ತರುವುದರಿಂದ ಕಾರ್ಮಿಕ ಕಾಯ್ದೆಗಳ  ಬಹುಬಗೆಯ ವ್ಯಾಖ್ಯಾನಗಳಿಗೆ ಕೊನೆ ಬೀಳಲಿದೆ.
 • ‘ಕಾರ್ಮಿಕ ಸಮುದಾಯಕ್ಕೆ ಹೆಚ್ಚಿನ ಅನುಕೂಲತೆ ಕಲ್ಪಿಸಲು ತಂತ್ರಜ್ಞಾನದ ಬಳಕೆಗೆ ಉತ್ತೇಜನ ನೀಡಬೇಕು’
 • ವೇತನ ಸಂಹಿತೆಯ ಕರಡು ಮಸೂದೆಯನ್ನು 2017ರ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಅದನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಕಾರ್ಮಿಕರು ಮತ್ತು ವೇತನಕ್ಕೆ ಸಂಬಂಧಿಸಿದ ಹಲವಾರು ಕಾಯ್ದೆಗಳನ್ನು ಒಂದೇ ಸಂಹಿತೆ ವ್ಯಾಪ್ತಿಗೆ ತರಲಾಗುತ್ತಿದೆ.

ಕೇರಳದಲ್ಲಿ ‘ನೋಕ್ಕು ಕೂಲಿ’ ಪದ್ಧತಿಗೆ ನಿಷೇಧ

 • ದಶಕಗಳಿಂದ ಕೇರಳದಲ್ಲಿ ಜಾರಿಯಲ್ಲಿದ್ದ ಹಮಾಲಿ ಮಾಡದೆ ಕೂಲಿ ವಸೂಲಿ ಮಾಡುತ್ತಿದ್ದ ‘ನೋಕ್ಕು ಕೂಲಿ’ ಪದ್ಧತಿಗೆ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ನಿಷೇಧ ಹೇರಿದೆ.
 • ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವಲ್ಲಿ ‘ನೋಕ್ಕು ಕೂಲಿ’ ನಿಷೇಧ ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ.
 • ನೊಕ್ಕು ಕೂಲಿ’ ಎಂದರೆ ‘ನೋಟಕ್ಕೆ ಕೂಲಿ’ ಎಂದರ್ಥ. ಯಾವುದೇ ಕೆಲಸ ಮಾಡದೇ ಇದ್ದರೂ ಕೂಲಿ ಪಡೆಯುವುದು. ಉದಾಹರಣೆಗೆ, ಸಾಮಾನುಗಳನ್ನು ಹೇರಿಕೊಂಡು ಲಾರಿಯೊಂದು ಬಂದರೆ, ಅದರ ಮಾಲೀಕ ತನ್ನ ಕಾರ್ಮಿಕರಿಂದ ಅದನ್ನು ಇಳಿಸುವಂತಿಲ್ಲ. ಟ್ರೇಡ್‌ ಯೂನಿಯನ್‌ಗಳ ಸದಸ್ಯರಿಂದಲೇ ಅದನ್ನು ಅನ್‌ ಲೋಡ್‌ ಮಾಡಿಸಬೇಕು. ಅದಕ್ಕವರು ಕೇಳುವ ಕೂಲಿ ಕೊಡಲೇಬೇಕು. ಒಂದು ವೇಳೆ ಮಾಲೀಕ ತನ್ನದೇ ಕಾರ್ಮಿಕರ ಸಹಾಯದಿಂದ ಅದನ್ನು ಇಳಿಸಿದಲ್ಲಿ ಅದನ್ನು ನೋಡುತ್ತ ನಿಲ್ಲುವ ಟ್ರೇಡ್‌ ಯೂನಿಯನ್‌ಗಳ ಸದಸ್ಯರಿಗೆ ಅವರು ಹೇಳಿದಷ್ಟು ಹಣವನ್ನು ಸಂದಾಯ ಮಾಡಲೇಬೇಕಾಗಿತ್ತು.
 • ಈಗ ಪದ್ಧತಿಗೆ ಬ್ರೇಕ್‌ ಹಾಕಲಾಗಿದೆ. 2011ರಲ್ಲೇ ಕೇರಳ ‘ನ್ಙೊಕ್ಕು ಕೂಲಿ’ ಮುಕ್ತ ರಾಜ್ಯ ಎಂದು ಘೋಷಿಸಲ್ಪಟ್ಟಿದ್ದರೂ ಅದು ಕೇವಲ ಕಡತಗಳಲ್ಲಿ ಮಾತ್ರ ಉಳಿದಿತ್ತು. ಹೈಕೋರ್ಟ್‌ ಮಧ್ಯಪ್ರವೇಶಿಸಿದರೂ ಈ ಪದ್ಧತಿ ಮುಂದುವರಿದಿತ್ತು.
 • ನೋಟದ ಕೂಲಿಯಿಂದಾಗಿ ರಾಜ್ಯದಲ್ಲಿ ಉದ್ಯಮ ವಲಯ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು ಎಂದು ಕೇರಳ ಕಾರ್ಮಿಕ ಇಲಾಖೆ ಹೇಳಿದೆ. ಸರಕಾರದ ಆದೇಶದ ಪ್ರಕಾರ, ವಿವಿಧ ಸೇವೆಗಳಿಗೆ ಕೂಲಿ ದರವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ನಿಗದಿಪಡಿಸುತ್ತಾರೆ.
 • ಈ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಸೇವೆಗಳಿಗೆ ಪರಸ್ಪರ ಮಾತುಕತೆ ಮೂಲಕ ಕೂಲಿ ನಿಗದಿಪಡಿಸಿಕೊಳ್ಳಬಹುದು.

ಪೋಕ್ಸೊ: ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್‌ ನಿರ್ದೇಶನ

 • ಪೋಕ್ಸೊ (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿನ ಪ್ರಕರಣಗಳ ವಿಚಾರಣೆಯನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸುವಂತೆ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.
 • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿ ಹೈಕೋರ್ಟ್‌ಗಳಿಗೆ ಹಲವು ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್‌ ನೀಡಿದೆ.
 • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ತ್ವರಿತಗತಿಯಲ್ಲಿ ನಡೆಯಬೇಕು ಮತ್ತು ಇಂತಹ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಪೀಠ ತಿಳಿಸಿದೆ.
 • ಇಂತಹ ಪ್ರಕರಣಗಳ ವಿಚಾರಣೆಯು ಮಕ್ಕಳ ಸ್ನೇಹಿ ವಾತಾವರಣದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದೂ ಹೈಕೋರ್ಟ್‌ಗಳಿಗೆ ಸೂಚಿಸಲಾಗಿದೆ.
 • ಪೋಕ್ಸೊ ಅಡಿಯಲ್ಲಿನ ಪ್ರಕರಣಗಳ ವಿಚಾರಣೆಯ ಮೇಲ್ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಸಮಿತಿಯೊಂದನ್ನು ಹೈಕೋರ್ಟ್‌ಗಳು ರಚಿಸಬೇಕು ಎಂದು ಪೀಠ ಹೇಳಿದೆ.
 • 12 ವರ್ಷದೊಳಗಿನವರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವುದು ಸೇರಿದಂತೆ ಶಿಕ್ಷೆಯನ್ನು ಕಠಿಣಗೊಳಿಸುವ ಸುಗ್ರೀವಾಜ್ಞೆಗೆ ಏಪ್ರಿಲ್‌ 21ರಂದು ಕೇಂದ್ರ ಸಂಪುಟ ಒ‍ಪ್ಪಿಗೆ ನೀಡಿದೆ. ಕಠುವಾದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಳಿಕ ಇಂತಹ ಪ್ರಕರಣಗಳ ತಪ್ಪಿತ
  ಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಕೂಗು ದೇಶದಾದ್ಯಂತ ಕೇಳಿ ಬಂದಿತ್ತು.
 • ಪೋಕ್ಸೊ ಅಡಿಯಲ್ಲಿನ ಪ್ರಕರಣಗಳ ವಿಚಾರಣೆಯನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕು ಎಂದು ಶ್ರೀವಾಸ್ತವ ತಮ್ಮ ಅರ್ಜಿಯಲ್ಲಿ ಕೋರಿದ್ದರು. ಎಫ್‌ಐಆರ್‌ ದಾಖಲಾಗಿ ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳ್ಳಬೇಕು ಎಂದೂ ವಿನಂತಿಸಿದ್ದರು.

ಕರ್ನಾಟಕಕ್ಕೆ 10ನೇ ಸ್ಥಾನ

 • ಪೋಕ್ಸೊ ಅಡಿ ದಾಖಲಾದ ಪ್ರಕರಣಗಳ ತ್ವರಿತ ವಿಚಾರಣೆ ನಡೆಯುತ್ತಿಲ್ಲ. ಉತ್ತರ ಪ್ರದೇಶದಲ್ಲಿ 30,884, ಮಹಾರಾಷ್ಟ್ರದಲ್ಲಿ 16,099, ಮಧ್ಯಪ್ರದೇಶದಲ್ಲಿ 10,117 ಮತ್ತು ಪಶ್ಚಿಮ ಬಂಗಾಳದಲ್ಲಿ 9,894 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಈ ಪಟ್ಟಿಯಲ್ಲಿ ಕರ್ನಾಟಕ ಹತ್ತನೇ ಸ್ಥಾನದಲ್ಲಿದೆ. ಇಲ್ಲಿ 4,045 ಪ್ರಕರಣಗಳು ಬಾಕಿ ಇವೆ

 ಪೊಲೀಸರಿಗೂ ಸೂಚನೆ

 • ಪೋಕ್ಸೊ ಪ‍್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್‌ ಮಹಾನಿರ್ದೇಶಕರಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಹೇಳಿಕೆ ದಾಖಲಿಸುವುದಕ್ಕಾಗಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳಬೇಕು ಎಂದೂ ತಿಳಿಸಿದೆ.

ವಿಮಾನದಲ್ಲೂ ಮೊಬೈಲ್‌, ಅಂತರ್ಜಾಲ ಸೇವೆ ಶೀಘ್ರ

 • ಎಲ್ಲವೂ ನಿರೀಕ್ಷೆಯಂತೆ ನಡೆದರೆ ಆಗಸದಲ್ಲಿ ಹಾರುತ್ತಿರುವ ವಿಮಾನದಿಂದಲೇ ಪ್ರಯಾಣಿಕರು ಮೊಬೈಲ್‌ ಕರೆ ಮಾಡುವ ಸೌಲಭ್ಯವನ್ನು ಶೀಘ್ರವೇ ಪಡೆಯಬಹುದು. ಜೊತೆಗೆ ಅಂತರ್ಜಾಲ ಬಳಕೆ ಮಾಡಬಹುದು.
 • ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಮೊಬೈಲ್‌ ಕರೆ ಮತ್ತು ಅಂತರ್ಜಾಲ ಸೇವೆ ನೀಡುವ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮೂರರಿಂದ ನಾಲ್ಕು ತಿಂಗಳಲ್ಲಿ ಪ್ರಯಾಣಿಕರಿಗೆ ಈ ಸೇವೆ ದೊರೆಯಲಿದೆ.
 • ವಿಮಾನ ಮೂರು ಸಾವಿರ ಮೀಟರ್‌ ಎತ್ತರ ತಲುಪಿದ ಮೇಲೆ ಪ್ರಯಾಣಿಕರು ಸ್ಮಾರ್ಟ್‌ ಫೋನ್‌, ಅಂತರ್ಜಾಲ ಬಳಕೆ ಮಾಡಬಹುದಾಗಿದೆ. ಆದರೆ, ಇದಕ್ಕಾಗಿ ಪ್ರಯಾಣಿಕರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
 • ಟ್ರಾಯ್‌ ಎಲ್ಲ ಪ್ರಸ್ತಾಪಕ್ಕೂ ಒಪ್ಪಿಗೆ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಿಟ್ಟ ಬೇಡಿಕೆಗೆ ದೂರಸಂಪರ್ಕ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ನೇತೃತ್ವದ ದೂರಸಂಪರ್ಕ ಆಯೋಗ ಷರತ್ತುಬದ್ಧ ಒಪ್ಪಿಗೆ ನೀಡಿದೆ.
 • ದೂರಸಂಪರ್ಕ ಕಂಪನಿ, ವಿಮಾನಯಾನ ಸಂಸ್ಥೆಗಳು ಹಾಗೂ ಇತರ ಸೇವಾದಾತ ಸಂಸ್ಥೆಗಳ ಜತೆ ಮಾತುಕತೆ ಹಾಗೂ ಇತರ ಸಿದ್ಧತೆಗೆ ಇನ್ನೂ ಮೂರ‍್ನಾಲ್ಕು ತಿಂಗಳ ಕಾಲಾವಾಕಾಶ ಬೇಕಾಗುತ್ತದೆ
 • ಅಂತರ್ಜಾಲ ಆಧರಿತ ದೂರವಾಣಿ ಕರೆಗಳಿಗೂ ಅವಕಾಶ ನೀಡುವ ಮತ್ತು ಗ್ರಾಹಕರ ಕುಂದು ಕೊರತೆ ಪರಿಶೀಲನೆಗೆ ಒಂಬುಡ್ಸ್‌ಮನ್‌ ಸ್ಥಾಪಿಸುವ ಟ್ರಾಯ್‌ ಪ್ರಸ್ತಾಪಕ್ಕೂ ಆಯೋಗ ಹಸಿರು ನಿಶಾನೆ ತೋರಿಸಿದೆ.
 • ಗ್ರಾಹಕರ ದೂರುಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಸ್ಥಾಪಿಸಲು ಉದ್ದೇಶಿಸಿರುವ ಒಂಬುಡ್ಸ್‌ಮನ್‌ ಸ್ಥಾಪನೆಗಾಗಿ ಟ್ರಾಯ್‌ ಕಾಯ್ದೆಗಳಿಗೆ ತಿದ್ದುಪಡಿ ತರಬೇಕಿದೆ.
 • ‘ಒಂಬುಡ್ಸ್‌ಮನ್‌ ಸ್ಥಾಪನೆ ಒಂದು ಮೈಲುಗಲ್ಲು. ಆದರೆ, ನೂರು ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಮತ್ತು 3 ತಿಂಗಳಿಗೆ ಕೋಟಿಗೂ ಹೆಚ್ಚು ದೂರು ದಾಖಲಾಗುತ್ತಿರುವ ದೂರಸಂಪರ್ಕ ವಲಯದಲ್ಲಿ ಒಂಬುಡ್ಸ್‌ಮನ್‌ ಅನುಷ್ಠಾನ ಸವಾಲು’.

ವಿಮಾನದಲ್ಲಿ ಏನೆಲ್ಲ ಸೌಲಭ್ಯ…

 • ವಿಮಾನ ಮೂರು ಸಾವಿರ ಮೀಟರ್‌ ಎತ್ತರ ತಲುಪಿದ ನಂತರ ಅಂತರ್ಜಾಲ ಸಂಪರ್ಕ ಲಭ್ಯ, ಸ್ಮಾರ್ಟ್‌ಫೋನ್‌ ಬಳಕೆಗೆ ಅವಕಾಶ
 • ವೈ–ಫೈ, ಕಿರು ಸಂದೇಶ (ಎಸ್‌ಎಂಎಸ್‌), ವಾಯ್ಸ್‌ ಮತ್ತು ಡೇಟಾ ಕಾಲ್‌ (ವಿಒಐಪಿ) ಹಾಗೂ ಡೇಟಾ ಸರ್ಫಿಂಗ್‌ ಸೌಲಭ್ಯ
 • ಈ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆ
 • ಶುಲ್ಕ ನಿಗದಿ ತೀರ್ಮಾನ ವಿಮಾನಯಾನ ಸಂಸ್ಥೆಗಳ ವಿವೇಚನೆಗೆ
 • ವಿದೇಶಿ ಉಪಗ್ರಹಗಳಿಂದ ಸಂಪರ್ಕ ಸೇವೆಗೆ ಅವಕಾಶ ಇಲ್ಲ
 • ವಿಮಾನದ ಜತೆ ಹಡಗುಗಳಲ್ಲಿಯೂ ಈ ಸೇವೆ ಲಭ್ಯ
 • ಸೇವಾದಾತ ಕಂಪನಿಗಳಿಗೆ ಪ್ರತ್ಯೇಕ ಪರವಾನಗಿ ಮತ್ತು ಶುಲ್ಕ

~~~***ದಿನಕ್ಕೊಂದು ಯೋಜನೆ***~~~

ಕಾನೂನು ಮತ್ತು ನ್ಯಾಯ ಸಚಿವಾಲಯದ ಯೋಜನೆಗಳು

ಟೆಲಿ ಲಾ

 • ಟೆಲಿ ಕಾನೂನಿನ ಮಹತ್ವವೆಂದರೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಮುಖ್ಯವಾಹಿನಿಗೆ  ಕಾನೂನು ನೆರವನ್ನು ಒದಗಿಸುವುದು . ಈ ಉಪಕ್ರಮದ ಮೂಲಕಪರಿಣಿತ  ವಕೀಲರ ಸಮಿತಿಯು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿಉಪಸ್ಥಿತರಿರುವುದು   ಮತ್ತು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾನೂನು ಸಲಹೆ ನೀಡುವುದು .
 • ಈ ಉಪಕ್ರಮವು ಪಂಚಾಯತ್ ಮಟ್ಟದಲ್ಲಿನ ಅಂಚಿನಲ್ಲಿರುವ ಜನರಿಗೆ ಮತ್ತು ಭೌಗೋಳಿಕ ಸವಾಲುಗಳು ಮತ್ತು ಮೂಲಸೌಕರ್ಯದ ಕೊರತೆಯಿಂದಾಗಿ ಅಶಕ್ತರಾದ ಜನರಿಗಾಗಿ ಮಾಡಿರುವ ಯೋಜನೆ . ಇದರೊಂದಿಗಿನ ಸಮಸ್ಯೆಎಂದರೆ , ವಿಶೇಷವಾಗಿ ಭೌಗೋಳಿಕ ತಡೆ ಪ್ರದೇಶಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದು .

ನ್ಯಾಯ  ಮಿತ್ರ

 • ನ್ಯಾಯ ಮಿತ್ರ ಉಪಕ್ರಮವು ದೇಶದ ಉದ್ದಗಲಕ್ಕೂ ನ್ಯಾಯಾಲಯಗಳಲ್ಲಿ ಭಾರೀ ಪ್ರಮಾಣದಲ್ಲಿಬಾಕಿ ಉಳಿದಿರುವ  ಪ್ರಕರಣಗಳ ವಿಚಾರಣೆ ನಡೆಸುತ್ತದೆ. ಈ ಉಪಕ್ರಮದಲ್ಲಿ ‘ನ್ಯಾಯ ಮಿತ್ರ’ ಎಂದು ನಿವೃತ್ತ ನ್ಯಾಯಾಂಗ ಅಥವಾ ಕಾರ್ಯಕಾರಿ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ  (ಕಾನೂನು ಅನುಭವದೊಂದಿಗೆ).
 • ನ್ಯಾಯ ಮಿತ್ರನ ಜವಾಬ್ದಾರಿಗಳು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಮೂಲಕ ಅಂತಹ ಪ್ರಕರಣಗಳನ್ನು ಸಕ್ರಿಯವಾಗಿ ಗುರುತಿಸುವ ಮೂಲಕ ತನಿಖೆಗಳಲ್ಲಿ ಅಥವಾ ವಿಚಾರಣೆಗೆ ವಿಳಂಬವಾಗುವ ಕಾರಣದಿಂದ ಬಳಲುತ್ತಿರುವ ದಾವೆದಾರರಿಗೆ ಇತರರ ನೆರವು ಒಳಗೊಂಡಿರುತ್ತದೆ.
 • ಈ ಉಪಕ್ರಮವು ಗಮನಾರ್ಹ ಪ್ರಯೋಜನಕಾರಿಯಾಗಿದೆ, ಏಕೆಂದರೆ ಪ್ರಸ್ತುತದಲ್ಲಿ, 2.4 ಕೋಟಿ ಪ್ರಕರಣಗಳು ಜಿಲ್ಲೆಯಲ್ಲಿ ಬಾಕಿ ಉಳಿದಿವೆ ಮತ್ತು ಕಡಿಮೆ ನ್ಯಾಯಮೂರ್ತಿ, ಅದರಲ್ಲಿ ಸುಮಾರು 10% 10 ವರ್ಷಕ್ಕೂ ಹೆಚ್ಚು ಹಳೆಯ ದಾವೆಗಳಾಗಿವೆ . ಉಪಕ್ರಮವು ಒಳ್ಳೆಯದಾದರೂ, ಅಂತಹ ಸಂಖ್ಯೆಯ ಪ್ರಕರಣಗಳನ್ನು ಪರಿಹರಿಸಲು ಕಷ್ಟವಾಗುತ್ತದೆ ಮತ್ತು ಅವಶ್ಯಕತೆಯಂತೆ ನ್ಯಾಯ ಮಿತ್ರವನ್ನು ಒದಗಿಸುವುದು ಸುಲಭವಲ್ಲ .

ಪ್ರೊ ಬೋನೊ ಕಾನೂನು ಸೇವೆಗಳು

 •  ‘ಪ್ರೊ ಬೊನೋ ಕಾನೂನು ಸೇವೆಗಳು’ ಉಪಕ್ರಮವು ಒಂದು ವೆಬ್ ಆಧಾರಿತ ವೇದಿಕೆಯಾಗಿದ್ದು, ಅದರ ಮೂಲಕ ಆಸಕ್ತಿ ಹೊಂದಿದ ವಕೀಲರು ತಮ್ಮನ್ನು ತಾವು ಸ್ವಯಂ ಸೇವಕರಾಗಿ ವೆಚ್ಚಭರಿಸಲಾಗದ ದಾವೆದಾರರುಗಳಿಗೆ ಸೇವೆ ಸಲ್ಲಿಸಬಹುದು.
 • ಹೆಚ್ಚಿನ ವಕೀಲರು ಈಗಾಗಲೇ ತಮ್ಮ ಪ್ರಕರಣಗಳೊಂದಿಗೆ ವ್ಯವಹರಿಸುತ್ತಿದ್ದಾರೆ ಮತ್ತು ಈ ಸೇವೆಗಾಗಿ ಸ್ವಯಂಪ್ರೇರಣೆಯಿಂದ ಕೆಲಸ ಮಾಡುವುದು ಕಷ್ಟಕರವಾಗಿದೆ

1. ವಿಶ್ವದ ಮಾಲಿನ್ಯ ನಗರಗಳ ಪಟ್ಟಿಯನ್ನು ಯಾವ ಸಂಸ್ಥೆ ಬಿಡುಗಡೆಗೊಳಿಸಿದೆ ?
A. ವಿಶ್ವ ಆರೋಗ್ಯ ಸಂಸ್ಥೆ
B. ವಿಶ್ವ ಆರ್ಥಿಕ ಸಂಸ್ಥೆ
C. ವಿಶ್ವ ಸಂಸ್ಥೆ
D. ವಿಶ್ವ ಬ್ಯಾಂಕ್

2. ವೇತನ ಸಂಹಿತೆ ಮಸೂದೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1.ಈ ಮಸೂದೆ ಅಂಗೀಕಾರಗೊಂಡು ಕಾಯ್ದೆಯಾಗಿ ಜಾರಿಗೆ ಬರುತ್ತಿದ್ದಂತೆ, ದೇಶದಾದ್ಯಂತ ವಿವಿಧ ವಲಯಗಳಿಗೆ ನಿರ್ದಿಷ್ಟ ಮಟ್ಟದ ಕನಿಷ್ಠ ವೇತನ ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಪ್ರಾಪ್ತವಾಗಲಿದೆ.
2.ಕೇಂದ್ರವು ನಿಗದಿಪಡಿಸುವ ಈ ಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿ ಕನಿಷ್ಠ ವೇತನ ನಿಗದಿಪಡಿಸಲು ರಾಜ್ಯಗಳಿಗೆ ಅವಕಾಶ ಇರುತ್ತದೆ .
A. ಮೊದಲನೇ ಹೇಳಿಕೆ ಸರಿಯಾಗಿದೆ
B. ಎರಡನೇ ಹೇಳಿಕೆ ಸರಿಯಿದೆ
C. ಎರಡೂ ಹೇಳಿಕೆಗಳು ತಪ್ಪಾಗಿವೆ
D. ಎರಡೂ ಹೇಳಿಕೆಗಳು ಸರಿಯಿದೆ

3. ನೊಕ್ಕು ಕೂಲಿ ಪದ್ದತಿಯನ್ನು ಯಾವ ರಾಜ್ಯ ನಿಷೇಧಿಸಿದೆ ?
A. ತಮಿಳು ನಾಡು
B. ಕೇರಳ
C. ಆಂಧ್ರಪ್ರದೇಶ
D. ತೆಲಂಗಾಣ

4. ಲೈಂಗಿಕ ಅಪರಾಧಗಳ ಕಾಯ್ದೆ(POCSO ACT) ಯಾ ಅನ್ವಯ ಯಾವ ವಯಸ್ಸಿನ ವ್ಯಕ್ತಿಯನ್ನು ಮಗುವೆಂದು ವ್ಯಾಖ್ಯಾನಿಸಲಾಗಿದೆ ?
A. 14 ವರ್ಷ
B. 16 ವರ್ಷ
C. 18 ವರ್ಷ
D. 20 ವರ್ಷ

5. 2018 ಅಂತರರಾಷ್ಟ್ರೀಯ ಕಾರ್ಮಿಕ ದಿನದ ವಿಷಯವೇನು?
A. ಸಮಾಜ ಮತ್ತು ಆರ್ಥಿಕ ಪ್ರಗತಿಗಾಗಿ ಒಗ್ಗೂಡಿಸುವ ಕೆಲಸಗಾರರು
B. ಅಂತರರಾಷ್ಟ್ರೀಯ ಕಾರ್ಮಿಕ ಚಳುವಳಿಯನ್ನು ಆಚರಿಸುವುದು
C. ಪ್ರಾರಂಭಿಕ ಬಂಡವಾಳ ಬೆಂಬಲದೊಂದಿಗೆ ನಿರುದ್ಯೋಗವನ್ನು ಹೋಗಲಾಡಿಸುವ ಮೂಲಕ ಕೆಲಸಗಾರರನ್ನು ಗೌರವಿಸಿ
D. ನಿರೀಕ್ಷಿತ ವಾಣಿಜ್ಯೋದ್ಯಮಿಗಳಿಗೆ ಬೆಂಬಲ ನೀಡುವ ಮೂಲಕ ಉದ್ಯೋಗವನ್ನು ಉತ್ತೇಜಿಸಿ

6. ಪ್ರವಾಸೋದ್ಯಮ ಸಚಿವರು ಭಾರತೀಯ ಪಾಕಶಾಸ್ತ್ರ ಸಂಸ್ಥೆಯನ್ನು ಎಲ್ಲಿ ಉದ್ಘಾಟಿಸಿದರು ?
A. ಚೆನ್ನೈ
B. ನೊಯಿಡಾ
C. ಹೈದರಾಬಾದ್
D. ಕೊಲ್ಕತ್ತಾ

7. ಯಾವ ಸಂಸ್ಥೆಯು ಸರ್ವಶ್ರೇಷ್ಠ ಸುರಕ್ಷಾ ಸ್ವರ್ಣ ಪುರಸ್ಕಾರಕ್ಕೆ ಭಾಜನವಾಗಿದೆ ?
A. ಪಾರ್ಲೆ ಆಗ್ರೋ ಗ್ರೂಪ್
B. ಪತಂಜಲಿ ಸಂಸ್ಥೆ
C. ಪಾರಿಜಾತ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್
D. ಐ.ಟಿ.ಸಿ. ಪ್ರೈವೇಟ್ ಲಿಮಿಟೆಡ್

8. ಭಾಭಾ ಅಣು ಸಂಶೋಧನಾ ಸಂಸ್ಥೆಯು ಮುಂದಿನ ಪೀಳಿಗೆಯ ಬುಲೆಟ್ ಪ್ರೂಫ್ ಜಾಕೆಟನ್ನು ಆವಿಷ್ಕರಿಸಿದೆ .ಆ ಜಾಕೆಟ್ನ ಹೆಸರೇನು ?
A. ಭಾಭಾ ಶೀಲ್ಡ್
B. ಭಾಭಾ ಕವಚ್
C. ಕರ್ಣ ಕವಚ್
D. ಭೀಮ ಕವಚ್

9. ಅಂತರ್ರಾಷ್ಟ್ರೀಯ ಬೌದ್ಧ ಸಮ್ಮೇಳನ -2018 ಎಲ್ಲಿ ಆಯೋಜಿಸಲಾಗಿತ್ತು ?
A. ಧರ್ಮಶಾಲಾ
B. ವಾರಾಣಸಿ
C. ಕಟ್ಮಂಡು
D. ಲು೦ಬಿನಿ

10. ಅಡಾಪ್ಟ್ ಎ ಹೆರಿಟೇಜ್ ಪ್ರಾಜೆಕ್ಟ್ ಅಡಿಯಲ್ಲಿ ಯಾವ ಕಾರ್ಪೊರೇಟ್ ಸಂಸ್ಥೆ ನವ ದೆಹಲಿಯ ಕೆಂಪುಕೋಟೆಯ ನಿರ್ವಹಣೆಯನ್ನು ವಹಿಸಿಕೊಂಡಿದೆ ?
A. ಜಿ.ಮ್.ಆರ್ ಸ್ಪೋರ್ಟ್ಸ್
B. ಇಂಡಿಗೋ ಏರ್ಲೈನ್ಸ್
C. ದಾಲ್ಮಿಯಾ ಭಾರತ್ ಲಿಮಿಟೆಡ್
D. ರಿಲಯನ್ಸ್ ಲಿಮಿಟೆಡ್

ಉತ್ತರಗಳು:1.A 2.A 3.B 4.C 5.A 6.B 7. C 8.B 9.D 10.C

 

 

 

Related Posts
National Current Affairs – UPSC/KAS Exams- 10th September 2018
CPEC Why in news? China has rejected accusations that its financial backing for the China Pakistan Economic Corridor (CPEC) was a “debt trap” that could compromise Islamabad’s sovereignty has billed the ...
READ MORE
National Current Affairs – UPSC/KAS Exams- 27th December 2018
Andhra Pradesh, Telangana to have separate High Courts Topic: Polity and Governance IN NEWS:  Following a Supreme Court order to the Centre to notify the bifurcation of the Andhra Pradesh and Telangana ...
READ MORE
Karnataka – Revised TDR notified; to be twice property value
The state government has notified the rules for implementing the revised scheme, which envisages acquisition of land for infrastructure projects. Under the revised scheme, two times the value of the land ...
READ MORE
Yermarus Thermal Power Station first unit fit for commercial production
The first unit of the Yeramarus Thermal Power Station (YTPS) has successfully completed the trial run by generating power continuously for 72 hours. The first generating unit of the newly set ...
READ MORE
Karnataka Current Affairs – KAS / KPSC Exams – 22nd March 2017
Cauvery dispute: SC directs Karnataka to release 2000 cusecs of water to Tamil Nadu, to begin final hearing from July 11 The Supreme Court on 21st March directed the Karnataka government ...
READ MORE
System down on day one of RTE online application process
What is RTE? The Right of Children to Free and Compulsory Education Act' or 'Right to Education Act also known as RTE', is an Act of the Parliament of India enacted ...
READ MORE
Karnataka Current Affairs – KAS/KPSC Exams- 4th Dec 2017
‘Skill on Wheels’ programme to kick off from Mysuru The National Skill Development Corporation’s (NSDC) ‘Skill on Wheels’ programme, which seeks to provide information and guidance to budding entrepreneurs and employment-seekers, ...
READ MORE
2005ರ ಅಕ್ಟೋಬರ್ 12ರಂದು ಜಾರಿ ಜನಸಾಮಾನ್ಯರೂ ಆಡಳಿತ ವ್ಯವಸ್ಥೆಯ ಮಾಹಿತಿ ಪಡೆಯಲು ಅನುವಾಗುವ ಮಾಹಿತಿ ಹಕ್ಕು ಕಾಯ್ದೆ. ಮಾಹಿತಿ ಹಕ್ಕು ಕಾಯ್ದೆ ಎಂದರೇನು? ನಾಗರಿಕರು ಮಾಹಿತಿ ಬಯಸಿ ಸಲ್ಲಿಸಿದ ಅರ್ಜಿಯನ್ನು ಪರೀಕ್ಷಿಸಿ, ಅದಕ್ಕೆ ಸಂಬಂಧಪಟ್ಟ ಸೂಕ್ತ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ನೀಡುವುದು; ಆ ಮೂಲಕ ಆಡಳಿತ ವ್ಯವಹಾರದಲ್ಲಿ ...
READ MORE
National Current Affairs – UPSC/KAS Exams- 16th July 2018
DBT Why in news? Acknowledging that problems have been experienced by three Union Territories (UTs) in the implementation of direct benefit transfer (DBT) for food subsidy, the Reserve Bank of India (RBI) ...
READ MORE
National Current Affairs – UPSC/KAS Exams- 4th December 2018
Qatar to quit OPEC Topic: International Affairs IN NEWS:  Qatar has taken the decision to leave the Organization of the Petroleum Exporting Countries (OPEC) next month in order to focus on gas ...
READ MORE
National Current Affairs – UPSC/KAS Exams- 10th September
National Current Affairs – UPSC/KAS Exams- 27th December
Karnataka – Revised TDR notified; to be twice
Yermarus Thermal Power Station first unit fit for
Karnataka Current Affairs – KAS / KPSC Exams
System down on day one of RTE online
Karnataka Current Affairs – KAS/KPSC Exams- 4th Dec
ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ)
National Current Affairs – UPSC/KAS Exams- 16th July
National Current Affairs – UPSC/KAS Exams- 4th December

Leave a Reply

Your email address will not be published. Required fields are marked *