“30th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಶಬರಿಮಲೆ ಪ್ರಸಾದಕ್ಕೆ ಸಿಎಫ್ಟಿಆರ್ ಮಾರ್ಗಸೂಚಿ

 • ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನೀಡುವ ಪ್ರಸಾದವನ್ನು ಇನ್ನಷ್ಟು ರುಚಿಕರ ಮತ್ತು ಸ್ವಾದಿಷ್ಟವಾಗಿ ಭಕ್ತರಿಗೆ ದೊರಕಿಸಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದ್ದು, ಇದಕ್ಕಾಗಿ ಮೇ 16ರಂದು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ) ಜತೆ ಒಪ್ಪಂದ ಮಾಡಿಕೊಳ್ಳಲಿದೆ.
 • ಅಪ್ಪಂ ಪ್ರಸಾದ ಬೇಗ ಗಟ್ಟಿಯಾಗುತ್ತಿದೆ. ಭಕ್ತರು ಮನೆಗೆ ಕೊಂಡೊಯ್ಯುವಷ್ಟರಲ್ಲಿ ಕೆಟ್ಟು ಹೋಗುತ್ತಿದೆ ಎಂಬ ಆರೋಪವಿದೆ. ಮುಂದಿನ ದಿನಗಳಲ್ಲಿ ಸಿಎಫ್‌ಟಿಆರ್‌ಐ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಅಪ್ಪಂ ಮತ್ತು ಅರವಣ ಪ್ರಸಾದ ತಯಾರಿಸಲಾಗುವುದು
 • ರುಚಿ, ಗುಣಮಟ್ಟ ಹೆಚ್ಚಿಸುವ ಜೊತೆಗೆ ಪ್ರಸಾದ ಹೆಚ್ಚು ದಿನ ಕೆಡದಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಪ್ರಸಾದ ತಯಾರಿಸುವ ಮತ್ತು ಪ್ಯಾಕ್‌ ಮಾಡುವ ಬಗ್ಗೆ ಸಿಬ್ಬಂದಿಗೆ ಸಿಎಫ್‌ಟಿಆರ್‌ಐ ತಜ್ಞರು ತರಬೇತಿ ನೀಡಲಿದ್ದಾರೆ
 • ತಿಂಗಳ ಪೂಜೆಗಾಗಿ ಮೇ 15ರಂದು ದೇವಾಲಯದ ಬಾಗಿಲು ತೆರೆಯಲಿದ್ದು, ಆಡಳಿತ ಮಂಡಳಿ ಮತ್ತು ಸಿಎಫ್‌ಟಿಆರ್‌ಐ ನಡುವೆ 16ರಂದು ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ಮುಂದಿನ ವರ್ಷ ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಗುಣಮಟ್ಟದ ಪ್ರಸಾದ ದೊರೆಯಲಿದೆ.

ಜಗತ್ತಿನ ಅತಿ ವೇಗದ ಕ್ಷಿಪಣಿಗೆ ಮತ್ತಷ್ಟು ವೇಗ

 • ಮುಂದಿನ ಏಳರಿಂದ ಹತ್ತು ವರ್ಷಗಳಲ್ಲಿ ‘ಮ್ಯಾಕ್ 7’ ವೇಗದಲ್ಲಿ ಚಲಿಸುವ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಿದ್ದೇವೆ’ ಎಂದು ಬ್ರಹ್ಮೋಸ್ ಏರೊಸ್ಪೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮಿಶ್ರಾ ಮಾಹಿತಿ ನೀಡಿದ್ದಾರೆ. ರಷ್ಯಾ ಮತ್ತು ಭಾರತ ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿವೆ.
 • ಏನಿದು ಮ್ಯಾಕ್?
 • ಶಬ್ದದ ವೇಗಕ್ಕೆ (ಪ್ರತಿ ಗಂಟೆಗೆ 1,235 ಕಿ.ಮೀ.) ಸರಿಸಮನಾದ ವೇಗವನ್ನು ಮ್ಯಾಕ್ ಎಂದು ಕರೆಯಲಾಗುತ್ತದೆ. ವಿಮಾನ, ಕ್ಷಿಪಣಿ, ರಾಕೆಟ್‌ಗಳ ವೇಗವನ್ನು ಉಲ್ಲೇಖಿಸುವಾಗ ಮ್ಯಾಕ್ ಎಂಬ ಪರಿಭಾಷೆಯನ್ನು ಬಳಸಲಾಗುತ್ತದೆ. ಭೂಮಿಯ ಮೇಲ್ಮೈನಿಂದ ಮೇಲಕ್ಕೆ ಏರಿದಂತೆ ಮ್ಯಾಕ್‌ನ ಪ್ರಮಾಣ ಬದಲಾಗುತ್ತಾ ಹೋಗುತ್ತದೆ.

ಮ್ಯಾಕ್‌ ಮತ್ತು ಬ್ರಹ್ಮೋಸ್‌ನ ವೇಗ

 • ಮ್ಯಾಕ್ 1: 1,235 ಕಿ.ಮೀ. ವೇಗ (ಇದು ಶಬ್ದದ ವೇಗ)
 • ಮ್ಯಾಕ್ 2 : 2,470 ಕಿ.ಮೀ. ವೇಗ
 • ಮ್ಯಾಕ್ 3: 3,705 ಕಿ.ಮೀ. ವೇಗ
 • ಮ್ಯಾಕ್ 4: 4,940 ಕಿ.ಮೀ. ವೇಗ
 • ಮ್ಯಾಕ್ 5: 6,175 ಕಿ.ಮೀ. ವೇಗ
 • ಮ್ಯಾಕ್ 6: 7,410 ಕಿ.ಮೀ. ವೇಗ
 • ಮ್ಯಾಕ್ 7: 8,645 ಕಿ.ಮೀ. ವೇಗ

ಮ್ಯಾಕ್ 2.8  ಪ್ರತಿ ಗಂಟೆಗೆ 3,458 ಕಿ.ಮೀ.

 • ಸದ್ಯ ಭಾರತೀಯ ಸೇನಾಪಡೆಗಳಲ್ಲಿ ನಿಯೋಜನೆಯಾಗಿರುವ ಬ್ರಹ್ಮೋಸ್ ಕ್ಷಿಪಣಿಯ ವೇಗವಿದು.
 • ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿಯಾಗಿದೆ. ಭಾರಿ ವೇಗ ಮತ್ತು ಅತ್ಯಂತ ಕೆಳಮಟ್ಟದಲ್ಲಿ ಕ್ಷಿಪ್ರವಾಗಿ ಚಲಿಸುವುದರಿಂದ ಜಗತ್ತಿನ ಯಾವ ಕ್ಷಿಪಣಿ ನಿರೋಧಕ ವ್ಯವಸ್ಥೆಗಳೂ ಬ್ರಹ್ಮೋಸ್‌ ಅನ್ನು ಪತ್ತೆ ಮಾಡಲು ಸಾಧ್ಯವಿಲ್ಲ.

ಮ್ಯಾಕ್ 3.5: ಪ್ರತಿ ಗಂಟೆಗೆ 4,323 ಕಿ.ಮೀ.

 • ಇದು ಮುಂದಿನ ಹಂತದ ಬ್ರಹ್ಮೋಸ್ ಕ್ಷಿಪಣಿಯ ವೇಗ.
 • ಇದರ ಅಭಿವೃದ್ಧಿ ಮತ್ತು ವಿನ್ಯಾಸ ಕಾರ್ಯ ಬಹುತೇಕ ಮುಗಿದಿದ್ದು, ಕಾರ್ಯಾಚರಣಾ ಪರೀಕ್ಷೆಗಳು ನಡೆಯಬೇಕಿವೆ. ಈ ವೇಗವನ್ನು ಸಾಧಿಸಲು ಈಗ ಬಳಸುತ್ತಿರುವ ಎಂಜಿನ್‌ ಅನ್ನೇ ತುಸು ಮಾರ್ಪಡಿಸಬೇಕಿದೆ

ಮ್ಯಾಕ್‌ 5.1: ಪ್ರತಿ ಗಂಟೆಗೆ 6,290 ಕಿ.ಮೀ

 • ಇದು ಬ್ರಹ್ಮೋಸ್‌ನ ಹೊಸ ತಲೆಮಾರಿನ ಕ್ಷಿಪಣಿಯ ವೇಗ.
 • ಮುಂದಿನ ಐದು ವರ್ಷಗಳಲ್ಲಿ ಇದನ್ನು ಸೇವೆಗೆ ನಿಯೋಜಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಈ ವೇಗವನ್ನು ಸಾಧಿಸಲು ಈಗ ಬಳಸುತ್ತಿರುವ ಎಂಜಿನ್‌ ಅನ್ನು ಭಾರಿ ಪ್ರಮಾಣದಲ್ಲಿ ಮಾರ್ಪಡಿಸಬೇಕಿದೆ.

ಮ್ಯಾಕ್ 7: ಪ್ರತಿ ಗಂಟೆಗೆ 8,645 ಕಿ.ಮೀ

 • ಬ್ರಹ್ಮೋಸ್‌ನ ಹೈಪರ್‌ಸೋನಿಕ್ ಅವತರಣಿಕೆಯ ವೇಗ. ಈ ಅವತರಣಿಕೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು 10 ವರ್ಷಗಳ ಕಾಲಮಿತಿ ಹಾಕಿಕೊಳ್ಳಲಾಗಿದೆ. ಈ ವೇಗವನ್ನು ಸಾಧಿಸಲು ಹೊಸ ಎಂಜಿನ್‌ ಅನ್ನೇ ಅಭಿವೃದ್ಧಿಪಡಿಸಬೇಕಿದೆ. ಆ ಕೆಲಸವನ್ನು ರಷ್ಯಾ ಮಾಡಲಿದೆ. ಎಂಜಿನ್ ಮತ್ತು ಕ್ಷಿಪಣಿಯ ನಿಯಂತ್ರಣಕ್ಕೆ ಬೇಕಾದ ತಂತ್ರಾಂಶ, ದೇಹ, ಪಥನಿರ್ದೇಶನ ವ್ಯವಸ್ಥೆಗಳನ್ನು ಭಾರತ ಅಭಿವೃದ್ಧಿಪಡಿಸಲಿದೆ

ರಷ್ಯಾದಲ್ಲಿ ಭಾರತಪಾಕ್ಸಮರಾಭ್ಯಾಸ

 • ಭಾರತ ಮತ್ತು ಪಾಕಿಸ್ತಾನ ಇದೇ ಮೊದಲ ಬಾರಿಗೆ ಬಹುರಾಷ್ಟ್ರೀಯ ಸಮರಾಭ್ಯಾಸದಲ್ಲಿ ಜತೆಯಾಗಲಿವೆ. ಭಯೋತ್ಪಾದನೆ ತಡೆ ಉದ್ದೇಶದ ಯುದ್ಧ ಕವಾಯತು ರಷ್ಯಾದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.
 • ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸದಸ್ಯ ರಾಷ್ಟ್ರಗಳು ಈ ಸಮರಾಭ್ಯಾಸದಲ್ಲಿ ಭಾಗಿಯಾಗಲಿವೆ. ಇದು ಚೀನಾ ನೇತೃತ್ವದ ಭದ್ರತಾ ಗುಂಪು. ಪಶ್ಚಿಮ ದೇಶಗಳು ಸದಸ್ಯತ್ವ ಹೊಂದಿರುವ ನ್ಯಾಟೊ ಗುಂಪಿಗೆ ಪ್ರತಿಸ್ಪರ್ಧಿಯಾಗಿ ಈ ಗುಂಪನ್ನು ರಚಿಸಲಾಗಿದೆ.
 • ಸಮರಾಭ್ಯಾಸವು ರಷ್ಯಾದ ಉರಲ್‌ ಪರ್ವತ ಶ್ರೇಣಿಯಲ್ಲಿ ನಡೆಯಲಿದೆ. ಶಾಂಘೈ ಸಹಕಾರ ಸಂಘಟನೆಯ ಎಲ್ಲ ಎಂಟು ಸದಸ್ಯ ರಾಷ್ಟ್ರಗಳು ಭಾಗವಹಿಸಲಿವೆ
 • ಬೀಜಿಂಗ್‌ನಲ್ಲಿ ನಡೆದ ಎಸ್‌ಸಿಒ ದೇಶಗಳ ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾರತದ ಭಾಗವಹಿಸುವಿಕೆಯನ್ನು ದೃಢಪಡಿಸಿದ್ದಾರೆ.
 • ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಯೋಧರು ಜತೆಯಾಗಿ ಕೆಲಸ ಮಾಡಿದ್ದಾರೆ. ಆದರೆ ಒಟ್ಟಾಗಿ ಸಮರಾಭ್ಯಾಸ ನಡೆಸುತ್ತಿರುವುದು ಇದೇ ಮೊದಲು.
 • ಎಸ್‌ಸಿಒ ಬಗ್ಗೆ: ರಷ್ಯಾ, ಚೀನಾ, ಕಿರ್ಗಿಸ್‌ ರಿಪಬ್ಲಿಕ್‌, ಕಜಾಕಿಸ್ತಾನ, ತಾಜಿಕಿಸ್ತಾನ ಮತ್ತು ಉಜ್ಬೆಕಿಸ್ತಾನಗಳ ಮುಖ್ಯಸ್ಥರು ಜತೆಯಾಗಿ 2001ರಲ್ಲಿ ಎಸ್‌ಸಿಒ ಸ್ಥಾಪಿಸಿದರು. ಭಾರತ ಮತ್ತು ಪಾಕಿಸ್ತಾನವನ್ನು ವೀಕ್ಷಕರಾಗಿ 2005ರಲ್ಲಿ ಸೇರಿಸಿಕೊಳ್ಳಲಾಗಿತ್ತು. ಕಳೆದ ವರ್ಷ ಈ ಎರಡೂ ದೇಶಗಳಿಗೆ ಪೂರ್ಣ ಸದಸ್ಯತ್ವ ನೀಡಲಾಗಿದೆ.
 • ಭಾರತಕ್ಕೆ ಸದಸ್ಯತ್ವ ನೀಡಬೇಕು ಎಂದು ರಷ್ಯಾ ಬಲವಾಗಿ ಪ್ರತಿಪಾದಿಸಿತ್ತು. ಪಾಕಿಸ್ತಾನದ ಪರವಾಗಿ ಚೀನಾ ನಿಂತಿತ್ತು. ವಿಸ್ತರಣೆಯ ಬಳಿಕ, ಜಗತ್ತಿನ ಶೇ 40ರಷ್ಟು ಜನಸಂಖ್ಯೆಯನ್ನು ಈ ಗುಂಪು ಪ‍್ರತಿನಿಧಿಸುತ್ತಿದೆ.
 • ಭಾರತ ಮತ್ತು ಚೀನಾ ಜಂಟಿಯಾಗಿ ಸಮರಾಭ್ಯಾಸ ನಡೆಸುವ ಪರಿಪಾಠ ಇದೆ. ದೋಕಲಾ ಬಿಕ್ಕಟ್ಟಿನಿಂದಾಗಿ ಕಳೆದ ವರ್ಷ ಸಮರಾಭ್ಯಾಸವನ್ನು ಅಮಾನತು ಮಾಡಲಾಗಿತ್ತು. ಈ ವರ್ಷ ಸೆಪ್ಟೆಂಬರ್‌ನಲ್ಲಿ ದ್ವಿಪಕ್ಷೀಯ ಸೇನಾ ಕವಾಯತು ನಡೆಯಲಿದೆ.

ಸ್ವಚ್ಛ ಭಾರತ್ ಇಂಟರ್ನ್​ಷಿಪ್

 • ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಗೆ ಪೂರಕವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದ 43ನೇ ಕಂತಿನಲ್ಲಿ ದೇಶದ ವಿದ್ಯಾರ್ಥಿ ಸಮುದಾಯಕ್ಕೊಂದು ಇಂಟರ್ನ್​ಷಿಪ್ ಘೋಷಿಸಿದ್ದಾರೆ.
 • ‘ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್​ಷಿಪ್ 2018’ ಎಂಬ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಯಾಗುವ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ -ಠಿ; 2 ಲಕ್ಷವರೆಗೆ ಬಹುಮಾನ ಗೆಲ್ಲುವ ಅವಕಾಶವಿದೆ. 100 ಗಂಟೆಗಳ ಈ ಕಾರ್ಯಕ್ರಮವನ್ನು ಕ್ರೀಡಾ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಕುಡಿವ ನೀರಿನ ಇಲಾಖೆ ಒಟ್ಟು ಸೇರಿ ನಡೆಸುತ್ತಿವೆ.
 • ಪಾಲ್ಗೊಳ್ಳುವುದು ಹೇಗೆ?:ಅರ್ಹ ವಿದ್ಯಾರ್ಥಿಗಳು ಅಂದರೆ ಕಾಲೇಜು ಮಟ್ಟದಲ್ಲಿ ಅತ್ಯುತ್ತಮ ಸಮಾಜ ಕಾರ್ಯ ಮಾಡಿದವರು ಇಂಟರ್ನ್​ಷಿಪ್​ಗೆ (sbsi.mygov.in)ತಾಣದ ಮೂಲಕ ಅರ್ಜಿ ಸಲ್ಲಿಸಬಹುದು. ಬಹುಮಾನ ಗೆಲ್ಲುವುದಕ್ಕಾಗಿ ವಿದ್ಯಾರ್ಥಿಗಳು ಒಂದು ಅಥವಾ ಹೆಚ್ಚು ಗ್ರಾಮಗಳನ್ನು ದತ್ತು ತೆಗೆದುಕೊಂಡು ಗ್ರಾಮ ನೈರ್ಮಲ್ಯ ವಿಷಯದಲ್ಲಿ ಅವರ ಆಯ್ಕೆಯ ಚಟುವಟಿಕೆಯನ್ನು ಕೈಗೊಳ್ಳಬೇಕು.
 • ವಿಡಿಯೋ ಅಪ್​ಲೋಡ್ ಮಾಡಿ: ಸ್ವಚ್ಛಭಾರತ ಬೇಸಿಗೆ ಇಂಟರ್ನ್​ಶಿಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾವು ಮಾಡುವ ಕ್ಷೇತ್ರಕಾರ್ಯದ ವಿಡಿಯೋ, ಫೋಟೋ, ಲಿಖಿತ ವರದಿಗಳ ಮೂಲಕ ತಮ್ಮ ಅನುಭವವನ್ನು ಮೈ ಗೌ (mygov) ಆಪ್​ನಲ್ಲಿ ಇಲ್ಲವೇ (sbsi.mygov.in) ಪೋರ್ಟಲ್​ನಲ್ಲಿ ಹಂಚಿಕೊಳ್ಳುವಂತೆ ಪ್ರಧಾನಿ ಮೋದಿ ಇಂಟರ್ನಿಗಳಿಗೆ ಸಲಹೆ ನೀಡಿದ್ದಾರೆ.
 • ವರದಿ ಸಲ್ಲಿಕೆ ಅವಶ್ಯ
 • ಸಂಸ್ಥೆ ನೇಮಿಸಿದ ಸೂಪರ್​ವೈಸರ್ ಮೂಲಕ ಇಂಟರ್ನ್ ಷಿಪ್ ಮಾರ್ಗಸೂಚಿಗೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮ ಚಟುವಟಿಕೆಗಳ ವರದಿಯನ್ನು ಸ್ವಚ್ಛ ಭಾರತ್ ಇಂಟರ್ನ್​ಷಿಪ್ ಜಾಲತಾಣಕ್ಕೆ ಅಪ್ಲೋಡ್ ಮಾಡಬೇಕು. ಗ್ರಾಮದಲ್ಲಿನ ಚಟುವಟಿಕೆ ಪೂರ್ಣಗೊಂಡ 15 ದಿನದೊಳಗೆ ವರದಿ ಸಲ್ಲಿಸುವುದು ಕಡ್ಡಾಯ.
 • ಯಾರ್ಯಾರು ಪಾಲ್ಗೊಳ್ಳಬಹುದು?
 • ಕಾಲೇಜು ವಿದ್ಯಾರ್ಥಿಗಳು
 • ಎನ್​ಸಿಸಿ, ಎನ್​ಎಸ್​ಎಸ್ ಕಾರ್ಯಕರ್ತರು
 • ನೆಹರು ಯುವ ಕೇಂದ್ರದ ವಿದ್ಯಾರ್ಥಿಗಳು
 • ವೈಯಕ್ತಿಕವಾಗಿ ಅಥವಾ ತಂಡವಾದರೆ ಗರಿಷ್ಠ 10 ಸದಸ್ಯರು

ಉದ್ದೇಶ

 • ಸಮಾಜದ ಒಳಿತಿಗಾಗಿ, ಅಭಿವೃದ್ಧಿಗಾಗಿ ವಿದ್ಯಾರ್ಥಿಗಳ ಕೊಡುಗೆಗೆ ಉತ್ತೇಜನ ನೀಡುವುದು
 • ಕ್ರೆಡಿಟ್ ಅಂಕ

ವಿಜೇತರಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದಿಂದ 2 ಕ್ರೆಡಿಟ್ ಅಂಕ

ಬಹುಮಾನ ಯಾರಿಗೆ- ಎಷ್ಟು?

 • ವಿಶ್ವವಿದ್ಯಾಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟ ಎಂಬ ಮೂರು ಸ್ತರದಲ್ಲಿ ಬಹುಮಾನ ವಿತರಣೆ
 • ವಿಶ್ವವಿದ್ಯಾಲಯ ಮಟ್ಟದಲ್ಲಿ 30,000 ರೂ., 20,000 ರೂ., 10,000 ರೂ. ಮತ್ತು ಪ್ರಮಾಣ ಪತ್ರ
 • ರಾಜ್ಯ ಮಟ್ಟದಲ್ಲಿ 50,000 ರೂ, 30,000 ರೂ., 20,000 ರೂ. ಮತ್ತು ಪ್ರಮಾಣ ಪತ್ರ
 • ರಾಷ್ಟ್ರಮಟ್ಟದಲ್ಲಿ 2 ಲಕ್ಷ ರೂ., 1 ಲಕ್ಷ ರೂ., 50,000 ರೂ. ಮತ್ತು ಪ್ರಮಾಣ ಪತ್ರ

ಬೆಳಗಿತು ಭಾರತ!

 • ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಪೂರ್ಣ .
 •  ‘ಭಾರತ ಪ್ರಕಾಶಿಸುತ್ತಿದೆ’ ಎಂಬ ವಾಜಪೇಯಿ ಸರ್ಕಾರದ ಉದ್ಘೋಷ ಕೊನೆಗೂ ಸಾಕಾರಗೊಂಡಿದೆ. ಕಟ್ಟಕಡೆಯದಾಗಿ, ಮಣಿಪುರದ ಸೇನಾಪತಿ ಜಿಲ್ಲೆಯ ಲೀಸಾಂಗ್ ಗ್ರಾಮ ವಿದ್ಯುತ್ ಸಂಪರ್ಕ ಪಡೆಯುವುದರೊಂದಿಗೆ ಇಡೀ ಭಾರತ ಬೆಳಗಿದಂತಾಗಿದೆ!
 • ದೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಮೂಲಕ ಕೇಂದ್ರ ಸರ್ಕಾರ ದೇಶದ ಎಲ್ಲ ಕುಗ್ರಾಮಗಳಿಗೂ ವಿದ್ಯುತ್ ಪೂರೈಸುವಲ್ಲಿ ಯಶಸ್ವಿಯಾಗಿದೆ.
 • ಸರ್ಕಾರಿ ಸ್ವಾಮ್ಯದ ರೂರಲ್ ಎಲೆಕ್ಟ್ರಿಫಿಕೇಷನ್ ಕಾಪೋರೇಷನ್ ನೇತೃತ್ವದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಡಿ ದೇಶಾದ್ಯಂತ ಎಲ್ಲ 597,464 ಗ್ರಾಮಗಳೂ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದಾಗಿ ಕೇಂದ್ರ ಹೇಳಿಕೊಂಡಿದೆ.
 • ಇನ್ನು ಪ್ರತಿ ಮನೆಗೂ ಬೆಳಕು: ಪ್ರತಿ ಮನೆಗೂ ಬೆಳಕು ಹರಿಸುವುದು ಕೇಂದ್ರ ಸರ್ಕಾರದ ಮುಂದಿನ ಗುರಿ. 2019 ಮಾರ್ಚ್ ವೇಳೆಗೆ ದೇಶದ ಪ್ರತಿ ಮನೆಯೂ ವಿದ್ಯುತ್ ಸಂಪರ್ಕ ಪಡೆಯಲಿದೆ ಎಂದು ಪ್ರಧಾನಿ ಹೇಳಿದ್ದರು. ಈಗಾಗಲೇ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ದೊರೆತಿದ್ದು, ಮನೆ ಮನೆಗೂ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಭರದಿಂದ ಸಾಗುತ್ತಿದೆ. ಈ ಯೋಜನೆಯನ್ನೂ ಗಡುವಿನ ಒಳಗಾಗಿ ಪೂರೈಸುವ ವಿಶ್ವಾಸವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.

ಗಡುವಿಗೆ ಮೊದಲೇ ಸಾಧನೆ

 • 2015ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸಾವಿರ ದಿನಗಳ ಒಳಗಾಗಿ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದಾಗಿ ತಿಳಿಸಿದ್ದರು. ಇದರಿಂದ ಗ್ರಾಮಗಳಲ್ಲಿ ಸ್ವಾವಲಂಬನೆ, ಜನರ ಜೀವನ ಮಟ್ಟ ಸುಧಾರಿಸುವ ಭರವಸೆ ನೀಡಿದ್ದರು. ಮೇ 10ಕ್ಕೆ ಈ ಘೋಷಣೆ ಹೊರಬಿದ್ದು ಸಾವಿರ ದಿನ ಪೂರ್ಣವಾಗುತ್ತದೆ. ಆದರೆ ಇದಕ್ಕೂ 12 ದಿನ ಮೊದಲೇ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.

ಏನಿದು ಯೋಜನೆ?

 • ಎನ್​ಡಿಎ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ದೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಘೋಷಣೆ ಮಾಡಿತ್ತು. ವಿದ್ಯುತ್ ಸಂಪರ್ಕ ಇಲ್ಲದ 18,452 ಗ್ರಾಮಗಳನ್ನು ಗುರುತಿಸಿ ಬೆಳಕು ಹರಿಸುವುದು ಯೋಜನೆ ಉದ್ದೇಶವಾಗಿತ್ತು. ದತ್ತಾಂಶ ಪ್ರಕಾರ ಇವುಗಳಲ್ಲಿ 1236 ಗ್ರಾಮಗಳು ನಿರ್ವಸಿತ ಹಳ್ಳಿಗಳಾದರೆ 35 ಗ್ರಾಮಗಳು ಗೋಮಾಳಗಳಾಗಿ ಪರಿವರ್ತನೆಯಾಗಿವೆ.

ಚಾಮ್ಲಿಂಗ್ ಚಾರ್ವಿುಂಗ್

 • ಮ್ಮ ದೇಶದ ರಾಜ್ಯವೊಂದರ ದೀರ್ಘಾವಧಿ ಮುಖ್ಯ ಮಂತ್ರಿ ಎಂಬ ದಾಖಲೆ ಈಗ ಈಶಾನ್ಯ ಭಾರತದ ಪುಟ್ಟ ರಾಜ್ಯ ಸಿಕ್ಕಿಂನ ಸಿಎಂ ಪವನ್ ಕುಮಾರ್ ಚಾಮ್ಲಿಂಗ್ ಪಾಲಾಗಿದೆ. ಈ ದಾಖಲೆ ಪಶ್ಚಿಮ ಬಂಗಾಳದ ಸಿಎಂ ಆಗಿದ್ದ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಹೆಸರಿನಲ್ಲಿತ್ತು.
 • ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನಾಯಕ ಚಾಮ್ಲಿಂಗ್ 1973ರಲ್ಲಿ ರಾಜಕೀಯ ರಂಗ ಪ್ರವೇಶಿಸಿದರು. 1994ರ ಡಿ.12ರಂದು ಮೊದಲ ಸಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲಿಂದೀಚೆಗೆ ಮುಖ್ಯಮಂತ್ರಿಯಾಗಿಯೇ ಮುಂದುವರಿದಿರುವ ಅವರು, ಜ್ಯೋತಿ ಬಸು ದಾಖಲೆಯನ್ನುಸರಿಗಟ್ಟಿದರು.

~~~***ದಿನಕ್ಕೊಂದು ಯೋಜನೆ***~~~

ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಎಲ್ಲ ನಗರಗಳಿಗೆ ವಸತಿ)

 • ವಸತಿ ಮತ್ತು ನಗರ ಬಡತನ ನಿವಾರಣಾ ಸಚಿವಾಲಯ (MoHUPA) ಸಚಿವಾಲಯವು ಪ್ರಾರಂಭಿಸಿದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ನಗರ) ಕಾರ್ಯಕ್ರಮವು 2022 ರ ವೇಳೆಗೆ  ಮಿಷನ್ ಮೋಡ್ನಲ್ಲಿ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸುತ್ತದೆ.ಆಗ ದೇಶಕ್ಕೆ ಸ್ವಾತಂತ್ರ್ಯ ಬಂದು  75 ವರ್ಷ ಗಳಾಗಿರುತ್ತದೆ .ಸ್ಲಂ ನಿವಾಸಿಗಳು ಕೆಳಗಿನ ಪ್ರೋಗ್ರಾಂ ಲಂಬಸಾಲುಗಳ ಮೂಲಕ ನಗರದ ಬಡವರ ವಸತಿ ಅವಶ್ಯಕತೆಗಳನ್ನು ಬಗೆಹರಿಸಲು ಮಿಷನ್ ಬಯಸುತ್ತದೆ:
 • ಸ್ಲಮ್ ನಿವಾಸಿಗಳ ಕೊಳೆಗೇರಿ ಪುನರ್ವಸತಿ ಖಾಸಗಿ ಅಭಿವರ್ಧಕರನ್ನು ಭೂಮಿಯನ್ನು ಸಂಪನ್ಮೂಲವಾಗಿ ಬಳಸಿ
 • ಕ್ರೆಡಿಟ್ ಲಿಂಕ್ ಸಬ್ಸಿಡಿ ಮೂಲಕ ದುರ್ಬಲ ವಿಭಾಗಕ್ಕೆ ಕೈಗೆಟುಕುವ ವಸತಿ ಪ್ರಚಾರ
 • ಸಾರ್ವಜನಿಕ ಮತ್ತು ಖಾಸಗಿ ವಲಯಗಳೊಂದಿಗೆ ಸಹಭಾಗಿತ್ವದಲ್ಲಿ ಕೈಗೆಟುಕುವ ವಸತಿ
 • ಫಲಾನುಭವಿ-ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣ / ವರ್ಧನೆಗೆ ಸಬ್ಸಿಡಿ.

ಫಲಾನುಭವಿಗಳು

 • ಸ್ಲಂ ನಿವಾಸಿಗಳು ಸೇರಿದಂತೆ ನಗರದ ಬಡವರ ವಸತಿ ಅವಶ್ಯಕತೆಗಳನ್ನು ಪರಿಹರಿಸಲು ಮಿಷನ್ ಪ್ರಯತ್ನಿಸುತ್ತದೆ. ಸ್ಲಂ ಅನ್ನು ಕನಿಷ್ಟ 300 ಜನರ ಕಾಂಪ್ಯಾಕ್ಟ್ ಪ್ರದೇಶ ಅಥವಾ 60 ರಿಂದ 70 ಕುಟುಂಬಗಳು ಅನಾರೋಗ್ಯಕರ ಪರಿಸರದಲ್ಲಿ ಕಳಪೆಯಾಗಿ ನಿರ್ಮಿಸಿದ ಕಟ್ಟುನಿಟ್ಟಿನ ಹಿಡುವಳಿಗಳು ಎಂದು ವ್ಯಾಖ್ಯಾನಿಸಲಾಗಿದೆ. ಸಾಮಾನ್ಯವಾಗಿ ಅಸಮರ್ಪಕ ಮೂಲಸೌಕರ್ಯ ಮತ್ತು ಸರಿಯಾದ ನೈರ್ಮಲ್ಯ ಮತ್ತು ಕುಡಿಯುವ ನೀರಿನ ಸೌಲಭ್ಯಗಳಿಲ್ಲ.
 • ಫಲಾನುಭವಿಗಳಲ್ಲಿ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂ), ಕಡಿಮೆ ಆದಾಯದ ಗುಂಪುಗಳು (ಎಲ್ಜಿಜಿಗಳು) ಮತ್ತು ಮಧ್ಯಮ ವರಮಾನ ಗುಂಪುಗಳು (ಎಂಐಜಿಗಳು) ಸೇರಿವೆ. ವಾರ್ಷಿಕ ಆದಾಯ ಕ್ಯಾಪ್ ಇವಾಸ್ ರೂ 3 ಲಕ್ಷ, ಲಿಜಿಗೆ 3-6 ಲಕ್ಷ ರೂ. ಮತ್ತು ಎಂಜಿಗೆ 6 + -18 ಲಕ್ಷ ರೂ. ಫಲಾನುಭವಿಗಳ ಇಡಬ್ಲ್ಯೂಎಸ್ ವಿಭಾಗವು ಮಿಷನ್ಗಳ ಎಲ್ಲಾ ನಾಲ್ಕು ವರ್ಟಿಕಲ್ಗಳಲ್ಲಿ ಸಹಾಯ ಮಾಡಲು ಅರ್ಹವಾಗಿದೆ, ಆದರೆ ಮಿಷನ್ನ ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಮ್ (ಸಿಎಲ್ಎಸ್ಎಸ್) ಅಂಶದಡಿಯಲ್ಲಿ ಮಾತ್ರ ಲಿಜಿ ಮತ್ತು ಎಂಐಜಿ ವಿಭಾಗಗಳು ಅರ್ಹರಾಗಿರುತ್ತಾರೆ.
 • ಯೋಜನೆಯ ಅಡಿಯಲ್ಲಿ ಒಂದು ಇಡಬ್ಲ್ಯೂಎಸ್ ಅಥವಾ ಲಿಗ್ ಫಲಾನುಭವಿಯಾಗಿ ಗುರುತಿಸಲು, ಒಬ್ಬ ವ್ಯಕ್ತಿಯ ಸಾಲದ ಅರ್ಜಿದಾರರು ಸ್ವ-ಪ್ರಮಾಣಪತ್ರ / ಅಫಿಡವಿಟ್ ಅನ್ನು ಆದಾಯದ ಪುರಾವೆಯಾಗಿ ಸಲ್ಲಿಸುತ್ತಾರೆ.
 • ಒಬ್ಬ ಫಲಾನುಭವಿಯ ಕುಟುಂಬವು ಪತಿ, ಪತ್ನಿ, ಅವಿವಾಹಿತ ಮಕ್ಕಳು ಮತ್ತು / ಅಥವಾ ಅವಿವಾಹಿತ ಹೆಣ್ಣುಮಕ್ಕಳನ್ನು ಒಳಗೊಂಡಿರುತ್ತದೆ.
 • ಫಲಾನುಭವಿಯ ಕುಟುಂಬವು ತನ್ನ / ಅವಳ ಹೆಸರಿನಲ್ಲಿ ಅಥವಾ ಅವರ ಯಾವುದೇ ಕುಟುಂಬದ ಸದಸ್ಯರ ಹೆಸರಿನಲ್ಲಿ ಭಾರತದ ಯಾವುದೇ ಭಾಗದಲ್ಲಿ ಮಿಷನ್ ಅಡಿಯಲ್ಲಿ ಕೇಂದ್ರ ನೆರವನ್ನು ಪಡೆಯುವ ಅರ್ಹತೆ ಹೊಂದಿರಬಾರದು.
 • ರಾಜ್ಯಗಳು / ಯು.ಟಿ.ಗಳು ತಮ್ಮ ವಿವೇಚನೆಯ ಪ್ರಕಾರ, ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಅರ್ಹತೆ ಹೊಂದಿದ ನಗರ ಪ್ರದೇಶದ ಫಲಾನುಭವಿಗಳು ನಿವಾಸಿಯಾಗಿರಬೇಕಾದ ಕಟ್-ಆಫ್ ದಿನಾಂಕವನ್ನು ನಿರ್ಧರಿಸಬಹುದು.
 • ಕೊಳೆಗೇರಿ ದಶಮಾನದ ಬೆಳವಣಿಗೆಯ ದರದಲ್ಲಿ 34%, ಕೊಳೆಗೇರಿ ಕುಟುಂಬಗಳು 18 ಮಿಲಿಯನ್ ವರೆಗೆ ಹೋಗಲು ಯೋಜಿಸಲಾಗಿದೆ. 2 ಮಿಲಿಯನ್ ಅಲ್ಲದ ಸ್ಲಂ ನಗರ ಬಡ ಕುಟುಂಬಗಳನ್ನು ಮಿಷನ್ ಅಡಿಯಲ್ಲಿ ಒಳಗೊಂಡಿದೆ. ಆದ್ದರಿಂದ, ಹೊಸ ಮಿಷನ್ ಮೂಲಕ ಉದ್ದೇಶಿಸಲಾಗುವ ಒಟ್ಟು ವಸತಿ ಕೊರತೆ 20 ದಶಲಕ್ಷ.

ವ್ಯಾಪ್ತಿ ಮತ್ತು ಅವಧಿ

 • ಜನಗಣತಿ 2011 ರ ಪ್ರಕಾರ ಎಲ್ಲಾ 4041 ಶಾಸನಬದ್ಧ ಪಟ್ಟಣಗಳು ​​500 ಕ್ಲಾಸ್ ಐ ನಗರಗಳಲ್ಲಿ ಕೇಂದ್ರೀಕೃತವಾಗಿದ್ದು ಮೂರು ಹಂತಗಳಲ್ಲಿ ಈ ಕೆಳಕಂಡವುಗಳನ್ನು ಒಳಗೊಂಡಿದೆ:
 • ಹಂತ I (ಏಪ್ರಿಲ್ 2015 – ಮಾರ್ಚ್ 2017) ರಾಜ್ಯಗಳು / ಯು.ಟಿ.ಗಳಿಂದ 100 ನಗರಗಳನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ಆಯ್ಕೆಮಾಡುತ್ತವೆ.
 • ಹಂತ 200 (ಏಪ್ರಿಲ್ 2017 – ಮಾರ್ಚ್ 2019) ಹೆಚ್ಚುವರಿ 200 ನಗರಗಳನ್ನು ಒಳಗೊಳ್ಳಲು
 • ಹಂತ III (ಏಪ್ರಿಲ್ 2019 – ಮಾರ್ಚ್ 2022) ಉಳಿದಿರುವ ಎಲ್ಲ ನಗರಗಳನ್ನು ಒಳಗೊಳ್ಳಲು
 • ಆದಾಗ್ಯೂ ರಾಜ್ಯಗಳು / ಯು.ಟಿ.ಗಳಿಂದ ಸಂಪನ್ಮೂಲ ಬೇಡಿಕೆಯ ಬೇಡಿಕೆ ಇದ್ದಾಗ ಸಚಿವಾಲಯವು ಹಿಂದಿನ ಹಂತಗಳಲ್ಲಿ ಹೆಚ್ಚುವರಿ ನಗರಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ನಮ್ಯತೆಯನ್ನು ಹೊಂದಿರುತ್ತದೆ.

ದಿನಕ್ಕೆ ಹತ್ತು ಪ್ರಶ್ನೋತ್ತರಗಳು

1. ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನೀಡುವ ಪ್ರಸಾದವನ್ನು ಇನ್ನಷ್ಟು ರುಚಿಕರ ಮತ್ತು ಸ್ವಾದಿಷ್ಟವಾಗಿ ಭಕ್ತರಿಗೆ ದೊರಕಿಸಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದ್ದು ಯಾವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದೆ?
A. ಸಿ.ಎಫ್.ಟಿ.ಆರ್.ಐ
B. ಎಫ್.ಸಿ.ಐ
C. ಐ.ಸಿ.ಎ.ಆರ್
D. ಯಾವುದು ಅಲ್ಲ

2. ಜಗತ್ತಿನ ಅತಿ ವೇಗದ ಕ್ಷಿಪಣಿ ಯಾವುದು ?
A. ಪೃಥ್ವಿ
B. ಬ್ರಹ್ಮೋಸ್
C. ಅಗ್ನಿ
D. ನಾಗ್

3. ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಸದಸ್ಯ ರಾಷ್ಟ್ರಗಳ ಗುಂಪಿಗೆ ಯಾವುದು ಸೇರಿಲ್ಲ ?
A. ಕಜಾಕಿಸ್ತಾನ
B. ತಾಜಿಕಿಸ್ತಾನ
C. ಅಫ್ಘಾನಿಸ್ಥಾನ
D. ಉಜ್ಬೇಕಿಸ್ತಾನ

4. ಸ್ವಚ್ಛ್ ಭಾರತ್ ಇಂಟರ್ನ್ ಶಿಪ್ ನಲ್ಲಿ ಯಾರೆಲ್ಲ ಭಾಗವಹಿಸಬಹುದು ?
1. ಕಾಲೇಜು ವಿದ್ಯಾರ್ಥಿಗಳು,
2. ಎನ್ಸಿಸಿ, ಎನ್ಎಸ್ಎಸ್ ಕಾರ್ಯಕರ್ತರು
3. ನೆಹರು ಯುವ ಕೇಂದ್ರದ ವಿದ್ಯಾರ್ಥಿಗಳು
4. ವೈಯಕ್ತಿಕವಾಗಿ ಅಥವಾ ತಂಡವಾದರೆ ಗರಿಷ್ಠ 15 ಸದಸ್ಯರು
A. 1,2 ಮತ್ತು 3
B. 2,3 ಮತ್ತು 4
C. 1,3 ಮತ್ತು 4
D. 1,2,3 ಮತ್ತು 4

5. ಯಾವ ಈಶಾನ್ಯ ರಾಜ್ಯದ ಗ್ರಾಮ ‘ದೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ‘ಅಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯುವ ಮೂಲಕ ದೇಶದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಪೂರೈಸಿದಂತಾಗಿದೆ ?
A. ಮಣಿಪುರ
B. ಅಸ್ಸಾಂ
C. ಸಿಕ್ಕಿಂ
D. ತ್ರಿಪುರ

6. ಭಾರತ ದೇಶದ ರಾಜ್ಯವೊಂದರ ದೀರ್ಘಾವಧಿ ಮುಖ್ಯ ಮಂತ್ರಿ ಎಂಬ ದಾಖಲೆಯನ್ನು ಯಾರು ಮಾಡಿದರು ?
A. ಜ್ಯೋತಿ ಬಸು
B. ಪವನ್ ಕುಮಾರ್ ಚಾಮ್ಲಿಂಗ್
C. ಕರುಣಾ ನಿಧಿ
D. ಯಾರು ಅಲ್ಲ

7. ಈ ನಗರವು ಭಾರತದ ಮೊಟ್ಟಮೊದಲ ರಾಷ್ಟ್ರವ್ಯಾಪಿ ಆಹಾರ ಪುರಾತತ್ವ ಸಮ್ಮೇಳನವನ್ನು “ಆರ್ಕಿಯೊಬ್ರೊಮಾ” ಗೆ ಆತಿಥ್ಯ ವಹಿಸುತ್ತದೆ?
A. ಮುಂಬೈ
B. ದೆಹಲಿ
C. ಇಂದೋರ್
D. ಸೂರತ್

8. ಯಾವ ಭಾರತೀಯ ವಾಹಕ ನೌಕೆ ಇತ್ತೀಚೆಗೆ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (ಐಎಟಿಎ) ಯ ಸದಸ್ಯನಾಗಿ ಮಾರ್ಪಟ್ಟಿದೆ?
A. ಸ್ಪೈಸ್ ಜೆಟ್
B. ವಿಸ್ತಾರಾ
C. ಇಂಡಿಗೊ
D. ಏರ್ ಏಷ್ಯಾ

9. ಸುಪ್ರೀಂ ಕೋರ್ಟ್ (ಎಸ್ಸಿ) ಯ ನ್ಯಾಯಾಧೀಶರಾಗಿ ನೇರವಾಗಿ ಉತ್ತೇಜಿಸಲ್ಪಡುವ ಮೊದಲ ಮಹಿಳಾ ವಕೀಲ ಯಾರು?
A. ರಂಜನಾ ಪ್ರಕಾಶ್ ದೇಸಾಯಿ
B. ರುಮಾ ಪಾಲ್
C. ಇಂದು ಮಲ್ಹೋತ್ರಾ
D. ಜ್ಞಾನ್ ಸುಧಾ ಮಿಶ್ರಾ

10. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಆಲ್ ಇಂಡಿಯಾ ಆಧಾರದ ಮೇಲೆ ಲಿಕ್ವಿಡ್ ಕ್ಲೋರೀನ್ಗೆ ಮೊದಲ ಪರವಾನಗಿ ನೀಡಿದೆ. ಬಿಐಎಸ್ ಕೇಂದ್ರ ಕಾರ್ಯಾಲಯವು ಯಾವ ನಗರದಲ್ಲಿದೆ?
A. ಪುಣೆ
B. ಕಾನ್ಪುರ್
C. ಭೋಪಾಲ್
D. ಹೊಸ ದೆಹಲಿ

ಉತ್ತರಗಳು: 1.A 2.B 3.C 4.D 5.A 6.B 7.A 8.B 9.C 10.D 

Related Posts
National Current Affairs – UPSC/KAS Exams – 6th July 2018
Higher Education Financing Agency (HEFA) Context: The Cabinet Committee on Economic Affairs chaired by Prime Minister Shri Narendra Modi has approved the proposal for expanding the scope of Higher Education Financing ...
READ MORE
“27th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಐರೋಪ್ಯ ಒಕ್ಕೂಟ ಸುದ್ದಿಯಲ್ಲಿ ಏಕಿದೆ?  ಐರೋಪ್ಯ ಒಕ್ಕೂಟವನ್ನು ತೊರೆಯಲು ನಿರ್ಧರಿಸಿರುವ ಬ್ರಿಟನ್‌ನ ತೀರ್ಮಾನದ ಕುರಿತಾದ ಮಸೂದೆ, ಅನೇಕ ತಿಂಗಳ ಚೆರ್ಚೆಯ ನಂತರ ಕಾನೂನಾಗಿ ಮಾರ್ಪಟ್ಟಿದೆ. ಅಧಿಕೃತ ಘೋಷಣೆ ಮಾಡಿರುವ ಬ್ರಿಟನ್‌ ಸಂಸತ್‌ನ ಸ್ಪೀಕರ್‌ ಜಾನ್‌ ಬೆರ್ಕೋ, 1972ರ ಐರೋಪ್ಯ ಸಮುದಾಯ ಕಾಯಿದೆ ಮೂಲಕ ಒಕ್ಕೂಟದ ಸದಸ್ಯರನ್ನಾಗಿ ...
READ MORE
Everything you need to know about – “Great Canara Trail”
What is Great Canara Trail A section of the trail a 108 km route from Ulavi to Castlerock, falling within the ambit of Dandeli-Anshi Tiger Reserve is being readied, with the ...
READ MORE
Karnataka Current Affairs – KAS / KPSC Exams – 4th June 2017
Karnataka to forgo a dozen existing taxes on GST rollout With less than a month left for the nationwide rollout of the Goods and Services Tax (GST), Karnataka will forgo nearly ...
READ MORE
National Current Affairs – UPSC/KAS Exams- 10th November 2018
Government approves mechanism for sale of enemy shares Topic: Governance IN NEWS:The Union Cabinet has approved a mechanism for sale of enemy shares which at the current price is estimated at around Rs ...
READ MORE
Four new farm pests found in Karnataka
Four new plant-eating insects that may turn out to be a potential threat to agriculture in several states have been found in Karnataka. These pests, reported for the first time in ...
READ MORE
Karnataka Current Affairs – KAS/KPSC Exams – 15th & 16th July 2018
Old HMT unit premises handed over to ISRO The premises of the now-defunct HMT watch factory in Tumakuru was handed over to the Indian Space Research Organisation (ISRO) Deputy Chief Minister G. ...
READ MORE
Karnataka Current Affairs – KAS/KPSC Exams- 1st – 2nd Feb 2018
30% bonanza for State employees In a big bonus for 5.2 lakh State government employees and 5.73 lakh pensioners ahead of the polls, the 6th Pay Commission has suggested a 30% ...
READ MORE
Karnataka Current Affairs – KAS/KPSC Exams – 9th March 2018
‘RERA has registered 1,331 projects in Karnataka’ The Karnataka Real Estate Regulatory Authority (Karnataka RERA) has successfully registered 1,331 projects out of 1,982 applications in the last seven months in the ...
READ MORE
National International Current Affairs – UPSC/KAS Exams – 28th June 2018
Higher Education Commission Setting the ball rolling for major reforms in higher education, the Centre has placed in the public domain a draft Bill for a Higher Education Commission of India ...
READ MORE
National Current Affairs – UPSC/KAS Exams – 6th
“27th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Everything you need to know about – “Great
Karnataka Current Affairs – KAS / KPSC Exams
National Current Affairs – UPSC/KAS Exams- 10th November
Four new farm pests found in Karnataka
Karnataka Current Affairs – KAS/KPSC Exams – 15th
Karnataka Current Affairs – KAS/KPSC Exams- 1st –
Karnataka Current Affairs – KAS/KPSC Exams – 9th
National International Current Affairs – UPSC/KAS Exams –

Leave a Reply

Your email address will not be published. Required fields are marked *