30th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಆಸ್ತಿ ಮಾಹಿತಿ ಒದಗಿಸುವ ‘ದಿಶಾಂಕ್‌’ ಆ್ಯಪ್‌

  • ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್‌ ಹುಡುಕಬೇಕೇ? ಅದು ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ, ಆ ಜಾಗ ಸರ್ಕಾರಕ್ಕೇ ಸೇರಿದ್ದೇ,  ಗೋಮಾಳವೇ, ಅದು ಒತ್ತುವರಿ ಜಾಗವೇ ಎಂಬ ವಿವರಗಳನ್ನು ತಿಳಿದುಕೊಳ್ಳಲು ಕಂದಾಯ ಇಲಾಖೆ ಪರಿಚಯಿಸಿರುವ ‘ದಿಶಾಂಕ್‌’ ಆ್ಯಪ್‌ ನಿಮ್ಮ ನೆರವಿಗೆ ಬರಲಿದೆ.
  • ಇದನ್ನು ಬಳಸಿ ರಾಜ್ಯದಾದ್ಯಂತದ ಆಸ್ತಿಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಈ ಆ್ಯಪ್‌ ಬೆಂಗಳೂರಿನ ನಿವಾಸಿಗಳ ಪಾಲಿಗಂತೂ ಅತ್ಯಂತ ಪ್ರಯೋಜನಕಾರಿಯಾಗಿದೆ.
  • ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಇದರ ಹಿಂದೆ ಮೂರು ವರ್ಷಗಳ ಪರಿಶ್ರಮ ಅಡಗಿದೆ. ಇಷ್ಟೆಲ್ಲ ಅನುಕೂಲ ಕಲ್ಪಿಸುವ ಈ ಆ್ಯಪ್‌ ಅನ್ನು ಸರ್ಕಾರ ಇಲಾಖೆಗಳಾಗಲೀ, ಬಿಲ್ಡರ್‌ಗಳಾಗಲೀ ಅಷ್ಟಾಗಿ ಬಳಸಿಕೊಳ್ಳುತ್ತಿಲ್ಲ.
  • 1960ರಲ್ಲಿ ಭೌಗೋಳಿಕ ಪರಿಸ್ಥಿತಿ ಹೇಗಿತ್ತು ಎಂಬ ವಿವರವನ್ನು ಇದು ಒದಗಿಸುತ್ತದೆ. ಈ ಆ್ಯಪ್‌ನಲ್ಲಿರುವ ನಕಾಶೆಯನ್ನು ನೋಡಿ ಆಸ್ತಿಯ ಕುರಿತ ಮೂಲ ವಿವರಗಳನ್ನು ತಿಳಿದುಕೊಳ್ಳಬಹುದು. ಆಸ್ತಿಯು ರಾಜಕಾಲುವೆಗಳ, ಕೆರೆ ಕುಂಟೆಗಳ ಆಸುಪಾಸಿನಲ್ಲಿ ಆಸ್ತಿಯನ್ನು ಹೊಂದಿರುವವರು, ಅದು ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ ಎಂಬುದನ್ನು ಕಂಡುಕೊಳ್ಳಬಹುದು. ಒತ್ತುವರಿಯನ್ನೂ ಪತ್ತೆಹಚ್ಚಬಹುದು
  • ಇದು ಒದಗಿಸುವ ಮಾಹಿತಿಯನ್ನು ಕಾನೂನುಬದ್ಧ ದಾಖಲೆ ಎಂದು ಪರಿಗಣಿಸಲು ಬರುವುದಿಲ್ಲ. ಇದರಲ್ಲಿ ಕಾಣಿಸುವ ನಕಾಶೆ ಸಾಂಕೇತಿಕವಾದುದು. ಪ್ರತಿ ಸರ್ವೆ ನಂಬರ್‌ನ ಗಡಿರೇಖೆಗಳನ್ನು ಇದು ತೋರಿಸುತ್ತದೆ. ಇಲಾಖೆಯು 70 ಲಕ್ಷದಷ್ಟು ಸರ್ವೆನಂಬರ್‌ಗಳಿಗೆ ಸಂಬಂಧಿಸಿದ ವಿವರಗಳು ಇದರಲ್ಲಿಲಭ್ಯ  . ಇನ್ನಷ್ಟು ವಿವರವನ್ನು ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ.
  • ಮೊಬೈಲ್‌ ಫೋನ್‌ಗಳಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿ, ಸ್ಥಳದ (ಲೊಕೇಷನ್‌) ವಿವರವನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕು. ಆ ಸ್ಥಳವು ಯಾವ ಸರ್ವೆನಂಬರ್‌ನಲ್ಲಿದೆ ಎಂಬುದನ್ನು ಆ್ಯಪ್‌ ತಿಳಿಸುತ್ತದೆ. ಸರ್ವೆ ನಂಬರ್‌ ನಮೂದಿಸುವ ಮೂಲಕವು ನಿರ್ದಿಷ್ಟ ಜಾಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ಆ ಜಾಗದಲ್ಲಿ ರಸ್ತೆ ಇದೆಯೇ ಎಂಬುದನ್ನೂ ತಿಳಿದುಕೊಳ್ಳಬಹುದು
  • .ಆಸ್ತಿ ಖರೀದಿಸಲು ಮುಂದಾಗುವವರು ವ್ಯವಹಾರ ಕುದುರಿಸುವ ಮುನ್ನ ಅದರ ಕುರಿತ ವಿವರಗಳನ್ನು ಈ ಆ್ಯಪ್‌ ಮೂಲಕ ತಿಳಿದುಕೊಳ್ಳಬಹುದು. ಖಾತಾದಲ್ಲಿ ನಮೂದಿಸಿರುವ ಸರ್ವೆ ನಂಬರ್‌ ಸರಿಯಾಗಿದೆಯೇ ಎಂಬುದನ್ನೂ ಪರಿಶೀಲಿಸಬಹುದು.
  • ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಹಾಗೂ ಇತರ ಸರ್ಕಾರಿ ಇಲಾಖೆಗಳು ಬಳಸುತ್ತಿರುವ ಆ್ಯಪ್‌ಗಿಂತ ‘ದಿಶಾಂಕ್‌’ ವಿಭಿನ್ನವಾಗಿದೆ. ಅವುಗಳ ಆ್ಯಪ್‌ಗಳು ನಿವೇಶನಗಳ ಮೂಲ ಭೌಗೋಳಿಕ ವಿವರಗಳನ್ನು ಒದಗಿಸುವುದಿಲ್ಲ.
  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಎಂಆರ್‌ಡಿಎ, ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಆ್ಯಪ್‌ ಅನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸಲು ಇಲಾಖೆ ಚಿಂತನೆ ನಡೆಸಿದೆ. ಈ ಸಂಸ್ಥೆಗಳ ದತ್ತಾಂಶವನ್ನೂ ಈ ಆ್ಯಪ್‌ನಲ್ಲಿ ಅಳವಡಿಸಿ ಜನರಿಗೆ ಒಂದೇ ಆ್ಯಪ್‌ನಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದ ಎಲ್ಲ ಸೇವೆ ಸಿಗುವಂತೆ ಮಾಡುವುದು ಇಲಾಖೆಯ ಉದ್ದೇಶ.
  • ಮುಂದಿನ ಹಂತದಲ್ಲಿ, ಈ ಆ್ಯಪ್‌ನಲ್ಲಿ ಆಸ್ತಿ ಮಾಲೀಕರಿಗೆ ಸಂಬಂಧಿಸಿದ ವಿವರಗಳನ್ನೂ ಜೋಡಿಸುವ ಮೂಲಕ ಇದನ್ನು ಇನ್ನಷ್ಟು ಪ್ರಯೋಜನಕಾರಿಯನ್ನಾಗಿ ರೂಪಿಸಲು ಇಲಾಖೆ ಮುಂದಾಗಿದೆ.

ಮಾರ್ಕರ್ ಪೆನ್ ಇಲ್ಲ

  • ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಮಾರ್ಕರ್ ಪೆನ್​ಗಳ ಬಳಕೆಗೆ ಚುನಾವಣಾ ಆಯೋಗ ಆಸಕ್ತಿ ತೋರಿಲ್ಲ. ಹೀಗಾಗಿ ಹಿಂದಿನಂತೆಯೇ ಈ ಬಾರಿಯ ಚುನಾವಣೆಯಲ್ಲಿ ಅಳಿಸಲಾಗದ ಶಾಯಿಯೇ ಬಳಕೆಯಾಗಲಿದೆ.
  • ಚುನಾವಣೆಗೆ 10 ಎಂಎಲ್​ನ 1.32 ಲಕ್ಷ ಬಾಟಲಿ ಅಳಿಸಲಾಗದ ಶಾಯಿಯನ್ನು ಕಳುಹಿಸಿಕೊಡುವಂತೆ ಚುನಾವಣಾ ಆಯೋಗವು ‘ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ’ (ಮೈಲ್ಯಾಕ್)ಗೆ ನಿರ್ದೇಶಿಸಿದ್ದು, ಹತ್ತು ದಿನಗಳ ಹಿಂದೆಯೇ 1.32 ಲಕ್ಷ ಬಾಟಲಿಗಳನ್ನು ಮೈಲ್ಯಾಕ್ ಸಿದ್ಧಪಡಿಸಿಕೊಂಡಿದೆ.
  • ಇತ್ತೀಚೆಗೆ ಮೈಲ್ಯಾಕ್​ಗೆ ಭೇಟಿ ನೀಡಿದ್ದ ರಾಜ್ಯ ಚುನಾವಣಾ ಅಧಿಕಾರಿಗಳು ಮಾರ್ಕರ್ ಪೆನ್​ಗಳನ್ನು ಪರಿಶೀಲಿಸಿದ್ದರು. ಮಾರ್ಕರ್ ಪೆನ್​ಗಳ ಅನುಕೂಲ, ಅನಾನುಕೂಲಗಳನ್ನು ಅವಲೋಕಿಸಿ ಮುಂದಿನ ಚುನಾವಣೆಗಳಲ್ಲಿ ಬಳಕೆ ಮಾಡಲಾಗುವುದು ಎಂದು ಅಧೀಕಾರಿಗಳು ತಿಳಿಸಿದ್ದರು.
  • ಆದರೆ, ಇದೀಗ ಮಾರ್ಕರ್ ಪೆನ್​ಗಳಿಗಿಂತ ಅಳಿಸಲಾಗದ ಶಾಯಿ ಕಡೆಗೆ ಆಯೋಗ ಹೆಚ್ಚಿನ ಒಲವು ತೋರಿದೆ

~~~***ದಿನಕ್ಕೊಂದು ಯೋಜನೆ***~~~

ರಾಷ್ಟೀಯ ಯುವ ಸಶಕ್ತಿಕರಣ್ ಕಾರ್ಯಕ್ರಮ  (RYSK)

  • ಯುವಜನತೆಯ ಇಲಾಖೆ ಯುವಜನರ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ನಡೆಸುತ್ತಿದೆ. ಕೆಲವು ಯೋಜನೆಗಳು 10 ಕೋಟಿಗಿಂತಲೂ ಕಡಿಮೆ ವಾರ್ಷಿಕ ವಿತರಣೆಯನ್ನು ಹೊಂದಿವೆ. ಈ ಯೋಜನೆಗಳ ಪರಿಣಾಮಕಾರಿತ್ವವನ್ನು ಸುಧಾರಿಸುವ ಸಲುವಾಗಿ, ಈ ಯೋಜನೆಗಳನ್ನು ಒಂದೇ ಯೋಜನೆಯಾಗಿ ವಿಲೀನಗೊಳಿಸಲು ಅವಶ್ಯಕವೆಂದು ಪರಿಗಣಿಸಲಾಗಿದೆ, ಅದು ಇಲಾಖೆಯ ಪ್ರಮುಖ ಯೋಜನೆಯಾಗಿ ಕಾರ್ಯನಿರ್ವಹಿಸುತ್ತದೆ.
  • ಇದು ಯೋಜನೆಗಳ ನಡುವೆ ಉತ್ತಮ ಸಹಕಾರವನ್ನು ಸಾಧಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ, ಅವುಗಳ ಪರಿಣಾಮಕಾರಿತ್ವವನ್ನು ಸುಧಾರಿಸುತ್ತದೆ ಮತ್ತು ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಉತ್ತಮ ಫಲಿತಾಂಶಗಳನ್ನು ಸಾಧಿಸುವಲ್ಲಿ ಸಹಾಯ ಮಾಡುತ್ತದೆ.
  • ಯುವಜನ ಇಲಾಖೆಯು 2015-16ರವರೆಗೆ 10 ಪ್ರಮುಖ ಯೋಜನೆಗಳನ್ನು ಹೊಂದಿದ್ದು 2016-17ರ ಆರ್ಥಿಕ ವರ್ಷದಿಂದ 8 ಯೋಜನೆಗಳನ್ನು ಒಂದು ಯೋಜನೆಯ ಅಡಿಯಲ್ಲಿ ಇರಿಸಲಾಗಿದೆ ಮತ್ತು ಅಸ್ತಿತ್ವದಲ್ಲಿರುವ ಎರಡು ಯೋಜನೆಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.
  • ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಆರೋಗ್ಯ ಯೋಜನೆ (ಎನ್ಎಸ್ಎಸ್) ಮತ್ತು ರಾಜೀವ್ ಗಾಂಧಿ ನ್ಯಾಷನಲ್ ಯೂನಿಟ್ ಇನ್ಸ್ಟಿಟ್ಯೂಟ್ ಆಫ್ ಯೂತ್ ಡೆವಲಪ್ಮೆಂಟ್ (ಆರ್ಜಿಐಐಐವೈಡಿಡಿ) ಅಭಿವೃದ್ಧಿಪಡಿಸುವುದಕ್ಕಾಗಿ ಎರಡು ರಾಷ್ಟ್ರೀಯ ಯೋಜನೆಗಳಾದ ‘ರಾಷ್ಟ್ರೀಯ ಯುವ ಶಶಕ್ತಿಕರಣ್ ಕಾರ್ಯಕ್ರಮ ‘ (ಆರ್ವೈಎಸ್ಕೆ) ಎಂಬ ಹೊಸ ಯೋಜನೆಯನ್ನು ಹೊಂದಿದೆ.
  • ಅಸ್ತಿತ್ವದಲ್ಲಿರುವ ಯೋಜನೆಗಳು / ಕಾರ್ಯಕ್ರಮಗಳು ರಾಷ್ಟ್ರೀಯ ಯುವ ಶಶಕ್ತಿಕಾರಿನ್ ಕರ್ಯಾಕ್ರಾಮ್ (ಆರ್ವೈಎಸ್ಕೆ) ಯಲ್ಲಿ ಸೇರ್ಪಡೆಗೊಳ್ಳುತ್ತವೆ:
  • ನೆಹರು ಯುವ ಕೇಂದ್ರ ಸಂಘನ್ (ಎನ್ವೈಕೆಎಸ್)
  • ನ್ಯಾಷನಲ್ ಯೂತ್ ಕಾರ್ಪ್ಸ್ (ಎನ್ವೈಸಿ)
  • ಯುವ ಮತ್ತು ಹದಿಹರೆಯದ ಅಭಿವೃದ್ಧಿಗೆ ರಾಷ್ಟ್ರೀಯ ಕಾರ್ಯಕ್ರಮ (NPYAD)
  • ಅಂತರಾಷ್ಟ್ರೀಯ ಸಹಕಾರ (ಐಸಿ)
  • ಯುವ ವಸತಿಗೃಹಗಳು (YH)
  • ಸ್ಕೌಟಿಂಗ್ ಮತ್ತು ಮಾರ್ಗದರ್ಶಿ ಸಂಸ್ಥೆಗಳಿಗೆ ಸಹಾಯ
  • ರಾಷ್ಟ್ರೀಯ ಶಿಸ್ತು ಯೋಜನೆ (ಎನ್ಡಿಎಸ್)
  • ರಾಷ್ಟ್ರೀಯ ಯುವ ನಾಯಕರ ಕಾರ್ಯಕ್ರಮ (ಎನ್ವೈಎಲ್ಪಿ)
  • ‘ರಾಷ್ಟ್ರೀಯ ಯುವ ಶಶಕ್ತಿಕಾರಿನ್ (ರೈಸ್) ಕರ್ಯಾಕ್ರಾಮ್’ ಮೇಲಿನ ಎಲ್ಲಾ ಯೋಜನೆಗಳನ್ನು ಒಳಗೊಂಡಿರುತ್ತದೆ
  • ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್)
  • ರಾಜೀವ್ ಗಾಂಧಿ ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಆರ್ಜಿಎನ್ಐವೈಡಿ)

1. ಭಾರತದ ಮೊದಲ ಕೀಟ ಮ್ಯೂಸಿಯಂ ಅನ್ನು ಪ್ರಾರಂಭಿಸಿದ ರಾಜ್ಯ ಯಾವುದು?
A. ತಮಿಳುನಾಡು
B. ಕೇರಳ
C. ಪಶ್ಚಿಮ ಬಂಗಾಳ
D. ಒಡಿಶಾ

2. ಪೋಸ್ಟ್ ಇಲಾಖೆ ಭಾರತ ಮತ್ತು ಯಾವ ದೇಶದ ನಡುವೆ ಕೂಲ್ ಇಎಂಎಸ್ ಸೇವೆಯನ್ನು ಪ್ರಾರಂಭಿಸಿತು?
A. ಜಪಾನ್
B. ಚೀನಾ
C. ರಷ್ಯಾ
D. ಭೂತಾನ್

3. ಭಾಷಾ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣವನ್ನು ಅವರ ಮಾತೃಭಾಷೆಯಲ್ಲಿ ಒದಗಿಸುವಂತೆ ರಾಜ್ಯದ ಪ್ರಾಧಿಕಾರಗಳಿಗೆ ನಿರ್ದೇಶಿಸುವುದು ಅವಶ್ಯಕವೆಂದು ಕಂಡು ಬಂದರೆ ರಾಷ್ಟ್ರಪತಿಯು ನಿರ್ದೇಶಿಸಬಹುದೆಂದು ಭಾರತ ಸಂವಿಧಾನದ ಈ ಕೆಳಗಿನ ಯಾವ ವಿಧಿಯಲ್ಲಿ ತಿಳಿಸಲಾಗಿದೆ?
A. 350ಎ ವಿಧಿ
B. 350 ಬಿ ವಿಧಿ
C. 351ನೇ ವಿಧಿ
D. 349ನೇ ವಿಧಿ

4. ಇಂದಿರಾ ಗಾಂಧಿ ಆಣೆಕಟ್ಟನ್ನು ಈ ಕೆಳಗಿನ ಯಾವ ನದಿಗೆ ನಿರ್ಮಿಸಲಾಗಿದೆ?
A. ತುಂಗಭದ್ರಾ
B. ನೇತ್ರಾವತಿ
C. ಕೃಷ್ಣಾ
D. ಮಲಪ್ರಭಾ

5. ಬಾಹ್ಯಾಕಾಶಕ್ಕೆ ತೆರಳಿದ ಭಾರತೀಯ ಮೂಲದ ಕಲ್ಪನಾ ಚಾವ್ಲಾ ದುರಂತಕ್ಕೀಡಾದ ಬಾಹ್ಯಕಾಶ ನೌಕೆ ಯಾವುದು?
A. ಎಂಡೇವರ್
B. ಕೊಲಂಬಿಯಾ
C. ಅಟ್ಲಾಂಟ
D. ಚಾಲೆಂಜರ್

6. ಇವುಗಳಲ್ಲಿ ರಾಜ್ಯನೀತಿ ನಿರ್ದೇಶಕ ತತ್ವಗಳ ವ್ಯಾಪ್ತಿಗೆ ಒಳಪಡದ ವಿಷಯ ಯಾವುದು?
A. ಐತಿಹಾಸಿಕ ಪ್ರದೇಶಗಳ ಸಂರಕ್ಷಣೆ
B. ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ
C. ಜೀವನ ನಿರ್ವಹಣೆಗೆ ಪ್ರಾಥಮಿಕ ಅಗತ್ಯಗಳನ್ನು ದೊರಕಿಸಿಕೊಡುವುದು
D. ಅಸ್ಪೃಶ್ಯತೆ ನಿವಾರಣೆ

7. ಸಂದಾಯ ಬಾಕಿಯ ಅಸಮತೋಲನಗಳನ್ನು ಸರಿಪಡಿಸಲಿಕ್ಕಾಗಿ ಕೈಗೊಳ್ಳಬಹುದಾದ ಸೂಕ್ತ ವ್ಯಾಪಾರ ಕ್ರಮ ಯಾವುದು?
A. ಹಣದ ಸಂಕೋಚನ
B. ಅಪಮೌಲ್ಯೀಕರಣ
C. ವಿದೇಶಗಳಿಂದ ಸಾಲ ಎತ್ತುವುದು
D. ರಫ್ತುಗಳಿಗೆ ಪ್ರೋತ್ಸಾಹ

8. ಒಬ್ಬ ವ್ಯಕ್ತಿ ಹೊಂದಿರುವ ಸರಾಸರಿ ಹಣದ ಬಾಕಿಯು ಯಾವುದರ ಮೇಲೆ ಅವಲಂಬಿಸಿದೆ?
A. ಅರ್ಥ ವ್ಯವಸ್ಥೆಯ ಹಣಕಾಸು ನೀತಿ
B. ಅರ್ಥ ವ್ಯವಸ್ಥೆಯ ರಚನೆ
C. ಅರ್ಥ ವ್ಯವಸ್ಥೆಯ ಸಂದಾಯ ವ್ಯವಸ್ಥೆ
D. ಅರ್ಥ ವ್ಯವಸ್ಥೆಯಲ್ಲಿರುವ ಹಣದ ದಾಸ್ತಾನು

9. ಅಮರಾವತಿ, ಅರ್ಕಾವತಿ, ಭವಾನಿ, ಛ್ಹಿನ್ನರ್, ಹೇಮಾವತಿ, ಹೊನ್ನುಹೊಲೆ, ಕಬಿನಿ ಇತ್ಯಾದಿ ಕೆಳಗಿನ ನದಿಗಳ ಯಾವ ನದಿಯ ಉಪನದಿಗಳು?
A. ಕಾವೇರಿ
B. ಕೃಷ್ಣ
C. ಪೆರಿಯಾರ್
D. ನರ್ಮದಾ

10. ಈ ಕೆಳಗಿನ ಯಾರ ಸಮಾಧಿಯ ಕಳಶಕ್ಕೆ ಚಿನ್ನದ ಕವಚವನ್ನು ಹಿಡಲಾಗಿದೆ..?
A. ಅಕ್ಬರ್
B. ಷಹಜಹಾನ
C. ಹುಮಾಯುನ
D. ಜಾಹಂಗಿರ್

ಉತ್ತರಗಳು: 1.A 2.A 3.A 4.D 5.B 6.D 7.D 8.D 9.A 10.C 

Related Posts
Karnataka Current Affairs – KAS/KPSC Exams – 23rd Feb 2018
State-owned PSUs incur Rs 1,265 cr loss in FY17 Karnataka government-owned public sector companies have reported a loss of Rs 1,265.37 crore for the year ended March 2017. Out of 90 working ...
READ MORE
Health Ministry – AIIMS to set up National Death Registry
The Health Ministry in collaboration with the All India Institute of Medical Sciences (AIIMS) will start a National Death Registry for information about each and every death in hospitals across ...
READ MORE
National Current Affairs – UPSC/KAS Exams- 28th September 2018
Adultery and IPC Why in news? A five-judge Constitution Bench, led by Chief Justice of India Dipak Misra, in four separate but concurring opinions held that adultery is not a crime and ...
READ MORE
“17th  ಆಗಸ್ಟ್  2018 ಕನ್ನಡ ಪ್ರಚಲಿತ ವಿದ್ಯಮಾನ”
ರಾಷ್ಟ್ರಪತಿ ಗೌರವ ಸುದ್ಧಿಯಲ್ಲಿ ಏಕಿದೆ? ಕನ್ನಡದ ಖ್ಯಾತ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಅವರಿಗೆ 2018ನೇ ಸಾಲಿನ ರಾಷ್ಟ್ರಪತಿ ಗೌರವ ಪ್ರಶಸ್ತಿ ಸಂದಿದೆ. ಶಾಸ್ತ್ರೀಯ ಕನ್ನಡ ಭಾಷೆಯಲ್ಲಿ ಅವರು ನಡೆಸಿದ ಸಂಶೋಧನೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಶಾಸ್ತ್ರೀಯ ತೆಲುಗು, ಸಂಸ್ಕೃತ, ಪರ್ಷಿಯಾ, ಅರೇಬಿಕ್‌, ...
READ MORE
Karnataka Current Affairs – KAS / KPSC Exams – 5th July 2017
Rs. 400 crore funding for 100 innovative startups As many as 100 startups will get Rs. 400 crore funding under the Karnataka government’s Elevate programme to fast track the most innovative ...
READ MORE
Urban Development Karnataka -Successful Initiatives – BSUP
Pantharapalya slum is situated near Rajarajeshwarinagar in land of 6 A. 4 G. declared by KSDB during 2001. There are 1088 families with 6000 population belonging to different sections of the ...
READ MORE
The Karnataka Public Service Commission (KPSC) examination
The Karnataka Public Service Commission (KPSC) examination shall comprise of two stages:- (A) Preliminary Examination (Objective type) for the selection of candidates for the main examination and (B) Main Examination (written examination ...
READ MORE
NASA has started a new programme for detecting and tracking near-Earth objects (NEOs) — comets and asteroids that pass by the Earth’s orbit — to ward off any potential impact ...
READ MORE
“10th ಆಗಸ್ಟ್  2018 ಕನ್ನಡ ಪ್ರಚಲಿತ ವಿದ್ಯಮಾನ”
ಚೈಲ್ಡ್‌ ಲಾಕ್‌ ವ್ಯವಸ್ಥೆ  ಸುದ್ದಿಯಲ್ಲಿ ಏಕಿದೆ?  ಕ್ಯಾಬ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಾಹನಗಳಲ್ಲಿ ನಡೆಯುವ ಅಂತಹ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಚೈಲ್ಡ್‌ ಲಾಕ್‌ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಆ ಕುರಿತು ರಾಜ್ಯ ...
READ MORE
“2nd ಜುಲೈ  2018 ಕನ್ನಡ ಪ್ರಚಲಿತ ವಿದ್ಯಮಾನ”
ಕ್ಷಯರೋಗ ಆಂದೋಲನ ಸುದ್ದಿಯಲ್ಲಿ ಏಕಿದೆ ? ರಾಜ್ಯದಲ್ಲಿ 'ಕ್ಷಯರೋಗ'(ಟಿಬಿ) ನಿಯಂತ್ರಣಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ ಜು. 2ರಿಂದ 13ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕೈಗೊಂಡಿದೆ.  ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ'ದಡಿ ಬಿಬಿಎಂಪಿ ಸೇರಿದಂತೆ 31 ಜಿಲ್ಲೆಗಳಲ್ಲಿ ಆಂದೋಲನ ನಡೆಸಲಿದೆ. ಹನ್ನೆರಡು ದಿನಗಳ ...
READ MORE
Karnataka Current Affairs – KAS/KPSC Exams – 23rd
Health Ministry – AIIMS to set up National
National Current Affairs – UPSC/KAS Exams- 28th September
“17th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS / KPSC Exams
Urban Development Karnataka -Successful Initiatives – BSUP
The Karnataka Public Service Commission (KPSC) examination
New NASA programme to protect Earth from asteroids,
“10th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“2nd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *