“31 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ದೇವಸ್ಥಾನಕ್ಕೂ ಬಂತು ವಸ್ತ್ರ ಸಂಹಿತೆ, ಗುರುತಿನ ಚೀಟಿ

1.

ಸುದ್ಧಿಯಲ್ಲಿ ಏಕಿದೆ ?ದೇವಸ್ಥಾನಗಳಲ್ಲಿ ಪ್ರಸಾದ ದುರಂತ ಘಟನೆಗಳಿಂದ ಎಚ್ಚೆತ್ತ ಸರಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದೆ.

ಸೂಚನೆಗಳೇನು ?

 • ಪ್ರಸಾದ ತಯಾರಕರಿಂದ ಹಿಡಿದು ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಸರಕಾರ ನಿಗದಿಪಡಿಸಿದ ಮಾರ್ಗ ಸೂಚಿಯನ್ವಯ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಗುರುತಿನ ಕಾರ್ಡ್‌ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಇಲಾಖೆ ಸೂಚಿಸಿದೆ.
 • ಇಡೀ ರಾಜ್ಯಕ್ಕೆ ಅನ್ವಯ ವಾಗುವಂತೆ ಸಿಬ್ಬಂದಿ ಧರಿಸಿರುವ ವಸ್ತ್ರದ ಮೇಲೆ ನೀಲಿ ಅಥವಾ ಹಸಿರು ಬಣ್ಣದ ಕೋಟ್‌, ರಕ್ಷಣಾ ಸಿಬ್ಬಂದಿಗಳಿಗೆ ಖಾಕಿ ಸಮವಸ್ತ್ರ, ಅಡುಗೆ ತಯಾರಕರು ಕೇಸರಿ ಅಥವಾ ಬಿಳಿ ವಸ್ತ್ರ ಮತ್ತು ಟವೆಲ್‌ ಧರಿಸಬೇಕು.
 • ಸಮವಸ್ತ್ರ ಧರಿಸದವರಿಗೆ ದಿನಕ್ಕೆ 50 ರೂ. ನಂತೆ ದಂಡ ವಿಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
 • ಅಧಿಕಾರಿಗಳು ದೇವಾಲಯದ ವತಿಯಿಂದಲೇ ಪ್ರತಿ ಸಿಬ್ಬಂದಿಗೂ 2 ಜೊತೆ ಸಮವಸ್ತ್ರ ವಿತರಿಸಬೇಕು.
 • ಕೋಟಿನ ಹಿಂಭಾಗದಲ್ಲಿ ಅರ್ಧ ವೃತ್ತಾಕಾರದಲ್ಲಿ ದೇವಾಲಯದ ಹೆಸರು ಹಾಗೂ ನೌಕರರ ಹೆಸರು ನಮೂದಿಸಬೇಕು. ಸಮವಸ್ತ್ರ ಕಳೆದುಕೊಂಡಲ್ಲಿ ದೇವಾಲಯದ ನಿಧಿಯಿಂದ ಪುನಃ ನೀಡಬೇಕು. ಅದರ ವೆಚ್ಚವನ್ನು ವೇತನದಲ್ಲಿ ಕಡಿತಗೊಳಿಸುವುದು ಎಂದು ಸೂಚಿಸಿದೆ.

ಮೇಲುಸ್ತುವಾರಿ ನೇಮಕ

 • ದಾಸೋಹ ನಡೆಸುವ ದೇವಸ್ಥಾನದ ಪ್ರತಿ ಪಾಕಶಾಲೆಗೆ ಒಬ್ಬ ಮೇಲುಸ್ತುವಾರಿಯನ್ನು ನೇಮಿಸಲು ಸೂಚಿಸಲಾಗಿದ್ದು, ಪ್ರಸಾದ ತಯಾರಿಕೆ ಹಾಗೂ ವಿತರಣೆ ಸೇರಿದಂತೆ ಉಗ್ರಾಣಕ್ಕೆ ಸಂಬಂಧಿಸಿದ ಎಲ್ಲ ಹೊಣೆಯನ್ನೂ ಅವರೇ ಹೊರಬೇಕು.
 • ಅಡುಗೆ ಮನೆ. ಪಾತ್ರೆ, ದವಸಧಾನ್ಯಗಳ ಶುಚಿತ್ವ ಮೇಲೂ ನಿಗಾ ವಹಿಸಬೇಕು. ದೇವಾಲಯಗಳ ಎಲ್ಲ ಚಟುವಟಿಕೆಗಳೂ ಕಾಣುವಂತೆ ಸಿಸಿ ಟಿವಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
 • ವರ್ಷಕ್ಕೊಮ್ಮೆ ಪಾಕಶಾಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಆರೋಗ್ಯ ಕುರಿತು ವೈದ್ಯಕೀಯ ದೃಢೀಕರಣ ಪತ್ರ ಪರಿಶೀಲಿಸಬೇಕು ಎಂದು ನಿರ್ದೇಶಿಸಲಾಗಿದೆ.

ಹೊರಗಿನ ಪ್ರಸಾದ ನಿಷಿದ್ಧ

 • ದೇವಾಲಯಗಳಲ್ಲಿ ಹೊರಗಿನಿಂದ ತರಿಸಿದ ಪ್ರಸಾದ ವಿತರಣೆಗೆ ಅವಕಾಶ ನೀಡಬಾರದು. ಹರಕೆ ರೂಪದಲ್ಲಿ ಪ್ರಸಾದ ನೀಡಲು ಬಯಸುವವರು ಪ್ರಸಾದಕ್ಕೆ ಅಗತ್ಯ ಸಾಮಗ್ರಿಗಳನ್ನು ನೀಡಿದರೆ ದೇವಸ್ಥಾನದ ವತಿಯಿಂದಲೇ ತಯಾರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮಾಹಿತಿ ಸಂಗ್ರಹ

 • ದೇವಸ್ಥಾನದಲ್ಲಿ ಈ ಹಿಂದೆಯೇ ಸಿಬ್ಬಂದಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿತ್ತಾದರೂ, ಎಲ್ಲೆಡೆ ಕಡ್ಡಾಯವಾಗಿ ಪಾಲನೆ ಆಗುತ್ತಿರಲಿಲ್ಲ. ವಿಷ ಪ್ರಸಾದ ವಿತರಣೆ ಘಟನೆ ನಂತರ ಎಲ್ಲ ದೇವಾಲಯಗಳಲ್ಲೂ ಕಟ್ಟು ನಿಟ್ಟಿನ ಕ್ರಮಕ್ಕೆ ಸರಕಾರ ಮುಂದಾಗಿದೆ. ನಿಯಮ ಪಾಲನೆ ಆಗುತ್ತಿರುವ ಬಗ್ಗೆ ಎಲ್ಲಾ ದೇವಾಲಯಗಳಿಂದಲೂ ಛಾಯಾಚಿತ್ರ ಸಹಿತ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರಿನ ಪಿಲಿಕುಳ

2.

ಸುದ್ಧಿಯಲ್ಲಿ ಏಕಿದೆ ?ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಪ್ರಥಮ ಬಾರಿಗೆ ನೀರಾನೆ ಕವಿತಾಳಿಗೆ ಹುಟ್ಟಿದ ಮರಿ ನೀರಾನೆಯನ್ನು ಯಾರು ದತ್ತು ಪಡೆದುಕೊಳ್ಳುತ್ತಾರೋ ಅವರ ಹೆಸರನ್ನು ಇಡಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

 • ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಪ್ರಥಮ ಬಾರಿಗೆ ಎಂಟು ವರ್ಷದ ನೀರಾನೆ ಏಳು ದಿನಗಳ ಹಿಂದೆ ಮರಿ ಹಾಕಿದ್ದು, ತಾಯಿ ಹಾಗೂ ಮರಿ ನೀರಾನೆ ಆರೋಗ್ಯದಲ್ಲಿವೆ.
 • ಪಿಲಿಕುಳದಲ್ಲಿ ಒಂದು ಗಂಡು ಹಾಗೂ ಎರಡು ಹೆಣ್ಣು ನೀರಾನೆಗಳು ಕಳೆದೊಂದು ವರ್ಷದಿಂದ ಇದ್ದು, ಅವುಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ತರಿಸಲಾಗಿತ್ತು. ಪಿಲಿಕುಳದ ವಾತಾವರಣ ನೀರಾನೆಗಳ ಸಂತಾನೋತ್ಪತ್ತಿಗೆ ಪೂರಕವಾಗಿದೆ.
 • ಪಿಲಿಕುಳಕ್ಕೆ ಭೇಟಿ ನೀಡುವವರು ಇದೀಗ ಭಾರತೀಯ ನಾಯಿ ಧೋಲೆಯನ್ನು ಕೂಡ ನೋಡ ಬಹುದಾಗಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಇಂದಿರಾ ಗಾಂಧಿ ಜೈವಿಕ ಉದ್ಯಾನದಿಂದ ನಾಲ್ಕು ಧೋಲೆಗಳನ್ನು ತರಿಸಲಾಗಿದೆ. ಭಾರತದಲ್ಲಿ ಅತ್ಯಂತ ವಿರಳವಾಗಿರುವ ಈ ಜಾತಿಯ ನಾಯಿಗಳನ್ನು ಇಲ್ಲಿಯ ತನಕ ಪಿಳಿಕುಳದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು.
 • ಪಿಲಿಕುಳಕ್ಕೆ ಈ ವರ್ಷ ಪ್ರಾಣಿ ವಿನಿಮಯ ಕಾರ್ಯಕ್ರಮದನ್ವಯ ಕಾಡೆಮ್ಮೆ, ಬಿಳಿ ಹುಲಿ ಹಾಗೂ ಕತ್ತೆ ಕಿರುಬಗಳು ಆಗಮಿಸಲಿವೆ ಎನ್ನುತ್ತಾರೆ ಪಿಲಿಕುಳದ ಅಧಿಕಾರಿಗಳು.
 • ನಿಸರ್ಗಧಾಮಕ್ಕೆ ಭೇಟಿ ನೀಡುವವರು ಪ್ರಾಣಿಗಳಿಗೆ ತೊಂದರೆ ಸೃಷ್ಟಿಸದಂತೆ ನೋಡಿಕೊಳ್ಳಲು ಹಾಗೂ ಸಂದರ್ಶಕರ ಚಲನವಲನಗಳ ಮೇಲೆ ನಿಗಾ ಇಡಲು ಉದ್ಯಾನದಲ್ಲಿಗ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
 • ಪ್ರಾಣಿಗಳಿಗೆ ನೀಡಲಾಗುವ ಆಹಾರದ ಮೇಲೂ ನಿಗಾ ಇಡಲು ಪ್ರಾಣಿಗಳನ್ನಿಡುವ ಸ್ಥಳಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಆದರೆ ಇದಕ್ಕೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ ಅನುಮೋದನೆ ಅಗತ್ಯವಿದೆ.

ಕನಿಷ್ಠ ಆದಾಯ ಖಾತ್ರಿ:

3.

ಸುದ್ಧಿಯಲ್ಲಿ ಏಕಿದೆ ?ತಮ್ಮ ಪಕ್ಷಕ್ಕೆ ಮತ್ತೆ ಅಧಿಕಾರ ನೀಡಿದರೆ ದೇಶದ ಎಲ್ಲ ಬಡವರಿಗೂ ಕನಿಷ್ಠ ಮಾಸಿಕ ಆದಾಯವನ್ನು ಖಾತ್ರಿಪಡಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.

ಯುನಿವರ್ಸಲ್ ಬೇಸಿಕ್ ಇನ್ಕಮ್ (ಯುಬಿಐ) ಎಂದರೇನು?

 • ಯುನಿವರ್ಸಲ್ ಮೂಲ ಆದಾಯವು ದೇಶದಲ್ಲಿನ ಪ್ರತಿಯೊಬ್ಬ ನಾಗರಿಕರಿಗೆ ಆವರ್ತಕ, ಬೇಷರತ್ತಾದ ನಗದು ವರ್ಗಾವಣೆಯಾಗಿದೆ.
 • ಇಲ್ಲಿ, ವ್ಯಕ್ತಿಯ ಸಾಮಾಜಿಕ ಅಥವಾ ಆರ್ಥಿಕ ಸ್ಥಾನಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
 • ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯು ಮೂರು ಪ್ರಮುಖ ಲಕ್ಷಣಗಳನ್ನು ಹೊಂದಿದೆ. ಅವಗಳು ಈ ಕೆಳಗಿನಂತಿವೆ:
 • ಯುಬಿಐ ಪ್ರಕೃತಿಯಲ್ಲಿ ಸಾರ್ವತ್ರಿಕವಾಗಿದೆ. ಇದರರ್ಥ ಯುಬಿಐ ಅನ್ನು ಗುರಿಪಡಿಸಲಾಗಿಲ್ಲ.
 • UBI ಯ ಎರಡನೆಯ ವೈಶಿಷ್ಟ್ಯವೆಂದರೆ ವಸ್ತುಗಳ -ರೀತಿಯ ವರ್ಗಾವಣೆಯ ಬದಲು ನಗದು ವರ್ಗಾವಣೆಯಾಗಿದೆ.
 • ಮೂರನೆಯ ವೈಶಿಷ್ಟ್ಯವೆಂದರೆ UBI ಯು ಷರತ್ತುಬದ್ಧವಾಗಿದೆ. ಅದರರ್ಥ ಅವನ ಅಥವಾ ಅವಳ ನಿರುದ್ಯೋಗ ಸ್ಥಿತಿ ಅಥವಾ ಸಾಮಾಜಿಕ-ಆರ್ಥಿಕ ಗುರುತನ್ನು UBI ಗೆ ಅರ್ಹತೆ ಎಂದು ಸಾಬೀತು ಮಾಡುವ ಅವಶ್ಯಕತೆ ಇರುವುದಿಲ್ಲ

ಯಾರಿಗೆ ಲಭ್ಯ, ಯಾವುದಕ್ಕೆ ಲಭ್ಯ?

 • ಭಾರತೀಯರು ಸರಕಾರದಿಂದ ಕನಿಷ್ಠ ಆದಾಯ ಪಡೆಯುವುದು ಹೇಗೆ ಎಂಬ ಬಗ್ಗೆ ಕೆಲವು ಅರ್ಥಶಾಸ್ತ್ರಜ್ಞರು ಇತ್ತೀಚೆಗೆ ಕೆಲವು ಪರಿಹಾರಗಳನ್ನು ಸೂಚಿಸಿದ್ದಾರೆ. ಅಂತಹ 6 ಪ್ರಸ್ತಾವಗಳ ಪೈಕಿ ನಾಲ್ಕು ಪ್ರಸ್ತಾವಗಳು ಎಲ್ಲರನ್ನೂ ಒಳಗೊಳ್ಳುವಂಥದ್ದಾಗಿದ್ದರೆ, ಎರಡು ಪ್ರಸ್ತಾವಗಳು ನಿರ್ದಿಷ್ಟ ವರ್ಗಗಳಿಗೆ ಸೀಮಿತವಾಗಿವೆ.

ಕನಿಷ್ಠ ಆದಾಯ ಒದಗಿಸಬೇಕೆ ಅಥವಾ ಬೇಡವೆ?

 • ಕನಿಷ್ಠ ಆದಾಯ ಖಾತರಿ ಜಾರಿಗೊಳಿಸುವಲ್ಲಿ ಹಲವು ಲಾಭ-ನಷ್ಟಗಳು ಇದ್ದೇ ಇವೆ.

ಲಾಭಗಳು:

 1. ಬಡತನ ಮತ್ತು ದುರ್ಬಲತೆ ಗಣನೀಯವಾಗಿ ಇಳಿಕೆಯಾಗುತ್ತದೆ.
 2. ಎಲ್ಲ ನಾಗರಿಕರನ್ನೂ ಯೋಜನೆಗೆ ಒಳಪಡಿಸಿದರೆ ಬಡವರು ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಶೂನ್ಯವಾಗಿರುತ್ತದೆ. ಆದರೆ ಶ್ರೀಮಂತರು ಲಾಭ ಪಡೆಯುವ ಸಾಧ್ಯತೆ ಶೇ 60ರಷ್ಟಿರುತ್ತದೆ.
 3. ಇದು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸೇರ್ಪಡೆಗೆ ನೆರವಾಗುತ್ತದೆ. ಬ್ಯಾಂಕ್ ಖಾತೆಗಳನ್ನು ಜನರು ಬಳಸಲಾರಂಭಿಸುತ್ತಾರೆ. ಹಣದ ವರ್ಗಾವಣೆ ಹೆಚ್ಚು ಹೆಚ್ಚು ನಡೆಯುತ್ತದೆ. ಇದರಿಂದ ಬ್ಯಾಂಕುಗಳಿಗೂ ಹೆಚ್ಚಿನ ಲಾಭವಾಗುತ್ತದೆ. ಆದಾಯ ಹೆಚ್ಚಳದೊಂದಿಗೆ ಸಾಲ ಪಡೆಯುವ ಸಾಮರ್ಥ್ಯವೂ ಹೆಚ್ಚುತ್ತದೆ.
 4. ಆಡಳಿತಾತ್ಮಕ ದಕ್ಷತೆ ಹೆಚ್ಚುತ್ತದೆ.
 5. ಖಾತ್ರಿಯಾದ ಆದಾಯದಿಂದ ದೈನಂದಿನ ಜೀವನದ ಮೇಲಿನ ಒತ್ತಡ ತಗ್ಗುತ್ತದೆ.

ದೋಷಗಳು:

 1. ಸಂಶಯಾಸ್ಪದ ಖರ್ಚಿನ ಪ್ರವೃತ್ತಿ ಹೆಚ್ಚಬಹುದು. ಮನೆ ಖರ್ಚಿನ ಹೆಸರಲ್ಲಿ, ನಿರ್ದಿಷ್ಟವಾಗಿ ಪುರುಷ ಸದಸ್ಯರು ಅನಗತ್ಯ ಖರ್ಚು ಮಾಡಬಹುದು.
 2. ದುಡಿಯದಿದ್ದರೂ ಆದಾಯ ಬರುತ್ತದೆ ಎಂದಾದರೆ ಕಾರ್ಮಿಕ ಮಾರುಕಟ್ಟೆ ಕುಸಿಯಬಹುದು.
 3. ಖಾತ್ರಿಯಾದ ಆದಾಯವು ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಿಸಬಹುದು.
 4. ಯೋಜನೆ ಒಮ್ಮೆ ಜಾರಿಯಾಗಿಬಿಟ್ಟರೆ ನಂತರ ಕಾರ್ಯಯೋಗ್ಯವಲ್ಲ ಎನಿಸಿದರೂ ಸರಕಾರಕ್ಕೆ ಹಿಂತೆಗೆದುಕೊಳ್ಳಲು ಕಷ್ಟವಾಗಬಹುದು.
 5. ಪ್ರಾಥಮಿಕ ಆದಾಯ ಯೋಜನೆ ಲಿಂಗ ತಾರತಮ್ಯಕ್ಕೆ ಕಾರಣವಾಗಬಹುದು. ಖಾತ್ರಿಯಾಗಿ ಕೈಸೇರುವ ಆದಾಯವನ್ನು ವೆಚ್ಚ ಮಾಡುವಾಗ ಪುರುಷರು ಹೆಚ್ಚಿನ ನಿಯಂತ್ರಣ ಸಾಧಿಸಬಹುದು.

ಆರ್ಥಿಕ ಬೆಳವಣಿಗೆ, ಅಂತ್ಯೋದಯದ ಕನಸು

4.

 • ವಿಶ್ವದಲ್ಲೇ ವೇಗದ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುತ್ತಿರುವ ರಾಷ್ಟ್ರಗಳಲ್ಲೊಂದಾಗಿರುವ ಭಾರತದಲ್ಲಿ ಈಗಲೂ ಕೋಟ್ಯಂತರ ಮಂದಿ ಬಡವರಿದ್ದಾರೆ ಎನ್ನುವುದೂ ವಾಸ್ತವ. ಆದರೆ ನೆಮ್ಮದಿಯ ಸಂಗತಿ ಏನೆಂದರೆ, ಇತ್ತೀಚಿನ ವರ್ಷಗಳಲ್ಲಿ ದೇಶ ಸದ್ದಿಲ್ಲದೆ ಬಡತನ ನಿರ್ಮೂಲನೆಯಲ್ಲಿ ದಾಪುಗಾಲಿಕ್ಕಿದೆ.
 • ಕಡು ಬಡತನದ ದವಡೆಯಿಂದ ಪಾರಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ವಿಶ್ವಬ್ಯಾಂಕ್‌ ವರದಿ ಹೇಳಿದೆ.
 • ಇನ್ನು ಹತ್ತೇ ವರ್ಷದಲ್ಲಿ ಭಾರತ ಬಡತನ ಮುಕ್ತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎನ್ನುತ್ತವೆ ಕೆಲ ಅಂತಾರಾಷ್ಟ್ರೀಯ ಸಂಶೋಧನೆಗಳು. ಐಎಂಎಫ್‌, ವಿಶ್ವಬ್ಯಾಂಕ್‌, ಮೂಡೀಸ್‌ ಇತ್ಯಾದಿ ಜಾಗತಿಕ ಸಂಸ್ಥೆಗಳೂ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಪದೇಪದೆ ಭರವಸೆ ವ್ಯಕ್ತಪಡಿಸಿವೆ.
 • ವಿಶ್ವದ ಜನಸಂಖ್ಯೆಯನ್ನು ತೋರಿಸುವ, ‘ವರ್ಲ್ಡ್‌ ಪಾಪ್ಯುಲೇಷನ್‌ ಕ್ಲಾಕ್‌ ಪ್ರತಿ ಸೆಕೆಂಡ್‌ಗೂ ಏರುತ್ತಿದೆ. ಇದೇ ರೀತಿ ವಿಶ್ವದ ಕಡುಬಡವರ ಸಂಖ್ಯೆಯನ್ನು ತೋರಿಸುವ ವರ್ಲ್ಡ್‌ ಪವರ್ಟಿ ಕ್ಲಾಕ್‌ಅನ್ನು ವಿಯೆನ್ನಾ ಮೂಲದ ವರ್ಲ್ಡ್‌ ಡೇಟಾ ಲ್ಯಾಬ್‌ ಎಂಬ ಎನ್‌ಜಿಒ ಪ್ರಕಟಿಸುತ್ತದೆ.
 • ವಿಶ್ವಸಂಸ್ಥೆ, ವಿಶ್ವಬ್ಯಾಂಕ್‌, ಐಎಂಎಫ್‌ ಇತ್ಯಾದಿ ಪ್ರತಿಷ್ಠಿತ ಸಂಸ್ಥೆಗಳು ಪ್ರತಿಯೊಂದು ರಾಷ್ಟ್ರಗಳಿಂದ ಪಡೆಯುವ ಅಂಕಿ ಅಂಶಗಳನ್ನು ಆಧರಿಸಿ ಪರಿಷ್ಕೃತ ವಿವರಗಳನ್ನು ಒದಗಿಸುತ್ತದೆ.
 • ಈ ವರ್ಲ್ಡ್‌ ಡೇಟಾ ಲ್ಯಾಬ್‌ ಮತ್ತು ಅಮೆರಿಕದ ಸಂಶೋಧನಾ ಗ್ರೂಪ್‌ ಬ್ರೂಕಿಂಗ್ಸ್‌ ಮತ್ತು ವಿಶ್ವ ಬ್ಯಾಂಕ್‌ ಸಮೂಹದ ವರದಿಗಳೂ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಡು ಬಡತನ ತ್ವರಿತವಾಗಿ ಕಡಿಮೆಯಾಗುತ್ತಿದೆ ಎಂದು ಸಾರಿವೆ.

ಅಂತ್ಯೋದಯದ ಯುಗ:

 • ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಚಿಂತನೆಗಳಲ್ಲಿ ‘ಅಂತ್ಯೋದಯ’ ಎಂಬ ಆರ್ಥಿಕ ಚಿಂತನೆಯೂ ಪ್ರಮುಖ.
 • ಯಾವುದೇ ಆರ್ಥಿಕ ನೀತಿಯ ಯಶಸ್ಸೂ ಉಳ್ಳವರ ಪ್ರಗತಿಯನ್ನು ಅವಲಂಬಿಸಿ ಇರಕೂಡದು. ಸಮಾಜದ ಕಟ್ಟಕಡೆಯ ಬಡವರ ಕಲ್ಯಾಣವನ್ನು ಆಧರಿಸಿರಬೇಕು. ಕ್ಯಾಪಿಟಲಿಸ್ಟ್‌ ಅಥವಾ ಕಮ್ಯುನಿಸ್ಟ್‌ ಎರಡೂ ಸಿದ್ಧಾಂತಗಳ ವ್ಯವಸ್ಥೆಗಳು ಮನುಷ್ಯನನ್ನು ಸಮಗ್ರ ವ್ಯಕ್ತಿಯಾಗಿ ಪರಿಗಣಿಸುವಲ್ಲಿ ವಿಫಲವಾಗಿವೆ. ಆರ್ಥಿಕ ಬೆಳವಣಿಗೆಯು ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿಕೊಡಬೇಕು ಎಂದಿದ್ದರು ಅವರು.

ಅಂತ್ಯೋದಯ ಆಶಯಗಳಿಗೆ ಪೂರಕವಾಗಿರುವ ಕೆಲವು ಯೋಜನೆಗಳು

 • 2014ರಿಂದೀಚೆಗೆ ಕೇಂದ್ರ ಸರಕಾರ ಜಾರಿಗೊಳಿಸಿರುವ ಉಜ್ವಲ (ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ), ಪ್ರಧಾನಮಂತ್ರಿ ಜನ್‌ ಔಷಧಿ ಯೋಜನೆ, ಮುದ್ರಾ, ಜನ್‌ಧನ್‌, ದೀನ ದಯಾಳ್‌ ಗ್ರಾಮಜ್ಯೋತಿ, ಸುಕನ್ಯಾ ಸಮೃದ್ಧಿ, ಪ್ರಧಾನಮಂತ್ರಿ ಆವಾಸ್‌ ಯೋಜನೆ, ಉಡಾನ್‌, ನರೇಗಾ ಅನುದಾನ ಗಣನೀಯ ಹೆಚ್ಚಳ, ಆಯುಷ್ಮಾನ್‌ ಭಾರತ್‌, ಸ್ವಚ್ಛ ಭಾರತ, ಡಿಜಿಟಲ್‌ ಇಂಡಿಯಾ, ಅಟಲ್‌ ಪಿಂಚಣಿ, ಆರ್ಥಿಕವಾಗಿ ದುರ್ಬಲರಿಗೆ ಸರಕಾರಿ ಉದ್ಯೋಗದಲ್ಲಿ ಶೇ.10 ಮೀಸಲು ಇತ್ಯಾದಿ ಯೋಜನೆಗಳೆಲ್ಲವೂ ಬಡವರಿಗೆ ನೆರವೀಯುವ ಅಂತ್ಯೋದಯದ ಆಶಯವನ್ನು ಒಳಗೊಂಡಿವೆ.

ಟಾಪ್‌ 10 ಜನಪ್ರಿಯ ಯೋಜನೆಗಳು

 1. ಉಜ್ವಲ ಯೋಜನೆ: ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ (ಎಲ್ಪಿಜಿ ) ಸಂಪರ್ಕ ಪಡೆದ ಬಡ ಕುಟುಂಬಗಳ ಸಂಖ್ಯೆ : 6,24,95,742
 • ಯೋಜನೆ ಜಾರಿಯಲ್ಲಿರುವ ಜಿಲ್ಲೆಗಳು : 715
 • ಕರ್ನಾಟಕದಲ್ಲಿ ಉಜ್ವಲ ಅಡಿ ಎಲ್ಪಿಜಿ ಸಂಪರ್ಕ ಪಡೆದ ಕುಟುಂಬಗಳು : 20,46,409
 • ಉಜ್ವಲದಲ್ಲಿ ಉಚಿತವಾಗಿ ವಿತರಿಸಿದ ಎಲ್ಪಿಜಿ ಸ್ಟೌವ್‌ಗಳು: 5 ಕೋಟಿಗೂ ಹೆಚ್ಚು
 1. ಪ್ರಧಾನಮಂತ್ರಿ ಜನ್‌ ಔಷಧಿ ಯೋಜನೆ : ಜನತೆಗೆ ಅಗ್ಗದ ಬೆಲೆಗೆ ಔಷಧಗಳನ್ನು ಒದಗಿಸುವ ಈ ಯೋಜನೆಯಡಿಯಲ್ಲಿ ತೆರೆದಿರುವ ಪಿಎಂಬಿಜೆಪಿ ಕೇಂದ್ರಗಳು: 4,844
 • ವಿತರಣೆಯಾಗುತ್ತಿರುವ ಜೆನರಿಕ್‌ ಔಷಧಗಳು : 700ಕ್ಕೂ ಹೆಚ್ಚು
 • 2018ರ ಡಿಸೆಂಬರ್‌ ಅಂತ್ಯಕ್ಕೆ ಮಾರಾಟವಾದ ಜೆನರಿಕ್‌ ಔಷಧಗಳ ಮೌಲ್ಯ : 417 ಕೋಟಿ ರೂ.
 1. ಮುದ್ರಾ : ಮುದ್ರಾ ಯೋಜನೆಯಡಿಯಲ್ಲಿ ಸ್ವ ಉದ್ಯೋಗಿಗಳು, ವರ್ತಕರು ಹಾಗೂ ಸಣ್ಣ ಉದ್ದಿಮೆದಾರರಿಗೆ 10 ಲಕ್ಷ ರೂ. ತನಕ ಜಾಮೀನು ಭದ್ರತೆಯ ಅಗತ್ಯ ಇಲ್ಲದೆ ಸಾಲ ಸೌಲಭ್ಯ.
 • 2015ರಲ್ಲಿ ಆರಂಭವಾದ ಯೋಜನೆಯಡಿ ಇದುವರೆಗೆ ವಿತರಣೆಯಾದ ಸಾಲ: 82 ಲಕ್ಷ ಕೋಟಿ ರೂ.
 1. ಜನ್‌ ಧನ್‌ : 2014ರಲ್ಲಿ ಜಾರಿಯಾದ ಜನ್‌ ಧನ್‌ ಅಡಿಯಲ್ಲಿ 18ರಿಂದ 65 ವರ್ಷ ವಯಸ್ಸಿನ ಜನ ಬ್ಯಾಂಕ್‌ ಖಾತೆ ತೆರೆಯಬಹುದು.
 • ಉದ್ಘಾಟನೆಯ ದಿನವೇ 5 ಕೋಟಿ ಮಂದಿ ಖಾತೆ ತೆರೆದಿದ್ದರು. ಎಲ್ಲರಿಗೂ ಬ್ಯಾಂಕಿಂಗ್‌ ಸೇವೆ ಒದಗಿಸುವುದು ಇದರ ಮುಖ್ಯ ಉದ್ದೇಶ.
 • ಜನ್‌ ಧನ್‌ನಲ್ಲಿ ಇದುವರೆಗೆ ತೆರೆಯಲಾಗಿರುವ ಖಾತೆಗಳು: 03 ಕೋಟಿ
 • ಖಾತೆಯಲ್ಲಿರುವ ಬ್ಯಾಲೆನ್ಸ್‌ : 88,567 ಕೋಟಿ ರೂ.
 1. ದೀನ್‌ ದಯಾಳ್‌ ಗ್ರಾಮಜ್ಯೋತಿ : ಭಾರತದ ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ದೀನ್‌ ದಯಾಳ್‌ ಗ್ರಾಮಜ್ಯೋತಿ ಯಶಸ್ವಿಯಾಗಿದ್ದು, ಈ ವರ್ಷ ಭಾರತದ ಎಲ್ಲ ಗ್ರಾಮಗಳೂ ವಿದ್ಯುತ್‌ ಸಂಪರ್ಕ ಪಡೆದಂತಾಗಿದೆ.
 • ವಿದ್ಯುತ್‌ ಸಂಪರ್ಕ ಪಡೆದಿರುವ ಭಾರತದ ಗ್ರಾಮಗಳು: 597,464
 1. ಸುಕನ್ಯಾ ಸಮೃದ್ಧಿ ಯೋಜನೆ : ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ವಿಶೇಷವಾಗಿ ರೂಪಿಸಿರುವ ಸುಕನ್ಯಾ ಸಮೃದ್ಧಿ ಸಣ್ಣ ಉಳಿತಾಯ ಯೋಜನೆಯಡಿಯಲ್ಲಿ 2018ರ ಜೂನ್‌ 30ರ ತನಕ ತೆರೆಯಲಾಗಿರುವ ಖಾತೆಗಳು : 1,39,00,000
 • ವಾರ್ಷಿಕ ಕನಿಷ್ಠ ಹೂಡಿಕೆ : 250 ರೂ.
 • ಠೇವಣಿದಾರರಿಗೆ ಸಿಗುವ ಬಡ್ಡಿ ದರ: ಶೇ.5
 1. ಪ್ರಧಾನಮಂತ್ರಿ ಆವಾಸ್‌ ಯೋಜನೆ : ದೇಶದಲ್ಲಿ 2022ರೊಳಗೆ 1 ಕೋಟಿ ಮನೆಗಳ ನಿರ್ಮಾಣಕ್ಕೆ ಸಹಕರಿಸುವ ಉದ್ದೇಶ ಹೊಂದಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿಯಲ್ಲಿ ವಾರ್ಷಿಕ 18 ಲಕ್ಷ ರೂ. ತನಕ ಆದಾಯ ಇರುವವರೂ ಗೃಹ ಸಾಲಕ್ಕೆ ಬಡ್ಡಿ ಸಬ್ಸಿಡಿ ಪಡೆಯಬಹುದು.
 • ಗೃಹ ಸಾಲದಲ್ಲಿ ಪಡೆಯಬಹುದಾದ ಲಾಭ: 67 ಲಕ್ಷ ರೂ.
 • 2018ರ ಡಿಸೆಂಬರ್‌ ತನಕ ಫಲಾನುಭವಿಗಳು: 39 ಲಕ್ಷ
 • ಸಬ್ಸಿಡಿಗೆ ಬಿಡುಗಡೆಯಾದ ಮೊತ್ತ: 7,543 ಕೋಟಿ ರೂ.
 1. ಉಡಾನ್‌ : ದೇಶದ ಸಾಮಾನ್ಯ ಪ್ರಜೆಗೂ ವಿಮಾನ ಯಾನ ಸೇವೆ ಕೈಗೆಟುಕಬೇಕೆಂಬ ಗುರಿಯೊಂದಿಗೆ 2017ರಲ್ಲಿ ಜಾರಿಯಾದ ಯೋಜನೆ ಉಡಾನ್‌.
 • 425ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಇದರ ವ್ಯಾಪ್ತಿಯಲ್ಲಿದ್ದು, ಅಗ್ಗದ ದರದಲ್ಲಿ ಜನತೆ ವಿಮಾನ ಪ್ರಯಾಣ ಮಾಡಬಹುದು.
 • ಉಡಾನ್‌ ಮಾರ್ಗದಲ್ಲಿ ಪ್ರತಿ ಗಂಟೆಗೆ 2,500 ರೂ. ಏರ್‌ ಟಿಕೆಟ್‌ ದರದ ಮಿತಿಯನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಜನತೆಗೆ ಅನುಕೂಲಕರವಾಗಿದೆ.
 • ಪ್ರಾದೇಶಿಕ ವಿಮಾನಯಾನ ಅಭಿವೃದ್ಧಿಗೆ ಇದು ಸಹಕಾರಿ.
 1. ನರೇಗಾಗೆ ದಾಖಲೆಯ ನೆರವು : ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಖಾತರಿಯನ್ನು ಕಲ್ಪಿಸುವ ನರೇಗಾ ಯೋಜನೆಗೆ ಕೇಂದ್ರ ಸರಕಾರ 2018-19ರ ಸಾಲಿನಲ್ಲಿ ದಾಖಲೆಯ 61,084 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
 • ನರೇಗಾಗೆ ವರ್ಷವೊಂದರಲ್ಲಿ ಲಭಿಸಿದ ಗರಿಷ್ಠ ಹಣ ಇದಾಗಿದೆ.
 • ಭಾರತದ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಇದು ಗಮನಾರ್ಹ.
 1. ಆಯುಷ್ಮಾನ್‌ ಭಾರತ್‌ : ದೇಶದ 10 ಕೋಟಿ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ತನಕ ವೈದ್ಯಕೀಯ ವೆಚ್ಚವನ್ನು ಉಚಿತವಾಗಿ ಭರಿಸುವ ಆರೋಗ್ಯ ಯೋಜನೆ ಇದು.
 • ಕರ್ನಾಟಕದಲ್ಲಿ ಯೋಜನೆಯ ಲಾಭ ಪಡೆಯಲಿರುವ ಕುಟುಂಬಗಳು : 62 ಲಕ್ಷ
 • ರಾಜ್ಯದಲ್ಲಿ ಎರಡು ತಿಂಗಳುಗಳಲ್ಲಿ ಪ್ರಯೋಜನ ಪಡೆದವರು : 28,728

ಐತಿಹಾಸಿಕ ಸುಧಾರಣಾ ನೀತಿಗಳು

 1. ಜಿಎಸ್‌ಟಿ: ಸ್ವತಂತ್ರ ಭಾರತದ ಅತಿ ದೊಡ್ಡ ಪರೋಕ್ಷ ತೆರಿಗೆ ನೀತಿ ಸುಧಾರಣೆ ಎಂದು ಪರಿಗಣನೆಯಾಗಿರುವ ಸರಕು ಮತ್ತು ಸೇವೆ ತೆರಿಗೆಯಿಂದ ದೇಶ ವ್ಯಾಪಿ ಏಕರೂಪದ ತೆರಿಗೆ ಹಾಗೂ ಮಾರುಕಟ್ಟೆ ನಿರ್ಮಾಣವಾಗಿದೆ.
 • ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ, ಹೊಸ ತೆರಿಗೆದಾರರ ಹೆಚ್ಚಳದ ಸಕಾರಾತ್ಮಕ ಪರಿಣಾಮ ಈಗಾಗಲೇ ಕಾಣಿಸಿದೆ. ಇದರ ಪರಿಣಾಮ ನೂರಾರು ವಸ್ತುಗಳ ತೆರಿಗೆ ದರವೂ ಇಳಿಕೆಯಾಗಿದ್ದು, ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
 1. ನೋಟು ಅಮಾನ್ಯತೆ: ನೋಟು ಅಮಾನ್ಯತೆಯಿಂದ ಕಪ್ಪುಹಣದ ಮೇಲೆ ಪ್ರಹಾರ ಆಗಿರುವುದು ನಿಜ. 10,000ಕ್ಕೂ ಅಧಿಕ ಮಂದಿಯ ಆದಾಯ ಮೂಲ ವಿವರವನ್ನು ಕೋರಿ ಐಟಿ ಇಲಾಖೆ ನೋಟಿಸ್‌ ಕಳುಹಿಸಿತ್ತು.
 • ಇದರ ತನಿಖೆ ಮುಂದುವರಿದಿದೆ. ಡಿಜಿಟಲ್‌ ವರ್ಗಾವಣೆಯೂ ಏರಿಕೆಯಾಗಿದೆ.
 1. ದಿವಾಳಿ ಪ್ರಕ್ರಿಯೆಯ ನೀತಿ (ಐಬಿಸಿ): ಕಾರ್ಪೊರೇಟ್‌ ವಲಯದ ದಿಗ್ಗಜ ಕಂಪನಿಗಳು ಪಡೆದ ಸಾಲ ಹಿಂತಿರುಗಿಸಲು ವಿಫಲವಾದಾಗ ನಿರ್ದಿಷ್ಟ ಕಾನೂನಿನ ಕೊರತೆಯಿಂದ ಸಾಲ ಮರು ವಸೂಲು, ಆಸ್ತಿ ಜಪ್ತಿ ಹಾಗೂ ದಿವಾಳಿ ಪ್ರಕ್ರಿಯೆ ವಿಳಂಬವಾಗಿ ಬ್ಯಾಂಕ್‌ಗಳ ಎನ್‌ಪಿಎ ಭಾರಿ ಏರುತ್ತಿತ್ತು.
 • ಆದರೆ ನೂತನ ದಿವಾಳಿ ಕಾಯಿದೆ (ಐಬಿಸಿ) ಜಾರಿಯಾದ ನಂತರ ಈಗ ಕಾರ್ಪೊರೇಟ್‌ ಕಂಪನಿಗಳ ದಿವಾಳಿ ಪ್ರಕ್ರಿಯೆ ಚುರುಕಾಗಿದೆ.
 1. ವಿತ್ತಾಪರಾಧಿಗಳ ವಿರುದ್ಧ ಕಠಿಣ ಕಾನೂನು: ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಮುಂತಾದ ವಿತ್ತಾಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು, ಕಳೆದ ವರ್ಷ ಅಂಗೀಕಾರವಾದ ವಿತ್ತಾಪರಾಧಿಗಳ ಕಾಯಿದೆ 2018 ನೆರವಾಗುತ್ತಿದೆ.

ಬಿಸಿನೆಸ್‌ ಸ್ನೇಹಿ ರಾಯಂಕಿಂಗ್‌ 77ಕ್ಕೆ ಜಿಗಿತ!

 • ಭಾರತ 2014ರಲ್ಲಿ ವಿಶ್ವಬ್ಯಾಂಕ್‌ನ ಉದ್ಯಮಸ್ನೇಹಿ ರಾಷ್ಟ್ರಗಳ ರಾರ‍ಯಂಕಿಂಗ್‌ನಲ್ಲಿ 134ನೇ ಸ್ಥಾನದಲ್ಲಿತ್ತು. ಆದರೆ 2018ರಲ್ಲಿ 77ಕ್ಕೆ ಜಿಗಿದಿದೆ! ಮೇಕ್‌ ಇನ್‌ ಇಂಡಿಯಾದಂಥ ಸುಧಾರಣಾ ನೀತಿಗಳ ಫಲಶ್ರುತಿ ಇದು.

ಹೆಚ್ಚು ವಿದೇಶಿ ನೇರ ಹೂಡಿಕೆ ಗಳಿಸಿದ ಕ್ಷೇತ್ರಗಳು

 • ಉತ್ಪಾದನೆ, ದೂರಸಂಪರ್ಕ, ರಿಟೇಲ್‌ ಮತ್ತು ಹೋಲ್‌ಸೇಲ್‌ ವ್ಯಾಪಾರ, ಹಣಕಾಸು ಸೇವೆ, ಐಟಿ, ಬಿಸಿನೆಸ್‌ ಸವೀರ್‍ಸ್‌, ವಿದ್ಯುತ್‌, ನಿರ್ಮಾಣ, ಸಾರಿಗೆ, ರಿಯಾಲ್ಟಿ, ರೆಸ್ಟೊರೆಂಟ್ಸ್‌ ಮತ್ತು ಹೋಟೆಲ್‌, ಶಿಕ್ಷಣ ಮತ್ತು ಸಂಶೋಧನೆ.

ಭಾರತ ಸೂಪರ್‌ ಪವರ್‌ ಆಗಲು ಏನು ಮಾಡಬೇಕು?

 • 2019 ಹಾಗೂ ನಂತರದ ವರ್ಷಗಳಲ್ಲಿ ತಜ್ಞರ ಪ್ರಕಾರ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಆರ್ಥಿಕ-ಸಾಮಾಜಿಕ ಪ್ರಗತಿಯ ಸವಾಲು-ಅಜೆಂಡಾಗಳ ಪಟ್ಟಿ ಇಂತಿದೆ.
 • ಶೇ.8ಕ್ಕೂ ಹೆಚ್ಚಿನ ಜಿಡಿಪಿ ಬೆಳವಣಿಗೆ: ಭಾರತವು ಶೇ.8ರ ಜಿಡಿಪಿ ದರದಲ್ಲಿ ಪ್ರಗತಿಯಾಗಬೇಕಾದ ಅಗತ್ಯ ಇದೆ. ಹಾಗೂ ಅದನ್ನು ಉಳಿಸಿಕೊಳ್ಳಬೇಕು. ಇದು ಕ್ಲಿಷ್ಟಕರ ಸವಾಲೂ ಹೌದು.

2019 ಮತ್ತು ಮುಂದಿನ ಆರ್ಥಿಕ ಕಾರ್ಯಸೂಚಿ:

 1. ಭಾರತ ತನ್ನ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲು ಮುಂದಾಗಬೇಕು.
 2. ಮೂಲ ಸೌಕರ್ಯ ವಲಯದಲ್ಲಿ ಹೂಡಿಕೆ ಹೆಚ್ಚಳಕ್ಕೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಏರಿಕೆ ಅನಿವಾರ್ಯ.
 3. ಸಾಲ ವಿತರಣೆಯ ಹರಿವು ಹೆಚ್ಚಿಸಲು ಸಾರ್ವಜನಿಕ ಬ್ಯಾಂಕ್‌ಗಳ ಆರ್ಥಿಕತೆಯನ್ನು ಬಲಪಡಿಸಬೇಕು. ವಸೂಲಾಗದ ಸಾಲದ ಬಿಕ್ಕಟ್ಟು ಗರಿಷ್ಠ ನಿವಾರಿಸಬೇಕು.
 4. ದೇಶದ ಜನತೆಯ ಉಳಿತಾಯ ಹೆಚ್ಚಿಸಲು ಬ್ಯಾಂಕ್‌ ಖಾತೆದಾರರ ಸಂಖ್ಯೆ ವೃದ್ಧಿಸುವುದು ಮುಖ್ಯ.
 5. ಜಿಡಿಪಿಗೆ ತೆರಿಗೆಯ ಅನುಪಾತ ಹೆಚ್ಚಳ ಅಗತ್ಯ. ಇದರಿಂದ ಬೆಳವಣಿಗೆಗೆ ಸಹಾಯಕ.
 6. ಕೃಷಿ ಕ್ಷೇತ್ರವನ್ನು ಹೆಚ್ಚು ಮಾರುಕಟ್ಟೆ ಆಧಾರಿತವಾಗಿಸಬೇಕು.
 7. ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು.
 8. ರಫ್ತು ವಲಯವನ್ನು ಸ್ಪರ್ಧಾತ್ಮಕವಾಗಿಸಬೇಕು.
 9. ಸ್ಟಾರ್ಟಪ್‌ ವಲಯದ ಪ್ರಗತಿಗೆ ಉತ್ತೇಜನ
 10. ಕಚ್ಚಾ ತೈಲದ ಏರುಪೇರುಗಳಿಂದ ಆರ್ಥಿಕತೆಯ ರಕ್ಷಣೆಗೆ ಸಮಗ್ರ ಇಂಧನ ನೀತಿ.

ಬಗೆಹರಿಸಬೇಕಾದ ಸಾಮಾಜಿಕ ಸವಾಲುಗಳು:

 • ಕೃಷಿ ಬಿಕ್ಕಟ್ಟು: ಕೃಷಿಯ ಮೇಲಿನ ಅವಲಂಬನೆ ಇಳಿಸಲು ಉದ್ಯೋಗ ಸೃಷ್ಟಿ ಅಗತ್ಯ
 • ಆದಾಯ ಅಸಮಾನತೆ: ಕಡು ಬಡತನ ನಿರ್ಮೂಲನೆಗೆ ಆದಾಯ ನೆರವು ಬೇಕು.
 • ಉದ್ಯೋಗದಲ್ಲಿ ಮಹಿಳೆ: ಔದ್ಯೋಗಿಕ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು.
 • ಉದ್ಯೋಗ: ಆಟೊಮೇಶನ್‌ ಸವಾಲಿನೆದುರು ಉದ್ಯೋಗ ನಷ್ಟವಾಗದಂತೆ ನೋಡಿಕೊಳ್ಳಬೇಕು. ಕಾರ್ಮಿಕ ಕಾನೂನು ಸುಧಾರಣೆ ಅಗತ್ಯ

ಭ್ರಷ್ಟಾಚಾರ ಇಳಿಕೆ ರ‍್ಯಾಂಕಿಂಗ್ ಸುಧಾರಣೆ

5.

ಸುದ್ಧಿಯಲ್ಲಿ ಏಕಿದೆ ?ಜಾಗತಿಕ ಭ್ರಷ್ಟಾಚಾರ ರ್ಯಾಂಕಿಂಗ್​ನಲ್ಲಿ ಭಾರತ ಸುಧಾರಣೆ ಕಂಡಿದ್ದು, 78ನೇ ರ್ಯಾಂಕ್ ಪಡೆದಿದೆ. ಒಟ್ಟು 180 ದೇಶಗಳಲ್ಲಿ ಕಳೆದ ಬಾರಿ 81ನೇ ರ್ಯಾಂಕ್ ಪಡೆದಿದ್ದ ಭಾರತ 100ಕ್ಕೆ 40 ಅಂಕ ಪಡೆದಿತ್ತು.

 • 2018ರ ಸಮೀಕ್ಷೆ ಪ್ರಕಾರ ಭಾರತವು 41 ಅಂಕ ಪಡೆದು 78ನೇ ರ್ಯಾಂಕ್​ಗೆ ಸಮಾಧಾನ ಪಟ್ಟಿದೆ. ಆದರೆ ಆಶ್ಚರ್ಯಕರ ಬೆಳವಣಿಗೆಯಲ್ಲಿ ಚೀನಾ ಭಾರಿ ಕುಸಿತ ಕಂಡಿದ್ದು 87 ಹಾಗೂ ಪಾಕಿಸ್ತಾನ 117ನೇ ರ್ಯಾಂಕ್ ಪಡೆದಿವೆ.
 • ಜಾಗತಿಕ ಸರಾಸರಿ ಅಂಕ 43 ಆಗಿದ್ದು, 50ಕ್ಕಿಂತ ಕಡಿಮೆ ಅಂಕವನ್ನು 120ಕ್ಕೂ ಅಧಿಕ ದೇಶಗಳು ಪಡೆದಿವೆ.
 • 2011ರ ಭ್ರಷ್ಟಾಚಾರ ವಿರೋಧಿ ಹೋರಾಟದ ಬಳಿಕವೂ ಭಾರತದ ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗಿಲ್ಲ ಎಂದು ಗ್ಲೋಬಲ್ ಕರಪ್ಶನ್ ಇಂಡೆಕ್ಸ್ ವರದಿಯಲ್ಲಿ ಹೇಳಲಾಗಿದೆ.
 • ಡೆನ್ಮಾಕ್ ಹಾಗೂ ನ್ಯೂಜಿಲೆಂಡ್ ಮೊದಲ ಎರಡು ಸ್ಥಾನ ಹೊಂದಿದ್ದರೆ, ಸೊಮಾಲಿಯಾ, ಸಿರಿಯಾ ಹಾಗೂ ಸೌದಿ ಅರೇಬಿಯಾ ಕೊನೆಯ ಸ್ಥಾನ ಪಡೆದಿವೆ. ಅಮೆರಿಕವು ಕಳೆದೊಂದು ದಶಕದಲ್ಲಿ ಮೊದಲ ಬಾರಿಗೆ ಟಾಪ್-20 ಪಾರದರ್ಶಕ ದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
 • ಭ್ರಷ್ಟಾಚಾರ ಗ್ರಹಿಕೆ ಸೂಚಿಯನ್ನು 1995 ರಲ್ಲಿ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ರಚಿಸಲಾಯಿತು.

ಮಧ್ಯಂತರ ಬಜೆಟ್‌ ಅಥವಾ ಲೇಖಾನುದಾನ?

6.

ಸುದ್ಧಿಯಲ್ಲಿ ಏಕಿದೆ ?ಲೋಕಸಭೆ ಚುನಾವಣೆ ನಡೆಯಲಿರುವುದರಿಂದ 2019ರ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಮಂಡಿಸಲಿರುವ ಬಜೆಟ್‌ ಮಧ್ಯಂತರ ಬಜೆಟ್‌ ಆಗಿರುತ್ತದೆ.

 • ತಾಂತ್ರಿಕವಾಗಿ ಅದನ್ನು ಲೇಖಾನುದಾನ ಎಂದು ಕರೆಯಲಾಗುತ್ತದೆ. ಹೊಸ ಸರಕಾರ ರಚನೆಯಾದ ಬಳಿಕ ಸಮಗ್ರ ಬಜೆಟ್ ಮಂಡನೆಯಾಗುತ್ತದೆ.

ಮಧ್ಯಂತರ ಬಜೆಟ್ ಮಂಡಿಸೋದು ಯಾವಾಗ?

 • ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸರಕಾರಕ್ಕೆ ಸಾಕಷ್ಟು ಕಾಲಾವಕಾಶ ಇರುವುದಿಲ್ಲ. ಹೀಗಾಗಿ ಪ್ರತಿ ಸರಕಾರಗಳು ತಮ್ಮ ಅಧಿಕಾರಾವಧಿಯ ಕೊನೆಯ ತಿಂಗಳುಗಳಲ್ಲಿ ಮಂಡಿಸುವ ಬಜೆಟ್‌ ಮಧ್ಯಂತರ ಬಜೆಟ್ ಆಗಿರುತ್ತದೆ. ಚುನಾವಣೆ ಬಳಿಕ ರಚನೆಯಾಗುವ ಹೊಸ ಸರಕಾರ ಪೂರ್ಣ ಬಜೆಟ್ ಮಂಡಿಸುತ್ತದೆ.

ಮಧ್ಯಂತರ ಬಜೆಟ್‌ನ ಅಗತ್ಯವೇನು? ಚುನಾವಣೆ ನಂತರವೇ ಪೂರ್ಣ ಬಜೆಟ್ ಮಂಡಿಸಿದರೆ ಸಾಲದೆ?

 • ವರ್ಷದ ಬಜೆಟ್‌ಗೆ ಸಂಸತ್ತಿನ ಅನುಮೋದನೆ ಅಗತ್ಯವಿದೆ. ಇದು ಮಾರ್ಚ್ 31ಕ್ಕೆ ಕೊನೆಗೊಳ್ಳುವ ಒಂದು ವರ್ಷದ ಅವಧಿಯ ವೆಚ್ಚಗಳನ್ನು ನಿರ್ವಹಿಸುವ ಅಧಿಕಾರವನ್ನು ಮಾತ್ರ ಸರಕಾರಕ್ಕೆ ನೀಡುತ್ತದೆ.
 • ಹಣಕಾಸು ವರ್ಷ ಕೊನೆಗೊಳ್ಳುವ ಮೊದಲು ಪೂರ್ಣ ಬಜೆಟ್ ಮಂಡನೆ ಸಾಧ್ಯವಾಗದೆ ಹೋದರೆ, ಪೂರ್ಣ ಬಜೆಟ್‌ ಮಂಡನೆ ಆಗುವ ವರೆಗಿನ ಅವಧಿಗೆ ವೆಚ್ಚಗಳನ್ನು ಮಾಡಲು ಸರಕಾರಕ್ಕೆ ಅಧಿಕಾರ ನೀಡುವುದು ಮಧ್ಯಂತರ ಬಜೆಟ್.
 • ಮಧ್ಯಂತರ ಬಜೆಟನ್ನು ಸಂಸತ್ತಿನಲ್ಲಿ ಧ್ವನಿಮತದಿಂದ ಅಂಗೀಕರಿಸಲಾಗುತ್ತದೆ; ಆದರೂ, ವರ್ಷದ ಬಜೆಟ್ ಮಂಡನೆಯಾಗುವ ವರೆಗಿನ ಅವಧಿಗೆ ಅಗತ್ಯ ವೆಚ್ಚಗಳನ್ನು ನಿರ್ವಹಿಸುವ ಅಧಿಕಾರ ಸರಕಾರಕ್ಕೆ ಲಭ್ಯವಾಗುತ್ತದೆ.
 • ಚುನಾವಣೆ ತೀರಾ ಹತ್ತಿರವಿರುವಾಗ ಸರಕಾರ ಲೇಖಾನುದಾನ ಮಂಡಿಸುತ್ತದೆ. ಅದರ ಅವಧಿ ಸಾಮಾನ್ಯವಾಗಿ ನಾಲ್ಕು ತಿಂಗಳು ಮಾತ್ರ ಇರುತ್ತದೆ.

ಮಧ್ಯಂತರ ಬಜೆಟ್‌ ಪೂರ್ಣ ಬಜೆಟ್‌ಗಿಂತ ಹೇಗೆ ಭಿನ್ನ?

 • ಹಣಕಾಸು ವರ್ಷದ ಭಾಗಶಃ ವೆಚ್ಚಗಳನ್ನು ನಿರ್ವಹಿಸಲು ಸರಕಾರಕ್ಕೆ ಅಧಿಕಾರ ನೀಡುವುದು ಲೇಖಾನುದಾನ. ಆದರೆ ಅಂದಾಜುಗಳನ್ನು ಇಡೀ ವರ್ಷಕ್ಕೆ ಅನ್ವಯಿಸಿಯೇ ಲೇಖಾನುದಾನ ಸಿದ್ಧಪಡಿಸಲಾಗುತ್ತದೆ. ಹಾಗಿದ್ದರೂ ನೂತನ ಸರಕಾರಕ್ಕೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಮತ್ತು ಸಂಪೂರ್ಣ ಅಂದಾಜನ್ನು ಪರಿಷ್ಕರಿಸುವ ಅಧಿಕಾರವಿರುತ್ತದೆ.

ಸರಕಾರ ಹೊಸ ತೆರಿಗೆಗಳನ್ನು ಮತ್ತು ಹೊಸ ನೀತಿಗಳನ್ನು ಜಾರಿಗೆ ತರಬಹುದೆ?

 • ಸಾಂವಿಧಾನಿಕವಾಗಿ, ಮಧ್ಯಂತರ ಬಜೆಟ್‌ನಲ್ಲಿ ಸರಕಾರ ತೆರಿಗೆ ಬದಲಾವಣೆ ಮಾಡಬಹುದು. ಸ್ವಾತಂತ್ರ್ಯಾನಂತರ ಇದು ವರೆಗೆ ಮಂಡನೆಯಾದ 12 ಮಧ್ಯಂತರ ಬಜೆಟ್‌ಗಳು ಕೆಲವೇ ತಿಂಗಳ ಅವಧಿಗೆ ಸೀಮಿತವಾಗಿದ್ದವು. ಹೀಗಾಗಿ ದೊಡ್ಡ ಬದಲಾವಣೆಗಳನ್ನೇನೂ ಮಾಡಿರಲಿಲ್ಲ.
Related Posts
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎಕ್ಸ್-ರೇ ಮಾಫಿಯಾ ಸುದ್ಧಿಯಲ್ಲಿ ಏಕಿದೆ ?ವ್ಯಕ್ತಿಯ ದೇಹದೊಳಗಿನ ಸಮಸ್ಯೆ ಅನಾವರಣ ಮಾಡುವ ಎಕ್ಸ್ -ರೇ (ಕ್ಷ-ಕಿರಣ) ಕೇಂದ್ರಗಳಿಗೆ ಕಾನೂನಿನ ಅಂಕುಶ ಇರದ್ದರಿಂದ ರಾಜ್ಯದ ಬಹುತೇಕ ಎಕ್ಸ್-ರೇ ಕೇಂದ್ರಗಳು ಹಣಗಳಿಕೆಯ ಅಡ್ಡವಾಗಿ ಮಾರ್ಪಟ್ಟಿವೆ. ಇನ್ನೊಂದೆಡೆ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಎಕ್ಸ್-ರೇ ತೆಗೆಯಲಾಗುತ್ತಿರುವುದು ಆತಂಕ ...
READ MORE
“15 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಂಪ್ರದಾಯಿಕ ಕುಶಲತೆ ಸಂರಕ್ಷಣೆಗೆ ಬದ್ಧ ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಸಾಂಪ್ರದಾಯಿಕ ಕುಶಲತೆಯನ್ನು ಸಂರಕ್ಷಿಸಲು ಭೌಗೋಳಿಕ ಗುರುತುಗಳ ನೀತಿ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಎಫ್‌ಕೆಸಿಸಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಮ್ಮಿಕೊಂಡಿದದ 'ಕರಡು ಭೌಗೋಳಿಕ ಗುರುತುಗಳ ನೀತಿ' ಕುರಿತಾದ ಪಾಲುದಾರರ ಸಮಾವೇಶವನ್ನು ಉದ್ಘಾಟಿಸಿದರು. 2018-19ನೇ ಸಾಲಿನ ...
READ MORE
“26th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಪರಿಸರ ಸೂಕ್ಷ್ಮ ವಲಯ ಸುದ್ಧಿಯಲ್ಲಿ ಏಕಿದೆ ? ಕೊಡಗು ಅತಿವೃಷ್ಠಿ ಹಾನಿಯಿಂದ ಪಾಠ ಕಲಿಯದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಹೊರಡಿಸಿರುವ ಅಧಿಸೂಚನೆಯನ್ನು ಮತ್ತೊಮ್ಮೆ ವಿರೋಧಿಸಲು ನಿರ್ಧರಿಸಿದೆ. ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಆಗಿರುವ ತೊಂದರೆಯೇ ಮಳೆ ...
READ MORE
“13 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತರಕಾರಿ ಬೀಜಗಳ ಕಿಟ್‌ ವಿತರಣೆ ಸುದ್ಧಿಯಲ್ಲಿ ಏಕಿದೆ ?ರಾಜ್ಯಾದ್ಯಂತ ರೈತರಿಗೆ ತರಕಾರಿ ಬೆಳೆಯಲು ನಾನಾ ತರಕಾರಿ ಬೀಜಗಳಿಗೆ ಸಹಾಯಧನವಾಗಿ ಪ್ರತಿ ಎಕರೆಗೆ 2,000 ರೂ. ನೀಡುವ 'ತರಕಾರಿ ಬೀಜಗಳ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅಧಿಕೃತ ಚಾಲನೆ ನೀಡಿದೆ. ಪ್ರತಿ ಎಕರೆಯಲ್ಲಿ ತರಕಾರಿ ...
READ MORE
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸಿವಿಜಿಲ್’ ಮೊಬೈಲ್ ಆಪ್ ಸುದ್ಧಿಯಲ್ಲಿ ಏಕಿದೆ ?ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ’ ಸಿವಿಜಿಲ್’ ಮೊಬೈಲ್ ಆಪ್ ಹೊರತರುತ್ತಿದೆ. ಆಪ್​ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ. ಹಿನ್ನಲೆ ಕಳೆದ ...
READ MORE
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
ಚುನಾವಣೆ ಕ್ಷಿಪ್ರ ಪಡೆಗಳ ಸಮನ್ವಯಕ್ಕೆ ವಿಶೇಷಾಧಿಕಾರಿ ನೇಮಕ ಸುದ್ಧಿಯಲ್ಲಿ ಏಕಿದೆ? ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಿರ ಕಣ್ಗಾವಲು ತಂಡದ (ಎಸ್‌ಎಸ್‌ಟಿ) ಕ್ಷಿಪ್ರ ಕಾರ್ಯ ಪಡೆ (ಫ್ಲೈಯಿಂಗ್ ಸ್ಕ್ವಾಡ್‌)ಯ ಚಟುವಟಿಕೆಗಳ ಉಸ್ತುವಾರಿಗಾಗಿ ಬಿಬಿಎಂಪಿ ವಿಶೇಷಾಧಿಕಾರಿಯನ್ನು ನೇಮಿಸಿದೆ. ವಿಶೇಷ ಅಧಿಕಾರಿ (ಜಾರಿ) ಯಾಗಿ ಸರ್ವೇ, ಸೆಟಲ್‌ಮೆಂಟ್‌ ಮತ್ತು ...
READ MORE
“19 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಜ್ಯೋತಿ ಸಂಜೀವಿನಿ’  ಸುದ್ಧಿಯಲ್ಲಿ ಏಕಿದೆ ? ಸರಕಾರಿ ನೌಕರರಿಗೆ ನೀಡುತ್ತಿರುವ 'ಜ್ಯೋತಿ ಸಂಜೀವಿನಿ' ಸೌಲಭ್ಯವನ್ನು ನಿವೃತ್ತ ಸರಕಾರಿ ನೌಕರರಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಸರಕಾರವನ್ನು ಆಗ್ರಹಿಸಿದೆ. ಜ್ಯೋತಿ ಸಂಜೀವಿನಿ ಯೋಜನೆ (ಜೆಎಸ್ಎಸ್) ಕರ್ನಾಟಕ ಸರ್ಕಾರವು "ಜ್ಯೋತಿ ಸಂಜೀವಿನಿ" ಎಂಬ ...
READ MORE
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೇನೆಗೆ ಮಣಿಪಾಲದ ಬೈನಾಕ್ಯೂಲರ್ ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿ ಶತಮಾನದ ಹಿಂದಿನ ತಂತ್ರಜ್ಞಾನ ಹೊಂದಿರುವ ಟೆಲಿಸ್ಕೋಪ್ ಮತ್ತು ಬೈನಾಕ್ಯುಲರ್ ಬಳಸಲಾಗುತ್ತಿದೆ. ಅತ್ಯಾಧುನಿಕ ಬೈನಾಕ್ಯುಲರ್ ಬೇಕಾದರೆ ಲಕ್ಷಾಂತರ ರೂ. ವ್ಯಯಿಸಬೇಕಿದ್ದರಿಂದ ಸಂಶೋಧನೆ ಮತ್ತು ಸೈನಿಕ ಕಾರ್ಯಾಚರಣೆಗೆ ತೊಡಕಾಗಿದೆ. ಹೀಗಾಗಿ ಮಣಿಪಾಲದ ಇಂಜಿನಿಯರೊಬ್ಬರು ಕಡಿಮೆ ವೆಚ್ಚದ, ಉತ್ತಮ ...
READ MORE
“19 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬುಕ್ ಬ್ಯಾಂಕ್ ಸುದ್ಧಿಯಲ್ಲಿ ಏಕಿದೆ ?ಪರಿಸರ ರಕ್ಷಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ತಮಿಳುನಾಡು ಸರಕಾರ ಮಾದರಿ ಹೆಜ್ಜೆಯನ್ನಿಡಲು ಹೊರಟಿದೆ. ಪ್ರತಿ ವರ್ಷ ಶಾಲಾ ಪಠ್ಯ ಪುಸ್ತಕಗಳನ್ನು ಮುದ್ರಿಸಲು ಲಕ್ಷಾಂತರ ಮರಗಳ ಮಾರಣಹೋಮವಾಗುವುದನ್ನು ತಪ್ಪಿಸಲು ಅದೊಂದು ವಿನೂತನ ಯೋಜನೆಯನ್ನು ಜಾರಿಗೆ ತರುತ್ತಿದೆ. ಏನಿದು ಬುಕ್ ಬ್ಯಾಂಕ್ ? ...
READ MORE
“27 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಐದು ಹೊಸ ತಾಲೂಕು ಸುದ್ಧಿಯಲ್ಲಿ ಏಕಿದೆ ? ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದ ಹಾರೋಹಳ್ಳಿ, ಚೇಳೂರು, ತೇರದಾಳ ಹಾಗೂ ಕಳಸಾ ಹೊಸ ತಾಲೂಕುಗಳ ಹೊರತಾಗಿ ಮತ್ತೆ ಐದು ಪಟ್ಟಣಗಳಿಗೆ ತಾಲೂಕುಗಳ ಪಟ್ಟ ನೀಡಲಾಗಿದೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ...
READ MORE
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“15 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“26th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“13 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
“19 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“19 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“27 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *