“3rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಸುಳ್ಳು ಸುದ್ದಿ ಪ್ರಕಟಿಸಿದರೆ ಪತ್ರಕರ್ತರ ಮಾನ್ಯತೆ ರದ್ದು: ಕೇಂದ್ರ

 • ಸುಳ್ಳು ಸುದ್ದಿ ಸೃಷ್ಟಿಸುವ ಮತ್ತು ಹರಡುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
 • ಸುಳ್ಳು ಸುದ್ದಿ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪ ಸಾಬೀತಾದರೆ, ಮೊದಲ ತಪ್ಪಿಗೆ ಆರು ತಿಂಗಳ ಮಟ್ಟಿಗೆ ಮತ್ತು ಎರಡನೇ ಬಾರಿಯ ತಪ್ಪಿಗೆ ಒಂದು ವರ್ಷದ ಮಟ್ಟಿಗೆ ಮಾನ್ಯತೆ ರದ್ದು ಮಾಡಲಾಗುವುದು.
 • ಮೂರನೇ ಬಾರಿಗೆ ತಪ್ಪು ಮಾಡಿದಲ್ಲಿ ಶಾಶ್ವತವಾಗಿ ಮಾನ್ಯತೆ ರದ್ದು ಮಾಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಪ್ರಕಟಣೆ ತಿಳಿಸಿದೆ.
 • ಮುದ್ರಣ ಮಾಧ್ಯಮಗಳಿಗೆ ಸಂಬಂಧಿಸಿ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈ ಗೊಳ್ಳುವ ಹೊಣೆಯನ್ನು ಭಾರತೀಯ ಪತ್ರಿಕಾ ಮಂಡಳಿಗೆ (ಪಿಸಿಐ) ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಸುದ್ದಿ ಪ್ರಸಾರಕರ ಸಂಘಟನೆಗೆ (ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್/ಎನ್‌ಬಿಎ) ವಹಿಸಲಾಗುವುದು.
 • ಈ ಸಂಸ್ಥೆಗಳು 15 ದಿನಗಳ ಒಳಗೆ ನಿರ್ಣಯ ಕೈಗೊಳ್ಳಬೇಕೆಂದು ನಿರೀಕ್ಷಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಆರೋಪ ದಾಖಲಾದ ತಕ್ಷಣ ವಿಚಾರಣೆ ಪೂರ್ಣಗೊಳ್ಳುವವರೆಗೆ ಅನ್ವಯವಾಗುವಂತೆ ಆರೋಪಿ ಪತ್ರಕರ್ತರ ಮಾನ್ಯತೆಯನ್ನು ಅಮಾನತಿನಲ್ಲಿಡಲಾಗುತ್ತದೆ ಎಂದೂ ತಿಳಿಸಲಾಗಿದೆ.
 • ಯಾವುದೇ ಸುದ್ದಿ ಮಾಧ್ಯಮ ಸಂಸ್ಥೆಯ ಮಾನ್ಯತಾ ಮನವಿಗೆ ಸಂಬಂಧಿಸಿ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋದ (ಪಿಐಬಿ) ಮಾನ್ಯತಾ ಸಮಿತಿಯು ನಿರ್ಧಾರ ಕೈಗೊಳ್ಳುತ್ತದೆ. ಈ ಸಮಿತಿ ಪಿಸಿಐ ಮತ್ತು ಎನ್‌ಬಿಎ ಪ್ರತಿನಿಧಿಗಳನ್ನೂ ಒಳಗೊಂಡಿದೆ.

ಆರು ಕೇಂದ್ರೀಯ ವಿ.ವಿಗಳಲ್ಲಿ ಯೋಗ ವಿಭಾಗ

 • ಆರು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಯೋಗ ಶಿಕ್ಷಣ ವಿಭಾಗ ತೆರೆಯಲು ಮಾನವ ಸಂಪನ್ಮೂಲ ಅಭಿವೃದ್ಧಿ  ಸಚಿವಾಲಯ ಅನುಮತಿ ನೀಡಿದೆ.
 • ಹೇಮಾವತಿ ನಂದನ್‌ ಬಹುಗುಣ ಗರ್ಹಾವಾಲ್‌ ವಿಶ್ವವಿದ್ಯಾಲಯ, ವಿಶ್ವಭಾರತಿ ವಿ.ವಿ, ರಾಜಸ್ತಾನ, ಮಣಿಪುರ ಮತ್ತು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ, ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿ.ವಿಗಳಲ್ಲಿ ಯೋಗ ಶಿಕ್ಷಣ ವಿಭಾಗ ತೆರೆಯಲು ಅನುಮತಿ ನೀಡಲಾಗಿದೆ’

ಆಟಿಸಂ ಜಾಗೃತಿ ದಿನ: ನೀಲಿಬಣ್ಣದಲ್ಲಿ ಕಂಗೊಳಿಸಿದ ಕುತುಬ್‌ ಮಿನಾರ್‌

 • ವಿಶ್ವ ಆಟಿಸಂ ಜಾಗೃತಿ ದಿನದ ಅಂಗವಾಗಿ ಕುತುಬ್‌ ಮಿನಾರ್‌ ನೀಲಿಬಣ್ಣದಿಂದ ಕಂಗೊಳಿಸಿತು.
 • ಆಟಿಸಂನ್ನು ಸಮಾಜವು ಸಂವೇದನಾಶೀಲವಾಗಿ ಸ್ವೀಕರಿಸುವ ಉದ್ದೇಶದಿಂದ ‘ಲೈಟ್‌ ಇಟ್‌ಅಪ್‌ ಬ್ಲೂ’ ಹೆಸರಿನಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
 • ಆಟಿಸಂ ಮಕ್ಕಳ ಸಂಸ್ಥೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಸಾಮಾಜಿಕ ನ್ಯಾಯ ಇಲಾಖೆಯು ಸಹಯೋಗದಲ್ಲಿ ಎರಡನೇ ಸಲ ಈ ಸ್ಮಾರಕದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
 • ಈ ಹಿಂದೆ ಇದೇ ದಿನ ನಯಾಗಾರ ಫಾಲ್ಸ್‌, ವಿಶ್ವಸಂಸ್ಥೆ ಕಟ್ಟಡ, ಶ್ವೇತಭವನವನ್ನೂ ನೀಲಿಬಣ್ಣದಿಂದ ಬೆಳಗಿಸಲಾಗಿತ್ತು.
 • ‘ಸಮಾಜದಲ್ಲಿ ಎಲ್ಲರೂ ಸಮಾನರು. ಆಟಿಸಂ ಮಕ್ಕಳನ್ನು ಸಾಮಾನ್ಯರಂತೆ ಕಾಣಬೇಕು’ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಲಿದೆ

ಅಮೆರಿಕ ಉತ್ಪನ್ನಗಳಿಗೆ ಚೀನಾ ಹೆಚ್ಚುವರಿ ಸುಂಕ

 • ಅಮೆರಿಕದ ಶೀತಲೀಕರಿಸಿದ ಹಂದಿಮಾಂಸ, ವೈನ್ ಸೇರಿ 128 ಉತ್ಪನ್ನಗಳ ಮೇಲೆ ಶೇಕಡ 25ರ ತನಕ ಹೆಚ್ಚುವರಿ ಸುಂಕವನ್ನು ಚೀನಾ ವಿಧಿಸಿದೆ
 • ಇತ್ತೀಚೆಗೆ ಚೀನಾದ ಸ್ಟೀಲ್ ಮತ್ತು ಅಲ್ಯೂಮಿನಿಯಂ ಆಮದಿನ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ಘೋಷಿಸಿದ ಕ್ರಮಕ್ಕೆ ಪ್ರತಿಯಾಗಿ ಚೀನಾ ಈ ಸುಂಕ ದರ ಪರಿಷ್ಕರಣೆ ಘೋಷಿಸಿದೆ. ಪರಿಷ್ಕೃತ ತೆರಿಗೆ ದರವನ್ನು ಚೀನಾ ಘೋಷಿಸಿತ್ತು.
 • ವರ್ಲ್ಡ್ ಟ್ರೇಡ್ ಆರ್ಗನೈಸೇಷನ್ (ಡಬ್ಲ್ಯುಟಿಒ) ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಣ್ಣುಗಳು ಸೇರಿ 120 ಅಮೆರಿಕ ಉತ್ಪನ್ನಗಳ ದರ ಇಳಿಸುವಂತೆ ಹೇಳಿತ್ತು. ಆದರೆ, ಚೀನಾ ಈ ಉತ್ಪನ್ನಗಳಿಗೂ ಶೇಕಡ 15 ಹೆಚ್ಚುವರಿ ಸುಂಕ ಘೋಷಿಸಿದೆ.
 • ಇದರ ಹೊರತಾಗಿರುವ ಎಂಟು ಉತ್ಪನ್ನಗಳ ಪೈಕಿ ಹಂದಿ ಮಾಂಸಕ್ಕೆ ಶೇಕಡ 25 ತೆರಿಗೆ ಹೆಚ್ಚುವರಿಯಾಗಿ ಘೋಷಿಸಲಾಗಿದೆ.
 • ಡಬ್ಲ್ಯುಟಿಒ ನಿಯಮಾವಳಿಗಳನ್ನು ಉಲ್ಲಂಘಿಸಿ ಚೀನಾದ ಹಿತಾಸಕ್ತಿಯನ್ನು ಅಮೆರಿಕ ಘಾಸಿಗೊಳಿಸಿದೆ..ಹೀಗಾಗಿ ಚೀನಾದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಇಂತಹ ಕ್ರಮ ಅನಿವಾರ್ಯವಾಗಿತ್ತು ಎಂದು ಚೀನಾದ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
 • ಇದೇ ವೇಳೆ, ಚೀನಾದ ಕೆಲವು ಸರಕುಗಳ ಮೇಲೆ 5000 ಕೋಟಿ ಡಾಲರ್ ಶುಲ್ಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧತೆ ನಡೆಸಿದ್ದಾರೆ ಎಂಬ ವರದಿಯೂ ಇದೆ.
 • ಇದರೊಂದಿಗೆ ಜಗತ್ತಿನ ಎರಡು ಬಲಿಷ್ಠ ಅರ್ಥವ್ಯವಸ್ಥೆಗಳಾದ ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸಿವೆ.

ಆರಂಭಿಸಿದ್ದು ಅಮೆರಿಕ

 • ನಿಗದಿತ ದರಕ್ಕಿಂತ ಕಡಿಮೆ ದರಕ್ಕೆ ಸ್ಟೀಲ್ ಸಾಮಗ್ರಿಗಳನ್ನು ರಫ್ತು ಮಾಡಿರುವ ಭಾರತ ಮತ್ತು ಚೀನಾದ ಕಂಪನಿಗಳ ಮೇಲೆ ಹೆಚ್ಚುವರಿ ಸುಂಕ (ಆಂಟಿ ಡಂಪಿಂಗ್ ಡ್ಯೂಟಿ) ವಿಧಿಸುವುದಾಗಿ ಅಮೆರಿಕ ಘೋಷಿಸಿತು.
 • ಈ ಎರಡೂ ದೇಶಗಳ ಕಂಪನಿಗಳು ಸ್ಟೀಲ್ ರಫ್ತುದಾರರಿಗೆ ಕೆಲವು ಸಬ್ಸಿಡಿಗಳನ್ನು ನೀಡಿ ಕಡಿಮೆ ಬೆಲೆಗೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕಕ್ಕೆ ಸ್ಟೀಲ್ ರವಾನಿಸಿವೆ.
 • ಇದರಿಂದ ದೇಶೀ ಸ್ಟೀಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಅಮೆರಿಕದ ವಾಣಿಜ್ಯ ಇಲಾಖೆ ಹೇಳಿತ್ತು.

~~~***ದಿನಕ್ಕೊಂದು ಯೋಜನೆ***~~~

ಮಾರ್ಗದರ್ಶಿ ಇಂಡಿಯಾ ಅಭಿಯಾನ (“Mentor India’ ’campaign)

 • ನ್ಯಾಷನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫಾರ್ಮಿನ್ಗ್ ಇಂಡಿಯಾ ಆಯೋಗವು ಅಟಲ್ ಟಿಂಕೇರಿಂಗ್ ಲ್ಯಾಬ್ನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಮಾಹಿತಿ ನೀಡಲು ನಾಯಕರುಗಳು ತೊಡಗಿಸಿಕೊಳ್ಳುವಂತೆ ಮಾಡಲು ಮಾರ್ಗದರ್ಶಿ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿದೆ .
 • ಈ ಉಪಕ್ರಮದ ಅಡಿಯಲ್ಲಿ, NITI Aayog ವಿದ್ಯಾರ್ಥಿಗಳು ಕಲಿಯಲು, ಅನುಭವ ಮತ್ತು ವಿನ್ಯಾಸ ಮತ್ತು ಕಂಪ್ಯೂಟೇಶನಲ್ ಚಿಂತನೆ ಮುಂತಾದ ಭವಿಷ್ಯದ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಸಕ್ರಿಯಗೊಳಿಸಲು ಒಂದು ಅಥವಾ ಹೆಚ್ಚು ಅಂತಹ ಪ್ರಯೋಗಾಲಯಗಳಲ್ಲಿ ಪ್ರತಿ ವಾರಕ್ಕೆ ಒಂದರಿಂದ ಎರಡು ಗಂಟೆಗಳ ಕಾಲ ಮಾಡುವ ನಾಯಕರನ್ನು ಹುಡುಕುತ್ತಿದೆ.

ಅಟಲ್ ಟಿಂಕೇರಿಂಗ್ ಲ್ಯಾಬ್ಸ್

 • ಅಟಲ್ ಇನ್ನೋವೇಶನ್ ಮಿಷನ್ನ ಭಾಗವಾಗಿ ದೇಶದಾದ್ಯಂತ 900 ಅಟಲ್ ಟಿಂಕೇರಿಂಗ್ ಲ್ಯಾಬ್ಗಳನ್ನು ಸ್ಥಾಪಿಸಲಾಗಿದೆ.
 • ಈ ಪ್ರಯೋಗಾಲಯಗಳು ಪ್ರಕೃತಿಯಿಂದ ಸೂಚಿತವಲ್ಲದವುಗಳಾಗಿರುತ್ತವೆ, ಮತ್ತು ನಾಯಕರು ಬೋಧಕರಿಗೆ ಬದಲಾಗಿ ಮಾರ್ಗದರ್ಶಕರಾಗಿರಬೇಕು ಎಂದು ನಿರೀಕ್ಷಿಸಲಾಗಿದೆ.
 • ತರಗತಿ 6 ರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳು ನಾವೀನ್ಯತೆ ಕೌಶಲ್ಯಗಳನ್ನು ಕಲಿಯಲು ಮತ್ತು ಭಾರತವನ್ನು ರೂಪಾಂತರಗೊಳಿಸುವ ಯೋಜನೆಗಳನ್ನು ಅಭಿವೃದ್ಧಿಪಡಿಸುವಂತವರಾಗಬೇಕು ಎಂಬುದು ಈ ಯೋಜನೆಯ ಆಶಯವಾಗಿದೆ

1. ಮಾಧ್ಯಮಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾಗಿರುವುದನ್ನು ಗುರುತಿಸಿ
1. ಮುದ್ರಣ ಮಾಧ್ಯಮಗಳಿಗೆ ಸಂಬಂಧಿಸಿ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈ ಗೊಳ್ಳುವ ಹೊಣೆಯನ್ನು ಭಾರತೀಯ ಪತ್ರಿಕಾ ಮಂಡಳಿಗೆ (ಪಿಸಿಐ) ನೀಡಲಾಗಿದೆ
2.ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಸುದ್ದಿ ಪ್ರಸಾರಕರ ಸಂಘಟನೆಗೆ (ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್/ಎನ್ಬಿಎ) ವಹಿಸಲಾಗುವುದು.
A. 1 ಮಾತ್ರ ಸರಿಯಿದೆ
B. 2 ಮಾತ್ರ ಸರಿಯಿದೆ
C. 1 ಮತ್ತು 2 ಹೇಳಿಕೆಗಳು ಸರಿಯಿದೆ
D. ಯಾವ ಹೇಳಿಕೆಗಳು ಸರಿಯಿಲ್ಲ

2. ಲೈಟ್ ಇಟ್ ಅಪ್ ಬ್ಲೂ ಪ್ರಚಾರ ಕಾರ್ಯಕ್ರಮ ಯಾವುದಕ್ಕೆ ಸಂಬಂಧಿಸಿದೆ ?
A. ಆಟಿಸಂ
B. ಅಂಯೋಟ್ರೋಫಿಕ್ ಲ್ಯಾಟರಲ್ ಸ್ಕಲೆರೊಸಿಸ್
C. ಸೆರೆಬ್ರಲ್ ಪಾಲ್ಸಿ
D. ಯಾವುದು ಅಲ್ಲ

3. ಅಟಲ್ ಟಿಂಕೇರಿಂಗ್ ಲ್ಯಾಬ್ಗಳನ್ನು ಯಾವ ತರಗತಿಯ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾಗಿದೆ?
A. 1-5 ನೇ ತರಗತಿ
B. 3-6 ನೇ ತರಗತಿ
C. 8-10 ನೇ ತರಗತಿ
D. 6-12 ನೇ ತರಗತಿ

4. ಉತ್ಕಲ ದಿನಾಚರಣೆಯನ್ನು ಯಾವ ರಾಜ್ಯ ಆಚರಿಸುತ್ತದೆ ?
A. ಪಶ್ಚಿಮ ಬಂಗಾಲ
B. ಒಡಿಶಾ
C. ಮಧ್ಯ ಪ್ರದೇಶ
D. ಛತ್ತೀಸ್ ಗಡ

5. ರೂಪಶ್ರೀ ಯೋಜನೆಯು ಯಾವುದಕ್ಕೆ ಸಂಬಂಧಿಸಿದೆ ?
A. ಆರ್ಥಿಕವಾಗಿ ಹಿಂದುಳಿದ ಬಡ ಹೆಣ್ಣುಮಕ್ಕಳ ವಿವಾಹಕ್ಕೆ
B. ಸೌಂದರ್ಯ ಸ್ಪರ್ಧೆಗೆ
C. ಮತ್ತು ಕ್ಕೂ
D. ಯಾವುದಕ್ಕೂ ಅಲ್ಲ

6. ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಾಣಿಕೆಯಾಗಿದೆ?
A. ಲಾರ್ಡ್ ಕಾರ್ನ್ವಾಲೀಸ್ – ಸಹಾಯಕ ಸೈನ್ಯ ಪದ್ದತಿ
B. ಲಾರ್ಡ್ ಡಾಲ್ ಹೌಸಿ – ಖಾಯಂ ಜಮೀನ್ದಾರಿ ಪದ್ದತಿ
C. ಲಾರ್ಡ್ ಲಿಟ್ಟನ್ – ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿ
D. ಲಾರ್ಡ್ ಕರ್ಜನ್ – ಬಂಗಾಳದ ವಿಭಜನೆ

7. ಭಾರತೀಯ ಇತಿಹಾಸದಲ್ಲಿ 1556ರಲ್ಲಿ ಯಾವ ಪ್ರಮುಖ ಘಟನೆ ನಡೆಯಿತು?
A. ಅಕ್ಬರ್ ಮತ್ತು ಹೇಮು ನಡುವೆ 2ನೇ ಪಾಣಿಪತ್ ಕದನ
B. ಬಾಬರ್ ಮತ್ತು ಇಬ್ರಾಹಿಂ ಲೋಧಿ ನಡುವೆ ಮೊದಲ ಪಾಣಿಪತ್ ಕದನ
C. ಮಹಮ್ಮದ್ ಬಿನ್ ತುಘಲಕ್ನಿಂದ ದೆಹಲಿಯಿಂದ ದೇವಗಿರಿಗೆ ರಾಜಧಾನಿ ಬದಲಾವಣೆ
D. ಮೇಲಿನ ಯಾವುದೂ ಅಲ್ಲ

8. ಇಂಟರ್’ಪೋಲ್’ನ ಪ್ರಧಾನ ಕಚೇರಿ ಲಿಯೊನ್ ನಗರದಲ್ಲಿದೆ. ಅದು ಯಾವ ದೇಶದಲ್ಲಿರುವ ನಗರ?
A. ಇಟಲಿ
B. ಜರ್ಮನಿ
C. ಸ್ಪೇನ್
D. ಫ್ರಾನ್ಸ್

9. ‘ಘೂಮರ್’ ಇದು ಯಾವ ರಾಜ್ಯಕ್ಕೆ ಸಂಬಂಧಪಟ್ಟ ನೃತ್ಯ ಪ್ರಕಾರವಾಗಿದೆ?
A. ಗುಜರಾತ್
B. ರಾಜಸ್ಥಾನ
C. ಒಡಿಶಾ
D. ಅಸ್ಸಾಂ

10. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆ ಈ ಬಾರಿ ಯಾವ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ?
A. ಅರಿವು ಮೂಡಿಸುವ ಕಾರ್ಯಕ್ರಮ
B. ಉಚಿತ ಯೋಗ ತರಬೇತಿ
C. ವಿಶೇಷ ಅಂಚೆ ಚೀಟಿಗಳ ಬಿಡುಗಡೆ
D. ಯೋಗಾಭ್ಯಾಸಕ್ಕಾಗಿ ಅಂತರರಾಷ್ಟ್ರೀಯ ಪ್ರವಾಸ

ಉತ್ತರಗಳು: 1.C 2.A 3.D 4.B 5.A 6.D 7. A 8.D 9.B 10.C 

Related Posts
Karnataka: KAS personality test ratio goes up, 1:5
The state Cabinet on 22nd Feb decided to increase the ratio in shortlisting the number of candidates for personality test for gazetted probationers’ examination conducted by the Karnataka Public Service ...
READ MORE
System down on day one of RTE online application process
What is RTE? The Right of Children to Free and Compulsory Education Act' or 'Right to Education Act also known as RTE', is an Act of the Parliament of India enacted ...
READ MORE
Govt plans to institute one of its kind Annual Employment Survey
An estimated million people are joining India’s workforce every month, thanks to its demographic dividend of a high number of youth in the population. As of now, the only employment data ...
READ MORE
18th March 2017 – Today’s Karnataka State Current Affairs – KAS / KPSC Exams
  State to file revision petition in SC on quashed SC/ST promotions The Cabinet on 17th March decided to file a revision petition challenging the Supreme Court ruling which struck down the consequential ...
READ MORE
Karnataka Current Affairs – KAS/KPSC Exams 24th Feb 2019
Vande Bharat from Bengaluru to Mangaluru soon Vande Bharat Express is a 16-coach train which can accommodate 1,128 passengers Vande Bharat Express will soon be introduced on Bengaluru-Mangaluru, Mangaluru-Chennai and Mangaluru-Hyderabad routes, It ...
READ MORE
“12th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಪರೇಷನ್ ಶಕ್ತಿ ಸುದ್ದಿಯಲ್ಲಿ ಏಕಿದೆ ? ದೇಶದ ಎರಡೆನೇ ಅಣು ಪರೀಕ್ಷೆ ಪೋಖ್ರಾಣ್–2 ಅಥವಾ ಆಪರೇಷನ್ ಶಕ್ತಿ ನಡೆದು ಶುಕ್ರವಾರಕ್ಕೆ (ಮೇ 11) 20 ವರ್ಷ ತುಂಬಿದೆ. ಮೇ 11,13 ರಂದು ನಡೆದ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿದ್ದವು. ಭಾರತದ ಮಿಸೈಲ್‌ಮ್ಯಾನ್ ಎಂದೇ ಖ್ಯಾತರಾಗಿದ್ದ ಮಾಜಿ ...
READ MORE
National Current Affairs – UPSC/KAS Exams – 26th September 2018
Criminalisation of politics Why in news? The Supreme Court directed political parties to publish online the pending criminal cases of their candidates and urged Parliament to bring a “strong law” to cleanse ...
READ MORE
Sustainable Development Goals (SDGs)
The Sustainable Development Goals (SDGs) are officially known as Transforming our world: the 2030 Agenda for Sustainable Development They are an intergovernmental set of aspiration Goals with 169 targets. The Goals are contained in ...
READ MORE
National Current Affairs – UPSC/KAS Exams – 8th August 2018
Scrub typhus is key encephalitis cause in eastern U.P.: study Why in news? Three years of data from Gorakhpur’s Baba Raghav Das (BRD) Medical College has confirmed that the majority of Acute ...
READ MORE
Oxycontin pills. oxycodone hydrochloride. prescription only pain medication. (Photo by Lawrence K. Ho/Los Angeles Times via Getty Images)
In order to ensure that there is no shortage of drugs in State-run health centres and that procurement is directly proportionate to requirement, the Department of Health and Family Welfare ...
READ MORE
Karnataka: KAS personality test ratio goes up, 1:5
System down on day one of RTE online
Govt plans to institute one of its kind Annual
18th March 2017 – Today’s Karnataka State Current
Karnataka Current Affairs – KAS/KPSC Exams 24th Feb
“12th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams – 26th
Sustainable Development Goals (SDGs)
National Current Affairs – UPSC/KAS Exams – 8th
New Software to Track Supply – Demand of

Leave a Reply

Your email address will not be published. Required fields are marked *