“3rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

ಮತಗಟ್ಟೆ ಮಾಹಿತಿಗೆ ಚುನಾವಣಾ ಆ್ಯಪ್!

 • ನಿಮ್ಮ ಹಕ್ಕು ಚಲಾಯಿಸುವ ಮತಗಟ್ಟೆ ಎಲ್ಲಿದೆ? ಅದನ್ನು ತಲುಪುವ ಮಾರ್ಗ ಯಾವುದು? ಸಂಚಾರ ದಟ್ಟಣೆ ಕಿರಿಕಿರಿ ಇಲ್ಲದೆ ಸುಲಭವಾಗಿ ತಲುಪಲು ಇರುವ ಮಾರ್ಗಗಳು ಯಾವುವು? ಸರತಿಯಲ್ಲಿ ಎಷ್ಟು ಜನರಿದ್ದಾರೆ? ಇಂತಹ ಹಲವು ಮಾಹಿತಿಯನ್ನು ಈಗ ಬೆರಳ ತುದಿಯಲ್ಲೇ ಪಡೆಯಬಹುದು!
 • ಮತ ಕ್ಷೇತ್ರ, ಮತಗಟ್ಟೆ, ಅಭ್ಯರ್ಥಿಯ ವಿವರ ಸೇರಿ ಹಲವು ಮಾಹಿತಿಗಳು ಕೂಡ ಇಲ್ಲಿ ದೊರೆಯುತ್ತವೆ. ದೇಶದಲ್ಲೇ ಮೊದಲ ಬಾರಿಗೆ ಈ ವಿನೂತನ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.
 • ಚುನಾ ವಣೆಗೆ ಸಂಬಂಧಿಸಿದ ಅನೇಕ ಮಾಹಿತಿಗಳಿಂದ ಕೂಡಿರುವ ಆಪ್ ಅನ್ನು ಚುನಾವಣಾ (chunavana) ಹೆಸರಿನಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಅಭಿವೃದ್ಧಿಪಡಿಸಿದ್ದು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದೆ.
 • ಇಡೀ ರಾಜ್ಯದ ಭೌಗೋಳಿಕ ಮಾಹಿತಿ ವ್ಯವಸ್ಥೆ ಯನ್ನು ಈ ಆಪ್​ನಲ್ಲಿ ವೀಕ್ಷಿಸಲು ಸಾಧ್ಯವಿದೆ. ರಾಜ್ಯದ 56,696 ಮತಗಟ್ಟೆಗಳು ಮತ್ತು ಅವುಗಳ ನಕ್ಷೆಯೂ ಲಭ್ಯವಿದೆ

ಮತದಾರರ ಸಮಸ್ಯೆಗೆ ಪರಿಹಾರ

 • (chunavana) ಆ್ಯಪ್ ಅನ್ನು ನಾಲೇಜ್, ಆಟಿಟ್ಯೂಡ್ ಆಂಡ್ ಪ್ರ್ಯಾಕ್ಟೀಸ್ (ಕೆಎಪಿ) ಸಮೀಕ್ಷೆಯಲ್ಲಿನ ಅಂಶಗಳ ಆಧಾರ ದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಸಮೀಕ್ಷೆಯಲ್ಲಿ ಶೇ.25 ಮಂದಿ ತಮಗೆ ಮತಗಟ್ಟೆ ಎಲ್ಲಿದೆ ಎಂಬುದು ತಿಳಿಯದೆ ಮತದಾನ ಮಾಡುತ್ತಿಲ್ಲ ಎಂದಿದ್ದಾರೆ. ನಗರಪ್ರದೇಶದ ಶೇಕಡ 17.5 ಮಂದಿ ಸರತಿ ಸಾಲುಗಳಲ್ಲಿ ನಿಲ್ಲಲಾಗದೆ ಮತ ಚಲಾಯಿಸುವುದಿಲ್ಲ ಎಂದಿದ್ದರು.
 • ಹಾಗೆಯೇ ಶೇ.7.5 ನಗರವಾಸಿಗಳು ಅಭ್ಯರ್ಥಿ ಮತ್ತು ಮತಕ್ಷೇತ್ರದ ಬಗ್ಗೆ ಗೊತ್ತಿಲ್ಲದ ಕಾರಣ ಮತದಾನ ಮಾಡಲು ಆಗುತ್ತಿಲ್ಲ ಎಂದಿದ್ದರು. ಈ ಎಲ್ಲ ಸಮಸ್ಯೆಗಳಿಗೆ (chunavana) ಆ್ಯಪ್ ಪರಿಹಾರ ದೊರಕಿಸಿಕೊಡಲಿದೆ.

ಮಾಡಬೇಕಾದುದೇನು?

 • ವೋಟರ್ ಕಾರ್ಡ್​ನಲ್ಲಿರುವ ಸಂಖ್ಯೆ ಮಾಹಿತಿ ನಮೂದಿಸುವ ಮೂಲಕ ನಿಮ್ಮ ಮತಗಟ್ಟೆಯನ್ನು ತಿಳಿದುಕೊಳ್ಳುವುದರ ಜತೆಗೆ ತಲುಪುವ ಮಾರ್ಗವನ್ನು ತಿಳಿಸಿಕೊಡುತ್ತದೆ. ಮತಗಟ್ಟೆಯಲ್ಲಿರುವ ದಟ್ಟಣೆ ಮತ್ತು ಸರತಿ ಸಾಲಿನ ಮಾಹಿತಿ ಪಡೆದುಕೊಳ್ಳಬಹುದು.
 • ಬೂತ್ ಅಧಿಕಾರಿಗಳಿಂದ ಹಿಡಿದು ವಿವಿಧ ಶ್ರೇಣಿಯ ಅಧಿಕಾರಿಗಳ ಮಾಹಿತಿಯೂ ಸಿಗುತ್ತದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗಾಗಿ ಗಾಲಿಕುರ್ಚಿ ಕಾಯ್ದಿರಿಸಲು ಅವಕಾಶವೂ ಇದೆ. ನಿಮ್ಮ ಮತಕ್ಷೇತ್ರದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಲಭ್ಯ.
 • ಇನ್ನಿತರ ಸಂದರ್ಭಗಳಲ್ಲೂ ಈ ಆಪ್ ಬಳಸಬಹುದು. ಹೊಸ ಮತದಾರರಾಗಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಇಲ್ಲವೆ ತುರ್ತು ಸಂದರ್ಭಗಳಲ್ಲಿ ಹತ್ತಿರದ ಪೊಲೀಸ್ ಠಾಣೆ, ಆರೋಗ್ಯ ಕೇಂದ್ರ ತಲುಪಲು ಬಳಸಬಹುದು.
 • ಈ ಆಪ್ ಮೂಲಕ ನೇರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಿರುವುದರಿಂದ ಪರಿಣಾಮಕಾರಿಯಾಗಿ ಚುನಾವಣೆ ನಡೆಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತರಲು ಸಹಕಾರಿಯಾಗಲಿದೆ.

ಡ್ಯಾಷ್ ಬೋರ್ಡ್

 • ರಾಜ್ಯದ ಚುನಾವಣಾ ಮಾಹಿತಿ ವ್ಯವಸ್ಥೆಯು ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಆಧಾರಿತ ವೆಬ್ ಪೋರ್ಟಲ್ ಆಗಿದೆ. ರಾಜ್ಯದ ಚುನಾವಣೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಇದರಲ್ಲಿ ಲಭ್ಯ. ಸದರಿ ವೆಬ್​ಸೈಟ್​ನಲ್ಲಿ ಮತಕೇಂದ್ರ ಮತ್ತು ಮತಕ್ಷೇತ್ರ ಹಾಗೂ ಅದರ ವ್ಯಾಪ್ತಿಯ ಮಾಹಿತಿಗಳು ಸೇರಿ ಮತಗಟ್ಟೆಯಲ್ಲಿ ಲಭ್ಯವಿರುವ ಮಾಹಿತಿಗಳ ಬಗ್ಗೆಯೂ ವಿವರ ನೀಡುತ್ತದೆ.
 •  ಜನಸಂಖ್ಯೆ ವಿವರ, ಮತಪಟ್ಟಿ ವಿವರ, ಹಿಂದಿನ ಚುನಾವಣೆಯ ಅಂಕಿ-ಅಂಶ, ಅಭ್ಯರ್ಥಿಗಳ ವಿವರ, ಚುನಾವಣೆಯಲ್ಲಿ ಸಾಧಿಸಿದ ಗೆಲುವಿನ ಅಂತರ ಸೇರಿ ಹಲವಾರು ವಿವರಣಾತ್ಮಕ ಮತ್ತು ತುಲನಾತ್ಮಕ ಮಾಹಿತಿಗಳು ದೊರೆಯುತ್ತದೆ. ಒಟ್ಟಾರೆಯಾಗಿ ನಾಗರಿಕರಿಗೆ ಪ್ರಜಾಪ್ರಭುತ್ವವನ್ನು ಅರಿತುಕೊಳ್ಳಲು ಅಗತ್ಯವಿರುವ ಮಾಹಿತಿಗಳು ಇಲ್ಲಿ ದೊರೆಯುತ್ತವೆ.

ರೈಲಿನಲ್ಲೂ ವಿಮಾನ ಮಾದರಿಯಲ್ಲಿ ಆಹಾರ

 • ವಿಮಾನದಲ್ಲಿ ಪ್ರಯಾಣಿಕರಿಗೆ ನೀಡುವ ಪ್ಯಾಕ್ಡ್ ಮಿನಿ ಮೀಲ್ಸ್ ಮಾದರಿಯಲ್ಲೇ ರೈಲು ಪ್ರಯಾಣಿಕರಿಗೂ ಕುಳಿತಲ್ಲೇ ಗುಣಮಟ್ಟದ ಆಹಾರ ವಿತರಿಸುವ ಯೋಜನೆಯನ್ನು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ರೂಪಿಸಿದೆ.
 • ಐಆರ್​ಸಿಟಿಸಿ ಆಹಾರ ಸೇವೆ ಇರುವ ರೈಲಿನಲ್ಲಿ ಈ ಮಿನಿ ಮೀಲ್ಸ್ ಪೂರೈಕೆ ಇನ್ನು ಎರಡ್ಮೂರು ತಿಂಗಳಲ್ಲಿ ಆರಂಭವಾಗಲಿದೆ. 5-6 ತಾಸು ಪ್ರಯಾಣದ ಅವಧಿಯ ರೈಲುಗಳಲ್ಲಿ ಮೊದಲಿಗೆ ಈ ಸೇವೆ ಜಾರಿಗೆ ಬರಲಿದೆ. ಟಿಎಫ್​ಎಸ್, ಹಲ್ದಿರಾಮ್ ಐಟಿಸಿ, ಎಂಟಿಆರ್ ಇನ್ನಿತರ ಕಂಪನಿಗಳ ಜತೆ ರೈಲ್ವೆ ಮಂಡಳಿ ಈಗಾಗಲೇ ಸಭೆ ನಡೆಸಿ, ರ್ಚಚಿಸಿದೆ.
 • ಸಸ್ಯಾಹಾರದ ಮಿನಿ ಮೀಲ್ಸ್​ಗೆ -ಠಿ; 70–ಠಿ;80, ಮಾಂಸಾಹಾರಕ್ಕೆ -ಠಿ; 140–ಠಿ;150 ನಿಗದಿಮಾಡುವ ಸಾಧ್ಯತೆಯಿದೆ.ಪ್ರಸ್ತುತ ಶತಾಬ್ದಿ ರೈಲುಗಳ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲೇ ಆಹಾರದ ಸಸ್ಯಾಹಾರ/ಮಾಂಸಾಹಾರ ಆಯ್ಕೆ ಇರುತ್ತದೆ. ಇದರ ಹಣವನ್ನೂ ಟಿಕೆಟ್ ಜತೆ ಪ್ರತ್ಯೇಕವಾಗಿ ಪಡೆಯಲಾಗುತ್ತದೆ.

ಮೆನು ಸೌಲಭ್ಯ, ಕಾರ್ಡ್ ಮೂಲಕ ಪಾವತಿ

 • ಹೋಟೆಲ್​ನಂತೆ ರೈಲು ಪ್ರಯಾಣಿಕರಿಗೆ ಮೆನು (ಆಹಾರದ ಪಟ್ಟಿ) ನೀಡಿ ಆಹಾರ ಆಯ್ಕೆಗೆ ಅವಕಾಶ ನೀಡುವ ಮತ್ತು ಬಿಲ್ ಅನ್ನು ಕ್ರೆಡಿಟ್, ಡೆಬಿಟ್ ಕಾರ್ಡ್​ಗಳ ಮೂಲಕ ಪಾವತಿಸುವ ಸೇವೆಯನ್ನು ರೈಲ್ವೆ ಇಲಾಖೆ 25 ರೈಲುಗಳಲ್ಲಿ ಪರಿಚಯಿಸಿದೆ.
 • ಬೆಂಗಳೂರು- ನವದೆಹಲಿ ಮಧ್ಯೆ ಸಂಚರಿಸುವ ಕರ್ನಾಟಕ ಎಕ್ಸ್​ಪ್ರೆಸ್​ನಲ್ಲೂ ಈ ಸೌಲಭ್ಯವಿದೆ. ಹಂತ ಹಂತವಾಗಿ ಎಲ್ಲ ವಲಯದಲ್ಲೂ ಈ ಸೇವೆ ಅನುಷ್ಠಾನಗೊಳ್ಳಲಿದೆ. ಆಹಾರ ಪೂರೈಸುವವರ ಬಳಿ ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರವಿದ್ದು, ಇದರಲ್ಲಿ ಮೆನುವಿನಲ್ಲಿರುವ ಆಹಾರ ಮತ್ತು ಅದಕ್ಕೆ ತಗುಲುವ ವೆಚ್ಚ ನಮೂದಾಗಿರುತ್ತದೆ.
 •  ಇದನ್ನು ಅವರು ಪ್ರತಿ ಪ್ರಯಾಣಿಕರಿಗೂ ತೋರಿಸಿ ಅವರ ಆಯ್ಕೆಯ ಆಹಾರವನ್ನು ಪೂರೈಸುತ್ತಾರೆ. ಇದರ ದರವನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್​ಗಳ ಮೂಲಕ ಪಾವತಿಸಬಹುದು. ಈ ಸೇವೆಯ ಮೌಲ್ಯಮಾಪನ ಮಾಡಲು ಐಆರ್​ಸಿಟಿಸಿ ಮೇಲ್ವಿಚಾರಣಾ ತಂಡ ರೈಲಿನಲ್ಲಿ ಇರಲಿದೆ.
 •  ಸೇವೆ, ಆಹಾರದ ಗುಣಮಟ್ಟ ಕುರಿತಂತೆ ಪ್ರಯಾಣಿಕರಿಂದ ಮಾಹಿತಿ ಸಂಗ್ರಹಿಸಲಿದೆ. ಪಿಒಎಸ್ ಬಳಕೆ ಬಗ್ಗೆ ನೊಯ್ಡಾದಲ್ಲಿರುವ ಐಆರ್​ಸಿಟಿಸಿಯ ಕೇಂದ್ರೀಯ ಅಡುಗೆ ಘಟಕದಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.
 • ಚಲಿಸುವ ರೈಲಿನಲ್ಲಿ ಪೂರೈಕೆಯಾಗುವ ಆಹಾರಕ್ಕೆ ಅಧಿಕ ಹಣ ಪಡೆಯಲಾಗುತ್ತಿದೆ ಎಂದು ಪ್ರಯಾಣಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಮೆನು ಆಧಾರಿತ ಮತ್ತು ಕಾರ್ಡ್ ಮೂಲಕ ಪಾವತಿಸುವ ಯೋಜನೆಯನ್ನು ಜಾರಿಗೆ ತಂದಿದೆ.

ಡಿಜಿಟಲ್ ವಹಿವಾಟಿಗೆ ಹೊಸ ಸೂತ್ರ

 • ಎಲ್ಲ ಇಲಾಖೆಗಳ ನಗದು ಪಾವತಿ ಕೌಂಟರ್​ಗಳಲ್ಲಿ ಡಿಜಿಟಲ್ ಪೇಮೆಂಟ್​ಗೆ ಅಗತ್ಯವಾಗಿರುವ ಭಿಮ್ ಯುಪಿಐ, ಕ್ಯೂಆರ್ ಕೋಡ್ ಮತ್ತಿತರ ಸೌಲಭ್ಯಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜತೆಗೆ ಡಿಜಿಟಲ್ ವಹಿವಾಟು ಹೆಚ್ಚಿಸಲು 6 ಅಂಶದ ಸೂತ್ರವೊಂದನ್ನು ಸರ್ಕಾರ ಸಿದ್ದಪಡಿಸಿದೆ.
 • ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಇಲಾಖೆ ಕಾರ್ಯದರ್ಶಿ ನಡೆಸಿರುವ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೆದ್ದಾರಿಗಳ ಟೋಲ್ ಪಾವತಿ, ಸಣ್ಣ ವ್ಯಾಪಾರಿಗಳನ್ನು ಡಿಜಿಟಲ್ ವಹಿವಾಟಿನ ವ್ಯಾಪ್ತಿಗೆ ತರಲು ಇರುವ ಮಾರ್ಗಗಳ ಕುರಿತೂ ಸಭೆಯಲ್ಲಿ ರ್ಚಚಿಸಲಾಗಿದೆ.

ಆರು ಅಂಶದ ಸೂತ್ರ

 1. ಎಲ್ಲ ಸರ್ಕಾರಿ ಕಚೇರಿಯ ಕೌಂಟರ್​ಗಳಲ್ಲಿ ಭೀಮ್​ಯುುಪಿಐ ಕ್ಯೂಆರ್ ಕೋಡ್ ಹಾಗೂ ಡಿಜಿಟಲ್ ಪಾವತಿ ಸ್ವೀಕೃತಿ ಕುರಿತ ಫಲಕ ಅಳವಡಿಸುವುದು
 2. ಯುಪಿಐ ಮೂಲಕ ಪಾವತಿ ಮಾಡುವಂತೆ ಗ್ರಾಹಕರ ಮೊಬೈಲ್​ಗೆ ಸಂದೇಶ ರವಾನಿಸುವುದು
 3. ದೇಶಾದ್ಯಂತ 6 ಕೋಟಿಗೂ ಅಧಿಕ ವ್ಯಾಪಾರಿಗಳಿದ್ದಾರೆ. ಪ್ರಸ್ತುತ 31 ಲಕ್ಷ ಪಿಒಎಸ್ ಟರ್ವಿುನಲ್ ಇವೆ. ಉಳಿದ ವ್ಯಾಪಾರಿಗಳನ್ನು ಈ ವ್ಯಾಪ್ತಿಗೆ ತರಲು ಆಂದೋಲನ ನಡೆಸುವುದು
 4. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತುತ ಶೇ. 20 ವಾಹನ ಸವಾರರು ಮಾತ್ರ ಡಿಜಿಟಲ್ ಮೂಲಕ ಶುಲ್ಕ ಪಾವತಿ ಮಾಡುತ್ತಿದ್ದಾರೆ. ಹೀಗಾಗಿ ಆದಷ್ಟು ಹೆಚ್ಚಿನ ವಾಹನಗಳಿಗೆ ಫಾಸ್​ಟ್ಯಾಗ್ ಅಳವಡಿಕೆ ಮಾಡುವುದು.
 5. ಸರ್ಕಾರ ಗ್ರಾಹಕರಿಗೆ ನೀಡುವ ಬಿಲ್​ಗಳಲ್ಲಿ (ವಿದ್ಯುತ್, ನೀರು, ಫೋನ್) ಕ್ಯೂಆರ್ ಕೋಡ್ ಕಡ್ಡಾಯವಾಗಿ ಮುದ್ರಿಸುವುದು
 6. ಮಹಾನಗರಗಳಲ್ಲಿ ನ್ಯಾಷನಲ್ ಮೊಬಿಲಿಟಿ ಕಾರ್ಡ್​ಗೆ ಹೆಚ್ಚಿನ ಆದ್ಯತೆ ನೀಡುವುದು

ನಾಲ್ಕು ವರ್ಷದಲ್ಲಿ 40 ಲಕ್ಷ ಉದ್ಯೋಗ

 • ಜಗತ್ತಿನ ಮುಂಚೂಣಿ ರಾಷ್ಟ್ರಗಳ ಅಂತರ್ಜಾಲ ಬಳಕೆ ವೇಗಕ್ಕೆ ಸರಿಸಮ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ದೂರ ಸಂಪರ್ಕ ಇಲಾಖೆ ‘ರಾಷ್ಟ್ರೀಯ ಡಿಜಿಟಲ್ ಕಮ್ಯುನಿಕೇಷನ್ಸ್ ಪಾಲಿಸಿ 2018’ ಕರಡು ನೀತಿಯನ್ನು ಸಿದ್ಧಪಡಿಸಿದೆ.
 • 2022ರೊಳಗೆೆ 40 ಲಕ್ಷ ಉದ್ಯೋಗ ಸೃಷ್ಟಿ, 10 ಸಾವಿರ ಕೋಟಿ ಹೂಡಿಕೆ ಕ್ರೋಡೀಕರಣ ಗುರಿಯನ್ನು ನೀತಿ ಹೊಂದಿದೆ. ಪರವಾನಗಿ ಶುಲ್ಕ, ತರಂಗಾಂತರ ಬಳಕೆ ಶುಲ್ಕ, ಸಾರ್ವತ್ರಿಕ ಸೇವೆ ತೆರಿಗೆಗಳನ್ನು ಪರಿಷ್ಕರಿಸುವ ಮೂಲಕ -ಠಿ; 7.8 ಲಕ್ಷ ಕೋಟಿ ಸಾಲದಲ್ಲಿ ಮುಳುಗಿರುವ ಟೆಲಿಕಾಂ ಕ್ಷೇತ್ರಕ್ಕೆ ಪುನಶ್ಚೇತನ ಒದಗಿಸುವ ಅಂಶವೂ ನೀತಿಯಲ್ಲಿದೆ.

ಜಿಡಿಪಿಗೆ ಕೊಡುಗೆ ಹೆಚ್ಚಳ

 • 2017ರಲ್ಲಿ ಡಿಜಿಟಲ್ ಸಂವಹನ ಕ್ಷೇತ್ರದಿಂದ ದೇಶದ ನಿವ್ವಳ ದೇಶೀಯ ಉತ್ಪನ್ನ ( ಜಿಡಿಪಿ)ಕ್ಕೆ ಶೇ. 6 ಕೊಡುಗೆ ನೀಡಿದೆ. ಇದನ್ನು 2022ರೊಳಗೆ ಶೇ. 8 ಕ್ಕೆ ಏರಿಸಲು ಯೋಜನೆ ರೂಪಿಸಲಾಗಿದೆ. ಸ್ಥಿರ ದೂರವಾಣಿ ಪೋರ್ಟೆಬಿಲಿಟಿ ಸೇವೆಗಳು, ಶೇ. 50 ಕುಟುಂಬಗಳಿಗೆ ಸ್ಥಿರ ಮಾರ್ಗದಲ್ಲಿ ಬ್ರಾಡ್​ಬ್ಯಾಂಡ್ ಸೇವೆ ಒದಗಿಸುವ ಗುರಿಯೂ ನೀತಿಯಲ್ಲಿದೆ.

ಇನ್ನಷ್ಟು ಅಂಶಗಳು

 • ಪ್ರತಿ ಗ್ರಾಮ ಪಂಚಾಯಿತಿಗೆ 2020ರೊಳಗೆ 1 ಜಿಬಿಪಿಎಸ್ ವೇಗದ ಅಂತರ್ಜಾಲ ಸೇವೆ.
 • ಸುಸ್ಥಿರ ಮತ್ತು ಅಗ್ಗದ ಡಿಜಿಟಲ್ ಸಂವಹನ ಸೇವೆ ನೀಡಲು ತರಂಗಾಂತರ ಹಂಚಿಕೆಗೆ ಸ್ಪರ್ಧಾತ್ಮಕ ಬೆಲೆ ನಿಗದಿ.
 • ಭವಿಷ್ಯದ ಆಧುನಿಕ ಸಂವಹನ ಯುಗದ ಬಳಕೆಗಾಗಿ 3-24 ಗಿಗಾ ಹರ್ಟ್ಸ್​ನ ಮಧ್ಯಮ ತರಂಗಾಂತರ ಮೀಸಲು.
 • ಮೊಬೈಲ್ ಟವರ್​ಗಳ ನಡುವಿನ ಸಂಪರ್ಕದ ಇ ಮತ್ತು ವಿ ಬ್ಯಾಂಡ್ ಬಳಕೆಗೆ ರೂಪುರೇಷೆ.
 • ಡಿಜಿಟಲ್ ಸಂವಹನ ಸಾಧನಗಳು, ಸೇವೆಗಳ ಮೇಲಿನ ತೆರಿಗೆ ಪರಿಷ್ಕರಣೆ.

ರಕ್ಷಣಾ ವೆಚ್ಚ ಭಾರತ ಟಾಪ್-5

 • ರಕ್ಷಣೆಗಾಗಿ ಗರಿಷ್ಠ ವೆಚ್ಚ ಮಾಡುವ ವಿಶ್ವದ ಪ್ರಮುಖ ಐದು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ. ನೆರೆಯ ರಾಷ್ಟ್ರಗಳಿಂದ ಭದ್ರತಾ ಆತಂಕ ಹಾಗೂ ಅತ್ಯಾಧುನಿಕ ಉಪಕರಣಗಳಿಗಾಗಿ ವಿದೇಶಗಳನ್ನು ಅವಲಂಬಿಸಿರುವ ಕಾರಣ ರಕ್ಷಣಾ ವೆಚ್ಚದಲ್ಲಿ ಭಾರಿ ಏರಿಕೆ ಕಂಡುಬಂದಿದೆ.
 • 2017ರಲ್ಲಿ ಭಾರತದ ರಕ್ಷಣಾ ವೆಚ್ಚ ಶೇ. 5.5 ಏರಿಕೆಯಾಗಿ -ಠಿ; 4.2 ಲಕ್ಷ ಕೋಟಿಗೆ ತಲುಪಿದೆ. ರಕ್ಷಣಾ ವೆಚ್ಚದಲ್ಲಿ ಫ್ರಾನ್ಸನ್ನು ಹಿಂದಿಕ್ಕಿರುವ ಭಾರತ ಜಾಗತಿಕವಾಗಿ 5ನೇ ಸ್ಥಾನಕ್ಕೆ ಏರಿದೆ. ಈ ಮೂಲಕ ಅಮೆರಿಕ, ಚೀನಾ ಸಾಲಿಗೆ ಸೇರ್ಪಡೆಯಾಗಿದೆ ಎಂದು ಸ್ಟಾಕ್​ಹೋಮ್ ಇಂಟರ್​ನ್ಯಾಷನಲ್ ಪೀಸ್ ರಿಸರ್ಚ್ ಇನ್​ಸ್ಟಿಟ್ಯೂಟ್ ಹೇಳಿದೆ.
 • ಕಳೆದ ವರ್ಷ ಜಾಗತಿಕವಾಗಿ ಸೇನಾ ವೆಚ್ಚ ಶೇ.2.2 ಏರಿಕೆ ಕಂಡಿದ್ದು, -ಠಿ; 113.3 ಲಕ್ಷ ಕೋಟಿಗೆ ಏರಿಕೆಯಾಗಿದೆ. ಏಷ್ಯಾ, ಮಧ್ಯಪ್ರಾಚ್ಯ, ದಕ್ಷಿಣ ಫೆಸಿಪಿಕ್ ಸಾಗರ ವಲಯದಲ್ಲಿ ಬರುವ ರಾಷ್ಟ್ರಗಳು ಗಣನೀಯ ಪ್ರಮಾಣದಲ್ಲಿ ಭದ್ರತಾ ವೆಚ್ಚದಲ್ಲಿ ಹೆಚ್ಚಳ ಮಾಡುತ್ತಿವೆ. ಏಷ್ಯಾದಲ್ಲೇ ಚೀನಾ ಅತಿ ಹೆಚ್ಚಿನ ಪ್ರಮಾಣದಲ್ಲಿ ಭದ್ರತಾ ವೆಚ್ಚ ಮಾಡುತ್ತಿದೆ.
 • 2008ರಲ್ಲಿ ವಿಶ್ವದ ಒಟ್ಟು ರಕ್ಷಣಾ ವೆಚ್ಚದಲ್ಲಿ ಶೇ. 5.8 ಇದ್ದ ಚೀನಾದ ಪಾಲು 2017ರಲ್ಲಿ ಶೇ. 13ಕ್ಕೆ ಏರಿಕೆಯಾಗಿದೆ. ಚೀನಾ ಸರ್ಕಾರ ಕಳೆದ ಎರಡು ವರ್ಷಗಳಿಂದ ವೆಚ್ಚ ಶೇ. 5.8 ಏರಿಕೆ ಮಾಡುತ್ತಿದೆ.

ಭಾರತದ ಸ್ಥಿತಿ ಏನು?

 • ಭಾರತದ ರಕ್ಷಣಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ, ಸೇನೆಗೆ ಅಗತ್ಯವಾದ ಅತ್ಯಾಧುನಿಕ ಉಪಕರಣಗಳು, ತಂತ್ರಜ್ಞಾನ ಸಿಗುತ್ತಿಲ್ಲ. ಹೆಚ್ಚಿನ ಮೊತ್ತ ಯೋಧರ ವೇತನ, ನಿವೃತ್ತರ ಪಿಂಚಣಿಗೆ ಹೋಗುತ್ತದೆ. ಭದ್ರತಾ ಕ್ಷೇತ್ರಕ್ಕೆ ನೀಡಲಾಗುವ ಒಟ್ಟೂ ಅನುದಾನದಲ್ಲಿ ಶೇ. 14 ಮಾತ್ರ ಸೇನೆಯ ಆಧುನೀಕರಣಕ್ಕೆ ಬಳಕೆಯಾಗುತ್ತಿದೆ

ಶಾಲೆಗಳಿಗೆ ಸೈಬರ್ ಮಾರ್ಗಸೂಚಿ

 • ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಹಾಗೂ ತರಬೇತಿ ಮಂಡಳಿ(ಎನ್​ಸಿಇಆರ್​ಟಿ) ಎಲ್ಲ ಶಾಲೆಗಳಿಗೆ ಸೈಬರ್ ಮಾರ್ಗಸೂಚಿಯ ಸುತ್ತೋಲೆ ಕಳುಹಿಸಿದೆ.
 • ವಿದ್ಯಾರ್ಥಿಗಳಲ್ಲಿ ಸೈಬರ್ ಸುರಕ್ಷತೆ ಹಾಗೂ ಮೌಲ್ಯಯುತವಾಗಿ ಕಂಪ್ಯೂಟರ್ ಬಳಕೆ ಕುರಿತು ಅರಿವು ಮೂಡಿಸಲು ಈ ಮಾರ್ಗಸೂಚಿ ಹೊರಡಿಸಲಾಗಿದೆ. ಈ ಕುರಿತು ಪಾಲಕರಿಗೂ ಅರಿವು ಮೂಡಿಸಬೇಕು ಎಂದು ಶಾಲೆಗಳಿಗೆಎನ್​ಸಿಇಆರ್​ಟಿ ಸೂಚಿಸಿದೆ.

ಮಾರ್ಗಸೂಚಿಯಲ್ಲೇನಿದೆ?

 • ಶಾಲೆಗಳಲ್ಲಿನ ಕಂಪ್ಯೂಟರ್ ಪ್ರಯೋಗಾಲಯಗಳಿಗೆ ನಿರ್ದಿಷ್ಟ ಶಿಕ್ಷಕರ ಜವಾಬ್ದಾರಿ
 • ಯುಎಸ್​ಬಿ ಬಳಕೆ ಮೇಲೆ ನಿರ್ಬಂಧ
 • ಪಾಪ್ ಅಪ್ ಬ್ಲಾಕ್ ಮಾಡಬೇಕು
 • ಡೆಸ್ಕ್​ಟಾಪ್ ಮೇಲೆ ಯಾವುದೇ ಹೊಸ ಐಕಾನ್ ಬಂದರೆ ಪರಿಶೀಲಿಸಿ
 • ಸೈಬರ್​ಬುಲ್ಲಿಗಳ ಜತೆ ವಿದ್ಯಾಥಿಗಳು ಸಂವಹನ ನಡೆಸದಂತೆ ಎಚ್ಚರಿಕೆ
 • ಅನಗತ್ಯ ಸಂವಹನ ನಿಯಂತ್ರಣಕ್ಕೆ ಫಿಲ್ಟರ್ ಬಳಕೆ
 • ಕೇವಲ ಆನ್​ಲೈನ್​ನಲ್ಲಿ ಪರಿಚಿತರಾದ ವ್ಯಕ್ತಿಗಳನ್ನು ಭೇಟಿಯಾಗಬಾರದು
 • ಸಾರ್ವಜನಿಕರೆದುರು ಆನ್​ಲೈನ್​ನಲ್ಲಿ ಮಾಡಲು ಅಸಹ್ಯ ಎನಿಸುವ ಯಾವುದೇ ಚಟುವಟಿಕೆ ಮಾಡದಂತೆ ಎಚ್ಚರಿಕೆ
 • ಅಂತರ್ಜಾಲ ಬಳಕೆಯಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಬದಲಾವಣೆ ಬಗ್ಗೆ ಗಮನ
 • ಮೂರನೇ ವ್ಯಕ್ತಿಯ ಆನ್​ಲೈನ್ ಖಾತೆಯನ್ನು ನೋಡುವುದು ಅಥವಾ ಅದರಲ್ಲಿನ ಸಂದೇಶಗಳನ್ನು ಓದದಂತೆ ಜಾಗೃತಿ
 • ಪರಿಚಯವಿಲ್ಲದ ಮೇಲ್​ಗಳಿಂದ ಬಂದ ಸಂದೇಶ ತೆರೆಯಬಾರದು
 • ವಿದ್ಯಾರ್ಥಿಗಳಿಗೆ ಸೈಬರ್ ಕಾನೂನು ಹಾಗೂ ಜವಾಬ್ದಾರಿ ಕುರಿತು ಶಿಕ್ಷಣ
 • ವಿದ್ಯಾರ್ಥಿಗಳಲ್ಲಿ ಜಾಗೃತಿಗೆ ಸೈಬರ್ ಕಾರ್ಯಾಗಾರ

~~~***ದಿನಕ್ಕೊಂದು ಯೋಜನೆ***~~~

ಡಿಜಿಯಾತ್ರಾ – ಏರ್ ಟ್ರಾವೆಲರ್ಸ್ಗಾಗಿ ಹೊಸ ಡಿಜಿಟಲ್ ಅನುಭವ

 • ಡಿಜಿ ಯಾತ್ರಾ” ಉಪಕ್ರಮದ ಅಡಿಯಲ್ಲಿ ಸಿವಿಲ್ ಏವಿಯೇಷನ್ ​​ಸಚಿವಾಲಯವು ಆಧಾರ್ ಮತ್ತು ಮೊಬೈಲ್ ಫೋನ್ಗಳನ್ನು ಬಳಸಿ ಏರ್ಪೋರ್ಟ್ಗಳಲ್ಲಿ ಡಿಜಿಟಲ್ ಮತ್ತು ಬೋರ್ಡಿಂಗ್ ಪಾಸ್ ಮತ್ತು ಸೆಕ್ಯುರಿಟಿ ಚೆಕ್-ಇನ್ಗಳನ್ನು ಡಿಜಿಟಲ್ ಮಾಡಲು ಯೋಜಿಸುತ್ತಿದೆ.
 • ಈ ಉಪಕ್ರಮದ ಅಡಿಯಲ್ಲಿ, ವಿಮಾನ ನಿಲ್ದಾಣ ಪ್ರವೇಶ ಮತ್ತು ಪ್ರಯಾಣಿಕರ ಪರಿಶೀಲನೆಗಾಗಿ ಡಿಜಿಟಲ್ ವಿಧಾನವನ್ನು ಬಳಸಲಾಗುತ್ತದೆ. ಈ ಕ್ರಮವು ಭದ್ರತೆ ಮತ್ತು ಬೋರ್ಡಿಂಗ್ ಕಾರ್ಯವಿಧಾನವನ್ನು ಸರಾಗಗೊಳಿಸುವ ಉದ್ದೇಶವನ್ನು ಹೊಂದಿದೆ. ಒಟ್ಟಾರೆಯಾಗಿ, ಉಪಕ್ರಮವು ಸಂಪೂರ್ಣ ವಾಯುಯಾನ ಅನುಭವವನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡುವ ಗುರಿ ಹೊಂದಿದೆ.
 • ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಪ್ರಕಾರ, ಉದ್ದೇಶಿತ ಉಪಕ್ರಮವು ಯಾವುದೇ ಕಾಗದದ ಅಗತ್ಯವಿಲ್ಲ ಮತ್ತು ಪ್ರಯಾಣಿಕರನ್ನು ಆಧಾರ್ ಸಂಖ್ಯೆ, ಪಾಸ್ಪೋರ್ಟ್ ಅಥವಾ ಇತರ ದಾಖಲೆಗಳ ಮೂಲಕ ಸುರಕ್ಷಿತವಾಗಿ ಗುರುತಿಸಲಾಗುತ್ತದೆ.
 • ಸಚಿವಾಲಯ ಈಗ ಏಕರೂಪದ ಮಾನದಂಡಗಳನ್ನು ಮತ್ತು ಪ್ರೋಟೋಕಾಲ್ಗಳನ್ನು ಸ್ಥಾಪಿಸುವುದರಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದು ಮುಂಬರುವ ವ್ಯವಸ್ಥೆಯಲ್ಲಿ ಅನ್ವಯಿಸಬಹುದು….

 ದಿನಕ್ಕೆ ಹತ್ತು ಪ್ರಶ್ನೋತ್ತರಗಳು

1. ಚುನಾವಣಾ ಆಪ್ ನ ಬಗ್ಗೆ ಕೊಟ್ಟಿರುವ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1. ದೇಶದಲ್ಲೇ ಮೊದಲ ಬಾರಿಗೆ ಈ ವಿನೂತನ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.
2. ಚುನಾ ವಣೆಗೆ ಸಂಬಂಧಿಸಿದ ಅನೇಕ ಮಾಹಿತಿಗಳಿಂದ ಕೂಡಿರುವ ಆಪ್ ಅನ್ನು ಚುನಾವಣಾ (chunavana) ಹೆಸರಿನಲ್ಲಿ ಕೇಂದ್ರ ಮುಖ್ಯ ಚುನಾವಣಾಧಿಕಾರಿ ಕಚೇರಿ ಅಭಿವೃದ್ಧಿಪಡಿಸಿದೆ
A. ಮೊದಲನೇ ಹೇಳಿಕೆ ಸರಿಯಾಗಿದೆ
B. ಎರಡನೇ ಹೇಳಿಕೆ ಸರಿಯಾಗಿದೆ
C. ಎರಡು ಹೇಳಿಕೆಗಳು ಸರಿಯಿದೆ
D. ಎರಡು ಹೇಳಿಕೆಗಳು ತಪ್ಪಾಗಿವೆ

2. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಪರಿವೀಕ್ಷಣಾ ಕೇಂದ್ರ (ಕೆಎಸ್ಎನ್ಡಿಎಂಸಿ) ಯಾವ ಹೆಲ್ಪ್ಲೈನ್ ಅನ್ನು ನಿರ್ವಹಿಸುತ್ತದೆ?
A. ರೈತ ಮಿತ್ರ
B. ವರುಣ ಮಿತ್ರ
C. ಸೂರ್ಯ ಮಿತ್ರ
D. ಯಾವುದು ಅಲ್ಲ

3. ಭಾರತೀಯ ಸೇನೆಯ ವಿಜಯ ಪ್ರಹಾರ 2018 ಅಭ್ಯಾಸವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು ?
A. ಪಂಜಾಬ್
B. ಕೇರಳ
C. ರಾಜಸ್ಥಾನ್
D. ಮಧ್ಯಪ್ರದೇಶ

4. ಯಾವ ದೇಶವು ಇತ್ತೀಚೆಗೆ ತನ್ನ ಬ್ಯಾಂಕ್ ಹಾಗು ಇತರೆ ಹಣಕಾಸು ಸಂಸ್ಥೆಗಳು ಬಿಟ್ ಕರೆನ್ಸಿ ಮತ್ತು ಬೇರೆ ಕ್ರಿಪ್ಟೋ ಕರೆನ್ಸಿಗಳನ್ನು ಉಪಯೋಗಿಸುವುದನ್ನು ನಿಷೇದಿಸಿತು ?
A. ಇರಾಕ್
B. ಜರ್ಮನಿ
C. ಯು.ಎಸ್.ಎ
D. ಇರಾನ್

5. ಚಿಕುನ್ ಗುನ್ಯಾ ರೋಗದ ವಿರುದ್ಧ ಒಳ್ಳೆಯ ಆಂಟಿವೈರಲ್ ಚಟುವಟಿಕೆಯನ್ನು ಪ್ರದರ್ಶಿಸುವ,ಐ.ಐ.ಟಿ ರೂರ್ಕೀಯವರು ಸಂಶೋದಿಸಿರುವ ಸಣ್ಣ ಅಣುವಿನ ಹೆಸರೇನು ?
A. ಪೆಪ್-I
B. ಪೆಪ್-II
C. ಕ್ರ್ಯಪ್ಟಾನ್
D. ಪೆಪ್ಟಸ್

6. ಪಳೆಯುಳಿಕೆ ಇಂಧನಗಳಾದ ಪೆಟ್ರೋಲಿಯಂ ಮತ್ತು ಇದ್ದಿಲಿನಂತಹ ವಸ್ತುಗಳಿಂದ ಗಂದಕವನ್ನು ಬೇರ್ಪಡಿಸಲು ಯಾವ ಬ್ಯಾಕ್ಟಿರಿಯಾಗಳನ್ನು ಬಳಸಿಕೊಳ್ಳಲಾಯಿತು?
1.ರೊಡೊಕೊಕ್ಕುಸ್ ,ಅಥೋಬ್ಯಾಕ್ಟಾರ್ ಸಲ್ಫ್ಯೂರಿಯೋ
2. ಗೋರ್ಡೋನಿಯಾ ರುಬ್ಬರೊಪ್ರ್ತಿನಿತ, ರೊಡೊಕೊಕ್ಕುಸ್ ಎರಿಥಿರೋಪೋಲಿಸ್ .
A. ಮೊದಲನೆಯದು ಮಾತ್ರ
B. ಎರಡೆನೆಯದು ಮಾತ್ರ
C. 1 ಮತ್ತು 2
D. ಯಾವುದು ಅಲ್ಲ

7. ಯಾವ ರಾಜ್ಯದ ಮುಖ್ಯಮಂತ್ರಿ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಶೇಖಡಾ 2% ಮೀಸಲಾತಿಯನ್ನು ಒದಗಿಸುವುದಾಗಿ ಘೋಷಿಸಿದ್ದಾರೆ?
A. ತೆಲಂಗಾಣ
B. ಆಂಧ್ರಪ್ರದೇಶ
C. ಉತ್ತರಪ್ರದೇಶ
D. ಮಧ್ಯ ಪ್ರದೇಶ

8. 2018 ರ ವಿಶ್ವ ಪುಸ್ತಕ ಮತ್ತು ಕಾಪಿರೈಟ್ ದಿನದ ವಿಷಯವೇನು ?
A. ಓದುವುದು ನಿಮ್ಮ ಆತ್ಮವನ್ನು ಸ್ವಚ್ಛಗೊಳಿಸುತ್ತದೆ
B. ಓದುವುದು ನನ್ನ ಹಕ್ಕು
C. ಜ್ಞಾನಾರ್ಜನೆಗಾಗಿ ಓದುವುದು
D. ಯಾವುದು ಅಲ್ಲ

9. ನಾಕೋ ಸರೋವರ ಯಾವ ರಾಜ್ಯದಲ್ಲಿದೆ ?
A. ಉತ್ತರಾಖಂಡ್
B. ಉತ್ತರ ಪ್ರದೇಶ
C. ಬಿಹಾರ್
D. ಹಿಮಾಚಲ ಪ್ರದೇಶ

10. ಮೈಸೂರಿನ ಕೊನೆಯ ದಿವಾನ್ ಯಾರು?
A. ಸರ್.ಮಿಜಾ೯ಇಸ್ಮಾಯಿಲ್
B.ಎ.ಆರ್.ಬ್ಯಾನಜಿ೯
C. ಮಾಧವರಾವ್
D. ಅಕಾ೯ಟ್ ಮೂದಲಿಯಾರ್ ರಾಮಸ್ವಾಮಿ

ಉತ್ತರಗಳು : 1.A 2.B 3.C 4.D 5.A 6.C 7.A 8.B 9.D 10.D 

Related Posts
“24th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
FSSAI notifies standards for honey & its products Why in news? The regulator FSSAI has come out with food safety standards for honey and its products, in a bid to curb ...
READ MORE
For import of an aircraft following steps were necessary till now For remittance of funds for import of aircraft, the approval of the ministry was mandatory. Scheduled Operators (airlines) and Regional Scheduled ...
READ MORE
National Current Affairs – UPSC/KAS Exams- 7th August 2018
Scheduled Tribes (Prevention of Atrocities) Amendment Bill, 2018 Why in news? The Lok Sabha on Monday passed the Scheduled Castes and Scheduled Tribes (Prevention of Atrocities) Amendment Bill, 2018, to bypass the ...
READ MORE
Karnataka Current Affairs – KAS/KPSC Exams – 2nd October 2018
Mysuru elated as Gita Gopinath is IMF's chief economist The International Monetary Fund (IMF) appointed Indian-American Gita Gopinath the organisation's chief economist. She will take over as the economic counsellor and director ...
READ MORE
“10th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಭಾರತೀಯ ಪುರಾತತ್ವ ಇಲಾಖೆ ಸುದ್ದಿಯಲ್ಲಿ ಏಕಿದೆ? ತಾಜ್‌ ಸಂರಕ್ಷಣೆಗೆ ಸಂಬಂಧಿಸಿ ನಡೆದ ವಿಚಾರಣೆಯಲ್ಲಿ ಎಎಸ್‌ಐಯನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ವಿಶ್ವ‍ಪ್ರಸಿದ್ಧ ಪ್ರೇಮ ಸ್ಮಾರಕ, ಅಮೃತಶಿಲೆಯ ತಾಜ್‌ಮಹಲ್‌ನ ಗೋಡೆಗಳಲ್ಲಿ ಕಾಣಿಸಿಕೊಂಡಿರುವ ಪಾಚಿ ಆತಂಕಕ್ಕೆ ಕಾರಣವಾಗಿದೆ. ತಾಜ್‌ಮಹಲ್‌ನ ಇತ್ತೀಚಿನ ಚಿತ್ರಗಳನ್ನು ಪರಿಶೀಲಿಸಿದ ಪೀಠವು, ಗೋಡೆಗಳಲ್ಲಿ ಕ್ರಿಮಿ ...
READ MORE
Current Affairs – Karnataka – KAS / KPSC – Exams – 31st March
Second unit of Yeramarus power plant commissioned The second 800-MW unit of Yeramarus thermal plant in Raichur district was commissioned on 30th March. The first unit of the 2x800 MW plant was ...
READ MORE
Karnataka Current Affairs – KAS/KPSC Exams – 4th March 2018
First Rashtrakoota Utsava held in Kalaburagi The department of Kannada and Culture and the Kalaburagi district administration is hosting a Rashtrakoota Utsava for the first time. The celebrations kicked off at Malakhedanalli, ...
READ MORE
A draft notification by the Karnataka Department of Labour proposes to revise the common minimum wage for workers in 23 industries early next year This includes those working in industries like ...
READ MORE
KAS 2017 Notification to be out next week
Lakhs of state civil services aspirants should be thrilled as the Karnataka Public Service Commission (KPSC) will issue a notification for recruitment to 403 Karnataka Administrative Service (KAS) posts next week ...
READ MORE
ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜಯಂತಿ ಅಂಗವಾಗಿ 2015–16ನೇ ಸಾಲಿನಲ್ಲಿ ಪರಿಶಿಷ್ಟರಿಗೆ ವಸತಿ ಒದಗಿಸಲು ಅಂಬೇಡ್ಕರ್‌ ನಿವಾಸ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯ ಅಡಿಯಲ್ಲೇ ಈ ಯೋಜನೆಗೆ ಅನುದಾನ ಹೊಂದಿಸಲಾಗುವುದು. ಗ್ರಾಮೀಣ ...
READ MORE
“24th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Relaxed norms for aircraft import
National Current Affairs – UPSC/KAS Exams- 7th August
Karnataka Current Affairs – KAS/KPSC Exams – 2nd
“10th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Current Affairs – Karnataka – KAS / KPSC
Karnataka Current Affairs – KAS/KPSC Exams – 4th
Proposal to hike minimum wages in 23 industries
KAS 2017 Notification to be out next week
ಅಂಬೇಡ್ಕರ್‌ ನಿವಾಸ ಯೋಜನೆ

Leave a Reply

Your email address will not be published. Required fields are marked *