“3rd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಕಾಡು ಹೆಚ್ಚಳ

ಸುದ್ಧಿಯಲ್ಲಿ ಏಕಿದೆ?ದಾವಣಗೆರೆ ಜಿಲ್ಲೆಯಲ್ಲಿ ಕಾಡು ಹೆಚ್ಚಳವಾಗಿದ್ದು, ಹಸಿರು ವಲಯ ವಿಸ್ತರಣೆಯಲ್ಲಿ ಬಯಲು ಸೀಮೆ ಜಿಲ್ಲೆಗಳ ಪೈಕಿ ದಾವಣಗೆರೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ.

 • ಕೇಂದ್ರದ ಸರ್ವೆ ಆಫ್‌ ಇಂಡಿಯಾ ಕಳೆದ ತಿಂಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಬೆಳವಣಿಗೆಯನ್ನು ಉಲ್ಲೇಖಿಸಿದೆ.
 • ಕಳೆದ ಹತ್ತು ವರ್ಷದಲ್ಲಿ ರಾಜ್ಯದಲ್ಲಿ ಬೆಳವಣಿಗೆಯಾಗಿರುವ ಕಾಡು ಆಧರಿಸಿ ಕೇಂದ್ರ ಸರಕಾರದ ಅಡಿ ಕೆಲಸ ನಿರ್ವಹಿಸುತ್ತಿರುವ ಡೆಹ್ರಾಡೂನ್‌ನ ಈ ಸಂಸ್ಥೆ ಸಮೀಕ್ಷೆ ನಡೆಸಿ ವರದಿ ನೀಡಿದೆ. ಈ ಅವಧಿಯಲ್ಲಿ ಕಾಡು ಕಡಿಮೆಯಾಗಿ ಹಸಿರು ವಲಯ ಕ್ಷೀಣಿಸಿರುವ ಜಿಲ್ಲೆಗಳೂ ಇವೆ. ಆದರೆ, ದಾವಣಗೆರೆಯಲ್ಲಿ ಶೇ.1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಡು ಹೆಚ್ಚಾಗಿದ್ದು, ಜಿಲ್ಲೆಯ ಒಟ್ಟು ಅರಣ್ಯ ವಲಯ ಈಗ ಶೇ.22 ಕ್ಕಿಂತ ಹೆಚ್ಚಾದಂತಾಗಿದೆ.
 • ಆದರೆ, ರಾಷ್ಟ್ರಿಯ ಸರಾಸರಿ ಶೇ.33 ಹಸಿರುವಲಯ ಇರಬೇಕು ಎಂಬ ನಿಯಮಕ್ಕೆ ಜಿಲ್ಲೆ ಶೇ.11 ರಷ್ಟು ಹಿಂದಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಹಸಿರು ವಲಯ ಹೆಚ್ಚುತ್ತಿರುವುದು ಸಮಾಧಾನ ತಂದಿದೆ.
 • 14 ಸಾವಿರ ಹೆಕ್ಟೇರ್‌ ಹೆಚ್ಚಳ: ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷದಲ್ಲಿ 14 ಸಾವಿರ ಹೆಕ್ಟೇರ್‌ ಕಾಡು ಹೆಚ್ಚಳವಾಗಿದೆ ಎಂದು ಸರ್ವೆ ಆಫ್‌ ಇಂಡಿಯಾ ಹೇಳಿದೆ. ಜಿಲ್ಲೆಯಲ್ಲಿ ಕಾಡು ಹೆಚ್ಚಳಕ್ಕೆ ಬಹುದೊಡ್ಡ ಕೊಡುಗೆ ನೀಡಿರುವುದು ಬಯಲು ಸೀಮೆ.

ಕಾಡು ಹೆಚ್ಚಲು ಕಾರಣ

 • ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯ ವಲಯದಲ್ಲಿ ಕಳೆದ ಐದಾರು ವರ್ಷದಿಂದ ನಿರಂತರವಾಗಿ ಕಠಿಣ ಕ್ರಮ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಪ್ರಮಾಣ ಹೆಚ್ಚಿದೆ. ಈ ಅರಣ್ಯ ಪ್ರದೇಶ ಒಟ್ಟು ಏಳು ಸಾವಿರ ಹೆಕ್ಟೇರ್‌ ಇದ್ದು, ಇದನ್ನು ಪೂರ್ಣ ಪ್ರಮಾಣದಲ್ಲಿ ಹದ್ದು ಬಸ್ತು ಮಾಡಿ ಪ್ರತಿ ವರ್ಷ ಗಿಡಗಳನ್ನು ಬೆಳೆಸಿದ್ದು ಹಸಿರು ವಲಯ ಹೆಚ್ಚಳಕ್ಕೆ ಕಾರಣವಾಗಿದೆ .
 • ಟ್ರೀ ಪಾರ್ಕ್‌: ಅರಣ್ಯ ಇಲಾಖೆಯಿಂದ ಜಗಳೂರು ತಾಲೂಕಿನ ಬಿಳಿಚೋಡು, ಹರಪನಹಳ್ಳಿ ಪಟ್ಟಣ ಬಳಿ ಹಾಗೂ ಆನಗೋಡು ಬಳಿ ತಲಾ 30 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್‌ ಅಭಿವೃದ್ಧಿಪಡಿಸಲಾಗಿದೆ. ಹರಪನಹಳ್ಳಿ ತಾಲೂಕಿನ ಚಿಗಟೇರಿ ಬಳಿಯ ನಾರದಮುನಿ ದೈವೀ ವನ, ಜಗಳೂರು ತಾಲೂಕಿನ ಗುಹೇಶ್ವರ ಬಳಿಯ ದೈವೀ ವನ ನಿರ್ಮಿಸಿದ್ದು, ಇಲ್ಲಿ ಗಿಡಗಳು ಬೆಳೆಯುತ್ತಿವೆ.
 • 5 ರಿಂದ 6 ಲಕ್ಷ ಗಿಡ ಜನರಿಗೆ ಹಂಚಿಕೆ : ಕಳೆದ ಕೆಲ ವರ್ಷಗಳಿಂದ ಅರಣ್ಯ ಇಲಾಖೆಯು ಪ್ರತಿ ವರ್ಷ ಸುಮಾರು 5 ರಿಂದ 6 ಲಕ್ಷ ಸಸಿಗಳನ್ನು ನರ್ಸರಿಗಳಲ್ಲಿ ಬೆಳೆಸಿ ಜನರಿಗೆ ಹಂಚಿದೆ. ಜನರು ಈ ಸಸಿಗಳನ್ನು ತಮ್ಮ ಮನೆ, ಜಮೀನುಗಳಲ್ಲಿ ನೆಟ್ಟು ಬೆಳೆಸಿದ್ದಾರೆ. ತೋಟಗಾರಿಕೆ ಮತ್ತು ಅರಣ್ಯ ಯೋಜನೆಯಡಿ ಗಿಡ ಬೆಳೆಸಿ ಪೋಷಿಸುವ ರೈತರಿಗೆ ಇಲಾಖೆಯೇ ಹಣ ನೀಡುವ ಯೋಜನೆಯೊಂದು ಹಸಿರು ವಲಯ ಹೆಚ್ಚಳ್ಳಕ್ಕೆ ಸಹಕಾರಿ ಆಗಿದೆ.

ಅಕ್ಕ ಸಮ್ಮೇಳನ

ಸುದ್ಧಿಯಲ್ಲಿ ಏಕಿದೆ?ಅಮೆರಿಕಾದ ಡಲ್ಲಾಸ್‌ ನಗರದಲ್ಲಿ ಮೂರು ದಿನಗಳ 10ನೇ ವಿಶ್ವ ಕನ್ನಡ ಅಕ್ಕ ಸಮ್ಮೇಳನ ಆರಂಭಗೊಂಡಿತು. ನಾಡಿನ ಕೆಲವು ಮಠಾಧೀಶರು, ಚಲನಚಿತ್ರ ನಟರು, ಶಾಸಕರು ಹಾಗೂ ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು ಇದಕ್ಕೆ ಸಾಕ್ಷಿಯಾದರು.

ಅಮೇರಿಕದ ಕನ್ನಡ ಕೂಟಗಳ ಒಕ್ಕೂಟ (AKKA)

 • ಅಮೇರಿಕದ ಕನ್ನಡ ಕೂಟಗಳ ಒಕ್ಕೂಟ((AKKA) ‍ವೆಂದು ಅಮೆರಿಕಾದ್ಯಂತ, ಹಾಗೂ ವಿಶ್ವ ಪ್ರಸಿದ್ಧಿಯಾಗಿರುವ ಈ ಸಂಸ್ಥೆ ಕರ್ನಾಟಕ ಮೂಲದ ಜನರು ಅಮೇರಿಕ ದೇಶಕ್ಕೆ ವಲಸೆಹೋದ ಬಳಿಕ, ಸ್ಥಾಪಿಸಲ್ಪಟ್ಟ ಕನ್ನಡ ಸಂಘಗಳ ಒಕ್ಕೂಟವಾಗಿದೆ.
 • ಈ ಜನರಿಂದ ಅಮೆರಿಕದ ಎಲ್ಲಾ ರಾಜ್ಯಗಳಲ್ಲಿ ಸ್ಥಾಪಿಸಲ್ಪಟ್ಟ ಅನೇಕ ಕೂಟಗಳೇ ಈ ಕೂಟಗಳಿಗೆ ಕೇಂದ್ರ ಬಿಂದು ಆಗಿ ಕಾರ್ಯ ನಿರ್ವಹಿಸಲು ಅಮೇರಿಕ ಕನ್ನಡ ಕೂಟಗಳ ಆಗರ (Association of Kannada Kootas of America,AKKA) ಪ್ರಯತ್ನಿಸುತ್ತದೆ.

ಐತಿಹ್ಯ

 • 1998ರಲ್ಲಿ ಅರಿಝೋನಾದ ಫೀನಿಕ್ಸ್ ನಗರದಲ್ಲಿ ಜನುಮ ಹೊಂದಿದ, ಈ ‘ಅಕ್ಕ ವಿಶ್ವಕನ್ನಡ ಸಮ್ಮೇಳನ’ದ ಕಲ್ಪನೆ ಅಮೆರಿಕದ ಕೆಲವು ಕನ್ನಡಿಗರ ಮನಸ್ಸಿನಲ್ಲಿ ಮೂಡಿಬಂತು. ಹಾಗಾಗಿ ಮೈತಳೆದ ‘ಅಕ್ಕಾ ಸಂಸ್ಥೆ’ ಯ ‘ ದಶಮಾನೋತ್ಸವ ‘ ದ ಸಂಭ್ರಮವೂ ಮೈತಳೆದಿದೆ.
 • ಅಮೆರಿಕ ಕೆನಡಾ ದಲ್ಲಿರುವ ಕನ್ನಡಿಗರನ್ನು, ಕನ್ನಡ ಭಾಷಿಕರನ್ನು ಒಂದು ಸೂರಿನಡಿಯಲ್ಲಿ ಸೇರಿಸಿ, ಕನ್ನಡ ಸಂಸ್ಕೃತಿ, ಕನ್ನಡ ಭಾಷೆ, ಕಲೆ, ಸಾಹಿತ್ಯ ಸಂಗೀತ ಹಿರಿಮೆ ಗರಿಮೆಗಳನ್ನು ಮನದಟ್ಟುಮಾಡಿ, ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ, ಉಳಿಸಿ ಬೆಳೆಸಿ ಪೋಷಿಸುವ, ಸಂರಕ್ಶಿಸುವ ಉದಾತ್ತ ಧ್ಯೇಯವನ್ನು ಸ್ಥಾಪಿಸಲ್ಪಟ್ಟ ಸಾಂಸ್ಕೃತಿಯ ವೇದಿಕೆಯೇ ಅಕ್ಕ.
 • ವಿಶ್ವದ ಕನ್ನಡಿಗರೆಲ್ಲರಿಗೆ ಒಂದು ಪ್ರೇರಣೆಯನ್ನು 2 ವರ್ಷಗಳಿಗೊಮ್ಮೆ ಆಚರಿಸುತ್ತಾ ಬಂದಿವೆ. ೩೦ ಕ್ಕೂ ಮೀರಿ, ಬೆಳೆದಿರುವ ಕನ್ನಡ ಸಂಘಗಳ ಒಟ್ಟಾರೆ ಕನ್ನಡಿಗರ ಸದಸ್ಯತ್ವ ೭೦,೦೦೦ಕ್ಕೂ ಹೆಚ್ಚಾಗಿದೆ. ಈ ಕನ್ನಡಿಗರೆಲ್ಲಾ ಅಕ್ಕ ವೇದಿಕೆಯಲ್ಲಿ ಒಂದಾಗಿ ಮಾಡಿರುವ ಕನ್ನಡಪರ ಕಾರ್ಯಚಟುವಟಿಕೆಗಳು, ಅನುಕರಣೀಯವಾಗಿವೆ.

ಹೆದ್ದಾರಿ ಬಾರ್‌ಗೆ ಮರುಜೀವ

ಸುದ್ಧಿಯಲ್ಲಿ ಏಕಿದೆ ?ರೈತರ ಸಾಲ ಮನ್ನಾಕ್ಕಾಗಿ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿದ್ದ ಸರಕಾರ, ಇದೀಗ ಹಿಂದಿನ ವರ್ಷ ಸುಪ್ರೀಂಕೋರ್ಟ್‌ ಆದೇಶದಿಂದ ಬಂದ್‌ ಆಗಿದ್ದ ಹೆದ್ದಾರಿ ಪಕ್ಕದ ಮದ್ಯದಂಗಡಿಗಳ ಮರು ಆರಂಭಕ್ಕೆ ಪರವಾನಗಿ ನವೀಕರಿಸಲು ಮುಂದಾಗಿದೆ.

 • ಹಳೆಯ ಆದೇಶದಿಂದ ಬಂದ್‌ ಆಗಿದ್ದ ಗ್ರಾಮೀಣ ಭಾಗದ ಹೆದ್ದಾರಿ ಪಕ್ಕದ ಬಾರ್‌ಗಳೆಲ್ಲ ಮತ್ತೆ ಬಾಗಿಲು ತೆರೆದುಕೊಳ್ಳಲಿವೆ. ಈ ಕುರಿತಂತೆ ರಾಜ್ಯ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರಿಂದಾಗಿ ಪ್ರತಿ ಜಿಲ್ಲೆಗಳಲ್ಲಿಯೂ ಸುಮಾರು 20ರಿಂದ 25 ಬಾರ್‌ಗಳು ಮರು ಜೀವ ಪಡೆದುಕೊಳ್ಳಲಿವೆ. ವಿಶೇಷವೆಂದರೆ, ಪರವಾನಗಿ ನವೀಕರಣಕ್ಕೆ ಯಾವುದೇ ದಂಡ ಅಥವಾ ಹೆಚ್ಚುವರಿ ವಿಶೇಷ ಶುಲ್ಕದ ಅಗತ್ಯ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹಿನ್ನಲೆ

 • ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಿಂದ 500 ಮೀಟರ್‌ ಅಂತರದಲ್ಲಿನ ಮದ್ಯ ಮಾರಾಟ ಅಂಗಡಿಗಳನ್ನು ಬಂದ್‌ ಮಾಡುವಂತೆ 2017ರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಬಳಿಕ ರಾಜ್ಯ ಸರಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ ಹಾದು ಹೋಗಿರುವ ರಾಜ್ಯದ 69 ಕಿ.ಮೀ ಹೆದ್ದಾರಿಯನ್ನು ‘ನಗರ/ಸ್ಥಳೀಯ ಪ್ರಾಧಿಕಾರದ ರಸ್ತೆಗಳು’ ಎಂದು ಘೋಷಣೆ ಮಾಡಿದ್ದರಿಂದ ನಗರ, ಪಟ್ಟಣ ಪ್ರದೇಶದ ಮದ್ಯದಂಗಡಿಗಳು ಪಾರಾಗಿದ್ದವು.
 • ಆದರೆ, ಗ್ರಾಮೀಣ ಭಾಗದಲ್ಲಿನ ಹೆದ್ದಾರಿ ಪಕ್ಕದ 500 ಮೀ. ಒಳಗಿನ ಎಲ್ಲ ಮದ್ಯದಂಗಡಿಗಳು ಬಂದ್‌ ಆಗಿದ್ದವು. ಕೆಲವರು ಸ್ಥಳ ಬದಲಾಯಿಸಿದರೆ, ಇನ್ನು ಕೆಲವರು ಶಾಶ್ವತವಾಗಿ ಬಾಗಿಲು ಮುಚ್ಚಿದ್ದರು. ಈಗ ‘ಅಭಿವೃದ್ಧಿ ಹೊಂದಿದ ಗ್ರಾಮೀಣ ಪ್ರದೇಶ’ಗಳಲ್ಲಿ ಮತ್ತೆ ಮದ್ಯದಂಗಡಿ ಆರಂಭಿಸಲು ಸರಕಾರ ನಿರ್ಧರಿಸಿದೆ

5000 ಜನಸಂಖ್ಯೆ ಇದ್ದರೆ ಮಾತ್ರ

 • ಹೊಸ ಆದೇಶದ ಪ್ರಕಾರ ಎಲ್ಲರೂ ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಲು ಅವಕಾಶ ಇಲ್ಲ. ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಿದ್ದ ಸಾಕಷ್ಟು ಅಭಿವೃದ್ಧಿ ಎನ್ನುವ ಪರಿಭಾಷೆಗೆ ಅನುಗುಣವಾಗಿ 2011ರ ಜನಗಣತಿಯಂತೆ ಐದು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶದ ಬಾರ್‌ಗಳಿಗೆ ಮಾತ್ರ ಪರವಾನಗಿ ನವೀಕರಿಸಲಾಗುತ್ತಿದೆ.
 • ಜತೆಗೆ ಸುಪ್ರೀಂಕೋರ್ಟ್‌ನ ಈ ಹಿಂದಿನ ಆದೇಶದಂತೆ ಶಾಶ್ವತ ಬಂದ್‌ ಆಗಿದ್ದ ಹೆದ್ದಾರಿ ಪಕ್ಕದ ಮದ್ಯದಂಗಡಿಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಸ್ಥಳಾಂತರವಾಗಿರುವ ಅಥವಾ ಹೊಸದಾಗಿ ಆರಂಭಿಸಲು ಇಚ್ಛಿಸುವವರಿಗೆ ಇದರಲ್ಲಿ ಅವಕಾಶ ಇಲ್ಲ

ಪ್ರೋತ್ಸಾಹ ಧನ

ಸುದ್ಧಿಯಲ್ಲಿ ಏಕಿದೆ ?ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾದರಿಯಲ್ಲೇ ಅಲ್ಪಸಂಖ್ಯಾತ ಇಲಾಖೆ ಅಧೀನದ ಹಾಸ್ಟೆಲ್‌ ಹಾಗೂ ವಸತಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸರಕಾರ ಪ್ರೋತ್ಸಾಹ ಧನ ಘೋಷಿಸಿದೆ!

 • ಅಲ್ಪಸಂಖ್ಯಾತ ಇಲಾಖೆ ಅಧೀನದ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರ ಹಾಸ್ಟೆಲ್‌, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಾಲೇಜು, ಮೌಲಾನ್‌ ಆಜಾದ್‌ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, 2 ನೇ ಪಿಯುಸಿ, ಅಂತಿಮ ವರ್ಷದ ಡಿಎಡ್‌, ಡಿಪ್ಲೊಮಾ, ಅಂತಿಮ ವರ್ಷದ ಪದವಿ, ಅಂತಿಮ ವರ್ಷದ ಸ್ನಾತಕೋತ್ತರ ಪದವಿಗಳಲ್ಲಿ ಮೊದಲ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯಿಸುತ್ತದೆ.

ನೇರ ನಗದು ವರ್ಗ

 • ಸರಕಾರದ ಸೂಚನೆಯನ್ವಯ ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು, ಹಾಸ್ಟೆಲ್‌, ಶಾಲಾ, ಕಾಲೇಜುಗಳ ಖಾತೆಗೆ ನೇರವಾಗಿಯೇ ಈ ಪ್ರೋತ್ಸಾಹ ಧನ ವರ್ಗಾವಣೆಯಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇದು ಅನ್ವಯಯವಾಗಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕಸ್ತೂರಿರಂಗನ್‌ ವರದಿ

ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್‌ಜಿಟಿ) ಆದೇಶದ ಹಿನ್ನೆಲೆಯಲ್ಲಿ, ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಡಾ. ಕೆ. ಕಸ್ತೂರಿರಂಗನ್‌ ವರದಿಗೆ ಮರುಜೀವ ಬಂದಿದೆ. ಹಾಗಾಗಿ ಸೂಕ್ಷ್ಮ ಪರಿಸರ ವಲಯ ಕಾಪಾಡಿಕೊಳ್ಳಬೇಕೋ, ಕಾಡಂಚಿನಲ್ಲಿರುವ ಜನರ ಬದುಕನ್ನು ಉಳಿಸಬೇಕೊ ಎಂಬ ಕಗ್ಗಂಟಿನ ಪ್ರಶ್ನೆ ಸರಕಾರಕ್ಕೆ ಎದುರಾಗಿದೆ.

ನಿರ್ಧರಿಸಲು ಗೊಂದಲವೇಕೆ ?

 • ಅರಣ್ಯ ನಾಶವಾದರೆ ಜನಜೀವನ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಪ್ರಕೃತಿ ಮುನಿದರೆ ಪರಿಣಾಮವೇನಾಗುತ್ತದೆ ಎಂಬುದಕ್ಕೆ ಕೊಡಗು ಹಾಗೂ ಕೇರಳದ ದುರಂತ ತಾಜಾ ನಿದರ್ಶನ. ಈ ದೃಷ್ಟಿಯಿಂದ ಪಶ್ಚಿಮಘಟ್ಟ ಸಂರಕ್ಷಿಸಿಕೊಳ್ಳಬೇಕು ಎಂಬ ಕೂಗಿಗೆ ಮಹತ್ವ ಬಂದಿದೆ. ಇದರ ಜತೆಗೇ, ಅರಣ್ಯದಲ್ಲೆ ಬದುಕು ಕಟ್ಟಿಕೊಂಡವರ ಭವಿಷ್ಯದ ವಿಚಾರವೂ ಇದೆ. ಜನರ ಬದುಕಿನ ಬಗ್ಗೆ ಯೋಚಿಸುವುದು ಮುಖ್ಯ.

ಮುಂದಿನ ಮಾರ್ಗೋಪಾಯಗೆಳೇನು?

 • ಕಾಡಿನ ರಕ್ಷಣೆ ಹಾಗೂ ಜನರ ಬದುಕನ್ನು ಉತ್ತಮಪಡಿಸುವ ಕಾರ್ಯ ಏಕಕಾಲಕ್ಕೆ ಆಗಬೇಕು.
 • ವಿಶೇಷವಾಗಿ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ ಜನರು ಕಾಡಿನೊಂದಿಗೇ ಬದುಕು ಸಾಗಿಸುತ್ತ ಬಂದಿದ್ದಾರೆ. ಪಾರಂಪರಿಕ ವಿಧಾನದಲ್ಲಿ ಕಾಡನ್ನು ಸಂರಕ್ಷಿಸುತ್ತಲೂ ಇದ್ದಾರೆ. ಹಾಗಾಗಿ ತಜ್ಞರ ವರದಿ ಜಾರಿಗೊಳಿಸುವಾಗ ಈ ಎರಡೂ ಅಂಶ ನೋಡಬೇಕು.
 • ತಜ್ಞರ ವರದಿಯನ್ನು ಯಥಾವತ್‌ ಜಾರಿಗೊಳಿಸಿದರೆ ಹಳ್ಳಿಯ ಜನ ಸಮಸ್ಯೆಗೆ ಒಳಗಾಗುತ್ತಾರೆ. ಒತ್ತಡಕ್ಕೆ ಮಣಿದು ತಜ್ಞರ ವರದಿಯನ್ನು ಕಸದ ಬುಟ್ಟಿಗೆ ಹಾಕಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತ ನಿರೀಕ್ಷಿತವೆಂದು ಸಮಚಿತ್ತದಿಂದ ಯೋಚಿಸಿ ಹೇಳುವವರೂ ಇದ್ದಾರೆ. ಒಟ್ಟಿನಲ್ಲಿ ಪಶ್ಚಿಮಘಟ್ಟದ ರಕ್ಷಣೆ ಹಾಗೂ ಜನಜೀವನ ಒಟ್ಟೊಟ್ಟಿಗೆ ಸಾಗಬೇಕು ಎನ್ನುವುದು ಇಂಥವರ ಅಭಿಮತ.
 • ಕಸ್ತೂರಿರಂಗನ್‌ ವರದಿ ಬಗ್ಗೆ ಕಳೆದ 5 ವರ್ಷದಿಂದ ಚರ್ಚೆಯಾಗುತ್ತಲೇ ಇದೆ. ಇದರಿಂದ ರಾಜ್ಯದ 10 ಜಿಲ್ಲೆಗಳ 1,553 ಹಳ್ಳಿಗಳು ಬಾಧಿತವಾಗುತ್ತವೆ. ವರದಿಯನ್ನು ಒಪ್ಪಿಕೊಂಡರೆ ಈ ಜನವಸತಿ ಪ್ರದೇಶಗಳಿಂದ ಜನರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ.
 • ಹಾಗಾಗಿ ರಾಜ್ಯ ಸರಕಾರವೂ ಈ ವರದಿಯನ್ನು ತಿರಸ್ಕರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿತ್ತು.

ಸಿದ್ಧತೆ ಮಾಡಿಕೊಳ್ಳದ ರಾಜ್ಯ

 • ಕಸ್ತೂರಿರಂಗನ್‌ ವರದಿ ಸಂಬಂಧ 2017ರ ಫೆ.27ರಂದು ಹೊರಡಿಸಿದ್ದ ಕರಡು ಅಧಿಸೂಚನೆಯಲ್ಲಿ ಬದಲಾವಣೆ ಮಾಡಕೂಡದೆಂದು ಎನ್‌ಜಿಟಿ ಸೂಚಿಸಿದೆ. ಅದರಂತೆ, ಅಂತಿಮ ಅಧಿಸೂಚನೆ ಹೊರಬಿದ್ದರೆ ಪರಿಸರ ಸೂಕ್ಷ್ಮ ವಲಯದಲ್ಲಿನ ರಾಜ್ಯದ ಹಳ್ಳಿಗಳಿಗೆ ಸಮಸ್ಯೆಯಾಗುವ ಆತಂಕವಿದ್ದೇ ಇದೆ. ಜತೆಗೆ ರಾಜ್ಯದ 10 ಜಿಲ್ಲೆಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ ಎಂಬ ಆಕ್ಷೇಪವಿದೆ.
 • ಆಕ್ಷೇಪಣೆ ಸಲ್ಲಿಸಲು ಆ. 25 ಕಡೆಯ ದಿನವಾಗಿತ್ತು. ಈ ಹಂತದಲ್ಲೂ ಮೈಮರೆತಿದ್ದ ರಾಜ್ಯ ಸರಕಾರ ಕಡೆ ಹಂತದಲ್ಲಿ ವರದಿಗೆ ಆಕ್ಷೇಪಿಸಿ ಕೇಂದ್ರಕ್ಕೆ ಪತ್ರ ಬರೆದಿತ್ತು.

ತಾರ್ಕಿಕ ಅಂತ್ಯ ಕಾಣದ ಚರ್ಚೆ 

 • ವಿಧಾನಮಂಡಲದಲ್ಲಿ ಕಸ್ತೂರಿ ರಂಗನ್‌ ವರದಿ ಬಗ್ಗೆ ಹಲವು ಬಾರಿ ಚರ್ಚೆ ನಡೆದಿದೆ. ಮಲೆನಾಡು-ಕರಾವಳಿ ಭಾಗದವರು ಜಾರಿ ವಿರುದ್ಧ ಧ್ವನಿ ಎತ್ತಿದ್ದಾರೆ. ಆದರೆ, ಪರಿಸರ ರಕ್ಷಣೆ ಸಹಿತ ಜನಜೀವನ ಉಳಿಸುವ ಬಗ್ಗೆ ಪರಿಹಾರ ಕಂಡುಕೊಳ್ಳಲು ಸದನದ ಚರ್ಚೆ ಸಂಪೂರ್ಣ ವಿಫಲವಾಗಿದೆ.

‘ಬಡವರ ಬಂಧು’ಯೋಜನೆ

ಸುದ್ಧಿಯಲ್ಲಿ ಏಕಿದೆ?ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ದಿನದ ಮಟ್ಟಿಗೆ ಬಡ್ಡಿರಹಿತ ಸಾಲ ನೀಡುವ ಮಹತ್ವದ ‘ಬಡವರ ಬಂಧು’ ಯೋಜನೆ ಅನುಷ್ಠಾನ ಕುರಿತಂತೆ ಬೀದಿಬದಿ ವ್ಯಾಪಾರಸ್ಥರ ಜತೆ ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಯಶವಂತಪುರ ಎಪಿಎಂಸಿ ಯಾರ್ಡ್​ನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

 • ರಾಜ್ಯದ ಐದು ಮಹಾನಗರಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದ್ದು, ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಲು ಸಭೆ.

ಏಕೆ ಈ ಯೋಜನೆ ?

 • ಕಾಯಿಪಲ್ಯೆ, ಬಟ್ಟೆ, ಸ್ಟೇಷನರಿ, ಕಿರಾಣಿ ಮತ್ತಿತರ ವಸ್ತುಗಳನ್ನು ಬೀದಿಬದಿ ವ್ಯಾಪಾರ ಮಾಡುವ ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ದಿನವೊಂದಕ್ಕೆ ವ್ಯವಹಾರ ಮಾಡಲು ಎಷ್ಟು ಹಣ ಬೇಕಾಗಬಹುದು ಎಂಬುದು ಸೇರಿ ಸಣ್ಣ ವ್ಯಾಪಾರಸ್ಥರು ವಾಸ್ತವವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕ್ರೋಡೀಕರಿಸಿ ಅವರನ್ನು ಸಹಕಾರ ವಲಯದ ವ್ಯಾಪ್ತಿಗೆ ತಂದು ಪರಿಹಾರ ರೂಪಿಸುವುದು ಸಭೆಯ ಉದ್ದೇಶವಾಗಿದೆ.
 • ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಹಾಸನ ಹಾಗೂ ಬೀದರ್ ನಗರಗಳಲ್ಲಿ ಆರಂಭಿಕ ಹಂತದಲ್ಲಿ ಯೋಜನೆ ಜಾರಿ ಮಾಡಲಾಗುತ್ತದೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ವ್ಯಾಪಾರಿಗಳಿಗೆ ನೆರವಾಗುವುದು ಸರ್ಕಾರದ ಉದ್ದೇಶವಾಗಿದೆ. ಏಕೆಂದರೆ ಬಡ್ಡಿದಂಧೆಕೋರರು ಮೀಟರ್ ಬಡ್ಡಿ ಹಾಕಿ ಶೋಷಣೆ ಮಾಡುತ್ತಿದ್ದಾರೆ. ಅದನ್ನು ತಪ್ಪಿಸುವುದಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತರುತ್ತಿದೆ.

ಮಹಾ ಶತಾವಧಾನ

ಸುದ್ಧಿಯಲ್ಲಿ ಏಕಿದೆ ?ಶ್ರೀಸರಸ್ವತಿ ಸಾಧನಾ ಸಂಶೋಧನಾ ಪ್ರತಿಷ್ಠಾನವು ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಹಾ ಶತಾವಧಾನದಲ್ಲಿ 15 ವರ್ಷದ ಮುನಿ ಶ್ರೀಪದ್ಮಪ್ರಭ ಚಂದ್ರಸಾಗರ್​ಜೀ 200 ವಿಭಿನ್ನ ಸಂಗತಿಗಳ ಪ್ರಶ್ನೆಗಳನ್ನು 3 ಗಂಟೆ ಆಲಿಸಿ ನಂತರ ತಮ್ಮ ಸ್ಮರಣಶಕ್ತಿ ಮೂಲಕ ಅವುಗಳನ್ನು ಸಭೆಗೆ ಒಪ್ಪಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.

 • ಧ್ಯಾನದ ಜತೆಗೆ ಆಧ್ಯಾತ್ಮಿಕ, ಸಂಗೀತ, ಗಣಿತ ವಿಷಯಗಳಲ್ಲಿ ಸಿದ್ಧಿಪಡೆದಿರುವ ಶ್ರೀಪದ್ಮಪ್ರಭ ಚಂದ್ರಸಾಗರ್​ಜೀ ಮಹಾ ಶತಾವಧಾನ ಅವರು ಹೊಂದಿರುವ ಅಗಾಧ ಜ್ಞಾನವನ್ನು ಪರಿಚಯಿಸಿಕೊಟ್ಟಿತು.

ಅವಧಾನಂ ಬಗ್ಗೆ ಒಂದಿಷ್ಟು ಮಾಹಿತಿ

 • ಅವಾಧನಾವು ಭಾರತದಲ್ಲಿನ ಅತ್ಯಂತ ಪ್ರಾಚೀನ ದಿನಗಳಿಂದ ಜನಪ್ರಿಯವಾದ ಸಾಹಿತ್ಯಿಕ ಸಾಧನೆಯಾಗಿದೆ. ಅವಧನಾವು ಸಂಸ್ಕೃತ ಸಾಹಿತ್ಯದ ಪ್ರಕ್ರಿಯೆಯಾಗಿ ಹುಟ್ಟಿಕೊಂಡಿತು ಮತ್ತು ಆಧುನಿಕ ಕಾಲದಲ್ಲಿ ತೆಲುಗು ಕವಿಗಳಿಂದ ಪುನರುಜ್ಜೀವನಗೊಂಡಿದೆ.
 • ನಿರ್ದಿಷ್ಟ ವಿಷಯಗಳು, ಮೀಟರ್ಗಳು, ರೂಪಗಳು, ಅಥವಾ ಪದಗಳನ್ನು ಬಳಸಿಕೊಂಡು ಕವಿತೆಗಳ ಭಾಗಶಃ ಸುಧಾರಣೆಯನ್ನು ಅದು ಒಳಗೊಳ್ಳುತ್ತದೆ.
 • ಒಂದು ಅವಧಾನಮ್ ಕ್ರಿಯೆಯ ನಿಜವಾದ ಉದ್ದೇಶವೆಂದರೆ ಬುದ್ಧಿವಂತಿಕೆ – ಸಾಹಿತ್ಯ, ಕವಿತೆ, ಮನೋವೈಜ್ಞಾನಿಕತೆ, ಮನೋವೈಜ್ಞಾನಿಕತೆಯ ವಿವಿಧ ವಿಧಾನಗಳಲ್ಲಿ ವೀಕ್ಷಣೆ, ನೆನಪು, ಬಹುಕಾರ್ಯಕ, ಕಾರ್ಯ ಸ್ವಿಚಿಂಗ್, ಮರುಪಡೆಯುವಿಕೆ, ತಾರ್ಕಿಕ ಕ್ರಿಯೆ ಮತ್ತು ಸೃಜನಶೀಲತೆಯ ಅರಿವಿನ ಸಾಮರ್ಥ್ಯಗಳ ಉನ್ನತ ಪಾಂಡಿತ್ಯದ ಮನರಂಜನೆಯ ಮೂಲಕ, ಸಂಗೀತ, ಗಣಿತದ ಲೆಕ್ಕಾಚಾರಗಳು, ಒಗಟು ಪರಿಹಾರ ಇತ್ಯಾದಿ.
 • ಇದು ಅಪಾರವಾದ ಮೆಮೊರಿ ಶಕ್ತಿಯ ಅಗತ್ಯವಿರುತ್ತದೆ ಮತ್ತು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸುವ ವ್ಯಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಎಲ್ಲಾ ಕಾರ್ಯಗಳು ಸ್ಮರಣಾರ್ಥವಾಗಿರುತ್ತವೆ ಮತ್ತು ಸಾಹಿತ್ಯದ ಆಳವಾದ ಜ್ಞಾನ, ಮತ್ತು ಪ್ರಗತಿಗೆ ಬೇಕಾಗುತ್ತದೆ. ವ್ಯಕ್ತಿಯ ಮನಸ್ಸನ್ನು ಹೊರತುಪಡಿಸಿ ಈ ಕಾರ್ಯಗಳನ್ನು ನಿರ್ವಹಿಸುವಾಗ ಯಾವುದೇ ಬಾಹ್ಯ ಮೆಮೊರಿ ಸಾಧನಗಳನ್ನು ಅನುಮತಿಸಲಾಗುವುದಿಲ್ಲ
 • ಅವಾಧನಿ ಎನ್ನುವುದು ಅವಧನವನ್ನು ನಿರ್ವಹಿಸುವ ವ್ಯಕ್ತಿಯನ್ನು ಸೂಚಿಸುತ್ತದೆ; ಪ್ರಶ್ನೆಗಳನ್ನು ಕೇಳುವ ಅನೇಕ ವ್ಯಕ್ತಿಗಳಲ್ಲಿ ಒಬ್ಬರು ಪೃಖಚಾ (ಪ್ರಶ್ನಾವಳಿ). ಪ್ರಶ್ನೆಯನ್ನು ಕೇಳಿದ ಮೊದಲ ವ್ಯಕ್ತಿ “ಪ್ರಧಾನಾ ಪೃಖಚಾಕ” (ರು) ಎಂದು ಕರೆಯುತ್ತಾರೆ, ಅವರು ಯಾವುದೇ ಪ್ರಶ್ನೆಯನ್ನು ಹೊಂದಿದವರಾಗಿದ್ದರೆ, ಅವರು ಮೊದಲ ಪ್ರಶ್ನೆಯನ್ನು ಕೇಳುತ್ತಾರೆ.

ಜಾಗತಿಕ ತಾಪಮಾನ ಏರಿಕೆ

ಸುದ್ಧಿಯಲ್ಲಿ ಏಕಿದೆ ?ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮ 10 ಲಕ್ಷ ಜನಸಂಖ್ಯೆಯುಳ್ಳ ಬ್ಯಾಂಕಾಕ್‌ ನಗರ ಇನ್ನು ಹತ್ತೇ ವರ್ಷಗಳಲ್ಲಿ ಭಾಗಶಃ ಜಲಸಮಾಧಿಯಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

 • ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಗೆ ಪೂರ್ವಭಾವಿಯಾಗಿ ಥಾಯ್ಲೆಂಡ್‌ನ ರಾಜಧಾನಿಯಲ್ಲಿ ಕಳೆದ ನಡೆದ ಸಭೆಯಲ್ಲಿ, ಹಸಿರು ಮನೆ ಅನಿಲಗಳ ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಹೊಸ ನಿಯಮಗಳ ರೂಪುರೇಷೆ ಸಿದ್ಧಪಡಿಸಿಲಾಯಿತು.
 • ತಾಪಮಾನ ಏರಿಕೆಯಿಂದ ಹವಾಮಾನದಲ್ಲಿ ಅಸಾಧಾರಣ ಬದಲಾವಣೆಯಾಗುತ್ತಿದ್ದು, ಭಾರೀ ಬಿರುಗಾಳಿ, ಮಹಾ ಮಳೆ, ತೀವ್ರ ಬರಗಾಲ ಹಾಗೂ ಪ್ರವಾಹಗಳಂತಹ ವೈರುಧ್ಯಗಳು ಉಂಟಾಗುತ್ತಿವೆ. ಈ ಬದಲಾವಣೆಗಳು ಮನುಕುಲಕ್ಕೆ ತೀವ್ರ ಸವಾಲೊಡ್ಡುತ್ತಿವೆ.
 • ಬ್ಯಾಂಕಾಕ್ ಸಮುದ್ರ ಮಟ್ಟದಿಂದ ಐದು ಅಡ್ಡಿ ಎತ್ತರದ (5 ಮೀಟರ್) ಜವುಗು ಪ್ರದೇಶದಲ್ಲಿ ನಿರ್ವಣವಾಗಿರುವ ನಗರ. ಸಮುದ್ರ ಮಟ್ಟದಲ್ಲಿ ಏರಿಕೆಯಾದರೆ ಮೊದಲು ಮುಳುಗಡೆಯಾಗಲಿದೆ ಎಂದು ವರದಿ ತಿಳಿಸಿದೆ.
 • ಬ್ಯಾಂಕಾಕ್ ಕೊಲ್ಲಿಯ ಸುತ್ತ ಇರುವ ಸಮುದ್ರಗಳ ಮಟ್ಟ ಪ್ರತಿ ವರ್ಷ ನಾಲ್ಕು ಮಿಲಿಮೀಟರ್​ನಷ್ಟು ಏರುತ್ತಿದೆ. ಹೀಗಾಗಿ ಬ್ಯಾಂಕಾಕ್ ಪ್ರತಿ ವರ್ಷ ಎರಡು ಸೆಂಟಿಮೀಟರ್​ನಷ್ಟು ಮುಳುಗುತ್ತಿದೆ.ತಾಪಮಾನ ಏರಿಕೆಯಿಂದ ಮಳೆ ಋತು ಮತ್ತು ಹವಾಮಾನದಲ್ಲಿ ಭಾರಿ ಬದಲಾವಣೆ ಆಗುತ್ತಿದ್ದು, ಬಲಿಷ್ಠ ಚಂಡಮಾರುತ, ಅತಿಯಾದ ಮಳೆ ಮತ್ತು ಪ್ರವಾಹಕ್ಕೆ ತುತ್ತಾದರೆ 2030ರ ಹೊತ್ತಿಗೆ ಬ್ಯಾಂಕಾಕ್​ನ ಶೇ. 40 ಪ್ರದೇಶಗಳು ಸಮುದ್ರದ ಪಾಲಾಗುವ ಅಪಾಯ ಇದೆ ಎಂದು ಗ್ರೀನ್​ಪೀಸ್ ಸಂಘಟನೆಯ ತಾರಾ ಬ್ಯೂಕಂಸ್ರಿ ಹೇಳಿದ್ದಾರೆ.
 • ಪೂರ್ವಭಾವಿ ಸಭೆ: ಈ ಎಚ್ಚರಿಕೆಯ ಕಾರಣ ಈ ವರ್ಷಾಂತ್ಯಕ್ಕೆ ಪೋಲೆಂಡ್​ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಕುರಿತು ಸಮ್ಮೇಳನದಲ್ಲಿ ಹಸಿರು ಮನೆ ಅನಿಲ ಹೊರಸೂಸುವಿಕೆಗೆ ಯಾವ ರೀತಿ ಕಡಿವಾಣ ಹಾಕಬೇಕು, ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಪರಿಷ್ಕೃತ ನೀತಿ ರೂಪಿತವಾಗಬೇಕು ಮತ್ತು ಜಾಗತಿಕ ತಾಪಮಾನ ಅಡ್ಡಪರಿಣಾಮಕ್ಕೆ ನಲುಗುವ ದೇಶಗಳಿಗೆ ಹೆಚ್ಚು ಪರಿಸರ ಪ್ರದೂಷಣೆ ಮಾಡುವ ರಾಷ್ಟ್ರಗಳಿಂದ ಅನುದಾನ ಕೊಡಿಸಬೇಕು ಎಂಬ ವಿಚಾರಗಳ ಪ್ರಸ್ತಾಪವಾಗಲಿವೆ. ಈ ಬಗ್ಗೆ ಬ್ಯಾಂಕಾಕ್​ನಲ್ಲಿ ಪೂರ್ವಭಾವಿ ಸಭೆ ಈಗಾಗಲೇ ನಡೆದಿವೆ. ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ವಿಶ್ವಸಂಸ್ಥೆಯ ಆಶ್ರಯದಲ್ಲಿ 2015ರಲ್ಲಿ ಪ್ಯಾರಿಸ್​ನಲ್ಲಿ ಒಪ್ಪಂದಕ್ಕೆ ಬರಲಾಗಿತ್ತು.

 ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) 

ಸುದ್ಧಿಯಲ್ಲಿ ಏಕಿದೆ ?ಚೀನಾದ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ವಿರುದ್ಧ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪಣೆಗಳು ಕೇಳತೊಡಗಿವೆ.

ಆಕ್ಷೇಪಣೆಗಳು ಏಕಿವೆ ?

 • ಯೋಜನೆ ಘೋಷಣೆಯಾಗಿ ಐದು ವರ್ಷ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಒಬಿಒಆರ್​ಗೆ ಆಕ್ಷೇಪಣೆಗಳು ಹೆಚ್ಚಾಗುತ್ತಿವೆ. ಅತ್ಯಧಿಕ ಬಡ್ಡಿದರದಲ್ಲಿ ಚೀನಾ ನೀಡುವ ದೀರ್ಘಾವಧಿ ಸಾಲವನ್ನು ತೀರಿಸಲು ಸಣ್ಣ ರಾಷ್ಟ್ರಗಳಿಗೆ ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಇಂಥ ರಾಷ್ಟ್ರಗಳು ಭವಿಷ್ಯದಲ್ಲಿ ಚೀನಾದ ಗುಲಾಮನಾಗುವ ಸ್ಥಿತಿ ನಿರ್ವಣವಾಗಲಿದೆ ಎಂದು ಆರ್ಥಿಕ ತಜ್ಞರು, ಹಲವು ರಾಷ್ಟ್ರಗಳ ನಾಯಕರು ಬಹಿರಂಗವಾಗಿ ಹೇಳಲಾರಂಭಿಸಿದ್ದಾರೆ.
 • ಇಂಥ ಆರೋಪಗಳನ್ನು ಚೀನಾ ಅಧ್ಯಕ್ಷ ಜಿನ್​ಪಿಂಗ್ ನಿರಾಕರಿಸುತ್ತ ಬಂದಿದ್ದಾರೆ. ಯೋಜನೆಗೆ ಭಾರಿ ಮೊತ್ತ ವೆಚ್ಚ ಮಾಡಬೇಕಾಗುತ್ತದೆ. ಆದರೆ ಇದರಿಂದ ಅಷ್ಟೇ ಪ್ರಮಾಣದ ಆದಾಯವೂ ಬರಲಿದೆ ಎಂದು ಇತ್ತೀಚೆಗೆ ಸ್ಪಷ್ಟೀಕರಣ ನೀಡುವ ಮೂಲಕ ವಿವಾದವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ
 • ಯೋಜನೆ ಆರಂಭವಾದಾಗಿನಿಂದಲೂ ಭಾರತ ಇದನ್ನು ವಿರೋಧಿಸುತ್ತ ಬಂದಿದೆ. ಈಗ ಜಾಗತಿಕ ಮಟ್ಟದಲ್ಲಿ ಒಬಿಒಆರ್ ವಿರುದ್ಧ ಆಕ್ಷೇಪಣೆ ಕೇಳಿಬರುತ್ತಿರುವುದು ಭಾರತಕ್ಕೆ ಪರೋಕ್ಷವಾಗಿ ಅನುಕೂಲವಾಗಲಿದೆ.

ಹಿನ್ನಲೆ

 • 2013ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಈ ಯೋಜನೆಯನ್ನು ಘೋಷಿಸಿದ್ದರು. ನ್ಯೂ ಸಿಲ್ಕ್ ರೋಡ್ ಎಂದೂ ಈ ಯೋಜನೆಯನ್ನು ಕರೆಯಲಾಗುತ್ತಿದೆ. ವಿಶ್ವದಾದ್ಯಂತ ಸಂಪರ್ಕ ಕಲ್ಪಿಸಲು ಹೊಸ ರಸ್ತೆ, ರೈಲು, ಬಂದರುಗಳನ್ನು ನಿರ್ವಿುಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಈ ಯೋಜನೆಯಲ್ಲಿ ಭಾಗಿಯಾಗುವ ದೇಶಗಳಿಗೆ ಹಲವು ಲಕ್ಷ ಕೋಟಿ ರೂಪಾಯಿಯನ್ನು ಸಾಲ ರೂಪದಲ್ಲಿ ನೀಡುವುದಾಗಿ ಚೀನಾ ಹೇಳಿತ್ತು.

ಮಲೇಷ್ಯಾ ಬಚಾವ್

 • ಚೀನಾ ಜತೆ ಆಪ್ತವಾಗಿದ್ದ ಮಲೇಷ್ಯಾ ಇದೇ ಮೊದಲ ಬಾರಿಗೆ ಶಾಕ್ ನೀಡಿದೆ. ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದ ಮಲೇಷ್ಯಾ ಪ್ರಧಾನಿ ಮಹತೀರ್ ಮಹಮ್ಮದ್, ಚೀನಾ ಬೆಂಬಲಿತ ಮೂರು ಯೋಜನೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. -ಠಿ; 1.4 ಲಕ್ಷ ಕೋಟಿ ಮೊತ್ತದ ರೈಲ್ವೆ ಯೋಜನೆ ಕೂಡ ಇದರಲ್ಲಿ ಸೇರಿದೆ. ಈ ಮೂಲಕ ಚೀನಾದ ಸಾಲದ ಸುಳಿಯಿಂದ ಅವರು ಜಾರಿಕೊಂಡಿದ್ದಾರೆ. ಜಾಗತಿಕ ಸಂಪರ್ಕ ಸಾಧಿಸಲು ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಾಬಲ್ಯ ಸಾಧಿಸಲು ಮಹತ್ವದ ರಾಷ್ಟ್ರವಾಗಿರುವ ಮಲೇಷ್ಯಾ ಯೋಜನೆಯಿಂದ ಹಿಂದೆ ಸರಿದಿರುವುದು ಚೀನಾಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಪಾಕ್​ನಲ್ಲೂ ತಳಮಳ

 • ಪಾಕಿಸ್ತಾನ -ಚೀನಾ ಆರ್ಥಿಕ ಕಾರಿಡಾರ್ ಯೋಜನೆಯಿಂದಾಗಿ ಈಗಾಗಲೇ ಪಾಕ್ ಸಾಲದ ಸುಳಿಯಲ್ಲಿ ಸಿಲುಕಿದೆ. ಈ ಸಾಲವನ್ನು ಮರುಪಾವತಿ ಮಾಡುವುದು ಸವಾಲಿನ ಸಂಗತಿಯಾಗಿದೆ. ಇದಲ್ಲದೇ ಪಾಕಿಸ್ತಾನದ ಇನ್ನೂ ಹಲವು ಯೋಜನೆಗಳಿಗೆ ಚೀನಾ ಆರ್ಥಿಕ ನೆರವು ನೀಡಿದೆ. ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್​ಗೆ ಇದು ತಲೆನೋವು ಉಂಟುಮಾಡಿದೆ. ಕಾರಿಡಾರ್ ಯೋಜನೆ ಇನ್ನಷ್ಟು ಪಾರದರ್ಶಕವಾಗಿ ನಡೆಯಬೇಕಿದೆ ಎಂದು ಅವರು ಇತ್ತೀಚೆಗೆ ಆತಂಕ ಹೊರಹಾಕಿದ್ದಾರೆ. ಈ ಯೋಜನೆಯಲ್ಲಿ ಹೆಚ್ಚಿನ ವೆಚ್ಚ ಭದ್ರತೆ ಹಾಗೂ ಭ್ರಷ್ಟಾಚಾರಕ್ಕೆ ವ್ಯಯವಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಮಾಲ್ಡೀವ್ಸ್ ವಿರೋಧ

 • ದ್ವೀಪ ರಾಷ್ಟ್ರ ಮಾಲ್ಡೀವ್ಸ್ ತನ್ನ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು ಮೊತ್ತದ ಶೇ. 80ನ್ನು ಚೀನಾದಿಂದ ಸಾಲದ ರೂಪದಲ್ಲಿ ಪಡೆದಿದೆ. ಈಗ ಮಾಲ್ಡೀವ್ಸ್ ನಾಯಕರು ಚೀನಾದ ನೀತಿಯನ್ನು ವಿರೋಧಿಸುತ್ತಿದ್ದಾರೆ. ದಕ್ಷಿಣ ಚೀನಾ ಸಮುದ್ರದ ದ್ವೀಪ ಸಮೂಹವನ್ನು ಒತ್ತುವರಿ ಮಾಡಲು ಚೀನಾ ಹವಣಿಸುತ್ತಿದೆ. ಇದು ವಸಾಹತುಶಾಹಿ ನೀತಿಯನ್ನು ತೋರಿಸುತ್ತದೆ ಎಂದು ಮಾಲ್ಡೀವ್ಸ್​ನ ಪದಚ್ಯುತ ನಾಯಕ ಮೊಹಮ್ಮದ್ ಆರೋಪಿಸಿದ್ದಾರೆ.

ಅಡಕತ್ತರಿಯಲ್ಲಿ ಶ್ರೀಲಂಕಾ

 • ವಿವಿಧ ಯೋಜನೆಗಳಿಗೆ ಅಪಾರ ಸಾಲ ಮಾಡಿಕೊಂಡಿರುವ ಶ್ರೀಲಂಕಾ, ಅದನ್ನು ಮರುಪಾವತಿ ಮಾಡಲಾಗದೇ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಸುಮಾರು -ಠಿ; 10,000 ಕೋಟಿ ಸಾಲ ತೀರಿಸಲು ಸಾಧ್ಯವಾಗದೇ ಕಳೆದ ವರ್ಷ ಒಂದು ಬಂದರನ್ನು ಚೀನಾಕ್ಕೆ 99 ವರ್ಷ ಭೋಗ್ಯಕ್ಕೆ ನೀಡಿದೆ. ಭದ್ರತೆ ದೃಷ್ಟಿಯಿಂದ ಈ ಬಂದರು ಮಹತ್ವದ್ದಾಗಿದೆ. ಈಗ ಇದು ಚೀನಾದ ಕೈಗೆ ಸಿಕ್ಕಿರುವುದು ಭಾರತಕ್ಕೆ ಭದ್ರತಾ ಆತಂಕ ತಂದೊಡ್ಡಿದೆ.

ಚೀನಾಕ್ಕೆ ಮಾತ್ರ ಲಾಭ

 • ಅಪಾರ ಸಾಲ ನೀಡಿಕೆಯಿಂದ ಚೀನಾಕ್ಕೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗುತ್ತಿದೆ. ಸಾಲದ ಮೇಲೆ ದೊಡ್ಡ ಪ್ರಮಾಣದ ಬಡ್ಡಿ ವಿಧಿಸುವ ಮೂಲಕ ಅಪಾರ ಲಾಭಗಳಿಸಬಹುದು, ಸಾಲ ಪಡೆದ ರಾಷ್ಟ್ರಗಳನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದು. ವಿವಿಧ ದೇಶಗಳಲ್ಲಿನ ಅಭಿವೃದ್ಧಿ ಕಾಮಗಾರಿಗೆ ಚೀನಾದಲ್ಲಿನ ಅಪಾರ ಕಚ್ಚಾ ವಸ್ತುಗಳು, ಮಾನವ ಸಂಪನ್ಮೂಲ, ತಂತ್ರಜ್ಞಾನ ಬಳಕೆಯಾಗುತ್ತದೆ. ಇದರಿಂದಲೂ ಚೀನಾ ದೊಡ್ಡ ಪ್ರಮಾಣದಲ್ಲಿ ಹಣ ಗಳಿಸುತ್ತದೆ.

ಭಾರತದ ವಿರೋಧ ಏಕೆ?

 • ದಕ್ಷಿಣ ಚೀನಾ ಸಮುದ್ರದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಚೀನಾ ಯತ್ನಿಸುತ್ತಿದೆ. ಇದಕ್ಕೆ ಒಬಿಒಆರ್ ಯೋಜನೆಯನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಪಾಕ್-ಚೀನಾ ಕಾರಿಡಾರ್ ಯೋಜನೆ ಈಗಾಗಲೇ ಜಾರಿಯಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದು ಹಾದುಹೋಗುತ್ತದೆ. ಹೀಗಾಗಿ ಭಾರತಕ್ಕೆ ಭದ್ರತಾ ಆತಂಕ ಏದುರಾಗಿದೆ. ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದೆ.

ನೇಪಾಳದ ಶ್ರೀಕೃಷ್ಣ ದೇಗುಲ

ಸುದ್ಧಿಯಲ್ಲಿ ಏಕಿದೆ?ಭೂಕಂಪದಿಂದಾಗಿ ಮೂರು ವರ್ಷಗಳಿಂದ ಮುಚ್ಚಿದ್ದ ನೇಪಾಳದ ಪ್ರಸಿದ್ಧ ಶ್ರೀಕೃಷ್ಣ ದೇಗುಲವನ್ನು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪುನಃ ತೆರೆಯಲಾಯಿತು.

 • ನಗರದ ಲಲಿತ್‌ಪುರ ಪ್ರದೇಶದ ಸಿದ್ದಿ ಸರ್ನಿಂಗ್‌ ಮಲ್ಲದಲ್ಲಿರುವ ಕೃಷ್ಣ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿ, ಶ್ರೀಕೃಷ್ಣನ ದರ್ಶನ ಪಡೆದರು. ಜನ್ಮಾಷ್ಠಮಿಯ ಪ್ರಯುಕ್ತ ದೇಗುಲವನ್ನು ಅದ್ಧೂರಿಯಾಗಿ ಶೃಂಗರಿಸಲಾಗಿತ್ತು.
 • 17ನೇ ಶತಮಾನದಲ್ಲಿ ರಾಜ ಮಲ್ಲನಿಂದ ನಿರ್ಮಾಣವಾದ ಈ ಕಲ್ಲಿನ ದೇಗುಲದ ಕಂಬಗಳ ಮೇಲೆ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಸುಂದರವಾಗಿ ಕೆತ್ತಲಾಗಿದೆ. ಭೂಕಂಪದ ಸಮಯದಲ್ಲಿ ದೇಗುಲದ ಕೆಲವು ಭಾಗ ಸಹ ಹಾನಿಗೊಳಗಾಗಿದ್ದು, ದೇವಾಲಯವನ್ನು ಈಗ ನವೀಕರಣ ಮಾಡಲಾಗಿದೆ.

ಹಿನ್ನಲೆ

 • ಭಾರತೀಯ ಶಿಖರ್‌ ಶೈಲಿಯ ಈ ದೇಗುಲವನ್ನು 2015ರ ಏಪ್ರಿಲ್‌ 25ರಂದು ಸಂಭವಿಸಿದ ತೀವ್ರ ಭೂಕಂಪದ ನಂತರ ಮುಚ್ಚಲಾಗಿತ್ತು. ರಿಕ್ಟರ್‌ ಮಾಪಕದಲ್ಲಿ 8ರಷ್ಟು ತೀವ್ರತೆಯ ಭೂಕಂಪ 8,700ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. ಅನೇಕ ಮನೆಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ಪಟಾಣ್‌, ಕಾಠ್ಮಂಡು ಮತ್ತು ಭಕ್ತಪುರದಲ್ಲಿರುವ ರಾಜ ಕುಟುಂಬದ ಮೂರು ಅರಮನೆಗಳು ಹಾನಿಗೊಳಗಾಗಿದ್ದವು.
Related Posts
Karnataka Current Affairs – KAS / KPSC Exams – 27th April 2017
Portrait of Basavanna in government offices soon Chief Minister Siddaramaiah on 26th April said all government offices in the state should display portraits of 12th century social reformer Basaveshwara. The government ...
READ MORE
Karnataka Current Affairs – KAS/KPSC Exams – 19th June 2018
Kharif sowing picking up in Ballari Following good rainfall, sowing, particularly in the rain-fed areas of Ballari district, is picking up. As on 18th June, the sowing percentage during the current ...
READ MORE
Image pearl farming
It is possible to get an image or design of your choice embossed on pearls while they are being formed in the oysters - "Image pearl farming” is all about such ...
READ MORE
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸತ್ಯಾಗ್ರಹದಿಂದ ಸ್ವಚ್ಛಾಗ್ರಹ ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಹಮ್ಮಿಕೊಂಡಿದ್ದ 1 ವರ್ಷದ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಶ್ಲಾಘಿಸಿದರು. ರಾಜ್ಯ ಸರ್ಕಾರ ಸತ್ಯಾಗ್ರಹ ದಿಂದ ಸಚ್ಛಾಗ್ರಹದತ್ತ ತಿರುಗಿದೆ ...
READ MORE
Karnataka Current Affairs – KAS / KPSC Exams – 6th May 2017
Mincheri hill to turn into tree park The Mincheri Hill Range, which is among the lesser known trekking routes in Ballari district, is now being developed into a tree park. It ...
READ MORE
National Current Affairs – UPSC/KAS Exams- 6th February 2019
100% use of VVPAT for Lok Sabha polls: EC Topic: Polity and Governance In News: The Election Commission informed the Madras High Court that it had made it clear way back in ...
READ MORE
Karnataka Current Affairs – KAS/KPSC Exams – 6th & 7th June 2018
Concern over solar plant coming up close to bear sanctuary Nature lovers and wildlife enthusiasts have expressed grave concern over a solar power plant coming up very close to the Daroji ...
READ MORE
Karnataka Current Affairs – KAS/KPSC Exams – 5th July 2018
MGNREGA funds to be used for developing gardens in schools The Dakshina Kannada Zilla Panchayat will rope in the Horticulture Department and use funds under the Mahatma Gandhi National Rural Employment ...
READ MORE
Karnataka Current Affairs – KAS / KPSC Exams – 6th Sep 2017
‘Rally for Rivers’ set to arrive in Mysuru The ‘Rally for Rivers’, flagged off by Union Minister of Environment, Forest and Climate Change Harsh Vardhan on September 3, will reach Mysuru ...
READ MORE
National Current Affairs – UPSC/KAS Exams- 21st February 2019
Green Crackers Topic: Environment and Ecology In News:  Four months after it banned polluting firecrackers, the Supreme Court on Wednesday realised that the concept of non-polluting ‘green crackers’ remains a non-starter, while ...
READ MORE
Karnataka Current Affairs – KAS / KPSC Exams
Karnataka Current Affairs – KAS/KPSC Exams – 19th
Image pearl farming
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS / KPSC Exams
National Current Affairs – UPSC/KAS Exams- 6th February
Karnataka Current Affairs – KAS/KPSC Exams – 6th
Karnataka Current Affairs – KAS/KPSC Exams – 5th
Karnataka Current Affairs – KAS / KPSC Exams
National Current Affairs – UPSC/KAS Exams- 21st February

Leave a Reply

Your email address will not be published. Required fields are marked *