“4th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ತೈಲ ಸ್ವಾವಲಂಬನೆ

 • ಸುದ್ದಿಯಲ್ಲಿ ಏಕಿದೆ? ಭಾರತ ಅಳೆದೂ ತೂಗಿ ಭೂಗತ ತೈಲ ಸಂಗ್ರಹಾಗಾರ ನಿರ್ವಿುಸಲು ಮುಂದಾಗಿದೆ.
 • ಯುದ್ಧವಿರಬಹುದು, ಅಥವಾ ತೈಲ ಬಿಕ್ಕಟ್ಟಿನಂತಹ ಇತರ ಸಂದರ್ಭ ಬಂದಾಗ ನೆರವಿಗೆ ಬರುವ ಭೂಗತ ಕೇವರ್ನ್​ಗಳನ್ನು ದೇಶದ ಮೂರು ಕಡೆ ಪ್ರಸ್ತುತ ನಿರ್ವಿುಸಲಾಗಿದೆ
 • ಅದರಲ್ಲಿ ಎರಡು ಇರುವುದು ಕರ್ನಾಟಕದಲ್ಲಿ. ಇನ್ನೊಂದು ವಿಶಾಖಪಟ್ಟಣದಲ್ಲಿ. ಮಂಗಳೂರಿನ ಪೆಮುದೆ ಹಾಗೂ ಉಡುಪಿಯ ಪಾದೂರು ಎಂಬಲ್ಲಿ ಎರಡು ಭೂಗತ ತೈಲಾಗಾರಗಳಿವೆ.
 • ಎಲ್ಲವೂ ತುಂಬಿದರೆ 15 ದಿನಕ್ಕೆ ಯಾವುದೇ ತೈಲ ಆಮದು ಇಲ್ಲದಿದ್ದರೂ ಈ ಭೂಗತ ತೈಲಾಗಾರಗಳಿಂದಲೇ ದೇಶದ ರಿಫೈನರಿಗಳಿಗೆ ತೈಲ ಪೂರೈಸಬಹುದು.

ಕಾರ್ಯಾಚರಣೆ ಹೇಗೆ?

 • ವಿವಿಧ ಹೊರದೇಶಗಳಿಂದ ಆಮದಾಗುವ ಕಚ್ಚಾತೈಲವನ್ನು ನವಮಂಗಳೂರು ಬಂದರಿನ ಹೊರಭಾಗದ ತೇಲುಜೆಟ್ಟಿಯಿಂದ ಪೈಪ್​ಲೈನ್ ಮೂಲಕ ಐಎಸ್​ಪಿಆರ್​ಎಲ್ ತೈಲಾಗಾರಕ್ಕೆ ಬರುತ್ತದೆ.
 • ಮಂಗಳೂರು ಅಥವಾ ಪಾದೂರಿಗೆ ಇಲ್ಲಿಂದಲೇ ತೈಲ ಪಂಪ್ ಮಾಡುವ ವ್ಯವಸ್ಥೆ ಇದೆ. ಕಚ್ಚಾ ತೈಲವನ್ನು ಎಂಆರ್​ಪಿಎಲ್ ಕಂಪನಿಗೆ ಬೇಕಾದಾಗ ಮಂಗಳೂರಿನ ತೈಲಾಗಾರದಿಂದಲೇ ಒದಗಿಸಬಹುದು.
 • ಆದರೆ ತುರ್ತು ಸಂದರ್ಭಗಳಲ್ಲಿ ಇಲ್ಲಿಂದ ಹಡಗಿಗೆ ತುಂಬಿಸಿ ಕೊಚ್ಚಿನ್ ಅಥವಾ ಮುಂಬೈಗೆ ಕಳುಹಿಸುವ ಆಯ್ಕೆಯೂ ಇದೆ.

ಐಎಸ್​ಪಿಆರ್​ಎಲ್ ನೇತೃತ್ವ

 • ಭಾರತೀಯ ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹಣಾ ಸಂಸ್ಥೆ(ಐಎಸ್​ಪಿಆರ್​ಎಲ್) ಭೂಗತ ತೈಲಾಗಾರಗಳ ನಿರ್ಮಾಣ ಮತ್ತು ನಿರ್ವಹಣೆಯ ನೇತೃತ್ವ ವಹಿಸಿದೆ.ಮಂಗಳೂರಿನಲ್ಲಿ ಒಟ್ಟು 1.5 ಮಿಲಿಯನ್ ಮೆಟ್ರಿಕ್ ಟನ್(ಎಂಎಂಟಿ) ತೈಲ ಸಂಗ್ರಹಿಸಬಹುದಾದರೆ ಪಾದೂರಿನಲ್ಲಿರುವುದು 2.5 ಎಂಎಂಟಿ ಸಾಮರ್ಥ್ಯದ ಸಂಗ್ರಹಣಾಗಾರವಾಗಿದ್ದು ದೇಶದಲ್ಲೇ ಅತಿದೊಡ್ಡದು.
 • ಮಂಗಳೂರಿನಲ್ಲಿ 2008ರಿಂದ ಆರಂಭಗೊಂಡ ಕಾಮಗಾರಿ ಮೂರು ವರ್ಷಗಳ ಮೊದಲು ಪೂರ್ಣಗೊಂಡಿದ್ದು, ಈಗಾಗಲೇ ತೈಲಾಗಾರ ಭಾಗಶಃ ತುಂಬಿದೆ.
 • ಕಳೆದ ವರ್ಷ ಮೂರು ಬಾರಿ ತೈಲ ನೌಕೆಗಳು ಕಚ್ಚಾ ತೈಲವನ್ನು ತಂದಿದ್ದು, ಅದರಿಂದ ಮಂಗಳೂರು ತೈಲಾಗಾರದ ಅರ್ಧಭಾಗ ತುಂಬಿವೆ. ಕೆಲ ದಿನಗಳ ಹಿಂದೆಯಷ್ಟೇ ಅಬುದಾಭಿ ರಾಷ್ಟ್ರೀಯ ತೈಲ ಕಂಪನಿಯ ತೈಲವನ್ನು ತುಂಬುವ ಪ್ರಕ್ರಿಯೆ ಆರಂಭಗೊಂಡಿದೆ.
 • ಇದು ಪರಸ್ಪರ ಒಪ್ಪಂದದ ಅನ್ವಯ ಮಾಡಲಾಗುತ್ತಿರುವ ಕ್ರಿಯೆಯಾಗಿದ್ದು, ಭಾರತಕ್ಕೂ ಯುಎಇಗೂ ಪ್ರಯೋಜನವಾಗಲಿದೆ.

ದಕ್ಷಿಣದ ಕಲ್ಲು ಸೂಕ್ತ

 • ದಕ್ಷಿಣ ಭಾರತದ ಅದರಲ್ಲೂ ಕರಾವಳಿಯ ಭೂಮಿಯಲ್ಲಿರುವ ಶಿಲಾರಚನೆ ಇಂತಹ ಭೂಗತ ಸುರಂಗ ನಿರ್ವಣಕ್ಕೆ ಸೂಕ್ತ. ಅದಕ್ಕಾಗಿಯೇ ಮೊದಲು ಇಲ್ಲೇ ನಿರ್ಮಾಣ ಮಾಡಲಾಗಿದೆ. ಕಲ್ಲಿನಲ್ಲಿ ನಿಯಂತ್ರಿತ ಸ್ಫೋಟ ಮಾಡುತ್ತಾ ಬೃಹತ್ ಸುರಂಗ ನಿರ್ವಿುಸಲಾಗಿದೆ. ಇಲ್ಲಿನ ಶಿಲೆ ಕುಸಿದು ಬೀಳದೆ ದೃಢವಾಗಿರುವುದು ವಿಶೇಷತೆ.

ಕ್ಷಿಪಣಿಗೂ ನಿಲುಕದೀ ಸುರಂಗ

 • ಮಂಗಳೂರಿನಲ್ಲಿರುವ ಭೂಗತ ತೈಲಾಗಾರದ ಸುರಂಗಗಳ ಅಗಲ 20 ಮೀಟರ್ ಹಾಗೂ ಎತ್ತರ 30 ಮೀಟರ್. ಇಂತಹ ಎರಡು ಗುಹೆಗಳಿವೆ. ನೆಲದಿಂದ ಇಳಿಜಾರಾಗುತ್ತಲೇ ಭೂಮಿಯ ಆಳಕ್ಕಿಳಿಯುವ ಈ ಗುಹೆಗಳ ಸುತ್ತಲೂ ಒತ್ತಡ ಸಹಿತ ನೀರಿನ ಸುರಂಗಗಳಿರುತ್ತವೆ.
 • ಭೂಮಿಯ ಮೇಲ್ಪದರದಿಂದ ಭೂಮಿಯ ಅಡಿಯಲ್ಲಿ ಈ ತೈಲಾಗಾರದ ಒಟ್ಟು ಎತ್ತರ ಸುಮಾರು 130 ಮೀಟರ್. ಎಂದರೆ 10 ಮಹಡಿಯ ಕಟ್ಟಡದಷ್ಟು! ಶಿಲೆಯಲ್ಲೇ ಕೊರೆಯಲ್ಪಟ್ಟ ಗುಹೆಯಾಗಿದ್ದು ಬೇಕಾದಲ್ಲಿ ಕಾಂಕ್ರೀಟ್ ಲೇಪ ಕೊಡಲಾಗಿದೆ, ಆದರೆ ತೈಲ ಎಲ್ಲೂ ಹೊರಗೆ ಹೋಗದಂತೆ ಸುತ್ತಲೂ ಇರುವಂತಹ ನೀರಿನ ಕವಚ ತಡೆಯುತ್ತದೆ.
 • ನೆಲದಿಂದ ಸುಮಾರು 100 ಮೀಟರ್ ಕೆಳಗೆ ತೈಲ ತುಂಬುವ ಸುರಂಗವಿದೆ, ಹಾಗಾಗಿ ಯಾವುದೇ ಕ್ಷಿಪಣಿಗೂ ಇದನ್ನು ಭೇದಿಸಲು ಸಾಧ್ಯವೇ ಇಲ್ಲ, ಇಷ್ಟು ತಳದಲ್ಲಿ ಇರುವ ಕಾರಣ ಬೆಂಕಿಯ ಸಾಧ್ಯತೆಯೂ ಇಲ್ಲ.
 • ಮಂಗಳೂರಿನಲ್ಲಿರುವುದು ದೇಶದ ಏಕೈಕ ಟ್ಯಾಕ್ಸ್-ಫ್ರೀ ವಲಯದಲ್ಲಿರುವ ತೈಲಾಗಾರ. ಎಸ್​ಇಝುಡ್ ಒಳಗಿರುವ ಕಾರಣ ಸುಮಾರು 100 ಕೋಟಿ ರೂಪಾಯಿಯಷ್ಟು ತೆರಿಗೆ ಉಳಿತಾಯವಾಗಿದೆ.

ಅಗ್ನಿ 5

 • ಸುದ್ದಿಯಲ್ಲಿ ಏಕಿದೆ? ಅಣ್ವಸ್ತ್ರ​ ಹೊತ್ತೊಯ್ಯುವ ಸಾಮರ್ಥ್ಯವಿರುವ ಅಗ್ನಿ 5 ಖಂಡಾಂತರ ಕ್ಷಿಪಣಿಯ ಪರೀಕ್ಷೆ ಸತತವಾಗಿ ಆರನೇ ಬಾರಿ ಯಶಸ್ವಿಯಾಗಿದೆ.
 • 5 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್‌ ಕಲಾಂ ದ್ವೀಪದ ನಾಲ್ಕನೇ ಲಾಂಚ್​ ಪ್ಯಾಡ್​ನಿಂದ ನಡೆಸಲಾಯಿತು.
 • ಇದು ನ್ಯೂಕ್ಲಿಯರ್​ ಸಾಮರ್ಥ್ಯವುಳ್ಳ ಕ್ಷಿಪಣಿಯ ಆರನೇ ಯಶಸ್ವಿ ಪರೀಕ್ಷಾ ಉಡಾವಣೆಯಾಗಿದ್ದು, ಜನವರಿ 18ರಂದು ಯಶಸ್ವಿ ಪರೀಕ್ಷಾ ಉಡಾವಣೆ ನಡೆಸಲಾಗಿತ್ತು.
 • ವೈರಿ ರಾಷ್ಟ್ರಗಳ ವಿರುದ್ಧ ದಾಳಿ ಮಾಡುವ ಸಾಮರ್ಥ್ಯವಿರುವ ಅಗ್ನಿ 5, ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅತ್ಯಂತ ಶಕ್ತಿಶಾಲಿ ಖಂಡಾಂತರ ಕ್ಷಿಪಣಿಯಾಗಿದೆ. ಅಗ್ನಿ ಸರಣಿಯ ಉಳಿದ ಕ್ಷಿಪಣಿಗಳಿಗಿಂತ ಹೆಚ್ಚು ಸುಧಾರಣೆ ಕಂಡಿರುವ ಅಗ್ನಿ-5 ಅತ್ಯಾಧುನಿಕ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿದೆ

ದಿವ್ಯಾಗ್ನಿ

 • ಮೂರು ಹಂತಗಳ 5000 ಕಿ.ಮೀ. ಚಿಮ್ಮಿ ದಾಳಿ
 • 17 ಮೀ. ಎತ್ತರ, 2 ಮೀ. ಸುತ್ತಳತೆ
 • 1.5 ಟನ್ ಅಣು ಸಿಡಿತಲೆ ಹೊತ್ತೊಯ್ಯಬಲ್ಲದು
 • ಆನ್​ಬೋರ್ಡ್ ಕಂಪ್ಯೂಟರ್, ಶೀಘ್ರವಾಗಿ ತಪು್ಪ ಗ್ರಹಿಸಬಲ್ಲ ಸಾಫ್ಟ್​ವೇರ್ ?ನಿರ್ವಹಣೆ ವೆಚ್ಚ ಕಡಿಮೆ, ಅಧಿಕ ಕಾಲದವರೆಗೆ ಸಂಗ್ರಹಣೆ ಸಾಮರ್ಥ್ಯ

ನಿಖರ ಮತ್ತು ಅತ್ಯಾಧುನಿಕ ದಿಕ್ಸೂಚಿ ವ್ಯವಸ್ಥೆ

 • ರಿಂಗ್ ಲೇಸರ್ ಗೈರೊ ಆಧಾರಿತ ಇನರ್ಷಿಯಲ್ ನ್ಯಾವಿಗೇಷನ್
 • ಮೈಕ್ರೊ ನ್ಯಾವಿಗೇಷನ್ (ನಿಖರವಾಗಿ ಗುರಿ ತಲುಪಲು ನೆರವು)

ವೇ ಬಿಲ್

 • ಸುದ್ದಿಯಲ್ಲಿ ಏಕಿದೆ? ಸರಕು ಸಾಗಾಣಿಕೆಗೆ ಇ-ವೇ ಬಿಲ್ ವ್ಯವಸ್ಥೆ ಜೂನ್ 3 ರಿಂದ  ದೇಶಾದ್ಯಂತ ಜಾರಿಗೆ ಬರಲಿದ್ದು, ಆನ್​ಲೈನಲ್ಲಿ ಆರ್ಡರ್ ಮಾಡಿರುವ ವಸ್ತುಗಳು ತ್ವರಿತವಾಗಿ ಗ್ರಾಹಕರಿಗೆ ತಲುಪಲಿವೆ.
 • ಕೊನೆಯ ಹಂತದಲ್ಲಿ ತಮಿಳು ನಾಡಿನಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಇ-ವೇ ಬಿಲ್ ವ್ಯವಸ್ಥೆ ಜಾರಿಗೆ ಬಂದಿದೆ. ಆ ಮೂಲಕ ದೇಶಾದ್ಯಂತ ಇ-ವೇ ಬಿಲ್ ವ್ಯವಸ್ಥೆ ಜಾರಿಗೊಂಡಂತಾಗಿದೆ.

ಇ-ವೇ ಬಿಲ್ ಎಂದರೇನು ?

 • ಇ-ವೇ ಮಸೂದೆಯು ಜಿಎಸ್ಟಿ ಪೋರ್ಟಲ್ನಲ್ಲಿ ಉತ್ಪಾದಿಸಲಾದ ವಿದ್ಯುತ್ ಡಾಕ್ಯುಮೆಂಟ್, ಇದು ಕೇಂದ್ರ ಮತ್ತು ಸಂಸ್ಥಾನಗಳ ನಡುವೆ ಸಾಮಾನ್ಯ ಮತ್ತು ಹಂಚಿಕೆಯ ಮಾಹಿತಿ ತಂತ್ರಜ್ಞಾನ(ಐಟಿ) ಮೂಲಸೌಕರ್ಯವಾಗಿದೆ ಮತ್ತು ಸರಕುಗಳ ಚಲನೆಗೆ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
 •  ಒಂದು ರಾಜ್ಯದಿಂದ ಮತ್ತೊಂದಕ್ಕೆ ಸರಕು ರವಾನೆಯ ಚಲನೆಗೆ ಮುಂಚಿತವಾಗಿ ಒಂದು ಕಂಪನಿ ಅಥವಾ ಅಸ್ತಿತ್ವವು ಸಂಬಂಧಿತ ಮಾಹಿತಿಯನ್ನು ಅಪ್ಲೋಡ್ ಮಾಡಬಹುದು.
 • ತರುವಾಯ, ಆ ರವಾನೆಗಾಗಿ ಇ-ವೇ ಬಿಲ್ GST ಪೋರ್ಟಲ್ ಮೂಲಕ ಉತ್ಪತ್ತಿಯಾಗುತ್ತದೆ. ಜಿ.ಎಸ್.ಟಿ ಆಡಳಿತದಡಿಯಲ್ಲಿ ತೆರಿಗೆ ಸಂಗ್ರಹದ ಭಾರವನ್ನು ಕಡಿಮೆಗೊಳಿಸಲು ಅಂತಹ ಯಾಂತ್ರಿಕ ವ್ಯವಸ್ಥೆ ನೆರವಾಗುತ್ತದೆ ಮತ್ತು ಅದು ರೂ 50,000 ಕ್ಕಿಂತ ಹೆಚ್ಚು ಮೌಲ್ಯದ ಸರಕುಗಳನ್ನು ಸಾಗಿಸಲು ಮಾತ್ರ ಅನ್ವಯಿಸುತ್ತದೆ ಎಂದು  ಗಮನಿಸಬಹುದು.

ಮಹತ್ವ

 • ಇ-ವೇ ಬಿಲ್ ಜಾರಿಗೆ ಬಂದ ಬಳಿಕ ಸರಕು ಸಾಗಣೆದಾರರು ತೆರಿಗೆ ಕಚೇರಿಯಲ್ಲಿ, ತಪಾಸಣೆ ಕೇಂದ್ರದಲ್ಲಿ ನಿಲುಗಡೆ ಮಾಡುವ ಅಗತ್ಯವಿಲ್ಲ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತಡೆ ರಹಿತವಾಗಿ ಸಂಚಾರ ನಡೆಸಬಹುದು. ಈವರೆಗೆ ಸರಕು ಸಾಗಣೆಗಾಗಿ ವಿವಿಧ ಪರವಾನಗಿ ಪಡೆಯಲು ಶೇ. 16 ಸಮಯ ವ್ಯರ್ಥವಾಗುತ್ತಿತ್ತು.
 • ಇನ್ನುಮುಂದೆ ಈ ಸಮಯ ಉಳಿತಾಯವಾಗಲಿದೆ. ರಾಜ್ಯಗಳ ನಡುವೆ ಚೆಕ್ ಪಾಯಿಂಟ್​ಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿ ಪ್ರತ್ಯೇಕವಾಗಿ ಅಧಿಕಾರಿಗಳಿಂದ ತಪಾಸಣೆಗೆ ಒಳಗಾಗಬೇಕಿಲ್ಲ. ಹೀಗಾಗಿ ವಸ್ತುಗಳು ತ್ವರಿತವಾಗಿ ಗ್ರಾಹಕರನ್ನು ತಲುಪಲಿವೆ.

ಆಪರೇಷನ್ ನಿಸ್ತಾರ್

 • ಸುದ್ದಿಯಲ್ಲಿ ಏಕಿದೆ? ಚಂಡಮಾರುತದಿಂದ ತತ್ತರಿಸಿರುವ ಯೆಮೆನ್‌ನ ಸೊಕೋಟ್ರಾ ದ್ವೀಪದಲ್ಲಿ ಸಿಕ್ಕಿಬಿದ್ದಿದ್ದ 38 ಮಂದಿ ಭಾರತೀಯರನ್ನು ಭಾರತೀಯ ನೌಕಾಪಡೆ  ರಕ್ಷಿಸಿದೆ.
 • ನೌಕಾಪಡೆಯ ಐಎನ್‌ಎಸ್‌ ಸುನನ್ಯಾ ಹಡಗನ್ನು ಶನಿವಾರ ಆ್ಯಡೆನ್‌ ಕೊಲ್ಲಿ ಕಡೆಗೆ ಕಳುಹಿಸಿ ‘ನಿಸ್ತಾರ್‌ಆಪರೇಷನ್‌’ ಮೂಲಕ ಭಾರತೀಯರನ್ನು ರಕ್ಷಿಸಲಾಯಿತು.
 • ಎಲ್ಲ ಭಾರತೀಯರನ್ನು ರಕ್ಷಿಸುವ ಕೆಲಸ ಪೂರ್ಣಗೊಂಡಿದ್ದು, ಹಡಗು ಇದೀಗ ಭಾರತದತ್ತ ಆಗಮಿಸುತ್ತಿದೆ. ಅವರಿಗೆ ಎಲ್ಲ ವೈದ್ಯಕೀಯ ಚಿಕಿತ್ಸೆ, ಅಗತ್ಯ ಆಹಾರ ಮತ್ತು ಕುಟುಂಬವನ್ನು ಸಂಪರ್ಕಿಸಲು ಟೆಲಿಫೋನ್‌ ಸೌಲಭ್ಯಗಳನ್ನು ಒದಗಿಸಲಾಗಿದೆ.

ಹಿನ್ನಲೆ

 • ಮೇ 24ರಂದು ಮೆಕೆನು ಚಂಡಮಾರುತ ಸೊಕೋಟ್ರಾ ದ್ವೀಪಕ್ಕೆ ಬಡಿದಿದ್ದು, ಭಾರಿ ಪ್ರಮಾಣದಲ್ಲಿ ನಾಶ-ನಷ್ಟ ಸಂಭವಿಸಿದೆ. ಮೂರು ಭಾರತೀಯ ಹಡಗುಗಳು ಮುಳುಗಿದ್ದು ಅವರಲ್ಲಿದ್ದವರು ದ್ವೀಪದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
Related Posts
Karnataka: Govt to set up hydel project in elephant corridor
The state government is gearing up to set up a mini hydel project next to the Cauvery Wildlife Sanctuary, an elephant corridor, even as cases of jumbos straying out of ...
READ MORE
A eucalyptus tree on Tasmanian Land Conservancy property.
The Karnataka government took the legislation route to curtail planting of saplings that have adverse effect on environment and ground water. The Legislative Assembly on Thursday passed the Karnataka Preservation of ...
READ MORE
All you need to know about HYBRID ANNUITY MODEL (HAM)
The union government approved the hybrid annuity model for building national highways, paving the way for construction of 28 projects worth Rs. 36,000 crore this fiscal year. The move will speed ...
READ MORE
Urban Development – Municipal Reforms Cell –DMA & BDA
Municipal Reforms Cell –DMA • An exclusive cell dedicated for municipal reforms. • Managed by Senior KAS and KMAS Officers and Professionals hired directly from the market. • The cell has in house Data Center with centralized ...
READ MORE
Kodagu chosen for pilot study of National Forest Monitoring System
Forest Survey of India (FSI) has chosen Kodagu in Karnataka to implement the theoretical model of the National Forest Monitoring System (NFMS). E Vikram, deputy director, FSI, Deharadun on 2nd March ...
READ MORE
Karnataka will launch special drive to curb narcotics menace
Home Minister G Parameshwara said that a special drive would be launched throughout the state to check the narcotics menace. Responding to a calling attention notice tabled by Ramachandra Gowda (BJP) in ...
READ MORE
26th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಭ್ರಷ್ಟಾಚಾರ ತಡೆಗೆ ಬಲಿಷ್ಠ ಕಾಯ್ದೆ ಸುದ್ಧಿಯಲ್ಲಿ ಏಕಿದೆ?30 ವರ್ಷಗಳ ನಂತರ ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಲಂಚ ಪಡೆಯುವವರ ಜತೆಗೆ ಲಂಚ ನೀಡುವವರಿಗೂ 3ರಿಂದ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತೆ ಕಾನೂನು ಬಿಗಿಗೊಳಿಸಲಾಗಿದೆ. ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ...
READ MORE
Karnataka Current Affairs – KAS/KPSC Exams- 11th September 2018
Draft Charter of Patients’ Rights released If the draft Charter of Patients’ Rights released by the Union Ministry of Health and Family Welfare comes into force, patients will not just have ...
READ MORE
Gamaka Tradition
10th Akhila Karnataka Gamaka Kala Sammelana 10th Akhila Karnataka Gamaka Kala Sammelana was held in Bangalore Nearly 100 Gamakis took part in this event. The Gamakis are also singing modern verses written in ...
READ MORE
The government, during the Budget session of the Parliament, plans to amend The mining law which is holding up mergers and acquisitions worth thousands of crore in the distressed commodities and ...
READ MORE
Karnataka: Govt to set up hydel project in
Karnataka: Law to curtail planting of saplings that
All you need to know about HYBRID ANNUITY
Urban Development – Municipal Reforms Cell –DMA &
Kodagu chosen for pilot study of National Forest
Karnataka will launch special drive to curb narcotics
26th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Karnataka Current Affairs – KAS/KPSC Exams- 11th September
Gamaka Tradition
MMDR Act of 2015 to be amended

Leave a Reply

Your email address will not be published. Required fields are marked *