4th – 5th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಇನ್ಮುಂದೆಕಾಮಗಾರಿ ನಿಷೇಧವಲಯ

 • ಹಸಿರು ಪ್ರದೇಶ ರಕ್ಷಿಸುವ ಸಲುವಾಗಿ ಶ್ರೀನಗರ – ಜಮ್ಮು ನಡುವಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳನ್ನು ‘ಕಾಮಗಾರಿ ನಿಷೇಧ ವಲಯ’ (ನಿರ್ಮಾಣ ರಹಿತ ವಲಯ) ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಘೋಷಣೆ ಮಾಡಿದೆ.
 • ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಾಂಪೊರೆಯ ಕಡಾಲ್‌ಬಾಲ್‌ನಿಂದ ಮಿರ್ಜಾಪೋರಾ ತನಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳನ್ನು ಕಾಮಗಾರಿ ನಿಷೇಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾ ಅಭಿವೃದ್ಧಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
 • ಸುಮಾರು 300 ಕಿಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಹಸಿರನ್ನು ಉಳಿಸುವ ಮತ್ತು ಗತ ವೈಭವವನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ.
 • ನಿಯಮ ಉಲ್ಲಂಘಿಸಿ ಯಾರಾದರೂ ಕಟ್ಟಡ ನಿರ್ಮಾಣ ಮಾಡಿದರೆ ಕ್ರಮಕೈಗೊಳ್ಳಲಾಗುವುದು. ನಿರ್ಮಾಣಗೊಂಡ ಕಟ್ಟಡಗಳನ್ನು ನೆಲಸಮ ಮಾಡ
  ಲಾಗುವುದು.
 •  ಪರಿಸರಕ್ಕೆ ಆಗಿರುವ ಹಾನಿಗೆ ಕಟ್ಟಡಗಳ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡುಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಿವೃತ್ತರೂ ನ್ಯಾಯಮೂರ್ತಿಗಳಾಗಬಹುದು: ‘ಸುಪ್ರೀಂ

 • ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸುಗೊಂಡ ಅಧೀನ ಕೋರ್ಟ್‌ ನ್ಯಾಯಾಧೀಶರು ಸೇವೆಯಿಂದ ನಿವೃತ್ತರಾದರೂ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಅರ್ಹತೆ ಹೊಂದಿರುತ್ತಾರೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್‌ ನೀಡಿದೆ.
 • ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಒಮ್ಮೆ ಹೆಸರು ಶಿಫಾರಸುಗೊಂಡರೆ, ರಾಷ್ಟ್ರಪತಿಗಳಿಂದ ಅಂತಿಮ ಆದೇಶ ಹೊರಡುವ ವೇಳೆ ಅವರು ನಿವೃತ್ತ
  ರಾಗಿದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ, ಅವರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಬಹುದು’
  ಎಂದು ಕೋರ್ಟ್‌ ಹೇಳಿದೆ.
 • ಈ ಹುದ್ದೆಗೆ ಹೆಸರು ಶಿಫಾರಸು ಮಾಡಿದ ದಿನ ಮುಖ್ಯವೇ ವಿನಾ ನೇಮಕಾತಿಯ ಅಂತಿಮ ಆದೇಶದ ದಿನವಲ್ಲ ಎನ್ನುವುದು ಕೋರ್ಟ್‌ ಅಭಿಪ್ರಾಯ.
 • ಅಧೀನ ಕೋರ್ಟ್‌ಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸು 60 ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳದ್ದು 62. ಆದ್ದರಿಂದ ಈ ಅವಧಿಯ ಒಳಗೆ ಯಾವಾಗ ಅಂತಿಮ ಆದೇಶ ಹೊರಬಿದ್ದರೂ ನೇಮಕಕ್ಕೆ ಅವರು ಅರ್ಹತೆ ಹೊಂದಿರುತ್ತಾರೆ.
 • ನಿವೃತ್ತರು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲು ಸಾಧ್ಯವಿಲ್ಲ ಎಂಬ ಬಹುವರ್ಷಗಳ ವಿವಾದಕ್ಕೆ ಈ ತೀರ್ಪಿನಿಂದ ಈಗ ತೆರೆ ಬಿದ್ದಿದೆ.
 • ನೇಮಕಾತಿಗೆ ಸಂಬಂಧಿಸಿದಂತೆ ‘ಅರ್ಹತೆ’ಯ ವಿಷಯದಲ್ಲಿ ಕೆಲ ಕೋರ್ಟ್‌ಗಳು ನೀಡಿರುವ ತೀರ್ಪು ಹಾಗೂ ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ ಕೆಲವೊಂದು ಅಂಶಗಳಿಂದ ಉಂಟಾಗಿರುವ ಗೊಂದಲವನ್ನು ಸುಪ್ರೀಂಕೋರ್ಟ್‌ ಹೋಗಲಾಡಿಸಿದೆ.
 •  ಈ ಸ್ಥಾನಕ್ಕೆ ಹೆಸರು ಶಿಫಾರಸು ಮಾಡುವ ಪ್ರಕ್ರಿಯೆಯಿಂದ ಹಿಡಿದು ಅದು ಅಂತಿಮ ಸ್ವರೂಪ ಪಡೆಯುವವರೆಗೆ ಆಗುತ್ತಿರುವ ವಿಳಂಬದಿಂದ ಅರ್ಹ ಅಭ್ಯರ್ಥಿಗಳ ಹಕ್ಕನ್ನು ಅನ್ಯಾಯವಾಗಿ ಕಸಿದುಕೊಳ್ಳುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
 • ರಾಜಸ್ಥಾನ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ವೀರೇಂದ್ರ ಕುಮಾರ್‌ ಮಾಥೂರ್‌ ಮತ್ತು ರಾಮಚಂದ್ರ ಸಿಂಗ್‌ ಝಾಲಾ ಅವರ ನೇಮಕಾತಿಯನ್ನು ಪ್ರಶ್ನಿಸಿ ವಕೀಲ ಸುನಿಲ್‌ ಸಮ್ದಾರಿಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ವಿಭಾಗೀಯ ಪೀಠ ವಜಾ ಮಾಡಿ ಈ ತೀರ್ಪು ನೀಡಿದೆ.
 • ಏನಿದು ವಿವಾದ?
  ರಾಜಸ್ಥಾನದ ಜಿಲ್ಲೆಯೊಂದರ ನ್ಯಾಯಾಧೀಶರಾಗಿದ್ದ ವೀರೇಂದ್ರ ಕುಮಾರ್‌ ಮಾಥೂರ್‌ ಹಾಗೂ ರಾಮಚಂದ್ರ ಸಿಂಗ್‌ ಝಾಲಾ ಕ್ರಮವಾಗಿ 2016ರ ಸೆ.30 ಹಾಗೂ ಜುಲೈ 31ರಂದು ಸೇವೆಯಿಂದ ನಿವೃತ್ತರಾಗಿದ್ದರು (ಅಧೀನ ಕೋರ್ಟ್‌ಗಳ ನ್ಯಾಯಾಧೀಶರ ನಿವೃತ್ತಿಯ ವಯಸ್ಸು 60). ನಿವೃತ್ತಿಗೂ ಮುನ್ನ ಅವರ ಹೆಸರುಗಳನ್ನು ಹೆಚ್ಚುವರಿ ನ್ಯಾಯಮೂರ್ತಿ ಸ್ಥಾನಕ್ಕೆ ರಾಜಸ್ಥಾನ ಹೈಕೋರ್ಟ್‌ ಶಿಫಾರಸು ಮಾಡಿ ಕಳುಹಿಸಿತ್ತು. ಮುಂದಿನ ಎಲ್ಲಾ ಪ್ರಕ್ರಿಯೆ ಮುಗಿದು ನೇಮಕಾತಿಯ ಅಂತಿಮ ಆದೇಶ ಹೊರಬಿದ್ದದ್ದು 2017ರ ಮೇ ತಿಂಗಳಿನಲ್ಲಿ.
 • ಅದಾಗಲೇ ಇಬ್ಬರೂ ನಿವೃತ್ತರಾಗಿದ್ದರಿಂದ ಸಂವಿಧಾನದ 217(2)(ಎ) ವಿಧಿಯ ಪ್ರಕಾರ ಇಬ್ಬರೂ ನ್ಯಾಯಮೂರ್ತಿಗಳಾಗಲು ಅನರ್ಹರು ಎನ್ನುವುದು ಅರ್ಜಿದಾರರ ವಾದವಾಗಿತ್ತು. ಅಷ್ಟೇ ಅಲ್ಲದೇ, ನೇಮಕಾತಿ ವೇಳೆ 60ವರ್ಷ ಮೀರುವಂತಿಲ್ಲ.

ರೈಲಿನಲ್ಲಿ ಶೀಘ್ರವೇ ಸರ್ವಿಸ್ ಕ್ಯಾಪ್ಟನ್!

 • ರೈಲುಗಳಲ್ಲಿ ಕೊಳಕಾದ ಶೌಚಗೃಹ, ಬೋಗಿಗಳಲ್ಲಿ ಅನೈರ್ಮಲ್ಯ ವಾತಾವರಣ, ವಸ್ತುಗಳ ಕಳವು, ಬರ್ತ್ ಬಗ್ಗೆ ಗೊಂದಲ, ಕಿತ್ತಾಟ, ಸುರಕ್ಷತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮೌನವಾಗಿ ಸಹಿಸಿಕೊಳ್ಳುವ ದಿನಗಳು ದೂರಾಗಲಿವೆ.
 • ಇದಕ್ಕಾಗಿ ಇಲಾಖೆ ಮೇಲ್ ಮತ್ತು ಎಕ್ಸ್​ಪ್ರೆಸ್ ರೈಲುಗಳು ಸೇರಿ ಎಲ್ಲ ರೈಲುಗಳಲ್ಲೂ ಸರ್ವಿಸ್ ಕ್ಯಾಪ್ಟನ್​ಗಳನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಿದೆ.
 • ಸ್ವಚ್ಛತೆಯ ಕೊರತೆ, ಸುರಕ್ಷತೆಯ ಸಮಸ್ಯೆ, ಬರ್ತ್ ಸಮಸ್ಯೆ ಸೇರಿ ಪ್ರಯಾಣಿಕರು ನೀಡುವ ಎಲ್ಲ ದೂರುಗಳನ್ನು ರೈಲಿನಲ್ಲೇ ಇರುವ ಸರ್ವಿಸ್ ಕ್ಯಾಪ್ಟನ್​ಗಳು ಸ್ವೀಕರಿಸಿ ಸಂಬಂಧಪಟ್ಟವರ ಗಮನಕ್ಕೆ ತಂದು, ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಒದಗಿಸಲಿದ್ದಾರೆ.
 • ಕಳೆದ ವರ್ಷದ ಡಿಸೆಂಬರ್​ನಲ್ಲಿ ಆಯೋಜನೆಗೊಂಡಿದ್ದ ಎಲ್ಲ ರೈಲು ವಲಯಗಳ ಮುಖ್ಯಸ್ಥರ ಸಭೆಯಲ್ಲಿ ಸರ್ವಿಸ್ ಕ್ಯಾಪ್ಟನ್​ಗಳನ್ನು ನೇಮಿಸುವ ಸಲಹೆ ಕೇಳಿ ಬಂದಿತ್ತು.
 • ಇದನ್ನು ಆಧರಿಸಿ, ಇಂತಹ ಸಾಧ್ಯತೆಯ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸಲು ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿದ್ದರು. ಈ ಸಮಿತಿಯು ವರದಿ ಸಲ್ಲಿಸಿದ್ದು, ಅದರಲ್ಲಿ ಸರ್ವಿಸ್ ಕ್ಯಾಪ್ಟನ್ ನೇಮಿಸುವುದು ಸೇರಿ ಪ್ರಯಾಣಿಕರ ಸೌಲಭ್ಯ ಹೆಚ್ಚಿಸಲು ಇನ್ನೂ ಹಲವು ಶಿಫಾರಸುಗಳನ್ನು ಮಾಡಿದೆ.
 • ಮೊದಲಿಗೆ ಆಯ್ದ 10 ರೈಲುಗಳಲ್ಲಿ ಸರ್ವಿಸ್ ಕ್ಯಾಪ್ಟನ್​ಗಳನ್ನು ನಿಯೋಜಿಸಿ, ನಂತರ ಈ ಎಲ್ಲ ರೈಲುಗಳಿಗೂ ವಿಸ್ತರಿಸುವಂತೆ ಸಮಿತಿ ಸಲಹೆ ನೀಡಿದೆ.
 • ಸರ್ವಿಸ್ ಕ್ಯಾಪ್ಟನ್ ಅಂದರೆ…ರೈಲು ಸರ್ವಿಸ್ ಕ್ಯಾಪ್ಟನ್ ಎಂದರೆ, ರೈಲ್ವೆ ಮೇಲ್ವಿಚಾರಕರಿದ್ದಂತೆ.
 • ಆಯಾ ರೈಲ್ವೆ ವಲಯಗಳ ಹಿರಿಯ ಅಧಿಕಾರಿಗಳ ಸಮಿತಿ, ತಮ್ಮ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೂನಿಯರ್ ಇಂಜಿನಿಯರ್ ಅಥವಾ ಮಾಸ್ಟರ್ ಕ್ರಾಫ್ಟ್ ಮ್ಯಾನ್ ಹುದ್ದೆಯಲ್ಲಿರುವವರ ನಿರ್ದಿಷ್ಟ ಸಂಖ್ಯೆಯ ಅಧಿಕಾರಿಗಳನ್ನು ಸರ್ವಿಸ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಿದೆ.
 • ಇವರು ಎರಡು ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸಮವಸ್ತ್ರದಿಂದ ಇವರನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ಮಳಖೇಡದಲ್ಲಿ ರಾಷ್ಟ್ರಕೂಟ ಉತ್ಸವ: ಮೆರವಣಿಗೆಗೆ ಚಾಲನೆ

 • ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕು ಮಳಖೇಡನಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ರಾಷ್ಟ್ರಕೂಟ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಇಲ್ಲಿ ಚಾಲನೆ ನೀಡಿದರು.
 • ಉತ್ಸವದ ಅಂಗವಾಗಿ ಮಳಖೇಡ ಕೋಟೆಯಿಂದ ಅದ್ಧೂರಿ ಮೆರವಣಿಗೆ ನಡೆಯಿತು.
 • ಹಲಗೆ ವಾದನ, ಪಟ ಕುಣಿತ, ಡೊಳ್ಳು, ಗಾರುಡಿ ಗೊಂಬೆ ಕಲಾವಿದರು ಉತ್ಸಾಹದಿಂದ ಹೆಜ್ಜೆ ಹಾಕಿದರು

ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ

 • ಹರಪನಹಳ್ಳಿ ತಾಲ್ಲೂಕನ್ನು ದಾವಣಗೆರೆ ಜಿಲ್ಲೆಯಿಂದ ಪ್ರತ್ಯೇಕಿಸಿ ಬಳ್ಳಾರಿ ಜಿಲ್ಲೆಗೆ ಸೇರಿಸಲು ಸಂಪುಟ ಸಭೆ  ಒಪ್ಪಿಗೆ ನೀಡಿದೆ. ‌
 • ಇದರಿಂದಾಗಿ, ಹೈದರಾಬಾದ್‌– ಕರ್ನಾಟಕ ಭಾಗಕ್ಕೆ ಹರಪನಹಳ್ಳಿ ಸೇರಲಿದ್ದು, 371 (ಜೆ) ವಿಶೇಷ ಸ್ಥಾನಮಾನ ಪಡೆಯಲಿದೆ.
 • ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಹರಪನಹಳ್ಳಿಯೂ ಒಂದು. ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟಿರುವುದರಿಂದ ಹೈದರಾಬಾದ್ ಕರ್ನಾಟಕ ಸೌಲಭ್ಯಗಳಿಂದ ಇಲ್ಲಿನ ಜನ ವಂಚಿತರಾಗಿದ್ದರು.
 • 1997ರಲ್ಲಿ ಜಿಲ್ಲೆಗಳ ಪುನರ್‌ರಚನೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿಯನ್ನು ಬೇರ್ಪಡಿಸಿ, ದಾವಣಗೆರೆ ಜಿಲ್ಲೆಗೆ ಸೇರಿದರು. ಹರಪನಹಳ್ಳಿಯ ಅಂದಿನ ಶಾಸಕ ಡಿ.ನಾರಾಯಣದಾಸ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರೂ ಪಟೇಲರು ಮಣಿದಿರಲಿಲ್ಲ.
 •  ಎರಡು ದಶಕಗಳ ನಂತರ ಹರಪನಹಳ್ಳಿಗೆ ಮತ್ತೆ ‘ತಾಯಿಯ ಮಡಿಲು’ ಸೇರುವ ಭಾಗ್ಯ ಬಂದಿದೆ.
 • ಹರಪನಹಳ್ಳಿ ದಾವಣಗೆರೆ ಜಿಲ್ಲೆಗೆ ಸೇರಿದ್ದರೂ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಬಳ್ಳಾರಿ ಸೊಗಡನ್ನು ತನ್ನ ಮಡಿಲಲ್ಲಿ ಕಟ್ಟಿಕೊಂಡಿದೆ. ಎರಡು ದಶಕಗಳು ಕಳೆದಿದ್ದರೂ ಪದವೀಧರ ಕ್ಷೇತ್ರ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಹರಪನಹಳ್ಳಿ ಜನರು ಬಳ್ಳಾರಿ ಜಿಲ್ಲೆಗೆ ಮತದಾನ ಮಾಡುತ್ತಿದ್ದಾರೆ.
 •  ಅಂಚೆ ಇಲಾಖೆ, ಬಿ.ಎಸ್.ಎನ್.ಎಲ್, ಎಲ್‌ಐಸಿ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಹೈದರಾಬಾದ್ ಕರ್ನಾಟಕ ಸೌಲಭ್ಯವನ್ನು ತಮಗೂ ಕೊಡಬೇಕು ಎಂಬುದು ಜನರ ಹಕ್ಕೊತ್ತಾಯವಾಗಿತ್ತು.
 • 2012ರಲ್ಲಿ ಕೇಂದ್ರದ ಯುಪಿಎ ಸರ್ಕಾರ ಸಂವಿಧಾನದ ‘371ಜೆ’ ಕಲಂಗೆ ತಿದ್ದುಪಡಿ ತಂದು, ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಘೋಷಿಸಿದ ಸಂದರ್ಭದಲ್ಲಿ ಈ ಕ್ಷೇತ್ರವನ್ನು ಬಿಜೆಪಿಯ ಶಾಸಕ ಜಿ.ಕರುಣಾಕರರೆಡ್ಡಿ ಪ್ರತಿನಿಧಿಸುತ್ತಿದ್ದರು.
 •  ಹರಪನಹಳ್ಳಿಗೂ ಈ ಸೌಲಭ್ಯ ವಿಸ್ತರಿಸುವಂತೆ ಅವರು ಮಾಡಿಕೊಂಡ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಆದರೆ, 2013-14ನೇ ಸಾಲಿನವರೆಗೂ ಹರಪನಹಳ್ಳಿಗೆ ಹೈದರಾಬಾದ್ ಕರ್ನಾಟಕ ಪ್ರದೇಶ ಮಂಡಳಿಯ ಅನುದಾನ ಲಭಿಸಿತ್ತು.
 •  ಆದರೆ, 2014ರಲ್ಲಿ ವಿಶೇಷ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ಉಪಸಮಿತಿ ರಚನೆಯಾದ ನಂತರ ಕಾನೂನಾತ್ಮಕವಾಗಿ ‘371ಜೆ’ ಕಲಂ ಸೌಲಭ್ಯದಿಂದ ಹರಪನಹಳ್ಳಿ ಜನರು ವಂಚಿತರಾದರು.
 1.  ಬುಡನ್ಗಿರಿ ದರ್ಗಾ ಮುಜರಾಯಿ ವ್ಯಾಪ್ತಿಗೆ
 • ಬಹು ವಿವಾದಿತ ಚಿಕ್ಕಮಗಳೂರು ಜಿಲ್ಲೆಯ ಗುರುದತ್ತಾತ್ರೇಯ ಬಾಬಾ ಬುಡನ್​ಗಿರಿ ದರ್ಗಾದ ನಿರ್ವಹಣೆ ಇನ್ನು ಮುಂದೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದೆ.
 •  ನ್ಯಾಯಾಂಗ ನಿಂದನೆ ಅರ್ಜಿಯ ತೂಗುಗತ್ತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸರ್ಕಾರ ರಚನೆ ಮಾಡಿದ್ದ ತಜ್ಞರ ಸಮಿತಿಯ ವರದಿಯ ಅನ್ವಯ ಉಪ ಸಮಿತಿ ನೀಡಿದ್ದ ವರದಿಯನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಕೊಂಡಿದೆ.
 • ನ್ಯಾಯಾಲಯದ ಸೂಚನೆಯಂತೆ ಸಾಹಿತಿ ರಹಮತ್ ತರೀಕರೆ, ನ್ಯಾ. ನಾಗಮೋಹನ್ ದಾಸ್ ಅವರನ್ನೊಳಗೊಂಡ ಸಮಿತಿ ಅಲ್ಲಿನ ಪೂಜಾ ವಿಧಿವಿಧಾನಗಳನ್ನು ಅಧ್ಯಯನ ಮಾಡಿ ವರದಿ ನೀಡಿತ್ತು.

1.ಭಾರತದ ಸಂವಿಧಾನದಲ್ಲಿ ಪ್ರತಿ ರಾಜ್ಯದಲ್ಲಿ ಹೈಕೋಟ೯ ಇರಬೇಕೆಂದು ಪ್ರಸ್ತಾಪಿಸಿರುವ ವಿಧಿ——

A) 213 ನೇ ವಿಧಿ

B) 214 ನೇ ವಿಧಿ

C) 212 ನೇ ವಿಧಿ

D) 215 ನೇ ವಿಧಿ

2. ಭಾರತದಲ್ಲಿ ಸುಪ್ರೀಂಕೋಟಿ೯ನ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ?

A)ರಾಷ್ಟ್ರಪತಿ

B)ಪ್ರಧಾನಿ

C)ಸಂಸತ್ತು

D)ಯಾರು ಅಲ್ಲಾ

3. ಭಾರತದ ಸಂವಿಧಾನ ಮಾನ್ಯ ಮಾಡಿರುವುದು

A)ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ

B)ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ

C)ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರನ್ನು

D) ಧಾರ್ಮಿಕ, ಭಾಷಾ ಹಾಗೂ ಜನಾಂಗದ ಅಲ್ಪಸಂಖ್ಯಾತರನ್ನು

4. ಬ್ರಿಟಿಷ್ ಸಂಸತ್ತು ಹೊರಡಿಸಿದ ಕೊನೆಯ ಕಾಯ್ದೆ?

A) ಚಾರ್ಟರ್ ಕಾಯ್ದೆ – ೧೮೩೩

B) ಚಾರ್ಟರ್ ಕಾಯ್ದೆ – ೧೭೯೩

C) ೧೭೮೬ ಕಾಯ್ದೆ

D) ಚಾರ್ಟರ್ ಕಾಯ್ದೆ – ೧೮೫೩

5. ಭಾರತದ ನಾಗರಿಕ. ಸೇವಾ ಸಮಿತಿಯನ್ನು ಯಾವಾಗ ನೇಮಿಸಲಾಯಿತು?

A) ೧೮೫೩

B) ೧೮೫೪

C) ೧೮೫೭

D) ೧೮೬೦

6. ಜಮ್ಮು ಮತ್ತು ಕಾಶ್ಮೀರ ಕ್ಕಿಂತ ಮುಂಚಿತವಾಗಿ ಯಾವ ಪ್ರದೇಶವನ್ನು ಕಾಮಗಾರಿ ನಿಷೇಧ’ ವಲಯವೆಂದು ಸೂಚಿಸಲಾಗಿತ್ತು ?

A) ಪಶ್ಚಿಮ ಘಟ್ಟಗಳು

B) ಪೂರ್ವ ಘಟ್ಟಗಳು

C) ಸುಂಧರ್ಬನ್ಸ್

D) ಮೇಲಿನ ಯಾವುದು ಅಲ್ಲ

7. “ಕ್ಲೀನ್ ಮೈ ಕೋಚ್ “ಯಾವುದಕ್ಕೆ ಸಂಬಂಧಿಸಿದೆ ?

A) ರೈಲ್ವೆ ಡಬ್ಬಿಗಳ ಸ್ವಚ್ಛತೆಗಾಗಿ

B) ರೈಲ್ವೆ ಹಳಿಗಳ ಸ್ವಚ್ಛತೆಗಾಗಿ

C) ೧ ಮತ್ತು ೨

D)ಯಾವುದು ಅಲ್ಲ

8. ಬಾಬಾಬುಡನ್ ಗಿರಿಶ್ರೇಣಿಯ ಅತ್ಯುನ್ನತ ಶಿಖರ ಯಾವುದು?

A) ಮುಳ್ಳಯ್ಯನ ಗಿರಿ

B) ಅಣೈಮುಡಿ

C) ದೊಡ್ಡಬೆಟ್ಟ

D) ಸ್ಕಂದ ಗಿರಿ

9. ರಾಷ್ಟ್ರಕೂಟ ವಂಶದ ಸ್ಥಾಪಕ ಯಾರು ?

A) ಗೌತಮಿಪುತ್ರ ಶಾತಕರ್ಣಿ

B) ದಂತಿದುರ್ಗ

C) ವಿಕ್ರಮಾದಿತ್ಯ

D) ಪುಲಕೇಶಿ ೨

10. ಯಾವ ರಾಜ್ಯದಲ್ಲಿ ‘ಮೊಬೈಲ್’ ಮೊಬೈಲ್ ಸೇವೆ ‘ಶಕ್ತಿ’ ಮಹಿಳೆಯರ ರಕ್ಷಣೆಗಾಗಿ ಪ್ರಾರಂಭಿಸಿದೆ?.

A) ಹರಿಯಾಣ

B) ಗುಜರಾತ್

C) ಹಿಮಾಚಲ ಪ್ರದೇಶ

D) ಮಧ್ಯ ಪ್ರದೇಶ

ಉತ್ತರಗಳು

 1. B 2. A 3. C  4. D  5. B  6. A  7. A  8.A  9. B 10. C

 

 

 

 

 

Related Posts
DOWNLOAD JULY 2018 Mahithi Monthly Current Affairs Magazine- English (e-copy)
Dear Aspirants,  Greetings... Have you downloaded  JULY Month Mahithi Monthly Current affairs Magazine? IF not, click here to download the Magazine. This will help your Upcoming UPSC and KPSC prelims examinations.    MAHITHI MONTHLY MAGAZINE is ...
READ MORE
December Mahithi Monthly 2017 current affairs
Dear Aspirants,  NammaKPSC has released December 2017 Mahithi Monthly current affairs magazine. Mahithi Monthly Magazine is the Best Current affairs Magazine for all civil services competitive examinations. It is the only magazine ...
READ MORE
Government Programme Made easy: Karnataka Polyhouse farming
What in News: Special package for polyhouse farming Agriculture Minister C. Krishna Byregowda has said a special package will be formulated to provide loans at lower rate of interest to construct polyhouses ...
READ MORE
Tejas to replace MiG as key fighter Indigenously developed Light Combat Aircraft (LCA) Tejas would be the mainstay of the Indian Air Force and would likely replace the entire MIG-21 fleet ...
READ MORE
The Forum on China–Africa Cooperation (FOCAC) is an official forum between the People's Republic of China and the states in Africa. There have been five summits held to date, The 6th forum ...
READ MORE
Two reports released on Thursday, one at the global level and the other India-specific, say the country is on track to meet only two (under-five overweight and exclusive breastfeeding rates) ...
READ MORE
Scientists have set out to explore the medicinal properties of the Ganga water This will help to either use the pristine water or elements isolated from it in clinical therapies. While four ...
READ MORE
31st ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ ಸುದ್ದಿಯಲ್ಲಿ ಏಕಿದೆ? ಬಹು ನಿರೀಕ್ಷಿತ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ (ಎನ್‌ಆರ್‌ಸಿ) ಅಂತಿಮ ಕರಡು ಪ್ರಕಟವಾಗಿದ್ದು, ಅಸ್ಸಾಂನ 40 ಲಕ್ಷ ಮಂದಿ ಭಾರತೀಯ ಪ್ರಜೆಗಳೆಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಒಟ್ಟು 29 ಕೋಟಿ ಜನಸಂಖ್ಯೆಯ ಪೈಕಿ 2.9 ಕೋಟಿ ಜನರ ಹೆಸರುಗಳು ...
READ MORE
Govt. to hike housing subsidy for beedi workers & miners Ministry for Labour and Employment has proposed a nearly four-fold increase in the housing subsidy for beedi workers and miners employed ...
READ MORE
Pradhan Mantri Fasal Bima Yojana – A boost to the farming sector
The highlights of this scheme There will be a uniform premium of only 2% to be paid by farmers for all Kharif crops and 1.5% for all Rabi crops. In case ...
READ MORE
DOWNLOAD JULY 2018 Mahithi Monthly Current Affairs Magazine-
December Mahithi Monthly 2017 current affairs
Government Programme Made easy: Karnataka Polyhouse farming
Tejas to replace MiG as key fighter
Forum on China-Africa Cooperation
State of nutrition in the country
Ganga water for medicinal properties
31st ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Revised Integrated Housing Scheme of 2007
Pradhan Mantri Fasal Bima Yojana – A boost

Leave a Reply

Your email address will not be published. Required fields are marked *