5th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಚುನಾವಣಾ ಸಿಬ್ಬಂದಿ ಮೇಲೆ ‘ಲೈಫ್’ ಕಣ್ಗಾವಲು

 • ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯದಲ್ಲಿರುವ ಸೆಕ್ಟರ್ ಮತ್ತು ಫ್ಲೈಯಿಂಗ್ ಅಧಿಕಾರಿಗಳ ಮೇಲೆ ನಿಗಾ ಇಡಲು ‘ಲೈಫ್‌– 360’ ಎಂಬ ಆ್ಯಪ್‌ ಸಿದ್ಧಗೊಳಿಸಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ.
 • ಹುಣಸೂರು ಉಪವಿಭಾಗಾಧಿಕಾರಿ ಕೆ.ನಿತೀಶ್‌, ಪ್ರಭಾರಿ ತಹಶೀಲ್ದಾರ್‌ ರಕ್ಷಿತ್‌ ತಮ್ಮ ಮೊಬೈಲ್‌ಗೆ ಈ ಆ್ಯಪ್‌ ಅಳವಡಿಸಿಕೊಂಡಿದ್ದಾರೆ. ಕ್ಷೇತ್ರದ 6 ಸೆಕ್ಟರ್ ಹಾಗೂ 21 ಫ್ಲೈಯಿಂಗ್ ತಂಡದ ಸಿಬ್ಬಂದಿಗಳ ಮೊಬೈಲ್‌ಗಳಿಗೂ ಜೋಡಿಸಲಾಗಿದೆ.
 • ಇದರಿಂದ ಅವರು ಯಾವ ಸ್ಥಳದಲ್ಲಿದ್ದಾರೆ, ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಎಂಬುದನ್ನು ವೀಕ್ಷಿಸಬಹುದು.
 • ‘ಸಿಬ್ಬಂದಿ ಎಷ್ಟು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಯಲು ಹಾಗೂ ಕಾರ್ಯಕ್ಷಮತೆ ಗುರುತಿಸಲು ಈ ಆ್ಯಪ್ ಸಹಕಾರಿಯಾಗಿದೆ’ ‘ಜಿಲ್ಲಾಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.
 • ಹುಣಸೂರು ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಬಳಸಲು ಅನುಮತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ಕ್ಷೇತ್ರಗಳಿಗೂ ವಿಸ್ತರಿಸುವ ಆಲೋಚನೆ ಇದೆ. ನಾಮಪತ್ರ ಸಲ್ಲಿಸುವವರೆಗೂ ಮೊಬೈಲ್‌ನಲ್ಲೇ ನಿರ್ವಹಣೆ ಮಾಡಲಾಗುವುದು. ನಂತರ ಲ್ಯಾಪ್‌ಟಾಪ್‌ ಮೂಲಕ ಅಧಿಕಾರಿಗಳ ಚಲನವಲನ ವೀಕ್ಷಿಸಲಾಗುವುದು.
 • ಇದರಿಂದ ಸಿಬ್ಬಂದಿ ಕಾರ್ಯದಕ್ಷತೆ ಹೆಚ್ಚಾಗಿ, ಚುನಾವಣಾ ಅಕ್ರಮ ನಿಯಂತ್ರಿಸಲು ಸಹಕಾರಿಯಾಗುತ್ತದೆ

ಬಾಹ್ಯಾಕಾಶದಲ್ಲಿ ಭಾರತ-ಚೀನಾ ಭಾರಿ ಪೈಪೋಟಿ

 • ಭೂ ಮತ್ತು ಜಲಗಡಿಯಲ್ಲಿ ಸೇನೆ ಮತ್ತು ನೌಕೆ ಜಮಾಯಿಸಿ ಭಾರತಕ್ಕೆ ಆತಂಕ ಉಂಟು ಮಾಡುತ್ತಿರುವ ಚೀನಾ, ಈಗ ಬಾಹ್ಯಾಕಾಶ ಅನ್ವೇಷಣೆಯಲ್ಲೂ ಭಾರತಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.
 • ಜಾಗತಿಕ ಮಟ್ಟದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಚಂದ್ರಯಾನ-2 ಹಾಗೂ ಮಾನವ ಸಹಿತ ಗಗನನೌಕೆ ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ.
 • ಇದೇ ವೇಳೆ ಅಮೆರಿಕ, ರಷ್ಯಾಕ್ಕೆ ಸರಿಸಮಾನ ತಂತ್ರಜ್ಞಾನ ಹೊಂದಲು ಮುಂದಾಗಿರುವ ಚೀನಾ, ‘ಸ್ಪೇಸ್ ಡ್ರೀಮ್ ಎಂಬ ಮಹತ್ವದ ಬಾಹ್ಯಾಕಾಶ ಯೋಜನೆಗೆ ಕೈಗೆತ್ತಿಕೊಂಡಿದೆ.

ಇಸ್ರೋಗೆ ಪೈಪೋಟಿ

 • ಈ ವರ್ಷದ ಆರಂಭದಲ್ಲಿ ಇಸ್ರೋ 104 ಉಪಗ್ರಹಗಳನ್ನು ಒಂದೇ ರಾಕೆಟ್​ನಲ್ಲಿ ಕಕ್ಷೆಗೆ ಸೇರಿಸಿ ದಾಖಲೆ ನಿರ್ವಿುಸಿತ್ತು. ಭದ್ರತಾ ಕ್ಷೇತ್ರಕ್ಕೂ ಇಸ್ರೋ ಕೊಡುಗೆ ಸಾಕಷ್ಟಿದೆ. ಸಂವಹನ, ಸರ್ವೆಕ್ಷಣೆಗೆ ಸಂಬಂಧಿಸಿದ ಹಲವು ಉಪಗ್ರಹಗಳನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದೆ.
 • ಈಗ ಚೀನಾ ಕೂಡ ಪೈಪೋಟಿಗೆ ಇಳಿದಿದ್ದು, ಯೋಜನೆಗಳನ್ನು ಚುರುಕಿನಿಂದ ಅನುಷ್ಠಾನಕ್ಕೆ ತರುತ್ತಿದೆ. ಇಸ್ರೋ ಯಶಸ್ವಿಯಾಗಿ ಕೈಗೊಂಡ -ಠಿ; 386 ಕೋಟಿ ವೆಚ್ಚದ ಚಂದ್ರಯಾನ-1 ಯೋಜನೆ ಚೀನಾದ ಮೊದಲ ಚಂದ್ರಯಾನ ಯೋಜನೆ (ವೆಚ್ಚ -ಠಿ; 1215 ಕೋಟಿ)ಗಿಂತ ಅತ್ಯಂತ ಕಡಿಮೆ ಖರ್ಚಿನದ್ದಾಗಿತ್ತು.
 • ಹಿನ್ನಡೆ: ಭಾರತ ಉಡಾವಣೆ ಮಾಡಿದ ಬೃಹತ್ ಪ್ರಮಾಣದ ಸಂವಹನ ಉದ್ದೇಶದ ಜಿಸ್ಯಾಟ್-6ಎ ಉಪಗ್ರಹ ಉಡಾವಣೆಯಾದ ಮೂರು ದಿನಗಳಲ್ಲೇ ಇಸ್ರೋದ ಭೂಪ್ರಯೋಗಾಲಯದ ಸಂಪರ್ಕಕ್ಕೆ ದೊರೆಯುತ್ತಿಲ್ಲ. ಇದರ ಸಂಪರ್ಕ ಮರುಸ್ಥಾಪಿಸಲು ಇಸ್ರೋ ಅವಿರತ ಶ್ರಮವಹಿಸಿದೆ. ಇದೇ ರೀತಿ ಚೀನಾ ಉಡ್ಡಯನ ಮಾಡಿದ್ದ ಟಿಯಾಂಗಾಂಗ್-1 ಅಂತರಿಕ್ಷ ಪ್ರಯೋಗಾಲಯ ಸೋಮವಾರ ಪೆಸಿಫಿಕ್ ಸಾಗರದಲ್ಲಿ ಪತನವಾಗಿದೆ.

ಚೀನಾದ ಸ್ಪೇಸ್ ಡ್ರೀಮ್

 • ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರ ಬಹುಮಹತ್ವಾಕಾಂಕ್ಷೆಯ ‘ಸ್ಪೇಸ್ ಡ್ರೀಮ್ ಯೋಜನೆ ಸಿದ್ಧತೆ ಸಮರೋಪಾದಿಯಲ್ಲಿ ಸಾಗಿದೆ. ಚಂದ್ರನ ಅಂಗಳದಲ್ಲಿ ನೆಲೆ ಸ್ಥಾಪಿಸಲು ಚೀನಾ ‘ಚಾಂಗ್ ಇ- 4’ ಮತ್ತು ‘ಚಾಂಗ್ ಇ- 5’ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ.
 • 2020ಕ್ಕೆ ಬಾಹ್ಯಾಕಾಶ ನಿಲ್ದಾಣ ಸಿದ್ಧವಾಗಲಿದ್ದು, 2022ರ ವೇಳೆಗೆ ಅಲ್ಲಿಗೆ ಮಾನವರನ್ನು ಕಳುಹಿಸುವ ಉದ್ದೇಶವನ್ನು ಚೀನಾ ಹೊಂದಿದೆ. ಈ ನಿಟ್ಟಿನಲ್ಲಿ 2016ರಲ್ಲೇ ಟಿಯಾಂಗಾಂಗ್-2 ಗಗನ ನೌಕೆಯನ್ನು ಉಡಾಯಿಸಿದೆ.

ಚಂದ್ರಯಾನ-2

 • ಭಾರತ ಮುಂದಿನ ಅಕ್ಟೋಬರ್/ನವೆಂಬರ್​ನಲ್ಲಿ ಚಂದ್ರಯಾನ-2 ಯೋಜನೆ ಕೈಗೊಳ್ಳಲಿದೆ. ಈ ಏಪ್ರಿಲ್​ನಲ್ಲೇ ಕೈಗೊಳ್ಳಬೇಕಿತ್ತು. ಆದರೆ, ಕೆಲವು ಪರೀಕ್ಷೆಗಳನ್ನು ಪೂರೈಸಬೇಕಿರುವ ಕಾರಣ ಈ ಯೋಜನೆ ಅಕ್ಟೋಬರ್​ನಲ್ಲಿ ಸಾಕಾರವಾಗಲಿದೆ. ಇದರೊಟ್ಟಿಗೆ ಐಆರ್​ಎನ್​ಎಸ್​ಎಸ್-1ಐ ಇಸ್ರೋ ಶೀಘ್ರದಲ್ಲೇ ಕೈಗೊಳ್ಳಲಿದೆ.

ಅಂಗಾರಕನೆಡೆಗೆ ದೃಷ್ಟಿ

 • 2014ರಲ್ಲಿ ಭಾರತ ಕೈಗೊಂಡ ಮಂಗಳಯಾನ ಯೋಜನೆ ಯಶಸ್ವಿಯಾದರೆ, ಅಂಗಾರಕನ ಅನ್ವೇಷಣೆಗೆ ಚೀನಾ ಉಡಾಯಿಸಿದ ಯೀಂಗ್​ಹುವಾ-1 ವಿಫಲವಾಯಿತು. ಆದರೆ, ಮಾನವ ಸಹಿತ ಮಂಗಳಯಾನಕ್ಕಾಗಿ ‘ಗ್ಲೋಬಲ್ ಸ್ಪೇಸ್ ಪವರ್’ ಹೆಸರಿನ ಯೋಜನೆಯನ್ನು ಚೀನಾ ಹಮ್ಮಿಕೊಂಡಿದೆ.

ಚೀನಾದ ಯಶಸ್ವಿ ಯೋಜನೆಗಳು

 • 2003ರಲ್ಲಿ ಉಡಾಯಿಸಿದ ಮಾನವ ಸಹಿತ ಗಗನನೌಕೆ ‘ಶೆಂಜ್​ಹುವಾ-5’, 2013ರಲ್ಲಿ ಮಹಿಳಾ ಗಗನಯಾತ್ರಿಗಳನ್ನು ಒಳಗೊಂಡ ‘ವಾಂಗ್ ಯಾಪಿಂಗ್’ ಬಾಹ್ಯಾಕಾಶ ಶೆಟಲ್, ಅದೇ ವರ್ಷ ಉಡಾವಣೆ ಮಾಡಿದ ಚಂದ್ರಾನ್ವೇಷಣೆಯ ‘ಜೇಡ್ ರ್ಯಾಬಿಟ್’ ಎಂಬ ರೋವರ್ 31 ತಿಂಗಳು ಚಂದ್ರನ ಅಧ್ಯಯನ ನಡೆಸಿತ್ತು.

370 ಅನುಚ್ಛೇದ ಕಾಯಂ

 • ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 370ನೇ ಅನುಚ್ಛೇದ ಕಾಯಂ ಆಗಿದ್ದು, ಇದರ ರದ್ದತಿ ಅಸಾಧ್ಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
 • 370ನೇ ಅನುಚ್ಛೇದ ರದ್ದತಿಗೆ ಕೋರಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆದರ್ಶ ಕೆ.ಗೋಯೆಲ್ ಮತ್ತು ಆರ್.ಎಫ್.ನಾರಿಮನ್ ಅವರ ದ್ವಿಸದಸ್ಯ ಪೀಠ, ಭಾರತ ಸಂವಿಧಾನದ ಯಾವ ಯಾವ ಕಾಯ್ದೆಗಳು ತನ್ನ ರಾಜ್ಯಕ್ಕೆ ಅನ್ವಯ ಆಗುವುದಿಲ್ಲ ಎಂಬ ಶಿಫಾರಸನ್ನು ಜಮ್ಮು- ಕಾಶ್ಮೀರ ಸಂವಿಧಾನ ರಚನಾ ಮಂಡಳಿ ಮಾಡಿರಲಿಲ್ಲ್ಲ 370ನೇ ಅನುಚ್ಛೇದವು ಸಂವಿಧಾನದಲ್ಲಿ ಕಾಯಂ ಸ್ಥಾನಮಾನ ಪಡೆದುಕೊಂಡಿದೆ ಎಂದು ಹೇಳಿದೆ.
 • 2017ರಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾ ಮತ್ತು ಸಂತೋಷ್ ಗುಪ್ತಾ ವಿರುದ್ಧದ ಪ್ರಕರಣದಲ್ಲೂ ಸುಪ್ರೀಂಕೋರ್ಟ್ ಇಂತಹದ್ದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಜಮ್ಮು- ಕಾಶ್ಮೀರಕ್ಕೆ ಕಲ್ಪಿಸಿರುವ 370ನೇ ಅನುಚ್ಛೇದವು ಸಂವಿಧಾನದಲ್ಲಿ ಕಾಯಂ ಜಾಗಪಡೆದಿದೆ. ಇದನ್ನು ರದ್ದುಪಡಿಸಲು ಸಾಧ್ಯವಿಲ್ಲವೆಂದು ಹೇಳಿತ್ತು
 • ಕೇಂದ್ರ ಸರ್ಕಾರ 2017ರ ಸುಪ್ರೀಂಕೋರ್ಟ್ ತೀರ್ಪನ್ನು ಅಧ್ಯಯನ ಮಾಡುತ್ತಿದ್ದು, ಸರ್ಫೆಸಿ ಕಾಯ್ದೆ (ಸಾಲಕ್ಕೆ ನೀಡಿರುವ ಭದ್ರತಾ ಖಾತರಿ ಮತ್ತು ಆಸ್ತಿ ಮರುಸಂರಚನೆಗೆ ಅವಕಾಶ ನೀಡುವ ಕಾಯ್ದೆ) ಜಮ್ಮು- ಕಾಶ್ಮೀರಕ್ಕೂ ಅನ್ವಯವಾಗಲಿದೆಯೇ ಪರಿಶೀಲಿಸುತ್ತಿದೆ.

ಏನಿದು ಪ್ರಕರಣ?

 • ಜಮ್ಮು- ಕಾಶ್ಮೀರಕ್ಕೆ 370 ಅನುಚ್ಛೇದದ ಅನ್ವಯ ಕಲ್ಪಿಸಿರುವ ವಿಶೇಷ ಸ್ಥಾನಮಾನ ತಾತ್ಕಾಲಿಕವಾಗಿದ್ದು, 1957ರ ಜನವರಿ 25ರಂದು ಜಮ್ಮು- ಕಾಶ್ಮೀರದ ಸಂವಿಧಾನ ರಚನಾ ಮಂಡಳಿ ವಿಸರ್ಜನೆಯಾದಾಗಲೇ ಈ ಪರಿಚ್ಛೇದವು ನಿರರ್ಥಕವಾಗುತ್ತದೆ.

 

ಜಮ್ಮು- ಕಾಶ್ಮೀರ ಸರ್ಕಾರ ನಿಲುವು

 • 370ನೇ ಅನುಚ್ಛೇದ ಕುರಿತ ಕೇಂದ್ರ ಸರ್ಕಾರದ ನಿಲುವನ್ನು ಜಮ್ಮು- ಕಾಶ್ಮೀರ ಸರ್ಕಾರ ವಿರೋಧಿಸಿದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂಬಂಧದ ಅರ್ಜಿಯೊಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.
 • ಈ ಪೀಠವು ಸಂವಿಧಾನದ 35ಎ ಅನುಚ್ಛೇದದ ಸಿಂಧುತ್ವವನ್ನು ಪರಿಶೀಲಿಸುತ್ತಿದೆಯೇ ಹೊರತು 370ನೇ ಅನುಚ್ಛೇದವನ್ನಲ್ಲ ಎಂದು ಜಮ್ಮು- ಕಾಶ್ಮೀರದ ಪರ ವಕೀಲ ರಾಜೀವ್ ಧವನ್, ಹೆಚ್ಚುವರಿ ಅಡ್ವೋಕೇಟ್ ಜನರಲ್ ಎಂ. ಶೋಯೆಬ್ ಅಲಂ ನ್ಯಾಯಪೀಠಕ್ಕೆ ತಿಳಿಸಿದರು

35ಎ ಅನುಚ್ಛೇದ

 • ಸಂವಿಧಾನದ 35ಎ ಅನುಚ್ಛೇದವು ಜಮ್ಮು- ಕಾಶ್ಮೀರದ ಕಾಯಂ ನಾಗರಿಕರನ್ನು ಗುರುತಿಸುವ ಹಕ್ಕನ್ನು ರಾಜ್ಯದ ವಿಧಾನಸಭೆಗೆ ನೀಡಿದೆ. ಇದರಲ್ಲಿ ಜಮ್ಮು- ಕಾಶ್ಮೀರದಲ್ಲಿ ಅಲ್ಲಿನ ನಾಗರಿಕರು ಹೊರತು ಪಡಿಸಿ ಉಳಿದವರು ಅಲ್ಲಿ ಆಸ್ತಿ ಹೊಂದುವಂತಿಲ್ಲ ಎಂಬ ಅಂಶವಿದೆ.

370ನೇ ಅನುಚ್ಛೇದ

 • ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡಾಗ ಜಮ್ಮು- ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನ ಆಗಿರಲಿಲ್ಲ. ನಂತರ ರಾಜ್ಯವನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲು ಆಗಿನ ಕಾಶ್ಮೀರದ ರಾಜ ಹರಿಸಿಂಗ್ ಒಪ್ಪಿದರು. ಆದರೆ, ರಕ್ಷಣೆ, ವಿದೇಶಾಂಗ ಮತ್ತು ಸಂವಹನ ಹೊರತು ಪಡಿಸಿ ಉಳಿದೆಲ್ಲಾ ವಿಷಯದಲ್ಲೂ ಜಮ್ಮು- ಕಾಶ್ಮೀರ ಸರ್ವಸ್ವತಂತ್ರ ಎಂಬ ಷರತ್ತು ಹಾಕಿದ್ದರು.
 • ಈ ಹಿನ್ನೆಲೆಯಲ್ಲಿ ಪಂಡಿತ್ ನೆಹರು ಸರ್ಕಾರ 1950ರಲ್ಲಿ 370ನೇ ಅನುಚ್ಛೇದವನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಿ, ಜಮ್ಮು- ಕಾಶ್ಮೀರಕ್ಕೆ ಸ್ವಾಯತ್ತೆ ನೀಡಿತ್ತು ಮತ್ತು ಇದು ತಾತ್ಕಾಲಿಕ ಎಂದು ನಮೂದಿಸಲಾಗಿತ್ತು.
 • ಭಾರತ ಸಂವಿಧಾನದ ಯಾವ ಕಾಯ್ದೆ,ಕಾನೂನು ರಾಜ್ಯಕ್ಕೆ ಅನ್ವಯವಾಗಬೇಕು ಎಂಬ ಬಗ್ಗೆ ಶಿಫಾರಸು ನೀಡಲು ಜಮ್ಮು- ಕಾಶ್ಮೀರ ಸಂವಿಧಾನ ರಚನಾ ಮಂಡಳಿಗೆ ಸೂಚಿಸಲಾಗಿತ್ತು. ಆದರೆ ಈ ಮಂಡಳಿ ಯಾವುದೇ ಶಿಫಾರಸನ್ನು ನೀಡಲಿಲ್ಲ.

~~~***ದಿನಕ್ಕೊಂದು ಯೋಜನೆ***~~~

ಸಾಥ್ ಕಾರ್ಯಕ್ರಮ (ಮಾನವ ಬಂಡವಾಳದ ಪರಿವರ್ತನೆಗಾಗಿ ಸಮರ್ಥನೀಯ ಕ್ರಿಯೆ)

SATH ಪ್ರೋಗ್ರಾಂ (Sustainable Action for Transforming Human capital)

 ಶಿಕ್ಷಣ ಮತ್ತು ಆರೋ ಗ್ಯಕ್ಷೇತ್ರಗಳಲ್ಲಿ ರೂಪಾಂತರವನ್ನು ಪ್ರಾರಂಭಿಸುವುದು SATH ಯೋಜನೆಯ ದೃಷ್ಟಿ.

 • NITIಆಯೋ ಗದ ತಾಂತ್ರಿಕ ಬೆಂಬಲಕ್ಕಾಗಿ ಅನೇಕ ರಾಜ್ಯಗಳು ವ್ಯಕ್ತಪಡಿಸಿದ ಅಗತ್ಯವನ್ನು ಪರಿಹರಿಸಲು ಸಹಕಾರ ಫೆಡರಲಿಸಮ್ನ ತತ್ತ್ವಶಾಸ್ತ್ರವನ್ನು ಇದು ಒಳಗೊಂಡಿದೆ.
 • ಕಾರ್ಯಕ್ರಮವು NITI ಆಯೋಗವು ಮೆಕಿನ್ಸೆ & ಕಂಪೆನಿ ಮತ್ತು ಐಪಿಇ ಗ್ಲೋಬಲ್ ಕನ್ಸೋರ್ಟಿಯಂನೊಂದಿಗೆ ಕಾರ್ಯಗತಗೊಳ್ಳುತ್ತದೆ, ಅವರು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲ್ಪಡುತ್ತಾರೆ.
 • SATH ಪ್ರೋಗ್ರಾಂ ಮೂರು ರಾಜ್ಯಗಳನ್ನುಆಯ್ಕೆಮಾಡಿ   ನಿರ್ಮಿಸಲು ಉದ್ದೇಶಿಸಿದೆ. ಅಸ್ಸಾಂ, ಉತ್ತರ ಪ್ರದೇಶ ಮತ್ತು ಕರ್ನಾಟಕವು ಭವಿಷ್ಯದ ‘ರೋಲ್ ಮಾಡೆಲ್’ ಎಂದು ಆರೋಗ್ಯ ವ್ಯವಸ್ಥೆಗಳಿಗೆ ಹೇಳಲಾಗುತ್ತದೆ .
 • ನೀತಿ ಆಯೋಗವು ಈ ಮೂರು ಆಯ್ದ ರಾಜ್ಯಗಳಲ್ಲಿ  ಮಧ್ಯ ಪ್ರದೇಶ ,ಝಾರ್ಖಂಡ್ ,ಒಡಿಶಾ ದಲ್ಲಿ ದೃಢವಾದ ಶೈಕ್ಷಣಿಕ  ಮಾರ್ಗಸೂಚಿಯ  ವಿನ್ಯಾಸಗೊಳಿಸಲು ನಿರ್ಧರಿಸಿದೆ .
 • ಕಾರ್ಯಕ್ರಮದ ಆಡಳಿತ ರಚನೆಯನ್ನು ಅಭಿವೃದ್ಧಿಪಡಿಸುವುದು, ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್ ಕಾರ್ಯವಿಧಾನಗಳನ್ನು ಸ್ಥಾಪಿಸುವುದು, ಇದರ ಉದ್ದೇಶವಾಗಿದೆ

1. ಸ್ಪೇಸ್ ಡ್ರೀಮ್ ಎಂಬ ಮಹತ್ವದ ಬಾಹ್ಯಾಕಾಶ ಯೋಜನೆ ಯಾವ ದೇಶದ್ದು ?
A. ಭಾರತ
B. ಚೀನಾ
C. ರಷ್ಯಾ
D. ಅಮೇರಿಕಾ

2. ಚೀನಾದ ಗ್ಲೋಬಲ್ ಸ್ಪೇಸ್ ಪವರ್ ಎಂಬ ಯೋಜನೆಯನ್ನು ಯಾವ ಗ್ರಹದ ಅನ್ವೇಷಣೆಗಾಗಿ ಮಾಡುತ್ತಿದೆ ?
A. ಅಂಗಾರಕ ಗ್ರಹ
B. ಬುಧ ಗ್ರಹ
C. ಗುರು ಗ್ರಹ
D. ಶನಿ ಗ್ರಹ

3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾಗಿರುವ ಹೇಳಿಕೆಯನ್ನು ಆಯ್ಕೆ ಮಾಡಿ
1.ಸಂವಿಧಾನದ 35ಎ ಅನುಚ್ಛೇದವು ಜಮ್ಮು- ಕಾಶ್ಮೀರದ ಕಾಯಂ ನಾಗರಿಕರನ್ನು ಗುರುತಿಸುವ ಹಕ್ಕನ್ನು ರಾಜ್ಯದ ವಿಧಾನಸಭೆಗೆ ನೀಡಿದೆ
2.ರಕ್ಷಣೆ, ವಿದೇಶಾಂಗ ಮತ್ತು ಸಂವಹನ ಹೊರತು ಪಡಿಸಿ ಉಳಿದೆಲ್ಲಾ ವಿಷಯದಲ್ಲೂ ಜಮ್ಮು- ಕಾಶ್ಮೀರ ಸರ್ವಸ್ವತಂತ್ರವಾಗಿದೆ
A. 1 ಮತ್ತು 2 ಹೇಳಿಕೆಗಳು ತಪ್ಪಾಗಿವೆ
B.1 ನೇ ಹೇಳಿಕೆ ತಪ್ಪಿದೆ
C. 2 ನೇ ಹೇಳಿಕೆ ತಪ್ಪಿದೆ
D.ಎರಡೂ ಹೇಳಿಕೆಗಳು ಸರಿಯಾಗಿವೆ

4. ಬೆಂಗಳೂರಿನ ಯಾವ ಸಂಸ್ಥೆಗೆ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್ಆರ್ಡಿ) ಸಚಿವಾಲಯ ಸಿದ್ಧಪಡಿಸಿದ ರಾಂಕಿಂಗ್ ಹೇಳಿದೆ?
A. ಐ.ಐ .ಎಸ್.ಸಿ
B. ಐ.ಐ.ಎಂ .ಬಿ
C.ಬೆಂಗಳೂರು ವಿಶ್ವ ವಿದ್ಯಾಲಯ
D.ಯಾವುದು ಅಲ್ಲ

5. ಸೆಲ್ಕೋ ಇಂಡಿಯಾದ ಸ್ಥಾಪಕರು ಯಾರು ?
A. ನೈವಿಲ್ಲೆ ವಿಲ್ಲಿಯಮ್ಸ್
B. ಹರೀಶ್ ಹಂದೆ
C. A ಮತ್ತು B
D.ಈ ಮೇಲಿನ ಯಾರು ಅಲ್ಲ

6. ವರ್ಚುಯಲ್ ಐಡಿ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾಗಿರುವುದನ್ನು ಆಯ್ಕೆ ಮಾಡಿ
1.ವರ್ಚ್ಯುವಲ್ ಐಡಿ–ವಿಐಡಿಯು ಆಧಾರ್ ಸಂಖ್ಯೆಗೆ ಪರ್ಯಾಯವಾಗಿ ಬಳಸಬಹುದಾದ ಬೀಟಾ ಆವೃತ್ತಿಯ ‘ಪರ್ಯಾಯ ಗುರುತಿನ ಸಂಖ್ಯೆಯಾಗಿದೆ
2.ಸೇವಾ ಕಂಪನಿಗಳು ಈಗ ವಿಐಡಿಯನ್ನು ಸ್ವೀಕರಿಸುವುದು ಐಚ್ಛಿಕವಾಗಿದ್ದು, 2018ರ ಜೂನ್ 1ರಿಂದ ಕಡ್ಡಾಯವಾಗಲಿದೆ
A. 1ನೇ ಹೇಳಿಕೆ ಸರಿಯಾಗಿದೆ
B. 1ನೇ ಹೇಳಿಕೆ ತಪ್ಪಿದೆ
C. ಎರಡೂ ಹೇಳಿಕೆಗಳು ಸರಿಯಿದೆ
D. ಯಾವ ಹೇಳಿಕೆಗಳು ಸರಿಯಿಲ್ಲ

7. ವಿಶ್ವದ ಅತಿ ಉದ್ದವಾದ ಅಡ್ಡ-ಸೇತುವೆ ಯಾವ ದೇಶವನ್ನು ಅನಾವರಣಗೊಳಿಸುತ್ತದೆ?
A . ಮಲೆಷ್ಯಾ
B. ಚೀನಾ
C. ಹಾಂಗ್ ಕಾಂಗ್
D.ಸಿಂಗಪೂರ್

8. ಇತ್ತೀಚೆಗೆ ವಿಭಿನ್ನವಾಗಿ ಮತ್ತು ವಯಸ್ಕರಿಗೆ ಯಾವ ದೇಶವು ತನ್ನ ಮೊದಲ “ಪ್ರವೇಶಿಸಬಹುದಾದ” ಟ್ರೆಕ್ಕಿಂಗ್ ಜಾಡುವನ್ನು ಪ್ರಾರಂಭಿಸಿದೆ?
A.ಅಮೇರಿಕಾ
B.ನೇಪಾಳ
C. ಚೀನಾ
D. ಪಾಕಿಸ್ತಾನ

9. ಗೋವಾದಲ್ಲಿ ಎಲ್ಲಿ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಅನ್ನು ಉದ್ಘಾಟಿಸಲಾಯಿತು?
A. ಥಿವಿಂ ನಿಲ್ದಾಣ
B. ಪೆರ್ನೆಮ್ ನಿಲ್ದಾಣ
C. ಬಾಲಿ ನಿಲ್ದಾಣ
D. ಮಾಡ್ಗಾಂವ್ ಸ್ಟೇಶನ್

10. ಎರಡು ಕಟ್ಟಡಗಳ ಮೇಲಂತಸ್ತುಗಳನ್ನು ಉರುಳಿಸಿದ ಕಾರಣಕ್ಕೆ ಕೆಳಕಂಡ ಯಾವ ನಗರದ ಮೆಟ್ರೊ ರೈಲು ನಿಗಮ 6 ಕೋಟಿ ರೂ.ಗಳಷ್ಟು ಪರಿಹಾರ ನೀಡಬೇಕಾಯಿತು?
A. ಚೆನ್ನೈ
B. ಮುಂಬೈ
C. ದೆಹಲಿ
D. ಕೋಲ್ಕತಾ

ಉತ್ತರಗಳು : 1.B 2.A 3.D 4.A 5.C 6.C 7.B 8.B 9.C 10.C 

Related Posts
“7th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಜಿಎಸ್​ಟಿಎನ್​ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಕಂಪನಿಯನ್ನಾಗಿಸಲು ನಿರ್ಧಾರ ಸುದ್ದಿಯಲ್ಲಿ ಏಕಿದೆ ? ಸರಕು ಮತ್ತು ಸೇವಾ ತೆರಿಗೆ ಜಾಲ (ಜಿಎಸ್​ಟಿಎನ್​) ಅನ್ನು ಭವಿಷ್ಯದಲ್ಲಿ ಸರ್ಕಾರಿ ಕಂಪನಿಯನ್ನಾಗಿ ಮಾಡುವ ಕುರಿತು ನಡೆದ 27ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಜಿಎಸ್​ಟಿಎನ್​ನಲ್ಲಿ ಸದ್ಯ ಶೇ. 51ರಷ್ಟು ...
READ MORE
Karnataka Current Affairs – KAS / KPSC Exams – 9th May 2017
‘Rani Channamma University to ink MoUs with foreign universities’ Rani Channamma University will soon enter into agreements with universities in England and U.S., Vice-Chancellor of the university Shivanand Hosmani has said. These ...
READ MORE
“30th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ವಾಸಿಸುವವನೇ ನೆಲದೊಡೆಯ’ ಕಾಯ್ದೆ ಸುದ್ದಿಯಲ್ಲಿ ಏಕಿದೆ?  ಸಮಾಜದ ಕೆಳಸ್ತರದ ಲಕ್ಷಾಂತರ ಕುಟುಂಬಗಳಿಗೆ ವಾಸದ ಸ್ಥಳದ ಮೇಲೆ ಮಾಲೀಕತ್ವದ ಹಕ್ಕು ಒದಗಿಸುವ 'ವಾಸಿಸುವವನೇ ನೆಲದೊಡೆಯ' ಘೋಷಣೆಯೊಂದಿಗೆ ರಾಜ್ಯ ಸರಕಾರ ರೂಪಿಸಿದ್ದ ಶಾಸನವು ಅನುಷ್ಠಾನ ಹಂತದಲ್ಲಿ ವೈಫಲ್ಯ ಕಂಡಿದೆ. ಈ ಕಾನೂನು ಜಾರಿಯಾದ ಬಳಿಕ ಸುಮಾರು 5,300 ಜನವಸತಿ ಪ್ರದೇಶಗಳಷ್ಟೇ ...
READ MORE
“5th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ರತ್ನಖಚಿತ ಸಿಂಹಾಸನ ಸುದ್ಧಿಯಲ್ಲಿ ಏಕಿದೆ ?ಪಾರಂಪರಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರೆಯ ಸಂಭ್ರಮ ಕಳೆಗಟ್ಟಲಾರಂಭಿಸಿದ್ದು, ಅರಮನೆಯಲ್ಲಿ ಧಾರ್ವಿುಕ ವಿಧಾನಗಳಂತೆ ಸಾವಿರಾರು ವರ್ಷಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯವೂ ನೆರವೇರಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಸಿಂಹಾಸನದಲ್ಲಿ ವಿರಾಜಮಾನರಾಗಿ ಖಾಸಗಿ ದರ್ಬಾರ್ ...
READ MORE
“11th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಹಸಿರು ಕರ್ನಾಟಕ ಸುದ್ದಿಯಲ್ಲಿ ಏಕಿದೆ?  ಹಸಿರು ಕರ್ನಾಟಕ ಯೋಜನೆಗೆ ಆಗಸ್ಟ್‌ 15 ರಂದು ಚಾಲನೆ ನೀಡಲಾಗುವುದು. ಈ ಬಾರಿ 50 ಕೋಟಿ ಸಸಿ ನೆಡುವ ಗುರಿಯಿದೆ. ಜನರಿಗೂ ಗಿಡ ವಿತರಿಸಲಾಗುವುದು. ಸರಕಾರಿ, ಖಾಸಗಿ ಜಮೀನಿನಲ್ಲಿ ಗಿಡ ನೆಡಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ...
READ MORE
Medicines
Tirthahalli taluk in grip of Kyasanur Forest Disease Tirthahalli taluk continues to remain in the grip of Kyasanur Forest Disease (KFD), also known as monkey fever, as four positive cases among ...
READ MORE
“15th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ನೀರು ನಿರ್ವಹಣೆ ಸೂಚ್ಯಂಕ ಸುದ್ದಿಯಲ್ಲಿ ಏಕಿದೆ? ನೀತಿ ಆಯೋಗ ಸಿದ್ಧಪಡಿಸಿದ ಸಮಗ್ರ ನೀರು ನಿರ್ವಹಣೆ ಸೂಚ್ಯಂಕದ (ಸಿಡಬ್ಲ್ಯುಎಂಐ) ಅತ್ಯುತ್ತಮ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸ್ಥಾನ ಪಡೆದುಕೊಂಡಿದೆ. ಸೂಚ್ಯಂಕದಲ್ಲಿ ಗುಜರಾತ್‌ ಮೊದಲ ಸ್ಥಾನ ಪಡೆದಿದ್ದರೆ ನಂತರ ಸ್ಥಾನಗಳಲ್ಲಿ ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ. ಈಶಾನ್ಯ ...
READ MORE
A eucalyptus tree on Tasmanian Land Conservancy property.
The Karnataka government took the legislation route to curtail planting of saplings that have adverse effect on environment and ground water. The Legislative Assembly on Thursday passed the Karnataka Preservation of ...
READ MORE
Poor response from MLAs to e-governance initiatives
For the first time, the secretariat has allowed the MLAs to either WhatsApp or e-mail their questions. This facility is introduced for the session starting February 6. Of the 224 MLAs, ...
READ MORE
Karnataka Current Affairs – KAS / KPSC Exams – 16th June 2017
HC stay on Bellandur All issues from Karnataka have to be heard by the Southern Bench in Chennai as per the distribution of jurisdiction among various benches across the country under ...
READ MORE
“7th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS / KPSC Exams
“30th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“5th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
“11th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka State Current Affairs – KAS / KPSC
“15th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka: Law to curtail planting of saplings that
Poor response from MLAs to e-governance initiatives
Karnataka Current Affairs – KAS / KPSC Exams

Leave a Reply

Your email address will not be published. Required fields are marked *