“6th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಕನ್ನಡಿಗನ ಬೆಳ್ಳಿ ಬೆಳಕು ದೇಶಕ್ಕೆ ಸ್ವರ್ಣ ಹೊಳಪು

 • ಕರ್ನಾಟಕ ಕರಾವಳಿ ಹುಡುಗ ಗುರುರಾಜ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಗೇಮ್ಸ್​ ನಲ್ಲಿ ಮೊದಲ ದಿನವೇ ರಜತ ಗೆದ್ದು ಭಾರತದ ಪದಕದ ಖಾತೆ ತೆರೆದಿದ್ದಾರೆ. ಈ ಮೂಲಕ ಕ್ರೀಡಾ ಪ್ರೇಮಿಗಳಲ್ಲಿ ಡಬಲ್ ಸಂಭ್ರಮ ಹರಡಿದ್ದಾರೆ.
 • ಮಣಿಪುರದ ಮೀರಾಬಾಯಿ ಚಾನು ಮಹಿಳೆಯರ ವೇಟ್​ಲಿಫ್ಟಿಂಗ್​ನಲ್ಲಿ ಕೂಟದಾಖಲೆಯೊಂದಿಗೆ ಸ್ವರ್ಣ ಗೆದ್ದು ಭಾರತದ ಸಂಭ್ರಮ ವಿಸ್ತರಿಸಿದರು. ಕ್ರೀಡಾ ಸ್ಪರ್ಧೆಗಳ ಮೊದಲ ದಿನ ಭಾರತ ತಲಾ 1 ಸ್ವರ್ಣ, ಬೆಳ್ಳಿ ಗೆದ್ದು ಪದಕ ಪಟ್ಟಿಯಲ್ಲಿ 7ನೇ ಸ್ಥಾನದೊಂದಿಗೆ ಅಭಿಯಾನ ಆರಂಭಿಸಿದೆ.

ಮೀರಾಗೆ ದಾಖಲೆ ಸ್ವರ್ಣ

 • ಮಣಿಪುರದ 23 ವರ್ಷದ ಮೀರಾಬಾಯಿ 48 ಕೆಜಿ ವಿಭಾಗದ ವೇಟ್​ಲಿಫ್ಟಿಂಗ್​ನಲ್ಲಿ ಹೊಸ ಕೂಟ ದಾಖಲೆ ಬರೆದು ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಗೋಲ್ಡ್​ಕೋಸ್ಟ್ ನಲ್ಲಿ ಮೊದಲ ಬಾರಿ ಭಾರತದ ರಾಷ್ಟ್ರಗೀತೆ ಮೊಳಗಿಸಿದರು.
 • ಅವರು ಒಟ್ಟು 196 ಕೆಜಿ (86+110) ಭಾರವನ್ನು ನಿರಾಯಾಸವಾಗಿ ಎತ್ತುವ ಮೂಲಕ ವಿಶ್ವ ಚಾಂಪಿಯನ್ ಪಟ್ಟಕ್ಕೆ ತಕ್ಕ ನಿರ್ವಹಣೆ ಪ್ರದರ್ಶಿಸಿ ಮನಗೆದ್ದರು.
 • ಬರ್ಮುಡಕ್ಕೆ ಕೂಟದ ಮೊದಲ ಸ್ವರ್ಣ: ಕೂಟದ ಮೊದಲ ಸ್ವರ್ಣ ಪದಕ ಬರ್ಮುಡ ದೇಶದ ಪಾಲಾಯಿತು. ಮಹಿಳೆಯರ ಸೈಕ್ಲಿಂಗ್ ಸ್ಪಿ್ರಟ್ ಟ್ರಯಾಥ್ಲಾನ್​ನಲ್ಲಿ 2 ಬಾರಿ ವಿಶ್ವ ಚಾಂಪಿಯನ್ ಫ್ಲೋರಾ ಡುಫಿ ತಮ್ಮ ದೇಶಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟರು. ಇದು ಬರ್ಮುಡ ಪಾಲಿಗೆ ಗೇಮ್್ಸ ಇತಿಹಾಸದಲ್ಲೇ ಚೊಚ್ಚಲ ಸ್ವರ್ಣ ಪದಕವಾಗಿದೆ.

ಖಾದ್ಯ ತೈಲಗಳ ಬೆಲೆ ಭಾರಿ ಏರಿಕೆ

 • ಕೇಂದ್ರ ಸರ್ಕಾರ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದ ಪರಿಣಾಮ ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯತೈಲಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.
 • ಸ್ಥಳೀಯ ಮಾರುಕಟ್ಟೆಗಳಲ್ಲಿ ಖಾದ್ಯ ತೈಲಗಳ ಬೆಲೆ ಏರಿಕೆಯಾಗಿದ್ದು, ತಾಳೆಎಣ್ಣೆ ಪ್ರತಿ ಲೀಟರ್​ಗೆ ಈ ಹಿಂದಿನ ಬೆಲೆಗಿಂತ 8-9 ರೂ. ಹೆಚ್ಚಳಗೊಂಡಿದೆ. ಜತೆಗೆ ಸೂರ್ಯಕಾಂತಿ ಎಣ್ಣೆ, ಸೋಯಾ ಎಣ್ಣೆ ಲೀಟರಿಗೆ 6-8 ರೂ. ಜಾಸ್ತಿಯಾಗಿದೆ.
 • ಇಂಡೋನೇಷ್ಯಾ, ಮಲೇಷ್ಯಾ ಮತ್ತು ಸ್ವಲ್ಪಮಟ್ಟಿಗೆ ಲ್ಯಾಟಿನ್ ಅಮೆರಿಕದಿಂದ ತಾಳೆಎಣ್ಣೆಯನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಸೂರ್ಯಕಾಂತಿ ಎಣ್ಣೆಯನ್ನು ಉಕ್ರೇನ್ ಮತ್ತು ರಷ್ಯಾದಿಂದ ತರಿಸಲಾಗುತ್ತದೆ. ನ.17 ರಿಂದ ಜ.18ರವರೆಗೆ 36,287,34 ಟನ್ ಖಾದ್ಯತೈಲ ಆಮದಾಗಿದ್ದು, ಈ ಪ್ರಮಾಣ ಶೇ.6 ಹೆಚ್ಚಾಗಿದೆ.

ರೈತರಿಗೆ ಉತ್ತಮ ಬೆಲೆ ಸಿಗಲಿ

 • ಸ್ಥಳೀಯ ಎಣ್ಣೆಕಾಳು ಬೆಳೆಗಾರರು ಮತ್ತು ಸಂಸ್ಕರಣೆದಾರರನ್ನು ಉತ್ತೇಜಿಸಲು ಕೇಂದ್ರ ಸರಕಾರವು ಆಮದು ಸುಂಕವನ್ನು ಹೆಚ್ಚಿಸಿರು ವುದನ್ನು ಭಾರತೀಯ ಖಾದ್ಯ ತೈಲಗಳ ಉದ್ಯಮದಾರರ ಸಂಘ ಸ್ವಾಗತಿಸಿದೆ.
 • ಭಾರತದಲ್ಲಿ ಆಮದು ಖಾದ್ಯ ತೈಲಗಳ ಮೇಲೆ ಅವಲಂಬನೆಯಾಗಿದ್ದು, ಶೇ.70 ಬಳಕೆ ಮಾಡಲಾಗುತ್ತಿದೆ. ರೈತರಿಗೆ ಉತ್ತಮ ಬೆಲೆ ಲಭಿಸಬೇಕಾದರೆ ತಾಳೆ ಎಣ್ಣೆ ಸುಂಕದ ಜತೆಗೆ ಸೋಯಾ, ಸೂರ್ಯಕಾಂತಿ ಸೇರಿ ಎಲ್ಲ ಖಾದ್ಯ ತೈಲಗಳ ಆಮದು ಸುಂಕ ಹೆಚ್ಚಿಸ ಬೇಕು ಎಂದು ಭಾರತೀಯ ಖಾದ್ಯ ತೈಲ ಉತ್ಪಾದಕರ ಒಕ್ಕೂಟ ಹೇಳಿದೆ

ಆಂಟಿಬಾಡಿ ಡಯಾಗ್ನಸಿಸ್ ಕಿಟ್ ನಿಷೇಧ

 • ಮಲೇರಿಯಾ ಕಾಯಿಲೆ ಪತ್ತೆಗೆ ಬಳಸುತ್ತಿದ್ದ ‘ಆಂಟಿಬಾಡಿ ಡಯಾಗ್ನಸಿಸ್’ ಕಿಟ್ ಉತ್ಪಾದನೆ ಹಾಗೂ ಮಾರಾಟ ನಿಷೇಧ ಮಾಡಿ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
 • ಕೇಂದ್ರ ಸರ್ಕಾರ ಮಾ.23ರಂದು ಮಲೇರಿಯಾ ಪತ್ತೆಗೆ ಬಳಕೆ ಮಾಡುತ್ತಿರುವ ‘ಆಂಟಿಬಾಡಿ ಡಿಟೆಕ್ಟಿಂಗ್ ರ್ಯಾಪಿಡ್ ಡಯಾಗ್ನಾಸ್ಟಿಕ್ ಟೆಸ್ಟ್’ ಮಾದರಿಗೆ ಸರ್ಕಾರದ ಮಾನ್ಯತೆ ರದ್ದುಪಡಿಸಿ ಆದೇಶ ಹೊರಡಿಸಿತ್ತು. ಇದರನ್ವಯ ರಾಜ್ಯದಲ್ಲೂ ಆಂಟಿ ಬಾಡಿ ಆಧಾರಿತ ಟೆಸ್ಟ್ ಕಿಟ್​ಗಳನ್ನು ಮಾರಾಟಕ್ಕಾಗಿ ಉತ್ಪಾದನೆ ಮಾಡುವುದು, ವಿತರಣೆ ಮಾಡುವುದು ಹಾಗೂ ಮಾರಾಟ ಮಾಡುವುದನ್ನು ತಕ್ಷಣದಿಂದ ಅನ್ವಯವಾಗುವಂತೆ ನಿಷೇಧಿಸಿ ಇಲಾಖೆ ಆದೇಶ ಹೊರಡಿಸಿದೆ.
 • ಮಲೇರಿಯಾ ಪತ್ತೆಗೆ ‘ಆಂಟಿಜೆನ್ ಆಧಾರಿತ ರ್ಯಾಪಿಡ್ ಪರೀಕ್ಷೆ’, ‘ಆಂಟಿ ಬಾಡಿ ಆಧಾರಿತ ರ್ಯಾಪಿಡ್ ಪರೀಕ್ಷೆ’ ಎರಡು ಮಾದರಿ ಚಾಲ್ತಿಯಲ್ಲಿದ್ದು, ಆಂಟಿಜೆನ್ ಆಧಾರಿತ ಪರೀಕ್ಷೆಯನ್ನು ಕೇಂದ್ರ ಸರ್ಕಾರ ದೃಢೀಕರಿಸಿದೆ.
 • ಆಂಟಿಬಾಡಿ ಆಧಾರಿತ ಟೆಸ್ಟ್​ನಿಂದ ಪರೀಕ್ಷೆ ಮಾಡಿದರೆ ಸೂಕ್ತ ಫಲಿತಾಂಶ ದೊರೆಯುವುದಿಲ್ಲ. ಈ ಹಿಂದೆ ಮಲೇರಿಯಾಗೆ ತುತ್ತಾಗಿರುವ ಆಂಟಿಬಯೋಟಿಕ್ ದೇಹದಲ್ಲಿದ್ದರೂ ಈ ಪರೀಕ್ಷೆ ಮಲೇರಿಯಾ ಪಾಸಿಟಿವ್ ತೋರಿಸುತ್ತದೆ.
 • ಇದರಿಂದ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಡ್ರಗ್ಸ್ ಆಂಡ್ ಕಾಸ್ಮಟಿಕ್ ಆಕ್ಟ್ 1940ರ 26 ‘ಎ’ ನಿಯಮದಡಿ ಆಂಟಿಬಾಡಿ ಆಧಾರಿತ ಟೆಸ್ಟ್ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ರಾಜ್ಯದಲ್ಲಿ ನಿಷೇಧ ಮಾಡಲಾದ ಕಿಟ್​ಗಳನ್ನು ಮೊದಲಿನಿಂದಲೂ ಬಳಕೆ ಮಾಡಲಾಗುತ್ತಿಲ್ಲ. ಆದರೆ, ಈ ವರೆಗೆ ಅಧಿಕೃತ ಸರ್ಕಾರಿ ಆದೇಶ ಇರಲಿಲ್ಲ. ಇನ್ನು ಮುಂದೆ ಸೂಚಿಸಿದ ಕಿಟ್​ಗಳು ಉತ್ಪಾದನೆಗೂ ಅವಕಾಶ ಇರುವುದಿಲ್ಲ.

ಗ್ರಾಚ್ಯುಟಿ ಅವಧಿ 3 ವರ್ಷಕ್ಕೆ ಇಳಿಕೆ

 • ಗ್ರಾಚ್ಯುಟಿ ನಿಧಿ ಪಡೆಯುವುದಕ್ಕೆ ಒಂದೇ ಕಂಪನಿಯಲ್ಲಿ ಕನಿಷ್ಠ 5 ವರ್ಷ ಕಾಯಂ ನೌಕರರಾಗಿ ಕೆಲಸ ಮಾಡಿರಬೇಕೆಂಬ ನಿಯಮಕ್ಕೆ ತಿದ್ದುಪಡಿ ತಂದು ಸೇವಾವಧಿಯನ್ನು ಮೂರು ವರ್ಷಕ್ಕಿಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
 • ವರದಿಗಳ ಪ್ರಕಾರ, ಈ ಪ್ರಸ್ತಾವನೆ ಕುರಿತಂತೆ ಕಾರ್ವಿುಕ ಸಚಿವಾಲಯ ಕಂಪನಿ ಮಾಲೀಕರ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇದನ್ನು ಅನುಷ್ಠಾನಗೊಳಿಸಲು ಮುಂದಾಗಿದೆ

ಹೊಸ ಉಡಾವಣೆಗೆ ಇಸ್ರೋ ಸಿದ್ಧತೆ

 • ಸಂವಹನ ಉಪಗ್ರಹ ಜಿಸ್ಯಾಟ್ 6ಎ ಉಡಾವಣೆ ನಂತರದ ಹಿನ್ನಡೆ ಹೊರತಾಗಿಯೂ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಐಆರ್​ಎನ್​ಎಸ್​ಎಸ್-1ಎಲ್ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದೆ.
 • ಇಸ್ರೋ ಅಧ್ಯಕ್ಷ ಡಾ.ಕೆ. ಶಿವನ್ ಪ್ರಕಾರ, ಇದು ನ್ಯಾವಿಗೇಷನ್ ಉಪಗ್ರಹವಾಗಿದ್ದು ನಾವಿಕ್ ವ್ಯವಸ್ಥೆಯಲ್ಲಿ ಈಗಾಗಲೇ ಇರುವ ಐಆರ್​ಎನ್​ಎಸ್​ಎಸ್-1ಎ ಉಪಗ್ರಹದ ಸ್ಥಾನವನ್ನು ತುಂಬಲಿದೆ.
 • ಆಂಧ್ರದ ಶ್ರೀಹರಿಕೋಟಾದಿಂದ ಪಿಎಸ್​ಎಲ್​ವಿ-ಸಿ41 ರಾಕೆಟ್ ಮೂಲಕ ಈ ನ್ಯಾವಿಗೇಷನ್ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಐಆರ್​ಎನ್​ಎಸ್​ಎಸ್-1ಎ ಉಪಗ್ರಹದ ಮೂರು ರುಬೀಡಿಯಂ ಅಟೋಮಿಕ್ ಕ್ಲಾಕ್​ಗಳು ಎರಡು ವರ್ಷ ಹಿಂದೆಯೇ ಸ್ಥಗಿತಗೊಂಡಿವೆ.
 • 2013ರ ಜುಲೈ 1ರಂದು ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಐಆರ್​ಎನ್​ಎಸ್​ಎಸ್ 1 ಎಲ್ ಉಪಗ್ರಹವು 600 ಕಿಲೋ ತೂಕ, 10 ವರ್ಷ ಜೀವಿತಾವಧಿ ಹೊಂದಿದೆ. ನಾವಿಕ್ ವ್ಯವಸ್ಥೆ ಸೇರುತ್ತಿರುವ ಎಂಟನೇ ಉಪಗ್ರಹ ಇದಾಗಲಿದೆ.
 • ಐಆರ್​ಎಸ್​ಎಸ್​ಎಸ್ -1ಎ ಉಪಗ್ರಹದ ಸ್ಥಾನವನ್ನು ತುಂಬಲು ಕಳೆದ ವರ್ಷವೇ ಐಆರ್​ಎನ್​ಎಸ್​ಎಸ್-1ಎಚ್ ಉಪಗ್ರಹ ಉಡಾವಣೆ ಮಾಡಲು ಇಸ್ರೋ ಪ್ರಯತ್ನಿಸಿತ್ತು. ಆದರೆ ಪಿಎಸ್​ಎಲ್​ವಿ ರಾಕೆಟ್​ನಲ್ಲಿನ ತಾಂತ್ರಿಕದೋಷದಿಂದಾಗಿ ಯೋಜನೆ ಕೈಗೂಡಲಿಲ್ಲ.

ನಾವಿಕ್ ಜಿಪಿಎಸ್ ವ್ಯವಸ್ಥೆ

 • 7 ಉಪಗ್ರಹಗಳನ್ನು ಒಳಗೊಂಡ ದೇಶದ ಮೊಟ್ಟಮೊದಲ ಸ್ವದೇಶಿ ಜಿಪಿಎಸ್ ವ್ಯವಸ್ಥೆ ಇದಾಗಿದೆ. ಈ ಪೈಕಿ 3 ಉಪಗ್ರಹಗಳು ಜಿಯೋಸ್ಟೇಷನರಿ ಕಕ್ಷೆಯಲ್ಲಿ, 4 ಉಪಗ್ರಹಗಳು ಜಿಯೋಸಿನ್ಕ್ರೋನಸ್ ಕಕ್ಷೆಯಲ್ಲಿರುತ್ತವೆ. ಭೂಮಿಯಿಂದ ಕಕ್ಷೆಗಿರುವ ದೂರ 36,000 ಕಿ.ಮೀ. ಈ ಯೋಜನೆಗೆ ಇಸ್ರೋ ಖರ್ಚು ಮಾಡಿರುವ ವೆಚ್ಚ -ಠಿ; 1,420 ಕೋಟಿ. ಈ ವ್ಯವಸ್ಥೆಯಲ್ಲಿ ಜಿಪಿಎಸ್ ಸೌಲಭ್ಯ ದೇಶದ ಭೌಗೋಳಿಕ ವ್ಯಾಪ್ತಿಯ 1,500 ಕಿ.ಮೀ.ವರೆಗಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಹೊರಗಿನಿಂದ ತರುವ ಆಹಾರ, ನೀರಿನ ಬಾಟಲ್ ನಿಷೇಧಿಸುವಂತಿಲ್ಲ: ಬಾಂಬೆ ಹೈಕೋರ್ಟ್

 • ಮಲ್ಟಿಪ್ಲೆಕ್ಸ್‌ಗಳು ಮತ್ತು ಚಿತ್ರ ಮಂದಿರಗಳಲ್ಲಿ ಹೊರಗಿನಿಂದ ತರುವ ಆಹಾರ ಮತ್ತು ನೀರಿನ ಬಾಟಲಿಗಳನ್ನು ನಿಷೇಧಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
 • ಮಲ್ಟಿಫ್ಲೆಕ್ಸ್​ಗಳಲ್ಲಿ ಆಹಾರ ಮತ್ತು ಪಾನೀಯಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವುದನ್ನ ಗಮನಿಸಿರುವ ಬಾಂಬೆ ಹೈಕೋರ್ಟ್​ ಆರು ವಾರಗಳಲ್ಲಿ ಒಂದು ನೀತಿಯನ್ನು ರೂಪಿಸಿ ಬೆಲೆಗಳನ್ನು ನಿಯಂತ್ರಿಸಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ
 • ‘ಒಂದೋ ಚಿತ್ರ ಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳ ಒಳಗೆ ಆಹಾರ ತರುವುದನ್ನು ಅಥವಾ ವಿತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಲ್ಲದಿದ್ದಲ್ಲಿ ತಾವು ಹೊರಗಿನಿಂದ ತರುವ ಆಹಾರ ಮತ್ತು ನೀರಿನ ಬಾಟಲಿಯನ್ನು ಒಯ್ಯಲು ಪ್ರೇಕ್ಷಕರಿಗೆ ಅವಕಾಶ ಕೊಡಬೇಕು’
 • ‘ದುಬಾರಿ ಬೆಲೆಯ ಆಹಾರ ಕೊಂಡುಕೊಳ್ಳುವಂತೆ ಪ್ರೇಕ್ಷಕರ ಮೇಲೆ ಒತ್ತಡ ಹೇರುವಂತಿಲ್ಲ’ ಎಂದೂ ಪೀಠ ಹೇಳಿದೆ.
 • ಪೊಟ್ಟಣಗಳಲ್ಲಿರುವ ಆಹಾರ ಮತ್ತು ನೀರಿನ ಬಾಟಲಿಗಳನ್ನು ಕೊಂಡೊಯ್ಯುವುದನ್ನು ಚಿತ್ರಮಂದಿರಗಳಲ್ಲಿ, ಅದರಲ್ಲೂ ವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ನಿಷೇಧಿಸಿರುವುದರ ವಿರುದ್ಧ ಮುಂಬೈ ನಿವಾಸಿ ಜಿತೇಂದ್ರ ಬಕ್ಷಿ ಎಂಬುವವರು ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು.
 • ‘ಚಿತ್ರ ಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಆಹಾರವಸ್ತುಗಳನ್ನು ಮಾರಾಟ ಮಾಡಲು ಕಾನೂನಾತ್ಮಕ ನಿರ್ಬಂಧ ಇಲ್ಲದಿರುವಾಗ ತಾವೇ ತರುವ ಆಹಾರ ವಸ್ತುಗಳು, ನೀರಿನ ಬಾಟಲಿಯನ್ನು ಒಳಗೆ ಕೊಂಡೊಯ್ಯಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಆದರೆ, ಕೆಲವು ಚಿತ್ರ ಮಂದಿರಗಳಲ್ಲಿ, ಅದರಲ್ಲೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಫಾಸ್ಟ್‌ಫುಡ್‌ ಮಾರಾಟ ಮಾಡಲಾಗುತ್ತದೆಯಲ್ಲದೆ ಚಿತ್ರ ಮಂದಿರದ ಒಳಗೇ ಸೇವಿಸಲೂ ಅವಕಾಶ ನೀಡಲಾಗುತ್ತಿದೆ.
 • ಇದಕ್ಕೆ ಮಹಾರಾಷ್ಟ್ರ ಸಿನಿಮಾಗಳ (ನಿಯಂತ್ರಣ) ಕಾಯ್ದೆ, 1966ರ 21ನೇ ಕಲಂನಲ್ಲಿ ನಿರ್ಬಂಧವಿದೆ’ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
 • ಪ್ರೇಕ್ಷಕರು ತರುವ ಆಹಾರ ವಸ್ತುಗಳನ್ನು ಒಳಗೆ ಕೊಂಡೊಯ್ಯಲು ನಿಷೇಧಿಸುವುದರಿಂದ ಅನಾರೋಗ್ಯಪೀಡಿತರ, ಹಿರಿಯ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ಬಕ್ಷಿ ಪ್ರತಿಪಾದಿಸಿದ್ದರು.

~~~***ದಿನಕ್ಕೊಂದು ಯೋಜನೆ***~~~

SAMEEP (ವಿದ್ಯಾರ್ಥಿಗಳು ಮತ್ತು MEA ಎಂಗೇಜ್ಮೆಂಟ್ ಪ್ರೋಗ್ರಾಂ)

 • ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸಮೀಪ (ವಿದ್ಯಾರ್ಥಿಗಳು ಮತ್ತು MEA ಎಂಗೇಜ್ಮೆಂಟ್ ಪ್ರೋಗ್ರಾಂ) ಪ್ರಾರಂಭಿಸಿದೆ.
 • ಇದು ಭಾರತೀಯ ವಿದೇಶಾಂಗ ನೀತಿಯನ್ನು ಮತ್ತು ಅದರ ಜಾಗತಿಕ ತೊಡಗಿಕೆಯನ್ನು ದೇಶಾದ್ಯಂತ ವಿದ್ಯಾರ್ಥಿಗಳಿಗೆ ತೆಗೆದುಕೊಳ್ಳಲು ಮತ್ತು ವೃತ್ತಿ ಆಯ್ಕೆಯಾಗಿ ರಾಜತಂತ್ರವನ್ನು ನೋಡಬೇಕೆಂಬುದು ಒಂದು ಹೊರಗಿನ ಮಿಷನ್.
 • ಇದರ ಹೆಸರನ್ನು ನನ್ನ ಸರ್ಕಾರಿ ಪೋರ್ಟಲ್(my government portal) ಮತ್ತು 550 ಸಲಹೆಯ ನಮೂದುಗಳ ಮೂಲಕ ಪ್ರೇಕ್ಷಕ-ಮೂಲದವರು ಮಾಡಲಾಯಿತು.

SAMEEP (ವಿದ್ಯಾರ್ಥಿಗಳು ಮತ್ತು MEA ಎಂಗೇಜ್ಮೆಂಟ್ ಪ್ರೋಗ್ರಾಂ)

 • MEA ನ ಕಾರ್ಯಚಟುವಟಿಕೆಯ ಬಗ್ಗೆ ಭಾರತದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಪರಿಚಯಿಸುವುದು ಇದರ ಪ್ರಭಾವ ಉದ್ದೇಶವಾಗಿದೆ. ಇದು ಸಹ ಬಯಸುತ್ತದೆ ಭಾರತದ ವಿದೇಶಿ ನೀತಿ ಮತ್ತು ಅದರ ಯಶಸ್ಸಿನ ಕಥೆಗಳ ಪ್ರಮುಖ ಅಂಶಗಳನ್ನು ಪರಿಚಯಿಸಲು ಮಾಡಿರುವ ಯೋಜನೆಯಾಗಿದೆ.
 • ಇದು MEA ಅಧಿಕಾರಿಗಳು, ಉಪಸಂಸ್ಥೆ ಮತ್ತು ಮೇಲಿರುವ ಸ್ವಯಂಸೇವಾ ಕಾರ್ಯಕ್ರಮವಾಗಿದ್ದು, ಯಾವುದೇ ಶಾಲೆ ಅಥವಾ ಕಾಲೇಜಿನಲ್ಲಿ ತಮ್ಮ ತವರು ಅಥವಾ ಅವರ ಅಲ್ಮಾ ಮೇಟರ್ಗೆ ಹಿಂದಿರುಗುವ ಆಯ್ಕೆಯನ್ನು ಹೊಂದಿರುತ್ತಾರೆ. ಅದರ ಅಡಿಯಲ್ಲಿ, MEA ಅಧಿಕಾರಿಗಳು ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಸಂವಹನ ನಡೆಸಲು ತಮ್ಮ ತವರೂರು ಮತ್ತು ವಿಶೇಷವಾಗಿ ಅವರ ಅಲ್ಮಾ ಮೇಟರ್ಗೆ ಹೋಗುತ್ತಾರೆ.
 • ಅಧಿಕಾರಿಗಳು MEA ಹೇಗೆ ಕೆಲಸ ಮಾಡುತ್ತಿದ್ದಾರೆ, ಭಾರತದ ವಿದೇಶಾಂಗ ನೀತಿ, ಅವರು ಹೇಗೆ ರಾಜತಾಂತ್ರಿಕತೆಯನ್ನು ನೀಡುತ್ತಾರೆ, ಇದರಿಂದಾಗಿ ವಿದ್ಯಾರ್ಥಿ ಇದನ್ನು ವೃತ್ತಿ ಆಯ್ಕೆಯಾಗಿ ಪರಿಗಣಿಸುತ್ತಾರೆ.
 • MEA ಈ ಪ್ರಭಾವ ಕಾರ್ಯಕ್ರಮಕ್ಕೆ ತನ್ನ ಅಧಿಕಾರಿಗಳನ್ನು ಪ್ರಮಾಣೀಕರಿಸಿದ ಪ್ರಸ್ತುತಿಯನ್ನು ಒದಗಿಸುತ್ತದೆ ಮತ್ತು ಅದರ ವೈಯಕ್ತಿಕ ಅನುಭವಗಳನ್ನು ಸೇರಿಸಿಕೊಳ್ಳುವ ಅಧಿಕಾರಿಗಳು ಸುಧಾರಣೆಗೆ ಮುಕ್ತರಾಗುತ್ತಾರೆ.

1. ಕಾಮನ್ ವೆಲ್ತ್ ಕ್ರೀಡೆಗಳು ಎಲ್ಲಿ ಪ್ರಾರಂಭವಾಗಿದೆ ?
A. ಆಸ್ಟ್ರೇಲಿಯಾ
B. ಅಮೇರಿಕಾ
C. ಆಫ್ರಿಕಾ
D. ಯುರೋಪ್

2. ಪುರುಷರ ವೆಯಿಟ್ ಲಿಫ್ಟಿಂಗ್ ನ ಯಾವ ವಿಭಾಗದಲ್ಲಿ ಗುರುರಾಜರವರು ಬೆಳ್ಳಿ ಪದಕವನ್ನು ಗೆದ್ದರು ?
A. 58 KG
B. 60KG
C. 56 KG
D. 62 KG

3. ಮಲೇರಿಯ ರೋಗವು ಯಾವ ಜೀವಿಯಿಂದ ಬರುತ್ತದೆ ?
A. ವೈರಸ್
B. ಬ್ಯಾಕ್ಟೀರಿಯಾ
C. ಪ್ಲಾಸ್ಮೋಡಿಯಂ
D. ಯಾವುದು ಅಲ್ಲ

4. ನಾವಿಕ್ ಜಿಪಿಯಸ್ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾಗಿರುವುದನ್ನು ಗುರುತಿಸಿ
1. 4ಉಪಗ್ರಹಗಳು ಜಿಯೋಸ್ಟೇಷನರಿ ಕಕ್ಷೆಯಲ್ಲಿ, 3 ಉಪಗ್ರಹಗಳು ಜಿಯೋಸಿನ್ಕ್ರೋನಸ್ ಕಕ್ಷೆಯಲ್ಲಿರುತ್ತವೆ.
2. 7 ಉಪಗ್ರಹಗಳನ್ನು ಒಳಗೊಂಡ ದೇಶದ ಮೊಟ್ಟಮೊದಲ ಸ್ವದೇಶಿ ಜಿಪಿಎಸ್ ವ್ಯವಸ್ಥೆ ಇದಾಗಿದೆ.
A. 1ನೇ ಹೇಳಿಕೆ ಸರಿಯಾಗಿದೆ
B. 1ನೇ ಹೇಳಿಕೆ ತಪ್ಪಾಗಿದೆ
C. ಎರಡು ಹೇಳಿಕೆಗಳು ಸರಿಯಾಗಿದೆ
D. ಎರಡು ಹೇಳಿಕೆಗಳು ತಪ್ಪಾಗಿವೆ

5. ಈ ಕೆಳಗಿನವುಗಳಲ್ಲಿ ಅನುವಂಶೀಯ ಕಾಯಿಲೆ ಯಾವುದು?
A. ಹಿಮೋಫಿಲಿಯಾ
B. ಕ್ಷಯ
C. ಹೆಪಟೈಟಸ್
D. ದಡಾರ

6. ಈ ಕೆಳಗಿನ ಯಾವುದನ್ನು ಮೂರ್ಖರ ಚಿನ್ನ (Fool’s gold) ಎಂದು ಕರೆಯಲಾಗುವುದು?
A. ಕಬ್ಬಿಣದ ಪೈರೆಟ್
B. ಬೀಡು ಕಬ್ಬಿಣ
C. ತಾಮ್ರದ ಪೈರೆಟ್
D. ಸತುವಿನ ಪೈರೆಟ್

7. ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿಂದ ಪಡೆಯುವ ಅತಿ ಅಲ್ಫಾವದಿಯ ಸಾಲಗಳ ಮೇಲೆ ವಿಧಿಸುವ ಬಡ್ಡಿದರವನ್ನು ಏನೆಂದು ಕರೆಯುವರು?
A. ನಗದು ಮೀಸಲು ಅನುಪಾತ
B. ರೆಪೋ ದರ
C. ರಿವರ್ಸ್ ರೆಪೋ ದರ
D. ಶಾಸನಬದ್ಧ ದ್ರವ್ಯತೆಯ ಅನುಪಾತ

8. ಮಂಗೋಲರು ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಈ ಕೆಳಗಿನ ಯಾರ ನೇತೃತ್ವದಲ್ಲಿ ಧಾಳಿ ಮಾಡಿದರು?
A. ಚಂಗೀಸ್ಖಾನ್
B. ಮಹಮ್ಮದ್ ಘಜ್ನಿ
C. ತಾಜುದ್ದೀನ್ ಯಲ್ದೋಜ್
D. ಮಲ್ಲಿಕಾಫರ್

9. ರಾಜ್ಯದ ಮೊದಲ ಮಾವು ಅಭಿವೃದ್ದಿ ಮತ್ತು ಸಂಸ್ಕರಣ ಘಟಕವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
A. ಕೋಲಾರ
B. ಚಿಂತಾಮಣಿ
C. ಚಿಕ್ಕಬಳ್ಳಾಪುರ
D. ಶ್ರೀನಿವಾಸಪುರ

10. ಜಪಾನಿನ ಹೊಕೈಡೋನಲ್ಲಿ ನಡೆದ ಜಿ 8 ಶೃಂಗಸಭೆಯ ಮುಖ್ಯ ದಾಖಲೆ ವಿಷಯ
A. ಜಾಗತಿಕ ವಾಣಿಜ್ಯ
B. ಬೌದ್ಧಿಕ ಆಸ್ತಿ
C. ಶಕ್ತಿ ಭದ್ರತೆ ಮತ್ತು ಹವಮಾನ ಬದಲಾವಣೆ
D. ಸಾಮಾಜಿಕ ಅರಣ್ಯಗಾರಿಕೆ

ಉತ್ತರಗಳು : 1.A 2.C 3.C 4.B 5.A 6.A 7.B 8.A 9.D 10.C 

Related Posts
National Current Affairs – UPSC/KAS Exams- 27th November 2018
RBI eases ECB hedging norms for companies Topic: Indian Economy IN NEWS: The Reserve Bank of India (RBI) has eased hedging norms for companies that raise funds through external commercial borrowings (ECB), a move ...
READ MORE
PSLV-C31 launches IRNSS-1E
PSLV-C31 successfully put into orbit IRNSS-1E, the fifth satellite of the Indian Regional Navigation Satellite System (IRNSS) after its succesful launch from the Satish Dhawan Space Centre (SDSC), SHAR, Sriharikota PSLV-C31 ...
READ MORE
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಾವೇರಿ ನದಿ ನೀರು ಪ್ರಾಧಿಕಾರ ಸುದ್ದಿಯಲ್ಲಿ ಏಕಿದೆ? ಕಾವೇರಿ ಜಲವಿವಾದ ನ್ಯಾಯಾಧೀಕರಣ 2007ರ ತನ್ನ ಐತೀರ್ಪಿನಲ್ಲಿ ಹೇಳಿದ್ದ ನೀರು ನಿರ್ವಹಣಾ ಮಂಡಳಿಯ ತದ್ರೂಪದಂತಿರುವ 'ಕಾವೇರಿ ನೀರು ನಿರ್ವಹಣಾ ಯೋಜನೆ-2018'ರ ಕರಡನ್ನು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸಲ್ಲಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಲು ...
READ MORE
Cabinet approves amendment in Modified Special Incentive Package Scheme
To boost electronic manufacturing in the country, the Union Cabinet on Wednesday approved incentives to the tune of Rs 10,000 crore for investors by amending the Modified Special Incentive Package ...
READ MORE
“29th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಭೂಗತ ತೈಲ ಸಂಗ್ರಹ ಘಟಕ ಸುದ್ದಿಯಲ್ಲಿ ಏಕಿದೆ?  ಖಾಸಗಿ ಸಹಭಾಗಿತ್ವದಲ್ಲಿ ಉಡುಪಿಯ ಕಾಪು ಸಮೀಪವಿರುವಪಡೂರಿನಲ್ಲಿ ಭೂಗತ ಕಚ್ಚಾ ತೈಲ ಸಂಗ್ರಹ ಘಟಕನಿರ್ಮಾಣಕ್ಕೆ ಕೇಂದ್ರ ಸರಕಾರ ತಾತ್ವಿಕ ಅನುಮೋದನೆ ನೀಡಿದೆ.  ಮಂಗಳೂರಿನಲ್ಲಿ ಈಗಾಗಲೇ 1.5 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಭೂಗತ ತೈಲ ಸಂಗ್ರಹ ಘಟಕ ಸ್ಥಾಪಿಸಲಾಗಿದ್ದು, ಇದೀಗ ...
READ MORE
Karnataka plans 100% quota for locals in private blue-collar jobs
The Karnataka government is planning to introduce 100% reservation to Kannadigas in blue-collar jobs in private sector industries across the state. The state labour department has released the draft amendments to ...
READ MORE
22nd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಬಿಸ್ಮಿಲ್ಲಾ ಖಾನ್‌ಗೆ ಗೂಗಲ್ ಗೌರವ ಭಾರತರತ್ನ ಪುರಸ್ಕೃತ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ 102ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ. ಚೆನ್ನೈ ಮೂಲದ ವಿಜಯ್ ಕ್ರಿಶ್ ಎಂಬುವರು ಉಸ್ತಾದ್ ಅವರ ಡೂಡಲ್ ಚಿತ್ರವನ್ನು ರಚಿಸಿದ್ದಾರೆ. ಖಾನ್ ಅವರು 1961ರಲ್ಲಿ  ಜನಿಸಿದರು. ಆರನೇ ...
READ MORE
2nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ
ಮಹಿಳಾ ಮತದಾರರ ಲಿಂಗಾನುಪಾತ ಹೆಚ್ಚಳ ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. 2013 ರ ಚುನಾವಣೆಯಲ್ಲಿ 1,000 ಪುರುಷರಿಗೆ 958 ಇದ್ದ ಮಹಿಳೆಯರ ಸಂಖ್ಯೆ ಈ ಚುನಾವಣೆ ವೇಳೆ 974ಕ್ಕೆ ಏರಿಕೆಯಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ತಿಳಿಸಿದ್ದಾರೆ. ಏ.14ಕ್ಕೆ ಮುಕ್ತಾಯವಾದ ಮತದಾರರ ನೋಂದಣಿ ...
READ MORE
National Current Affairs – UPSC/KAS Exams – 12th November 2018
Burial urn of Megalithic era unearthed Topic: History, Art and Culture IN NEWS: A huge burial urn dating back to the Megalithic era that was unearthed while clearing a private road to a ...
READ MORE
Karnataka Current Affairs – KAS / KPSC Exams – 20th May 2017
Elephant census: Focus on numbers, sex ratio The four-day exercise to enumerate elephants, which concluded on 19th May, will not just throw up estimates on the elephant population, but will also ...
READ MORE
National Current Affairs – UPSC/KAS Exams- 27th November
PSLV-C31 launches IRNSS-1E
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Cabinet approves amendment in Modified Special Incentive Package
“29th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka plans 100% quota for locals in private
22nd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
2nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ
National Current Affairs – UPSC/KAS Exams – 12th
Karnataka Current Affairs – KAS / KPSC Exams

Leave a Reply

Your email address will not be published. Required fields are marked *