6th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಸೇನಾಬಲ ಭಾರತ ವಿಶ್ವ ನಂ.4

  • ಭಾರತೀಯ ಸೇನಾಪಡೆ ಜಾಗತಿಕವಾಗಿ 4ನೇ ಬಲಾಢ್ಯ ಸೇನಾಪಡೆ ಎಂಬ ಹೆಗ್ಗಳಿಕೆ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
  • ಗ್ಲೋಬಲ್ ಫೈರ್​ಪವರ್ (ಜಿಇಪಿ) ಲಿಸ್ಟ್ 2017ರ ಪ್ರಕಾರ ಅಮೆರಿಕ, ರಷ್ಯಾ ಮತ್ತು ಚೀನಾ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.
  • ಮಿಲಿಟರಿ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ, ಕೈಗಾರಿಗೆ ಮತ್ತು ಭೌಗೋಳಿಕ ಸಂರಚನೆ, ಲಭ್ಯವಿರುವ ಮಾನವಸಂಪನ್ಮೂಲ, ರಕ್ಷಣಾ ಬಜೆಟ್ ಗಾತ್ರ ಸೇರಿ ಒಟ್ಟು 50 ಅಂಶಗಳನ್ನು ಆಧರಿಸಿ ಜಿಇಪಿ ಲಿಸ್ಟ್​ಗಾಗಿ ಸಮೀಕ್ಷೆ ನಡೆಸಲಾಗುತ್ತದೆ.
  •  ಘೋಷಿತ ಅಥವಾ ಅಘೋಷಿತವಾಗಿ ಅಣ್ವಸ್ತ್ರಗಳನ್ನು ಹೊಂದಿರುವ ಅಂಶವನ್ನು ಕೂಡ ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ, ಭಾರತ ಬಲಾಢ್ಯ ಸೇನೆ ಹೊಂದಿರುವ ಮೊದಲ 5 ರಾಷ್ಟ್ರಗಳ ಪೈಕಿ ಒಂದೆನಿಸಿಕೊಂಡಿದೆ.
  • ಯೋಧರ ಸಂಖ್ಯೆಯಲ್ಲಿ ಮುಂಚೂಣಿ: ಭಾರತ ಒಟ್ಟು 42.07 ಲಕ್ಷ ಯೋಧರ ಬಲವನ್ನು ಹೊಂದಿದೆ. ಹಾಗಾಗಿ, 23 ಲಕ್ಷ ಯೋಧರನ್ನು ಹೊಂದಿರುವ ಚೀನಾವನ್ನು ಅದು ಹಿಂದಿಕ್ಕಿದೆ. ಮೀಸಲು ಯೋಧರ ಸಂಖ್ಯೆಯಲ್ಲಿ 28.44 ಲಕ್ಷ ಯೋಧರನ್ನು ಹೊಂದಿರುವ ಭಾರತ, 14.52 ಲಕ್ಷ ಯೋಧರನ್ನು ಹೊಂದಿರುವ ಚೀನಾವನ್ನು ಹಿಂದಿಕ್ಕಿದೆ.

ಆಸ್ಕರ್​ ಪ್ರದಾನ: ದಿ ಶೇಪ್​ ಆಫ್​ ವಾಟರ್​ ಸರ್ವೋತ್ತಮ ಚಿತ್ರ

  • 2018ನೇ ಸಾಲಿನ 90ನೇ ಆವೃತ್ತಿಯ ಆಸ್ಕರ್​ ಪ್ರಶಸ್ತಿ ಪ್ರಕಟವಾಗಿದ್ದು ನಾಮಾಂಕಿತವಾದ 13 ಚಿತ್ರಗಳಲ್ಲಿ, ದಿ ಶೇಪ್​ ಆಫ್​ ವಾಟರ್​ ಸರ್ವೋತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
  • ಡಾರ್ಕೆಸ್ಟ್​ ಹವರ್​ ಚಲನಚಿತ್ರಕ್ಕಾಗಿ ಗ್ಯಾರಿ ಓಲ್ಡ್​ಮನ್ ಉತ್ತಮ ನಟ, ತ್ರೀ ಬಿಲ್​ಬೋರ್ಡ್ಸ್​​ ಔಟ್​ಸೈಡ್​ ಎಬ್ಬಿಂಗ್​, ಮಿಸೌರಿ ಚಿತ್ರಕ್ಕಾಗಿ ಫ್ರಾನ್ಸಿಸ್​ ಮ್ಯಾಕ್​​ಡಾರ್ಮೆಂಡ್​ ಉತ್ತಮ ನಟಿ ಮತ್ತು ದಿ ಶೇಪ್​ ಆಫ್​ ವಾಟರ್​ ನಿರ್ದೇಶಕ ಗಿಲೆರ್ಮೊ ದೆಲ್​ ತೋರೊ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ

ಚಂದ್ರನಲ್ಲೂ 4ಜಿ ನೆಟ್​ವರ್ಕ್!

  • ಮುಂದಿನ ವರ್ಷದಿಂದ ಚಂದ್ರನಲ್ಲೂ 4ಜಿ ನೆಟ್​ವರ್ಕ್ ಲಭ್ಯವಾಗಲಿದೆ.
  • ವೊಡಾಫೋನ್ ಜರ್ಮನಿ ಯೋಜನೆ ರೂಪಿಸಿದ್ದು, ನೋಕಿಯಾ ಸಹಯೋಗದಲ್ಲಿ ಇದು ಕಾರ್ಯಗತಗೊಳ್ಳಲಿದೆ.
  • ಚಂದ್ರನಲ್ಲಿಗೆ ಕಳುಹಿಸಲಾಗಿರುವ ನಾಸಾದ ರೋವರ್​ನಿಂದ ಮಾಹಿತಿ ಸಂಗ್ರಹಿಸಲು ಅನುಕೂಲವಾಗಲಿದೆ.
  • ವೊಡಾಫೋನ್ ಸ್ಥಾಪಿಸಲಿರುವ 1800 ಮೆಗಾರ್ಹ್ಜಟ ಫ್ರೀಕ್ವೆನ್ಸಿ ಬ್ಯಾಂಡ್​ನ ನೆಟ್​ವರ್ಕ್ ಮೂಲಕ ಚಂದ್ರನಿಂದ ಹೈ ಡಿಫಿನೇಷನ್ ಲೈವ್​ಸ್ಟ್ರೀಮ್ ಪ್ರಸಾರ ಸಾಧ್ಯವಾಗಲಿದೆ.
  • ಬಾಹ್ಯಾಕಾಶದಲ್ಲಿ ಸ್ಥಾಪಿಸಲಾಗುವ ಮೊದಲ 4ಜಿ ನೆಟ್​ವರ್ಕ್ ಇದಾಗಲಿದ್ದು, ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಲಿದೆ.
  • ಯೋಜನೆ ಕಾರ್ಯಗತಗೊಳಿಸುವ ಸಂಬಂಧ ವೊಡಾಫೋನ್ ಜರ್ಮನಿ ಸಂಸ್ಥೆ ನೋಕಿಯಾ ಜತೆ ಒಪ್ಪಂದ ಮಾಡಿಕೊಂಡಿದ್ದು, ರೋವರ್ಸ್​ನ ಕಾರ್ಯಾಚರಣೆಯಲ್ಲಿ ಸಂಗ್ರಹವಾಗುವ ವೈಜ್ಞಾನಿಕ ದತ್ತಾಂಶ ಮತ್ತು ವರದಿಗಳನ್ನು ಕ್ಷಣದಲ್ಲೇ ಪಡೆಯಲು ಸಾಧ್ಯವಾಗಲಿದೆ.
  • ಹಗುರ ಉಪಕರಣ

ಬರ್ಲಿನ್​ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪಿಟಿ ಸೈಂಟಿಸ್ಟ್ ಹಾಗು ನೋಕಿಯಾ ಬೆಲ್ ಲ್ಯಾಬ್ಸ್ ಸಿದ್ಧಪಡಿಸಿರುವ ಹಗುರ ಮೊಬೈಲ್ ನೆಟ್​ವರ್ಕ್ ಉಪಕರಣವನ್ನು ಅಮೆರಿಕದ ಫ್ಲಾರಿಡಾದಿಂದ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಉಡಾಯಿಸಿ ಚಂದ್ರನಲ್ಲಿಗೆ ಕಳುಹಿಸಲಾಗುತ್ತದೆ. ನಂತರ ರೋವರ್ ಸಂಗ್ರಹಿಸುವ ಮಾಹಿತಿಯನ್ನು ನೋಕಿಯಾದ ಉಪಕರಣ ಬಳಸಿ ವೊಡಾಫೋನ್ ನೆಟ್​ವರ್ಕ್ ಮೂಲಕ ಸಂಗ್ರಹಿಸಲಾಗುತ್ತದೆ

ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೆ 13 ಪ್ರತಿಭಾವಂತರ ಆಯ್ಕೆ

  • ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ, 2016ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ 13 ಜನ ಪ್ರತಿಭಾವಂತರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯ್ಕೆ ಮಾಡಿದೆ.
  • ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನೀಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ 9 ಮಂದಿ ಆಯ್ಕೆಯಾಗಿದ್ದಾರೆ.
  • ಅಲ್ಲದೆ, ಕ್ರೀಡೆಯನ್ನು ಪೋಷಿಸುವ ಕ್ರೀಡಾ ಪ್ರವರ್ತಕರಿಗಾಗಿ 2017-18ನೇ ಸಾಲಿನಿಂದ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದ್ದು, ರಾಜ್ಯಾದ್ಯಂತ 10 ಸಂಘ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ

ರಾಜ್ಯದ ಮೊದಲ ‘ಸಖಿ’ ಕೇಂದ್ರ ಉದ್ಘಾಟನೆ

  • ಕುಟುಂಬ ಹಾಗೂ ಸಮಾಜದಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಹಾಯ ಮತ್ತು ಬೆಂಬಲ ನೀಡಲು ಎಲ್ಲ ರಾಜ್ಯಗಳಲ್ಲಿ ‘ಸಖಿ’ (ಒನ್‌ ಸ್ಟಾಪ್‌ ಸೆಂಟರ್‌) ಕೇಂದ್ರ ತೆರೆಯಲಾಗುವುದು ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಹೇಳಿದರು.
  • ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ಸಕಲ ನೆರವನ್ನು ಒಂದೇ ಸೂರಿನಡಿ ನೀಡುವ ‘ಸಖಿ’ ಕೇಂದ್ರವನ್ನುಉಡುಪಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
  • ‘ಮಹಿಳೆಯರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಸಖಿ ಕೇಂದ್ರದ ಸಹಾಯವಾಣಿ 181ಕ್ಕೆ ಕರೆ ಮಾಡುವ ಮೂಲಕ ಪ್ರಕರಣವನ್ನು ನೋಂದಣಿ ಮಾಡಬಹುದು.
  • ಅವರು ಇರುವ ಸ್ಥಳದಲ್ಲೇ ಆಂಬುಲೆನ್ಸ್ ಸಹಿತ ಸಿಬ್ಬಂದಿಯನ್ನು ಕಳುಹಿಸಿ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಅವರಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ, ಪೊಲೀಸ್‌ ರಕ್ಷಣೆ, ಕಾನೂನು ಸೇವೆ, ಸಮಾಲೋಚನೆ ಹಾಗೂ ತಾತ್ಕಾಲಿಕ ಆಶ್ರಯವನ್ನು ಒದಗಿಸಲಾಗುತ್ತದೆ’ ಎಂದರು ತಿಳಿಸಿದರು.
  • ‘ಈಗಾಗಲೇ 171 ಕೇಂದ್ರಗಳನ್ನು ತೆರೆಯಲಾಗಿದೆ. ಕರ್ನಾಟಕದಲ್ಲಿ ದಾವಣಗೆರೆ, ಚಿತ್ರದುರ್ಗ, ಚಾಮರಾಜ ನಗರ, ತುಮಕೂರು, ಬಾಗಲಕೋಟೆಯಲ್ಲಿ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಇವಿಎಂ ಕಾರ್ಯಕ್ಷಮತೆ: ಮೊದಲ ಹಂತದ ಪರಿಶೀಲನೆ

  • ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯಕ್ಷಮತೆಯ ಪ್ರಥಮ ಹಂತದ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲಾಯಿತು
  • ಇವಿಎಂಗಳ ದುರ್ಬಳಕೆ ಬಗ್ಗೆ ವಿರೋಧ ಪಕ್ಷಗಳು ಇನ್ನೂ ಸಂಶಯ ಹೊಂದಿರುವುದರಿಂದ ಪ್ರತಿ ಯಂತ್ರವನ್ನೂ ಕೂಲಂಕಷವಾಗಿ ಪರಿಶೀಲಿಸಬೇಕು. ಯಂತ್ರಗಳಲ್ಲಿ ಲೋಪವಿದ್ದರೆ ಪತ್ತೆ ಮಾಡಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹಾಗಾಗಿ, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಯಂತ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು.
  • ಮತಯಂತ್ರ (ಬ್ಯಾಲೆಟ್‌), ನಿಯಂತ್ರಣ ಘಟಕ (ಕಂಟ್ರೋಲ್‌ ಯುನಿಟ್‌) ಮತ್ತು ಖಾತರಿ ಯಂತ್ರಗಳು (ವಿವಿಪಿಎಟಿ– ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಖಾತರಿಪಡಿಸಿಕೊಳ್ಳಲಾಯಿತು.
  • ‘ಪೂರೈಕೆಯಾದ ಮತಯಂತ್ರಗಳಲ್ಲಿ ಶೇ 1ರಷ್ಟು ಯಂತ್ರಗಳಲ್ಲಿ 1,200 ಮತ, ಶೇ 2ರಷ್ಟು ಯಂತ್ರಗಳಲ್ಲಿ 1,000 ಮತ ಹಾಗೂ ಮತ್ತೆ ಶೇ 2ರಷ್ಟು ಯಂತ್ರಗಳಲ್ಲಿ 500 ಅಣಕು ಮತಗಳನ್ನು ನಮೂದಿಸಿ, ಅವುಗಳ ಮುದ್ರಿತ ಪ್ರತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತೋರಿಸಲಿದ್ದೇವೆ.
  • ರಾಜಕೀಯ ಪಕ್ಷಗಳ ಪ್ರತಿನಿಧಿಗಳೇ ಅಣಕು ಮತದಾನಕ್ಕೆ ಯಂತ್ರಗಳನ್ನು ಆಯ್ಕೆ ಮಾಡಲಿದ್ದಾರೆ. ಸದ್ಯಕ್ಕೆ ಅವುಗಳ ಹಿಂದಿನ ದಾಖಲೆಗಳನ್ನು ಅಳಿಸುವ ಕೆಲಸ ನಡೆಯುತ್ತಿದೆ.
  • ಈ ಬಾರಿಯ ಚುನಾವಣೆಯಲ್ಲಿ ವಿವಿಪಿಎಟಿ ಒಳಗೊಂಡ ಇವಿಎಂ ಬಳಸಲಾಗುತ್ತಿದೆ.
  • ಮತದಾರರು ತಾವು ಬಯಸಿದ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ ಮತ ಚಲಾವಣೆ ಆಗಿದೆಯೇ ಎಂಬುದನ್ನು ಖಾತರಿಪ‍ಡಿಸಿಕೊಳ್ಳಲು ಇದು ಅವಕಾಶ ಕಲ್ಪಿಸುತ್ತದೆ. ಮತ ಚಲಾಯಿಸಿದ ಬಳಿಕ ಅದರ ಪ್ರಿಂಟ್‌ ಔಟ್‌ ತೆಗೆದು ನೋಡಬಹುದು.
  • ವಿಶ್ವದಲ್ಲಿ ಬೇರೆ ಎಲ್ಲೂ ಈ ವ್ಯವಸ್ಥೆ ಇಲ್ಲ.
  • ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಈ ವ್ಯವಸ್ಥೆ ಬಳಸಲಾಗಿತ್ತು.
  • ಹಿಮಾಚಲ ಪ್ರದೇಶ, ಗುಜರಾತ್‌ ವಿಧಾನಸಭಾ ಚುನಾವಣೆಗಳಲ್ಲೂ ಬಳಸಲಾಗಿದೆ ಎಂದು ಮಾಹಿತಿ ನೀಡಿದರು.

 

1.ಡೀಸೆಲ್ ಲೊಕೊಮೋಟಿವ್ ವರ್ಕ್ಸ್(ಡಿಎಲ್ಡಬ್ಲ್ಯು) ಘಟಕದ ಮೊದಲ ಮಹಿಳಾ ಪ್ರಧಾನ ವ್ಯವಸ್ಥಾಪಕಿ ಯಾರು ?

A) ರಶ್ಮಿ ಗೋಯಲ್

B) ರೋಹಿಣಿ ಸಿಂಧೂರಿ

C) ರೂಪ

D) ಪುಷ್ಪಲತಾ

2.ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಯಾವ ಸಚಿವಾಲಯದ ಅಡಿಯಲ್ಲಿದೆ ?

A)ರಕ್ಷಣಾ ಸಚಿವಾಲಯ

B)ಕೇಂದ್ರ ಗೃಹ ಸಚಿವಾಲಯ

C)೧ ಮತ್ತು ೨

D)ಯಾವುದು ಅಲ್ಲ

3.ವೊಡಾಫೋನ್ ಸಂಸ್ಥೆ ಯಾರ ಸಹಯೋಗದೊಂದಿಗೆ ಚಂದ್ರನಲ್ಲೂ 4g ನೆಟ್ವರ್ಕ್ ದೊರೆಯುವಂತೆ ಮಾಡಬಯಸಿದೆ ?

A)ನೋಕಿಯಾ ಸಂಸ್ಥೆ

B)ಮೈಕ್ರೋಮ್ಯಾಕ್ಸ್

C)ಆಪಲ್ ಸಂಸ್ಥೆ

D)ಯಾವುದು ಅಲ್ಲ

4.ಏಕಲವ್ಯ ಪ್ರಶಸ್ತಿಯನ್ನು ಯಾವ ಸರ್ಕಾರ ನೀಡುತ್ತದೆ ?

A)ಕೇಂದ್ರ ಸರ್ಕಾರ

B)ಕರ್ನಾಟಕ ರಾಜ್ಯ ಸರ್ಕಾರ

C)೧ ಮತ್ತು ೨

D)ಮೇಲಿನ ಯಾವುದು ಅಲ್ಲ

5.ವಿದ್ಯುತ್ ಮತ ಯಂತ್ರಗಳ್ಳನ್ನು ಮೊಟ್ಟ ಮೊದಲು ಎಲ್ಲಿ ಮತ್ತು ಯಾವಾಗ ಬಳಸಲಾಯಿತು?

A)೧೯೮೨ ಕೇರಳ

B)೧೯೮೦ ಗುಜರಾತ್

C)೧೯೭೮ ರಾಜಸ್ಥಾನ್

D)೧೯೭೦ ತಮಿಳುನಾಡು

6.ಈ ಕೆಳಗಿನ ಯಾವ ಕಾಯ್ದೆಯು ಭಾರತದ ಕೇಂದ್ರೀಯ ಆಡಳಿತಕ್ಕೆ ಕಾರಣವಾಗಿದೆ?

A)ರಗ್ಯುಲೇಟಿಂಗ್ ಕಾಯ್ದೆ  ೧೭೭೩

B)ಚಾರ್ಟರ್ ಕಾಯ್ದೆ  ೧೭೯೩

C) ಭಾರತ ಸರ್ಕಾರಿ ಕಾಯ್ದೆ ೧೮೫೮

D)ಭಾರತ ಕೌನ್ಸಿಲ್ ಕಾಯ್ದೆ  ೧೮೬೧

7.ಈ ಕೆಳಗಿನವುಗಳಲ್ಲಿ ಕೇಂದ್ರ ಸರ್ಕಾರಕ್ಕೆ ಪೂರ್ತಿಯಾಗಿ ಸೇರುವ ತೆರಿಗೆಗಳ ಪಟ್ಟಿಗೆ ಸೇರುವಂತಹ ಅಂಶ ಯಾವುದು ?

A)ಆದಾಯ ತೆರಿಗೆಯ ಮೇಲಿನ ಸರ್ ಚಾರ್ಜ್

B)ವಿವಿಧ ಬಿಲ್ ಗಳ ಮೇಲೆ ವಿಧಿಸುವ ಸ್ಟ್ಯಾಂಪ್ ಡ್ಯೂಟಿ

C) ಕಸ್ಟಮ್ಸ್ ಡ್ಯೂಟಿ

D) ಕಾರಪೋರೇಶನ್ ತೆರಿಗೆ

8.ನನ್ನ ಆತ್ಮಕ್ಕಿಂತ ನನ್ನ ದೇಶವನ್ನು ಹೆಚ್ಚು ಪ್ರೀತಿಸುತ್ತೇನೆ” ಎಂದವರು

A)ಬಾಲ್  ಗಂಗಾಧರ ತಿಲಕ್

B) ಮೆಕೆವಲ್ಲಿ

C)ಮಹಾತ್ಮಾಗಾಂಧಿ

D)ಅರಿಸ್ಟಾಟಲ್

9.ಇಂಡಿಯನ್ ಒಪಿನಿಯನ್’ ಪತ್ರಿಕೆಯ ಸಂಪಾದಕರು ಯಾರು?

A)ಎಮ್.ಎಸ್.ರಾಯ್

B)ದಾದಾಭಾಯಿ ನವರೋಜಿ

C)ಮಹಾತ್ಮಾಗಾಂಧಿ

D)ಬಾಲಗಂಗಾಧರ್ ತಿಲಕ್

10.ತಡೋಬ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?

A) ಮಹಾರಾಷ್ಟ್ರ

B)ಕರ್ನಾಟಕ

C) ಮಧ್ಯ ಪ್ರದೇಶ

D) ಉತ್ತರ ಪ್ರದೇಶ

ಉತ್ತರಗಳು

1.A      2.B     3.A    4.B    5.A

6.A     7.B      8.B    9.C    10. A 

Related Posts
ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಭವಿಷ್ಯದ ದೃಷ್ಟಿಯಿಂದ ರೂಪಿಸಲಾಗಿರುವ ಯೋಜನೆ. ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯ ಒಂದು ಭಾಗ. ಸ್ಮಾಲ್ ಸೇವಿಂಗ್ ಸ್ಕೀಮ್. ಹತ್ತು ವರ್ಷ ವಯಸ್ಸಿನ ಮಿತಿ ದಾಟದ ಬಾಲಕಿಯರಿಗೆ ಈ ಯೋಜನೆ ಅನ್ವಯವಾಗುತ್ತದೆ. ಬಾಲಕಿಯ ಹೆಸರಿನಲ್ಲಿ ಆಕೆಯ ಪಾಲಕರು , ಲೀಗಲ್ ಗಾರ್ಡಿಯನ್ಈ ಖಾತೆ ...
READ MORE
Swachh Survekshan-2016 was a sanitation survey conducted by the Ministry of Urban Development under the Swachh Bharat Mission comissioned in october 2015 The survey was conducted in 75 major cities, including 53 with ...
READ MORE
Tourist destinations in state to be made disabled friendly
Why in News:Tourism department is going the Archeological Survey of India (ASI) way to make heritage tourist destinations in the state disabled friendly. The department is planning to make 20 destinations ...
READ MORE
ಪ್ರೊ-ಆಕ್ಟಿವ್ ಗವರ್ನನ್ಸ್ ಮತ್ತು ಸಕಾಲಿಕ ಅನುಷ್ಠಾನ (PRAGATI)
ದಿನಕ್ಕೊಂದು ಯೋಜನೆ ಪ್ರೊ-ಆಕ್ಟಿವ್ ಗವರ್ನನ್ಸ್ ಮತ್ತು ಸಕಾಲಿಕ ಅನುಷ್ಠಾನ (PRAGATI) PRAGATI ಒಂದು ಅನನ್ಯವಾದ ಸಂಯೋಜನೆ ಮತ್ತು ಸಂವಾದಾತ್ಮಕ ವೇದಿಕೆಯಾಗಿದೆ. ವೇದಿಕೆಯು ಸಾಮಾನ್ಯ ಮನುಷ್ಯನ ಕುಂದುಕೊರತೆಗಳನ್ನು ಉದ್ದೇಶಿಸಿ, ಏಕಕಾಲದಲ್ಲಿ ಭಾರತದ ಸರ್ಕಾರದ ಪ್ರಮುಖ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಪರಿಶೀಲಿಸುವ ಉದ್ದೇಶದಿಂದ ...
READ MORE
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಾವೇರಿ ನದಿ ನೀರು ಪ್ರಾಧಿಕಾರ ಸುದ್ದಿಯಲ್ಲಿ ಏಕಿದೆ? ಕಾವೇರಿ ಜಲವಿವಾದ ನ್ಯಾಯಾಧೀಕರಣ 2007ರ ತನ್ನ ಐತೀರ್ಪಿನಲ್ಲಿ ಹೇಳಿದ್ದ ನೀರು ನಿರ್ವಹಣಾ ಮಂಡಳಿಯ ತದ್ರೂಪದಂತಿರುವ 'ಕಾವೇರಿ ನೀರು ನಿರ್ವಹಣಾ ಯೋಜನೆ-2018'ರ ಕರಡನ್ನು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸಲ್ಲಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಲು ...
READ MORE
All you need to know about HYBRID ANNUITY MODEL (HAM)
The union government approved the hybrid annuity model for building national highways, paving the way for construction of 28 projects worth Rs. 36,000 crore this fiscal year. The move will speed ...
READ MORE
U.S. considers re-merger of India, Pakistan desks
Seven years after the State Department was restructured to ‘de-hyphenate’ U.S. relations with India and with Pakistan, it is considering a reversal of the move. De-hyphenating refers to a policy started ...
READ MORE
ANTHROPOLOGY BEST OPTIONAL SUBJECT FOR MAINS…..
  ATTEND FREE ORIENTATION CLASS  (Bangalore School of civil services, Hebbal, Bangalore)   Why should I take anthropology? Because Anthropology has the following advantage, Scoring subject Interesting subject Easy to grasp even for a non science student Short syllabus Repeating ...
READ MORE
Two reports released on Thursday, one at the global level and the other India-specific, say the country is on track to meet only two (under-five overweight and exclusive breastfeeding rates) ...
READ MORE
“3rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮತಗಟ್ಟೆ ಮಾಹಿತಿಗೆ ಚುನಾವಣಾ ಆ್ಯಪ್! ನಿಮ್ಮ ಹಕ್ಕು ಚಲಾಯಿಸುವ ಮತಗಟ್ಟೆ ಎಲ್ಲಿದೆ? ಅದನ್ನು ತಲುಪುವ ಮಾರ್ಗ ಯಾವುದು? ಸಂಚಾರ ದಟ್ಟಣೆ ಕಿರಿಕಿರಿ ಇಲ್ಲದೆ ಸುಲಭವಾಗಿ ತಲುಪಲು ಇರುವ ಮಾರ್ಗಗಳು ಯಾವುವು? ಸರತಿಯಲ್ಲಿ ಎಷ್ಟು ಜನರಿದ್ದಾರೆ? ಇಂತಹ ಹಲವು ಮಾಹಿತಿಯನ್ನು ಈಗ ಬೆರಳ ತುದಿಯಲ್ಲೇ ...
READ MORE
ಸುಕನ್ಯಾ ಸಮೃದ್ಧಿ
Swachh Survekshan 2016
Tourist destinations in state to be made disabled
ಪ್ರೊ-ಆಕ್ಟಿವ್ ಗವರ್ನನ್ಸ್ ಮತ್ತು ಸಕಾಲಿಕ ಅನುಷ್ಠಾನ (PRAGATI)
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
All you need to know about HYBRID ANNUITY
U.S. considers re-merger of India, Pakistan desks
ANTHROPOLOGY BEST OPTIONAL SUBJECT FOR MAINS…..
State of nutrition in the country
“3rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”