6th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಕರ್ನಾಟಕ ಬಜೆಟ್ 2018-19ರ ಮುಖ್ಯಾಂಶಗಳು

ಬಜೆಟ್​ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದ ನೂತನ ಘೋಷಣೆಗಳು:

 1. ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗಾಗಿ ವಿಶೇಷ ಪ್ಯಾಕೇಜ್​ ಮೂಲಕ 150 ಕೋಟಿ ರೂ. ಮೀಸಲು.
 2. ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳನ್ನು ಆಕರ್ಷಿಸಲು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜತೆ ಆಂಗ್ಲ ಮಾಧ್ಯಮ ಆರಂಭ. 1000 ಶಾಲೆಗಳಲ್ಲಿ ಇಂತಹ ಪ್ರಯೋಗ.
 3. 48 ಸಾವಿರ ಶಾಲೆಗಳಲ್ಲಿ ಶಿಕ್ಷಕರ, ಮಕ್ಕಳ ಹಾಜರಾತಿಗೆ ಬಯೋ ಮೆಟ್ರಿಕ್ ಸಾಧನ ಅಳವಡಿಕೆ. ಮುಂದಿನ ಮೂರು ವರ್ಷದಲ್ಲಿ ಬಯೋ ಮೆಟ್ರಿಕ್ ಜಾರಿಗೆ 5 ಕೋಟಿ ರೂ. ಮೀಸಲು.
 4. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಆಯ್ದ 4,100 ಸರ್ಕಾರಿ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಿ ಬಾಲ ಸ್ನೇಹಿ ಕೇಂದ್ರಗಳಾಗಿ ಬಲವರ್ಧನೆ.
 5. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಎಲ್​ಕೆಜಿ, ಯುಕೆಜಿ ಆರಂಭ.
 6. ಒಂದು ಕಿಲೋ ಮೀಟರ್​ ವ್ಯಾಪ್ತಿಯಲ್ಲಿರುವ ಮತ್ತು ದಾಖಲಾತಿ ಕಡಿಮೆ ಇರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ ಶಾಲೆಯೊಂದಿಗೆ ವಿಲೀನ.

ಬಜೆಟ್​ನಲ್ಲಿ ಬೆಂಗಳೂರಿಗೆ ಬಂಪರ್​ ಕೊಡುಗೆಗಳು

 1. ನಗರದ ಕೆರೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡಿದ್ದು, ಬೆಳ್ಳಂದೂರು ಕೆರೆಯ ಸಂಪೂರ್ಣ ಪುನಶ್ಚೇತನಕ್ಕೆ 50 ಕೋಟಿ ರೂ. ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಹಭಾಗಿತ್ವದೊಂದಿಗೆ ಬೆಳ್ಳಂದೂರು ಕೆರೆಯ ನೀರನ್ನು ಬೆಂಗಳೂರು ಗ್ರಾಮಾಂತರ ಪ್ರದೇಶಗಳ ಕೃಷಿ ಚಟುವಟಿಕೆಗಳ ಹನಿ ನೀರಾವರಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
 2. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹಂಚಲಾಗಿದ್ದು, ಇನ್ನೂ 5000 ನಿವೇಶನ ಹಂಚಿಕೆ ಮಾಡುವ ಕಾರ್ಯಕ್ರಮ ಪ್ರಗತಿಯಲ್ಲಿದ್ದು, ಮೊದಲನೇ ಹಂತದಲ್ಲಿ 2157 ನಿವೇಶನ ಹಂಚಿಕೆಯಾಗಿದೆ. ಎರಡನೇ ಹಂತದಲ್ಲಿ 3000 ನಿವೇಶನ ಹಂಚಿಕೆ.
 3. ಬೆಂಗಳೂರು ಹೊರವಲಯದಲ್ಲಿ ಫೆರಿಫೆರಲ್​ ರಿಂಗ್​ ರಸ್ತೆ ನಿರ್ಮಾಣಕ್ಕೆ ಚಿಂತನೆ.
 4. ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
 5. ಆರು ಎಲಿವೇಟೆಡ್ ಕಾರಿಡಾರ್​ಗೆ ಈಗಾಗಲೇ 15,825 ಕೋಟಿ ರೂ. ಮೀಸಲಿಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ಆರು ಎಲಿವೇಟೆಡ್ ಕಾರಿಡಾರ್ ಗೆ 1000 ಕೋಟಿ ರೂ. ಮೀಸಲಿರಿಸಲಾಗಿದೆ.
 6. ಡಾ. ರಾಜ್ ಕುಮಾರ್ ಸ್ಮರಣಾರ್ಥ ಕಂಠೀರವ ಸ್ಟುಡಿಯೋದಲ್ಲಿ ಯೋಗ ಕೇಂದ್ರ ನಿರ್ಮಾಣ.
 7. ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿವಿ ಸ್ಥಾಪನೆ. ಚಲನಚಿತ್ರ ವಿವಿ ಸ್ಥಾಪನೆಗೆ 30 ಕೋಟಿ ರೂ. ಮೀಸಲು
 8. ಚಲನಚಿತ್ರ ರಂಗಕ್ಕೆ ಶ್ರಮಿಸುವ ಉದ್ಯಮಗಳ ಪ್ರೋತ್ಸಾಹಕ್ಕೆ 40 ಕೋಟಿ ರೂ.

ಬಜೆಟ್​ನಲ್ಲಿ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ನೂತನ ಘೋಷಣೆಗಳು

 1. ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿ ಬಡವರಿಗೆ ಬಹುದೂರ. ಅಂತಹ ರೋಗಿಗಳಿಗಾಗಿಯೇ 30 ಕೋಟಿ ರೂ.
 2. ಪ್ರಸ್ತುತ ಜಾರಿಯಲ್ಲಿರುವ ಕರೆ ಸಂಖ್ಯೆ108 ಮತ್ತು 104ರಲ್ಲಿ ಲಭ್ಯವಿರುವ ತುರ್ತು ಪ್ರತಿಕ್ರಿಯೆ ವ್ಯವಸ್ಥೆ ಮತ್ತು ವೈದ್ಯಕೀಯ ಸಹಾಯವಾಣಿ ಸೇವೆಗಳ ವ್ಯಾಪ್ತಿ ವಿಸ್ತರಿಸಲಾಗುತ್ತದೆ. ಇವುಗಳ ಲಭ್ಯತೆ ಮತ್ತು ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುವಂತೆ ಸೇವೆಗಳನ್ನು ಪುನರ್ ರಚಿಸಲಾಗುತ್ತದೆ.
 3. ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು ಮತ್ತು ಮಾನಸಿಕ ಆರೋಗ್ಯ ರಕ್ಷಣಾ ಸೇವೆಗಳನ್ನೂ ಇದರಲ್ಲಿ ಸಂಯೋಜಿಸಲಾಗುತ್ತದೆ.
 4. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಮತು ್ತ ಆಂಕಾಲಜಿಗೆ ಸಂಬಂಧಿಸಿದಂತೆ ಆರೋಗ್ಯ ಸೇವೆ ಒದಗಿಸುವ ಘಟಕಗಳು ಮತ್ತು ಟ್ರಾಮಾ ಘಟಕಗಳ ಸ್ಥಾಪಿಸುವ ಭರವಸೆ ನೀಡಲಾಗಿದೆ.

ಬಜೆಟ್​ನಲ್ಲಿ ರೈತರಿಗೆ ಸಂಬಂಧಿಸಿದ ನೂತನ ಘೋಷಣೆಗಳು

 1. ಕೋಲಾರ, ಚಿತ್ರದುರ್ಗ, ಕೊಪ್ಪಳ ಹಾಗೂ ಗದಗ ಜಿಲ್ಲೆಯ ತಲಾ 5 ಸಾವಿರ ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ಮೊದಲ ಹಂತದಲ್ಲಿ ಇಸ್ರೇಲ್ ಮಾದರಿ ನೀರಾವರಿ ಕಲ್ಪಿಸಲಾಗುತ್ತದೆ.
 2. ಅದೇ ರೀತಿ ಕಾರವಾರ, ತುಮಕೂರು, ಯಾದಗಿರಿ ಹಾಗೂ ಹಾವೇರಿಯ ತಲಾ 5 ಸಾವಿರ ಎಕರೆ ತೋಟಗಾರಿಕಾ ಭೂಮಿಯಲ್ಲಿ ಇಸ್ರೇಲ್ ಮಾದರಿ ನೀರಾವರಿ ಕಲ್ಪಿಸಲಾಗುತ್ತದೆ.
 3. ಇಂಡೋ-ಇಸ್ರೇಲ್ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಸ್ಥಾಪಿಸಲಾಗಿರುವ 6 ಉತ್ಕ ೃ್ಟ ಕೇಂದ್ರಗಳನ್ನು ಕೇಂದ್ರೀಕರಿಸಿ ಹೆಚ್ಚಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು
 4. ಬಿತ್ತನೆ ಬೀಜವನ್ನು ಮೂಲದಲ್ಲಿ ಪ್ರಮಾಣೀಕರಿಸುವ ಅತ್ಯುತ್ತಮ ಗುಣಮಟ್ಟದ ಬೀಜ ದೃಢೀಕರಣ ಕೇಂದ್ರ ಸ್ಥಾಪಿಸಲು 5 ಕೋಟಿ ರೂ.
 5. ಸಂಪೂರ್ಣವಾಗಿ ಒಣಗಿರುವ ತೆಂಗಿನ ತೋಟಗಳಲ್ಲಿ ಮಾವು, ಗೋಡಂಬಿ, ಹುಣಸೆ, ಸೀತಾಫಲ, ನೇರಳೆ ಬೆಳೆಯಲು ಪ್ರೋತ್ಸಾಹ.
 6. ಪ್ರಮುಖ ನಗರಗಳನ್ನು ಸಂರ್ಪಸುವ ಹೆದ್ದಾರಿ ಅಥವಾ ರಸ್ತೆಗಳಲಿ ್ಲ 10 ಸ್ಥಳ ಗುರುತಿಸಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಎಪಿಎಂಸಿ ವತಿಯಿಂದ ಸುಸಜ್ಜಿತ ಮಾರುಕಟ್ಟೆ ಅಭಿವೃದ್ಧಿ.
 7. ರೈತರ ಸಹಕಾರಕ್ಕೆ 2 ಸಮಿತಿ: ಸರ್ಕಾರದ ವತಿಯಿಂದ ಕೃಷಿ ವಲಯದ ಚಟುವಟಿಕೆಗಳಿಗೆ ರೈತರ ಸಹಭಾಗಿತ್ವವನ್ನು ಹೆಚ್ಚಿಸುವ ಸಲುವಾಗಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ನಡುವಣ ಸಮನ್ವಯತೆ ಮೂಡಿಸಲು ಸಮಿತಿಗಳನ್ನು ರಚಿಸಲು ಪ್ರಸ್ತಾಪಿಸಿದ್ದಾರೆ
 8. ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ: ಪ್ರತಿ ಹೆಕ್ಟೇರ್ ಉಪಯುಕ್ತತಾ ಜಲವಿಸ್ತೀರ್ಣಕ್ಕೆ 2000 ಬಲಿತ ಬಿತ್ತನೆ ಮೀನುಮರಿಗಳನ್ನು ಮೀನುಗಾರರ ಸಹಕಾರ ಸಂಘಗಳ ಮುಖಾಂತರ ಉಚಿತವಾಗಿ ಬಿತ್ತನೆ ಹಾಗೂ ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ ಯೋಜನೆಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ 4 ಕೋಟಿ ಮೀನು ಮರಿ ಬಿತ್ತನೆ ಮಾಡಲಾಗುವುದು
 9. ಭಾರತದಲ್ಲಿ ಈ ಹಿಂದೆ ಹೆಚ್ಚು ಪ್ರಚಲಿತದಲ್ಲಿದ್ದು ಇದೀಗ ಕಣ್ಮರೆಯಾಗಿರುವ, ವಿದೇಶಗಳಲ್ಲಿ ಈಗ ಜನಪ್ರಿಯಗೊಳ್ಳುತ್ತಿರುವ ಪರಿಸರ ಸ್ನೇಹಿ ಡಿಟರ್ಜೆಟ್ ಉತ್ಪಾದನೆಗೆ ಸಹಕಾರ ನೀಡುವುದಾಗಿ ಕುಮಾರಸ್ವಾಮಿ ಘೋಷಿಸಿದರು. ಅಂಟುವಾಳ ಕಾಯಿ ಆಧಾರಿತ ಸೋಪು ಮತ್ತು ಡಿಟರ್ಜೆಂಟ್​ಗಳ ಉತ್ಪಾದನೆಗೆ ಅನುಕೂಲವಾಗುವಂತೆ ಅಂಟುವಾಳ ಕಾಯಿ ಮರಗಳ ವ್ಯಾಪಕ ಬೇಸಾಯಕ್ಕಾಗಿ ಒಂದು ಕಾರ್ಯಕ್ರಮವನ್ನು ರೂಪಿಸಲು 10 ಕೋಟಿ ರೂ. ಮೀಸಲಿರಿಸಲಾಗುವುದು
 10. ಪಶುಗಳಿಗೆ ಹಸಿರು ಮೇವು: ಧಾರವಾಡ, ಕಲಬುರಗಿ ಮತು ್ತ ಮೈಸೂರುಗಳಲ್ಲಿ ಮೂರು ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು 2.25 ಕೋಟಿ ರೂ. ನೀಡಲಾಗುವುದು ಎಂದು ಸಿಎಂ ತಿಳಿಸಿದರು. ಮಣ್ಣೇ ಇಲ್ಲದೆ ನೀರಿನಲ್ಲಿ ಸಸಿಗಳನ್ನು ಬೆಳೆಯುವ ಜಲಕೃಷಿ(ಹೈಡ್ರೋಫೋನಿಕ್ಸ್) ಮೂಲಕ ಹಸಿರು ಮೇವು ಉತ್ಪಾದನಾ ಘಟಕ ಸ್ಥಾಪಿಸಲು 3 ಕೋಟಿ ರೂ. ನೀಡಲಾಗುವುದು. ಹಾಸನ ಹಾಲು ಒಕ್ಕೂಟದ ಸಂಗ್ರಹಣಾ ಸಾಮರ್ಥ್ಯವನ್ನು ಈಗಿನ 10 ಲಕ್ಷ ಲೀಟರ್​ನಿಂದ 15 ಲಕ್ಷ ಲೀಟರ್​ಗೆ ಹೆಚ್ಚಿಸಿ ಮೆಗಾ ಡೈರಿ ಸ್ಥಾಪಿಸಲು 50 ಕೋಟಿ ರೂ. ಮೀಸಲಿಡಲಾಗುವುದು.
 • ಆಸ್ತಿಗಳಿಗೆ ಜಿಐಎಸ್ ಮ್ಯಾಪಿಂಗ್: ನಾಗರಿಕರಿಗೆ ಉತ್ತಮ ಸೇವೆ ನೀಡಲು ಉಪಗ್ರಹ ಇಮೇಜ್ ಬಳಸಿ ನಗರದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಆಸ್ತಿಗಳನ್ನು ಜಿಐಎಸ್ ಆಧಾರಿತ ಮ್ಯಾಪಿಂಗ್ (ಎಲ್ಲ ರೀತಿಯ ಭೌಗೋಳಿಕ ಮಾಹಿತಿಗಳನ್ನು ಸಂಗ್ರಹಿಸುವ ವ್ಯವಸ್ಥೆ ) ಮಾಡುವ ಉದ್ದೇಶ ಸರ್ಕಾರಕ್ಕಿದೆ.ಇದರೊಂದಿಗೆ ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಜಾಲದ ಮ್ಯಾಪಿಂಗ್ ಕೂಡ ಸರ್ಕಾರ ಮಾಡಲಿದೆ.
 • ಬಹುಮಹಡಿ ವಾಹನ ನಿಲುಗಡೆ:ಬೆಂಗಳೂರು ಹೊರತಾಗಿ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ವಾಹನ ಸಂಚಾರದ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ತಪ್ಪಿಸಲು 5 ಮಹಾನಗರ ಪಾಲಿಕೆಗಳಲ್ಲಿ ಬಹುಮಹಡಿ ವಾಹನ ನಿಲುಗಡೆ ಸೌಲಭ್ಯ ನಿರ್ವಣಕ್ಕೆ ಸರ್ಕಾರಕ್ಕೆ ನಿರ್ಧರಿಸಿದೆ
 • ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷೆ: ರೈತರ ಸಾಲ ಮನ್ನಾ ಭರವಸೆಯಂತಹ ಸವಾಲಿನ ನಡುವೆಯೂ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಸಂಧ್ಯಾ ಸುರಕ್ಷಾ ಯೋಜನೆಯಡಿ ರಾಜ್ಯದ 32.92 ಲಕ್ಷ ವೃದ್ಧ ಫಲಾನುಭವಿಗಳು ಪಡೆಯುತ್ತಿದ್ದ 600 ರೂ. ಮಾಸಾಶನವನ್ನು 1,000 ರೂ.ಗಳಿಗೆ ಏರಿಸಲಾಗಿದೆ. 2018 ನವೆಂಬರ್ 1ರಿಂದ ಇದು ಜಾರಿಗೆ ಬರಲಿದೆ. ಈ ಮೂಲಕ ಕುಮಾರಸ್ವಾಮಿ ವಯೋವೃದ್ಧರಿಗೆ ನೆರವಾಗಿದ್ದಾರೆ. ಯೋಜನಾ ಮೊತ್ತವನ್ನು ಮುಂದಿನ 5 ವರ್ಷಗಳಲ್ಲಿ ಹಂತಹಂತವಾಗಿ ಹೆಚ್ಚಿಸುವ ಉದ್ದೇಶದಿಂದ ಈ ಸಾಲಿನ ಆಯವ್ಯಯದಲ್ಲಿ 660 ಕೋಟಿ ರೂ. ಮೀಸಲಿಡಲಾಗಿದೆ.
 • ಬ್ರಾಹ್ಮಣರ ಅಭಿವೃದ್ಧಿ ಮಂಡಳಿ: ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ದೃಷ್ಟಿಯಿಂದ ‘ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ’ ಸ್ಥಾಪನೆಗೆ ಸರ್ಕಾರ ನಿರ್ಧರಿಸಿ  25 ಕೋಟಿ ಮೀಸಲಿರಿಸಿದೆ. ಹಲವು ವರ್ಷಗಳಿಂದ ಈ ಸಮುದಾಯಕ್ಕೆ ಯೋಜನೆ ರೂಪಿಸಬೇಕೆಂಬ ಬೇಡಿಕೆಯಿತ್ತು.
 • ಶಂಕರ ಜಯಂತಿ ಆಚರಣೆ: ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲು ಹೊಸ ಸರ್ಕಾರ ನಿರ್ಧರಿಸಿದೆ. ಧಾರ್ವಿುಕ ಪರಂಪರೆಯ ಮೇರು ವ್ಯಕ್ತಿ ಆಗಿರುವ ಶಂಕರಾಚಾರ್ಯರ ಜಯಂತಿ ಯನ್ನು ರಾಜ್ಯಾದ್ಯಂತ ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಆಚರಿಸಲಾಗುವುದು
 • ನ್ಯಾಯಾಂಗ ವಸ್ತು ಸಂಗ್ರಹಾಲಯ: ರಾಜ್ಯದ ನ್ಯಾಯಾಂಗ ಪರಂಪರೆಯನ್ನು ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಮೈಸೂರು ಹಾಗೂ ಬ್ರಿಟಿಷ್ ಸಾಮ್ರಾಜ್ಯಗಳ ನಡುವೆ ನಡೆದಿರುವ ಒಪ್ಪಂದ ಪತ್ರಗಳು, ರಾಜ್ಯ ನ್ಯಾಯಾಂಗದ ಇತಿಹಾಸಕ್ಕೆ ಸಂಬಂಧಿಸಿದ ಅಮೂಲ್ಯ ದಾಖಲೆಗಳ ವಸ್ತುಸಂಗ್ರಹಾಲಯ ಸ್ಥಾಪನೆಗೆ -1 ಕೋಟಿ ರೂ.
 • ನ್ಯಾಯಾಂಗ ಕ್ಷೇತ್ರದ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ ಬೆಂಗಳೂರು ವಕೀಲರ ಸಂಘಕ್ಕೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಸಾಲ ಮನ್ನಾ

 • ಸುದ್ದಿಯಲ್ಲಿ ಏಕಿದೆ? ಮುಖ್ಯ ಮಂತ್ರಿ ಎಚ್ .ಡಿ  ಕುಮಾರಸ್ವಾಮಿರವರು ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೂ ಸುಸ್ತಿ ಸಾಲ ಮನ್ನಾದ ಘೋಷಣೆ ಮಾಡಿದ್ದಾರೆ
 • 2 ಲಕ್ಷ ರೂಪಾಯಿ ಮಿತಿ:  ಒಟ್ಟು 4 ವರ್ಷದ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ವಾರ್ಷಿಕ ಅಥವಾ ಅರ್ಧವಾರ್ಷಿಕ ಕಂತಿನ ಮೂಲಕ ಹಣ ಸಂದಾಯ ಮಾಡಲು ಸರಕಾರ ನಿರ್ಧರಿಸಿದ್ದು, ಈ ವರ್ಷ 6500 ಕೋಟಿ ರೂ. ನಿಗದಿ ಪಡಿಸಿದೆ. ಜತೆಗೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದ ಸಾಲ ಮನ್ನಾ ಯೋಜನೆಯ ಬಾಕಿ 4000 ಕೋಟಿ ರೂಪಾಯಿಯನ್ನೂ ಈ ವರ್ಷ ಸಂದಾಯ ಮಾಡಲು ಮುಂದಾಗಿದೆ.
 • ಹೊಸ ಸಾಲ ಮನ್ನಾ ಯೋಜನಾ ವ್ಯಾಪ್ತಿಗೆ ಡಿಸೆಂಬರ್‌ 2017ರ ಅವಧಿಯಲ್ಲಿ ಮಾಡಿದ 2 ಲಕ್ಷ ರೂ. ಒಳಗಿನ ಸಾಲ ಸುಸ್ತಿದಾರರು ಮಾತ್ರ ಒಳಪಡುತ್ತಾರೆ. ದೊಡ್ಡ ಹಿಡುವಳಿ ಹೊಂದಿದ ರೈತರು 40 ಲಕ್ಷ ರೂ. ವರೆಗೂ ಸಾಲ ಹೊಂದಿದ್ದು, ಅಂಥವರನ್ನು ಈ ವ್ಯಾಪ್ತಿಗೆ ಸೇರಿಸಿಲ್ಲ.
 • ಪಾವತಿಸಿದವರಿಗೆ 25 ಸಾವಿರ
  ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ರೈತರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಮರುಪಾವತಿ ಮಾಡಿದ ಸಾಲದ ಮೊತ್ತ ಅಥವಾ 25000 ರೂ.ಗಳಲ್ಲಿ ಯಾವುದು ಕಡಿಮೆಯೋ ಅದನ್ನು ಖಾತೆಗೆ ವರ್ಗಾವಣೆ ಮಾಡಲು ಸರಕಾರ ನಿರ್ಧರಿಸಿದೆ.
 • ಷರತ್ತುಗಳಿವೆ… ಗಮನಿಸಿ : 3 ವರ್ಷ ಆದಾಯ ತೆರಿಗೆ ಪಾವತಿಸಿದ ರೈತರು
 •  ಸರಕಾರಿ ಅಧಿಕಾರಿಗಳು ಮತ್ತು ಸಹಕಾರ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು
 • ಇತರ ಅನರ್ಹ ಕೃಷಿ ಸಾಲಗಾರರು
  (ಇವರಿಗೆ ಸಾಲಮನ್ನಾ ಲಾಭ ದೊರೆಯುವುದಿಲ್ಲ)
 • ಯೋಜನೆಗೆ ಒಳಪಡದ ವರ್ಗಗಳು : ವೈಯಕ್ತಿಕ ರೈತ, ಹಿಂದು ಅವಿಭಾಜ್ಯ ಕುಟುಂಬ ಹೊರತುಪಡಿಸಿ ಎಲ್ಲ ಕಾನೂನುಬದ್ಧ ಸಂಸ್ಥೆಗಳು
 •  ರೈತರಿಗೆ ನೀಡಲಾದ ಒಡವೆ, ಆಭರಣ ಸಾಲ
 • ಟ್ರಸ್ಟ್‌, ಪಾಲುದಾರಿಕೆ, ಮೈಕ್ರೋ ಫೈನಾನ್ಸ್‌, ನಗರ ಸಹಕಾರ ಬ್ಯಾಂಕ್‌ಗಳಿಂದ ಪಡೆದ ಸಾಲ
 •  4 ಲಕ್ಷ ರೂ.ಗಿಂತ ಹೆಚ್ಚು ಆದಾಯ ತೆರಿಗೆ ಪಾವತಿದಾರರು ಪಡೆದ ಬೆಳೆ ಸಾಲ
 • ವಾಹನ ಖರೀದಿ ಸಾಲ, ಕೃಷಿ ಉತ್ಪನ್ನ ಅಡವಿಟ್ಟು ಪಡೆದ ಸಾಲ
 •  ಕೇಂದ್ರ, ರಾಜ್ಯ ಸರಕಾರಿ ನೌಕರರು, ಅಂಗಸಂಸ್ಥೆಗಳು, ಅರೆ ಸರಕಾರಿ, ಸಾರ್ವಜನಿಕ ಸ್ವಾಮ್ಯದ ಉದ್ಯಮ, ಬ್ಯಾಂಕ್‌, ಶೈಕ್ಷಣಿಕ ಸಂಸ್ಥೆಗಳ ಉದ್ಯೋಗಿಗಳಿಗೆ ನೀಡಿದ ಸಾಲ
 •  ನಿವೃತ್ತ ಯೋಧರನ್ನು ಹೊರತುಪಡಿಸಿ ಸಂಚಿತ ನಿಧಿಯಿಂದ ಮಾಸಿಕ 15,000 ರೂ. ಪಿಂಚಣಿ ಪಡೆಯುತ್ತಿರುವವರ ಬೆಳೆ ಸಾಲ
 •  ಸ್ವಸಹಾಯ ಗುಂಪುಗಳು ಹಾಗೂ ಜಂಟಿ ಹೊಣೆಗಾರಿಕೆ ಗುಂಪುಗಳು ಪಡೆದ ಸಾಲ
 • ಕಾಂಟ್ರ್ಯಾಕ್ಟ್ ಫಾರ್ಮಿಂಗ್‌ಗಾಗಿ ಪಡೆದ ಸಾಲ
 • ರೈತರಿಗೆ ಸಾಲ ನೀಡಲು ಸಕ್ಕರೆ ಕಾರ್ಖಾನೆಗಳಿಗೆ ಸರಕಾರ ನೀಡಿದ ಸಾಲ
 • ಮೀನುಗಾರಿಕೆ, ಹೈನುಗಾರಿಕೆ ಹಾಗೂ ಇನ್ನಿತರೆ ಕೃಷಿ ಸಂಬಂಧಿತ ಸಾಲ
 • ಸಾಲದ ಮೊತ್ತವನ್ನು ದುರ್ಬಳಕೆ ಮಾಡಿದ ಅಥವಾ ನಿಕ್ಷೇಪಗಳಲ್ಲಿ ಠೇವಣಿ ಇಟ್ಟವರ ಸಾಲ
 • ಸಾಲ ಪಡೆದು ವಂಚನೆ, ದುರ್ಬಳಕೆ ಮಾಡಿಕೊಂಡವರು
 • ಸಹಕಾರ ಸಂಘಗಳ ಸಾಲ ಮನ್ನಾ ಯೋಜನೆಯಲ್ಲಿ ಪ್ರಯೋಜನ ಪಡೆದವರಿಗೆ ಅನ್ವಯವಿಲ್ಲ

ಯೋಜನೆ ವ್ಯಾಪ್ತಿಯ ಬ್ಯಾಂಕ್‌ಗಳು

 •  ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌
 • ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌
 • ಖಾಸಗಿ ಬ್ಯಾಂಕ್‌ ಮತ್ತು ಪ್ರಾಥಮಿಕ ಸಹಕಾರ ಕ್ರೆಡಿಟ್‌ ಸೊಸೈಟಿಗಳು
 •  ರೈತರ ಸೇವಾ ಸಹಕಾರ ಸಂಘ
 • ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯಲ್ಲಿ ಪಡೆದ ಸಾಲ

ಎಷ್ಟು ಫಲಾನುಭವಿಗಳು?

 • ಎರಡು ಲಕ್ಷ ರೂ.ವರೆಗಿನ ಸಾಲಮನ್ನಾ ವ್ಯಾಪ್ತಿಗೆ 17.32 ಲಕ್ಷ ಸುಸ್ತಿ ಸಾಲದಾರರನ್ನು ಗುರುತಿಸಲಾಗಿದೆ. ಇವರಿಗೆ ಅಂದಾಜು ಪ್ರಮಾಣ 30,266 ಕೋಟಿ ರೂ.ಬೇಕಾಗುತ್ತೆ. ಹಾಗೆಯೇ ಚಾಲ್ತಿ ಸಾಲ ಹೊಂದಿದ 27.67 ಲಕ್ಷ ಸಾಲಗಾರರು ಹಾಗೂ ಹಿಂದಿನ ಬೆಳೆ ಸಾಲ ಮನ್ನಾ ಮಾಡಿದ ರೈತರಿಗಾಗಿ 68,93 ಕೋಟಿ ರೂ. ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ಒಟ್ಟಾರೆಯಾಗಿ 44.89 ಲಕ್ಷ ಸಾಲ ಖಾತೆಗಳಿಗೆ ಸರಕಾರ 37,159 ಕೋಟಿ ರೂ. ಭರಿಸಬೇಕಾಗುತ್ತದೆ. 

‘ಕ್ರೂ ಎಸ್ಕೇಪ್ ಸಿಸ್ಟಂ’

 • ಸುದ್ದಿಯಲ್ಲಿ ಏಕಿದೆ  ? ಭಾರತೀಯ ಬಾಹ್ಯಾಕಾಶ ಇಲಾಖೆ (ಇಸ್ರೋ) ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಗಗನಯಾನದಲ್ಲಿ ಸಂಭವಿಸಬಹುದಾದ ಅವಘಡಗಳಿಂದ ಪಾರಾಗುವ ಮಹತ್ವದ ತಂತ್ರಜ್ಞಾನ ‘ಕ್ರೂ ಎಸ್ಕೇಪ್ ಸಿಸ್ಟಂ’) ಪರೀಕ್ಷಿಸಿ ಯಶಸ್ವಿಯಾಗಿದೆ.
 • ತುರ್ತು ಸಂದರ್ಭಗಳಲ್ಲಿ ಗಗನನೌಕೆಯಿಂದ ಗಗನಯಾತ್ರಿಗಳನ್ನು ಕ್ರೂ ಎಸ್ಕೇಪ್ ತಂತ್ರಜ್ಞಾನ ವ್ಯವಸ್ಥೆ ಮೂಲಕ ಪಾರು ಮಾಡಬಹುದಾಗಿದೆ. ಉಡ್ಡಯನ ಹಂತದ ತುರ್ತು ಸಂದರ್ಭಗಳಲ್ಲಿ ನೌಕೆಯನ್ನು ಸ್ಥಗಿತಗೊಳಿಸಿ ಗಗನಯಾತ್ರಿಗಳುಳ್ಳ ಘಟಕವನ್ನು ಬೇರ್ಪಡಿಸಿ ಅವರನ್ನು ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರು ಮಾಡಬಹುದಾಗಿದೆ .
 •  ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ 12.6 ಟನ್ ಹೊತ್ತು ಹೊರಟ ಉಡ್ಡಯನ ವಾಹಕದಿಂದ ಕ್ರೂ ಎಸ್ಕೇಪ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಏನಿದು ಕ್ಯಾಪ್ಸೂಲ್ ಪರೀಕ್ಷೆ?

 • ರಾಕೆಟ್ ಒಳಗೆ ಇರಿಸುವ ಕ್ಯಾಪ್ಸೂಲ್​ನಲ್ಲಿ ಮಾನವನ ಪ್ರತಿಕೃತಿ ಇರಿಸಿ ನಭಕ್ಕೆ ಹಾರಿಸಲಾಗುತ್ತದೆ. ನಿರ್ದಿಷ್ಟ ದೂರ ಹೋದ ಬಳಿಕ ರಾಕೆಟ್​ನಿಂದ ಕ್ಯಾಪ್ಸೂಲ್ ಪ್ರತ್ಯೇಕವಾಗುತ್ತದೆ. ನಡೆದ ಪರೀಕ್ಷೆಯಲ್ಲಿ 259 ಸೆಕೆಂಡ್ ಬಳಿಕ ಪ್ಯಾರಾಚೂಟ್ ಸಹಾಯದಿಂದ ಈ ಮಾದರಿ ಹಾಗೂ ಕ್ಯಾಪ್ಸೂಲ್ ಭೂಮಿಯಲ್ಲಿ ಇಳಿದಿದೆ.
 • ಆಗಸದಿಂದ ಬೇರ್ಪಟ್ಟ ಕ್ರೂ ಮಾಡ್ಯೂಲ್ ಸುರಕ್ಷಿತವಾಗಿ ಪ್ಯಾರಾಚೂಟ್ ಮೂಲಕ ಶ್ರೀಹರಿಕೋಟದಿಂದ ಸುಮಾರು 2.9 ಕಿ.ಮೀ ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ಇಳಿಯಿತು.
 • ಸುಮಾರು 2.7 ಕಿ.ಮೀ ಎತ್ತರದಿಂದ ಧರೆಗಿಳಿದ ಕ್ರೂ ಮಾಡ್ಯೂಲನ್ನು ಮೂರು ರಿಕವರಿ ಹಡಗುಗಳ ಮೂಲಕ ಸುರಕ್ಷಿತವಾಗಿ ಮರಳಿಪಡೆಯಲಾಗಿದೆ. ಸುಮಾರು 300 ಸೆನ್ಸಾರ್‌ಗಳು ಮಿಷನ್‌ನ ವಿವಿಧ ಕಾರ್ಯಕ್ಷಮತೆಯನ್ನು ದಾಖಲಿಸಿವೆ

 

Related Posts
Insufficient women in police force – High Court
The number of women in the State police force is not enough to deal with crimes against women, who constitute about 50% of the total population, the Karnataka High Court ...
READ MORE
Kodagu: The Coffee Land of Karnataka- To be the state’s R-Day Tableau
Karnataka will depict various stages of coffee-making, from plucking of beans to making of filter coffee, in a captivating tableau during the Republic Day parade From women plucking coffee beans to ...
READ MORE
Today’s Current Affairs – Karnataka – KAS/KPSC EXAMS (17th March 2017)
New Socio-Economic Survey report on caste categorisation to be out soon Social Welfare Minister H Anjaneya has announced that the socio-economic survey report being prepared by the Backward Classes Commission would prevail ...
READ MORE
Karnataka Current Affairs – KAS/KPSC Exams – 10th July 2018
HAL signs MoU with BBMP to facilitate signal-free corridor Setting the ball rolling for the proposed signal-free corridor from Vellara Junction to Hope Farm Junction, the Hindustan Aeronautics Limited (HAL) and ...
READ MORE
“28th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಸುದ್ದಿಯಲ್ಲಿ ಏಕಿದೆ? ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಹಿನ್ನಲೆ: ರಾಜಕೀಯ ಪಕ್ಷಗಳು ಸ್ವೀಕರಿಸುವ ದೇಣಿಗೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಮಾಹಿತಿ ಆಯೋಗ 2013ರಲ್ಲಿ ಬಿಜೆಪಿ, ಕಾಂಗ್ರೆಸ್‌ ...
READ MORE
A total of 87 infrastructure projects with a combined value of Rs.87,518.77 crore are underway in Karnataka and transportation projects are leading the way with around 52 projects worth Rs.36,237 ...
READ MORE
“18th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಜಲಮೂಲಗಳ ಸ್ವಚ್ಛತೆ ಅಭಿಯಾನ ಸುದ್ದಿಯಲ್ಲಿ ಏಕಿದೆ?  ಜೂನ್ 5ರ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕದ ಪಣಂಬೂರು, ಮಲ್ಪೆ, ಗೋಕರ್ಣ ಹಾಗೂ ಕಾರವಾರ ಸೇರಿದಂತೆ ದೇಶದ 24 ಸಮುದ್ರ ತೀರಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಸಿದ್ಧತೆ ನಡೆಸಿದೆ. ಜೊತೆಗೆ ...
READ MORE
Karnataka Current Affairs – KAS/KPSC Exams- 28th September 2018
Spurt in H1N1 cases in September There has been a sudden increase in the number of H1N1 cases in Karnataka in the last 27 days with at least 149 persons testing ...
READ MORE
Karnataka: Bengaluru unable to treat waste water?
The Revised Master Plan (RMP) 2031 the new Plan talks about more Sewage Treatment Plants (STPs) and mandating apartment owners to treat their waste water themselves, they ask: Why did ...
READ MORE
Karnataka Current Affairs – KAS / KPSC Exams – 25th April 2017
Artificial waterholes created in Shettyhalli sanctuary In the wake of acute shortage of water in Shettyhalli Wildlife Sanctuary limits in the district, the Forest Department has constructed 40 artificial waterholes there ...
READ MORE
Insufficient women in police force – High Court
Kodagu: The Coffee Land of Karnataka- To be
Today’s Current Affairs – Karnataka – KAS/KPSC EXAMS
Karnataka Current Affairs – KAS/KPSC Exams – 10th
“28th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Infrastructure projects underway in Karnataka
“18th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams- 28th September
Karnataka: Bengaluru unable to treat waste water?
Karnataka Current Affairs – KAS / KPSC Exams

Leave a Reply

Your email address will not be published. Required fields are marked *