7th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಕೇರಳದ ಮನವಿ ತಿರಸ್ಕರಿಸಿದ ಕರ್ನಾಟಕ, ತಮಿಳುನಾಡು

 • ಬಂಡೀಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರವನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ತೆರವು ಮಾಡುವಂತೆ ಕೋರಿದ್ದ ಕೇರಳದ ಮನವಿಯನ್ನು ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ತಿರಸ್ಕರಿಸಿದ್ದಾರೆ.
 • ‘ರಾತ್ರಿ ಸಂಚಾರ ನಿಷೇಧದಿಂದಾಗಿ ಬೆಂಗಳೂರಿನಿಂದ ಕೇರಳಕ್ಕೆ ಬರುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಸುತ್ತಿ ಬಳಸಿ ಕೇರಳಕ್ಕೆ ಬರುವ ಸ್ಥಿತಿ ಇದೆ. ಹೀಗಾಗಿ ಆದೇಶವನ್ನು ತೆರವು ಮಾಡಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬೇಕು’ ಎಂದು ಕೇರಳದ ಅಧಿಕಾರಿಗಳು ಒತ್ತಾಯಿಸಿದರು.
 • ಅದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಅಧಿಕಾರಿಗಳು, ‘ವನ್ಯಜೀವಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ರಾತ್ರಿ ವೇಳೆ ವಾಹನಗಳ ಸಂಚಾರವನ್ನ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅದರ ವಿರುದ್ಧವಾಗಿ ನಡೆದುಕೊಂಡರೆ, ನ್ಯಾಯಾಂಗ ನಿಂದನೆ ಆಗುತ್ತದೆ. ಹೀಗಾಗಿ, ಯಥಾಸ್ಥಿತಿ ಕಾಯ್ದುಕೊಳ್ಳಲಿದ್ದೇವೆ. ನೀವು (ಕೇರಳ) ಬೇಕಾದರೆ, ಸುಪ್ರೀಂ ಕೋರ್ಟ್‌ನಲ್ಲೇ ಪ್ರಶ್ನಿಸಿ’ ಎಂದರು. ಈ ನಿರ್ಧಾರಕ್ಕೆ ತಮಿಳುನಾಡು ಅಧಿಕಾರಿಗಳು ಧ್ವನಿಗೂಡಿಸಿದರು

ಬೆಂಗಳೂರಿನಲ್ಲಿ ಸ್ಮಾರ್ಟ್‌ ಕ್ಯಾಂಪಸ್‌  ಫಲಕ

 • ಫಲಕದ ಒಂದು ಕಾಲಂನಲ್ಲಿ ಬೆಂಗಳೂರು ನಗರದ ಮಾಲಿನ್ಯ ಮಟ್ಟಗಳ ವಿವರ, ಇನ್ನೊಂದು ಕಾಲಂನಲ್ಲಿ ರಾಜ್ಯದ ಇತರ ಪ್ರಮುಖನಗರಗಳ ಮಾಲಿನ್ಯ ಮಟ್ಟವನ್ನು ತೋರಿಸಲಾಗುತ್ತದೆ.
 • ‘ಮಾಲಿನ್ಯ ತಡೆಯುವ ಬಗ್ಗೆ ಜನಜಾಗೃತಿ ಮೂಡಿಸಲು ಈ ಕ್ರಮಕೈಗೊಳ್ಳಲಾಗಿದೆ. ಫಲಕವು 12 ಅಡಿ ಉದ್ದ 18 ಅಡಿ ಎತ್ತರ ಇರಲಿದೆ. ಈ ಪ್ರದರ್ಶನ ಫಲಕ ಅಳವಡಿಸುವುದಕ್ಕೆ ಮಂಡಳಿಯು ₹ 3 ಕೋಟಿ ವೆಚ್ಚ ಮಾಡಿದೆ. ಕೆನಡಾದಲ್ಲಿ ಬಳಸುತ್ತಿರುವ ತಂತ್ರಜ್ಞಾನವನ್ನು ಆಧರಿಸಿ ಇದನ್ನು ರೂಪಿಸಲಾಗಿದೆ’

ಭಾರತದಲ್ಲಿ ಬಾಲ್ಯ ವಿವಾಹ ಇಳಿಕೆ

 • ಹತ್ತು ವರ್ಷಗಳಲ್ಲಿ ಭಾರತದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 18 ವರ್ಷದೊಳಗಿನ ಮಕ್ಕಳ ವಿವಾಹ ಪ್ರಮಾಣ ಶೇ 47ರಿಂದ ಶೇ 27ಕ್ಕೆ ಇಳಿದಿದೆ. ಹಿಂದೆ ಪ್ರತಿ ನಾಲ್ಕು ಹೆಣ್ಣುಮಕ್ಕಳಲ್ಲಿ ಒಂದು ಮಗು ಬಾಲ್ಯ ವಿವಾಹಕ್ಕೆ ಒಳಗಾಗುತ್ತಿತ್ತು. ಈಗ ಆ ಪ್ರಮಾಣ 5:1ಕ್ಕೆ ಇಳಿದಿದೆ ಎಂದು ಯುನಿಸೆಫ್‌ ಹೇಳಿದೆ.
 • ಈ ಪ್ರಮಾಣ ಜಾಗತಿಕ ಮಟ್ಟದಲ್ಲಿ ಬಾಲ್ಯ ವಿವಾಹದ ಪ್ರಮಾಣವನ್ನು ಕಡಿಮೆ ಮಾಡಲಿದೆ. ಒಂದು ದಶಕದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಶೇ 20ರಷ್ಟು ಇಳಿಕೆಯಾಗಿದೆ.
 • 2005ರಿಂದ 2016ರ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ 2.5 ಕೋಟಿ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಅದರಲ್ಲೂ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದಕ್ಕೆ ಭಾರತೀಯರಲ್ಲಿ ಮೂಡಿರುವ ಜಾಗೃತಿಯೇ  ಕಾರಣ ಎಂದು ಯನಿಸೆಫ್‌ನ ಪ್ರಕಟಣೆ ತಿಳಿಸಿದೆ.
 • ಹೆಣ್ಣು ಮಕ್ಕಳ ಶಿಕ್ಷಣ ಪ್ರಮಾಣದಲ್ಲಿ ಹೆಚ್ಚಳ, ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರಿ ಹೂಡಿಕೆ ಹೆಚ್ಚಿರುವುದು, ಬಾಲ್ಯ ವಿವಾಹದ ಅಪಾಯಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿರುವುದು ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಗುರುತಿಸಿದೆ.
 • ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗಿ ಹೆಣ್ಣುಮಕ್ಕಳಿಗೆ ಉತ್ತಮ ಜೀವನ ಸಿಗುವುದು ಒಳ್ಳೆಯ ಬೆಳವಣಿಗೆ. ಆದರೆ ನಾವು ಇನ್ನೂ ದೂರ ಸಾಗಬೇಕಿದೆ ಎಂದು ಯುನಿಸೆಫ್‌ನ ಸಲಹೆಗಾರ್ತಿ ಅಂಜು ಮಲ್ಹೋತ್ರಾ  ಹೇಳಿದ್ದಾರೆ.
 • 2030ರ ವೇಳೆಗೆ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರತಿಜ್ಞೆ ಮಾಡಲಾಗಿದೆ. ಲಕ್ಷಾಂತರ ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಿಂದ ಮುಕ್ತಗೊಳಿಸಿ, ಬಾಲ್ಯ ಅನುಭವಿ ಸುವಂತೆ ಮಾಡಲು ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ಕರೆ ನೀಡಿದ್ದಾರೆ.
 • ಸಾಮಾಜಿಕ ಸಮಸ್ಯೆಗಳ ಹೆಚ್ಚಳ’
  ಹೆಣ್ಣುಮಗುವನ್ನು ಬಾಲ್ಯದಲ್ಲಿಯೇ ಒತ್ತಾಯದಿಂದ ಮದುವೆ ಮಾಡಿಸುವುದರಿಂದ ಆಕೆ ತಕ್ಷಣದ ಸಮಸ್ಯೆಯ ಜೊತೆಗೆ, ಜೀವನ ಪರ್ಯಂತ ಸಮಸ್ಯೆಗಳಿಗೆ ಈಡಾಗುತ್ತಾಳೆ. ಶಿಕ್ಷಣ ನಿಂತು ಹೋಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗರ್ಭಿಣಿಯಾಗುವುದರಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಇನ್​ಕ್ರೆಡಿಬಲ್ ಇಂಡಿಯಾಗೆ ಆದಿಯೋಗಿ ಪ್ರತಿಮೆ ಸೇರ್ಪಡೆ

 • ಇಲ್ಲಿನ ಈಶ ಯೋಗ ಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿಯೋಗಿ ಮೂರ್ತಿಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಇನ್​ಕ್ರೆಡಿಬಲ್ ಇಂಡಿಯಾ (ಅತುಲ್ಯ ಭಾರತ) ಪಟ್ಟಿಗೆ ಸೇರ್ಪಡೆ ಮಾಡಿದೆ.
 • ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಯೋಗ ಕೇಂದ್ರದ ಸದ್ಗುರು ಅವರು, ಆದಿಯೋಗಿ ಮುಖವು ಸ್ಥಿರತೆ ಮತ್ತು ಆನಂದ ಉತ್ಕಟತೆಯನ್ನು ಸೂಸುತ್ತದೆ.
 • ಈ ಮೂರ್ತಿಯು ಅತುಲ್ಯ ಭಾರತ ಪ್ರಚಾರದ ಭಾಗವಾಗಿದೆ.
 •  ಇದಕ್ಕೆ ಕಾರಣಿಕರ್ತರೆಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ. ಸದ್ಗುರು ಪರಿಕಲ್ಪನೆಯ ಮಂದಸ್ಮಿತ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಮಹಾಶಿವರಾತ್ರಿಯಂದು ಅನಾವರಣ ಮಾಡಿದ್ದರು.
 •  ವಿಶ್ವದಲ್ಲೇ ಅತ್ಯಂತ ದೊಡ್ಡ ಬಸಟ್ (ತಲೆ, ಭುಜ, ಎದೆಯವರೆಗಿನ ಪ್ರತಿಮೆ) ಎಂದು ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ

ದ್ವೀಪರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ

 • ಬಹುಸಂಸ್ಕೃತಿ, ಬಹುಭಾಷೆ ಮತ್ತು ಬಹುಜನಾಂಗೀಯತೆಗಳಿಗೆ ನೆಲೆಯಾಗಿದ್ದ ದ್ವೀಪರಾಷ್ಟ್ರ ಶ್ರೀಲಂಕಾ ಈಗ ಅಕ್ಷರಶಃ ಕುದಿಯುತ್ತಿದೆ. ಇಲ್ಲಿನ ಬೌದ್ಧಮತೀಯರು ಹಾಗೂ ಮುಸ್ಲಿಮರ ನಡುವೆ ಶುರುವಾದ ಕಿತ್ತಾಟ-ಚಕಮಕಿಗಳು ದೊಂಬಿ-ಗಲಭೆಗೆ ತಿರುಗಿ ಕೋಮು ಹಿಂಸಾಚಾರದ ಸ್ವರೂಪ ಪಡೆದು ವ್ಯಾಪಿಸಿದ ಪರಿಣಾಮವಾಗಿ, ಪರಿಸ್ಥಿತಿಯನ್ನು ಹತೋಟಿಗೆ ತರಲು ಅಲ್ಲೀಗ 10 ದಿನಗಳವರೆಗೆ ತುರ್ತು ಪರಿಸ್ಥಿತಿಯ ಘೋಷಣೆಯಾಗಿದೆ.
 • ಇದಕ್ಕೂ ಮುನ್ನ ಕ್ಯಾಂಡಿಯಲ್ಲಿನ ಮುಸ್ಲಿಂ ಮಾಲೀಕತ್ವದ ಮಳಿಗೆಯೊಂದಕ್ಕೆ ಗಲಭೆಕೋರರು ಬೆಂಕಿ ಹಚ್ಚಿದ ಘಟನೆ ವರದಿಯಾಗುತ್ತಿದ್ದಂತೆ, ಪರಿಸ್ಥಿತಿಯನ್ನು ತಹಬಂದಿಗೆ ತರಲು ಅಲ್ಲಿಗೆ ಭದ್ರತಾಪಡೆ ಹಾಗೂ ಪೊಲೀಸರನ್ನು ಕಳುಹಿಸಿದ ಸರ್ಕಾರ, ಬಹುಸಂಖ್ಯಾತ ಸಿಂಹಳೀಯ ಬೌದ್ಧಮತೀಯರು ಹಾಗೂ ಅಲ್ಪಸಂಖ್ಯಾತ ಮುಸ್ಲಿಮರ ನಡುವೆ ಮತ್ತಷ್ಟು ಘರ್ಷಣೆಗಳು ನಡೆಯುವಂತಾಗುವುದನ್ನು ತಡೆಯಲು ಕರ್ಫ್ಯೂ ವಿಧಿಸಿತ್ತು.
 • ಈಗ ಗಲಭೆ-ಹಿಂಸಾಚಾರಗಳು ದೇಶದ ಮಿಕ್ಕ ಭಾಗಗಳಿಗೂ ವ್ಯಾಪಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಘೋಷಿಸಲಾಗಿರುವ ತುರ್ತಪರಿಸ್ಥಿತಿಯ ಜತೆಗೆ, ಫೇಸ್​ಬುಕ್​ನಂಥ ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂಸಾಚಾರಕ್ಕೆ ಚಿತಾವಣೆ ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಕ್ಕೂ ಸರ್ಕಾರ ನಿರ್ಧರಿಸಿದೆ.
 • ಶ್ರೀಲಂಕಾದಲ್ಲಿನ ಈ ಬೆಳವಣಿಗೆ ಸಹಜವಾಗಿಯೇ ಭಾರತಕ್ಕೂ ಆತಂಕವುಂಟುಮಾಡಿದೆ. ಭಾರತ-ಶ್ರೀಲಂಕಾ-ಬಾಂಗ್ಲಾದೇಶ ತ್ರಿಕೋನ ಸರಣಿಯ ಕ್ರಿಕೆಟ್ ಪಂದ್ಯಾವಳಿಗೆಂದು ಭಾರತ ತಂಡ ಈಗಾಗಲೇ ಶ್ರೀಲಂಕಾದಲ್ಲಿ ಬೀಡುಬಿಟ್ಟಿರುವುದು ಗೊತ್ತಿರುವ ಸಂಗತಿಯೇ.

ಶುರುವಾಗಿದ್ದು ಹೇಗೆ?

 • 2 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿ ರುವ ಶ್ರೀಲಂಕಾದಲ್ಲಿ ಬೌದ್ಧ ಮತೀಯರದ್ದೇ ಪಾರಮ್ಯ (ಶೇ. 70.2). ಮಿಕ್ಕಂತೆ ಶೇ. 9.7ರಷ್ಟು ಮುಸ್ಲಿಮರು, ಶೇ. 12.6ರಷ್ಟು ಹಿಂದೂಗಳು, ಶೇ. 7.4ರಷ್ಟು ಕ್ರಿಶ್ಚಿಯನ್ನರಿಗೆ ಈ ದ್ವೀಪರಾಷ್ಟ್ರ ನೆಲಸುನಾಡಾಗಿದೆ. ಶ್ರೀಲಂಕಾದ ಕೇಂದ್ರ ಭಾಗದಲ್ಲಿರುವ ಕ್ಯಾಂಡಿ ಜಿಲ್ಲೆ ಯಲ್ಲಿ ಬೌದ್ಧಮತೀಯರೊಬ್ಬರ ಕೊಲೆಯಾಗಿದ್ದು, ಇದಕ್ಕೆ ಮುಸ್ಲಿಮರೇ ಕಾರಣ ಎಂಬ ಆರೋಪದೊಂದಿಗೆ ಕಿತ್ತಾಟ-ಚಕಮಕಿಗಳು ಪ್ರಾರಂಭವಾಗಿ ಪರಿಸ್ಥಿತಿ ತಾರಕಕ್ಕೇರಿತು.

1.ಬಂಡೀಪುರ ಅಭಯಾರಣ್ಯವು ಯಾವ ಇತರ ಅಭಯಾರಣ್ಯಗಳ ಸಮೀಪದಲ್ಲಿದೆ ?

A)ನಾಗರಹೊಳೆ ರಾಷ್ಟ್ರೀಯ

B)ಮುದುಮಲೈ ರಾಷ್ಟ್ರೀಯ ಉದ್ಯಾನವನ

C)ವಯನಾಡು ಅಭಯಾರಣ್ಯ

D) ಮೇಲಿನ ಎಲ್ಲವು

2.ಗಾಳಿಯ ಗುಣಮಟ್ಟ ಸೂಚ್ಯಂಕವು ಒಳಗೊಂಡಿರುವ ಮಾಲಿನ್ಯಕಾರಕಗಳು ಯಾವುವು ?

A)PM10, PM2.5, NO2, SO2

B)CO, O3, NH3, and Pb

C)1 ಮತ್ತು 2

D)ಯಾವುದು ಅಲ್ಲ

3.ಹತ್ತು ವರ್ಷಗಳಲ್ಲಿ ಭಾರತದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 18 ವರ್ಷದೊಳಗಿನ ಮಕ್ಕಳ ವಿವಾಹ ಪ್ರಮಾಣ ಶೇ 47ರಿಂದ ಶೇ 27ಕ್ಕೆ ಇಳಿದಿದೆ. ಈ ವರದಿಯನ್ನು ಯಾವ ಸಂಸ್ಥೆ ನೀಡಿದೆ ?

A)ಯುನೆಸ್ಕೋ

B)ಯೂನಿಸೆಫ್

C)ವಿಶ್ವ ಆರೋಗ್ಯ ಸಂಸ್ಥೆ

D)ಮೇಲಿನ ಯಾವುದು ಅಲ್ಲ

4.ಇನ್ಕ್ರೆಡಿಬಲ್ ಇಂಡಿಯಾ ಎಂಬುದು ಯಾವುದಕ್ಕೆ ಸಂಬಂಧಪಟ್ಟಿದೆ?

A)ಪ್ರವಾಸೋದ್ಯಮ

B)ಕೈಗಾರಿಕೋದ್ಯಮ

C)೧ ಮತ್ತು ೨

D)ಯಾವುದು ಅಲ್ಲ

5)ಯಾವ ದ್ವೀಪ ರಾಷ್ಟ್ರ ದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ?

A)ಮಾಲ್ಡೀವ್ಸ್

B) ಮಾರಿಷಸ್

C)ಶ್ರೀಲಂಕಾ

D)ಸಿಂಗಪೋರ್

6) 1993ರಿಂದ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕ್ಯಾನ್ಸರ್ ದಿನವನ್ನು ಯಾವ ತಿಂಗಳಲ್ಲಿ ಆಚರಿಸಲಾಗುತ್ತದೆ?  

A)ಫೆಬ್ರುವರಿ 01

B) ಫೆಬ್ರುವರಿ 04

C) ಫೆಬ್ರುವರಿ 14

D) ಫೆಬ್ರುವರಿ 28.

7)ಜಾಗತಿಕವಾಗಿ ವಿದೇಶಾಂಗ ನೀತಿಯಲ್ಲಿ ಆಲಿಪ್ತನೀತಿಯನ್ನು ವಿಶ್ವಕ್ಕೆ ಪರಿಚಯಿಸಿದ ದೇಶ ಯಾವುದು?

A) ಜಪಾನ್

B) ಭಾರತ

C) ಚೀನಾ

D) ಬ್ರಿಟನ್

8. ಸಂಸತ್ತಿನಲ್ಲಿ ಯಾವ ವೇಳೆಯಲ್ಲಿ ಮಸೂದೆ ಮಂಡಿಸುವರು?

A)ಪ್ರಶ್ನೋತ್ತರ  ಕಾಲ

B)ಶೂನ್ಯ ವೇಳೆ

C)ಭೋಜನ ವಿರಾಮದ ನಂತರ    

D)ಯಾವುದು ಅಲ್ಲಾ

9. ಜನಮತ ಸಂಗ್ರಹ” ಎಲ್ಲಿ ಕಂಡು ಬರುತ್ತದೆ.

A)ಜನತಾ  ನ್ಯಾಯಾಲಯ

B)ಪರೋಕ್ಷ ಪ್ರಜಾಪ್ರಭುತ್ವ

C)ಪ್ರತ್ಯಕ್ಷ  ಪ್ರಜಾಪ್ರಭುತ್ವ

D)ಸೀಮಿತ ರಾಜತಂತ್ರ

10. ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳು ಯಾವುವು?

A)ಇಂಗ್ಲೀಷ್,ಫ್ರೆಂಚ್,ರಶಿಯನ್

B)ಜಮ೯ನ್,ಫ್ರೆಂಚ್,ಇಂಗ್ಲೀಷ್

C)ಹಿಂದಿ,ಫ್ರೆಂಚ್,ಚೀನಿ

D)ಫ್ರೆಂಚ್,ಇಂಗ್ಲೀಷ್,ಚೀನೀಸ್,ರಶಿಯನ್,ಅರೇಬಿಕ್,ಸ್ಪ್ಯಾನಿಷ್

Answers

1 – D

2 – C

3 – B

4 – A

5 – C

6 – B

7 – B

8 – C

9 – B

10 – D

 

 

 

 

 

 

 

 

Related Posts
National Court of Appeal 1. What is a National Court of Appeal? The National Court Appeal with regional benches in Chennai, Mumbai and Kolkata is meant to act as final court of ...
READ MORE
Karnataka Current Affairs- KAS/KPSC Exams- 17th Oct 2017
Schools to be penalised if they fail to implement Kannada phase-wise Students from other States who enrol in schools in Karnataka between classes two and eight will have to study class ...
READ MORE
National Power Tariff Policy
Union Cabinet has approved several amendments to the national power tariff policy with a view to promote renewable energy and improve the ease of doing business for developers in the ...
READ MORE
National Current Affairs – UPSC/KAS Exams- 13th July 2018
Article 35 Context: The Centre has decided not to file any “counter-affidavit” on Article 35A, which has been challenged in the Supreme Court through a Public Interest Litigation (PIL) petition. About Article ...
READ MORE
“21st ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮಲಬಾರ್ ಬಾಂಡೆಡ್ ಪಿಕಾಕ್ ಸುದ್ಧಿಯಲ್ಲಿ ಏಕಿದೆ ?ನವಿಲಿನ ಬಣ್ಣದ ಚಿಟ್ಟೆ  ‘ಮಲಬಾರ್ ಬಾಂಡೆಡ್ ಪಿಕಾಕ್’ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿದೆ ಅಗಲ ರೆಕ್ಕೆಯಲ್ಲಿ ಬಾಲ ಆಕರ್ಷಕವಾಗಿದೆ. ನೀಲಿ, ನೇರಳೆ, ಹಸಿರು ಮಿಶ್ರಿತ ಬಣ್ಣ, ರೆಕ್ಕೆ ಬಿಚ್ಚಿ ಕುಳಿತಾಗ ಇದರ ಚೆಲುವು ಕಣ್ತುಂಬಿಕೊಳ್ಳುವುದೇ ಆನಂದ. ಹೆಮ್ಮೆಯ ವಿಚಾರವೆಂದರೆ ...
READ MORE
Karnataka Current Affairs – KAS/KPSC Exams – 5th October 2018
Push for rooftop solar power generation Bengaluru’s apartment complexes are joining hands to give a boost to solar power generation through rooftop plants. The Bangalore Apartments' Federation (BAF) has launched a city-wide ...
READ MORE
National Current Affairs – UPSC/KAS Exams- 3rd November 2018
Turga Pumped Storage in West Bengal Topic: Infrastructure Development IN NEWS: India and Japan  signed a loan agreement of Rs 1,817 crore for the construction of the Turga Pumped Storage in West ...
READ MORE
Karnataka Current Affairs – KAS / KPSC Exams – 27th July 2017
Kukkarahalli lake revival inches closer to reality Ecological conservation and rejuvenation of the Kukkarahalli lake – as against its beautification from tourism point of view – is inching towards reality. The district ...
READ MORE
Karnataka: Make in India meet concludes
The Make in India – Karnataka conference concluded in Bengaluru on Tuesday. Aimed at re-energising the industry and boosting the manufacturing sector, the conference saw the participation of more than 5,000 ...
READ MORE
“23rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬಹು ಅಂಚೆ ಸೇವೆಗಳಿಗೆ ಏಕ ತಂತ್ರಜ್ಞಾನ ಭಾರತೀಯ ಅಂಚೆ ಇಲಾಖೆಯು ರಾಜ್ಯದ ಎಲ್ಲಾ ಅಂಚೆ ಕಚೇರಿಗಳಲ್ಲಿ 'ಕೋರ್‌ ಸಿಸ್ಟಂ ಇಂಟಿಗ್ರೇಟರ್‌' ಎಂಬ ನೂತನ ಸಾಫ್ಟ್‌ವೇರ್‌ ಅಳವಡಿಸುವ ಮೂಲಕ ಹಲವು ಅಂಚೆ ಸೇವೆಗಳಿಗೆ ಬೇರೆ ಬೇರೆಯಾಗಿದ್ದ ತಂತ್ರಾಂಶಗಳನ್ನು ರದ್ದುಪಡಿಸಿ, ಇದೀಗ ಏಕ ವ್ಯವಸ್ಥೆ ಅಳವಡಿಸಿಕೊಂಡಿದೆ. ಉಳಿತಾಯ ...
READ MORE
All you need to know about National Court
Karnataka Current Affairs- KAS/KPSC Exams- 17th Oct 2017
National Power Tariff Policy
National Current Affairs – UPSC/KAS Exams- 13th July
“21st ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams – 5th
National Current Affairs – UPSC/KAS Exams- 3rd November
Karnataka Current Affairs – KAS / KPSC Exams
Karnataka: Make in India meet concludes
“23rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *