7th & 8th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಸೈಬರ್ ಕ್ರೈಂ

 • ಸುದ್ಧಿಯಲ್ಲಿ ಏಕಿದೆ? ಭಯೋತ್ಪಾದನೆಯಷ್ಟೇ ಗಂಭೀರ ಸ್ವರೂಪದಲ್ಲಿ ದೇಶವನ್ನಾವರಿಸುತ್ತಿರುವ ಸೈಬರ್ ಕ್ರೈಂ ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ.
 • ಜನಸಾಮಾನ್ಯರ ನಿತ್ಯಜೀವನದ ಮೇಲೆ ಅಂತರ್ಜಾಲ ಬೀರುತ್ತಿರುವ ಪ್ರಭಾವದ ತೀವ್ರತೆಯನ್ನು ಪರಿಗಣಿಸಿ ಸೈಬರ್ ಅಪರಾಧಗಳನ್ನು ಇನ್ನು ರಾಷ್ಟ್ರೀಯ ಅಪರಾಧಗಳ ದಾಖಲೆ ಸಂಸ್ಥೆಯ (ಎನ್​ಸಿಆರ್​ಬಿ)ಮಾಹಿತಿ ಸಂಗ್ರಹಾಗಾರದಲ್ಲಿ ಸೇರಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.
 • ಒಟಿಪಿ ವಂಚನೆ ಸೇರ್ಪಡೆ:ಈವರೆಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ವಂಚನೆಯ ಅಪರಾಧಗಳ ಮಾಹಿತಿಯನ್ನಷ್ಟೇ ಎನ್​ಸಿಆರ್​ಬಿ ಸಂಗ್ರಹಿಸುತ್ತಿತ್ತು, ಇನ್ಮುಂದೆ ಎಟಿಎಂ ಮೂಲಕ ವಂಚನೆ, ಆನ್​ಲೈನ್ ಬ್ಯಾಂಕಿಂಗ್ ಹಗರಣಗಳು, ಒಟಿಪಿ ವಂಚನೆ ಅಪರಾಧಗಳು ಪ್ರತ್ಯೇಕವಾಗಿ ಪಟ್ಟಿ ಮಾಡಿ, ಅವುಗಳ ಮಾಹಿತಿಯನ್ನು ದತ್ತಾಂಶ ಸಂಗ್ರಹದಲ್ಲಿ ಸೇರ್ಪಡೆಗೊಳಿಸಲು ಎನ್​ಸಿಆರ್​ಬಿ ಮುಂದಾಗಿದೆ.
 • ನೆಟ್ ಪ್ಯಾಕ್ ಪರಿಣಾಮ : ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿಯಿಂದಾಗಿ ಇಂಟರ್ನೆಟ್ ಪ್ಯಾಕ್​ಗಳು ಅಗ್ಗದ ಬೆಲೆಗೆ ಸಿಗುತ್ತಿರುವುದರಿಂದ ಸೈಬರ್ ಕ್ರೖೆಂ ಹೆಚ್ಚಾಗುತ್ತಿರುವುದನ್ನು ಹಲವು ಸಂಶೋಧನೆ ಹಾಗೂ ಅಪರಾಧ ಪ್ರಕರಣಗಳ ದಾಖಲೆಗಳು ದೃಢಪಡಿಸಿವೆ.
 • ಅಂತರ್ಜಾಲವನ್ನು ಚಟವಾಗಿಸಿಕೊಂಡವರು ಅದನ್ನು ದುರ್ಬಳಕೆ ಮಾಡಿಕೊಂಡು ಚಿತ್ರ, ವಿಡಿಯೋಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದರಿಂದ ಹಲವು ಅಮಾಯಕರು ಆತ್ಮಹತ್ಯೆಗೆ ಶರಣಾಗಿದ್ದೂ ಇದೆ.
 • ರಾಜ್ಯದಲ್ಲೂ ನಿಗಾ: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಸೂಚನೆಯಂತೆ ರಾಜ್ಯ ಪೊಲೀಸ್ ಇಲಾಖೆಯ ಸೈಬರ್ ಕ್ರೖೆಂ ಘಟಕ ಸಾಮಾಜಿಕ ಜಾಲತಾಣದ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ಮೇಲ್ವಿಚಾರಣೆ ನಡೆಸಲು ಮುಂದಾಗಿದೆ.
 • ಅನವಶ್ಯಕವಾಗಿ ಸಂದೇಶಗಳನ್ನು ಕಳುಹಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಎಲ್ಲ ದೂರ ಸಂಪರ್ಕಗಳ ಮಾಹಿತಿಯನ್ನು ದಾಖಲಿಸಿಕೊಳ್ಳಲು ಸೈಬರ್ ಘಟಕ ಕ್ರಮ ಕೈಗೊಂಡಿದೆ.
 • ದೇಶಾದ್ಯಂತ ಹಲವಾರು ರೀತಿಯ ಸೈಬರ್ ಅಪರಾಧಗಳು ನಡೆಯುತ್ತಿವೆ. ಇವುಗಳ ಪೂರ್ಣ ಮಾಹಿತಿ ಕಲೆ ಹಾಕುವುದರಿಂದ ನಿರ್ದಿಷ್ಟವಾಗಿ ಯಾವ ರೀತಿಯ ಅಪರಾಧ ಹೆಚ್ಚಿದೆ ಎಂಬುದು ತಿಳಿಯುತ್ತದೆ. ಇದರಿಂದ ಸರ್ಕಾರ ಮತ್ತು ಕಾನೂನು ಸಂಸ್ಥೆಗಳಿಗೆ ಅಪರಾಧ ನಿಯಂತ್ರಿಸಲು ನೆರವಾಗುತ್ತದೆ.
 • ತನಿಖೆಗೆ ಟ್ರಾ್ಯಕಿಂಗ್ ನೆರವು : ನಕಲಿ ಆನ್​ಲೈನ್ ಖಾತೆ ಸೃಷ್ಟಿಸಿ ಅಪರಾಧ ಎಸಗುವವರ ಸಂಖ್ಯೆ ಹೆಚ್ಚಳವಾಗಿರುವುದು ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿದೆ. ಇದರ ನಿಯಂತ್ರಣಕ್ಕಾಗಿ ‘ಅಪರಾಧ ಮತ್ತು ಅಪರಾಧಿಗಳ ಟ್ರಾ್ಯಕಿಂಗ್ ನೆಟ್​ವರ್ಕ್ಸ್ ಮತ್ತು ಸಿಸ್ಟಮ್್ಸ ’ ಹೆಸರಿನಲ್ಲಿ ಯೋಜನೆಯನ್ನು ಸರ್ಕಾರ ಆರಂಭಿಸಿದೆ.
 • ಇದರಲ್ಲಿ ದೇಶಾದ್ಯಂತ ನಡೆದ ಎಲ್ಲ ರೀತಿಯ ಆನ್​ಲೈನ್ ಅಪರಾಧಗಳು, ಅಪರಾಧಿಗಳ ವಿಸõತ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ಐಟಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಕೆಲವು ಕಾನೂನು ಅನ್ವಯ ಸೈಬರ್ ಅಪರಾಧಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.

ಸುಳ್ಳುಸುದ್ದಿ ತಡೆಯಿರಿ, -ಠಿ; 34 ಲಕ್ಷ ಗೆಲ್ಲಿ!

 • ಸುಳ್ಳು ಸಂದೇಶಗಳ ರವಾನೆಯಿಂದಾಗುತ್ತಿರುವ ಅನಾಹುತ ತಡೆಯಲು ಮುಂದಾಗಿರುವ ವಾಟ್ಸ್​ಆಪ್, ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುವವರಿಗೆ 50 ಸಾವಿರ ಡಾಲರ್​ವರೆಗೆ (-ಠಿ; 34.43 ಲಕ್ಷ ) ಧನಸಹಾಯ ನೀಡುವುದಾಗಿ ಘೋಷಿಸಿದೆ.

ಯಾವ್ಯಾವ ಮಾಹಿತಿ ಸಂಗ್ರಹ?

 • ಕೇಂದ್ರ ಗೃಹ ಸಚಿವಾಲಯದ ಭಾಗವಾಗಿರುವ ಎನ್​ಸಿಆರ್​ಬಿ ಈಗಾಗಲೇ ನಕಲಿ ಆನ್​ಲೈನ್ ಬಳಕೆದಾರರ ಖಾತೆಗಳು (ಟ್ರೋಲ್​ಗಳು), ಆನ್​ಲೈನ್​ನಲ್ಲಿ ಮಾನನಷ್ಟದ ಪ್ರಕರಣಗಳು, ಆನ್​ಲೈನ್ ವಂಚನೆ, ಸೈಬರ್ ಪೀಡನೆ (ಅಂತರ್ಜಾಲದಲ್ಲಿ ಕೆಲವರನ್ನು ಗುರಿಯಾಗಿಸಿ ದೌರ್ಜನ್ಯ), ಆನ್​ಲೈನ್ ಜೂಜಾಟ ಮತ್ತು ಆನ್​ಲೈನ್ ಪ್ರಚೋದನೆಯಿಂದ ಆತ್ಮಹತ್ಯೆ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾರಂಭಿಸಿದೆ.
 • ಆ ಮೂಲಕ ದೇಶಾದ್ಯಂತ ನಡೆಯುವ ಅಪರಾಧಗಳ ಮಾಹಿತಿ ಸಂಗ್ರಹದಲ್ಲಿ ಕ್ಷೇತ್ರಗಳನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ. ಮುಂದಿನ ಕೆಲ ತಿಂಗಳಲ್ಲಿ ದೇಶಾದ್ಯಂತ ನಡೆದ ಈ ಎಲ್ಲ ಪ್ರಕರಣಗಳು ಒಳಗೊಂಡ ವರದಿಯನ್ನು ಎನ್​ಸಿಆರ್​ಬಿ ಬಿಡುಗಡೆ ಮಾಡಲಿದೆ. ಇದುವರೆಗೂ ರಾಷ್ಟ್ರೀಯ ಮಟ್ಟದಲ್ಲಿ ಆನ್​ಲೈನ್ ಅಪರಾಧಗಳ ದಾಖಲೆಗಳನ್ನು ಸಂಗ್ರಹಿಸುವ ವ್ಯವಸ್ಥೆ ಇರಲಿಲ್ಲ.

ಪರಿಣಾಮಗಳೇನು?

 • ಫೇಸ್​ಬುಕ್, ವಾಟ್ಸ್​ಆಪ್​ನಲ್ಲಿ ಹರಿದಾಡುತ್ತಿರುವ ಹಳೆಯ ವಿಡಿಯೋಗಳಿಂದಾಗಿ ಮಕ್ಕಳ ಕಳ್ಳತನ ವದಂತಿ ಸೃಷ್ಟಿಯಾಗಿ ದೇಶಾದ್ಯಂತ ಹತ್ತಾರು ಅಮಾಯಕರು ಹತ್ಯೆಗೀಡಾಗಿದ್ದಾರೆ.
 • ಬದುಕಿರುವವರನ್ನು ಸತ್ತರೆಂದು ಬಿಂಬಿಸಿದ ಹಲವು ಸಂದೇಶ ಹರಿದಾಡಿದ ಬಳಿಕ ಆಸ್ಪತ್ರೆಯಲ್ಲಿದ್ದವರೇ ಬೆಡ್ ಮೇಲೆ ಎದ್ದು ಕುಳಿತು ತಾನಿನ್ನೂ ಬದುಕಿದ್ದೇನೆಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
 • ಚುನಾವಣೆ ಸಂದರ್ಭದಲ್ಲಿ ನಕಲಿ ವಿಡಿಯೋ ಕ್ಲಿಪ್​ಗಳನ್ನು ಬಳಸಿಕೊಂಡು ಅಪಪ್ರಚಾರ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಮಕ್ಕಳ ದೌರ್ಜನ್ಯಕ್ಕೆ ಜೈಲು

 • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಂಡಿರುವ ಕೇಂದ್ರ ಸರ್ಕಾರ, ಮಕ್ಕಳನ್ನು ಅಶ್ಲೀಲ ವಿಡಿಯೋ ಅಥವಾ ಫೋಟೋಗೆ ಬಳಸಿಕೊಳ್ಳುವ ಜತೆಗೆ ಇಂತಹ ದೃಶ್ಯ ಅಥವಾ ಛಾಯಾಚಿತ್ರಗಳನ್ನು ಹೊಂದಿ ಅದನ್ನು ಮತ್ತೊಬ್ಬರಿಗೆ ರವಾನಿಸಿದವರನ್ನೂ ಶಿಕ್ಷೆಗೆ ಗುರಿಪಡಿಸಲು ಮುಂದಾಗಿದೆ.
 • 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಕ್ಕಳ ಅಶ್ಲೀಲ ಚಿತ್ರ, ವಿಡಿಯೋವನ್ನು ಹೊಂದುವುದು ಮತ್ತು ರವಾನಿಸುವವರಿಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನಿನ ಪ್ರಸ್ತಾವನೆಯನ್ನು ಅಂತಿಮಗೊಳಿಸಿದೆ.
 • ರಾಸಾಯನಿಕಗಳನ್ನು ನೀಡಿ ಮಕ್ಕಳನ್ನು ಅನೈಸರ್ಗಿಕವಾಗಿ ಪ್ರೌಢಾವಸ್ಥೆಗೆ ತರುವುದು ಅಥವಾ ಅಂಗಾಂಗಗಳನ್ನು ಪ್ರಚೋದನಕಾರಿಯಾಗುವಂತೆ ಮಾಡುವವರನ್ನು ಕಾರಾಗೃಹಕ್ಕೆ ಹಾಕುವ ತಿದ್ದುಪಡಿಯನ್ನು ಸಚಿವಾಲಯ ಈ ಪ್ರಸ್ತಾವನೆಯಲ್ಲಿ ಸೇರಿಸಿದೆ.
 • ಮಕ್ಕಳಿಗೆ ಆಶ್ರಯ ನೀಡುವ ಬಾಲಮಂದಿರ ಇನ್ನಿತರ ಸಂಸ್ಥೆಗಳು ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ದೂಡಿದರೆ ಕನಿಷ್ಠ 20 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ರೂಪಿಸಿದೆ. ಇದಕ್ಕೆ ಗೃಹ ಸಚಿವಾಲಯ ಸಮ್ಮತಿಸಿದ್ದು, ಪ್ರಸ್ತಾವನೆ ಶೀಘ್ರ ಸಚಿವ ಸಂಪುಟದ ಮುಂದೆ ಬರುವ ನಿರೀಕ್ಷೆ ಇದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಕಛೇರಿ (ಎನ್ಸಿಆರ್ಬಿ) ಬಗ್ಗೆ

 • ಅಪಘಾತಗಳು, ದೇಶದ ಎಲ್ಲಾ ರಾಜ್ಯಗಳ ಆತ್ಮಹತ್ಯೆಗಳು ಮತ್ತು ನೀತಿ ವಿಷಯಗಳು ಮತ್ತು ಸಂಶೋಧನೆಗಾಗಿ ಕಾರಾಗೃಹಗಳು ಸೇರಿದಂತೆ ವಿವಿಧ ಮಾನದಂಡಗಳ ಮೇಲೆ ಅಪರಾಧದ ಮಾಹಿತಿಯ ಅಧಿಕೃತ ಮೂಲಕ್ಕಾಗಿ ಕೇಂದ್ರ ಗೃಹ ಸಚಿವಾಲಯದಲ್ಲಿ NCRB ಯು ನೋಡಾಲ್ ಸಂಸ್ಥೆಯಾಗಿದೆ.
 • ಇದನ್ನು 11 ಮಾರ್ಚ್ 1986 ರಂದು ಕೇಂದ್ರೀಯ ಪೊಲೀಸ್ ಸಂಘಟನೆಯಾಗಿ ಸ್ಥಾಪಿಸಲಾಯಿತು. ಇದು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.
 • ರಾಷ್ಟ್ರೀಯ ಇ-ಗವರ್ನನ್ಸ್ ಯೋಜನೆಯ ಸರ್ಕಾರದ ಅಡಿಯಲ್ಲಿ ಮಿಷನ್ ಮೋಡ್ ಪ್ರಾಜೆಕ್ಟ್ ಕ್ರೈಮ್ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಮ್ (ಸಿಸಿಟಿಎನ್ಎಸ್) ಅನ್ನು ಇದು ಜಾರಿಗೊಳಿಸುತ್ತದೆ ಮತ್ತು ಮೇಲ್ವಿಚಾರಣೆ ನಡೆಸುತ್ತಿದೆ.
 • ಇದು ಇಂಡಿಯನ್ ಪೋಲಿಸ್ ಅಧಿಕಾರಿಗಳಿಗೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಫಿಂಗರ್ ಪ್ರಿಂಟ್ ಸೈನ್ಸ್ನಲ್ಲಿ ತರಬೇತಿಯನ್ನು ನೀಡುತ್ತದೆ. NCRB ಅಪರಾಧ, ಜೈಲು ಅಂಕಿಅಂಶ, ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು ಮತ್ತುಫಿಂಗರ್ ಪ್ರಿಂಟ್ಸ್ನಲ್ಲಿ 4 ವಾರ್ಷಿಕ ಪ್ರಕಟಣೆಯನ್ನು ಪ್ರಕಟಿಸುತ್ತದೆ.
 • ಈ ಪ್ರಕಟಣೆಗಳು ಅಪರಾಧ ಸಂಖ್ಯಾಶಾಸ್ತ್ರದ ಪ್ರಮುಖ ಉಲ್ಲೇಖದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.

ಷರಿಯತ್ ನ್ಯಾಯಾಲಯ 

 • ಸುದ್ಧಿಯಲ್ಲಿ ಏಕಿದೆ? ಸಮಾನ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರತಿ ಜಿಲ್ಲೆಯಲ್ಲೂ ಷರಿಯತ್ (ಮುಸ್ಲಿಂ ವೈಯಕ್ತಿಕ ಕಾನೂನು) ಕೋರ್ಟ್​ಗಳನ್ನು ಸ್ಥಾಪಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್​ಬಿ) ಚಿಂತನೆ ನಡೆಸಿದೆ.
 • ‘ದರುಲ್-ಖ್ವಾಜಾ’ ಎಂದು ಕರೆಯಲಾಗುವ ಈ ಸಾಂಪ್ರದಾಯಿಕ ಕೋರ್ಟ್​ಗಳು ಮುಸ್ಲಿಂ ವೈಯಕ್ತಿಕ ಕಾನೂನಿನಡಿ ತಕರಾರುಗಳನ್ನು ಬಗೆಹರಿಸಲಿವೆ.
 • ಪ್ರಸ್ತುತ ಉತ್ತರ ಪ್ರದೇಶದಲ್ಲಿ ಇಂತಹ 40 ಕೋರ್ಟ್​ಗಳು ಸಕ್ರಿಯವಾಗಿವೆ. ಇದೇ ಮಾದರಿಯ ಕೋರ್ಟ್​ಗಳನ್ನು ದೇಶಾದ್ಯಂತ ಪ್ರತಿ ಜಿಲ್ಲಾ ಕೇಂದ್ರದಲ್ಲೂ ತೆರೆಯುವ ಚಿಂತನೆಯಿದೆ ಇದೆ. ತಕರಾರುಗಳನ್ನು ಬಗೆಹರಿಸಿಕೊಳ್ಳಲು ಸಮುದಾಯದವರು ಅನ್ಯ ಸಂಸ್ಥೆಗಳ ಮೊರೆ ಹೋಗುವ ಬದಲು ಧರ್ವಧಾರಿತ ಈ ಕೋರ್ಟ್​ನಲ್ಲೇ ಪರಿಹಾರ ಕಂಡುಕೊಳ್ಳಲಿ ಎಂಬುದು ಉದ್ದೇಶ.
 • ಷರಿಯತ್ ಕೋರ್ಟ್​ಗಳ ಜತೆಗೆ ತಾಫೀಮ್​ಎ-ಷರಿಯತ್ ಸಮಿತಿಗಳನ್ನು (ಟಿಇಎಸ್) ಸಹ ಸಕ್ರಿಯಗೊಳಿಸಲಾಗುವುದು. ಒಂದು ಷರಿಯತ್ ಕೋರ್ಟ್ ನಿರ್ವಹಣೆಗೆ -ಠಿ; 50 ಸಾವಿರ ವೆಚ್ಚವಾಗುತ್ತದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಇಂತಹ ಕೋರ್ಟ್ ತೆರೆಯಲು ಬೇಕಾಗುವ ಆರ್ಥಿಕ ಸಂಪನ್ಮೂಲದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಮುಸ್ಲಿಮರ ಕೆಲವು ಪಂಗಡದ ವ್ಯಕ್ತಿಗಳು ರಾಮಮಂದಿರದ ಪರವಾಗಿ ಇದ್ದಾರೆ.

ಷರಿಯತ್ ಕೋರ್ಟ್ ಎಂದರೇನು?

 • ಭಾರತದಲ್ಲಿ ಮುಸ್ಲಿಮ್ ದೊರೆಗಳ ಆಡಳಿತದಲ್ಲಿ ಇದ್ದ ನ್ಯಾಯಿಕ ವ್ಯವಸ್ಥೆಯೆ ಷರಿಯತ್. ಇದು ಮುಸ್ಲಿಮರ ವೈಯಕ್ತಿಕ ಕಾನೂನಿನ ಅನ್ವಯ ನಡೆಯುತ್ತಿತ್ತು. ಮುಫ್ತಿ ಮತ್ತು ಉಲೆಮಾಗಳು ಧರ್ಮ ಸೂಕ್ಷ್ಮಗಳನ್ನು ರ್ತಸಿ ನ್ಯಾಯನಿರ್ಣಯಕ್ಕೆ ಸಹಾಯ ಮಾಡುತ್ತಿದ್ದರು.
 • 1937ರಲ್ಲಿ ಬ್ರಿಟಿಷ್ ಆಡಳಿತ ಮುಸ್ಲಿಮರ ವೈಯಕ್ತಿಕ ಕಾನೂನು (ಷರಿಯತ್) ಅನ್ವಯ ಕಾಯ್ದೆ ಜಾರಿಗೊಳಿಸಿತು. ಇದರ ಅನ್ವಯ ತಕರಾರುಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಕಾನೂನಿನ ಮಾನ್ಯತೆ ದೊರೆಯಿತು.
 • ಕೆಲವು ಮುಸ್ಲಿಮರು ಹಿಂದು ಪದ್ಧತಿ ಆಚರಣೆ ಮಾಡುತ್ತಿದ್ದ ಕಾರಣ ಅದನ್ನು ತಪ್ಪಿಸಿ, ಮುಸ್ಲಿಮರ ನೀತಿ ಸಂಹಿತೆಯಾದ ಷರಿಯತ್ ಪಾಲಿಸಲು ಕಾಯ್ದೆ ರೂಪಿಸಲು ಮುಸ್ಲಿಂ ಮುಖಂಡರು ಒತ್ತಾಯಿಸಿದ ಕಾರಣ ಈಸ್ಟ್ ಇಂಡಿಯಾ ಕಂಪನಿ ಈ ಕಾಯ್ದೆಗೆ ಅನುಮೋದನೆ ನೀಡಿತು.
 • 1973ರಲ್ಲಿ ಷರಿಯತ್ ರಕ್ಷಣೆಗಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು ರಚಿಸಲಾಯಿತು. ಇದರಲ್ಲಿ ಮುಸ್ಲಿಮರ ವಿವಿಧ ಪಂಗಡಗಳ ಮುಖಂಡರು, ಮೌಲ್ವಿಗಳು, ವಕೀಲರು, ರಾಜಕಾರಣಿಗಳು ಇರುತ್ತಾರೆ.

ಏನಿದು ಟಿಇಎಸ್?

 • ತಾಫೀಮ್​ಎ-ಷರಿಯತ್ ಸಮಿತಿಗಳು (ಟಿಇಎಸ್) 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಇದು ಷರಿಯತ್ ಕೋರ್ಟ್​ಗೆ ನ್ಯಾಯಾಧಿಪತಿ ಮತ್ತು ವಕೀಲರನ್ನು ನೇಮಿಸುತ್ತವೆ. ಷರಿಯತ್ ಕೋರ್ಟ್, ಮುಸ್ಲಿಂ ವೈಯಕ್ತಿಕ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಸಮ್ಮೇಳನ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತದೆ.

ಬಾಲ್ಯವಿವಾಹ ಕಾಯ್ದೆ

 • ಸುದ್ಧಿಯಲ್ಲಿ ಏಕಿದೆ? ದೇಶಾದ್ಯಂತ ನಡೆಯುತ್ತಿರುವ ಬಾಲ್ಯ ವಿವಾಹ ತಡೆಯಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ, ಈಗ ಮತ್ತಷ್ಟು ಕಠಿಣ ಕಾನೂನು ಜಾರಿಗೊಳಿಸಲು ನಿರ್ಧರಿಸಿದೆ.
 • ಇನ್ನು ಮುಂದೆ ನಡೆಯುವ ಎಲ್ಲ ಬಾಲ್ಯವಿವಾಹವನ್ನು ಅಸಿಂಧುಗೊಳಿಸುವ ಹೊಸ ಕಾನೂನನ್ನು ಸರ್ಕಾರ ರೂಪಿಸುತ್ತಿದೆ. ಹೆಣ್ಣುಮಕ್ಕಳ ಹಿತದೃಷ್ಟಿಯಿಂದ ಬಾಲ್ಯವಿವಾಹಕ್ಕೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತರಲು ತೀರ್ವನಿಸಲಾಗಿದೆ.
 • ಈಗಿರುವ ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯ ವಿವಾಹ ಅಪರಾಧವಾದರೂ ವಿವಾಹವಾದ ಬಾಲ ದಂಪತಿ ಒಪ್ಪಿಗೆ ನೀಡಿದರೆ ಮದುವೆ ಸಿಂಧು ಎನಿಸಿಕೊಳ್ಳುತ್ತದೆ. ಮದುವೆಯ ಬಗ್ಗೆ ಅವರು ತಕರಾರು ಎತ್ತಿದಲ್ಲಿ ಮಾತ್ರ ಕಾನೂನು ಪ್ರಕ್ರಿಯೆ ನಡೆಯಲಿದೆ. ಆಗ ವಿವಾಹ ಕಾನೂನಿನ ದೃಷ್ಟಿಯಲ್ಲಿ ಮಾನ್ಯತೆ ಕಳೆದುಕೊಳ್ಳಲಿದೆ. ಇಂದು ಈ ಕಾನೂನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
 • ಬಾಲ್ಯವಿವಾಹವಾದ ಹೆಣ್ಣುಮಕ್ಕಳ ಮೇಲೆ ದೈಹಿಕ ದೌರ್ಜನ್ಯ, ಶೋಷಣೆ ಪ್ರಕರಣಗಳು ಹಲವು ಕಡೆ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಈಗ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ.

ಬಾಲ್ಯವಿವಾಹದಲ್ಲಿ ಇಳಿಮುಖ

 • ಯುನಿಸೆಫ್ ನೀಡಿರುವ ಅಂಕಿಅಂಶದ ಪ್ರಕಾರ, ಅತಿ ಹೆಚ್ಚು ಬಾಲ್ಯವಿವಾಹ ನಡೆಯುತ್ತಿರುವ ದೇಶಗಳ ಪೈಕಿ ಭಾರತ ವಿಶ್ವದಲ್ಲಿ 3ನೇ ಸ್ಥಾನದಲ್ಲಿದೆ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಬಾಲ್ಯವಿವಾಹ ಇಳಿಮುಖವಾಗಿದೆ. ಕಳೆದ ದಶಕದಲ್ಲಿ ಶೇ. 47 ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದರು. ಈಗ ಸಂಖ್ಯೆ ಶೇ.27ಕ್ಕೆ ಇಳಿದಿದೆ. ಈಗ ಪ್ರತಿ ವರ್ಷ ಸುಮಾರು 15 ಲಕ್ಷ ಬಾಲಕಿಯರನ್ನು 18 ವರ್ಷ ತುಂಬುವುದರೊಳಗೆ ವಿವಾಹ ಮಾಡಲಾಗುತ್ತಿದೆ.

ಕರ್ನಾಟಕದ ಪಾಲು ಶೇ 23.2

 • ದೇಶದಲ್ಲಿ ಅತಿಹೆಚ್ಚು ಬಾಲ್ಯವಿವಾಹ ನಡೆಯುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಮೊದಲ ಎರಡು ಸ್ಥಾನ ಪಡೆದಿವೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಳೆದ ವರ್ಷ ನೀಡಿರುವ ಅಂಕಿ-ಅಂಶ ಪ್ರಕಾರ ಕರ್ನಾಟಕದಲ್ಲಿ ಶೇ 23.2 ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇದು ಅವ್ಯಾಹತವಾಗಿ ನಡೆಯುತ್ತಿದೆ.

ಓಬಿರಾಯನ ಕಾಲದ ಕಾಯ್ದೆ

 • ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು 1929ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿತ್ತು. ಇದರ ಅನ್ವಯ 18 ವರ್ಷದ ಹುಡುಗ ಹಾಗೂ 14 ವರ್ಷದ ಹುಡುಗಿ ವಿವಾಹಕ್ಕೆ ಅರ್ಹರಾಗಿದ್ದರು. 2006ರಲ್ಲಿ ಇದಕ್ಕೆ ತಿದ್ದುಪಡಿ ತಂದು ವಯೋಮಿತಿಯನ್ನು ಕ್ರಮವಾಗಿ 21 ಹಾಗೂ 18ಕ್ಕೆ ಏರಿಸಲಾಗಿದೆ.
Related Posts
Karnataka MobileOne bags award
Karnataka MobileOne, the flagship application launched by the State government in 2014, bagged the Gold award at the World Governance Summit in Dubai Secretary, Department of e-Governance, Srivatsa Krishna, received the ...
READ MORE
The IS claims to be more than a militant group, selling itself as a government for the world’s Muslims that provides a range of services in the territory it controls. The ...
READ MORE
PSLV-C31 launches IRNSS-1E
PSLV-C31 successfully put into orbit IRNSS-1E, the fifth satellite of the Indian Regional Navigation Satellite System (IRNSS) after its succesful launch from the Satish Dhawan Space Centre (SDSC), SHAR, Sriharikota PSLV-C31 ...
READ MORE
Karnataka Current Affairs – KAS/KPSC Exams – 13th March 2018
Only 22% municipal soild waste processed in state Of the 36.50 lakh metric tonnes of municipal solid waste (MSW) generated in Karnataka per annum, only 22% is being processes, according to ...
READ MORE
Karnataka Current Affairs – KAS/KPSC Exams – 19th July 2018
Namma Metro pushes to Kannada literature Kannada language and literature is all set to get a presence on Namma Metro. If all goes as per plan, the Vijayanagar metro station will have ...
READ MORE
Karnataka Current Affair – KAS/KPSC Exams – 1st October 2018
Good Samaritan Bill gets President’s nod President Ram Nath Kovind has given his assent to the Karnataka Good Samaritan and Medical Professional (Protection and Regulation During Emergency Situations) Bill, 2016. The President gave assent ...
READ MORE
“15th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ನೀರು ನಿರ್ವಹಣೆ ಸೂಚ್ಯಂಕ ಸುದ್ದಿಯಲ್ಲಿ ಏಕಿದೆ? ನೀತಿ ಆಯೋಗ ಸಿದ್ಧಪಡಿಸಿದ ಸಮಗ್ರ ನೀರು ನಿರ್ವಹಣೆ ಸೂಚ್ಯಂಕದ (ಸಿಡಬ್ಲ್ಯುಎಂಐ) ಅತ್ಯುತ್ತಮ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸ್ಥಾನ ಪಡೆದುಕೊಂಡಿದೆ. ಸೂಚ್ಯಂಕದಲ್ಲಿ ಗುಜರಾತ್‌ ಮೊದಲ ಸ್ಥಾನ ಪಡೆದಿದ್ದರೆ ನಂತರ ಸ್ಥಾನಗಳಲ್ಲಿ ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ. ಈಶಾನ್ಯ ...
READ MORE
Karnataka Current Affairs – KAS/KPSC Exams – 6th April 2018
Mobile app to ‘fix’ bus breakdown issues The Bangalore Metropolitan Transport Corporation (BMTC) has launched a mobile app to track and fix buses in the hope that it will bring down ...
READ MORE
Karnataka Current Affairs – KAS/KPSC Exams – 28th Nov 2017
1,07,354 BPL beneficiaries to get LPG connection Minister for Social Welfare and district in-charge H. Anjaneya has said that below poverty line and anthodaya card holders would be given free LPG ...
READ MORE
National Current Affairs – UPSC/KAS Exams- 2nd October 2018
RBI to Infuse Rs 36000cr to ease Liquidity Topic: GS-3 Indian Economy and issues relating to planning, mobilization of resources, growth, development and employment. IN NEWS: The Reserve Bank of India (RBI) ...
READ MORE
Karnataka MobileOne bags award
Islamic State losing support
PSLV-C31 launches IRNSS-1E
Karnataka Current Affairs – KAS/KPSC Exams – 13th
Karnataka Current Affairs – KAS/KPSC Exams – 19th
Karnataka Current Affair – KAS/KPSC Exams – 1st
“15th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams – 6th
Karnataka Current Affairs – KAS/KPSC Exams – 28th
National Current Affairs – UPSC/KAS Exams- 2nd October

Leave a Reply

Your email address will not be published. Required fields are marked *