8th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಲಕ್ಷದ್ವೀಪ ಬಳಿ ಹಡಗಿಗೆ ಬೆಂಕಿ

 • ಲಕ್ಷದ್ವೀಪದ ಬಳಿಯ ಅರಬ್ಬಿ ಸಮುದ್ರದಲ್ಲಿ ಮಾರ್ಸಕ್ ಹೊನಮ್‌ ಎನ್ನುವ ವಾಣಿಜ್ಯ ಹಡಗಿನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ.
 • 13 ಭಾರತೀಯರು ಸೇರಿದಂತೆ 27 ಸಿಬ್ಬಂದಿ ಹಡಗಿನಲ್ಲಿದ್ದರು. ನಾಲ್ವರು ನಾಪತ್ತೆಯಾಗಿದ್ದು, ಉಳಿದವರನ್ನು ರಕ್ಷಿಸಲಾಗಿದೆ.
 • 330 ಮೀಟರ್‌ ಉದ್ದದ ಹಡಗು ಮಾರ್ಚ್‌ 1ರಂದು ಸಿಂಗಪುರದಿಂದ ಹಿಂತಿರುಗುತ್ತಿತ್ತು. ಹಡಗಿನಲ್ಲಿ ಸ್ಫೋಟ ಸಹ ಸಂಭವಿಸಿದ್ದು, ಬೆಂಕಿಯ ಜ್ವಾಲೆಗಳು 25 ಮೀಟರ್‌ ಎತ್ತರದವರೆಗೆ ವ್ಯಾಪಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 • ತಕ್ಷಣವೇ ಉಪಗ್ರಹ ಆಧಾರಿತ ಸಂವಹನ ಜಾಲದ ಮೂಲಕ ರಕ್ಷಣೆಗೆ ಧಾವಿಸುವಂತೆ ಇತರ ವಾಣಿಜ್ಯ ಹಡಗುಗಳಿಗೆ ಮಾಹಿತಿ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.
 • ಈ ಹಡಗು ಲಕ್ಷದ್ವೀಪದ ಅಗಟ್ಟಿಯಿಂದ 570 ಕಿಲೋ ಮೀಟರ್‌ (340 ನಾಟಿಕಲ್‌ ಮೈಲ್‌) ದೂರದಲ್ಲಿದ್ದು, ಕರಾವಳಿ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಜತೆಗೆ ಲಕ್ಷದ್ವೀಪದಲ್ಲಿ ಗಸ್ತಿನಲ್ಲಿರುವ ಹಡಗುಗಳನ್ನು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ.
 • ‘ ‘ಎಂವಿ ಆಲ್ಸ್‌ ಸಿಸಿರೊ’ ಎನ್ನುವ ವಾಣಿಜ್ಯ ಹಡಗು ಮಾರ್ಸಕ್‌ ಹಡಗಿನ ಬಳಿ ರಾತ್ರಿ 11.25ರ ಸುಮಾರಿಗೆ ತೆರಳಿದ್ದು, 23 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಜೆಫ್ ವಿಶ್ವದ ನಂಬರ್ 1 ಶ್ರೀಮಂತ!

 • ಫೋರ್ಬ್ಸ್ ಜಾಗತಿಕ ಸಿರಿವಂತರ ಪಟ್ಟಿ ಪ್ರಕಟಗೊಂಡಿದ್ದು, 7.27 ಲಕ್ಷ ಕೋಟಿ ರೂ. (112 ಬಿಲಿಯನ್ ಡಾಲರ್) ಸಂಪತ್ತು ಹೊಂದಿರುವ ಅಮೆಜಾನ್ ಸಿಇಒ ಜೆಫ್ ಬೆಜೊಸ್ ಮೊದಲ ಸ್ಥಾನ ಪಡೆದಿದ್ದಾರೆ. 100 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಮೊದಲ ಸಿರಿವಂತ ಎಂಬ ಖ್ಯಾತಿಯೂ ಜೆಫ್ ಮುಡಿಗೇರಿದೆ.
 • 84 ಲಕ್ಷ ಕೋಟಿ ರೂ. ಸಂಪತ್ತಿನ ಒಡೆಯ ಮೈಕ್ರೋಸಾಫ್ಟ್​ನ ಬಿಲ್ ಗೇಟ್ಸ್ 2ನೇ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ 19 ಹೆಚ್ಚು ಶತಕೋಟ್ಯಧಿಪತಿಗಳು ಪಟ್ಟಿಗೆ ಸೇರ್ಪಡೆಯಾಗಿದ್ದು, ಒಟ್ಟಾರೆ 121 ಮಂದಿ ಭಾರತೀಯ ಶತಕೋಟ್ಯಧಿಪತಿಗಳು ಫೋರ್ಬ್ಸ್ ಯಾದಿಯಲ್ಲಿದ್ದಾರೆ.
 • ಮುಕೇಶ್ ಭಾರತದ ಸಿರಿವಂತ
 • ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದು, 2.6 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ. ಜಗತ್ತಿನ 2,208 ಶತಕೋಟ್ಯಧಿಪತಿಗಳಲ್ಲಿ ಮುಕೇಶ್ ಅಂಬಾನಿ ಜಾಗತಿಕವಾಗಿ 19ನೇ ಸ್ಥಾನ ಪಡೆದಿದ್ದಾರೆ. 2017ರಲ್ಲಿ ಅವರು 33ನೇ ಸ್ಥಾನದಲ್ಲಿದ್ದು, 1.51 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದರು

ರಾಜತಾಂತ್ರಿಕ ಬಿಕ್ಕಟ್ಟು ವ್ಯಾಪಾರದಲ್ಲಿ ಒಗ್ಗಟ್ಟು

 • ಕಳೆದ ವರ್ಷ ಸಿಕ್ಕಿಂನ ಡೋಕ್ಲಾಂನ ತ್ರಿರಾಷ್ಟ್ರ ಗಡಿ ಬಿಂದುವಿನಲ್ಲಿ 73 ದಿನಗಳ ಕಾಲ ಉಂಟಾಗಿದ್ದ ಸೇನಾ ಬಿಕ್ಕಟ್ಟಿನ ಹೊರತಾಗಿಯೂ ಭಾರತ ಮತ್ತು ಚೀನಾ ನಡುವಣ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದಿದೆ. ಮಾತ್ರವಲ್ಲದೆ, ಕಳೆದ ವರ್ಷ ಉಭಯ ದೇಶಗಳ ಮಧ್ಯೆ – 5.48 ಲಕ್ಷ ಕೋಟಿ ವಹಿವಾಟು ನಡೆದಿರುವುದು ಐತಿಹಾಸಿಕ ದಾಖಲೆಯೂ ಆಗಿದೆ. 2016ರಲ್ಲಿ ಈ ಪ್ರಮಾಣ – 4.62 ಲಕ್ಷ ಕೋಟಿ ಇತ್ತು.
 • ಉಭಯ ದೇಶಗಳ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ಸಂಬಂಧವು ಶೇ.18.63ರಷ್ಟು ಹೆಚ್ಚಳವಾಗಿದೆ. ಭಾರತಕ್ಕೆ ರಫ್ತಿನ ಪ್ರಮಾಣ ಕಳೆದ ವರ್ಷ ಶೇ. 40ರಷ್ಟು ಹೆಚ್ಚಳವಾಗಿ -1.06 ಲಕ್ಷ ಕೋಟಿ ವಹಿವಾಟು ನಡೆದಿದೆ ಎಂದು ಚೀನಾ ವ್ಯಾಪಾರೋದ್ಯಮದ ತಜ್ಞರು ಹೇಳಿದ್ದಾರೆ. ಡೋಕ್ಲಾಂ ಬಿಕ್ಕಟ್ಟಿನ ಜತೆಗೆ ಭಾರತವು ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯನ್ನು ವಿರೋಧಿಸಿತ್ತು. ಆದರೂ ಇದರ ಪರಿಣಾಮ ವ್ಯಾಪಾರ ಕ್ಷೇತ್ರದಲ್ಲಿ ಆಗದಿರುವುದು ಸಂತಸಕರ ವಿಚಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

ಹುಬ್ಬಳ್ಳಿ–ಧಾರವಾಡ ರೈಲಿಗೆ ಮಹಿಳಾ ಸಿಬ್ಬಂದಿ ಸಾರಥ್ಯ

 • ಹುಬ್ಬಳ್ಳಿ-ಧಾರವಾಡ 56902 ರೈಲನ್ನು ಸಂಪೂರ್ಣ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮೂಲಕ ರೈಲ್ವೆ ಸಿಬ್ಬಂದಿ ‘ಮಹಿಳಾ ದಿನಾಚರಣೆ’ ಆಚರಿಸಿದರು.
 • ಗೇಟ್ ವುಮನ್‌ನಿಂದ ಸಹಾಯಕ ವಾಣಿಜ್ಯ ಅಧಿಕಾರಿವರೆಗೂ 25 ಮಹಿಳಾ ಸಿಬ್ಬಂದಿ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.
 • ಮುಂಬೈನ ಮತುಂಗ ರೈಲ್ವೆ ನಿಲ್ದಾಣವನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಅದರಿಂದ ಪ್ರೇರಣೆ ಪಡೆದು ನೈರುತ್ಯ ರೈಲ್ವೆ ವಲಯದ ಧಾರವಾಡ ನಿಲ್ದಾಣದಲ್ಲಿ ಈ ಪ್ರಯತ್ನ ಮಾಡಲಾಗಿದೆ.

ಪ್ರಧಾನ್ ಮಂತ್ರಿ ಮಾತೃ ವಂದನಾ ಯೋಜನಾ

 • ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದಲ್ಲಿ ಸಾಮಾನ್ಯ ಉದ್ಯೋಗಿಗಳು ಅಥವಾ ಅದೇ ರೀತಿಯ ಪ್ರಯೋಜನ ಪಡೆದವರನ್ನು ಹೊರತುಪಡಿಸಿ ಪ್ರಧಾನ್ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಅಡಿಯಲ್ಲಿನ ಗರ್ಭಧಾರಣೆಯ ಪ್ರಯೋಜನಗಳನ್ನು ಎಲ್ಲಾ ಗರ್ಭಿಣಿ ಮಹಿಳಾ ಮತ್ತು ಹಾಲುಣಿಸುವ ತಾಯಂದಿರಿಗೆ (PW & LM) ಲಭ್ಯವಿರುತ್ತದೆ.
 • ಸಾಮಾನ್ಯವಾಗಿ ಕುಟುಂಬದ ಮೊದಲ ಮಗುವಿಗೆ , ಮಹಿಳೆಯ ಮೊದಲ ಗರ್ಭಾವಸ್ಥೆಯು ಹೊಸ ರೀತಿಯ ಸವಾಲುಗಳನ್ನು ಮತ್ತು ಒತ್ತಡದ ಅಂಶಗಳನ್ನು ತೋರಿಸುತ್ತದೆ.
 • ಯೋಜನೆಯ ಉದ್ದೇಶಗಳು ಹೀಗಿವೆ:
 • (i) ನಗದು ಪ್ರೋತ್ಸಾಹದ ಆಧಾರದ ಮೇಲೆ ವೇತನ ನಷ್ಟಕ್ಕೆ ಭಾಗಶಃ ಪರಿಹಾರವನ್ನು ಒದಗಿಸುವುದು ಇದರಿಂದಾಗಿ ಮಹಿಳೆ ಮೊದಲ ಮಗುವಿನ ಹೆರಿಗೆಯ  ಮೊದಲು ಮತ್ತು ನಂತರ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬಹುದು
 • ii) ಒದಗಿಸಿದ ನಗದು ಪ್ರೋತ್ಸಾಹಕಗಳು ಗರ್ಭಿಣಿ ಮಹಿಳೆಯರ ಮತ್ತು ಹಾಲುಣಿಸುವ ತಾಯಂದಿರ (ಪಿಡಬ್ಲ್ಯೂ & ಎಲ್ಎಂ) ನಡುವೆ ಸುಧಾರಿತ ಆರೋಗ್ಯ ಕೋರಿಕೆಗೆ ಕಾರಣವಾಗುತ್ತವೆ.
 • ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಅನಾರೋಗ್ಯದ ಸಮಸ್ಯೆಯನ್ನು ಪರಿಹರಿಸಲು, ಸಾರ್ವತ್ರಿಕ ಇದು ಅಂಗನವಾಡಿ ಸೇವೆಗಳು ಯೋಜನೆ, ಎರಡನೇ ಗರ್ಭಧಾರಣೆಯ ಸೇರಿದಂತೆ ಎಲ್ಲಾ PW & LM ಲಭ್ಯವಿದೆ.
 • ರಕ್ತಹೀನತೆ ಮತ್ತು ಐರನ್ ಮತ್ತು ಫೋಲಿಕ್ ಆಸಿಡ್ (ಐಎಫ್ಎ) ಪೂರಕ, ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಪೂರೈಕೆ, ಗರ್ಭಾವಸ್ಥೆಯಲ್ಲಿ ದುರ್ಬಲಗೊಳ್ಳುವಿಕೆ, ಪೌಷ್ಟಿಕತೆ, ಕುಟುಂಬದ ಯೋಜನೆ ಮತ್ತು ರೋಗಗಳ ತಡೆಗಟ್ಟುವಿಕೆ ಕುರಿತು ತೂಕ ಹೆಚ್ಚಿಸುವ ಮೇಲ್ವಿಚಾರಣೆ ಮತ್ತು ಸಮಾಲೋಚನೆಗಾಗಿ ಗರ್ಭಿಣಿ ಮಹಿಳೆಯರ ಸಾರ್ವತ್ರಿಕ ಸ್ಕ್ರೀನಿಂಗ್ ಮಾಡಲಾಗುತ್ತದೆ
 • ೬೦೦೦ ರುಪಾಯಿಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಮಾತೃ ಪೂರ್ಣ ಯೋಜನೆ

 • ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸಲು ಕರ್ನಾಟಕ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ .
 • ಮಕ್ಕಳು ಮತ್ತು ತಾಯಂದಿರನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವ ಏಕೈಕ ಉದ್ದೇಶದಿಂದ, ಪೌಷ್ಠಿಕಾಂಶದ ಊಟ – ಅಕ್ಕಿ, ಸಾಂಬಾರ್, ಬೇಯಿಸಿದ ಮೊಟ್ಟೆಗಳು, ಹಸಿರು ತರಕಾರಿಗಳು, ಬೇಳೆಕಾಳುಗಳು, ಮತ್ತು ಕಡಲೆಕಾಯಿ-ಬೆಲ್ಲದ ಚಿಕ್ಕಿಗಳನ್ನು – ತಿಂಗಳಿಗೆ 25 ದಿನಗಳವರೆಗೆ ಅಂಗನವಾಡಿಗಳಲ್ಲಿ ನೀಡಲಾಗುತ್ತದೆ.ಯಾರು ಮೊಟ್ಟೆಗಳನ್ನು ಸೇವಿಸುವುದಿಲ್ಲವೋ ಅವರಿಗೆ ೨ ರೀತಿಯ ಮೊಳಕೆ ಕಾಳುಗಳನ್ನೂ ನೀಡಲಾಗುತ್ತೆ

 

1. ಕವರಟ್ಟಿ ಮತ್ತು ಮಿನಿಕಾಯ್ ದ್ವೀಪಗಳನ್ನು ಯಾವ ಚಾನೆಲ್ ಬೇರ್ಪಡಿಸುತ್ತೆ ?

A)10 ಡಿಗ್ರಿ ಚಾನೆಲ್

B)8 ಡಿಗ್ರಿ ಚಾನೆಲ್

C)9 ಡಿಗ್ರಿ ಚಾನೆಲ್

D)ಯಾವುದು ಅಲ್ಲ

2. ಫೋರ್ಬ್ಸ್ ನಿಯತಕಾಲಿಕೆ ಯಾವ ದೇಶದ್ದು ?

A)ಅಮೇರಿಕಾ

B)ಬ್ರಿಟನ್

C)ಚೀನಾ

D)ಜಪಾನ್

3. ಮಾತೃ ಪೂರ್ಣ ಯೋಜನೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ ?

A)ಮಹಾರಾಷ್ಟ್ರ

B)ಕರ್ನಾಟಕ

C)ತೆಲಂಗಾಣ

D)ಆಂಧ್ರಪ್ರದೇಶ

4. ಯಾವ ಯೋಜನೆಯಲ್ಲಿ , ಪೌಷ್ಠಿಕಾಂಶದ ಊಟ – ಅಕ್ಕಿ, ಸಾಂಬಾರ್, ಬೇಯಿಸಿದ ಮೊಟ್ಟೆಗಳು, ಹಸಿರು ತರಕಾರಿಗಳು, ಬೇಳೆಕಾಳುಗಳು, ಮತ್ತು ಕಡಲೆಕಾಯಿ-ಬೆಲ್ಲದ ಚಿಕ್ಕಿಗಳನ್ನು – ತಿಂಗಳಿಗೆ 25 ದಿನಗಳವರೆಗೆ ಅಂಗನವಾಡಿಗಳಲ್ಲಿ ನೀಡಲಾಗುತ್ತದೆ?

A)ಮಾತೃ ಪೂರ್ಣ ಯೋಜನೆ

B)ಪ್ರಧಾನ್ ಮಂತ್ರಿ ಮಾತೃ ವಂದನಾ ಯೋಜನೆ

C)೧ ಮತ್ತು ೨

D)ಯಾವುದು ಅಲ್ಲ

5.ೆಳಕಂಡವುಗಳಲ್ಲಿ ಯಾವುದು ಅಧಿಕೃತ ಲಾಂಛನ (Official Mascot) ಪಡೆದ ಭಾರತದ ಮೊದಲ ಹುಲಿ ಸಂರಕ್ಷಿತ  ಅಭಯಾರಣ್ಯವಾಗಿದೆ?

A)ಕಾನ್ಹಾ ಹುಲಿ ಅಭಯಾರಣ್ಯ

B)ಕಾರ್ಬೆಟ್ ಹುಲಿ ಅಭಯಾರಣ್ಯ

C)ಸರಿಸ್ಕಾ ಹುಲಿ ಅಭಯಾರಣ್ಯ

D)ಸಂಜಯ್ ಹುಲಿ ಅಭಯಾರಣ್

6.ಭಾರತದ ಲೋಕಸಭೆಯ ಅಧ್ಯಕ್ಷರು ‘ಗಿಲೋಟಿನ್’ ಚಲಾಯಿಸುವ ಅಧಿಕಾರ————-

A) ಬೇಡಿಕೆಗಳ ಬಗ್ಗೆ ಚಚೆ೯ ಮುಗಿದ ನಂತರ

B)ಬೇಡಿಕೆಗಳ   ಬಗ್ಗೆ ಚಚೆ೯ ಮುಗಿದು ಪಾಸಾದ ನಂತರ

C)ಮುಂಗಡ  ಪತ್ರದ ಬಗ್ಗೆ ಚಚೆ೯ ಅವಧಿ ತೀರಿದ ನಂತರ

D)ಬೇಡಿಕೆಗಳ   ಬಗ್ಗೆ ಕಡಿತಗೊಳಿಸಿ ಪಾಸಾದಾಗ

7. ಪ್ರಜಾಪ್ರಭುತ್ವದ ನಾಲ್ಕನೆಯ ಸ್ಥಂಭ ಯಾವುದು?

A)ಕಾಯಾ೯಼ಗ

B)ನ್ಯಾಯಾಂಗ

C)ಪತ್ರಿಕೋದ್ಯಮ

D)ಶಾಸಕಾಂಗ

8. ಲಾರ್ಡ್‌ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಯನ್ನು ಜಾರಿಗೆ ತಂದ ಉದ್ದೇಶ?

A) ಫ್ರೆಂಚ್ ರ ಪ್ರಭಾವ ತಡೆಯಲು

B) ಅವಿದೇಯತೆ ತಡೆಯಲು

C) ಆಡಳಿತ ಉತ್ತಮ ಪಡಿಸಲು

D) ಬ್ರಿಟಿಷ್‌ ಸಾಮ್ರಾಜ್ಯ ವಿಸ್ತರಿಸಲು

9. ಸೆವೆನ್ ಪಗೋಡಾಸ್’ ಹೆಸರಿನಲ್ಲಿ ಪ್ರಖ್ಯಾತರಾಗಿರುವ ಮಂದಿರಗಳನ್ನು ನಿರ್ಮಿಸಿದವರು ಯಾರು?

A)ಚೋಳರು

B. ಚಾಲುಕ್ಯರು

C)ಪಲ್ಲವರು

D. ರಾಷ್ಟ್ರಕೂಟರು

10. ಮೊದಲ ಬಾರಿಗೆ ಮಹಿಳಾ ಮ್ಯಾರಥಾನ್ ಸ್ಪರ್ಧೆ ಆಯೋಜಿಸಿದ ರಾಷ್ಟ್ರ ಯಾವುದು?

A.ಸೌದಿ ಅರೇಬಿಯಾ

B. ನೇಪಾಳ

C)ಭಾರತ

D. ಚೀನಾ

ಉತ್ತರಗಳು

 1. C 2.A 3.B 4.A 5.A 6.C 7. C 8.B 9.C 10.A
Related Posts
Urban Development-Bengaluru Metro Rail Corporation Limited (BMRCL)
Metro rail is a vital component of the transformation of the urban transport scenario in India. With urban population continuously growing, there is a need for green solutions. Mass Rapid Transit Systems are fast, safe and ...
READ MORE
Karnataka State Updates for KAS/KPSC Exams – 26th March 2017
Govt to ensure private firms enforce retirement age rule The labour department will conduct inspections to ensure that employers implement the state government’s decision to enhance the retirement age of employees ...
READ MORE
“23rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬರಪೀಡಿತ ಜಿಲ್ಲೆ  ಸುದ್ದಿಯಲ್ಲಿ ಏಕಿದೆ? ಇನ್ನು ಮುಂದೆ ಯಾವುದೇ ತಾಲೂಕಿನ ಶೇ.75 ರಷ್ಟು ಕೃಷಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.50ರಷ್ಟು ತೇವಾಂಶವಿಲ್ಲದೆ ಶೇ.33 ರಷ್ಟು ಬೆಳೆ ನಾಶವಾದರೂ ಆ ಜಿಲ್ಲೆಯನ್ನೂ ಬರಪೀಡಿತ ಎಂದು ಘೋಷಿಸಬಹುದು . ಹಿನ್ನಲೆ ಬರ ಘೋಷಣೆಗೆ ಸಂಬಂಧಿಸಿದ ಕಠಿಣ ಮಾನದಂಡವನ್ನು ಕೇಂದ್ರ ಸರಕಾರ ...
READ MORE
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪುರಂದರದಾಸರು ಸುದ್ದಿಯಲ್ಲಿ ಏಕಿದ್ದಾರೆ? ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಹುಟ್ಟೂರಿನ ಜಿಜ್ಞಾಸೆಗೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರಾಂತ್ಯವೇ ದಾಸಶ್ರೇಷ್ಠ ಪುರಂದರಾಸರ ಹುಟ್ಟೂರು ಎಂಬ ಖಚಿತ ವರದಿಯನ್ನು ಅಧ್ಯಯನ ಸಮಿತಿ ಸರಕಾರಕ್ಕೆ ಸಲ್ಲಿಸಿದೆ. ಪುರಂದರದಾಸರ ಹುಟ್ಟೂರು ಮಲೆಸೀಮೆ ಎಂಬ ...
READ MORE
Karnataka: Biggest Ever Promotion Move, 11,000 Police Personnel To Benefit
As a New Year gift, the state government has decided to promote 11,000 police personnel. At a review meeting held on Wednesday, Chief Minister Siddaramaiah said this is the first time ...
READ MORE
For import of an aircraft following steps were necessary till now For remittance of funds for import of aircraft, the approval of the ministry was mandatory. Scheduled Operators (airlines) and Regional Scheduled ...
READ MORE
National Current Affairs – UPSC/KAS Exams- 4th February 2019
‘Inkjet’ solar panels Topic: Science and Technology In News: Polish physicist developed a novel inkjet processing method for perovskites — a new generation of cheaper solar cells — that makes it possible ...
READ MORE
India’s Second Scorpene Submarine “Khanderi” Launched
INS Khanderi, second of the Scorpene class submarine, was launched in Mumbai on Thursday. The submarine, which was launched at the Mazagon Dock Shipbuilders Limited (MDL), will undergo trials before being inducted ...
READ MORE
Primary Health Centres (PHCs) in six districts of Karnataka
Fifteen primary health centres (PHCs) in six districts of Karnataka are set to get eLAJ smart clinics that will be equipped with multi-parameter monitors that enable multiple diagnostic tests and ...
READ MORE
Karnataka 4th Finance Commission: NammaKPSC classroom session for KAS-2016 Challengers
4th State Finance Commission’s tour of State Why in News: The three-member Fourth State Finance Commission (SFC), headed by C.G. Chinnaswamy, has begun consulting with experts and urban and rural local ...
READ MORE
Urban Development-Bengaluru Metro Rail Corporation Limited (BMRCL)
Karnataka State Updates for KAS/KPSC Exams – 26th
“23rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka: Biggest Ever Promotion Move, 11,000 Police Personnel
Relaxed norms for aircraft import
National Current Affairs – UPSC/KAS Exams- 4th February
India’s Second Scorpene Submarine “Khanderi” Launched
Primary Health Centres (PHCs) in six districts of
Karnataka 4th Finance Commission: NammaKPSC classroom session for

Leave a Reply

Your email address will not be published. Required fields are marked *