ತ್ರಿವರ್ಣ ನಾಡಧ್ವಜಕ್ಕೆ ಒಪ್ಪಿಗೆ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿ ವಿನ್ಯಾಸಗೊಳಿಸಿರುವ ತ್ರಿವರ್ಣ ಕನ್ನಡ ಧ್ವಜಕ್ಕೆ ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಒಪ್ಪಿಗೆ ನೀಡಿದ್ದಾರೆ.
- ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ನಾಡ ಹೊಂದುವ ನಿರ್ಣಯಕ್ಕೆ ಎಲ್ಲರಿಂದಲೂ ಬೆಂಬಲ ದೊರೆಯಿತು.
- ಚಕ್ರವರ್ತಿ ಮೋಹನ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು ಹಳದಿ, ಬಿಳಿ ಮತ್ತು ಕೆಂಪು ಬಣ್ಣದ ಜೊತೆಗೆ ರಾಜ್ಯದ ಲಾಂಛನ ಇರುವ ಧ್ವಜ ಸಿದ್ಧಪಡಿಸಿದೆ. ಲಾಂಛನದಲ್ಲಿರುವ ‘ಸತ್ಯಮೇವ ಜಯತೆ’ ಎಂಬ ಸಾಲು ಧ್ವಜದಲ್ಲಿ ಇರುವುದಿಲ್ಲ. ಒಂದು ಕಡೆ ಮುದ್ರಿಸಿದರೆ, ಇನ್ನೊಂದು ಕಡೆ ಉಲ್ಟಾ ಕಾಣಲಿದೆ ಎಂಬ ಕಾರಣಕ್ಕೆ ಕೈಬಿಡಲಾಗಿದೆ ಎಂದು ಸಭೆಯ ಬಳಿಕ ಸಿದ್ದರಾಮಯ್ಯ ತಿಳಿಸಿದರು.
- ಕಾನೂನಿನ ಅಂಶಗಳ ಬಗ್ಗೆಯೂ ತಜ್ಞರ ಸಮಿತಿ ಅಧ್ಯಯನ ನಡೆಸಿದ್ದು, ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ತೊಡಕಿಲ್ಲ ಎಂದು ವರದಿ ನೀಡಿದೆ ಎಂದು ವಿವರಿಸಿದರು.
- ‘ನಾಡಧ್ವಜವನ್ನು ನಾವೇ ಘೋಷಣೆ ಮಾಡುವಂತಿಲ್ಲ. ಕೇಂದ್ರದ ಒಪ್ಪಿಗೆ ಬೇಕು. ಹೀಗಾಗಿ ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ. ರಾಷ್ಟ್ರ ಧ್ವಜಕ್ಕಿರುವ ಗೌರವಕ್ಕೆ ನಾಡಧ್ವಜದಿಂದ ಚ್ಯುತಿ ಬರುವುದಿಲ್ಲ. ರಾಷ್ಟ್ರಧ್ವಜದ ಕೆಳಗೆ ರಾಜ್ಯ ಧ್ವಜ ಹಾರಾಡಲಿದೆ ಎಂಬ ಸಂಗತಿಯನ್ನು ನಾವು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಒಪ್ಪಿಗೆ ಸೂಚಿಸುವಂತೆ ಒತ್ತಡವನ್ನೂ ಹೇರುತ್ತೇವೆ’ ಎಂದರು.
ಸಾಧ್ಯಾಸಾಧ್ಯತೆ
- ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸಬಹುದು
- ಇತರೆ ರಾಜ್ಯಗಳಲ್ಲಿರಬಹುದಾದ ಧ್ವಜಗಳು, ರಾಷ್ಟ್ರಧ್ವಜದ ಘನತೆಗೆ ಧಕ್ಕೆಯಾದಂತಹ ಅಂಶಗಳ ಅಧ್ಯಯನಕ್ಕೆ ಸಮಯ ತೆಗೆದುಕೊಳ್ಳಬಹುದು
- ಧ್ವಜ ಸಂಹಿತೆ ಆಧಾರದಲ್ಲಿ ನಾಡಧ್ವಜಕ್ಕೆ ಅನುಮತಿ ನೀಡಿದರೆ ರಾಷ್ಟ್ರಧ್ವಜಕ್ಕೆ ಯಾವುದೇ ಧಕ್ಕೆಯಾಗುತ್ತದೆಯೇ ಎಂದು ಪರಿಶೀಲಿಸಬಹುದು. ಸಂವಿಧಾನ ತಜ್ಞರ ಅಭಿಪ್ರಾಯ ಪಡೆಯಬಹುದು.
- ಪ್ರತ್ಯೇಕ ಧ್ವಜಕ್ಕೆ ಅನುಮತಿ ನೀಡಲೇಬೇಕಾದ ಅವಶ್ಯಕತೆ ಹಾಗೂ ಅನುಮತಿ ನೀಡಿದರೆ ಧ್ವಜದ ರಕ್ಷಣೆ ಮುಂತಾದ ವಿಷಯದಲ್ಲಿ ರಾಜ್ಯಕ್ಕೆ ಪತ್ರ ಬರೆದು ಸ್ಪಷ್ಟೀಕರಣ ಕೇಳಬಹುದು.
- ಒಪ್ಪಿಗೆ ನೀಡಲು, ತಿರಸ್ಕರಿಸಲು ಯಾವುದೇ ನಿಯಮವಿಲ್ಲ. ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟದ್ದು.
- ಕೂಲಂಕಷ ಪರಿಶೀಲನೆ ನಂತರ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಹುದು. ಸಮಯಮಿತಿ ಹೇರುವಂತಿಲ್ಲ.
- ಪ್ರತ್ಯೇಕ ಧ್ವಜದ ಬೇಡಿಕೆ ಇಡಬಾರದು ಎಂದು ಕಾನೂನಿನಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.
- ಕೇಂದ್ರ ಒಪ್ಪಿಗೆ ನೀಡದಿದ್ದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ.
ಸಂವಿಧಾನದಲ್ಲಿ ಅವಕಾಶವಿಲ್ಲ
- ರಾಜ್ಯಕ್ಕೆ ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ.
- ಅಮೆರಿಕದ ಒಕ್ಕೂಟ ವ್ಯವಸ್ಥೆಯೇ ಬೇರೆ, ಭಾರತದ ಒಕ್ಕೂಟ ವ್ಯವಸ್ಥೆಯೇ ಬೇರೆ. ಆಡಳಿತದ ಸಲುವಾಗಷ್ಟೇ ನಾವು ರಾಜ್ಯ ರಚಿಸಿಕೊಂಡಿದ್ದೇವೆ.
- ಭಾರತದಲ್ಲಿ ಸಂಸತ್ ಪರಮೋಚ್ಚ. ಸಂಸತ್ ಬಯಸಿದಲ್ಲಿ ಯಾವ ರಾಜ್ಯವನ್ನು ಬೇಕಾದರೂ ಸೃಷ್ಟಿಸಬಹುದು, ಇನ್ನೊಂದರ ಜತೆ ಸೇರಿಸಬಹುದು. ಯಾವುದೇ ರಾಜ್ಯಕ್ಕೆ ವಿಶೇಷ ಅಧಿಕಾರ ನೀಡಲಾಗಿಲ್ಲ. ಸಾಮಾಜಿಕ ಹಿತಾಸಕ್ತಿ ಹಾಗೂ ಸಾಮಾನ್ಯ ನೀತಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೂ ಪ್ರತ್ಯೇಕ ಧ್ವಜ ಹೊಂದುವುದು ದೇಶ ಒಡೆಯುವಂತಹ ಕೆಲಸ.
- ದೇಶವನ್ನು ಒಗ್ಗೂಡಿಸಬೇಕಾದವರೇ ಒಡೆಯುವುದು ಸರಿಯಲ್ಲ. ಕೇಂದ್ರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುತ್ತದೆ ಎಂದು ನನಗೆ ಅನ್ನಿಸುವುದಿಲ್ಲ ಎಂದು ಮಾಜಿ ಅಡ್ವೋಕೇಟ್ ಜನರಲ್ ತಿಳಿಸಿದರು
ಬರ ನಿರ್ವಹಣೆಗೆ ವಿಶೇಷ ಯೋಜನೆ
- ರಾಜ್ಯದ 16 ಜಿಲ್ಲೆಗಳೂ ಸೇರಿದಂತೆ ದೇಶದ 151 ಬರಪೀಡಿತ ಜಿಲ್ಲೆಗಳಲ್ಲಿ ಸಮರ್ಪಕ ಬರ ನಿರ್ವಹಣೆಗೆ ವಿಶೇಷ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ
- ಮೊದಲ ಹಂತದಲ್ಲಿ ಒಟ್ಟು 24 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಕರ್ನಾಟಕದ 16 ಜಿಲ್ಲೆಗಳು ಸೇರಿವೆ. ಹಂತ– ಹಂತವಾಗಿ ಉಳಿದ ಬರಪೀಡಿತ ಜಿಲ್ಲೆಗಳಲ್ಲೂ ಜಾರಿ ಮಾಡುತ್ತೇವೆ.
- ಈ ಸಂಬಂಧ ಕ್ರಿಯಾ ಯೋಜನೆಗಳನ್ನು ರಾಜ್ಯ ಸರ್ಕಾರಗಳು ರೂಪಿಸಿಕೊಡಬೇಕು. ಆದರೆ, ಈವರೆಗೂ ಕ್ರಿಯಾಶೀಲ ಎನಿಸುವ ಪ್ರಸ್ತಾವಗಳು ಬಂದಿಲ್ಲ. ಅಧಿಕಾರಿಗಳು, ವಿಜ್ಞಾನಿಗಳು ಮತ್ತು ತಜ್ಞರು ಸೇರಿಕೊಂಡು ಉತ್ತಮ ಅನನ್ಯ ಆಲೋಚನೆಗಳು ಮತ್ತು ಯೋಜನೆಗಳನ್ನು ರೂಪಿಸಿಕೊಡಬೇಕು. ಈ ಯೋಜನೆಗೂ ರೈತರ ಆದಾಯ ದ್ವಿಗುಣಗೊಳಿಸುವುದಕ್ಕೂ ಪರಸ್ಪರ ಸಂಬಂಧವಿದೆ
- ಬರ ಎದುರಿಸುವಲ್ಲಿ ಸರ್ಕಾರಗಳ ಆಡಳಿತ ಯಂತ್ರ, ವಿಜ್ಞಾನಿಗಳ ಜೊತೆ ಸಾರ್ವಜನಿಕರೂ ಕೈಜೋಡಿಸಬೇಕು.
- ಅತ್ಯಂತ ಭೀಕರ ಕ್ಷಾಮ ಎದುರಿಸಿದ ಒಡಿಶಾದ ಕಾಳಹಂಡಿಯಲ್ಲಿ ವರ್ಷದಲ್ಲಿ ಸಾಕಷ್ಟು ಮಳೆ ಬೀಳುತ್ತದೆ. ಆದರೆ, ಅದನ್ನು ಸಂಗ್ರಹಿಸಿ ಸರಿಯಾಗಿ ಬಳಕೆ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲ. ಮಳೆ ನೀರು ಸಂಗ್ರಹಿಸಿ ಬಳಕೆ ಮಾಡಿಕೊಂಡರೆ ಬಹಳಷ್ಟು ಸಮಸ್ಯೆ ಬಗೆಹರಿಯುತ್ತದೆ.
- ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಲು ರೈತರು ಗಮನಹರಿಸಬೇಕು. ಉದಾಹರಣೆಗೆ ಭತ್ತದ ಹೊಟ್ಟನ್ನು ಅಣಬೆ ಬೆಳೆಯಲು ಬಳಸಿಕೊಳ್ಳಬಹುದು. ಮಳೆ ಕಡಿಮೆ ಆದ ವರ್ಷದಲ್ಲಿ ವಿವಿಧ ರೀತಿಯ ಬೇಳೆ–ಕಾಳುಗಳನ್ನು ಬೆಳೆದುಕೊಳ್ಳಬಹುದು. ಈಗ ದೇಶದಲ್ಲಿ ಲಭ್ಯವಿರುವ ತಂತ್ರಜ್ಞಾನದ ಮೂಲಕ ಮುಂಗಾರಿನಲ್ಲಿ ಹವಾಮಾನ ಹೇಗಿರುತ್ತದೆ, ಏನು ಬೆಳೆಯಬಹುದು ಎಂಬ ಸಲಹೆ ನೀಡಬಹುದು. ಮಳೆ ಕೈಕೊಟ್ಟರೂ ಪರ್ಯಾಯ ಬೆಳೆಗಳತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಸರೋದ್ ವಾದಕ ರಾಜೀವ್ ತಾರಾನಾಥ್ಗೆ ‘ನಾಡೋಜ’ ಗೌರವ
- ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ಬಾರಿ ನಾಡೋಜ ಗೌರವವನ್ನು ಸರೋದ್ ವಾದಕ ಪಂ.ರಾಜೀವ್ ತಾರಾನಾಥ್ ಅವರಿಗೆ ನೀಡಲಿದೆ.
- ಅಖಿಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವ, ಟಿ.ಚೌಡಯ್ಯ ಪ್ರಶಸ್ತಿ, ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ನ “ರಾಷ್ಟ್ರೀಯ ಸಮ್ಮಾನ” ಗೌರವ ಇನ್ನೂ ಅನೇಕ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.
ಮಹಿಳೆಗೆ ಮನ್ನಣೆ ಯೋಜನೆಗಳ ಘೋಷಣೆ
- ಮಹಿಳಾ ದಿನಾಚರಣೆ ನಿಮಿತ್ತ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕಾರ್ಯಕ್ರಮದಡಿ ಬಡ ಮಹಿಳೆಯರಿಗಾಗಿ ಕಡಿಮೆ ಬೆಲೆಯ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಪರಿಚಯಿಸಿದೆ.
- ದೇಶದ ಎಲ್ಲ ಜನೌಷಧಿ ಕೇಂದ್ರಗಳಲ್ಲಿ ಮೇ 28ರೊಳಗಾಗಿ ಈ ನ್ಯಾಪ್ಕಿನ್ಗಳು ಲಭ್ಯವಾಗಲಿದ್ದು, ಒಂದು ಪ್ಯಾಡ್ನ ಬೆಲೆ ರೂ -;2.5. ನಾಲ್ಕು ಪ್ಯಾಡ್ಗಳ ಒಂದು ಪ್ಯಾಕ್ನಲ್ಲಿ ದೊರೆಯಲಿದೆ. ಪ್ರತಿ ಪ್ಯಾಕ್ಗೆ 10 ರೂ. ದರವಿರಿಸಲಾಗಿದೆ. ಖಾಸಗಿ ಕಂಪನಿಗಳ ನ್ಯಾಪ್ಕಿನ್ ಪ್ಯಾಡ್ಗೆ ಕನಿಷ್ಠ 8 ರೂಪಾಯಿ ಇದ್ದು, ಇದನ್ನು ಭರಿಸುವ ಶಕ್ತಿ ಬಡವರಿಗೆ ಇಲ್ಲದ ಕಾರಣ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
- ಶೇ 100ರಷ್ಟು ಆಕ್ಸೊ ಬಯೊ ಡಿಗ್ರೇಡೆಬಲ್ ನ್ಯಾಪ್ಕಿನ್ ಪೂರೈಸುವುದರಿಂದ ಪರಿಸರಕ್ಕೂ ಯಾವುದೇ ರೀತಿಯ ತೊಂದರೆ ಆಗದು. ಈ ಯೋಜನೆಯಿಂದಾಗಿ ಖಾಸಗಿ ಕಂಪೆನಿಗಳೂ ಸ್ಪರ್ಧಾತ್ಮಕ ದರದಲ್ಲಿ ನ್ಯಾಪ್ಕಿನ್ ಮಾರಾಟ ಮಾಡಲು ಮುಂದಾಗಲಿವೆ ಎಂದು ಸಚಿವ ಅನಂತ ಕುಮಾರ್ ತಿಳಿಸಿದರು.
- ನ್ಯಾಪ್ಕಿನ್ ಬಳಕೆ ಕುರಿತು ಆಯಾ ರಾಜ್ಯ ಸರ್ಕಾರಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನಜಾಗೃತಿ ಮೂಡಿಸಬೇಕಿದೆ. ಆದಷ್ಟು ಅಧಿಕ ಪ್ರಮಾಣದಲ್ಲಿ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಉಚಿತವಾಗಿ ನ್ಯಾಪ್ಕಿನ್ ಪೂರೈಕೆಗೆ ಕ್ರಮ ಕೈಗೊಳ್ಳಲಿದೆ ಎಂದರು.
- ದೇಶದ 3,200ಕ್ಕೂ ಅಧಿಕ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಜನರಿಕ್ ಔಷಧಿ ಮಾರಾಟ ಮಾಡಲಾಗುತ್ತಿದ್ದು, ವಾರ್ಷಿಕ -ಠಿ; 600 ಕೋಟಿ ವ್ಯವಹಾರ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಜನೌಷಧಿ ಕೇಂದ್ರಗಳು ಆರಂಭವಾಗಲಿವೆ ಎಂದರು.
- ನ್ಯಾಪ್ಕಿನ್ ಬಳಕೆ ಕುರಿತು ಆಯಾ ರಾಜ್ಯ ಸರ್ಕಾರಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನಜಾಗೃತಿ ಮೂಡಿಸಬೇಕಿದೆ. ಆದಷ್ಟು ಅಧಿಕ ಪ್ರಮಾಣದಲ್ಲಿ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಉಚಿತವಾಗಿ ನ್ಯಾಪ್ಕಿನ್ ಪೂರೈಕೆಗೆ ಕ್ರಮ ಕೈಗೊಳ್ಳಲಿದೆ ಎಂದರು.
ಪೌಷ್ಟಿಕ ಆಹಾರ ಯೋಜನೆಗೆ ಚಾಲನೆ
- ರಾಜಸ್ಥಾನದ ಝುುನ್ರೆುನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆಗೆ ಚಾಲನೆ ನೀಡಿ, ಮಗುವಿನ ಜನನ ಸಮಯದಲ್ಲಿ ಕಡಿಮೆ ತೂಕ ಹೊಂದಿರುವುದು ಮತ್ತು ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಬೇಕು. ಮಕ್ಕಳು, ಮಹಿಳೆಯರು ಮತ್ತು ಬಾಲಕಿಯರಲ್ಲಿ ಅನೀಮಿಯಾ ಕಾಣಿಸಿಕೊಳ್ಳದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ. ಬೇಟಿ ಪಢಾವೋ ಬೇಟಿ ಬಚಾವೋ ಯೋಜನೆಯ ಅಡಿಯಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಮಿಷನ್ಗೆ ಚಾಲನೆ ನೀಡಲಾಗಿದೆ.
ಹೈವೇಗೆ ಒಂದೇ ಹೆಲ್ಪ್ಲೈನ್
- ರಾಷ್ಟ್ರೀಯ ಹೆದ್ದಾರಿ ಗಳಲ್ಲಿನ ಅಪಘಾತ, ಕುಂದುಕೊರತೆ ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ದೂರು ನೀಡಲು ದೇಶಾದ್ಯಂತ ಏಕರೂಪದ ಸಹಾಯವಾಣಿ 1033 ಆರಂಭವಾಗಿದೆ. ಉಚಿತ ದೂರವಾಣಿ ಸಂಖ್ಯೆ ಮತ್ತು ಹೆದ್ದಾರಿ ಸಂಬಂಧಿತ ವಿವಿಧ ಸೇವೆ ಒದಗಿಸುವ ಸುಖದ್ ಯಾತ್ರಾ ಹೆಸರಿನ ಆಪ್ ಅನ್ನು ಕೇಂದ್ರ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದ್ದಾರೆ.
- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಆಪ್ ಅಭಿವೃದ್ಧಿಪಡಿಸಿದ್ದು, ಆಂಡ್ರಾಯ್್ಡ ಮತ್ತು ಐಒಎಸ್ ಸ್ಮಾರ್ಟ್ಫೋನ್ಗಳಿಗೆ ಲಭ್ಯವಿದೆ. ಟೋಲ್ ಪ್ಲಾಜಾದಲ್ಲಿನ ದಟ್ಟಣೆ, ಕಾಯುವಿಕೆಯ ಸಮಯ, ಹೆದ್ದಾರಿಯಲ್ಲಿ ಲಭ್ಯವಿರುವ ವಿವಿಧ ಸೇವೆಗಳ ಕುರಿತಂತೆ ಆಪ್ನಲ್ಲಿ ಮಾಹಿತಿ ಲಭ್ಯವಾಗಲಿದೆ. ಜತೆಗೆ ಪ್ರಯಾಣಿಕರು ಹೆದ್ದಾರಿಯಲ್ಲಿನ ಸಮಸ್ಯೆಗಳು, ಅಪಘಾತ ವಲಯ, ರಸ್ತೆಯ ಗುಣಮಟ್ಟ, ರಸ್ತೆಗುಂಡಿ ಹೀಗೆ ವಿವಿಧ ಸಮಸ್ಯೆಗಳ ಕುರಿತು ಆಪ್ ಮೂಲಕ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ಮತ್ತು ಸಲಹೆ ನೀಡಬಹುದು. ಅಲ್ಲದೆ ಯಾವುದೇ ಸಂದರ್ಭದಲ್ಲಿ ತುರ್ತು ಸಹಾಯಕ್ಕೆ 1033 ಸಂಖ್ಯೆಗೆ ಉಚಿತ ಕರೆ ಮಾಡಿ ಸಂರ್ಪಸಬಹುದಾಗಿದ್ದು, ಎಲ್ಲೆಡೆ ಒಂದೇ ಸಂಖ್ಯೆ ಲಭ್ಯವಾಗಲಿದೆ. ಜತೆಗೆ ಹಲವು ಪ್ರಾಂತೀಯ ಭಾಷೆಗಳಲ್ಲಿ ಕೂಡ ಸಹಾಯವಾಣಿ ಕಾರ್ಯನಿರ್ವಹಿಸುತ್ತದೆ.
ಭೇಟಿ ಬಚಾವೋ ಭೇಟಿ ಪಡಾವೋ(ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ )
- ಭಾರತ ಸರ್ಕಾರವು ಭೇಟಿ ಬಚಾವೋ ಭೇಟಿ ಪಡಾವೋ (ಬಿಬಿಬಿಪಿ) ಯೋಜನೆಯೊಂದನ್ನು ಮಗುವಿನ ಬದುಕುಳಿಯುವಿಕೆ, ರಕ್ಷಣೆ ಮತ್ತು ಶಿಕ್ಷಣಕ್ಕಾಗಿ ಪರಿಚಯಿಸಿದೆ.
- ಇದು ಸಾಮಾಜಿಕ ಮನಸ್ಸನ್ನು ಬದಲಿಸುವ ಉದ್ದೇಶದಿಂದ ದೇಶದಾದ್ಯಂತ ಸಾಮೂಹಿಕ ಅಭಿಯಾನದ ಮೂಲಕ ಕುಸಿಯುತ್ತಿರುವ ಮಕ್ಕಳ ಸೆಕ್ಸ್ ಅನುಪಾತ (ಸಿಎಸ್ಆರ್) ಮತ್ತು ಸಮಸ್ಯೆಯ ಕ್ಲಿಷ್ಟತೆಯ ಬಗ್ಗೆ ಅರಿವು ಮೂಡಿಸುವ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿಸಿದೆ.
- ಈ ಯೋಜನೆಯು 100 ಜಿಲ್ಲೆಗಳಲ್ಲಿ ಕಡಿಮೆ ಮಕ್ಕಳ ಸೆಕ್ಸ್ ಅನುಪಾತದೊಂದಿಗೆ ಮಧ್ಯಸ್ಥಿಕೆ ಮತ್ತು ಬಹು-ವಲಯ ಕಾರ್ಯವನ್ನು ಕೇಂದ್ರೀಕರಿಸಿದೆ.
- ಭೇಟಿ ಬಚಾವೋ ಭೇಟಿ ಪಡಾವೋ ಪ್ರೋಗ್ರಾಂ ಅಡಿಯಲ್ಲಿ 100 ಜಿಲ್ಲೆಗಳ ಆಯ್ಕೆ / ಗುರುತಿನ ಮಾನದಂಡಗಳು / ಮಾನದಂಡಗಳು ಕೆಳಕಂಡಂತಿವೆ: –
- ರಾಷ್ಟ್ರೀಯ ಸರಾಸರಿ 918 ಕ್ಕಿಂತ ಕೆಳಗಿನಂತೆ ಬಾಲಕರ ಲೈಂಗಿಕ ಅನುಪಾತ ಹೊಂದಿರುವ 23 ರಾಜ್ಯಗಳು / ಯುಟಿಟಿಗಳಿಂದ 87 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.
- 8 ರಾಜ್ಯಗಳು / ಯು.ಟಿ.ಗಳಿಂದ ಮಕ್ಕಳ ಜಿಲ್ಲೆಗಳನ್ನು ರಾಷ್ಟ್ರೀಯ ಸರಾಸರಿ 918 ಕ್ಕಿಂತ ಹೆಚ್ಚಿದೆ ಆದರೆ ಕುಸಿತದ ಪ್ರವೃತ್ತಿಯನ್ನು ತೋರಿಸಲಾಗುತ್ತಿದೆ
- 5 ರಾಜ್ಯಗಳು / ಯು.ಟಿ.ಗಳಿಂದ 5 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಸರಾಸರಿ 918 ಕ್ಕಿಂತ ಮೇಲಿನ ಮಕ್ಕಳ ಸೆಕ್ಸ್ ಅನುಪಾತ ಮತ್ತು ಪ್ರವೃತ್ತಿಯನ್ನು ಸುಧಾರಿಸುವುದರಿಂದ ದೇಶದ ಇತರ ಭಾಗಗಳಿಂದ ಅವರಿಂದ ಕಲಿಯಬಹುದು.
- ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜಂಟಿ ಪ್ರಯತ್ನವಾಗಿದೆ.
- ಈ ಕಾರ್ಯಕ್ರಮದ ಅಡಿಯಲ್ಲಿ ವಿಭಾಗೀಯ ಮಧ್ಯಸ್ಥಿಕೆಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
- ಡಬ್ಲ್ಯೂಸಿಡಿ ಸಚಿವಾಲಯ : ಅಂಗನವಾಡಿ ಸೆಂಟರ್ಗಳಲ್ಲಿ (ಎಡಬ್ಲುಸಿ) ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಗಳನ್ನು ನೋಂದಣಿ ಮಾಡಲು ಉತ್ತೇಜಿಸಿ; ಮಧ್ಯಸ್ಥಗಾರರ ತರಬೇತಿ ಪಡೆಯುವುದು; ಸಮುದಾಯ ಸನ್ನದ್ಧತೆ ಮತ್ತು ಸೂಕ್ಷ್ಮತೆ; ಲಿಂಗ ಚಾಂಪಿಯನ್ಸ್ ಒಳಗೊಳ್ಳುವಿಕೆ; ಸಂಸ್ಥೆಗಳು ಮತ್ತು ಮುಂಚೂಣಿ ಕಾರ್ಮಿಕರ ಪ್ರತಿಫಲ ಮತ್ತು ಮಾನ್ಯತೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ: ಪ್ರಿ-ಕಾನ್ಸೆಪ್ಷನ್ ಮತ್ತು ಪ್ರಿ-ನಟಾಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ಸ್ (PCP & DT) ಆಕ್ಟ್, 1994 ರ ಅನುಷ್ಠಾನದ ಮೇಲ್ವಿಚಾರಣೆ; ಹೆಚ್ಚಿದ ಸಾಂಸ್ಥಿಕ ವಿತರಣೆಗಳು; ಜನನಗಳ ನೋಂದಣಿ; PNDT ಕೋಶಗಳನ್ನು ಬಲಪಡಿಸುವುದು; ಮಾನಿಟರಿಂಗ್ ಸಮಿತಿಗಳನ್ನು ಸ್ಥಾಪಿಸುವುದು.
- ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ: ಯುನಿವರ್ಸಲ್ ಬಾಲಕಿಯರ ನೋಂದಣಿ; ಡ್ರಾಪ್-ಔಟ್ ದರ ಕಡಿಮೆಯಾಗಿದೆ; ಶಾಲೆಗಳಲ್ಲಿ ಹುಡುಗಿಯ ಸ್ನೇಹಿ ಮಾನದಂಡಗಳು; ಶಿಕ್ಷಣ ಹಕ್ಕು ಕಟ್ಟುನಿಟ್ಟಾದ ಅನುಷ್ಠಾನ (ಆರ್ ಟಿ ಇ); ಬಾಲಕಿಯರ ಕ್ರಿಯಾತ್ಮಕ ಶೌಚಾಲಯಗಳ ನಿರ್ಮಾಣ.
- ಬೆಟಿ ಬಚಾವೊ, ಬೆಟ್ಟಿ ಪಧಾವ್ (ಬಿಬಿಬಿಪಿ) ಯೋಜನೆ ಇತ್ತೀಚೆಗೆ ಅಂಗೀಕರಿಸಲ್ಪಟ್ಟಂತೆ, ರಾಜ್ಯಗಳಿಗೆ ಯಾವುದೇ ನಿಧಿಯನ್ನು ಹಂಚಿಕೆ ಮಾಡಲಾಗಿಲ್ಲ.
1.ಕರ್ನಾಟಕ ಧ್ವಜ ರಚನೆ ಸಮಿತಿಯ ಅಧ್ಯಕ್ಷರು ಯಾರು ?
A)ಚಕ್ರವರ್ತಿ ಮೋಹನ್
B)ಸದಾಶಿವಂ
C)ಪರಮಶಿವಯ್ಯ
D) ಈ ಮೇಲಿನ ಯಾರು ಅಲ್ಲ
2.ನಾಡೋಜ ಗೌರವವನ್ನು ಯಾವ ವಿಶ್ವವಿದ್ಯಾಲಯ ನೀಡುತದೆ ?
A)ಅಕ್ಕ ಮಹಾದೇವಿ ವಿಶ್ವವಿದ್ಯಾಲಯ
B)ಬೆಂಗಳೂರು ವಿಶ್ವವಿದ್ಯಾಲಯ
C)ಹಂಪಿ ಕನ್ನಡ ವಿಶ್ವವಿದ್ಯಾಲಯ
D)ಧಾರವಾಡ ವಿಶ್ವವಿದ್ಯಾಲಯ
3.ಮಹಿಳೆಯರಿಗಾಗಿ ಸುವಿಧಾ ಯೋಜನೆಯನ್ನು ಯಾವ ಯೋಜನೆಯಡಿಯಲ್ಲಿ ಪ್ರಾರಂಬಿಸಿಲಾಗಿದೆ ?
Aಸುಕನ್ಯಾ ಸಮೃದ್ಧಿ ಯೋಜನಾ
B)ಪ್ರಧಾನ್ ಮಂತ್ರಿ ಮಾತೃತ್ವ ಅಭಿಯಾನ್ ಯೋಜನೆ
C)ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ
D)ಕಿಲ್ಕಾರಿ
4.ಸುಖದ್ ಯಾತ್ರಾ ಯಾವುದಕ್ಕೆ ಸಂಬಂಧಪಟ್ಟಿದೆ ?
A)ರಾಷ್ಟೀಯ ಹೆದ್ದಾರಿಗಳಿಗೆ
B)ರಾಜ್ಯ ಹೆದ್ದಾರಿಗಳಿಗೆ
C)೧ ಮತ್ತು ೨
D)ಯಾವುದು ಅಲ್ಲ
5.ಇತ್ತೀಚೆಗೆ ಈ ದೇಶವು ಸೌದಿ ಅರೇಬಿಯಾವನ್ನು ಭಾರತದ ಅಗ್ರ ಕಚ್ಚಾ ತೈಲ ಸರಬರಾಜುದಾರನನ್ನಾಗಿ ಮೀರಿಸುತ್ತದೆ.
A)ಇರಾನ್
B)ಇರಾಕ್
C)ನೈಜೀರಿಯಾ
D)ಕುವೈತ್
6.ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ ತಿದ್ದುಪಡಿ?
A)61ನೇ ತಿದ್ದುಪಡಿ
B)77 ನೇ ತಿದ್ದುಪಡಿ
C)91 ನೇ ತಿದ್ದುಪಡಿ
D)101 ನೇ ತಿದ್ದುಪಡಿ
7.1977ರಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಮುಂದಾಳತ್ವದಲ್ಲಿ ಯಾವ ರಾಷ್ಟ್ರೀಯ ಪಕ್ಷವನ್ನು ಸ್ಥಾಪನೆ ಮಾಡಲಾಯಿತು?
A) ಭಾರತೀಯ ಜನತಾ ಪಕ್ಷ
B) ಜನ ಸೇವಾ ಪಕ್ಷ
C) ಜನತಾ ಪಕ್ಷ
D) ಜನತಾ ದಳ
8.ಚಾರ್ಟರ್ ಕಾಯ್ದೆ ೧೮೩೩ ಪ್ರಕಾರ ಯಾರ ಅಧ್ಯಕ್ಷತೆಯಲ್ಲಿ ಮೊದಲ ಕಾನೂನು ಆಯೋಗವನ್ನು ನೇಮಿಸಲಾಯಿತು.
A)ಲಾರ್ಡ್ ರಿಪ್ಪನ್
B)ಲಾರ್ಡ್ ಕ್ಲಾನಿಂಗ್
C)ಲಾರ್ಡ ಮೆಕಾಲೆ
D)ಲಾರ್ಡ್ ವಿಲಿಯಂ ಬೆಂಟಿಂಗ್
9.ಕೆಳಗಿನವುಗಳಲಲ್ಲಿ ಯಾವ ಕೇಸ್ ನಲ್ಲಿ, ಪೀಠಿಕೆಯು ರಾಜ್ಯಾಂಗದ ಒಂದು ಭಾಗವಲ್ಲವೆಂದು ಸುಪ್ರೀಂಕೋರ್ಟ ನಿರ್ಧರಿಸಿದೆ?
A) ಬೇರುಬರಿ ಕೇಸು
B) ಗೋಲಕ್ ನಾಥ್ ಕೇಸು
C) ಕೇಶವಾನಂದ ಭಾರತಿ ಕೇಸು
D) ಮೇಲಿನ ಯಾವುದು ಅಲ್ಲ
10.ಯುನಿಸ್ಎಫ್ ಬಿಡುಗಡೆ ಮಾಡಿದ ವರದಿಯಲ್ಲಿ ‘ಪ್ರತಿ ಮಗುವಿನ ಅಲೈವ್’, ಯಾವ ದೇಶವು ಶಿಶು ಮರಣ ಪ್ರಮಾಣದಲ್ಲಿನ ಕೆಟ್ಟ ಸ್ಥಿತಿಯನ್ನು ಹೊಂದಿರುವ ದೇಶವನ್ನು ಘೋಷಿಸಿದೆ?
A) ಭಾರತ
B)ಗಿನಿಯಾ-ಬಾಸ್ಸೌ
C)ದಕ್ಷಿಣ ಸುಡಾನ್
D)ಪಾಕಿಸ್ತಾನ
ಉತ್ತರಗಳು
1.A 2.C 3.C 4.A 5.B 6.A 7.C 8.C 9. A 10.D








