9th & 10th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

 ‘ರಾಮಾಯಣ ದರ್ಶನ’

 • ಸುದ್ಧಿಯಲ್ಲಿ ಏಕಿದೆ? ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.
 • ಅಯೋಧ್ಯದಿಂದ ರಾಮೇಶ್ವರ ಮಾರ್ಗವಾಗಿ ಕೋಲೊಂಬೊವರೆಗೆ 16 ದಿನಗಳ ಪ್ರಯಾಣದಲ್ಲಿ ಈ ಸ್ಥಳಗಳ ದರ್ಶನ ಭಾಗ್ಯ ಪ್ರಯಾಣಿಕರಿಗೆ ಸಿಗಲಿದೆ. ‘ಶ್ರೀ ರಾಮಾಯಣ ದರ್ಶನಂ’ ಎಂದು ರೈಲಿಗೆ ನಾಮಕರಣ ಮಾಡಲಾಗಿದ್ದು, ನವೆಂಬರ್ 14ರಂದು ಇದಕ್ಕೆ ಚಾಲನೆ ದೊರೆಯಲಿದೆ.
 • 800 ಪ್ರಯಾಣಿಕರು ಒಟ್ಟಿಗೆ ಈ ರೈಲಿನಲ್ಲಿ ಪ್ರಯಾಣಿಸಬಹುದು. ಪ್ರತಿಯೊಬ್ಬರಿಗೆ 15,120 ರೂ. (ಭಾರತದ ಪ್ರವಾಸಕ್ಕೆ ಮಾತ್ರ) ದರ ನಿಗದಿ ಮಾಡಲಾಗಿದೆ. ಈ ಮೊತ್ತದಲ್ಲಿ ಊಟದ ವ್ಯವಸ್ಥೆ, ವಸತಿ, ಸ್ಥಳ ವೀಕ್ಷಣೆ ಎಲ್ಲವನ್ನೂ ಒಳಗೊಂಡಿದೆ. ರೈಲು ನಿಲ್ದಾಣದಿಂದ ಪ್ರತಿಯೊಂದು ಸ್ಥಳಕ್ಕೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ’ .

ಹಂಪಿಗೂ ಬರಲಿದೆ ರೈಲು

 • ದೆಹಲಿಯ ಸ್ದರ್‌ಜಂಗ್ ಸ್ಟೇಷನ್‌ನಿಂದ ಪ್ರಯಾಣ ಆರಂಭವಾಗಲಿದ್ದು, ರಾಮನ ಜನ್ಮಭೂಮಿಯಾಗಿರುವ ಅಯೋಧ್ಯೆಯಲ್ಲಿ ಮೊದಲ ನಿಲುಗಡೆ ಇರಲಿದೆ. ಅಲ್ಲಿಂದ ರೈಲು ನಂದಿಗ್ರಾಮ, ಸೀತಾ ಮಹ್ರಿ, ಜನಕಪರ್​, ವಾರಾಣಸಿ, ಪ್ರಯಾಗ, ಶ್ರಂಗವೀರ್​ಪುರ್​, ಚಿತ್ರಕೂಟ, ನಾಸಿಕ್​, ಹಂಪಿ ಮತ್ತು ರಾಮೇಶ್ವರಂಗೆ ತಲುಪಲಿದೆ.
 • ಶ್ರೀಲಂಕಾದಲ್ಲಿರುವ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ಇರುವವರನ್ನು ರೈಲ್ವೆ ಇಲಾಖೆ ಚೆನ್ನೈನಿಂದ ಶ್ರೀಲಂಕಾಗೆ ಕರೆದೊಯ್ದು, ರಂಬೋಡಾ, ನುವಾರಾ ಎಲಿಯಾ ಮತ್ತು ಚಿಲಾವ್​ ಸ್ಥಳಗಳ ದರ್ಶನ ಮಾಡಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ಕೃಷ್ಟ ಸ್ಥಾನಮಾನ

 • ಸುದ್ಧಿಯಲ್ಲಿ ಏಕಿದೆ? ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸೇರಿದಂತೆ ದೇಶದ ಆರು ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ ‘ಉತ್ಕೃಷ್ಟ ಸಂಸ್ಥೆ ಸ್ಥಾನಮಾನ’ ನೀಡಿದೆ. ಆರರಲ್ಲಿ ಮೂರು ಸರಕಾರಿ ಮತ್ತು ಮೂರು ಖಾಸಗಿ ಸಂಸ್ಥೆಗಳು.

ಉತ್ಕ್ರುಷ್ಟ ಸ್ಥಾನಮಾನ ನೀಡಲು ಕಾರಣವೇನು ?

 • ಜಾಗತಿಕ ಮಟ್ಟದಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್‌ ಹೆಚ್ಚಿಸುವ ಉದ್ದೇಶದಿಂದ, ವಿಶ್ವ ದರ್ಜೆಯ ವಿವಿಗಳನ್ನು ಸೃಷ್ಟಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಸ್ಥಾನಮಾನದಿಂದ ಅವುಗಳಿಗೆ ಸಂಪೂರ್ಣ ಸ್ವಾಯತ್ತತೆ ದೊರೆಯಲಿದೆ. ಮೂರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 1000 ಕೋಟಿ ರೂ. ಅನುದಾನ ದೊರೆಯಲಿದೆ. ಆದರೆ, ಖಾಸಗಿ ಸಂಸ್ಥೆಗಳಿಗೆ ಈ ಅನುದಾನ ಇರುವುದಿಲ್ಲ.
 • ಗೌರವ ಪಡೆದ ಸಂಸ್ಥೆಗಳು: ಐಐಟಿ ದಿಲ್ಲಿ ,ಐಐಟಿ ಮುಂಬಯಿ , ಐಐಎಸ್ಸಿ, ಬೆಂಗಳೂರು , ಮಾಹೆ ಮಣಿಪಾಲ ,ಬಿಟ್ಸ್‌ , ಪಿಳ್ಳಾನಿ, ರಾಜಸ್ಥಾನ , ಜಿಯೊ ಇನ್‌ಸ್ಟಿಟ್ಯೂಟ್‌
 • ಜಾಗತಿಕ ರ‍್ಯಾಂಕಿಂಗ್‌ಗೆ ಫೈಟ್‌
  ಜಾಗತಿಕ ಮಟ್ಟದಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್‌ ಕಡಿಮೆ ಇದ್ದು, ಇದನ್ನು ಎತ್ತರಿಸುವ ಪ್ರಯತ್ನವಾಗಿ ಈ ಸ್ಥಾನಮಾನ ನೀಡಲಾಗುತ್ತಿದೆ. ಜಾಗತಿಕವಾಗಿ 500 ರ‍್ಯಾಂಕಿಂಗ್‌ನೊಳಗೆ ಬರಬಹುದಾದ ಅಥವಾ ಎತ್ತರಿಸಬಹುದಾದ 10 ಸರಕಾರಿ ಮತ್ತು 10 ಖಾಸಗಿ ಸಂಸ್ಥೆಗಳನ್ನು ಗುರುತಿಸಲು ಮಾಜಿ ಮುಖ್ಯ ಚುನಾವಣಾ ಕಮಿಷನರ್‌ ಎನ್‌.ಗೋಪಾಲಸ್ವಾಮಿ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಆದರೆ, ಸಮಿತಿಗೆ ಆ ಮಟ್ಟದ ತಲಾ 10 ಸಂಸ್ಥೆಗಳು ಸಿಗದೆ ತಲಾ ಮೂರನ್ನು ಆಯ್ಕೆ ಮಾಡಿವೆ.
 • ಏನೇನು ವಿಶೇಷ ಸೌಲಭ್ಯ?
  * ಆರೂ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ.
  * ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು.
  * ಯಾವುದೇ ಹೊಸ ಕೋರ್ಸ್‌ ಆರಂಭಕ್ಕೆ ಅವಕಾಶ.
  * ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಸ್ವಾತಂತ್ರ್ಯ
  * ವಿದೇಶದ ಬೋಧಕರನ್ನು ನೇಮಿಸಲು ಅವಕಾಶ
  * ಸರಕಾರದ ಅನುಮತಿ ಇಲ್ಲದೆಯೇ ಯಾವುದೇ ವಿದೇಶಿ ಶಿಕ್ಷಣ ಸಂಸ್ಥೆಗಳ ಜತೆ ಸಮನ್ವಯ.

ವೇಗದ ಬೆಳವಣಿಗೆಗಾಗಿ ಈ ಕ್ರಮ 

 • 200ರೊಳಗಿನ ರಾರ‍ಯಂಕಿಂಗ್‌ ಪಡೆಯಲು ಭಾರಿ ವೇಗದ ಬೆಳವಣಿಗೆ ಅಗತ್ಯವಿದೆ. ಹಾಗಾಗಿ ಸಂಪೂರ್ಣ ಸ್ವಾಯತ್ತತೆ ಮೂಲಕ ಬೆಳೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಜಾಗತಿಕ ಮಟ್ಟದ ಕೌಶಲ ಮತ್ತು ಗುಣಮಟ್ಟಕ್ಕೇರಿಸಿಕೊಂಡು ವಿಶ್ವ ದರ್ಜೆಗೇರಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ.
 • ದೊಡ್ಡ ಮಟ್ಟದ ಪೈಪೋಟಿ
  ಉತ್ಕೃಷ್ಟ ಸ್ಥಾನಮಾನ ಪಡೆಯಲು ದೊಡ್ಡ ಪೈಪೋಟಿಯೇ ನಡೆದಿತ್ತು. 11 ಕೇಂದ್ರೀಯ ವಿವಿಗಳು, 27 ರಾಷ್ಟ್ರೀಯ ಮಹತ್ವದ ಸಂಸ್ಥೆಗಳು, ಐಐಟಿಗಳು ಮತ್ತು ಎನ್‌ಐಟಿಗಳು, 27 ರಾಜ್ಯ ವಿವಿಗಳು, 10 ಖಾಸಗಿ ವಿವಿಗಳು, ನಾಲ್ಕು ಗ್ರೀನ್‌ ಫೀಲ್ಡ್‌ ಸಂಸ್ಥೆಗಳು ಸೇರಿದಂತೆ 114 ಸಂಸ್ಥೆಗಳ ನಡುವೆ ಈ ಆಯ್ಕೆ ನಡೆದಿದೆ. ಖಾಸಗಿ ವಿವಿಗಳ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ರಿಲಯನ್ಸ್‌ ಸಂಶೋಧನಾ ಪ್ರತಿಷ್ಠಾನ(ರಿಲಯನ್ಸ್‌ ಗ್ರೂಪ್‌), ಭಾರ್ತಿ ಯುನಿವರ್ಸಿಟಿ(ಏರ್‌ಟೆಲ್‌), ಅನಿಲ್‌ ಅಗರ್ವಾಲ್‌ ಅವರ ವೇದಾಂತ ವಿವಿ, ಒಡಿಶಾ, ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ ರಾಜನ್‌ ಸಲಹೆಗಾರರಾಗಿರುವ ಕೆಆರ್‌ಇಎ ವಿವಿ, ಹೈದರಾಬಾದ್‌ನ ಇಂಡಿಯನ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌, ದಿಲ್ಲಿಯ ಇಂಡಸ್‌ ಟೆಕ್‌ ವಿವಿ, ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್‌ಗಳು ಸೇರಿವೆ.

ಮದತ್‌ಗಾರ್

 • ಸುದ್ಧಿಯಲ್ಲಿ ಏಕಿದೆ? ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳ ದೈನಂದಿನ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಿಆರ್‌ಪಿಎಫ್ ಕಳೆದ ವರ್ಷ ಮದತ್‌ಗಾರ್ (ಸಹಾಯವಾಣಿ) ಉಪಕ್ರಮವನ್ನು ಪ್ರಾರಂಭಿಸಿದೆ.
 • ಇದರನ್ವಯ 67 ಬಟಾಲಿಯನ್‌ನ ಪ್ರತಿ ಘಟಕಕಕ್ಕೆ ( ಸುಮಾರು 67,000 ಪುರುಷರು) ಕಾಶ್ಮೀರಿಗಳ ಸಮಸ್ಯೆ ಸ್ಪಂದನೆಗೆ ಆದ್ಯತೆ ನೀಡಿ ಶೀಘ್ರ ಪರಿಹಾರಕ್ಕೆ ಸೂಚಿಸಲಾಗಿದೆ. ಒಂದು ವರ್ಷದಲ್ಲಿ ಈ ಸಹಾಯವಾಣಿಗೆ ಬಂದ ಕರೆಗಳು ಬರೋಬ್ಬರಿ 2,22,345.
 • ಜೂನ್ 16, 2017ರಲ್ಲಿ ಪ್ರಾರಂಭವಾದ ಈ ಸಹಾಯವಾಣಿ ಚುಡಾವಣೆ, ನೀರು, ವಿದ್ಯುತ್, ರಸ್ತೆ, ವೈದ್ಯಕೀಯ ತುರ್ತು, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಹಿಂಸೆ, ಪಾಕೃತಿಕ ವಿಕೋಪ, ಅಗ್ನಿ ಅವಘಡ, ಅಪಹರಣ, ಬೆದರಿಕೆ, ವಿದ್ಯಾರ್ಥಿಗಳ ಸಮಸ್ಯೆ ಸೇರಿದಂತೆ ದೈನಂದಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತಿದೆ.
 • ಅಷ್ಟೇ ಅಲ್ಲ ನೌಕರಿ ಮಾಹಿತಿ, ಶಿಕ್ಷಣ , ಕ್ರೀಡಾ ಸಲಹೆಗಳನ್ನು ಸಹ ನೀಡುತ್ತದೆ.
 • ಪ್ರತಿ ಘಟಕ ಸಂಬಂಧಿತ ಪೊಲೀಸ್ ಠಾಣೆಯ ಸಂಪರ್ಕದಲ್ಲಿದ್ದು, ಅಗತ್ಯ ಬಿದ್ದರೆ ಪೊಲೀಸರ ಸಹಾಯವನ್ನು ಪಡೆದುಕೊಳ್ಳುತ್ತದೆ.

ರೋಸ್ಟರ್ ಪದ್ದತಿ

 • ಸುದ್ಧಿಯಲ್ಲಿ ಏಕಿದೆ? ಸುಪ್ರೀಂ ಕೋರ್ಟ್​ನ ರೋಸ್ಟರ್​ಗೆ ಮುಖ್ಯ ನ್ಯಾಯಮೂರ್ತಿಯೇ ಮುಖ್ಯಸ್ಥರು ಎಂದು ವಿಭಾಗೀಯ ಪೀಠ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
 • ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಕೆ. ಸಿಕ್ರಿ ಹಾಗೂ ನ್ಯಾ.ಅಶೋಕ್ ಭೂಷಣ್ ವಿಭಾಗೀಯ ಪೀಠವು ರೋಸ್ಟರ್ ವಿವಾದಕ್ಕೆ ತೆರೆ ಎಳೆದಿದೆ. ಸುಪ್ರೀಂ ಕೋರ್ಟ್​ನ ವ್ಯವಸ್ಥೆ ಹಾಗೂ ನ್ಯಾಯಮೂರ್ತಿಗಳ ಹಿರಿತನದ ಆಧಾರದಲ್ಲಿ ಮುಖ್ಯ ನ್ಯಾಯಮೂರ್ತಿಯೇ ಪ್ರಕರಣಗಳ ಹಂಚಿಕೆ ಅಥವಾ ರೋಸ್ಟರ್ ನಿರ್ಧರಿಸುತ್ತಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಹಿರಿಯ ನ್ಯಾಯಮೂರ್ತಿಗಳಲ್ಲಿ ಸಿಜೆಐ ಮೊದಲಿಗರಾಗಿದ್ದು, ಕೋರ್ಟ್​ನ ಆಡಳಿತ ವ್ಯವಸ್ಥೆಯ ಜವಾಬ್ದಾರಿ ಹೊಂದಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹಿನ್ನಲೆ :

 • ಜನವರಿ 12 ರಂದು ನ್ಯಾಯಮೂರ್ತಿ ಜೆ.ಚೆಲಮೇಶ್ವರ್, ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಮತ್ತು ಜಸ್ಟಿಸ್ ಕುರಿಯನ್ ಜೋಸೆಫ್ ಅವರು ನ್ಯಾಯಾಲಯದ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಖ್ಯ ನ್ಯಾಯಾಧೀಶರೊಂದಿಗಿನ ಭಿನ್ನಾಭಿಪ್ರಾಯಗಳನ್ನು ದಾಖಲಿಸಲು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದರು . ನಂತರ, ಅವರು ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರವನ್ನು ಮಾಧ್ಯಮಕ್ಕೆ ನೀಡಲಾಯಿತು.

ರೋಸ್ಟರ್ನ ಮಾಸ್ಟರ್’ ಎಂದರೇನು?

 • ‘ಮಾಸ್ಟರ್ ಆಫ್ ದಿ ರೋಸ್ಟರ್’ ಮುಖ್ಯ ನ್ಯಾಯಮೂರ್ತಿ ಸವಲತ್ತುಗಳನ್ನು ಕೇಳುವುದಕ್ಕೆ ಬೆಂಚೆಸ್ ಅನ್ನು ರೂಪಿಸುತ್ತದೆ.
 • ಮುಖ್ಯ ನ್ಯಾಯಮೂರ್ತಿ ದಿಪಾಕ್ ಮಿಶ್ರರ ನೇತೃತ್ವದಲ್ಲಿ ಸಂವಿಧಾನ ನ್ಯಾಯಪೀಠವು “ಮುಖ್ಯ ನ್ಯಾಯಮೂರ್ತಿ ಮುಖ್ಯಸ್ಥನಾಗಿದ್ದಾನೆ ಮತ್ತು ಅವರು ನ್ಯಾಯಾಲಯದ ಬೆಂಚ್ಗಳನ್ನು ಸ್ಥಾಪಿಸುವ ವಿಶೇಷ ಅಧಿಕಾರ ಹೊಂದಿದ್ದಾರೆ ಮತ್ತು  ಕೇವಲ ಅವರೊಬ್ಬರಿಗೆ ಮಾತ್ರ ಆ ಅಧಿಕಾರವಿದೆ ” ಎಂದು ಕಳೆದ ವರ್ಷ ನವೆಂಬರ್ನಲ್ಲಿ ಈ ಸವಲತ್ತು ಒತ್ತಿಹೇಳಿತು
 • ಅವರು ನ್ಯಾಯಾಲಯದ ಮುಖ್ಯಸ್ಥರಾಗಿರುವ ಕಾರಣ ಯಾವುದೇ ನ್ಯಾಯಾಧೀಶರು ಈ ವಿಷಯದ ಬಗ್ಗೆ ಯಾವುದೇ ತೀರ್ಪು ತೆಗೆದುಕೊಳ್ಳಬಾರದು

ಕೇಸ್ಗಳನ್ನು ಹೇಗೆ ಸಂಯೋಜಿಸಲಾಗಿದೆ ?

 • ಎಸ್ಸಿ ರೋಸ್ಟರ್ ಸಿಸ್ಟಮ್ ಪ್ರಕಾರ, ಪ್ರಕರಣಗಳ ಹಂಚಿಕೆಗೆ ಯಾವುದೇ ಸೆಟ್ ನಿಯಮಗಳಿಲ್ಲ, ಆದರೆ ಸಾಮಾನ್ಯವಾಗಿ, ಪ್ರಕರಣಗಳು ವಿಷಯದ ಆಧಾರದ ಮೇಲೆ ವಿಂಗಡಿಸಲಾಗಿದೆ, ಮತ್ತು ಆ ವಿಷಯಗಳಲ್ಲಿ ವ್ಯವಹರಿಸುವ ಬೆಂಚುಗಳಿಗೆ ನಿಯೋಜಿಸಲಾಗಿದೆ.
 • ಸಿ.ಜೆ.ಐ.ಐ ಅದನ್ನು ಅಂಗೀಕರಿಸಬೇಕು, ಆದರೆ ರೋಸ್ಟರ್ನ ಮುಖ್ಯಸ್ಥರಾಗಿ, ಅವರು ಬದಲಾವಣೆಗಳನ್ನು ಮಾಡಲು ಅಥವಾ ದೊಡ್ಡ ಬೆಂಚುಗಳನ್ನು ಸ್ಥಾಪಿಸಲು ನಿರ್ಧರಿಸುವ ಅಧಿಕಾರವನ್ನು ಹೊಂದಿದ್ದಾರೆ.

ತೀರ್ಮಾನ :

 • ಅಧಿಕಾರವನ್ನು ಮುಖ್ಯ ನ್ಯಾಯಮೂರ್ತಿಗೆ ಒಪ್ಪಿಸಲಾಗಿದೆ ಏಕೆಂದರೆ ನ್ಯಾಯಾಲಯದ ಆಡಳಿತಾತ್ಮಕ ಮತ್ತು ನ್ಯಾಯಾಂಗ ಕೆಲಸದ ಪರಿಣಾಮಕಾರಿ ವಹಿವಾಟುಗಳಿಗೆ ಅಂತಹ ವಹಿವಾಟುಗಳು ಅಗತ್ಯವಾಗಿರುತ್ತದೆ. ಸುಪ್ರೀಂ ಕೋರ್ಟ್ ತನ್ನ ಅಸ್ತಿತ್ವಕ್ಕಾಗಿ ತಾರ್ಕಿಕ ಆಡಳಿತ ನಡೆಸುವ ಮತ್ತು ಒದಗಿಸುವ ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ಪೂರೈಸಲು ಮತ್ತು ಹೊರಹಾಕಲು ಸಾಧ್ಯವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಅಧಿಕಾರಕ್ಕೆ ಒಪ್ಪಿಸುವ ಹಿಂದಿನ ಉದ್ದೇಶ. ಅಪನಂಬಿಕೆಯ ಕಲ್ಪನೆಯು ಸಾಧ್ಯವಿಲ್ಲ.

ಪ್ರಾಜೆಕ್ಟ್ ಶಕ್ತಿ

 • ಸುದ್ಧಿಯಲ್ಲಿ ಏಕಿದೆ? ಮತಗಟ್ಟೆ ಹಂತದ ಕಾರ್ಯಕರ್ತರನ್ನು ಸಂರ್ಪಸುವ ವಿನೂತನ ಯೋಜನೆ ‘ಪ್ರಾಜೆಕ್ಟ್ ಶಕ್ತಿಗೆ ಮಹಾರಾಷ್ಟ್ರದಲ್ಲಿ ಚಾಲನೆ ನೀಡಲಾಗಿದೆ.
 • ಕಳೆದ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದಲ್ಲಿಯೂ ಮತಗಟ್ಟೆ ಸಮಿತಿ ಹಾಗೂ ಕಾರ್ಯಕರ್ತರ ಮಾಹಿತಿ ಕ್ರೋಡೀಕರಿಸುವ ವಿಶೇಷ ಅಭಿಯಾನ ನಡೆಸಲಾಗಿತ್ತು.
 • ಪಕ್ಷವು ಮತಗಟ್ಟೆ ಹಂತದಲ್ಲಿ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತದೆ. ಹಾಗೆಯೇ ಕಾರ್ಯಕರ್ತರಿಗೆ ಪಕ್ಷ ಸಂಪರ್ಕಕ್ಕೆ ಪ್ರತ್ಯೇಕ ಮೊಬೈಲ್ ಸಂಖ್ಯೆ ನೀಡಲಾಗುತ್ತದೆ. ಅವರ ಗೊಂದಲ ನಿವಾರಣೆಗೆ ಕೇವಲ ಒಂದು ಸಂದೇಶ ಕಳುಹಿಸಿದರೆ ಪ್ರತಿಯಾಗಿ ಪಕ್ಷದಿಂದ ಕರೆ ಬರುತ್ತದೆ. ಹಾಗೆಯೇ ಪಕ್ಷದ ಅಧ್ಯಕ್ಷರು ಕೂಡ ಈ ಮಾಹಿತಿ ಆಧರಿಸಿ ಯಾವುದೇ ಕಾರ್ಯಕರ್ತರ ಜತೆ ನೇರವಾಗಿ ಮಾತನಾಡಬಹುದಾಗಿದೆ.

ವಿಶ್ವದ ಅತಿದೊಡ್ಡ ಮೊಬೈಲ್​ತಯಾರಕಾ ಘಟಕ

 • ಸುದ್ಧಿಯಲ್ಲಿ ಏಕಿದೆ? ವಿಶ್ವದ ಅತಿದೊಡ್ಡ ಮೊಬೈಲ್‌ಫೋನ್ ತಯಾರಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೋನ್ ಜೇ ನೋಯ್ಡಾದಲ್ಲಿ ಚಾಲನೆ ನೀಡಿದರು.
 • ಈ ಘಟಕ ವಾರ್ಷಿಕ 1.20 ಕೋಟಿ ಮೋಬೈಲ್‌ಫೋನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಶೇ70ರಷ್ಟು ಫೋನ್‌ಗಳು ದೇಶೀಯ ಮಾರುಕಟ್ಟೆಯಲ್ಲೇ ಮಾರಾಟವಾಗಲಿವೆ.
 • ಸ್ಯಾಮ್‌ಸಂಗ್​ನ ಈ ಕಾರ್ಖಾನೆಯು ವರ್ಷಕ್ಕೆ 1.20 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲಿದೆ. ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳಿಂದ ಕಂಪನಿಯ ಪ್ರತಿಷ್ಠಿತ ಎಸ್‌9 ಮಾದರಿಯ ಸ್ಮಾರ್ಟ್‌ಫೋನ್‌ವರೆಗೆ ಹಲವು ಮಾದರಿಗಳ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲಿದೆ.

ಸ್ಯಾಮ್‌ಸಂಗ್ ಭಾರತವನ್ನೇ ಆಯ್ದುಕೊಂಡಿದ್ದು ಏಕೆ ?

ಇದಕ್ಕೆ ಕಾರಣಗಳು ಹಲವು

 • ಮೊದಲನೆಯದಾಗಿ ದೇಶದಲ್ಲಿ ದಿನೇದಿನೆ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಭಾರತದಲ್ಲಿದೆ! ವರ್ಷಾಂತ್ಯದ ವೇಳೆಗೆ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ 34 ಕೋಟಿಗೆ ಏರುವ ನಿರೀಕ್ಷೆ ಇದೆ.
 • ಚೀನಾದ ನಂತರ ಭಾರತವೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ಇದೇ ವೇಳೆ ಮೊಬೈಲ್‌ ಹ್ಯಾಂಡ್‌ಸೆಟ್‌ಗಳ ಉತ್ಪಾದನೆಯಲ್ಲೂ ಭಾರತವು ಮುಂದಿನ ಕೆಲವೇ ವರ್ಷಗಳಲ್ಲಿ ಅಮೆರಿಕವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರುವ ಸಾಧ್ಯತೆ ಇದೆ!
 • ಸ್ಯಾಮ್‌ಸಂಗ್‌ನಂಥ ದಿಗ್ಗಜ ಕಂಪನಿಗಳಿಗೆ ಭಾರತದಲ್ಲಿ ತಮ್ಮ ಉತ್ಪಾದನಾ ಸಾಮರ್ಥ್ಯ‌ ವಿಸ್ತರಣೆಗೆ ಇಲ್ಲಿನ ಮಾರುಕಟ್ಟೆ ಮತ್ತು ಭವಿಷ್ಯದ ಅವಕಾಶಗಳು ಪ್ರೇರಣೆಯಾಗಿದೆ. ಜತೆಗೆ ಮೇಕ್‌ ಇನ್‌ ಇಂಡಿಯಾ ಅಭಿಯಾನದ ಅಡಿಯಲ್ಲಿ ಕೂಡ ಸ್ಮಾರ್ಟ್‌ಫೋನ್‌ ಉತ್ಪಾದನೆಗೆ ಉತ್ತೇಜನವನ್ನು ಕೇಂದ್ರ ಸರಕಾರ ನೀಡುತ್ತಿದೆ.

ಯುವಜನತೆಯ ಬೇಡಿಕೆ: 

 • ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಯುವಜನತೆಯೇ ಬಹುಪಾಲು. 2022ರ ವೇಳೆಗೆ ಸ್ಮಾರ್ಟ್‌ಫೋನ್‌ ಗ್ರಾಹಕರ ಸಮಖ್ಯೆ 44 ಕೋಟಿ ದಾಟುವ ನಿರೀಕ್ಷೆ ಇದೆ. ಹೀಗಾಗಿ ಸ್ಯಾಮ್‌ಸಂಗ್‌ ತನ್ನ ನೋಯ್ಡಾ ಘಟಕವನ್ನು ವಿಸ್ತರಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ.
 • ಸ್ಯಾಮ್‌ಸಂಗ್‌ ದೇಶೀಯ ಮಾರುಕಟ್ಟೆ ಮಾತ್ರವಲ್ಲದೆ ಯುರೋಪ್‌, ಪಶ್ಚಿಮ ಏಷ್ಯಾ, ಆಫ್ರಿಕಾಗೆ ರಫ್ತು ಉದ್ದೇಶಕ್ಕೂ ಕಾರ್ಖಾನೆಯನ್ನು ಬಳಸಿಕೊಳ್ಳಲಿದೆ. ನೋಯ್ಡಾದಲ್ಲಿ 1995ರಲ್ಲಿ ತನ್ನ ಉತ್ಪಾದನಾ ಘಟಕ ತೆರೆದಿದ್ದ ಸ್ಯಾಮ್‌ಸಂಗ್‌, ಆರಂಭದಲ್ಲಿ ಟಿ. ವಿಗಳನ್ನು ಉತ್ಪಾದಿಸುತ್ತಿತ್ತು. ನಂತರ ರೆಫ್ರಿಜರೇಟರ್‌, ಈಗ ಮೊಬೈಲ್‌ ಉತ್ಪಾದನೆಗೆ ಮುಂದಾಗಿದೆ.
 • ನೋಯ್ಡಾ ಹಾಗೂ ಶ್ರೀಪೆರಂಬದೂರಿನಲ್ಲಿ ಕಂಪನಿಯ ಉತ್ಪಾದನಾ ಘಟಕವಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಇತರ ಕಡೆಗಳಲ್ಲಿವೆ. ಮೊದಲಿಗೆ ತೈವಾನ್‌ ಮೂಲದ ಎಲೆಕ್ಟ್ರಾನಿಕ್ಸ್‌ ಕಂಪನಿ ಫೋಕ್ಸ್‌ಕಾನ್‌ ಭಾರತದಲ್ಲಿ ದೊಡ್ಡಮಟ್ಟಿಗೆ ಮೊಬೈಲ್‌ ಉತ್ಪಾದನೆ ಆರಂಭಿಸಿತು. ಇದೀಗ ಸ್ಯಾಮ್‌ಸಂಗ್‌ ದೈತ್ಯ ಹೆಜ್ಜೆಯನ್ನಿಟ್ಟಿದೆ.
 • ಎಫ್‌ಡಿಐ ಉದಾರೀಕರಣ: ಭಾರತ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್‌ ಉತ್ಪಾದನಾ ವಲಯಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯ ನೀತಿಗಳನ್ನು ಸಡಿಲಗೊಳಿಸಿದೆ. ಇದರಿಂದ ಕಂಪನಿಗಳಿಗೆ ಸಗಟು ಮತ್ತು ರಿಟೇಲ್‌, ಇ-ಕಾಮರ್ಸ್‌ ವಿಭಾಗದಲ್ಲಿ ಸರಕಾರದ ಅನುಮತಿ ಇಲ್ಲದೆಯೂ ಸ್ಮಾರ್ಟ್‌ಫೋನ್‌ ಮಾರಾಟದ ಹಾದಿ ಸುಗಮವಾಗಿತ್ತು.
 • ತೆರಿಗೆ ಸುಧಾರಣೆ:ಇತ್ತೀಚಿನ ವರ್ಷದ ತನಕ ಭಾರತಕ್ಕೆ ಶೇ.90ರಷ್ಟು ಮೊಬೈಲ್‌ ಬಿಡಿ ಭಾಗಗಳು ಆಮದಾಗುತ್ತಿದ್ದವು ಹಾಗೂ ಇಲ್ಲಿ ಜೋಡಣೆಯಾಗುತ್ತಿತ್ತು. ಇದರಿಂದ ಭಾರತದಲ್ಲೇ ಉತ್ಪಾದನೆಗೆ ಹಿನ್ನಡೆಯಾಗಿತ್ತು. ಇದಕ್ಕಾಗಿ ಸರಕಾರ ಮೊಬೈಲ್‌ ಬಿಡಿ ಭಾಗಗಳ ತೆರಿಗೆ ಪದ್ಧತಿಯಲ್ಲಿ ಸುಧಾರಣೆ ಜಾರಿಗೊಳಿಸಿತ್ತು. ಇದು ಕೂಡ ಸ್ಥಳೀಯ ಉತ್ಪಾದನೆಯನ್ನು ಆಕರ್ಷಕಗೊಳಿಸಿದೆ.
Related Posts
National Current Affairs – UPSC/KAS Exams- 1st December 2018
Fiscal deficit exceeds full-year target in just seven months Topic: Indian Economy IN NEWS: India’s fiscal deficit in the first seven months of the financial year, at ₹6.49 lakh crore, exceeded the budgeted target ...
READ MORE
Karnataka: 3-day national organic, millet fair in B’luru from April 28
To strengthen Karnataka and Bengaluru as organic hubs for both farmers and marketers, the state government will hold a first-of-its kind ‘National Trade Fair - Organics and Millets-2017’ from April ...
READ MORE
National Current Affairs – UPSC/KAS Exams- 29th March 2019
Earth’s magnetic fields Topic: Geography In News: A team of researchers from California Institute of Technology, U.S. and the University of Tokyo has shown that humans do indeed unconsciously respond to the ...
READ MORE
NammaKPSC classroom for KPSC challengers-Changes in AnnaBhagya Scheme
What should you focus on? Name of the scheme Beneficiaries Salient features Any new changes to the existing scheme For mains: Its challenges and benifits One more kg of free rice for poor in state The state ...
READ MORE
Research undertaken by has revealed that feral fish are causing the decline of presence of other species of Major Indian Carps, Minor Indian Carps and Catfish in river Krishna damaging ...
READ MORE
Rural Development-Suvarna Gramodaya Yojane-KAS/KPSC 2016
Suvarna Gramodaya Yojane has been ventured to develop vibrant village communities by adopting an intensive and integrated approach to rural development. The programme was launched on the occasion of Golden Jubilee ...
READ MORE
ರೈತರ ಕೃಷಿ ಉತ್ಪನ್ನಗಳನ್ನು ಪಟ್ಟಣದ ಮಾರುಕಟ್ಟೆಗೆ ಸುರಕ್ಷಿತವಾಗಿ ಸಾಗಿಸುವುದಕ್ಕೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೂ ಉತ್ತಮ ಸಂಪರ್ಕ ರಸ್ತೆ ಅನುಕೂಲ ಕಲ್ಪಿಸುವ ಯೋಜನೆ. ರಸ್ತೆ ನಿರ್ಮಾಣಗೊಂಡ ನಂತರದ ಐದು ವರ್ಷಗಳವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು, ಆರನೇ ವರ್ಷ ಮತ್ತೆ ಮರುಡಾಂಬರಿಕರಣಗೊಳಿಸಿ ಸರ್ಕಾರಕ್ಕೆ ಹಸ್ತಾಂತರಿಸುವುದು ಯೋಜನೆಯಲ್ಲಿರುವ ...
READ MORE
All you need to know about Startup India Initiative
Startup India is a flagship initiative of the Government of India, intended to build a strong eco-system for nurturing innovation and Startups in the country that will drive sustainable economic growth and ...
READ MORE
Karnataka Current Affairs – KAS / KPSC Exams – 28th July 2017
SC allows auctioning of 'C' category mines The Supreme Court on 27th July allowed the Karnataka government to auction nine ‘C’ category iron ore mines and directed the state government to ...
READ MORE
National Current Affairs – UPSC/KAS Exams-11th April 2019
SC Collegium recommends 5 new Chief Justices of HCs Topic: Polity and Governance In News: The Supreme Court Collegium has recommended names of five judges for appointment as the Chief Justices in ...
READ MORE
National Current Affairs – UPSC/KAS Exams- 1st December
Karnataka: 3-day national organic, millet fair in B’luru
National Current Affairs – UPSC/KAS Exams- 29th March
NammaKPSC classroom for KPSC challengers-Changes in AnnaBhagya Scheme
Biodiversity of fish threatened in krishna
Rural Development-Suvarna Gramodaya Yojane-KAS/KPSC 2016
‘ನಮ್ಮ ಗ್ರಾಮ ನಮ್ಮ ರಸ್ತೆ’
All you need to know about Startup India
Karnataka Current Affairs – KAS / KPSC Exams
National Current Affairs – UPSC/KAS Exams-11th April 2019

Leave a Reply

Your email address will not be published. Required fields are marked *