3rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ನೌಕಾ ಪಡೆ ಸಮರಾಭ್ಯಾಸ ಮುಕ್ತಾಯ

 • ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಮೂರು ವಾರಗಳ ಕಾಲ ಕೈಗೊಂಡ ಸಮರಾಭ್ಯಾಸ ಕೊನೆಗೊಂಡಿದೆ.
 • ದೇಶದ ಪಶ್ಚಿಮ ಸಮುದ್ರದಲ್ಲಿರುವ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವ ಕುರಿತು ವ್ಯೂಹ ರಚನೆ ಮತ್ತು ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಯೋಜನೆಗಳ ಬಗ್ಗೆ ನೌಕಾ ಪಡೆ ಪರೀಕ್ಷೆಗಳನ್ನು ಕೈಗೊಂಡಿತು.
 • ಪಶ್ಚಿಮ ಕಡಲ ತೀರದಲ್ಲಿರುವ ತೈಲ ಬಾವಿಗಳು, ಸರಕು ಸಾಗಣೆ ಹಡಗುಗಳಿಗೆ ಭದ್ರತೆ ನೀಡುವ ವಿಷಯಗಳ ಬಗ್ಗೆ ನೌಕಾಪಡೆ ಪೂರ್ವ ತಯಾರಿ ನಡೆಸಿತು ಎಂದು ಭಾರತೀಯ ನೌಕಾಪಡೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
 • ‘ಪಶ್ಚಿಮ ಲೆಹರ್‌‘ ಹೆಸರಿನಡಿ ಕೈಗೊಂಡ ಸಮರಾಭ್ಯಾಸದಲ್ಲಿ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ, ಹೊಸದಾಗಿ ಸೇರ್ಪಡೆಗೊಂಡ ಕಲ್ಕತ್ತಾ ಕ್ಲಾಸ್‌ ಮಾದರಿಯ ಯುದ್ಧ ನೌಕೆ, ಜಲಂತರ್ಗಾಮಿಗಳು ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದವು.

ಲೋಕಪಾಲ ಆಯ್ಕೆಗೆ ಮುನ್ನುಡಿ

 • ಸಂಸತ್ ಅನುಮೋದನೆ ದೊರೆತಿದ್ದರೂ ನನೆಗುದಿಗೆ ಬಿದ್ದಿದ್ದ ಲೋಕಪಾಲ ನೇಮಕ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಮೊದಲ ಹೆಜ್ಜೆಯಾಗಿ ಆಯ್ಕೆ ಸಮಿತಿಯ ಮೊದಲ ಸಭೆ ನಡೆಯಿತು. ಆದರೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಭೆ ಬಹಿಷ್ಕರಿಸಿದ್ದು, ಆರಂಭದಲ್ಲೇ ತುಸು ಹಿನ್ನಡೆ ಉಂಟಾಗಿದೆ.
 • ಲೋಕಪಾಲ ಆಯ್ಕೆ ಸಮಿತಿಗೆ ತಮ್ಮನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಖರ್ಗೆ, ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ವಿಶೇಷ ಆಹ್ವಾನಿತರಾಗಿ ಆಗಮಿಸಿದರೆ ಆಯ್ಕೆ ಪ್ರಕ್ರಿಯೆಯಲ್ಲಿ ಅಭಿಪ್ರಾಯ ತಿಳಿಸಲು ಮತ್ತು ಮತದಾನ ಮಾಡಲು ಅಧಿಕಾರ ಇರುವುದಿಲ್ಲ. ಇದು ಲೋಕಪಾಲ್ ಕಾಯ್ದೆ 2013ರ ಆಶಯಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಖರ್ಗೆ ಏಕೆ ವಿಶೇಷ ಆಹ್ವಾನಿತ?

 • ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ ಕನಿಷ್ಠ ಶೇ.10 ಸ್ಥಾನಗಳನ್ನು ಅಂದರೆ, 54 ಸ್ಥಾನ ಗಳನ್ನು ಪಡೆದುಕೊಂಡಿರುವ ಪಕ್ಷವನ್ನು ಪ್ರಮುಖ ಪ್ರತಿಪಕ್ಷ ಎಂದು ಗುರುತಿಸಲಾಗುತ್ತದೆ. ಒಬ್ಬರಿಗೆ ಪ್ರತಿಪಕ್ಷ ನಾಯಕ ಎಂದು ಸ್ಥಾನಮಾನ ನೀಡಲಾಗುತ್ತದೆ.
 • ಆದರೆ, ಪ್ರಸ್ತುತ ಕಾಂಗ್ರೆಸ್ 48 ಸ್ಥಾನ ಹೊಂದಿದ್ದು, ಅಧಿಕೃತ ಪ್ರತಿಪಕ್ಷ ಸ್ಥಾನ ಲಭಿಸಿಲ್ಲ. ಹೀಗಾಗಿ ಖರ್ಗೆ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.
 •  ಲೋಕಪಾಲ್ ಕಾಯ್ದೆ 2013ಕ್ಕೆ ತಿದ್ದುಪಡಿ ತಂದು, ಪ್ರತಿಪಕ್ಷ ನಾಯಕ ಬದಲು ಪ್ರತಿಪಕ್ಷಗಳಲ್ಲಿ ಏಕೈಕ ಬಹುದೊಡ್ಡ ಪಕ್ಷದ ನಾಯಕ ಎಂದು ಬದಲಿಸಿ, ಅವರನ್ನು ಲೋಕಪಾಲ್ ಆಯ್ಕೆ ಸಮಿತಿ ಸದಸ್ಯರನ್ನಾಗಿ ನೇಮಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ, ಇದು ಈಡೇರಿಲ್ಲ ಎಂದು ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ

ಲೋಕಪಾಲ್ ರಚನೆ

ಲೋಕಪಾಲ್ ಸಂಸ್ಥೆಯು ಯಾವುದೇ ಸಾಂವಿಧಾನಿಕ ಬೆಂಬಲವಿಲ್ಲದೆ ಶಾಸನಬದ್ಧ ಅಂಗವಾಗಿದೆ.ಲೋಕಪಾಲ್ ಒಂದು ಮಲ್ಟಿಮೀಂಬರ್ ದೇಹವಾಗಿದ್ದು, ಒಂದು ಅಧ್ಯಕ್ಷೆ ಮತ್ತು ಗರಿಷ್ಠ 8 ಸದಸ್ಯರನ್ನು ಹೊಂದಿದೆ.

ಯಾರು ಅಧ್ಯಕ್ಷರಾಗುತ್ತಾರೆ?

ಲೋಕಪಾಲ್ನ ಅಧ್ಯಕ್ಷರಾಗಿ ನೇಮಕಗೊಳ್ಳಬೇಕಾದ ವ್ಯಕ್ತಿಯು ಈ ಕೆಳಗಿನಂತಿರಬೇಕು:

 • ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ
 • ಅಥವಾ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರು
 • ಅಥವಾ ಭ್ರಷ್ಟಾಚಾರ-ವಿರೋಧಿ ನೀತಿ, ಸಾರ್ವಜನಿಕ ಆಡಳಿತ, ವಿಜಿಲೆನ್ಸ್, ವಿಮಾ ಮತ್ತು ಬ್ಯಾಂಕಿಂಗ್, ಕಾನೂನು ಮತ್ತು ನಿರ್ವಹಣೆ ಸೇರಿದಂತೆ ಹಣಕಾಸಿನ ವಿಷಯಗಳಲ್ಲಿ ಕನಿಷ್ಠ 25 ವರ್ಷಗಳ ವಿಶೇಷ ಜ್ಞಾನ ಮತ್ತು ಪರಿಣತಿಯನ್ನು ಹೊಂದಿದ್ದ ನಿಷ್ಕಪಟ ಸಮಗ್ರತೆ ಮತ್ತು ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ಒಬ್ಬ ಶ್ರೇಷ್ಠ ವ್ಯಕ್ತಿ.

ಯಾರು ಸದಸ್ಯರಾಗಬಹುದು?

ಗರಿಷ್ಠ ಎಂಟು ಸದಸ್ಯರಲ್ಲಿ, ಅರ್ಧದಷ್ಟು ನ್ಯಾಯಾಂಗ ಸದಸ್ಯರಾಗುತ್ತಾರೆ . ಕನಿಷ್ಠ ಐವತ್ತು ಶೇಕಡಾ ಸದಸ್ಯರು ಎಸ್ಸಿ / ಎಸ್ಟಿ / ಒಬಿಸಿ / ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಂದ ಬಂದವರು.

ನ್ಯಾಯಾಂಗ ಸದಸ್ಯ

ಲೋಕಪಾಲ್ನ ನ್ಯಾಯಾಂಗ ಸದಸ್ಯರಾಗಿರಬೇಕು.

 • ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರು
 • ಅಥವಾ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ

ನ್ಯಾಯಾಂಗೇತರ ಸದಸ್ಯ

ವಿರೋಧಿ ಭ್ರಷ್ಟಾಚಾರ ನೀತಿ, ಸಾರ್ವಜನಿಕ ಆಡಳಿತ, ವಿಜಿಲೆನ್ಸ್, ವಿಮೆಯ ಮತ್ತು ಬ್ಯಾಂಕಿಂಗ್, ಕಾನೂನು ಮತ್ತು ನಿರ್ವಹಣೆ ಸೇರಿದಂತೆ ಹಣಕಾಸಿನ ವಿಷಯದಲ್ಲಿ ಕನಿಷ್ಠ 25 ವರ್ಷಗಳ ವಿಶೇಷ ಜ್ಞಾನ ಮತ್ತು ಪರಿಣತಿಯನ್ನು ಹೊಂದಿರುವ ನಿಷ್ಪಾಪ ಸಮಗ್ರತೆ ಮತ್ತು ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ ಒಬ್ಬ ವ್ಯಕ್ತಿಯು ನ್ಯಾಯಾಂಗೇತರ ಸದಸ್ಯರಾಗಿರಬೇಕು. .

ಯಾರು ಅಧ್ಯಕ್ಷರಾಗಲು ಸಾಧ್ಯವಿಲ್ಲ?

ಕೆಳಗಿನ ವ್ಯಕ್ತಿಗಳು ಲೋಕಪಾಲ್ನ ಅಧ್ಯಕ್ಷರಾಗಲು ಸಾಧ್ಯವಿಲ್ಲ:

 • ಸಂಸದರು ಮತ್ತು ಶಾಸಕರು
 • ನೈತಿಕ ಘರ್ಷಣೆಯನ್ನು ಒಳಗೊಂಡಿರುವ ಯಾವುದೇ ಅಪರಾಧದ ಆರೋಪಿ ವ್ಯಕ್ತಿಗಳು
 • 45 ವರ್ಷಕ್ಕಿಂತ ಕಡಿಮೆ ವಯಸ್ಸು
 • ಪಂಚಾಯತ್ ಅಥವಾ ಪುರಸಭೆಯ ಸದಸ್ಯರು
 • ಸಾರ್ವಜನಿಕ ಸೇವೆಯಿಂದ ತೆಗೆದುಹಾಕಲ್ಪಟ್ಟ ಅಥವಾ ವಜಾ ಮಾಡಿದ ವ್ಯಕ್ತಿಯನ್ನು
 • ಟ್ರಸ್ಟ್ / ಲಾಭದ ಯಾವುದೇ ಕಚೇರಿಯನ್ನು ಹೊಂದಿರುವ ವ್ಯಕ್ತಿ; ಹಾಗಿದ್ದಲ್ಲಿ, ಲೋಕಪಾಲ್ನಿಂದ ರಾಜೀನಾಮೆ ನೀಡಬೇಕಾಗಿದೆ
 • ಒಬ್ಬ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿ
 • ಕೆಲವು ವ್ಯವಹಾರ / ವೃತ್ತಿಯಲ್ಲಿ ಒಯ್ಯುತ್ತದೆ; ಹಾಗಿದ್ದಲ್ಲಿ, ಅವರು ಕೆಲವು ವ್ಯಾಪಾರವನ್ನು ತೊರೆಯಬೇಕಾಗಿದೆ

ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ

ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಸದಸ್ಯರು ಸದಸ್ಯರನ್ನು ನೇಮಿಸಬೇಕು. ಈ ಆಯ್ಕೆ ಸಮಿತಿಯು ಮಾಡಲ್ಪಟ್ಟಿದೆ:

 • ಪ್ರಧಾನ ಮಂತ್ರಿ-ಅಧ್ಯಕ್ಷರು;
 • ಲೋಕಸಭೆಯ ಸ್ಪೀಕರ್
 • ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ
 • ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಅವನ / ಅವಳ ನಾಮನಿರ್ದೇಶನಗೊಂಡ ನ್ಯಾಯಾಧೀಶ
 • ಒಬ್ಬ ಶ್ರೇಷ್ಠ ನ್ಯಾಯವಾದಿ

ಕಚೇರಿ ಅವಧಿ:

 • ಲೋಕಪಾಲ್ ಚೇರ್ಮನ್ ಮತ್ತು ಸದಸ್ಯರಿಗೆ ಕಚೇರಿಯ ಪದವು 5 ವರ್ಷಅಥವಾ 70 ವರ್ಷವಯಸ್ಸಿನವರೆಗೆ.
 • ಸಂಬಳ, ಅವಕಾಶಗಳು ಮತ್ತು ಅಧ್ಯಕ್ಷರ ಸೇವೆಯ ಇತರ ಷರತ್ತುಗಳು ಭಾರತದ ಮುಖ್ಯ ನ್ಯಾಯಾಧೀಶರಿಗೆಸಮಾನವಾಗಿವೆ ಮತ್ತು ಸದಸ್ಯರು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಿಗೆ ಸಮನಾಗಿರುತ್ತದೆ .
 • ಒಬ್ಬ ವ್ಯಕ್ತಿ ಈಗಾಗಲೇ ಪಿಂಚಣಿ ಪಡೆಯುತ್ತಿದ್ದರೆ (ಮಾಜಿ ನ್ಯಾಯಾಧೀಶರಾಗಿದ್ದಕ್ಕಾಗಿ), ಸಮಾನ ಪಿಂಚಣಿ ಮೊತ್ತವನ್ನು ಸಂಬಳದಿಂದ ಕಡಿತಗೊಳಿಸಲಾಗುತ್ತದೆ.
 • ಲೋಕಪಾಲ್ ಮತ್ತು ಸದಸ್ಯರಿಗೆ ಸಂಬಳದ ಮೂಲವೆಂದರೆ ಭಾರತದ ಏಕೀಕೃತ ನಿಧಿ.
 • ಅಧ್ಯಕ್ಷರು ಕಚೇರಿಯಲ್ಲಿ ಮರಣಹೊಂದಿದರೆ ಅಥವಾ ಪೋಸ್ಟ್ನಿಂದ ರಾಜೀನಾಮೆ ನೀಡಿದರೆ, ಹೊಸ ಅಧ್ಯಕ್ಷರ ನೇಮಕದ ತನಕ ಅಧ್ಯಕ್ಷರು ಹಿರಿಯ ಸದಸ್ಯರಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅಧಿಕಾರ ನೀಡಬಹುದು. ಬಿಟ್ಟುಹೋಗುವಾಗ ಕೆಲವು ಕಾರ್ಯಗಳಿಗಾಗಿ ಅಧ್ಯಕ್ಷರು ಲಭ್ಯವಿಲ್ಲದಿದ್ದರೆ, ಹಿರಿಯ ಹೆಚ್ಚಿನ ಸದಸ್ಯರು ಅವರ ಕೆಲಸವನ್ನು ಮಾಡುತ್ತಾರೆ.

ಸೌದಿ ಅರೇಬಿಯಾ ಮಹಿಳೆಯರಿಗೆ ಸೇನೆ ಸೇರಲು ಅವಕಾಶ

 • ಸೌದಿ ಅರೇಬಿಯಾದ ಸರಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಸೇನೆಗೆ ಸೇರಲು ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದೆ. ಮಹಿಳೆಯರ ಮೇಲೆ ಹಲವಾರು ನಿಬಂಧನೆಗಳನ್ನು ವಿಧಿಸುವ ಸೌದಿ ಸರಕಾರ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಗಮನಾರ್ಹ.
 • ಸೇನೆಗೆ ಸೇರಬೇಕೆಂಬ ಆಸಕ್ತಿ ಇರುವ ಮಹಿಳೆಯರು ಅರ್ಜಿ ಸಲ್ಲಿಸಬಹುದೆಂದು ಕಳೆದ ವಾರ ಪ್ರಕಟಿಸಿತ್ತು ಮಹಿಳೆಯರನ್ನು ಎಲ್ಲ ಕ್ಷೇತ್ರಗಳಲ್ಲೂ ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.
 • ಸೇನೆಯಲ್ಲಿ ಸೇರಬಯಸುವ ಮಹಿಳೆಯರು ಕಡ್ಡಾಯವಾಗಿ ಸೌದಿ ನಾಗರಿಕರಾಗಿರಬೇಕು. ಸೌದಿಯಲ್ಲಿ ಬೆಳೆದಿರಬೇಕು, ಹೈಸ್ಕೂಲ್ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು ಎಂಬ ಅರ್ಹತೆಗಳನ್ನು ವಿಧಿಸಿದೆ. ಅಭ್ಯರ್ಥಿ ವಯಸ್ಸು 25 ರಿಂದ 35 ವರ್ಷಗಳ ನಡುವೆ ಇರಬೇಕು, ಕನಿಷ್ಠ 155 ಸೆಂ.ಮೀ ಉದ್ದ ಇರಬೇಕು, ಅದಕ್ಕೆ ತಕ್ಕ ತೂಕ ಇರಬೇಕೆಂದು ಅಲ್ಲಿನ ಸರಕಾರ ಪ್ರಕಟಿಸಿದೆ.
 • ಪರೀಕ್ಷೆ ಪಾಸಾದ ಬಳಿಕ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳು ಇರುತ್ತವೆ ಎಂದು ತಿಳಿಸಿದೆ. ಅದೇ ರೀತಿ ಅಭ್ಯರ್ಥಿ ಸೌದಿಯೇತರ ವ್ಯಕ್ತಿಯನ್ನು ವಿವಾಹವಾಗಿರಬಾರದು ಎಂಬ ನಿಯಮವನ್ನೂ ವಿಧಿಸಿದೆ. ಆಯ್ಕೆಯಾದ ಮಹಿಳೆಯರನ್ನು ರಿಯಾದ್, ಮೆಕ್ಕಾ, ಮದೀನಾ, ಖಾಸಿಮ್, ಅಸ್ಸೆರ್, ಅಲ್ ಬಹಾ, ಈಸ್ಟ್ರನ್ ಪ್ರಾವಿನ್ಸ್‌ಗಳಲ್ಲಿ ನಿಯಮಿಸಲಾಗುವುದು ಎಂದು ಪಬ್ಲಿಕ್ ಸೆಕ್ಯುರಿಟಿ ಜನರಲ್ ಡೈರೆಕ್ಟರ್ ತಿಳಿಸಿದೆ.

ಮಹಿಳೆಯರಿಗಾಗಿ ಐದು ಕೈಗಾರಿಕಾ ಪಾರ್ಕ್

 • ‘ಮಹಿಳಾ ಕೈಗಾರಿಕೋದ್ಯಮಿಗಳ ಅಭಿವೃದ್ಧಿಗಾಗಿ ಐದು ಕೈಗಾರಿಕಾ ಪಾರ್ಕ್‌ ಸ್ಥಾಪಿಸಲಾಗುತ್ತಿದ್ದು, ಇದರಿಂದ ಉದ್ಯಮ ವಲಯದಲ್ಲಿ ಮಹಿಳೆಯರೂ ಸ್ವಾವಲಂಬಿಗಳಾಗಲಿದ್ದಾರೆ’ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
 • ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಆಯೋಜಿಸಿರುವ ಎರಡು ದಿನಗಳ ‘ಮಹಿಳಾ ಸಾಮರ್ಥ್ಯ ಮತ್ತು ಮೌಲ್ಯ’ (ವುಮನ್‌ ಆಫ್‌ ವರ್ತ್‌) ಕುರಿತ ಸಮಾವೇಶಕ್ಕೆ ಚಾಲನೆ ನೀಡಿ ಅವರು, ‘ರಾಜ್ಯದ ಹೊಸ ಕೈಗಾರಿಕಾ ನೀತಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ’ ಎಂದರು.
 • ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಗೆ ಬಜೆಟ್‌ನಲ್ಲಿ ₹ 32,388 ಕೋಟಿ ನೀಡಲಾಗಿದೆ. ಎಲ್ಲ ಮಹಿಳೆಯರಿಗೆ ಮತದಾನದ ಹಕ್ಕು, ಅಧಿಕಾರ, ಸಂಪತ್ತು, ಶಿಕ್ಷಣದಲ್ಲಿ ಸಮಾನ ಅವಕಾಶ ಸಿಗುವಂತಾಗಬೇಕು.
 • ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಈಗಾಗಲೇ ಶೇ 50ರಷ್ಟು ಮೀಸಲು ನೀಡಲಾಗುತ್ತಿದೆ. ಇದರಿಂದಾಗಿ ಬಿಬಿಎಂಪಿಯಲ್ಲಿ ಇರುವ ಒಟ್ಟು 198 ಸದಸ್ಯರ ಪೈಕಿ 102 ಮಹಿಳೆಯರಿದ್ದಾರೆ ಎಂದರು.
 • ಧಾರವಾಡ, ಮೈಸೂರು, ಬೆಂಗಳೂರಿನ ಹಾರೋಹಳ್ಳಿ, ಬಳ್ಳಾರಿ, ಹುಬ್ಬಳ್ಳಿಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕೈಗಾರಿಕಾ ಪಾರ್ಕ್ ನಿರ್ಮಾಣವಾಗಲಿದೆ.
 • ರಾಜ್ಯದಲ್ಲಿ ಒಂದು ಸಾವಿರ ಪುರುಷರಿಗೆ 947 ಮಹಿಳೆಯರಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಬೇಕು. ಆಗ ಈ ಅಸಮಾನತೆ ಹೋಗಲಾಡಿಸಲು ಸಾಧ್ಯ.

ಆರೋಗ್ಯ ಕರ್ನಾಟಕಕ್ಕೆ ಚಾಲನೆ

 • ರಾಜ್ಯ ಸರ್ಕಾರದಿಂದ ‘ಆರೋಗ್ಯ ಕರ್ನಾಟಕ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು
 • ದೇಶದ ಯಾವ ರಾಜ್ಯದಲ್ಲೂ ಈ ಮಾದರಿಯಲ್ಲಿ ಮಾಡಿಲ್ಲ. ರಾಜ್ಯದಲ್ಲಿ ಲೋಕಾರ್ಪಣೆಯಾಗುತ್ತಿರುವ ಈ ಕಾರ್ಯಕ್ರಮ ಯಾವ ರಾಜ್ಯ, ದೇಶಗಳಲ್ಲೂ ಇಲ್ಲ’ ಎಂದರು
 • ಸಂಘಟಿತವಲ್ಲದ ರೈತರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಜನ ಸಾಮಾನ್ಯರಿಗೆ ಸುಲಭದಲ್ಲಿ ಆರೋಗ್ಯ ಸೇವೆಗಳು ದೊರೆಯುವಂತಾಗಲು ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ
 • ಆರೋಗ್ಯ ಸೇವೆಗಳು ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕುಟುಂಬಕ್ಕೆ 1.5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವ ಮೂಲಕ ಸಾಮಾನ್ಯ ಜನರ ಆರೋಗ್ಯ ಭದ್ರತೆಗಾಗಿ ಯೋಜನೆ ಅನುಷ್ಠಾನಗೊಳಿಸಿದೆ.
 • ಬಿಪಿಎಲ್ ಕಾರ್ಡದಾರರಿಗೆ ಸರ್ಕಾರಿ ಹಾಗೂ ಖಾಸಗಿ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ 1.5 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತವಾಗಿರಲಿದೆ. ಅಲ್ಲದೆ ಹೆಚ್ಚುವರಿಯಾಗಿ 50 ಸಾವಿರ ರೂ.ಗಳ ಚಿಕಿತ್ಸೆ ಸಿಗಲಿದೆ.
 • ಚಿಕಿತ್ಸೆ ವೆಚ್ಚ ಮರುಪಾವತಿ: ಯೋಜನೆಯಡಿ ಎಲ್ಲ ರೀತಿಯ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆರೋಗ್ಯ ಸೇವೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬೇಕಾಗುತ್ತದೆ.
 • ಸಂಕೀರ್ಣ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆಗಳನ್ನು ಆಯಾ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೌಲಭ್ಯಗಳ ಆಧಾರದ ಮೇಲೆ ಆಯಾ ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
 • ಸೌಲಭ್ಯಗಳಿಲ್ಲದೆ ಇದ್ದಲ್ಲಿ ನೆಟ್​ವರ್ಕ್ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಈ ಆಸ್ಪತ್ರೆಗಳಲ್ಲಿ ಪ್ಯಾಕೇಜ್ ದರಗಳ ವೆಚ್ಚ ಅಥವಾ ನೈಜ ವೆಚ್ಚಗಳ ಪೈಕಿ ಕಡಿಮೆ ಇರುವ ದರದ ಶೇ.30 ಚಿಕಿತ್ಸಾ ವೆಚ್ಚವನ್ನು ಸರ್ಕಾರ ಫಲಾನುಭವಿಗೆ ಮರುಪಾವತಿ ಮಾಡಲಾಗುತ್ತದೆ.

ಯಾವೆಲ್ಲ ಯೋಜನೆ ಸೇರ್ಪಡೆ

 • ವಾಜಪೇಯಿ ಆರೋಗ್ಯ ಶ್ರೀ, ಜ್ಯೋತಿ ಸಂಜೀವಿನಿ, ಯಶಸ್ವಿನಿ, ಮುಖ್ಯಮಂತ್ರಿ ಸಾಂತ್ವನ ಯೋಜನೆ, ಜನನಿ ಶಿಶು ಸುರಕ್ಷ ಕಾರ್ಯಕ್ರಮ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗಳನ್ನು ಆರೋಗ್ಯ ಕರ್ನಾಟಕ ಯೋಜನೆಗೆ ಸೇರಿಸಲಾಗುತ್ತದೆ.

 ಬಡವರ ಆರೋಗ್ಯ ಸೇವೆಗೆ ಯೋಜನೆ

 • ಶ್ರೀಮಂತರಿಗೆ ಲಭಿಸುವ ಆರೋಗ್ಯ ಸೇವೆ, ಬಡ ವರ್ಗಕ್ಕೂ ಸಿಗಬೇಕೆಂಬ ಉದ್ದೇಶದಿಂದ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
 • ಯೋಜನೆ ಅನುಷ್ಠಾನಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆಸ್ಪತ್ರೆಯಲ್ಲಿ ರೋಗಿ ಮೃತಪಟ್ಟರೆ ತಕ್ಷಣ ಮೃತದೇಹ ಕುಟುಂಬದವರಿಗೆ ನೀಡಬೇಕು.
 • ಸಿಜೇರಿಯನ್ ಹೆರಿಗೆಗೆ 3-4 ಸಾವಿರ ವೆಚ್ಚವಾದರೂ 35ರಿಂದ 40 ಸಾವಿರ ರೂ. ಖಾಸಗಿ ಆಸ್ಪತ್ರೆಗಳು ವಸೂಲಿ ಮಾಡುತ್ತಿವೆ. ಅಗತ್ಯವಿಲ್ಲದಿದ್ದರೂ ಸಿಜೇರಿಯನ್ ಹೆರಿಗೆ ಮಾಡಿಸಲಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಅಗತ್ಯ

ಯಾವೆಲ್ಲ ರೋಗಕ್ಕೆ ಚಿಕಿತ್ಸೆ?

 • ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸೇವೆಗಳು: ತಾಯಿ ಮತ್ತು ಮಕ್ಕಳ ಆರೋಗ್ಯ, ಜ್ವರ, ಕೆಮ್ಮು, ವಾಂತಿ ಇತ್ಯಾದಿ ಪ್ರಾಥಮಿಕ ಹಂತದ ಆರೋಗ್ಯ ಸೇವೆಗಳು. ಹೆರಿಗೆ, ಡೆಂಘ, ಮಲೇರಿಯಾ, ಮೂಳೆ ಮುರಿತ, ಸಾಮಾನ್ಯ ಶಸ್ತ್ರಚಿಕಿತ್ಸೆ ಸೇರಿ ನಿಗದಿತ ದ್ವಿ್ವೕಯ ಹಂತದ ಚಿಕಿತ್ಸೆಗಳು.
 • ಹೃದ್ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ ಇತ್ಯಾದಿ ತೃತೀಯ ಹಂತದ ಆರೋಗ್ಯ ಸೇವೆಗಳಿಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಲಭ್ಯವಿಲ್ಲದಿದ್ದಲ್ಲಿ ನೋಂದಾಯಿತ ನೆಟ್​ವರ್ಕ್ ಆಸ್ಪತ್ರೆಗಳಿಗೆ ಶಿಫಾರಸು, ನೋಂದಾಯಿತ ಆಸ್ಪತ್ರೆಯ ಪಟ್ಟಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

 1. ಯೆಮೆನ್ ಮೇಲೆ ಇರಾನ್ಗೆ ಒತ್ತಡ ಹೇರುವ ಯುಎನ್ ನಿರ್ಣಯವನ್ನು ಯಾವ ದೇಶವು ನಿರಾಕರಿಸಿದೆ?

a. ಚೀನಾ

b. ಯುಎಸ್ಎ

c. ರಶಿಯಾ

d. ಫ್ರಾನ್ಸ್


2. ಬಂದರುಗಳು, ಜಲಮಾರ್ಗಗಳು ಮತ್ತು ಕರಾವಳಿಗಳಿಗಾಗಿನ ರಾಷ್ಟ್ರೀಯ ತಂತ್ರಜ್ಞಾನ ಕೇಂದ್ರವನ್ನು ಐಐಟಿಯಲ್ಲಿ ಸ್ಥಾಪಿಸಲಾಗುವುದು?

a) ಐಐಟಿ ಬಾಂಬೆ b) ಐಐಟಿ ದೆಹಲಿ

c) ಐಐಟಿ ರೂರ್ಕಿ d) ಚೆನ್ನೈ ಐಐಟಿ


3. ರಾಷ್ಟ್ರೀಯ ವಿಜ್ಞಾನ ದಿನವು ಪ್ರತಿವರ್ಷ ಆಚರಿಸಿಕೊಳ್ಳುವುದು ಯಾವಾಗ?

a) ೨೫ ಫೆಬ್ರವರಿ b) ೨೬ ಫೆಬ್ರವರಿ

c) ೨೭ ಫೆಬ್ರವರಿ d) ೨೮ ಫೆಬ್ರವರಿ


4. ಲೋ ಕಸಭೆಯ ಅಹವಾಲು (ಪಿಟಿಷನ್) ಸಮಿತಿಯು ಒಟ್ಟು ಎಷ್ಟು ಜನ ಸದಸ್ಯರನ್ನು ಒಳಗೊಂಡಿರುತ್ತದೆ?

a) 15 ಜನ b) 10 ಜನ

c) 20 ಜನ d 25 ಜನ


5. ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ನ ವೈಸ್ ಚೇರ್ ಆಗಿ ಆಯ್ಕೆಯಾದ ರಾಷ್ಟ್ರ ಯಾವುದು?

a) ಭಾರತ b) ಚೀನಾ

c) ಪಾಕಿಸ್ತಾನ d) ಯುಕೆ


6. ‘ಆರೋಗ್ಯ ಕರ್ನಾಟಕ’ಯೋಜನೆಯಲ್ಲಿ ಯಾವೆಲ್ಲ ಯೋಜನೆ ಸೇರ್ಪಡೆ ಆಗಿದೆ?

a.ವಾಜಪೇಯಿ ಆರೋಗ್ಯ ಶ್ರೀ

b. ಜ್ಯೋತಿ ಸಂಜೀವಿನಿ

c. ಯಶಸ್ವಿನಿ

d. ಮೇಲಿನ ಎಲ್ಲವೂ


7. ಮಹಿಳೆಯರಿಗಾಗಿ ಐದು ಕೈಗಾರಿಕಾ ಪಾರ್ಕ್ ಎಲ್ಲಿ ನಿರ್ಮಿಸಲು ಯೋಚಿಸಲಾಗಿದೆ?

a. ಧಾರವಾಡ, ಮೈಸೂರು, ಬೆಂಗಳೂರಿನ ಹಾರೋಹಳ್ಳಿ, ಬಳ್ಳಾರಿ, ಹುಬ್ಬಳ್ಳಿ

b. ಹುಬ್ಬಳ್ಳಿ, , ಮೈಸೂರು, ಮಂಗಳೂರು, ರಾಯಚೂರು, ಉಡುಪಿ

c. ಧಾರವಾಡ, ಬೆಂಗಳೂರಿನ ಹಾರೋಹಳ್ಳಿ, ಉಡುಪಿ, , ಬಳ್ಳಾರಿ, ಮಂಗಳೂರು

d. non of the above


8. ಯಾವ ದೇಶವು ಮಹಿಳೆಯರಿಗೆ ಸೇನೆ ಸೇರಲು ಅವಕಾಶ ಮಾಡಿಕೊಟ್ಟಿದೆ?

a. ಯೆಮೆನ್

b. ಇರಾಕ್

c. ಸೌದಿ ಅರೇಬಿಯಾ

d. ಸಿರಿಯಾ


9. ಲೋಕಪಾಲ್ ಆಯ್ಕೆ ಸಮಿತಿ ಯಾರನ್ನು ಒಳಗೊಂಡಿರುತ್ತದೆ ?

a. ಪ್ರಧಾನ ಮಂತ್ರಿ,ಲೋಕಸಭೆಯ ಸ್ಪೀಕರ್

b. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ, ಒಬ್ಬ ಶ್ರೇಷ್ಠ ನ್ಯಾಯವಾದಿ

c. ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಅವನ / ಅವಳ ನಾಮನಿರ್ದೇಶನಗೊಂಡ ನ್ಯಾಯಾಧೀಶ

d. ಮೇಲಿನ ಎಲ್ಲವೂ


10.ಪಶ್ಚಿಮ ಲೆಹರ್‌ ಸಮರಾಭ್ಯಾಸ ಯಾವುದಕ್ಕೆ ಸಂಬಂಧಿಸಿದೆ?

a. ವಾಯು ಸೇನೆ

b. ಭೂ ಸೇನೆ

c. ನೌಕಾ ಸೇನೆ

d. ಮೇಲಿನ ಎಲ್ಲವೂ ಉತ್ತರಗಳು


 1. C D  3.D  4.A  5.B  6.D  7.A   8.C   9.D  10.C

 

 

 

 

 

 

Related Posts
ಜೈವಿಕ ಇಂಧನ-II
ಕರ್ನಾಟಕದಲ್ಲಿ ಜೈವಿಕ ಇಂಧನ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕುರಿತ ಅಧ್ಯಯನವು ಸುಮಾರು ಎರಡು ದಶಕಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ ಸೂತ್ರ ವಿಭಾಗದಿಂದ(Sustainable Transformation of Rural Area SuTRA) ಪ್ರಾರಂಭವಾಗಿತ್ತು. ಕೇಂದ್ರ ಸರ್ಕಾರದ ಯೋಜನಾ ಆಯೋಗದ ಡಾ|| ದೀನಾನಾಥ್ ತಿವಾರಿ ಅವರ ...
READ MORE
Govt plans to institute one of its kind Annual Employment Survey
An estimated million people are joining India’s workforce every month, thanks to its demographic dividend of a high number of youth in the population. As of now, the only employment data ...
READ MORE
23rd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಬ್ಲಡ್‌ ಮೂನ್‌ ಸುದ್ಧಿಯಲ್ಲಿ ಏಕಿದೆ?ದೀರ್ಘಾವಧಿಯದ್ದು ಎನ್ನಲಾಗುತ್ತಿರುವ ಚಂದ್ರಗ್ರಹಣವು ಜು.27 ರ ಮಧ್ಯರಾತ್ರಿ ನಡೆಯಲಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ. ವಿಶೇಷತೆಯೇನು? ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ...
READ MORE
30th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಆಸ್ತಿ ಮಾಹಿತಿ ಒದಗಿಸುವ ‘ದಿಶಾಂಕ್‌’ ಆ್ಯಪ್‌ ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್‌ ಹುಡುಕಬೇಕೇ? ಅದು ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ, ಆ ಜಾಗ ಸರ್ಕಾರಕ್ಕೇ ಸೇರಿದ್ದೇ,  ಗೋಮಾಳವೇ, ಅದು ಒತ್ತುವರಿ ಜಾಗವೇ ಎಂಬ ವಿವರಗಳನ್ನು ತಿಳಿದುಕೊಳ್ಳಲು ಕಂದಾಯ ಇಲಾಖೆ ಪರಿಚಯಿಸಿರುವ ‘ದಿಶಾಂಕ್‌’ ...
READ MORE
8th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಲಕ್ಷದ್ವೀಪ ಬಳಿ ಹಡಗಿಗೆ ಬೆಂಕಿ ಲಕ್ಷದ್ವೀಪದ ಬಳಿಯ ಅರಬ್ಬಿ ಸಮುದ್ರದಲ್ಲಿ ಮಾರ್ಸಕ್ ಹೊನಮ್‌ ಎನ್ನುವ ವಾಣಿಜ್ಯ ಹಡಗಿನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. 13 ಭಾರತೀಯರು ಸೇರಿದಂತೆ 27 ಸಿಬ್ಬಂದಿ ಹಡಗಿನಲ್ಲಿದ್ದರು. ನಾಲ್ವರು ನಾಪತ್ತೆಯಾಗಿದ್ದು, ಉಳಿದವರನ್ನು ರಕ್ಷಿಸಲಾಗಿದೆ. 330 ಮೀಟರ್‌ ಉದ್ದದ ಹಡಗು ಮಾರ್ಚ್‌ 1ರಂದು ...
READ MORE
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪುರಂದರದಾಸರು ಸುದ್ದಿಯಲ್ಲಿ ಏಕಿದ್ದಾರೆ? ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಹುಟ್ಟೂರಿನ ಜಿಜ್ಞಾಸೆಗೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರಾಂತ್ಯವೇ ದಾಸಶ್ರೇಷ್ಠ ಪುರಂದರಾಸರ ಹುಟ್ಟೂರು ಎಂಬ ಖಚಿತ ವರದಿಯನ್ನು ಅಧ್ಯಯನ ಸಮಿತಿ ಸರಕಾರಕ್ಕೆ ಸಲ್ಲಿಸಿದೆ. ಪುರಂದರದಾಸರ ಹುಟ್ಟೂರು ಮಲೆಸೀಮೆ ಎಂಬ ...
READ MORE
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಡ್ರೋನ್‌ ಬಳಕೆ ಸುದ್ದಿಯಲ್ಲಿ ಏಕಿದೆ? ನಗರದ ವಾಹನ ದಟ್ಟಣೆಯನ್ನು ಸರಾಗಗೊಳಿಸಲು ಡ್ರೋನ್‌ ಮೂಲಕ ಮಾಹಿತಿ ಸಂಗ್ರಹಿಸಿ, ನೂತನ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಕಾರಣವೇನು? ಪ್ರಮುಖ ಜಂಕ್ಷನ್‌, ವೃತ್ತ ಹಾಗೂ ವಾಹನ ನಿಬಿಡ ಸ್ಥಳಗಳಲ್ಲಿನ ದಟ್ಟಣೆ ಹೆಚ್ಚುತ್ತಿರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. ಸಿಗ್ನಲ್‌ ...
READ MORE
“8th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
'ಸ್ವಚ್ಛ ಸರ್ವೇಕ್ಷಣೆ-2019 ಕಾರ್ಯಾಗಾರ' ಸುದ್ಧಿಯಲ್ಲಿ ಏಕಿದೆ ? ಕರ್ನಾಟಕದ ನಗರಗಳು ಸ್ವಚ್ಛತಾ ಅಭಿಯಾನದಲ್ಲಿ ಹಿಂದುಳಿಯುತ್ತಿದ್ದು, ಇನ್ನು ಮುಂದಾದರೂ ಮುಂಚೂಣಿಗೆ ಬರುವ ಪ್ರಯತ್ನ ಮಾಡಬೇಕು ಎಂದು ಸ್ವಚ್ಛತಾ ಭಾರತ್‌ ಮಿಷನ್‌ನ ಜಂಟಿ ಕಾರ್ಯದರ್ಶಿ ವಿ.ಕೆ.ಜಿಂದಾಲ್‌ ಹೇಳಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್‌.ಟಾಟಾ ಸಭಾಂಗಣದಲ್ಲಿ ನಡೆದ 'ಸ್ವಚ್ಛ ಸರ್ವೇಕ್ಷಣೆ-2019 ...
READ MORE
“6th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಜನತಾ ದರ್ಶನ’ ಸುದ್ಧಿಯಲ್ಲಿ ಏಕಿದೆ?ಮುಖ್ಯಮಂತ್ರಿಗಳ ಜನತಾದರ್ಶನಕ್ಕೆ ಜನರು ನೇರವಾಗಿ ಬರುವಂತಿಲ್ಲ. ಜಿಲ್ಲೆಯ ಮಟ್ಟದಲ್ಲಿ ಪರಿಹಾರ ಸಿಗದೇ ಇದ್ದರೆ ಮಾತ್ರ ಬರಬೇಕೆಂಬ ನಿಯಮಗಳನ್ನು ರೂಪಿಸಲಾಗಿದೆ. ಏಕೆ ಈ ನಿರ್ಧಾರ ? ಸಿಎಂ ಜನತಾ ದರ್ಶನಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಜನರು ಆಗಮಿಸುವುದಾದರೆ ಆಡಳಿತ ಯಂತ್ರ, ಅಧಿಕಾರಿ ವರ್ಗ ...
READ MORE
“11th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಇ-ವಾಹನ ನೀತಿ ಸುದ್ದಿಯಲ್ಲಿ ಏಕಿದೆ? ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ವಯೋಮಿತಿಯನ್ನು 16 ವರ್ಷಕ್ಕೆ ಇಳಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ. ದೇಶದಲ್ಲಿ ಇ-ವಾಹನಗಳ ಬಳಕೆ ಹೆಚ್ಚಿಸುವ ಉದ್ದೇಶ ದಿಂದ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಇ-ವಾಹನ ನೀತಿಯ ಮಹತ್ವ: ...
READ MORE
ಜೈವಿಕ ಇಂಧನ-II
Govt plans to institute one of its kind Annual
23rd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
30th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
8th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“8th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“6th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“11th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *