“9th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಆರೋಗ್ಯವಾಣಿ

 • ಸುದ್ದಿಯಲ್ಲಿ ಏಕಿದೆ ?  ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯವಾಣಿ 104 ಕಾರ್ಯ ಯೋಜನೆಗೆ ಮನಸೋತ ಕೇಂದ್ರ ಸರಕಾರ, ಅದನ್ನು ರಾಷ್ಟ್ರಮಟ್ಟದಲ್ಲಿ ‘ಆರೋಗ್ಯವಾಣಿ 1104’ ಮೂಲಕ ಪರಿಚಯಿಸಿ ಒಂದೇ ಸೂರಿನಡಿ ತುರ್ತು ಆರೋಗ್ಯ ಮಾಹಿತಿ ನೀಡಲು ಮುಂದಾಗಿದೆ.
 • ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆರೋಗ್ಯವಾಣಿ ಸೇವೆಯನ್ನು ರಾಷ್ಟ್ರದ ಜನತೆಗೆ ಸಮರ್ಪಿಸುವ ಸಾಧ್ಯತೆ ಇದೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ಅಂತಿಮ ನಿರ್ಧಾರ ಕೈಗೊಂಡಿದ್ದು, ಕೇಂದ್ರ ಹಾಗೂ ಪ್ರಾದೇಶಿಕ ಕಚೇರಿಗಳ ಸ್ಥಾಪನೆ ಕುರಿತು ಪೂರ್ವ ಸಿದ್ಧತೆ ನಡೆಸಿದೆ.

ಸಹಾಯವಾಣಿ ಕೇಂದ್ರಗಳನ್ನು ಎಲ್ಲಿ ತೆರೆಯಲಾಗುತ್ತದೆ ?

 • ಹೈದರಾಬಾದ್‌ ಅಥವಾ ಮುಂಬೈನಲ್ಲಿ ಸಹಾಯವಾಣಿ ಕೇಂದ್ರ ಕಚೇರಿ ಸ್ಥಾಪಿಸಿ, ಚೆನ್ನೈ, ಕೇರಳ, ದಿಲ್ಲಿ, ಕೋಲ್ಕೊತಾ, ಒಡಿಶಾ, ಗುಜರಾತ್‌ ಸೇರಿದಂತೆ ಆಯ್ದ ಏಳೆಂಟು ರಾಜ್ಯದಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪಿಸಿ ಸಕಾಲದಲ್ಲಿ ಗ್ರಾಮೀಣ ಭಾಗದ ಜನರಿಗೆ ದೂರವಾಣಿ ಮೂಲಕ ಆರೋಗ್ಯ ಮಾಹಿತಿ ನೀಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.
 • ರಾಜ್ಯದಲ್ಲಿ 2013ರಲ್ಲೇ ಆರಂಭ: 2013ರ ಜೂ. 19ರಂದು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿ ಕೇಂದ್ರವಾಗಿಟ್ಟುಕೊಂಡು ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಆರೋಗ್ಯವಾಣಿ 104’ ಆರಂಭಿಸಲಾಯಿತು.

ಉದ್ದೇಶ

 • ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗದ ಗ್ರಾಮೀಣ ಜನರು ದೂರವಾಣಿ ಮೂಲಕ ತಜ್ಞ ವೈದ್ಯರ ಸಲಹೆ ಪಡೆಯಲು ನೆರವಾಗಲು ರಾಜ್ಯ ಸರಕಾರ ಈ ಯೋಜನೆ ಜಾರಿಗೆ ತಂದಿತ್ತು.
 • ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸಲಹೆ, ಆಪ್ತ ಸಮಾಲೋಚನೆ, ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ, ಆರೋಗ್ಯ ಸಂಸ್ಥೆ ಅಥವಾ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲು ಸಹ ಇಲ್ಲಿ ಅವಕಾಶವಿದೆ.
 • ನಿತ್ಯ 25 ಸಾವಿರ ಕರೆಗಳಂತೆ ಈವರೆಗೆ ಸುಮಾರು 4 ಕೋಟಿಗಳಷ್ಟು ಕರೆಗಳು ಈ ಕೇಂದ್ರಕ್ಕೆ ಬಂದಿವೆ.

104 ಇನ್ನು ಆಗಲಿದೆ 1104

 • ರಾಜ್ಯದಲ್ಲಿನ 104 ಉಚಿತ ದೂರವಾಣಿ ಸಂಖ್ಯೆಯನ್ನು ರಾಷ್ಟ್ರಮಟ್ಟದಲ್ಲಿ 1104ಕ್ಕೆ ಮಾರ್ಪಡಿಸಿ, ಐವಿಆರ್‌ ಮೂಲಕ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿಯೇ ಆರೋಗ್ಯವಾಣಿ ಕೇಂದ್ರಕ್ಕೆ ಸಂಪರ್ಕ ಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ.

ಸಂಧಾನ ಕೇಂದ್ರ

 • ಸುದ್ದಿಯಲ್ಲಿ ಏಕಿದೆ?  ಸಿಲಿಕಾನ್‌ ಸಿಟಿ ಸೇರಿ ಹಲವು ನಗರಗಳ ಖ್ಯಾತಿಯ ಬೆಂಗಳೂರು ನಗರ ಇದೀಗ ದೇಶದಲ್ಲಿ ಮಧ್ಯಸ್ಥಿಕೆ, ರಾಜೀ ಸಂಧಾನ ಕೇಂದ್ರಗಳ ತವರೂರಾಗುತ್ತ ಸಾಗಿದೆ.
 • ದಿಲ್ಲಿ ಹಾಗೂ ಮುಂಬಯಿ ನಗರಗಳಲ್ಲಿರುವಂತೆ ಇಲ್ಲೂ ಸರಕಾರಿ ಹಾಗೂ ಖಾಸಗಿ ಮಿಡೀಯೇಷನ್‌ ಕೇಂದ್ರಗಳು ತಲೆ ಎತ್ತುತ್ತಿದ್ದು, ಅವುಗಳಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿ ವಿಚಾರದಲ್ಲಿ ಭಾರಿ ಬೇಡಿಕೆಯೂ ಬರುತ್ತಿದೆ.
 • ಈ ರೀತಿ ಕೇಂದ್ರಗಳಿಂದಾಗಿ ಹೈಕೋರ್ಟ್‌ ಹಾಗೂ ಅಧೀನ ನ್ಯಾಯಾಲಯಗಳ ನಿವೃತ್ತರಾದ ನ್ಯಾಯಮೂರ್ತಿಗಳು, ನ್ಯಾಯಾಧೀಶರು, ಹಿರಿಯ ವಕೀಲರು, ನುರಿತ ಸಂಧಾನಕಾರರು, ಮಧ್ಯಸ್ಥಿಕೆಗಾರರಿಗೂ ಬೇಡಿಕೆ ಹೆಚ್ಚಿದ್ದು, ನಿವೃತ್ತಿಯ ನಂತರವೂ ಕೈ ತುಂಬಾ ಕೆಲಸವೂ ಸಿಗುವಂತಾಗಿದೆ.
 • ಬೆಂಗಳೂರಿನಲ್ಲಿ ಈಗಾಗಲೇ ಇದ್ದ ನಾಲ್ಕು ಪ್ರಮುಖ ಕೇಂದ್ರಗಳ ಜೊತೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳೆಲ್ಲಾ ಸೇರಿ ಪ್ರಾರಂಭಿಸಿರುವ ಆರ್‌ಎನ್‌ಬಿ ಅರ್ಬಿಟ್ರೇಷನ್‌ ಮತ್ತು ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆಗೊಂಡಿದೆ.
 • ಬೆಂಗಳೂರು ನಗರದಲ್ಲಿ ಈಗಾಗಲೇ ಹೈಕೋರ್ಟ್‌ನಿಂದಲೇ ನಡೆಸುತ್ತಿರುವ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ(ಬಿಎಂಸಿ) ಮತ್ತು ಬೆಂಗಳೂರು ಆರ್ಬಿಟ್ರೇಷನ್‌ ಮತ್ತು ಕನ್ಸಿಲಿಯೇಷನ್‌ ಸೆಂಟರ್‌ ಇವೆ.
 • 2007ರಿಂದ ಆರಂಭವಾದ ಬಿಎಂಸಿ ದೇಶದಲ್ಲಿಯೇ ಅತ್ಯುತ್ತಮ ಎನಿಸಿದೆ.

ಯಾವೆಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತದೆ ?

 • ಇಲ್ಲಿ ಆಸ್ತಿ ವ್ಯಾಜ್ಯ, ಕೌಟುಂಬಿಕ ಸಮಸ್ಯೆ ಸೇರಿದಂತೆ ಎಲ್ಲ ಬಗೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಹೈಕೋರ್ಟ್‌ ಹಾಗೂ ಅಧೀನ ನ್ಯಾಯಾಲಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕೇಸ್‌ಗಳು ಇಲ್ಲಿಗೆ ವರ್ಗಾವಣೆಗೊಳ್ಳುತ್ತವೆ. ಇದರಲ್ಲಿ ಶೇ.70ರಷ್ಟು ತ್ವರಿತವಾಗಿ ವಿಲೇವಾರಿಗೊಳ್ಳುತ್ತಿವೆ. ಈಗ ಹೆಚ್ಚಿನ ಕಕ್ಷಿದಾರರೂ ತಮ್ಮ ಕೇಸ್‌ಗಳನ್ನು ಬಿಎಂಸಿಗೆ ವರ್ಗಾಯಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಆರ್ಬಿಟ್ರೇಷನ್‌ ಕೇಂದ್ರ

 • ಬೆಂಗಳೂರಿನ ಆರ್ಬಿಟ್ರೇಷನ್‌ ಕೇಂದ್ರವು ಬಹುತೇಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ಖಟ್ಲೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತಿದೆ. ವಿಶೇಷವಾಗಿ ವಾಣಿಜ್ಯ ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥ ಮಾಡುತ್ತಿದೆ.
 • ಹೈಕೋರ್ಟ್‌ಗೆ ಬರುವ ವಾಣಿಜ್ಯ ಖಟ್ಲೆಗಳನ್ನು ಈ ಕೇಂದ್ರಕ್ಕೆ ವರ್ಗಾಯಿಸಲಾಗುತ್ತಿದೆ. ಅಲ್ಲಿ ತ್ವರಿತ ವಿಚಾರಣೆ ನಡೆಸಿ ನ್ಯಾಯದಾನ ಸಿಗುವ ತೃಪ್ತಿ ಕಕ್ಷಿದಾರರಲ್ಲಿದೆ. ಈ ಕೇಂದ್ರದಲ್ಲಿ ಬಹುತೇಕ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ನ ನಿವೃತ್ತ ಜಜ್‌ಗಳು, ಹಿರಿಯ ವಕೀಲರಿದ್ದಾರೆ.

ಅಂತಾರಾಷ್ಟ್ರೀಯ ಮಾನ್ಯತೆ

 • ಕಳೆದ ಐದು ವರ್ಷಗಳಿಂದ ಬೆಂಗಳೂರು ಅಂತಾರಾಷ್ಟ್ರೀಯ ಮೀಡಿಯೇಷನ್‌ ಮತ್ತು ಆರ್ಬಿಟ್ರೇಷನ್‌ ಹಾಗೂ ಕನ್ಸಿಲೇಷನ್‌ ಸೆಂಟರ್‌(ಬೈಮ್ಯಾಕ್‌)ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.
 • ಹಿರಿಯ ನ್ಯಾಯವಾದಿ ಹಾಗೂ ನುರಿತ ಮಿಡಿಯೇಟರ್‌ ಬಿ.ಸಿ.ತಿರುವೆಂಗಡಂ ನಡೆಸುತ್ತಿರುವ ಈ ಕೇಂದ್ರಕ್ಕೆ ಭಾರತ ಸರಕಾರವೂ ಮಾನ್ಯತೆ ನೀಡಿದೆ.
 • ಅಷ್ಟೇ ಅಲ್ಲದೆ, ಯುನೈಟೆಡ್‌ ನೇಷನ್ಸ್‌ ಕಮೀಷನ್‌ ಫಾರ್‌ ಇಂಟರ್‌ನ್ಯಾಷನಲ್‌ ಟ್ರೇಡ್‌ ಲಾ ನಿಂದ ಮಾನ್ಯತೆ ಪಡೆದಿರುವ ದೇಶದ ಏಕೈಕ ಕೇಂದ್ರವಾಗಿದೆ. ಯಾವುದೇ ಲಾಭದ ಉದ್ದೇಶವಿಲ್ಲದೆ, ಕೇಂದ್ರ ಸಂಧಾನ ಮತ್ತು ಮಧ್ಯಸ್ಥಿಕೆ ಮೂಲಕ ಕೇಸುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಕೆಲಸದಲ್ಲಿ ತೊಡಗಿದೆ.

ಕೇಂದ್ರದಲ್ಲಿ ತೊಡಗಿಸಿಕೊಂಡವರು

 • ಮಧ್ಯಸ್ಥಿಕೆಗಾರರಾದ ಲೈಲಾ ಟಿ.ಒಲಪಲ್ಲಿ ಸೆಂಟರ್‌ ಫಾರ್‌ ಅಡ್ವಾನ್ಡ್‌ ಮೀಡಿಯೇಷನ್‌ ಪ್ರಾಕ್ಟೀಸ್‌ ಕೇಂದ್ರದ ಮೂಲಕ ನ್ಯಾಯಾಂಗದ ಮೇಲಿನ ಭಾರ ಇಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಜಸ್ಟ್‌ ಲಾ ಸೇರಿದಂತೆ ವಕೀಲರ ಕೆಲವು ಫರ್ಮ್‌ಗಳು ಸಣ್ಣ ಪ್ರಮಾಣದಲ್ಲಿ ಮಧ್ಯಸ್ಥಿಕೆಗಳನ್ನು ನಡೆಸುತ್ತಿವೆ. ಮಧ್ಯಸ್ಥಿಕೆಗಳ ಮೂಲಕ ಪ್ರಕರಣಗಳ ಇತ್ಯರ್ಥ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆ ನಡೆಯುತ್ತಿದೆ.

ಭಾರತದಲ್ಲಿ ಸಂಧಾನ ಕೇಂದ್ರಗಳ ಚಿತ್ರಣ

 • ಭಾರತದಲ್ಲಿ ಪಂಚಾಯ್ತಿ ವ್ಯವಸ್ಥೆಯನ್ನು ಸಾಂಸ್ಥಿಕಗೊಳಿಸುವಿಕೆಯನ್ನು ಪರಿಶೀಲಿಸಲು ಕಾನೂನು ಮತ್ತು ನ್ಯಾಯ ಸಚಿವಾಲಯವು ಉನ್ನತ ಮಟ್ಟದ ಸಮಿತಿಯನ್ನು (ಎಚ್ಎಲ್ಸಿ) ರಚಿಸಿದೆ.

ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಸಮಿತಿ ನೇತೃತ್ವ ವಹಿಸಲಿದೆ .

 • ಇದು ಪಂಚಾಯ್ತಿ ಕಾರ್ಯವಿಧಾನವನ್ನು ವೇಗಗೊಳಿಸಲು ಮತ್ತು ದೇಶದಲ್ಲಿ ಪಂಚಾಯ್ತಿ ಪರಿಸರ ವ್ಯವಸ್ಥೆಯನ್ನು ಬಲಗೊಳಿಸಲು ಹಲವಾರು ಅಂಶಗಳನ್ನು ನೋಡುತ್ತದೆ. ಇದು ನಿರ್ದಿಷ್ಟ ಸಮಸ್ಯೆಗಳನ್ನು ಪರಿಶೀಲಿಸುತ್ತದೆ ಮತ್ತು “ಭಾರತವು ಅಂತರಾಷ್ಟ್ರೀಯ ಮತ್ತು ದೇಶೀಯ ಮಧ್ಯಸ್ಥಿಕೆಗೆ ಒಂದು ದೃಢವಾದ ಕೇಂದ್ರವಾಗಿದೆ” ಮಾಡಲು ಅಗತ್ಯವಾದ ರಸ್ತೆಮಾಪನ್ನು ತಯಾರಿಸುತ್ತದೆ.
 • ಪ್ರಸ್ತುತ ಸ್ಥಿತಿ ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಆಕ್ಟ್, 2015 ಒಪ್ಪಂದಗಳನ್ನು ತ್ವರಿತ ಜಾರಿಗೊಳಿಸುತ್ತದೆ, ಹಣಕಾಸಿನ ಹಕ್ಕುಗಳ ಸುಲಭ ಮರುಪಡೆಯುವಿಕೆ, ನ್ಯಾಯಾಲಯಗಳಲ್ಲಿ ಪ್ರಕರಣಗಳ ಪೆಂಡೆನ್ಸಿಗಳನ್ನು ಕಡಿಮೆ ಮಾಡುತ್ತದೆ. ಪಂಚಾಯ್ತಿ ಮೂಲಕ ವಿವಾದ ಪರಿಹಾರ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು, ಹೂಡಿಕೆದಾರ ಸ್ನೇಹಿ ದೇಶವಾಗಿ ಭಾರತವನ್ನು ಪ್ರಚೋದಿಸುವ ಮೂಲಕ ವಿದೇಶಿ ಬಂಡವಾಳವನ್ನು ಉತ್ತೇಜಿಸುವುದು ಮತ್ತು ಕಾನೂನಿನ ಚೌಕಟ್ಟನ್ನು ಹೊಂದಿರುವ ಮತ್ತು ಭಾರತದಲ್ಲಿ ವ್ಯಾಪಾರ ಮಾಡುವುದನ್ನು ಸುಲಭವಾಗಿಸುತ್ತದೆ.
 • ಭಾರತದ ಮೊದಲ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮುಂಬೈನಲ್ಲಿ ಉದ್ಘಾಟನೆಗೊಂಡಿತು

ಹಿನ್ನೆಲೆ

 • ಪ್ರಸ್ತುತ, ದೇಶದಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವಿಲ್ಲದಿದ್ದರೂ, ಸಿಂಗಾಪುರ್ ಅಥವಾ ಲಂಡನ್ ಇಂಟರ್ನ್ಯಾಷನಲ್ ಆರ್ಬಿಟ್ರೇಷನ್ ಸೆಂಟರ್ಸ್ನಲ್ಲಿ ಭಾರತೀಯ ಪಕ್ಷಗಳ ಭೂ ವ್ಯವಹಾರದ ಹೆಚ್ಚಿನ ವ್ಯಾಪಾರ ವಿವಾದಗಳು ಬದಲಿಗೆ ಭಾರತೀಯ ವ್ಯವಹಾರಗಳನ್ನು ಅನುಸರಿಸಬಹುದಾದ ಪರ್ಯಾಯ ವೇದಿಕೆಯಾಗಿ MCIA ಯನ್ನು ತಜ್ಞರು ನೋಡುತ್ತಾರೆ.
 • ಭಾರತೀಯ ಪಕ್ಷಗಳು ಸಿಂಗಪುರ್ ಮತ್ತು ಲಂಡನ್ ಆರ್ಬಿಟ್ರೇಷನ್ ಕೇಂದ್ರಗಳಿಂದ ನಿರ್ವಹಿಸಲ್ಪಡುವ 30% ರಷ್ಟು ಮಧ್ಯಸ್ಥಿಕೆ ಪ್ರಕರಣಗಳನ್ನು ಅಂದಾಜು ಮಾಡುತ್ತವೆ. ಲಾಜಿಸ್ಟಿಕ್ಸ್ ಮತ್ತು ಇತರ ಸಂಬಂಧಿತ ಖರ್ಚುಗಳ ಜೊತೆಗೆ ಇಂತಹ ಪ್ರಕರಣಗಳನ್ನು ಪರಿಹರಿಸಲು ಒಟ್ಟು ಹಣದ ಹೊರಹರಿವು 5  ಶತಕೋಟಿ $ ನಷ್ಟಿರುತ್ತದೆ. ಎಂಸಿಐಐ ಗಮನಾರ್ಹವಾಗಿ ಈ ವೆಚ್ಚವನ್ನು ತಗ್ಗಿಸುತ್ತದೆ.

ಆಮದು ಸುಂಕ 

 • ಸುದ್ದಿಯಲ್ಲಿ ಏಕಿದೆ ?  ದೇಶೀಯ ಜವಳಿ ಹಾಗೂ ಗಾರ್ಮೆಂಟ್ಸ್‌ ವಲಯಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರ, 501 ಜವಳಿ ಮತ್ತು ಅಪಾರಲ್‌ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.20ಕ್ಕೆ ಹೆಚ್ಚಳ ಮಾಡಿದೆ.
 • ಆಮದು ಸುಂಕ ಹೆಚ್ಚಳ ಮಾಡುವಂತೆ ಜವಳಿ ಇಲಾಖೆಯು ಪ್ರಸ್ತಾಪವನ್ನು ಸಲ್ಲಿಸಿತ್ತು. ಇದನ್ನು ಪರಿಗಣಿಸಿದ ಕೇಂದ್ರ ಸರಕಾರ, ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
 • ಈ ನಿರ್ಧಾರದಿಂದ ದೇಶೀಯ ಜವಳಿ ಉತ್ಪಾದಕರಿಗೆ ನಿರಾಳವಾಗಲಿದ್ದು, ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ.
 • ಸರಕಾರ ಕಳೆದ ತಿಂಗಳೇ ಜಾಕೆಟ್‌, ಸೂಟ್ಸ್‌, ಕಾರ್ಪೆಟ್ಸ್‌ ಇತ್ಯಾದಿ ಜವಳಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಇಮ್ಮಡಿಗೊಳಿಸಿತ್ತು. ಜವಳಿ ವಲಯದ ತಜ್ಞರ ಪ್ರಕಾರ ಭಾರತವು ರಫ್ತಿಗೆ ನೇರವಾಗಿ ಪ್ರೋತ್ಸಾಹ ಧನ ನೀಡಲು ಸಾಧ್ಯವಾಗುತ್ತಿಲ್ಲ. ಇದೇ ಸಂದರ್ಭ ದೇಶೀಯ ಜವಳಿ ವಲಯಕ್ಕೆ ಉತ್ತೇಜನ ನೀಡಬೇಕಾಗಿದೆ. ಹೀಗಾಗಿ ಆಮದು ಸುಂಕ ಹೆಚ್ಚಿಸಲಾಗಿದೆ. ಕಳೆದ ಜೂನ್‌ ತಿಂಗಳಿನಲ್ಲಿ ವಿದೇಶಿ ಬಟ್ಟೆ, ನೂಲು ಇತ್ಯಾದಿಗಳ ಆಮದು ಶೇ.9 ವೃದ್ಧಿಸಿತ್ತು ( 17 ಕೋಟಿ ಡಾಲರ್‌, ಅಂದಾಜು 1,156 ಕೋಟಿ ರೂ.)

ಸುಂಕ ಹೆಚ್ಚಳದಿಂದ ಆಗುವ ಅನುಕೂಲಗಳು

 • ಜವಳಿ ಉತ್ಪನ್ನಗಳ ಆಮದು ಸುಂಕವನ್ನು ಇಮ್ಮಡಿಗೊಳಿಸಿರುವುದರಿಂದ ಭಾರತದ ಜವಳಿ ಉದ್ಯಮಿಗಳಿಗೆ ಅನುಕೂಲಕರವಾಗಲಿದೆ. ಅಗ್ಗದ ವಿದೇಶಿ ಬಟ್ಟೆ, ನೂಲು, ಇತರ ಉತ್ಪನ್ನಗಳ ಆಮದಿಗೆ ಕಡಿವಾಣ ಬೀಳಲಿದೆ.
 • ಗಾರ್ಮೆಂಟ್ಸ್‌ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚುವ ನಿರೀಕ್ಷೆ ಇದೆ. ಸದ್ಯಕ್ಕೆ ಸುಮಾರು 5 ಕೋಟಿ ಮಂದಿ ಜವಳಿ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Related Posts
Visvesvaraya Technological University (VTU) will train construction workers workingin its poat graduate campus. They will be trained in six basic skills related to their work by the varsity, which has been ...
READ MORE
Belagavi administration to encourage use of mud idols The district administration will initiate strict measures to discourage the use of Ganesh idols made from Plaster of Paris. Instead, it will encourage ...
READ MORE
National Current Affairs – UPSC/KAS Exams- 30th August 2018
e-cigarettes Why in news? In a move to protect health risks to children, adolescents and women of reproductive age, the health ministry has asked states to ban Electronic Nicotine Delivery Systems (ENDS) ...
READ MORE
The country is witnessing a start-up revolution and to harness the potential of India’s innovators and entrepreneurs a vibrant financial ecosystem is essential. India’s is at number three in terms of Start-ups ...
READ MORE
The incidents of cross-border firing have shown a sharp decline after the border guarding forces of the two countries decided to “pick up the phone before picking up the gun”, ...
READ MORE
“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಯುಷ್ಮಾನ್‌ಭವ  ಸುದ್ಧಿಯಲ್ಲಿ ಏಕಿದೆ ?ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಬಡವರ ಆರೋಗ್ಯ ಕಾಪಾಡುವ, ಜಗತ್ತಿನ ಅತಿ ದೊಡ್ಡ ಸರಕಾರ ಪ್ರಾಯೋಜಿತ ಹೆಲ್ತ್‌ ಕೇರ್‌ ಯೋಜನೆ 'ಆಯುಷ್ಮಾನ್‌ ಭಾರತ್‌' ಲೋಕಾರ್ಪಣೆಗೊಂಡಿತು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ...
READ MORE
Urban Infrastructure Development Scheme for Small and Medium Towns (UIDSSMT)
Under Centrally Sponsored UIDSSMT (mission period) scheme, out of the 38 projects sanctioned for the State, 28 projects are completed. The central government has released an amount of Rs.534.97 crore for ...
READ MORE
National Current Affairs – UPSC/KAS Exams- 26th October 2018
Commonwealth Association for Public Administration and Management Award Topic: Governance In news: India wins CAPM Award 2018.The CAPAM Awards celebrate the spirit of innovation in the public service by recognizing organizations that ...
READ MORE
The political crisis in Uttarakhand and subsequent developments have once again catapulted a number of rather familiar questions onto the political terrain. The formation of three small States in 2000, Chhattisgarh, ...
READ MORE
“16th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಹಸಿರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಪೂರ್ಣ ಪ್ರಮಾಣದ ಹಸಿರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ (ಜಿಎಸ್ಡಿಪಿ) ಯನ್ನು ಪ್ರಾರಂಭಿಸಿತು. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ 2021 ರ ವೇಳೆಗೆ 30 ಕೋರ್ಸ್ಗಳ ...
READ MORE
VTU to train construction workers
Karnataka Current Affairs – KAS/KPSC Exams- 21st August
National Current Affairs – UPSC/KAS Exams- 30th August
Start ups ecosystem in India
DG-level talks with Pak bears fruit
“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Urban Infrastructure Development Scheme for Small and Medium
National Current Affairs – UPSC/KAS Exams- 26th October
Have small states realised their goals?
“16th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *