Karnataka Current Affairs – KAS/KPSC Exams – 26th March 2018

ಚಿಪ್ಕೋ ಚಳುವಳಿಯ 45ನೇ ವಾಷಿಕೋತ್ಸವಕ್ಕೆ ಗೂಗಲ್​ ಡೂಡಲ್​ ಗೌರವ

 • ಅರಣ್ಯ ನಾಶದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿಪ್ಕೋ ಚಳುವಳಿಯ 45 ವಾರ್ಷಿಕೋತ್ಸವದ ಸಂದರ್ಭದಲ್ಲಿ ಗೂಗಲ್​ ಸಂಸ್ಥೆ ವಿಶಿಷ್ಟವಾದ ಡೂಡಲ್​ ಮೂಲಕ ಚಳುವಳಿಯನ್ನು ನೆನಪಿಸಿಕೊಂಡಿದೆ.
 • ಅಣೆಕಟ್ಟು, ಕಾರ್ಖಾನೆಗಳು ಮತ್ತು ರಸ್ತೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶ ಮಾಡುತ್ತಿರುವುದನ್ನು ವಿರೋಧಿಸಿ ಪರಿಸರ ಹೋರಾಟಗಾರ ಸುಂದರಲಾಲ್​ ಬಹುಗುಣ ಅವರ ನೇತೃತ್ದಲ್ಲಿ 1973ರಲ್ಲಿ ಉತ್ತರ ಪ್ರದೇಶದಲ್ಲಿ ಚಿಪ್ಕೋ ಚಳುವಳಿಯನ್ನು ಆರಂಭಿಸಲಾಯಿತು. ಈ ಚಳುವಳಿಯಲ್ಲಿ ಹೋರಾಟಗಾರರು ಪರಸ್ಪರರ ಕೈ ಹಿಡಿದು ಮರವನ್ನು ಅಪ್ಪಿ ನಿಲ್ಲುತ್ತಿದ್ದರು.
 • ಹುಣ್ಣಿಮೆ ಬೆಳಕಿನಲ್ಲಿ ಮಹಿಳೆಯರು ಮರವನ್ನು ಅಪ್ಪಿ ನಿಂತಿರುವ ಚಿತ್ರವನ್ನು ಗೂಗಲ್​ ಡೂಡಲ್​ ಚಿತ್ರಿಸಲಾಗಿದೆ. ಜತೆಗೆ 1730ರಲ್ಲಿ ರಾಜಸ್ಥಾನದಲ್ಲಿ ನಡೆದ ಚಳುವಳಿಯಿಂದ ಚಿಪ್ಕೋ ಚಳುವಳಿ ಪ್ರೇರಿತವಾಗಿತ್ತು ಎಂದು ತಿಳಿಸಿದೆ

ವೈರ್​ಲೆಸ್ ಆಯ್ತು ವಾರಾಣಸಿ

 • ಐತಿಹಾಸಿಕ ನಗರ ವಾರಾಣಸಿ ಈಗ ವೈರ್​ಲೆಸ್ ಆಗಿದೆ. 800 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಮತ್ತು ಸಂಕೀರ್ಣವಾದ ನಗರದಲ್ಲಿ ವಿದ್ಯುತ್ ಪ್ರಸರಣದ ವೈರುಗಳು ಹುಡುಕಿದರೂ ಸಿಗುವುದಿಲ್ಲ! ಏಕೀಕೃತ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್) ಅಡಿಯಲ್ಲಿ 16 ಚದರ ಕಿ.ಮೀ. ವಿಸ್ತೀರ್ಣದ ವಾರಾಣಸಿಯಲ್ಲಿ ನೆಲದಡಿ ವಿದ್ಯುತ್ ವೈರ್​ಗಳನ್ನು ಅಳವಡಿಸಲಾಗಿದ್ದು, ಈ ಮೂಲಕ 50 ಸಾವಿರ ಬಳಕೆದಾರರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
 • ‘ನೆಲದಡಿಯಲ್ಲಿ ವಿದ್ಯುತ್ ಪೂರೈಕೆ ಮಾಡುವ ಜಾಲವು ದಕ್ಷಿಣ ಕೊರಿಯಾ ಸಿಯೋಲ್ ಮತ್ತು ಟರ್ಕಿಯ ಕೆಲವು ನಗರಗಳಲ್ಲಿದೆ. ಆದರೆ, ಸಣ್ಣ ಗಲ್ಲಿಗಳೇ ಹೆಚ್ಚಿರುವ ವಾರಾಣಸಿಯಲ್ಲಿ ನೆಲದಡಿ ವಿದ್ಯುತ್ ವೈರ್​ಗಳನ್ನು ಹುಗಿಯುವುದು ಸವಾಲಿನ ಕೆಲಸವಾಗಿತ್ತು. ಆದರೂ ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗಿದೆ’.

ಮೈಸೂರು– ಬೆಂಗಳೂರು ಸ್ಕೈಬಸ್ ಯೋಜನೆಗೆ ಸಿದ್ಧ

 • ಬೆಂಗಳೂರು–ಮೈಸೂರು ನಡುವೆ ವಿದ್ಯುತ್ ಚಾಲಿತ ಸ್ಕೈಬಸ್ ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ರಾಜ್ಯ ಒಪ್ಪಿದರೆ ಯೋಜನೆ ಕಾರ್ಯಗತಗೊಳಿಸಲಾಗುವುದು .
 • ಬಹು ನಿರೀಕ್ಷಿತ 10 ಲೇನ್‌ಗಳ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
 • ಈ ಯೋಜನೆಯನ್ನು ದೆಹಲಿಯಲ್ಲಿ ಆರಂಭಿಸಲಾಗುತ್ತಿದ್ದು, ಏಪ್ರಿಲ್ 15 ರಂದು ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಗಾಳಿಯಲ್ಲಿ ತೇಲಿದಂತೆ ಪ್ರಯಾಣ ಮಾಡುವ ಅನುಭವ ಪ್ರಯಾಣಿಕರಿಗೆ ಸಿಗಲಿದೆ.
 • ಒಂದು ಕಿಲೋ ಮೀಟರ್ ಮೆಟ್ರೊ ರೈಲು ಯೋಜನೆಗೆ ₹ 3,500 ಕೋಟಿ ವೆಚ್ಚವಾದರೆ ಸ್ಕೈಬಸ್‌ ಯೋಜನೆಗೆ ₹50 ಕೋಟಿಗಿಂತಲೂ ಕಡಿಮೆ ವೆಚ್ಚವಾಗಲಿದೆ.
 • ಏನಿದು ಸ್ಕೈಬಸ್: ಇದು ಟ್ರೈನ್‌ ಮಾದರಿಯ ಬಸ್. ಇದರ ಸಂಚಾರಕ್ಕೆ ಮೆಟ್ರೊ ರೈಲು ಯೋಜನೆ ಮಾದರಿಯಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಮೆಟ್ರೊ ರೈಲುಗಳು ಸೇತುವೆ ಮೇಲೆ ಸಂಚರಿಸಿದರೆ, ಸ್ಕೈಬಸ್ ಸೇತುವೆ ಕೆಳ ಭಾಗದಲ್ಲಿ ತೂಗು ತೊಟ್ಟಿಲು ರೂಪದಲ್ಲಿ ಸಂಚರಿಸುತ್ತದೆ.
 • ಹಾಲಿ ಇರುವ ರಸ್ತೆಗಳ ಮೇಲೆ ಇದರ ಸಂಚಾರಕ್ಕೆ ಮೇಲ್ಸೇತುವೆ ನಿರ್ಮಿಸಿದರೆ ಸಾಕು. ಮೆಟ್ರೊ ನಿಲ್ದಾಣಗಳ ಮಾದರಿಯಲ್ಲೇ ಅಲ್ಲಲ್ಲಿ ನಿಲ್ದಾಣಗಳು ಇರುತ್ತವೆ. ಪ್ರತಿ ಬೋಗಿಯಲ್ಲಿ ಸುಮಾರು 150 ಪ್ರಯಾಣಿಕರು ಕುಳಿತುಕೊಳ್ಳಬಹುದು. ಎರಡರಿಂದ ಆರು ಬೋಗಿಗಳು ಒಮ್ಮೆಗೆ ಸಂಚರಿಸಬಹುದು. ಗಂಟೆಗೆ ಸರಾಸರಿ 100 ಕಿ.ಮೀ ವೇಗದಲ್ಲಿ ಇದು ಸಂಚರಿಸುತ್ತದೆ.‌
 • ಕಾಲಮಿತಿಯಲ್ಲಿ ಹೆದ್ದಾರಿ ಪೂರ್ಣ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಯೋಜನೆಯನ್ನು ನಿಗದಿತ ಎರಡು ವರ್ಷಗಳ ಅವಧಿಯಲ್ಲಿ ಪೂರ್ಣ ಗೊಳಿಸಲಾಗುವುದು. ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ಪ್ರಯಾಣಿಸಲು ಸಾಧ್ಯವಿದೆ .
 • ಬಿಳಿಗಿರಿರಂಗನಬೆಟ್ಟ ಮೀಸಲು ಅರಣ್ಯದ ಗಡಿಯಿಂದ ಬೆಂಗಳೂರು ತನಕ 170 ಕಿ.ಮೀ ಉದ್ದದ ದ್ವಿಪಥ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಲಾಗಿದೆ.  ₹2,000 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು .
 • ‘ರಾಜ್ಯದಲ್ಲಿ 2013– 14ನೇ ಸಾಲಿನಲ್ಲಿ 5,707 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇತ್ತು. ಈಗ 13,565 ಕಿ.ಮೀಗೆ ವಿಸ್ತರಿಸಲಾಗುತ್ತಿದೆ. ’

ನದಿ ಜೋಡಣೆ: 6 ಲಕ್ಷ ಎಕರೆಗೆ ನೀರು

 • ದಕ್ಷಿಣ ರಾಜ್ಯಗಳಲ್ಲಿನ ನೀರಿನ ಅಭಾವ ನೀಗಿಸಲು ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕಾವೇರಿಗೆ ಹರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರಿಂದ ಕರ್ನಾಟಕದಲ್ಲಿ 6 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ.
 • 3000 ಟಿಎಂಸಿ ಅಡಿ ನೀರು ಗೋದಾವರಿಯಿಂದ ಸಮುದ್ರಕ್ಕೆ ಹರಿಯುತ್ತಿದೆ. ಆರಂಭದಲ್ಲಿ 300 ಟಿಎಂಸಿ ಅಡಿ ನೀರನ್ನು ನಾಗಾರ್ಜುನ ಸಾಗರ ಅಣೆಕಟ್ಟು ಮೂಲಕ ಕೃಷ್ಣಾ ನದಿಗೆ ಹರಿಸಲಾಗುವುದು. ಬಳಿಕ ಪೆನ್ನಾರ್ ನದಿಗೆ ನಿರ್ಮಿಸಿರುವ ಸೊಮಸಿಲಾ ಅಣೆಕಟ್ಟಿಗೆ ನೀರು ಸಾಗಲಿದೆ. ಅಲ್ಲಿಂದ ಕಾವೇರಿ ನದಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ .
 • ‘ಒಟ್ಟಾರೆ ಈ ಯೋಜನೆಯಿಂದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಪ್ರಯೋಜನವಾಗಲಿದೆ’.
 • ಇದಲ್ಲದೆ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಒಟ್ಟಾರೆ 15 ಲಕ್ಷದಿಂದ 20 ಲಕ್ಷ ಎಕರೆಗೆ ನೀರಾವರಿ ಕಲ್ಪಿಸುವ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ.

ವೈರಮುಡಿ ಉತ್ಸವ

 • ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಚಲುವನಾರಾಯಣ ಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
 • ಬೆಳಿಗ್ಗೆ 6 ಗಂಟೆಗೆ ನಗರದ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ ಹಾಗೂ ರಾಜಮುಡಿ ತಿರುವಾಭರಣ ಪೆಟ್ಟೆಗೆಗೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಪೂಜೆ ಸಲ್ಲಿಸಿ ವೈರಮುಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಲಕ್ಷ್ಮಿ ಜನಾರ್ದನ ದೇವಾಲಯದಲ್ಲಿ ವೈರಮುಡಿ ಪೆಟ್ಟಿಗೆ ಇಟ್ಟು ಪೂಜೆ ಸಲ್ಲಿಸಿದ ನಂತರ ಮೇಲುಕೋಟೆ ಮಾರ್ಗ ಮಧ್ಯೆ 80ಕ್ಕೂ ಹೆಚ್ಚು ಹಳ್ಳಿಗಳ ಜನರು ಪೂಜೆ ಸಲ್ಲಿಸಲಿದ್ದಾರೆ.
 • ಸಂಜೆ ಪೊಲೀಸ್‌ ಭದ್ರತೆಯೊಂದಿಗೆ ವೈರಮುಡಿ ಮೆರವಣಿಗೆ ಮೇಲುಕೋಟೆ ತಲುಪಲಿದೆ. ಪಾಂಡವಪುರ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಹಾಗೂ ಚಲುವನಾರಾಯಣಸ್ವಾಮಿ ದೇವಾಲಯದ ಸ್ಥಾನಿಕರು ಮೆರವಣಿಗೆಯ ನೇತೃತ್ವ ವಹಿಸುವರು.
 • ರಾತ್ರಿ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿರುವ ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

~~~***ದಿನಕ್ಕೊಂದು ಯೋಜನೆ!***~~~

ಯಾಂತ್ರಾಧಾರ – ಕಸ್ಟಮ್ ಬಾಡಿಗೆ ಸೇವೆ ಕೇಂದ್ರಗಳು

 • ಕೃಷಿ ಯಂತ್ರೋಪಕರಣ ಖರೀದಿ ಮಾಡಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತರೂ ಕೈಗೆಟುಕುವ ಬಾಡಿಗೆ ದರದಲ್ಲಿ ಯಾಂತ್ರಿಕ ಕೃಷಿ ಕೈಗೊಳ್ಳಬಹುದು. ಕೂಲಿಯಾಳುಗಳ ಕೊರತೆ ನೀಗಿಸಿಕೊಳ್ಳಬಹುದು. ಸಮಯಕ್ಕೆ ಸರಿಯಾಗಿ ಬೇಸಾಯ ಕೈಗೊಂಡು ಹೆಚ್ಚು ಉತ್ಪಾದನೆ ಪಡೆಯಬಹುದು.
 • ಇದು ಸಾಧ್ಯವಾದದ್ದು ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ಪೂರೈಸುವ ಕೃಷಿ ಯಂತ್ರಧಾರೆ ಕೇಂದ್ರಗಳಿಂದ.
 • ರೈತರು ಹೆಚ್ಚೆಚ್ಚು ಕೃಷಿಯಲ್ಲಿ ತೊಡಗುವಂತೆ ಮಾಡುವುದು, ಕೂಲಿಯಾಳುಗಳ ಸಮಸ್ಯೆಗೆ ಪರಿಹಾರ ನೀಡುವುದು ಕೃಷಿಯಂತ್ರ ಧಾರೆ ಕೇಂದ್ರಗಳ ಉದ್ದೇಶ.

ಎಲ್ಲೆಲ್ಲಿವೆ ಕೃಷಿ ಯಂತ್ರಧಾರೆ ಕೇಂದ್ರಗಳು?

 • ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ‘ಕೃಷಿ ಯಂತ್ರಧಾರೆ’ ಕೇಂದ್ರಗಳು ಕಾರಾರ‍ಯರಂಭವಾದದ್ದು 2014-15ರಿಂದ. ರಾಜ್ಯ ಕೃಷಿ ಇಲಾಖೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಇವುಗಳನ್ನು ನಡೆಸುತ್ತಿದೆ. ಸದ್ಯ ರಾಜ್ಯದ 490 ಹೋಬಳಿ ಸ್ಥಳಗಳಲ್ಲಿ ಈ ಕೇಂದ್ರಗಳು ಕಾರ‍್ಯ ನಿರ್ವಹಿಸುತ್ತಿವೆ.
 • ಆಯಾ ಜಿಲ್ಲೆ, ತಾಲೂಕಿನಲ್ಲಿರುವ ಬೆಳೆಗಳ ಬಗ್ಗೆ ಅಧ್ಯಯನ ನಡೆಸಿ ಅಲ್ಲಿನ ರೈತರಿಗೆ ಬೇಕಾಗುವ ಯಂತ್ರೋಪಕರಣಗಳನ್ನು ದೊರೆಯುವಂತೆ ಮಾಡಿರುವುದು ‘ಕೃಷಿ ಯಂತ್ರಧಾರೆ’ ವಿಶೇಷ.

ಯಾವೆಲ್ಲ ಯಂತ್ರೋಪಕರಣಗಳು ಲಭ್ಯ?

 • ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌, ರೋಟರಿ ಟಿಲ್ಲರ್‌, ಎಂ.ಬಿ.ನೇಗಿಲು, ರೋಟಾವೇಟರ್‌, ಡಿಸ್ಕ್‌ ನೇಗಿಲು, ಡಿಸ್ಕ್‌ ಹ್ಯಾರೋ, ನೇಗಿಲು, ಕಬ್ಬಿನ ಸ್ಟಬಲ್‌ ಶೇವರ್‌ ಮತ್ತು ನೇಗಿಲು, ಲೆವೆಲ್ಲರ್‌ ಬ್ಲೇಡ್‌, ಕೇಜ್‌ ವೀಲ್‌, ಬ್ಲೇಡ್‌ ಕುಂಟೆ, ಲೇಸರ್‌ ಆಧಾರಿತ ಸಮತಟ್ಟು ಯಂತ್ರ, ಗುಂಡಿ ತೆಗೆಯುವ ಯಂತ್ರ, ಬದು ನಿರ್ಮಾಣ ಯಂತ್ರ, ಭತ್ತ ನಾಟಿ ಯಂತ್ರ, ಬದು ಮತ್ತು ಸಾಲು ತೆಗೆಯುವ ಯಂತ್ರ, ಬಿತ್ತನೆ ಮತ್ತು ರಸಗೊಬ್ಬರ ಕೂರಿಗೆ ಯಂತ್ರ, ಶೂನ್ಯ ಬೇಸಾಯ ಕೂರಿಗೆ, ನರ್ಸರಿ ಟ್ರೇ, ಕಳೆ ತೆಗೆಯುವ ಯಂತ್ರ, ಹೊದಿಕೆ ಯಂತ್ರ, ಸಿಂಪರಣಾ ಯಂತ್ರಗಳು (ನ್ಯಾಪ್‌ ಸ್ಯಾಕ್‌, ಬ್ಯಾಟರಿ ಚಾಲಿತ, ವಿದ್ಯುತ್‌ ಚಾಲಿತ, ಗಟಾರ್‌, ಹೆಚ್‌ಟಿಪಿ), ಬಹು ಬೆಳೆ ಒಕ್ಕಣೆ ಯಂತ್ರ, ತೂರುವ ಯಂತ್ರ, ನೆಲಗಡಲೆ ಸುಲಿಯುವ/ಒಕ್ಕಣೆ ಯಂತ್ರ, ಕಬ್ಬು ಸ್ಟ್ರೀಪ್ಪರ್‌, ಅಡಿಕೆ ಸುಲಿಯುವ ಯಂತ್ರ, ಕಟಾವು ಯಂತ್ರ, ಬಹುಬೆಳೆ ಕಟಾವು ಯಂತ್ರ, ಕಾಳು ಮೆಣಸು ಬಿಡಿಸುವ ಯಂತ್ರ, ತೆಂಗಿನ ಕಾಯಿ ಸುಲಿಯುವ ಯಂತ್ರ, ಹತ್ತಿ ಹೆಕ್ಕುವ ಯಂತ್ರ, ಬೈಲರ್‌, ರಾಗಿ ಶುದ್ಧೀಕರಿಸುವ ಯಂತ್ರ, ಕಬ್ಬು ತುಂಡರಿಸುವ ಯಂತ್ರ, ಕಬ್ಬಿನ ರಸ ತೆಗೆಯುವ ಯಂತ್ರ, ಪಂಪ್‌ ಸೆಟ್‌, ನೀರಿನ ಟ್ಯಾಂಕರ್‌, ಅಲ್ಯುಮಿನಿಯಂ, ಪೈಪುಗಳು, ಸ್ಟ್ರಿಂಕ್ಲರ್‌ಗಳು, ತಳ್ಳು ಗಾಡಿ, ಅಡಿಕೆ/ ತೆಂಗಿನ ಮರ ಹತ್ತುವ ಯಂತ್ರ, ಅಲ್ಯುಮಿನಿಯಂ ಏಣಿ, ಟ್ರಾಲಿಗಳು, ಗರಗಸ ಹೀಗೆ 44 ಬಗೆಯ ಯಂತ್ರ/ ಉಪಕರಣಗಳು ಲಭ್ಯ. ಆಯಾ ಭಾಗದ ಕೃಷಿ ಅವಶ್ಯಕತೆಗೆ ಅನುಗುಣವಾಗಿ ಉಪಕರಣಗಳು ಕೇಂದ್ರದಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ.

ಬಾಡಿಗೆಗೆ ಪಡೆಯುವುದು ಹೇಗೆ?

 • ಕೃಷಿ ಯಂತ್ರೋಪಕರಣ ಬಾಡಿಗೆಗೆ ಬೇಕಾದಲ್ಲಿ ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಹೋಗಿ ಬೇಕಾದ ಯಂತ್ರವನ್ನು ಮುಂಗಡ ಹಣ ಪಾವತಿಸಿ ಕಾದಿರಿಸಬಹುದು. ಏಕಕಾಲದಲ್ಲಿ ಅಲ್ಲಿನ ಎಲ್ಲಾ ರೈತರಿಗೆ ಒಂದೇ ಬಗೆಯ ಯಂತ್ರಗಳು ಬೇಕಾಗುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಯಂತ್ರಗಳ ಲಭ್ಯತೆಯನ್ನು ನೋಡಿಕೊಂಡು ಬೇಕಾದ ದಿನಕ್ಕಿಂತ ಒಂದು ವಾರ ಮುಂಚಿತವಾಗಿ ಕಾಯ್ದಿರಿಸುವ ಸೌಲಭ್ಯವಿದೆ. ಯಂತ್ರೋಪಕರಣ ಬಾಡಿಗೆ ದರ ಮತ್ತು ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಪ್ರಕಟಿಸಲಾಗಿರುತ್ತದೆ. ಇತರ ಕಡೆಗಳಲ್ಲಿ ದೊರೆಯುವ ಯಂತ್ರಗಳಿಗೆ ಹೋಲಿಸಿದರೆ ಇಲ್ಲಿ ಬಾಡಿಗೆ ಕಡಿಮೆ.

ಮುಂಗಡ ಕಾದಿರಿಸುವಿಕೆ ಹೇಗೆ?

 • ಯಂತ್ರಗಳನ್ನು ಮುಂಗಡ ಕಾದಿರಿಸುವಿಕೆಗಾಗಿ ರೈತರು ಸೇವಾ ಕೇಂದ್ರಗಳಲ್ಲಿ ನೋಂದಾವಣಿ ಮಾಡಿಕೊಳ್ಳಬೇಕು. ನಿಗದಿಗೊಳಿಸಿದ ಬಾಡಿಗೆ ದರ ಮತ್ತು ಅವಧಿಯ ಆಧಾರದ ಮೇಲೆ ಶೇ.20ರಷ್ಟು ಮೊತ್ತವನ್ನು ಪಾವತಿಸಿ ಸೇವೆಯ ದಿನಾಂಕ ತಿಳಿಸಬೇಕು. ಕೇಂದ್ರದಲ್ಲಿ ಮುಂಗಡ ಪಾವತಿಸಿದ ರಸೀದಿ ಪಡೆಯಬೇಕು. ಯಂತ್ರವನ್ನು ಒಯ್ಯುವ ಸಂದರ್ಭದಲ್ಲಿ ಬಾಕಿ ಶೇ.80ರಷ್ಟು ಮೊತ್ತ ಪಾವತಿಸಬೇಕು. ಯಂತ್ರ ಬಳಕೆ ಅವಧಿ ಹೆಚ್ಚುವರಿಯಾದಲ್ಲಿ ಅಥವಾ ಕಡಿಮೆಯಾದಲ್ಲಿ ಮೊತ್ತವನ್ನು ಪಾವತಿಸುವುದು ಅಥವಾ ಹಿಂಪಡೆಯಲು ಅವಕಾಶವಿದೆ.

ದಿನ ಬದಲಾವಣೆ ಹಾಗೂ ಕಾಯ್ದಿರಿಸುವಿಗೆ ರದ್ದು

 • ಕಾದಿರಿಸಿದ ದಿನಾಂಕದಿಂದ ಉಪಕರಣ ಬೇಕಾಗುವ ದಿನಾಂಕದವರೆಗಿನ ಅವಧಿಯಲ್ಲಿ ಸೇವೆಯ ದಿನವನ್ನು ಹಿಂದೂಡಬಹುದು ಅಥವಾ ಸೇವೆಯ ದಿನದಿಂದ 15 ದಿನಗಳವರೆಗೆ ಮುಂದೂ ಡಬಹುದು. ಆದರೆ, 15 ದಿನಗಳಿಗಿಂತ ಹೆಚ್ಚಾದಲ್ಲಿ ಕಾದಿರಿಸುವಿಕೆಯನ್ನು ರದ್ದು ಗೊಳಿಸಿ ಹೊಸ ಪ್ರಕ್ರಿಯೆ ಮಾಡಬೇಕು.
 • ಮುಂಗಡವಾಗಿ ಕಾದಿರಿಸಿದ ಯಂತ್ರೋಪಕರಣಗಳು ಬೇಡವೆಂದಾದರೆ ಸೇವೆಯ ಮುಂಚಿತ 72 ಗಂಟೆಗಳವರೆಗೆ ಕಾದಿರಿಸುವಿಕೆ ರದ್ದುಗೊಳಿಸಿದರೆ ಶೇ.100ರಷ್ಟು ದರವನ್ನು ಹಿಂದಿರುಗಿಸಲಾಗುವುದು. ಸೇವೆಯ 48 ಗಂಟೆಗಳವರೆಗೆ ತಿಳಿಸಿದ್ದಲ್ಲಿ ಬುಕ್ಕಿಂಗ್‌ನ ಶೇ.75ರಷ್ಟು, 24 ಗಂಟೆಗಳವರೆಗೆ ರದ್ದುಗೊಳಿಸಿದರೆ ಶೇ.50ರಷ್ಟು ಹಿಂದಿರುಗಿಸಲಾಗುವುದು. ಸೇವೆಯ ದಿನ ರದ್ದುಗೊಳಿಸಿದಲಿ ಮುಂಗಡ ಕಾದಿರಿಸುವಿಕೆಗಾಗಿ ನೀಡಿದ ಹಣ ಮರುಪಾವತಿಸುವುದಿಲ್ಲ.
 • ಬಾಡಿಗೆ ದರ ನಿಗದಿಪಡಿಸಲು ಜಿಲ್ಲಾ ಚಾಲನಾ ಸಮಿತಿ ರಚನೆ ಮಾಡಲಾಗಿರುತ್ತದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಯಂತ್ರಗಳ ಬಾಡಿಗೆ ದರವನ್ನು ಮಾರುಕಟ್ಟೆ ದರಕ್ಕಿಂತ ಶೇ.20ರಿಂದ 50 ರಷ್ಟು ಕಡಿಮೆ ನಿಗದಿ ಮಾಡಲಾಗುತ್ತದೆ.

ಉಪಯೋಗ ಹೇಗೆ?

 • ಬಾಡಿಗೆ ಕೇಂದ್ರದಿಂದ ಯಂತ್ರ ಕಳಿಸಿಕೊಡುವಾಗ ಜತೆಗೆ ನುರಿತ ಸಿಬ್ಬಂದಿಯೂ ಬಂದಿರುತ್ತಾರೆ. ಗದ್ದೆ, ತೋಟಕ್ಕೆ ಯಂತ್ರ ಕೆಲಸಕ್ಕೆ ಇಳಿದ ನಂತರ ಬಾಡಿಗೆ ನೀಡಬೇಕಾದ ಸಮಯ ಆರಂಭವಾಗುತ್ತದೆ. ಸಮಯದ ಲೆಕ್ಕಚಾರವನ್ನು ಆ ಯಂತ್ರವನ್ನು ಚಾಲನೆ ಅಥವಾ ಬಳಸುವವರೇ ನೋಡಿಕೊಳ್ಳುತ್ತಾರೆ. ಪ್ರತ್ಯೇಕವಾಗಿ ಚಾಲಕನಿಗೆ ಸಂಬಳ ನೀಡಬೇಕಾದ ಅಗತ್ಯಲ್ಲ. ಕೆಲವೊಂದು ಚಾಲಕ ರಹಿತ ಯಂತ್ರಗಳನ್ನು ನೇರವಾಗಿ ರೈತರಿಗೆ ನೀಡಲಾಗುತ್ತದೆ. ಬಳಕೆ ಮಾಡಿದ ನಂತರ ಕೇಂದ್ರಕ್ಕೆ ಹಿಂದಿರುಗಿಸುವ ಜವಾಬ್ದಾರಿ ರೈತ ಗ್ರಾಹಕರದ್ದು.
 • ನಿಯಮಗಳು: ಯಂತ್ರಗಳನ್ನು ನೋಂದಾಯಿಸಿದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು.ದುರುಪಯೋಗಪಡಿಸಿಕೊಂಡರೆ ಸಮಿತಿಯ ನಿರ್ಧಾರದಂತೆ ರೈತರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು, ತಕರಾರು/ಸರಕಾರಿ ಸ್ಥಳದಲ್ಲಿ ಯಂತ್ರಗಳನ್ನು ಬಳಕೆ ಮಾಡುವಂತಿಲ್ಲ. ಅನುಮತಿ ಇಲ್ಲದೇ ಯಂತ್ರವನ್ನು ಇತರರಿಗೆ ವರ್ಗಾಯಿಸುವಂತಿಲ್ಲ.

1. ಚಿಪ್ಕೋ ಚಳುವಳಿಗೆ 1987 ರಲ್ಲಿ ಯಾವ ಪ್ರಶಸ್ತಿಯನ್ನು ನೀಡಲಾಯಿತು ?
A. ರೈಟ್ ಲೈವ್ಲಿ ಹುಡ್ ಪ್ರಶಸ್ತಿ
B. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
C. ಇಂದಿರಾ ಶಾಂತಿ ಪ್ರಶಸ್ತಿ
D. ಯಾವುದು ಅಲ್ಲ

2. ಯಾವ ಐತಿಹಾಸಿಕ ನಗರವು ಸಂಪೂರ್ಣ ವಯರ್ಲೆಸ್ ನಗರವಾಗಿದೆ ?
A. ಬದ್ರಿನಾಥ್
B. ವಾರಾಣಸಿ
C. ಕೇದಾರನಾಥ್
D. ಅಮರನಾಥ್

3. ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ರಾಷ್ಟೀಯ ಹೆದ್ದಾರಿಯನ್ನು ಎಷ್ಟು ಕಿಲೋಮೀಟರ್ಗಳಿಗೆ ವಿಸ್ತರಿಸಲಾಗಿದೆ?
A. 5,707
B. 6,798
C. 13,565
D. 15,365
4. ಸೋಮಾಸಿಲ ಅಣೆಕಟ್ಟನ್ನು ಯಾವ ನದಿಗೆ ನಿರ್ಮಿಸಲಾಗಿದೆ ?
A. ಕಾವೇರಿ
B. ಪಾಲಾರ್
C. ಕೃಷ್ಣ
D. ಪೆನ್ನಾರ್
5. ಕೃಷಿ ಯಂತ್ರಧಾರೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಗುರುತಿಸಿ
A. ಕೃಷಿ ಯಂತ್ರೋಪಕರಣ ಬಾಡಿಗೆಗೆ ಬೇಕಾದಲ್ಲಿ ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಹೋಗಿ ಬೇಕಾದ ಯಂತ್ರವನ್ನು ಮುಂಗಡ ಹಣ ಪಾವತಿಸಿ ಕಾದಿರಿಸಬಹುದು
B. ನಿಗದಿಗೊಳಿಸಿದ ಬಾಡಿಗೆ ದರ ಮತ್ತು ಅವಧಿಯ ಆಧಾರದ ಮೇಲೆ ಶೇ.40 ರಷ್ಟು ಮೊತ್ತವನ್ನು ಪಾವತಿಸಿ ಸೇವೆಯ ದಿನಾಂಕ ತಿಳಿಸಬೇಕು
C. 1ಮತ್ತು 2 ಹೇಳಿಕೆಗಳು ಸರಿಯಾಗಿವೆ
D. ಎರಡೂ ಹೇಳಿಕೆಗಳು ತಪ್ಪಾಗಿವೆ

6. ಯಾವ ರಾಜ್ಯ ಬಹು-ಬಳಕೆಯ ವಾಹನ ನೈಪುನ್ಯಾ ರಾಥಮ್ (ಅಥವಾ ವರ್ಲ್ಡ್ ಆನ್ ವೀಲ್ಸ್) ಅನ್ನು ಪ್ರಾರಂಭಿಸಿದೆ?
A. ಕೇರಳ
B. ಆಂಧ್ರ ಪ್ರದೇಶ
C. ಕರ್ನಾಟಕ
D. ತೆಲಂಗಾಣ
7. ಕೆಳಗಿನವುಗಳಲ್ಲಿ ಯಾವುದು ಇಸ್ರೇಲ್ನಲ್ಲಿ ಭೂಮಿಗೆ ಸೌದಿ ವಾಯುಪ್ರದೇಶವನ್ನು ದಾಟಲು ಮೊದಲ ವಾಣಿಜ್ಯ ವಿಮಾನ ಆಗುತ್ತದೆ?
A. ಇಂಡಿಗೊ
B. ಏರ್ ಇಂಡಿಯಾ
C. ಜೆಟ್ ಏರ್ವೇಸ್
D. ಎಸ್ಪಿಸ್ ಜೆಟ್
8. ವಿಶ್ವದ ಅತ್ಯಂತ ಉದ್ದವಾದ ಮರಳುಗಲ್ಲಿನ ಗುಹೆಯು ‘ಕ್ರೆಮ್ ಪುರಿ’ ಹೆಸರನ್ನು ನಲ್ಲಿ ಕಂಡುಹಿಡಿಯಲಾಗಿದೆ.
A. ಗುಜರಾತ್
B. ಹಿಮಾಚಲ ಪ್ರದೇಶ
C. ಮಣಿಪುರ್
D. ಮೇಘಾಲಯ

9. ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಗಾಜಿನ ಅರಮನೆ ನಿರ್ಮಾಣ ಮಾಡಿದವರು ಯಾರು?
A. ಮಾಧವರಾವ್
B. ಕೆ. ಶೇಷಾದ್ರಿ ಅಯ್ಯರ್
C. ವಿಶ್ವೇಶ್ವರಯ್ಯ
D. ಟಿ. ಆನಂದರಾವ್

10. ಸರ್. ಎಡ್ವಿನ್ ಅರ್ನಾಲ್ಡ್ ರವರು ಯಾರನ್ನು ‘ಏಷ್ಯಾದ ಬೆಳಕು'(ಏಷ್ಯಾದ ಜ್ಞಾನ ಪ್ರದೀಪ) ಎಂದು ಕರೆದರು?
A. ಬುದ್ಧ .
B. ಸರ್ವಜ್ಞ .
C. ಬಸವಣ್ಣ .
D. ರನ್ನ .

ಉತ್ತರಗಳು: 1.A 2.B 3.C 4.D 5.A 6.B 7.B 8.D 9.D 10.A 

Related Posts
Karnataka Current Affairs – KAS/KPSC Exams – 29th – 30th Dec 2017
Belagavi sugar institute to get research, development wing The State government will start an organic farming research and development wing in the S. Nijalingappa Sugar Research Institute in Belagavi. Scientists will develop ...
READ MORE
It is the name of recently developed new 'incredible' light bulbs which are powered by GRAVITY. The 'GravityLight' uses a sack of sand to gradually pull a piece of rope through ...
READ MORE
“25th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಖಾಸಗಿ ವನ್ಯಜೀವಿ ಧಾಮ ಸುದ್ದಿಯಲ್ಲಿ ಏಕಿದೆ?  ರಾಜ್ಯದ ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಖಾಸಗಿ ವನ್ಯಜೀವಿಧಾಮಗಳ ಸ್ಥಾಪನೆಗೆ ಅನುವು ಮಾಡಿಕೊಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ನಡೆಗೆ ವನ್ಯಜೀವಿ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಆಕ್ಷೇಪವೇಕೆ ? ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಸಾಕಷ್ಟು ರೆಸಾರ್ಟ್‌ಗಳು ತಲೆ ಎತ್ತಿವೆ. ...
READ MORE
Urban Development-Construction of Houses for EWS
The Government of Karnataka has allotted 323 acres of land for the formation of Housing Projects for the members of economically weaker Section of the Society 190 Acres of land has been handed ...
READ MORE
“30th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಫ್ಯೂಚರ್ ಟ್ರೇಡಿಂಗ್ ಸುದ್ದಿಯಲ್ಲಿ ಏಕಿದೆ? ಪೆಟ್ರೋಲ್ ಹಾಗೂ ಡೀಸೆಲನ್ನು ಫ್ಯೂಚರ್ ಟ್ರೇಡಿಂಗ್ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಿನ್ನಲೆ: ಪೆಟ್ರೋಲ್, ಡೀಸೆಲ್ ಬೆಲೆ ದಿನೇದಿನೆ ಏರುತ್ತಿರುವ ಕಾರಣ ಪೆಟ್ರೋಲಿಯಂ ಕಂಪನಿಗಳ ಹಿತ ಕಾಯುವುದರ ಜತೆಗೆ ಜನರಿಗೂ ಕೊಂಚ ನಿಟ್ಟುಸಿರು ಬಿಡುವಂತಹ ಈ ಪ್ರಸ್ತಾವನೆಯನ್ನು ...
READ MORE
Karnataka Current Affairs – KAS / KPSC Exams – 20th June 2017
ACB probe sought into delay in setting up waste-to-energy plant The Legislature Committee on Public Undertakings (CPU) has recommended that the government order an Anti-Corruption Bureau (ACB) probe into the issue ...
READ MORE
All India Radio has launched a 24-hour satellite classical music channel, ‘Raagam’, which will be available via DTH (with no transmitter support as with its other channels) and mobile app ...
READ MORE
The political crisis in Uttarakhand and subsequent developments have once again catapulted a number of rather familiar questions onto the political terrain. The formation of three small States in 2000, Chhattisgarh, ...
READ MORE
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಡೋಕ್ಲಾಂ ಬಿಕ್ಕಟ್ಟು ಸುದ್ಧಿಯಲ್ಲಿ ಏಕಿದೆ? ಸಿಕ್ಕಿಂ ಗಡಿಯ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೇ ಕಾರ್ಯಚಟುವಟಿಕೆ ಚುರುಕುಗೊಳಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಅಧಿಕಾರಿಯೊಬ್ಬರು ನೀಡಿದ್ದಾರೆ. ದೇಶದ ಉತ್ತರ ಭಾಗದಲ್ಲಿನ ಅತಿಕ್ರಮಣ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತ, ಡೋಕ್ಲಾಂ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ...
READ MORE
Karnataka Current Affairs – KAS/KPSC Exams – 6th & 7th June 2018
Concern over solar plant coming up close to bear sanctuary Nature lovers and wildlife enthusiasts have expressed grave concern over a solar power plant coming up very close to the Daroji ...
READ MORE
Karnataka Current Affairs – KAS/KPSC Exams – 29th
GRAVELIGHT
“25th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Urban Development-Construction of Houses for EWS
“30th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS / KPSC Exams
AIR launches 24-hour classical music channel
Have small states realised their goals?
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Karnataka Current Affairs – KAS/KPSC Exams – 6th

Leave a Reply

Your email address will not be published. Required fields are marked *