ತುಳು ಸಂಸ್ಕೃತಿ
ಸುದ್ಧಿಯಲ್ಲಿ ಏಕಿದೆ ?ಜಗತ್ತಿನ ಅತಿ ದೊಡ್ಡ ಗಾಳಿಪಟ ಉತ್ಸವವ ಫ್ರಾನ್ಸ್ನ ಡೀಪಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ತುಳುನಾಡಿನ ಸಂಸ್ಕೃತಿ ರಾರಾಜಿಸಿದೆ. ಕರಾವಳಿಯ ಪಂಚೆ, ಮುಟ್ಟಾಲೆ, ಜುಬ್ಬಾಕ್ಕೆ ವಿದೇಶಿಯರು ಮಾರುಹೋಗಿದ್ದಾರೆ.
- ಸೆಪ್ಟೆಂಬರ್ 8ರಿಂದ 16ರವರೆಗೆ ಡೀಪಿ ನಗರದಲ್ಲಿ ಜರಗಿದ ಉತ್ಸವದಲ್ಲಿ 48 ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.
- ಭಾರತ ದಿಂದ ಟೀಂ ಮಂಗಳೂರು ತಂಡದ ದಿನೇಶ್ ಹೊಳ್ಳ ಮತ್ತು ಸತೀಶ್ ರಾವ್ ಭಾಗವಹಿಸಿದ್ದರು. ತುಳುನಾಡಿನ ಕೋರಿದ ಕಟ್ಟ(ಕೋಳಿ ಅಂಕ)ಎಂಬ ವಿಶೇಷವಾದ ಗಾಳಿಪಟವನ್ನು ಉತ್ಸವದಲ್ಲಿ ಹಾರಿಸಲಾಗಿದ್ದು, ಕಲಾಕೃತಿಗೆ ಫ್ರಾನ್ಸ್ನಲ್ಲಿ ಭಾರಿ ಮನ್ನಣೆ ಸಿಕ್ಕಿದೆ.
- ಉದ್ಘಾಟನೆ ಮೆರವಣಿಗೆಯಲ್ಲಿ ಮುಟ್ಟಾಲೆ, ಜುಬ್ಬ, ಪಂಚೆ ಧರಿಸಿ, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಾಗಿದ್ದೆವು. ಮುಟ್ಟಾಲೆಯಲ್ಲಿ ತುಳು ಸಂಸ್ಕೃತಿಯ ರೇಖಾಚಿತ್ರ ಬಿಡಿಸಲಾಗಿತ್ತು
- ವಿನ್ಯಾಸಕ್ಕೆ ಬೇಡಿಕೆ: ಭಾರತಕ್ಕೆ ವಿಶೇಷ ಮನ್ನಣೆ ದೊರೆಯಲು ಇನ್ನೊಂದು ಕಾರಣ, ಉತ್ಸವಕ್ಕೆ ದಿನೇಶ್ ಹೊಳ್ಳ ಅವರ ಪೋಸ್ಟರ್ ವಿನ್ಯಾಸ ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವುದು. ಪೋಸ್ಟರ್ನಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಸಾಂಕೇತಿಕವಾಗಿ ಚಿತ್ರಿಸಿದ್ದರು. ಅಲ್ಲಿನ ಸ್ಥಳಿಯಾಡಳಿತ ಮತ್ತು ಸಂಘಟಕರು ವಿನ್ಯಾಸವನ್ನು ಮಗ್, ಟೀಶರ್ಟ್, ಗ್ರೀಟಿಂಗ್ಸ್ ಮೇಲೆ ಮುದ್ರಿಸಿ ಹೊಳ್ಳರ ಸಹಿಯೊಂದಿಗೆ ಮಾರಿ ಆದಾಯ ಗಳಿಸಿದ್ದಾರೆ. ವಿನ್ಯಾಸದ ಮೇಲೆ ಸಾವಿರಾರು ಮಂದಿ ಆಟೋಗ್ರಾಫ್ ಪಡೆದಿದ್ದಾರೆ.
- ಆದಾಯ ಬುಡಕಟ್ಟು ಜನಾಂಗಕ್ಕೆ: ಫ್ರಾನ್ಸ್ನಲ್ಲಿ ದಿನೇಶ್ ಹೊಳ್ಳರು ಹಾಲಕ್ಕಿ ಜನಾಂಗ, ಜನಪದ ಹಾಡುಗಾರ್ತಿ ಸುಕ್ರಿಬೊಮ್ಮನ ಗೌಡ, ಗೌಲಿಸಿದ್ಧ, ಸೋಲಿಗ, ಕುಡುಬಿ ಮೊದಲಾದ ಜನಾಂಗದ ರೇಖಾಚಿತ್ರ ಪ್ರದರ್ಶನ ಮತ್ತು ಮಾರಾಟ ಮಾಡಿದ್ದರು. ಇದರಲ್ಲಿ ಬಂದ ಆದಾಯವನ್ನು ಬುಡಕಟ್ಟು ಜನಾಂಗದ ಅಭ್ಯುದಯಕ್ಕೆ ಬಳಸಿಕೊಳ್ಳುವ ಚಿಂತನೆ ಮಾಡಿದ್ದಾರೆ.
- ಅಳವಿನಂಚಿನಲ್ಲಿರುವ ಹಾಡುಗಾರ್ತಿ ಸುಕ್ರಿಬೊಮ್ಮನ ಗೌಡರ ಹಾಡನ್ನು ಪುಸ್ತಕ ಮಾಡಿ ಹಂಚುವ ಯೋಜನೆಯೂ ಇದೆ.
ಎಂಆರ್ಪಿಎಲ್
ಸುದ್ಧಿಯಲ್ಲಿ ಏಕಿದೆ ?ಇರಾನ್ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳದಂತೆ ಭಾರತದ ಮೇಲೆ ಅಮೆರಿಕ ಹೇರುತ್ತಿರುವ ಒತ್ತಡದ ಬಿಸಿ ಎಂಆರ್ಪಿಎಲ್ಗೂ ತಟ್ಟಿರುವುದರಿಂದ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ಆರಂಭವಾಗಿದೆ.
- ರಾಜ್ಯಕ್ಕೆ ಪೆಟ್ರೋಲ್/ಡೀಸೆಲ್ ಪೂರೈಕೆ ಹೊಣೆ ಹೊತ್ತಿರುವ ಎಂಆರ್ಪಿಎಲ್, ಇರಾನ್ನಿಂದ ಕಚ್ಚಾ ತೈಲ ಆಮದು ಮಾಡುತ್ತಿರುವ ದೇಶದ ಪ್ರಮುಖ ರಿಫೈನರಿಗಳಲ್ಲಿ ಒಂದಾಗಿದೆ. ಇದು ಶೇ.30ಕ್ಕೂ ಅಧಿಕ ಕಚ್ಚಾತೈಲವನ್ನು ಇರಾನ್ನಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕ ಒತ್ತಡದ ಬಳಿಕ ಇರಾನ್ ತೈಲಕ್ಕೆ ಪರ್ಯಾಯವಾಗಿ ಬೇರೆ ಕಡೆಯಿಂದ ಕಚ್ಚಾ ತೈಲ ಪಡೆಯಲು ಎಂಆರ್ಪಿಎಲ್ ಯೋಜನೆ ರೂಪಿಸುತ್ತಿದೆ.
- ಎಂಆರ್ಪಿಎಲ್ ವಾರ್ಷಿಕ 16 ಮಿಲಿಯನ್ ಮೆಟ್ರಿಕ್ ಟನ್(ಎಂಎಂಟಿ) ಕಚ್ಚಾ ತೈಲ ಸಂಸ್ಕರಿಸುತ್ತದೆ. ಇದರಲ್ಲಿ 3 ಎಂಎಂಟಿಯಷ್ಟನ್ನು ಪೆಟ್ರೋಲಿಯಂ ಸಚಿವಾಲಯವೇ ದೇಶೀಯವಾಗಿ ಬಾಂಬೆ ಹೈ, ಕೃಷ್ಣ ಗೋದಾವರಿ ಬೇಸಿನ್ನ ರವ್ವಾ, ರಾಜಸ್ಥಾನದ ಮಂಗಳಾ ತೈಲ ಕ್ಷೇತ್ರದಿಂದ ಪೂರೈಕೆ ಮಾಡುತ್ತದೆ.
- ಉಳಿದ 13 ಎಂಎಂಟಿಯನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ಪ್ರಮುಖ ಪಾಲು (4-5 ಎಂಎಂಟಿ) ಇರಾನ್ನದು. ಉಳಿದದ್ದನ್ನು ಟೆಂಡರ್ಗೆ ಪೂರಕವಾಗಿ ರಷ್ಯಾ, ಯುಎಇ, ಕುವೈತ್, ಯುಎಸ್, ಸೌದಿ ಅರೇಬಿಯಾ ಮತ್ತಿತರ ಕಡೆಯಿಂದ ಪಡೆದುಕೊಳ್ಳಲಾಗುತ್ತದೆ. ಈ ವರ್ಷ ಎಂಆರ್ಪಿಎಲ್ ಶೇ.90 ಇರಾನ್ ತೈಲ ಪಡೆದುಕೊಂಡಾಗಿದೆ. ಏಪ್ರಿಲ್ನಿಂದ ನಿರಂತರ ಸೆಪ್ಟೆಂಬರ್ವರೆಗೂ ತೈಲದ ನೌಕೆಗಳು ಆಗಮಿಸಿವೆ. ಅಕ್ಟೋಬರ್ನ ನೌಕೆ ಬರಲು ಕೂಡ ಸಮಸ್ಯೆ ಇಲ್ಲ. ಅಮೆರಿಕದ ನಿರ್ಬಂಧದಿಂದಾಗಿ ನವೆಂಬರ್ನಿಂದ ಇರಾನ್ ಕಚ್ಚಾ ತೈಲ ಕಳುಹಿಸುವಂತಿಲ್ಲ.
ದರ ಏರಿಕೆ ಭೀತಿ?
- ಸದ್ಯಕ್ಕೆ ಇರಾನ್ ತೈಲ ನಿರ್ಬಂಧದಿಂದ ದೊಡ್ಡ ಪರಿಣಾಮ ಆಗದಿದ್ದರೂ ಮುಂದಿನ ದಿನಗಳಲ್ಲಿ ತೈಲದ ಕೊರತೆ ಉಂಟಾಗಿ ದರ ಏರಿಕೆ ಸಾಧ್ಯತೆ ಇದೆ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿದೆ.
- ಈ ಬಾರಿ ಎಂಆರ್ಪಿಎಲ್ ಅಮೆರಿಕದ ದಕ್ಷಿಣ ಗ್ರೀನ್ ಕಾನ್ಯನ್ನ ಕಚ್ಚಾ ತೈಲ ಹಾಗೂ ಈಜಿಪ್ಟ್ನ ಖಾರುನ್ ಕಚ್ಚಾ ತೈಲ ಸಂಸ್ಕರಣೆ ಮಾಡಿದೆ. ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾದ ದೇಶಗಳಿಂದ ಕಚ್ಚಾ ತೈಲ ಮೂಲ ಪಡೆದುಕೊಳ್ಳುವುದಕ್ಕೂ ಚಿಂತನೆ ನಡೆಸಿದೆ.
ಶೇ.80 ಇಂಧನ ಪೂರೈಕೆ
- ದೇಶದ ಪ್ರಮುಖ ತೈಲ ಸಂಸ್ಕರಣಾಗಾರ ಗಳ ಸಾಲಿನಲ್ಲಿ ಎಂಆರ್ಪಿಎಲ್ ಗುರುತಿಸಿಕೊಂಡಿದೆ. ರಾಜ್ಯದ ಶೇ.80ರಷ್ಟು ಇಂಧನ ಪೂರೈಸುತ್ತದೆ. ನವಮಂಗಳೂರು ಬಂದರಿಗೆ ಕಚ್ಚಾತೈಲ ಆಮದು ಮಾಡಿ, ಅಲ್ಲಿಂದ ಪೈಪ್ಲೈನ್ ಮೂಲಕ ಪಡೆದು ಸಂಸ್ಕರಣೆ ಮಾಡಲಾಗುತ್ತದೆ. ಐಎಸ್ಪಿಆರ್ಎಲ್ನವರ ವ್ಯೂಹಾತ್ಮಕ ಭೂಗತ ಸಂಗ್ರಹಣಾಗಾರದಲ್ಲೂ ಕಚ್ಚಾತೈಲ ಸಂಗ್ರಹಿಸಲಾಗುತ್ತಿದೆ.
ಚೆನ್ನೈ ಪೆಟ್ರೋಲಿಯಂ ಕಂಪನಿಯದು ಅದೇ ಸಮಸ್ಯೆ
- ಇಂಡಿಯನ್ ಆಯಿಲ್ ಕಂಪನಿಯ ಅಧೀನ ಸಂಸ್ಥೆಯಾದ, ಚೆನ್ನೈ ಮೂಲದ ಚೆನ್ನೈ ಪೆಟ್ರೋಲಿಯಂ ಕಂಪನಿಯು ಮುಂಬರುವ ಅಕ್ಟೋಬರ್ನಿಂದ ಇರಾನ್ ಮೂಲದ ಕಚ್ಚಾ ತೈಲದ ಸಂಸ್ಕರಣೆಯನ್ನು ಸ್ಥಗಿತಗೊಳಿಸಲಿದೆ. ಇದರಿಂದಾಗಿ ಭಾರತದ ಇರಾನ್ ತೈಲ ಆಮದಿನಲ್ಲಿ ಅಕ್ಟೋಬರ್ ವೇಳೆಗೆ 1 ಕೋಟಿ ಟನ್ಗೆ ಇಳಿಕೆಯಾಗಲಿದೆ.
- ಇರಾನ್ ವಿರುದ್ಧ ಅಮೆರಿಕದ ನಿರ್ಬಂಧಗಳು ನವೆಂಬರ್ನಿಂದ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ, ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ಕಂಪನಿಯು ಚೆನ್ನೈ ಪೆಟ್ರೋಲಿಯಂಗೆ, ಇರಾನ್ ಕಚ್ಚಾ ತೈಲ ಆಮದು ಸಂಬಂಧ ವಿಮೆ ಮುಂದುವರಿಸುವುದಿಲ್ಲ ಎಂದು ಸೂಚಿಸಿದೆ. ಹೀಗಾಗಿ ಇರಾನ್ ಕಚ್ಚಾ ತೈಲ ಸಂಸ್ಕರಣೆಯನ್ನು ರದ್ದುಪಡಿಸಲು ಕಂಪನಿ ತೀರ್ಮಾನಿಸಿದೆ. ಇದರಿಂದ ಚೆನ್ನೈ ಪೆಟ್ರೋಲಿಯಂಗೆ ಅಕ್ಟೋಬರ್ನಲ್ಲಿ 10 ಲಕ್ಷ ಬ್ಯಾರೆಲ್ಗಳಷ್ಟು ಇರಾನ್ ತೈಲದ ಆಮದನ್ನು ರದ್ದುಪಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
- ಭಾರತೀಯ ವಿಮೆ ಕಂಪನಿಗಳಿಗೆ ನೇರವಾಗಿ ಅಮೆರಿಕದ ನಿರ್ಬಂಧಗಳು ತಟ್ಟುವುದಿಲ್ಲ. ಆದರೂ ಯಾವುದೇ ಅಪಾಯ ತೆಗೆದುಕೊಳ್ಳಲು ವಿಮೆ ಕಂಪನಿಗಳು ಬಯಸುತ್ತಿಲ್ಲ.
- ಪ್ರತಿ ದಿನಕ್ಕೆ 230,000 ಬ್ಯಾರಲ್ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಚೆನ್ನೈ ಪೆಟ್ರೋಲಿಯಂ ಹೊಂದಿದೆ. ಇದೀಗ ಇರಾನ್ ವಿರುದ್ಧ ಅಮೆರಿಕದ ನಿರ್ಬಂಧ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ನಿರ್ದೇಶನದ ಮೇರೆಗೆ ತೈಲ ಸಂಸ್ಕರಣೆಯನ್ನು ಸ್ಥಗಿತಗೊಳಿಸುತ್ತಿದೆ
- ಇಂಡಿಯನ್ ಆಯಿಲ್ ಕಾರ್ಪೊರೇಷನ್, ಚೆನ್ನೈ ಪೆಟ್ರೋಲಿಯಂ ಪರ ಇರಾನ್ನಿಂದ ತೈಲವನ್ನು ಆಮದು ಮಾಡುತ್ತದೆ. ಹಿಂದುಸ್ತಾನ್ ಪೆಟ್ರೋಲಿಯಂ ಕೂಡ ಈಗಾಗಲೇ ಇರಾನ್ ಮೂಲದ ತೈಲ ಆಮದನ್ನು ನಿಲ್ಲಿಸಿದೆ. ಭಾರತ್ ಪೆಟ್ರೋಲಿಯಂ ಶೀಘ್ರ ಕಡಿತಗೊಳಿಸಲಿದೆ.
ಇರಾನ್ ಆಯಿಲ್ಗೆ ರೂಪಾಯಿ ಪಾವತಿ:
- ಭಾರತ ಇರಾನ್ಗೆ ರೂಪಾಯಿಗಳ ಲೆಕ್ಕದಲ್ಲಿ ತೈಲದ ಬಿಲ್ ಮೊತ್ತವನ್ನು ನೀಡಲಿದೆ. ನವೆಂಬರ್ನಿಂದ ಅಮೆರಿಕದ ನಿರ್ಬಂಧದ ಹಿನ್ನೆಲೆಯಲ್ಲಿ ಐರೋಪ್ಯ ಬ್ಯಾಂಕ್ಗಳ ಮೂಲಕ ಹಣ ಪಾವತಿ ಅಸಾಧ್ಯವಾಗಲಿದೆ. ಆದ್ದರಿಂದ ಯುಕೊ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಮೂಲಕ ರೂಪಾಯಿ ಮೂಲಕ ಪಾವತಿಸಲಿದೆ.
ಭಾರತಕ್ಕೆ ಪರ್ಯಾಯವೇನು?
- ಇರಾನ್ನಿಂದ ತೈಲ ಆಮದು ನಿಲ್ಲಿಸಿದರೆ, ಸೌದಿ ಅರೇಬಿಯಾ, ಕುವೈತ್, ಇರಾಕ್, ಅಮೆರಿಕದಿಂದ ತೈಲವನ್ನು ಆಮದು ಮಾಡಿಕೊಂಡು ಸರಿದೂಗಿಸಬಹುದು. ಈಗಾಗಲೇ ಕೆನಡಾವು ಭಾರತಕ್ಕೆ ತನ್ನ ತೈಲವನ್ನು ಆಮದು ಮಾಡಿಕೊಳ್ಳುವಂತೆ ಆಹ್ವಾನಿಸಿದೆ.
ಭಾರತಕ್ಕೆ ತೈಲ ಪೂರೈಸುವ ಪ್ರಮುಖ ರಾಷ್ಟ್ರಗಳು
- ಸೌದಿ ಅರೇಬಿಯಾ
- ಇರಾನ್
- ಇರಾಕ್
- ಯುಎಇ
- ಕುವೈತ್
ಕಟ್ಟುನಿಟ್ಟಿನ ಆದೇಶ
ಸುದ್ಧಿಯಲ್ಲಿ ಏಕಿದೆ ?ಎಲ್ಲ ಸರ್ಕಾರಿ ಹಾಗೂ ಖಾಸಗಿ ವೈದ್ಯರು ರೋಗಿಗಳಿಗೆ ನೀಡುವ ಔಷಧಗಳ ಹೆಸರನ್ನು ಕಡ್ಡಾಯವಾಗಿ ಸರಿಯಾಗಿ ಅರ್ಥವಾಗುವ ಹಾಗೆ, ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯಬೇಕು ಎಂದು ಜಾರ್ಖಂಡ್ ರಾಜ್ಯ ಸರ್ಕಾರ ಆದೇಶ ನೀಡಿದೆ.
- ಭಾರತೀಯ ವೈದ್ಯಕೀಯ ಕಾಯ್ದೆಯ 2002ನೇ ನಿಯಮದ ಪ್ರಕಾರ, ವೈದ್ಯರು ರೋಗಿಗಳಿಗೆ ಔಷಧಗಳನ್ನು ಸೂಚಿಸುವಾಗ ಅದರ ಸಾಮಾನ್ಯ ಹೆಸರನ್ನು ಕಡ್ಡಾಯವಾಗಿ ಕ್ಯಾಪಿಟಲ್ ಅಕ್ಷರಗಳಲ್ಲೇ ಬರೆಯಬೇಕು ಎಂದಿದೆ.
ಶಿಕ್ಷೆ ಏನು ?
- ಎಂಸಿಐನ ಈ ನಿಯಮವನ್ನು ಮೊದಲ ಬಾರಿಗೆ ಉಲ್ಲಂಘಿಸಿದರೆ ಎಚ್ಚರಿಕೆ ನೀಡಲಾಗುತ್ತದೆ. ಎರಡನೇ ಬಾರಿಗೆ ಮೀರಿದರೆ ಕೆಲವು ದಿನಗಳ ಕಾಲ ಅಮಾನತು ಮಾಡಲಾಗುತ್ತದೆ. ಹಾಗೇ ಮೂರನೇ ಬಾರಿಗೆ ಉಲ್ಲಂಘಿಸಿದರೆ ಅಂಥ ವೈದ್ಯರ ನೋಂದಣಿಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ.
ಹಿನ್ನಲೆ
- ವೈದ್ಯರು ರೋಗಿಗಳಿಗೆ ಸೂಚಿಸುವ ಔಷಧದ ಹೆಸರನ್ನು ಕಡ್ಡಾಯವಾಗಿ ಕ್ಯಾಪಿಟಲ್ ಅಕ್ಷರಗಳಲ್ಲಿಯೇ ಬರೆಯಬೇಕು ಎಂಬ ಎಂಸಿಐ ನಿಯಮವನ್ನು 2016ರ ಸೆಪ್ಟೆಂಬರ್ 28ರಿಂದಲೇ ಕಡ್ಡಾಯ ಮಾಡಿದ್ದರೂ ಎರಡು ವರ್ಷಗಳಾದರೂ ಅದನ್ನು ವೈದ್ಯರು ಪಾಲಿಸುತ್ತಿರಲಿಲ್ಲ. ಈಗ ಈ ನಿಯಮ ಜಾರಿಗೊಳಿಸಿದ್ದರಿಂದ ವೈದ್ಯಕೀಯ ವಲಯದಲ್ಲಿ ಹಲವು ಅಭಿಪ್ರಾಯಗಳು ಕೇಳಿಬರುತ್ತಿವೆ.
ಡಿಜಿಟಲ್ ಡಿಸ್ಕೌಂಟ್
ಸುದ್ಧಿಯಲ್ಲಿ ಏಕಿದೆ ? ಡಿಜಿಟಲ್ ಪಾವತಿ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಆರಂಭಿಸಿದ್ದ ರಿಯಾಯಿತಿಯನ್ನು ರದ್ದುಪಡಿಸಲು ತೈಲ ಕಂಪನಿಗಳು ನಿರ್ಧರಿಸಿವೆ.
- ನೋಟು ಅಮಾನ್ಯೀಕರಣ ಘೋಷಣೆಯಾದಾಗ ನಗದು ಹಣದ ಕೊರತೆ ಹಿನ್ನೆಲೆಯಲ್ಲಿ ಡಿಜಿಟಲ್ ಪಾವತಿಗೆ ಶೇ.75ರ ರಿಯಾಯಿತಿ ಘೋಷಿಸಲಾಗಿತ್ತು.
- ಹಂತ-ಹಂತವಾಗಿ ಇದನ್ನು ಇಳಿಕೆ ಮಾಡಿ ಶೇ.25ಕ್ಕೆ ಇಳಿಸಲಾಗಿತ್ತು. ಆದರೆ ಇನ್ನು ಸಂಪೂರ್ಣ ರಿಯಾಯಿತಿಯನ್ನು ರದ್ದುಪಡಿಸಲಾಗುತ್ತದೆ. ಶೀಘ್ರವೇ ಈ ಆದೇಶ ಹೊರಬೀಳುವ ಸಾಧ್ಯತೆಯಿದೆ.
- ಇದರ ಜತೆಗೆ ಕೆಲ ಡೆಬಿಟ್ ಕಾರ್ಡ್ಗಳ ಮೇಲಿನ ಸೇವಾ ತೆರಿಗೆ ಹಾಗೆಯೇ ಮುಂದುವರಿಯಲಿದೆ. ಇದರಿಂದಾಗಿ ತೈಲ ಬೆಲೆ ಏರಿಕೆ ಜತೆಗೆ ಡಿಜಿಟಲ್ ಪಾವತಿಯ ಹೆಚ್ಚುವರಿ ತಲೆನೋವನ್ನು ಗ್ರಾಹಕರು ಅನುಭವಿಸಬೇಕಿದೆ.
ಮರ್ಚೆಂಟ್ ಡಿಸ್ಕೌಂಟ್ ದರ ಎಂದರೇನು?
- ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳಲ್ಲಿ ಪಾವತಿಸಲು ಕಾರ್ಡ್ಗಳನ್ನು (ಸ್ವೈಪ್ ಮಾಡುವಂತೆ) ತಮ್ಮ ಅಂಗಡಿಗಳಲ್ಲಿ ಬಳಸಿದಾಗ ಪ್ರತಿ ಬಾರಿಯೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳಲ್ಲಿ ಪಾವತಿಯನ್ನು ಸ್ವೀಕರಿಸುವುದಕ್ಕಾಗಿ ಬ್ಯಾಂಕಿನಿಂದ ವ್ಯಾಪಾರಿಗೆ ಇದು ಶುಲ್ಕ ವಿಧಿಸುತ್ತದೆ. ವ್ಯಾಪಾರಿ ರಿಯಾಯಿತಿ ದರವನ್ನು ವ್ಯವಹಾರದ ಶೇಕಡಾವಾರು ಪ್ರಮಾಣದಲ್ಲಿ ವ್ಯಕ್ತಪಡಿಸಲಾಗುತ್ತದೆ.
ಆರ್ಬಿಐನಿಂದ ಎಮ್ಡಿಆರ್ ನೀತಿ
- ಈ ಸಮಯದಲ್ಲಿ, ಗರಿಷ್ಠ ಹಣವಿಲ್ಲದ ವ್ಯವಹಾರವನ್ನು ಉತ್ತೇಜಿಸುವುದು ಆರ್ಬಿಐ ಉದ್ದೇಶವಾಗಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆರ್ಬಿಐ ಬ್ಯಾಂಕುಗಳಿಂದ ಎಮ್ಡಿಆರ್ಗೆ ಮೇಲಿನ ಮಿತಿಯನ್ನು ನಿಗದಿಪಡಿಸುವ ಒಂದು ನೀತಿಯನ್ನು ತಂದಿದೆ. ಇಲ್ಲಿ, ರಿಸರ್ವ್ ಬ್ಯಾಂಕ್ ಡೆಬಿಟ್ ಕಾರ್ಡುಗಳಿಗಾಗಿ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಮ್ಡಿಆರ್) ಯನ್ನು 2012 ರ ಸೆಪ್ಟೆಂಬರ್ನಿಂದ ಜಾರಿಗೆ ತಂದಿತ್ತು.
- ಅಲ್ಲಿಂದೀಚೆಗೆ, ಡೆಬಿಟ್ ಕಾರ್ಡಿನ ವಹಿವಾಟುಗಾಗಿ ಎಮ್ಡಿಆರ್ ಅನ್ನು 2000 ದ ವರೆಗೆ ವಹಿವಾಟು ಮೌಲ್ಯಗಳಿಗೆ 75% ಮತ್ತು 2,000 ಕ್ಕಿಂತಲೂ ಹೆಚ್ಚಿನ ವಹಿವಾಟು ಮೌಲ್ಯಗಳಿಗೆ 1% ನಷ್ಟು ಹಣವನ್ನು ನೀಡಲಾಗಿದೆ.
ಏನು ಬದಲಾಗಿದೆ ?
- ಪ್ರಸ್ತುತ, ಡೆಬಿಟ್ ಕಾರ್ಡಿನ MDR ಗ್ರಾಹಕರ ವಹಿವಾಟಿನ ಮೊತ್ತವನ್ನು ಆಧರಿಸಿದೆ. ಇದು ವ್ಯವಹಾರದ ಮೊತ್ತಕ್ಕೆ 25% ನಷ್ಟಿರುತ್ತದೆ. ರೂ. 1,000 ಮತ್ತು 2,000 ನಡುವಿನ ಮೊತ್ತಕ್ಕೆ 0.5%; ಮತ್ತು 2,000 ಕ್ಕಿಂತಲೂ ಹೆಚ್ಚಿಗೆ 1%. ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಕೋಟಾಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಸೇರಿದಂತೆ ಬ್ಯಾಂಕುಗಳು ಪ್ರಸ್ತುತ ಡಿಡಿಟ್ ಕಾರ್ಡ್ನಲ್ಲಿ ಎಮ್ಡಿಆರ್ ಪ್ರಸಕ್ತ ಮೂರು ಸ್ಲಾಬ್ಗಳ ವ್ಯವಸ್ಥೆಯಲ್ಲಿ ಮುಂದುವರಿದಿದೆ ಎಂದು ಅದು ಡಿಸೆಂಬರ್ 2016 ರಿಂದ ಅಸ್ತಿತ್ವದಲ್ಲಿದೆ.
- ಜನವರಿ 1, 2018 ರಿಂದ, ವಹಿವಾಟಿನ ಆಧಾರದ ಮೇಲೆ ವ್ಯಾಪಾರಿಗಳ ವರ್ಗೀಕರಣದ ಆಧಾರದ ಮೇಲೆ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಎಮ್ಡಿಆರ್ ಭೌತಿಕ ಕಾರ್ಡ್ ವಹಿವಾಟುಗಳಿಗೆ ಮತ್ತು ಕ್ಯೂಆರ್-ಕೋಡ್ ಆಧಾರಿತ ವ್ಯವಹಾರಗಳಿಗೆ ಭಿನ್ನವಾಗಿರುತ್ತದೆ, ಅಲ್ಲಿ ನೀವು ಪಾವತಿಸಲು ಒಂದು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿಕೊಳ್ಳುತ್ತೀರಿ.
- ಕೇಂದ್ರೀಯ ಬ್ಯಾಂಕ್ ವ್ಯಾಪಾರಿಗಳನ್ನು ವ್ಯಾಪಾರಿಗಳನ್ನು ಎರಡು ವಿಭಾಗಗಳಾಗಿ-ಸಣ್ಣ ವ್ಯಾಪಾರಿಗಳಾಗಿ (ಕಳೆದ ಹಣಕಾಸು ವರ್ಷದಲ್ಲಿ ರೂ 20 ಲಕ್ಷದ ವಹಿವಾಟಿನೊಂದಿಗೆ) ಮತ್ತು ಇತರ ವ್ಯಾಪಾರಿಗಳನ್ನು (ಕಳೆದ ಹಣಕಾಸು ವರ್ಷದಲ್ಲಿ ರೂ 20 ಲಕ್ಷಕ್ಕಿಂತಲೂ ಹೆಚ್ಚಿನ ವಹಿವಾಟಿನೊಂದಿಗೆ) ಹೊಂದಿದೆ.
- ದೈಹಿಕ ಪಿಒಎಸ್ ವಹಿವಾಟು ಮತ್ತು ಆನ್ಲೈನ್ ಕಾರ್ಡು ವಹಿವಾಟಿನ ಸಂದರ್ಭದಲ್ಲಿ ಸಣ್ಣ ವ್ಯಾಪಾರಿಗಳಿಗೆ ವಹಿವಾಟಿನಲ್ಲಿ 40% ಗಿಂತ ಹೆಚ್ಚು ಅಥವಾ ವ್ಯವಹಾರಕ್ಕೆ ರೂ .200 ಕ್ಕಿಂತ ಹೆಚ್ಚು ಹಣವನ್ನು ವಿಧಿಸಲಾಗುವುದಿಲ್ಲ. QR ಕೋಡ್ ಆಧಾರಿತ ವಹಿವಾಟುಗಳ ಸಂದರ್ಭದಲ್ಲಿ, ಇದು ವಹಿವಾಟು ಮೊತ್ತದ 0.30% ಅನ್ನು ಮೀರಬಾರದು ಮತ್ತು ಪ್ರತಿ ವ್ಯವಹಾರಕ್ಕೆ ರೂ .200 ದಷ್ಟಿದೆ. ಇತರ ವ್ಯಾಪಾರಿಗಳಿಗಾಗಿ, ಎಮ್ಡಿಆರ್ 0.90% ಮತ್ತು ದೈಹಿಕ ಪಿಒಎಸ್ ಸ್ವೈಪ್ಗಳು ಮತ್ತು ಆನ್ಲೈನ್ ವಹಿವಾಟುಗಳಿಗೆ ಪ್ರತಿ ವ್ಯವಹಾರಕ್ಕೆ ರೂ .1,000 ದಷ್ಟಿದೆ. QR ಕೋಡ್-ಆಧರಿತ ವಹಿವಾಟುಗಳ ಸಂದರ್ಭದಲ್ಲಿ, ವಹಿವಾಟಿನ ಮೊತ್ತದ 0.80% ಅಥವಾ ಪ್ರತಿ ವ್ಯವಹಾರಕ್ಕೆ ರೂ. 1,000 ಅನ್ನು ಮೀರಬಾರದು.
ಅದರ ಅರ್ಥವೇನು?
- ಪರಿಷ್ಕೃತ ಎಮ್ಡಿಆರ್ ಸಣ್ಣ ಮೌಲ್ಯದ ವಹಿವಾಟಿನ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ಹೆಚ್ಚು ದುಬಾರಿಯಾಗಿದೆ. ಹೇಗಾದರೂ, ಹೆಚ್ಚಿನ ಮೌಲ್ಯದ ವ್ಯವಹಾರಗಳಿಗೆ ವೆಚ್ಚ ಕಡಿಮೆಯಾಗುತ್ತದೆ. ಗ್ರಾಹಕರಿಗೆ ಎಮ್ಡಿಆರ್ ಚಾರ್ಜ್ನಲ್ಲಿ ವ್ಯಾಪಾರಿಗಳು ಹಾದುಹೋಗಬೇಕಾಗಿಲ್ಲ ಎಂದು ನೆನಪಿಡಿ.
- ಅಧಿಸೂಚನೆಯಲ್ಲಿ, ಡೆಬಿಟ್ ಕಾರ್ಡುಗಳ ಮೂಲಕ ಪಾವತಿಗಳನ್ನು ಸ್ವೀಕರಿಸುವಾಗ ಗ್ರಾಹಕರು ಎಮ್ಡಿಆರ್ ಶುಲ್ಕದ ಮೇಲೆ ಹಾದುಹೋಗುವುದಿಲ್ಲ ಎಂದು ವ್ಯಾಪಾರಿಗಳನ್ನು ಖಚಿತಪಡಿಸಿಕೊಳ್ಳಲು ಆರ್ಬಿಐ ಬ್ಯಾಂಕುಗಳಿಗೆ ಸಲಹೆ ನೀಡಿದೆ. ನೀವು ಗ್ರಾಹಕರಂತೆ ಅದನ್ನು ಪಾವತಿಸಲು ಹೊಣೆಗಾರರಾಗಿರುವುದಿಲ್ಲ.
ಶಿಶಿಲ-ಬೈರಾಪುರ ರಸ್ತೆ
ಸುದ್ಧಿಯಲ್ಲಿ ಏಕಿದೆ ?ಪಶ್ಚಿಮಘಟ್ಟದ ಸಮೃದ್ಧ ಕಾಡನ್ನು ಆಪೋಶನ ಪಡೆಯುವ ಭೈರಾಪುರ-ಶಿಶಿಲ ರಸ್ತೆ ಯೋಜನೆ ವಿರುದ್ಧ ಪರಿಸರವಾದಿಗಳು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಹಿನ್ನಲೆ
- ಭೈರಾಪುರ-ಶಿಶಿಲ ರಸ್ತೆ ದಶಕಗಳಿಂದ ಆಗಾಗ ಪ್ರಸ್ತಾಪವಾಗುತ್ತಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರ ಭಾರತ ಮಾಲಾ ಯೋಜನೆಯಡಿ ಸೇರಿಸಿ ಚಿತ್ರದುರ್ಗ-ಮಂಗಳೂರು ಚತುಷ್ಪಥ ಹೆದ್ದಾರಿ ನಿರ್ಮಾಣ ಎಂದು ಪ್ರಸ್ತಾಪಿಸಿತ್ತು. ಆಕ್ಷೇಪ-ವಿರೋಧಗಳ ನಡುವೆಯೇ ಉದ್ದೇಶಿತ ಯೋಜನೆಯ ಸಾಧ್ಯತಾ ವರದಿ ಸಿದ್ಧಗೊಂಡಿದೆ. ಆದರೆ ಇದು ಮಹಾದುರಂತಕ್ಕೆ ಬರೆಯುತ್ತಿರುವ ಮುನ್ನುಡಿ ಎಂದೇ ವ್ಯಾಖ್ಯಾನಿಸುತ್ತಿದ್ದಾರೆ ಪರಿಸರವಾದಿಗಳು.
- ಯೋಜನೆಯ ಹೆಸರು ಚಿತ್ರದುರ್ಗ-ಮಂಗಳೂರು ಚತುಷ್ಪಥ ಹೆದ್ದಾರಿ ಎಂದಾಗಿದ್ದರೂ ಪ್ರಮುಖ ಅಜೆಂಡಾ ಭೈರಾಪುರ-ಶಿಶಿಲ ರಸ್ತೆ ನಿರ್ಮಾಣ.
ಪರಿಣಾಮ
- 60 ಹೆಕ್ಟೇರ್ ಅರಣ್ಯ ನಾಶ: ಅರಣ್ಯ ಇಲಾಖೆಯ ಅನುಮತಿ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲ್ಲಿಸಿರುವ ವರದಿ ಪ್ರಕಾರ ಉದ್ದೇಶಿತ ಯೋಜನೆಗೆ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿರುವ ಪಶ್ಚಿಮ ಘಟ್ಟದ 60 ಹೆಕ್ಟೇರ್ ಅರಣ್ಯ ಪ್ರದೇಶದ ಒತ್ತುವರಿ ಅಗತ್ಯವಿದೆ.
- ಈ ಅರಣ್ಯ ಪ್ರದೇಶವು ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯದ್ದೇ 40 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಒಂದು ರಾಷ್ಟ್ರೀಯ ಉದ್ಯಾನವನ ಹಾಗೂ ಎರಡು ವನ್ಯಜೀವಿ ಧಾಮಗಳು ಇದರಲ್ಲಿ ಒಳಗೊಂಡಿದೆ. ಹೆದ್ದಾರಿ ನಿರ್ಮಾಣದ ಸ್ಥಳದಲ್ಲಿ ಆನೆ ಕಾರಿಡಾರ್ ಇದೆಯೆಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
- 2015ರಲ್ಲೇ ಅರಣ್ಯ ಇಲಾಖೆ ಭೈರಾಪುರ-ಶಿಶಿಲ ರಸ್ತೆ ಯೋಜನೆ ಸೂಕ್ತವಲ್ಲವೆಂದು ಸ್ಪಷ್ಟಪಡಿಸಿತ್ತು. ಈ ರಸ್ತೆಯನ್ನು ಉನ್ನತೀಕರಿಸಿ ಅಭಿವೃದ್ಧಿಪಡಿಸಿದಲ್ಲಿ ಮಣ್ಣು ಸವಕಳಿಯಿಂದ ಅರಣ್ಯ ಪ್ರದೇಶ, ವನ್ಯಜೀವಿಗಳ ವಾಸಸ್ಥಾನ, ಜೀವ ವೈವಿಧ್ಯತೆಗೆ ಧಕ್ಕೆ ಉಂಟಾಗುತ್ತದೆ. ಅಲ್ಲದೆ ಅರಣ್ಯ ಅತಿಕ್ರಮಣ, ಅರಣ್ಯ ಉತ್ಪನ್ನಗಳ ಅಕ್ರಮ ಸಾಗಾಣಿಕೆ, ಕಳ್ಳಬೇಟೆಯಂತಹ ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ಉಂಟಾಗುವುದಲ್ಲದೆ, ಮಾನವ-ವನ್ಯಪ್ರಾಣಿ ಸಂಘರ್ಷಕ್ಕೂ ಸಹ ಕಾರಣವಾಗುತ್ತದೆ ಎಂದು ವರದಿ ನೀಡಿತ್ತು.
ಯಾವ ಭಾಗದ ಎಷ್ಟು ಅರಣ್ಯ ಪ್ರದೇಶ?:
- ಅರಣ್ಯ ಪ್ರದೇಶ ಪ್ರಮಾಣ(ಹೆಕ್ಟೇರ್ಗಳಲ್ಲಿ)
- ಚಿಕ್ಕಮಗಳೂರು – 95
- ಹಾಸನ – 35
- ಮಂಗಳೂರು – 83
ಯೋಜನೆಯಡಿ ಬರುವ ವನ್ಯಧಾಮಗಳು:
- ಕುದುರೆಮುಖ ರಾಷ್ಟ್ರೀಯ ಉದ್ಯಾನವನ
- ಭದ್ರಾ ವನ್ಯಜೀವಿಧಾಮ
- ಜೋಗಿಮಟ್ಟಿ ವನ್ಯಜೀವಿಧಾಮ
ಸುಕನ್ಯಾ ಸಮೃದ್ಧಿ ಯೋಜನೆ
ಅಂಚೆ ಕಚೇರಿಯಲ್ಲಿ ಆರ್ಥಿಕ ಭದ್ರತೆಯನ್ನು ಕಲ್ಪಿಸುವ ಹಲವಾರು ವೈಯಕ್ತಿಕ ಉಳಿತಾಯ ಯೋಜನೆಗಳಿವೆ. ಅವುಗಳಲ್ಲಿ ಹೆಣ್ಣುಮಗುವಿಗಾಗಿ ಇರುವಂತಹ ಅದ್ಭುತ ಪ್ಲಾನ್ ಸುಕನ್ಯಾ ಸಮೃದ್ಧಿ ಯೋಜನೆ. ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ನೀಡುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ
- ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಹೆತ್ತವರು/ಪೋಷಕರು ಹೆಣ್ಣುಮಗುವಿನ ಹೆಸರಿನಲ್ಲಿ ತೆರೆಯಬಹುದು. ಹೆಣ್ಣುಮಗುವಿನ ಕಾನೂನು ರೀತ್ಯ ಪೋಷಕರಾದವರು ಒಂದು ಹೆಣ್ಣುಮಗುವಿಗೆ ಒಂದು ಖಾತೆಯನ್ನು ತೆರೆಯಬಹುದು. ಇಬ್ಬರು ಹೆಣ್ಣುಮಕ್ಕಳಿದ್ದರೆ ಎರಡು ಭಿನ್ನವಾದ ಖಾತೆಗಳನ್ನು ತೆರಯಬಹುದು.
- ಸುಕನ್ಯಾ ಸಮೃದ್ಧಿ ಖಾತೆಯನ್ನು ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಹೆಸರ ಮೇಲೆ ಖಾತೆ ತೆರೆಯಬಹುದು. ನವಜಾತ ಶಿಶುವಿನಿಂದ ಹತ್ತು ವರ್ಷದವರೆಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬೇಕಿದೆ.
- ಖಾತೆ ಪ್ರಾರಂಭಿಸಲು ಅವಶ್ಯವಾದ ಕನಿಷ್ಠ ಮೊತ್ತ 1 ಸಾವಿರ ರೂ., ನಂತರದ ಜಮಾ ನೂರು ರೂ.ಗಳಿಂದ ಗುಣಕವಾಗಿರಬೇಕು. ಒಂದು ಹಣಕಾಸು ವರ್ಷದಲ್ಲಿ ಖಾತೆಗೆ ಕನಿಷ್ಠ 1 ಸಾವಿರ ರೂ. ಮತ್ತು 50 ಲಕ್ಷ ರೂ. ವರೆಗೂ ಜಮಾ ಮಾಡಬಹುದು. ಖಾತೆದಾರರಿಗೆ 18 ವರ್ಷ ಪೂರ್ಣಗೊಂಡ ನಂತರ ಜಮಾ ಮಾಡಿದ ಹಣ ಪಡೆಯಲು ಸಾಧ್ಯವಿದೆ.
- ಈಗಿರುವ ವಾರ್ಷಿಕ ಬಡ್ಡಿ ಪ್ರಮಾಣ ಶೇ.1ರಷ್ಟಿದ್ದು 14 ವರ್ಷಗಳಲ್ಲಿ ವಾರ್ಷಿಕ 1 ಲಕ್ಷ ರೂ. ಠೇವಣಿ ಇಟ್ಟರೆ (ಒಟ್ಟು=14 ಲಕ್ಷ ರೂ.) 21 ವರ್ಷಗಳ ಬಳಿಕ ಸುಮಾರು 46 ಲಕ್ಷ ರೂ.ಗಳು ಸಿಗುತ್ತದೆ. ವಾರ್ಷಿಕ 50,000 ರೂ.ಗಳನ್ನು ಹಾಕಿದರೆ ಮೆಚ್ಯುರಿಟಿ ಸಮಯಕ್ಕೆ 23 ಲಕ್ಷ ರೂ. ಸಿಗುತ್ತದೆ. ( ಸೂಚನೆ: ಅಕ್ಟೋಬರ್-ಡಿಸೆಂಬರ್ ಅವಧಿಯ ಬಡ್ಡಿದರ ಬದಲಾಗಿದ್ದು ಶೇ.8.5ರಷ್ಟಿದೆ).
- 10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಲ್ಲಿ ಖಾತೆ ತೆರೆದು 21 ವರ್ಷಗಳ ಬಳಿಕ ಹಣ ಪಡೆಯುವ ಮಹತ್ವದ ಯೋಜನೆ ಇದಾಗಿದ್ದು, ಖಾತೆ ತೆರೆದ 14 ವರ್ಷಗಳವರೆಗೆ ಮಾತ್ರ ಹಣ ಜಮಾ ಮಾಡಬೇಕು. ಠೇವಣಿಯಲ್ಲಿ ಅರ್ಧದಷ್ಟು ಮೊತ್ತವನ್ನು ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗೆ ಬಳಕೆ ಮಾಡಿಕೊಳ್ಳಬಹುದು.
- ಖಾತೆಯ ಮೇಲೆ ಶೇ. 1ರಷ್ಟು ಬಡ್ಡಿ ಜತೆಗೆ ಪ್ರತಿವರ್ಷ ಚಕ್ರಬಡ್ಡಿಯೂ ಅನ್ವಯವಾಗಲಿದೆ. ಇದು ವಿಶೇಷ ಬಡ್ಡಿದರವಾಗಿದ್ದು, ದೇಶದಾದ್ಯಂತ ಯಾವ ಸ್ಥಳಕ್ಕೆ ಬೇಕಿದ್ದರೂ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಜತೆಗೆ 18 ವರ್ಷ ತುಂಬಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಸಲು ಮತ್ತು ಬಡ್ಡಿ ಸಮೇತ ಶೇ. 50ರಷ್ಟು ಹಣ ಪಡೆದುಕೊಳ್ಳಬಹುದು.
- ಕನಿಷ್ಠ ಪಾವತಿಯನ್ನು ಮಾಡದ ವರ್ಷ ರೂ. 50 ದಂಡ ತಗಲುತ್ತದೆ








