“21st ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಮಲಬಾರ್ ಬಾಂಡೆಡ್ ಪಿಕಾಕ್

ಸುದ್ಧಿಯಲ್ಲಿ ಏಕಿದೆ ?ನವಿಲಿನ ಬಣ್ಣದ ಚಿಟ್ಟೆ  ಮಲಬಾರ್ ಬಾಂಡೆಡ್ ಪಿಕಾಕ್’ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿದೆ

 • ಅಗಲ ರೆಕ್ಕೆಯಲ್ಲಿ ಬಾಲ ಆಕರ್ಷಕವಾಗಿದೆ. ನೀಲಿ, ನೇರಳೆ, ಹಸಿರು ಮಿಶ್ರಿತ ಬಣ್ಣ, ರೆಕ್ಕೆ ಬಿಚ್ಚಿ ಕುಳಿತಾಗ ಇದರ ಚೆಲುವು ಕಣ್ತುಂಬಿಕೊಳ್ಳುವುದೇ ಆನಂದ. ಹೆಮ್ಮೆಯ ವಿಚಾರವೆಂದರೆ ಇಂಥ ಸುಂದರ ಚಿಟ್ಟೆ ಇರುವುದು ಪಶ್ಚಿಮಘಟ್ಟದಲ್ಲಿ ಮಾತ್ರ.
 • Papilionidae ಕುಟುಂಬಕ್ಕೆ ಸೇರಿದ ಚಿಟ್ಟೆ ಇದಾಗಿದ್ದು, ಇದರ ವೈಜ್ಞಾನಿಕ ಹೆಸರು Papilio buddha. ಕನ್ನಡದಲ್ಲಿ ಬಾಲದ ಚಿಟ್ಟೆ ಕುಟುಂಬಕ್ಕೆ ಸೇರಿದ್ದು ಎನ್ನಲಾಗುತ್ತದೆ. 80ರಿಂದ 100 ಮಿ. ಮೀಟರ್‌ನಷ್ಟು ರೆಕ್ಕೆ ಅಳತೆ ಹೊಂದಿರುತ್ತವೆ.
 • ನೀಲಿ ಪಶ್ಚಿಮ ಘಟ್ಟ ಸಾಲಿನ ದಕ್ಷಿಣ ಗೋವಾದಿಂದ, ಉತ್ತರ ಕೇರಳದವರೆಗೆ ಈ ಚಿಟ್ಟೆ ಕಂಡುಬರುತ್ತದೆ. ಸ್ಪ್ರೇಪೈಂಟ್ ಮಾದರಿಯಲ್ಲಿ ಇದರ ಮೈಬಣ್ಣ ಗೋಚರಿಸುತ್ತದೆ. ತಿಳಿ ನೇರಳೆ ಮಿಶ್ರಿತ ನೀಲಿ, ಹಸಿರು ಮೂರು ಹಂತದಲ್ಲಿ ಮಿಶ್ರಿತ ಬಣ್ಣಗಳನ್ನು ಹೊಂದಿರುವುದು ವಿಶೇಷ.
 • ರಥ ಹೂ ಇಷ್ಟ: ಸೂರ್ಯನ ಕಿರಣ ಗೋಚರಿಸಿದ ಹೊತ್ತಲ್ಲಿ, ಬಿಸಿಲಿನ ವೇಳೆ ಈ ಚಿಟ್ಟೆಗಳು ಚಟುವಟಿಕೆಯಿಂದ ಕೂಡಿರುತ್ತವೆ. ಹಾರಾಟ, ಮಕರಂದ ಹೀರುವುದು, ಗಂಡು ಹೆಣ್ಣು ಆಕರ್ಷಣೆ ಸೇರಿದಂತೆ ನಾನಾರೀತಿಯಿಂದ ಆಕ್ಟಿವ್ ಆಗಿರುತ್ತವೆ. ಮೋಡ ಕವಿದ ವಾತಾವರಣ, ಬಿಸಿಲು ಇಲ್ಲದಾಗ ವಿಶ್ರಾಂತಿಯಲ್ಲಿರುತ್ತದೆ. ರಥದ ಹೂವು ಇದಕ್ಕೆ ಪ್ರಾಣ.
 • ಎಲೆ ಮಾದರಿ ಕೋಶ: ತುಳುವಿನಲ್ಲಿ ಕಾವಟೆ, ಕನ್ನಡದಲ್ಲಿ ಗಮಟೆ ಮರ ಎಂದು ಕರೆಯಲಾಗುವ ಗಾಮಸೆ ಮರದ ಎತ್ತರದ ಎಲೆಗಳಲ್ಲಿ ಈ ಚಿಟ್ಟೆ ಮೊಟ್ಟೆ ಇಡುತ್ತದೆ. ಮೊಟ್ಟೆ ಕ್ಯಾಟರ್‌ಪಿಲ್ಲರ್ ಆಗಿ ರೂಪುತಳೆದು ಅದೇ ಎಲೆಯನ್ನು ಭಕ್ಷಿಸಿ ಕೋಶವಾಗಿ ರೂಪುಗೊಳ್ಳುತ್ತದೆ. ಕೆಲದಿನಗಳಲ್ಲಿ ಚಿಟ್ಟೆಯಾಗಿ ಹೊರಬರುತ್ತದೆ.
 • ಶತ್ರುಗಳ ರಕ್ಷಣೆಗಾಗಿ ಎಲೆಯ ಮಾದರಿಯಲ್ಲೇ ಕೋಶ ನಿರ್ಮಿಸಿಕೊಳ್ಳುವುದು ಇದರ ವಿಶೇಷತೆ. ಇದರ ಮೊಟ್ಟೆ ಮತ್ತು ಕೋಶ ಕಾಣ ಸಿಗುವುದು ಅತಿ ವಿರಳ.
 • ಪಶ್ಚಿಮಘಟ್ಟ ಜೀವವೈವಿಧ್ಯತೆಯ ತಾಣ. ಕಣ್ಣಿಗೆ ಕಾಣದ, ಪರಿಸರಕ್ಕೆ ಪೂರಕವಾದ ಸಹಸ್ರ ಜೀವಿಗಳು ಇಲ್ಲಿವೆ. ಅದರಲ್ಲಿ ಮಲಬಾರ್ ಬಾಂಡೆಡ್ ಪಿಕಾಕ್ ಚಿಟ್ಟೆ ಸಹ ಒಂದು

ಪ್ರಕಾಶಮಾನ ಶುಕ್ರಗ್ರಹ

ಸುದ್ಧಿಯಲ್ಲಿ ಏಕಿದೆ ?ಆಕಾಶದಲ್ಲಿ ಜ.9ರಿಂದ ಹೊಳೆಯುವಂತೆ ಕಾಣಿಸುತ್ತಿರುವ ಶುಕ್ರಗ್ರಹ ಸೆ.21ರಂದು ಹೆಚ್ಚಿನ ಪ್ರಕಾಶದಿಂದ ಬೆಳಗಲಿದೆ. ಬಳಿಕ ಕೆಲವೇ ದಿನಗಳಲ್ಲಿ ಆಕಾಶದಿಂದ ಕಣ್ಮರೆಯಾಗಲಿದೆ. ನವೆಂಬರ್ ಮಧ್ಯದಿಂದ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಕಾಣಿಸಲಿದೆ.

 • ಸೂರ್ಯನಿಂದ ಶುಕ್ರಗ್ರಹ ಸುಮಾರು 11 ಕೋಟಿ ಕಿ.ಮೀ. ದೂರದಲ್ಲಿ ಸುತ್ತುತ್ತಿದೆ. ಅಂತೆಯೇ ಭೂಮಿ ಸೂರ್ಯನಿಂದ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿ ಸುತ್ತುತ್ತಿದೆ. ಆದರೆ, ಭೂಮಿ ಮತ್ತು ಶುಕ್ರಗ್ರಹಗಳ ದೂರ ಯಾವಾಗಲೂ ಒಂದೇ ಸಮನಾಗಿರುವುದಿಲ್ಲ.
 • 18 ತಿಂಗಳಿಗೊಮ್ಮೆ ಇವುಗಳ ದೂರದ ಅಂತರ ಸುಮಾರು 5 ಕೋಟಿ ಕಿ.ಮೀ. ಬಂದು ಅತಿ ಸಮೀಪದಲ್ಲಿರುತ್ತದೆ. ಆಗ ಶುಕ್ರ ದೊಡ್ಡದಾಗಿ ಕಾಣಿಸುತ್ತದೆ. ಹಾಗೆಯೇ 18 ತಿಂಗಳಿಗೊಮ್ಮೆ ಶುಕ್ರ ಭೂಮಿಯಿಂದ ಅತಿ ದೂರದಲ್ಲಿ ಅಂದರೆ ಸುಮಾರು 26 ಕೋಟಿ ಕಿ.ಮೀ. ದೂರದಲ್ಲಿರುತ್ತದೆ. ಆಗ ಚಿಕ್ಕದಾಗಿ ಕಾಣಿಸಲಿದೆ.
 • ಶುಕ್ರಗ್ರಹ ಹೊಳೆಯುವುದು ಅದರ ಸ್ವಯಂಪ್ರಭೆಯಿಂದಲ್ಲ. ಸೂರ್ಯನಿಂದ ಬಿದ್ದ ಬೆಳಕು ಪ್ರತಿಫಲಿಸಿ ಹೊಳೆದಂತೆ ಕಾಣುವುದು. ಇನ್ನು ಭೂಮಿಗೆ ಸಮೀಪ ಬರುವಾಗ ಹೊಳೆವ ಸಂಪೂರ್ಣ ಭಾಗ ಭೂಮಿಗೆ ಕಾಣಿಸುವುದಿಲ್ಲವಾದ್ದರಿಂದ ಆಂಶಿಕವಾಗಿ ಶುಕ್ಲಪಕ್ಷದ ಚಂದ್ರನಂತೆ ದೂರದರ್ಶಕದಲ್ಲಿ ಕಾಣಿಸುತ್ತದೆ.

ಶುಕ್ರ  ಗ್ರಹದ ಬಗ್ಗೆ

 • ಶುಕ್ರವು ಸೂರ್ಯನಿಂದ ಎರಡನೇ ಗ್ರಹವಾಗಿದ್ದು , ಪ್ರತಿ 7 ಭೂಮಿಯ ದಿನಗಳಲ್ಲಿ ಪರಿಭ್ರಮಿಸುತ್ತದೆ. ಇದು ಸೌರವ್ಯೂಹದಲ್ಲಿನ ಯಾವುದೇ ಗ್ರಹದ ದೀರ್ಘಾವಧಿಯ ತಿರುಗುವಿಕೆಯ ಅವಧಿಯನ್ನು (243 ದಿನಗಳು) ಹೊಂದಿದೆ ಮತ್ತು ಇತರ ಗ್ರಹಗಳಿಗೆ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ (ಸೂರ್ಯವು ಪಶ್ಚಿಮದಲ್ಲಿ ಏರುತ್ತದೆ ಮತ್ತು ಪೂರ್ವದಲ್ಲಿದೆ ಎಂದು ಅರ್ಥ).
 • ಇದು ಯಾವುದೇ ನೈಸರ್ಗಿಕ ಉಪಗ್ರಹಗಳನ್ನು ಹೊಂದಿಲ್ಲ . ಇದನ್ನು ಪ್ರೀತಿಯ ಮತ್ತು ಸೌಂದರ್ಯದ ರೋಮನ್ ದೇವತೆಗಳ ನಂತರ ಹೆಸರಿಸಲಾಗಿದೆ.
 • ಇದು ಚಂದ್ರನ ನಂತರ ರಾತ್ರಿಯ ಆಕಾಶದಲ್ಲಿ ಎರಡನೇ ಪ್ರಕಾಶಮಾನವಾದ ನೈಸರ್ಗಿಕ ವಸ್ತುವಾಗಿದ್ದು, -4.6 ಸ್ಪಷ್ಟ ಗಾತ್ರವನ್ನು ತಲುಪುತ್ತದೆ – ರಾತ್ರಿಯಲ್ಲಿ ನೆರಳುಗಳನ್ನು ಎಸೆಯಲು ಸಾಕಷ್ಟು ಪ್ರಕಾಶಮಾನವಾದ ಮತ್ತು ವಿಶಾಲ ಹಗಲು ಬೆಳಕಿನಲ್ಲಿ ಬರಿಗಣ್ಣಿಗೆ ಗೋಚರವಾಗುವಂತೆ ಕಾಣುತ್ತದೆ.
 • ಭೂಮಿಯ ಕಕ್ಷೆಯಲ್ಲಿ ಪರಿಭ್ರಮಿಸುವ, ಶುಕ್ರವು ಕೆಳಮಟ್ಟದ ಗ್ರಹವಾಗಿದ್ದು , ಸೂರ್ಯನಿಂದ ದೂರದಲ್ಲಿ ಕಾಣಿಸಿಕೊಳ್ಳುವುದಿಲ್ಲ; ಸೂರ್ಯನಿಂದ (ಗರಿಷ್ಠ) ಕೋನೀಯ ದೂರವು 8 ° ಆಗಿದೆ.
 • ಶುಕ್ರವು ಒಂದು ಭೂಗ್ರಹದ ಗ್ರಹವಾಗಿದ್ದು , ಕೆಲವೊಮ್ಮೆ ಭೂಮಿಯ ಗಾತ್ರದ “ಸಹೋದರಿ ಗ್ರಹ” ವೆಂದು ಕರೆಯಲ್ಪಡುತ್ತದೆ, ಏಕೆಂದರೆ ಅವುಗಳ ರೀತಿಯ ಗಾತ್ರ, ದ್ರವ್ಯರಾಶಿ, ಸೂರ್ಯನ ಹತ್ತಿರ ಮತ್ತು ಬೃಹತ್ ಸಂಯೋಜನೆಯಿಂದಾಗಿ.

ಭದ್ರತೆಗೆ ಹೊಸ ಮೂರು ವಿಭಾಗ

ಸುದ್ಧಿಯಲ್ಲಿ ಏಕಿದೆ ?ದೇಶದ ಭದ್ರತೆ ಕಾಪಾಡುವ ದೃಷ್ಟಿಯಿಂದ ಮೂರು ಹೊಸ ವಿಭಾಗಗಳನ್ನು ಸೃಷ್ಟಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

 • ಭೂ ಸೇನೆ, ವಾಯುಪಡೆ, ನೌಕಾಪಡೆ ಸಿಬ್ಬಂದಿ ಇದರಲ್ಲಿ ಇರಲಿದ್ದಾರೆ. ವಿಶೇಷ ಕಾರ್ಯಾಚರಣೆಗಾಗಿ ಈ ತಂಡಗಳನ್ನು ಸಜ್ಜುಗೊಳಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
 • ದಿ ಆರ್ಮ್ಡ್ ಫೋರ್ಸ್ ಸ್ಪೆಷಲ್ ಆಪರೇಷನ್ ಡಿವಿಷನ್, ದಿ ಡಿಫೆನ್ಸ್ ಸೈಬರ್ ಏಜೆನ್ಸಿ ಹಾಗೂ ದಿ ಡಿಫೆನ್ಸ್ ಸ್ಪೇಸ್ ಏಜೆನ್ಸಿ ಎಂಬ ಮೂರು ಹೊಸ ವಿಭಾಗ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.
 • ರಕ್ಷಣೆ, ಹಣಕಾಸು, ವಿದೇಶಾಂಗ ಹಾಗೂ ಗೃಹ ಸಚಿವರು ಈ ಸಮಿತಿ ಸದಸ್ಯರಾಗಿದ್ದಾರೆ. 2010ರಲ್ಲಿ ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮೊದಲ ಬಾರಿಗೆ ಈ ಪ್ರಸ್ತಾವನೆ ಮಂಡಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ.
 • ಆಧುನಿಕ ಹೆಜ್ಜೆ: ಸೇನೆಯ ಆಧುನೀಕರಣಕ್ಕೆ ಮುಂದಾಗಿರುವ ಸರ್ಕಾರ ಈಗ ಮಹತ್ವದ ಹೆಜ್ಜೆ ಇಟ್ಟಿದೆ. ಸೇನೆಗೆ ಹೊಸ ಸವಾಲಾಗಿರುವ ಸೈಬರ್ ಮತ್ತು ಸ್ಪೇಸ್ ಸಂಬಂಧಿತ ದಾಳಿಯನ್ನು ಎದುರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಸೈಬರ್, ಸ್ಪೇಸ್ ದಾಳಿಗಳು ಸೇನೆಗೆ ಸೀಮಿತವಾಗಿ ರದೇ ಜನಸಾಮಾನ್ಯರ ಮೇಲೂ ಪ್ರಭಾವ ಬೀರುತ್ತಿವೆ.
 • ರೈಲ್ವೆ, ಏರ್​ಲೈನ್ಸ್​ಗಳ ಜಾಲದ ಮೇಲೆ ಈಗಾಗಲೇ ಹಲವು ಬಾರಿ ಸೈಬರ್ ದಾಳಿ ನಡೆದಿವೆ. ಇದು ಸಾರ್ವಜನಿಕರ ಜೀವನದ ಮೇಲೂ ಪರಿಣಾಮ ಬೀರಲಿವೆ. ಟೆಲಿಕಾಂ ಸಂವಹನ, ಇಂಧನ ಹಾಗೂ ವಿದ್ಯುತ್ ಕ್ಷೇತ್ರ, ಪರಮಾಣು ವಿದ್ಯುತ್ ಸ್ಥಾವರಗಳ ಮೇಲೆ ಸೈಬರ್ ಅಥವಾ ವೈಮಾನಿಕ ದಾಳಿಗಳು ನಡೆದರೆ ಕೋಟ್ಯಂತರ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಗಡಿಯಲ್ಲಿ ಶತ್ರು ರಾಷ್ಟ್ರಗಳ ದಾಳಿಗಿಂತ ಸೈಬರ್ ಹಾಗೂ ಸ್ಪೇಸ್ ದಾಳಿ ಮತ್ತಷ್ಟು ಭೀಕರವಾಗಿರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರಿಕ್ಕರ್ ಪರಿಕಲ್ಪನೆ

 • ಗೋವಾ ಸಿಎಂ ಮನೋಹರ ಪರಿಕ್ಕರ್ ಭದ್ರತಾ ಸಚಿವರಾಗಿದ್ದಾಗ ಕೆಲವು ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದರು. ಸೇನೆಯಲ್ಲಿ ಉದ್ಯೋಗ ಕಡಿತಮಾಡಲು ಚಿಂತನೆ ನಡೆಸಿದ್ದರು. ಮುಂದೆ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ವಿವಿಧ ಕ್ಷೇತ್ರಗಳ ತಜ್ಞರನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಿಕೊಳ್ಳಲು ನಿರ್ಧರಿಸಿದ್ದರು.

ವಿಶ್ವಶಾಂತಿ ದಿನ

ಸುದ್ಧಿಯಲ್ಲಿ ಏಕಿದೆ ?ಶಾಂತಿ ನಮ್ಮ ಹಕ್ಕುಎಂಬ ಥೀಮ್‌ನಡಿ ಈ ವರ್ಷದ ಅಂತಾರಾಷ್ಟ್ರೀಯ ಶಾಂತಿ ದಿನ ಅಥವಾ ವಿಶ್ವ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ.

 • ವಿಶ್ವಸಂಸ್ಥೆಯ ಮಾನವ ಹಕ್ಕು ಸ್ಥಾಪನೆಯಾಗಿ 70 ವರ್ಷದ ಸಂದ ಸಂದರ್ಭ ಇದಾಗಿದ್ದು, ಸಾರ್ವತ್ರಿಕ ಮಾನವ ಹಕ್ಕು ಘೋಷಣೆ (The Universal Declaration of Human Rights) ಕಾರ್ಯಕ್ರಮ ಆಯೋಜಿಸಿದೆ.
 • 1981ರಲ್ಲಿ ಅಮೆರಿಕದಲ್ಲಿ ವಿಶ್ವ ಶಾಂತಿ ದಿನ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಲಾಯಿತು. 1982ರಿಂದ ಪ್ರತಿ ವರ್ಷ ಸೆಪ್ಟಂಬರ್‌ 21ನ್ನು ವಿಶ್ವ ಶಾಂತಿ ದಿನವೆಂದು ಆಚರಿಸಲಾಗುತ್ತಿದೆ.
 • ಯುದ್ಧ ಮತ್ತು ಹಿಂಸೆಯನ್ನು ತೊಡೆದು ಶಾಂತಿ-ಸಹಬಾಳ್ವೆಯಿಂದ ಬದುಕಬೇಕು ಎಂಬ ಸಂದೇಶವನ್ನು ಹೊತ್ತು ಪ್ರತಿವರ್ಷ ನವ ಪೀಳಿಗೆಗೆ ಶಾಂತಿಯ ಪ್ರಾಮುಖ್ಯತೆಯನ್ನು ಸಾರುತ್ತ ಮುನ್ನಡೆಯಲು ಈ ದಿನ ಸಹಕಾರಿಯಾಗಿದೆ.
 • ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿರುವ ಶಾಂತಿ ಗಂಟೆಯನ್ನು ಬಾರಿಸುವ ಮೂಲಕ ವಿಶ್ವ ಶಾಂತಿ ದಿನ ಆಚರಿಸಲಾಗುತ್ತದೆ.

ಯುನಿವರ್ಸಲ್ ಡಿಕ್ಲರೇಶನ್ ಆಫ್ ಹ್ಯೂಮನ್ ರೈಟ್ಸ್

 • ಮಾನವ ಹಕ್ಕುಗಳ ಯುನಿವರ್ಸಲ್ ಡಿಕ್ಲರೇಷನ್ ( ಯುಡಿಎಚ್ಆರ್ ) ಒಂದು ಐತಿಹಾಸಿಕ ದಾಖಲೆಯಾಗಿದ್ದು, ಇದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಡಿಸೆಂಬರ್ 10, 1948 ರಂದು ಪ್ಯಾರಿಸ್ನಲ್ಲಿನ ಪ್ಯಾಲೈಸ್ ಡೆ ಚೆಯಿಲ್ಲೊಟ್ನಲ್ಲಿ ರೆಸಲ್ಯೂಷನ್ 217 ಆಗಿ ಮೂರನೇ ಅಧಿವೇಶನದಲ್ಲಿ ಅಳವಡಿಸಿಕೊಂಡಿತು. ಯುನೈಟೆಡ್ ನೇಷನ್ಸ್ ನ 58 ಸದಸ್ಯರ ಪೈಕಿ, 48 ಮತದಾರರು ಪರವಾಗಿ ಮತ ಚಲಾಯಿಸಿದರು, ಎಂಟು ಮಂದಿ ವಿರುದ್ಧ ಮತ ಚಲಾಯಿಸಿದರು , ಮತ್ತು ಇಬ್ಬರು ಮತ ಚಲಾಯಿಸಲಿಲ್ಲ.
 • ಈ ಘೋಷಣೆಯು ವ್ಯಕ್ತಿಯ ಹಕ್ಕುಗಳನ್ನು ದೃಢೀಕರಿಸುವ 30 ಲೇಖನಗಳನ್ನು ಒಳಗೊಂಡಿದೆ, ಇದು ಕಾನೂನುಬದ್ಧವಾಗಿ ತಮ್ಮನ್ನು ಬಂಧಿಸದೆ ಇದ್ದರೂ, ನಂತರದ ಅಂತರರಾಷ್ಟ್ರೀಯ ಒಪ್ಪಂದಗಳು, ಆರ್ಥಿಕ ವರ್ಗಾವಣೆಗಳು, ಪ್ರಾದೇಶಿಕ ಮಾನವ ಹಕ್ಕುಗಳ ಉಪಕರಣಗಳು, ರಾಷ್ಟ್ರೀಯ ಸಂವಿಧಾನಗಳು ಮತ್ತು ಇತರ ಕಾನೂನುಗಳಲ್ಲಿ ವಿವರಿಸಲಾಗಿದೆ. ಈ ಘೋಷಣೆಯು ಇಂಟರ್ನ್ಯಾಷನಲ್ ಬಿಲ್ ಆಫ್ ಹ್ಯೂಮನ್ ರೈಟ್ಸ್ನ್ನು ರಚಿಸುವ ಪ್ರಕ್ರಿಯೆಯಲ್ಲಿ ಮೊದಲ ಹೆಜ್ಜೆಯಾಗಿತ್ತು, ಇದು 1966 ರಲ್ಲಿ ಪೂರ್ಣಗೊಂಡಿತು ಮತ್ತು ಸಾಕಷ್ಟು ಸಂಖ್ಯೆಯ ದೇಶಗಳು ಅವುಗಳನ್ನು ಅನುಮೋದಿಸಿದ ನಂತರ, 1976 ರಲ್ಲಿ ಜಾರಿಗೆ ಬಂದಿತು.

Related Posts
The Indian Railways will join hands with the Indian Space Research Organisation (ISRO) to get online satellite imagery for improving safety and enhancing efficiency. a massive exercise of GIS [Geographical Information ...
READ MORE
National Current Affairs – UPSC/KAS Exams- 7th December 2018
Manifesto of tribal rights Topic: Issues related to vulnerable sections of the society IN NEWS: A manifesto for rights of the tribal population, residing mainly in southern Rajasthan, has demanded that they be ...
READ MORE
Everything you need to know about Chief Ministers of India
Chief Minister In the Republic of India, a chief minister is the head of government of each of twenty-nine states and two union territories (Delhi and Puducherry). Chief Minister’s position in state is ...
READ MORE
National Current Affairs – UPSC/KAS Exams – 27th September 2018
Aadhaar gets thumbs up from Supreme Court Why in news? The Supreme Court, in a majority opinion, upheld Aadhaar as a reasonable restriction on individual privacy that fulfils the government’s legitimate aim ...
READ MORE
“12th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಪರೇಷನ್ ಶಕ್ತಿ ಸುದ್ದಿಯಲ್ಲಿ ಏಕಿದೆ ? ದೇಶದ ಎರಡೆನೇ ಅಣು ಪರೀಕ್ಷೆ ಪೋಖ್ರಾಣ್–2 ಅಥವಾ ಆಪರೇಷನ್ ಶಕ್ತಿ ನಡೆದು ಶುಕ್ರವಾರಕ್ಕೆ (ಮೇ 11) 20 ವರ್ಷ ತುಂಬಿದೆ. ಮೇ 11,13 ರಂದು ನಡೆದ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿದ್ದವು. ಭಾರತದ ಮಿಸೈಲ್‌ಮ್ಯಾನ್ ಎಂದೇ ಖ್ಯಾತರಾಗಿದ್ದ ಮಾಜಿ ...
READ MORE
Karnataka: Centre plans med tech zone in B’luru
The Central government has planned a med tech zone in Bengaluru on the lines of Andhra Pradesh MedTech Zone Limited, Visakhapatnam At the inauguration of India Pharma and India Medical Device ...
READ MORE
National Current Affairs – UPSC/KAS Exams- 1st February 2019
ESIC AYUSH Hospital Topic: Government Policies IN NEWS: Minister of State (I/C) for Labour & Employment inaugurated OPD Wing of ESIC AYUSH Hospital, Narela, Delhi. More on the Topic: All the facilities under Ayush, such ...
READ MORE
A total of 87 infrastructure projects with a combined value of Rs.87,518.77 crore are underway in Karnataka and transportation projects are leading the way with around 52 projects worth Rs.36,237 ...
READ MORE
National Family Health Survey: Karnataka Related Data
Drop in married women using modern family planning methods Karnataka has recorded a decline in use of modern family planning methods by married women, with just over 50 per cent of ...
READ MORE
“18th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬಡವರ ಬಂಧು ಯೋಜನೆ ಸುದ್ಧಿಯಲ್ಲಿ ಏಕಿದೆ ?ಮೀಟರ್ ಬಡ್ಡಿ ದಂಧೆಕೋರರಿಂದ ಬೀದಿ ಬದಿ ವ್ಯಾಪಾರಿ ಗಳನ್ನು ರಕ್ಷಿಸಲು ಸರ್ಕಾರ ರೂಪಿಸುತ್ತಿರುವ ಬಡವರ ಬಂಧು ಯೋಜನೆಯನ್ನು ಏಕಕಾಲಕ್ಕೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಬೆಂಗಳೂರು, ಮೈಸೂರು, ಬೀದರ್, ಹಾಸನ, ಹುಬ್ಬಳ್ಳಿಯಲ್ಲಿ ಮಾತ್ರ ಪ್ರಾಯೋಗಿಕವಾಗಿ ...
READ MORE
ISRO to help put railway safety back on
National Current Affairs – UPSC/KAS Exams- 7th December
Everything you need to know about Chief Ministers
National Current Affairs – UPSC/KAS Exams – 27th
“12th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka: Centre plans med tech zone in B’luru
National Current Affairs – UPSC/KAS Exams- 1st February
Infrastructure projects underway in Karnataka
National Family Health Survey: Karnataka Related Data
“18th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *