“25th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಪರಿಸರ ಸೂಕ್ಷ್ಮ ವಲಯ

ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಸೇರಿದಂತೆ 6 ರಾಜ್ಯಗಳ ಆಕ್ಷೇಪದ ಮಧ್ಯೆಯೇ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿಲು ಸದ್ಯದಲ್ಲೇ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ಹಿನ್ನಲೆ

 • ಪಶ್ಚಿಮಘಟ್ಟ ಪ್ರದೇಶಗಳ 56825 ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು 2014ರಲ್ಲಿ ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆಗೆ ರಾಜ್ಯ ಸರಕಾರಗಳು ವಿರೋಧ ವ್ಯಕ್ತಪಡಿಸಿದ್ದವು.
 • ಆದರೆ ಕೇರಳ ಹಾಗೂ ಮಡಿಕೇರಿಯಲ್ಲಿ ಭಾರಿ ಮಳೆಯಿಂದ ಆದ ಅನಾಹುತ ಹಿನ್ನೆಲೆಯಲ್ಲಿ ಮಾಧವ್‌ ಗಾಡ್ಗೀಳ್‌ ಹಾಗೂ ಪ್ರೊ.ಕಸ್ತೂರಿ ರಂಗನ್‌ ವರದಿ ಆಧರಿಸಿ ಪಶ್ಚಿಮಘಟ್ಟಗಳಲ್ಲಿ ಅರಣ್ಯ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವ ಬಗ್ಗೆ ಚರ್ಚೆಗಳು ಆರಂಭವಾಗಿದೆ.
 • ಇದಕ್ಕೆ ಪೂರಕವಾಗಿ ಸೆಪ್ಟಂಬರ್‌ 1ರಂದು ನಡೆದ ಹಸಿರು ಪೀಠದ ವಿಚಾರಣೆ ಸಂದರ್ಭದಲ್ಲಿ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿಸಲು ಗುರುತಿಸಿರುವ ಪ್ರದೇಶಗಳ ಪೈಕಿ ಒಂದು ಇಂಚು ಜಾಗವನ್ನೂ ಕಡಿಮೆ ಮಾಡದೇ ಇರಲು ನಿರ್ಧರಿಸಲಾಗಿದೆ.
 • ರಾಜ್ಯಗಳಿಗೆ ಈ ಬಗ್ಗೆ ಆಕ್ಷೇಪ ಸಲ್ಲಿಸಲು 60 ದಿನಗಳ ಕಾಲಾವಕಾಶವಿದೆ. ರಾಜ್ಯ ಸರಕಾರ ಈಗಾಗಲೇ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ.

ಪರಿಸರ-ಸೂಕ್ಷ್ಮ ವಲಯ ಎಂದರೇನು ?

 • ಸಂರಕ್ಷಿತ ಪ್ರದೇಶಗಳು , ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಸುತ್ತಲಿನ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (MoEFCC), ಭಾರತ ಸರ್ಕಾರವು ಪರಿಸರ-ಸೂಕ್ಷ್ಮ ವಲಯಗಳು (ESZs) ಅಥವಾ ಪರಿಸರ ವಿಜ್ಞಾನದ ದುರ್ಬಲ ಪ್ರದೇಶಗಳು (ಇಎಫ್ಎಗಳು).
 • ಇಎಸ್ಝ್ಗಳನ್ನು ಘೋಷಿಸುವ ಉದ್ದೇಶವು ಇಂತಹ ಪ್ರದೇಶಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಮೂಲಕ ರಕ್ಷಿತ ಪ್ರದೇಶಗಳಿಗೆ ಕೆಲವು ರೀತಿಯ “ಆಘಾತ ಅಬ್ಸಾರ್ಬರ್ಗಳನ್ನು” ರಚಿಸುವುದು. ಕಡಿಮೆ ರಕ್ಷಣೆಯ ಪ್ರದೇಶಗಳಲ್ಲಿ ಕಡಿಮೆ ಸಂರಕ್ಷಣೆ ಇರುವ ಪ್ರದೇಶಗಳಿಂದ ಅವರು ಸಂಕ್ರಮಣ ವಲಯವಾಗಿ ವರ್ತಿಸುತ್ತಾರೆ.
 • ಪರಿಸರ ವಿಜ್ಞಾನದ ಸೂಕ್ಷ್ಮ ಪ್ರದೇಶಗಳು ಅಥವಾ ಪರಿಸರೀಯ ಸೂಕ್ಷ್ಮ ವಲಯಗಳು ಪರಿಸರದ ಸಚಿವಾಲಯದಿಂದ ಸೂಚಿಸಲ್ಪಟ್ಟ ಪ್ರದೇಶಗಳನ್ನು ಉಲ್ಲೇಖಿಸುತ್ತವೆ

ಪೋಷಣೆ ಅಭಿಯಾನ-ಪೌಷ್ಟಿಕ ಕರ್ನಾಟಕ’ ಯೋಜನೆ

ಸುದ್ಧಿಯಲ್ಲಿ ಏಕಿದೆ ?ಗರ್ಭಿಣಿಯರಲ್ಲಿನ ರಕ್ತಹೀನತೆ ನಿವಾರಣೆ ಹಾಗೂ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಪೋಷಣ ಅಭಿಯಾನ-ಪೌಷ್ಟಿಕ ಕರ್ನಾಟಕ ಎಂಬ ನೂತನ ಯೋಜನೆಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

 • ಮಹಿಳೆ-ಮಕ್ಕಳ ಇಲಾಖೆ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಪ್ರತ್ಯೇಕವಾಗಿ ಕೈಗೊಂಡಿದ್ದ ಯೋಜನೆಗಳನ್ನು ಒಟ್ಟುಗೂಡಿಸಿ ಒಂದೇ ಕಾರ್ಯಕ್ರಮವಾಗಿ ಜಾರಿ ಗೊಳಿಸಲಾಗುತ್ತಿದೆ.
 • ರಾಜ್ಯದಲ್ಲಿ 66 ಸಾವಿರ ಅಂಗನವಾಡಿಗಳಿದ್ದು, 40 ಲಕ್ಷ ಮಕ್ಕಳನ್ನು ಪೋಷಿಸಲಾಗುತ್ತಿದೆ.

ಪೋಷಣ್ ಅಭಿಯಾನದ ಬಗ್ಗೆ

 • ಪೋಷಣ್ ಅಭಿಯಾನವನ್ನು   ಮಾರ್ಚ್ 2018 ರಲ್ಲಿ ರಾಜಸ್ಥಾನದ ಜುನ್ಜುನುನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು .
 • ಇದು ಗರ್ಭಿಣಿ ಮಹಿಳೆಯರು, ತಾಯಂದಿರು ಮತ್ತು ಮಕ್ಕಳಿಗೆ ಸಮಗ್ರ ಬೆಳವಣಿಗೆ ಮತ್ತು ಸಾಕಷ್ಟು ಪೋಷಣೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.
 • ವಿವಿಧ ಪೌಷ್ಠಿಕಾಂಶ ಸಂಬಂಧಿತ ಯೋಜನೆಗಳ ಒಗ್ಗೂಡಿಸುವಿಕೆಯನ್ನು ಖಾತ್ರಿಪಡಿಸುವ ಮೂಲಕ ಪೋಷಣೆ ಮತ್ತು ಇತರ ಸಂಬಂಧಿತ ಸಮಸ್ಯೆಗಳ ಮಟ್ಟವನ್ನು ಕಡಿಮೆ ಮಾಡಲು ಇದು ಗುರಿಯನ್ನು ಹೊಂದಿದೆ.
 • ಇದು ಕುಂಠಿತಗೊಳಿಸುವಿಕೆ, ಕಡಿಮೆ ಪೌಷ್ಟಿಕತೆ, ರಕ್ತಹೀನತೆ (ಕಿರಿಯ ಮಕ್ಕಳಲ್ಲಿ, ಹೆಂಗಸರು ಮತ್ತು ಹದಿಹರೆಯದ ಬಾಲಕಿಯರಲ್ಲಿ) ಮತ್ತು ಕಡಿಮೆ ಜನನ ಪ್ರಮಾಣವನ್ನು ಗುರಿಯಾಗಿಸುತ್ತದೆ.
 • ಇದು ಅಂತಹ ಎಲ್ಲಾ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಪರಿಶೀಲಿಸುತ್ತದೆ ಮತ್ತು ಲಭ್ಯವಾಗುವಲ್ಲೆಲ್ಲ ಲೈನ್ ಸಚಿವಾಲಯಗಳ ಅಸ್ತಿತ್ವದಲ್ಲಿರುವ ರಚನಾತ್ಮಕ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತದೆ.
 • 2022 ರ ಹೊತ್ತಿಗೆ ವಿಶ್ವ ಬ್ಯಾಂಕ್ ನೆರವಿನ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ಸಿಸ್ಟಮ್ಸ್ ಬಲಪಡಿಸುವ ಮತ್ತು ನ್ಯೂಟ್ರಿಷನ್ ಇಂಪ್ರೂವ್ಮೆಂಟ್ ಪ್ರಾಜೆಕ್ಟ್ (ಐಎಸ್ಎಸ್ಎನ್ಐಪಿ) ದೇಶದಲ್ಲಿನ ಎಲ್ಲಾ ಜಿಲ್ಲೆಗಳಿಗೆ ಬೆಂಬಲ ನೀಡುವ ಮಧ್ಯಸ್ಥಿಕೆಗಳ ಕ್ರಮೇಣ ಸ್ಕೇಲಿಂಗ್ ಅನ್ನು ಅದರ ದೊಡ್ಡ ಘಟಕ ಒಳಗೊಂಡಿದೆ.

ಪ್ರವಾಸೋದ್ಯಮ ರಾಯಭಾರಿ

ಸುದ್ಧಿಯಲ್ಲಿ ಏಕಿದೆ ?ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗೆ ಪ್ರವಾಸೋದ್ಯಮ ರಾಯಭಾರಿಯನ್ನಾಗಿ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ರಾಜ್ಯದ ಪ್ರವಾಸೋದ್ಯಮ ಮತ್ತು ರೇಷ್ಮೆ ಇಲಾಖೆ ನೇಮಕ ಮಾಡಿದೆ.

 • ಮೈಸೂರು ಭಾಗವನ್ನು ದಕ್ಷಿಣ ಭಾರತದ ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವ ಮತ್ತು ಅದಕ್ಕೆ ಸಂಬಂಧಿಸಿ ಪೂರಕ ಕೆಲಸಗಳನ್ನು ಕೈಗೊಳ್ಳಲು ಇದರಿಂದ ಅನುಕೂಲವಾಗಲಿದ್ದು, ರಾಜ್ಯ ಸರಕಾರ ಯದುವೀರ್ ಅವರಿಗೆ ಸಹಕಾರ ನೀಡಲಿದೆ.
 • ಯದುವೀರ್ ಅವರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮೈಸೂರು ಭಾಗದಲ್ಲಿನ ಪಾರಂಪರಿಕ, ಐತಿಹಾಸಿಕ ತಾಣಗಳು ಮತ್ತು ಪ್ರವಾಸಿ ಆಕರ್ಷಣೆಗಳ ಬಗ್ಗೆ ಹೆಚ್ಚು ಪ್ರಚುರಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.

ಸುವರ್ಣ ನಾರಿ ಕುರಿ

ಸುದ್ಧಿಯಲ್ಲಿ ಏಕಿದೆ ?ಸುವರ್ಣ ನಾರಿ’ ಎಂಬ ಹೊಸ ಕುರಿ ತಳಿಯನ್ನು ಶೀಘ್ರವೇ ರೈತರಿಗೆ ನೀಡಲಾಗುವುದು ಎಂದು ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಹೊಸ ಕುರಿ ತಳಿಯ ಪ್ರಾಮುಖ್ಯತೆ

 • ಹೊಸ ತಳಿ ಹೆಚ್ಚು ಹಾಲು ಕೊಡುತ್ತದೆ. ಹೆಚ್ಚು ಮರಿ ಹಾಕುತ್ತದೆ. ಅಲ್ಲದೆ, ಹೆಚ್ಚು ಮಾಂಸವೂ ಸೀಗಲಿದೆ. ರೈತರನ್ನು ಆರ್ಥಿಕವಾಗಿ ಸದೃಢರಾಗಿಸಲು ಈ ತಳಿ ಪರಿಚಯಿಸಲಾಗುತ್ತಿದೆ.
 • ದೇಸಿ ಕುರಿ ವರ್ಷಕ್ಕೆ ಒಂದು ಮರಿ ಮಾತ್ರ ಹಾಕುತ್ತದೆ. ಆದರೆ, ಸುವರ್ಣ ನಾರಿ ತಳಿಯ ಕುರಿ ವರ್ಷಕ್ಕೆರಡು ಬಾರಿ ಮರಿ ಹಾಕಲಿದೆ. ಒಂದು ಬಾರಿಗೆ ಎರಡು ಅಥವಾ ಮೂರು ಮರಿ ಹಾಕುತ್ತದೆ.
 • ಹೊಸ ತಳಿಗಾಗಿ ಸರ್ಕಾರ ಈಗಾಗಲೇ 1 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಇದನ್ನು ಸುಮಾರು 5 ಸಾವಿರ ಕುರಿಗಾಹಿಗಳಿಗೆ ಕೊಡಲಾಗುವುದು.
 • ಸೊಸೈಟಿಗಳ ಮೂಲಕ ಮಾಂಸ ಮಾರಾಟ ಮಾಡುವ ಯೋಜನೆ ಜಾರಿಗೆ ತರಲಾಗುತ್ತಿದೆ

100ನೇ ಏರ್​ಪೋರ್ಟ್​

ಸುದ್ಧಿಯಲ್ಲಿ ಏಕಿದೆ ?ಪ್ರಧಾನಿ ನರೇಂದ್ರ ಮೋದಿ ಸಿಕ್ಕಿಂ ರಾಜಧಾನಿ ಗಾಂಗ್ಟಕ್ ಬಳಿಯ ಪಾಕ್ಯೊಂಗ್ ಗ್ರಾಮದಲ್ಲಿ ‘ಗ್ರೀನ್​ಫೀಲ್ಡ್ ವಿಮಾನನಿಲ್ದಾಣ’ವನ್ನು ಉದ್ಘಾಟಿಸಿದರು. ಈ ಮೂಲಕ ದೇಶದ 100ನೇ ಏರ್​ಪೋರ್ಟ್ ಕಾರ್ಯನಿರ್ವಹಿಸಲು ಸಿದ್ಧಗೊಂಡಿದೆ.

ಪ್ರಾಮುಖ್ಯತೆ

 • ಸಿಕ್ಕಿಂಗೆ ಇದು ಮೊದಲನೇ ಏರ್​ಪೋರ್ಟ್ ಆಗಿದೆ.
 • ಇಂಡೋ- ಚೀನಾ ಗಡಿಯಿಂದ ಕೇವಲ 60 ಕಿ.ಮೀ ದೂರದಲ್ಲಿ ಗ್ರೀನ್​ಫೀಲ್ಡ್ ಏರ್​ಪೋರ್ಟ್ ಇದೆ. ಹಾಗಾಗಿ ಭಾರತೀಯ ವಾಯುಪಡೆಯ ಯುದ್ಧವಿಮಾನಗಳನ್ನು ಲ್ಯಾಂಡ್ ಮಾಡಲು ಕೂಡ ಏರ್ ಪೋರ್ಟ್ ಪ್ರಮುಖ ಕೇಂದ್ರವಾಗಲಿದೆ.
 • ಈ ಏರ್​ಪೋರ್ಟ್​ನಿಂದಾಗಿ ಆ ಪ್ರದೇಶ ತ್ವರಿತ ಬೆಳವಣಿಗೆ ಹೊಂದಲಿದೆ

ಕಠಿಣ ಸವಾಲೊಡ್ಡಿದ ಸಿಕ್ಕಿಂ ಏರ್​ಪೋರ್ಟ್

 • ಗಾಂಗ್ಟಕ್ ವಿಮಾನ ನಿಲ್ದಾಣ ನಿರ್ಮಾಣ ನಮಗೆ ಸವಾಲಿನ ಕೆಲಸವಾಗಿತ್ತು. ಅಲ್ಲಿನ ಭೌಗೋಳಿಕ ಸನ್ನಿವೇಶಗಳಿಂದ ನಿರ್ಮಾಣ ಕಾರ್ಯ ಹೆಚ್ಚಿನ ಅವಧಿ ತೆಗೆದುಕೊಂಡಿತ್ತು.
 • ಗುಡ್ಡಗಾಡಿನ ಪ್ರದೇಶದಲ್ಲಿ ವಿಮಾನ ನಿಲ್ದಾಣ ಮಾಡುವುದು ಸವಾಲಿನ ಕೆಲಸವಾಗಿತ್ತು.ಅಲ್ಲಿನ ವಾತಾವರಣ ಪದೇಪದೆ ಬದಲಾಗುತ್ತಿತ್ತು. ಇದರಿಂದ ನಿರ್ಮಾಣ ಕಾಮಗಾರಿಗೆ ಹೆಚ್ಚು ತೊಂದರೆ ಉಂಟಾಗುತ್ತಿತ್ತು. ಹೀಗಾಗಿಯೇ 2009ರಲ್ಲಿ ಶಂಕುಸ್ಥಾಪನೆ ಆದರೂ ಉದ್ಘಾಟನೆಗೆ ಇಷ್ಟು ವರ್ಷ ಬೇಕಾಯಿತು.
 • ಇನ್ನು, ವಿಮಾನ ಹಾರಾಟಕ್ಕೆ ಪರವಾನಗಿ ಪಡೆಯುವುದು ಕೂಡ ಸುಲಭವಾಗಿರಲಿಲ್ಲ. ಮಾರ್ಚ್ 5ರಂದು ಮೊದಲು ಡಾರ್ನಿಯರ್ ಫ್ಲೈಟ್ ಪ್ರಾಯೋಗಿಕ ಹಾರಾಟ ನಡೆಸಿತ್ತು. ಮಾರ್ಚ್ 10ರಂದು ಏರ್​ಫೋರ್ಸ್ ಹಾಗೂ ಕ್ಯೂ-400(ಬೊಂಬಾರ್ಡಿಯರ್) ಮತ್ತೊಮ್ಮೆ ಪ್ರಾಯೋಗಿಕ ಹಾರಾಟ ನಡೆಸಿ ಯಶಸ್ವಿಯಾಯಿತು. ಅಕ್ಟೋಬರ್​ನಿಂದ ವಿಮಾನ ಹಾರಾಟ ಆರಂಭವಾಗಲಿದೆ.
 • ಸ್ಪೈಸ್ ಜೆಟ್ ಕಂಪನಿ ಮುಂದೆ ಬಂದಿದೆ. ಗಾಂಗ್ಟಕ್​ನಿಂದ ಕೋಲ್ಕತ ನಡುವೆ ವಿಮಾನ ಯಾನ ಶುರುವಾಗಲಿದೆ. ಆನಂತರದಲ್ಲಿ ಗುವಾಹಟಿಗೆ ವಿಸ್ತರಿಸಲ್ಪಡಲಿದೆ

ಇಂಟರ್​ನೆಟ್ ವೇಗ

ಸುದ್ಧಿಯಲ್ಲಿ ಏಕಿದೆ ?ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಏಕಪ್ರಕಾರ ಇಂಟರ್​ನೆಟ್ ವೇಗ ದೊರೆಯುವಂತೆ ಮಾಡಲು ನಾಲ್ಕು ಉಪಗ್ರಹಗಳ (ಹೈ- ಥ್ರೂಪುಟ್) ಮೇಲೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಭಾರಿ ನಿರೀಕ್ಷೆ ಇರಿಸಿದೆ.

 • ಈಗಾಗಲೇ ಒಂದು ಉಪಗ್ರಹ ಉಡಾವಣೆ ಯಶಸ್ವಿಯಾಗಿದ್ದ ಡಿಸೆಂಬರ್​ನಲ್ಲಿ ಬಾಕಿ ಮೂರು ಉಪಗ್ರಹಗಳನ್ನು ನಿಗದಿತ ಕಕ್ಷೆ ಸೇರಲಿದೆ.
 • ಈ ಉಪಗ್ರಹಗಳ ಸಹಾಯದಿಂದ 2019ರ ಅಂತ್ಯದೊಳಗೆ ಭಾರತದಲ್ಲಿ ಇಂಟರ್​ನೆಟ್ ಬಳಕೆದಾರರಿಗೆ ಪ್ರತಿ ಸೆಕೆಂಡ್​ಗೆ 100 ಗಿಗಾಬಿಟ್ಸ್ ವೇಗವನ್ನು ನೀಡಬಹುದಾಗಿದೆ
 • ಕಳೆದ ಜೂನ್​ನಲ್ಲಿ ಜಿಸ್ಯಾಟ್-19 ಉಡಾವಣೆ ಯಶಸ್ವಿಯಾಗಿದೆ. ನವೆಂಬರ್​ನಲ್ಲಿ ಜಿಸ್ಯಾಟ್ -29, ಡಿಸೆಂಬರ್​ನಲ್ಲಿ ಜಿಸ್ಯಾಟ್-11, ಜಿಸ್ಯಾಟ್ -20 ಉಡಾವಣೆಗೆ ಇಸ್ರೋ ಸಿದ್ಧತೆ ನಡೆಸಿದೆ.
 • ಇದುವರೆಗೂ ಇಸ್ರೋದಿಂದ ನಿರ್ವಣವಾಗಿರುವ ಉಪಗ್ರಹಗಳ ಪೈಕಿ ಅತೀ ತೂಕದ ಉಪಗ್ರಹ ಎಂಬ ಹೆಗ್ಗಳಿಕೆಯ ಜಿಸ್ಯಾಟ್-11, 14 ಗಿಗಾಬೈಟ್ಸ್ ಡಾಟಾ ರೇಟ್ ಒದಗಿಸಲಿದೆ. 7 ಟನ್ ತೂಕದ ಉಪಗ್ರಹವಿದು.

ನಿರಾಳ ಬದುಕು ಸೂಚ್ಯಂಕ

ಸುದ್ಧಿಯಲ್ಲಿ ಏಕಿದೆ ?ಯಾವುದೇ ಅಡ್ಡಿ ಆತಂಕಗಳಿಲ್ಲದೇ ನಗರ ನಿವಾಸಿಗಳ ಜೀವನಶೈಲಿಯನ್ನು ಸರಳಗೊಳಿಸುವ ನಿರಾಳ ಬದುಕಿನ ಸೂಚ್ಯಂಕದಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದೆ.

 • ಅಟಲ್‌ ಮಿಷನ್‌ ಫಾರ್‌ ರೆಜ್ಯುವಿನೇಷನ್‌ ಅಂಡ್‌ ಅರ್ಬನ್‌ ಟ್ರಾನ್ಸ್‌ಫಾರ್ಮೆಶನ್‌‘ (ಅಮೃತ್‌) ಯೋಜನೆಯಡಿ ಸಿದ್ಧಪಡಿಸಲಾದ ಸೂಚ್ಯಂಕದಲ್ಲಿ ಆಂಧ್ರದ ನಂತರದ ಸ್ಥಾನದಲ್ಲಿ ಒಡಿಶಾ, ಮಧ್ಯಪ್ರದೇಶ ಇದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.

ಮಾನದಂಡಗಳು

 • ಸುಗಮ ಸಾರಿಗೆ, ರಸ್ತೆ ಸಂಪರ್ಕ, ಉತ್ತಮ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ, ಬೀದಿ ದೀಪ ಅಳವಡಿಕೆ ಮತ್ತಿತರ ಮೂಲಸೌಕರ್ಯಗಳ ಮಾನದಂಡಗಳ ಆಧಾರದಲ್ಲಿ ನಿರಾಳ ಬದುಕಿನ (ಈಸಿ ಆಫ್‌ ಲೈಫ್‌) ಸೂಚ್ಯಂಕ ಸಿದ್ಧಪಡಿಸಲಾಗಿದೆ.
 • ನಗರವಾಸಿಗಳ ಬದುಕನ್ನು ಹೈರಾಣಾಗಿಸದೇ ಸರಳಗೊಳಿಸುವ ನಿಟ್ಟಿನಲ್ಲಿ ಈ ಸೂಚ್ಯಂಕವು ನಗರಗಳ ಮಧ್ಯೆ ನಗರ ಯೋಜನೆ ಮತ್ತು ನಿರ್ವಹಣೆಯಲ್ಲಿ ಆರೋಗ್ಯಕರ ಸ್ಪರ್ಧೆ ಹುಟ್ಟುಹಾಕಲಿದೆ
 • ಅಮೃತ್‌ ಯೋಜನೆಯಡಿ ಇದುವರೆಗೂ ದೇಶದಲ್ಲಿ 24 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕೊಳವೆ ಮಾರ್ಗದಲ್ಲಿ ಕುಡಿಯುವ ನೀರು ಪೂರೈಸಲಾಗಿದೆ.

ಅಮೃತ್ ಯೋಜನೆಯ ಬಗ್ಗೆ

 • ನಗರ ಪರಿವರ್ತನೆಗಾಗಿ ಜೂನ್ 2015 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದನ್ನು ಪ್ರಾರಂಭಿಸಿದರು.
 • ಈ ಯೋಜನೆಗೆ ಅನುಗುಣವಾಗಿ ನಗರ ನವೀಕರಣ ಯೋಜನೆಗಳ ಗಮನವು ಸಾಕಷ್ಟು ದೃಢವಾದ ಒಳಚರಂಡಿ ಜಾಲಗಳು ಮತ್ತು ನೀರಿನ ಪೂರೈಕೆಯನ್ನು ಖಾತರಿಪಡಿಸುವ ಮೂಲಸೌಕರ್ಯಗಳನ್ನು ಸ್ಥಾಪಿಸುವುದು.
 • ಈ ಯೋಜನೆಯಡಿ: ಪ್ರತಿ 10 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಿಗೆ ಮತ್ತು 50 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಿಗೆ ಯೋಜನೆಯ ವೆಚ್ಚದಲ್ಲಿ ಶೇ. 50 ರಷ್ಟು ಯೋಜನಾ ವೆಚ್ಚವನ್ನು ಕೇಂದ್ರ ಸರ್ಕಾರವು ಒದಗಿಸುತ್ತದೆ.
 • ಯೋಜನೆಯ ವೆಚ್ಚವನ್ನು ಉಳಿದ ರಾಜ್ಯಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಹೊಂದುವ ಅಗತ್ಯವಿದೆ.

ಪ್ರತ್ಯೇಕ ಕಾರ್ಯಾಚರಣೆ ಅಧಿಕಾರಿ

ಸುದ್ಧಿಯಲ್ಲಿ ಏಕಿದೆ ?ವಾಟ್ಸಪ್‌ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿ ಮತ್ತು ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಸಂದೇಶಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಸೂಚಿಸುತ್ತಿರುವ ಬೆನ್ನಲ್ಲೇ ದೇಶದಲ್ಲಿ ವಾಟ್ಸಪ್ ಸಂಬಂಧಿತ ಗ್ರಾಹಕರ ದೂರು ಮತ್ತು ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಅಧಿಕಾರಿಯನ್ನು ವಾಟ್ಸಪ್ ನೇಮಕ ಮಾಡಿದೆ.

 • ನೂತನ ಅಧಿಕಾರಿಗೆ ಬಳಕೆದಾರರು ವಾಟ್ಸಪ್ ಸಂಬಂಧಿತ ದೂರು ಮತ್ತು ಸಲಹೆ, ಸೂಚನೆ ಹಾಗು ಕಾನೂನು ಸಂಬಂಧಿ ಸಮಸ್ಯೆಗಳಿದ್ದರೆ ಅದನ್ನು ಹೇಳಿಕೊಳ್ಳಬಹುದಾಗಿದೆ. ವಾಟ್ಸಪ್ ಮೂಲಕ ಇಲ್ಲವೆ ವೆಬ್‌ಸೈಟ್, ಇಮೇಲ್ ಮೂಲಕವೂ ಗ್ರಾಹಕರು ಅಧಿಕಾರಿಯನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
 • ಗ್ರಾಹಕರ ಕುಂದು ಕೊರತೆ ಅಧಿಕಾರಿ ನೇಮಕ ಕುರಿತು ವಾಟ್ಸಪ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
 • ಕೋಮಲ್ ಲಾಹಿರಿ ಎಂಬವರು ವಾಟ್ಸಪ್‌ನ ಹಿರಿಯ ಅಧಿಕಾರಿಯಾಗಿದ್ದು, ದೇಶದಲ್ಲಿ ವಾಟ್ಸಪ್ ಕುರಿತ ದೂರುಗಳ ವಿಚಾರದಲ್ಲಿ ಕಂಪನಿಯನ್ನು ಪ್ರತಿನಿಧಿಸಲಿದ್ದಾರೆ. ಜತೆಗೆ ನಕಲಿ ಸುದ್ದಿ ತಡೆಗೆ ಕಂಪನಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

Related Posts
A draft notification by the Karnataka Department of Labour proposes to revise the common minimum wage for workers in 23 industries early next year This includes those working in industries like ...
READ MORE
Karnataka High Court gets five new additional judges
The number of judges in the High Court of Karnataka has increased to 30, against the sanctioned strength of 62, with the swearing in of five additional judges on Monday. ...
READ MORE
NationalCurrent Affairs – UPSC/KPSC Exams – 10th April 2018
Telangana govt launches Rs 8,000/acre investment support scheme for farmers As part of its electoral promise, the Telangana government has launched a first-of-its kind investment support scheme for all farmers who will ...
READ MORE
Karnataka Current Affairs – KAS/KPSC Exams – 25th – 26th Oct 2017
Kittur Fort to become tourist spot Kittur Utsav that celebrates Queen Kittur Channamma’s victory over the East India company’s troupes in 1824, was organised in Channammana Kittur on Monday. The three-day ...
READ MORE
National Judicial Reference System (NJRS) is an electronic repository of cases under the direct taxes category or income tax pending in legal forums like the Income Tax Appellate Tribunal (ITAT), ...
READ MORE
Children who are left without direct parental care for extended periods of time show larger gray matter volumes in the brain and may also show delay in brain development, according ...
READ MORE
Brazil Zika outbreak
Brazil says the number of babies born with microcephaly or abnormally small heads since October has now reached nearly 4,000. The authorities there believe the increase is caused by an outbreak ...
READ MORE
ವಿವಿಧ ಅರಸರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿ ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸಿದ್ದರು. ಆದರೆ, ಪಟೇಲ್ ಅವರು ಎಲ್ಲಾ ರಾಜ್ಯಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿದರು . ಅರಸರ ಆಡಳಿತದಲ್ಲಿ ಇದ್ದ ರಾಜ್ಯಗಳನ್ನು ಒಕ್ಕೂಟದಲ್ಲಿ ಸೇರಿಸಲು ಪಟೇಲರು ರಾಜಕೀಯ ಚಾತುರ್ಯ ತೋರಿಸಿದ್ದರು. ಚಾಣಕ್ಯನೂ ದೇಶವನ್ನು ...
READ MORE
State Issues – Solid Waste Management
Initiatives Taken Up Solid Waste Management: Municipal Solid Waste Management is one of the basic functions of the Municipalities. Rapid urbanization, heterogeneous nature of waste, lack of awareness among the public and various other stake ...
READ MORE
National Current Affairs – UPSC/KAS Exams- 14th & 15th October 2018
Olive Ridley Turtles Topic: Environment and Ecology IN NEWS: Cyclone Titli and the resultant rains have started to degrade the mass nesting site of olive ridley turtles at the Rushikulya river ...
READ MORE
Proposal to hike minimum wages in 23 industries
Karnataka High Court gets five new additional judges
NationalCurrent Affairs – UPSC/KPSC Exams – 10th April
Karnataka Current Affairs – KAS/KPSC Exams – 25th
National Judicial Reference System
Lack of parental care affects brain development
Brazil Zika outbreak
‘ಒಂದೇ ಭಾರತ, ಶ್ರೇಷ್ಠ ಭಾರತ’ ಚಾಲನೆ
State Issues – Solid Waste Management
National Current Affairs – UPSC/KAS Exams- 14th &

Leave a Reply

Your email address will not be published. Required fields are marked *