“2nd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ಸ್ವಚ್ಛ ಕ್ಯಾಂಪಸ್’

10

ಸುದ್ಧಿಯಲ್ಲಿ ಏಕಿದೆ ?ದೇಶದ ವಿಶ್ವವಿದ್ಯಾಲಯಗಳ ‘ಸ್ವಚ್ಛ ಕ್ಯಾಂಪಸ್’ ರ‍್ಯಾಂಕಿಂಗ್ ಪಟ್ಟಿ ಯಲ್ಲಿ ಕೆಎಲ್​ಇ ಸಂಸ್ಥೆಯ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಸಂಶೋಧನೆ ಕೇಂದ್ರಕ್ಕೆ (ಕೆಎಲ್​ಇ ವಿವಿ) 3ನೇ ಸ್ಥಾನ ದೊರಕಿದೆ.

 • ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಲ್​ಇ ಸಂಸ್ಥೆಯ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಸಂಶೋಧನೆ ಕೇಂದ್ರದ ಕುಲಪತಿ ಡಾ. ವಿವೇಕ ಸಾವೋಜಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ ಜಾವಡೇಕರ್ ಪ್ರಶಸ್ತಿ ಪ್ರದಾನ ಮಾಡಿದರು.
 • ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಯಿಂದ ದೇಶದ ವಿವಿಗಳ ‘ಸ್ವಚ್ಛ ಕ್ಯಾಂಪಸ್’ಗಳನ್ನು ಗುರುತಿಸಿ ಈ ರ‍್ಯಾಂಕಿಂಗ್ ನೀಡಲಾಗುತ್ತದೆ.
 • ದೇಶದ ವಿವಿಗಳ ಸ್ವಚ್ಛ ಕ್ಯಾಂಪಸ್​ಗಳ ಸಮೀಕ್ಷೆ ನಡೆಸಿದ ಪರಿಣತರ ತಂಡ ಕೆಎಲ್​ಇ ಸಂಸ್ಥೆಗೆ 3ನೇ ಸ್ಥಾನ ನೀಡಿದೆ. ಕಳೆದ ವರ್ಷ ಸಂಸ್ಥೆ ದೇಶದಲ್ಲಿ 4ನೇ ಸ್ಥಾನದಲ್ಲಿತ್ತು.

ಯಾವ ಅಂಶಗಳನ್ನು ಪರಿಗಣಿಸಲಾಗುತ್ತದೆ ?

 • ಶೌಚಗೃಹಗಳ ಸ್ವಚ್ಛತೆ, ನಿರ್ವಹಣೆ, ತ್ಯಾಜ್ಯ ವಿಲೇವಾರಿ ಪದ್ಧತಿ, ವಿದ್ಯಾರ್ಥಿಗಳ ವಸತಿ ಗೃಹಗಳಲ್ಲಿ ಸ್ವಚ್ಛತೆ, ಅಡುಗೆ ಮನೆ ಶುಚಿತ್ವ ಮತ್ತು ಉಪಕರಣಗಳ ಉತ್ಕೃಷ್ಟತೆ, ಶುದ್ಧ ನೀರು, ಸಂಗ್ರಹಣೆ, ವಿತರಣೆ ಸೌಲಭ್ಯ, ಕ್ಯಾಂಪಸ್​ಗಳಲ್ಲಿ ಹಸಿರುಮನೆ ಮತ್ತು ಮಳೆನೀರು ಕೊಯ್ಲು, ಸೌರಶಕ್ತಿ ಬಳಕೆ.. ಹೀಗೆ ಹಲವು ಅಂಶಗಳನ್ನು ಪರಿಗಣಿಸಿ ಶ್ರೇಣಿ ನೀಡಲಾಗಿದೆ.

ಚಿಕ್ಕಮಗಳೂರು, ಕೊಡಗು ಕಾಫಿಗೆ ಬ್ರ್ಯಾಂಡ್​ ಯೋಗ

ಸುದ್ಧಿಯಲ್ಲಿ ಏಕಿದೆ ?ಬಾಬಾ ಬುಡನ್​ಗಿರಿ, ಚಿಕ್ಕಮಗಳೂರು, ಕೊಡಗು ಸೇರಿ ಒಟ್ಟು 5 ಭೌಗೋಳಿಕ ಪ್ರದೇಶಗಳ ರುಚಿಕಟ್ಟಾದ ಕಾಫಿಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದಲ್ಲಿ ಬ್ರಾ್ಯಂಡಿಂಗ್ ಮಾಡಲು ತೀರ್ವನಿಸಲಾಗಿದ್ದು, ಜನವರಿಯಿಂದ ಯೋಜನೆ ಜಾರಿಗೆ ಬರಲಿದೆ .

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಪ್ರಯುಕ್ತ ಕಾಫಿ

 • ಜಿಐ (ಜಿಯೋಗ್ರಾಫಿಕಲ್ ಐಡೆಂಟಿಫಿಕೇಷನ್) ಟ್ಯಾಗ್ ಮೂಲಕ ಬಾಬಾ ಬುಡನ್​ಗಿರಿ, ಚಿಕ್ಕಮಗಳೂರು, ಕೊಡಗು, ಆಂಧ್ರಪ್ರದೇಶದ ಅರಕು ವ್ಯಾಲಿ, ತಮಿಳುನಾಡಿನ ವಯನಾಡ್ ಪ್ರದೇಶಗಳಲ್ಲಿ ಬೆಳೆಯುವ ಕಾಫಿ ರುಚಿಯಲ್ಲಿ ವಿಭಿನ್ನತೆ ಹೊಂದಿವೆ. ಇವುಗಳನ್ನು ಬ್ರಾ್ಯಂಡ್​ಗೊಳಿಸುವುದರ ಮೂಲಕ ಕಾಫಿ ಬೆಳೆಗಾರರನ್ನು ಉತ್ತೇಜಿಸುವುದರೊಂದಿಗೆ ಭಾರತದ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸ್ಥಾನ ತಂದುಕೊಡಲಾಗುವುದು.
 • ಇನ್​ಕ್ಯೂಬೇಷನ್ ಕೇಂದ್ರ: ಏಮ್ಂದ ಬೆಂಗಳೂರು ಸೇರಿ ದೇಶದಲ್ಲಿ 101 ಇನ್​ಕ್ಯೂಬೇಷನ್ (ಉತ್ತೇಜನ) ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ 10 ಕೋಟಿ ರೂ. ನೆರವು ಒದಗಿಸಲಾಗುತ್ತದೆ. ಮುಂದಿನ 2 ವರ್ಷದಲ್ಲಿ ಪ್ರತಿ ಕೇಂದ್ರವು ಕನಿಷ್ಠ 20ರಿಂದ 25 ಸ್ಟಾರ್ಟಪ್ ಆರಂಭಗೊಳ್ಳಲು ಉತ್ತೇಜಿಸಲಿವೆ.

ಅಂತಾರಾಷ್ಟ್ರೀಯ ಕಾಫಿ ದಿನ

 • ಕಾಫಿಯ ಕುರಿತು ಪ್ರಚಾರ ಮಾಡುವ ಸಲುವಾಗಿ ಮತ್ತು ಕಾಫಿ ಎಂಬ ಪಾನಿಯದ ಮಹತ್ವವನ್ನು ಸಾರಿ ಹೇಳುವ ಸಲುವಾಗಿ ಅಕ್ಟೋಬರ್ 1 ಅನ್ನು ಪ್ರತಿವರ್ಷ ಕಾಫಿ ದಿನವನ್ನಾಗಿ ಆಚರಿಸಲಾಗುತ್ತದೆ.
 • ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ 1 ಅಕ್ಟೋಬರ್ 2015, ಮಿಲನ್ನಲ್ಲಿ ಪ್ರಾರಂಭವಾಯಿತು. ನ್ಯಾಯೋಚಿತ ವ್ಯಾಪಾರ ಕಾಫಿಯನ್ನು ಉತ್ತೇಜಿಸಲು ಮತ್ತು ಕಾಫಿ ಬೆಳೆಗಾರರ ಅವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಸಿಡಿಲು ಎಂಬ ಮೊಬೈಲ್ ಆ್ಯಪ್‌

ಸುದ್ಧಿಯಲ್ಲಿ ಏಕಿದೆ ?ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಡಿಲು ಎಂಬ ಮೊಬೈಲ್ ಆ್ಯಪ್‌ನಲ್ಲಿ ಮಿಂಚು, ಗುಡುಗು ಸಾಧ್ಯತೆಗಳ ಬಗ್ಗೆ ಕ್ಷಣ ಕ್ಷಣದ ಅಲರ್ಟ್ ಸಿಗುತ್ತಿದೆ.

 • ಈ ತಂತ್ರಜ್ಞಾನ ಮೂಲಕ ಸಂಭವನೀಯ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಮಳೆ ಅಲರ್ಟ್ ಬಗ್ಗೆ ತಿಳಿದುಕೊಳ್ಳುವಂತೆಯೇ ಸಿಡಿಲು ಆ್ಯಪ್‌ನಲ್ಲಿ ಸಿಡಿಲಿನ ಮುನ್ಸೂಚನೆ ಪಡೆಯಬಹುದು. ಹವಾಮಾನ ಸಂಬಂಧಿತ ನೈಸರ್ಗಿಕ ಅಪಾಯಗಳ ನಿರ್ವಹಣೆ, ಮುನ್ಸೂಚನೆ, ಸ್ಥಳಗಳ ಗುರುತಿಸುವಿಕೆ ‘ಸಿಡಿಲು’ ಆ್ಯಪ್‌ನಲ್ಲಿ ಸಾಧ್ಯ.
 • ವಿಪತ್ತು ನಿರ್ವಹಣೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿ ಮೇಲೆ ಹೆಚ್ಚು ಅವಲಂಬಿತವಾಗಿ ಇರುವುದರಿಂದ ರೈತರಿಗೆ, ಜನಸಾಮಾನ್ಯರಿಗೆ ಪೂರ್ವಭಾವಿ ಮಾಹಿತಿ ಒದಗಿಸುವ ವೇದಿಕೆಯಾಗಿ ಸಿಡಿಲು ಆ್ಯಪ್ ಕಾರ್ಯನಿರ್ವಹಿಸುತ್ತದೆ.
 • ಮೂರು ಭಾಷೆಗಳಲ್ಲಿ ಮಾಹಿತಿ: ಆ್ಯಪ್‌ನಲ್ಲಿ ಹಿಂದಿ, ಇಂಗ್ಲಿಷ್, ಕನ್ನಡ ಈ ಮೂರು ಭಾಷೆಗಳಲ್ಲಿ ಮಾಹಿತಿ ಪಡೆಯಬಹುದು. ಆ್ಯಪ್‌ಗೆ ಪ್ರವೇಶಿಸುತ್ತಿದ್ದಂತೆ ಮಿಂಚು, ಗುಡುಗು, ಮಳೆ ಮೂರು ವಿಭಾಗಗಳು ತೆರೆದುಕೊಳ್ಳುತ್ತವೆ.
 • ಪ್ರತಿ ವಿಭಾಗದಲ್ಲಿ ನಾವಿರುವ ಕಿ.ಮೀ. ಮತ್ತು 15 ಕಿ.ಮೀ. ವ್ಯಾಪ್ತಿಯಲ್ಲಿನ ಎಚ್ಚರಿಕೆಗಳು ಪ್ರದರ್ಶನವಾಗುತ್ತವೆ. ಅದಕ್ಕಿಂತ ಹೊರಗಿನ ಎಚ್ಚರಿಕೆಗಳು ಸಹ ಅಪ್‌ಡೇಟ್ ಆಗುತ್ತವೆ.
 • ವಿವಿಧ ಬಣ್ಣಗಳ ಮೂಲಕ ಸಿಡಿಲಿನ ಅಪಾಯದ ಮಟ್ಟ ತಿಳಿಯಲು ಸಾಧ್ಯ.
 • ಮಾಹಿತಿ ವಿಭಾಗದಲ್ಲಿ ಸಿಡಿಲಾಘಾತವಾದಾಗ ಕೈಗೊಳ್ಳಬೇಕಾದ ಚಿಕಿತ್ಸೆ ಕುರಿತು ಮಾಹಿತಿಗಳಿವೆ. ಆಂಡ್ರಾಯ್ಡಾ ಮೊಬೈಲ್‌ಗಳಲ್ಲಿ ಪ್ಲೇಸ್ಟೋರ್‌ಗೆ ಹೋಗಿ ಸಿಡಿಲು ಆ್ಯಪ್ ಡೌನ್‌ಲೋಡ್ ಹಾಕಬಹುದು.
 • ಡೌನ್‌ಲೋಡ್ ಹಾಕಿದಾಕ್ಷಣ ವ್ಯಕ್ತಿಯ ಮೊಬೈಲ್ ನಂಬರ್ ಹಾಕುವಂತೆ ಸೂಚನೆ ಬರುತ್ತದೆ. ಈ ಸಂಖ್ಯೆಗೆ ಬರುವ ಒಟಿಪಿಯನ್ನು ಎಂಟ್ರಿ ಮಾಡುತ್ತಿದ್ದಂತೆ ಆ್ಯಪ್ ತೆರೆದುಕೊಳ್ಳುತ್ತದೆ. ಜಿಪಿಎಸ್ ಮತ್ತು ಇಂಟರ್‌ನೆಟ್ ಸಂಪರ್ಕ ಏರ್ಪಟ್ಟು ಆ್ಯಪ್ ಕೆಲಸ ನಿರ್ವಹಿಸುತ್ತದೆ.

ಕಾರ್ಯನಿರ್ವಹಣೆ ಹೇಗೆ?: 

 • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಮುನ್ಸೂಚನೆಯ ಸೆನ್ಸರ್‌ಗಳಿವೆ. ಇವುಗಳು ಒಂದು ಗಂಟೆ ಮೊದಲೇ ಮಾಹಿತಿ ಪಡೆದು ಮುಖ್ಯ ಕಚೇರಿಗೆ ಮಾಹಿತಿ ರವಾನಿಸುತ್ತದೆ. ಇಲ್ಲಿಂದ ಆ್ಯಪ್‌ಗೆ ಮಾಹಿತಿ ಅಪ್‌ಲೋಡ್ ಆಗುತ್ತದೆ. ಅರ್ಧ, ಮುಕ್ಕಾಲು ಗಂಟೆ ಮೊದಲೇ ಜನರಿಗೆ ಮಾಹಿತಿ ರವಾನೆಯಾಗುವುದರಿಂದ ಮುಂದಾಗುವ ಹೆಚ್ಚಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯ.

ಆಧಾರ್ ಡಿಲಿಂಕ್

ಸುದ್ಧಿಯಲ್ಲಿ ಏಕಿದೆ ?ಖಾಸಗಿ ಕಂಪನಿಗಳು ಸೇವೆ ಒದಗಿಸಲು ಆಧಾರ್ ಬಳಸಿಕೊಳ್ಳುವಂತಿಲ್ಲ ಎಂಬ ಸುಪ್ರೀಂಕೋರ್ಟ್‌ ಆದೇಶದ ಬೆನ್ನಲ್ಲೇ ಆಧಾರ್ ಪ್ರಾಧಿಕಾರ ಯುಐಡಿಎಐ ಟೆಲಿಕಾಂ ಕಂಪನಿಗಳಿಗೆ ಸುತ್ತೋಲೆ ಕಳುಹಿಸಿದ್ದು, ಆಧಾರ್ ಡಿಲಿಂಕ್ ಮಾಡಲು ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ಮುಂದಿನ 15 ದಿನದೊಳಗಾಗಿ ಉತ್ತರಿಸುವಂತೆ ಸೂಚಿಸಿದೆ.

 • ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಇತರ ಎಲ್ಲ ಟೆಲಿಕಾಂ ಸೇವಾದಾರ ಕಂಪನಿಗಳಿಗೆ ಸೂಚನೆ ನೀಡಲಾಗಿದ್ದು, ಸುಪ್ರೀಂಕೋರ್ಟ್ ಸೂಚನೆಯಂತೆ ಆಧಾರ್ ಬಳಕೆ ಬಿಟ್ಟುಬಿಡಲು ಯಾವ ಕ್ರಮ ಕೈಗೊಳ್ಳಲಾಯಿತು ಎಂದು ಉತ್ತರಿಸಬೇಕಿದೆ.
 • ಜತೆಗೆ ಆಧಾರ್ ಹೊರತಾಗಿ ಇನ್ನು ಕಂಪನಿಗಳು ಈ ಹಿಂದೆ ಅನುಸರಿಸುತ್ತಿದ್ದ ಕ್ರಮದ ಮೊರೆಹೋಗಬೇಕಿದ್ದು, ಗ್ರಾಹಕರ ಫೋಟೋ, ಅರ್ಜಿ ಫಾರಂ, ಸಹಿ ಪಡೆದುಕೊಂಡು ಸಿಮ್ ಕಾರ್ಡ್ ವಿತರಿಸಬೇಕಿದೆ.
 • ಆಧಾರ್ ಪ್ರಾಧಿಕಾರದ ಸೂಚನೆಯಂತೆ ಟೆಲಿಕಾಂ ಸೇವಾದಾರ ಕಂಪನಿಗಳು ನಿಯಮಗಳನ್ನು ಪಾಲಿಸಬೇಕಿದ್ದು, ಸಿಮ್ ನೀಡಲು ಆಧಾರ್‌ಗಾಗಿ ಪೀಡಿಸುವಂತಿಲ್ಲ.
 • ಕಳೆದ ವಾರ ಆಧಾರ್ ಸಾಂವಿಧಾನಿಕ ಮಾನ್ಯತೆ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಆಧಾರ್ ಕಾಯ್ದೆಯ ಸೆ. 57 ಅನ್ನು ರದ್ದುಪಡಿಸಿತ್ತು. ಇದರಿಂದ ಖಾಸಗಿ ಸಂಸ್ಥೆಗಳು ಆಧಾರ್ ಅನ್ನು ಬಳಸಲು ನಿರ್ಭಂದ ಹೇರಲಾಗಿತ್ತು.

ಗಿರ್​ ಅರಣ್ಯ ಪ್ರದೇಶ

ಸುದ್ಧಿಯಲ್ಲಿ ಏಕಿದೆ ?ಗುಜರಾತ್​ನ ಗಿರ್​ ರಾಷ್ಟ್ರೀಯ ಉದ್ಯಾನದ ಅರಣ್ಯ ಪ್ರದೇಶದಲ್ಲಿ ಕಳೆದ 18 ದಿನಗಳಿಂದ 21 ಸಿಂಹಗಳು ಮೃತಪಟ್ಟಿರುವುದು ವರದಿಯಾಗಿದೆ.

 • ಏಷ್ಯಾದ ಸಿಂಹ ಪ್ರಭೇದವು ಅಳಿವಿನಂಚಿನಲ್ಲಿದ್ದು, ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವು ಅವುಗಳ ಕೊನೆಯ ಆವಾಸಸ್ಥಾನಗಳಲ್ಲಿ ಒಂದಾಗಿದೆ. 2015 ರ ಜನಗಣತಿಯ ಪ್ರಕಾರ ಇಲ್ಲಿ 523 ಸಿಂಹಗಳಿವೆ. ಅವುಗಳಲ್ಲಿ 109 ಗಂಡು, 201 ಹೆಣ್ಣು ಮತ್ತು 140 ಸಿಂಹದ ಮರಿಗಳಿವೆ ಎಂದು ತಿಳಿದುಬಂದಿದೆ.
 • ಪ್ರತಿ ವರ್ಷ ಸುಮಾರು 100 ಸಿಂಹಗಳು ಮೃತಪಡುತ್ತಿದ್ದು, ಮಾನ್​ಸೂನ್​ ಸಮಯದಲ್ಲಿ ಸಿಂಹಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತದೆ. ಮೂರು ತಿಂಗಳ ಮಾನ್ಸೂನ್​ ಸಮಯದಲ್ಲಿ ಗಿರ್​ನಲ್ಲಿ ಪ್ರತಿವರ್ಷ ಅಂದಾಜು 31 ರಿಂದ 32 ಸಿಂಹಗಳು ಮೃತಪಡುತ್ತವೆ.

ಗಿರ್ ನ್ಯಾಶನಲ್ ಪಾರ್ಕ್ ಬಗ್ಗೆ ಫ್ಯಾಕ್ಟ್ಸ್:

 • ಗಿರ್ ನ್ಯಾಶನಲ್ ಪಾರ್ಕ್ & ವನ್ಯಜೀವಿ ಅಭಯಾರಣ್ಯವು ಕಾಡಿನಲ್ಲಿರುವ ಏಶಿಯಾಟಿಕ್ ಸಿಂಹದ ಉಳಿದಿರುವ ಜನರಿಗೆ ಕೊನೆಯ ಆಶ್ರಯವಾಗಿದೆ.
 • ಉದ್ಯಾನವು ಸೋಮನಾಥ್ನ 43 ಕಿ.ಮೀ (27 ಮೈಲಿ) ಈಶಾನ್ಯ, ಜುನಾಗಡ್ನ ಆಗ್ನೇಯಕ್ಕೆ 65 ಕಿ.ಮಿ (ಮೈಲಿ) ಮತ್ತು ಅಮ್ರೆಲಿಯ ನೈಋತ್ಯ ದಿಕ್ಕಿಗೆ 60 ಕಿ.ಮೀ.
 • ಏಷಿಯಾಟಿಕ್ ಸಿಂಹವನ್ನು ಸಂರಕ್ಷಿಸುವ ಸಲುವಾಗಿ 1965 ರ ಸೆಪ್ಟೆಂಬರ್ 18 ರಂದು ಸರನ್ ಗಿರ್ನ ವನ್ಯಜೀವಿ ಅಭಯಾರಣ್ಯವಾಗಿ ಸರ್ಕಾರವು ಒಂದು ದೊಡ್ಡ ಪ್ರಮಾಣವನ್ನು ಘೋಷಿಸಿತು.
 • 1412 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ ಸಸಾನ್ ಗಿರ್ ವನ್ಯಜೀವಿ ಅಭಯಾರಣ್ಯವು 258 ಕಿಮೀ ರಾಷ್ಟ್ರೀಯ ಉದ್ಯಾನವನದ ಒಳಭಾಗವನ್ನು ಒಳಗೊಂಡಿದೆ.
 • ಪಾರ್ಕ್ ಅರೆ-ನಿತ್ಯಹರಿದ್ವರ್ಣ ಮತ್ತು ನಿತ್ಯಹರಿದ್ವರ್ಣ ಸಸ್ಯ, ಅಕೇಶಿಯ, ಪೊದೆಸಸ್ಯ ಕಾಡಿನ, ಹುಲ್ಲುಗಾವಲುಗಳು ಮತ್ತು ಕಲ್ಲಿನ ಬೆಟ್ಟಗಳನ್ನು ಒಳಗೊಂಡಿರುವ 1412 ಚದರ ಕಿಮೀ (ಪತನಶೀಲ ಅರಣ್ಯ) ಪ್ರದೇಶದಲ್ಲಿ ಚದುರಿಹೋಗಿದೆ.
 • ಉದ್ಯಾನವನದ ಬಹುತೇಕ ಭಾಗವು ಒರಟಾದ ಬೆಟ್ಟಗಳು, ಎತ್ತರದ ಗಡಿಗಳು ಮತ್ತು ದಟ್ಟವಾದ ಕಾಡು ಕಣಿವೆಗಳು, ವಿಶಾಲವಾದ ಹುಲ್ಲುಗಾವಲು ಪ್ರದೇಶಗಳು ಮತ್ತು ಪ್ರತ್ಯೇಕ ಬೆಟ್ಟದ ತುಂಡುಗಳು.
 • ಜಿರ್ನ ಅರಣ್ಯ ಪ್ರದೇಶವು ಜುನಾಘಡದ ನವಾಬರ ಬೇಟೆಯ ನೆಲವಾಗಿತ್ತು. ಆದರೆ ಸಿಂಹಗಳ ಜನಸಂಖ್ಯೆಯು ತೀವ್ರವಾಗಿ ಕುಸಿದಾಗ, ನವಾಬ್ ಸರ್ ಮೊಹಮ್ಮದ್ ರಸುಲ್ ಖಾನ್ಜಿ ಬಾಬಿ 1900 ರಲ್ಲಿ “ರಕ್ಷಿತ” ಪ್ರದೇಶ ಎಂದು ಘೋಷಿಸಿದರು.
 • 14 ನೇ ಏಷ್ಯಾದ ಲಯನ್ ಜನಗಣತಿ 2015 ರ ಮೇ 2015 ರಲ್ಲಿ ನಡೆಸಲಾಯಿತು. 2015 ರಲ್ಲಿ ಜನಸಂಖ್ಯೆಯು 523 (2010 ರಲ್ಲಿ ಹಿಂದಿನ ಜನಗಣತಿಗಿಂತ ಹೋಲಿಸಿದರೆ 27%). ಜನಸಂಖ್ಯೆ 2010 ರಲ್ಲಿ 411 ಮತ್ತು 2005 ರಲ್ಲಿ 359 ಆಗಿತ್ತು.
 • 523 ಒಟ್ಟು ಜನಸಂಖ್ಯೆಯಲ್ಲಿ 109 ಪುರುಷ, 201 ಮಹಿಳೆ ಮತ್ತು 213 ಯುವ / ಮರಿಗಳಿವೆ.
 • ಗಿರ್ ಸುಮಾರು 523 ಸಿಂಹಗಳು ಮತ್ತು 300 ಚಿರತೆಗಳನ್ನು ಹೊಂದಿದೆ, ಇದು ಭಾರತದಲ್ಲಿ ಪ್ರಮುಖ ‘ದೊಡ್ಡ ಬೆಕ್ಕು’ ಸಾಂದ್ರತೆಗಳಲ್ಲಿ ಒಂದಾಗಿದೆ.
 • ಮಾಂಸಾಹಾರಿಗಳು ಮುಖ್ಯವಾಗಿ ಏಶಿಯಾಟಿಕ್ ಸಿಂಹಗಳು, ಇಂಡಿಯನ್ ಚಿರತೆಗಳು, ಇಂಡಿಯನ್ ಕೋಬ್ರಾಗಳು, ಕಾಡಿನ ಬೆಕ್ಕುಗಳು, ಪಟ್ಟೆ ಮೂಲಿಕೆಗಳು, ಗೋಲ್ಡನ್ ನರಿಗಳು, ಭಾರತೀಯ ಮುಂಗುಸಿ, ಭಾರತೀಯ ಪಾಮ್ ಸಿವೆಟ್ಗಳು, ಮತ್ತು ಜೇನು ಬ್ಯಾಡ್ಗರ್ಸ್ಗಳನ್ನು ಒಳಗೊಂಡಿದೆ.
 • ಮರುಭೂಮಿ ಬೆಕ್ಕುಗಳು ಮತ್ತು ತುಕ್ಕು-ಮಚ್ಚೆಯುಳ್ಳ ಬೆಕ್ಕುಗಳು ಕೂಡಾ ಕಂಡುಬರುತ್ತವೆ ಆದರೆ ವಿರಳವಾಗಿ.
 • ಗಿರ್ನ ಮುಖ್ಯ ಸಸ್ಯಹಾರಿಗಳು ಚಿಲ್ಟ, ನೀಲ್ಗೈ, ಸಾಂಬಾರ್, ನಾಲ್ಕು-ಕೊಂಬಿನ ಜಿಂಕೆ, ಚಿಂಕಾರ ಮತ್ತು ಕಾಡು ಹಂದಿ.
 • ಸುತ್ತಮುತ್ತಲಿನ ಪ್ರದೇಶದಿಂದ ಬ್ಲ್ಯಾಕ್ಬಕ್ಸ್ ಕೆಲವೊಮ್ಮೆ ಅಭಯಾರಣ್ಯದಲ್ಲಿ ಕಂಡುಬರುತ್ತದೆ.
 • ಗಿರ್ವು ಮಾರ್ಷ್ ಮೊಸಳೆಯ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ, ಇದು ಅಭಯಾರಣ್ಯದಲ್ಲಿ ದಾಖಲಾದ 40 ಸರೀಸೃಪಗಳು ಮತ್ತು ಉಭಯಚರಗಳ ಪೈಕಿ ಒಂದಾಗಿದೆ.
 • ಉದ್ಯಾನ ಪರಿಶೀಲನಾಪಟ್ಟಿ 250 ಕ್ಕೂ ಅಧಿಕ ಪಕ್ಷಿಗಳನ್ನು ಹೊಂದಿದೆ. ಲಸೆರ್ ಫ್ಲೋರಿಕಾದ ಮತ್ತು ಸರಸ್ ಕ್ರೇನ್ನಂತಹ ಅಪರೂಪದ ಜಾತಿಗಳನ್ನು ಅಭಯಾರಣ್ಯದ ಸುತ್ತಲಿನ ಹುಲ್ಲುಗಾವಲುಗಳಲ್ಲಿ ದಾಖಲಿಸಲಾಗಿದೆ.

Related Posts
February 2018 Mahithi Monthly Current affairs Magazine
Dear Aspirants,  NammaKPSC has released February 2018 Mahithi Monthly current affairs magazine. Mahithi Monthly Magazine is the Best Current affairs Magazine for all civil services competitive examinations. It is the only magazine that ...
READ MORE
Mission Indradhanush
Government has launched Mission Indradhanush to immunise kids against 7 vaccine-preventable diseases. Mission Indradhanush depicts 7 colours of the rainbow which aims to cover all those children by 2020 who are ...
READ MORE
What does it say Its is set to roll out on January 1, 2016. As per the formula, vehicles with registration number ending with an odd number will be allowed on odd-number ...
READ MORE
POWER WALL
Power wall is a wall-mounted high capacity lithium ion battery that can be charged using power generated through solar panels. Its about 4 feet tall,3 feet wide and 7 inches thick, ...
READ MORE
Child Abduction Bill, 2016
Draft Civil Aspects of International Child Abduction Bill, 2016 Background There are several legal issues confronting the issue of transnational inter-spousal child removal. It is unfortunate that when a child is abducted ...
READ MORE
ಅಕ್ಟೋಬರ್ 2018 ಮಾಸ ಪತ್ರಿಕೆ (ಕನ್ನಡ)
ಆತ್ಮೀಯ ಸ್ನೇಹಿತರೆ, NammaKPSC ತಂಡವು ಅಕ್ಟೋಬರ್ 2018 ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿಧೆ. ಈ ಪತ್ರಿಕೆಯು ರಾಜ್ಯಾದ್ಯಂತ ಸರ್ಕಾರೀ ಕೆಲಸಕ್ಕೆ ಸೇರುವ ಹಾಗೂ ಅದಕ್ಕಾಗಿ ತಯಾರಿ ನಡೆಸುತಿರುವ ಸಾವಿರಾರು ಅಭ್ಯರ್ಥಿಗಳಿಗೆ ಉಪಯುಕ್ತವಾಗಿದೆ.ಈ ಮಾಸ ಪತ್ರಿಕೆಯು ಬೇರೆ ಮಾಸ ಪತ್ರಿಕೆಗಳಿಗಿಂತ ಭಿನ್ನವಾಗಿದ್ದು ,ಈ ಪತ್ರಿಕೆಯನ್ನು ಕೆ.ಪಿ.ಎಸ್.ಸಿ. ಮತ್ತು ...
READ MORE
Answer the following questions in about 150 words each: What is fiber optics? What are the advantages of using fiber optics. Explain with a simple diagram the working of a nuclear reactor Discuss the various techniques ...
READ MORE
16th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಜಿಎಸ್​ಟಿ ಸಂಕೀರ್ಣ ಕಳೆದ ವರ್ಷ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದಿರುವ ಸರಕು ಹಾಗೂ ಸೇವಾ ತೆರಿಗೆ (ಜಿಎಸ್​ಟಿ) ವಿಶ್ವದಲ್ಲೇ ಅತೀ ಸಂಕೀರ್ಣ ಹಾಗೂ ಎರಡನೇ ಅತಿ ಹೆಚ್ಚು ತೆೆರಿಗೆ ದರ ಹೊಂದಿರುವ ವ್ಯವಸ್ಥೆಯಾಗಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವದ 49 ದೇಶಗಳು ...
READ MORE
What causes pilot whales to get disoriented? Pilot whales are highly sensitive to noise pollution, caused by man-made sounds that interfere with echolocation. This makes them susceptible to disorientation from a ...
READ MORE
13th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಭಾರತೀಯ ವಾಸ್ತುಶಿಲ್ಪಿ ಬಿ.ವಿ ದೋಷಿಗೆ 'ವಾಸ್ತುಶಿಲ್ಪದ ನೊಬೆಲ್‌' ಹೆಸರಾಂತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ನೊಬೆಲ್‌ಗೆ ಸಮಾನವಾದ ಪ್ರಿಟ್ಝ್‌ಕರ್‌ ಆರ್ಕಿಟೆಕ್ಚರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುಣೆ ಮೂಲದ ದೋಷಿ (90), ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯರಾಗಿದ್ದಾರೆ. ಈ ಮೊದಲು ಝಹಾ ಹಡಿಡ್‌, ಫ್ರಾಂಕ್‌ ...
READ MORE
February 2018 Mahithi Monthly Current affairs Magazine
Mission Indradhanush
Delhi odd-even formula
POWER WALL
Child Abduction Bill, 2016
ಅಕ್ಟೋಬರ್ 2018 ಮಾಸ ಪತ್ರಿಕೆ (ಕನ್ನಡ)
Role and impact of Science and technology in
16th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
Beaching of whales
13th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

Leave a Reply

Your email address will not be published. Required fields are marked *