” 4th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಕನ್ನಡ 

ಸುದ್ಧಿಯಲ್ಲಿ ಏಕಿದೆ?ಎಲ್ಲ ಖಾಸಗಿ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧನೆ ಮಾಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಶಿಕ್ಷಣ ಇಲಾಖೆಯು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.

 • ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು 2017-18ನೇ ಸಾಲಿನಲ್ಲಿ ಆದೇಶಿಸಿದ್ದರೂ ಸಿಬಿಎಸ್‌ಸಿ, ಐಸಿಎಸ್‌ಇ ಹಾಗೂ ಇತರೆ ಪಠ್ಯ ಕ್ರಮ ಹೊಂದಿರುವ ಬಹುತೇಕ ಖಾಸಗಿ ಶಾಲೆಗಳು ಕನ್ನಡ ಬೋಧಿಸುತ್ತಿಲ್ಲ. ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಇತರೆ ಪಠ್ಯ ಕ್ರಮ ಇದ್ದರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು. ಕನ್ನಡ ಕಲಿಸದ ಶಾಲೆಗಳ ಪಟ್ಟಿಯನ್ನು ಸೆ.5ರೊಳಗೆ ಕಳುಹಿಸುವಂತೆ ಜಿಲ್ಲೆಗಳ ಉಪ ನಿರ್ದೇಶಕರಿಗೆ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶದಲ್ಲಿ ಸೂಚಿಸಿದ್ದಾರೆ.

ಏನಿದು ನಿಯಮ?

 • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯ ಮೇರೆಗೆ ರಾಜ್ಯ ಸರಕಾರ 2015ರಲ್ಲಿ ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ರೂಪಿಸಿತ್ತು. ಇದರ ಆಧಾರದ ಮೇಲೆ 2017ರಲ್ಲಿ ಕನ್ನಡ ಭಾಷಾ ಕಲಿಕಾ ನಿಯಮಗಳನ್ನು ಜಾರಿಗೆ ತರಲಾಗಿದೆ.
 • 2017-18ನೇ ಶೈಕ್ಷಣಿಕ ಸಾಲಿನಿಂದ 1ರಿಂದ 10ನೇ ತರಗತಿವರೆಗೆ ಹಂತ ಹಂತವಾಗಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯ ಮಾಡಿದೆ. ಆ ಮೂಲಕ ಎಲ್ಲಾ ಶಾಲೆಗಳಲ್ಲಿ ಪ್ರತಿವರ್ಷ ಒಂದೊಂದು ತರಗತಿಯಂತೆ 2026-27ನೇ ಸಾಲಿಗೆ 10ನೇ ತರಗತಿವರೆಗೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಟ್ಟುನಿಟ್ಟಾಗಿ ಕಲಿಸಬೇಕಿದೆ.

ನಿರಾಕರಿಸುತ್ತಿದ್ದ ಖಾಸಗಿ ಶಾಲೆಗಳು:

 • ಈ ನಿಯಮಗಳಿಗೆ ರಾಜ್ಯ ಪಠ್ಯಕ್ರಮಕ್ಕೆ ಸಿಬಿಎಸ್‌ಸಿ, ಐಸಿಎಸ್‌ಸಿ ಹಾಗೂ ಇತರೆ ಪಠ್ಯಕ್ರಮ ಬೋಧಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಬೋಧಿಸಲು ನಿರಾಕರಿಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಂತಹ ಖಾಸಗಿ ಶಾಲೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು ಎಂದು ತಿಳಿದುಬಂದಿದೆ.

ಎನ್‌ಪಿಎಸ್‌ ರದ್ದತಿ

ಸುದ್ಧಿಯಲ್ಲಿ ಏಕಿದೆ?ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌) ರದ್ದಪಡಿಸಲು ಒತ್ತಾಯಿಸಿ ದೇಶದ ಎಲ್ಲಾ ರಾಜ್ಯಗಳ ಸರಕಾರಿ ನೌಕರರ ಒಕ್ಕೂಟವು ದಿಲ್ಲಿಯಲ್ಲಿ ಸೆ.5ಕ್ಕೆ ರ್‍ಯಾಲಿ ಹಮ್ಮಿಕೊಂಡಿದೆ.

 • ಅಂದು ಇಡೀ ದಿನ ಕರ್ನಾಟಕ ಸಹಿತ ನಾನಾ ರಾಜ್ಯಗಳ ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಎನ್‌ಪಿಎಸ್‌ ರದ್ದತಿ ಹಾಗೂ ಸರಕಾರದ ನಾನಾ ಇಲಾಖೆಗಳಲ್ಲಿನ ಗುತ್ತಿಗೆ ನೌಕರರನ್ನು ಕಾಯಂ ಮಾಡುವಂತೆ ಒತ್ತಾಯಿಸಲು ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.

ಏತಕೆ ಈ ರ್‍ಯಾಲಿ ?

 • ಎನ್‌ಪಿಎಸ್‌ ನೌಕರರ ಹಿತಾಸಕ್ತಿಯನ್ನು ರಕ್ಷಿಸುತ್ತಿಲ್ಲ. ಬದಲಾಗಿ ನೌಕರರಿಂದ ಸಂಗ್ರಹಿಸಿದ ವಂತಿಗೆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದರಿಂದ ನಿಖರ ಆದಾಯ ಬರುವ ಸಾಧ್ಯತೆ ಇಲ್ಲ. ಹೀಗಾಗಿ ಎನ್‌ಪಿಎಸ್‌ ಬದಲು ಹಿಂದಿನ ನಿಶ್ಚಿತ ಪಿಂಚಣಿ ಯೋಜನೆಯನ್ನೇ ಪುನರ್‌ ಜಾರಿ ಮಾಡಬೇಕಿದೆ

ರಾಷ್ಟ್ರೀಯ ಪಿಂಚಣಿ ಯೋಜನೆ

ಉದ್ದೇಶ: ಎಲ್ಲಾ ನಾಗರಿಕರಿಗೆ ನಿವೃತ್ತಿ ಆದಾಯವನ್ನು ಒದಗಿಸಲು

 • ಪಿಂಚಣಿ ಸುಧಾರಣೆಗಳನ್ನು ಸ್ಥಾಪಿಸಲು ಮತ್ತು ನಾಗರಿಕರ ನಡುವೆ ನಿವೃತ್ತಿಯ ಉಳಿತಾಯವನ್ನು ಅಭ್ಯಾಸ ಮಾಡಲು .

ಉದ್ದೇಶಿತ ಫಲಾನುಭವಿ

 • ಭಾರತದ ಎಲ್ಲಾ ನಾಗರಿಕರು 18 ಮತ್ತು 60 ವರ್ಷದೊಳಗಿನವರು
 • ಶ್ರೇಣಿ – I ಗಾಗಿ ಸರ್ಕಾರಿ ನೌಕರರು
 • ಎಲ್ಲಾ ನಾಗರಿಕರು ಅಂದರೆ ಖಾಸಗಿ ನೌಕರರು ಮತ್ತು ಅಸಂಘಟಿತ ವಲಯ ಕೆಲಸಗಾರರು.
 • ಅನಿವಾಸಿ ಭಾರತೀಯರು (NRI ಗಳು)

ಪ್ರಮುಖ ಲಕ್ಷಣಗಳು

 • ಪಿಎಫ್ಆರ್ಡಿಎ ನಿರ್ವಹಿಸುತ್ತದೆ
 • ನಿರ್ದಿಷ್ಟ ಕೊಡುಗೆಗಳ ಯೋಜನೆ.
 • 2 ವಿಧಗಳು:

ಶ್ರೇಣಿ -1

 • ಪ್ರತಿ ಚಂದಾದಾರರಿಗೆ ಕಡ್ಡಾಯ ಐಚ್ಛಿಕ.
 • ನಿವೃತ್ತಿ ವಯಸ್ಸಿನ ಮೊದಲು ನೀವು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ

ಶ್ರೇಣಿ II

 • ನೀವು ಮೊದಲು ಟೈರ್ I ಖಾತೆಯನ್ನು ತೆರೆದಿದ್ದರೆ ಮಾತ್ರ ಶ್ರೇಣಿ II ಅನ್ನು ತೆರೆಯಬಹುದು.
 • ನಿವೃತ್ತಿ ವಯಸ್ಸಿನ ಮೊದಲು ನೀವು ಹಣವನ್ನು ಹಿಂಪಡೆಯಲು ಸಾಧ್ಯವಿದೆ .

PRAN ಎಂದರೇನು?

 • ನೀವು ಹೊಸ ಪಿಂಚಣಿ ಯೋಜನೆಗೆ ಚಂದಾದಾರರಾದಾಗ, ನಿಮಗೆ ಒಂದು ಅನನ್ಯವಾದ ಖಾತೆ ಸಂಖ್ಯೆ ನೀಡಲಾಗಿದೆ. “ಖಾಯಂ ನಿವೃತ್ತಿ ಖಾತೆ ಸಂಖ್ಯೆ ( PRAN )” ಎಂದು ಕರೆಯಲಾಗುತ್ತದೆ

ಎನ್ಪಿಎಸ್ ನಿಮ್ಮ ಹೂಡಿಕೆಯ ಮೇಲೆ “ಏಕಪ್ರಕಾರದ ” ಅಥವಾ “ಖಾತರಿಯ” ಹಿಂತಿರುಗನ್ನು ನೀಡುವುದಿಲ್ಲ. ಯಾಕೆ?

 • ಸಾಲ ಅಥವಾ ಇಕ್ವಿಟಿಯಲ್ಲಿ ನಿಮ್ಮ ಹಣವನ್ನು ಎಷ್ಟು ಹೂಡಿಕೆ ಮಾಡಲಾಗಿದೆ ಎಂಬುದನ್ನು ಆಧರಿಸಿ ಇದು ಬದಲಾಗುತ್ತದೆ.
 • ನೀವು ನಿಧಿ ವ್ಯವಸ್ಥಾಪಕರಿಗೆ ಎಷ್ಟು ಸಾಲವನ್ನು / ಇಕ್ವಿಟಿಯನ್ನು ಹೂಡಿಕೆ ಮಾಡಲು ಮಾತ್ರ ಹೇಳಬಹುದು ಆದರೆ ಕಂಪನಿಯು X ಅಥವಾ ಕಂಪೆನಿಯು Y ನಲ್ಲಿ ಹೂಡಿಕೆ ಮಾಡಿದರೆ ನಿಧಿ ನಿರ್ವಾಹಕರಾಗಿರುತ್ತದೆ. ಪ್ರತಿ ನಿಧಿ ವ್ಯವಸ್ಥಾಪಕರಿಗೆ ಕಂಪೆನಿಗಳಿಗೆ ವಿಭಿನ್ನ ಆದ್ಯತೆಗಳಿವೆ.
 • ಆದ್ದರಿಂದ ವಿಭಿನ್ನ NPS ಖಾತೆದಾರರು ತಮ್ಮ ಹೂಡಿಕೆಯಲ್ಲಿ ವಿವಿಧ% ಗಳಿಕೆಯನ್ನು ಗಳಿಸುತ್ತಾರೆ. ಮತ್ತೊಂದೆಡೆ, ಇಪಿಎಫ್ಓ (ನೌಕರರ ಪ್ರಾವಿಡೆಂಟ್ ಫಂಡ್) ಎಲ್ಲಾ ಖಾತೆದಾರರಿಗೆ ಏಕರೂಪದ 5% ಬಡ್ಡಿ ದರವನ್ನು ನೀಡುತ್ತದೆ.

ಡಾ.ವಿಷ್ಣುವರ್ಧನ್‌ ಕಲಾ ದತ್ತಿ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ?2018ನೇ ಸಾಲಿನ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್‌ ಕಲಾ ದತ್ತಿ ಪ್ರಶಸ್ತಿಗೆ ಹಿರಿಯ ಪೋಷಕ ನಟ ರಮೇಶ್‌ ಭಟ್‌ ಅವರನ್ನು ಆಯ್ಕೆ ಮಾಡಲಾಗಿದೆ.

 • ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನುಬಳಿಗಾರ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಸಾಹಿತ್ಯ ಪರಿಷತ್‌ ತಿಳಿಸಿದೆ

ಮೈಲಾರ ಮಹದೇವಪ್ಪ

ಸುದ್ಧಿಯಲ್ಲಿ ಏಕಿದೆ?ಗಾಂಧಿ ಸ್ಮಾರಕ ನಿಧಿ ಸಹಯೋಗದೊಂದಿಗೆ ಕೇಂದ್ರದ ಸಂವಹನ ಇಲಾಖೆ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಮೈಲಾರ ಮಹದೇವಪ್ಪ ಸ್ಮರಣಾರ್ಥ ಹೊರತಂದಿರುವ ಅಂಚೆಚೀಟಿ ಲೋಕಾರ್ಪಣೆ ಮಾಡಲಾಯಿತು.

 • ಮಹದೇವಪ್ಪ ಅಪ್ರತಿಮ ದೇಶಭಕ್ತಿ ಹೊಂದಿದ್ದರು. ಅವರ ತ್ಯಾಗ, ಬಲಿದಾನ ನಮಗೆ ಅನುಕರಣೀಯ.
 • ಗಾಂಧೀಜಿ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಮಹದೇವಪ್ಪ ಪಾಲ್ಗೊಂಡಿದ್ದರು. ಅಂಥ ವ್ಯಕ್ತಿಯನ್ನು ಹಾಗೂ ಅವರ ವಿಚಾರಧಾರೆಗಳನ್ನು ಎಂದಿಗೂ ಮರೆಯಬಾರದು.

ಮೈಲಾರ ಮಹದೇವಪ್ಪನವರ ಬಗ್ಗೆ

 • ಮೈಲಾರ ಮಹದೇವಪ್ಪ ಅವರು 1911 ರ ಜೂನ್ 8 ರಂದು ಹಾವೇರಿಯ ಬೈದಗಿ ತಾಲ್ಲೂಕಿನ ಮೊಟೆಬೆನ್ನೂರ್ ಗ್ರಾಮದಲ್ಲಿ ಜನಿಸಿದರು.
 • ಅಹಿಂಸೆ, ದೇಶಭಕ್ತಿ, ಶುದ್ಧತೆ, ನಿಯಂತ್ರಣ, ದೃಢತೆ ಮತ್ತು ತ್ಯಾಗ. ಮಹಾದೇವಪ್ಪರವರಲ್ಲಿ ಇದ್ದಂತಹ ಗುಣಗಳನ್ನು ಗಾಂಧೀಜಿಯವರು ನೋಡಿದರು ಮತ್ತು 1930 ರಲ್ಲಿ ಮೈಸೂರಿನ ತನ್ನ ಐತಿಹಾಸಿಕ ದಂಡಿ ಮಾರ್ಚ್ ಗಾಗಿ ಅವರನ್ನು ಸಬರಮತಿ ಆಶ್ರಮಕ್ಕೆ ಆಹ್ವಾನಿಸಿದರು. ಗಾಂಧೀಜಿ ಅವರು ವೈಯಕ್ತಿಕವಾಗಿ 78 ಯುವಕರನ್ನು ಕೌಂಟಿಯ ಎಲ್ಲಾ ಭಾಗಗಳಿಂದ ಆಯ್ಕೆ ಮಾಡಿದರು ಮತ್ತು ಅದರಲ್ಲಿ ಮಹಾದೇವಪ್ಪರವರು  ಕರ್ನಾಟಕದ ಪ್ರತಿನಿಧಿ.
 • ಅವರು 18 ವರ್ಷಗಳ ವಯಸ್ಸಿನಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು ಮತ್ತು ಗಾಂಧೀಜಿಯೊಂದಿಗೆ ಜೈಲಿನಲ್ಲಿದ್ದರು.
 • ಹಾವೇರಿ ತಾಲ್ಲೂಕಿನ ಹೋಸರಿಟ್ಟಿ ಗ್ರಾಮದಲ್ಲಿ ಶ್ರೀ ವೀರಭ್ರೆಶ್ವರ ದೇವಸ್ಥಾನದಲ್ಲಿ ಬ್ರಿಟಿಷ್ ಖಜಾನೆಯನ್ನು ಲೂಟಿ ಮಾಡಲು ಅವರ ಗುಂಪು ಪ್ರಯತ್ನಿಸಿದಾಗ ಮೈಲಾರಾ ಮಹಾದೇವನನ್ನು ಕೊಲ್ಲಲಾಯಿತು

19 ಯೋಜನೆಗಳಿಗೆ ಇಸ್ರೊ ಸಿದ್ಧತೆ

ಸುದ್ಧಿಯಲ್ಲಿ ಏಕಿದೆ?ಬಾಹ್ಯಾಕಾಶ ಕ್ಷೇತ್ರದಲ್ಲಿ ಹತ್ತು-ಹಲವು ಸಾಧನೆಗಳನ್ನು ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸೆಪ್ಟೆಂಬರ್‌ನಿಂದ ಮುಂಬರುವ ಮಾರ್ಚ್‌ವರೆಗೆ 19 ಯೋಜನೆಗಳನ್ನು ಸಾಕಾರಗೊಳಿಸಲು ಸಿದ್ಧತೆ ನಡೆಸಿದೆ.

 • ಮಹಾತ್ವಾಕಾಂಕ್ಷೆಯ ಚಂದ್ರಯಾನ –2 ಯೋಜನೆ ಇದರಲ್ಲಿ ಪ್ರಮುಖವಾಗಿ ಸೇರಿದೆ. ”ಸೆಪ್ಟೆಂಬರ್‌ನಿಂದ ಮುಂದಿನ ಏಳು ತಿಂಗಳವರೆಗೆ ಇಸ್ರೊ ಉಪಗ್ರಹಗಳ ಉಡಾವಣೆಯ ಜತೆಗೆ ಅವುಗಳನ್ನು ಹೊತ್ತೊಯ್ಯುವ ರಾಕೆಟ್‌ಗಳ ಕಾರ್ಯಕ್ಷಮತೆ ವೃದ್ಧಿಸುವಲ್ಲಿ ನಿರತವಾಗಲಿದೆ.
 • ಪ್ರತಿ 30 ದಿನಗಳಲ್ಲಿ ಎರಡು ಉಪಗ್ರಹಗಳನ್ನು ಕಕ್ಷೆಗೆ ಹಾರಿಬಿಡಲಾಗುವುದು. ಇದರಲ್ಲಿ ಬ್ರಿಟನ್‌ನ ನೊವೊಸಾರ್‌, ಎಸ್‌1-4 ಹಾಗೂ ದೇಶಿಯ ಉದ್ದೇಶದ ಜಿಸ್ಯಾಟ್‌-29, ಜಿಎಸ್ಯಾಟ್‌-7, ಹೈಸಿಸ್‌, ಜಿಸ್ಯಾಟ್‌-11, ಜಿಸ್ಯಾಟ್‌-31, ಕಾರ್ಟೊಸ್ಯಾಟ್‌-3, ಎನ್‌ಇಎಂಒ -ಎಎಂ, ರಿಸ್ಯಾಟ್‌-2ಬಿ, ರಿಸ್ಯಾಟ್‌- 2ಬಿಆರ್‌1 ಸೇರಿದಂತೆ ಹಲವು ಉಪಗ್ರಹಗಳು ಸೇರಿವೆ,” ಎಂದು ಇಸ್ರೊ ತಿಳಿಸಿದೆ.
 • ಜಿಸ್ಯಾಟ್‌-29 ಉಪಗ್ರಹವನ್ನು ಬಾಹುಬಲಿ ಎಂದೇ ಹೆಸರುಪಡೆದಿರುವ ಜಿಎಸ್‌ಎಲ್‌ವಿ ಎಂಕೆ 3-ಡಿ2 ರಾಕೆಟ್‌ ಹೊತ್ತೊಯ್ಯಲಿದೆ. ಹೈಪರ್‌ಸ್ಪೆಕ್ಟ್ರಲ್‌ ಇಮೇಜಿಂಗ್‌ ಉಪಗ್ರಹ ಹೈಸಿಸ್‌ಅನ್ನು ಪಿಎಸ್‌ಎಲ್‌ವಿ ಸಿ-43 ರಾಕೆಟ್‌ ಹೊತ್ತೊಯ್ಯಲಲಿದೆ.

ಯೋಗಿ ಥಾಲಿ

ಸುದ್ಧಿಯಲ್ಲಿ ಏಕಿದೆ ?ದಕ್ಷಿಣದ ಮೂರು ರಾಜ್ಯಗಳಲ್ಲಿರುವ ಕಡಿಮೆ ಬೆಲೆಗೆ ಆಹಾರ ಒದಗಿಸುವ ಯೋಜನೆ ಇದೀಗ ಉತ್ತರ ಪ್ರದೇಶದಲ್ಲೂ ಜಾರಿಯಾಗಿದೆ.

 • ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ 10ರೂ.ಗೆ ಊಟ ನೀಡುವ ಯೋಜನೆಗೆ ಚಾಲನೆ ಸಿಕ್ಕಿದ್ದು, ಮೇಯರ್‌ ಅಭಿಲಾಷ ಗುಪ್ತಾ ಕ್ಯಾಂಟೀನ್‌ನ್ನು ಉದ್ಘಾಟಿಸಿದ್ದಾರೆ. ಯೋಜನೆಗೆ ಯೋಗಿ ಥಾಲಿ ಎಂದು ಹೆಸರಿಡಲಾಗಿದೆ.

ಉದ್ಧೇಶ

 • ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳಿಸಲಾಗಿದ್ದು, ಬಡ ವರ್ಗಕ್ಕೆ ಈ ಯೋಜನೆಯಿಂದ ಹೆಚ್ಚು ಪ್ರಯೋಜನವಾಗಲಿದೆ
 • ಖಾಲಿ ಹೊಟ್ಟೆಯಲ್ಲಿ ಯಾರೂ ಮಲಗಬಾರದು ಎಂಬ ಉದ್ಧೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ. ಬಡ ಜನರಿಗಾಗಿ ದುಡಿಯುತ್ತಿರುವ ಸಿಎಂ ಯೋಗಿ ಆದಿತ್ಯನಾಥ್‌ ಅವರ ಹೆಸರಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಅಲಹಾಬಾದ್‌ನ ಅಟಾರ್ಸುಯಿಯಾ ಭಾಗದಲ್ಲಿರುವ ಔಟ್‌ಲೆಟ್‌ನಲ್ಲಿ ಕ್ಯಾಂಟೀನ್‌ ಆರಂಭಗೊಳಿಸಲಾಗಿದೆ.
 • ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್‌, ಆಂಧ್ರದಲ್ಲಿ ಅಣ್ಣಾ ಕ್ಯಾಂಟೀನ್‌ ಹಾಗೂ ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್‌ ಮೂಲಕ ಕಡಿಮೆ ಬೆಲೆಯಲ್ಲಿ ಆಹಾರ ಸಿಗುವ ಯೋಜನೆ ಜಾರಿಯಲ್ಲಿದೆ.

ಭಾರತ-ಅಮೆರಿಕ ದ್ವಿಪಕ್ಷೀಯ ಸಭೆ

ಸುದ್ಧಿಯಲ್ಲಿ ಏಕಿದೆ?ಭಾರತ ಹಾಗೂ ಅಮೆರಿಕ ನಡುವಿನ ಉನ್ನತ ಮಟ್ಟದ ಚೊಚ್ಚಲ ದ್ವಿಪಕ್ಷೀಯ ಸಭೆಯಲ್ಲಿ ರ್ಚಚಿಸಬಹುದಾದ 6 ಪ್ರಮುಖ ಅಂಶಗಳನ್ನು ಅಂತಿಮಗೊಳಿಸಲಾಗಿದೆ. ಎರಡೂ ದೇಶಗಳ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ನಡೆಸಿರುವ ಪೂರ್ವಭಾವಿ ಸಭೆಯಲ್ಲಿ ಸೆ.6ರ ಉನ್ನತ ಮಟ್ಟದ ಸಭೆಯ ಕರಡು ಅಂಶಗಳನ್ನು ಅಂತಿಮಗೊಳಿಸಲಾಗಿದೆ.

 • ಭಯೋತ್ಪಾದನೆ ನಿಗ್ರಹ, ಗುಪ್ತಚರ ಮಾಹಿತಿ ಹಂಚಿಕೆ ಹಾಗೂ ಸೈಬರ್ ಭದ್ರತೆ ಸೇರಿ ಇತರ ವಿಚಾರಗಳು ಪಟ್ಟಿಯಲ್ಲಿವೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ, ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ನಡುವೆ ಸೆ.6ರಂದು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
 • ಪ್ರಾಥಮಿಕ ಕರಡು ಪ್ರಕಾರ ದ್ವಿಪಕ್ಷೀಯ ಸಭೆಯಲ್ಲಿ ಅಕ್ರಮ ಆರ್ಥಿಕ ವ್ಯವಹಾರ, ಸೈಬರ್ ಮಾಹಿತಿ, ಮೆಗಾಸಿಟಿ ಯೋಜನೆ, ಎರಡೂ ದೇಶಗಳ ರಾಜ್ಯಗಳ ನಡುವೆ ಮಾಹಿತಿ ಹಂಚಿಕೆ, ಜಾಗತಿಕ ಸರಬರಾಜು ಜಾಲ, ನೌಕಾ ಭದ್ರತೆ, ತಂತ್ರಜ್ಞಾನ ಅಭಿವೃದ್ಧಿ ಸೇರಿ ಇತರ ವಿಚಾರಗಳ ಬಗ್ಗೆ ಪ್ರಮುಖವಾಗಿ ಒಪ್ಪಂದ ಹಾಗೂ ಚರ್ಚೆಗಳು ಆಗಲಿವೆ.
 • ರಾಷ್ಟ್ರೀಯ ಭದ್ರತಾ ವ್ಯವಹಾರಗಳಿಗೆ ಸಂಬಂಧಿಸಿ 2010ರಿಂದಲೂ ಎರಡೂ ದೇಶಗಳ ನಡುವಿನ ಅಧಿಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ.
Related Posts
Pradhan Mantri Ujjwala Yojana scheme yet to see the light in Karnataka
Ten months since the launch of the Centre’s much publicised Pradhan Mantri Ujjwala Yojana (PMUY), thousands of families living below the poverty line (BPL) across the State are still depending ...
READ MORE
Karnataka Current Affairs – KAS-KPSC Exams – 9th – 10th Feb 2018
Karnataka HC gets five more judges The Karnataka High Court will get five new additional judges. The President appointed Dixit Krishna Shripad, Shankar Ganapathi Pandit, Ramakrishna Devdas, Bhotanhosur Mallikarjuna Shyam Prasad and ...
READ MORE
National Current Affairs – UPSC/KAS Exams- 13th February 2019
Retail inflation cools further Topic: Indian Economy In News: According to government data retail inflation declined marginally to 2.05% in January over the previous month on continued decline in food prices, including ...
READ MORE
Karnataka Current Affairs – KAS/KPSC Exams- 28th September 2018
Spurt in H1N1 cases in September There has been a sudden increase in the number of H1N1 cases in Karnataka in the last 27 days with at least 149 persons testing ...
READ MORE
Centre launches Gold schemes
The centre launched the following gold schemes recently: Gold Monetisation Scheme (GMS) Under the GMS, resident Indians can deposit gold at collection and purity testing centres certified by the Bureau of Indian ...
READ MORE
National Current Affairs – UPSC/KAS Exams- 31st January 2019
DIPP rechristened to include internal trade Topic: Economy IN NEWS: The government has notified changing the name of the Department of Industrial Policy & Promotion (DIPP) to the Department for Promotion of ...
READ MORE
Technology Initiatives for Coffee Stakeholders
Why in news? The government has launched Coffee Connect – India coffee field force app and Coffee Krishi Tharanga – digital mobile extension services for coffee stakeholders. About Coffee Connect The mobile app ...
READ MORE
“30th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ವಾಸಿಸುವವನೇ ನೆಲದೊಡೆಯ’ ಕಾಯ್ದೆ ಸುದ್ದಿಯಲ್ಲಿ ಏಕಿದೆ?  ಸಮಾಜದ ಕೆಳಸ್ತರದ ಲಕ್ಷಾಂತರ ಕುಟುಂಬಗಳಿಗೆ ವಾಸದ ಸ್ಥಳದ ಮೇಲೆ ಮಾಲೀಕತ್ವದ ಹಕ್ಕು ಒದಗಿಸುವ 'ವಾಸಿಸುವವನೇ ನೆಲದೊಡೆಯ' ಘೋಷಣೆಯೊಂದಿಗೆ ರಾಜ್ಯ ಸರಕಾರ ರೂಪಿಸಿದ್ದ ಶಾಸನವು ಅನುಷ್ಠಾನ ಹಂತದಲ್ಲಿ ವೈಫಲ್ಯ ಕಂಡಿದೆ. ಈ ಕಾನೂನು ಜಾರಿಯಾದ ಬಳಿಕ ಸುಮಾರು 5,300 ಜನವಸತಿ ಪ್ರದೇಶಗಳಷ್ಟೇ ...
READ MORE
Waste Management: A goods train to transport city’s waste
Unable to enforce segregation of waste at source or run processing plants without citizens protesting, the city’s planners have hit upon a novel solution. They are planning to load the garbage ...
READ MORE
Weather-based farm advisory system in Karnataka
Weather-based farm advisory system to reach taluks now The country’s flagship programme of the weather forecast-based agricultural advisory system is set to become more focussed by moving to the taluk level ...
READ MORE
Pradhan Mantri Ujjwala Yojana scheme yet to see
Karnataka Current Affairs – KAS-KPSC Exams – 9th
National Current Affairs – UPSC/KAS Exams- 13th February
Karnataka Current Affairs – KAS/KPSC Exams- 28th September
Centre launches Gold schemes
National Current Affairs – UPSC/KAS Exams- 31st January
Technology Initiatives for Coffee Stakeholders
“30th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Waste Management: A goods train to transport city’s
Weather-based farm advisory system in Karnataka

Leave a Reply

Your email address will not be published. Required fields are marked *