“10th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಚೈಲ್ಡ್‌ ಲಾಕ್‌ ವ್ಯವಸ್ಥೆ 

 • ಸುದ್ದಿಯಲ್ಲಿ ಏಕಿದೆ?  ಕ್ಯಾಬ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಾಹನಗಳಲ್ಲಿ ನಡೆಯುವ ಅಂತಹ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಚೈಲ್ಡ್‌ ಲಾಕ್‌ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ.
 • ಆ ಕುರಿತು ರಾಜ್ಯ ಸರಕಾರವೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗದು. ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಅನುಮತಿ ಪಡೆಯಬೇಕಾಗಿದೆ. ಅದಕ್ಕಾಗಿ ಸಾರಿಗೆ ಇಲಾಖೆ ಕಡತವನ್ನು ಸಿದ್ಧಪಡಿಸಿ ಈಗಾಗಲೇ ರಾಜ್ಯ ಸರಕಾರಕ್ಕೆ ಕಳುಹಿಸಿಕೊಟ್ಟಿದೆ.
 • ಹಾಲಿ ಕ್ಯಾಬ್‌ಗಳಲ್ಲಿರುವ ಚೈಲ್ಡ್‌ ಸೇಫ್ಟಿ ಲಾಕ್‌ ವ್ಯವಸ್ಥೆ ರದ್ದುಗೊಳಿಸಲು ಸಾರಿಗೆ ಇಲಾಖೆ ಅಥವಾ ಮೋಟಾರು ವಾಹನ ನಿರೀಕ್ಷಕರು ನೇರ ಕ್ರಮ ಕೈಗೊಳ್ಳಲಾಗದು. ಕೇಂದ್ರದಿಂದ ಒಪ್ಪಿಗೆ ಪಡೆದ ನಂತರ, ಟ್ಯಾಕ್ಸಿ ಮತ್ತು ಕ್ಯಾಬ್‌ಗಳ ಪರವಾನಗಿ ನವೀಕರಣ ಸಂದರ್ಭದಲ್ಲಿ ಆದನ್ನು ತೆಗೆದು ಹಾಕಬಹುದು.

ಏಕೆ ಈ ನಿರ್ಧಾರ?

 • ‘‘ಬೆಂಗಳೂರು ನಗರದಲ್ಲಿ ಕ್ಯಾಬ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಬಹುತೇಕ ಪ್ರಕರಣಗಳಲ್ಲಿ ಚಾಲಕರು ಚೈಲ್ಡ್‌ ಲಾಕ್‌ ವ್ಯವಸ್ಥೆ ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡು ಬಂದಿರುವ ಹಿನ್ನೆಲೆ ಅದನ್ನು ತೆಗೆದುಹಾಕಲು ನಿಯಮದಲ್ಲಿ ಅವಕಾಶ ಕಲ್ಪಿಸುವಂತೆ ಸರಕಾರಕ್ಕೆ ಸೂಚಿಸಬೇಕಾಗಿದೆ ’’ಎಂಬುದು ಹೈಕೋರ್ಟ್‌ ಮೊರೆ ಹೋಗಿರುವ ಅರ್ಜಿದಾರರ ವಕೀಲೆ ಲಕ್ಷ್ಮೇ ಅಯ್ಯಂಗಾರ್‌ ವಾದವಾಗಿದೆ.

ದುರುಪಯೋಗ

 • ‘‘ಬಹುತೇಕ ಮಹಿಳಾ ಪ್ರಯಾಣಿಕರು ಒಬ್ಬಂಟಿಯಾಗಿರುತ್ತಾರೆ. ಕ್ಯಾಬ್‌ ಚಾಲಕರು ಚೈಲ್ಡ್‌ ಲಾಕ್‌ ವ್ಯವಸ್ಥೆ ಬಳಸಿ ಮಹಿಳೆಯರು ಕ್ಯಾಬ್‌ನಲ್ಲಿ ಇಳಿಯಬೇಕಾದ ಸ್ಥಳದಲ್ಲಿ ಇಳಿಸದೆ ಅವರನ್ನು ಬೇರೆಡೆ ಕರೆದೊಯ್ಯುವುದು, ದೌರ್ಜನ್ಯ ಎಸಗುವ ಪ್ರಯತ್ನ ನಡೆಯುತ್ತದೆ. ಅಂತಹ ಸಂದರ್ಭಗಳಲ್ಲಿ ಚೈಲ್ಡ್‌ ಲಾಕ್‌ ಮಾಡಿದ್ದರೆ, ಮಹಿಳೆಯರು ಕ್ಯಾಬ್‌ನಿಂದ ಕೆಳಗಿಳಿಯಲು ಅವಕಾಶವಿಲ್ಲ.
 • ಹಾಗಾಗಿ ಕರ್ನಾಟಕ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್‌ ನಿಯಮ 2016ರಲ್ಲಿ ಕೆಲವು ಸ್ವಿಚ್‌ ಮತ್ತು ಬಟನ್‌ ವ್ಯವಸ್ಥೆಗೆ ಅವಕಾಶವಿದೆ. ಅದನ್ನು ತಿದ್ದುಪಡಿ ಮಾಡಿ, ಕ್ಯಾಬ್‌ಗಳಲ್ಲಿರುವ ಚೈಲ್ಡ್‌ ಲಾಕ್‌ ವ್ಯವಸ್ಥೆಯನ್ನು ಕಾಯಂ ಆಗಿ ನಿಷ್ಕ್ರಿಯಗೊಳಿಸಲು ಅವಕಾಶ ನೀಡಬೇಕು

ಕೇಂದ್ರ ಸರಕಾರ ಸೂಚನೆ

 • ಈ ಮಧ್ಯೆ, ದೆಹಲಿ ಮತ್ತು ಇತರೆ ನಗರಗಳಲ್ಲೂ ಸಹ ಟ್ಯಾಕ್ಸಿ ಮತ್ತಿತರ ವಾಣಿಜ್ಯ ವಾಹನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ಮೋಟಾರು ವಾಹನ ನಿಯಮ ತಾಂತ್ರಿಕ ಸಲಹಾ ಸಮಿತಿ (ಸಿಎಂವಿಆರ್‌-ಟಿಎಸ್‌ಸಿ) ಈಗಾಗಲೇ ಕಾರು ತಯಾರಿಕಾ ಕಂಪನಿಗಳಿಗೆ 2019ರಿಂದ ಚೈಲ್ಡ್‌ ಲಾಕ್‌ ವ್ಯವಸ್ಥೆ ಇಲ್ಲದಂತಹ ವಾಹನಗಳನ್ನು ತಯಾರಿಸಬೇಕೆಂದು ಸೂಚಿಸಿದೆ.

ಏನಿದು ಚೈಲ್ಡ್‌ ಲಾಕ್‌ ವ್ಯವಸ್ಥೆ?

 • ಬಹುತೇಕ ಎಲ್ಲ ಕಾರುಗಳ ಹಿಂದಿನ ಬಾಗಿಲು ಲಾಕ್‌ ಆಗುವ ಜಾಗದಲ್ಲಿ ಒಂದು ಸಣ್ಣ ಬಟನ್‌ ಇರುತ್ತದೆ. ಅದನ್ನ ಲಾಕ್‌ ಮಾಡಿದರೆ ಹಿಂದಿನ ಸೀಟಿನಲ್ಲಿ ಕುಳಿತವರು ಡೋರ್‌ ಓಪನ್‌ ಮಾಡಲು ಆಗುವುದಿಲ್ಲ. ಕಾರಿನ ಹಿಂಭಾಗದಲ್ಲಿ ಕುಳಿತ ಮಕ್ಕಳು ಅಥವಾ ವೃದ್ಧರು ಇದ್ದಕ್ಕಿಂದ್ದಂತೆ ಬಾಗಿಲು ತೆಗೆಯುವುದನ್ನು ತಪ್ಪಿಸಲು ಚೈಲ್ಡ್‌ ಲಾಕ್‌ ಮಾಡಲಾಗುತ್ತದೆ. ಅದರೆ ಇತ್ತೀಚಿನ ದಿನಗಳಲ್ಲಿ ಕ್ಯಾಬ್‌ಗಳಲ್ಲಿ ಚಾಲಕರು, ಆ ಲಾಕ್‌ ವ್ಯವಸ್ಥೆಯನ್ನು ಆನ್‌ ಮಾಡಿಟ್ಟು ಮಹಿಳಾ ಪ್ರಯಾಣಿಕರನ್ನು ಇಳಿಸದೆ ಬೇರೆಲ್ಲೋ ಕರೆದೊಯ್ಯುವುದು, ಇಲ್ಲವೇ ದೌರ್ಜನ್ಯ ಎಸಗುವುದು ಹೆಚ್ಚಾಗುತ್ತಿದೆ

ಬಿಳಿರಾಗಿ

 • ಸುದ್ದಿಯಲ್ಲಿ ಏಕಿದೆ? ನಾಡಿನ ಕೃಷಿ ವಿಜ್ಞಾನಿಗಳ ತಂಡ ಬಿಳಿ ರಾಗಿಯನ್ನು ಸಂಶೋಧಿಸುವ ಮೂಲಕ ಕೃಷಿ ವಲಯದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ!

ಯಾರು ಸಂಶೋದಿಸಿದರು ?

 • ಈ ಬಿಳಿ ರಾಗಿಯ ತಳಿಯನ್ನು ಸಂಶೋಧಿಸಿ ಪರಿಚಯಿಸಿದ ಕೀರ್ತಿ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಪ್ರಾದೇಶೀಕ ಸಂಸ್ಥೆ ಮಂಡ್ಯದ ವಿ.ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಗೆ ಸಲ್ಲುತ್ತದೆ.

ಹಿನ್ನಲೆ

 • ಭಾರತದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ 2500 ರಾಗಿ ತಳಿಗಳ ಜತೆ ದಕ್ಷಿಣ ಆಫ್ರಿಕಾ, ಕಿನ್ಯಾ, ಜಿಂಬಾಬ್ವೆ, ಉಗಾಂಡ, ಸೇರಿ ಇನ್ನಿತರ ದೇಶಗಳಿಂದ ರಾಗಿ ತಳಿಗಳನ್ನು ಸಂಕರಗೊಳಿಸಿಲು ಯತ್ನಿಸಿದ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ತಂಡಕ್ಕೆ, ದಕ್ಷಿಣ ಆಫ್ರಿಕಾದ ರಾಗಿ ತಳಿಯ ಜತೆ ಕರ್ನಾಟಕದ ರಾಗಿ ತಳಿಯೊಂದನ್ನು ಸಂಕರಗೊಳಿಸಿದಾಗ ಈ ಬಿಳಿ ರಾಗಿತಳಿ ಸೃಷ್ಟಿಯಾಗಿದೆ.
 • ಈ ತಳಿಯನ್ನು ಕರ್ನಾಟಕ-ಮಂಡ್ಯ ಬಿಳಿರಾಗಿ (ಕೆ.ಎಂ.ಆರ್‌.340)’ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಳಿಸಲಾಗಿರುವ ಈ ತಳಿಯನ್ನು ಪ್ರಯೋಗಿಕವಾಗಿ ಬೆಳೆಯಲು ಕನಕಪುರ ಭಾಗದ ಸುಮಾರು 50 ರೈತರಿಗೆ ಸ್ವಯಂಸೇವಾ ಸಂಸ್ಥೆಯೊಂದು ವಿತರಿಸಿದೆ.

ವೈಶಿಷ್ಟ್ಯ:

 • ದೇಶಿ ರಾಗಿ ತಳಿಗಳಲ್ಲಿ ಕೆಂಪು ಅಥವಾ ಕಪ್ಪು ತಳಿಗಳು ಮಾತ್ರ ಚಾಲ್ತಿಯಲ್ಲಿವೆ. ಆದರೆ ಬಿಳಿ ರಾಗಿ ತಳಿ ಇವುಗಳಿಗಿಂತ ಭಿನ್ನ. ನಮ್ಮಲ್ಲಿನ ಅನೇಕ ರಾಗಿ ತಳಿಗಳ ಪೋಷಕಾಂಶಗಳ ಪೈಕಿ ಶೇ.2ರಷ್ಟು ಅಧಿಕ ಪೋಷಕಾಂಶಗಳು ಈ ಬಿಳಿ ರಾಗಿಯಲ್ಲಿವೆ.
 • ಅಕ್ಕಿಯಲ್ಲಿ 70 ಗ್ರಾಂ ಕ್ಯಾಲ್ಸಿಯಂ ಇದ್ದರೆ ಬಿಳಿ ರಾಗಿಯಲ್ಲಿ 380 ರಿಂ 390 ಗ್ರಾಂ ಕ್ಯಾಲ್ಸಿಯಂ ಇದೆ. ಇತರ ಆಹಾರದಲ್ಲಿ 5 ನಾರಿನ ಅಂಶ ಇದ್ದರೆ, ಈ ರಾಗಿಯಲ್ಲಿ 10 ರಿಂದ 12 ಗ್ರಾಂನಷ್ಟು ನಾರಿನ ಅಂಶವಿದೆ. ಕಬ್ಬಿಣ, ಪ್ರೋಟೀನ್‌ ಇತರ ಆಹಾರಕ್ಕಿಂತ ಅಧಿಕ ಪ್ರಮಾಣದಲ್ಲಿದೆ
 • 20-30 ವಿಷನ್‌: ದೇಶಕ್ಕೆ ಯಾವುದೇ ಆಹಾರದ ಕೊರತೆ ಎದುರಾಗದಂತೆ ಅಗತ್ಯ ಸೌಲಭ್ಯಗಳನ್ನು ಸಿದ್ಧ ಮಾಡಲು 20-30 ವಿಷನ್‌ನಡಿ ಪ್ರಯೋಗಗಳು ನಡೆಯುತ್ತಿವೆ. 2030ರ ವೇಳೆಗೆ ಅಗತ್ಯವಾದ ಎಲ್ಲಾ ಆಹಾರ ಪದಾರ್ಥಗಳನ್ನು ದೇಶಿಯವಾಗಿಯೇ ಉತ್ಪಾದಿಸಲು ಸ್ಥಳೀಯವಾಗಿ ಬೆಳೆಯಬಲ್ಲ ಪೂರಕ ತಳಿಗಳನ್ನು ಶೋಧಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಬಿಳಿ ರಾಗಿ ತಳಿಯನ್ನು ಆರ್ಥಿಕ ಬೆಳೆಯನ್ನಾಗಿಸಿಕೊಳ್ಳಬಹುದು ಎಂಬುದು ಮಂಡ್ಯ ವಲಯಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಅಭಿಮತ.

ಭಾರತೀಯ ಭಾಷೆಗಳ ಅಕಾಡೆಮಿ

 • ಸುದ್ದಿಯಲ್ಲಿ ಏಕಿದೆ? ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕೆ ಆಪ್‌ ಸರಕಾರವು ಕನ್ನಡವೂ ಸೇರಿದಂತೆ 15 ಭಾರತೀಯ ಭಾಷೆಗಳ ಅಕಾಡೆಮಿಗಳ ಸ್ಥಾಪನೆಗೆ ಮುಂದಾಗಿದೆ.

ಕನ್ನಡ, ಬಂಗಾಳಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಅಸ್ಸಾಮಿ, ಕಾಶ್ಮೀರಿ, ಮಾರವಾಡಿ, ಹರಿಯಾಣವಿ ಸೇರಿ 15 ಭಾಷೆಗಳ ಅಕಾಡೆಮಿ ಆರಂಭಕ್ಕೆ ದಿಲ್ಲಿ ಸಚಿವ ಸಂಪುಟ ರ ಒಪ್ಪಿಗೆ ನೀಡಿದೆ.

 • ”ದೇಶದ ನಾನಾ ಭಾಗಗಳಿಂದ ಜನರು ಕೆಲಸಕ್ಕಾಗಿ ದಿಲ್ಲಿಯಲ್ಲಿ ವಾಸವಾಗಿದ್ದಾರೆ. ಈ ವೈವಿಧ್ಯತೆಯಿಂದಾಗಿಯೇ ದಿಲ್ಲಿ ಕಾಸ್ಮೊಪಾಲಿಟಿನ್‌ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ. ಹಾಗಾಗಿ ಪ್ರಾದೇಶಿಕ ಭಾಷೆಗಳ ಉತ್ತೇಜನ ಅಗತ್ಯ

ರಾಜ್ಯಸಭಾ ಉಪಸಭಾಪತಿ

 • ಸುದ್ದಿಯಲ್ಲಿ ಏಕಿದೆ? ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಹರಿವಂಶ ನಾರಾಯಣ್‌ ಸಿಂಗ್‌ ಆಯ್ಕೆಯಾಗಿದ್ದಾರೆ
 • 244 ಸದಸ್ಯ ಬಲವನ್ನು ಹೊಂದಿರುವ ರಾಜ್ಯಸಭೆಯಲ್ಲಿ 123 ಮ್ಯಾಜಿಕ್‌ ನಂಬರ್‌ ಆಗಿತ್ತು. ಆದರೆ, ಕೆಲ ಪಕ್ಷಗಳು ಚುನಾವಣೆಯಿಂದಲೇ ದೂರ ಉಳಿದಿದ್ದರಿಂದಲೂ ಉಪಸಭಾಪತಿ ಹುದ್ದೆಗೇರಲು 119 ಸಂಸದರ ಬೆಂಬಲ ಅಗತ್ಯವಿತ್ತು.

ರಾಜ್ಯಸಭೆ ಉಪಸಭಾಪತಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

 • ಸಂವಿಧಾನದ 89 ನೇ ಅಧಿನಿಯಮದ ಅಡಿಯಲ್ಲಿ ರಚಿಸಲಾದ ಸಾಂವಿಧಾನಿಕ ಸ್ಥಾನವಾಗಿದ್ದು, ಆ ಸ್ಥಾನವು ಖಾಲಿಯಾಗಿರುವುದರಿಂದ ರಾಜ್ಯಸಭೆಯು ಅದರ ಸಂಸದರಲ್ಲಿಒಬ್ಬರನ್ನು ಉಪ ಚೇರ್ಮನ್ ಆಗಿ ಆಯ್ಕೆ ಮಾಡಬಹುದು
 • ಕಚೇರಿಯಿಂದ ರಾಜೀನಾಮೆ ಅಥವಾ ತೆಗೆದುಹಾಕುವ ಮೂಲಕ ಅಥವಾ ರಾಜ್ಯಸಭೆಯ ಸದಸ್ಯರ ಅವಧಿಯು ಮುಗಿದಾಗ ಈ ಉಪಾಧ್ಯಕ್ಷರ ಹುದ್ದೆ ಖಾಲಿಯಾಗಿರುತ್ತದೆ.
 • ರಾಜ್ಯಸಭೆಯ ಕೊನೆಯ ಉಪ ಅಧ್ಯಕ್ಷರಾಗಿದ್ದ ಪ್ರೊಫೆಸರ್ ಪಿ.ಜೆ.ಕುರಿಯನ್ ಅವರು ಜುಲೈ 1 ರಂದು ರಾಜ್ಯಸಭೆಯ ಅಧಿಕಾರಾವಧಿ ಅಂತ್ಯಗೊಂಡಿತು .

ವಿಧಾನ

 • ಉಪಸಭಾಪತಿ ಅನ್ನು ಚುನಾಯಿಸುವ ಪ್ರಕ್ರಿಯೆಯು ನೇರವಾಗಿರುತ್ತದೆ. ಯಾವುದೇ ಸಾಂವಿಧಾನಿಕ ಸ್ಥಾನಕ್ಕೆ ಸಹೋದ್ಯೋಗಿಯ ಹೆಸರನ್ನು ಪ್ರಸ್ತಾಪಿಸಲು ಯಾವುದೇ ರಾಜ್ಯಸಭೆ ಸಂಸದರು ಹೆಸರು ಸಲ್ಲಿಸಬಹುದು. ಈ ಪ್ರಕ್ರಿಯೆಗೆ ಮತೋರ್ವ ಸಂಸದ ಬೆಂಬಲಿಸಬೇಕು
 • ಈ ಹೆಸರು ಸೂಚಿಸುವ ಪ್ರಕ್ರಿಯೆ ಪ್ರಾರಂಭಿಸುವ ಸದಸ್ಯರು ತಮ್ಮ ಅಭ್ಯರ್ಥಿಯ ಸಹಿಯೊಂದಿಗೆ ಸಂಸತ್ ಸದಸ್ಯರು ತಮ್ಮ ಹೆಸರನ್ನು / ಅವರು ಚುನಾಯಿತರಾಗಿದ್ದರೆ ಉಪ ಚೇರ್ಮರ್ ಆಗಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ ಎಂದು ಅವರು ಹೇಳುವ ಪ್ರಸ್ತಾವನೆಯನ್ನು ಸಲ್ಲಿಸಬೇಕು.
 • ಪ್ರತಿಯೊಂದು ಸಂಸದನಿಗೂ ಈ ಪ್ರಕ್ರಿಯೆ ನಡೆಸಲು  ಅಥವಾ ಎರಡನೆಯವರಾಗಿ ಬೆಂಬಲಿಸಲು ಕೇವಲ ಒಂದು ಅವಕಾಶವಿರುತ್ತದೆ .
 • ಒಂದಕ್ಕಿಂತ ಹೆಚ್ಚು ಸಂಸದರ ಹೆಸರುಗಳನ್ನು ಪ್ರಸ್ತಾಪಿಸುವ ಚಲನೆಗಳಿದ್ದಲ್ಲಿ, ಯಾರು ಹೆಚ್ಚಿನವರು ಉಪ ಅಧ್ಯಕ್ಷರನ್ನಾಗಿ ಆಯ್ಕೆಯಾಗುತ್ತಾರೆಂದು ಹೌಸ್ ನಿರ್ಧರಿಸುತ್ತದೆ. ಆದರೆ ರಾಜಕೀಯ ಪಕ್ಷಗಳು ಒಮ್ಮತದ ಅಭ್ಯರ್ಥಿಗೆ ಆಗಮಿಸಿದರೆ, ಆ ಸಂಸದರನ್ನು ಉಪ ಚೇರ್ ಆಗಿ ಏಕಾಂಗಿಯಾಗಿ ಆಯ್ಕೆ ಮಾಡಲಾಗುತ್ತದೆ.

ಹಿನ್ನಲೆ

 • 1952 ರಿಂದಲೂ, ರಾಜ್ಯ ಸಭೆಯಾ ಉಪ ಅಧ್ಯಕ್ಷ ಸ್ಥಾನಕ್ಕೆ 19 ಚುನಾವಣೆಗಳು ನಡೆದಿವೆ. ಈ ಸಂದರ್ಭಗಳಲ್ಲಿ 14  ಚುನಾವಣೆಯಲ್ಲಿ ಯಾವುದೇ ಸ್ಪರ್ಧೆ ಇರಲಿಲ್ಲ. 1969 ಮೊದಲ ಬಾರಿಗೆ ಡೆಪ್ಯುಟಿ ಚೇರ್ ಸ್ಥಾನಕ್ಕೆ ಇಬ್ಬರು ಸಂಸದರು ಸ್ಪರ್ಧೆಯಲ್ಲಿದ್ದರು
Related Posts
National Current Affairs – UPSC/KAS – 2nd November 2018
Veer Surendra Sai Airport, Jharsuguda Topic: Modern Indian History IN NEWS: The Union Cabinet chaired by Prime Minister Shri Narendra Modi has approved renaming of Jharsuguda Airport, Odisha as “Veer Surendra Sai ...
READ MORE
Karnatka Current Afffairs – KAS / KPSC Exams – 10th June 2017
100 to be relaunched with response time of 6 seconds The police control room number ‘100’ is being relaunched under a new name ‘Namma-100’ with a promise that calls would be ...
READ MORE
“8th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಭಾರತ್‌ ನೆಟ್ ಯೋಜನೆ  ಸುದ್ದಿಯಲ್ಲಿ ಏಕಿದೆ? ಭಾರತ್‌ ನೆಟ್ ಯೋಜನೆ ಅಡಿ ದೇಶದ 2.3 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ 5 ಲಕ್ಷ ವೈಫೈ ಹಾಟ್‌ಸ್ಪಾಟ್‌ಗಳ ಅಳವಡಿಕೆಗೆ ದೂರಸಂಪರ್ಕ ಸಚಿವಾಲಯವು ಟೆಂಡರ್ ಕರೆದಿದೆ. ಒಂದು ವೈಫೈಗೆ ₹ 1.5 ಲಕ್ಷ ಮೊತ್ತ ನಿಗದಿ ಮಾಡಲಾಗಿದೆ. 1,000 ...
READ MORE
9th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಖಾಸಗಿ ಶಾಲೆಯಲ್ಲಿ ಕನ್ನಡ: ವರದಿಗೆ ಸೂಚನೆ ಐಸಿಎಸ್‌ಇ, ಸಿಬಿಎಸ್‌ಇ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಬೋಧನೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೊಮ್ಮೆ ಸುತ್ತೋಲೆ ಹೊರಡಿಸಿದೆ. ಕನ್ನಡ ...
READ MORE
National & International Current Affairs – UPSC/KAS Exams – 24th & 25th June 2018
Swachh ranking The Union Ministry of Housing and Urban Affairs released the Swachh Survekshan 2018 ranking for clean cities featuring 485 cities across the country on Saturday and four cities from ...
READ MORE
National Current Affairs – UPSC/KAS Exams – 15th November 2018
Govt to issue Rs 75 coin to mark 75th anniversary of Tricolour hoisting by Netaji Subhash Chandra Bose In News:The Ministry of Finance has issued a notification regarding the release of ...
READ MORE
Insufficient women in police force – High Court
The number of women in the State police force is not enough to deal with crimes against women, who constitute about 50% of the total population, the Karnataka High Court ...
READ MORE
After Jallikattu & Kambala, next demand for lifting ban on Hori habba
The massive campaign for Kallikattu in Tamil Nadu and a similar campaign building up for kambala in Karnataka seem to have opened a Pandora’s box. Now, there is demand from people ...
READ MORE
Karnataka State Update – KAS / KPSC Exams – 28th Match 2017
SC orders Karnataka to decide Shakadri's plea in 6 weeks The Supreme Court on 27th March directed the Karnataka government to decide within six weeks several representations made by the religious head ...
READ MORE
Karnataka Current Affairs – KAS/KPSC Exams – 24th Oct 2017
Govt. starts process to roll out Smart City plan After finally making it to the list of ‘Smart Cities’, the process to make Bengaluru ‘smart’ has begun, with the State government ...
READ MORE
National Current Affairs – UPSC/KAS – 2nd November
Karnatka Current Afffairs – KAS / KPSC Exams
“8th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
9th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National & International Current Affairs – UPSC/KAS Exams
National Current Affairs – UPSC/KAS Exams – 15th
Insufficient women in police force – High Court
After Jallikattu & Kambala, next demand for lifting
Karnataka State Update – KAS / KPSC Exams
Karnataka Current Affairs – KAS/KPSC Exams – 24th

Leave a Reply

Your email address will not be published. Required fields are marked *