“1st ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ವಾತ್ಸಲ್ಯ ವಾಣಿ

ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು, ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು ಹಾಗೂ ಕಾಲ ಕಾಲಕ್ಕೆ ಗರ್ಭಿಣಿಯರಿಗೆ ದೂರವಾಣಿಯಲ್ಲಿ ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರಕಾರ ‘ವಾತ್ಸಲ್ಯ ವಾಣಿ- 104’ ಯೋಜನೆ ಜಾರಿಗೆ ತಂದಿತು. ಇದು ಮೊದಲ ಹಂತದಲ್ಲಿ ಹತ್ತು ಜಿಲ್ಲೆಗಳಿಗೆ ಸೀಮಿತವಾಗಿತ್ತು. ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸುವುದಾಗಿ ಸರಕಾರ ಘೋಷಿಸಿತ್ತು.

 • ಗರ್ಭಿಣಿ ಮಹಿಳೆಯರ ಆಶಾಕಿರಣ: ಗರ್ಭಿಣಿ ಮಹಿಳೆಯ ಆರೈಕೆ ಮಾಹಿತಿಯ ಜತೆಗೆ ಪೌಷ್ಟಿಕ ಆಹಾರ ಹಾಗೂ ಆರೋಗ್ಯದ ಮಾಹಿತಿ, ಸರಕಾರದ ನಾನಾ ಆರೋಗ್ಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡುವುದು, ಸಂಕಷ್ಟದಲ್ಲಿರುವ ಗರ್ಭಿಣಿಯರು, ಕಡಿಮೆ ತೂಕವುಳ್ಳ ಮಕ್ಕಳನ್ನು ಗುರುತಿಸುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿದೆ.

ಹೇಗೆ ಕೆಲಸ ಮಾಡುತ್ತದೆ?

 • ಗರ್ಭಿಣಿಯರು ಸರಕಾರಿ ಅಥವಾ ಯಾವುದೇ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಾಗ ಅಲ್ಲಿ ನಮೂದಾಗುವ ಅವರ ದೂರವಾಣಿ ಸಂಖ್ಯೆಯ ಮೂಲಕ ವಾತ್ಸಲ್ಯವಾಣಿಗೆ ಮಾಹಿತಿ ಕೊಡಲಾಗುತ್ತದೆ.
 • ಗರ್ಭಿಣಿಯಾಗಿ 6 ತಿಂಗಳೊಳಗೆ ಎರಡು ಬಾರಿ ಹಾಗೂ ಗರ್ಭಿಣಿಯಾದ ಬಳಿಕ ಎರಡು ಬಾರಿ ಸಂಬಂಧಪಟ್ಟ ಗರ್ಭಿಣಿಯರಿಗೆ ಕರೆ ಮಾಡಿ ಅವರಿಗೆ ಮಾಹಿತಿ ಜತೆಯಲ್ಲಿ ಜಾಗೃತಿ ವಿಚಾರಗಳನ್ನು ಹೇಳಲು ಟೋಲ್‌ ಫ್ರಿ ಸಂಖ್ಯೆಯನ್ನು ಆರೋಗ್ಯ ಇಲಾಖೆಯಲ್ಲಿಯೇ ನೀಡಲಾಗುತ್ತದೆ.
 • ಹಾವೇರಿ, ಹಾಸನ, ಬೀದರ್‌, ಗದಗ, ಕೊಡಗು, ಧಾರವಾಡ, ಬಾಗಲಕೋಟೆ, ಬಿಜಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಹೀಗೆ 10 ಜಿಲ್ಲೆಗಳಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಯಾಗಿದೆ.
 • 2015ರಿಂದ 2018ರ ವರೆಗೆ ಸರಿಸುಮಾರು 18,300ಕ್ಕಿಂತ ಅಧಿಕ ಶಿಶು ಮೃತಪಟ್ಟಿರುವುದು ದಾಖಲಾಗಿದೆ. ಅದಕ್ಕಾಗಿ ತಾಯಿ-ಮಗುವಿನ ಟ್ರ್ಯಾಕಿಂಗ್‌ ಸಿಸ್ಟಂ(ಮದರ್‌ ಚೈಲ್ಡ್‌ ಟ್ರ್ಯಾಕಿಂಗ್‌ ಸಿಸ್ಟಂ) ಬಳಸಿಕೊಳ್ಳಲಾಗುತ್ತಿದೆ.

ಕರ್ನಾಟಕ ಜೀವರಕ್ಷಕರ ಕಾನೂನು ರಕ್ಷಣಾ ಮಸೂದೆ

ಸುದ್ಧಿಯಲ್ಲಿ ಏಕಿದೆ ?ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವಾಗುವ ರಾಜ್ಯದ ಜೀವರಕ್ಷಕರಿಗಿನ್ನು ಕಾನೂನಿನ ರಕ್ಷಣಾ ಕವಚ ಸಿಗಲಿದೆ.

 • ರಸ್ತೆ ಬದಿ ನರಳಾಡುತ್ತ ಸಾವು, ಬದುಕಿನ ನಡುವೆ ಹೋರಾಡುವ ಗಾಯಾಳುಗಳಿಗೆ ನೆರವು ನೀಡುವವರಿಗೆ ಕೋರ್ಟ್, ಕಚೇರಿ, ಪೊಲೀಸ್ ಠಾಣೆ ಅಲೆದಾಟದ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ರೂಪಿಸಲಾ ಗಿರುವ ಕರ್ನಾಟಕ ಜೀವರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅಂಕಿತ ಹಾಕಿದ್ದಾರೆ.
 • ಆ ಮೂಲಕ ಜೀವರಕ್ಷಕರಿಗೆ ಕಾನೂನು ರಕ್ಷಣೆ ಒದಗಿಸಿದ ದೇಶದ ಮೊದಲ ರಾಜ್ಯ ಎಂಬ ಹಿರಿಮೆ ರಾಜ್ಯದ ಮುಡಿಗೇರಿದೆ.

ಕೇಂದ್ರದ ಕಾಯ್ದೆಯಿಲ್ಲ

 • ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವವರಿಗೆ ರಕ್ಷಣೆ ನೀಡುವ ಕುರಿತು ಕೇಂದ್ರ ಸರ್ಕಾರ ಯಾವುದೇ ಕಾಯ್ದೆ ರೂಪಿಸಿಲ್ಲ. ಆದರೆ, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸಾರಿಗೆ ಸಚಿವಾಲಯ 2015ರಲ್ಲಿ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆ.

ಕಾಯ್ದೆ ಉದ್ದೇಶ

 • 2015 ಮತ್ತು 2016ರಲ್ಲಿ ಅತಿಹೆಚ್ಚು ರಸ್ತೆ ಅಪಘಾತಗಳಾದ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿತ್ತು.
 • ಕೋರ್ಟ್-ಕಚೇರಿ ಅಲೆದಾಟಕ್ಕೆ ಹೆದರಿ ಗಾಯಾಳುಗಳಿಗೆ ನೆರವಾಗಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದ ಪರಿಣಾಮ ಗೋಲ್ಡನ್ ಅವರ್​ನಲ್ಲಿ ಆಸ್ಪತ್ರೆ ತಲುಪಲಾಗದೆ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು.
 • 2015ರಲ್ಲಿ ರಾಷ್ಟ್ರದಲ್ಲಿ ಸಂಭವಿಸಿದ್ದ 01 ಲಕ್ಷ ಅಪಘಾತಗಳಲ್ಲಿ 1.46 ಲಕ್ಷ ಜನರು ಮತ್ತು 2016ರಲ್ಲಿ 4.80 ಅಪಘಾತಗಳಲ್ಲಿ 1.50 ಲಕ್ಷ ಜನರು ಅಸುನೀಗಿದ್ದರು. ಕ್ಷಿಪ್ರ ಅವಧಿಯಲ್ಲಿ ವೈದ್ಯಕೀಯ ನೆರವು ಸಿಕ್ಕಿದ್ದರೆ ಒಂದಷ್ಟು ಜನರು ಬದುಕುಳಿಯುವ ಸಾಧ್ಯತೆ ಇತ್ತು.

ಏನಿದೆ ಕಾಯ್ದೆಯಲ್ಲಿ?

 • ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಕ್ಷಿಪ್ರ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ದೊರೆಯುವಂತೆ ಮಾಡುವವರು ಇನ್ಮುಂದೆ ಪೊಲೀಸರು ಅಥವಾ ತನಿಖೆಗೆ ಹೆದರಬೇಕಿಲ್ಲ. ಈ ಕಾಯ್ದೆ ಪ್ರಕಾರ ಸಕಾಲದಲ್ಲಿ ಗಾಯಾಳುಗಳಿಗೆ ನೆರವು ನೀಡಿದವರಿಗೆ ಕರ್ನಾಟಕ ಸರ್ಕಾರ ಆರ್ಥಿಕ ನೆರವನ್ನೂ ಒದಗಿಸಲಿದೆ. ಒಂದು ವೇಳೆ ಗಾಯಾಳುಗಳಿಗೆ ನೆರವಾಗುವವರು ಕೋರ್ಟ್ ಅಥವಾ ಪೊಲೀಸ್ ಠಾಣೆಗೆ ಹಾಜರಾಗುವ ಅನಿವಾರ್ಯತೆ ಬಂದರೆ ಅವರ ಖರ್ಚುವೆಚ್ಚ ಭರಿಸಲಾಗುತ್ತದೆ.
 • ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ನೆರವು ನೀಡಿದವರು ತಕ್ಷಣವೇ ನಿರ್ಗಮಿಸಬಹುದು.
 • ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ವೈದ್ಯರು ಗಾಯಾಳುವನ್ನು ದಾಖಲಿಸಿಕೊಂಡು ಪ್ರಥಮ ಚಿಕಿತ್ಸೆ ಕೊಡುವುದು ಕಡ್ಡಾಯ.

ಹಿನ್ನಲೆ

 • ಕರ್ನಾಟಕ ಗುಡ್ ಸಮಾರಿಟನ್ ಆಂಡ್ ಮೆಡಿಕಲ್ ಪ್ರೊಫೆಷನಲ್ ಬಿಲ್: ಈ ಕಾಯ್ದೆಯಡಿ ಆಸ್ಪತ್ರೆಗೆ ದಾಖಲಾಗುವ ವ್ಯಕ್ತಿಗೆ 48 ಗಂಟೆ ಅವಧಿಯ ಚಿಕಿತ್ಸಾ ವೆಚ್ಚ 25 ಸಾವಿರ ರೂ.ಗಳನ್ನು ಸರ್ಕಾರವೇ ಭರಿಸುತ್ತದೆ. ರಾಜ್ಯ ಸರ್ಕಾರ ‘ಕರ್ನಾಟಕ ಪರೋಪಕಾರ ಮತ್ತು ವೈದ್ಯಕೀಯ ವೃತ್ತಿಪರ ಕಾಯ್ದೆ 2016’ ದೇಶಕ್ಕೆ ಮಾದರಿಯಾಗಿದೆ. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದು ರಾಜ್ಯಕ್ಕೆ ಮತ್ತೊಂದು ಗರಿ ಮೂಡಿಸಿದೆ.

ತೇಜಿ ಕುರಿಗೊಬ್ಬರ

ಸುದ್ಧಿಯಲ್ಲಿ ಏಕಿದೆ ?ಬಯಲು ಸೀಮೆಯ ಕುರಿ ಗೊಬ್ಬರಕ್ಕೆ ಮಲೆನಾಡು, ಕರಾವಳಿ ಭಾಗದಲ್ಲಿ ಭಾರಿ ಬೇಡಿಕೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಯತ್ತ ರೈತರು ಹೆಚ್ಚು ಆಕರ್ಷಿತರಾಗುತ್ತಿರುವುದೇ ಈ ಟ್ರೆಂಡ್‌ಗೆ ಕಾರಣ.

 • ಹರಪನಹಳ್ಳಿ ತಾಲೂಕಿನಲ್ಲಿ ತಯಾರಿಸುವ ಕುರಿ ಹಿಕ್ಕೆ ಗೊಬ್ಬರಕ್ಕೆ ಅಡಕೆ ನಾಡು ಶಿವಮೊಗ್ಗ, ಕರಾವಳಿಯ ಕಾಫಿ ನಾಡಿನಲ್ಲಿ ಬಲು ಬೇಡಿಕೆ ಇದ್ದು, ಅಲ್ಲಿನ ರೈತರು ಹರಪನಹಳ್ಳಿಗೆ ಬಂದು ಸಾವಯವ ಕುರಿ ಗೊಬ್ಬರ ಖರೀದಿಸುತ್ತಿದ್ದಾರೆ. ಇಲ್ಲಿಂದಲೇ ಅಡಕೆ, ಕಾಫಿ ತೋಟಗಳಿಗೆ ಈ ಗೊಬ್ಬರ ಪೂರೈಕೆಯಾಗುತ್ತಿದೆ.
 • ಬಾಗಳಿ ಗ್ರಾಮ ಸೇರಿದಂತೆ ತಾಲೂಕಿನ ನಾನಾ ಹಳ್ಳಿಗಳಲ್ಲಿ ಜನರು ಕುರಿ, ಆಡುಗಳನ್ನು ಸಾಕುವುದರಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ತಾಲೂಕು ಸೇರಿ ಬಳ್ಳಾರಿ, ಹೂವಿನಹಡಗಲಿ, ಹಗರಿ ಬೋಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರಿನಲ್ಲಿ ಕುರಿ ಗೊಬ್ಬರ ಖರೀದಿ ಜೋರಾಗಿ ನಡೆಯುತ್ತಿದೆ.
 • ಹಿಕ್ಕೆ ಗೊಬ್ಬರ: ಈ ಭಾಗಗಳಲ್ಲಿ ನೂರಾರು ಕುರಿಗಳನ್ನು ಒಟ್ಟಿಗೆ ಸಾಕಲು ಕುರಿಗಾಹಿಗಳು ದೊಡ್ಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ನಿತ್ಯ ಜಮೀನುಗಳಿಂದ ಮೇವು ತಂದು ಸಾಕುತ್ತಾರೆ. ಇಲ್ಲಿ ಸಂಗ್ರಹವಾಗುವ ಹಿಕ್ಕೆಗಳನ್ನು ಆಯ್ದು ಒಂದು ಕಡೆಗೆ ಸಂಗ್ರಹ ಮಾಡಿ, ಕುರಿಗಾರರು ಗೊಬ್ಬರ ತಯಾರಿಸುತ್ತಾರೆ.

ಹಿಕ್ಕೆ ಗೊಬ್ಬರದ ಉಪಯೋಗ

 • ಹೀಗೆ ಸಿದ್ಧವಾದ ಗೊಬ್ಬರದಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ.
 • ಶಿವಮೊಗ್ಗ ಜಿಲ್ಲೆ ಹಾಗೂ ಕಾಫಿ ಸೀಮೆಗಳಿಗೆ ಕುರಿಗೊಬ್ಬರ ರವಾನೆ ಮಾಡಲಾಗುತ್ತದೆ.
 • ಈ ಗೊಬ್ಬರ ಹಾಕುವುದರಿಂದ ಅಡಕೆ ಮರಗಳು ಚೆನ್ನಾಗಿ ಬೆಳೆಯುತ್ತವೆ ಮತ್ತು ಉತ್ತಮ ಇಳುವರಿ ಕೊಡುತ್ತವೆ.
 • ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಸಾವಯವ ಕೃಷಿಯ ಬಗ್ಗೆ

 • ಸಮರ್ಥನೀಯತೆಯ ಮೇಲೆ ಸಾವಯವ ಕೃಷಿ ಗಮನ, ಕೃತಕವಾಗಿ ರಸಗೊಬ್ಬರ, ಕೀಟನಾಶಕಗಳು, ಬೆಳವಣಿಗೆ ನಿಯಂತ್ರಕಗಳನ್ನು ಬಳಸದೆಯೇ ಇದು ಒಂದು ಕೃಷಿ ವ್ಯವಸ್ಥೆಯಾಗಿದೆ.

ಸಾವಯವ ಬೇಸಾಯದ ಕೃಷಿ ಪ್ರಯೋಜನಗಳು:

 • ಇದು ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಸುಧಾರಿಸುತ್ತದೆ.
 • ನೀರಿನ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸುವುದರಿಂದ ನೀರಿನ ಸಂರಕ್ಷಣೆಗೆ ಕಾರಣವಾಗುತ್ತದೆ.
 • ಉತ್ತಮ ಪ್ರಾಣಿ ಸಂಗೋಪನೆ
 • ನೈಸರ್ಗಿಕ ಕೀಟನಾಶಕಗಳನ್ನು (ಜೈವಿಕ ನಿಯಂತ್ರಣ) ಬಳಸುವುದು.
 • ಮರುಬಳಕೆಯ ಬೆಳೆ ವ್ಯರ್ಥಗಳು
 • ಹಸಿರು ಗೊಬ್ಬರ ಮತ್ತು ದ್ವಿದಳ ಧಾನ್ಯಗಳು
 • ಆನುವಂಶಿಕ ವೈವಿಧ್ಯತೆಯನ್ನು ಹೆಚ್ಚಿಸುವುದು
 • ನಿರೋಧಕ ಬೆಳೆಗಳ ಬಳಕೆಯನ್ನು ಉದ್ಯೋಗ ಹೆಚ್ಚಿಸಿದೆ

 ‘ಸ್ವಚ್ಛ ಮಂದಿರ ಅಭಿಯಾನ’

ಸುದ್ಧಿಯಲ್ಲಿ ಏಕಿದೆ?ಸ್ವಚ್ಛತೆಯೇ ದೈವತ್ವ ಎಂಬ ಪರಿಕಲ್ಪನೆಯಡಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ಆರಂಭಿಸಿರುವ ಸ್ವಚ್ಛ ಮಂದಿರ ಅಭಿಯಾನ ಯೋಜನೆಯನ್ನು ಇಲಾಖೆಯ ಎಲ್ಲ ದೇವಾಲಯಗಳಲ್ಲೂ ಅನುಷ್ಠಾನಗೊಳಿಸುವಂತೆ ಸುತ್ತೋಲೆ ಹೊರಡಿಸಿದೆ.

 • ಮುಜರಾಯಿ ಇಲಾಖೆಯು 2014ರಲ್ಲಿ ಯೋಜನೆ ಜಾರಿಗೊಳಿಸಿತ್ತಾದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿರಲಿಲ್ಲ. ಅಲ್ಲದೆ ಆರಂಭದಲ್ಲಿ ಕೇವಲ ವರ್ಗದ ದೇವಾಲಯಗಳಲ್ಲಿ ಮಾತ್ರ ಯೋಜನೆ ಜಾರಿಗೊಳಿಸಲಾಗಿತ್ತು. ಇದೀಗ ಬಿಮತ್ತು ಸಿವರ್ಗ ಸೇರಿದಂತೆ ಅ.2 ರಿಂದ ಎಲ್ಲಾ ದೇವಾಲಯಗಳಲ್ಲೂ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಲಾಗುತ್ತಿದೆ.

ಅಭಿಯಾನಕ್ಕೆ ಕಾರಣ

 • ದೇವಾಲಯಕ್ಕೆ ಬರುವ ಭಕ್ತರು ಹೂವು, ಹಣ್ಣು, ತೆಂಗಿನ ಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳೊಂದಿಗೆ ಬರುತ್ತಾರೆ. ಹೀಗೆ ಬರುವವರಲ್ಲಿ ಬಹುತೇಕರು ಪ್ಲಾಸ್ಟಿಕ್‌ ಕವರ್‌ಗಳನ್ನು ತರುತ್ತಾರೆ. ಪೂಜೆ ನಂತರ ಪ್ರಸಾದ ಸ್ವೀಕರಿಸಿದ ಬಟ್ಟಲು ಅಥವಾ ಪ್ಲೇಟ್‌ಗಳನ್ನು, ನೀರಿನ ಬಾಟಲಿಗಳನ್ನು ದೇಗುಲ್ದ ಆವರಣದಲ್ಲಿ ಎಸೆಯುವುದರಿಂದ ಅನೈರ್ಮಲ್ಯ ಉಂಟಾಗುತ್ತದೆ. ಇದನ್ನು ತಡೆಯಲು ‘ಸ್ವಚ್ಛ ಮಂದಿರ ಅಭಿಯಾನ’ ಕಾರ್ಯಗತಗೊಳಿಸಲು ಇಲಾಖೆ ಮುಂದಾಗಿದೆ.

ಏನೇನು ಕ್ರಮಗಳು ?

 • ಜನರಿಗೆ ಅರಿವು ಮೂಡಿಸಲು ಪ್ರತ್ಯೇಕ ಫಲಕ ಅಳವಡಿಸುವುದು.
 • ತ್ಯಾಜ್ಯ ಎಸೆಯುವವರಿಗೆ 10 ರೂ.ದಂಡ ವಿಧಿಸಲು ಸೂಚಿಸಲಾಗಿದೆ.
 • ದೇವಾಲಯಗಳಲ್ಲಿ ಹಸಿ ಕಸ ಹಾಗೂ ಒಣ ಕಸ ವಿಂಗಡಿಸಿ ಸ್ವಯಂ ನಿರ್ವಹಣೆ ಮತ್ತು ವಿಲೇವಾರಿ ಮಾಡಬೇಕು. ದೇವಾಲಯದ ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸುವುದು.
 • ಸ್ಥಳೀಯ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಶಾಲಾ – ಕಾಲೇಜು ವಿದ್ಯಾರ್ಥಿಗಳ ಹಾಗೂ ಸ್ವಯಂ ಸೇವಕರಿಂದ ದೇವಾಲಯ ಆವರಣ ಹಾಗೂ ಹೊರಭಾಗಗಳಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಪ್ಲಾಸ್ಟಿಕ್‌ ಮುಕ್ತ ದೇವಳ

 • ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ದೇವಾಲಯದ ಆವರಣ ಹಾಗೂ ಹೊರಭಾಗದಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗಿದೆ.
 • ಭಕ್ತರು ಪೂಜಾ ಸಾಮಗ್ರಿ ಗಳನ್ನು ಬಟ್ಟೆ ಬ್ಯಾಗ್‌ ಅಥವಾ ಪೂಜಾ ಬುಟ್ಟಿಯಲ್ಲಿ ಕೊಂಡೊಯ್ಯಬೇಕು.
 • ದೇವಾಲಯದಿಂದಾಗಲೀ ಅಥವಾ ಭಕ್ತರು ಹರಕೆಯ ರೂಪದಲ್ಲಿ ಪ್ರಸಾದ ವಿತರಿಸುವಾಗ ಪ್ಲಾಸ್ಟಿಕ್‌ ಬಟ್ಟಲು, ಪ್ಲೇಟ್‌ಗಳ ಬಳಕೆ ಮಾಡಬಾರದು.
 • ಹಬ್ಬ ಹಾಗೂ ಉತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಫಲಕಗಳನ್ನು ಹಾಗೂ ಅಲಂಕಾರಕ್ಕಾಗಿ ಪ್ಲಾಸ್ಟಿಕ್‌ ವಸ್ತು (ತಳಿರು ತೋರಣ)ಗಳನ್ನು ಬಳಸದಂತೆ ಕ್ರಮ ವಹಿಸುವಂತೆ ದೇವಾಲಯದವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಧಾರ್ಮಿಕ ಉದ್ಯಾನ

 • ದೇವಾಲಯಗಳ ಆವರಣದಲ್ಲಿ ಗುಲಾಬಿ, ಮಲ್ಲಿಗೆ, ಸೇವಂತಿಗೆಯಂತಹ ಹೂಗಳು, ಮರುಗ, ಧವನಗಳಂತಹ ಪೂಜೆಗೆ ಅಗತ್ಯವಾದ ಸಸಿಗಳನ್ನು ಬೆಳೆಸುವುದು.
 • ಶಿವದೇವಾಲಯಗಳಲ್ಲಿ ಬಿಲ್ವಪತ್ರೆ ಮರ ಬೆಳೆಸುವುದು, ದೇವಿ ದೇವಾಲಯಗಳಲ್ಲಿ ಬೇವಿನ ಮರ ಹೀಗೆ ಆದಾಯ ದೇವಾಲಯಗಳಿಗೆ ಪೂರಕವಾಗಿ ಸಸಿಗಳನ್ನು ನೆಟ್ಟು ಧಾರ್ಮಿಕ ಉದ್ಯಾನ ನಿರ್ಮಾಣ ಮಾಡುವಂತೆ ದೇಗುಲ ಮಂಡಳಗಳಿಗೆ ಸೂಚನೆ ನೀಡಲಾಗಿದೆ.

ಜಿಪಿಎಸ್‌ ಕಡ್ಡಾಯ

ಸುದ್ಧಿಯಲ್ಲಿ ಏಕಿದೆ ?ಕೇರಳ ರಾಜ್ಯದ ಎಲ್ಲ ಶಾಲಾ ಬಸ್‌ಗಳಲ್ಲಿ ಜಿಪಿಎಸ್‌ ವ್ಯವಸ್ಥೆ ಜಾರಿಗೆ ಬರಲಿದೆ.

 • ಮೊದಲ ಹಂತದಲ್ಲಿ ಖಾಸಗಿ ಹಾಗೂ ಅಂಗೀಕೃತ ಶಾಲಾ ಬಸ್‌ಗಳಲ್ಲಿ ಜಿಪಿಎಸ್‌ ಅಳವಡಿಸಲಾಗುವುದು. ಬಳಿಕ ಖಾಸಗಿ ಬಸ್‌, ಕೇರಳ ರಾಜ್ಯ ಸಾರಿಗೆ ಸಂಸ್ಥೆ ಬಸ್‌, ಸರಕು ಲಾರಿ, ಟ್ಯಾಂಕರ್‌ ಮೊದಲಾದ ಸಾರ್ವಜನಿಕ ಸೇವೆಯ ವಾಹನಗಳಲ್ಲಿ ಕಡ್ಡಾಯಗೊಳಿಸಲಾಗುವುದು.
 • ನಿಗದಿತ ಸಮಯದೊಳಗೆ ಜಿಪಿಎಸ್‌ ಅಳವಡಿಸದಿದ್ದರೆ ವಾಹನಗಳು ರಸ್ತೆಗಳಿಯುವಂತಿಲ್ಲ. ಜಿಪಿಎಸ್‌ ಅಳವಡಿಸದ ವಾಹನಗಳಿಗೆ ಫಿಟ್‌ನೆಸ್‌ ಸರ್ಟಿಫಿಕೆಟ್‌ ನೀಡಲಾಗುವುದಿಲ್ಲ

ಯಾರು ಜಿಪಿಎಸ್ ಅನ್ನುತಯಾರಿಸಬಹುದು ?

 • ಶಾಲಾ ವಾಹನಗಳಲ್ಲಿ ಅಳವಡಿಸಲು ಅಂಗೀಕೃತ 15 ಜಿಪಿಎಸ್‌ ತಯಾರಕ ಕಂಪನಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಇದರ ಹೊರತು ಬೇರೆ ಕಂಪನಿಗಳ ಜಿಪಿಎಸ್‌ ಅಳವಡಿಸಿದರೆ ಅಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
 • ಕೇಂದ್ರ ಸಾರಿಗೆ ಸಚಿವಾಲಯದ ಅನುಮತಿ ಇರುವ ಸಂಸ್ಥೆಗಳ ಜಿಪಿಎಸ್‌ ಅಳವಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಪ್ರತಿ ವಾಹನಕ್ಕೆ 10 ಸಾವಿರ ರೂ. ವೆಚ್ಚ ತಗುಲುತ್ತದೆ. ಇನ್ನು ಸರಕಾರಿ ಶಾಲೆಗಳಲ್ಲಿರುವ ಶಾಲಾ ಬಸ್‌ಗಳಲಿ ಜಿಪಿಎಸ್‌ ಅಳವಡಿಸುವ ಕುರಿತು ಯಾವುದೇ ಮಾರ್ಗಸೂಚಿಗಳನ್ನು ಶಿಕ್ಷ ಣ ಇಲಾಖೆ ನೀಡಿಲ್ಲ.

ಜಿಪಿಎಸ್ ಅಳವಡಿಸಲು ಕಾರಣಗಳು

 • ಚಾಲಕರ ನಿರ್ಲಕ್ಷ ್ಯ ಹಾಗೂ ಇತರ ಕಾರಣಗಳಿಂದ ಶಾಲಾ ವಾಹನಗಳ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
 • ಜಿಪಿಎಸ್‌ ಅಳವಡಿಸುವುದಕ್ಕಾಗಿ ವೆಹಿಕಲ್‌ ಟ್ರ್ಯಾಕಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ ಎಂಬ ಸಾಫ್ಟವೇರ್‌ ರೂಪಿಸಲಾಗಿದೆ.
 • ಇದು ಕೇಂದ್ರ ಸಾರಿಗೆ ಆಯುಕ್ತರ ಕಚೇರಿ ಹಾಗೂ ಕೇಂದ್ರೀಕೃತ ನಿಯಂತ್ರಣ ಕೊಠಡಿಗಳಲ್ಲಿ ಕಾರ್ಯಾಚರಿಸಲಿದೆ. ಮುಂದಿನ ಹಂತದಲ್ಲಿ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಇದನ್ನು ಅಳವಡಿಸಲಾಗುವುದು. ಈ ಮೂಲಕ ಎಲ್ಲ ವಾಹನಗಳ ಮೇಲೆ ನಿಗಾ ಇಡಲು ಸಾರಿಗೆ ಅಧಿಕಾರಿಗಳಿಗೆ ಸಾಧ್ಯವಾಗಲಿದೆ. ಇದರೊಂದಿಗೆ ಅಪಘಾತ ರಹಿತ ಚಾಲನೆಯೇ ಮುಖ್ಯ ಉದ್ದೇಶವಾಗಿದೆ.
 • ಅತಿವೇಗದಲ್ಲಿ ಓಡುವ ವಾಹನ, ಅಪಘಾತ ಸೃಷ್ಟಿಸುವ ರೀತಿಯ ಚಾಲನೆ, ಅಪಘಾತಕ್ಕೆ ಕಾರಣವಾಗುವ ರೀತಿ ಹೆದ್ದಾರಿಗಳಲ್ಲಿ ಅನಿಯಂತ್ರಿತ ನಿಲುಗಡೆಯನ್ನು ಈ ವ್ಯವಸ್ಥೆಯ ಮೂಲಕ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಆ ಮಾಹಿತಿ ತಕ್ಷ ಣ ಎಸ್‌ಎಂಎಸ್‌ ಮೂಲಕ ಇಲಾಖೆ ಮುಖ್ಯಸ್ಥರು, ಶಾಲಾ ಅಧಿಕಾರಿಗಳು, ಪೊಲೀಸ್‌ ಠಾಣೆ, ವಾಹನ ಇಲಾಖೆಯ ಅಧಿಕಾರಿಗಳಿಗೆ ಲಭಿಸುತ್ತದೆ.
 • ಜಿಪಿಎಸ್‌ ಅಳವಡಿಸುವ ಕಾನೂನು ಜಾರಿಗೆ ಬರುವುದರೊಂದಿಗೆ ಬಸ್‌ಗಳ ತಪಾಸಣೆ ಊರ್ಜಿತಗೊಳಿಸಲಾಗುತ್ತದೆ. ಇದಕ್ಕೆ ಸಾರಿಗೆ ಆಯುಕ್ತರು ಈಗಾಗಲೇ ನಿರ್ದೇಶನ ನೀಡಿಯಾಗಿದೆ. ಬಸ್‌ಗಳಲ್ಲಿ ಜಿಪಿಎಸ್‌ ಅಳವಡಿಸುವುದನ್ನು ಖಾತರಿಪಡಿಸುವುದಲ್ಲದೆ, ಜಿಪಿಎಸ್‌ ಸಂಪರ್ಕ ಕಳಚಿಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ.

ಜಿಪಿಎಸ್ ಬಗ್ಗೆ

 • ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಒಂದು ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಸ್ಟಮ್ ಆಗಿದ್ದು 1970 ರ ದಶಕದ ಆರಂಭದಲ್ಲಿ ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ (ಡಿಒಡಿ) ಅಭಿವೃದ್ಧಿಪಡಿಸಿದೆ.
 • ಆರಂಭದಲ್ಲಿ, ಯು.ಎಸ್ ಮಿಲಿಟರಿ ಅಗತ್ಯತೆಗಳನ್ನು ಪೂರೈಸಲು ಮಿಲಿಟರಿ ವ್ಯವಸ್ಥೆಯಾಗಿ ಜಿಪಿಎಸ್ ಅನ್ನು ಅಭಿವೃದ್ಧಿಪಡಿಸಲಾಯಿತು.
 • ಆದಾಗ್ಯೂ, ನಂತರ ನಾಗರಿಕರಿಗೆ ಲಭ್ಯವಾಯಿತು. ಇಂದು ಜಿಪಿಎಸ್ ದ್ವಿ-ಬಳಕೆಯ ವ್ಯವಸ್ಥೆಯಲ್ಲಿದೆ, ಅದು ಮಿಲಿಟರಿ ಮತ್ತು ನಾಗರಿಕ ಬಳಕೆದಾರರಿಂದ ಪ್ರವೇಶಿಸಬಹುದಾಗಿದೆ.
 • ಜಿಪಿಎಸ್ ಯಾವುದೇ ಹವಾಮಾನ ಪರಿಸ್ಥಿತಿಗಳಲ್ಲಿ ಜಗತ್ತಿನ ಎಲ್ಲೆಡೆಯೂ ನಿರಂತರ ಸ್ಥಾನೀಕರಣ ಮತ್ತು ಸಮಯದ ಮಾಹಿತಿಯನ್ನು ಒದಗಿಸುತ್ತದೆ. ಏಕೆಂದರೆ ಇದು ಅನಿಯಮಿತ ಸಂಖ್ಯೆಯ ಬಳಕೆದಾರರಿಗೆ ಮತ್ತು ಭದ್ರತಾ ಕಾರಣಗಳಿಗಾಗಿ ಬಳಸಲ್ಪಡುತ್ತದೆ

ಮೆಥನಾಲ್‌ನಿಂದ ಅಡುಗೆ ಇಂಧನ

ಸುದ್ಧಿಯಲ್ಲಿ ಏಕಿದೆ ?ಮೆಥನಾಲ್‌ನಿಂದ ಅಡುಗೆ ಇಂಧನ ಉತ್ಪಾದಿಸಿ, ಮನೆಗಳಿಗೆ ನೀಡಲು ಅಸ್ಸಾಂ ಸಿದ್ಧತೆ ನಡೆಸಿದೆ.

 • ಅಸ್ಸಾಂ ಪೆಟ್ರೋಕೆಮಿಕಲ್ಸ್‌ ಸಂಸ್ಥೆ, ದೇಶದಲ್ಲೇ ಮೊದಲ ಮೆಥನಾಲ್‌ನಿಂದ ತಯಾರಿಸಿದ ಅಡುಗೆ ಇಂಧನ ತಯಾರಿಸಲು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ಪರಿಸರ ಸ್ನೇಹಿ, ಸುಲಭ ಸಾಗಾಣಿಕೆ ಹಾಗೂ ಎಲ್‌ಪಿಜಿಯಿಂದ ಶೇ.30ರಷ್ಟು ಕಡಿಮೆ ಬೆಲೆಯಲ್ಲಿ ಮೆಥನಾಲ್‌ ಅಡುಗೆ ಇಂಧನ ಲಭ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ.
 • ಕೇಂದ್ರ ನೀತಿ ಆಯೋಗದ ಶಿಫಾರಸಿನ ಮೇರೆಗೆ ಅನುಷ್ಠಾನಗೊಳ್ಳುತ್ತಿರುವ ಬೃಹತ್‌ ಕಾರ್ಯಕ್ರಮ ಇದಾಗಿದ್ದು, ಚೀನಾ ಹಾಗೂ ಇಸ್ರೇಲ್‌ನಲ್ಲಿ ಈಗಾಗಲೇ ಮೆಥನಾಲ್‌ ಅಡುಗೆ ಇಂಧನ ಬಳಕೆಯಲ್ಲಿದೆ.
 • ಅ.5ರಿಂದ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಡಿಬ್ರೂಗಡದಲ್ಲಿರುವ ನಮ್ರುಪ್‌ ಮೆಥನಾಲ್‌ ಘಟಕದಲ್ಲಿ ತಯಾರಿಸಲಾಗುತ್ತದೆ.
 • ಸಂಸ್ಥೆ ಆಯ್ಕೆ ಮಾಡಿದ ವ್ಯಕ್ತಿಗಳಿಗೆ ಸ್ಟೌವ್‌ ಹಾಗೂ ಮೆಥನಾಲ್‌ ಕಿಟ್‌ ನೀಡಲಾಗುತ್ತದೆ. ಮುಂದಿನ ಒಂದು ತಿಂಗಳಲ್ಲಿ ವಾಣಿಜ್ಯಕ್ಕಾಗಿ ಮೆಥನಾಲ್‌ ಅಡುಗೆ ಇಂಧನ ಬಳಕೆಗೆ ಸಿದ್ಧವಾಗಲಿದೆ

ಮಹತ್ವ

 • ಮೆಥನಾಲ್‌ ನಿಂದ ಅಪಾಯ ಇಲ್ಲ.
 • ಇವುಗಳು ಎಲ್‌ಪಿಜಿಯಂತೆ ಸ್ಪೋಟಗೊಳ್ಳುವ ಸಾಧ್ಯತೆಗಳಿಲ್ಲ.
 • ವಿಶೇಷ ಬರ್ನಲ್‌ ಇದಕ್ಕೆ ಅಗತ್ಯ. ಸದ್ಯಕ್ಕೆ 2ಕೆಜಿ ಸಿಲಿಂಡರ್‌ ಆಕಾರದಲ್ಲಿ ಇವುಗಳ ಲಭ್ಯವಾಗಲಿದೆ. 32 ರೂನಲ್ಲಿ ಇವುಗಳು ವಾಣಿಜ್ಯ ಉಪಯೋಗಕ್ಕೆ ಲಭ್ಯವಾಗಲಿದೆ.
 • ಪ್ರಸ್ತುತ ಘಟಕದಲ್ಲಿ ಪ್ರತಿನಿತ್ಯ ನೂರು ಟನ್‌ ಮೆಥನಾಲ್‌ ಉತ್ಪಾದನೆಯಾಗುತ್ತಿದೆ.
 • ಮೆಥನಾಲ್‌ ಘಟಕ ವಿಸ್ತರಣೆಯಾಗುತ್ತಿದ್ದು, ಪ್ರತಿ ದಿನ 500 ಟನ್‌ ಉತ್ಪತ್ತಿ ಮಾಡುವ ಸಾಮರ್ಥ್ಯ ಬರಲಿದೆ ಎಂದು ಸಂಸ್ಥೆ ಹೇಳಿದೆ.
 • ಚೀನಾದಲ್ಲಿ ಶೇ.10ರಷ್ಟು ಸಾರಿಗೆ ವ್ಯವಸ್ಥೆಗೆ ಮೆಥನಾಲ್‌ ಬಳಕೆ ಮಾಡಲಾಗುತ್ತಿದೆ. ಆಸ್ಟ್ರೇಲಿಯಾ, ಸ್ವೀಡನ್‌, ಯುಎಸ್‌, ಜಪಾನ್‌ ಸೇರಿ ಅನೇಕ ರಾಷ್ಟ್ರಗಳಲ್ಲಿ ಮೆಥನಾಲ್‌ ಇಂಧನವನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿದೆ.
 • ಮೆಥನಾಲ್‌ನಲ್ಲಿ ಇಂಗಾಲದ ಉತ್ಪತ್ತಿ ತೀರಾ ಕಡಿಮೆಯಾಗಿರುವುದರಿಂದ ಪರಿಸರಕ್ಕೆ ಹಾನಿಯಾಗುವುದು ತಪ್ಪುತ್ತದೆ

ಮೆಥನಾಲ್ ಬಗ್ಗೆ

 • ಮೆಥನಾಲ್ ಇಂಧನ, ಸಾರಿಗೆ ಇಂಧನ ಮತ್ತು ಅಡುಗೆ ಇಂಧನವನ್ನು ಉತ್ಪಾದಿಸುವಂತೆ ಮೆಥನಾಲ್ನ್ನು ಬಳಸಬಹುದು. ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ತೈಲ ಆಮದು ಮಸೂದೆಯನ್ನು 20% ನಷ್ಟು ಕಡಿತಗೊಳಿಸುವಲ್ಲಿ ಅದು ಸಹಾಯ ಮಾಡುತ್ತದೆ.
 • ಇದು ಸರಳ ಆಲ್ಕೊಹಾಲ್ ಮತ್ತು ಕಾರ್ಬನ್ ಕಾರ್ಬನ್ ಬಂಧ ಹೊಂದಿಲ್ಲ ಮತ್ತು ಆದ್ದರಿಂದ ಮಾಲಿನ್ಯವನ್ನು ಉಂಟುಮಾಡುವ ಕಣಗಳ (ಪಿಎಮ್) ಹೊರಸೂಸುವುದಿಲ್ಲ
 • ಅರಣ್ಯದ ಅವಶೇಷಗಳು, ಮನೆಗಳಿಂದ ಉತ್ಪತ್ತಿಯಾದ ಜೈವಿಕ ತ್ಯಾಜ್ಯ, ಕೃಷಿ ವ್ಯರ್ಥ, ಜೈವಿಕ ವಿಘಟನೀಯ ತ್ಯಾಜ್ಯಗಳು ಇತರ ಮೂಲಗಳಿಂದ ಬರುವ ನವೀಕರಿಸಬಹುದಾದ ಮೂಲಗಳಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು.
 • ಸಿಎನ್ಜಿಗಿಂತ ಭಿನ್ನವಾಗಿ, ಮೆಥನಾಲ್ ಅನ್ನು ಸಾರಿಗೆ ಇಂಧನವಾಗಿ ವಾಹನ ಎಂಜಿನ್ಗಳಲ್ಲಿ ಕಡಿಮೆ ವೆಚ್ಚದ ಮಾರ್ಪಾಡು ಅಗತ್ಯವಿರುತ್ತದೆ, ಹಾಗಾಗಿ ಅವರು ಮೆಥನಾಲ್ ಎಂಜಿನ್ಗಳಾಗಿ ಮಾರ್ಪಾಡು ಮಾಡಿಕೊಳ್ಳಬೇಕು

ಮೆಥನಾಲ್ ಆರ್ಥಿಕತೆಯು ಭಾರತಕ್ಕೆ ಹಲವು ವಿಧಗಳಲ್ಲಿ ಉಪಯುಕ್ತವಾಗಿದೆ;

 • ಹಣಕಾಸು ಪ್ರಯೋಜನಗಳು: ಪೆಟ್ರೋಲ್ನೊಂದಿಗೆ ಮೆಥನಾಲ್ನ ಮಿಶ್ರಣವು ಆಮದು ಮಸೂದೆಯನ್ನು 15 ಪ್ರತಿಶತದಷ್ಟು ಕಡಿತಗೊಳಿಸುತ್ತದೆ.
 • ಪರಿಸರ ಪ್ರಯೋಜನಗಳು: ಇದು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಾಲಿನ್ಯದ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಕಾರಣದಿಂದಾಗಿ ಆರೋಗ್ಯದ ಮೇಲೆ ಕಡಿಮೆ ಸೂಚಿಸುವ ವೆಚ್ಚಕ್ಕೆ ಕಾರಣವಾಗುತ್ತದೆ.
 • BS VI ವಿಶೇಷಣಗಳನ್ನು ತಲುಪುವಲ್ಲಿ ಸಹಾಯ ಮಾಡುತ್ತದೆ
 • ದೇಶೀಯ ಬಳಕೆ: ಗ್ರಾಮೀಣ ಪ್ರದೇಶಗಳಲ್ಲಿ ಮೆಥನಾಲ್ ಸ್ಟೌವ್ಗಳು ಹಸುವಿನ ಸಕ್ಕರೆ ಮತ್ತು ಮರಗಳನ್ನು ಬದಲಾಯಿಸಬಹುದು, ಇದರಿಂದಾಗಿ ಕಡಿಮೆ ಒಳಾಂಗಣ ಮಾಲಿನ್ಯ ಮತ್ತು ಗ್ರಾಮೀಣ ಗೃಹಿಣಿಯರ ಉತ್ತಮ ಆರೋಗ್ಯ

ಇಸ್ರೋ ಮಂಗಳಯಾನ

ಸುದ್ಧಿಯಲ್ಲಿ ಏಕಿದೆ ?ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) 2013ರ ನವೆಂಬರ್‌ 5ರಂದು ಮಂಗಳಯಾನ (Mars Orbiter Mission, MOM) ಆರಂಭಿಸುವ ಮೂಲಕ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದ ದಿನವದು.

 • ಅಂದು ಹೊರಟ ಯಾತ್ರೆ ಮಂಗಳ ಗ್ರಹವನ್ನು ತಲುಪಿದ್ದು ಸೆಪ್ಟಂಬರ್‌ 4, 2014ರಂದು. ಮೊದಲ ಬಾರಿಗೆ ಮಂಗಳ ಗ್ರಹವನ್ನು ಸುತ್ತಲು ಆರಂಭಿಸಿದಾಗ 6 ತಿಂಗಳ ಕಾಲ ಮಾತ್ರ ಕಾರ್ಯ ನಿರ್ವಹಿಸಲಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದರು.
 • ಆದರೆ ಮಾಮ್‌ 4 ವರ್ಷ ಪೂರೈಸಿ ಮುಂದಡಿಯಿಡುತ್ತಿದೆ. ಮಂಗಳ ಗ್ರಹದ ಅಚ್ಚರಿ ಅಂಶಗಳನ್ನು ಭೂಮಿಗೆ ತಲುಪಿಸುತ್ತಲೇ ಇದೆ. ಕೇವಲ 6 ತಿಂಗಳು ಕಾರ್ಯ ನಿರ್ವಹಿಸಬಲ್ಲದು ಎಂದು ಅಂದಾಜಿಸಿದ್ದ ಮಾಮ್‌ನ ದೀರ್ಘಾವಧಿ ಕಾರ್ಯ ನಿರ್ವಹಣೆಯನ್ನು ಗಮನಿಸುತ್ತಿರುವ ಜಗತ್ತು ಅಚ್ಚರಿ ವ್ಯಕ್ತಪಡಿಸುತ್ತಿದೆ.
 • ಇದು ಸಾಧ್ಯವಾಗಿದ್ದು ಉಪಗ್ರಹದ ಸಂಪೂರ್ಣ ಸ್ವಾಯತ್ತತೆ ಸಾಮರ್ಥ್ಯದಿಂದ. ಬಹಳ ಪೂರ್ವನಿಯೋಜಿತ ಕಾರ್ಯತಂತ್ರದಿಂದ ಮಾಮ್‌ ಉಪಗ್ರಹವನ್ನು ಸಿದ್ಧಪಡಿಸಿದ ಇಸ್ರೋ ಬಗ್ಗೆ ಮತ್ತೆ ಜಗತ್ತು ಚಪ್ಪಾಳೆ ತಟ್ಟುತ್ತಿದೆ.
 • ಆಗಾಗ ಶಕ್ತಿಯನ್ನು ಸಂರಕ್ಷಿಸಲು ಸಾಧ್ಯವಾಗುವ ಹೈಬರ್ನೇಷನ್‌ ಮೋಡ್‌ಗೆ ಹೋಗುವ ಮಾಮ್‌ ಯಾವುದೇ ಆಸಕ್ತಿಕರ ಅಂಶ ಪತ್ತೆಯಾದರೂ ತಕ್ಷಣ ಎಂದು ಫೋಟೋ ತೆಗೆದು ಭೂಮಿಗೆ ರವಾನಿಸುತ್ತಿದೆ.

ಮಾಮ್ ನ ವಿಶೇಷತೆ

 • ಈ 4 ವರ್ಷಗಳ ಅವಧಿಯಲ್ಲಿ ಮಾಮ್‌ ಸಾಕಷ್ಟು ದಾಖಲೆಗಳನ್ನು ಮುರಿದಿದೆ. ಗಮನಾರ್ಹ ವಿಚಾರವೆಂದರೆ ಗ್ರಹದ ಸಂಪೂರ್ಣ ಡಿಸ್ಕ್‌ ಅನ್ನು ಒಂದೇ ಫ್ರೇಮ್‌ನಲ್ಲಿ ಸೆರೆ ಹಿಡಿಯುವ ಸಾಮರ್ಥ್ಯವಿರುವುದು ಮಾಮ್‌ಗೆ ಮಾತ್ರ. ಮಂಗಳ ಗ್ರಹದ ಚಂದ್ರ ಡೀಮೋಸ್‌ ಚಿತ್ರವನ್ನು ಮಾಮ್‌ನ ಕ್ಯಾಮರಾ ಕಣ್ಣುಗಳು ಸೆರೆ ಹಿಡಿದಿವೆ.
 • ಇದುವರೆಗೆ ಮಾಮ್‌ ಸುಮಾರು 890 ಚಿತ್ರಗಳನ್ನು ಇಸ್ರೋಗೆ ಕಚೇರಿಗೆ ಕಳುಹಿಸಿಕೊಟ್ಟಿದೆ. ಇದರಲ್ಲಿ ಕೆಂಪು ಗ್ರಹ ಮತ್ತು ಅದರ ಸುತ್ತಲಿನ ಕೌತಕ ವಿಚಾರಗಳನ್ನು ಭಾರತೀಯ ವಿಜ್ಞಾನಿಗಳಿಗೆ ತಲುಪಿಸಿದೆ.

ಕೃತಕ ಗರ್ಭಧಾರಣೆ

ಸುದ್ಧಿಯಲ್ಲಿ ಏಕಿದೆ ?ಮನುಷ್ಯ ಹಾಗೂ ಸಾಕು ಪ್ರಾಣಿಗಳಿಗೆ ಸೀಮಿತವಾಗಿದ್ದ ಕೃತಕ ಗರ್ಭಧಾರಣೆ ಈಗ ಸಿಂಹಗಳಿಗೆ ವಿಸ್ತರಣೆಯಾಗಿದೆ. ಹೀಗೆ ಕೃತಕ ಗರ್ಭಧಾರಣೆ ಪ್ರಕ್ರಿಯಿಂದ ವಿಶ್ವದ ಮೊದಲ ಎರಡು ಸಿಂಹದ ಮರಿಗಳು ದಕ್ಷಿಣ ಆಫ್ರಿಕಾದ ರಾಜಧಾನಿ ಪ್ರಿಟೋರಿಯಾ ಸಮೀಪದ ಸಂರಕ್ಷಣಾ ಕೇಂದ್ರದಲ್ಲಿ ಜನಿಸಿವೆ.

 • ಆಫ್ರಿಕನ್‌ ಸಿಂಹಗಳ ಸಂತಾನೋತ್ಪತ್ತಿ ವ್ಯವಸ್ಥೆ ಕುರಿತು ಸಂಶೋಧನೆ ನಡೆಸುತ್ತಿರುವ ಪ್ರಿಟೋರಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಾಧನೆ ಮಾಡಿದ್ದಾರೆ.
 • ಕೃತಕ ಗರ್ಭಧಾರಣೆ ಮೂಲಕ ಎರಡು ಸಿಂಹದ ಮರಿಗಳು ಆಗಸ್ಟ್‌ 25ರಂದು ಜನಿಸಿದ್ದು, ಆರೋಗ್ಯವಾಗಿವೆ. 18 ತಿಂಗಳ ಸತತ ಶ್ರಮದ ನಂತರ ತಂಡ ಈ ಸಾಧನೆ ಮಾಡಿದೆ.

ಕೃತಕ ಗರ್ಭಧಾರಣೆಯ ಪ್ರಕ್ರಿಯೆ ಹೇಗೆ ?

 • ಇದಕ್ಕಾಗಿ ಆರೋಗ್ಯಯುತ ಗಂಡು ಸಿಂಹದಿಂದ ವೀರ್ಯವನ್ನು ಸಂಗ್ರಹಿಸಿ, ಅದನ್ನು ಸೂಕ್ತ ಸಮಯದಲ್ಲಿ ಹೆಣ್ಣು ಸಿಂಹಕ್ಕೆ ಕೃತಕವಾಗಿ ಇಂಜೆಕ್ಟ್ ಮಾಡಲಾಯಿತು. ಗರ್ಭಧಾರಣೆಯ ಕೆಲವು ತಿಂಗಳ ಸಾಮಾನ್ಯ ಪ್ರಕ್ರಿಯೆ ನಂತರ ಗಂಡು ಮತ್ತು ಹೆಣ್ಣು ಮರಿ ಸಿಂಹಗಳಿಗೆ ತಾಯಿ ಸಿಂಹ ಜನ್ಮ ನೀಡಿದೆ.

IVF ಬಗ್ಗೆ

 • IVF ಎನ್ನುವುದು ಬಂಜೆತನ ಚಿಕಿತ್ಸೆಯಲ್ಲಿ ಮತ್ತು ಗರ್ಭಾವಸ್ಥೆಯ ಸರೊಗಸಿಗೆ ಬಳಸಲಾಗುವ ಒಂದು ರೀತಿಯ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನವಾಗಿದ್ದು, ಇದರಲ್ಲಿ ಫಲವತ್ತಾದ ಮೊಟ್ಟೆಯನ್ನು ಶಸ್ತ್ರಚಿಕಿತ್ಸೆಯ ಗರ್ಭಾಶಯದೊಳಗೆ ಅಳವಡಿಸಲಾಗುತ್ತದೆ, ಮತ್ತು ಪರಿಣಾಮವಾಗಿ ಉಂಟಾಗುವ ಮಗು ಸರಪಳಿಗೆ ತಳೀಯವಾಗಿ ಸಂಬಂಧವಿಲ್ಲ.
Related Posts
“30th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ನೃಪತುಂಗ ಪ್ರಶಸ್ತಿ ಸುದ್ಧಿಯಲ್ಲಿ ಏಕಿದೆ ?ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೀಡುವ 2018ನೇ ಸಾಲಿನ 'ನೃಪತುಂಗ ಸಾಹಿತ್ಯ ಪ್ರಶಸ್ತಿ'ಗೆ ಕವಿ ಡಾ. ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನುಬಳಿಗಾರ್‌ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸಿದ್ದಲಿಂಗಯ್ಯ ಅವರನ್ನು ಸರ್ವಾನುಮತದಿಂದ ...
READ MORE
Karnataka Current Affairs – KAS/KPSC Exams-15th January 2019
No. of out-of-school children up 3-fold to over 44,000 in State The Department of Primary and Secondary Education has identified over 44,000 out-of-school children (OOSC) in the State. While the survey for ...
READ MORE
AUGUST MAHITHI MONTHLY CURRENT AFFAIRS MAGAZINE FOR KAS KPSC EXAMS
DOWNLOAD AUGUST 2016 CURRENT AFFAIRS MAGAZINE CLICK HERE Best Current affairs Magazine for all civil services competitive examinations. It is the only magazine that covers National issues, international issues and Karnataka issues ...
READ MORE
In an attempt to overcome severe power shortage faced by the state and to save power, Chief minister  launched an ambitious programme of the Energy department called 'Hosa Belaku - ...
READ MORE
Karnataka Current Affairs – KAS/KPSC Exams- 26th April 2018
India is one of the fastest growing Fairtrade markets India is touted to be one of the fastest growing markets for Fairtrade. The proof: in 2017-18, eight new brands made a commitment ...
READ MORE
Karnataka Current Affairs – KAS/KPSC Exams- 14th Dec 2017
BBMP launches ‘Fix My Street’ app In a bid to ensure speedy redressal of civic grievances, the BBMP has launched an app called ‘Fix My Street’. The app, which was rolled out ...
READ MORE
Trade Facilitation agreement TFA is divided into three parts. Section 1 contains provisions on simplification of border clearance procedures and adoption of new transparency measures and consists of 12 Articles. These 12 ...
READ MORE
Karnataka Current Affairs – KAS/KPSC Exams – 5th October 2018
Push for rooftop solar power generation Bengaluru’s apartment complexes are joining hands to give a boost to solar power generation through rooftop plants. The Bangalore Apartments' Federation (BAF) has launched a city-wide ...
READ MORE
National Current Affairs – UPSC/KAS Exams- 26th October 2018
Commonwealth Association for Public Administration and Management Award Topic: Governance In news: India wins CAPM Award 2018.The CAPAM Awards celebrate the spirit of innovation in the public service by recognizing organizations that ...
READ MORE
Karnataka Current Affairs – KAS/KPSC Exams – 23rd March 2018
Bengaluru tops in waterbodies with chemical pollution This is part of the findings of an analysis by the Central Pollution Control Board for the years 2013-17 More than half of the country’s ...
READ MORE
“30th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams-15th January 2019
AUGUST MAHITHI MONTHLY CURRENT AFFAIRS MAGAZINE FOR KAS
Hosabelaku
Karnataka Current Affairs – KAS/KPSC Exams- 26th April
Karnataka Current Affairs – KAS/KPSC Exams- 14th Dec
Trade Facilitation agreement- details and implementation
Karnataka Current Affairs – KAS/KPSC Exams – 5th
National Current Affairs – UPSC/KAS Exams- 26th October
Karnataka Current Affairs – KAS/KPSC Exams – 23rd

Leave a Reply

Your email address will not be published. Required fields are marked *