“16th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

2022ಕ್ಕೆ ಮಾನವ ಸಹಿತ ಬಾಹ್ಯಾಕಾಶ ಯಾನ

 • ಸುದ್ದಿಯಲ್ಲಿ ಏಕಿದೆ? ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಎಂದಿಗೂ ಮುಂದಿರುತ್ತದೆ. 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳುತ್ತದೆ. ಸಾಧ್ಯವಾದರೆ ಅದಕ್ಕಿಂತಲೂ ಮೊದಲೇ ಭಾರತ ಪುತ್ರ ಅಥವಾ ಪುತ್ರಿಯನ್ನು ಅಂತರಿಕ್ಷ ಯಾತ್ರೆಗ ಕಳುಹಿಸಲಾಗುತ್ತದೆ ಎಂದು ಮೋದಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಘೋಷಿಸಿದ್ದಾರೆ.
 • ಅಂತರಿಕ್ಷ ಯಾತ್ರೆ ಮೂಲಕ ಭಾರತ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧರಿಸಿರುವುದಾಗಿ ಹೇಳಿದರು. ಈ ಯೋಜನೆ ಪೂರ್ಣಗೊಂಡರೆ ಅಮೆರಿಕ,ರಷ್ಯಾ, ಚೀನಾ ಬಳಿಕ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದಿದ್ದಾರೆ.
 • ಮಂಗಳಯಾನ ಸಹಿತ ಹಲವು ಯೋಜನೆಗಳ ಮೂಲಕ ಭಾರತದ ವಿಜ್ಞಾನಿಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ನಮ್ಮ ದೇಶದ ವ್ಯಕ್ತಿಯೇ ಬಾಹ್ಯಾಕಾಶಕ್ಕೆ ತೆರಳುವಂತಾಗಬೇಕು.
 • ರಾಕೇಶ್ ಶರ್ಮಾ ಭಾರತದ ಮೊದಲ ಗಗನಯಾತ್ರಿ: ಈವರೆಗೆ ವಿಶ್ವದ ಮೂರು ರಾಷ್ಟ್ರಗಳಷ್ಟೇ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವಲ್ಲಿ ಯಶಸ್ವಿಯಾಗಿವೆ. ಅವೆಂದರೆ-ರಷ್ಯಾ (1962), ಅಮೆರಿಕ (1968), ಚೀನಾ (2003). ರಾಕೇಶ್ ಶರ್ಮಾ ಭಾರತದ ಮೊದಲ ಗಗನಯಾತ್ರಿ. 1984 ಏಪ್ರಿಲ್ 2ರಂದು ಸೋವಿಯತ್ ರಾಕೆಟ್ ಸೂಟ್ ಟಿ-2ನಲ್ಲಿ ತಂಡದಲ್ಲಿ ಅವರಿದ್ದರು.

ಶುರುವಾಗಿದೆ ಯೋಜನೆ ಸಿದ್ಧತೆ

 • 2022ರ ವೇಳೆಗೆ ಮಾನವಸಹಿತ ಬಾಹ್ಯಾಕಾಶ ನೌಕೆ ಉಡಾವಣೆಗೆ ಇಸ್ರೋ ಯೋಜನೆ ರೂಪಿಸಿದ್ದು, ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕೆಲಸ ಈಗಾಗಲೇ ಶುರುವಾಗಿದೆ
 • ಇಡೀ ದೇಶ ಹೆಮ್ಮಪಡುವ ಸಂಗತಿಯನ್ನು ಪ್ರಧಾನಿ ಘೋಷಿಸಿ ದ್ದಾರೆ. 2022 ಅಥವಾ ಅದಕ್ಕೂ ಮೊದಲು ಮಾನವಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಮಾಡಲಾಗುತ್ತದೆ. ಈ ಯೋಜನೆ ಇಸ್ರೋ ಪಾಲಿಗೆ ಸವಾಲು ಹಾಗೂ ಘನತೆಯ ವಿಚಾರವಾಗಿದೆ. ಅಂತರಿಕ್ಷ ಯಾನಿಗಳಿಗೆ ಬೇಕಾದ ಜೀವರಕ್ಷಕ ಕವಚವನ್ನು ನಾವೇ ಅಭಿವೃದ್ಧಿಪಡಿಸುತ್ತೇವೆ. 10 ಸಾವಿರ ಕೋಟಿ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಯೋಜನೆ ಪೂರೈಸುವ ಗುರಿ ಹೊಂದಿದ್ದೇವೆ.
 • ತಂತ್ರಜ್ಞಾನ ಕ್ಷೇತ್ರ ಉನ್ನತ ದರ್ಜೆಗೆ:. ಈಗಾಗಲೇ ಸಿಬ್ಬಂದಿ ಘಟಕ, ತುರ್ತು ಸಂದರ್ಭದಲ್ಲಿ ಪಾರಾಗುವ ವ್ಯವಸ್ಥೆ (ಎಸ್ಕೇಪ್ ಸಿಸ್ಟಮ್ ಅಭಿವೃದ್ಧಿಪಡಿಸಿದ್ದೇವೆ. ಈ ಯೋಜನೆಯಲ್ಲಿ ಜಿಎಸ್​ಎಲ್​ವಿ ಮಾರ್ಕ್ 3 ವಾಹನವನ್ನು ಉಡಾವಣೆಗೆ ಉಪಯೋಗ ಮಾಡಿಕೊಳ್ಳಲಾಗುವುದು. ಈ ನೌಕೆ ಉಡಾವಣೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಮತ್ತಷ್ಟು ಉನ್ನತ ದರ್ಜೆಗೆ ಏರಲಿದೆ.
 • 7 ದಿನ ಅಂತರಿಕ್ಷದಲ್ಲಿ: ಇಸ್ರೋ ಮಾನವಸಹಿತ ನೌಕೆ ಭೂಮಿಯಿಂದ 300 -400 ಕಿ.ಮೀ ಎತ್ತರದಲ್ಲಿ 7 ದಿನ ಅಂತ ರಿಕ್ಷದಲ್ಲಿ ಇರಲಿದೆ. ಉಡಾವಣಾ ತಂತ್ರಜ್ಞಾನ ವನ್ನು ಭಾರತದಲ್ಲೇ ತಯಾರಿಸಲು ಇಸ್ರೋ ನಿರ್ಧರಿಸಿದೆ.
 • ಮೊದಲು ಪ್ರಾಣಿ ರವಾನೆ: ಮಾನವಸಹಿತ ಬಾಹ್ಯಾಕಾಶ ನೌಕೆ ಉಡಾವಣೆಗೂ ಮುನ್ನ ಪ್ರಾಣಿಗಳನ್ನಿರಿಸಿ ಅಂತರಿಕ್ಷಕ್ಕೆ ನೌಕೆ ಕಳುಹಿಸುವ ಕುರಿತೂ ಚರ್ಚೆ ನಡೆದಿದೆ. ನೌಕೆ ಉಡಾವಣೆ ಯೋಜನೆಗೆ ಎಲ್ಲ ಸಿದ್ಧತೆ ನಡೆದಿದೆ. ಅಧಿಕೃತವಾಗಿ ಅನುಮತಿ ತೆಗೆದುಕೊಳ್ಳುವುದಷ್ಟೆ ಬಾಕಿ ಉಳಿದಿದೆ. 3 ಗಗನಯಾತ್ರಿಗಳು ಅಂತರಿಕ್ಷ ಯಾನ ನಡೆಸಲಿದ್ದಾರೆ.

ಕೀಟ ನಾಶಕಗಳ ಬಳಕೆಗೆ ನಿಷೇಧ

 • ಸುದ್ದಿಯಲ್ಲಿ ಏಕಿದೆ? ಕೇಂದ್ರ ಸರಕಾರ ಭತ್ತ, ಗೋಧಿ ಹಾಗೂ ಕ್ಯಾಬೇಜ್‌, ಬದನೆ, ಬೆಂಡೆಕಾಯಿ ಇತ್ಯಾದಿ ತರಕಾರಿಗಳ ಬೆಳೆಗಳಲ್ಲಿ ಬಳಸುವ ಅಪಾಯಕಾರಿ 18 ಕೀಟನಾಶಕಗಳ ಬಳಕೆಯನ್ನು ನಿಷೇಧಿಸಿದೆ. ಈ ಪೈಕಿ 12 ಕೀಟನಾಶಕಗಳನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ. ಇನ್ನೂ 6 ಕೀಟನಾಶಕಗಳು 2020ರ ಡಿಸೆಂಬರ್‌ 31ರೊಳಗೆ ನಿಷೇಧಿಸಲಾಗುವುದು ಎಂದು ಸರಕಾರ ತಿಳಿಸಿದೆ.

ಹಿನ್ನಲೆ 

 • ಈ ಹಿಂದೆ 2013ರಲ್ಲಿ ರಚನೆಯಾಗಿದ್ದ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ಈ ಕ್ರಮ ತೆಗೆದುಕೊಂಡಿದೆ. ಒಟ್ಟು 66 ಕೀಟನಾಶಕಗಳನ್ನು ಸಮಿತಿ ಅಧ್ಯಯನಕ್ಕೆ ಒಳಪಡಿಸಿತ್ತು.
 • ಇಂಡಿಯನ್‌ ಅಗ್ರಿಕಲ್ಚರಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ವಿಶ್ರಾಂತ ಪ್ರೊಫೆಸರ್‌ ಅನುಪಮ್‌ ವರ್ಮಾ ನೇತೃತ್ವದಲ್ಲಿ ಅಧ್ಯಯನ ನಡೆದಿತ್ತು.
 • 2 ವರ್ಷಗಳ ನಂತರ ತನ್ನ ವರದಿಯನ್ನೂ ಸರಕಾರಕ್ಕೆ ಸಲ್ಲಿಸಿತ್ತು. ವರದಿಯಲ್ಲಿ ಒಟ್ಟು 18 ಕೀಟ ನಾಶಕಗಳನ್ನು ನಿಷೇಧಿಸಲು ಶಿಫಾರಸು ಮಾಡಿದೆ. ಆದರೆ ಈ ಎಲ್ಲ 66 ಕೀಟನಾಶಕಗಳೂ ಒಂದಿಲ್ಲೊಂದು ರಾಷ್ಟ್ರದಲ್ಲಿ ನಿಷೇಧಕ್ಕೀಡಾಗಿವೆ ಅಥವಾ ಬಳಕೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎನ್ನುವುದು ಗಮನಾರ್ಹ.

ಯಾವೆಲ್ಲ ಕೀಟ ನಾಶಕಗಳ ನಿಷೇದ?

K

 • 2020ರ ಡಿಸೆಂಬರ್‌ 31ರಿಂದ ಅಲಾಕ್ಲೋರ್‌, ಡಿಕ್ಲೋರ್‌ವೊಸ್‌, ಫೋರೇಟ್‌, ಫೋಸ್ಪಾಮಿಡೊನ್‌, ಟ್ರಿಯಾಜೊಫೋಸ್‌ ಮತ್ತು ಟ್ರಿಕ್ಲೋರ್‌ಫೋನ್‌ ಎಂಬ ಇತರ 6 ಕೀಟ ನಾಶಕಗಳ ಬಳಕೆ ನಿಷೇಧಕ್ಕೀಡಾಗಲಿದೆ.
 • ನಿಯಮಾವಳಿಗಳ ಪ್ರಕಾರ ಎಲ್ಲ 12 ನಿಷೇಧಿತ ಕೀಟನಾಶಕಗಳ ಬಳಕೆ, ಆಮದು, ಉತ್ಪಾದನೆ, ಸಾಗಣೆ ಮತ್ತು ಮಾರಾಟ ಕಾನೂನುಬಾಹಿರವಾಗಲಿದೆ. ನಿಷೇಧಿತ ಕೀಟನಾಶಕಗಳ ಉತ್ಪಾದನೆ, ಆಮದು , ಮಾರಾಟ ಕುರಿತು ನೋಂದಣಿ ದಾಖಲೆ ಹೊಂದಿರುವವರು, ಮೂರು ತಿಂಗಳಿನ ಒಳಗೆ ಹಿಂತಿರುಗಿಸಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರಕಾರ ತಿಳಿಸಿದೆ. ಉಳಿದ 6 ಕೀಟನಾಶಕಗಳ ಆಮದು ಕೂಡ 2019ರ ಜನವರಿ 1ರಿಂದ ಮುಕ್ತಾಯವಾಗಲಿದೆ.

ಏಕೆ ನಿಷೇಧದ ನಿರ್ಧಾರ ?

 • ನಿಷೇಧಿತ ಕೀಟನಾಶಕಗಳು ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕ ಎಂದು ಸಮಿತಿ ತಿಳಿಸಿತ್ತು
 • ಈ ಕೀಟನಾಶಕಗಳು ಅಂತರ್ಜಲ ಹಾಗೂ ನೀರಿನ ಮೂಲಗಳಲ್ಲೂ ಪತ್ತೆಯಾಗಿದ್ದು, ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿವೆ ಎಂದು ಸಮಿತಿ ತಿಳಿಸಿದೆ.
 • ಆತ್ಮಹತ್ಯೆಯಲ್ಲಿ ಕೀಟನಾಶಕ ಬಳಕೆ: ನಾನಾ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದಾಗ, ಕೀಟನಾಶಕಗಳನ್ನು ಕುಡಿದು ಮೃತಪಟ್ಟಿರುವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕೆಲವು ಕೀಟನಾಶಕಗಳು ಹಾಗೂ ಕಳೆ ನಾಶಕಗಳ ಸತತ ಬಳಕೆಯೇ ನರವ್ಯೂಹದ ಆರೋಗ್ಯಕ್ಕೆ ಮಾರಕವಾಗಿದ್ದು, ಖಿನ್ನತೆಯನ್ನು ಉಂಟುಮಾಡಬಲ್ಲುದು. ಖಿನ್ನತೆ ಆತ್ಮಹತ್ಯೆಯಂಥ ಕೃತ್ಯಕ್ಕೆ ಪ್ರಚೋದಿಸಬಹುದು

ಡೇಟಾ ಸಂಗ್ರಹ

 • ಸುದ್ದಿಯಲ್ಲಿ ಏಕಿದೆ? ಆನ್​ಲೈನ್ ಮಾರಾಟ ಹಾಗೂ ಸರ್ಚ್ ಎಂಜಿನ್ ಸಂಸ್ಥೆಗಳು ಭಾರತದಲ್ಲಿಯೇ ಡೇಟಾ ಸಂಗ್ರಹಿಸಬೇಕು ಎಂಬ ಇ-ಕಾಮರ್ಸ್ ಕರಡು ನೀತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಉದ್ದೇಶ

 • ಭಾರತೀಯ ಗ್ರಾಹಕರ ಡಿಜಿಟಲ್ ಡೇಟಾಗಳು ದುರುಪಯೋಗ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಕರಡು ನೀತಿಯಲ್ಲಿ ಈ ಅಂಶ ಸೇರಿಸಲಾಗಿದೆ. ಡೇಟಾ ಸುರಕ್ಷತೆ ಕುರಿತು ನ್ಯಾ.ಬಿ.ಎನ್. ಶ್ರೀಕೃಷ್ಣ ಆಯೋಗ ನೀಡಿದ ವರದಿಯಲ್ಲೂ ಡೇಟಾ ಸುರಕ್ಷತೆ, ದೇಶದಲ್ಲಿ ಸರ್ವರ್ ಆರಂಭಿಸುವ ಶಿಫಾರಸು ಮಾಡಲಾಗಿತ್ತು.
 • ಭಾರತದಲ್ಲಿ ಇ-ವಾಣಿಜ್ಯ ವಹಿವಾಟು ನಡೆಸುತ್ತಿರುವ ವಿದೇಶಿ ಹಾಗೂ ಸ್ವದೇಶಿ ವೆಬ್​ಸೈಟ್​ಗಳಿಗೆ ಈ ನಿರ್ದೇಶನ ನೀಡಲಾಗಿದೆ. ಇದರ ಜತೆಗೆ ಹಣಕಾಸು ವ್ಯವಹಾರಗಳಿಗೆ ಇರುವಂತೆ ಇ-ಕಾಮರ್ಸ್ ಸಂಸ್ಥೆಗಳು ಕೂಡ ಆರ್ಥಿಕ ವ್ಯವಹಾರಕ್ಕೆ ಎರಡು ಹಂತದ ದೃಢೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಕರಡು ನೀತಿಯಲ್ಲಿ ಹೇಳಲಾಗಿದೆ.
 • ರಿಯಾಯಿತಿ ಮಾರಾಟಕ್ಕೆ ಕಡಿವಾಣ?: ಮುಖಬೆಲೆ ಮೇಲೆ ದೊಡ್ಡ ಪ್ರಮಾಣದ ರಿಯಾಯಿತಿ ದರವನ್ನು ಘೋಷಿಸಿ ಆನ್​ಲೈನ್ ಮಾರುಕಟ್ಟೆಗಳು ಗ್ರಾಹಕರನ್ನು ಸೆಳೆಯುತ್ತಿದ್ದವು. ಕೆಲ ಉದ್ಯಮಗಳಿಂದ ಈ ವ್ಯವಸ್ಥೆ ಕುರಿತು ತೀವ್ರ ವಿರೋಧವಿತ್ತು. ಈಗ ಪ್ರಕಟವಾಗಿರುವ ಕರಡು ನೀತಿಯಲ್ಲಿ ಎಂಆರ್​ಪಿಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವುದನ್ನು ನಿರ್ಬಂಧಿಸುವ ಪ್ರಸ್ತಾಪವಿದೆ. ಇ-ವಾಣಿಜ್ಯ ಕಂಪನಿಗಳು ಉತ್ಪನ್ನಗಳ ಮುಖ ಬೆಲೆಯನ್ನೇ ಅನುಸರಿಸಬೇಕು ಎಂದು ಹೇಳಲಾಗಿದೆ.
 • ಕರಡು ನೀತಿ ಪ್ರಕಾರ ಆನ್​ಲೈನ್ ಮಾರುಕಟ್ಟೆಗೆ ಯಾವುದೆ ಗ್ರಾಹಕ ಪ್ರವೇಶಿಸಿದಾಗ ಸರ್ಚ್ ಹಿಸ್ಟರಿ, ಲೊಕೇಷನ್, ಹಣಕಾಸು ಮಾಹಿತಿ ಸೇರಿ ಕೆಲ ಸೂಕ್ಷ್ಮ ಅಂಶಗಳು ಸಂಗ್ರಹವಾಗುತ್ತವೆ. ಈ ಮೂಲಕ ಪ್ರತಿಯೊಬ್ಬ ಬಳಕೆದಾರರ ವೈಯಕ್ತಿಕ ಮಾರ್ಕೆಟಿಂಗ್ ಪ್ರೊಫೈಲ್ ತಯಾರಾಗುತ್ತದೆ. ಈ ಡೇಟಾ ಆಧರಿಸಿ ಜಾಹೀರಾತು, ಗ್ರಾಹಕರ ಆಸಕ್ತಿ ಕುರಿತ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಈ ಡೇಟಾಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾತ್ರ ಬಳಸಲು ಈ ನೀತಿಯಲ್ಲಿ ಅವಕಾಶವಿದೆ. ಡೇಟಾಗಳ ಹಂಚಿಕೆ ಕುರಿತು ಪ್ರತ್ಯೇಕ ನಿಯಮ ರಚನೆಗೂ ನಿರ್ಧರಿಸಲಾಗಿದೆ.

ಪ್ರತ್ಯೇಕ ಪ್ರಾಧಿಕಾರ

 • ಗ್ರಾಹಕರ ಹಿತಾಸಕ್ತಿ ಕಾಪಾಡಲು ಕೇಂದ್ರೀಯ ಗ್ರಾಹಕರ ಸುರಕ್ಷತಾ ಪ್ರಾಧಿಕಾರ ರಚಿಸುವ ಪ್ರಸ್ತಾಪ ಮಾಡಲಾಗಿದೆ. ಕಂಪನಿಗಳ ಮಟ್ಟದಲ್ಲಿ ಪರಿಹಾರ ಸಿಗದ ಗ್ರಾಹಕರ ದೂರುಗಳನ್ನು ಇಲ್ಲಿ ವಿಚಾರಣೆ ಮಾಡಲಾಗುತ್ತದೆ. ಈ ಪ್ರಾಧಿಕಾರವು ಸರ್ವರ್​ಗಳ ಮೇಲಿನ ಡೇಟಾದ ಅಧಿಕಾರ ಹೊಂದಲಿದ್ದು, ಅಗತ್ಯವಿದ್ದರೆ ಸ್ಥಳೀಯ ಸ್ಟಾರ್ಟ್​ಅಪ್​ಗಳೊಂದಿಗೆ ಈ ಮಾಹಿತಿ ಹಂಚಿಕೊಳ್ಳುವ ಅವಕಾಶ ನೀಡಲಾಗಿದೆ. ಇದರ ಜತೆಗೆ ವಾಣಿಜ್ಯ ಇ-ಮೇಲ್​ಗಳ ಕುರಿತು ಕೂಡ ನಿಯಮ ರಚಿಸುವ ಪ್ರಸ್ತಾವನೆ ಇರಿಸಲಾಗಿದೆ.
Related Posts
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ದೇವಾಲಯಗಳ ದೇಣಿಗೆ ಕಡ್ಡಾಯವೆಂಬ ಆದೇಶ ತಿದ್ದುಪಡಿ ಸುದ್ಧಿಯಲ್ಲಿ ಏಕಿದೆ ? ರಾಜ್ಯದ 81 ದೇವಾಲಯಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು 12.38 ಕೋಟಿ ಹಣ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್‌ ಇತ್ಯರ್ಥಗೊಳಿಸಿದೆ. ಹಿನ್ನಲೆ ಸರಕಾರ ಆ.21ರಂದು ಹೊರಡಿಸಿದ್ದ ಆದೇಶದ ಪ್ರಕಾರ ...
READ MORE
Sewage Treatment Plant in Kolar District
Why in News: The first Sewage Treatment Plant using latest technology called the Sequential Batch Reactor Technology has been commissioned by the Karnataka Urban Water Supply and Drainage Board at Malur ...
READ MORE
Karnataka Current Affairs – KAS/KPSC Exams- 14th June 2018
Mudigere taluk records highest rainfall in State The rainfall in Hassan and Chikkamagaluru districts was widespread on 11th & 12th June The State’s highest rainfall of 395.5mm was recorded at Kirugunda in ...
READ MORE
“11th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಇ-ವಾಹನ ನೀತಿ ಸುದ್ದಿಯಲ್ಲಿ ಏಕಿದೆ? ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ವಯೋಮಿತಿಯನ್ನು 16 ವರ್ಷಕ್ಕೆ ಇಳಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ. ದೇಶದಲ್ಲಿ ಇ-ವಾಹನಗಳ ಬಳಕೆ ಹೆಚ್ಚಿಸುವ ಉದ್ದೇಶ ದಿಂದ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಇ-ವಾಹನ ನೀತಿಯ ಮಹತ್ವ: ...
READ MORE
Karnataka Current Affairs – KAS/KPSC Exams – 9th July 2018
Solid waste management may go back to contractors The city’s solid waste management may go back to garbage contractors. The Bruhat Bengaluru Mahanagara Palike (BBMP) council, on Saturday, passed a unanimous ...
READ MORE
Karnataka Current Affairs – KAS / KPSC Exams – 24th May 2017
Tree survey is yet to take off in city Tree-fall, which endangers the lives of citizens and puts property at risk, is a common phenomenon during the rainy season. But the question ...
READ MORE
National Current Affairs – UPSC/KAS Exams- 17th August 2018
Mumbai gives India its first baby penguin Why in news? The Humboldt penguin was hatchedon August 15 About Penguin As the country celebrated its 72nd Independence Day, the Byculla Zoo had another reason to ...
READ MORE
Karnataka Current Affairs – KAS / KPSC Exams – 15th June 2017
Bill to bring all varsities under one umbrella tabled The Karnataka State Universities Bill, 2017 — which seeks to bring all State universities under one umbrella — was tabled in the ...
READ MORE
Karnataka Current Affairs – KAS/KPSC Exams-28th December 2018
Hampi voted as top Asian travel destination A panel consisting of five of the world’s top travel influencers and bloggers has voted Hampi as one of the top emerging Asian travel ...
READ MORE
“28th ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಕೆದಾಟು ಯೋಜನೆ ಸುದ್ಧಿಯಲ್ಲಿ ಏಕಿದೆ? ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ಹಿನ್ನಡೆಯಾಗಿದೆ. ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಸಮಗ್ರ ಯೋಜನಾ ವರದಿ ...
READ MORE
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Sewage Treatment Plant in Kolar District
Karnataka Current Affairs – KAS/KPSC Exams- 14th June
“11th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams – 9th
Karnataka Current Affairs – KAS / KPSC Exams
National Current Affairs – UPSC/KAS Exams- 17th August
Karnataka Current Affairs – KAS / KPSC Exams
Karnataka Current Affairs – KAS/KPSC Exams-28th December 2018
“28th ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *