17th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಸ್ಮಾರ್ಟ್‌ ಸಿಟಿ

ಸುದ್ಧಿಯಲ್ಲಿ ಏಕಿದೆ ?ನಗರವಾಸಿಗಳಿಗೆ ಕೈಗೆಟಕುವ ಮನೆಗಳು, ಷಹರದೊಳಗೆ ಬಹುಮಾದರಿಯ ಸರಾಗ ಸಂಚಾರ ವ್ಯವಸ್ಥೆ, ತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ನಗರಗಳ ಶ್ವಾಸಕೋಶಗಳಂತೆ ಕೆಲಸ ಮಾಡುವ ಬಯಲುಗಳ(ಓಪನ್‌ ಸ್ಪೇಸ್‌) ಸಂರಕ್ಷಣೆ ಸೇರಿದಂತೆ ನಗರ ಜೀವನದ ಗುಣಮಟ್ಟ ಹೆಚ್ಚಿಸಲು ವಿನ್ಯಾಸಗೊಂಡಿರುವ ಸ್ಮಾರ್ಟ್‌ ಸಿಟಿ ಯೋಜನೆ ನಾನಾ ಕಾರಣಗಳಿಂದಾಗಿ ಕರ್ನಾಟಕದಲ್ಲೂ ಸಂಪೂರ್ಣ ಸೊರಗಿದೆ.

ಕಾರಣಗಳು

 • ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ ಸಿಟಿ ಮಿಷನ್‌(ಸ್ಮಾರ್ಟ್‌ ನಗರ ಅಭಿಯಾನ) ನಿಭಾಯಿಸಲು ನಗರ ಯೋಜನೆ ಬಲ್ಲ ಐಎಎಸ್‌, ಕೆಎಎಸ್‌ ಅಧಿಕಾರಿಗಳು ಹಾಗೂ ನಗರ ಯೋಜನೆ ತಜ್ಞರೇ(ಅರ್ಬನ್‌ ಟೌನ್‌ ಪ್ಲಾನರ್ಸ್‌) ಸಿಗುತ್ತಿಲ್ಲ !
 • ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ಹಾಗೂ ಬೆಂಗಳೂರು ಸೇರಿ ರಾಜ್ಯದ ಸಪ್ತ ಸಿಟಿಗಳಿಗೆ ಕೇಂದ್ರ ಸರಕಾರ ಇದುವರೆಗೆ 1709 ಕೋಟಿ ರೂ. ಅನುದಾನ ನೀಡಿದ್ದರೂ, ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ಶೇ.3ರಷ್ಟು ಹಣ ಕೂಡ ಈ ನಗರಗಳನ್ನು ಸ್ಮಾರ್ಟ್‌ ಮಾಡಲು ಬಳಕೆಯಾಗಿಲ್ಲ. ಅಂದರೆ ಇದುವರೆಗೂ ಖರ್ಚಾಗಿರುವ ಹಣ ಬರೀ 44 ಕೋಟಿ ರೂ. ಮಾತ್ರ
 • ಈ ಯೋಜನೆಯ ಅನುಷ್ಠಾನಕ್ಕಾಗಿ ರಚನೆಯಾಗಲೇಬೇಕಾದ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ ಕಂಪನಿಗೆ ಐಎಎಸ್‌/ಕೆಎಎಸ್‌ ದರ್ಜೆಯ ಹಿರಿಯ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಬೇಕೆಂಬ ನಿಯಮವಿದ್ದರೂ, ಕರ್ನಾಟಕದಲ್ಲಿ ಎರಡು ಕಡೆ ಮಾತ್ರ ಅಂತಹ ಪ್ರಯತ್ನ ನಡೆದಿದೆ. ದಾವಣಗೆರೆ, ತುಮಕೂರು ಹೊರತುಪಡಿಸಿ ಉಳಿದ ಎಲ್ಲ ಕಡೆ ಸದ್ಯ ಆಯಾಯ ನಗರಗಳ ಸ್ಥಳೀಯ ಆಡಳಿತದ ಮುಖ್ಯಸ್ಥ ರೇ ಸ್ಮಾರ್ಟ್‌ ಸಿಟಿ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿದ್ದಾರೆ. ದೈನಂದಿನ ಕೆಲಸಗಳ ನಡುವೆ ಈ ಕೆಲಸ ಮಾಡಲು ಸಾಧ್ಯವಾಗದೇ ಇಡೀ ಯೋಜನೆ ಅವರಿಗೆ ಭಾರವಾಗಿ ಪರಿಣಮಿಸಿದೆ.
 • ಸುವ್ಯವಸ್ಥಿತ ನಗರ ತಜ್ಞರ ಕೊರತೆ, ಈ ಯೋಜನೆಯಲ್ಲಿ ಕೆಲಸ ಮಾಡಲು ಅಧಿಕಾರಿಗಳ ಅನಾಸಕ್ತಿ ಮಾತ್ರ ಈ ಹಿನ್ನಡೆಗೆ ಕಾರಣವಲ್ಲ. ಇಡೀ ಯೋಜನೆ ಸೋರಿಕೆ ರಹಿತವಾಗಿ ಹಾಗೂ ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳಲೆಂದು ಹೆಣೆದಿರುವ ಪ್ರಕ್ರಿಯೆ, ಯೋಜನೆಯನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವ ಚುನಾಯಿತ ಪ್ರತಿನಿಧಿಗಳು ಹಾಗೂ ಕೋಟಿ ರೂ. ಕಾಮಗಾರಿಯಲ್ಲಿ ಕಮಿಷನ್‌ ವ್ಯವಹಾರಕ್ಕೆ ಆಸ್ಪದ ಇಲ್ಲದೇ ಇರುವುದು ಕೂಡ ಸ್ಮಾರ್ಟ್‌ ಸಿಟಿ ಯೋಜನೆ ನಿಂತಲ್ಲಿಯೇ ನಿಲ್ಲಲು ಕಾರಣವಾಗಿವೆ !

ಏನಿದು ಸ್ಮಾರ್ಟ್‌ ಸಿಟಿ ಅಭಿಯಾನ?

 • ಬೇಕಾಬಿಟ್ಟಿ ಬೆಳೆಯುತ್ತಿರುವ ನಗರಗಳ ಜೀವನಮಟ್ಟ ಸುಧಾರಿಸಲು ಅಗತ್ಯವಾದ ಮೂಲಸೌಕರ್ಯ ಕಲ್ಪಿಸಿಕೊಡುವುದು ಇದರ ಉದ್ದೇಶ. ಉತ್ತಮವಾದ ಗಾಳಿ-ಬೆಳಕು, ಸಮರ್ಪಕ ಸಂಚಾರ ವ್ಯವಸ್ಥೆ, ಆರೋಗ್ಯಕರ ಪರಿಸರ, ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ಕೈಗೆಟಕುವ ವಸತಿ ವ್ಯವಸ್ಥೆ, ಇ ಆಡಳಿತ- ಹೀಗೆ ನಗರವಾಸಿಗಳ ಬದುಕನ್ನು ಹಸನಾಗಿಸುವುದು ಅಭಿಯಾನದ ಉದ್ದೇಶ.
 • ಯೋಜನೆಗೆ ಆಯ್ಕೆಯಾದ ನರಗಗಳಿಗೆ ಪ್ರತಿ ವರ್ಷ ಕೇಂದ್ರ ಸರಾಸರಿ 100 ಕೋಟಿ ರೂ. ನೀಡುವುದಾಗಿ ಪ್ರಕಟಿಸಿದೆ. ಇದಕ್ಕೆ ಸರಿಸಮವಾಗಿ ರಾಜ್ಯ ಸರಕಾರ ಹಾಗೂ ಖಾಸಗಿ ಸಂಸ್ಥೆಗಳ ಹಣವನ್ನು ಯೋಜನೆಗೆ ಬಳಸಿಕೊಳ್ಳಬಹುದು.

ಅನುಷ್ಠಾನ ವಿಧಿ ವಿಧಾನ ಹೇಗೆ?

 • ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ಹರಿದಾಡುವುದರಿಂದ ಹಾಗೂ ಈ ಹಣ ಪ್ರಾಮಾಣಿಕವಾಗಿ ಸದ್ಬಳಕೆಯಾಗಲೆಂದು ಕೇಂದ್ರ ಸರಕಾರ ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ವಿಶೇಷ ವ್ಯವಸ್ಥೆ ರೂಪಿಸಿದೆ. ಅದರ ಪ್ರಕಾರ, ಈ ಯೋಜನೆಗೆ ಆಯ್ಕೆಯಾದ ನಗರಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರತ್ಯೇಕವಾದ ವಿಶೇಷ ಉದ್ದೇಶ ವಾಹಕ (ಸ್ಪೆಷಲ್‌ ಪರ್ಪಸ್‌ ವೆಹಿಕಲ್‌) ಹೆಸರಲ್ಲಿ ನೋಂದಾಯಿತ ಕಂಪನಿ ಸ್ಥಾಪಿಸಿ, ಇದಕ್ಕೆ ಐಎಎಸ್‌/ಕೆಎಎಸ್‌ ದರ್ಜೆಯ ಪೂರ್ಣಾವಧಿ ಅಧಿಕಾರಿಯನ್ನು ಎಂಡಿ ಆಗಿ ನೇಮಿಸಬೇಕು.
 • ಜತೆಗೆ ಸ್ಥಳೀಯ ಸಂಸ್ಥೆ, ರಾಜ್ಯ ಹಾಗೂ ಕೇಂದ್ರ ಸರಕಾರ ಪ್ರತಿನಿಧಿಸುವ 15 ಜನ ನಿರ್ದೇಶಕರು ಇರಬೇಕು. ಈ ಕಚೇರಿಗೆ ಪ್ರತ್ಯೇಕ ಸಿಬ್ಬಂದಿ, ಕಚೇರಿಯೂ ಇರಬೇಕು. ಬಳಿಕವಷ್ಟೇ ಆರ್ಥಿಕ ಅಧಿಕಾರ ಸಿಗುತ್ತೆ. ಯೋಜನೆ ಮೇಲ್ವಿಚಾರಣೆಗೆ ಪಿಎಂಸಿ(ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಕನ್ಸಲ್‌ಟೆಂಟ್‌) ಆಯ್ಕೆಯಾಗಬೇಕು. ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಯೋಜನೆ, ಮಂಜೂರಾತಿ, ಅನುದಾನ ಬಳಕೆ, ಕೇಂದ್ರ-ರಾಜ್ಯ ಸರಕಾರಗಳೊಂದಿಗೆ ವ್ಯವಹಾರ- ಎಲ್ಲವನ್ನೂ ಈ ಎಸ್‌ಪಿವಿ ಕಂಪನಿಯೇ ನಿರ್ವಹಿಸಬೇಕು.

ಹೇಗಿರಬೇಕು ಸ್ಮಾರ್ಟ್‌ ಸಿಟಿ?

 • ಸ್ಮಾರ್ಟ್‌ ಸಿಟಿ ಹೀಗೆಯೆ ಇರಬೇಕು ಎಂದು ಕೇಂದ್ರ ಸರಕಾರ ನಿರ್ದಿಷ್ಟ ಸಿಟಿಯನ್ನು ಉದಾಹರಿಸಿಲ್ಲ. ಒಂದು ಮಾದರಿ ಎಲ್ಲ ನಗರಗಳಿಗೂ ಅನ್ವಯಿಸದು. ಪ್ರತಿ ನಗರಕ್ಕೂ ಅದರದ್ದೇ ಆದ ಪರಂಪರೆ, ರಚನೆ, ಭೌಗೋಳಿಕ ವಿಶಿಷ್ಟತೆ, ಆಲೋಚನೆ ಇರುತ್ತದೆ. ಅದಕ್ಕೆ ತಕ್ಕಂತೆ ಆ ನಗರಿಯನ್ನು ಸ್ಮಾರ್ಟ್‌ ಆಗಿ ಕಟ್ಟಲು ಅನುವು ಮಾಡಿಕೊಡಲಾಗಿದೆ. ಆದರೆ, ಪ್ರತಿ ನಗರವೂ ಮಾಹಿತಿ ತಂತ್ರಜ್ಞಾನದ ಗರಿಷ್ಠ ಲಾಭ ಪಡೆದು, ‘ವ್ಯವಸ್ಥಿತ ಸಿಟಿ’ಯಾಗಿ ರೂಪುಗೊಳ್ಳಬೇಕು ಎಂಬುದು ಕೇಂದ್ರದ ಆಶಯ.

ಬ್ರಿಟಿಷ್‌ ಸ್ಯಾಟಲೈಟ್‌

ಸುದ್ಧಿಯಲ್ಲಿ ಏಕಿದೆ ?ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಪಿಎಸ್‌ಎಲ್‌ವಿ-ಸಿ42 ರಾಕೆಟ್‌, ಯುನೈಟೆಡ್‌ ಕಿಂಗ್‌ಡಂ ನಿರ್ಮಿತ ಎರಡು ಸ್ಯಾಟಲೈಟ್‌ಗಳನ್ನು ಭಾನುವಾರ ರಾತ್ರಿ 10 ಗಂಟೆಗೆ ಕಕ್ಷೆಗೆ ಕಳುಹಿಸಿದೆ.

 • ವಿದೇಶಿ ಸ್ಯಾಟಲೈಟ್‌ಗಳನ್ನು ಕಕ್ಷೆಗೆ ಸೇರಿಸುವಲ್ಲಿ ಕಳೆದ ಕೆಲವು ವರ್ಷಗಳಿಂದ ಯಶಸ್ವಿಯಾಗಿರುವ ಇಸ್ರೊ, ಯುಕೆನ ಸರ್ರೆ ಸ್ಯಾಟಲೈಟ್‌ ಟೆಕ್ನಾಲಜೀಸ್‌ ಲಿಮಿಟೆಡ್‌ (ಎಸ್‌ಎಸ್‌ಟಿಎಲ್‌) ನಿರ್ಮಿತ ನೋವಾ ಎಸ್‌ಎಆರ್‌ಮತ್ತು ಎಸ್‌1-4′ಗಳನ್ನು (ಒಟ್ಟು ತೂಕ 889 ಕೆ.ಜಿ) ಇಸ್ರೊದ ವಾಣಿಜ್ಯ ಅಂಗಸಂಸ್ಥೆಯಾಗಿರುವ ಅಂಟ್ರಿಕ್ಸ್‌ ಕಾರ್ಪೊರೇಷನ್‌ ಲಿ. ಜತೆಗಿನ ಒಪ್ಪಂದದಲ್ಲಿ ಉಡಾವಣೆ ಮಾಡುತ್ತಿದೆ.
 • ರಡಾರ್‌ ಸ್ಯಾಟಲೈಟ್‌ ಆಗಿರುವ ನೋವಾ ಎಸ್‌ಎಎಆರ್‌ ಅನ್ನು ಅರಣ್ಯ ಮ್ಯಾಪಿಂಗ್‌, ಭೂಮಿ ಮತ್ತು ಐಸ್‌ ಪದರ ಮೇಲ್ವಿಚಾರಣೆ, ಪ್ರವಾಹ ಮತ್ತು ವಿಪತ್ತು ನಿರ್ವಹಣೆಯ ಕೆಲಸಗಳಿಗಾಗಿ ಬಳಕೆ ಮಾಡಲಾಗುತ್ತದೆ.
 • ಸಾಗರ ಪರಿಸರ ಅಧ್ಯಯನ, ಸಾಗರದಲ್ಲಿ ದೀರ್ಘ ಪ್ರಯಾಣ ಬೆಳೆಸುವ ಬೃಹತ್‌ ಹಡಗುಗಳ ಗುರುತು ಮತ್ತು ಟ್ರ್ಯಾಕ್‌ ಮಾಡಲು ಹಾಗೂ ಅವುಗಳಿಗೆ ನೆರವಾಗಲು ಮಾಹಿತಿ ವಿನಿಮಯಕ್ಕಾಗಿ ಬಳಕೆಯಾಗಲಿದೆ. ಈ ಸ್ಯಾಟಲೈಟ್‌ ಅನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಿ ಹೊಸ ಸಾಮರ್ಥ್ಯಗಳ ಪರಿಶೀಲನೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸ್ಯಾಟಲೈಟ್‌ ಕಂಪನಿ ತಿಳಿಸಿದೆ.
 • ಎಸ್‌1-4, ಹೈ ಭೂ ಅಧ್ಯಯನದ ಸ್ಯಾಟಲೈಟ್‌ ಒಳಗೊಂಡಿದ್ದು, ಪರಿಸರ ಮೇಲ್ವಿಚಾರಣೆ, ನಗರ ನಿರ್ವಹಣೆ, ವಿಪತ್ತು ನಿರ್ವಹಣೆ, ಸಂಪನ್ಮೂಲಗಳ ಸರ್ವೆ ಕಾರ್ಯಕ್ಕೆ ಬಳಕೆಯಾಗಲಿದೆ. ಎರಡು ಸ್ಯಾಟಲೈಟ್‌ಗಳನ್ನು ಭೂಮಿಯಿಂದ 583 ಕಿ.ಮೀ ದೂರದ ಸೂರ್ಯ ಸಮಾನಾಂತರ ಕಕ್ಷಗೆ ಸೇರಿಸಲಾಗುತ್ತದೆ.

ರಾತ್ರಿ ಉಡಾವಣೆ ಏಕೆ?

 • ”ಪಿಎಸ್‌ಎಲ್‌ವಿ ರಾಕೆಟ್‌ ಉಡಾವಣೆಗಳು ಹೆಚ್ಚಾಗಿ ಹಗಲು ವೇಳೆಯೇ ಮಾಡಲಾಗುತ್ತದೆ. ಆದರೆ, ಎಸ್‌ಎಸ್‌ಟಿಎಲ್‌ ಸ್ಯಾಟಲೈಟ್‌ ಕಂಪನಿಯು ರಾತ್ರಿ ವೇಳೆ ಉಡಾವಣೆ ಮಾಡಬೇಕು ಎಂದು ಕೋರಿದೆ. ರಿಮೋಟ್‌ ಸೆನ್ಸಿಂಗ್‌ ಸ್ಯಾಟಲೈಟ್‌ ಆಗಿದ್ದರೆ ಅವುಗಳು ಸಮಭಾಜಕ ವೃತ್ತವನ್ನು ದಾಟಿದ ಬಳಿಕ ನಿರ್ದಿಷ್ಟ ಬೆಳಕಿನ ವ್ಯವಸ್ಥೆ ಅಗತ್ಯವಿರುತ್ತದೆ. ಬಾಹ್ಯಕಾಶದಿಂದ ಭೂಚಿತ್ರ ತೆಗೆದುಕೊಳ್ಳಲು ಬೆಳಕಿನ ವ್ಯವಸ್ಥೆ ಅಗತ್ಯವಿರುವ ಕಾರಣ ಸ್ಯಾಟಲೈಟ್‌ಗಳ ಅಗತ್ಯತೆಗೆ ಅನುಗುಣವಾಗಿ ರಾತ್ರಿ ವೇಳೆ ಉಡಾವಣೆ ಮಾಡಲಾಗುತ್ತಿದೆ,” ಎಂದು ಇಸ್ರೊ ವಿಜ್ಞಾನಿ ತಿಳಿಸಿದ್ದಾರೆ.

ಇಸ್ರೋಗೆ ಆದ ಪ್ರಯೋಜನವೇನು ?

 • 200 ಕೋಟಿ ಆದಾಯ: ಸಂಪೂರ್ಣ ವಾಣಿಜ್ಯ ಉದ್ದೇಶದ ಉಡಾವಣೆಯಾಗಿದ್ದ ಹಿನ್ನೆಲೆಯಲ್ಲಿ, ಭಾರತದ ಯಾವೊಂದು ಉಪಗ್ರಹವನ್ನೂ ಇದು ಒಳಗೊಂಡಿರಲಿಲ್ಲ. ಉಪಗ್ರಹಗಳ ಉಡಾವಣೆಗಾಗಿ ಬ್ರಿಟನ್‌ನ ಸಂಸ್ಥೆಯೊಂದು ಇಸ್ರೊದ ಪಿಎಸ್‌ಎಲ್‌ವಿ-ಸಿ42′ ರಾಕೆಟ್‌ ಅನ್ನು ಇಡಿಯಾಗಿ ಬಾಡಿಗೆ ಪಡೆದಿತ್ತು. ಇಸ್ರೊನ ವಾಣಿಜ್ಯ ಅಂಗವಾದ ‘ಅಂತರಿಕ್ಷ್‌ ಕಾರ್ಪೊರೇಷನ್‌’ ಮೂಲಕ ಇದರ ಗುತ್ತಿಗೆ ಪಡೆಯಲಾಗಿತ್ತು. ಈ ಉಡಾವಣೆಯೊಂದಿಗೆ ಇದರಿಂದ ಇಸ್ರೊಗೆ 200 ಕೋಟಿ ರೂ. ಆದಾಯ ದೊರೆಯಲಿದೆ.

ಸ್ಪೆಷಲ್‌ ಪಾರ್ಕ್‌!

ಸುದ್ಧಿಯಲ್ಲಿ ಏಕಿದೆ ?ಹೈದರಾಬಾದ್‌ ಕೊಂಡಾಪುರದಲ್ಲಿ ದೇಶದ ಮೊದಲ ಪ್ರಮಾಣೀಕೃತ ನಾಯಿ ಪಾರ್ಕ್‌ ಮುಂದಿನ ವಾರ ಉದ್ಘಾಟನೆಗೊಳ್ಳಲಿದೆ. ಮೊದಲು ಡಂಪ್‌ ಯಾರ್ಡ್‌ ಆಗಿದ್ದ 1.3 ಎಕರೆ ಪ್ರದೇಶವನ್ನು ಹೈದರಾಬಾದ್‌ ನಗರ ಪಾಲಿಕೆ 1.1 ಕೋಟಿ ರೂ. ವೆಚ್ಚದಲ್ಲಿ ನಾಯಿಗಳ ಪಾರ್ಕ್‌ ಆಗಿ ಅಭಿವೃದ್ಧಿಪಡಿಸಿದೆ.

 • ಇಲ್ಲಿ ನಾಯಿಗಳು ವಾಕಿಂಗ್‌ ಮಾಡಬಹುದು, ವ್ಯಾಯಾಮ ಮತ್ತು ತರಬೇತಿಗೆ ಸಾಧನಗಳು ಇವೆ. ಸ್ವಿಮ್ಮಿಂಗ್‌ ಪೂಲ್‌ ಕೂಡಾ ಇರಲಿದೆ. ದೊಡ್ಡ ಮತ್ತು ಸಣ್ಣ ನಾಯಿಗಳಿಗೆ ಪ್ರತ್ಯೇಕ ವಿಭಾಗಗಳಿರುತ್ತವೆ ಎಂದು ಪಾಲಿಕೆಯ ವಲಯ ಕಮೀಷನರ್‌ ಡಿ. ಹರಿಚಂದನ ಹೇಳಿದ್ದಾರೆ.
 • ಅಧಿಕಾರಿಣಿ ಕಲ್ಪನೆ: ದೇಶದ ಮೊದಲ ನಾಯಿ ಪಾರ್ಕ್‌ ಕಲ್ಪನೆ ಹುಟ್ಟಿದ್ದು ಸ್ವತಃ ಶ್ವಾನಪ್ರೇಮಿಯಾಗಿರುವ ಅಧಿಕಾರಿ ಡಿ. ಹರಿಚಂದನ ಅವರಿಗೆ. ವಿದೇಶಗಳಲ್ಲಿ ಇಂಥ ಪಾರ್ಕ್‌ಗಳನ್ನು ಕಂಡಿದ್ದ ಅವರು, ಒಂದು ವರ್ಷದ ಅವಧಿಯಲ್ಲಿ ವಿನ್ಯಾಸಕರು, ಸಾಕು ಪ್ರಾಣಿ ಸಾಕುವವರು ಸೇರಿದಂತೆ ಹಲವರ ಜತೆ ಚರ್ಚಿಸಿ ಈ ಪಾರ್ಕ್‌ ಅಭಿವೃದ್ಧಿಪಡಿಸಿದ್ದಾರೆ.

2.5 ಲಕ್ಷ ನಾಯಿಗಳಿಗೆ ಅನುಕೂಲ

 • ಈಗ ಇರುವ ಸಾರ್ವಜನಿಕ ಪಾರ್ಕ್‌ಗಳಲ್ಲಿ ನಾಯಿಗಳಿಗೆ ಪ್ರವೇಶ ನೀಡುತ್ತಿಲ್ಲ ಎಂಬ ದೂರುಗಳಿವೆ. ನಗರದ ಪಶ್ಚಿಮ ಮತ್ತು ಕೇಂದ್ರ ವಲಯದ 5 ಲಕ್ಷ ಶ್ವಾನ ಪ್ರಿಯರಿಗೆ ಈ ಪಾರ್ಕ್‌ನಿಂದ ಅನುಕೂಲವಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಯಶಸ್ವಿಯಾದರೆ ಇನ್ನೊಂದು

 • ಹೊಸ ನಾಯಿ ಪಾರ್ಕ್‌ ಯಶಸ್ವಿಯಾದರೆ ನಗರದ ಪೂರ್ವ ಭಾಗದಲ್ಲಿ ಇನ್ನೊಂದು ಪಾರ್ಕ್‌ ಸ್ಥಾಪಿಸುವ ಯೋಚನೆಯೂ ಇದೆ ಎನ್ನುತ್ತಾರೆ ಹರಿಚಂದನ. ನಾಯಿಗಳ ಜತೆಗೆ ಒಂದು ಬೆಕ್ಕುಗಳ ಕಾರ್ನರ್‌ ಸ್ಥಾಪಿಸುವ ಪ್ಲ್ಯಾನ್‌ ಕೂಡಾ ಅವರ ತಲೆಯಲ್ಲಿ ಓಡುತ್ತಿದೆ!

ಇನ್ನೂ ಹಲವು ಅನುಕೂಲ

 • ಉದ್ಘಾಟನೆಗೊಳ್ಳಲಿರುವ ಪಾರ್ಕ್‌ನಲ್ಲಿ ಒಂದು ಪಶುವೈದ್ಯ ಕ್ಲಿನಿಕ್‌ ಕೂಡಾ ಇರಲಿದ್ದು, ಅದರಲ್ಲಿ ಚಿಕಿತ್ಸೆಗೆ ಅವಕಾಶವಿದ್ದು, ಕಾಲಕಾಲಕ್ಕೆ ಲಸಿಕೆ ನೀಡುವ ವ್ಯವಸ್ಥೆಯೂ ಇರಲಿದೆ. ನಾಯಿಗಳ ಕುರಿತಾದ ವಿಶೇಷ ಮಾಹಿತಿ, ಚಿತ್ರಗಳ ಪ್ರದರ್ಶನಕ್ಕೆ ಆಂಫಿಥಿಯೇಟರ್‌ ವ್ಯವಸ್ಥೆ ಇದೆ.

ವಿಶೇಷಚೇತನರಿಗೆ ಅನುಕೂಲ

 • ಈ ಪಾರ್ಕ್‌ನಲ್ಲಿ ವಿಶೇಷ ಚೇತನರಾಗಿರುವ ಸಾಕುಪ್ರಾಣಿ ಪಾಲಕರಿಗೂ ಅನುಕೂಲಗಳಿವೆ. ಇಲ್ಲಿನ ವಾಕಿಂಗ್‌ ಪಾತ್‌ ಮೂರುಚಕ್ರದ ವಾಹನ ಸಾಗುವಷ್ಟು ವಿಸ್ತಾರವಿದೆ. ನಾಮಫಲಕಗಳನ್ನು ಬ್ರೈಲ್‌ ಲಿಪಿಯಲ್ಲೂ ಬರೆಯಲಾಗುತ್ತದೆ.

ಏನೇನು ಸವಲತ್ತು?

 • ವಾಕಿಂಗ್‌ ಪಾತ್‌, ವ್ಯಾಯಾಮ-ತರಬೇತಿಗೆ ಸಲಕರಣೆಗಳು,
 • ಸಣ್ಣ ಸಣ್ಣ ಕೊಳಗಳು, 2 ಹಸಿರು ಹಾಸು, ಪಶುವೈದ್ಯ ಕ್ಲಿನಿಕ್‌,
 • ನಾಯಿಗಳ ಆಹಾರ ಸಿಗುವ ಲೂ ಕೆಫೆ, ಆಟವಾಡಲು ಜಾಗ,
 • ನಾಯಿಗಳಿಗೆ ತರಬೇತಿ ನೀಡುವವರೂ ಸಿಗುತ್ತಾರೆ
 • ಪ್ರವೇಶ ದರ: 10 ರೂ.

ಬೆಂಗಳೂರಲ್ಲಿದೆ ಆಟದ ಪಾರ್ಕ್‌

 • ಬೆಂಗಳೂರಿನ ದೊಮ್ಮಲೂರಿನಲ್ಲಿ ಸುಮಾರು 4000 ಚದರ ಅಡಿ ಪ್ರದೇಶದಲ್ಲಿ ನಾಯಿಗಳ ಆಟದ ಪಾರ್ಕ್‌ ಇದೆ.

ಮಾಂಗ್ಖಟ್ ಚಂಡಮಾರುತ

ಸುದ್ಧಿಯಲ್ಲಿ ಏಕಿದೆ ?ಪಿಲಿಪ್ಪೀನ್ಸ್‌, ಚೀನಾ ಮತ್ತು ಉತ್ತರ ಕೆರೊಲಿನಾದಲ್ಲಿ ಭೀಕರ ಚಂಡಮಾರುತ, ಧಾರಾಕಾರ ಮಳೆ ಮತ್ತು ಭೂಕುಸಿತದಿಂದ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

 • ಗಂಟೆಗೆ 230 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಮಾಂಗ್ಖಟ್ ಚಂಡಮಾರುತದಿಂದ ಫಿಲಿಪ್ಪೀನ್ಸ್‌ನ ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ. ಧಾರಾಕಾರ ಮಳೆ ಮತ್ತು ಭೂಕುಸಿತದಿಂದ ಅನೇಕ ಮನೆಗಳು ಕುಸಿದಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.
 • ಲುಝಾನ್ ದ್ವೀಪಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಿದ್ದರಿಂದ, ಸುಮಾರು 4 ಲಕ್ಷ ಮಂದಿಯ ಬದುಕು ಸಂಕಷ್ಟಕ್ಕೆ ಸಿಲುಕಿದೆ.
 • ಅಮೆರಿಕದ ಉತ್ತರ ಕೆರೊಲಿನಾಗೆ ಅಪ್ಪಳಿಸಿರುವ ಫ್ಲಾರೆಸ್ಸ್‌ ಚಂಡಮಾರುತದ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
 • ಚಂಡಮಾರುತಕ್ಕೆ ಸಿಲುಕಿರುವ ನೂರಾರು ಮಂದಿಯನ್ನು ನೌಕಾ ಸಿಬ್ಬಂದಿ, ಸ್ವಯಂ ಸೇವಕರು ಮತ್ತು ರಕ್ಷಣಾ ಸಿಬ್ಬಂದಿ, ಹೆಲಿಕಾಪ್ಟರ್‌, ದೋಣಿ ಮತ್ತು ವಾಹನಗಳನ್ನು ಬಳಸಿ ರಕ್ಷಿಸುತ್ತಿದ್ದಾರೆ.

ಬೋರ್ಡಿಂಗ್ ಪಾಸ್!

ಸುದ್ಧಿಯಲ್ಲಿ ಏಕಿದೆ ?ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ಪಾಸ್​ಪೋರ್ಟ್ ಇದೆಯೇ, ಗುರುತಿನ ದಾಖಲೆ ಇದೆಯೇ ಎಂದು ಪದೇಪದೆ ಚೆಕ್ ಮಾಡಿಕೊಳ್ಳುವ ಪ್ರಮೇಯ ಮುಂದಿನ ವರ್ಷದಿಂದ ಇರುವುದಿಲ್ಲ.

 • ಏರ್​ಪೋರ್ಟ್ ಗೇಟ್​ನ ಕ್ಯಾಮರಾ ಮುಂದೆ ಹೋಗಿ ನಿಂತರೆ ಸಾಕು, ನಿಮ್ಮ ಮುಖವನ್ನು ಸ್ಕಾ್ಯನ್ ಮಾಡಿ ನೀವು ತೆರಳಬೇಕಿರುವ ವಿಮಾನದ ಮಾಹಿತಿ ನೀಡಿ, ಸೂಕ್ತ ಕೌಂಟರ್ ಕಡೆಗೆ ಹೋಗಲು ಮಾರ್ಗದರ್ಶನ ಸಿಗುತ್ತದೆ.
 • ಎಲ್ಲವೂ ‘ಫೇಷಿಯಲ್ ರೆಕಗ್ನಿಷನ್’ ತಂತ್ರಜ್ಞಾನದಿಂದ ಕಾಗದ, ದಾಖಲೆಗಳ ರಹಿತವಾಗಿ ನಡೆಯುತ್ತವೆ. ವರ್ಷಾಂತ್ಯಕ್ಕೆ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಆರ್​ಜಿಐಎ)ದಲ್ಲಿ ಎಲ್ಲ ಭದ್ರತಾ ತಪಾಸಣೆ ಚೆಕ್​ಪಾಯಿಂಟ್​ಗಳಲ್ಲಿ ಫೇಶಿಯಲ್ ರೆಕಗ್ನಿಷನ್ ಅಳವಡಿಕೆಗೆ ಸಿದ್ಧತೆ ನಡೆದಿದೆ.
 • ಇದು ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಜಾರಿಗೆ ಬರಲಿದೆ. 2019ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೂಡ ಈ ತಂತ್ರಜ್ಞಾನ ಅಳವಡಿಕೆಯಾಗಲಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?:

 # ಏರ್​ಪೋರ್ಟ್ ಪ್ರವೇಶ್ ದ್ವಾರದಲ್ಲಿ ಒಂದು ಬಾರಿ ಪ್ರಯಾಣಿಕನ ದಾಖಲೆಗಳ ಪರಿಶೀಲನೆ. ಮುಖದ ಸಂಪೂರ್ಣ ಸ್ಕಾ್ಯನ್ ಮೂಲಕ ವಿಮಾನನಿಲ್ದಾಣದ ಮಾಹಿತಿ ಸಂಗ್ರಹ ವ್ಯವಸ್ಥೆಯಲ್ಲಿ ಪ್ರಯಾಣಿಕನ ಎಲ್ಲ ದಾಖಲೆಗಳು ಶೇಖರಣೆ.

# ಏರ್ ಪೋರ್ಟ್​ನ ಮುಂದಿನ ಎಲ್ಲ ಗೇಟ್/ಕೌಂಟರ್​ಗಳಲ್ಲಿನ ಕ್ಯಾಮೆರಾ ಎದುರು ಹೋಗಿ ನಿಂತರೆ ಸಾಕು, ಅಧಿಕೃತವಾಗಿ ಮುಂದಕ್ಕೆ ತೆರಳಲು ಭದ್ರತಾ ವ್ಯವಸ್ಥೆಯಿಂದ ಅವಕಾಶ. (ಬೋರ್ಡಿಂಗ್ ಪಾಸ್ ತೋರಿಸುವುದು ಬೇಡ)

# ಒಂದು ಬಾರಿ ಪ್ರಯಾಣಿಕನ ದಾಖಲೆ ಸಂಗ್ರಹವಾದರೆ, ಮುಂದಿನ ಕೆಲ ದಿನ ಅಥವಾ ತಿಂಗಳ ಬಳಿಕ ಪ್ರಯಾಣಕ್ಕೆ ಬಂದಾಗಲೂ ಕ್ಯಾಮರಾ ಎದುರು ನಿಂತ ಕೂಡಲೇ ಭದ್ರತಾ ವ್ಯವಸ್ಥೆಯಿಂದ ಹಳೆಯ ದಾಖಲೆಗಳ ಪರಿಶೀಲನೆ. ಜತೆಗೆ ಅಡೆತಡೆಯಿಲ್ಲದೆ ಗೇಟ್​ಗಳನ್ನು ದಾಟಲು ಮುಕ್ತ ಅವಕಾಶ.

 • ಎಲ್ಲೆಲ್ಲಿದೆ ಈ ತಂತ್ರಜ್ಞಾನ?: ವೆನಿಜುವೆಲಾ ಬಳಿಯ ಅರುಬಾ ದ್ವೀಪ ಏರ್​ಪೋರ್ಟ್​ನಿಂದ ಆಸ್ಟ್ರೇಲಿಯಾದ ಆಮ್ಸಟರ್​ಡ್ಯಾಮ್ೆ ಪ್ರಯಾಣಿಸುವಾಗ. ಅಮೆರಿಕದ ಬಾಸ್ಟನ್​ನಿಂದ ಅರುಬಾ ದ್ವೀಪಕ್ಕೆ ಪ್ರಯಾಣಿಸುವ ಏರ್​ಪೋರ್ಟ್ ಕೌಂಟರ್​ನಲ್ಲಿ.ಸಿಂಗಾಪುರದ ಛಾಂಗಿ ಏರ್​ಪೋರ್ಟ್​ನ ಟರ್ವಿುನಲ್ 4ನಲ್ಲಿ ಅತ್ಯಾಧುನಿಕ ಸ್ವಸಹಾಯ ಚೆಕ್-ಇನ್ ವ್ಯವಸ್ಥೆ.

ಸ್ಮಾರ್ಟ್ ಬೇಲಿ

ಸುದ್ಧಿಯಲ್ಲಿ ಏಕಿದೆ ?ಪಾಕಿಸ್ತಾನಿ ಉಗ್ರರು ಹಾಗೂ ಯೋಧರಿಗೆ ಗಡಿಯಲ್ಲೇ ತಡೆಯೊಡ್ಡುವ ಉದ್ದೇಶದಿಂದ ನಿರ್ವಿುಸಲಾಗಿರುವ ‘ಸ್ಮಾರ್ಟ್ ಬೇಲಿ’ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ.

 • ಜಮ್ಮು ಸೆಕ್ಟರ್​ನ ಅಂತಾರಾಷ್ಟ್ರೀಯ ಗಡಿಯಲ್ಲಿ ಎರಡು ಪ್ರಾಯೋಗಿಕ ಯೋಜನೆಯಡಿ ತಲಾ 5 ಕಿ.ಮೀ. ಉದ್ದದ ‘ಸ್ಮಾರ್ಟ್ ಬೇಲಿ’ ನಿರ್ವಿುಸಲಾಗಿದೆ.
 • ದೇಶದಲ್ಲೆ ಮೊದಲ ಬಾರಿಗೆ ಸಮಗ್ರ ಸಂಯೋಜಿತ ಗಡಿ ನಿರ್ವಹಣಾ ಯೋಜನೆ (ಸಿಐಬಿಎಂಎಸ್) ಅಡಿ ವಾಸ್ತವಾಭಾಸದ (ವರ್ಚುವಲ್) ಈ ಬೇಲಿ ನಿರ್ವಿುಸಲಾಗಿದೆ. ಥರ್ಮಲ್ ಇಮೇಜಿಂಗ್, ಇನ್ಪ್ರಾ-ರೆಡ್ ಮತ್ತು ಲೇಸರ್ ಬೀಮ್ಳ ಅಗೋಚರ ತಡೆಬೇಲಿ ಇದಾಗಿದೆ. ಈ ಬೇಲಿಯನ್ನು ಯಾವುದೇ ರೀತಿಯಲ್ಲಿ (ಜಲ, ವಾಯು, ಸುರಂಗ ಮಾರ್ಗ) ಉಲ್ಲಂಘಿಸಲು ಪ್ರಯತ್ನಿಸಿದ ಕೂಡಲೇ ಎಚ್ಚರಿಕೆ ಗಂಟೆ ಮೊಳಗುತ್ತದೆ. ಯೋಧರನ್ನು ನಿಯೋಜಿಸಲಾಗದಂತಹ ಕಠಿಣ ಭೌಗೋಳಿಕ ಸನ್ನಿವೇಶ, ಗಿರಿ, ಕಂದರ, ಕೂಡಿದ ಗಡಿ ಪ್ರದೇಶದಲ್ಲಿ ಈ ಬೇಲಿಯನ್ನು ಅಳವಡಿಸಲಾಗುತ್ತಿದೆ
Related Posts
AUGUST MAHITHI MONTHLY CURRENT AFFAIRS MAGAZINE FOR KAS KPSC EXAMS
DOWNLOAD AUGUST 2016 CURRENT AFFAIRS MAGAZINE CLICK HERE Best Current affairs Magazine for all civil services competitive examinations. It is the only magazine that covers National issues, international issues and Karnataka issues ...
READ MORE
U.S. considers re-merger of India, Pakistan desks
Seven years after the State Department was restructured to ‘de-hyphenate’ U.S. relations with India and with Pakistan, it is considering a reversal of the move. De-hyphenating refers to a policy started ...
READ MORE
DOWNLOAD FEBRUARY MAHITHI MONTHLY CURRENT AFFAIRS MAGAZINE
Greetings dear aspirants, YOUR LATEST MAHITHI MONTHLY CURRENT AFFAIRS MAGAZINE IS HERE TO DOWNLOAD. CLICK HERE TO DOWNLOAD FEBRUARY 2017 MAHITHI MONTLY MAGAZINE   WE HOPE YOU WOULD FIND IT VERY USEFUL FOR THE ...
READ MORE
Internet of things
Internet of Things India Congress Why in News: The first edition of ‘IoT India Congress, 2016’ was in Bengaluru. The congress aims to bring together key stakeholders across the value chain and verticals to ...
READ MORE
Karnataka Current Affairs – KAS / KPSC Exams – 11th May 2017
2,500 ornamental fish traded globally Globally, more than 2,500 species of ornamental fish are traded, but only 30-35 species of freshwater fish dominate the market. More than 90 % of freshwater fish ...
READ MORE
Karnataka Current Affairs – KAS / KPSC Exams – 11th June 2017
Karnataka to borrow $350 million from ADB for road development  The government has decided to borrow $350 million from the Asian Development Bank (ADB) for developing a core road network of ...
READ MORE
Parts produced by some commercial 3D printers may be toxic, according to a new study This raises concerns about how to dispose off parts and waste materials from the devices which ...
READ MORE
Prime Minister Narendra Modi and the President of United States of America (USA) Barack Obama. (File Photo: IANS/PIB)
"Nuclear safety, terror to be in focus as PM plans three-nation tour" India's agenda at the fourth Nuclear Security Summit (NSS 2016) in Washington  Will push for a global initiative against nuclear ...
READ MORE
Karnataka Current Affairs – KAS/KPSC Exams – 10th March 2018
Basavaraj Rayaraddi is HKRDB chairman Basavaraj Rayaraddi, Minister for Higher Education and Koppal in-charge, has been appointed as the chairman of Hyderabad-Karnatak Regional Development Board for two years. Mr. Rayaraddi succeeds Sharan ...
READ MORE
ASTROSAT
India launched its first dedicated multi-wavelength space observatory Astrosat into space, besides six satellites for Canada, Indonesia and the United States. This is the first time ISRO is launching satellites for ...
READ MORE
AUGUST MAHITHI MONTHLY CURRENT AFFAIRS MAGAZINE FOR KAS
U.S. considers re-merger of India, Pakistan desks
DOWNLOAD FEBRUARY MAHITHI MONTHLY CURRENT AFFAIRS MAGAZINE
Internet of things
Karnataka Current Affairs – KAS / KPSC Exams
Karnataka Current Affairs – KAS / KPSC Exams
3D printing
All about nuclear security summit
Karnataka Current Affairs – KAS/KPSC Exams – 10th
ASTROSAT

Leave a Reply

Your email address will not be published. Required fields are marked *